Electric Auto Rickshaw : ಹರ್ಬಲ್​ಲೈಪ್​​, ಶಿಶು ಮಂದಿರದಿಂದ ಬಡ ಕುಟುಂಬದ 50 ಮಹಿಳೆಯರಿಗೆ ಎಲೆಕ್ಟ್ರಿಕ್‌ ಆಟೋ ವಿತರಣೆ - Vistara News

ಬೆಂಗಳೂರು

Electric Auto Rickshaw : ಹರ್ಬಲ್​ಲೈಪ್​​, ಶಿಶು ಮಂದಿರದಿಂದ ಬಡ ಕುಟುಂಬದ 50 ಮಹಿಳೆಯರಿಗೆ ಎಲೆಕ್ಟ್ರಿಕ್‌ ಆಟೋ ವಿತರಣೆ

Electric Auto Rickshaw: ಹರ್ಬಲ್ ಲೈಫ್, ಶಿಶು ಮಂದಿರದ ಸಹಯೋಗದಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ “ಇಕೋ-ವೀಲ್ಸ್ ವುಮೆನ್ಸ್ ಇನಿಶಿಯೇಟಿವ್’ ಯೋಜನೆಯಡಿ ಹರ್ಬಲ್ ಲೈಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ, 50 ಫಲಾನುಭವಿ ಮಹಿಳೆಯರಿಗೆ ಇ-ಆಟೋಗಳನ್ನು ವಿತರಣೆ ಮಾಡಿದರು. ಈ ವೇಳೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಹಾಗೂ ಶಿಶು ಮಂದಿರದ ಸಂಸ್ಥಾಪಕ ಡಾ.ಹೆಲ್ಲಾ ಮುಂಡ್ರಾ ಉಪಸ್ಥಿತರಿದ್ದರು.

VISTARANEWS.COM


on

E Auto Distribution of electric auto to 50 women from poor families in bengaluru
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹರ್ಬಲ್ ಲೈಫ್, ಶಿಶು ಮಂದಿರದ ಸಹಯೋಗದಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ “ಇಕೋ-ವೀಲ್ಸ್ ವುಮೆನ್ಸ್ ಇನಿಶಿಯೇಟಿವ್’ ಯೋಜನೆಯಡಿ ಹರ್ಬಲ್‌ ಲೈಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ ಅವರು 50 ಫಲಾನುಭವಿ ಮಹಿಳೆಯರಿಗೆ ಇ-ಆಟೋಗಳನ್ನು (Electric Auto Rickshaw ) ವಿತರಣೆ ಮಾಡಿದರು. ಈ ವೇಳೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಹಾಗೂ ಶಿಶು ಮಂದಿರದ ಸಂಸ್ಥಾಪಕ ಡಾ. ಹೆಲ್ಲಾ ಮುಂಡ್ರಾ ಉಪಸ್ಥಿತರಿದ್ದರು.

ಇಕೋ-ವ್ಹೀಲ್ಸ್ ವುಮೆನ್ಸ್ ಇನಿಶಿಯೇಟಿವ್ ವಿಶಿಷ್ಟ ಯೋಜನೆಯಾಗಿದ್ದು, ಆರ್ಥಿಕವಾಗಿ ಅಶಕ್ತರಾಗಿರುವ ಮಹಿಳೆಯರನ್ನು ಆರ್ಥಿಕ ಸ್ವಾತಂತ್ರ್ಯ ಮತ್ತು ಕೌಶಲ್ಯ ಅಭಿವೃದ್ಧಿಗೆ ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಸುಸ್ಥಿರ ಮತ್ತು ಪರಿಣಾಮಕಾರಿ ಸಿಎಸ್ಆರ್ ಉಪಕ್ರಮಗಳಿಗೆ ಬೆಂಬಲ ನೀಡುತ್ತಿರುವ ಶಿಶು ಮಂದಿರದ ಯೋಜನೆಗೆ ಹರ್ಬಲ್​ಲೈಫ್​ ನೀಡುತ್ತಿರುವ ಬೆಂಬಲವನ್ನು ಮುಂದುವರಿಸುವುದಾಗಿ ಅಜಯ್ ಖನ್ನಾ ಹೇಳಿದರು. ಈ ವೇಳೆ ಇಕೋ-ವ್ಹೀಲ್ಸ್ ವುಮೆನ್ಸ್ ಇನಿಶಿಯೇಟಿವ್ ಯೋಜನೆಯ ಫಲಾನುಭವಿಗಳು ತಮ್ಮ ಜೀವನದ ಬದಲಾವಣೆಯ ಅನುಭವಗಳನ್ನು ಹಂಚಿಕೊಂಡರು.

ಇದನ್ನೂ ಓದಿ: Tourism Policy: ಹೊಸ ಪ್ರವಾಸೋದ್ಯಮ ನೀತಿ; ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್‌ ರೂಪಿಸಲು ಸಿಎಂ ಸೂಚನೆ

ಈ ಕುರಿತು ಹರ್ಬಲ್ ಲೈಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ ಮಾತನಾಡಿ, “ಹರ್ಬಲ್ ಲೈಫ್ ತನ್ನ ಸಿಎಸ್ಆರ್ ಉಪಕ್ರಮಗಳ ಮೂಲಕ ಸಮುದಾಯಗಳನ್ನು ಅಭಿವೃದ್ಧಿ ಮಾಡುವಲ್ಲಿ ಆಳವಾದ ಬದ್ಧತೆಯನ್ನು ಹೊಂದಿದೆ. ಪ್ರತಿಯೊಂದು ಯೋಜನೆಯು ನಾವು ಬದಲಾವಣೆ ಬಯಸುವಂಥ ಪರಿಣಾಮಗಳಿಗೆ ನಮ್ಮನ್ನು ಹತ್ತಿರ ಕೊಂಡೊಯ್ಯುತ್ತದೆ.

ಇಕೋ ವ್ಹೀಲ್ಸ್ ವುಮೆನ್ ಉಪಕ್ರಮವು ಮಹಿಳೆಯರನ್ನು ಸಬಲೀಕರಣಗೊಳಿಸುವುದರ ಜತೆಗೆ ಪರಿಸರ ಸುಸ್ಥಿರತೆಯನ್ನು ಕಾಪಾಡುವ ಎರಡೆರಡು ಗುರಿಯೊಂದಿಗೆ ಗಮನ ಸೆಳೆಯುತ್ತದೆ. ನಾವು ವೈವಿಧ್ಯತೆಯನ್ನು ಒಪ್ಪಿಕೊಂಡಿದ್ದೇವೆ ಮತ್ತು ಒಳಗೊಳ್ಳುವಿಕೆಗೆ ಬದ್ಧರಾಗಿದ್ದೇವೆ. ಈ ಯೋಜನೆಯು 115ಕ್ಕೂ ಹೆಚ್ಚು ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳನ್ನು ಶಕ್ತಗೊಳಿಸುತ್ತದೆ, ಅದು ಅವರಿಗೆ ಆರ್ಥಿಕ ಸ್ಥಿರತೆ ಮತ್ತು ಸ್ವಾತಂತ್ರ್ಯ ಒದಗಿಸುತ್ತದೆ.

ಸಾರಿಗೆ ವ್ಯವಸ್ಥೆಯ ಪರಿಪೂರ್ಣತೆಗಾಗಿ ಎಲೆಕ್ಟ್ರಿಕ್ ಆಟೋಗಳನ್ನು ಪರಿಚಯಿಸುವ ಜತೆಗೆ ಪರಿಸರಕ್ಕೆ ಹೊಗೆಯ ಹೊರ ಸೂಸುವಿಕೆ ಮತ್ತು ಶಬ್ದ ಮಾಲಿನ್ಯ ಕಡಿಮೆ ಮಾಡುತ್ತಿದ್ದೇವೆ. ಇದು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿದೆ. ನಾವು ಭಾರತದಲ್ಲಿ ಮೊದಲ ಹೆಜ್ಜೆಯನ್ನು ಊರಿ 25 ವರ್ಷಗಳನ್ನು ಆಚರಿಸುತ್ತಿರುವಾಗ, ಅಶಕ್ತ ಕುಟುಂಬಗಳನ್ನು ಬಡತನದಿಂದ ಮೇಲೆತ್ತುವ ಮತ್ತು ಸಮುದಾಯದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಯೋಜನೆಗಳನ್ನು ಪ್ರಾರಂಭಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Ineligible BPL card: ಅನರ್ಹ ಬಿಪಿಎಲ್‌ ಕಾರ್ಡ್ ರದ್ದು; 20 ಲಕ್ಷಕ್ಕೂ ಅಧಿಕ ಪಡಿತರದಾರರಿಗೆ ಶಾಕ್, ಯಾರ ಕಾರ್ಡ್‌ ರದ್ದಾಗುತ್ತೆ?

ಶಿಶು ಮಂದಿರದ ನಿರ್ದೇಶಕ ಆನಂದ್ ಸಿ. ಮಾತನಾಡಿ, ನಮ್ಮ ಇ-ಆಟೋ ಯೋಜನೆಯು ಬಡತನದ ಅಂಚಿನಲ್ಲಿರುವ ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಗೆ ಭರವಸೆಯ ದೀಪವಾಗಿದೆ. ಹತಾಶೆಯಿಂದ ಮೇಲೆದ್ದು, ಘನತೆ ಮತ್ತು ಸ್ವಾವಲಂಬನೆಯತ್ತ ಸಾಗುವಂತೆ ಮಾಡುತ್ತದೆ. ಹರ್ಬಲ್ ಲೈಫ್‌ನ ಅಚಲ ಬೆಂಬಲವು ಈ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಾವು ಶಾಶ್ವತ ಬದಲಾವಣೆಯನ್ನು ಮಾಡುತ್ತಿದ್ದೇವೆ. ನಮ್ಮ ಪಾಲುದಾರಿಕೆಯು ಸಾಮಾಜಿಕ ಪರಿಣಾಮ ಮತ್ತು ಸಮುದಾಯ ಸಬಲೀಕರಣವನ್ನು ಪ್ರೇರೇಪಿಸುವಲ್ಲಿ ಪಾಲುದಾರಿಕೆಯ ಶಕ್ತಿಗೆ ಸ್ಪಷ್ಟ ಉದಾಹರಣೆಯಾಗಿದೆ. ಈ ಪ್ರಯಾಣವನ್ನು ಮುಂದುವರಿಸಲು ಮತ್ತು ಭವಿಷ್ಯದಲ್ಲಿ ಹೆಚ್ಚಿನ ಜನರನ್ನು ಯೋಜನೆಯಲ್ಲಿ ಸೇರಿಸಿಕೊಳ್ಳುವುದಕ್ಕೆ ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

ಮಹಿಳೆಯರಿಗೆ ಇ-ಆಟೋಗಳ ವಿತರಣೆ

ಕಳೆದ ಐದು ವರ್ಷಗಳಲ್ಲಿ, ಶಿಶು ಮಂದಿರದ ಚಾಲನಾ ತರಬೇತಿ ಶಾಲೆ 900 ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರಿಗೆ ತರಬೇತಿ ನೀಡಿದೆ. ಕೋವಿಡ್ ನಂತರ, ಗಮನವು ಮಹಿಳೆಯರತ್ತ ಕೇಂದ್ರೀಕೃತವಾಗಿದೆ. ಆರಂಭದಲ್ಲಿ ಚಾಲನಾ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದ ಹೆಚ್ಚಿನ ಮಹಿಳೆಯರು ಮುಂದೆ ಬರಲು ಪ್ರಾರಂಭಿಸಿದ್ದಾರೆ, ರೋಟರಿ ಕ್ಲಬ್ ಸಹಯೋಗದೊಂದಿಗೆ ಖರೀದಿಸಿದ ಮೊದಲ ಐದು ಇ-ಆಟೋಗಳ ಯಶಸ್ಸಿನಿಂದ ಪ್ರೇರೇಪಿತರಾಗಿದ್ದಾರೆ. ಪ್ರಸ್ತುತ, ಇಬ್ಬರು ತೃತೀಯ ಲಿಂಗಿಗಳು ಸೇರಿದಂತೆ 17 ಮಹಿಳೆಯರು ಶಿಶು ಮಂದಿರ ಒದಗಿಸಿದ ಇ-ಆಟೋಗಳನ್ನು ಓಡಿಸುತ್ತಿದ್ದಾರೆ.

ಇದನ್ನೂ ಓದಿ: Govt Employees: ಬೇಡಿಕೆ ಈಡೇರದಿದ್ದರೆ ಜುಲೈ ಕೊನೆ ವಾರದಿಂದ ರಾಜ್ಯ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಷಡಾಕ್ಷರಿ ಎಚ್ಚರಿಕೆ

ಶಿಶು ಮಂದಿರವು ಆಟೋಗಳಲ್ಲಿ ದಾನಿಗಳ ಬ್ರ್ಯಾಂಡಿಂಗ್ ಅನ್ನು ನಮೂದಿಸುತ್ತದೆ. ಉತ್ಪಾದನಾ ಕಂಪನಿಯು ಒಂದು ವರ್ಷದ ಉಚಿತ ಸೇವೆ ಒದಗಿಸುತ್ತದೆ. ನಿರ್ವಹಣಾ ವೆಚ್ಚಗಳು ಕಡಿಮೆ ಮಾಡುವುದು ಮತ್ತು ಮಹಿಳಾ ಸಂಘಗಳ ಮೂಲಕ ಉಳಿತಾಯ ಯೋಜನೆಯಡಿ ಬ್ಯಾಟರಿಗಳನ್ನು ಬದಲಿಸುವಂಥ ಭವಿಷ್ಯದ ಅಗತ್ಯಗಳನ್ನು ಮನವರಿಕೆ ಮಾಡಲಾಗಿದೆ. ಇದು ಚಾಲಕರಿಗೆ ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ಇ-ಆಟೋಗಳು ಚಾಲಕನ ಹೆಸರಿನಲ್ಲಿ ನೋಂದಣಿಯಾಗಿದೆ. ಇದರಿಂದಾಗಿ ಅವರು ನಿಜವಾದ ಮಾಲೀಕರಾಗುತ್ತವೆ. ವಿಮೆ, ತೆರಿಗೆ ಮತ್ತು ಇತರ ಆಡಳಿತಾತ್ಮಕ ಕಾರ್ಯಗಳನ್ನು ಶಿಶು ಮಂದಿರವು ಭರಿಸುತ್ತದೆ. ಶಿಶು ಮಂದಿರ ಕ್ಯಾಂಪಸ್‌ನಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮಹೀಂದ್ರಾ ಬೆಂಬಲದೊಂದಿಗೆ ಹೆಚ್ಚಿನ ನಿಲ್ದಾಣಗಳನ್ನು ಸ್ಥಾಪಿಸುವ ಯೋಜನೆ ಇದೆ ಎಂದು ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಫಲ್ಗುಣಿ ಅಬ್ಬರಕ್ಕೆ ಮುಳುಗಿದ ದೇಗುಲಗಳು; ಆಗಸ್ಟ್‌ 5ರವರೆಗೆ ಭಾರಿ ಮಳೆ ಸಾಧ್ಯತೆ

Karnataka Weather forecast : ನೈರುತ್ಯ ಮುಂಗಾರು ಸಕ್ರಿಯಗೊಂಡಿದ್ದು, ರಾಜ್ಯಾದ್ಯಂತ ಮಳೆಯು (Rain News) ವ್ಯಾಪ್ತಿಸುತ್ತಿದೆ. ಮಳೆಗೆ ಅವಾಂತರವೇ ಸೃಷ್ಟಿಯಾಗಿದ್ದು, ಆಗಸ್ಟ್‌ 5ರವರೆಗೆ ಮುಂದುವರಿಯಲಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ (Rain News) ಅಬ್ಬರ (Karnataka Weather Forecast) ಮುಂದುವರಿದಿದ್ದು, ಫಲ್ಗುಣಿ ನದಿ ಉಕ್ಕಿ ಹರಿಯುತ್ತಿದೆ. ವಾಮಂಜೂರು ಶ್ರೀಅಮೃತೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದೆ. ದೇವಸ್ಥಾನದ ಒಳ ಪ್ರಾಂಗಣ ಸಂಪೂರ್ಣ ಜಲಾವೃತವಾಗಿದ್ದು, ದೇವಸ್ಥಾನದ ಸುತ್ತಲೂ ಫಲ್ಗುಣಿ ನದಿ ನೀರು ಆವರಿಸಿದೆ. ಕಳೆದ 30 ವರ್ಷದ ಬಳಿಕ ಇದೇ ಮೊದಲ ಬಾರಿಗೆ ದೇವಸ್ಥಾನಕ್ಕೆ ನೀರು ನುಗ್ಗಿದೆ. ಕ್ಷಣ ಕ್ಷಣಕ್ಕೂ ಫಲ್ಗುಣಿ ನದಿಯ ನೀರು ಏರಿಕೆಯಾಗುತ್ತಿದ್ದು, ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ಪಲ್ಗುಣಿ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಇದರಿಂದಾಗಿ ಮಂಗಳೂರು ನಗರ ಹೊರವಲಯದ ಪಡುಶೆಡ್ಡೆಯ ಸುಮಾರು 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ. ನೆರೆ ಬಾಧಿತ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ನದಿಯಲ್ಲಿ ಕ್ಷಣ ಕ್ಷಣಕ್ಕೂ ನೀರು ಏರಿಕೆ ಆಗುತ್ತಿದ್ದು, ನದಿ ತೀರದ ಹಲವು ಮನೆಗಳು, ಕೃಷಿ ಭೂಮಿಗಳು ಜಲಾವೃತಗೊಂಡಿದೆ. ಪಲ್ಗುಣಿ ನದಿಯ ಮಧ್ಯ ಭಾಗದಲ್ಲಿ ಡ್ರೆಜ್ಜಿಂಗ್ ಬೋಟ್ ಸಿಲುಕಿದೆ. ರಾತ್ರಿ ಸುರಿದ ಮಹಾಮಳೆಗೆ ಪಲ್ಗುಣಿ ನದಿ ಉಕ್ಕಿದ್ದು, ಬಂಟ್ವಾಳ ತಾಲೂಕಿನ ಅಮ್ಮುಂಜೆಯ ಏಳು ಮನೆಗಳು ಜಲಾವೃತಗೊಂಡು, ಅಮ್ಮುಂಜೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ನೀರು ನುಗ್ಗಿದೆ. ಬಂಟ್ವಾಳ ಸಿದ್ಧಕಟ್ಟೆ ಸಮೀಪದ ಅಂಗಾರಕರಿಯ ಸೇತುವೆ ಮೇಲೆ ನೀರು ಹರಿದಿದೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾಭದ್ರಾ

ಅಪಾಯದ ಮಟ್ಟ ಮೀರಿ ತುಂಗಭದ್ರಾ ನದಿ ಹರಿಯುತ್ತಿದ್ದು, ನದಿಗೆ 1,67,443 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಮತ್ತೆ ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ಕಂಪ್ಲಿ ಸೇತುವೆ ಮುಳುಗಡೆಯಾದ ಕಾರಣಕ್ಕೆ ಬಳ್ಳಾರಿ- ಗಂಗಾವತಿ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲ್ಭಾಗದಿಂದ ಮೂರು ಅಡಿ ನೀರು ಹರಿಯುತ್ತಿದೆ. ಹೀಗಾಗಿ ಕಂಪ್ಲಿ ಕೋಟೆಯ ಪ್ರದೇಶಕ್ಕೆ ನದಿ ನೀರು ನುಗ್ಗಿದೆ. ಕಂಪ್ಲಿ ಕೋಟೆ ಪ್ರದೇಶದ ಹೊಳೆ ಆಂಜನೇಯ, ಪ್ರಸನ್ನ ವೆಂಕಟರಮಣ ದೇವಸ್ಥಾನ ಜಲಾವೃತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಕೋಟೆ ಪ್ರದೇಶದ ಜನರನ್ನ ಸ್ಥಳಾಂತರ ಮಾಡಲಾಗಿತ್ತು.

ಇತ್ತ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಿಂದಾಗಿ ವಿಜಯನಗರ ಜಿಲ್ಲೆಯಲ್ಲಿ ರಸ್ತೆ, ಭತ್ತದ ಗದ್ದೆಗಳು ಜಲಾವೃತವಾಗಿದೆ. ಮಕರಬ್ಬಿ-ಬ್ಯಾಲಾಹುಣಸೆ ಗ್ರಾಮದ ರಸ್ತೆ ಸಂಪೂರ್ಣ ಬಂದ್ ಆಗಿದೆ. ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಗ್ರಾಮಗಳ ಹತ್ತಾರು ಎಕರೆ ಭತ್ತದ ಜಮೀನಿಗೆ ನೀರು ನುಗ್ಗಿದ್ದರಿಂದ ಸಂಪೂರ್ಣ ನೀರು ಪಾಲಾಗಿದೆ. ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶಗಳಲ್ಲಿ ಸಂಕಷ್ಟ ಎದುರಾಗಿದೆ. ನದಿಪಾತ್ರದ 22 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಇದನ್ನೂ ಓದಿ: Karnataka Rain : ಕೃಷ್ಣಾ ನದಿ ಪ್ರವಾಹದಲ್ಲಿ ಪಲ್ಟಿ ಹೊಡೆದ ಬೋಟ್‌; ಎತ್ತುಗಳ ಮೇಲೆ ಕುಸಿದು ಬಿದ್ದ ಗೋಡೆ

ನಾಳೆ ವ್ಯಾಪಕ ಮಳೆ ಎಚ್ಚರಿಕೆ

ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ 23 ಸೆ.ಮೀ, ಉತ್ತರ ಕನ್ನಡದ ಅಂಕೋಲಾದಲ್ಲಿ 20 ಸೆ.ಮೀ ಮಳೆಯಾಗಿದೆ.

ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಕರಾವಳಿ ತೀರದಲ್ಲಿ ಟ್ರಫ್ ಮುಂದುವರೆದಿದೆ. ಸಿಯರ್ ಝೋನ್ 20° ಉತ್ತರ ಅಂಕ್ಷಾಂಶದಲ್ಲಿ 4.5ಕಿ.ಮೀ ಯಿಂದ  5.8 ಕಿ.ಮೀ ವರೆಗೆ ಸುಳಿಗಾಳಿ ಇದೆ. ಇದರ ಪರಿಣಾಮ ಕರಾವಳಿ ಜಿಲ್ಲೆಗಳಿಗೆ ಆಗಸ್ಟ್‌ 5ರ ವರೆಗೆ ವ್ಯಾಪಕ ಮಳೆ ಆಗಲಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆ ಸಾಧ್ಯತೆ ಇದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ರೆಡ್‌ ಅಲರ್ಟ್‌ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Murder Case : ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ

Murder case : ನಡುರಸ್ತೆಯಲ್ಲಿ ಯುವಕನನ್ನು ಅಟ್ಟಾಡಿಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

VISTARANEWS.COM


on

By

murder case
Koo

ಬೆಂಗಳೂರು: ಹಾಡಹಗಲೆ ಯುವಕನ ಬರ್ಬರ ಹತ್ಯೆ (Murder case) ನಡೆದಿದೆ. ಬೆಂಗಳೂರಿನ ಶೇಷಾದ್ರಿ ಪುರಂ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಘಟನೆ ನಡೆದಿದೆ. ಅಜಿತ್ ಕುಮಾರ್‌ (25) ಕೊಲೆಯಾದವನು.

ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ರಶಿಲ್ಲಾರ್ ಸ್ಟ್ರೀಟ್‌ನಲ್ಲಿ ಅಜಿತ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೊಲೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಭೇಟಿ ನೀಡಿದ್ದಾರೆ.

ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹಂತಕರಿಗಾಗಿ ಹುಡುಕಾಟ ನಡೆಸಿರುವ ಪೊಲೀಸರು, ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೊಲೆ ಕೇಸ್‌ನಲ್ಲಿ ಆರೋಪಿಯಾಗಿದ್ದ ಅಜಿತ್‌

ಬ್ಲಡ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಅಜಿತ್‌, 2022ರಲ್ಲಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಸಂಜೆ 4:15ರ ವೇಳೆಗೆ ಮನೆಯಿಂದ ಊಟ ಮುಗಿಸಿ ಹೊರಬಂದಿದ್ದ ಅಜಿತ್ ಮೇಲೆ ಏಕಾಏಕಿ ಹಂತಕರ ಗ್ಯಾಂಗ್‌ ಅಟ್ಯಾಕ್‌ ಮಾಡಿದೆ. ಮಚ್ಚು ಬೀಸಿದ ರಭಸಕ್ಕೆ ಅಜಿತ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶೇಷಾದ್ರಿಪುರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ಕೃಷ್ಣಾ ನದಿ ಪ್ರವಾಹದಲ್ಲಿ ಪಲ್ಟಿ ಹೊಡೆದ ಬೋಟ್‌; ಎತ್ತುಗಳ ಮೇಲೆ ಕುಸಿದು ಬಿದ್ದ ಗೋಡೆ

Karnataka Rain : ಭಾರಿ ಮಳೆಗೆ ಅವಾಂತರಗಳು ಮುಂದುವರಿದಿದೆ. ಕೃಷ್ಣಾ ನದಿ ಪ್ರವಾಹದ ಅಬ್ಬರಕ್ಕೆ ಎನ್‌ಡಿಆರ್‌ಎಫ್‌ ಸಿಬ್ಬಂದಿಯ ಬೋಟ್‌ ಪಲ್ಟಿ ಹೊಡೆದಿದೆ. ಮತ್ತೊಂದು ಕಡೆ ಮಳೆಗೆ ಮನೆ ಗೋಡೆ ಬಿದ್ದು, ಪಕ್ಕದಲ್ಲಿದ್ದ ಎತ್ತುಗಳು ಮೃತಪಟ್ಟಿವೆ.

VISTARANEWS.COM


on

By

karnataka rain
Koo

ಚಿಕ್ಕೋಡಿ/ಬೆಳಗಾವಿ: ಭಾರಿ ಮಳೆಗೆ (Karnataka Rain) ಕೃಷ್ಣಾ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ಬೋಟ್ ಪಲ್ಟಿಯಾಗಿದೆ. ಚಿಕ್ಕೋಡಿಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಬಳಿ ಕೃಷ್ಣಾ ನದಿಯಲ್ಲಿ ಘಟನೆ ನಡೆದಿದೆ. ಒಂದು ವಾರದಿಂದ ಕುಡಚಿ ಪಟ್ಟಣಕ್ಕೆ ನೀರು ಬಾರದೇ ಸಮಸ್ಯೆಯಾಗಿತ್ತು. ಹೀಗಾಗಿ ಸಿಬ್ಬಂದಿ ಕುಡಚಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪಂಪ್ ಸೆಟ್ ಸರಿಪಡಿಸಲು ಹೋಗಿದ್ದರು. ಈ ವೇಳೆ ನೀರಿನ ಹರಿವು ಹೆಚ್ಚಾಗಿದ್ದರಿಂದ ಕಂಟ್ರೋಲ್ ತಪ್ಪಿ ಬೋಟ್‌ ಪಲ್ಟಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸದ್ಯ ಜಾಕ್ವೆಲ್ ನಲ್ಲೇ ಇರುವ ಸಿಬ್ಬಂದಿ ಮತ್ತೊಂದು ಬೋಟ್ ತಂದು ಹೊರ ತರಲು ಪ್ಲ್ಯಾನ್ ಮಾಡಿದ್ದಾರೆ.

ಮಳೆಗೆ ಎತ್ತುಗಳ ಮೇಲೆ ಉರುಳಿ ಬಿದ್ದ ಗೋಡೆ

ನಿರಂತರ ಮಳೆಗೆ ಮನೆ ಗೋಡೆ ಉರುಳಿ ಬಿದ್ದಿದ್ದು, ಅಲ್ಲೇ ಸಮೀಪದಲ್ಲಿದ್ದ ಎತ್ತುಗಳು ಗಾಯಗೊಂಡಿವೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ‌ ಗ್ರಾಮದಲ್ಲಿ ಘಟನೆ ನಡೆದಿದೆ. ಇಂಚಲ‌ ಗ್ರಾಮದ ಯಶವಂತ ನಲವಡೆ ಎಂಬುವವರ ಎತ್ತುಗಳು ಗಾಯಗೊಂಡಿವೆ. ಯಂಕವ್ವ ಗಾಯಕವಾಡ ಎಂಬುವವರ ಮನೆ ಗೋಡೆ ಉರುಳಿ ಬಿದ್ದು ಈ ಅವಘಡ ಸಂಭವಿಸಿದೆ. ಯಶವಂತ ಹಾಗೂ ಯಂಕವ್ವ ಮನೆಗಳು ಅಕ್ಕ ಪಕ್ಕವೇ ಇದ್ದು, ಗೋಡೆ ಬೀಳುತ್ತಿದ್ದಂತೆ ಮಣ್ಣು ತೆಗೆದು ಎತ್ತುಗಳನ್ನು ಉಳಿಸಿಕೊಂಡಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇಲ್ಲೇ ಸಾಯುತ್ತೇವೆ ಹೊರತು ಕಾಳಜಿ ಕೇಂದ್ರಕ್ಕೆ ಹೋಗಲ್ಲ

ದಾವಣಗೆರೆ: ತುಂಗಾಭದ್ರ ನದಿಯ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಗಂಗಾನಗರ ಸಂಪೂರ್ಣ ಜಲಾವೃತಗೊಂಡಿದೆ. 22ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲಾಡಳಿತದಿಂದ ಕಾಳಜಿ ಕೇಂದ್ರ ತೆರೆದರೂ ಗಂಗಾನಗರ ನಿವಾಸಿಗಳು, ಇಲ್ಲೇ ನೀರಿನಲ್ಲಿ ಸಾಯುತ್ತೇವೆ ವಿನಃ, ಕಾಳಜಿ ಕೇಂದ್ರಕ್ಕೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪ್ರತಿ ಬಾರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದರೆ ಮನೆಗಳು ಮುಳುಗಡೆಯಾಗುತ್ತವೆ. ಕಾಳಜಿ ಕೇಂದ್ರಕ್ಕೆ ಸಾಮಾಗ್ರಿಗಳನ್ನು ಮಕ್ಕಳನ್ನು ಕಟ್ಟಿಕೊಂಡು ಹೋಗಬೇಕು. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಅನುಭವಿಸುತ್ತಿದ್ದೇವೆ. ಬೇರೆ ಕಡೆ ನಿವೇಶನ ನೀಡಿ ಅಲ್ಲಿ ಗುಡಿಸಲು ಹಾಕಿಕೊಂಡು ಇರುತ್ತೇವೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Road Accident : ಬೆಂಗಳೂರಲ್ಲಿ ಮಳೆಗೆ ಬೈಕ್‌ ಸವಾರ ಬಲಿ; ಕಂಟ್ರೋಲ್‌ ತಪ್ಪಿ ಬಿದ್ದವನ ಮೇಲೆ ಹರಿದ ವಾಹನಗಳು!

ಬಾಗಲಕೋಟೆಯ‌ ಗೋವಿನಕೊಪ್ಪ ಸೇತುವೆ ಜಲಾವೃತ

ಬಾಗಲಕೋಟೆ ಜಿಲ್ಲೆಯಲ್ಲಿ ಮಲಪ್ರಭಾ ನದಿ ಅಬ್ಬರಕ್ಕೆ ಪ್ರವಾಹ ಭೀತಿ ಶುರುವಾಗಿದೆ. ಮಲಪ್ರಭಾ ನದಿಗೆ 12 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನದಿಗೆ ಅಡ್ಡಲಾಗಿರುವ ಗೋವಿನಕೊಪ್ಪ ಸೇತುವೆ ಜಲಾವೃತಗೊಂಡಿದೆ. ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗೋವಿನಕೊಪ್ಫ ಹಳೆ ಸೇತುವೆ ಮೇಲೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಹೊಸ ಸೇತುವೆ ಮೂಲಕ ವಾಹನಗಳು ಓಡಾಟ ನಡೆಸಿವೆ. ನದಿಯ ಇಕ್ಕೆಲದಲ್ಲಿರುವ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ.

ಶಿರಾಡಿ ಭೂ ಕುಸಿತ ಭೀತಿ; ವಾಹನ ಸಂಚಾರ ಇಳಿಕೆ

ಶಿರಾಡಿ ಭೂಕುಸಿತದ ಬಳಿಕ ಚಿಕ್ಕಮಗಳೂರಿನಲ್ಲಿ ವಾಹನ ಸಂಚಾರ ಇಳಿಕೆಯಾಗಿದೆ. ಚಾರ್ಮಾಡಿಯಲ್ಲಿ ವಾಹನ ಸಂಚಾರಕ್ಕೆ ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ. ಕಡೂರು-ದಕ್ಷಿಣ ಕನ್ನಡ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಗಣನೀಯ ಪ್ರಮಾಣದಲ್ಲಿ ವಾಹನಗಳ ಸಂಖ್ಯೆ ಇಳಿಕೆ ಕಂಡಿದೆ. ಚಾರ್ಮಾಡಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಪದೆ ಪದೇ ಕಲ್ಲು ಬಂಡೆಗಳು, ಮರಗಳು ಬಿದ್ದು ಅವಾಂತರವೇ ಸೃಷ್ಟಿಯಾಗುತ್ತಿದೆ. ನಿತ್ಯ 1500-2000 ವಾಹನಗಳು ಸಂಚಾರಿಸುತ್ತಿದ್ದವು. ಇದೀಗ ಗುಡ್ಡ ಕುಸಿತದ ಭಯಕ್ಕೆ ದಿನವೊಂದಕ್ಕೆ 500 ವಾಹನಗಳು ಓಡಾಟ ನಡೆಸುತ್ತಿವೆ. ಚಾರ್ಮಾಡಿ ಹೆದ್ದಾರಿ ಸಂಚಾರ ಮುಕ್ತ ಗೊಳಿಸಿದರು ಸವಾರರಲ್ಲಿ ಭಯ ಆವರಿಸಿದೆ.

ಹಾವೇರಿಯಲ್ಲಿ ಮಳೆ ಅವಾಂತರಕ್ಕೆ ಬೆಳೆ ನಾಶ

ಹಾವೇರಿ ತಾಲೂಕಿನ ಕೊರಡೂರು ಗ್ರಾಮದಲ್ಲಿ ಮಳೆ ಅಬ್ಬರಕ್ಕೆ ತರಕಾರಿ ಬೆಳೆ ನಾಶವಾಗಿದೆ. ಫಕ್ಕಿರೇಶ ಕೊಡಬಾಳ ಎಂಬುವವರು ಎರಡು ಎಕರೆ ಜಮೀನಿನಲ್ಲಿ ವಿವಿಧ ತರಕಾರಿ ಬೆಳೆ ಬೆಳೆದಿದ್ದರು. ಆದರೆ ವರದಾ ನದಿಯ ಅಬ್ಬರಕ್ಕೆ ಟೊಮೆಟೋ, ಮೆಣಸಿನಕಾಯಿ, ಬೆಂಡೆ ಮತ್ತು ಚವಳಿಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆ ನೀರುಪಾಲಾಗಿದೆ.

ಪಂಪಾ ಸರೋವರಕ್ಕೆ ಹೋಗುವ ರಸ್ತೆ ಸ್ಥಗಿತ

ಕೊಪ್ಪಳದಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಆನೆಗೊಂದಿ ಬಳಿಯ ಪಂಪಾ ಸರೋವರಕ್ಕೆ ಹೋಗುವ ರಸ್ತೆ ಸ್ಥಗಿತಗೊಂಡಿದೆ. ಭಾರತದ ವಿವಿಧ ಪ್ರದೇಶದಿಂದ ಭಕ್ತರು ಆಗಮಿಸುವ ಪಂಪಾಸರೋವರ ಇದೀಗ ಬಂದ್‌ ಆಗಿದೆ. ತುಂಗಭದ್ರಾ ನದಿಗೆ 1.70 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ನೀರು ರಸ್ತೆಗೆ ಬಂದಿದೆ. ನದಿಯಲ್ಲಿ ಇನ್ನಷ್ಟು ನೀರು ಬಂದರೆ ಅಂಜನಾದ್ರಿ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Road Accident : ಬೆಂಗಳೂರಲ್ಲಿ ಮಳೆಗೆ ಬೈಕ್‌ ಸವಾರ ಬಲಿ; ಕಂಟ್ರೋಲ್‌ ತಪ್ಪಿ ಬಿದ್ದವನ ಮೇಲೆ ಹರಿದ ವಾಹನಗಳು!

Road Accident : ಬೆಂಗಳೂರಿನಲ್ಲಿ ಸುರಿದ ಮಳೆಗೆ ಕಂಟ್ರೋಲ್‌ ತಪ್ಪಿ ಬೈಕ್‌ನಿಂದ ಕೆಳಗೆ ಬಿದ್ದ ಸವಾರನ ಮೇಲೆ ವಾಹನಗಳು ಹರಿದ ಪರಿಣಾಮ ದಾರುಣವಾಗಿ ಮೃತಪಟ್ಟಿದ್ದಾರೆ. ಆನೇಕಲ್‌ನಲ್ಲಿ ರಸ್ತೆ ದಾಟುತ್ತಿದ್ದ ಯುವಕನಿಗೆ ಕ್ಯಾಂಟರ್‌ವೊಂದು ಡಿಕ್ಕಿ ಹೊಡೆದಿದ್ದು, ಚಾಲಕ ಕಾಲ್ಕಿತ್ತಿದ್ದಾನೆ.

VISTARANEWS.COM


on

By

Road Accident
Koo

ಬೆಂಗಳೂರು/ಆನೇಕಲ್: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಬುಧವಾರ ಸುರಿದ ಮಳೆಗೆ ಬೈಕ್‌ ಸವಾರರೊಬ್ಬರು (Road Accident) ಬಲಿಯಾಗಿದ್ದಾರೆ. ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಬಳಿ ದುರ್ಘಟನೆ ನಡೆದಿದೆ. ಲೋಕೇಶ್ ಜೆ (41) ಮೃತ ಪಟ್ಟವರು.

ಲೋಕೇಶ್‌ ರಾತ್ರಿ 9.30ರ ಸುಮಾರಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಯಲಹಂಕ ಕಡೆಯಿಂದ ಕೋರಮಂಗಲದ ಕಡೆಗೆ ಹೋಗಲು ಹೆಬ್ಬಾಳ ಫ್ಲೈಓವರ್ ಪ್ರವೇಶಿಸಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದಿದ್ದರು. ಧಾರಕಾರ ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಬೈಕ್ ಸವಾರ ಬಿದ್ದಿರುವುದನ್ನು ಇತರೆ ವಾಹನ ಸವಾರರು ಗಮನಿಸಿಲ್ಲ. ಕೆಳಗೆ ಬಿದ್ದ ಲೋಕೇಶ್ ಮೇಲೆಯೇ ಹರಿದಿದ್ದು, ತಲೆಗೆ ಗಂಭೀರ ಗಾಯವಾಗಿತ್ತು.

ರಸ್ತೆಯಲ್ಲಿ ಬಿದ್ದು ನರಳಾಡುತ್ತಿರುವುದನ್ನು ಕಂಡು ಕೆಲವರು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಲೋಕೇಶ್ ಮೃತಪಟ್ಟಿದ್ದಾರೆ. ಹೆಬ್ಬಾಳ‌ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಯುವಕನಿಗೆ ಡಿಕ್ಕಿ ಹೊಡೆದು ಪರಾರಿಯಾದ ಚಾಲಕ

ರಸ್ತೆ ದಾಟುತ್ತಿದ್ದ ಯುವಕನಿಗೆ ವೇಗವಾಗಿ ಬಂದ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಕ್ಯಾಂಟರ್ ಚಾಲಕ ಪರಾರಿ ಆಗಿದ್ದಾನೆ. 19 ವರ್ಷದ ಆಕಾಶ್ ಸ್ಥಳದಲ್ಲೇ ಮೃತಪಟ್ಟವರು.

ಡಿಕ್ಕಿ ಹೊಡೆದು ಎಸ್ಕೇಪ್ ಆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಬಳಿ ಅಪಘಾತ ನಡೆದಿದೆ. ಗುಲ್ಬರ್ಗ ಮೂಲದ ಆಕಾಶ್ ನಿನ್ನೆ ಬುಧವಾರ ರಾತ್ರಿ ತಂದೆ ನೋಡಲು ಬಂದಿದ್ದ. ಆಕಾಶ್‌ ತಂದೆ ಆನೇಕಲ್ ಚಂದಾಪುರ ಮುಖ್ಯ ರಸ್ತೆಯ ಬಾರ್ ಒಂದರಲ್ಲಿ ವಾಚ್ ಮ್ಯಾನ್ ಆಗಿದ್ದರು. ತಂದೆಯನ್ನು ಮಾತನಾಡಿಸಿಕೊಂಡು ರಸ್ತೆ ದಾಟಲು ಮುಂದಾಗಿದ್ದು, ಈ ಸಂದರ್ಭದಲ್ಲಿ ವೇಗವಾಗಿ ಬಂದು ಕ್ಯಾಂಟರ್‌ ಡಿಕ್ಕಿ ಹೊಡೆದಿದೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಎಸ್ಕೇಪ್ ಆಗಿರುವ ಕ್ಯಾಂಟರ್‌ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Self Harming : ವಯಸ್ಸಲ್ಲದ ವಯಸ್ಸಲ್ಲಿ ಲವ್; 15ನೇ ವರ್ಷಕ್ಕೆ ಮದುವೆ ಆದವಳು 17ನೇ ವರ್ಷಕ್ಕೆ ಆತ್ಮಹತ್ಯೆ

ಕರೆಂಟ್‌ ಶಾಕ್‌ಗೆ ಪ್ರಜ್ಞೆ ತಪ್ಪಿದ ಲೈನ್‌ ಮ್ಯಾನ್‌

ಚಾಮರಾಜನಗರದ ಚಮಾಲ್ ಬೀದಿಯಲ್ಲಿ ವಿದ್ಯುತ್ ಕಂಬವೇರಿ ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ಸ್ಪರ್ಶದಿಂದ ಲೈನ್‌ ಮ್ಯಾನ್‌ ಕಿರಣ್‌ ಎಂಬಾತ ಪ್ರಜ್ಞೆ ತಪ್ಪಿದ್ದರು. ಚೆಸ್ಕಾಂ ಸಿಬ್ಬಂದಿ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಲೈನ್‌ಮ್ಯಾನ್‌ ಕಿರಣ್‌ನನ್ನು ಕೆಳೆಗಿಳಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಲೈನ್‌ಮ್ಯಾನ್‌ಗೆ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ‌ ಚಿಕಿತ್ಸೆಗೆ ಮೈಸೂರು ಅಪೋಲೋ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಬೆಂಗಳೂರಲ್ಲಿ ಧರೆಗುರುಳಿದ ಬೃಹತ್‌ ಮರ

ಬೆಂಗಳೂರಿನ ಗೋವಿಂದರಾಜನಗರದ ಸರಸ್ವತಿ ನಗರದಲ್ಲಿ ಬೃಹತ್‌ ಗಾತ್ರದ ಮರವೊಂದು ಧರೆಗುರುಳಿದೆ. ಮರವು ವಿದ್ಯುತ್ ಕಂಬದ ಮೇಲೆ ಬಿದ್ದ ರಭಸಕ್ಕೆ ಕಾರೊಂದು ಜಖಂಗೊಂಡಿತ್ತು. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಳಗಾವಿಯ ನಾಲೆಯಲ್ಲಿ ತೇಲಿ ಬಂದ ಅಪರಿಚಿತ ವ್ಯಕ್ತಿಯ ಮೃತ ದೇಹ

ಬೆಳಗಾವಿಯ ಉಜ್ವಲ ನಗರದ ನಾಲೆಯಲ್ಲಿ ವ್ಯಕ್ತಿಯೊಬ್ಬರ ಶವ ತೇಲಿ ಬಂದಿದೆ. ಶವ ಕಂಡು ಹೌಹಾರಿದ ಸ್ಥಳೀಯ ನಿವಾಸಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಮಾಳಮಾರುತಿ ಠಾಣಾ ಪೊಲೀಸರು ಶವ ಹೊರತೆಗೆದಿದ್ದಾರೆ. ಸುಮಾರು 33 ರಿಂದ 35 ರ ಆಸುಪಾಸಿನ ಅಂದಾಜಿನ ಯುವಕನ ಶವದ ಕೈ ಮೇಲೆ ಲಕ್ಷ್ಮಣ ಹೆಚ್ ಎಂಬ ಟ್ಯಾಟು ಪತ್ತೆಯಾಗಿದೆ. ವಿಪರೀತ ಮಳೆಗೆ ನಾಲೆಯ ಪ್ರವಾಹಕ್ಕೆ ಶವ ತೇಲಿ ಬಂದಿರುವ ಶಂಕೆ ಇದೆ. ಪ್ರಕರಣ ದಾಖಲಿಸಿಕೊಂಡು ಮಾಳಮಾರುತಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೋಲಾರದಲ್ಲಿ ಬೆಂಕಿಗಾಹುತಿಯಾದ 9000 ಕೋಳಿ ಮರಿಗಳು

ಕೋಳಿ ಫಾರಂನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬರೋಬ್ಬರಿ 9,000 ಕೋಳಿ ಮರಿಗಳು ಮೃತಪಟ್ಟಿವೆ. ಸುಮಾರು ಹದಿನೈದು ಲಕ್ಷ ಮೌಲ್ಯದ ಕೋಳಿ ಮರಿಗಳ ಸಾವಿನಿಂದ ಮಾಲೀಕ ಕಂಗಲಾಗಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ರಾಮಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆರ್ನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಮೋಹನ್ ಕೃಷ್ಣ ಎಂಬುವವರಿಗೆ ಸೇರಿದ ಕೋಳಿ ಫಾರಂ ಇದಾಗಿದ್ದು, ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಗ್ರಾಮ ಪಂಚಾಯತಿಯ ರಾಜಕೀಯ ವಿದ್ಯಮಾನಗಳೇ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಬೇತಮಂಗಲ ಸರ್ಕಲ್ ಇನ್ಸ್ಪೆಕ್ಟರ್ ರಂಗಸ್ವಾಮಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
karnataka Weather Forecast
ಮಳೆ4 mins ago

Karnataka Weather : ಫಲ್ಗುಣಿ ಅಬ್ಬರಕ್ಕೆ ಮುಳುಗಿದ ದೇಗುಲಗಳು; ಆಗಸ್ಟ್‌ 5ರವರೆಗೆ ಭಾರಿ ಮಳೆ ಸಾಧ್ಯತೆ

Paris Olympics
ಕ್ರೀಡೆ10 mins ago

Paris Olympics: ಕ್ವಾರ್ಟರ್‌ ಫೈನಲ್‌ನಲ್ಲಿ ಸಾತ್ವಿಕ್​-ಚಿರಾಗ್​ ಜೋಡಿಗೆ ಆಘಾತಕಾರಿ ಸೋಲು

MS Dhoni
ಪ್ರಮುಖ ಸುದ್ದಿ17 mins ago

MS Dhoni: ಆ ಒಂದು ರನ್​​ ಔಟ್ ನನ್ನ ​​ ಕ್ರಿಕೆಟ್​ ವೃತ್ತಿ ಜೀವನದ ಅತ್ಯಂತ ಕೆಟ್ಟ ಕ್ಷಣ; ವಿಶ್ವ ಕಪ್​ ಆಘಾತವನ್ನು ವಿವರಿಸಿದ ಧೋನಿ

MLA Belur Gopalakrishna visits and inspects flood affected areas in hosanagara taluk
ಶಿವಮೊಗ್ಗ17 mins ago

Hosanagara News: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ

State Level hasiru nairmalya shala abhyudaya Award for Hadlubailu Government School
ಶಿವಮೊಗ್ಗ18 mins ago

Hosanagara News: ಹಡ್ಲುಬೈಲು ಸರ್ಕಾರಿ ಶಾಲೆಗೆ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ

Viral Video
Latest20 mins ago

Viral Video: ಜಲಾವೃತ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಮಹಿಳೆಗೆ ಪುಂಡರ ಕಿರುಕುಳ; ವಿಡಿಯೊ ನೋಡಿ ಜನಾಕ್ರೋಶ

Viral Video
Latest28 mins ago

Viral Video: ಪ್ರೀತಿಸಿದ ಹುಡುಗಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವಕ; ಗಾಬರಿಗೊಳಿಸುವ ವಿಡಿಯೊ

New Traffic Rules
ಕರ್ನಾಟಕ33 mins ago

New Traffic Rules: ಹೆದ್ದಾರಿಯಲ್ಲಿ ವೇಗದ ಮಿತಿ 130 ಕಿ.ಮೀ ದಾಟಿದರೆ ದಂಡ, ಜೈಲು ಶಿಕ್ಷೆ; ಇಂದಿನಿಂದಲೇ ಹೊಸ ರೂಲ್ಸ್‌

Wayanad Tragedy
Latest44 mins ago

Wayanad Tragedy: ಈ ಮುದ್ದು ವಿದ್ಯಾರ್ಥಿನಿಯರ ನಗು, ಸೈಕಲ್‌ ಸವಾರಿ ಇನ್ನೆಲ್ಲಿ? ಮಣ್ಣಿನಡಿ ಸಮಾಧಿ; ಕಣ್ಣಂಚಲಿ ನೀರು ತರಿಸುವ ವಿಡಿಯೊ

murder case
ಬೆಂಗಳೂರು48 mins ago

Murder Case : ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ4 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌