Foreign Investment: ರಾಜ್ಯದಲ್ಲಿ ವಾಹನ ಬಿಡಿಭಾಗ ತಯಾರಿಕೆ; ಬಂಡವಾಳ ಹೂಡಿಕೆಗೆ ದ.ಕೊರಿಯಾ ಒಲವು - Vistara News

ಕರ್ನಾಟಕ

Foreign Investment: ರಾಜ್ಯದಲ್ಲಿ ವಾಹನ ಬಿಡಿಭಾಗ ತಯಾರಿಕೆ; ಬಂಡವಾಳ ಹೂಡಿಕೆಗೆ ದ.ಕೊರಿಯಾ ಒಲವು

Foreign Investment: ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿರುವ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಸೋಮವಾರ ಸೋಲ್‌ನಲ್ಲಿ ಹೊಯ್ಸಂಗ್‌ ಅಡ್ವಾನ್ಸ್ಡ್‌ ಮಟೇರಿಯಲ್ಸ್‌, ಎಚ್‌ಎಲ್‌ ಮಾಂಡೊ ಕಾರ್ಪೊರೇಷನ್‌, ನಿಫ್ಕೊ, ಡಿಎನ್‌ ಸೊಲುಷನ್ಸ್‌ ಮತ್ತು ಹುಂಡೈ ಮೋಟರ್ಸ್‌ನ ಮುಖ್ಯಸ್ಥರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿತು.

VISTARANEWS.COM


on

Manufacturing of auto parts in the state Increased propensity for capital investment
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿರುವ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ (Foreign Investment) ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಸೋಮವಾರ ಸೋಲ್‌ನಲ್ಲಿ ಹೊಯ್ಸಂಗ್‌ ಅಡ್ವಾನ್ಸ್ಡ್‌ ಮಟೇರಿಯಲ್ಸ್‌, ಎಚ್‌ಎಲ್‌ ಮಾಂಡೊ ಕಾರ್ಪೊರೇಷನ್‌, ನಿಫ್ಕೊ, ಡಿಎನ್‌ ಸೊಲುಷನ್ಸ್‌ ಮತ್ತು ಹುಂಡೈ ಮೋಟರ್ಸ್‌ನ ಮುಖ್ಯಸ್ಥರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿತು.

ಜಪಾನಿನ ಐದು ದಿನಗಳ ಯಶಸ್ವಿ ಭೇಟಿ ಪೂರ್ಣಗೊಳಿಸಿ ದಕ್ಷಿಣ ಕೊರಿಯಾಕ್ಕೆ ತೆರಳಿರುವ ನಿಯೋಗವು ಈ ತಿಂಗಳ 5 ರವರೆಗೆ ಅಲ್ಲಿನ ಬಹುರಾಷ್ಟ್ರೀಯ ಕಂಪನಿಗಳ ಜತೆ ಸಮಾಲೋಚನೆ ನಡೆಸಿ ಬಂಡವಾಳ ಹೂಡಿಕೆ ಆಕರ್ಷಿಸಲಿದೆ.

ರಾಜ್ಯದಲ್ಲಿ ವಾಹನ ಬಿಡಿಭಾಗ, ಜವಳಿ ಉತ್ಪನ್ನ, ನವೀಕರಿಸಬಹುದಾದ ಇಂಧನ, ಮಷಿನ್‌ಟೂಲ್ಸ್‌ ತಯಾರಿಕಾ ವಲಯಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು, ವಹಿವಾಟು ವಿಸ್ತರಿಸಲು ದಕ್ಷಿಣ ಕೊರಿಯಾದ ಈ ಬಹುರಾಷ್ಟ್ರೀಯ ಕಂಪನಿಗಳು ತೀವ್ರ ಆಸಕ್ತಿ ವ್ಯಕ್ತಪಡಿಸಿವೆ.

ಇದನ್ನೂ ಓದಿ: Press Day: ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ: ಸಿದ್ದರಾಮಯ್ಯ

ರಾಜ್ಯದಲ್ಲಿ ವಿದ್ಯುತ್‌ಚಾಲಿತ ವಾಹನಗಳ (ಇವಿ) ಮಾರುಕಟ್ಟೆಯು ವ್ಯಾಪಕವಾಗಿ ವಿಸ್ತರಣೆ ಆಗುತ್ತಿರುವುದು ಮತ್ತು ಭಾರತದಲ್ಲಿನ ತಯಾರಿಕಾ ಘಟಕಗಳಲ್ಲಿ ʼಇವಿʼಗಳನ್ನು ತಯಾರಿಸುವ ಬಗ್ಗೆ ಹುಂಡೈ ಮುಖ್ಯಸ್ಥರ ಜತೆಗಿನ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.

ರಾಜ್ಯದಲ್ಲಿ ಕೈಗಾರಿಕಾ ಅಶಾಂತಿ (ಕಾರ್ಮಿಕರ ವಿವಾದಗಳು) ಕಡಿಮೆ ಪ್ರಮಾಣದಲ್ಲಿ ಇರುವುದು ಮತ್ತು ಪೂರೈಕೆ ಸರಪಣಿಯಲ್ಲಿ ಸ್ಥಿರತೆ ಇರುವುದನ್ನು ಸಚಿವರು ಹುಂಡೈ ಕಂಪನಿಯ ಪ್ರಮುಖರ ಗಮನಕ್ಕೆ ತಂದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ವಾಹನಗಳ ಪ್ಲಾಸ್ಟಿಕ್‌ ಬಿಡಿಭಾಗ ತಯಾರಿಸುವ ಘಟಕ ಸ್ಥಾಪಿಸಲಿರುವ ನಿಫ್ಕೊ ಕೊರಿಯಾ ಕಂಪನಿಗೆ ಅಗತ್ಯವಾದ ಭೂಮಿ ಸ್ವಾಧೀನ ಮತ್ತು ಇತರ ಅನುಮೋದನೆಗಳಿಗೆ ರಾಜ್ಯ ಸರ್ಕಾರ ತ್ವರಿತವಾಗಿ ಸ್ಪಂದಿಸಲಿದೆ. ಕಾರ್ಖಾನೆಗೆ ಸಂಸ್ಕರಿಸಿದ ನೀರನ್ನು ಪೂರೈಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.

ರಾಜ್ಯದಲ್ಲಿ ಫೈಬರ್‌ ಆಪ್ಟಿಕ್‌ ಅಳವಡಿಕೆ ಯೋಜನೆಗಳು ಮತ್ತು ವಿದ್ಯುತ್‌ಚಾಲಿತ ವಾಹನಗಳ (ಇವಿ) ಬಳಕೆ ಹೆಚ್ಚಿಸುವ ಕ್ಷೇತ್ರಗಳಲ್ಲಿ ವಹಿವಾಟು ನಡೆಸಲು ಹೊಯ್ಸಂಗ್‌ ಅಡ್ವಾನ್ಸ್ಡ್‌ ಮಟೇರಿಯಲ್ಸ್‌ ಇಂಗಿತ ವ್ಯಕ್ತಪಡಿಸಿದೆ.

ಕಂಪನಿಯ ಉಪಾಧ್ಯಕ್ಷ ಹಾಂಗ್‌ ಸಂಗ್‌ ಅಹ್ನ್‌ ಅವರು ರಾಜ್ಯದ ನಿಯೋಗದ ಜತೆಗಿನ ಮಾತುಕತೆಯಲ್ಲಿ ಭಾಗಿಯಾಗಿದ್ದರು. ಟೈರ್‌ ಕೋರ್ಡ್ಸ್‌ ತಯಾರಿಕೆಗೆ ಭಾರತವನ್ನು ಪ್ರಮುಖ ನೆಲೆಯನ್ನಾಗಿ ಅಭಿವೃದ್ಧಿಪಡಿಸಲು ಕಂಪನಿಯ ಉದ್ದೇಶಿಸಿದೆ. ಭಾರತದಲ್ಲಿ ಪರಿಸರ ಸ್ನೇಹಿ ಸರಕುಗಳು ಹಾಗೂ ಸುಧಾರಿತ ಜವಳಿ ಉತ್ಪನ್ನಗಳನ್ನು ತಯಾರಿಸುವ ವಹಿವಾಟು ವಿಸ್ತರಿಸುವ ಅವಕಾಶಗಳನ್ನು ಕಂಪನಿಯು ಪರಿಶೀಲಿಸುತ್ತಿದೆ.

ಇದನ್ನೂ ಓದಿ: Kabzaa movie: ಅತಿ ಹೆಚ್ಚು ತೆರಿಗೆ ಪಾವತಿ; ಆರ್. ಚಂದ್ರು ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ!

ರಾಜ್ಯದಲ್ಲಿನ ನವೀಕರಿಸಬಹುದಾದ ಇಂಧನ ವಲಯದಲ್ಲಿನ ಭವಿಷ್ಯದ ವಿಸ್ತರಣೆ ಬಗ್ಗೆ ಸೌರಕೋಶಗಳ ಸೆಮಿಕಂಡಕ್ಟರ್‌ ತಯಾರಿಸುವ ಒಸಿಐ ಹೋಲ್ಡಿಂಗ್ಸ್‌ ಕಂಪನಿ ಜೊತೆ ಸಚಿವರು ಮಾತುಕತೆ ನಡೆಸಿದರು.

ಸೌರಶಕ್ತಿ ಫಲಕಗಳನ್ನು ತಯಾರಿಸುವ ಯೋಜನೆಗಳಿಗೆ ರಾಜ್ಯ ಸರ್ಕಾರವು ಕೊಡಮಾಡುತ್ತಿರುವ ಉತ್ತೇಜನಗಳನ್ನು ನಿಯೋಗವು ಕಂಪನಿಯ ಪ್ರಮುಖರಿಗೆ ಮನವರಿಕೆ ಮಾಡಿಕೊಟ್ಟಿತು.

ವಾಹನ ಬಿಡಿಭಾಗ ತಯಾರಿಸುವ ಎಚ್‌ಎಲ್‌ ಮಂಡೊ ಕಾರ್ಪೊರೇಷನ್ನಿನ ಸಿಎಫ್‌ಒ ಲೀ ಚುಲ್‌ ಮತ್ತು ನಿರ್ದೇಶಕ ಕಿಮ್‌ ಇವುನ್‌ ಸಂಗ್‌ ಅವರನ್ನು ರಾಜ್ಯದ ನಿಯೋಗವು ಭೇಟಿಯಾಗಿತ್ತು.

ಇದನ್ನೂ ಓದಿ: Kannada New Movie: ಪ್ರವೀಣ್ ತೇಜ್ ಅಭಿನಯದ ʼಜಿಗರ್ ಚಿತ್ರ ಜುಲೈ 5ರಂದು ಬಿಡುಗಡೆ

ಬೆಂಗಳೂರಿನಲ್ಲಿ ತಯಾರಿಕಾ ಘಟಕ ಹೊಂದಿರುವ ಕಂಪನಿಯು ರಾಜ್ಯದಲ್ಲಿ ಇನ್ನಷ್ಟು ಬಂಡವಾಳ ಹೂಡಿಕೆ ಮಾಡಲು ಉತ್ಸುಕತೆ ತೋರಿದೆ. ವಿದ್ಯುತ್‌ಚಾಲಿತ ಸೇರಿದಂತೆ ರಾಜ್ಯದಲ್ಲಿನ ಒಟ್ಟಾರೆ ವಾಹನ ಉದ್ಯಮ ಕ್ಷೇತ್ರದಲ್ಲಿನ ಅನುಕೂಲತೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯದ ನಿಯೋಗವು ಆಹ್ವಾನ ನೀಡಿದೆ. ಮಷೀನ್‌ಟೂಲ್ಸ್‌ ತಯಾರಿಕಾ ಕಂಪನಿ ಡಿಎನ್‌ ಸೊಲುಷನ್ಸ್‌, ಬೆಂಗಳೂರು ಬಳಿ 25 ಎಕರೆ ಪ್ರದೇಶದಲ್ಲಿ ತನ್ನ ತಯಾರಿಕಾ ಘಟಕ ಆರಂಭಿಸಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Dengue Fever: ಡೆಂಗ್ಯುಗೆ ಕೋವಿಡ್‌ ಮಾದರಿ ಉಚಿತ ಚಿಕಿತ್ಸೆ ಕೊಡಿ, ಮೆಡಿಕಲ್‌ ಎಮರ್ಜೆನ್ಸಿ ಘೋಷಿಸಿ: ಡಾ. ಮಂಜುನಾಥ್

Dengue Fever: ಡೆಂಗ್ಯು ತಡೆಗಟ್ಟದಿದ್ರೆ ಚಿಕನ್ ಗುನ್ಯ, ಜೀಕಾ ವೈರಸ್ ಬರಬಹುದು. ಕೋವಿಡ್ ಪ್ಯಾಂಡಮಿಕ್ ಅಂದೆವು. ಡೆಂಗ್ಯು ಎಂಡಮಿಕ್ ಆಗಿದೆ. ಎಂಡೆಮಿಕ್ ಅಂದರೆ ರಾಜ್ಯಾದ್ಯಂತ ಹರಡಿರೋದು. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ. ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು ಎಂದು ಮಂಜುನಾಥ್‌ ಹೇಳಿದ್ದಾರೆ.

VISTARANEWS.COM


on

DR CN Manjunath dengue fever
Koo

ಬೆಂಗಳೂರು: ಡೆಂಗ್ಯು ಜ್ವರಕ್ಕೆ (Dengue Fever) ಅಡ್ಮಿಟ್ ಆದವರಿಗೆ, ಕೋವಿಡ್ (Covid 19) ಸಂದರ್ಭದಲ್ಲಿ ಯಾವ ರೀತಿ ಉಚಿತ ಚಿಕಿತ್ಸೆ ನೀಡಲಾಯಿತೋ ಅದೇ ರೀತಿ ಕನಿಷ್ಠ ಮಾನದಂಡದಲ್ಲಿ ಉಚಿತ ಚಿಕಿತ್ಸೆ ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ (Bangalore Rural) ಸಂಸದ ಡಾ. ಸಿಎನ್‌ ಮಂಜುನಾಥ್‌ (Dr CN Manjunath) ಹೇಳಿದ್ದಾರೆ.

ಇದು ಸರ್ಕಾರಕ್ಕೆ ನನ್ನ ಸಲಹೆ. ಡೆಂಗ್ಯೂ ಫಿವರ್‌ ನಿಯಂತ್ರಣ ಅಂದರೆ ಸೊಳ್ಳೆ ನಿಯಂತ್ರಣ. ಸೊಳ್ಳೆ ನಿಯಂತ್ರಣ ಆದರೆ ಮಾತ್ರ ಡೆಂಗ್ಯು ನಿಯಂತ್ರಣ ಆಗಲಿದೆ. ಮಳೆಗಾಲ ಪ್ರಾರಂಭದಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆ ಬರುತ್ತದೆ. ಡೆಂಗ್ಯು ತಡೆಗಟ್ಟದಿದ್ರೆ ಚಿಕನ್ ಗುನ್ಯ, ಜೀಕಾ ವೈರಸ್ ಬರಬಹುದು. ಕೋವಿಡ್ ಪ್ಯಾಂಡಮಿಕ್ ಅಂದೆವು. ಡೆಂಗ್ಯು ಎಂಡಮಿಕ್ ಆಗಿದೆ. ಎಂಡೆಮಿಕ್ ಅಂದರೆ ರಾಜ್ಯಾದ್ಯಂತ ಹರಡಿರೋದು. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ. ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು ಎಂದು ಮಂಜುನಾಥ್‌ ಹೇಳಿದ್ದಾರೆ.

ಸರಕಾರ ಡೆಂಗ್ಯುಗೆ ದರ ನಿಗದಿ ಮಾಡಿದೆ. ಡಯೋಗ್ನಾಸಿಸ್‌ಗಳು ಹೆಚ್ಚು ವಸೂಲಿ ಮಾಡಿದರೆ,‌ ಅವುಗಳ ಬಾಗಿಲು ಮುಚ್ಚಿಸಬೇಕು. ಡೆಂಗ್ಯು ಹರಡಲು ಕಾರಣ ಮಳೆಗಾಲದಲ್ಲಿ ನೀರು ನಿಲ್ಲೋದರಿಂದ. ಹಲವೆಡೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ಈಡಿಸ್ ಈಜಿಪ್ಟೈ ಸೊಳ್ಳೆಯಿಂದ ಕಾಯಿಲೆ‌ ಹರಡುತ್ತಿದೆ. ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಆಗಬೇಕು. ಪ್ರತ್ಯೇಕ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಮಳೆಗಾಲ ಆರಂಭವಾದ ಮೇಲೆ ಎಚ್ಚೆತ್ತುಕೊಂಡಿದ್ದಾರೆ. ಈಗ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಸರ್ಕಾರ ಮತ್ತು ಸಾರ್ವಜನಿಕರು ಇಬ್ಬರದ್ದೂ ಜವಾಬ್ದಾರಿ ಇದೆ ಎಂದು ಡಾ. ಮಂಜುನಾಥ್‌ ಎಚ್ಚರಿಸಿದ್ದಾರೆ.

ಡೆಂಗ್ಯು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರ್ತಿದೆ. ಶಾಲೆಗಳಿಗೆ ಸರ್ಕ್ಯೂಲರ್ ಹೊರಡಿಸಬೇಕು. ಮಕ್ಕಳಲ್ಲಿ ಆರೋಗ್ಯ ಹದಗೆಟ್ಟಿದ್ದರೆ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಏಳೆಂಟು ಜನ ಸಾವನ್ನಪ್ಪಿದ್ದಾರೆ. ಸೊಳ್ಳೆ ನಿಯಂತ್ರಣ ಮಾಡೋದ್ರಲ್ಲಿ ಸರ್ಕಾರ ಎಡವಿದೆ. ಏನೇನೋ ಫ್ರೀ ಕೊಡ್ತೀವಿ, ಯಾವುದನ್ನೋ ಉಚಿತ ಕೊಡ್ತಿದ್ದಾರೆ. ಅದರ ಜೊತೆಗೆ ಸ್ಲಂಗಳಲ್ಲಿ, ವಠಾರದಲ್ಲಿ ವಾಸವಾಗಿದ್ದವರ ಮನೆಗೆ ಸೊಳ್ಳೆಪರದೆಯನ್ನು ಉಚಿತವಾಗಿ ನೀಡಬೇಕು. ಇದರಿಂದ ಬಹಳಷ್ಟು ರೋಗ ನಿಯಂತ್ರಣ ಆಗಲಿದೆ ಎಂದು ಮಂಜುನಾಥ್ ಸೂಚಿಸಿದ್ದಾರೆ. ‌

ಡೆಂಗ್ಯು ಬಂದು ಮತ್ತೆ ಹುಷಾರಾಗುವಾಗ ಪ್ಲೇಟ್ ಲೆಟ್ಸ್ ಕಡಿಮೆ ಆಗುತ್ತೆ. ಜೊತೆಗೆ ದೇಹದಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರ‌ ಗಮನಕ್ಕೂ ನಾನು ತರಲಿದ್ದೇನೆ. ಅವಶ್ಯಕತೆ ಇರುವವರಿಗೆ ಮೊದಲೇ ಚಿಕಿತ್ಸೆ ನೀಡಬೇಕು. ಡೆಂಗ್ಯೂ ಕಾಯಿಲೆಗೆ ಬೇಕಾದ ಮಾತ್ರೆಗಳ ಕೊರತೆ ಕೂಡ ಎದುರಾಗಿದೆ. ವಾರ್ ರೂಮ್ ಮೂಲಕ ಮಾನಿಟರ್ ಮಾಡಬೇಕು. ಮುಂದುವರೆದ ದೇಶಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕಾಯಿಲೆ ತಡೆದಿದ್ದಾರೆ. ಮಸ್ಕ್ಯೂಟೋ ರೆಪೆಲೆಂಟ್ಸ್ ಅಂತ ಸ್ಟಿಕರ್ ಬರುತ್ತಿದ್ದು. ಅದನ್ನ ಇಲ್ಲೂ ಹಾಕಬೇಕು. ಇದರಿಂದ ಮಕ್ಕಳಿಗೆ ಸೊಳ್ಳೆ ಕಡಿತ ತಪ್ಪಿಸಬಹುದು ಎಂದು ಅವರು ಹೇಳಿದರು.

ಜಪಾನ್, ಸಿಂಗಾಪುರ್, ಅಮೇರಿಕಾದಲ್ಲಿ ಡೆಂಗ್ಯೂ ಕಾಯಿಲೆಗೆ ಬೇಕಾದ ಮೆಡಿಸಿನ್ ಇದೆ. ಅವುಗಳನ್ನು ರಾಜ್ಯ ಸರ್ಕಾರ ತರಿಸಿಕೊಳ್ಳಬೇಕು. ಇಲ್ಲ ಅಲ್ಲಿ ನೀರು ನಿಲ್ಲೋದನ್ನ ತಡೆಗಟ್ಟಬೇಕು. ಸೊಳ್ಳೆ ನಿಯಂತ್ರಣ ಮಾಡಲು ಸ್ಪ್ರೇ ಮಾಡುವವರು ಕಾಣುತ್ತಿಲ್ಲ. ಬಿಬಿಎಂಪಿ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Dengue Fever: ಸಿಲಿಕಾನ್‌ ಸಿಟಿಯಲ್ಲಿ ಡೆಂಗ್ಯು ಜ್ವರಕ್ಕೆ ಬಾಲಕ ಬಲಿ, ರಾಜಧಾನಿಯಲ್ಲಿ 2ನೇ ಸಾವು

Continue Reading

ಶಿವಮೊಗ್ಗ

Road Accident : ಶಿವಮೊಗ್ಗದಲ್ಲಿ ಕಾರುಗಳ ನಡುವೆ ಭೀಕರ ಅಪಘಾತ; ಮೂವರು ಸಾವು, ಮತ್ತಿಬ್ಬರು ಗಂಭೀರ

Road Accident : ಭೀಕರ ರಸ್ತೆ ಅಪಘಾತದಲ್ಲಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಕಎರಡು ಕಾರುಗಳು ನಡುವೆ ಅಪಘಾತ ಸಂಭವಿಸಿದ್ದು, ಛಿದ್ರಗೊಂಡಿವೆ.

VISTARANEWS.COM


on

By

Road Accident
Koo

ಶಿವಮೊಗ್ಗ: ಶಿವಮೊಗ್ಗದಲ್ಲಿ (Shivamogga News) ಎರಡು ಕಾರುಗಳ (Cars clash) ನಡುವೆ ಭೀಕರ ಅಪಘಾತ (Road Accident) ಸಂಭವಿಸಿದೆ. ಶಿವಮೊಗ್ಗ ತಾಲೂಕಿನ ಮುದ್ದಿನಕೊಪ್ಪ ಟ್ರೀ ಪಾರ್ಕ್ ಬಳಿ ಘಟನೆ ನಡೆದಿದೆ.

ಇನೋವಾ ಕಾರು ಹಾಗೂ ಸ್ವೀಪ್ಟ್ ಕಾರು ನಡುವೆ ಡಿಕ್ಕಿಯಾಗಿದ್ದು, ಎರಡು ಕಾರುಗಳು ಛಿದ್ರ ಛಿದ್ರಗೊಂಡಿವೆ. ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರಿಗೆ ಗಂಭೀರ ಗಾಯವಾಗಿದೆ.

ಗಾಯಾಳುಗಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಕಾರುಗಳನ್ನು ತೆರವು ಮಾಡಲಾಗಿದೆ. ಮೇಲ್ನೋಟಕ್ಕೆ ಅತಿ ವೇಗ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: Assault Case : ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಗ್ರಾಹಕನ ತಲೆಬುರುಡೆ ತೂತು ಮಾಡಿದ ಸಪ್ಲೇಯರ್‌

ಹೋಮ್‌ ವರ್ಕ್‌ ಮಾಡುತ್ತಿದ್ದ ಬಾಲಕಿಗೆ ಸಾವಾಗಿ ಕಾಡಿದ ಪೆನ್‌!

ಶಾಲೆಗೆ ಹೋಗುವ ಮಕ್ಕಳ ಕೈಯಲ್ಲಿ ಪೆನ್ನು, ಪೆನ್ಸಿಲ್ ಕೊಟ್ಟಾಗ ಅವರು ತಮ್ಮ ತಲೆ, ಕಣ್ಣು, ಕೈಗೆ ಕೆಲವೊಮ್ಮೆ ಚುಚ್ಚಿಸಿಕೊಳ್ಳುವುದಿದೆ. ಆದರೆ ಪೆನ್‌ನಿಂದ ಸಾವು ಸಂಭವಿಸಿದ ಸುದ್ದಿ ಹಿಂದೆಂದೂ ಕೇಳಿದ್ದಿಲ್ಲ. ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಭದ್ರಾಚಲಂನ ಸುಭಾಷ್ ನಗರದಲ್ಲಿ ಬರೆಯಲು ಇಟ್ಟುಕೊಂಡಿದ್ದ ಪೆನ್‌ನಿಂದ ಬಾಲಕಿಯ ಸಾವು ಸಂಭವಿಸಿದ ದುರ್ಘಟನೆ ನಡೆದಿದೆ. 5 ವರ್ಷದ ಬಾಲಕಿ (Baby Death) ತಲೆಗೆ ಪೆನ್ ಚುಚ್ಚಿದ ಪರಿಣಾಮ ಸಾವನಪ್ಪಿದ್ದಾಳೆ.

ರಿಯಾನ್ಶಿಕಾ ಪೆನ್ನು ಚುಚ್ಚಿ ಸಾವನಪ್ಪಿದ ಬಾಲಕಿ. ಈಕೆ ಯುಕೆಜಿಯಲ್ಲಿ ಓದುತ್ತಿದ್ದಳು. ಜುಲೈ 1ರಂದು ತನ್ನ ಮನೆಯಲ್ಲಿ ಹಾಸಿಗೆಯ ಮೇಲೆ ಕುಳಿತು ಹೋಮ್‌ ವರ್ಕ್‌ ಮಾಡುತ್ತ ತನ್ನ ಪುಸ್ತಕಗಳೊಂದಿಗೆ ಆಟವಾಡುತ್ತಿದ್ದಾಗ, ಬ್ಯಾಲೆನ್ಸ್ ತಪ್ಪಿ ಮಂಚದಿಂದ ಕೆಳಗೆ ಬಿದ್ದಿದ್ದಾಳೆ. ಆಗ ಅವಳು ಹಿಡಿದಿದ್ದ ಪೆನ್ ಅವಳ ಕಿವಿಯ ಮೇಲ್ಭಾಗದಿಂದ ನೇರವಾಗಿ ತಲೆಗೆ ಆಳವಾಗಿ ಚುಚ್ಚಿದೆ. ಪೆನ್ನಿನ ಸುಮಾರು ಅರ್ಧದಷ್ಟು ಭಾಗ ಅವಳ ತಲೆಯೊಳಗೆ ತೂರಿ ಹೋಗಿತ್ತು ಎನ್ನಲಾಗಿದೆ.

ತಕ್ಷಣ ಆಕೆಯ ಹೆತ್ತವರಾದ ಮಣಿಕಂಠ ಮತ್ತು ಸ್ವರೂಪಾ ಅವರು ಅವಳನ್ನು ಭದ್ರಾಚಲಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ನಂತರ ವೈದ್ಯರ ಸಲಹೆಯ ಮೇರೆಗೆ ಉತ್ತಮ ಚಿಕಿತ್ಸೆಗಾಗಿ ಖಮ್ಮಂನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಅಲ್ಲಿ ವೈದ್ಯರು ಆಕೆಗೆ ಸರ್ಜರಿ ಮಾಡಿ ಪೆನ್ ಅನ್ನು ಹೊರಗೆ ತೆಗೆದರೂ ಕೂಡ ಗಂಭೀರ ಸ್ಥಿತಿಯಲ್ಲಿದ್ದ ಆಕೆ ಸೋಂಕಿಗೆ ಒಳಗಾಗಿ ಸಾವನಪ್ಪಿದ್ದಾಳೆ.

ಕೊನೆಗೂ ನೂರಾರು ವರ್ಷ ಬಾಳಿ ಬದುಕುಬೇಕಾಗಿದ್ದ ಆ ಪುಟ್ಟ ಬಾಲಕಿಯ ಜೀವ ಕೇವಲ ಒಂದು ಚಿಕ್ಕ ಪೆನ್ನಿನಿಂದ ಅಂತ್ಯ ಕಂಡಿದ್ದು ದುರಂತವೇ ಸರಿ. ಹಾಗಾಗಿ ಈ ಘಟನೆಯಿಂದ ಎಲ್ಲಾ ಪೋಷಕರು ಎಚ್ಚೆತ್ತುಕೊಳ್ಳುವುದು ಉತ್ತಮ. ನಿಮಗೆ ಎಷ್ಟೇ ಕೆಲಸವಿದ್ದರೂ ಕೂಡ ನಿಮ್ಮ ಮಕ್ಕಳ ಬಗ್ಗೆ ಒಂದು ಗಮನವಿಟ್ಟಿರಿ. ಇಲ್ಲವಾದರೆ ಇಂತಹ ದುರಂತಗಳಿಗೆ ಕಾರಣವಾಗಬಹುದು.

ಈ ಹಿಂದೆ ಮೇ ತಿಂಗಳಿನಲ್ಲಿ ನೇಪಾಳದಲ್ಲಿ 7 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ 10 ಸೆಂ.ಮೀ ಉದ್ದದ ಪೆನ್ಸಿಲ್ ಅನ್ನು ನುಂಗಿ ಬಿಟ್ಟಿದ್ದ. ಇದರಿಂದ ಆತ ಹೊಟ್ಟೆ ನೋವಿನಿಂದ ನರಳಿದ್ದು, ನಂತರ ಪೋಷಕರು ವೈದ್ಯರ ಬಳಿ ಕರೆದುಕೊಂಡು ಹೋದಾಗ ಬಾಲಕನ ಎದೆ ಮತ್ತು ಹೊಟ್ಟೆಯ ಎಕ್ಸ್-ರೇ ಸ್ಕ್ಯಾನ್ ಮಾಡಿಸಿದ ವೈದ್ಯರಿಗೆ ಪೆನ್ಸಿಲ್ ಅವನ ಹೊಟ್ಟೆಯಲ್ಲಿ ಇರುವುದು ತಿಳಿದು ಬಂದಿತ್ತು. ನಂತರ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಆತನ ಹೊಟ್ಟೆಯಿಂದ ಹೊರಗೆ ತೆಗೆಯಲಾಗಿತ್ತು. ಇದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು ಗ್ರಾಮಾಂತರ

Assault Case : ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಗ್ರಾಹಕನ ತಲೆಬುರುಡೆ ತೂತು ಮಾಡಿದ ಸಪ್ಲೇಯರ್‌

Assault Case : ಸಂಜೆ ಬಾರ್‌ನಲ್ಲಿ ಕುಡಿಯಲು ಹೋದ ವ್ಯಕ್ತಿಯೊಬ್ಬ ಆಮ್ಲೇಟ್‌ ಆರ್ಡರ್‌ ಮಾಡಿದ್ದ. ಆಮ್ಲೇಟ್‌ ತಿನ್ನುವಾಗ ಕಲ್ಲು ಸಿಕ್ಕಿತ್ತು, ಇದನ್ನೂ ಪ್ರಶ್ನಿಸಿದ್ದಕ್ಕೆ ಬಾರ್‌ ಕ್ಯಾಶಿಯರ್‌ ಹಾಗೂ ಸಪ್ಲೇಯರ್‌ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

VISTARANEWS.COM


on

By

assault case in Jigani
ಹಲ್ಲೆಗೊಳಗಾದ ಬಾಬು
Koo

ಆನೇಕಲ್: ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಗ್ರಾಹಕನೊಬ್ಬ ಪ್ರಶ್ನಿಸಿದ್ದಕ್ಕೆ ಬಾರ್‌ ಕ್ಯಾಶಿಯರ್‌ ಹಾಗೂ ಸಪ್ಲೇಯರ್‌ ಸೇರಿ ಹಲ್ಲೆ (Assault Case) ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರದ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರೀತಿಧಾಮ ಬಾರ್‌ನಲ್ಲಿ ಘಟನೆ ನಡೆದಿದೆ.

ಕೊಪ್ಪಗೇಟ್ ನಿವಾಸಿ ಬಾಬು(30) ಹಲ್ಲೆಗೊಳಗಾದವರು. ಬಾರ್ ಕ್ಯಾಶಿಯರ್ ಸಮಂತ್ ಗೌಡ, ಸಪ್ಲೇಯರ್ ಜೀವನ್ ಗೌಡ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.

ನಿನ್ನೆ ಶುಕ್ರವಾರ ಸಂಜೆ 8ಗಂಟೆ ಸುಮಾರಿಗೆ ಬಾಬು ಬಾರ್‌ಗೆ ಹೋಗಿದ್ದರು. ಈ ವೇಳೆ ಮದ್ಯದ ಜತೆಗೆ ನೀಡಿದ್ದ ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದೆ. ಇದರಿಂದ ಸಿಟ್ಟಾದ ಬಾಬು ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಸಪ್ಲೇಯರ್‌ ಬಳಿ ಪ್ರಶ್ನಿಸಿದ್ದಾನೆ. ಇದರಿಂದ ಸಿಟ್ಟಾದ ಸಪ್ಲೇಯರ್‌ ಜೀವನ್‌ ಗೌಡ ಏಕಾಏಕಿ ಹಲ್ಲೆ ನಡೆಸಿದ್ದಾನೆ.

ಅಲ್ಲೇ ಇದ್ದ ಬಿಯರ್‌ ಬಾಟಲಿಯಿಂದ ತಲೆಗೆ ಹೊಡೆದಿದ್ದು, ಬಾಬು ತಲೆ ತೂತಾಗಿದೆ. ಇತ್ತ ಜೀವನ್‌ಗೆ ಬಾರ್‌ ಕ್ಯಾಶಿಯರ್‌ ಸಮಂತ್‌ ಗೌಡ ಸಾಥ್‌ ನೀಡಿದ್ದು, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಾಬು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಇತ್ತೀಚೆಗೆ ಆನೇಕಲ್ ತಾಲೂಕಿನಲ್ಲಿ ಹಲ್ಲೆ, ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳು ಹೆಚ್ಚಾಗುತ್ತಿವೆ. ಏಯ್ ಹೋಗೋ ಅಂದಿದ್ದಕ್ಕೆ ವಿಶೇಷ ಚೇತನನ ಮೇಲೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ವಾಬಸಂದ್ರದಲ್ಲಿ ಡೆಡ್ಲಿ ಅಟ್ಯಾಕ್ ನಡೆದಿತ್ತು. ಇದೀಗ ಆಮ್ಲೇಟ್‌‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ.

ಇದನ್ನೂ ಓದಿ:Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

ʼಏಯ್‌ ಹೋಗೋʼ ಅಂದಿದ್ದಕ್ಕೆ ವಿಕಲ ಚೇತನನನ್ನು ಕೊಚ್ಚಿ ಹಾಕಿದರು!

ಆನೇಕಲ್: ಪುಡಿ ರೌಡಿಗಳು (Rowdy Sheeters) ಕ್ಷುಲ್ಲಕ ಕಾರಣಕ್ಕೆ ಡೆಡ್ಲಿ ಅಟ್ಯಾಕ್‌ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ʼಏಯ್ ಹೋಗೋʼ ಎಂದಿದ್ದಕ್ಕೆ ವಿಶೇಷ ಚೇತನ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ (Assault Case) ನಡೆಸಿ ಕೊಚ್ಚಿ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದು ನಡೆದಿರುವುದು ಬೆಂಗಳೂರು ಹೊರವಲಯ (Bangalore Rural) ಆನೇಕಲ್ (Anekal) ತಾಲ್ಲೂಕಿನ ‌ಜಿಗಣಿಯಲ್ಲಿ.

ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ವಾಬಸಂದ್ರದಲ್ಲಿ ಘಟನೆ ನಡೆದಿದ್ದು, ವಾಬಸಂದ್ರ ವಾಸಿ ನಾಗರಾಜ್(26) ಹಲ್ಲೆಗೊಳಗಾದ ಯುವಕ. ಮುಂಜಾನೆ 3 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಡೆಡ್ಲಿ ಅಟ್ಯಾಕ್ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಲೆಮನ್ ಡ್ರಾಪ್ಸ್ ಟೀ ಅಂಗಡಿ ಬಳಿ ಟೀ ಕುಡಿದು ವಾಪಸ್ ಆಗುತ್ತಿದ್ದ ವೇಳೆ ಆಟೋದಲ್ಲಿ ಬಂದ ಅಪರಿಚಿತರು ನಾಗರಾಜ್ ಮತ್ತು ಸ್ನೇಹಿತರಿಗೆ ಆವಾಜ್ ಹಾಕಿದ್ದಾರೆ. ಆಗ ನಾಗರಾಜ್‌ ʼಏಯ್ ಹೋಗ್ರೋʼ ಎಂದಿದ್ದಾರೆ.

ಅಷ್ಟಕ್ಕೆ ಮನೆವರೆಗೂ ನಾಗರಾಜ್‌ನನನ್ನು ಹಿಂಬಾಲಿಸಿದ್ದ ಆರೋಪಿಗಳು, ಮನೆ ಬಳಿ ಮಾರಕಾಸ್ತ್ರಗಳಿಂದ ಡೆಡ್ಲಿ ಅಟ್ಯಾಕ್ ನಡೆಸಿದ್ದಾರೆ. ಮುಖ, ಕೈ, ಕುತ್ತಿಗೆಗೆ ಲಾಂಗ್‌, ಮಚ್ಚುಗಳಿಂದ ಯದ್ವಾತದ್ವಾ ಕೊಚ್ಚಿ ಹಾಕಿ, ಹಲ್ಲೆ ಬಳಿಕ ಆಟೋ ಸಮೇತ ಪರಾರಿಯಾಗಿದ್ದಾರೆ. ಗಾಯಾಳು ನಾಗರಾಜ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರೌಡಿ ಶೀಟರ್‌ಗಳಾದ ಮೇಲುಕೋಟೆ ಮೂಲದ ಸೂರ್ಯ, ಯಾರಂಡಹಳ್ಳಿ ವಾಸಿ ಪ್ರವೀಣ್ ಮತ್ತು ಇತರರಿಂದ ಕೃತ್ಯ ನಡೆದಿರುವ ಶಂಕೆ ಇದೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಇತ್ತೀಚೆಗೆ ಕ್ರೈಮ್‌ ನಿಯಂತ್ರಣಕ್ಕೆ ಸಿಗದಂತೆ ಹೆಚ್ಚುತ್ತಿದೆ. ಕಳೆದ ತಿಂಗಳು 26ನೇ ತಾರೀಕು ಗುರಾಯಿಸಿದ ಎಂದು ಬಾರ್‌ನಲ್ಲಿ ತಮಗೆ ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಮರ್ಡರ್ ಮಾಡಲಾಗಿತ್ತು. ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಕಲ್ಕೆರೆ ಬಾರ್‌ನಲ್ಲಿ ಉತ್ತರ ಕರ್ನಾಟಕ ಮೂಲದ ಹರ್ಷವರ್ಧನ್ ಕೊಲೆಯಾಗಿತ್ತು. ಇದೀಗ ಏಯ್ ಹೋಗೋ ಅಂದಿದ್ದಕ್ಕೆ ವಿಶೇಷ ಚೇತನನ ಮೇಲೆ ಮಾರಕ ದಾಳಿ ನಡೆದಿದೆ. ಆನೇಕಲ್ ಭಾಗದಲ್ಲಿ ಕ್ಷುಲ್ಲಕ ಕಾರಣಗಳಿಗೆ ಕೊಲೆ, ಕೊಲೆ ಯತ್ನ ನಡೆಯುತ್ತಿದೆ. ಗೂಂಡಾಗಿರಿ ನಡೆಸತ್ತಿರುವ ಪಾತಕಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಶ್ರೀಸಾಮಾನ್ಯರು ಅಳಲು ತೋಡಿಕೊಳ್ಳುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಶಿವಮೊಗ್ಗ

Zika Virus : ಡೆಂಗ್ಯೂ ಬೆನ್ನಲ್ಲೇ ಶಿವಮೊಗ್ಗದಲ್ಲಿ ಝಿಕಾ ವೈರಸ್‌ಗೆ ವೃದ್ಧ ಬಲಿ

Dengue Fever : ಡೆಂಗ್ಯೂ ಜ್ವರ ಎಲ್ಲೆಡೆ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ ಜತೆಗೆ ಝಿಕಾ ವೈರಸ್‌ ಭೀತಿಯು (Zika Virus ) ಹೆಚ್ಚಾಗಿದೆ. ಶಿವಮೊಗ್ಗದಲ್ಲಿ ಝಿಕಾ ವೈರಸ್‌ಗೆ ವೃದ್ಧರೊಬ್ಬರು ಬಲಿಯಾಗಿದ್ದಾರೆ.

VISTARANEWS.COM


on

By

Zika Virus
ಸಾಂದರ್ಭಿಕ ಚಿತ್ರ
Koo

ಶಿವಮೊಗ್ಗ: ರಾಜ್ಯದಲ್ಲಿ ಝಿಕಾ ವೈರಸ್ (Zika Virus) ಆತಂಕ ಹೆಚ್ಚಾಗಿದ್ದು, ಶಿವಮೊಗ್ಗದಲ್ಲಿ ಝಿಕಾ ವೈರಸ್‌ಗೆ 74 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಝಿಕಾ ವೈರಸ್ ಜತೆಗೆ ಬಹು ಅಂಗಾಂಗ ವೈಫಲ್ಯಗಳಿಂದ ವೃದ್ಧ ಬಳಲುತ್ತಿದ್ದರು ಎನ್ನಲಾಗಿದೆ.

ಕಳೆದ ಹತ್ತು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೇವಲ ಝಿಕಾ ವೈರಸ್‌ಗೆ ವ್ಯಕ್ತಿ ಸಾಯಲು ಸಾಧ್ಯವಿಲ್ಲ. ಅವರು ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು ಎಂದು ಸಾವಿನ ಬಗ್ಗೆ ಶಿವಮೊಗ್ಗ ಡಿಎಚ್‌ಒ ಡಾ.ನಟರಾಜ್ ಸ್ಪಷ್ಟನೆ ಪಡಿಸಿದ್ದಾರೆ.

ಯುವಕನಲ್ಲೂ ಝಿಕಾ ವೈರಸ್‌ ಪತ್ತೆ

ಶಿವಮೊಗ್ಗದ ಸಾಗರ ಮೂಲದ 24 ವರ್ಷದ ಯುವಕನಲ್ಲೂ ಝಿಕಾ ವೈರಸ್ ಪತ್ತೆಯಾಗಿದೆ ಎನ್ನಲಾಗಿದೆ. ಯುವಕನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಝಿಕಾ ರೋಗದ ಲಕ್ಷಣಗಳೇನು?

  • ಕಣ್ಣು ಕೆಂಪಾಗುವಿಕೆ, ತಲೆ ನೋವು, ಜ್ವರ, ಕೀಲುಗಳಲ್ಲಿ ನೋವು, ಗಂಧೆಗಳು, ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಜನರು ಯಾವ ನಿಯಮ ಪಾಲಿಸಬೇಕು?

ರೋಗದ ಲಕ್ಷಣ ಕಂಡು ಬಂದರೆ ಕೂಡಲೇ ಜನರು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಈ ಮೂಲಕ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳಬಾರದು ಎಂಬ ಸಲಹೆಯನ್ನು ಆರೋಗ್ಯ ಇಲಾಖೆ ನೀಡಿದೆ.

ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2 ರಿಂದ 7 ದಿನಗಳವರೆಗೆ ಇರುತ್ತದೆ. ಗರ್ಭಿಣಿಯರು ವಿಶೇಷವಾಗಿ ಎಚ್ಚರಿಕೆ ವಹಿಸಬೇಕು. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ/ವೈದ್ಯರನ್ನು ಸಂಪರ್ಕ ಮಾಡಬೇಕು ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: Death by Shock: ಮೊಬೈಲ್‌ ಚಾರ್ಜರ್‌ನಿಂದ ಶಾಕ್‌ ಹೊಡೆದು ವಿದ್ಯಾರ್ಥಿ ಸಾವು

ಝಿಕಾ ವೈರಸ್ ತಡೆಗಟ್ಟಲು ಜನಸಾಮಾನ್ಯರ ಜವಾಬ್ದಾರಿ ಏನು?

  • -ನೀರು ಶೇಖರಣಾ ಪರಿಕರಗಳನ್ನು (ಟ್ಯಾಂಕ್‌, ಟಬ್‌ ಇತ್ಯಾದಿ) ಮುಚ್ಚಿಡಬೇಕು. ಅಲ್ಲದೆ, ವಾರಕ್ಕೊಮ್ಮೆ ಅವುಗಳನ್ನು ಸ್ವಚ್ಛಗೊಳಿಸಬೇಕು.
  • -ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಜತೆಗೆ ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.
  • -ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ, ಮಕ್ಕಳು, ವಯೋವೃದ್ಧರು ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಬೇಕು.
  • -ಸೊಳ್ಳೆಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿ ಮಾಡುವುದು ನಿಂತ ನೀರಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಮನೆಯ ಸುತ್ತಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು.
  • -ಪ್ರತಿಯೊಬ್ಬ ವ್ಯಕ್ತಿಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ವೈರಸ್ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
DR CN Manjunath dengue fever
ಪ್ರಮುಖ ಸುದ್ದಿ4 mins ago

Dengue Fever: ಡೆಂಗ್ಯುಗೆ ಕೋವಿಡ್‌ ಮಾದರಿ ಉಚಿತ ಚಿಕಿತ್ಸೆ ಕೊಡಿ, ಮೆಡಿಕಲ್‌ ಎಮರ್ಜೆನ್ಸಿ ಘೋಷಿಸಿ: ಡಾ. ಮಂಜುನಾಥ್

Road Accident
ಶಿವಮೊಗ್ಗ5 mins ago

Road Accident : ಶಿವಮೊಗ್ಗದಲ್ಲಿ ಕಾರುಗಳ ನಡುವೆ ಭೀಕರ ಅಪಘಾತ; ಮೂವರು ಸಾವು, ಮತ್ತಿಬ್ಬರು ಗಂಭೀರ

assault case in Jigani
ಬೆಂಗಳೂರು ಗ್ರಾಮಾಂತರ31 mins ago

Assault Case : ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಗ್ರಾಹಕನ ತಲೆಬುರುಡೆ ತೂತು ಮಾಡಿದ ಸಪ್ಲೇಯರ್‌

Rohit Sharma
ಕ್ರೀಡೆ40 mins ago

Rohit Sharma: ಮರಾಠಿಯಲ್ಲೇ ಮಾತನಾಡಿದ ರೋಹಿತ್​, ಸೂರ್ಯಕುಮಾರ್​; ವಿಡಿಯೊ ವೈರಲ್​

Anant Ambani -Radhika Salman Khan dances
ಬಾಲಿವುಡ್40 mins ago

Anant Ambani -Radhika:  ಸಂಗೀತ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಜತೆ ಡ್ಯಾನ್ಸ್‌ ಮಾಡಿದ ಸಲ್ಮಾನ್ ಖಾನ್!

Viral Video
Latest52 mins ago

Viral Video : ಕೀರ್ತಿ ಚಕ್ರ ಸ್ವೀಕರಿಸಿದ ಹುತಾತ್ಮ ಯೋಧನ ಪತ್ನಿ; ಭಾವುಕರಾದ ದ್ರೌಪದಿ ಮುರ್ಮು‌,ರಾಜನಾಥ್ ಸಿಂಗ್!

Hathras Stampede
ದೇಶ55 mins ago

Hathras Stampede: ಹತ್ರಾಸ್‌ ಕಾಲ್ತುಳಿತದಿಂದ ತೀವ್ರ ದುಃಖವಾಗಿದೆ ಎಂದ ಭೋಲೆ ಬಾಬಾ; Video ಇಲ್ಲಿದೆ

Zika Virus
ಶಿವಮೊಗ್ಗ57 mins ago

Zika Virus : ಡೆಂಗ್ಯೂ ಬೆನ್ನಲ್ಲೇ ಶಿವಮೊಗ್ಗದಲ್ಲಿ ಝಿಕಾ ವೈರಸ್‌ಗೆ ವೃದ್ಧ ಬಲಿ

spicejet news
ಪ್ರಮುಖ ಸುದ್ದಿ1 hour ago

SpiceJet News: ಬೆಂಗಳೂರಿನ ಪ್ರಯಾಣಿಕರನ್ನು ದಿಲ್ಲಿಯಲ್ಲಿ ವಿಮಾನದೊಳಗೇ 12 ಗಂಟೆ ಕೊಳೆಹಾಕಿದ ಸ್ಪೈಸ್‌ಜೆಟ್!

Kiran Raj celebrate Family day on his birthday
ಸ್ಯಾಂಡಲ್ ವುಡ್1 hour ago

Kiran Raj: ಜನುಮದಿನ ʻಫ್ಯಾಮಿಲಿ ಡೇʼ ಎಂದು ಆಚರಿಸಿ, ಅಭಿಮಾನಿಗಳಿಂದ ಸೈ ಎನಿಸಿಕೊಂಡ ʻಕನ್ನಡತಿʼ ಸೀರಿಯಲ್‌ ನಟ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ6 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ18 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ20 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ21 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ23 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ24 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು1 day ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು1 day ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

ಟ್ರೆಂಡಿಂಗ್‌