CM Siddaramaiah: ಏರ್‌ಪೋರ್ಟ್‌ನಲ್ಲೇ ಟಿ20 ವಿಶ್ವಕಪ್‌ ಫೈನಲ್‌ ವೀಕ್ಷಿಸಿದ್ದ ಸಿಎಂ ಸಿದ್ದರಾಮಯ್ಯ; 70 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡ ವಿಡಿಯೊ! - Vistara News

ವೈರಲ್ ನ್ಯೂಸ್

CM Siddaramaiah: ಏರ್‌ಪೋರ್ಟ್‌ನಲ್ಲೇ ಟಿ20 ವಿಶ್ವಕಪ್‌ ಫೈನಲ್‌ ವೀಕ್ಷಿಸಿದ್ದ ಸಿಎಂ ಸಿದ್ದರಾಮಯ್ಯ; 70 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡ ವಿಡಿಯೊ!

CM Siddaramaiah: ದೆಹಲಿಯ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯನವರು ಕ್ರಿಕೆಟ್‌ ನೋಡಿದ್ದ ವಿಡಿಯೊ ವೈರಲ್‌ ಆಗಿದ್ದು, ಮುಖ್ಯಮಂತ್ರಿಗಳ ಕ್ರಿಕೆಟ್‌ ಪ್ರೇಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

VISTARANEWS.COM


on

CM Siddaramaiah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಟಿ20 ವಿಶ್ವಕಪ್​ 2024 ಚಾಂಪಿಯನ್‌ ಆಗಿ ಹೊರ ಹೊಮ್ಮಿದ ಟೀಮ್‌ ಇಂಡಿಯಾಗೆ (T20 World Cup 2024) ಅಭಿನಂದನೆಗಳ ಪ್ರವಾಹವೇ ಹರಿದು ಬರುತ್ತಿದೆ. ಈ ನಡುವೆ ಜೂನ್‌ 29ರಂದು ನಡೆದಿದ್ದ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡದ ನಡುವಿನ ಫೈನಲ್‌ ಪಂದ್ಯವನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಏರ್‌ಪೋರ್ಟ್‌ನಲ್ಲೇ ವೀಕ್ಷಿಸಿದ್ದ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗುತ್ತಿದ್ದು, ಸಿಎಂ ಕ್ರಿಕೆಟ್‌ ಪ್ರೀತಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೊವನ್ನು 70 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, 1.3 ಲಕ್ಷ ಮಂದಿ ಲೈಕ್ ಮಾಡಿದ್ದು, ಸಾವಿರಾರು ಮಂದಿ ಕಮೆಂಟ್‌ ಮಾಡಿದ್ದಾರೆ.

ಶನಿವಾರ ಟಿ20 ವಿಶ್ವಕಪ್‌ನ ಫೈನಲ್‌ ನಡೆದು, ಭಾರತ ತಂಡ ರೋಚಕ ಜಯದೊಂದಿಗೆ ವಿಶ್ವಕಪ್‌ಗೆ ಮುತ್ತಿಕ್ಕಿದೆ. ಪ್ರತಿ ಎಸೆತವೂ ಪಂದ್ಯದ ಗತಿ ಬದಲಿಸುವಂತಿದ್ದುದ್ದರಿಂದ ಇಡೀ ದೇಶವೇ ಫೈನಲ್‌ ಪಂದ್ಯವನ್ನು ನಿಬ್ಬೆರಗಾಗಿ ವೀಕ್ಷಿಸಿದೆ. ಮೂರು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, 9.30ರ ವಿಮಾನ ಹತ್ತಿ ಬೆಂಗಳೂರಿಗೆ ವಾಪಾಸಾಗಬೇಕಿತ್ತು. ಇದೆಲ್ಲದರ ನಡುವೆ ಅವರಿಗೆ ಸಿಕ್ಕಿದ್ದು ಕೆಲವೇ ಕೆಲವು ನಿಮಿಷಗಳು ಮಾತ್ರ, ಅದೇ ಅಲ್ಪ ಬಿಡುವಿನ ಸಮಯದಲ್ಲಿ ವಿಮಾನದ ಬಾಗಿಲಲ್ಲಿ ನಿಂತು ವಿಶ್ವಕಪ್‌ ಟಿ20 ಫೈನಲ್‌ ಪಂದ್ಯ ವೀಕ್ಷಿಸಿ ಅದನ್ನು ತಮ್ಮ ಸಾಮಾಜಿಕ ಜಾಲತಾಣವಾದ ಫೇಸ್‌ ಬುಕ್‌ ನಲ್ಲಿ ಹಂಚಿಕೊಂಡಿದ್ದರು. ಅದರ ಜೊತೆಗೆ ಭಾರತವು ಸಂಘಟಿತ ಪ್ರದರ್ಶನದ ಮೂಲಕ ವಿಶ್ವಕಪ್‌ ಗೆದ್ದು ಬರಲಿ ಎಂದು ಮನದುಂಬಿ ಹಾರೈಸಿದ್ದರು.

ಈ ರೀತಿ ಸಿದ್ದರಾಮಯ್ಯನವರು ಶೇರ್‌ ಮಾಡಿದ್ದ ವಿಡಿಯೊ ಇದೀಗ ಜಾಲತಾಣದಲ್ಲಿ ಭಾರೀ ಹವಾ ಸೃಷ್ಟಿಸಿದೆ. ಈವರೆಗೆ ವಿಡಿಯೋವನ್ನು 70 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ, 1,30,000 ಮಂದಿ ಸಿದ್ದರಾಮಯ್ಯನವರ ಕ್ರಿಕೆಟ್‌ ಪ್ರೇಮಕ್ಕೆ ಲೈಕ್‌ ಒತ್ತಿ ಮೆಚ್ಚಿದ್ದಾರೆ. ಸಾವಿರಾರು ಮಂದಿ ಕಮೆಂಟ್‌ ಗಳ ಸುರಿಮಳೆಗೈದು ನಿಮ್ಮ ಕ್ರೀಡಾ ಪ್ರೀತಿಗೆ ನಾವು ಅಭಿಮಾನಿಯಾಗಿದ್ದೇವೆಂದು ಕೊಂಡಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ರಾಜಕಾರಣಿಯೊಬ್ಬರ ಸಾಮಾಜಿಕ ಜಾಲತಾಣದಲ್ಲಿ ಹಾಕಲ್ಪಟ್ಟ ಯಾವೊಂದು ವೀಡಿಯೋ ಕೂಡ ಇಷ್ಟು ವೈರಲ್‌ ಆಗಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿ | ZIM v IND 2024: ಭಾರತ ವಿರುದ್ಧ ಟಿ20 ಸರಣಿಗೆ ಜಿಂಬ್ವಾಬ್ವೆ ತಂಡ ಪ್ರಕಟ, ಸಿಕಂದರ್​ ನಾಯಕ

ಆಗಾಗ್ಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಿಗೆ ಹೋಗಿ ಪಂದ್ಯ ವೀಕ್ಷಿಸಿ ಆಟಗಾರರಿಗೆ ಚಪ್ಪಾಳೆಯ ಮೂಲಕ ಹುರಿದುಂಬಿಸುತ್ತಿದ್ದ ಸಿದ್ದರಾಮಯ್ಯನವರು ಬಿಡುವಿರದ ದಿನಚರಿಯ ಕಾರಣಕ್ಕೆ ವಿಮಾನದ ಬಾಗಿಲಲ್ಲಿ ನಿಂತು ಕ್ರಿಕೆಟ್‌ ವೀಕ್ಷಿಸಿದ್ದಕ್ಕೆ ಕರುನಾಡು ಕೊಂಡಾಡುತ್ತಿದೆ.
ಒಂದೆಡೆ ಭಾರತ ವಿಶ್ವಕಪ್‌ ಗೆದ್ದಿದೆ, ಇನ್ನೊಂದೆಡೆ ಸಿದ್ದರಾಮಯ್ಯನವರು ನಾಡಿನ ಕ್ರಿಕೆಟ್‌ ಪ್ರಿಯರ ಮನ ಗೆದ್ದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Hardik Pandya: ನತಾಶಾ ಜತೆ ವಿಚ್ಛೇದನ ಖಚಿತ; ಸುಳಿವು ನೀಡಿದ ಹಾರ್ದಿಕ್​ ಪಾಂಡ್ಯ ಪೋಸ್ಟ್​!

Hardik Pandya: ತವರಿಗೆ ಬಂದಿರುವ ಪಾಂಡ್ಯ ತಮ್ಮ ಮಗ ಅಗಸ್ತ್ಯನ ಜತೆಗೆ ಕೇಕ್​ ಕತ್ತರಿಸಿ, ತಾವು ಗೆದ್ದ ಪದಕವನ್ನು ಮಗನ ಕೊರಳಿಗೆ ಹಾಕಿ ಸಂಭ್ರಮಿಸಿದ್ದಾರೆ. ಈ ಎಲ್ಲ ಸುಂದರ ಕ್ಷಣದ ಫೋಟೊ ಹಂಚಿಕೊಂಡು ‘ಎಲ್ಲವೂ ನಿನಗಾಗಿ. ನಾನೇನು ಮಾಡುತ್ತೇನೆಯೋ, ಅದು ನಿನ್ನ ಖುಷಿಗಾಗಿ ಮಾತ್ರ..’ ಎಂದು ಅವರು ಬರೆದುಕೊಂಡಿದ್ದಾರೆ.

VISTARANEWS.COM


on

Hardik Pandya
Koo

ಮುಂಬಯಿ: ಈ ಹಿಂದೆ ವರದಿಯಾದ ಪ್ರಕಾರ ಹಾರ್ದಿಕ್ ಪಾಂಡ್ಯ(Hardik Pandya) ಮತ್ತು ನತಾಶಾ ಸ್ಟಾನ್‌ಕೋವಿಕ್‌(Nataša Stanković) ಅವರ ವಿವಾಹ ಮುರಿದು ಬಿದ್ದಿರುವುದು ಮತ್ತು ವಿಚ್ಛೇದನ ಪಡೆಯುವುದು ಬಹುತೇಖ ಖಚಿತ ಎನ್ನುವಂತಿದೆ. ಹೌದು, ಟಿ20 ವಿಶ್ವಕಪ್​ ಗೆದ್ದು ತವರಿಗೆ ಮರಳಿರುವ ಹಾರ್ದಿಕ್​ ಪಾಂಡ್ಯ ತಮ್ಮ ಮಗನೊಂದಿಗೆ ವಿಶ್ವಕಪ್​ ಗೆಲುವನ್ನು ಸಂಭ್ರಮಿಸಿದ್ದಾರೆ. ಈ ಫೋಟೊ ಮತ್ತು ವಿಡಿಯೊಗಳನ್ನು ಪಾಂಡ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಪತ್ನಿ ಈ ಕಾರ್ಯಕ್ರಮಕ್ಕೆ ಗೈರಾಗಿರುವುದು ಕಂಡು ಈ ಜೋಡಿ ದೂರವಾದಂತೆ ತೋರುತ್ತಿದೆ.

ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನವೇ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾನ್‌ಕೋವಿಕ್‌ ವಿಚ್ಛೇದನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗಿತ್ತು. ಆದರೆ, ಈ ಜೋಡಿ ಮಾತ್ರ ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕೇವಲ ನಿಗೂಡ ಅರ್ಥದ ಪೋಸ್ಟ್​ಗಳನ್ನು ಮಾತ್ರ ಮಾಡುತ್ತಿದ್ದರು.

ವಿಚ್ಛೇದನದ ಸುದ್ದಿಯ ನಡುವೆ, ಕೆಲ ದಿನಗಳ ಹಿಂದೆ ನತಾಶಾ ಮೊದಲ ಬಾರಿಗೆ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದರು. ಬಾಲಿವುಡ್ ಉದಯೋನ್ಮುಖ ನಟಿ ದಿಶಾ ಪಟಾನಿ ಅವರ ಬಾಯ್​ಫ್ರೆಂಡ್​ ಎಂದು ಹೇಳಿಕೊಳ್ಳಲಾಗುತ್ತಿರುವ ವ್ಯಕ್ತಿಯ ಜತೆ ಕಾಣಿಸಿಕೊಂಡಿದ್ದರು. ಈ ವೇಳೆ ನತಾಶಗೆ ಪಾಪರಾಜಿಗಳು ಪಾಂಡ್ಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನತಾಶ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದರು.

ಇದಾಗ ಬಳಿಕ ನತಾಶಾ ಸ್ಟಾನ್‌ಕೋವಿಕ್‌ ಅವರು ಯೇಸುವಿನ ಚಿತ್ರವನ್ನು ಹಂಚಿಕೊಂಡಿದ್ದರು. ಯೇಸು ತನ್ನ ಜಾಡನ್ನು ಹಿಂಬಾಲಿಸಿದಾಗ ಕುರಿಮರಿ ಮುಂದಾಳತ್ವ ವಹಿಸುತ್ತಿರುವ ಫೋಟೊ ಇದಾಗಿತ್ತು. ಈ ಫೋಟೊವನ್ನು ಕಂಡಾಗ ಈ ಜೋಡಿ ಶೀಘ್ರದಲ್ಲೇ ದೂರವಾಗುವುದು ಖಚಿತ ಎನ್ನುವಂತಿತ್ತು. ಅಲ್ಲದೆ ವಿಚ್ಛೇದನದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇ. 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು ಎಂದು ವರದಿಯಾಗಿತ್ತು.

ಇದನ್ನೂ ಓದಿ Team India: ತವರಿಗೆ ಬಂದ ಖಷಿಯಲ್ಲಿ ಕುಣಿದು ಕುಪ್ಪಳಿಸಿದ ನಾಯಕ ರೋಹಿತ್​, ಹಾರ್ದಿಕ್​, ಪಂತ್; ವಿಡಿಯೊ ವೈರಲ್​​

ಟಿ20 ವಿಶ್ವಕಪ್​ ಗೆದ್ದಾಗ ಆಟಗಾರರ ಪತ್ನಿಯರು ಈ ಗೆಲುವಿನ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪತಿಯ ಫೋಟೊ ಮತ್ತು ಸಾಧನೆಯನ್ನು ಕೊಂಡಾಡಿದ್ದರು. ಆದರೆ ನತಾಶ ಯಾವುದೇ ಪೋಸ್ಟ್​ ಕೂಡ ಮಾಡಿರಲಿಲ್ಲ. ಇದೀಗ ತವರಿಗೆ ಬಂದಿರುವ ಪಾಂಡ್ಯ ತಮ್ಮ ಮಗ ಅಗಸ್ತ್ಯನ ಜತೆಗೆ ಕೇಕ್​ ಕತ್ತರಿಸಿ, ತಾವು ಗೆದ್ದ ಪದಕವನ್ನು ಮಗನ ಕೊರಳಿಗೆ ಹಾಕಿ ಸಂಭ್ರಮಿಸಿದ್ದಾರೆ. ಈ ಎಲ್ಲ ಸುಂದರ ಕ್ಷಣದ ಫೋಟೊ ಹಂಚಿಕೊಂಡು ‘ಎಲ್ಲವೂ ನಿನಗಾಗಿ. ನಾನೇನು ಮಾಡುತ್ತೇನೆಯೋ, ಅದು ನಿನ್ನ ಖುಷಿಗಾಗಿ ಮಾತ್ರ..’ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನು ನೋಡುವಾಗ ಪಾಂಡ್ಯ ಶೀಘ್ರದಲ್ಲೇ ನತಾಶಾಗೆ ವಿಚ್ಛೇದನ ನೀಡುವುದು ಖಚಿತ ಎನ್ನುವಂತಿದೆ.

ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇದಕ್ಕೂ ಮುನ್ನ ಈ ಜೋಡಿ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು.

Continue Reading

ವೈರಲ್ ನ್ಯೂಸ್

ತನಗೆ ಒಮ್ಮೆ ಕಚ್ಚಿದ ಹಾವಿಗೆ ಮೂರು ಬಾರಿ ಕಚ್ಚಿ ಸೇಡು ತೀರಿಸಿಕೊಂಡ ವ್ಯಕ್ತಿ; ಕೊನೆಗೆ ಬದುಕುಳಿದಿದ್ದು ಯಾರು?

ಬಿಹಾರದ ರಾಜೌಲಿ ಪ್ರದೇಶದಲ್ಲಿ ಜಾರ್ಖಂಡ್‌ ಮೂಲದ ಸಂತೋಷ್‌ ಲೋಹರ್‌ ಎಂಬ ವ್ಯಕ್ತಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ ಬಳಿಕ ಗಾಬರಿಯಾಗದ ಆತನು ಆಸ್ಪತ್ರೆಗೆ ಓಡದೆ, ಹಾವಿಗೇ ವಾಪಸ್‌ ಮೂರು ಬಾರಿ ಕಚ್ಚಿದ್ದಾನೆ. ಇದಾದ ಬಳಿಕವೇ ಆತನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಹಾವು ಹಾಗೂ ವ್ಯಕ್ತಿ ನಡುವಿನ ಕಾಳಗದಲ್ಲಿ ಯಾರು ಗೆದ್ದರು? ಇಲ್ಲಿದೆ ಮಾಹಿತಿ.

VISTARANEWS.COM


on

Snake
Koo

ಪಟನಾ: ಹಾವುಗಳು (Snakes) ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಸಣ್ಣ ಹಾವು ಕಚ್ಚಿದರೂ ಗಾಬರಿಯಾಗುತ್ತದೆ. ಕೂಡಲೇ ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡೆಯುತ್ತೇವೆ. ಹಳ್ಳಿಯಲ್ಲಾದರೆ ಆಯುರ್ವೇದದಿಂದ ಹಾವಿನ ವಿಷಯವನ್ನು ನಿಗ್ರಹಿಸಲಾಗುತ್ತದೆ. ಅಷ್ಟರಮಟ್ಟಿಗೆ, ಹಾವು ಕಚ್ಚಿದರೆ (Snake Bite) ಗಾಬರಿ, ಆತಂಕ, ಭಯ ಆಗುತ್ತದೆ. ಆದರೆ, ಬಿಹಾರದಲ್ಲೊಬ್ಬ (Bihar) ಭೂಪನು, ತನಗೆ ಕಚ್ಚಿದ ಹಾವಿಗೇ ವಾಪಸ್‌ ಮೂರು ಬಾರಿ ಕಚ್ಚಿದ್ದಾನೆ. ಎಂತಹ ಅದೃಷ್ಟ ನೋಡಿ, ಹಾವು ಕಚ್ಚಿಸಿಕೊಂಡ ವ್ಯಕ್ತಿಯು ಬದುಕುಳಿದರೆ, ಈತನಿಂದ ಕಚ್ಚಿಸಿಕೊಂಡ ಹಾವು ಸತ್ತುಹೋಗಿದೆ.

ಹೌದು, ಬಿಹಾರದ ರಾಜೌಲಿ ಪ್ರದೇಶದಲ್ಲಿ ಇಂತಹದ್ದೊಂದು ವಿಸ್ಮಯಕಾರಿ ಘಟನೆ ನಡೆದಿದೆ. ಜಾರ್ಖಂಡ್‌ ಮೂಲದ ಸಂತೋಷ್‌ ಲೋಹರ್‌ ಎಂಬ ವ್ಯಕ್ತಿಯು ರೈಲ್ವೆ ಲೈನ್‌ನಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ಈತನ ದಿನದ ಕೆಲಸ ಮುಗಿಸಿ ರೌಜಲಿಯಲ್ಲಿರುವ ಕ್ಯಾಂಪ್‌ನಲ್ಲಿ ಕಳೆದ ಮಂಗಳವಾರ (ಜುಲೈ 2) ಮಲಗಿದ್ದಾನೆ. ಇದೇ ವೇಳೆ ಹಾವೊಂದು ಸಂತೋಷ್‌ ಲೋಹರ್‌ಗೆ ಕಚ್ಚಿದೆ. ಹಾವು ಕಚ್ಚಿದ ಬಳಿಕ ಗಾಬರಿಯಾಗದ, ಆಸ್ಪತ್ರೆಗೆ ಓಡದ ಈತನು ಕಬ್ಬಿಣದ ರಾಡ್‌ನಿಂದ ಹಾವನ್ನು ಹಿಡಿದು, ಅದಕ್ಕೇ ಮೂರು ಬಾರಿ ಕಚ್ಚಿದ್ದಾನೆ. ಈತನು ಕಚ್ಚಿದ ತೀವ್ರತೆಗೆ ಹಾವೇ ಸತ್ತುಹೋಗಿದೆ.

Snake bite

ಸಂತೋಷ್‌ ಲೋಹರ್‌ನನ್ನು ಕೂಡಲೇ ಆತನ ಸಹೋದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಈತನು ಬಹುತೇಕ ಗುಣಮುಖನಾಗಿದ್ದಾನೆ. “ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದ ಕಾರಣ ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಶೀಘ್ರದಲ್ಲೇ ಆತನನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಲಾಗುವುದು” ಎಂದು ಚಿಕಿತ್ಸೆ ನೀಡಿದ ಡಾ.ಸತೀಶ್‌ ಚಂದ್ರ ಅವರು ಮಾಹಿತಿ ನೀಡಿದ್ದಾರೆ. ಈತನ ಸಾಹಸವನ್ನು ಕೇಳಿದ ಸುತ್ತಮುತ್ತಲಿನ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸಂತೋಷ್‌ ಲೋಹರ್‌ನು ಹಾವಿಗೆ ವಾಪಸ್‌ ಕಚ್ಚಿದ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈತನ ಸಂದರ್ಶನವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. “ನಮ್ಮ ಊರಿನಲ್ಲಿ ಒಂದು ಮಾತಿದೆ. ನಮಗೇನಾದರೂ ಹಾವು ಕಚ್ಚಿದರೆ, ಅದಕ್ಕೆ ಎರಡು ಬಾರಿ ವಾಪಸ್‌ ಕಚ್ಚಬೇಕು ಎಂಬ ಪದ್ಧತಿ ಇದೆ. ಅದರಂತೆ, ನಾನು ಹಾವಿಗೆ ವಾಪಸ್‌ ಕಚ್ಚಿದೆ. ಇದರಿಂದ ನಾನು ಬದುಕುಳಿದೆ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ಥಳೀಯರ ಪ್ರಕಾರ, ಈತನಿಗೆ ಕಚ್ಚಿದ ಹಾವಿನಲ್ಲಿ ವಿಷ ಇರಲಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral News: ಒಂದು ತಿಂಗಳಲ್ಲಿ ಐದು ಬಾರಿ ಹಾವು ಕಡಿತ; ಪವಾಡ ರೀತಿಯಲ್ಲಿ ವ್ಯಕ್ತಿ ಬಜಾವ್‌!

Continue Reading

ವೈರಲ್ ನ್ಯೂಸ್

Viral Video: ಆಧಾರ್ ಕಾರ್ಡ್ ಫೋಟೋಗೆ ಸುಂದರ ಪೋಸ್ ಕೊಟ್ಟು ಮನ ಗೆದ್ದ ಪುಟಾಣಿ! ನಿಮಗೇನು ಅನಿಸಿತು?

ಸಣ್ಣ ಮಕ್ಕಳು ಮಾತ್ರವಲ್ಲ ದೊಡ್ಡವರ ಫೋಟೋಗಳು ಆಧಾರ್ ಕಾರ್ಡ್‌, ರೇಷನ್ ಕಾರ್ಡ್, ಮತದಾರರ ಗುರುತು ಪತ್ರದಲ್ಲಿ ಅಸಮಾಧಾನಗೊಂಡಿರುವಂತೆ ತೋರಿಸುತ್ತದೆ. ಆದರೆ ಈ ಪುಟ್ಟ ಹುಡುಗಿ ಮಾತ್ರ ಯಾವುದೇ ತಪ್ಪು ಆಗದಂತೆ ನೋಡಿಕೊಂಡಳು. ಗುರುತಿನ ಚೀಟಿಗಾಗಿ ಉತ್ತಮ ಭಂಗಿಯನ್ನು ತೋರಿ ಎಲ್ಲರ ಮನ ಗೆದ್ದಳು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಸಾಕಷ್ಟು ಮಂದಿಯ ಮೆಚ್ಚುಗೆ ಕೂಡ ಗಳಿಸಿದೆ.

VISTARANEWS.COM


on

By

Viral Video
Koo

ಆಧಾರ್ ಕಾರ್ಡ್ ನಂತಹ (Aadhar card) ಕೆಲವೊಂದು ದಾಖಲೆಗಳಿಗೆ ಮಕ್ಕಳ (child) ಫೋಟೋ (photo) ಕಡ್ಡಾಯವಾಗಿರುತ್ತದೆ. ಆದರೆ ಪುಟ್ಟ ಮಕ್ಕಳ ಫೋಟೋ ತೆಗೆಸುವ ವೇಳೆಗೆ ತಂದೆ, ತಾಯಿ ಮಾತ್ರವಲ್ಲ ಫೋಟೋಗ್ರಾಫರ್ ಕೂಡ ಸುಸ್ತಾಗಿ ಬಿಡುತ್ತಾರೆ. ಆದರೆ ಇಲ್ಲೊಂದು ಮಗು ಮಾತ್ರ ಫೋಟೋ ಎಂದಾಕ್ಷಣ ತನ್ನ ಮುದ್ದಾದ ಭಂಗಿಯನ್ನು ತೋರಿಸಿ ಎಲ್ಲರ ಮನ ಗೆದ್ದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಸಾಕಷ್ಟು ಮಂದಿಯ ಮೆಚ್ಚುಗೆ ಕೂಡ ಗಳಿಸಿದೆ.

ಸಣ್ಣ ಮಕ್ಕಳು ಮಾತ್ರವಲ್ಲ ದೊಡ್ಡವರ ಫೋಟೋಗಳು ಆಧಾರ್ ಕಾರ್ಡ್‌, ರೇಷನ್ ಕಾರ್ಡ್, ಮತದಾರರ ಗುರುತು ಪತ್ರದಲ್ಲಿ ಅಸಮಾಧಾನಗೊಂಡಿರುವಂತೆ ತೋರಿಸುತ್ತದೆ. ಆದರೆ ಈ ಪುಟ್ಟ ಹುಡುಗಿ ಮಾತ್ರ ಯಾವುದೇ ತಪ್ಪು ಆಗದಂತೆ ನೋಡಿಕೊಂಡಳು. ಗುರುತಿನ ಚೀಟಿಗಾಗಿ ಉತ್ತಮ ಭಂಗಿಯನ್ನು ತೋರಿ ಎಲ್ಲರ ಮನ ಗೆದ್ದಳು.
ಅವಳು ಕೆಮರಾದ ಮುಂದೆ ಮುಗುಳ್ನಕ್ಕಿರುವುದು ಮಾತ್ರವಲ್ಲ ತನ್ನ ವಿಭಿನ್ನ ಭಂಗಿಯನ್ನು ತೋರಿ ಎಲ್ಲರ ಮನ ಗೆದ್ದಳು.

ತಾನು ಯಾವುದಕ್ಕಾಗಿ ಫೋಟೋ ತೆಗೆಸಿಕೊಳ್ಳುತ್ತಿದ್ದೇನೆ ಎಂಬ ಅರಿವಿಲ್ಲದ ಈ ಮಗು ಆಧಾರ್ ಕಾರ್ಡ್ ಫೋಟೋಗಾಗಿ ಬಗೆ ಬಗೆಯ ಪೋಸ್ ನೀಡಿದ್ದಾಳೆ. 20ಕ್ಕೂ ಹೆಚ್ಚು ಪೋಸ್ ನೀಡಿರುವ ಆಕೆಯ ಯಾವ ಫೋಟೋವನ್ನು ಕಾರ್ಡ್ ನಲ್ಲಿ ಅಚ್ಚು ಹಾಕುವ ಗೊಂದಲ ಈಗ ಆಧಾರ್ ಕಾರ್ಡ್ ಮಾಡುವ ಸಿಬ್ಬಂದಿಯದ್ದಾಗಿದೆ.


ಗುರುತು ಚೀಟಿಗಳಿಗಾಗಿ ಸಾಮಾನ್ಯವಾಗಿ ವಯಸ್ಕರ ಫೋಟೋ ತೆಗೆಯುವುದು ಸುಲಭ. ಆದರೆ ಮಕ್ಕಳ ಫೋಟೋ ತೆಗೆಯುವುದು ಅಷ್ಟು ಸುಲಭವಲ್ಲ. ಅವುಗಳ ಗಮನ ಎಲ್ಲೋ ಇರುತ್ತದೆ. ಇನ್ನು ಕೆಲವು ಮಕ್ಕಳು ಅಪರಿಚಿತರನ್ನು ನೋಡಿ ಅಳಲು ಪ್ರಾರಂಭಿಸುತ್ತದೆ. ಮತ್ತೆ ಕೆಲವರು ನಿಂತಲ್ಲಿ ನಿಲ್ಲಲ್ಲ. ಅತ್ತಿತ್ತ ಓಡಿ ಹೋಗುವುದು ಮಾಡುತ್ತಾರೆ. ಇದಲ್ಲ ಮುಗಿದು ಒಂದು ಒಳ್ಳೆಯ ಫೋಟೋ ಸಿಕ್ಕರೆ ಮಾತ್ರ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯ. ಇಲ್ಲವಾದರೆ ಮತ್ತದೇ ಮಕ್ಕಳ ತಕರಾರು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: Kerala Govt: ಕೇರಳ ಸರ್ಕಾರಿ ನೌಕರರ ಪೈಕಿ ಮೂರರಲ್ಲಿ ಒಬ್ಬ ಮುಸ್ಲಿಂ ಅಥವಾ ಕ್ರಿಶ್ಚಿಯನ್

ಆದರೆ ಈ ಮಗುವನ್ನು ಪೋಷಕರು ಆಧಾರ್ ಕಾರ್ಡ್ ಸೆಂಟರ್‌ಗೆ ಕರೆದುಕೊಂಡು ಬಂದು ಕುರ್ಚಿಯ ಮೇಲೆ ನಿಲ್ಲಿಸಿ ಕೆಮರಾಗೆ ಪೋಸ್ ನೀಡಲು ಹೇಳಿದ್ದಾರೆ. ಫೋಟೋ ತೆಗೆಯುತ್ತಾರೆ. ಕೆಮರಾ ನೋಡು ಎಂದಿದ್ದಾರೆ. ತಕ್ಷಣ ಮಗು ಒಂದರ ಮೇಲೊಂದರಂತೆ ಪೋಸ್ ನೀಡುತ್ತಾ ಹೋಗಿದ್ದಾಳೆ. ಪುಟಾಣಿ ಮಗುವಿನ ಈ ಪೋಸ್ ಅಲ್ಲಿರುವ ಸಿಬ್ಬಂದಿಗೆ ಮಾತ್ರವಲ್ಲ ಅಲ್ಲಿದ್ದವರೆಲ್ಲರ ಗಮನ ಸೆಳೆದಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ.

Continue Reading

ದೇಶ

Deadly Attack: ಹಾಡಹಗಲೇ ಶಿವಸೇನೆ ಮುಖಂಡನ ಮೇಲೆ ಡೆಡ್ಲಿ ಅಟ್ಯಾಕ್‌- ವಿಡಿಯೋ ಇದೆ

Deadly Attack: ಥಾಪರ್‌ ಆಸ್ಪತ್ರೆಯಿಂದ ಹೊರ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಲು ಶುರು ಮಾಡುತ್ತಾರೆ. ಆಗ ದಾಳಿಕೋರರಲ್ಲಿ ಒಬ್ಬ ಕತ್ತಿಯಿಂದ ಥಾಪರ್ ತಲೆಯ ಮೇಲೆ ಬಿಡದೇ ಹೊಡೆಯಲು ಶುರು ಮಾಡುತ್ತಾನೆ. ಥಾಪರ್ ಕೈ ಜೋಡಿಸಿ ಬಿಟ್ಟು ಬಿಡಿ ಎಂದು ಅಂಗಾಲಾಚುತ್ತಿದ್ದರೂ ಅದನ್ನು ಲೆಕ್ಕಿಸದೇ ಆತನ ಮೇಲೆ ನಿರಂತರ ದಾಳಿ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Deadly Attack
Koo

ಚಂಢಿಗಡ: ಪಂಜಾಬ್‌ನ ಶಿವಸೇನೆ ಮುಖಂಡ(Shivsena Leader)ನ ಮೇಲೆ ನಾಲ್ವರು ದುಷ್ಕರ್ಮಿಗಳು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ(Deadly Attack) ನಡೆಸಿರುವ ಘಟನೆ ಲುಧಿಯಾನದಲ್ಲಿ ನಡೆದಿದೆ. ಶಿವಸೇನೆ ನಾಯಕ ಸಂದೀಪ್‌ ಥಾಪರ್‌ ಅಲಿಯಾಸ್‌ ಗೋರಾ ಮೇಲೆ ಸ್ಕೂಟರ್‌ನಲ್ಲಿ ಬಂದ ನಿಹಾಂಗ್ ಉಡುಪಿನಲ್ಲಿದ್ದ ನಾಲ್ವರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಇನ್ನು ಘಟನೆ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿದ್ದು, ವೈರಲ್‌(Viral Video) ಆಗಿದೆ.

ವೈರಲ್‌ ವಿಡಿಯೋದಲ್ಲೇನಿದೆ?

ಥಾಪರ್‌ ಆಸ್ಪತ್ರೆಯಿಂದ ಹೊರ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಲು ಶುರು ಮಾಡುತ್ತಾರೆ. ಆಗ ದಾಳಿಕೋರರಲ್ಲಿ ಒಬ್ಬ ಕತ್ತಿಯಿಂದ ಥಾಪರ್ ತಲೆಯ ಮೇಲೆ ಬಿಡದೇ ಹೊಡೆಯಲು ಶುರು ಮಾಡುತ್ತಾನೆ. ಥಾಪರ್ ಕೈ ಜೋಡಿಸಿ ಬಿಟ್ಟು ಬಿಡಿ ಎಂದು ಅಂಗಾಲಾಚುತ್ತಿದ್ದರೂ ಅದನ್ನು ಲೆಕ್ಕಿಸದೇ ಆತನ ಮೇಲೆ ನಿರಂತರ ದಾಳಿ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಮತ್ತೊಬ್ಬ ನಿಹಾಂಗ್ ಕತ್ತಿಯಿಂದ ದಾಳಿ ಮುಂದುವರಿಸಿದಾಗ ಶಿವಸೇನಾ ಪಂಜಾಬ್ ನಾಯಕ ಬ್ಯಾಲೆನ್ಸ್‌ ಕಳೆದುಕೊಂಡು ಸ್ಕೂಟರ್ ಸಮೇತ ರಸ್ತೆಯಲ್ಲಿ ಬಿದ್ದಿದ್ದಾರೆ. ಅಲ್ಲೇ ಇದ್ದ ಪ್ರಯಾಣಿಕರು ಆಘಾತದಿಂದ ನೋಡುತ್ತಿದ್ದಂತೆ ದಾಳಿಕೋರರು ಸ್ಕೂಟರ್​​ನಲ್ಲಿ ಪರಾರಿಯಾಗಿದ್ದಾರೆ.

ಸ್ಥಳದಲ್ಲಿ ಅನೇಕ ಜನ ಥಾಪರ್‌ ಸಹಾಯಕ್ಕೆ ಬರಲೇ ಇಲ್ಲ. ಟ್ರಸ್ಟ್‌ನ ಸಂಸ್ಥಾಪಕ-ಅಧ್ಯಕ್ಷ ರವೀಂದರ್ ಅರೋರಾ ಅವರ ನಾಲ್ಕನೇ ಪುಣ್ಯತಿಥಿಯ ಅಂಗವಾಗಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಥಾಪರ್ ಅವರು ಸಂವೇದನಾ ಟ್ರಸ್ಟ್ ಎಂಬ ಎನ್‌ಜಿಒ ಕಚೇರಿಯಿಂದ ಸಿವಿಲ್ ಆಸ್ಪತ್ರೆ ಬಳಿ ತೆರಳಿದ ನಂತರ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಮಾರಣಾಂತಿಕ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಥಾಪರ್‌ನನ್ನು ಸ್ಥಳೀಯ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಅವರನ್ನು ಸ್ಥಳೀಯ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಯಿತು. ಅಪರಿಚಿತ ದಾಳಿಕೋರರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಜಸ್ಕಿರಂಜಿತ್ ಸಿಂಗ್ ತೇಜಾ ತಿಳಿಸಿದ್ದಾರೆ.

ಘಟನೆಯ ನಂತರ, ಶಿವಸೇನಾ ಪಂಜಾಬ್ ನಾಯಕರು ಸಿವಿಲ್ ಆಸ್ಪತ್ರೆಯ ಹೊರಗೆ ಜಮಾಯಿಸಿ ಪಂಜಾಬ್ ಸರ್ಕಾರ ಮತ್ತು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ಥಾಪರ್‌ಗೆ ಮೂವರು ಬಂದೂಕುಧಾರಿಗಳ ಭದ್ರತೆ ನೀಡಲಾಗಿತ್ತು. ಪೊಲೀಸರು ಒಂದು ವಾರದ ಹಿಂದೆ ಅವರ ಭದ್ರತೆಯನ್ನು ಹಿಂತೆಗೆದುಕೊಂಡರು. ಇದರ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ. ಥಾಪರ್‌ ಮೇಲಿನ ದಾಳಿಗೆ ಹಿಂದೂ ಸಂಘಟನೆ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ. ಹಿಂದೂ ಮುಖಂಡರಿಗೆ ಸರ್ಕಾರ ಭದ್ರತೆ ನೀಡುತ್ತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯ ಮೇಲೆ ಇಂತಹ ಕ್ರೂರ ದಾಳಿ ಖಂಡನೀಯ. ಇದು ನಿವಾಸಿಗಳಲ್ಲಿ ಭೀತಿ ಮೂಡಿಸಿದೆ ಎಂದಿದ್ದಾರೆ.

ಇದನ್ನೂ ಓದಿ:Self Harming: ಮೊದಲ ರಾತ್ರಿಯ ಟೆನ್ಶನ್‌ಗೆ ವರ ಆತ್ಮಹತ್ಯೆ? ಉತ್ತರ ಪ್ರದೇಶದಲ್ಲೊಂದು ವಿಲಕ್ಷಣ ಘಟನೆ

Continue Reading
Advertisement
illegal relationship chitradurga
ಕ್ರೈಂ55 seconds ago

Illegal Relationship: ಪರ ಸ್ತ್ರೀಯೊಂದಿಗೆ ಲಾಡ್ಜಿಗೆ ಬಂದು ಪರಲೋಕ ಸೇರಿದ!

Hardik Pandya
ಕ್ರೀಡೆ3 mins ago

Hardik Pandya: ನತಾಶಾ ಜತೆ ವಿಚ್ಛೇದನ ಖಚಿತ; ಸುಳಿವು ನೀಡಿದ ಹಾರ್ದಿಕ್​ ಪಾಂಡ್ಯ ಪೋಸ್ಟ್​!

UK Election
ವಿದೇಶ17 mins ago

UK Election: ಬ್ರಿಟನ್‌ ಸಂಸತ್ತಿಗೆ 28 ಭಾರತೀಯ ಮೂಲದವರು ಆಯ್ಕೆ; ಈ ಪೈಕಿ 12 ಮಂದಿ ಸಿಖ್‌ ಸಮುದಾಯದವರು

Namma Metro
ಬೆಂಗಳೂರು18 mins ago

Namma Metro: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಇಂದಿನಿಂದ ನೇರಳೆ ಮಾರ್ಗದಲ್ಲಿ ರೈಲುಗಳ ಹೆಚ್ಚಳ

Actor Darshan Will Darshan Thoogudeepa Will Get Bail
ಸ್ಯಾಂಡಲ್ ವುಡ್25 mins ago

Actor Darshan:ದರ್ಶನ್‌ ಹೊರಗೆ ಯಾವಾಗ ಬರ್ತಾರೆ? ವಿದ್ಯಾ ಶಂಕರಾನಂದ ಸರಸ್ವತಿ ಭವಿಷ್ಯ ಏನು?

ಕ್ರೀಡೆ41 mins ago

IND vs ZIM: ಇಂದು ಭಾರತ-ಜಿಂಬಾಬ್ವೆ ಮೊದಲ ಟಿ20 ಪಂದ್ಯ; ಎಷ್ಟು ಗಂಟೆಗೆ ಆರಂಭ?

ಧವಳ ಧಾರಿಣಿ ಅಂಕಣ rama and sugreeva
ಅಂಕಣ48 mins ago

ಧವಳ ಧಾರಿಣಿ ಅಂಕಣ: ಕಿಷ್ಕಿಂಡಾ ಕಾಂಡದಲ್ಲಿನ ರಾಜನೀತಿಯ ವಿಲಕ್ಷಣ ಘಟನೆ

NIA Charge sheet
ದೇಶ56 mins ago

NIA Charge sheet: ಉಗ್ರ ಸಂಘಟನೆಗಳಿಗೆ ನೇಮಕಾತಿ; ಕುಖ್ಯಾತ ವಾವೋವಾದಿ ವಿರುದ್ಧ ಚಾರ್ಜ್‌ಶೀಟ್‌

Hathras Stampede
ದೇಶ1 hour ago

Hathras Stampede: ಹತ್ರಾಸ್‌ ಕಾಲ್ತುಳಿತ; ಮುಖ್ಯ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

Saffron For Baby
ಆರೋಗ್ಯ1 hour ago

Saffron For Baby: ಗರ್ಭಿಣಿ ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತದೆಯೇ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ3 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ15 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ17 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ17 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ19 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ21 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು22 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು22 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

ಟ್ರೆಂಡಿಂಗ್‌