MUDA site scandal: ಮುಡಾ ನಿವೇಶನ ಹಗರಣ; ಸಿಎಂ ಹೆಂಡತಿ ಯಾಕೆ ಅಕ್ರಮ ಮಾಡುತ್ತಾರೆ ಎಂದ ಡಿಕೆಶಿ! - Vistara News

ಕರ್ನಾಟಕ

MUDA site scandal: ಮುಡಾ ನಿವೇಶನ ಹಗರಣ; ಸಿಎಂ ಹೆಂಡತಿ ಯಾಕೆ ಅಕ್ರಮ ಮಾಡುತ್ತಾರೆ ಎಂದ ಡಿಕೆಶಿ!

MUDA site scandal: ಮೈಸೂರು ಮುಡಾದಲ್ಲಿ ಅಕ್ರಮ ಆರೋಪಗಳ ಬಗ್ಗೆ ಚನ್ನಪಟ್ಟಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಜಮೀನು ಸ್ವಾಧೀನವಾಗಿತ್ತು, ಅದಕ್ಕೆ ಪರ್ಯಾಯವಾಗಿ ಸೈಟ್‌ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

VISTARANEWS.COM


on

MUDA site scandal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಮನಗರ: ಬಿಜೆಪಿ ಸರ್ಕಾರ ಅವಧಿಯಲ್ಲೇ ಸಿಎಂ ಹೆಂಡತಿಯವರ ಜಮೀನು ಸ್ವಾಧೀನ ಆಗಿದೆ. ಅವರು ಡಿನೋಟಿಫಿಕೇಷನ್ ಮಾಡಿಕೊಂಡಿಲ್ಲ. ಸಿಎಂ ಹೆಂಡತಿ ಯಾಕೆ ಅಕ್ರಮ (MUDA site scandal) ಮಾಡುತ್ತಾರೆ. ಅವರ ಆಸ್ತಿ ಇತ್ತು, ಅದು ಹೋಗಿದೆ. ಪರ್ಯಾಯ ಸೈಟ್ ಕೊಡಬೇಕು, ಕೊಟ್ಟಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಮೈಸೂರು ಮುಡಾದಲ್ಲಿ ಅಕ್ರಮ ಆರೋಪಗಳ ಬಗ್ಗೆ ಚನ್ನಪಟ್ಟಣದಲ್ಲಿ ಪ್ರತಿಕ್ರಿಯಿಸಿ, ಅವರ ಜಮೀನು ಪಡೆದ ಹಿನ್ನೆಲೆಯಲ್ಲಿ ಇನ್ಸೆಂಟೀವ್ ಸ್ಕೀಮ್ ಅಡಿ ಮುಡಾ ಸೈಟ್‌ ನೀಡಿದೆ. ಡಿನೋಟಿಫೈ ಮಾಡದೆ ಇನ್ಸೆಂಟಿವ್ ತಗೊಂಡಿರೊದ್ದಕ್ಕೆ ಖುಷಿ ಪಡಬೇಕು. ಅವರು ಅರ್ಹರಿದ್ದಾರೆ, ತೆಗೆದುಕೊಂಡಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ನಾಲ್ವರು ಅಧಿಕಾರಿಗಳ ಸಸ್ಪೆಂಡ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಮುಖ್ಯಮಂತ್ರಿಗಳು ಭ್ರಷ್ಟಾಚಾರ ವಿರುದ್ಧವಾಗಿ ಕಠಿಣವಾಗಿ ಇರುತ್ತಾರೆ. ಯಾರೆ ತಪ್ಪು ಮಾಡಿದರೂ ಶಿಕ್ಷೆ ಆಗಬೇಕು, ತನಿಖೆ ಆಗಬೇಕು ಅಂತ ಹೇಳಿದ್ದಾರೆ. ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ. ನನಗೂ ಆ ನಾಗೇಂದ್ರ ವಿಚಾರದಲ್ಲಿ ಡೌಟ್ ಇತ್ತು. ಈ ಬಗ್ಗೆ ವಿಚಾರಿಸಿದಾಗ ನಮ್ಮ ಮಂತ್ರಿಗಳು ಅದರಲ್ಲಿ ಭಾಗಿಯಾಗಿಲ್ಲ ಎಂಬುವುದು ತಿಳಿದುಬಂದಿದೆ ಎಂದರು.

ಬೇರೆ ಯಾರೂ ಅಕ್ರಮ ಮಾಡಿಲ್ಲ ಅಂತ ಹೇಳೋದಿಲ್ಲ. ಆದರೆ ಮಿನಿಸ್ಟರ್ಸ್‌ ಯಾರೂ ಭಾಗಿಯಾಗಿಲ್ಲ. ಆ ವಿಚಾರದಲ್ಲಿ ನನಗೆ ಸಮಾಧಾನ ಇದೆ. ಅವಶ್ಯಕತೆ ಇದ್ದರೆ ಎಲ್ಲರನ್ನೂ ವಿಚಾರಣೆ ಮಾಡುತ್ತಾರೆ‌, ಎಷ್ಟೋ ಸಲ ನಮ್ಮನ್ನೇ ವಿಚಾರಿಸಿಲ್ಲವೇ ಎಂದು ಹೇಳಿದರು.

ಇದನ್ನೂ ಓದಿ | Karnataka CM: ಸಿದ್ದು- ಡಿಕೆಶಿ ಇಬ್ಬರ ಜಗಳ ಮೂರನೆಯವರಿಗೆ ಲಾಭ? ಆ ಮೂರನೆಯವರು ಇವರೇ!

ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಯಾರೂ ಚರ್ಚೆ ಮಾಡದಂತೆ ಕೈ ನಾಯಕರಿಗೆ ಸೂಚನೆ ನೀಡಿದ್ದೀರಿ ಎಂಬ ಪ್ರಶ್ನೆ ಕೇಳುತ್ತಿದ್ದಂತೆ ಉತ್ತರಿಸದೆ ಡಿಸಿಎಂ ನಿರ್ಗಮಿಸಿದರು.

ಪತ್ನಿಗೆ ಕಾನೂನು ಪ್ರಕಾರವೇ ಮುಡಾ ಸೈಟ್‌; ಬಿಜೆಪಿ ಕಾಲದಲ್ಲೇ ನೀಡಲಾಗಿತ್ತು ಎಂದ ಸಿದ್ದರಾಮಯ್ಯ

MUDA site Cm Siddaramaiah says his wife was given MUDA site during BJP regimescandal

ಬೆಂಗಳೂರು: ಮೈಸೂರಿನಲ್ಲಿ ಮುಡಾ ನಿವೇಶನ ಹಂಚಿಕೆ ಹಗರಣದ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರದ ಆದೇಶ ನೀಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೂ ಮುಡಾ ಸೈಟ್‌ (MUDA site scandal) ಹಂಚಿಕೆಯಾಗಿದೆ ಎಂಬ ವಿಷಯ ತಿಳಿದುಬಂದಿದೆ. ಪತ್ನಿಗೆ ನೀಡಿರುವ 50:50 ಅನುಪಾತದ ನಿವೇಶನಗಳ ಬಗ್ಗೆ ಅಕ್ರಮ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ಇದ್ದ ಜಾಗವನ್ನು 1997ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಕ್ಕೆ ಪಡೆದು, ಆ ಭೂಮಿಗೆ 2021ರಲ್ಲಿ ಪರಿಹಾರ ಕೊಟ್ಟಿತ್ತು ಎನ್ನಲಾಗಿದೆ. ಈ ಬಗ್ಗೆ ನಗರದಲ್ಲಿ ಮಂಗಳವಾರ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ನಿವೇಶನ ಹಂಚಿಕೆ ಬಿಜೆಪಿಯವರ ಕಾಲದಲ್ಲಿ ಆಗಿದ್ದು, ನನ್ನ ಹೆಂಡತಿಗೆ ಈ ಹಿಂದೆಯೇ ಸೈಟ್ ಹಂಚಲಾಗಿತ್ತು. 3 ಎಕರೆ 16 ಗುಂಟೆ ಜಮೀನು ನನ್ನ ಹೆಂಡತಿ ಹೆಸರಲ್ಲಿತ್ತು. ನನ್ನ ಬಾಮೈದ ತೆಗೆದಕೊಂಡಿದ್ದ ಜಾಗವನ್ನು ನನ್ನ ಹೆಂಡತಿಗೆ ದಾನ ಕೊಟ್ಟಿದ್ದ. ಅದನ್ನು ನಾನು ಅಧಿಕಾರದಲ್ಲಿ ಇದ್ದಾಗ ಖರೀದಿ ಮಾಡಿರಲಿಲ್ಲ‌. ಕಾನೂನಿನ ಪ್ರಕಾರವೇ ನಮಗೆ ಸೈಟ್‌ ಹಂಚಿದ್ದಾರೆ ಎಂದು ತಿಳಿಸಿದ್ದಾರೆ.

ಕಾನೂನು ಪ್ರಕಾರವೇ ನಮಗೆ 50:50 ನಿವೇಶನ ಕೊಡುವುದಾಗಿ ಮುಡಾದವರು ಹೇಳಿದ್ದರು. ಮಲ್ಲಿಕಾರ್ಜುನ್ ಎಂಬ ನನ್ನ ಬಾಮೈದ ಹರಿಶನ ಕುಂಕುಮ ಕೊಡುವಾಗ ನನ್ನ ಪತ್ನಿಗೆ ಗಿಫ್ಟ್ ಕೊಟ್ಟಿದ್ದ. ಆದರೆ ಅದನ್ನು ಮುಡಾದವರು ಸೈಟ್ ಮಾಡಿ ಹಂಚಿಬಿಟ್ಟರು. ಬಳಿಕ ನಮಗೆ ಜಮೀನು ಇಲ್ಲದಂತಾಯಿತು. ಅದಕ್ಕೆ ಮುಡಾದವರು ಬೇರೆ ಕಡೆ 50:50 ಸೈಟ್‌ ಕೊಟ್ಟಿದ್ದಾರೆ, ಇದು ತಪ್ಪಾ ಎಂದು ಸಿಎಂ ಪ್ರಶ್ನಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Rat fever: ಡೆಂಗ್ಯೂ ರುದ್ರ ನರ್ತನದ ನಡುವೆ ಹಾವೇರಿಯಲ್ಲಿ ಇಲಿ ಜ್ವರ ಪತ್ತೆ; ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ!

Rat fever: ಕಳೆದೊಂದು ವಾರದಿಂದ ಬಾಲಕ ಜ್ವರದಿಂದ ಬಳಲುತ್ತಿದ್ದ . ದಿನ ಬಿಟ್ಟು ದಿನ ಜ್ವರ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅತನಿಗೆ ಇಲಿ ಜ್ವರ ಇರುವುದು ದೃಢಪಟ್ಟಿದೆ.

VISTARANEWS.COM


on

Rat Fever
Koo

ಹಾವೇರಿ: ಡೆಂಗ್ಯೂ ರುದ್ರ ನರ್ತನದ ನಡುವೆ ಜಿಲ್ಲೆಯಲ್ಲಿ ಇಲಿ ಜ್ವರ (Rat fever) ಪತ್ತೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಹಾವೇರಿ ತಾಲೂಕಿನ ಗ್ರಾಮವೊಂದರ 12 ವರ್ಷದ ಬಾಲಕನಿಗೆ ಇಲಿ ಜ್ವರ ದೃಢಪಟ್ಟಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದೊಂದು ವಾರದಿಂದ ಬಾಲಕ ಜ್ವರದಿಂದ ಬಳಲುತ್ತಿದ್ದ . ದಿನ ಬಿಟ್ಟು ದಿನ ಜ್ವರ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಬಾಲಕನಿಗೆ ಇಲಿ ಜ್ವರ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸದ್ಯ ಬಾಲಕನ ಆರೋಗ್ಯ ಸ್ಥಿರವಾಗಿದೆ.

ಈ ಬಗ್ಗೆ ಜಿಲ್ಲಾಸ್ಪತ್ರೆಯ ಡಾ.ಭಾಗ್ಯ ಪ್ರತಿಕ್ರಿಯಿಸಿ, ಬಾಲಕನಿಗೆ ಇಲಿ ಜ್ವರ ಬಂದಿರುವುದು ನೆನ್ನೆ ಗೊತ್ತಾಗಿದೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬಾಲಕನ‌ ಆರೋಗ್ಯ ಸ್ಥಿರವಾಗಿದೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಡೆಂಗ್ಯೂ ಜ್ವರದ ಲಕ್ಷಣಗಳೇ ಇಲಿ ಜ್ವರ ಕಾಣಿಸಿಕೊಂಡವರಲ್ಲೂ ಕಂಡುಬರುತ್ತವೆ ಎಂದು ತಿಳಿಸಿದರು.

ಏನಿದು ಇಲಿ ಜ್ವರ, ಹೇಗೆ ಹರಡುತ್ತದೆ?

ವೈಜ್ಞಾನಿಕವಾಗಿ ಲೆಪ್ಟೊಸ್ಪಿರೋಸಿಸ್ ಎಂದು ಕರೆಯಲ್ಪಡುವ ಇಲಿ ಜ್ವರ, ಲೆಪ್ಟೊಸ್ಪೈರಾ ಎಂಬ ಬ್ಯಾಕ್ಟೀರಿಯಗಳ ಮೂಲಕ ಪ್ರಾಣಿಗಳಿಂದ ಮಾನವರಿಗೆ ಹರಡುವ ರೋಗವಾಗಿದೆ. ಮುಖ್ಯವಾಗಿ ಇಲಿ, ಹೆಗ್ಗಣಗಳಿಂದ ಈ ರೋಗಾಣುಗಳು ಹರಡುವುದರಿಂದ ಇದಕ್ಕೆ ಇಲಿ ಜ್ವರವೆಂದು ಹೆಸರು. ಈ ರೋಗ ಕೇವಲ ಮನುಷ್ಯರನ್ನಷ್ಟೇ ಅಲ್ಲ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು, ವನ್ಯಮೃಗಗಳು ಹೀಗೆ ಬಹುತೇಕ ಪ್ರಾಣಿಗಳನ್ನು ಬಾಧಿಸುತ್ತದೆ.

ಹೆಚ್ಚಾಗಿ ಇಲಿ, ಹೆಗ್ಗಣಗಳ ಮೂಲಕ ಈ ರೋಗ ಹರಡುತ್ತದೆ. ರೋಗಪೀಡಿತ ಇಲಿಗಳು ಹಾಗೂ ಪ್ರಾಣಿಗಳ ಮೂತ್ರದ ಮೂಲಕ ಈ ಕಾಯಿಲೆ ಹರಡುತ್ತದೆ. ಆದರೆ ಮನುಷ್ಯನಿಂದ ಮನುಷ್ಯನಿಗೆ ಇದು ಹರಡುವುದಿಲ್ಲ. ಮಣ್ಣಿನಲ್ಲಿ ಈ ರೋಗಾಣುಗಳು ಸುಮಾರು 6 ಗಂಟೆವರೆಗೆ ಜೀವಂತವಿದ್ದರೆ, ನೀರಿನಲ್ಲಿ ಅರು ತಿಂಗಳವರೆಗೆ ಬದುಕಬಲ್ಲವು. ಹಾಗಾಗಿ ಮಳೆಗಾಲದಲ್ಲಿ ಈ ರೋಗದ ಹಾವಳಿ ಜಾಸ್ತಿ ಇರುತ್ತದೆ.

ಈ ಸೋಂಕು ತಗುಲಿದರೆ ಜ್ವರ, ತಲೆನೋವು, ಸ್ನಾಯು ನೋವು, ಆಯಾಸ ಮತ್ತು ವಾಂತಿಯಂತಹ ರೋಗಲಕ್ಷಣಗಳು ಇರುತ್ತವೆ. ಕೆಲವು ಪ್ರಕರಣಗಳಲ್ಲಿ ಇದು ಮೂತ್ರಪಿಂಡ ವೈಫಲ್ಯ ಅಥವಾ ಸಾವಿಗೆ ಕಾರಣವಾಗಬಹುದು. ಹೀಗಾಗಿ ಸಕಾಲದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ.

ಇದನ್ನೂ ಓದಿ | Dengue fever: ಶಿರಸಿಯಲ್ಲಿ ಶಂಕಿತ ಡೆಂಗ್ಯೂ ಜ್ವರದಿಂದ ವಿದ್ಯಾರ್ಥಿನಿ ಸಾವು

Dengue cases in Karnataka: ರಾಜ್ಯದಲ್ಲಿ ಶನಿವಾರ 175 ಡೆಂಗ್ಯೂ ಕೇಸ್‌ಗಳು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಶನಿವಾರ 175 ಡೆಂಗ್ಯೂ ಕೇಸ್‌ಗಳು ಪತ್ತೆಯಾಗಿವೆ. ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲೇ 115 ಹೊಸ ಕೇಸ್‌ಗಳು ವರದಿಯಾಗಿದ್ದು, ಒಟ್ಟಾರೆ ರಾಜ್ಯದಲ್ಲಿ (Dengue cases in Karnataka) 352 ಸಕ್ರಿಯ ಡೆಂಗ್ಯೂ ಪ್ರಕರಣಗಳು ಇವೆ. ಡೆಂಗ್ಯೂ ಸೋಂಕಿನಿಂದ ಜನವರಿಯಿಂದ ಈವರೆಗೆ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 753 ಮಂದಿಗೆ ಡೆಂಗ್ಯೂ ಟೆಸ್ಟ್‌ ನಡೆಸಿದ್ದು, ಈ ಪೈಕಿ 175 ಮಂದಿಗೆ ಸೋಂಕು ದೃಢವಾಗಿದೆ. ಜಿಲ್ಲಾವಾರು ನೋಡುವುದಾದರೆ ಬೆಂಗಳೂರಿನಲ್ಲಿ 115, ಬೆಂಗಳೂರು ಗ್ರಾಮಾಂತರ 2, ವಿಜಯಪುರ 9, ಗದಗ 8, ಉತ್ತರ ಕನ್ನಡ 1, ಬಳ್ಳಾರಿ 1, ಮಂಡ್ಯ 26, ಉಡುಪಿ 2, ಕೊಡಗು ಜಿಲ್ಲೆಯಲ್ಲಿ 11 ಪ್ರಕರಣ ಪತ್ತೆಯಾಗಿವೆ. ಸದ್ಯ ಇರುವ 325 ಸಕ್ರಿಯ ಪ್ರಕರಣಗಳ ಪೈಕಿ 45 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನವರಿಯಿಂದ ಈವರೆಗೆ ರಾಜ್ಯದಲ್ಲಿ ಒಟ್ಟು 7,006 ಡೆಂಗ್ಯೂ ಕೇಸ್‌ಗಳು ವರದಿಯಾಗಿದ್ದು, ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿಯೇ 1,908 ಸೋಂಕು ಪ್ರಕರಣಗಳು ದಾಖಲಾಗಿವೆ.

Continue Reading

ವಿಜಯನಗರ

Wild Animals Attack: ವಿಜಯನಗರ: ನಾಡಿಗೆ ನುಗ್ಗಿದ ಕರಡಿಯನ್ನು ರಾತ್ರೋರಾತ್ರಿ ಕಾಡಿಗೆ ಅಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ

Wild Animals Attack: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುದುರೆಡುವು ಗ್ರಾಮಕ್ಕೆ ನುಗ್ಗಿ ಕೆಲ ಕಾಲ ಆತಂಕ ಸೃಷ್ಟಿಸಿದ ಕರಡಿಯನ್ನು ಕೊನೆಗೂ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಿಗೆ ಅಟ್ಟಿದ್ದಾರೆ. ಕರಡಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

VISTARANEWS.COM


on

Wild Animals Attack
Koo

ವಿಜಯನಗರ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುದುರೆಡುವು ಗ್ರಾಮಕ್ಕೆ ನುಗ್ಗಿ ಕೆಲ ಕಾಲ ಆತಂಕ ಸೃಷ್ಟಿಸಿದ ಕರಡಿಯನ್ನು ಕೊನೆಗೂ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಿಗೆ ಅಟ್ಟಿದ್ದಾರೆ. ಕರಡಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ (Wild Animals Attack).

ಕೂಡ್ಲಿಗಿ ತಾಲೂಕಿನ ಕುದುರೆಡವು ಗ್ರಾಮಕ್ಕೆ ಸಂಜೆ 6:30ಕ್ಕೆ ಬಂದಿದ್ದ ಕರಡಿ, ಹುಣಸೆ ಮರವೇರಿ ಕುಳಿತು ಬಿಟ್ಟಿತು. ಕರಡಿ ನೋಡಲು ನೂರಾರು ಗ್ರಾಮಸ್ಥರನ್ನು ನೆರೆದು ಗದ್ದಲದ ವಾತಾವಣ ಮೂಡಿದ್ದರಿಂದ ಬೆದರಿದ ಕರಡಿ ಮರ ಬಿಟ್ಟು ಕೆಳಗೆ ಇಳಿಯಲಿಲ್ಲ. ಆತಂಕಗೊಂಡ ಗ್ರಾಮಸ್ಥರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.

ನೆಮ್ಮದಿಯ ನಿಟ್ಟಿಸಿರು ಬಿಟ್ಟ ಗ್ರಾಮಸ್ಥರು

ಸ್ಥಳಕ್ಕಾಗಮಿಸಿದ ಗುಡೇಕೋಟೆ ಕರಡಿಧಾಮದ ಅರಣ್ಯಾಧಿಕಾರಿಗಳು, ಪೋಲೀಸರು ಕರಡಿಯನ್ನು ಕೆಳಗಿಳಿಸಲು ಹರಸಾಹಸ ಪಡಬೇಕಾಯಿತು. ʼʼಇದು ಗುಡೇಕೋಟೆ ಕರಡಿಧಾಮದಿಂದ ತಪ್ಪಿಸಿಕೊಂಡು ಬಂದ ಕರಡಿಯಾಗಿದ್ದು, ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳ ಹರಸಾಹಸ ಪಡಬೇಕಾಯಿತು. ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು ರಾತ್ರಿ ಒಂದು ಗಂಟೆ ನಂತರ ಕರಡಿಯನ್ನು ಕಾಡಿಗೆ ಅಟ್ಟಿದರುʼʼ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು. ಕರಡಿ ಏರಿದ್ದ ಮರದ ಸಮೀಪಕ್ಕೆ ತೆರಳಲು ಅಧಿಕಾರಿಗಳು ಸಾರ್ವಜನಿಕರಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಕರಡಿ ಸುರಕ್ಷಿತವಾಗಿ ಕಾಡಿಗೆ ತೆರಳಿದ ಹಿನ್ನಲೆಯಲ್ಲಿ ಕುದುರೆಡವು ಗ್ರಾಮಸ್ಥರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.

ಕಂಪ್ಲಿಯ ದೇವಸಮುದ್ರ ಗ್ರಾಮದಲ್ಲಿ ಎರಡು ಕರಡಿ ಪ್ರತ್ಯಕ್ಷ!

ಕಂಪ್ಲಿ: ಎರಡು ಕರಡಿಗಳು ಪ್ರತ್ಯಕ್ಷವಾದ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದ ತುಂಗಾಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆ ಬಳಿ ಮಂಗಳವಾರ ಬೆಳಗ್ಗೆ (Ballari News) ನಡೆದಿದೆ. ಗ್ರಾಮದ ತುಂಗಾಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆ ಬಳಿ ಎರಡು ಕರಡಿಗಳು ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಗ್ರಾಮಕ್ಕೆ ಮರಳಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಎರಡು ಕರಡಿಗಳು ಗ್ರಾಮದಲ್ಲೂ ಕಾಣಿಸಿಕೊಂಡಿವೆ.

ಗ್ರಾಮಸ್ಥರು ಕೂಗಾಡುತ್ತ ಗಲಾಟೆ ಮಾಡಿದ್ದರಿಂದ ಒಂದು ಕರಡಿ ದೇವಸಮುದ್ರ- ಕಂಪ್ಲಿ ಸಂಪರ್ಕಿಸುವ ಕ್ರಾಸ್ ಕಡೆ ಓಡಿ ಹೋದರೆ ಮತ್ತೊಂದು ಕರಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ತುರಮಂದಿ ಬಸವೇಶ್ವರ ದೇವಸ್ಥಾನದ ಕಡೆಗೆ ಓಡಿ ಹೋಗಿದೆ. ಗ್ರಾಮದಲ್ಲಿ ಕರಡಿ ಕಂಡಂತಹ ಕೆಲ ಜನರು ದಿಕ್ಕಾಪಲಾಗಿ ಓಡಿ ಹೋದರೆ ಇನ್ನು ಕೆಲ ಜನರ ಗುಂಪು ಅಲ್ಲಿಂದ ಚದುರಿಸಲು ಪ್ರಯತ್ನಿಸಿದಾಗ ಗ್ರಾಮದ ಹೊರ ವಲಯದ ಗೋದಾಮು ಬಳಿ ಬೇಲಿಯಲ್ಲಿ ಅವಿತು ಕುಳಿತಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದು ಗ್ರಾಮಕ್ಕೆ ಆಗಮಿಸಿ ಕರಡಿ ಸೆರೆಗೆ ಬೋನ್ ಅಳವಡಿಸಿದ್ದಾರೆ. ಹೊಸಪೇಟೆ ವಲಯ ಅರಣ್ಯ ಅಧಿಕಾರಿ ಭರತ್‌ ರಾಜ್ ತಂಡದವರು ಕರಡಿ ಸೆರೆಗಾಗಿ ಸದ್ಯ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: Bear Attack: ಬನ್ನೇರುಘಟ್ಟ ಸಫಾರಿ ವೇಳೆ ಸಿಬ್ಬಂದಿ ಮೇಲೆ ಕರಡಿ ದಾಳಿ

Continue Reading

ಕರ್ನಾಟಕ

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಸ್ವರ್ಣ ಪ್ರಿಯರಿಗೆ ಕೊಂಚ ನಿರಾಳ

Gold Rate Today:ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,765 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,380 ಇದೆ. 22 ಕ್ಯಾರೆಟ್‌ನ 8 ಗ್ರಾಂ ಚಿನ್ನದ ಬೆಲೆ ₹ 54,120. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 67,650 ಮತ್ತು ₹ 6,76,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ ₹ 59,040 ಇದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹ 73,800 ಮತ್ತು ₹ 7,38,000 ವೆಚ್ಚವಾಗಲಿದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಚಿನ್ನದ ದರ ಯಥಾಸ್ಥಿತಿ ಕಾಯ್ದುಕೊಂಡಿದೆ (Gold Rate Today). ನಿನ್ನೆ ಏಕಾಏಕಿ ಚಿನ್ನದ ದರ ಏರಿಕೆ ಕಂಡಿದ್ದರು ಸ್ವರ್ಣ ಪ್ರಿಯರಿಗೆ ಶಾಕ್‌ ನೀಡಿದೆ.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,765 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,380 ಇದೆ. 22 ಕ್ಯಾರೆಟ್‌ನ 8 ಗ್ರಾಂ ಚಿನ್ನದ ಬೆಲೆ ₹ 54,120. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 67,650 ಮತ್ತು ₹ 6,76,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ ₹ 59,040 ಇದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹ 73,800 ಮತ್ತು ₹ 7,38,000 ವೆಚ್ಚವಾಗಲಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,780₹ 7,395
ಮುಂಬೈ₹ 6,765₹ 7,380
ಬೆಂಗಳೂರು₹ 6,765₹ 7,380
ಚೆನ್ನೈ₹ 6,820₹ 7,440

ಬೆಳ್ಳಿ ಧಾರಣೆ

ಬೆಳ್ಳಿಯ ಬೆಲೆ ಕೂಡ ಏರಿಕೆಯಾಗಿದೆ. ಬೆಳ್ಳಿ ಒಂದು ಗ್ರಾಂಗೆ ₹ 94.50 ಹಾಗೂ 8 ಗ್ರಾಂಗೆ ₹ 756 ಇದೆ. 10 ಗ್ರಾಂಗೆ ₹ 945 ಹಾಗೂ 1 ಕಿಲೋಗ್ರಾಂಗೆ ₹ 94,500 ಬೆಲೆ ಬಾಳುತ್ತದೆ.

ಚಿನ್ನದ ಕ್ಯಾರಟ್‌ ಎಂದರೇನು?

ಚಿನ್ನದ ಕ್ಯಾರಟ್‌ ಎಂಬುದು ಚಿನ್ನದ ಶುದ್ಧತೆಯನ್ನು ಅಳೆಯಲು ಬಳಸುವ ಪದ. ಚಿನ್ನದ ಶುದ್ಧತೆಯನ್ನು ಅಳೆಯಲು ಕ್ಯಾರಟ್ ಅನ್ನು ಒಂದು ಘಟಕವಾಗಿ ಬಳಸಲಾಗುತ್ತದೆ. ಕ್ಯಾರಟೇಜ್ ಹೆಚ್ಚು‌ ಇದ್ದಷ್ಟೂ ಚಿನ್ನವು ಶುದ್ಧವಾಗಿರುತ್ತದೆ. ಇತರ ಲೋಹಗಳೊಂದಿಗೆ ಮಿಶ್ರಿತ ಚಿನ್ನದ ಶುದ್ಧತೆಯ ಮಾಪನವೇ ‘ಕ್ಯಾರಟೇಜ್’. ಕ್ಯಾರಟ್‌ನ ಚಿಹ್ನೆಯು “K”

24 ಕ್ಯಾರಟ್ ಎಂಬುದು ಬೇರೆ ಯಾವುದೇ ಲೋಹಗಳ ಮಿಶ್ರವಿಲ್ಲದ ಶುದ್ಧ ಚಿನ್ನವಾಗಿದೆ. 24 ಕ್ಯಾರಟ್ ಚಿನ್ನವನ್ನು ಶುದ್ಧ ಚಿನ್ನ ಅಥವಾ 100 ಪ್ರತಿಶತ ಚಿನ್ನ ಎಂದೂ ಕರೆಯಲಾಗುತ್ತದೆ. ಚಿನ್ನದ ಎಲ್ಲ 24 ಭಾಗಗಳು ಯಾವುದೇ ಲೋಹವನ್ನು ಸೇರಿಸಿರುವುದಿಲ್ಲ. ಇದು 99.9 ಪ್ರತಿಶತ ಶುದ್ಧವಾಗಿರುತ್ತದೆ. ಇದು ಒಂದು ವಿಶಿಷ್ಟವಾದ ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ. ನಾಣ್ಯಗಳು ಮತ್ತು ಬಾರ್‌ಗಳನ್ನು ಹೆಚ್ಚಾಗಿ 24 ಕ್ಯಾರಟ್ ಚಿನ್ನದಿಂದ ಖರೀದಿಸಲಾಗುತ್ತದೆ.

24 ಕ್ಯಾರಟ್ ಚಿನ್ನ ಮೃದುವಾಗಿರುತ್ತದೆ, ಕಡಿಮೆ ಸಾಂದ್ರತೆಯದಾಗಿರುತ್ತದೆ. ಆದ್ದರಿಂದ ಆಭರಣಗಳನ್ನು ಮಾಡಲು ಇದು ಸೂಕ್ತವಲ್ಲ. ಕಿವಿ ಸೋಂಕಿನಿಂದ ಬಳಲುತ್ತಿರುವ ಮಕ್ಕಳಿಗೆ ಬಳಸುವಂತಹ ಎಲೆಕ್ಟ್ರಾನಿಕ್ಸ್ ಮತ್ತು ವೈದ್ಯಕೀಯ ಸಾಧನಗಳಲ್ಲಿ 24k ಚಿನ್ನವನ್ನು ಬಳಸಲಾಗುತ್ತದೆ.

22 ಕ್ಯಾರೆಟ್ ಚಿನ್ನ ಇದರಲ್ಲಿ 22 ಭಾಗಗಳಲ್ಲಿ ಚಿನ್ನ ಹಾಗೂ ಉಳಿದ ಎರಡು ಭಾಗಗಳಲ್ಲಿ ಕೆಲವು ಇತರ ಲೋಹಗಳಿರುತ್ತವೆ. ಆಭರಣಗಳ ತಯಾರಿಕೆಯಲ್ಲಿ ಇದನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ. ಬೆಳ್ಳಿ, ಸತು, ನಿಕಲ್ ಮತ್ತು ಇತರ ಮಿಶ್ರಲೋಹಗಳಂತಹ ಇತರ ಲೋಹಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಇದು ಚಿನ್ನದ ವಿನ್ಯಾಸವನ್ನು ಗಟ್ಟಿಗೊಳಿಸುತ್ತದೆ ಮತ್ತು ಆಭರಣವನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ. 22 ಕ್ಯಾರಟ್ ಚಿನ್ನವು 91.67 ಪ್ರತಿಶತ ಚಿನ್ನವನ್ನು ಹೊಂದಿದ್ದು, ಉಳಿದ 8.33 ಪ್ರತಿಶತ ಬೇರೆ ಲೋಹಗಳಿಂದ ಮಾಡಲ್ಪಟ್ಟಿರುತ್ತದೆ.

18 ಕ್ಯಾರಟ್ ಚಿನ್ನವು 75 ಪ್ರತಿಶತ ಚಿನ್ನವನ್ನು ಒಳಗೊಂಡಿರುತ್ತದೆ. ಉಳಿದ ತಾಮ್ರ ಅಥವಾ ಬೆಳ್ಳಿಯಂತಹ ಇತರ ಲೋಹಗಳ 25 ಪ್ರತಿಶತದೊಂದಿಗೆ ಮಿಶ್ರಣವಾಗಿರುತ್ತದೆ. ಸ್ಟಡೆಡ್ ಆಭರಣಗಳು ಮತ್ತು ವಜ್ರದ ಆಭರಣಗಳನ್ನು 18 ಕ್ಯಾರಟ್ ಚಿನ್ನವನ್ನು ಬಳಸಿ ತಯಾರಿಸಲಾಗುತ್ತದೆ.

ಇದನ್ನೂ ಓದಿ: Project Zorawar: ಚೀನಾಗೆ ಪೆಟ್ಟು ಕೊಡಲು ದೇಶೀಯವಾಗಿ ಯುದ್ಧ ಟ್ಯಾಂಕ್‌ ಉತ್ಪಾದನೆ; ಏನಿವುಗಳ ವಿಶೇಷ?

Continue Reading

ಕರ್ನಾಟಕ

Short Circuit: ಮೈಸೂರು ವಿವಿ ಸಂಶೋಧಕರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್‌

Short Circuit: ಮೈಸೂರು ವಿಶ್ವ ವಿದ್ಯಾನಿಲಯದ ಸಂಶೋಧಕರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್‌ ಯಾವುದೇ ಹಾನಿಯಾಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಡಿಪಿ ಹೊತ್ತಿ ಉರಿದಿದ್ದು, ಕೂಡಲೇ ವಿದ್ಯಾರ್ಥಿಗಳು ಹೊರಗೋಡಿ ಬಂದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

VISTARANEWS.COM


on

Short Circuit
Koo

ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ ಸಂಶೋಧಕರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್‌ ಯಾವುದೇ ಹಾನಿಯಾಗಿಲ್ಲ. ಶಾರ್ಟ್ ಸರ್ಕ್ಯೂಟ್‌ (Short Circuit)ನಿಂದ ಡಿಪಿ (Distribution Panel) ಹೊತ್ತಿ ಉರಿದಿದ್ದು, ಕೂಡಲೇ ವಿದ್ಯಾರ್ಥಿಗಳು ಹೊರಗೋಡಿ ಬಂದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಸಂಶೋಧಕರ ನಿಲಯಯಲ್ಲಿ ಈ ಘಟನೆ ನಡೆದಿದೆ. ಶಬ್ದ ಕೇಳುತ್ತಿದ್ದಂತೆ ವಿಧ್ಯಾರ್ಥಿಗಳು ಹೊರಗೆ ಓಡಿ ಬಂದಿದ್ದಾರೆ. ಪಟಾಕಿಯಂತೆ ಡಿಪಿ ಸಿಡಿದಿದೆ. ಈ ಹಿಂದೆಯೇ ವಿದ್ಯುತ್ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡು ಬರುತ್ತಿರುವುದಾಗಿ ವಿದ್ಯಾರ್ಥಿಗಳು ಅಧಿಕಾರಿಗಳಿಗೆ ತಿಳಿಸಿದ್ದರು. ರಿಪೇರಿ ಮಾಡಿಸುವಂತೆ ಮನವಿಯನ್ನೂ ಮಾಡಿದ್ದರು. ಆದರೆ ಕ್ರಮ ಕೈಗೊಂಡಿರಲಿಲ್ಲ. ಇದೀಗ ಅಧಿಕಾರಿಗಳ ನಿರ್ಲಕ್ಷ್ಯ ಡಿಪಿ ಹೊತ್ತಿ ಉರಿದಿದೆ.

ʼʼವಿದ್ಯುತ್‌ ವ್ಯವಸ್ಥೆಯಲ್ಲಿ ಸಮಸ್ಯೆ ಇರುವ ಕುರಿತು ಈ ಹಿಂದೆಯೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೆವು. ಆದರೆ ಕ್ರಮ ಕೈಗೊಂಡಿರಲಿಲ್ಲ. ಡಿಪಿ ಪಟಾಕಿಯಂತೆ ಸದ್ದು ಮಾಡಿ ಹೊತ್ತಿ ಉರಿದಿದೆ. ಶಬ್ದ ಕೇಳಿದ ಕೂಡಲೇ ನಾವೆಲ್ಲ ಹೊರಗೋಡಿ ಬಂದೆವುʼʼ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಯುವಕ ಆತ್ಮಹತ್ಯೆ

ಮೈಸೂರು: ರೈಲು ಹಳಿಗೆ ಹಾರಿ ಯುವಕನೋರ್ವ ಅತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಯಾದವಗಿರಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಸಂಜಯ್ (22) ಅತ್ಮಹತ್ಯೆ ಮಾಡಿಕೊಂಡಿರುವ ಯುವಕ. ಮೈಸೂರಿನ ಚಾಮರಾಜ ಮೊಹಲ್ಲಾ ನಿವಾಸಿ ಸಂಜಯ್‌ನ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ನಿಂತ ಲಾರಿಗೆ‌ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಧಾರವಾಡ: ನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿಯಾಗಿ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಕೋಟೂರು‌ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತರನ್ನು ದೀಪಕ್ ಎಂದು ಗುರುತಿಸಲಾಗಿದೆ.

ಬೇಲೂರು ಕೈಗಾರಿಕಾ ಪ್ರದೇಶದಿಂದ ಕೆಲಸ‌ ಮುಗಿಸಿ ಮನೆಗೆ ಹೊರಟಿದ್ದ‌ ವೇಳೆ ಈ ಅವಘಡ ಸಂಭವಿಸಿದೆ. ಮೂವರು ಸಂಚರಿಸುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ದೀಪಕ್‌ ಸ್ಥಳದಲ್ಲೇ ಮೃತಪಟ್ಟರು. ಇನ್ನಿಬ್ಬರು ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ಹಾಗೂ ಸಾವನ್ನಪ್ಪಿದ ಮೃತ ದೀಪಕ್‌ ಬೆಳಗಾವಿ ಜಿಲ್ಲೆಯ ಗಂಡಿಗವಾಡ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ. ಗರಗ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident: ರಾಜಕಾಲುವೆಗೆ ಬಿದ್ದ ಬೈಕ್‌ ಸವಾರನ ಮೃತದೇಹ ಪತ್ತೆ

ಶಾಸಕರ ಬರ್ತ್ ಡೇ ಫ್ಲೆಕ್ಸ್‌ ಬಿದ್ದ ಗಂಭೀರ ಗಾಯ

ಬೆಂಗಳೂರು: ಶಾಸಕರ ಬರ್ತ್ ಡೇ ಫ್ಲೆಕ್ಸ್‌ ಮೈಮೇಲೆ ಬಿದ್ದು ವೃದ್ಧರೊಬ್ಬರು ಗಂಭೀರ ಗಾಯಗೊಂಡು ಕೋಮಾದಲ್ಲಿರುವ ಘಟನೆ ನಡೆದಿದೆ. ಸಿಂಗನಾಯಕನಹಳ್ಳಿ ಮುಖ್ಯ ರಸ್ತೆಯಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್‌ ಬಿದ್ದು 77 ವರ್ಷದ ಭಕ್ತವಸ್ತಲ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಮೊಮ್ಮಗಳನ್ನ ಕರೆತರಲು ಬೈಕ್ ಮೇಲೆ ಹೋಗುತ್ತಿದ್ದ ಭಕ್ತವಸ್ತಲ ಅವರ ಮೇಲೆ ಶನಿವಾರ ಮಧ್ಯಾಹ್ನ ಸ್ಥಳೀಯ ಶಾಸಕರ ಬರ್ತ್ ಡೇಗೆ ವಿಶ್ ಮಾಡಿ ಅಳವಡಿಸಿದ್ದ ಫ್ಲೆಕ್ಸ್‌ ಗಾಳಿಗೆ ಹಾರಿ ಬಂದು ಬಿದ್ದಿತ್ತು. ಇದರಿಂದ ನಿಯಂತ್ರಣ ಕಳೆದುಕೊಂಡು ಅವರು ರಸ್ತೆಗೆ ಬಿದ್ದು ಬಿಟ್ಟಿದ್ದರು. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

Continue Reading
Advertisement
Rat Fever
ಪ್ರಮುಖ ಸುದ್ದಿ20 mins ago

Rat fever: ಡೆಂಗ್ಯೂ ರುದ್ರ ನರ್ತನದ ನಡುವೆ ಹಾವೇರಿಯಲ್ಲಿ ಇಲಿ ಜ್ವರ ಪತ್ತೆ; ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ!

Gautam Gambhir
ಕ್ರೀಡೆ37 mins ago

Gautam Gambhir: ಕೆಕೆಆರ್ ತಂಡದ ಮೆಂಟರ್​ ಸ್ಥಾನಕ್ಕೆ ಗಂಭೀರ್​ ರಾಜೀನಾಮೆ?; ಕೋಚ್​ ಆಗುವುದು ಖಚಿತ

Wild Animals Attack
ವಿಜಯನಗರ42 mins ago

Wild Animals Attack: ವಿಜಯನಗರ: ನಾಡಿಗೆ ನುಗ್ಗಿದ ಕರಡಿಯನ್ನು ರಾತ್ರೋರಾತ್ರಿ ಕಾಡಿಗೆ ಅಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ

Actor Darshan case Fingerprint match of accused in Renukaswamy case
ಸ್ಯಾಂಡಲ್ ವುಡ್50 mins ago

Actor Darshan: ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳ ಫಿಂಗರ್ ಪ್ರಿಂಟ್ ಮ್ಯಾಚ್; ಸ್ಫೋಟಕ ಮಾಹಿತಿ ಬಹಿರಂಗ!

Gold Rate Today
ಕರ್ನಾಟಕ51 mins ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಸ್ವರ್ಣ ಪ್ರಿಯರಿಗೆ ಕೊಂಚ ನಿರಾಳ

Short Circuit
ಕರ್ನಾಟಕ1 hour ago

Short Circuit: ಮೈಸೂರು ವಿವಿ ಸಂಶೋಧಕರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್‌

IND vs ZIM
ಕ್ರೀಡೆ1 hour ago

IND vs ZIM: ಗೆಲುವಿನ ಹಾದಿಗೆ ಮರಳುವುದೇ ಶುಭಮನ್​ ಗಿಲ್​ ಪಡೆ?; ಇಂದು ದ್ವಿತೀಯ ಟಿ20

Raj Tarun’s Heroine Malvi Malhotra Files Complaint
ಟಾಲಿವುಡ್2 hours ago

Raj Tarun: ಯುವ ನಟ ರಾಜ್ ತರುಣ್ ಮಾಜಿ ಪ್ರೇಯಸಿ ವಿರುದ್ಧ ದೂರು ದಾಖಲಿಸಿದ ನಟಿ!

CBI Arrest
ದೇಶ2 hours ago

CBI Arrest: ರೈಲ್ವೇ ಟೆಂಡರ್‌ನಲ್ಲಿ ಭಾರೀ ಗೋಲ್‌ಮಾಲ್;‌ ಸರ್ಕಾರಿ ಅಧಿಕಾರಿಗಳು ಸಿಬಿಐ ಬಲೆಗೆ

Rain News
ಮಳೆ2 hours ago

Rain News: ಕರಾವಳಿಯಲ್ಲಿ ಮುಂದುವರಿದ ವರುಣನ ಅಬ್ಬರ; ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ7 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ19 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ21 hours ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ22 hours ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು1 day ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ1 day ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ2 days ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ2 days ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

ಟ್ರೆಂಡಿಂಗ್‌