Bengaluru News: ವಿದ್ಯಾರ್ಥಿಗಳು ಮೊಬೈಲ್ ಫೋನ್‌ಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು: ಕೆ.ವಿ. ಪ್ರಭಾಕರ್‌ - Vistara News

ಬೆಂಗಳೂರು

Bengaluru News: ವಿದ್ಯಾರ್ಥಿಗಳು ಮೊಬೈಲ್ ಫೋನ್‌ಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು: ಕೆ.ವಿ. ಪ್ರಭಾಕರ್‌

Bengaluru News: ಮೊಬೈಲ್ ಫೋನ್ ಒಂದು ಉಪಯುಕ್ತ ಸಾಧನ. ಆದರೆ ಒಳಿತು ಕೆಡುಕು ಆಯ್ಕೆ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಆದ್ದರಿಂದ, ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿ ಮೊಬೈಲ್ ಫೋನ್ ಬಳಸುವುದನ್ನು ತಿಳಿದಿರಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ತಿಳಿಸಿದ್ದಾರೆ.

VISTARANEWS.COM


on

Students should use mobile phones responsibly says KV Prabhakar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮೊಬೈಲ್ ಫೋನ್ ಒಂದು ಉಪಯುಕ್ತ ಸಾಧನ. ಆದರೆ ಒಳಿತು ಕೆಡುಕು ಆಯ್ಕೆ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಆದ್ದರಿಂದ, ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿ ಮೊಬೈಲ್ ಫೋನ್ ಬಳಸುವುದನ್ನು ತಿಳಿದಿರಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್‌ (Bengaluru News) ತಿಳಿಸಿದರು.

ನಗರದ ಬಾಲ್ಡ್‌ವಿನ್‌ ಬಾಲಕಿಯರ ಶಾಲೆಯಲ್ಲಿ ಶುಕ್ರವಾರ 10ನೇ ತರಗತಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡುವ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಮೊಬೈಲ್‌ ಬಳಕೆಯ ಮಹತ್ವವನ್ನು ಒತ್ತಿ ಹೇಳಿದರು.

ಶಾಲಾ ಶಿಕ್ಷಣವು ಹೈಟೆಕ್ ಆಗಿ ಮಾರ್ಪಟ್ಟಿದೆ ಮತ್ತು ಅನೇಕರು ಮೊಬೈಲ್ ತಂತ್ರಜ್ಞಾನಕ್ಕೆ ವ್ಯಸನಿಯಾಗಿದ್ದಾರೆ. ಮೊಬೈಲ್ ಫೋನ್‌ಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ನಾನು ಹೇಳುವುದಿಲ್ಲ. ಆದರೆ ಅವುಗಳನ್ನು ದುರುಪಯೋಗಪಡಿಸಿಕೊಳ್ಳಬಾರದು. ಮೊಬೈಲ್‌ನ ದುಷ್ಪರಿಣಾಮಗಳ ಬಗ್ಗೆ ನಾವು ಪ್ರತಿದಿನ ಓದುತ್ತೇವೆ. ಆದ್ದರಿಂದ ಮೊಬೈಲ್ ಅನ್ನು ಅಗತ್ಯ ಕೆಲಸಕ್ಕೆ ಮಾತ್ರ ಬಳಸಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: Samsung Galaxy: ಸ್ಯಾಮ್‌ಸಂಗ್‌ನಿಂದ 2 ಹೊಸ ಫೋಲ್ಡೆಬಲ್ ಫೋನ್‌ ಬಿಡುಗಡೆ; ವಿಶೇಷತೆ ಏನೇನು?

ವಿದ್ಯಾರ್ಥಿಗಳು ಪೋಷಕರ ಕನಸುಗಳನ್ನು ಈಡೇರಿಸುವುದು ಕರ್ತವ್ಯವಾಗಿದೆ. ನೀವು ಯಾವ ವೃತ್ತಿಯನ್ನು ಆರಿಸಿಕೊಂಡರೂ, ಮೊದಲು ಉತ್ತಮ ಮನುಷ್ಯನಾಗಲು ಶ್ರಮಿಸಿ ಮತ್ತು ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡಿ ಎಂದರು.

ಈ ವೇಳೆ ವೈಯಕ್ತಿಕ ವಿಚಾರವನ್ನು ಹಂಚಿಕೊಂಡ ಅವರು, ”ನನ್ನ ತಂದೆ ನಾನು ಐಟಿಐ ಮಾಡಬೇಕೆಂದು ಬಯಸಿದ್ರು, ಆದರೆ ನನಗೆ ಬರವಣಿಗೆಯ ಉತ್ಸಾಹವಿತ್ತು, ಆದ್ದರಿಂದ ನಾನು ಪತ್ರಿಕೋದ್ಯಮವನ್ನು ಆರಿಸಿದೆ. ಎಪಿಜೆ ಅಬ್ದುಲ್ ಕಲಾಂ ಅವರಂತೆ ನಾನು ಮನೆ ಮನೆಗಳಿಗೆ ಪತ್ರಿಕೆಗಳನ್ನು ಹಂಚಿದ್ದೇನೆ. ಮಾಧ್ಯಮ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿರುವ ನನ್ನ ಯಶಸ್ಸಿನ ಪಯಣವು ಹಂತಹಂತವಾಗಿ ಗುರಿ ಮುಟ್ಟಿರುವುದು. ಈ ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡುವುದು ನನ್ನ ಆಶಯ ಎಂದು ಹೇಳಿದರು.

ಇದನ್ನೂ ಓದಿ: Bengaluru News: ಭವಿಷ್ಯಕ್ಕೆ ಬೇಕಾಗಿರುವ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಎನ್‌ಎಸ್‌ಡಿಸಿ, ವಿಟಿಯು ನಡುವೆ ಸಹಭಾಗಿತ್ವ

ಕಾರ್ಯಕ್ರಮದಲ್ಲಿ ಬಾಲ್ಡ್‌ವಿನ್‌ ಸಂಸ್ಥೆಗಳ ಅಧ್ಯಕ್ಷ ಬಿಷಪ್ ಎನ್.ಎಲ್. ಕರ್ಕರೆ, ಅಧ್ಯಕ್ಷೆ ಮೇಡಂ ಕಮಲ್ ಕರ್ಕರೆ, ಎಂ. ಜೋಶುವಾ ಸ್ಯಾಮ್ಯುಯೆಲ್, ಪ್ರಾಂಶುಪಾಲೆ ಆಶಾ ಮಾರ್ಗರೇಟ್ ದಾಸ್, ಉಪಪ್ರಾಂಶುಪಾಲೆ ಸುಜಾತಾ ಕ್ಯಾಥರೀನ್, ಅನಿತಾ ಐಸಾಕ್, ದಿವ್ಯಾ ರಂಗೇನಹಳ್ಳಿ ಮತ್ತು ವಸತಿ ಸಚಿವ ಜಮೀರ್‌ ಅಹಮದ್‌ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮೀನಾರಾಯಣ ಅವರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Karnataka Assembly Live: ಸದನದಲ್ಲಿ ಇಂದು ಕಿಡಿಯೆಬ್ಬಿಸಲಿರುವ ವಾಲ್ಮೀಕಿ ಹಗರಣ; ಉತ್ತರ ನೀಡಲು ಸಿಎಂ ಸಜ್ಜು; ಇಲ್ಲಿದೆ ಕ್ಷಣಕ್ಷಣದ ಲೈವ್‌

Karnataka Assembly Live: ಇಂದು ಸಹ ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಂದ ಈ ಚರ್ಚೆ ಮುಂದುವರಿಯಲಿದೆ. ಬಿಜೆಪಿಯ ಸಿಟಿ ರವಿ, ಸುನೀಲ್‌ ಕುಮಾರ್‌, ಯತ್ನಾಳ್ ಮುಂತಾದವರು ಈ ಚರ್ಚೆಯನ್ನು ಮುನ್ನಡೆಸಲಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡುವ ನಿರೀಕ್ಷೆ ಇದೆ. ನಿನ್ನೆ ಆಶೋಕ್ ಮಾತನಾಡುವಾಗಲೇ ಈ ಬಗ್ಗೆ ಸಿದ್ದರಾಮಯ್ಯ ಸುಳಿವು ನೀಡಿದ್ದರು.

VISTARANEWS.COM


on

karnataka assembly live
Koo

ಬೆಂಗಳೂರು: ವಿಧಾನ ಮಂಡಲ ಮಳೆಗಾಲದ ಅಧಿವೇಶನ (Karnataka Assembly Live, Karnataka Assembly monsoon session) ಇಂದು ಇನ್ನಷ್ಟು ರಂಗೇರಲಿದೆ. ವಾಲ್ಮೀಕಿ ನಿಗಮದ ಅವ್ಯವಹಾರ (Valmiki corporation Scam) ಪ್ರಕರಣದ ಕುರಿತು ನಿನ್ನೆ ವಿಧಾನಸಭೆ ಕಲಾಪದಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ವಿಪಕ್ಷ ನಾಯಕ ಆರ್. ಆಶೋಕ್ (R Ashok) ಅವರು ಈ ಚರ್ಚೆಯನ್ನು ಮುನ್ನಡೆಸಿದ್ದರು. ಇಂದು ಅದು ಮುಂದುವರಿಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕೂಡ ಇದಕ್ಕೆ ಉತ್ತರ ನೀಡಲಿದ್ದಾರೆ.

ನಿನ್ನೆ ಮಾತನಾಡಿದ ಆರ್.‌ ಅಶೋಕ್‌, ಸರ್ಕಾರದ ತಪ್ಪು ನಡೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಹೈಕಮಾಂಡ್‌ಗೆ ಕಪ್ಪಕಾಣಿಕೆ ಸಲ್ಲಿಸಲು ನಿಗಮದ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದಿದ್ದ ಅಶೋಕ್‌, 187 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದರು. ಈ ಹಣ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹೇಗೆ ವಿನಿಯೋಗವಾಗಬೇಕಿತ್ತು, ಹೇಗೆ ಅಕ್ರಮವಾಗಿದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದರು. ಆ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.

ಇಂದು ಸಹ ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಂದ ಈ ಚರ್ಚೆ ಮುಂದುವರಿಯಲಿದೆ. ಬಿಜೆಪಿಯ ಸಿಟಿ ರವಿ, ಸುನೀಲ್‌ ಕುಮಾರ್‌, ಯತ್ನಾಳ್ ಮುಂತಾದವರು ಈ ಚರ್ಚೆಯನ್ನು ಮುನ್ನಡೆಸಲಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡುವ ನಿರೀಕ್ಷೆ ಇದೆ. ನಿನ್ನೆ ಆಶೋಕ್ ಮಾತನಾಡುವಾಗಲೇ ಈ ಬಗ್ಗೆ ಸಿದ್ದರಾಮಯ್ಯ ಸುಳಿವು ನೀಡಿದ್ದರು. ʼನಿಮ್ಮ ವಾದವನ್ನ ಸಮಾಧಾನವಾಗಿ ಕೇಳ್ತೀನಿ. ನಾನು ಉತ್ತರ ಕೊಡುವಾಗಲೂ ಅಷ್ಟೇ ಸಮಾಧಾನದಿಂದ ಕೇಳಬೇಕುʼ ಎಂದಿದ್ದರು.

ʼ187 ಕೋಟಿ ಅಲ್ಲ ಅದು ಬರೀ 87 ಕೋಟಿ ಮಾತ್ರ ವರ್ಗಾವಣೆ ಆಗಿರುವುದು. ಹಣ ಎಲ್ಲಿಯವರೆಗೂ ಸರ್ಕಾರದ ಸುಪರ್ದಿಯಲ್ಲಿರುತ್ತೆ, ಬಳಿಕ ಆ ಹಣ ಯಾರಿಗೆ ಹೋಗುತ್ತೆ ಈ ಬಗ್ಗೆ ಸಂಪೂರ್ಣ ಮಾಹಿತಿ ಕೊಡ್ತೀನಿ. ಇದರಲ್ಲಿ ಯಾರ ಪಾತ್ರ ಎಷ್ಟಿದೆ. ಈ ಹಿಂದೆ ಹೇಗೆ ವ್ಯವಹಾರ ನಡೆದಿದೆ ಅದೆಲ್ಲವನ್ನ ಸಂಪೂರ್ಣವಾಗಿ ಕೊಡ್ತೀನಿʼ ಎಂದು ಹೇಳಿದ್ದರು. ಎಂದರೆ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಪ್ರಕರಣಗಳನ್ನೂ ಸಿಎಂ ಪ್ರಸ್ತಾವಿಸುವುದು ಖಚಿತವಾಗಿದೆ.

ಇದರಿಂದ ಸದನದಲ್ಲಿ ಇಂದು ಏಟು ಎದಿರೇಟು ಖಚಿತವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಆಡಳಿತ ಪಕ್ಷ ಸದದ್ಯರು ಸಾಥ್‌ ನೀಡಲಿದ್ದು, ವಿಪಕ್ಷ ಶಾಸಕರು ಕೆರಳಿ ಪ್ರತಿಭಟನೆ ನಡೆಸುವುದೂ ಬಹುತೇಕ ಖಚಿತವಾಗಿದೆ. ಸ್ಪೀಕರ್‌ ಯು.ಟಿ ಖಾದರ್‌ ಅವರು ಶಾಂತಚಿತ್ತರಾಗಿಯೇ ಸದನದ ಕಲಾಪವನ್ನು ನಿರ್ವಹಿಸುತ್ತಿದ್ದರೂ, ಹಲವು ಬಾರಿ ಶಾಸಕರ ವರ್ತನೆ ಅವರಿಗೂ ಸವಾಲಾಗುತ್ತಿದೆ.

ನಿನ್ನೆ ಅಧಿವೇಶನ ಆರಂಭಕ್ಕೂ ಮುನ್ನ ವಿಧಾನಸೌಧದ ನೂತನ ದ್ವಾರವನ್ನು ಸಿಎಂ ಉದ್ಘಾಟಿಸಿದ್ದರು. ವಿಧಾನಸಭೆಯ ಸಭಾಂಗಣವನ್ನು ಇನ್ನಷ್ಟು ಸುಂದರವಾಗಿ ವಿನ್ಯಾಸಗೊಳಿಸಲಾಗಿದ್ದು, ಇದಕ್ಕೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಲಾಪ ಆರಂಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಲಾಯಿತು. ನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಮಂಡಿಸಲಾಯಿತು.

ಇದನ್ನೂ ಓದಿ: Assembly Session: ಅಧಿವೇಶನದಲ್ಲಿ ಹಗರಣಗಳ ಸದ್ದು; ಮೊದಲ ದಿನವೇ ಮುಗಿಬಿದ್ದ ವಿಪಕ್ಷ ನಾಯಕರು, ಹೆದರಲ್ಲ ಎಂದ ಸಿಎಂ!

Continue Reading

ಕ್ರೈಂ

Horrible Murder Case: ಶೆಡ್‌ ಹೊರಗಿನಿಂದ ಲಾಕ್‌ ಮಾಡಿ ಬೆಂಕಿ ಇಟ್ಟ ದುಷ್ಟರು; ಇಬ್ಬರು ಸಜೀವ ದಹನ

Horrible Murder Case: ನೀಚರು ಮೊದಲಿಗೆ ಶೆಡ್ ಹೊರಗಿನಿಂದ ಲಾಕ್ ಮಾಡಿ, ಶೆಡ್ ಪಕ್ಕದಲ್ಲಿದ್ದ ಸಿಂಟ್ಯಾಕ್ಸ್‌ಗೆ ಸುಮಾರು 100 ಲೀಟರ್ ಪೆಟ್ರೋಲ್ ಸುರಿದಿದ್ದಾರೆ. 2 ಎಚ್‌ಪಿ ಮೆಷಿನ್‌ನಿಂದ ಶೆಡ್ ಸುತ್ತ ಪೆಟ್ರೋಲ್ ಹೊಡೆದು ಬೆಂಕಿ ಹಚ್ಚಿರುವ ಶಂಕೆ ಇದೆ. ಬೆಂಕಿಯ ಕೆನ್ನಾಲಿಗೆಗೆ ಇಡೀ ಶೆಡ್ ಸುಟ್ಟು ಕರಕಲಾಗಿದೆ.

VISTARANEWS.COM


on

murder case set fire bagalakote
Koo

ಬಾಗಲಕೋಟೆ: ಪಾತಕಿಗಳು ಶೆಡ್‌ನ ಬಾಗಿಲು ಹೊರಗಿನಿಂದ ಲಾಕ್‌ ಮಾಡಿ ಬೆಂಕಿ ಕೊಟ್ಟ (set fire) ಪರಿಣಾಮ ಒಂದೇ ಕುಟುಂಬದ ಇಬ್ಬರು ಸಜೀವವಾಗಿ (Burn to death) ಸುಟ್ಟುಹೋಗಿದ್ದಾರೆ. ಇನ್ನೂ ಇಬ್ಬರು ಸುಟ್ಟ ಗಾಯಗಳೊಂದಿಗೆ ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದಾರೆ. ಈ ಭಯಾನಕ ಹತ್ಯಾಕಾಂಡ ಪ್ರಕರಣ (Horrible Murder Case) ಬಾಗಲಕೋಟೆ (Bagalakote news) ಜಿಲ್ಲೆ ಮುಧೋಳ (Mudhol news) ತಾಲ್ಲೂಕಿನ ಬೆಳಗಲಿಯಲ್ಲಿ ನಡೆದಿದೆ.

ಬೆಳಗಲಿ ಪಟ್ಟಣದ ತೋಟದ ಮನೆಯಲ್ಲಿ ಈ ಘೋರ ಕೃತ್ಯ ಎಸಗಲಾಗಿದೆ. ಕುಟುಂಬ ಸಮೇತ ಸುಟ್ಟು ಹಾಕುವ ಉದ್ದೇಶದಿಂದಲೇ ದುಷ್ಟರು ತಡರಾತ್ರಿ ತಗಡಿನ ಶೆಡ್‌ನ ಬಾಗಿಲು ಹೊರಗಿನಿಂದ ಲಾಕ್‌ ಮಾಡಿ, ಪೆಟ್ರೋಲ್ ಸುರಿದು ಶೆಡ್‌ಗೆ ಬೆಂಕಿ ಹಚ್ಚಿದ್ದಾರೆ. ದುರಂತದಲ್ಲಿ ಜೈಬಾನ್ ಪೆಂಡಾರಿ (60), ಶಭಾನಾ ಪೆಂಡಾರಿ (22) ಸಾವಿಗೀಡಾಗಿದ್ದಾರೆ. ದಸ್ತಗೀರ್ ಸಾಬ್ ಪೆಂಡಾರಿ (60), ಶುಭನ್ ಪೆಂಡಾರಿ (26) ತೀವ್ರವಾಗಿ ಸುಟ್ಟ ಗಾಯಗಳೊಂದಿಗೆ ಮುಧೋಳ ತಾಲ್ಲೂಕಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಸ್ಪಿ ಅಮರನಾಥ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಡರಾತ್ರಿ 2:30ರ ಸುಮಾರಿಗೆ ಈ ಬರ್ಬರ ಕೃತ್ಯ ಎಸಗಲಾಗಿದೆ. ನೀಚರು ಮೊದಲಿಗೆ ಶೆಡ್ ಹೊರಗಿನಿಂದ ಲಾಕ್ ಮಾಡಿ, ಶೆಡ್ ಪಕ್ಕದಲ್ಲಿದ್ದ ಸಿಂಟ್ಯಾಕ್ಸ್‌ಗೆ ಸುಮಾರು 100 ಲೀಟರ್ ಪೆಟ್ರೋಲ್ ಸುರಿದಿದ್ದಾರೆ. 2 ಎಚ್‌ಪಿ ಮೆಷಿನ್‌ನಿಂದ ಶೆಡ್ ಸುತ್ತ ಪೆಟ್ರೋಲ್ ಹೊಡೆದು ಬೆಂಕಿ ಹಚ್ಚಿರುವ ಶಂಕೆ ಇದೆ. ಬೆಂಕಿಯ ಕೆನ್ನಾಲಿಗೆಗೆ ಇಡೀ ಶೆಡ್ ಸುಟ್ಟು ಕರಕಲಾಗಿದೆ.

ಮೃತರು ಹಾಗೂ ಗಾಯಾಳುಗಳು ಒಂದೇ ಕುಟುಂಬದವರು. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪರಿಚಿತರೇ ಕೃತ್ಯ ಎಸಗಿರುವ ಶಂಕೆ ಇದೆ. ಕುಟುಂಬದ ಬಗೆಗೆ ವೈಯಕ್ತಿಕ ದ್ವೇಷ ಹೊಂದಿದ್ದವರು, ಕುಟುಂಬವನ್ನು ಸ್ಥಳದಿಂದ ಒಕ್ಕಲೆಬ್ಬಿಸಲು ಬಯಸಿದವರು, ಕೌಟುಂಬಿಕ ದ್ವೇಷ ಹಾಗೂ ಜಮೀನು ವ್ಯಾಜ್ಯ ಹೊಂದಿದವರನ್ನು ಪ್ರಶ್ನಿಸಲಾಗುತ್ತಿದೆ.

ಬೆಂಗಳೂರಲ್ಲಿ ಹಾಡಹಗಲೇ‌‌ ಪುಂಡಾಟ, 15 ಮಂದಿಯಿಂದ ಯುವಕನ ಮೇಲೆ ಹಲ್ಲೆ

ಬೆಂಗಳೂರು: ಬೆಂಗಳೂರಿನ ಬೀದಿಯಲ್ಲಿ ಹಾಡಹಗಲೇ ನಡೆದ ರಾಜಾರೋಷ ಹಲ್ಲೆಯೊಂದರ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಇದು ಮೆಟ್ರೋ ನಗರದ ಮಾನ ತೆಗೆಯುತ್ತಿದೆ. ವಿದ್ಯಾರಣ್ಯಪುರದಲ್ಲಿ ಘಟನೆ ನಡೆದಿದೆ.

15 ಜನ ಪುಂಡರು ಒಬ್ಬ ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಿಸಿಟಿವಿಯಲ್ಲೂ ಯುವಕನ ಮೇಲಿನ ಹಲ್ಲೆಯ ದೃಶ್ಯ ಸೆರೆಯಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ನರಸೀಪುರ ಬಳಿ ನಡೆದ ಘಟನೆಯಿದು. ಹಲ್ಲೆಗೊಳಗಾದವನು ಹಾಗೂ ಹಲ್ಲೆ ಮಾಡಿದವರ ಕುರಿತ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

ಹಲ್ಲೆಯಿಂದ‌ ಯುವಕನ‌ ಮುಖ ಮತ್ತು ಮೂಗಿನ‌ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ಮತ್ತು ಈಶಾನ್ಯ ಡಿಸಿಪಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗಿದೆ. ʼಬಿಎನ್‌ಎಸ್ 109 ಅಂದರೆ ಕೊಲೆ‌ ಯತ್ನ?ʼ ಎಂದು ಉಲ್ಲೇಖಿಸಿ ಪೋಸ್ಟ್‌ ಮಾಡಲಾಗಿದೆ.

ಇದನ್ನೂ ಓದಿ: Crime News: ಶಾಕಿಂಗ್‌; 8 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ಅಪ್ರಾಪ್ತ ಬಾಲಕರು

Continue Reading

ಪ್ರಮುಖ ಸುದ್ದಿ

Valmiki Corporation Scam: ವಾಲ್ಮೀಕಿ ನಿಗಮ ಹಗರಣದಲ್ಲಿ ಮತ್ತೊಬ್ಬನ ಬಂಧನ; ಛತ್ತೀಸ್‌ಗಢದಲ್ಲೂ ವಂಚಿಸಿದ್ದ!

Valmiki Corporation Scam: ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಜೊತೆ ಸತತ ಸಂಪರ್ಕದಲ್ಲಿದ್ದ ಈ ಆರೋಪಿ ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಮಾಡಲು ಸಹಕಾರ ನೀಡಿದ್ದ. ಇದೇ ರೀತಿ ಈ ಹಿಂದೆಯೂ ಈ ಆರೋಪಿಗಳು ಕೃತ್ಯ ಎಸಗಿದ್ದರು.

VISTARANEWS.COM


on

valmiki corporation scam culprits
ಬಂಧಿತ ಆರೋಪಿಗಳು
Koo

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಕೇಸ್‌ಗೆ (Valmiki Corporation Scam) ಸಂಬಂಧಿಸಿ ಮತ್ತೊಬ್ಬನನ್ನು ಎಸ್ಐಟಿ (SIT) ಬಂಧಿಸಿದೆ. ಆಂಧ್ರ ಮೂಲದ ಶ್ರೀನಿವಾಸ್ ರಾವ್ ಬಂಧಿತ ಆರೋಪಿ. ಈತ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ.

ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಜೊತೆ ಸತತ ಸಂಪರ್ಕದಲ್ಲಿದ್ದ ಈ ಆರೋಪಿ ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಮಾಡಲು ಸಹಕಾರ ನೀಡಿದ್ದ. ಇದೇ ರೀತಿ ಈ ಹಿಂದೆಯೂ ಈ ಆರೋಪಿಗಳು ಕೃತ್ಯ ಎಸಗಿದ್ದರು. ಛತ್ತೀಸ್‌ಗಢದಲ್ಲಿ ಸತ್ಯನಾರಾಯಣ ವರ್ಮಾ ಹಾಗೂ ಶ್ರೀನಿವಾಸ ರಾವ್ ಸೇರಿ ಇಂಥದೇ ಕೃತ್ಯ ಎಸಗಿದ್ದಾರೆ. ಅದೇ ರೀತಿ ನಿಗಮದ ಅಕೌಂಟ್‌ನಿಂದ ಹಣ ಅಕ್ರಮ ವರ್ಗಾವಣೆ ಮಾಡಿದ್ದರು.

ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಶ್ರೀನಿವಾಸ ರಾವ್ ಎಸ್ಕೇಪ್ ಆಗಿದ್ದ. ಇದೀಗ ಎಸ್‌ಐಟಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ. ಸದ್ಯ ಆರೋಪಿಯನ್ನು ಒಂಬತ್ತು ದಿನ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಈಗಾಗಲೇ ಮಹತ್ವದ ಬೆಳವಣಿಗೆಗಳು ನಡೆದಿವೆ. ಮೂವರನ್ನು ಬಂಧಿಸಲಾಗಿದೆ. ಇವರಲ್ಲಿ ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ, ಲೆಕ್ಕ ಪರಿಶೋಧಕ ಪರಶುರಾಮ್‌ ಸೇರಿದ್ದಾರೆ. ಪ್ರಕರಣದಲ್ಲಿ ಇಡಿ ಸಹ ತನಿಖೆಗೆ ಇಳಿದಿದೆ. ಒಂದು ವಾರದ ಹಿಂದೆ ಮಾಜಿ ಸಚಿವ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಬಿ. ನಾಗೇಂದ್ರ ಮನೆ ಹಾಗೂ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದ್ದು, ಅವರನ್ನು ಬಂಧಿಸಿ ತನಿಖೆ ನಡೆಸುತ್ತಿದೆ. ಹಗರಣದಲ್ಲಿ ಪಾಲ್ಗೊಂಡಿರುವ ಯೂನಿಯನ್‌ ಬ್ಯಾಂಕ್‌ ಸಿಬ್ಬಂದಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನೂ ಆರು ಮಂದಿ ನಾಪತ್ತೆಯಾಗಿದ್ದಾರೆ.

ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್‌ ಮನೆ ಹಾಗೂ ಕಚೇರಿಗಳ ಮೇಲೂ ಇಡಿ ದಾಳಿ ನಡೆಸಿತ್ತು. ಬೀಸುವ ದೊಣ್ಣೆಯಿಂದ ಪಾರಾಗಲು ಮೂರು ದಿನ ಕಣ್ಮರೆಯಾಗಿದ್ದ ದದ್ದಲ್‌, ಇದೀಗ ವಿಧಾನಸಭೆ ಕಲಾಪಕ್ಕೆ ಹಾಜರಾಗಿ ಬಂಧನ ಭೀತಿಯಿಂದ ತಪ್ಪಿಸಿಕೊಂಡಿದ್ದಾರೆ. ಅಧಿವೇಶನ ಮುಗಿಯುವವರೆಗೂ ಅವರಿಗೆ ಬಂಧನದ ಆತಂಕವಿಲ್ಲ.

ವಾಲ್ಮೀಕಿ ನಿಗಮ ಅಕ್ರಮದಲ್ಲಿ ನನ್ನ ಪಾತ್ರ ಇಲ್ಲ; ಸಿಎಂ ಮುಂದೆ ಶಾಸಕ ದದ್ದಲ್ ಕಣ್ಣೀರು

ಬೆಂಗಳೂರು: ವಾಲ್ಮೀಕಿ ನಿಗಮ ಪ್ರಕರಣ (Valmiki Corp scam) ಸಂಬಂಧ ಎಸ್‌ಐಟಿ ವಿಚಾರಣೆಗೆ ಹಾಜರಾದ ಬಳಿಕ ಮೂರು ದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ಶಾಸಕ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರು ಸೋಮವಾರ ವಿಧಾನ ಮಂಡಲ ಅಧಿವೇಶನಕ್ಕೆ ಹಾಜರಾಗಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ಶಾಸಕ ದದ್ದಲ್‌(Basanagouda Daddal), ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ, ಈ ಘಟನೆಯಿಂದ ನಮ್ಮ ಕುಟುಂಬದ ಸದಸ್ಯರು ಹೆದರಿಕೊಂಡಿದ್ದಾರೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ದದ್ದಲ್, ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ದದ್ದಲ್ ನಾಪತ್ತೆ ಅಂತ ಬಿಜೆಪಿ‌ಯವರು ಸುಮ್ಮನೇ ಪೋಸ್ಟರ್ ವೈರಲ್ ಮಾಡುತ್ತಿದ್ದಾರೆ. ಯಾವ ಇಡಿಯವರೂ ನನ್ನ ಬೆನ್ನತ್ತಿಲ್ಲ. ಬಿಜೆಪಿ ನಾಯಕರು ಬೇಕು ಅಂತಲೇ ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ನಾಪತ್ತೆಯಾಗಿಲ್ಲ. ಈ ಘಟನೆಯಿಂದ ನಮ್ಮ ಕುಟುಂಬದ ಸದಸ್ಯರು ಹೆದರಿಕೊಂಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಅಂತ ಸಿಎಂ ಮುಂದೆ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: Wakf Board Scam: ವಾಲ್ಮೀಕಿ ನಿಗಮದ ಬಳಿಕ ವಕ್ಫ್ ಬೋರ್ಡ್‌ನಲ್ಲಿ ಹಗರಣ ಬೆಳಕಿಗೆ; ಮಾಜಿ ಸಿಇಒ ವಿರುದ್ಧ ಎಫ್‌ಐಆರ್!

Continue Reading

ವೈರಲ್ ನ್ಯೂಸ್

Viral Video: ಬೆಂಗಳೂರಲ್ಲಿ ಹಾಡಹಗಲೇ‌‌ ಪುಂಡಾಟ, 15 ಮಂದಿಯಿಂದ ಯುವಕನ ಮೇಲೆ ಹಲ್ಲೆ

Viral video: 15 ಜನ ಪುಂಡರು ಒಬ್ಬ ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಿಸಿಟಿವಿಯಲ್ಲೂ ಯುವಕನ ಮೇಲಿನ ಹಲ್ಲೆಯ ದೃಶ್ಯ ಸೆರೆಯಾಗಿದೆ.

VISTARANEWS.COM


on

assault case viral video
Koo

ಬೆಂಗಳೂರು: ಬೆಂಗಳೂರಿನ (Bangalore crime news) ಬೀದಿಯಲ್ಲಿ ಹಾಡಹಗಲೇ ನಡೆದ ರಾಜಾರೋಷ ಹಲ್ಲೆಯೊಂದರ (Assault Case) ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾಗಳಲ್ಲಿ (Viral Video) ಹಂಚಿಕೊಂಡಿದ್ದಾರೆ. ಸದ್ಯ ಇದು ಮೆಟ್ರೋ ನಗರದ (Metro City) ಮಾನ ತೆಗೆಯುತ್ತಿದೆ. ವಿದ್ಯಾರಣ್ಯಪುರದಲ್ಲಿ (Vidyaranyapura) ಘಟನೆ ನಡೆದಿದೆ.

15 ಜನ ಪುಂಡರು ಒಬ್ಬ ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಿಸಿಟಿವಿಯಲ್ಲೂ ಯುವಕನ ಮೇಲಿನ ಹಲ್ಲೆಯ ದೃಶ್ಯ ಸೆರೆಯಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ನರಸೀಪುರ ಬಳಿ ನಡೆದ ಘಟನೆಯಿದು. ಹಲ್ಲೆಗೊಳಗಾದವನು ಹಾಗೂ ಹಲ್ಲೆ ಮಾಡಿದವರ ಕುರಿತ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

ಹಲ್ಲೆಯಿಂದ‌ ಯುವಕನ‌ ಮುಖ ಮತ್ತು ಮೂಗಿನ‌ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ಮತ್ತು ಈಶಾನ್ಯ ಡಿಸಿಪಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗಿದೆ. ʼಬಿಎನ್‌ಎಸ್ 109 ಅಂದರೆ ಕೊಲೆ‌ ಯತ್ನ?ʼ ಎಂದು ಉಲ್ಲೇಖಿಸಿ ಪೋಸ್ಟ್‌ ಮಾಡಲಾಗಿದೆ.

ಕಲಬುರಗಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ಕಲಬುರಗಿ: ಜಮೀನೊಂದರಲ್ಲಿ ಸುಟ್ಟಸ್ಥಿತಿಯಲ್ಲಿ ಮಹಿಳೆಯ ಶವ (Dead Body Foundಪತ್ತೆಯಾಗಿದೆ. ಕಲಬುರಗಿಯ (Kalaburagi News) ಕಮಲಾಪುರ ತಾಲೂಕಿನ ನಾಗೂರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಮಹಿಳೆ ತಲೆ ಮೇಲೆ ಕಲ್ಲುಎತ್ತಿ ಹಾಕಿ ಕೊಲೆ ಮಾಡಲಾಗಿದ್ದು, ಬಳಿಕ ಗುರುತು ಸಿಗಬಾರದೆಂದು ಸುಟ್ಟು ಹಾಕಿದ್ದಾರೆ.

ಕಲಬುರಗಿ ನಗರದ ಜಗತ್ ಬಡಾವಣೆಯ ನಿವಾಸಿ ಬಸಮ್ಮ (45) ಮೃತ ದುರ್ದೈವಿ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಎಸ್ಪಿ ಬಿಂದುರಾಣಿ, ಎಸ್ಪಿ ಅಡ್ಡೂರು ‌ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಾಗಾವ್ ಪೊಲೀಸ್ ಠಾಣಾವ್ಯಾಪ್ತಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಹತ್ಯೆಗೆ ಕಾರಣವೇನು? ಹತ್ಯೆ ಮಾಡಿದ್ದು ಯಾರು ಎಂಬುದು ತಿಳಿದು ಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಕಲಬುರಗಿಯಲ್ಲಿ ನದಿಗೆ ಹಾರಿ ಯುವಕ-ಯುವತಿ ಆತ್ಮಹತ್ಯೆ

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟಾ ಸೇತುವೆಯಿಂದ ಬೆಣ್ಣೆತೋರಾ ನದಿಗೆ ಹಾರಿ ಯುವಕ- ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೀಲ್ ಕುಮಾರ್ ಮೂಲಗೆ (37) ನದಿಗೆ ಹಾರಿ ಮೃತಪಟ್ಟವರು. ಬೆಣ್ಣೆತೋರಾ ನದಿಯಲ್ಲಿ ಅನೀಲ್ ಕುಮಾರ್ ಶವ ಪತ್ತೆಯಾಗಿದೆ. ಅನೀಲ್ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕುಣಿ ಸಂಗಾವಿ ಗ್ರಾಮದ ನಿವಾಸಿಯಾಗಿದ್ದಾರೆ. ಅನೀಲ್ ಜತೆ ನದಿಗೆ ಹಾರಿದ ಯುವತಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಸ್ಥಳಕ್ಕೆ ಮಹಾಗಾಂವ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈಜು ತಜ್ಞರ ಮೂಲಕ ಶವ ಹುಡುಕಾಟ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ.

kalaburagi news

ಹಾಸನದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಮಗುವಿನ ಅನಾರೋಗ್ಯದಿಂದ ಮನನೊಂದ ತಂದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಸನದ ಹಿಮ್ಸ್ ಆಸ್ಪತ್ರೆಯ ಕಟ್ಟಡದ ಮೇಲೇರಿದ ಬಸವರಾಯನಪುರ ಗ್ರಾಮದ ಗಂಗಸ್ವಾಮಿಯಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೆಬೀಡು ಸಮೀಪದ ಗ್ರಾಮದಲ್ಲಿ ಘಟನೆ ನಡೆದಿದೆ. ಗಂಗಸ್ವಾಮಿ ತನ್ನ ಎರಡು ತಿಂಗಳ ಮಗುವಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಹಿಮ್ಸ್‌ಗೆ ದಾಖಲು ಮಾಡಿದ್ದರು. ಆದರೆ ಮಗುವಿನ ಅರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದರು. ಇತ್ತ ಆಸ್ಪತ್ರೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ. ಗಂಗಸ್ವಾಮಿಯನ್ನು ಮನವೊಲಿಸಿ‌ ಕೆಳಗಿಳಿಸಿ ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ದಲಾಗಿದೆ.

ಇದನ್ನೂ ಓದಿ: Rain News: ಮಳೆಯ ಅಬ್ಬರಕ್ಕೆ ಧಡಾರ್‌ ಎಂದು ನೆಲಕಚ್ಚಿದ ಕೊಟ್ಟಿಗೆಹಾರ ಬಸ್‌ ನಿಲ್ದಾಣ!

Continue Reading
Advertisement
Rishabh Pant
ಕ್ರೀಡೆ8 mins ago

Rishabh Pant: ಡೆಲ್ಲಿ ತೊರೆದು ಮುಂದಿನ ಐಪಿಎಲ್​ನಲ್ಲಿ ಈ ಫ್ರಾಂಚೈಸಿ ಪರ ಆಡಲಿದ್ದಾರೆ ರಿಷಭ್​ ಪಂತ್​

Job Alert
ಉದ್ಯೋಗ18 mins ago

Job Alert: ಅಂಚೆ ಇಲಾಖೆಯಿಂದ ಬೃಹತ್‌ ನೇಮಕಾತಿ; ಕರ್ನಾಟಕದಲ್ಲಿಯೂ ಇದೆ 1,940 ಹುದ್ದೆ: ಹೀಗೆ ಅಪ್ಲೈ ಮಾಡಿ

Viral Video
Latest34 mins ago

Viral Video: ಕಾಮುಕರ ಹಾವಳಿ ಮಿತಿ‌ ಮೀರಿದೆ; ಬೀದಿ ನಾಯಿಯನ್ನೂ ಇವರು ಬಿಡುತ್ತಿಲ್ಲ! ಆಘಾತಕಾರಿ ವಿಡಿಯೊ

Jitan Sahani
ದೇಶ42 mins ago

Jitan Sahani: ಬಿಹಾರದಲ್ಲಿ ವಿಕಾಸಶೀಲ ಇನ್ಸಾನ್‌ ಪಕ್ಷದ ಮುಖ್ಯಸ್ಥನ ತಂದೆಯ ಭೀಕರ ಹತ್ಯೆ; ಮನೆ ತುಂಬ ರಕ್ತ!

karnataka assembly live
ಪ್ರಮುಖ ಸುದ್ದಿ1 hour ago

Karnataka Assembly Live: ಸದನದಲ್ಲಿ ಇಂದು ಕಿಡಿಯೆಬ್ಬಿಸಲಿರುವ ವಾಲ್ಮೀಕಿ ಹಗರಣ; ಉತ್ತರ ನೀಡಲು ಸಿಎಂ ಸಜ್ಜು; ಇಲ್ಲಿದೆ ಕ್ಷಣಕ್ಷಣದ ಲೈವ್‌

David Warner
ಕ್ರೀಡೆ1 hour ago

David Warner: ​ಚಾಂಪಿಯನ್ಸ್ ಟ್ರೋಫಿಗೆ ವಾರ್ನರ್​ ಆಯ್ಕೆ ಇಲ್ಲ ಎಂದ ಜಾರ್ಜ್​ ಬೈಲಿ

Kannada New Movie
ಸ್ಯಾಂಡಲ್ ವುಡ್1 hour ago

Kannada New Movie: ಸೆಟ್ಟೇರಿತು ‘ಆಕಾಶ್’, ‘ಅರಸು’ ಚಿತ್ರಗಳ ಡೈರೆಕ್ಟರ್ ಹೊಸ ಸಿನಿಮಾ; ಕಿರುತೆರೆಯ ಈ ಪ್ರತಿಭೆ ನಾಯಕ

Kannada In Madrasa
ಕರ್ನಾಟಕ1 hour ago

Kannada In Madrasa: ರಾಜ್ಯದ ಮದರಸಾಗಳಲ್ಲಿ ಇನ್ನು ಕನ್ನಡ ಕಲಿಕೆ ಕಡ್ಡಾಯ; ಶೀಘ್ರವೇ ಆದೇಶ!

murder case set fire bagalakote
ಕ್ರೈಂ2 hours ago

Horrible Murder Case: ಶೆಡ್‌ ಹೊರಗಿನಿಂದ ಲಾಕ್‌ ಮಾಡಿ ಬೆಂಕಿ ಇಟ್ಟ ದುಷ್ಟರು; ಇಬ್ಬರು ಸಜೀವ ದಹನ

Iti Acharya
ಸಿನಿಮಾ2 hours ago

Iti Acharya: ಬಾಲಿವುಡ್‌ಗೆ ಕಾಲಿಟ್ಟ ಮತ್ತೊಬ್ಬ ಕನ್ನಡತಿ; ದಕ್ಷಿಣ ಭಾರತದ ಚಿತ್ರಗಳ ಬಳಿಕ ಹಿಂದಿಯಲ್ಲೂ ಅಭಿನಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ17 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ24 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ3 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌