Food Poisoning: ಫುಡ್‌ ಪಾಯ್ಸನ್‌ ಆದಾಗ ಏನು ಮಾಡಬೇಕು? - Vistara News

ಆರೋಗ್ಯ

Food Poisoning: ಫುಡ್‌ ಪಾಯ್ಸನ್‌ ಆದಾಗ ಏನು ಮಾಡಬೇಕು?

Food Poisoning: ಆಹಾರ ಕಲುಷಿತಗೊಳ್ಳುವುದಕ್ಕೆ ಹಲವು ಕಾರಣಗಳಿರಬಹುದು. ಬ್ಯಾಕ್ಟೀರಿಯ, ವೈರಸ್‌ ಅಥವಾ ಇತರ ಸೂಕ್ಷ್ಮಾಣುಗಳು ಅದರಲ್ಲಿ ಇರಬಹುದು. ಟಾಕ್ಸಿನ್‌ಗಳು ಸೇರಿರಬಹುದು. ಚಿಕಿತ್ಸೆಯ ನಂತರ ಈ ಸಮಸ್ಯೆ ಪೂರ್ಣ ಗುಣವಾಗುತ್ತದೆ. ಏನು ಫುಡ್‌ ಪಾಯ್ಸನ್‌ ಎಂದರೆ? ಏನಿದರ ಲಕ್ಷಣಗಳು? ಇಲ್ಲಿದೆ ವಿವರ.

VISTARANEWS.COM


on

What is Food Poisoning?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾಲಿವುಡ್‌ ನಟಿ (Bollywood actress) ಜಾಹ್ನವಿ ಕಪೂರ್‌ (Janhvi Kapoor) ಫುಡ್‌ ಪಾಯ್ಸನ್‌ನಿಂದಾಗಿ (What is Food Poisoning?) ಆಸ್ಪತ್ರೆ ಸೇರಿದ ಸುದ್ದಿಯ ಬೆನ್ನಲ್ಲೇ ಈ ಸಮಸ್ಯೆಯ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯುವ ಉದ್ದೇಶವಿದು. ಹೊಟ್ಟೆ ಹಾಳಾಗಿದೆ ಎಂದಾಕ್ಷಣ, ʻಫುಡ್‌ ಪಾಯ್ಸನ್‌ʼ ಆಗಿದೆ ಎಂಬ ಮಾತು ಕೇಳಿಬರುತ್ತದೆ.

ಕಲುಷಿತ ಆಹಾರದ ಸೇವನೆಯಿಂದ ಬರುವ ಸಮಸ್ಯೆಯಿದು ಎಂಬುದು ಎಲ್ಲರಿಗೂ ಗೊತ್ತು. ಹಾಗಾದರೆ ತಾರೆಯರಿಗೆ ಒಳ್ಳೆಯ ಆಹಾರ ಸೇವಿಸಬೇಕೆಂಬುದು ತಿಳಿದಿರುವುದಿಲ್ಲವೇ? ಎಲ್ಲೆಂದರಲ್ಲಿ ತಿಂದು ಹೀಗೆ ಹೊಟ್ಟೆ ಹಾಳು ಮಾಡಿಕೊಳ್ಳುತ್ತಾರೆಯೇ? ಏನು ಫುಡ್‌ ಪಾಯ್ಸನ್‌ ಎಂದರೆ? ಏನಿದರ ಲಕ್ಷಣಗಳು?

ಆಹಾರ ಕಲುಷಿತಗೊಳ್ಳುವುದಕ್ಕೆ ಹಲವು ಕಾರಣಗಳಿರಬಹುದು. ಬ್ಯಾಕ್ಟೀರಿಯ, ವೈರಸ್‌ ಅಥವಾ ಇತರ ಸೂಕ್ಷ್ಮಾಣುಗಳು ಅದರಲ್ಲಿ ಇರಬಹುದು. ಟಾಕ್ಸಿನ್‌ಗಳು ಸೇರಿರಬಹುದು. ಚಿಕಿತ್ಸೆಯ ನಂತರ ಈ ಸಮಸ್ಯೆ ಪೂರ್ಣ ಗುಣವಾಗುತ್ತದೆ. ಆದರೆ ಚಿಕ್ಕ ಮಕ್ಕಳು, ವೃದ್ಧರು, ಗರ್ಭಿಣಿಯರು ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಈ ಸಮಸ್ಯೆ ಹೆಚ್ಚಿನ ತೊಂದರೆಯನ್ನು ತರಬಹುದು.

ಆಹಾರದಲ್ಲಿ ಸಾಮಾನ್ಯವಾಗಿ ಬೆಳೆಯುವ ಸಾಲ್ಮೊನೆಲ್ಲ, ಇ. ಕೋಲಿ, ಲಿಸ್ಟೆರಿಯ ಮುಂತಾದ ಬ್ಯಾಕ್ಟೀರಿಯಗಳು, ನೊರೊವೈರಸ್‌, ಹೆಪಟೈಟಿಸ್‌ ಎ ಇನ್ನಿತರ ವೈರಸ್‌ಗಳು, ಟೊಕ್ಸೊಪ್ಲಾಸ್ಮದಂಥ ಸೂಕ್ಷ್ಮಾಣುಗಳು ಆರೋಗ್ಯ ಏರುಪೇರಾಗುವುದಕ್ಕೆ ಕಾರಣವಾಗುತ್ತವೆ.

ಲಕ್ಷಣಗಳೇನು?

ವಾಂತಿ, ಹೊಟ್ಟೆ ತೊಳೆಸುವುದು, ಅತಿಸಾರ, ಹೊಟ್ಟೆ ನೋವು, ಜ್ವರ, ತಲೆನೋವು, ಸುಸ್ತು, ನಿಶ್ಶಕ್ತಿ ಇತ್ಯಾದಿ. ಕಲುಷಿತ ಆಹಾರ ಸೇವಿಸಿದ ಒಂದೆರಡು ತಾಸುಗಳಲ್ಲೇ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಒಂದೆರಡು ದಿನವೂ ಆಗಬಹುದು. ಕೆಲವರು ಅಲ್ಪ ಕಾಲದ ಅನಾರೋಗ್ಯದ ನಂತರ ಚೇತರಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಹಲವಾರು ದಿನಗಳೂ ಬೇಕಾಗಬಹುದು. ಒಂದೊಮ್ಮೆ ವಾಂತಿ-ಅತಿಸಾರದಂಥ ಲಕ್ಷಣಗಳು ಹೆಚ್ಚಾದರೆ ಆಸ್ಪತ್ರೆ ದರ್ಶನ ಮಾಡಲೇಬೇಕಾಗುತ್ತದೆ.

ಏನು ಮಾಡಬಹುದು?

ಲಕ್ಷಣಗಳು ಸೌಮ್ಯವಾಗಿದ್ದರೆ, ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲೇ ಚಿಕಿತ್ಸೆ ಸಾಧ್ಯವಿದೆ. ವಾಂತಿ- ಅತಿಸಾರದಿಂದ ದೇಹ ಬಳಲಿದ್ದರೆ ಸಾಕಷ್ಟ ದ್ರವಾಹಾರವನ್ನು ಸೇವಿಸಿ. ಹಾಗಿಲ್ಲದಿದ್ದರೆ ನಿರ್ಜಲೀಕರಣದ ಅಪಾಯ ಎದುರಾಗಬಹುದು. ದೇಹಕ್ಕೆ ಏನೇ ಸಮಸ್ಯೆಯಾದರೂ, ಅದು ಗುಣವಾಗುವುದಕ್ಕೆ ವಿಶಾಂತಿ ಬೇಕು. ಚೆನ್ನಾಗಿ ನಿದ್ರೆ ಮಾಡಿ. ಇದಕ್ಕೆ ಏನು ಮದ್ದು ಮಾಡಬಹುದು ಎಂಬುದನ್ನು ಗೂಗಲ್‌ ಮಾಡುತ್ತಾ ಸಮಯ ಹಾಳು ಮಾಡಬೇಡಿ.

What is Food Poisoning?


ಆಹಾರ

ಬಾಳೆಹಣ್ಣು, ಅನ್ನ, ಸೇಬುಹಣ್ಣು ಮುಂತಾದ ಮೆತ್ತನೆಯ ಆಹಾರಗಳು ಈ ಹೊತ್ತಿಗೆ ಸೂಕ್ತ. ದಾಳಿಂಬೆ ಹಣ್ಣು ಅಥವಾ ರಸ ಹೊಟ್ಟೆಯ ತೊಂದರೆಗೆ ಆರಾಮ ನೀಡುತ್ತದೆ. ಹೊಟ್ಟೆಯ ಲಕ್ಷಣಗಳಿಂದ ಆಸಿಡಿಟಿ ಆಗಿದ್ದರೆ, ಎಳನೀರು ಮತ್ತು ಬೂದು ಕುಂಬಳಕಾಯಿಯ ರಸಗಳು ಆರಾಮ ನೀಡಬಲ್ಲವು.

ಶುಂಠಿಯ ಕಷಾಯ ಅಥವಾ ಚಹಾ ಸಹ ಉಪಶಮನ ನೀಡುತ್ತದೆ. ಮೊಸರು, ಮಜ್ಜಿಗೆ ಮುಂತಾದ ಪ್ರೊಬಯಾಟಿಕ್‌ ಆಹಾರಗಳು, ಪ್ರೊಬಯಾಟಿಕ್‌ ಎನ್‌ಜೈಮ್‌ಗಳು ಈ ಸಮಸ್ಯೆ ಬೇಗ ಗುಣವಾಗುವಲ್ಲಿ ಸಹಾಯ ಮಾಡುತ್ತವೆ.

ಇದನ್ನೂ ಓದಿ: Health Tips Kannada: ಚಹಾದಿಂದ ಅಸಿಡಿಟಿಯೇ? ಹಾಗಾದರೆ ನೀವು ಈ 5 ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದರ್ಥ!


ತಡೆಯಲಾಗದೇ?

ಯಾಕಾಗದು? ಖಂಡಿತ! ಪ್ರತಿ ಬಾರಿ ಊಟ-ತಿಂಡಿಯ ಸಮಯಗಳಲ್ಲಿ ಕೈಗಳಲ್ಲಿ ಸರಿಯಾಗಿ ತೊಳೆದುಕೊಳ್ಳಿ. ಉಪಯೋಗಿಸುವ ತಟ್ಟೆ, ಚಮಚಗಳು ಸಹ ಸ್ವಚ್ಛವಾಗಿರುವುದು ಮುಖ್ಯ. ಮನೆಯಲ್ಲಿ ಉಳಿಕೆ ಆಹಾರವನ್ನು ಸಮರ್ಪಕವಾಗಿ ದಾಸ್ತಾನು ಮಾಡಿ. ಫ್ರಿಜ್‌ನಲ್ಲಿರುವ ಆಹಾರವನ್ನು ತಿನ್ನುವಾಗ, ಅವುಗಳನ್ನು ಉಗಿ ಹಾಯುವಂತೆ ಬಿಸಿ ಮಾಡಿ.

ಮೊಟ್ಟೆ, ಮೀನು ಅಥವಾ ಇನ್ನಾವುದೇ ಮಾಂಸವನ್ನು ಹಸಿಯಾಗಿ ಎಂದಿಗೂ ತಿನ್ನಬೇಡಿ. ಕುಡಿಯುವ ನೀರು ಶುದ್ಧವಾಗಿರುವಂತೆ ನೋಡಿಕೊಳ್ಳಿ. ಅನುಮಾನವಿದ್ದರೆ ಕುದಿಸಿಯೇ ಕುಡಿಯಿರಿ. ಹೊರಗೆ ಎಲ್ಲಿಯೇ ಆಹಾರ ಸೇವಿಸಿದರೂ, ಬಿಸಿಯಾಗಿದ್ದನ್ನೇ ತಿನ್ನಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Dengue Fever : ಡೆಂಗ್ಯೂ ಭೀತಿ- ಸೊಳ್ಳೆಗಳ ನಾಶಕ್ಕೆ ಫೀಲ್ಡಿಗಿಳಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

Dengue Fever : ಡೆಂಗ್ಯೂ ವಿರುದ್ಧದ ಜಾಗೃತಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ವತಃ ಫೀಲ್ಡಿಗಿಳಿದರು. ಇದೇ ವೇಳೆ ಬೆಂಗಳೂರಿನ ರಾಮಸ್ವಾಮಿಪಾಳ್ಯ ಕೊಳೆಗೆರೆ ಪ್ರದೇಶದಲ್ಲಿ ಫೀವರ್ ಕ್ಲಿನಿಕ್‌ಗೆ ಚಾಲನೆ ನೀಡಿ, ವಸಂತನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶೀಘ್ರ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಲು ಸೂಚನೆ ನೀಡಿದರು.

VISTARANEWS.COM


on

By

Dengue Fever
Koo

ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಡೆಂಗ್ಯೂ ಪ್ರಕರಣಗಳು (Dengue Fever) ಹೆಚ್ಚಾಗುತ್ತಿದೆ. ಹೀಗಾಗಿ ಖುದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅವರೇ ಫೀಲ್ಡಿಗಿಳಿದು ಜಾಗೃತಿ ಮೂಡಿಸಲು ಮುಂದಾದರು. ಡೆಂಗ್ಯೂ ನಿಯಂತ್ರಣಕ್ಕೆ ಪ್ರತಿ ಶುಕ್ರವಾರ ಆರೋಗ್ಯ ಇಲಾಖೆ ನಡೆಸುತ್ತಿರುವ ಈಡಿಸ್ ಲಾರ್ವಾ ನಾಶಪಡಿಸುವ ಅಭಿಯಾನದಲ್ಲಿ ಸಚಿವರು ಭಾಗಿಯಾದರು.

ಬೆಂಗಳೂರಿನ ವಸಂತನಗರ, ರಾಮಸ್ವಾಮಿಪಾಳ್ಯದಲ್ಲಿ ಮನೆ ಮನೆಗೆ ತೆರಳಿ ಡೆಂಗ್ಯೂ ಹರಡುವ ಸೊಳ್ಳೆ ಉತ್ಪತ್ತಿ ತಾಣಗಳ ಪರಿಶೀಲನೆ ನಡೆಸಿದರು. ಲಾರ್ವಾ ನಾಶಪಡಿಸುವ ಔಷಧಿ ಸಿಂಪಡಿಸಿದ ಸಚಿವರು, ಫಾಗಿಂಗ್ ಕೂಡ ಮಾಡುವ ಮೂಲಕ ತಳ ಮಟ್ಟದಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸಿಬ್ಬಂದಿಗಳ ಕಾರ್ಯಕ್ಕೆ ಉತ್ಸಾಹ ತುಂಬಿದರು. ಅಲ್ಲದೇ ನಿವಾಸಿಗಳಲ್ಲಿ ಡೆಂಗ್ಯೂ ವಿಚಾರವಾಗಿ ಎಚ್ಚರ ವಹಿಸಿ, ನೀರು ಶೇಖರಣೆಯಾಗದಂತೆ ಮುಂಜಾಗೃತೆ ಕ್ರಮಗಳನ್ನು ಅನುಸರಿಸಿ ಎಂದು ಕರೆ ನೀಡಿದರು.

ರಾಮಸ್ವಾಮಿ ಪಾಳ್ಯದ ಕೊಳಗೇರಿ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಡೀಟ್(Odomos) ಕ್ರೀಮ್ ವಿತರಿಸಿದ ಆರೋಗ್ಯ ಸಚಿವರು, ಕೈ ಮತ್ತು ಕಾಲುಗಳಿಗೆ ಹಚ್ಚಿಕೊಳ್ಳಲು ತಿಳಿಸಿದರು. ಅಲ್ಲದೆ ಡೆಂಗ್ಯೂ ನಿಯಂತ್ರಣಕ್ಕಾಗಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ನಿಮ್ಮ ಮನೆಯಲ್ಲಿ ಪೋಷಕರು ಹಾಗೂ ಸುತ್ತಮುತ್ತಲಿನ ಮನೆಯವರಲ್ಲಿ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ತಿಳಿಸಿದರು.

ಇದನ್ನೂ ಓದಿ: Road Accident : ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ದಂಪತಿ ಗಂಭೀರ; ಎಎಸ್‌ಐಗೆ ಬಡಿದ ಅಪರಿಚಿತ ವಾಹನ

100 ಮೀ ಅಂತರದಲ್ಲಿ ಡೆಂಗ್ಯೂ ಹೆಚ್ಚಾದರೆ ಹಾಟ್‌ ಸ್ಪಾಟ್‌ ಎಂದು ಗುರುತು

100 ಮೀಟರ್ ವ್ಯಾಪ್ತಿಯಲ್ಲಿ 2 ಕ್ಕಿಂತ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡು ಬಂದರೆ ಅದನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗುತ್ತದೆ. ಬೆಂಗಳೂರಿನ ರಾಮಸ್ವಾಮಿ ಪಾಳ್ಯದ ಕೊಳಗೇರಿ ಪ್ರದೇಶದಲ್ಲಿ ಫೀವರ್ ಕ್ಲಿನಿಕ್‌ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಬಳಿಕ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುವ ಕೊಳಗೇರಿ ಪ್ರದೇಶಗಳಲ್ಲಿ ಫೀವರ್ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಿದರು.

Dengue Fever

ನಗರದಲ್ಲಿ 100 ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ 2 ಕ್ಕಿಂತ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡು ಬಂದರೆ ಅದನ್ನು ಹಾಟ್ ಸ್ಪಾಟ್ ಎಂದು ಗುರುತಿಸಬೇಕು. ಜೊತೆಗೆ 100 ಮೀಟರ್ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ಭೇಟಿ ನೀಡಿ ಫೀವರ್ ಪರೀಕ್ಷೆ, ಲಾರ್ವಾ ಸರ್ವೆ, ಫಾಗಿಂಗ್, ಸ್ಪ್ರೇ ಹಾಗೂ ಡೆಂಘೀ ಹರಡದಂತೆ ಮುಂಜಾಗ್ರತಾ ವಹಿಸಲು ಬಿತ್ತಿ ಪತ್ರಗಳನ್ನು ವಿತರಿಸಿ ಅರಿವು ಮೂಡಿಸಬೇಕು. ಇದಲ್ಲದೆ ಸೊಳ್ಳೆಗಳು ಕಚ್ಚದಂತೆ ಡೀಟ್(Odomos) ಕ್ರೀಮ್ ವಿತರಿಸಿ ಕೈ ಮತ್ತು ಕಾಲುಗಳಿಗೆ ಹಚ್ಚಿಕೊಳ್ಳಲು ತಿಳಿಸುವಂತೆ ಅಧಿಕಾರಿಗಳಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.

ನಗರದಲ್ಲಿ ಡೆಂಗ್ಯೂ ತಡೆಗಟ್ಟಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸುಮಾರು 3161 ತಂಡಗಳಿಂದ 25 ಲಕ್ಷ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುತ್ತಿದೆ. ನಗರದಲ್ಲಿ ಪ್ರತಿನಿತ್ಯ ಸರಾಸರಿ 130 ರಿಂದ 150 ಪ್ರಕರಣಗಳು ಕಂಡು ಬರುತ್ತಿವೆ.

ಶೀಘ್ರ ಉಚಿತ ಡಯಾಲಿಸಿಸ್ ಕೇಂದ್ರ ಆರಂಭ

ವಸಂತನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಡಯಾಲಿಸಿಸ್ ಕೇಂದ್ರ ಶೀಘ್ರದಲ್ಲಿ ಪ್ರಾರಂಭಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಿಸುವುದರಿಂದ ಇಲ್ಲಿನ ಸುತ್ತಮುತ್ತಲಿನ ಬಡವರ್ಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಅದಕ್ಕಾಗಿ ಅಗತ್ಯ ಉಪಕರಣಗಳ ವ್ಯವಸ್ಥೆ ಮಾಡಿಕೊಂಡು ತ್ವರಿತಗತಿಯಲ್ಲಿ ಕೇಂದ್ರವನ್ನು ಆರಭಿಸಬೇಕೆಂದು ತಿಳಿಸಿದರು ವಸಂತನಗರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇದೇ ವೇಳೆ ಭೇಟಿ ನೀಡಿ ಕೇಂದ್ರದ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಈ ವೇಳೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಹರ್ಷದ್, ಆರೋಗ್ಯ ಇಲಾಖೆಯ ಆಯುಕ್ತರಾದ ಡಿ. ರಂದೀಪ್, ಎನ್.ಎಚ್.ಎಮ್ ಎಂ.ಡಿ ಡಾ. ನವೀನ್ ಭಟ್ ಉಪಸ್ಥಿತರಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಹಾಸನ

Dengue Fever: ಹಾಸನದಲ್ಲಿ ಡೆಂಗ್ಯೂಗೆ ಎಂಬಿಬಿಎಸ್‌ ವಿದ್ಯಾರ್ಥಿ ಬಲಿ; ಧಾರವಾಡದಲ್ಲಿ 5 ತಿಂಗಳ ಮಗು ಸಾವು

Dengue Fever: ಹಾಸನದಲ್ಲಿ ಎಂಬಿಬಿಎಸ್‌ ವಿದ್ಯಾರ್ಥಿ ಹಾಗೂ ಧಾರವಾಡದಲ್ಲಿ 5 ತಿಂಗಳ ಮಗುವೊಂದು ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

VISTARANEWS.COM


on

By

Dengue Fever
Koo

ಹಾಸನ: ಹಾಸನದಲ್ಲಿ‌ ಡೆಂಗ್ಯೂಗೆ (Dengue Fever) ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ. ಎಂಬಿಬಿಎಸ್ ವಿದ್ಯಾರ್ಥಿ ಕುಶಾಲ್ (22) ಡೆಂಗ್ಯು ಜ್ವರದಿಂದ ಮೃತಪಟ್ಟವರು. ಹಾಸನದ ಹೊಳೆನರಸೀಪುರ ‌ತಾಲೂಕಿನ ಹಳ್ಳೀ ಮೈಸೂರು ಸಮೀಪದ ಗೋಹಳ್ಳಿ ಗ್ರಾಮದ ಕುಶಾಲ್‌, ಒಂದು ವಾರದಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಗುರುವಾರ ರಾತ್ರಿ ಕುಶಾಲ್‌ ಮೃತಪಟ್ಟಿದ್ದಾರೆ. ಪ್ರತಿಭಾನ್ವಿತ ಹಾಗೂ ಬಡ ವಿದ್ಯಾರ್ಥಿಯಾಗಿದ್ದ ಕುಶಾಲ್, ಹಾಸನದ ಹಿಮ್ಸ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ. ಕುಶಾಲ್ ಸಾವನ್ನಪ್ಪಿದ ಆಸ್ಪತ್ರೆಯಲ್ಲೇ ತಾಯಿ ರೇಖಾ ಅವರು ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಯಿ ರೇಖಾ ಮತ್ತು ತಂದೆ ಮಂಜುನಾಥ್ ಮಗನ ಎಂಬಿಬಿಎಸ್ ಕನಸು ಹೊತ್ತಿದ್ದರು. ರೇಖಾ ಟೈಲರ್ ವೃತ್ತಿ ಮಾಡುತ್ತಿದ್ದರೆ, ಮಂಜುನಾಥ್‌ ಅವರು ಶಿಕ್ಷಕ ವೃತ್ತಿಯಲ್ಲಿದ್ದರು. ಆದರೆ ಇದೀಗ ಡೆಂಗ್ಯೂಗೆ ಮಗ ಕುಶಾಲ್‌ ಬಲಿಯಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Road Accident : ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಛಿದ್ರಗೊಂಡ ದಂಪತಿ; ಎಎಸ್‌ಐಗೆ ಬಡಿದ ಅಪರಿಚಿತ ವಾಹನ

ಧಾರವಾಡದಲ್ಲೂ ಡೆಂಗ್ಯೂಗೆ ಮಗು ಬಲಿ

ಧಾರವಾಡದಲ್ಲಿ ಡೆಂಗ್ಯೂ ಜ್ವರಕ್ಕೆ ಮತ್ತೊಂದು ಮಗು ಬಲಿಯಾಗಿದೆ. ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 5 ತಿಂಗಳ ಆರಾಧ್ಯ ಲಮಾಣಿ ಡೆಂಗ್ಯೂಯಿಂದ ಮೃತಪಟ್ಟಿದೆ. ಧಾರವಾಡ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿರುವ ಗೋಪಾಲ್ ಲಮಾಣಿ ಮಗು ಆರಾಧ್ಯ ಮೃತ ದುರ್ದೈವಿ. ಕಳೆದ ಜುಲೈ 15ರಂದು ಜ್ವರದಿಂದ ಬಳಲುತಿದ್ದ ಆರಾಧ್ಯಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಬರದೇ ಮಗು ಮೃತಪಟ್ಟಿದೆ.

ಡೆಂಗ್ಯೂ ಭೀತಿ; ಶಾಲೆ ಸುತ್ತಲ ಕೊಳಚೆ ನೀರು

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹೊತ್ತಿನಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಆದರೆ ಕೊಪ್ಪಳದ ಬೆಟಗೇರಿ ಗ್ರಾಮದಲ್ಲಿ ಶಾಲೆಯ ಸುತ್ತಲೂ ಕೊಳಚೆ ನೀರು ತುಂಬಿದ್ದು, ಮಕ್ಕಳಿಗೆ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿದೆ. ಶಾಲೆ ಸುತ್ತಲು ಸ್ವಚ್ಛತೆ ಕಾಪಾಡಲು ಆಗ್ರಹಿಸಿ, ಮಕ್ಕಳ ಪಾಲಕರು ಬೆಟೆಗೇರಿ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದರು. ಬೆಟಗೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುತ್ತಲು ಕೊಳಚೆ ನೀರು ಇದೆ. ಈಗಾಗಲೇ ಕೊಳಚೆಯಿಂದಾಗಿ ನಾಲ್ಕು ಜನರಿಗೆ ಡೆಂಗ್ಯೂ ಕಾಣಿಸಿಕೊಂಡಿದೆ ಎಂದು ಕಿಡಿಕಾರಿದರು.

ಸಾವಿನ ಸಂಖ್ಯೆ 8ಕ್ಕೆ ಏರಿಕೆ

ರಾಜ್ಯಾದ್ಯಂತ ಡೆಂಗ್ಯೂಗೆ 8 ಮಂದಿ ಮೃತಪಟ್ಟಿದ್ದಾರೆ. ಜನವರಿಯಿಂದ ಈವರೆಗೆ (ಜು.18) 85,270 ಮಂದಿ ರಕ್ತ ಮಾದರಿಯನ್ನು ಪರೀಕ್ಷಿಸಿದ್ದು, ಇದರಲ್ಲಿ 11,451 ಮಂದಿಗೆ ಡೆಂಗ್ಯೂ ದೃಢಪಟ್ಟಿದೆ. ಇದರಲ್ಲಿ 620 ಸಕ್ರಿಯ ಪ್ರಕರಣಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Health Tips Kannada: ಚಹಾದಿಂದ ಅಸಿಡಿಟಿಯೇ? ಹಾಗಾದರೆ ನೀವು ಈ 5 ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದರ್ಥ!

ಚಹಾ ಕೊಡುವ ಒಂದು ಆಪ್ತ ಭಾವ, ನಮ್ಮದೇ ಆದ ಕ್ಷಣಗಳು ಬೇರೆ ಯಾವುದರಲ್ಲಿಯೂ ದಕ್ಕದು. ಚಹಾ ಪ್ರಿಯರಿಗೆ ಚಹಾವೆಂದರೆ ಅದು ಕೇವಲ ಪೇಯವಂತೂ ಖಂಡಿತ ಅಲ್ಲ. ಅದೊಂದು ಭಾವ. ಅದಕ್ಕೇ, ಚಹಾ ಬಿಡಲು ಹೊರಟರೂ ಅನೇಕರಿಗೆ ಅದು ಸಾಧ್ಯವಾಗುವುದೇ ಎಲ್ಲ. ಜೀವನದುದ್ದಕ್ಕೂ ಅದು ಅಂಟಿಕೊಂಡೇ ಇರುತ್ತದೆ. ಆದರೆ, ಹೀಗೆ ಚಹಾ ಪ್ರಿಯರಾದವರಿಗೆಲ್ಲರಿಗೂ ಚಹಾವನ್ನು ಹೀಗೆ ಕುಡಿಯುವ ಭಾಗ್ಯ ದಕ್ಕದು. ಆರೋಗ್ಯದ ದೃಷ್ಟಿಯಿಂದ ಚಹ ತಯಾರಿಸುವುದು ಹೇಗೆ? ಈ ಕುರಿತು ಇಲ್ಲಿದೆ ವಿವರ.

VISTARANEWS.COM


on

Health Tips Kannada Acidity from tea Then you are making these 5 mistakes
Koo

ಬೆಂಗಳೂರು: ಚಹಾ ಯಾರಿಗೆ ಇಷ್ಟವಿಲ್ಲ ಹೇಳಿ. ಚಹಾ (Health Tips Kannada) ಬಯಸದವರಿಗಿಂತಲೂ ಚಹಾ ಬಯಸುವ ಮಂದಿಯೇ ಹೆಚ್ಚು. ನಿತ್ಯವೂ ಎದ್ದ ಕೂಡಲೇ ಚಹಾ ಕುಡಿಯದಿದ್ದರೆ ಏನೋ ಕಳೆದುಕೊಂಡ ಭಾವ ಅನೇಕರಿಗೆ. ಅದೇನೋ, ಚಹಾ ಕುಡಿದ ತಕ್ಷಣ ಆ ದಿನ ಆರಂಭವಾದ ಸೂಚನೆ, ಒಂದು ಪಾಸಿಟಿವ್‌ ಆರಂಭ. ಚಹಾ ಕೊಡುವ ಒಂದು ಆಪ್ತ ಭಾವ, ನಮ್ಮದೇ ಆದ ಕ್ಷಣಗಳು ಬೇರೆ ಯಾವುದರಲ್ಲಿಯೂ ದಕ್ಕದು. ಚಹಾ ಪ್ರಿಯರಿಗೆ ಚಹಾವೆಂದರೆ ಅದು ಕೇವಲ ಪೇಯವಂತೂ ಖಂಡಿತ ಅಲ್ಲ. ಅದೊಂದು ಭಾವ. ಅದಕ್ಕೇ, ಚಹಾ ಬಿಡಲು ಹೊರಟರೂ ಅನೇಕರಿಗೆ ಅದು ಸಾಧ್ಯವಾಗುವುದೇ ಎಲ್ಲ. ಜೀವನದುದ್ದಕ್ಕೂ ಅದು ಅಂಟಿಕೊಂಡೇ ಇರುತ್ತದೆ.

ಆದರೆ, ಹೀಗೆ ಚಹಾ ಪ್ರಿಯರಾದವರಿಗೆಲ್ಲರಿಗೂ ಚಹಾವನ್ನು ಹೀಗೆ ಕುಡಿಯುವ ಭಾಗ್ಯ ದಕ್ಕದು. ಯಾಕೆಂದರೆ ಹಲವರಿಗೆ ಚಹಾ ಕುಡಿದರೆ ಅಸಿಡಿಟಿಯ ಸಮಸ್ಯೆ. ಹೀಗಾಗಿ, ಇಷ್ಟದ ಪೇಯವಾದರೂ ಅನೇಕರಿಗೆ ಈ ಸಮಸ್ಯೆಯಿಂದಾಗಿ ದೂರವಿರಬೇಕಾದ ಅನಿವಾರ್ಯತೆ. ಇನ್ನೂ ಕೆಲವರಿಗೆ ಚಹಾದಿಂದ ಅಸಿಡಿಟಿ ಎಂಬುದೇ ತಮಾಷೆಯಾಗಿ ಕಂಡರೆ ಆಶ್ಚರ್ಯವಿಲ್ಲ. ಆದರೆ, ಚಹಾದಿಂದ ಕೆಲವರಿಗೆ ಅಸಿಡಿಟಿ ಸಮಸ್ಯೆ ಉಂಟಾಗುವುದು ಸತ್ಯ. ಬನ್ನಿ, ಚಹಾದಿಂದ ಅಸಿಡಿಟಿ ನಿಮಗಾಗಿದ್ದರೆ ನೀವು ಈ ಐದು ತಪ್ಪುಗಳನ್ನು ಮಾಡುತ್ತಿರಲೂಬಹುದು.

1. ಚಹಾವನ್ನು ಮಾಡುವ ಕ್ರಮದಲ್ಲೇ ವ್ಯತ್ಯಾಸವಾಗುವುದರಿಂದಲೂ ಈ ಸಮಸ್ಯೆ ಬರಬಹುದು. ಚಹಾ ಪುಡಿಯನ್ನು ಹಾಕಿ ಸಿಮ್‌ನಲ್ಲಿಟ್ಟು ಅಗತ್ಯಕ್ಕಿಂತ ಸ್ವಲ್ಪ ಹೆಚ್ಚೇ ಕುದಿಸುವುದು ಕೂಡಾ ಇದಕ್ಕೆ ಕಾರಣ. ಸ್ಟ್ರಾಂಗ್‌ ಖಡಕ್‌ ಚಹಾ ಮಾಡುವ ಉತ್ಸಾಹದಲ್ಲಿ ಅನೇಕರು ಚಹಾ ಪುಡಿಯನ್ನು ಹೆಚ್ಚು ಹೊತ್ತು ಕುದಿಸುವುದುಂಟು. ಹಾಲಿನಲ್ಲಿ ಚಹಾಪುಡಿಯನ್ನು ಹೆಚ್ಚು ಹೊತ್ತು ಕುದಿಸುವುದರಿಂದ ಪ್ರೊಟೀನ್‌ ಹಾಗೂ ಲ್ಯಾಕ್ಟೋಸ್‌ ಬ್ರೇಕ್‌ಡೌನ್‌ ಆಗುವುದರಿಂದ ಅಸಿಡಿಟಿ ಆಗುವುದುಂಟು. ಚಹಾಪುಡಿಯನ್ನು ಸ್ವಲ್ಪ ನೀರಿನಲ್ಲಿ ಕುದಿಸಿಕೊಂಡ ಮೇಲೆ ಹಾಲು ಹಾಕಿ ಚಹಾ ಮಾಡಿ. ಇದರಿಂದ ಹಾಲಿನ ಸತ್ವವೂ ಹಾಗೆಯೇ ಉಳಿಯುತ್ತದೆ.

ಇದನ್ನೂ ಓದಿ: Health Tips Kannada: ಹೊಟ್ಟೆಯುಬ್ಬರಕ್ಕೆ ಇವೆ ಸರಳ ಮನೆಮದ್ದುಗಳು

2. ಆಗಷ್ಟೇ ಮಾಡಿದ ಚಹಾವನ್ನು ಗಂಟೆಗಟ್ಟಲೆ ಹಾಗೆಯೇ ಇಟ್ಟು ಆಮೇಲೆ ಕುಡಿಯುವುದರಿಂದಲೂ ಅಸಿಡಿಟಿ ಉಂಟಾಗಬಹುದು. ಚಹಾ ಯಾವಾಗಲೂ ಮಾಡಿದ ತಕ್ಷಣ ಬಿಸಿಬಿಸಿ ಹಾಗೆಯೇ ಕುಡಿದು ಬಿಡಬೇಕು. ಮಾಡಿದ ಮೇಲೆ ೧೦ ನಿಮಿಷಗಳೊಳಗಾಗಿ ಚಹಾ ಕುಡಿದುಬಿಡಿ.

3. ಬೆಳಗ್ಗೆ ಮಾಡಿದ ಚಹಾ ಉಳಿಯಿತು ಎಂದು ಸಂಜೆಗೆ ತೆಗೆದಿಡಬೇಡಿ. ಕುದಿಸಿ ಕುಡಿದರಾಯಿತು ಎಂದು ನೀವು ಅಂದುಕೊಳ್ಳಬಹುದು. ಆದರೆ ಚಹಾವನ್ನು ಮತ್ತೆ ಕುದಿಸಿ ಕುಡಿಯುವುದು ಖಂಡಿತ ಆರೋಗ್ಯಕ್ಕೆ ಒಳ್ಳೆಯದಲ್ಲ. ಮುಖ್ಯವಾಗಿ ಹಾಲು ಹಾಕಿದ ಚಹಾವನ್ನು ಹಾಗೆಯೇ ಇಟ್ಟು ಮತ್ತೆ ಬಿಸಿ ಮಾಡಿ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆಗಳು ಹೆಚ್ಚಾಗುತ್ತವೆ.

4. ಅತಿಯಾಗಿ ಚಹಾ ಕುಡಿಯಬೇಡಿ. ಯಾರಾದರೂ ಜೊತೆಗೊಂದು ಬೈಟೂ ಚಹಾ ಕುಡಿಯೋಣ ಎಂದು ಪ್ರೀತಿಯಿಂದ ಕರೆದರೆ ಇಲ್ಲ ಎನ್ನಲಾಗುವುದಿಲ್ಲ ನಿಜ. ಆದರೆ, ದಿನಕ್ಕೆ ನೀವೆಷ್ಟು ಚಹಾ ಕುಡಿಯುತ್ತೀರಿ ಎಂಬ ಬಗ್ಗೆ ನಿಗಾ ಇರಲಿ. ಬೆಳಗ್ಗೆ ಒಂದು ಚಹಾ, ಸಂಜೆ ಇನ್ನೊಂದು ಕಪ್‌ ಸಾಕು. ಅಗತ್ಯ ಬಿದ್ದಲ್ಲಿ ಕಚೇರಿಯಲ್ಲಿ ಗೆಳೆಯರ ಜೊತೆ ಮಧ್ಯದಲ್ಲೊಂದು ಚಹಾ ಕುಡಿಯಬಹುದು ಅಷ್ಟೇ. ಮೂರಕ್ಕಿಂತ ಹೆಚ್ಚು ಕಪ್‌ ಚಹಾ ಒಳ್ಳೆಯದಲ್ಲ. ನಿಮ್ಮ ಅಸಿಡಿಟಿಯ ಮೂಲ ಅತಿಯಾದ ಚಹಾ ಕುಡಿಯುವುದೂ ಕೂಡಾ ಇರಬಹುದು ನೆನಪಿಡಿ.

5 ಕೆಲವು ಆಹಾರಗಳನ್ನು ಚಹಾದ ಜೊತೆ ಸೇವಿಸಬೇಡಿ. ಪಾಲಕ್‌, ಬ್ರೊಕೋಲಿಯಂತಹ ಹಸಿರು ಸೊಪ್ಪು ತರಕಾರಿಗಳಿಂದ ತಯಾರಿಸಿದ ಆಹಾರಗಳನ್ನು ಚಹಾದ ಜೊತೆಗೆ ಸೇವಿಸಬೇಡಿ. ತಂಪಾದ ಫ್ರುಟ್‌ ಸಲಾಡ್‌ಗಳು, ಸಲಾಡ್‌ಗಳು, ನಿಂಬೆಹಣ್ಣಿನ ಆಹಾರ ಪದಾರ್ಥಗಳು, ಅರಿಶಿನ, ಮೊಸರು ಇತ್ಯಾದಿಗಳನ್ನು ಚಹಾದ ಜೊತೆ ಸೇವಿಸಬೇಡಿ.

Continue Reading

ಆರೋಗ್ಯ

Belly Fat Loss Drinks: ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಐದು ಪಾನೀಯಗಳನ್ನು ಸೇವಿಸಿ

ಹೊಟ್ಟೆಯ ಕೊಬ್ಬನ್ನು (Belly Fat Loss Drinks) ಕರಗಿಸುವುದು ಸುಲಭವಲ್ಲ. ಆದರೆ ಬರೀ ಹೊಟ್ಟೆಯಲ್ಲಿ ಕೆಲವು ಪಾನೀಯಗಳೊಂದಿಗೆ ದಿನನಿತ್ಯದ ವ್ಯಾಯಾಮ, ಸಮತೋಲಿತ ಆಹಾರ ಸೇವನೆಯೊಂದಿಗೆ ಸುಲಭವಾಗಿ ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಬಹುದು. ಚೆನ್ನಾಗಿ ಹೈಡ್ರೇಟೆಡ್ ಆಗಿರುವುದು ಚಯಾಪಚಯವನ್ನು ಹೆಚ್ಚಿಸುತ್ತದೆ, ಹಸಿವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿ ಈ ಐದು ಪಾನೀಯಗಳು ಸಹಾಯ ಮಾಡುತ್ತವೆ.

VISTARANEWS.COM


on

By

Belly Fat Loss Drinks
Koo

ಒಮ್ಮೆ ಹೊಟ್ಟೆಯಲ್ಲಿ ಕೊಬ್ಬು ಶೇಖರಣೆಯಾದರೆ (Belly Fat Loss Drinks) ಅದನ್ನು ಕರಗಿಸುವುದು ಸುಲಭವಲ್ಲ. ಆದರೆ ಜೀವನ ಶೈಲಿಯಲ್ಲಿ (life style) ಬದಲಾವಣೆ ಮಾಡಿಕೊಂಡು, ಆಹಾರದಲ್ಲಿ (food) ಕೊಂಚ ಶಿಸ್ತು ಅಳವಡಿಸಿಕೊಂಡರೆ ಹೊಟ್ಟೆಯ ಕೊಬ್ಬನ್ನು (Belly Fat) ಕರಗಿಸಬಹುದು. ಮುಖ್ಯವಾಗಿ ಚಯಾಪಚಯವನ್ನು ಹೆಚ್ಚಿಸುವ ತೂಕ ನಿರ್ವಹಣೆಯನ್ನು ಬೆಂಬಲಿಸುವ ಪಾನೀಯದೊಂದಿಗೆ ದಿನವನ್ನು ಆರಂಭಿಸಿದರೆ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಬಹು ಬೇಗನೆ ಕಳೆದುಕೊಳ್ಳಬಹುದು.

ನಮ್ಮ ದೇಹವು ಶೇ. 60ರಷ್ಟು ನೀರನ್ನು ಒಳಗೊಂಡಿರುತ್ತದೆ. ತಾಪಮಾನವನ್ನು ನಿಯಂತ್ರಿಸುವುದು, ಸೋಂಕುಗಳನ್ನು ತಡೆಗಟ್ಟುವುದು ಮತ್ತು ಜೀವಕೋಶಗಳಿಗೆ ನೇರವಾಗಿ ಪ್ರಮುಖ ಪೋಷಕಾಂಶಗಳು ಮತ್ತು ಖನಿಜಗಳನ್ನು ಒದಗಿಸುವಂತಹ ದೇಹದಲ್ಲಿನ ಅನೇಕ ಪ್ರಮುಖ ಕಾರ್ಯಗಳಲ್ಲಿ ನೀರು ಸಹಾಯ ಮಾಡುತ್ತದೆ.

ಒಳಾಂಗಗಳ ಕೊಬ್ಬು ಎಂದೂ ಕರೆಯಲ್ಪಡುವ ಹೊಟ್ಟೆಯ ಕೊಬ್ಬು ಕೇವಲ ಕೊಬ್ಬು ಅಲ್ಲ. ಇದು ಅನೇಕ ಆರೋಗ್ಯ ಅಪಾಯಗಳಿಗೆ ಅಹ್ವಾನ ನೀಡುತ್ತದೆ. ವಿಶೇಷವಾಗಿ ಕಿಬ್ಬೊಟ್ಟೆಯ ಪ್ರದೇಶದಲ್ಲಿ ಸಂಗ್ರಹವಾಗುವ ಕೊಬ್ಬು ಅನೇಕ ಆರೋಗ್ಯ ಸಮಸ್ಯೆಗಳು ಮತ್ತು ರೋಗಗಳಿಗೆ ಕಾರಣವಾಗಬಹುದು.

ಬರೀ ಹೊಟ್ಟೆಗೆ ಸೇವನೆ ಮಾಡುವ ಪಾನೀಯಗಳೊಂದಿಗೆ ದಿನನಿತ್ಯದ ವ್ಯಾಯಾಮ, ಸಮತೋಲಿತ ಆಹಾರ ಸೇವನೆಯೊಂದಿಗೆ ಸುಲಭವಾಗಿ ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಬಹುದು.

ಚೆನ್ನಾಗಿ ಹೈಡ್ರೇಟೆಡ್ ಆಗಿರುವುದು ಚಯಾಪಚಯವನ್ನು ಹೆಚ್ಚಿಸುತ್ತದೆ, ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ದೇಹವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇವೆಲ್ಲವೂ ಹೆಚ್ಚು ಪರಿಣಾಮಕಾರಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಈ ಐದು ಪಾನೀಯಗಳನ್ನು ದೇಹದ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.


ಸೋಂಪು ಕಾಳಿನ ನೀರು

ಬರೀ ಹೊಟ್ಟೆಗೆ ಸೋಂಪು ಕಾಳಿನ ನೀರು ಸೇವಿಸುವುದರಿಂದ ಸಾಕಷ್ಟು ಪ್ರಯೋಜನವನ್ನು ಕೊಡುತ್ತದೆ. ಸೋಂಪು ಕಾಳಿನ ನೀರು ಉತ್ಕರ್ಷಣ ನಿರೋಧಕಗಳು, ಫೈಬರ್ ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಈ ಮೂರೂ ತೂಕವನ್ನು ಕಳೆದುಕೊಳ್ಳಲು ಅವಶ್ಯಕವಾಗಿದೆ. ಹೆಚ್ಚಿನ ಫೈಬರ್ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತೆ ಮಾಡುತ್ತದೆ. ಕಡುಬಯಕೆಗಳನ್ನು ತಪ್ಪಿಸಲು ಮತ್ತು ಹೆಚ್ಚುವರಿ ಕ್ಯಾಲೊರಿಗಳನ್ನು ತಿನ್ನುವುದನ್ನು ತಡೆಯುತ್ತದೆ. ದೇಹದ ಕಲ್ಮಶವನ್ನು ತೆಗೆದುಹಾಕುತ್ತದೆ ಮತ್ತು ತೂಕ ನಷ್ಟಕ್ಕೆ ಸುಲಭವಾಗಿ ಬೆಂಬಲಿಸುತ್ತದೆ.

Belly Fat Loss Drinks


ಹಸಿರು ಚಹಾ

ಹಸಿರು ಚಹಾವು ತೂಕವನ್ನು ನಿರ್ವಹಿಸಲು ಬಯಸುವವರ ಜನಪ್ರಿಯ ಬೆಳಗಿನ ಪಾನೀಯವಾಗಿದೆ. ಹಸಿರು ಚಹಾವು ಉತ್ಕರ್ಷಣ ನಿರೋಧಕಗಳು ಮತ್ತು ಇತರ ಹಲವಾರು ಸಂಯುಕ್ತಗಳಿಂದ ತುಂಬಿರುತ್ತದೆ. ಹಸಿರು ಚಹಾವು ಚಯಾಪಚಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ನಿಯಮಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಪ್ರತಿದಿನ ಇದನ್ನು ಸೇವಿಸುದರಿಂದ ತೂಕವನ್ನು ನಿಯಂತ್ರಿಸಬಹುದು.

Belly Fat Loss Drinks


ಅಲೋವೆರಾ ಜ್ಯೂಸ್

ಅಲೋವೆರಾ ಜ್ಯೂಸ್ ತೂಕ ನಿರ್ವಹಣೆಗೆ ಪರಿಣಾಮಕಾರಿಯಾಗಿದೆ. ಅಲೋವೆರಾ ಜ್ಯೂಸ್ ಹಲವು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಆರೋಗ್ಯಕರ ಜೀವನಶೈಲಿಯ ಭಾಗವಾಗಿ ನಿಯಮಿತವಾಗಿ ಇದನ್ನು ಸೇವಿಸಿದರೆ ಕೊಬ್ಬನ್ನು ಸುಡುತ್ತದೆ. ಚಯಾಪಚಯವನ್ನು ಹೆಚ್ಚಿಸುತ್ತದೆ. ಅಲೋವೆರಾವು ನೈಸರ್ಗಿಕ ನಿರ್ವಿಶೀಕರಣ ಗುಣಲಕ್ಷಣಗಳನ್ನು ಹೊಂದಿದೆ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

Belly Fat Loss Drinks


ದಾಲ್ಚಿನ್ನಿ ನೀರು

ದಾಲ್ಚಿನ್ನಿ ನೀರು ಚಯಾಪಚಯವನ್ನು ಹೆಚ್ಚಿಸಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಬೆಚ್ಚಗಿನ ನೀರಿನಲ್ಲಿ ಒಂದು ಚಿಟಿಕೆ ದಾಲ್ಚಿನ್ನಿ ಸೇರಿಸಿ ಮತ್ತು ಅದನ್ನು ದಿನದ ಮೊದಲ ಪಾನೀಯವಾಗಿ ಕುಡಿಯಿರಿ. ದಾಲ್ಚಿನ್ನಿಯು ದೇಹದ ತೂಕವನ್ನು ನಿಯಂತ್ರಿಸುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.

Belly Fat Loss Drinks


ಬಿಸಿ ನಿಂಬೆ ನೀರು

ಬೆಚ್ಚಗಿನ ನಿಂಬೆ ನೀರು ತಯಾರಿಸುವುದು ಸುಲಭವಾಗಿದೆ ಮತ್ತು ತೂಕ ನಷ್ಟ ಪಾನೀಯಗಳಲ್ಲಿ ಒಂದಾಗಿದೆ. ಇದು ಚಯಾಪಚಯವನ್ನು ಹೆಚ್ಚಿಸಲು, ನಿರ್ವಿಶೀಕರಣವನ್ನು ಉತ್ತೇಜಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದ್ದು ಜೀರ್ಣಕ್ರಿಯೆಯನ್ನು ವರ್ಧಿಸುತ್ತದೆ ಮತ್ತು ಹಲವಾರು ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ.

ಇದನ್ನೂ ಓದಿ: Mosquitoes Bite: ಎಣ್ಣೆ ಹೊಡೆಯುವವರನ್ನು ಸೊಳ್ಳೆಗಳು ಕಚ್ಚುವುದು ಹೆಚ್ಚು! ಇದಕ್ಕಿದೆ ವೈಜ್ಞಾನಿಕ ಕಾರಣ!

ದಿನಕ್ಕೆ ಎಷ್ಟು ನೀರು ಕುಡಿಯಬೇಕು?

ದೇಹದ ತೂಕ ಇಳಿಸಲು ದಿನಕ್ಕೆ ಕನಿಷ್ಠ 2 ಲೀಟರ್ (60 ರಿಂದ 80 ಔನ್ಸ್ ) ನೀರನ್ನು ಕುಡಿಯಲು ಸಲಹೆ ನೀಡಲಾಗುತ್ತದೆ. ದೇಹದ ತೂಕ, ಚಟುವಟಿಕೆಯ ಮಟ್ಟ ಮತ್ತು ಹವಾಮಾನವನ್ನು ಆಧರಿಸಿ ಇದರಲ್ಲಿ ವ್ಯತ್ಯಾಸಗಳಾಗುತ್ತವೆ. ದೇಹದ ತೂಕದ ಅರ್ಧದಷ್ಟು ಔನ್ಸ್ ನೀರು ಕುಡಿಯಬೇಕು. ಇದರಿಂದ ಅದು ಚಯಾಪಚಯವನ್ನು ಹೆಚ್ಚಿಸುತ್ತದೆ, ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ದೇಹದ ಕಾರ್ಯವನ್ನು ಬೆಂಬಲಿಸುತ್ತದೆ.

Continue Reading
Advertisement
Ben Stokes
ಕ್ರೀಡೆ35 mins ago

Ben Stokes : ದೊಡ್ಡ ಮೊತ್ತ ಪಡೆದು ಮುಂಬೈ ತಂಡ ಸೇರಲಿದ್ದಾರೆ ಬೆನ್ ಸ್ಟೋಕ್ಸ್​​

Sexual harassment
ದೇಶ43 mins ago

Sexual Harassment: ಪೋರ್ನ್‌ ವಿಡಿಯೋ ತೋರಿಸಿ ಕಿರುಕುಳ; ಜಿಂದಾಲ್‌ ಕಂಪನಿಯ ಹಿರಿಯ ಅಧಿಕಾರಿ ವಿರುದ್ಧ ಮಹಿಳೆ ಆರೋಪ

Vastu Tips
ಧಾರ್ಮಿಕ2 hours ago

Vastu Tips: ಮನೆಯಲ್ಲಿ ಸಂಪತ್ತು ಸದಾ ತುಂಬಿರಬೇಕೆ? ಈ ನಿಯಮ ಪಾಲಿಸಿ

Women's Asia Cup 2024
ಪ್ರಮುಖ ಸುದ್ದಿ2 hours ago

Women’s Asia Cup 2024 : ಪಾಕಿಸ್ತಾನ ವಿರುದ್ಧ ಭರ್ಜರಿ 7 ವಿಕೆಟ್​ ವಿಜಯ ಸಾಧಿಸಿದ ಭಾರತದ ಮಹಿಳೆಯರು

GT World Mall
ಕರ್ನಾಟಕ2 hours ago

GT World Mall: ರೈತ ಫಕೀರಪ್ಪರನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ ಜಿ.ಟಿ.ಮಾಲ್‌ ಮಾಲೀಕ

Viral Video
Latest2 hours ago

Viral Video: ಮಗಳೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗುಪ್ತಾಂಗ ತೋರಿಸಿದ ವಿಕೃತ ಕಾಮಿ!

Sadageri village free from gas leakage risk says DC Lakshmipriya
ಕರ್ನಾಟಕ2 hours ago

Uttara Kannada News: ಭೂಕುಸಿತದಿಂದ ಕೊಚ್ಚಿ ಹೋದ ಟ್ಯಾಂಕರ್‌; ಗ್ರಾಮಸ್ಥರೀಗ ಗ್ಯಾಸ್ ಸ್ಫೋಟ ಅಪಾಯದಿಂದ ಪಾರು

Reliance Jio first quarter profit at Rs 5445 crore
ದೇಶ2 hours ago

Reliance Jio: ರಿಲಯನ್ಸ್ ಜಿಯೋಗೆ ಮೂರೇ ತಿಂಗಳಲ್ಲಿ ಎಷ್ಟು ಲಾಭ ನೋಡಿ; 5,445 ಕೋಟಿ ರೂ!

Women's Asia Cup 2024
ಪ್ರಮುಖ ಸುದ್ದಿ2 hours ago

Women’s Asia Cup 2024 : ಏಷ್ಯಾ ಕಪ್​ನ ಮೊದಲ ಪಂದ್ಯದಲ್ಲೇ ಗೆದ್ದು ಇತಿಹಾಸ ಸೃಷ್ಟಿಸಿದ ನೇಪಾಳ ಮಹಿಳಾ ತಂಡ

Self Harming
Latest2 hours ago

Self Harming : ವಾಟರ್‌ ಟ್ಯಾಂಕ್‌ ಮೇಲಿನಿಂದ ಜಿಗಿದ ವಿದ್ಯಾರ್ಥಿ; ವಿಡಿಯೋ ಇದೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ10 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ11 hours ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ1 day ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ3 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ4 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ5 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌