Money Guide: ಇಎಂಐ ಮೂಲಕ ಮೊಬೈಲ್‌ ಖರೀದಿಸುವ ಯೋಚನೆಯಲ್ಲಿದ್ದೀರಾ? ಈ ಅಂಶ ನಿಮಗೆ ತಿಳಿದಿರಲೇ ಬೇಕು - Vistara News

ಮನಿ-ಗೈಡ್

Money Guide: ಇಎಂಐ ಮೂಲಕ ಮೊಬೈಲ್‌ ಖರೀದಿಸುವ ಯೋಚನೆಯಲ್ಲಿದ್ದೀರಾ? ಈ ಅಂಶ ನಿಮಗೆ ತಿಳಿದಿರಲೇ ಬೇಕು

Money Guide: ಕೆಲವೊಮ್ಮೆ‌ ದುಬಾರಿ ಬೆಲೆಯ ಕಾರಣದಿಂದ ನಾವು ಅಂದುಕೊಂಡಿರುವ ವೈಶಿಷ್ಟ್ಯಗಳನ್ನು ಒಳಗೊಂಡ ಮೊಬೈಲ್‌ ಫೋನ್ ಖರೀದಿಸಲು ಸಾಧ್ಯವಾಗುವುದಿಲ್ಲ. ಆಗ ನೆರವಿಗೆ ಬರುವುದೇ ಇಎಂಐ ಪಾವತಿ ಮೂಲಕ ಖರೀದಿ ಆಯ್ಕೆ. ಹಾಗಾದರೆ ಇಎಂಐ ಮೂಲಕ ಮೊಬೈಲ್‌ ಖರೀದಿಸುವ ಆಯ್ಕೆ ಉತ್ತಮವೇ? ಈ ಆಪ್ಶನ್‌ ಆಯ್ಕೆ ಮಾಡುವ ಮುನ್ನ ಗಮನಿಸಬೇಕಾದ ಅಂಶಗಳೇನು ಎನ್ನುವ ವಿವರ ಇಲ್ಲಿದೆ

VISTARANEWS.COM


on

Money Guide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮೊಬೈಲ್‌ ಫೋನ್‌ ಈಗ ಕೇವಲ ಕರೆ, ಎಸ್‌ಎಂಎಸ್‌ ಮಾಡುವ ಗ್ಯಾಜೆಟ್‌ ಆಗಿ ಉಳಿದಿಲ್ಲ. ವಿಡಿಯೊ ಚಿತ್ರೀಕರಣ, ಸಿನಿಮಾ ವೀಕ್ಷಣೆಯಿಂದ ಹಿಡಿದು ಉದ್ಯೋಗ ನಿರ್ವಹಿಸಲು ಅಗತ್ಯವಾದ ಉಪಕರಣವಾಗಿ ಸ್ಮಾರ್ಟ್‌ ಫೋನ್‌ ಬದಲಾಗಿದೆ. ಬಹು ವರ್ಷಗಳ ಹಿಂದೆಯೇ ಮೊಬೈಲ್‌ ಫೋನ್‌ ಬಹುಪಯೋಗಿ ಸಾಧನವಾಗಿ, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬದಲಾಗಿದೆ. ಹಳ್ಳಿಯಿಂದ ಹಿಡಿದು ನಗರದವರೆಗೆ, ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರು ಸ್ಮಾರ್ಟ್‌ ಫೋನ್‌ ಬಳಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಮೊಬೈಲ್‌ ಕಂಪನಿಗಳು ಹೊಸ ಹೊಸ್ ಫೀಚರ್‌ಗಳನ್ನು ಒಳಗೊಂಡ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಗಮನ ಸೆಳೆಯುತ್ತವೆ. ಕೆಲವೊಮ್ಮೆ‌ ದುಬಾರಿ ಬೆಲೆಯ ಕಾರಣದಿಂದ ನಾವು ಅಂದುಕೊಂಡಿರುವ ವೈಶಿಷ್ಟ್ಯಗಳನ್ನು ಒಳಗೊಂಡ ಮೊಬೈಲ್‌ ಫೋನ್ ಖರೀದಿಸಲು ಸಾಧ್ಯವಾಗುವುದಿಲ್ಲ. ಆಗ ನೆರವಿಗೆ ಬರುವುದೇ ಇಎಂಐ (EMI) ಪಾವತಿ ಮೂಲಕ ಖರೀದಿ ಆಯ್ಕೆ. ಇಎಂಐ ಮೂಲಕ ಮೊಬೈಲ್‌ ಖರೀದಿಸುವ ಮುನ್ನ ಗಮನಿಸಬೇಕಾದ ಅಂಶಗಳೇನು ಎನ್ನುವ ವಿವರ ಇಲ್ಲಿದೆ (Money Guide).

ಇಎಂಐ ಎಂದರೆ ಸಮಾನ ಮಾಸಿಕ ಕಂತು. ಒಮ್ಮೆಲೆ ಸಂಪೂರ್ಣ ಮೊತ್ತ ಭರಿಸಲು ಸಾಧ್ಯವಾಗದಿದ್ದರೆ ಯಾವುದೇ ಉತ್ಪನ್ನ ಖರೀದಿಸಿ ನಿರ್ದಿಷ್ಟ ಸಮಯದವರೆಗೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತ ಪಾವತಿಸುವ ಸೌಲಭ್ಯ ಇದು. ಇದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಬಡ್ಡಿಯನ್ನೂ ವಿಧಿಸಲಾಗತ್ತದೆ. ಅಮೇಜಾನ್‌, ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್‌ ತಾಣಗಳು, ಶೋರೂಂಗಳು ಈ ಸೌಲಭ್ಯ ಒದಗಿಸುತ್ತಿವೆ.

ಇಎಂಐ ಮೂಲಕ ಮೊಬೈಲ್‌ ಖರೀದಿ ಉತ್ತಮವೇ?

ಹಾಗಾದರೆ ಇಎಂಐ ಮೂಲಕ ಮೊಬೈಲ್‌ ಖರೀದಿ ಉತ್ತಮವೇ ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈ ಆಪ್ಶನ್‌ ಆಯ್ಕೆ ಮಾಡುವ ಮುನ್ನ ಬಡ್ಡಿದರಗಳು, ಗುಪ್ತ ಶುಲ್ಕಗಳು ಮತ್ತು ಫೋನ್‌ ಖರೀದಿಗೆ ಆಗುವ ಒಟ್ಟು ವೆಚ್ಚವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ನಿಯಮಗಳು ಮತ್ತು ಷರತ್ತುಗಳನ್ನೂ ಅರ್ಥ ಮಾಡಿಕೊಳ್ಳಬೇಕು. ಇದರಿಂದ ಯಾವುದೇ ಹಣಕಾಸಿನ ಅಪಾಯಗಳನ್ನು ತಪ್ಪಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಮೊಬೈಲ್‌ ಫೋನ್‌ ಖರೀದಿಯ ಮುನ್ನ ಈ ಅಂಶ ಗಮನಿಸಿ

  • ಹೋಲಿಕೆ ಮಾಡಿ: ಕೆಲವು ವಿಭಿನ್ನ ಸಾಲದಾತರು, ಅಪ್ಲಿಕೇಷನ್‌, ಇ ಕಾಮರ್ಸ್‌ ತಾಣಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ವಿವಿಧ ಕೊಡುಗೆಗಳನ್ನು ನೀಡುತ್ತವೆ. ಹೀಗಾಗಿ ನೀವು ವಿವಿಧ ಕೊಡುಗೆಗಳನ್ನು ಹೋಲಿಸಿ ನೋಡಿ ನಿಮಗೆ ಸೂಕ್ತವಾದುದನ್ನು ಆಯ್ಕೆ ಮಾಡಿ. ಬಡ್ಡಿದರಗಳು, ಸಂಸ್ಕರಣಾ ಶುಲ್ಕಗಳನ್ನು ಗಮನಿಸಿ.
  • ಬಜೆಟ್ ಲೆಕ್ಕ ಹಾಕಿ: ಮೊದಲಿಗೆ ನಿಮ್ಮ ಬಜೆಟ್‌ ಅನ್ನು ಲೆಕ್ಕ ಹಾಕಿ. ಕೊಡುಗೆ ಇದೆ ಎಂದಾಕ್ಷಣ ದುಬಾರಿ ಫೋನ್‌ಗಳನ್ನು ಖರೀದಿಸಲು ಮುಂದಾಗಬೇಡಿ. ಮುಂದೊದು ದಿನ ಸಾಲ ಮುಗಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಬಹುದು. ಹೀಗಾಗಿ ನಿಮ್ಮ ಆದಾಯ, ಖರ್ಚು ಲೆಕ್ಕ ಹಾಕಿ ಬಜೆಟ್‌ಗೆ ಅನುಗುಣವಾದ ಫೋನ್‌ ಆಯ್ಕೆ ಮಾಡಿ.
  • ಷರತ್ತುಗಳನ್ನಮು ಎಚ್ಚರಿಕೆಯಿಂದ ಓದಿ: ನೀವು ಯಾವುದೇ ಒಪ್ಪಂದಕ್ಕೆ ಸಹಿ ಹಾಕುವ ಮೊದಲು, ಷರತ್ತುಗಳನ್ನು ಸಂಪೂರ್ಣ ಓದಿ. ಬಡ್ಡಿದರ, ಸಂಸ್ಕರಣಾ ಶುಲ್ಕಗಳು ಮತ್ತು ಅನ್ವಯಿಸಬಹುದಾದ ಯಾವುದೇ ಇತರ ಶುಲ್ಕಗಳನ್ನು ಅರ್ಥ ಮಾಡಿಕೊಳ್ಳಿ. ನೀವು ಪಾವತಿಯನ್ನು ತಪ್ಪಿಸಿಕೊಂಡರೆ ಅನ್ವಯವಾಗುವ ದಂಡ ಇತ್ಯಾದಿ ವಿವರಗಳನ್ನು ಮನನ ಮಾಡಿ.
  • ಕಡಿಮೆ ಮಾಸಿಕ ಪಾವತಿಗಾಗಿ ಸಾಲದ ಅವಧಿಯನ್ನು ವಿಸ್ತರಿಸಬೇಡಿ: ಕೆಲವರು ಕಡಿಮೆ ಮಾಸಿಕ ಪಾವತಿಯನ್ನು ಪಡೆಯಲು ಸಾಲದ ಅವಧಿಯನ್ನು ವಿಸ್ತರಿಸಲು ಮುಂದಾಗುತ್ತಾರೆ. ಅನಿವಾರ್ಯವಲ್ಲದ ಹೊರತು ಈ ಆಯ್ಕೆಯನ್ನು ನೆಚ್ಚಿಕೊಳ್ಳಬೇಡಿ. ಯಾಕೆಂದರೆ ಇದಕ್ಕೆ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ.
  • ವಿಮೆ (Insurance) ಪಡೆದುಕೊಳ್ಳಿ: ನಿಮ್ಮ ಫೋನ್ ಹಾನಿಗೊಳಗಾದರೆ ಅಥವಾ ಕಳವಾದರೆ ನೀವು ಇಎಂಐ ಕಟ್ಟಲೇಬೇಕು. ಹೀಗಾಗಿ ಈ ಅನಿರೀಕ್ಷಿತ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಫೋನ್ ವಿಮೆ ಪಡೆಯುವುದನ್ನು ಮರೆಯಬೇಡಿ.

ಇಎಂಐ ಸೌಲಭ್ಯ ಪಡೆಯುವುದು ಹೇಗೆ?

  • ಆನ್‌ಲೈನ್ ವೆಬ್‌ಸೈಟ್ ಅಥವಾ ಆ್ಯಪ್ ಓಪನ್‌ ಮಾಡಿ.
  • ಯಾವ ಸ್ಮಾರ್ಟ್ ಫೋನ್ ಖರೀದಿಸಲು ನೀವು ಇಚ್ಛಿಸುತ್ತಿದ್ದೀರಿ ಅದನ್ನು ಆಯ್ಕೆ ಮಾಡಿಕೊಳ್ಳಿ.
  • ‘Buy Now’ ಆಯ್ಕೆಯನ್ನು ಟ್ಯಾಪ್ ಮಾಡಿ.
  • ನಿಮ್ಮ ವಿಳಾಸವನ್ನು ನಮೂದಿಸಿ.
  • ಕಂಟಿನ್ಯೂ ಆಯ್ಕೆಯನ್ನು ಒತ್ತಿ. ಇಲ್ಲಿ ಪಾವತಿ ಮೋಡ್ ಅನ್ನು ಇಎಂಐ ಎಂದು ಆಯ್ಕೆ ಮಾಡಿ ಕಂಟಿನ್ಯೂ ಬಟನ್ ಒತ್ತಿ.
  • ನಿಮ್ಮ ಕ್ರೆಡಿಟ್ ಕಾರ್ಡ್‌ನ ಬ್ಯಾಂಕ್ ಆಯ್ಕೆ ಮಾಡಿ.
  • ಇಎಂಐಯ ಅವಧಿ ಆಯ್ಕೆ ಮಾಡಿ.
  • ಕಾರ್ಡಿನ ವಿವರಗಳನ್ನು ನಮೂದಿಸಿ ಮತ್ತು ಕಂಟಿನ್ಯೂ ಬಟನ್ ಕ್ಲಿಕ್‌ ಮಾಡಿ.
  • ಮೊಬೈಲ್‌ ನಂಬರ್‌ಗೆ ಬರುವ ಒಟಿಪಿಯನ್ನು ನಮೂದಿಸಿ ಪಾವತಿಯನ್ನು ಪೂರ್ಣಗೊಳಿಸಿ.

ಶೂರೂಮ್‌ಗೂ ತೆರಳಿ ಆಫ್‌ಲೈನ್‌ ಮೂಲಕವೂ ಖರೀದಿಸಬಹುದು.

ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್; ಯಾವ ಆದಾಯದವರಿಗೆ ಯಾವ ಫಾರ್ಮ್?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಹಿರಿಯರಿಗೆ ಆರೋಗ್ಯ ವಿಮೆ: ಯಾಕಾಗಿ? ಏನಿದರ ಉಪಯೋಗ?

Money Guide: ಕೆಲವೊಂದು ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವುದಿಂದ ಆರ್ಥಿಕ ಸಮಸ್ಯೆಯಿಂದ ಪಾರಾಗಬಹುದು. ಆ ಪೈಕಿ ಆರೋಗ್ಯ ವಿಮೆ ಮಾಡಿಸುವುದು ಮುಖ್ಯವಾದುದು. ಈಗ ಕಿರಿಯರು ಮಾತ್ರವಲ್ಲ ಹಿರಿಯರಿಗೂ ಹೆಲ್ತ್‌ ಇನ್ಶೂರೆನ್ಸ್‌ ಲಭ್ಯ. ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಲು ಮಾತ್ರವಲ್ಲ ಹಿರಿಯ ನಾಗರಿಕರಿಗೆ ಉತ್ತಮ ಚಿಕಿತ್ಸೆಯನ್ನು ಖಚಿತಪಡಿಸಲು ಆರೋಗ್ಯ ವಿಮೆ ಮಾಡಿಸಬೇಕು ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.

VISTARANEWS.COM


on

Money Guide
Koo

ಬೆಂಗಳೂರು: ಬದಲಾದ ಜೀವನ ಶೈಲಿ, ಒತ್ತಡ ಬದುಕು ಇತ್ಯಾದಿ ಕಾರಣಗಳಿಂದ ದಿನ ಕಳೆದಂತೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಹಿರಿಯ ನಾಗರಿಕರಿಂದ ಹಿಡಿದು ಮಕ್ಕಳಿಂದ ಹಿಡಿದು ಮಕ್ಕಳ ಆರೋಗ್ಯದ ಕಡೆಗೂ ಹೆಚ್ಚು ಗಮನ ಹರಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ. ಅದರಲ್ಲಿಯೂ ಕೆಲವೊಮ್ಮೆ ಆದಾಯದ ಬಹುಪಾಲು ಚಿಕಿತ್ಸೆಗಾಗಿಯೇ ವ್ಯಯಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದೇ ಕಾರಣಕ್ಕೆ ಹಲವರು ಸೋತು ಹೈರಾಣಾಗುತ್ತಾರೆ. ಆದರೆ ನೆನಪಿರಲಿ ಕೆಲವೊಂದು ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವುದಿಂದ ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಬಹುದು. ಆ ಪೈಕಿ ಆರೋಗ್ಯ ವಿಮೆ (Health Insuranceಮಾಡಿಸುವುದು ಮುಖ್ಯವಾದುದು. ಈಗ ಕಿರಿಯರು ಮಾತ್ರವಲ್ಲ ಹಿರಿಯರಿಗೂ ಹೆಲ್ತ್‌ ಇನ್ಶೂರೆನ್ಸ್‌ ಲಭ್ಯ (Senior Health Insurance). ಈ ಬಗೆಗಿನ ಮಾಹಿತಿ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಯಾಕಾಗಿ ಅಗತ್ಯ?

ವಯಸ್ಸಾದವರಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳ ಹೊರತಾಗಿಯೂ ಭಾರತದಲ್ಲಿನ ಬಹುಪಾಲು ಹಿರಿಯ ನಾಗರಿಕರು ಆರೋಗ್ಯ ವಿಮೆ ಹೊಂದಿಲ್ಲ. ಆರೋಗ್ಯ ಸೇವೆಗಳ ವೆಚ್ಚಗಳು ಏರುತ್ತಲೇ ಇದ್ದರೂ ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರು ಹೆಲ್ತ್‌ ಇನ್ಶೂರೆನ್ಸ್‌ ಮಾಡಿಸಿಲ್ಲ ಎನ್ನುವ ಕಳವಳಕಾರಿ ಅಂಶ ಬಹಿರಂಗಗೊಂಡಿದೆ. ಜನಗಣತಿ ವರದಿಗಳ ಪ್ರಕಾರ ಭಾರತದಲ್ಲಿ ಪ್ರಸ್ತುತ 13.8 ಕೋಟಿಗೂ ಹೆಚ್ಚು ವೃದ್ಧರಿದ್ದಾರೆ. 2031ರ ವೇಳೆಗೆ ಈ ಸಂಖ್ಯೆ ಸುಮಾರು 19 ಕೋಟಿಗೆ ತಲುಪಲಿದೆ. ಹೀಗಾಗಿ ಹಿರಿಯ ನಾಗರಿಕರ ಆರೋಗ್ಯಕ್ಕಾಗಿ ಈಗಿನಿಂದಲೇ ಯೋಜನೆ ರೂಪಿಸುವುದು ಅಗತ್ಯ. ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಲು ಮಾತ್ರವಲ್ಲ ಹಿರಿಯ ನಾಗರಿಕರಿಗೆ ಉತ್ತಮ ಚಿಕಿತ್ಸೆಯನ್ನು ಖಚಿತಪಡಿಸಲು ಆರೋಗ್ಯ ವಿಮೆ ಮಾಡಿಸಬೇಕಾಗಿದೆ.

ಹಿರಿಯ ನಾಗರಿಕರ ಆರೋಗ್ಯ ವಿಮೆಯಲ್ಲಿನ ವಿಧಗಳು

ಫ್ಯಾಮಿಲಿ ಫ್ಲೋಟರ್ ಯೋಜನೆ: ಹಿರಿಯರು ಸೇರಿದಂತೆ ಇಡೀ ಕುಟುಂಬವನ್ನು ಒಳಗೊಂಡಿರುವ ಒಂದೇ ಪಾಲಿಸಿ.

ವೈಯಕ್ತಿಕ ಯೋಜನೆ: ಹಿರಿಯರ ಆರೋಗ್ಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಅವರ ಹೆಸರಿನಲ್ಲಿ ಮಾಡಿಸುವ ಪಾಲಿಸಿ.

ಹಿರಿಯ ನಾಗರಿಕರ ಆರೋಗ್ಯ ಯೋಜನೆ: ವೃದ್ಧರ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗಾಗಿ ಜಾರಿಯಲ್ಲಿರುವ ಪಾಲಿಸಿ. ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಯನ್ನು ಇದು ಒಳಗೊಂಡಿರುತ್ತದೆ.

ಗಂಭೀರ ಆರೋಗ್ಯ ಸಮಸ್ಯೆಯಿಂದ ರಕ್ಷಣೆ: ಕ್ಯಾನ್ಸರ್, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ನಿರ್ದಿಷ್ಟ ಗಂಭೀರ ಕಾಯಿಲೆಗಳಿಗೆ ಮಾಡಿಬಹುದಾದ ವಿಮೆ.

ವೈಯಕ್ತಿಕ ಅಪಘಾತ(ಪಿಎ)ದಿಂದ ರಕ್ಷಣೆ: ಆಕಸ್ಮಿಕವಾಗಿ ಉಂಟಾಗುವ ಗಾಯಗಳು, ಸಾವು, ಅಂಗವೈಕಲ್ಯ ಮತ್ತು ಅನಾರೋಗ್ಯದ ವೈದ್ಯಕೀಯ ವೆಚ್ಚಗಳಿಗೆ ಮಾಡಿಸಬಹುದಾದ ಪಾಲಿಸಿ.

ಆರೈಕೆ ಯೋಜನೆ: ಒಟ್ಟಾರೆ ಆರೋಗ್ಯ, ನಿಯಮಿತ ತಪಾಸಣೆ, ಲಸಿಕೆಗಳ ಅಗತ್ಯಕ್ಕಾಗಿ ಮಾಡಿಸಬಹುದಾದ ವಿಮಾ ಯೋಜನೆ.

ಆರೋಗ್ಯ ಸಂಜೀವಿನಿ ಯೋಜನೆ: ಹಿರಿಯರು ಮಾತ್ರವಲ್ಲ ಎಲ್ಲ ವಯಸ್ಸಿನವರಿಗೆ ಸರಳೀಕೃತ ಆಯ್ಕೆ.

ಹೊಸ ನಿಯಮ ಏನು ಹೇಳುತ್ತದೆ?

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಇತ್ತೀಚೆಗೆ ಹಿರಿಯರ ಆರೋಗ್ಯ ವಿಮೆಯಲ್ಲಿ ಹಲವಾರು ಸುಧಾರಣೆಗಳನ್ನು ಪರಿಚಯಿಸಿದೆ. ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸಲು ಒಬ್ಬ ವ್ಯಕ್ತಿಗೆ ಇದ್ದ 65 ವರ್ಷಗಳ ಮಿತಿಯನ್ನು ತೆಗೆದುಹಾಕಿದೆ. ಆರೋಗ್ಯ ವಿಮೆಯ ಕಾಯುವ ಅವಧಿಯನ್ನು (Waiting period) 48 ತಿಂಗಳಿಂದ 36ಕ್ಕೆ ಇಳಿಸಲಾಗಿದೆ. ನಿರ್ಧಿಷ್ಟ ಕಾಯಿಲೆಗಳಿಗೆ ಕಾಯುವ ಅವಧಿಯನ್ನು 8ರಿಂದ 5 ವರ್ಷಗಳಿಗೆ ಕಡಿಮೆ ಮಾಡಲಾಗಿದೆ. 

ಭವಿಷ್ಯದ ಭರವಸೆ

ಒಟ್ಟಿನಲ್ಲಿ ಹಲವು ಸುಧಾರಣೆಗಳ ಮೂಲಕ ಹಿರಿಯರ ಆರೋಗ್ಯ ವಿಮೆಯ ಭವಿಷ್ಯದ ಭರವಸೆಯಾಗಿ ಗೋಚರಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉದ್ಯಮವು ವಿಕಸನಗೊಳ್ಳುತ್ತಲೇ ಇರುವುದರಿಂದ ಮುಂದೆ ನಾವು ಹೆಚ್ಚು ಸೂಕ್ತವಾದ ಯೋಜನೆ, ವರ್ಧಿತ ವ್ಯಾಪ್ತಿಯ ಆಯ್ಕೆಗಳನ್ನು ನಿರೀಕ್ಷಿಸಬಹುದು. ಜತೆಗೆ ವಿಮಾ ಪೂರೈಕೆದಾರರು ಹಿರಿಯರ ವೈವಿಧ್ಯಮಯ ಆರೋಗ್ಯ ಅಗತ್ಯಗಳನ್ನು ಪೂರೈಸುವ ಹೊಸ ಪಾಲಿಸಿಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ ಎಂದು ಹಲವರು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: Health Insurance: ಆರೋಗ್ಯ ವಿಮೆ ಖರೀದಿಗೆ ಇನ್ನು ವಯಸ್ಸಿನ ನಿರ್ಬಂಧ ಇಲ್ಲ; ಹೊಸ ಬದಲಾವಣೆ ಏನೇನು?

Continue Reading

ಮನಿ-ಗೈಡ್

Employees’ Provident Fund: ಪಿಂಚಣಿ ಲಾಭ ಹೆಚ್ಚಳಕ್ಕಾಗಿ EPFOಗೆ ಸಂಬಂಧಿಸಿ ವೇತನ ಮಿತಿ ಏರಿಸಲು ಚಿಂತನೆ

ಕೇಂದ್ರ ಸರ್ಕಾರವು ನೌಕರರ ಭವಿಷ್ಯ ನಿಧಿ (Employees’ Provident Fund) ಸಂಸ್ಥೆ ಮತ್ತು ನೌಕರರ ರಾಜ್ಯ ವಿಮಾ ನಿಗಮ (ESIC) ಗಳಿಗೆ ವೇತನ ಮಿತಿಯನ್ನು ಹೆಚ್ಚಿಸಲು ಯೋಜನೆ ಮಾಡುತ್ತಿದೆ. ವೇತನ ಮಿತಿ ಕ್ರಮವಾಗಿ 15,000 ರೂ ಮತ್ತು 21,000 ರೂ ಆಗಿದ್ದು, ಇದನ್ನು 25,000 ರೂ. ಗೆ ಹೆಚ್ಚಿಸಲು ಸರ್ಕಾರ ಯೋಜನೆ ಮಾಡುತ್ತಿದೆ ಎನ್ನಲಾಗಿದೆ.

VISTARANEWS.COM


on

By

Employees' Provident Fund
Koo

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (Employees’ Provident Fund) ಭಾರತದ (India) ಸಾಮಾಜಿಕ ಭದ್ರತಾ ರಚನೆಯ ಮೇಲೆ ಪರಿಣಾಮ ಬೀರುವ ಬಹುದೊಡ್ಡ ಕ್ರಮಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರವು (central govt) ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಮತ್ತು ನೌಕರರ ರಾಜ್ಯ ವಿಮಾ ನಿಗಮ (ESIC) ಗಳಿಗೆ ವೇತನ ಮಿತಿಯನ್ನು ಹೆಚ್ಚಿಸಲು ಯೋಜನೆ ಮಾಡುತ್ತಿದೆ ಎನ್ನಲಾಗಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ ಮತ್ತು ಉದ್ಯೋಗಿಗಳ ರಾಜ್ಯ ವಿಮಾ ನಿಗಮಗಳ (ಇಎಸ್‌‌ಐ) ವೇತನ ಮಿತಿ ಈಗ ಕ್ರಮವಾಗಿ 15,000 ರೂ ಮತ್ತು 21,000 ರೂ ಆಗಿದ್ದು, ಇದನ್ನು 25,000 ರೂ. ಗೆ ಹೆಚ್ಚಿಸಲು ಸರ್ಕಾರ ಚಿಂತನೆ ಮಾಡುತ್ತಿದೆ. ಔಪಚಾರಿಕ ವಲಯದ ಉದ್ಯೋಗಿಗಳೆಂದು ವರ್ಗೀಕರಿಸಲಾದ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಈ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ. ಈಗ 15 ಸಾವಿರ ಮಿತಿ ಇರುವುದರಿಂದ 1250 ರೂ. ಮಾತ್ರ ಪಿಂಚಣಿ ಪ್ರಯೋಜನಗಳ ಖಾತೆಗೆ ಜಮೆಯಾಗುತ್ತದೆ. ಇದನ್ನು 25 ಸಾವಿರ ರೂ.ಗೆ ಏರಿಸಿದರೆ ಉದ್ಯೋಗಿಗಳು ನಿವೃತ್ತರಾದಾಗ ಸಿಗುವ ಮೊತ್ತವೂ ಗಣನೀಯವಾಗಿ ಏರುತ್ತದೆ.

20 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಕಂಪೆನಿಗಳಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಗಳ ಅರ್ಹತೆಯನ್ನು ನಿರ್ಧರಿಸುವ ಗರಿಷ್ಠ ಗಳಿಕೆಯ ಮಿತಿ ಮತ್ತು ವಯಸ್ಸಿನ ನವೀಕರಣ ಮಾಡಿಲ್ಲ. ಇಪಿಎಫ್ ಒ ಗಾಗಿ ಕೊನೆಯ ಪರಿಷ್ಕರಣೆಯು 2014ರಲ್ಲಿ ನಡೆದಿತ್ತು ಮತ್ತು ಇಎಸ್ ಇಸಿಗಾಗಿ 2017ರಲ್ಲಿ ನವೀಕರಣ ನಡೆಸಲಾಗಿತ್ತು.
ಈ ವರ್ಷದ ಏಪ್ರಿಲ್‌ನಲ್ಲಿ ಇಪಿಎಫ್‌ಒ ದಾಖಲೆಯ 18.92 ಲಕ್ಷ ಸದಸ್ಯರನ್ನು ಸೇರಿಸಿಕೊಂಡಿದೆ. ಏಪ್ರಿಲ್ 2018 ರಲ್ಲಿ ಮೊದಲ ವೇತನದಾರರ ಡೇಟಾವನ್ನು ಪ್ರಕಟಿಸಿದ ಅನಂತರ ಇದು ಗರಿಷ್ಠ ದಾಖಲೆಯಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.

ನಿವ್ವಳ ಸದಸ್ಯರ ಸಂಖ್ಯೆಯು ಮಾರ್ಚ್ 2024 ರ ಅನುಗುಣವಾದ ಅಂಕಿ ಅಂಶಕ್ಕಿಂತ ಶೇ. 31.29ರಷ್ಟು ಹೆಚ್ಚಾಗಿದೆ ಎಂದು ತಾತ್ಕಾಲಿಕ ವೇತನದಾರರ ಡೇಟಾ ತೋರಿಸುತ್ತದೆ. ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ನಿವ್ವಳ ಸದಸ್ಯರ ಸೇರ್ಪಡೆಯಲ್ಲಿ ಶೇ.10 ರಷ್ಟು ಬೆಳವಣಿಗೆಯಾಗಿದೆ. ಸದಸ್ಯತ್ವದಲ್ಲಿನ ಈ ಹೆಚ್ಚಳವು ಹೆಚ್ಚಿದ ಉದ್ಯೋಗಾವಕಾಶಗಳು, ಉದ್ಯೋಗಿಗಳ ಪ್ರಯೋಜನಗಳ ಬಗ್ಗೆ ಹೆಚ್ಚುತ್ತಿರುವ ಅರಿವು ಮತ್ತು ಇಪಿಎಫ್ ಓ ​​ನ ಕಾರ್ಯಕ್ರಮಗಳ ಪರಿಣಾಮಕಾರಿತ್ವಕ್ಕೆ ಉದಾಹರಣೆಯಾಗಿದೆ ಎಂದು ಕೇಂದ್ರ ಸಚಿವಾಲಯ ಹೇಳಿದೆ.


ಹೊಸ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳ

ಏಪ್ರಿಲ್ 2024ರಲ್ಲಿ ಸುಮಾರು 8.87 ಲಕ್ಷ ಹೊಸ ಸದಸ್ಯರು ಸೇರಿಕೊಂಡಿದ್ದಾರೆ ಎಂದು ಡೇಟಾ ಸೂಚಿಸುತ್ತದೆ. ಡೇಟಾದ ಗಮನಾರ್ಹ ಅಂಶವೆಂದರೆ 18- 25 ವಯೋಮಾನದವರ ಪ್ರಾಬಲ್ಯ ಹೆಚ್ಚಾಗಿದೆ. 2024ರ ಏಪ್ರಿಲ್ ನಲ್ಲಿ ಸೇರಿಸಲಾದ ಸದಸ್ಯರ ಪೈಕಿ ಇವರ ಪ್ರಮಾಣ ಶೇ. 55.5ರಷ್ಟಿದೆ.

ಮರು ಸೇರ್ಪಡೆ

ವೇತನದಾರರ ಅಂಕಿಅಂಶಗಳ ಪ್ರಕಾರ ಸರಿಸುಮಾರು 14.53 ಲಕ್ಷ ಸದಸ್ಯರು ನಿರ್ಗಮಿಸಿದರು ಮತ್ತು ಅನಂತರ ಇಪಿಎಫ್‌ಒಗೆ ಮರುಸೇರ್ಪಡೆಯಾದರು. ಮಾರ್ಚ್ 2024 ರ ಹಿಂದಿನ ತಿಂಗಳಿಗೆ ಹೋಲಿಸಿದರೆ ಈ ಅಂಕಿ ಅಂಶವು ಶೇ. 23.15 ರಷ್ಟು ಹೆಚ್ಚಳವನ್ನು ತೋರಿಸಿದೆ. ಈ ಸದಸ್ಯರು ತಮ್ಮ ಉದ್ಯೋಗಗಳನ್ನು ಬದಲಾಯಿಸಿದರು ಮತ್ತು ಇಪಿಎಫ್ ಒ ​​ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳಿಗೆ ಮರು ಸೇರ್ಪಡೆಗೊಂಡರು ಮತ್ತು ಅಂತಿಮ ಇತ್ಯರ್ಥಕ್ಕೆ ಅರ್ಜಿ ಸಲ್ಲಿಸುವ ಬದಲು ತಮ್ಮ ಸಂಗ್ರಹಣೆಯನ್ನು ವರ್ಗಾಯಿಸಲು ನಿರ್ಧರಿಸಿದರು. ಹೀಗಾಗಿ, ರಕ್ಷಣೆ ದೀರ್ಘಾವಧಿಯ ಆರ್ಥಿಕ ಯೋಗಕ್ಷೇಮ ಮತ್ತು ಅವರ ಸಾಮಾಜಿಕ ಭದ್ರತೆ ರಕ್ಷಣೆಯನ್ನು ವಿಸ್ತರಿಸುವುದು.

ಮಹಿಳಾ ಸದಸ್ಯರು

ವೇತನದಾರರ ದತ್ತಾಂಶದ ಲಿಂಗವಾರು ವಿಶ್ಲೇಷಣೆಯು 8.87 ಲಕ್ಷ ಹೊಸ ಸದಸ್ಯರಲ್ಲಿ ಸುಮಾರು 2.49 ಲಕ್ಷ ಹೊಸ ಮಹಿಳಾ ಸದಸ್ಯರನ್ನು ಹೊಂದಿದೆ.

ತಿಂಗಳಿನಲ್ಲಿ ನಿವ್ವಳ ಮಹಿಳಾ ಸದಸ್ಯರ ಸೇರ್ಪಡೆಯು ಸುಮಾರು 3.91 ಲಕ್ಷದಷ್ಟಿತ್ತು, ಇದು ಮಾರ್ಚ್ 2024 ರ ಹಿಂದಿನ ತಿಂಗಳಿಗೆ ಹೋಲಿಸಿದರೆ ಸರಿಸುಮಾರು ಶೇ. 35.06ರಷ್ಟು ಹೆಚ್ಚಳವನ್ನು ತೋರಿಸಿದೆ. ಮಹಿಳಾ ಸದಸ್ಯರ ಹೆಚ್ಚಳವು ಹೆಚ್ಚು ಅಂತರ್ಗತ ಮತ್ತು ವೈವಿಧ್ಯಮಯ ಕಡೆಗೆ ವ್ಯಾಪಕ ಬದಲಾವಣೆಯನ್ನು ಸೂಚಿಸುತ್ತದೆ.

ಮಹಾರಾಷ್ಟ್ರ ಮುಂಚೂಣಿಯಲ್ಲಿ

ವೇತನದಾರರ ದತ್ತಾಂಶದ ರಾಜ್ಯವಾರು ವಿಶ್ಲೇಷಣೆಯು ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ್ ಮತ್ತು ಹರಿಯಾಣದ ಐದು ರಾಜ್ಯಗಳಲ್ಲಿ ನಿವ್ವಳ ಸದಸ್ಯರ ಸೇರ್ಪಡೆ ಅತ್ಯಧಿಕವಾಗಿದೆ ಎಂದು ಸೂಚಿಸುತ್ತದೆ.

ಇದನ್ನೂ ಓದಿ: Forex Reserves: ವಿದೇಶಿ ವಿನಿಮಯ ಸಂಗ್ರಹದಲ್ಲಿ 43,081 ಕೋಟಿ ರೂ. ಏರಿಕೆ; ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಒಟ್ಟು ಮೌಲ್ಯ

ಈ ರಾಜ್ಯಗಳು ನಿವ್ವಳ ಸದಸ್ಯರ ಸೇರ್ಪಡೆಯಲ್ಲಿ ಸುಮಾರು ಶೇ. 58.3ರಷ್ಟನ್ನು ಹೊಂದಿದ್ದು, ತಿಂಗಳಲ್ಲಿ ಒಟ್ಟು 11.03 ಲಕ್ಷ ನಿವ್ವಳ ಸದಸ್ಯರನ್ನು ಸೇರಿಸುತ್ತವೆ. ಎಲ್ಲಾ ರಾಜ್ಯಗಳಲ್ಲಿ, ಮಹಾರಾಷ್ಟ್ರವು ತಿಂಗಳಲ್ಲಿ ಶೇ. 20.42 ರಷ್ಟು ನಿವ್ವಳ ಸದಸ್ಯರನ್ನು ಸೇರಿಸುವ ಮೂಲಕ ಮುಂಚೂಣಿಯಲ್ಲಿದೆ.

ಒಟ್ಟು ನಿವ್ವಳ ಸದಸ್ಯತ್ವದಲ್ಲಿ ಸುಮಾರು ಶೇ. 41.41 ರಷ್ಟು ಸೇರ್ಪಡೆಯು ಪರಿಣಿತ ಸೇವೆಗಳಿಂದ ಅಂದರೆ ಮಾನವಶಕ್ತಿ ಪೂರೈಕೆದಾರರು, ಸಾಮಾನ್ಯ ಗುತ್ತಿಗೆದಾರರು, ಭದ್ರತಾ ಸೇವೆಗಳು, ವಿವಿಧ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.

Continue Reading

ಮನಿ-ಗೈಡ್

Money Guide: ಸುಕನ್ಯಾ ಸಮೃದ್ಧಿ; ತಿಂಗಳಿಗೆ 10 ಸಾವಿರ ರೂ. ಹೂಡಿಕೆ ಮಾಡಿದರೆ 55 ಲಕ್ಷ ರೂ. ರಿಟರ್ನ್!

ಪ್ರತಿ ಹಣಕಾಸು ವರ್ಷದಲ್ಲಿ ಗರಿಷ್ಠ 1.50 ಲಕ್ಷ ರೂ.ಗಳನ್ನು ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯಲ್ಲಿ (Money Guide) ಇಡಬಹುದು. ಇದರಲ್ಲಿ ತೆರಿಗೆ ಪ್ರಯೋಜನಗಳೂ ಇವೆ. ಶೇ. 8.2 ಬಡ್ಡಿ ದರವನ್ನು ಇದು ಒಳಗೊಂಡಿದೆ. ತಿಂಗಳಿಗೆ 10,000 ರೂ ಉಳಿತಾಯ ಮಾಡಿದರೆ 15 ವರ್ಷಗಳಲ್ಲಿ ಎಷ್ಟು ಆರ್ಥಿಕ ಭದ್ರತೆ ಪಡೆಯಬಹುದು ಎಂಬುದನ್ನು ನೋಡೋಣ.

VISTARANEWS.COM


on

By

Money Guide
Koo

ಭಾರತದಲ್ಲಿ (india) ಹೆಣ್ಣು ಮಕ್ಕಳ (girls child) ಭವಿಷ್ಯವನ್ನು ಸುರಕ್ಷಿತವಾಗಿ (Money Guide) ಇರಿಸಲು ವಿನ್ಯಾಸಗೊಳಿಲಾದ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಯೋಜನೆಯು ಹಲವು ಆಕರ್ಷಕ ಪ್ರಯೋಜನಗಳನ್ನು ಹೊಂದಿದೆ. ಈ ಯೋಜನೆಯು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಲು ಪೋಷಕರಿಗೆ ಅವಕಾಶ ನೀಡುತ್ತದೆ. ಭಾರತದಾದ್ಯಂತ ಪ್ರತಿ ಮಗುವಿಗೆ ಒಂದು ಖಾತೆಯನ್ನು ಮಾತ್ರ ಅನುಮತಿಸಲಾಗಿದೆ.

ಪ್ರತಿ ಹಣಕಾಸು ವರ್ಷದಲ್ಲಿ ಗರಿಷ್ಠ 1.50 ಲಕ್ಷ ರೂ.ಗಳನ್ನು ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯಲ್ಲಿ ಇಡಬಹುದು. ಇದರಲ್ಲಿ ತೆರಿಗೆ ಪ್ರಯೋಜನಗಳೂ ಇವೆ. ಶೇ. 8.2 ಬಡ್ಡಿ ದರವನ್ನು ಇದು ಒಳಗೊಂಡಿದೆ. ತಿಂಗಳಿಗೆ 10,000 ರೂ ಉಳಿತಾಯ ಮಾಡಿದರೆ 15 ವರ್ಷಗಳಲ್ಲಿ ಎಷ್ಟು ಆರ್ಥಿಕ ಭದ್ರತೆ ಪಡೆಯಬಹುದು ಎಂಬುದನ್ನು ನೋಡೋಣ.

ಎಷ್ಟು ಮೊತ್ತ ಕೈ ಸೇರುತ್ತದೆ?

ಸುಕನ್ಯಾ ಸಮೃದ್ಧಿ ಯೋಜನೆ ಲೆಕ್ಕಾಚಾರದ ಪ್ರಕಾರ ಪ್ರತಿ ತಿಂಗಳು 10,000 ರೂ. ಠೇವಣಿ ಮಾಡುವುದರಿಂದ ಒಬ್ಬರು 15 ವರ್ಷಗಳಲ್ಲಿ ಒಟ್ಟು 18,00,000 ರೂ. ಹೂಡಿಕೆ ಮಾಡುತ್ತಾರೆ. ಶೇ. 8.2 ರ ಬಡ್ಡಿದರದಲ್ಲಿ ಮೆಚ್ಯೂರಿಟಿ ಮೊತ್ತವು 55,46,118 ರೂಪಾಯಿಗಳಾಗುತ್ತದೆ. ಇದರಲ್ಲಿ ಹೂಡಿಕೆಯ ಅವಧಿಯ ಬಡ್ಡಿ 37,46,118 ರೂ. ಗಳಾಗಿರುತ್ತದೆ. ಹೆಣ್ಣು ಮಕ್ಕಳು‌ 18 ವರ್ಷ ತುಂಬುವವರೆಗೆ ಮಾತ್ರ ಹಣ ಹೂಡಿಕೆ ಮಾಡಲು ಅವಕಾಶ ಇರುತ್ತದೆ.

ಎಷ್ಟು ಹೂಡಿಕೆ ಮಾಡಬಹುದು?

ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಆರ್ಥಿಕ ವರ್ಷ ಕನಿಷ್ಠ 250 ರೂ. ನಿಂದ ಗರಿಷ್ಠ 1,50,000 ರೂ. ವರೆಗೆ ಠೇವಣಿ ಮಾಡಬಹುದು. ಒಂದು ತಿಂಗಳು ಅಥವಾ ಆರ್ಥಿಕ ವರ್ಷದಲ್ಲಿ ಒಂದೇ ಬಾರಿಗೆ ಠೇವಣಿಯನ್ನು ಮಾಡಬಹುದು.


ಹಿಂಪಡೆಯುವ ನಿಯಮ

ಭಾರತೀಯ ಅಂಚೆ ಕಚೇರಿಯಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ಪ್ರತಿ ಹೆಣ್ಣು ಮಗುವಿಗೆ 18 ವರ್ಷಗಳು ತಲುಪುವವರೆಗೆ ಪೋಷಕರು ನಿರ್ವಹಿಸುತ್ತಾರೆ. ಹೆಣ್ಣು ಮಗುವಿಗೆ 18 ವರ್ಷ ತುಂಬಿದ ಅನಂತರ ಹಿಂಪಡೆಯಲು ಅನುಮತಿ ಇದೆ.

ಹಿಂಪಡೆಯುವಿಕೆಯನ್ನು ಶೈಕ್ಷಣಿಕ ಅಥವಾ ಮದುವೆಯ ವೆಚ್ಚಗಳನ್ನು ಅವಲಂಬಿಸಿ ಐದು ವರ್ಷಗಳವರೆಗೆ ಒಂದನ್ನು ಮೀರದಂತೆ ಒಟ್ಟು ಮೊತ್ತ ಅಥವಾ ಕಂತುಗಳಲ್ಲಿ ಪಡೆಯಬಹುದು.

ಸುಕನ್ಯಾ ಸಮೃದ್ಧಿ ಖಾತೆಯನ್ನು ಅಕಾಲಿಕವಾಗಿ ಮುಚ್ಚುವುದು ಐದು ವರ್ಷಗಳ ಅನಂತರ ಖಾತೆದಾರರ ಮರಣ ಅಥವಾ ತೀವ್ರ ಸಹಾನುಭೂತಿಯಂತಹ ಕೆಲವು ಷರತ್ತುಗಳ ಅಡಿಯಲ್ಲಿ ಖಾತೆಯನ್ನು ಅಕಾಲಿಕವಾಗಿ ಮುಚ್ಚಲು ಅನುಮತಿ ಇದೆ.

ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್; ಯಾವ ಆದಾಯದವರಿಗೆ ಯಾವ ಫಾರ್ಮ್?

ಖಾತೆ ತೆರೆಯಲು ಮತ್ತು ಮುಚ್ಚಲು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಖಾತೆ ತೆರೆಯುವ ದಿನಾಂಕದಿಂದ 21 ವರ್ಷಗಳ ಅನಂತರ ಅಥವಾ 18 ವರ್ಷಗಳನ್ನು ತಲುಪಿದ ಬಳಿಕ ಹುಡುಗಿಯ ಮದುವೆಯ ಸಮಯದಲ್ಲಿ ಮುಕ್ತಾಯಗೊಳ್ಳುತ್ತದೆ.

Continue Reading

ಮನಿ-ಗೈಡ್

EMI Loan: ಇಎಂಐನಲ್ಲಿ ಫೋನ್ ಖರೀದಿ ಮಾಡುವುದು ಲಾಭವೇ ಅಥವಾ ನಷ್ಟವೇ? ಇಲ್ಲಿದೆ ಲೆಕ್ಕಾಚಾರ

ಹೊಸ ಫೋನ್ ಮಾರುಕಟ್ಟೆಗೆ ಬಂದ ತಕ್ಷಣ ಅದನ್ನು ತಮ್ಮದಾಗಿಸಿಕೊಳ್ಳಬೇಕು ಎನ್ನುವ ಹಂಬಲ ಎಲ್ಲರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಕಂಪೆನಿಗಳು ನಾನಾ ಯೋಜನೆಗಳನ್ನು ಪ್ರಕಟಿಸುತ್ತದೆ. ಅದರಲ್ಲಿ ಇಎಂಐ ಕೂಡ ಒಂದು. ಇಎಂಐನಲ್ಲಿ (EMI Loan) ಮೊಬೈಲ್ ಖರೀದಿಸುವುದು ಲಾಭದಾಯಕವಾಗಿ ಕಾಣುತ್ತದೆ. ಆದರೆ ಈ ನಿರ್ಧಾರವನ್ನು ಕೈಗೊಳ್ಳುವ ಮೊದಲು ಕೆಲವೊಂದು ಅಂಶಗಳನ್ನು ತಿಳಿದುಕೊಳ್ಳುವುದು ಬಹುಮುಖ್ಯ. ಇಎಂಐ ವ್ಯವಸ್ಥೆಯ ಲಾಭ ನಷ್ಟಗಳ ಸರಳ ಮಾಹಿತಿ ಇಲ್ಲಿದೆ.

VISTARANEWS.COM


on

By

EMI Loan
Koo

ಮೊಬೈಲ್ (mobile), ಲ್ಯಾಪ್ ಟಾಪ್ (laptop), ಕಂಪ್ಯೂಟರ್ (computer).. ಹೀಗೆ ತಮ್ಮ ಅಗತ್ಯಕ್ಕೆ ಬೇಕಾಗುವ ವಸ್ತುಗಳನ್ನು ಖರೀದಿ ಮಾಡುವುದು ಈಗ ಕಷ್ಟವೇನಲ್ಲ. ಯಾಕೆಂದರೆ ದೊಡ್ಡ ಮೊತ್ತವನ್ನು ಒಂದೇ ಬಾರಿ ಪಾವತಿ ಮಾಡುವ ಅಗತ್ಯ ಈಗ ಇಲ್ಲ. ಇಎಂಐನಲ್ಲಿ (EMI Loan) ಈಗ ನಮಗಿಷ್ಟವಾಗಿರುವ ಯಾವುದೇ ವಸ್ತುವನ್ನು ಖರೀದಿ ಮಾಡಲು ಸಾಕಷ್ಟು ಅವಕಾಶಗಳು ಇವೆ.

ಇಎಂಐನಲ್ಲಿ ಮೊಬೈಲ್ ಫೋನ್ ಖರೀದಿಸುವುದು ಎಂದರೆ ಹೊಸ ಫೋನ್‌ನ ಮೊತ್ತವನ್ನು ಕಾಲಾನಂತರದಲ್ಲಿ ಪಾವತಿ ಮಾಡುವ ಒಂದು ಸ್ಮಾರ್ಟ್ ವಿಧಾನವಾಗಿದೆ. ಇಎಂಐಯು ಪಾವತಿಯನ್ನು ಕಂತುಗಳಾಗಿ ವಿಭಜಿಸುವ ಮೂಲಕ ಅದನ್ನು ಸುಲಭವಾಗಿ ಎಲ್ಲರ ಕೈಗೆಟಕುವಂತೆ ಮಾಡುತ್ತದೆ. ಆದರೂ ಇಎಂಐ ಪಾವತಿಗಾಗಿ ಕಾರ್ಡ್ ಅನ್ನು ಸ್ವೈಪ್ ಮಾಡುವ ಮೊದಲು, ಪರಿಗಣಿಸಬೇಕಾದ ಹಲವಾರು ಸಂಗತಿಗಳಿವೆ.

ಇಎಂಐ ಎಂದರೆ ಈಕ್ವೇಟೆಡ್ ಮಾಸಿಕ ಕಂತು. ಇದು ಪ್ರತಿ ಕ್ಯಾಲೆಂಡರ್ ತಿಂಗಳ ನಿರ್ದಿಷ್ಟ ದಿನಾಂಕದಂದು ಸಾಲಗಾರನು ಮಾಡಿದ ಸ್ಥಿರ ಪಾವತಿ ಮೊತ್ತವಾಗಿದೆ. ಪ್ರತಿ ತಿಂಗಳು ಬಡ್ಡಿ ಮತ್ತು ಅಸಲು ಎರಡನ್ನೂ ಪಾವತಿಸಲು ಇಎಂಐಗಳನ್ನು ಬಳಸಲಾಗುತ್ತದೆ. ಇದರಿಂದ ನಿರ್ದಿಷ್ಟ ಸಂಖ್ಯೆಯ ವರ್ಷಗಳಲ್ಲಿ ಸಾಲವನ್ನು ಪೂರ್ಣವಾಗಿ ಪಾವತಿಸಲಾಗುತ್ತದೆ.

ವೈಯಕ್ತಿಕ, ಗೃಹ, ಕಾರು ಮತ್ತು ಎಸಿ, ಮೊಬೈಲ್‌ ಇತ್ಯಾದಿಗಳಿಗೆ ಸಿಗುವ ಸಾಲಗಳು ಸೇರಿದಂತೆ ವಿವಿಧ ರೀತಿಯ ಸಾಲಗಳಿಗೆ ಇಎಂಐಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.


ಇಎಂಐನಲ್ಲಿ ಫೋನ್ ಖರೀದಿಸುವುದು ಒಳ್ಳೆಯದೇ ?

ಬಡ್ಡಿ ದರ, ಗುಪ್ತ ಶುಲ್ಕ ಮತ್ತು ಇಎಂಐ ಪಾವತಿಸಿದಾಗ ಫೋನ್‌ನ ಒಟ್ಟು ವೆಚ್ಚವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಿಯಮ ಮತ್ತು ಷರತ್ತುಗಳ ಬಗ್ಗೆ ತಿಳಿದಿರುವುದು ಅಷ್ಟೇ ಅಗತ್ಯ. ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದು ಹೆಚ್ಚು ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ಮತ್ತು ಯಾವುದೇ ಹಣಕಾಸಿನ ಅಪಾಯಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಇರಲಿ ಎಚ್ಚರ

ಸಾಮಾನ್ಯವಾಗಿ ಗ್ರಾಹಕರು ಇಎಂಐನಲ್ಲಿ ಮೊಬೈಲ್ ಖರೀದಿ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಅದರಲ್ಲಿ ಮುಖ್ಯವಾಗಿ ಈ ಐದು ತಪ್ಪುಗಳನ್ನು ಮಾಡದಂತೆ ಎಚ್ಚರ ವಹಿಸುವುದು ಬಹುಮುಖ್ಯ.

ಸುಖಾಸುಮ್ಮನೆ ಶಾಪಿಂಗ್ ಬೇಡ

ಸಾಲದಾತರು ಮತ್ತು ಚಿಲ್ಲರೆ ವ್ಯಾಪಾರಿಗಳು ಮೊಬೈಲ್ ಫೋನ್‌ ಗಳಿಗೆ ಇಎಂಐ ಹಣಕಾಸು ಒದಗಿಸುತ್ತಾರೆ. ಸಾಲವನ್ನು ನಿರ್ಧರಿಸುವ ಮೊದಲು ಶಾಪಿಂಗ್ ಮಾಡುವುದು ಮತ್ತು ಬಡ್ಡಿ ದರಗಳು, ಸಂಸ್ಕರಣಾ ಶುಲ್ಕಗಳು ಮತ್ತು ಇತರ ನಿಯಮಗಳನ್ನು ಹೋಲಿಸುವುದು ಮುಖ್ಯವಾಗಿದೆ.

ಬಜೆಟ್ ಪರಿಗಣಿಸಿ

ಇಎಂಐನಲ್ಲಿ ಫೋನ್‌ ಖರೀದಿಗೆ ಹಣಕಾಸು ಒದಗಿಸಲು ನೀವು ಶಕ್ತರಾಗಿದ್ದೀರಿ ಎಂದರ್ಥವಲ್ಲ. ಹೊಸ ಫೋನ್‌ಗಾಗಿ ಬಜೆಟ್ ಮಾಡುವಾಗ ಬಡ್ಡಿ ಮತ್ತು ಶುಲ್ಕಗಳು ಸೇರಿದಂತೆ ಸಾಲದ ಒಟ್ಟು ವೆಚ್ಚದ ಪ್ರತಿಯೊಂದು ಅಂಶವನ್ನು ಖಚಿತಪಡಿಸಿಕೊಳ್ಳಿ.

ಒಪ್ಪಂದವನ್ನು ಓದಿ

ಯಾವುದೇ ಲೋನ್ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಫೈನ್ ಪ್ರಿಂಟ್ ಅನ್ನು ಎಚ್ಚರಿಕೆಯಿಂದ ಓದಲು ಮರೆಯದಿರಿ. ಬಡ್ಡಿ ದರ, ಸಂಸ್ಕರಣಾ ಶುಲ್ಕಗಳು ಮತ್ತು ಅನ್ವಯಿಸಬಹುದಾದ ಯಾವುದೇ ಇತರ ಶುಲ್ಕಗಳನ್ನು ಅರ್ಥಮಾಡಿಕೊಳ್ಳಿ. ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ. ಇದು ಇಎಂಐ ಯೋಜನೆಯ ಅವಧಿ, ಪೆನಾಲ್ಟಿಗಳಿಲ್ಲದೆ ಪೂರ್ವಪಾವತಿ ಮಾಡುವ ನಮ್ಯತೆ ಮತ್ತು ನೀವು ಪಾವತಿಯನ್ನು ತಪ್ಪಿಸಿಕೊಂಡರೆ ಅನ್ವಯಿಸಬಹುದಾದ ಯಾವುದೇ ಷರತ್ತುಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: Anant Ambani-Radhika Wedding: ಅನಂತ್ ಅಂಬಾನಿ- ರಾಧಿಕಾ ಮದುವೆ; ಮುಂಬಯಿನಲ್ಲಿ ಗಗನಕ್ಕೇರಿದ ಹೊಟೇಲ್ ರೂಮ್ ಚಾರ್ಜ್!

ಸಾಲದ ಅವಧಿ ವಿಸ್ತರಣೆ

ಕಡಿಮೆ ಮಾಸಿಕ ಪಾವತಿ ಸೌಲಭ್ಯವನ್ನು ಪಡೆಯಲು ಸಾಲದ ಅವಧಿಯನ್ನು ವಿಸ್ತರಿಸುವುದು ಮೇಲ್ನೋಟಕ್ಕೆ ಲಾಭದಾಯಕ ಎಂದೆನಿಸಿದರೂ ಒಟ್ಟಾರೆ ಹೆಚ್ಚಿನ ಬಡ್ಡಿಯನ್ನು ಪಾವತಿಸುತ್ತಿದ್ದೀರಿ ಎಂಬುದು ನೆನಪಿರಲಿ.

ವಿಮೆಯನ್ನು ಪಡೆಯುತ್ತಿಲ್ಲ

ಇಎಂಐನಲ್ಲಿ ಖರೀದಿ ಮಾಡಿದ ಫೋನ್ ಹಾನಿಗೊಳಗಾಗಿದ್ದರೆ ಅಥವಾ ಅದಕ್ಕೆ ಹಣಕಾಸು ಒದಗಿಸುತ್ತಿರುವಾಗ ಕದ್ದಿದ್ದರೆ ಸಾಲವನ್ನು ಪಾವತಿಸಲು ನೀವು ಇನ್ನೂ ಜವಾಬ್ದಾರರಾಗಿರುತ್ತೀರಿ. ಈ ಅನಿರೀಕ್ಷಿತ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಫೋನ್ ವಿಮೆಯನ್ನು ಮಾಡಿಕೊಳ್ಳುವುದು ಒಳ್ಳೆಯದು.

Continue Reading
Advertisement
Rain News;
ಪ್ರಮುಖ ಸುದ್ದಿ7 mins ago

Rain News : ಪ್ರಯಾಣಿಕರೇ ಗಮನಿಸಿ; ಗುಡ್ಡ ಕುಸಿತದ ಭೀತಿ, ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್​​

Sexual Assault case
ಕ್ರೈಂ20 mins ago

Sexual Assualt Case: ಅಶ್ಲೀಲ ವಿಡಿಯೊ ವೀಕ್ಷಿಸಿ ಉದ್ರೇಕಗೊಂಡ ಮೂವರು ಶಾಲಾ ಬಾಲಕರಿಂದ ಬಾಲಕಿಯ ಅತ್ಯಾಚಾರ, ಕೊಲೆ

International Cricket Council
ಕ್ರಿಕೆಟ್35 mins ago

International Cricket Council : ಟಿ20 ವಿಶ್ವಕಪ್ ಆಯೋಜನೆಯಲ್ಲಿ ಐಸಿಸಿಗೆ 167 ಕೋಟಿ ರೂಪಾಯಿ ನಷ್ಟ

Team India Srilanka Tour
ಪ್ರಮುಖ ಸುದ್ದಿ44 mins ago

Team India Srilanka Tour : ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಸೂರ್ಯಕುಮಾರ್​ಗೆ ಟಿ20 ನಾಯಕತ್ವ

Viral Video
Latest1 hour ago

Viral Video: ಬಸ್‌ ಡ್ರೈವರ್‌ನ ರೀಲ್ಸ್‌ ಕ್ರೇಜ್‌ಗೆ 2 ಎತ್ತುಗಳು ಬಲಿ; ರೈತನ ಸ್ಥಿತಿ ಗಂಭೀರ

Train Accident
ದೇಶ1 hour ago

Train Derail: ಹಳಿ ತಪ್ಪಿದ ರೈಲು; ಅಪಘಾತದ ಹಿಂದೆ ಇದ್ಯಾ ವಿಧ್ವಂಸಕ ಕೃತ್ಯ?

Crime News
ಪ್ರಮುಖ ಸುದ್ದಿ1 hour ago

Bangalore News : ಬೆಂಗಳೂರಲ್ಲಿ ಆಘಾತಕಾರಿ ಘಟನೆ; ಗಾಂಜಾ ನಶೆಯಲ್ಲಿ ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಬಾಲಕಿಯರನ್ನು ಬೆದರಿಸಿದ ಪುಂಡರು

Lady Police Officer
Latest2 hours ago

Lady Police Officer: ಗೂಂಡಾಗಿರಿ ಮಾಡಿದರೆ ಹುಷಾರ್‌! ಪುಂಡರಿಗೆ ಲೇಡಿ ಪೊಲೀಸ್ ವಾರ್ನಿಂಗ್‌; ವಿಡಿಯೊ ವೈರಲ್

kiccha sudeep‌ Fans
ಸಿನಿಮಾ2 hours ago

Kiccha Sudeep: ಸೆಲ್ಫಿಗಾಗಿ 2 ಗಂಟೆ ಕಾದ ಅಭಿಮಾನಿಗೆ ಕಿಚ್ಚ ಸುದೀಪ್ ಅವಮಾನ! ವಿಡಿಯೊ ನೋಡಿ

Ratna Bhandar
ದೇಶ2 hours ago

Ratna Bhandar: ಒಂದೇ ವಾರದಲ್ಲಿ ಎರಡನೇ ಬಾರಿ ತೆರೆದ ಪುರಿ ಜಗನ್ನಾಥನ ʼರತ್ನ ಭಂಡಾರʼ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ5 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಟ್ರೆಂಡಿಂಗ್‌