Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ - Vistara News

ಬೆಂಗಳೂರು

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ

Bengaluru Power Cut: ಬೆಂಗಳೂರು ನಗರದ 66/11 KV ಗೋಕುಲ ಎಂ.ಯು.ಎಸ್.ಎಸ್. ಉಪಕರಣಗಳಾದ CTs, CBs,Tine GOSBs, Line GOSBs, Line ಉಪಕರಣಗಳ ವಾರ್ಷಿಕ ನಿರ್ವಹಣೆ ಮತ್ತು ನಿರ್ವಹಣೆ ಕೆಲಸ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜು.20 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಉತ್ತರ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

VISTARANEWS.COM


on

Bengaluru power cut July 20th power outage in many parts of Bengaluru
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಗರದ 66/11 KV ಗೋಕುಲ ಎಂ.ಯು.ಎಸ್.ಎಸ್. ಉಪಕರಣಗಳಾದ CTs, CBs,Tine GOSBs, Line GOSBs, Line ಉಪಕರಣಗಳ ವಾರ್ಷಿಕ ನಿರ್ವಹಣೆ ಮತ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru Power Cut) ನಗರದ ಹಲವೆಡೆ ಜು.20 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಉತ್ತರ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Indian Olympics History: ಭಾರತಕ್ಕೆ ಒಲಿಂಪಿಕ್ಸ್​ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಮೊದಲ ಸಾಧಕ ಅಭಿನವ್‌ ಬಿಂದ್ರಾ

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು

ನಗರದ ಗೋಕುಲ ಎಂ.ಯು.ಎಸ್.ಎಸ್., ಡಿ.ಬಿ. ಸಂದ್ರಾ 4ನೇ ಬ್ಲಾಕ್, ಜೆ.ಬಿ. ಕಾವಲ್ ಅರಣ್ಯ, ಗಂಗಮ್ಮ ವೃತ್ತ, ಡಿ.ಬಿ.ಸಂದ್ರ 2ನೇ ಬ್ಲಾಕ್, ಕಮ್ಮಗೊಂಡನಹಳ್ಳಿ, ಬಿಇಎಲ್ ಉತ್ತರ ಕಾಲೋನಿ ಮತ್ತು ಬಿಇಎಲ್ ಸೌತ್ ಕಾಲೋನಿ, ಬಾಹುಬಲಿ ನಗರ, ಡಿ.ಬಿ.ಸಂದ್ರ 4ನೇ ಬ್ಲಾಕ್, ಪಟೇಲ್ ಪಿಳ್ಳೇಗೌಡ ಲೇಔಟ್, ಬ್ಲೂಮ್ ಫೀಲ್ಡ್ ಗಾರ್ಡನ್, ರಾಮಚಂದ್ರಾಪುರ, ಜಾಲಹಳ್ಳಿ ಗ್ರಾಮ, ಶಾರದಾಂಬನಗರ, ಬಾಹುಬಲಿನಗರ, ಎಚ್‌ಎಂಟಿ (HMT) ಇಂಡಸ್ಟ್ರಿಯಲ್ ಎಸ್ಟೇಟ್, ಪ್ರೆಸ್ಟೀಜ್ ವೆಲ್ಲಿಂಗ್ಟನ್ ಮತ್ತು ಪ್ರೆಸ್ಟೀಜ್ ಕೆನ್ಸಿಂಗ್ಟನ್ ಅಪಾರ್ಟ್‌ಮೆಂಟ್, ಮುತ್ಯಾಲನಗರ, ಚಾಮುಂಡೇಶ್ವರಿ ಲೇಔಟ್, ನಂಜಪ್ಪ ಲೇಔಟ್, ಸಿ. ರಾಮಯ್ಯ ಲೇಔಟ್, ಗೋಕುಲ ಎಕ್ಸ್‌ಟಿಎನ್, ಎಚ್‌ಎಂಆರ್‌ ಲೇಔಟ್ ಎಂಆರ್‌ಟಿಡಿಸಿ. ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ಸಂಬಂಧಿತ ದೂರುಗಳಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ ‘1912’ ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ʼಸರ್ ಎಂ.ವಿ. 220/66/11ಕೆ.ವಿ ಜಿ.ಐ.ಎಸ್ ಇಡಿಸಿʼ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ, ವಿದ್ಯುತ್‌ ವ್ಯತ್ಯಯ

ಬೆಂಗಳೂರು ನಗರದ ʼಸರ್ ಎಂ.ವಿ. 220/66/11ಕೆ.ವಿ ಜಿ.ಐ.ಎಸ್ ಇಡಿಸಿʼ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru Power Cut) ನಗರದ ಹಲವೆಡೆ ಜು.20 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ರೆಸಿಡೆನ್ಸಿ ರಸ್ತೆ, ಹೊಂಡೈ ಆರ್.ಎಂ.ಯು, ಲ್ಯಾವೆಲ್ಲೆ ರಸ್ತೆ, ವಾಲ್ಟನ್ ರಸ್ತೆ, ವಿಟ್ಟಲ್ ಮಲ್ಯ ರಸ್ತೆ, ಚರ್ಚ್‌ ಸ್ಟ್ರೀಟ್, ಕಸ್ತೂರ್ಬಾ ರಸ್ತೆ, ಸೇಂಟ್ ಮಾರ್ಕ್ಸ್‌ ರಸ್ತೆ, ಕ್ವೀನ್ಸ್ ವೃತ್ತ, ರೆಸಿಡೆನ್ಸಿ ರಸ್ತೆ ಕ್ರಾಸ್, ಐ.ಟಿ.ಸಿ ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

66/11ಕೆ.ವಿ ಬಾಗಮನೆ ಟೆಕ್‌ಪಾರ್ಕ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ನಿರ್ವಹಣಾ ಕಾರ್ಯ, ವಿದ್ಯುತ್‌ ವ್ಯತ್ಯಯ

ಬೆಂಗಳೂರು ನಗರದ 66/11ಕೆ.ವಿ ಬಾಗಮನೆ ಟೆಕ್‌ಪಾರ್ಕ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ನಿರ್ವಹಣಾ ಕೆಲಸ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಜು.20 ರಂದು ಶನಿವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಟಿ.ಟಿ.ಕೆ. ಪ್ರೆಸ್ಟೀಜ್ ಅಪಾರ್ಟ್‌ಮೆಂ, ಬೈರಸಂದ್ರ, ಗುಂಡಪ್ಪ ಲೇಔಟ್, ಓಂ ಶಕ್ತಿ ದೇವಸ್ಥಾನ, ಕಗ್ಗದಾಸಪುರ 1ನೇ ಅಡ್ಡ ರಸ್ತೆಯಿಂದ 19ನೇ ಅಡ್ಡರಸ್ತೆ, ಭೂವನೇಶ್ವರಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

66/11 ಕೆ.ವಿ. ಶೋಭಾ ಸಿಟಿ ಉಪ-ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ; ವಿದ್ಯುತ್‌ ವ್ಯತ್ಯಯ

ಬೆಂಗಳೂರು ನಗರದ 66/11 ಕೆ.ವಿ. ಶೋಭಾ ಸಿಟಿ ಉಪ-ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಜು.20 ರಂದು ಶನಿವಾರ ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Indian Navy Recruitment: ಭಾರತೀಯ ನೌಕಾ ಪಡೆಯಲ್ಲಿದೆ 741 ಹುದ್ದೆ; 10ನೇ ತರಗತಿ ಪಾಸಾದವರಿಗೂ ಇದೆ ಅವಕಾಶ

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಶೋಭಾ ಸಿಟಿ, ಚೊಕ್ಕನಹಳ್ಳಿ, ಡೋಮಿನೊ ಪಿಜ್ಜಾ ಇನ್ ಪ್ಯಾರಡೈಸ್ ನೂರ್ ನಗರ, ಎಕ್ಸ್ ಸರ್ವಿಸ್‌ಮೆನ್ ಲೇಔಟ್, ಪೊಲೀಸ್ ಕ್ವಾಟ್‌ರ್ಸ್, ಆರ್.ಕೆ. ಹೆಗ್ಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಯು, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪಾರ್ಕ್‌, ಎಸ್ತರ್ ಹರ‍್ಮೋನಿಕ್ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿಮ್, ಸ್ಲಂ ಬೋರ್ಡ್‌ ಮತ್ತು ಬೆಂಚ್ ರಾಯಲ್‌ವುಡ್, ರ‍್ಕಾವತಿ ಲೇಔಟ್, ಥಣಿಸಂದ್ರ, ಆರ್ ಕೆ ಹೆಗಡೆ ನಗರ, ಬೆಳ್ಳಹಳ್ಳಿ ಗ್ರಾಮ, ತಿರುಮೇನಹಳ್ಳಿ ಗ್ರಾಮ, ಮಿತ್ತಗಾನಹಳ್ಳಿ ಮತ್ತು ಕೋಗಿಲು ಗ್ರಾಮ, ಬೆಲಹಳ್ಳಿ, ವಿಧಾನಸೌಧ ಲೇಔಟ್, ಕರ್ನಾಟಕ ಕಾಲೇಜು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Assembly Monsoon Session: ಮುಂಗಾರು ಅಧಿವೇಶನಕ್ಕೆ ಮುನ್ನವೇ 2 ಕೋಟಿ ಖರ್ಚು ಮಾಡಿ ವಿಧಾನಸೌಧ ಸಿಂಗಾರ!

Assembly Monsoon Session: ವಿಧಾನಸಭೆ ಒಳಾಂಗಣ ರೋಸ್‌ವುಡ್ ಡೋರ್, ಕಾರ್ಪೆಟ್, ಫ್ಲೋರ್ ಮ್ಯಾಟ್, ಪಿಲ್ಲರ್‌ಗಳಿಗೆ ರೋಸ್ ವುಡ್ ಕ್ಲಾಡಿಂಗ್ ಸೇರಿದಂತೆ ರೀ ಫರ್ನಿಶಿಂಗ್ ಮಾಡಲಾಗಿದೆ. ಸ್ಪೀಕರ್ ಕಚೇರಿಗೆ ಹೊಸ ಬಾಗಿಲು, ಫ್ಲೋರ್ ಮ್ಯಾಟ್, ಇತರೆ ನವೀಕರಣ ಮಾಡಲಾಗಿದೆ. PWD ಕೆಲಸವನ್ನು ಸ್ಪೀಕರ್ ಕಚೇರಿಯಿಂದಲೇ ನಿರ್ವಹಣೆ ಮಾಡಲಾಗಿದೆ.

VISTARANEWS.COM


on

Assembly monsoon session UT Khader karnataka assembly live
Koo

ಬೆಂಗಳೂರು: 16ನೇ ವಿಧಾನಸಭೆಯ ಮಳೆಗಾಲದ ಅಧಿವೇಶನಕ್ಕೆ (Vidhan Sabha Session, Assembly monsoon session) ) ಮುನ್ನವೇ ವಿಧಾನಸೌಧವನ್ನು (Vidhana Soudha) ಹೊಸದಾಗಿ ಶೃಂಗರಿಸಲಾಗಿದ್ದು, ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಒಳಾಂಗಣವನ್ನು (renovation) ನವೀಕರಣಗೊಳಿಸಲಾಗಿದೆ. ಸ್ಪೀಕರ್‌ ಯು.ಟಿ ಖಾದರ್‌ (Speaker UT Khader) ಅವರು ಮುತುವರ್ಜಿ ವಹಿಸಿ ಈ ನವೀಕರಣ ನಡೆಸಿದ್ದು, ಇದೀಗ ಒಳಾಂಗಣ ಹೈಟೆಕ್ ಸ್ಪರ್ಶದಿಂದ ಕಂಗೊಳಿಸುತ್ತಿದೆ.

ವಿಧಾನಸಭೆ ಒಳಾಂಗಣ ರೋಸ್‌ವುಡ್ ಡೋರ್, ಕಾರ್ಪೆಟ್, ಫ್ಲೋರ್ ಮ್ಯಾಟ್, ಪಿಲ್ಲರ್‌ಗಳಿಗೆ ರೋಸ್ ವುಡ್ ಕ್ಲಾಡಿಂಗ್ ಸೇರಿದಂತೆ ರೀ ಫರ್ನಿಶಿಂಗ್ ಮಾಡಲಾಗಿದೆ. ಸ್ಪೀಕರ್ ಕಚೇರಿಗೆ ಹೊಸ ಬಾಗಿಲು, ಫ್ಲೋರ್ ಮ್ಯಾಟ್, ಇತರೆ ನವೀಕರಣ ಮಾಡಲಾಗಿದೆ. PWD ಕೆಲಸವನ್ನು ಸ್ಪೀಕರ್ ಕಚೇರಿಯಿಂದಲೇ ನಿರ್ವಹಣೆ ಮಾಡಲಾಗಿದೆ.

ಮಧ್ಯಾಹ್ನ ಹೊತ್ತು ಊಟದ ಲಾಂಜ್‌ನಲ್ಲಿ ಶಾಸಕರಿಗೆ ವಿಶ್ರಾಂತಿ ಪಡೆಯಲು ಅಳವಡಿಸಲಾದ ರಿಕ್ಲೈನರ್‌ಗಳ ಬಗೆಗೆ ನಿನ್ನೆ ಸ್ಪೀಕರ್‌ ಕಲಾಪದಲ್ಲಿ ಹೇಳಿದ್ದರು. ಶಾಸಕರ ಗೈರುಹಾಜರು ತಪ್ಪಿಸಲು ಈ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದ್ದರು.

ಯಾವುದಕ್ಕೆ ಎಷ್ಟೆಷ್ಟು ಖರ್ಚು?

ವಿಧಾನಸೌಧದ ಪಶ್ಚಿಮ ಭಾಗದ ಅಸೆಂಬ್ಲಿ ಪ್ರವೇಶದ್ವಾರ, ಅಸೆಂಬ್ಲಿ ಪ್ರವೇಶದ ಮುಂಭಾಗ ಮತ್ತು ಹಿಂಭಾಗದ ಪಿಲ್ಲರ್‌ಗಳಿಗೆ ರೋಸ್ ವುಡ್ ಕ್ಲಾಡಿಂಗ್ ಮತ್ತು ಮುಂಭಾಗದ ಪಿಲ್ಲರ್ ಮತ್ತು ಹೊಸ ಬಾಗಿಲಿನ ನಡುವೆ 1 ವಾಲ್ ಕ್ಲಾಡಿಂಗ್ ಹಾಕಲು- 43 ಲಕ್ಷ

ಅಸೆಂಬ್ಲಿ ಪ್ರವೇಶ, ಆಡಳಿತ ಮತ್ತು ವಿರೋಧ ಪಕ್ಷದ ಲಾಂಜ್ ಪ್ರವೇಶ ಕಾರಿಡಾರ್, ಪಶ್ಚಿಮ ಭಾಗದ ಅಸೆಂಬ್ಲಿ ಪ್ರವೇಶ ಹಂತಗಳಿಗೆ ನೆಲದ ಕಾರ್ಪೆಟ್ ಹಾಕಲು- 32 ಲಕ್ಷ 50 ಸಾವಿರ

ಪಾಲಿಕಾರ್ಬೊನೇಟ್ ಶೀಟ್‌ನಿಂದ ಒಳಗಿನ ಕಾರಿಡಾರ್ ಓಪನ್ನಿಂಗ್‌ನ 3 ಅಸೆಂಬ್ಲಿ ಪ್ರವೇಶದ್ವಾರದ ಸುತ್ತಲೂ 10 ರಿಂದ 12 ಮಿಮೀ ದಪ್ಪದ ಟಫನ್ ಗ್ಲಾಸ್ ವಿಭಾಗವನ್ನು ಒದಗಿಸುವುದು ಮತ್ತು ಪ್ಯಾರಪೆಟ್ ರಂಧ್ರಗಳನ್ನು ಮುಚ್ಚುವುದು- 8 ಲಕ್ಷ 90 ಸಾವಿರ

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಕ್ಕೆ ಯಾಂತ್ರಿಕೃತ ರಿಕ್ಲೈನರ್ ಕುರ್ಚಿಗಳನ್ನು ಒದಗಿಸುವುದು- 23 ಲಕ್ಷ 60 ಸಾವಿರ

ಅಸೆಂಬ್ಲಿ ಪ್ರವೇಶ ಕಾರಿಡಾರ್ ಮತ್ತು ಪೂರ್ವ ಭಾಗದ ಸೆಂಟ್ರಲ್ ಹಾಲ್ ಮತ್ತು ಗ್ರ್ಯಾಂಡ್ ಸ್ಟೆಪ್ ಪ್ರವೇಶ ಗೋಡೆಗಳಿಗೆ ಪೇಂಟಿಂಗ್ ಮತ್ತು ಪಾಲಿಶಿಂಗ್ ಮಾಡುವುದು- 14 ಲಕ್ಷ 80 ಸಾವಿರ

ಸಿಎಂ ಚೇಂಬರ್, ಪ್ರೆಸ್ ಲಾಂಜ್, ಸಚಿವರ ಲಾಂಜ್ ಮತ್ತು ಮಹಿಳಾ ಲಾಂಜ್‌ನ ಶೌಚಾಲಯ ನವೀಕರಣ- 18 ಲಕ್ಷ 50 ಸಾವಿರ

ಮೊದಲ ಮಹಡಿಯ ಸೆಂಟ್ರಲ್ ಹಾಲ್‌ನಲ್ಲಿ ತಾತ್ಕಾಲಿಕ ಅಡಿಗೆ, ಊಟ, ಕುರ್ಚಿಗಳು, ಟೇಬಲ್‌ಗಳು, ವಿಭಜನೆ, ಬ್ಯಾರಿಕೇಡ್‌ಗಳನ್ನು ಹಾಕುವುದು ಮತ್ತು ಊಟದ ಟೇಬಲ್, ಟ್ಯಾಪ್ ಕ್ಲಾತ್‌ಗಳು, ಆಡಳಿತ ಮತ್ತು ವಿರೋಧ ಪಕ್ಷದಲ್ಲಿ ಕುರ್ಚಿಗಳನ್ನು ಹಾಕುವುದು ಅಧಿವೇಶನದಲ್ಲಿ ಅಸೆಂಬ್ಲಿಗೆ ಇತರ ಸಂಬಂಧಿತ ಕೆಲಸಗಳಿಗೆ- 27 ಲಕ್ಷ 75 ಸಾವಿರ

ಕಾರ್ಪೆಟ್, ಕುರ್ಚಿಗಳು, ಸೋಫಾಗಳು ಮತ್ತು ಅವುಗಳನ್ನು ತೊಳೆಯುವುದು, ನೀರು ಸರಬರಾಜು, ಪೇಂಟಿಂಗ್ ಮತ್ತು ಇತರ ಸಂಬಂಧಿತ ಕೆಲಸಗಳಿಗೆ- 10 ಲಕ್ಷ 35 ಸಾವಿರ

ಮೊದಲನೇ ಮಹಡಿಗೆ ಸ್ಟೇನ್‌ಲೆಸ್ ಸ್ಟೀಲ್ ನೇಮ್ ಬೋರ್ಡ್‌ಗಳಲ್ಲಿ ಅಸೆಂಬ್ಲಿ ಪ್ರವೇಶ ಕಾರಿಡಾರ್‌ನ ಎರಡೂ ಬದಿಗಳಿಗೆ ಸ್ಟೇನ್‌ಲೆಸ್ ಸ್ಟೀಲ್ ಗ್ರಿಲ್‌ಗಳನ್ನು ಒದಗಿಸುವುದು, ಅಸೆಂಬ್ಲಿ ಪ್ರವೇಶ ನಾಮ ಫಲಕ ಅಳವಡಿಕೆಗೆ- 16 ಲಕ್ಷ 60 ಸಾವಿರ

ಒಟ್ಟು 1 ಕೋಟಿ 96 ಲಕ್ಷ ವ್ಯಯ ಮಾಡಲಾಗಿದ್ದು, ಈ ಮೂಲಕ ವಿಧಾನಸೌಧ ಹೈಟೆಕ್ ಜೊತೆ ಆಧುನಿಕ ಮಾಡಲಾಗಿದೆ.

ಇದನ್ನೂ ಓದಿ: Karnataka Assembly Live: ಇಡಿಗೆ ಹೆದರುವುದಿಲ್ಲ, ನಿಮ್ಮನ್ನು ಬಲಿ ಹಾಕಿಯೇ ಸಿದ್ಧ: ವಾಲ್ಮೀಕಿ ಹಗರಣ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ

Continue Reading

ಕ್ರೈಂ

Obscene Act: ಡ್ರೈವಿಂಗ್‌ ಹೇಳಿಕೊಡುವ ನೆಪದಲ್ಲಿ ಖಾಸಗಿ ಅಂಗ ತೋರಿಸಿದ ಟ್ರೇನರ್‌, ಯುವತಿಯ ದೂರು

Obscene Act: ಯುವತಿಯನ್ನು ಕಾರು ಚಾಲನೆಯ ನೆಪದಲ್ಲಿ ಕೂರಿಸಿಕೊಂಡು ಕರೆದುಕೊಂಡು ಖಾಸಗಿ ಅಂಗ ಪ್ರದರ್ಶಿಸಿ ಟ್ರೇನರ್‌ ಅಸಭ್ಯ ವರ್ತನೆ ತೋರಿದ್ದಾನೆ. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಫ್ಲೈಓವರ್‌ನಲ್ಲಿ ಈ ಘಟನೆ ನಡೆದಿದೆ. 18 ವರ್ಷದ ಯುವತಿಯ ಜೊತೆ ಕಾರ್ ಡ್ರೈವಿಂಗ್ ಟ್ರೈನರ್ ಅಸಭ್ಯ ವರ್ತನೆ ತೋರಿದ್ದಾನೆ.

VISTARANEWS.COM


on

odscene act driver
Koo

ಬೆಂಗಳೂರು: ರಾಜಧಾನಿಯಲ್ಲಿ ಮಹಿಳೆಯರಿಗೆ ಪುಂಡ ಪೋಕರಿಗಳ‌ ಕಿರುಕುಳ ಹೆಚ್ಚಾಗುತ್ತಿದೆ ಎಂಬ ದೂರುಗಳ ನಡುವೆ, ಇನ್ನೊಂದು ಅಂಥದೇ ಘಟನೆ ನಡೆದಿದೆ. ಕಾರ್ ಡ್ರೈವಿಂಗ್ (Car driving) ಹೇಳಿಕೊಡುವ‌ ನೆಪದಲ್ಲಿ ಟ್ರೈನರ್ (Driving trainer) ಒಬ್ಬ ಅಸಭ್ಯ ವರ್ತನೆ (Obscene Act) ತೋರಿಸಿದ್ದಾನೆ.

ಯುವತಿಯನ್ನು ಕಾರು ಚಾಲನೆಯ ನೆಪದಲ್ಲಿ ಕೂರಿಸಿಕೊಂಡು ಕರೆದುಕೊಂಡು ಖಾಸಗಿ ಅಂಗ ಪ್ರದರ್ಶಿಸಿ ಟ್ರೇನರ್‌ ಅಸಭ್ಯ ವರ್ತನೆ ತೋರಿದ್ದಾನೆ. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಫ್ಲೈಓವರ್‌ನಲ್ಲಿ ಈ ಘಟನೆ ನಡೆದಿದೆ. 18 ವರ್ಷದ ಯುವತಿಯ ಜೊತೆ ಕಾರ್ ಡ್ರೈವಿಂಗ್ ಟ್ರೈನರ್ ಅಸಭ್ಯ ವರ್ತನೆ ತೋರಿದ್ದಾನೆ.

ಬಸವೇಶ್ವರ ನಗರದ ಮಾರುತಿ ಡ್ರೈವಿಂಗ್ ಸ್ಕೂಲ್‌ನಲ್ಲಿ ಯುವತಿ ಟ್ರೈನಿಂಗ್‌ಗೆ ಸೇರಿದ್ದರು. ಈ ವೇಳೆ ಅಣ್ಣಪ್ಪ ಎಂಬಾತ ಪರ್ಸನಲ್ ಟ್ರೈನರ್ ಆಗಿ ಡ್ರೈವಿಂಗ್ ಕಲಿಸಿಕೊಡಲು ಮುಂದಾಗಿದ್ದ. ಆದರೆ ಕಳೆದ ವಾರ ಬೆಳಗ್ಗೆ 6.30ಕ್ಕೆ ಕಾರ್‌ನಲ್ಲಿದ್ದ ಅಣ್ಣಪ್ಪ ಅಸಭ್ಯ ವರ್ತನೆ ತೋರಿದ್ದಾನೆ. ಯುವತಿ ಪಕ್ಕದಲ್ಲಿ ಕೂತು ಖಾಸಗಿ ಅಂಗ ಪ್ರದರ್ಶನ ಮಾಡಿದ್ದಾನೆ. ಈ ಬಗ್ಗೆ ಬಸವೇಶ್ವರ ನಗರ ಠಾಣೆಗೆ ಯುವತಿ ದೂರು ನೀಡಿದ್ದಾರೆ. ಅಣ್ಣಪ್ಪನ ವಿರುದ್ಧ FIR ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.

ರಸ್ತೆಯಲ್ಲಿ ಗೂಂಡಾಗಿರಿ, ಇನೋವಾ ಚಾಲಕನ ಮೇಲೆ ಫಾರ್ಚುನರ್‌ನಲ್ಲಿದ್ದ ತಂಡದಿಂದ ತೀವ್ರ ಹಲ್ಲೆ

ಬೆಂಗಳೂರು: ತಮ್ಮ ಐಷಾರಾಮಿ ಫಾರ್ಚುನರ್ ಕಾರು (Fortuner Car) ಹೋಗೋಕೆ ದಾರಿ ಬಿಡಲಿಲ್ಲ ಎಂದು ಬಾಡಿಗೆ ಇನೋವಾ ಕಾರಿನ (Innova Car) ಚಾಲಕನ ಮೇಲೆ ಒಂದು ತಂಡ ಯದ್ವಾತದ್ವಾ ಹಲ್ಲೆ (Assault Case) ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜಧಾನಿಯಲ್ಲಿ ನಡೆಯುತ್ತಿರುವ ರೋಡ್‌ ರೇಜ್‌ (Road Rage) ಪ್ರಕರಣಗಳಿಗೆ ಇದು ಇನ್ನೊಂದು ಸೇರ್ಪಡೆ.

ರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಚಾಲಕನ ಮೇಲೆ ತಂಡ ಹಲ್ಲೆ ನಡೆಸಿದೆ. ಕಾಲಿನಿಂದ ತುಳಿದು, ಕರಾಟೆ ಕಿಕ್‌ ನೀಡಿ ಡ್ರೈವರ್‌ನನ್ನು ಗಾಯಗೊಳಿಸಲಾಗಿದೆ. ಈ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಫಾರ್ಚುನರ್ ಕಾರಿನಲ್ಲಿ ಇದ್ದ ಪುಂಡರ ಗುಂಪು, ಮುಂದೆ ಇದ್ದ ಇನೋವಾ ಕಾರು ಚಾಲಕ ತಮ್ಮ ವಾಹನ ಮುಂದೆ ಹೋಗಲು ಬಿಟ್ಟಿಲ್ಲ ಎಂದು ಆತನನ್ನು ಹೊರಗೆಳೆದು ಅವನ ಮೇಲೆ ಹಲ್ಲೆ ನಡೆಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಡಾ. ಪ್ರಜ್ವಿತ್ ರೈ ಎಂಬವರು ಪೋಸ್ಟ್ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಸಹಾಯಕನ ಮೇಲೆ ಹೀಗೆ ಹಲ್ಲೆ ಮಾಡಲಾಗಿದೆ. ಈ ರೀತಿ ಅಸಹಾಯಕರ ಮೇಲೆ ದರ್ಪ ತೋರುವವರಿಗೆ ಶಿಕ್ಷೆ ಆಗಬೇಕು ಎಂದು ಪೋಸ್ಟ್ ಹಾಕಿದ್ದಾರೆ. ಪೋಸ್ಟ್‌ಗೆ ʼದರ್ಶನ್ʼ ಮತ್ತು ʼರೇಣುಕಾಸ್ವಾಮಿʼ ಹೆಸರಿನ ಹ್ಯಾಶ್‌ಟ್ಯಾಗ್ ಹಾಕಲಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರು ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ: Shiradi Ghat: ಭೂಕುಸಿತ; ಶಿರಾಡಿ ಘಾಟ್​ನಲ್ಲಿ ಸಂಚಾರ ನಿಷೇಧ ​; ಬೆಂಗಳೂರು- ಮಂಗಳೂರು ಸಂಪರ್ಕ ಬಹುತೇಕ ಕಟ್​

Continue Reading

ಬೆಳಗಾವಿ

Road Accident: ಬೈಕ್‌ಗಳು ಮುಖಾಮುಖಿ ಡಿಕ್ಕಿ, ಇಬ್ಬರು ಸಾವು, ಇಬ್ಬರು ಗಂಭೀರ

Road Accident: ಮೃತರನ್ನು ಬಸವರಾಜ ಪ್ರಭುನವರ್(48), ಯಲ್ಲಪ್ಪ ಕೊರವಿನಕೊಪ್ಪ( 46) ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಬೈಕ್ ಸವಾರರಿಗೆ ಗಂಭೀರ ‌ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

VISTARANEWS.COM


on

road accident savadatti belagavi news
Koo

ಬೆಳಗಾವಿ: ಬೈಕ್‌ಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ‌ಇಬ್ಬರು ಸವಾರರು ಸಾವಿಗೀಡಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಬಳಿ ಘಟನೆ ನಡೆದಿದೆ.

ಮೃತರನ್ನು ಬಸವರಾಜ ಪ್ರಭುನವರ್(48), ಯಲ್ಲಪ್ಪ ಕೊರವಿನಕೊಪ್ಪ( 46) ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಬೈಕ್ ಸವಾರರಿಗೆ ಗಂಭೀರ ‌ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Road Rage: ರಸ್ತೆಯಲ್ಲಿ ಗೂಂಡಾಗಿರಿ, ಇನೋವಾ ಚಾಲಕನ ಮೇಲೆ ಫಾರ್ಚುನರ್‌ನಲ್ಲಿದ್ದ ತಂಡದಿಂದ ತೀವ್ರ ಹಲ್ಲೆ

ಬೆಂಗಳೂರು: ತಮ್ಮ ಐಷಾರಾಮಿ ಫಾರ್ಚುನರ್ ಕಾರು (Fortuner Car) ಹೋಗೋಕೆ ದಾರಿ ಬಿಡಲಿಲ್ಲ ಎಂದು ಬಾಡಿಗೆ ಇನೋವಾ ಕಾರಿನ (Innova Car) ಚಾಲಕನ ಮೇಲೆ ಒಂದು ತಂಡ ಯದ್ವಾತದ್ವಾ ಹಲ್ಲೆ (Assault Case) ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜಧಾನಿಯಲ್ಲಿ ನಡೆಯುತ್ತಿರುವ ರೋಡ್‌ ರೇಜ್‌ (Road Rage) ಪ್ರಕರಣಗಳಿಗೆ ಇದು ಇನ್ನೊಂದು ಸೇರ್ಪಡೆ.

ರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಚಾಲಕನ ಮೇಲೆ ತಂಡ ಹಲ್ಲೆ ನಡೆಸಿದೆ. ಕಾಲಿನಿಂದ ತುಳಿದು, ಕರಾಟೆ ಕಿಕ್‌ ನೀಡಿ ಡ್ರೈವರ್‌ನನ್ನು ಗಾಯಗೊಳಿಸಲಾಗಿದೆ. ಈ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಫಾರ್ಚುನರ್ ಕಾರಿನಲ್ಲಿ ಇದ್ದ ಪುಂಡರ ಗುಂಪು, ಮುಂದೆ ಇದ್ದ ಇನೋವಾ ಕಾರು ಚಾಲಕ ತಮ್ಮ ವಾಹನ ಮುಂದೆ ಹೋಗಲು ಬಿಟ್ಟಿಲ್ಲ ಎಂದು ಆತನನ್ನು ಹೊರಗೆಳೆದು ಅವನ ಮೇಲೆ ಹಲ್ಲೆ ನಡೆಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಡಾ. ಪ್ರಜ್ವಿತ್ ರೈ ಎಂಬವರು ಪೋಸ್ಟ್ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಸಹಾಯಕನ ಮೇಲೆ ಹೀಗೆ ಹಲ್ಲೆ ಮಾಡಲಾಗಿದೆ. ಈ ರೀತಿ ಅಸಹಾಯಕರ ಮೇಲೆ ದರ್ಪ ತೋರುವವರಿಗೆ ಶಿಕ್ಷೆ ಆಗಬೇಕು ಎಂದು ಪೋಸ್ಟ್ ಹಾಕಿದ್ದಾರೆ. ಪೋಸ್ಟ್‌ಗೆ ʼದರ್ಶನ್ʼ ಮತ್ತು ʼರೇಣುಕಾಸ್ವಾಮಿʼ ಹೆಸರಿನ ಹ್ಯಾಶ್‌ಟ್ಯಾಗ್ ಹಾಕಲಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರು ಮಾಹಿತಿ ಪಡೆದಿದ್ದಾರೆ.

ಶಂಕಿತ ಡೆಂಗ್ಯು ಜ್ವರಕ್ಕೆ ಯುವತಿ ಸಾವು, ಮರಣ ಮೃದಂಗ ಬಾರಿಸುತ್ತಿರುವ ಜ್ವರ

ದಾವಣಗೆರೆ: ಜ್ವರದಿಂದ ಬಳಲುತ್ತಿದ್ದ ಯುವತಿಯೊಬ್ಬರು ಸಾವಿಗೀಡಾಗಿದ್ದಾರೆ. ಡೆಂಗ್ಯು ಜ್ವರದಿಂದ ಸಾವನ್ನಪ್ಪಿರುವ ಶಂಕೆ ಇದ್ದು, ಪರೀಕ್ಷಾ ವರದಿ ಬರಬೇಕಿದೆ.

ರೇಖಾ ಎನ್ (19) ಸಾವನ್ನಪ್ಪಿದ ಯುವತಿ. ದಾವಣಗೆರೆ ಜಿಲ್ಲೆಯ‌ ಜಗಳೂರ ಪಟ್ಟಣದ ರಾಮಾಲಯ ರಸ್ತೆ ನಿವಾಸಿ ರೇಖಾ ಕಳೆದ ಕೆಲ ದಿನಗಳ ಹಿಂದೆ ನಾಮಕರಣ ಶಾಸ್ತ್ರ ಕಾರ್ಯಕ್ರಮಕ್ಕೆ ಬಳ್ಳಾರಿಗೆ ತೆರಳಿದ್ದರು. ಅಲ್ಲಿ ತೀವ್ರ ಜ್ವರದಿಂದ ಬಳಲಿದ್ದ ರೇಖಾಗೆ ಬಳ್ಳಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಬಳ್ಳಾರಿಯಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಧಿಕೃತ ವರದಿ‌ ನಿರೀಕ್ಷಿಸಲಾಗಿದೆ. ಈ ಬಗ್ಗೆ ಜಗಳೂರು ತಾಲೂಕು ವೈದ್ಯಾಧಿಕಾರಿ ಡಾ. ವಿಶ್ವನಾಥ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Sexual Abuse : ಬಿಸ್ಕೆಟ್‌ಗೆ ಆಸೆ ಪಟ್ಟು ಹೋಗಿದ್ದ ಪುಟ್ಟ ಬಾಲಕಿ ಕಾಮುಕನ ಕೈಗೆ ಸಿಕ್ಕಿ ಕೊಲೆಯಾದಳು

Continue Reading

ಬೆಂಗಳೂರು

Road Rage: ರಸ್ತೆಯಲ್ಲಿ ಗೂಂಡಾಗಿರಿ, ಇನೋವಾ ಚಾಲಕನ ಮೇಲೆ ಫಾರ್ಚುನರ್‌ನಲ್ಲಿದ್ದ ತಂಡದಿಂದ ತೀವ್ರ ಹಲ್ಲೆ

Road Rage: ಈ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಫಾರ್ಚುನರ್ ಕಾರಿನಲ್ಲಿ ಇದ್ದ ಪುಂಡರ ಗುಂಪು, ಮುಂದೆ ಇದ್ದ ಇನೋವಾ ಕಾರು ಚಾಲಕ ತಮ್ಮ ವಾಹನ ಮುಂದೆ ಹೋಗಲು ಬಿಟ್ಟಿಲ್ಲ ಎಂದು ಆತನನ್ನು ಹೊರಗೆಳೆದು ಅವನ ಮೇಲೆ ಹಲ್ಲೆ ನಡೆಸಿದೆ.

VISTARANEWS.COM


on

road rage bangalore
Koo

ಬೆಂಗಳೂರು: ತಮ್ಮ ಐಷಾರಾಮಿ ಫಾರ್ಚುನರ್ ಕಾರು (Fortuner Car) ಹೋಗೋಕೆ ದಾರಿ ಬಿಡಲಿಲ್ಲ ಎಂದು ಬಾಡಿಗೆ ಇನೋವಾ ಕಾರಿನ (Innova Car) ಚಾಲಕನ ಮೇಲೆ ಒಂದು ತಂಡ ಯದ್ವಾತದ್ವಾ ಹಲ್ಲೆ (Assault Case) ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜಧಾನಿಯಲ್ಲಿ ನಡೆಯುತ್ತಿರುವ ರೋಡ್‌ ರೇಜ್‌ (Road Rage) ಪ್ರಕರಣಗಳಿಗೆ ಇದು ಇನ್ನೊಂದು ಸೇರ್ಪಡೆ.

ರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಚಾಲಕನ ಮೇಲೆ ತಂಡ ಹಲ್ಲೆ ನಡೆಸಿದೆ. ಕಾಲಿನಿಂದ ತುಳಿದು, ಕರಾಟೆ ಕಿಕ್‌ ನೀಡಿ ಡ್ರೈವರ್‌ನನ್ನು ಗಾಯಗೊಳಿಸಲಾಗಿದೆ. ಈ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಫಾರ್ಚುನರ್ ಕಾರಿನಲ್ಲಿ ಇದ್ದ ಪುಂಡರ ಗುಂಪು, ಮುಂದೆ ಇದ್ದ ಇನೋವಾ ಕಾರು ಚಾಲಕ ತಮ್ಮ ವಾಹನ ಮುಂದೆ ಹೋಗಲು ಬಿಟ್ಟಿಲ್ಲ ಎಂದು ಆತನನ್ನು ಹೊರಗೆಳೆದು ಅವನ ಮೇಲೆ ಹಲ್ಲೆ ನಡೆಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಡಾ. ಪ್ರಜ್ವಿತ್ ರೈ ಎಂಬವರು ಪೋಸ್ಟ್ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಸಹಾಯಕನ ಮೇಲೆ ಹೀಗೆ ಹಲ್ಲೆ ಮಾಡಲಾಗಿದೆ. ಈ ರೀತಿ ಅಸಹಾಯಕರ ಮೇಲೆ ದರ್ಪ ತೋರುವವರಿಗೆ ಶಿಕ್ಷೆ ಆಗಬೇಕು ಎಂದು ಪೋಸ್ಟ್ ಹಾಕಿದ್ದಾರೆ. ಪೋಸ್ಟ್‌ಗೆ ʼದರ್ಶನ್ʼ ಮತ್ತು ʼರೇಣುಕಾಸ್ವಾಮಿʼ ಹೆಸರಿನ ಹ್ಯಾಶ್‌ಟ್ಯಾಗ್ ಹಾಕಲಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರು ಮಾಹಿತಿ ಪಡೆದಿದ್ದಾರೆ.

Dengue fever: ಶಂಕಿತ ಡೆಂಗ್ಯು ಜ್ವರಕ್ಕೆ ಯುವತಿ ಸಾವು

ದಾವಣಗೆರೆ: ಜ್ವರದಿಂದ ಬಳಲುತ್ತಿದ್ದ ಯುವತಿಯೊಬ್ಬರು ಸಾವಿಗೀಡಾಗಿದ್ದಾರೆ. ಡೆಂಗ್ಯು ಜ್ವರದಿಂದ ಸಾವನ್ನಪ್ಪಿರುವ ಶಂಕೆ ಇದ್ದು, ಪರೀಕ್ಷಾ ವರದಿ ಬರಬೇಕಿದೆ.

ರೇಖಾ ಎನ್ (19) ಸಾವನ್ನಪ್ಪಿದ ಯುವತಿ. ದಾವಣಗೆರೆ ಜಿಲ್ಲೆಯ‌ ಜಗಳೂರ ಪಟ್ಟಣದ ರಾಮಾಲಯ ರಸ್ತೆ ನಿವಾಸಿ ರೇಖಾ ಕಳೆದ ಕೆಲ ದಿನಗಳ ಹಿಂದೆ ನಾಮಕರಣ ಶಾಸ್ತ್ರ ಕಾರ್ಯಕ್ರಮಕ್ಕೆ ಬಳ್ಳಾರಿಗೆ ತೆರಳಿದ್ದರು. ಅಲ್ಲಿ ತೀವ್ರ ಜ್ವರದಿಂದ ಬಳಲಿದ್ದ ರೇಖಾಗೆ ಬಳ್ಳಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಬಳ್ಳಾರಿಯಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಧಿಕೃತ ವರದಿ‌ ನಿರೀಕ್ಷಿಸಲಾಗಿದೆ. ಈ ಬಗ್ಗೆ ಜಗಳೂರು ತಾಲೂಕು ವೈದ್ಯಾಧಿಕಾರಿ ಡಾ. ವಿಶ್ವನಾಥ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Road Rage Case: ಬೆಂಗಳೂರಲ್ಲಿ ಕಿಡಿಗೇಡಿಗಳಿಂದ ಕಾರು ಮಾಲೀಕನ ಕಾಪಾಡಿದ ಡ್ಯಾಶ್‌ ಕ್ಯಾಮೆರಾ; ವಿಡಿಯೊ ಇದೆ

Continue Reading
Advertisement
Kiran Kumar
ಕರ್ನಾಟಕ11 mins ago

ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯಿಂದ ಕಿರಣ್‌ ಕುಮಾರ್‌ ಡಿ ಕೆ ಅಮಾನತು

Assembly monsoon session UT Khader karnataka assembly live
ಪ್ರಮುಖ ಸುದ್ದಿ16 mins ago

Assembly Monsoon Session: ಮುಂಗಾರು ಅಧಿವೇಶನಕ್ಕೆ ಮುನ್ನವೇ 2 ಕೋಟಿ ಖರ್ಚು ಮಾಡಿ ವಿಧಾನಸೌಧ ಸಿಂಗಾರ!

Virat Kohli
ಕ್ರೀಡೆ21 mins ago

Virat Kohli: ಲಂಕಾ ಸರಣಿಯಲ್ಲಿ ರನ್​ ದಾಖಲೆ ಬರೆಯಲು ಸಜ್ಜಾದ ವಿರಾಟ್​ ಕೊಹ್ಲಿ

Actor Darshan 4th accused mother dies
ಸ್ಯಾಂಡಲ್ ವುಡ್32 mins ago

Actor Darshan: ದರ್ಶನ್‌ ಗ್ಯಾಂಗ್‌ನ ನಾಲ್ಕನೇ ಆರೋಪಿ ತಾಯಿ ನಿಧನ

Microsoft Global Outage
ದೇಶ33 mins ago

Microsoft Global Outage: ಮೈಕ್ರೊಸಾಫ್ಟ್ ಟ್ರಬಲ್; ಯಾರ ಮೇಲೆ ಏನು ಪರಿಣಾಮ? ಮುಂದೇನು?

Mohammed Shami
ಕ್ರೀಡೆ50 mins ago

Mohammed Shami: ಕೊಹ್ಲಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಶಮಿ; ವಿಡಿಯೊ ವೈರಲ್​

Kannada New Movie Moorane Krishnappa in OTT
ಸಿನಿಮಾ51 mins ago

Kannada New Movie: ಸದ್ದಿಲ್ಲದೇ ಒಟಿಟಿಗೆ ಲಗ್ಗೆ ಇಟ್ಟ ರಂಗಾಯಣ ರಘು ಅಭಿನಯದ ‘ಮೂರನೇ ಕೃಷ್ಣಪ್ಪ’ ಸಿನಿಮಾ!

odscene act driver
ಕ್ರೈಂ1 hour ago

Obscene Act: ಡ್ರೈವಿಂಗ್‌ ಹೇಳಿಕೊಡುವ ನೆಪದಲ್ಲಿ ಖಾಸಗಿ ಅಂಗ ತೋರಿಸಿದ ಟ್ರೇನರ್‌, ಯುವತಿಯ ದೂರು

Vicky Kaushal box office collection Movie Collects Only 8 Crore
ಬಾಲಿವುಡ್1 hour ago

Vicky Kaushal: ವಿಕ್ಕಿ ಕೌಶಲ್ ಅಭಿನಯದ ‘ಬ್ಯಾಡ್ ನ್ಯೂಸ್’ ಚಿತ್ರಕ್ಕೆ ಕಳಪೆ ಕಲೆಕ್ಷನ್ ; ಮೊದಲ ದಿನದ ಗಳಿಕೆ ಎಷ್ಟು?

Paris Olympics
ಕ್ರೀಡೆ1 hour ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಕನ್ನಡತಿ ಭಾವನಾ ಪ್ರದ್ಯುಮ್ನ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ21 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ22 hours ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ6 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌