Egg Yolk Benefits: ಮೊಟ್ಟೆಯ ಹಳದಿ ಲೋಳೆಯನ್ನು ಎಸೆಯುತ್ತೀರಾ? ಎಸೆಯುವ ಮೊದಲು ಒಮ್ಮೆ ಯೋಚಿಸಿ! - Vistara News

ಆರೋಗ್ಯ

Egg Yolk Benefits: ಮೊಟ್ಟೆಯ ಹಳದಿ ಲೋಳೆಯನ್ನು ಎಸೆಯುತ್ತೀರಾ? ಎಸೆಯುವ ಮೊದಲು ಒಮ್ಮೆ ಯೋಚಿಸಿ!

Egg Yolk Benefits: ತೂಕ ಇಳಿಸಿಕೊಳ್ಳಲು ಬಯಸುವವರು ಹಾಗೂ ವರ್ಕೌಟ್‌ ಪ್ರಿಯರು ಪ್ರೊಟೀನ್‌ ಮಾತ್ರ ತಮ್ಮ ದೇಹಕ್ಕೆ ಸೇರಬೇಕು ಎಂದುಕೊಂಡು ಕೇವಲ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಹೊಟ್ಟೆಗೆ ಹಾಕಿ, ಉಳಿದ ಹಳದಿ ಲೋಳೆಯನ್ನು ಏನೂ ಮಾಡದೆ ಎಸೆದುಬಿಡುತ್ತಾರೆ. ಆದರೆ, ಇವೆರಡನ್ನೂ ಒಟ್ಟಿಗೆ ತಿಂದರೆ ಮಾತ್ರ ಸಂಪೂರ್ಣ ಆಹಾರವಾಗಬಲ್ಲದು. ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳೆಲ್ಲವೂ ಇವೆರಡೂ ಸೇರಿದಾಗಲೇ ಸಿಗುವುದರಿಂದ ಒಂದನ್ನು ಎಸೆದು ಇನ್ನೊಂದನ್ನು ಮಾತ್ರ ತಿಂದರೆ ಒಳ್ಳೆಯದಾಗದು ಎನ್ನುತ್ತಾರೆ ಪರಿಣತರು.

VISTARANEWS.COM


on

Egg Yolk Benefits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೊಟ್ಟೆ ಎಂಬುದು ಅತ್ಯಂತ ಸಮಕಾಲೀನವೂ, ಸಂಪೂರ್ಣ ಪೋಷಕಾಂಶಯುಕ್ತವೂ ಹಾಗೂ ಸದಾ ಸುಲಭವಾಗಿ ಸಿಗಬಲ್ಲ ಹಾಗೂ ಮಾಡಬಲ್ಲ ಅಡುಗೆಯ ಆಯ್ಕೆಯಾಗಿಯೂ ಸರ್ವಕಾಲಕ್ಕೂ ಸಲ್ಲುತ್ತದೆ. ಆದರೆ ಬಹಳ ಮಂದಿ ತೂಕ ಇಳಿಸುವ ಹಾಗೂ ವರ್ಕೌಟ್‌ ಪ್ರಿಯರು ಪ್ರೊಟೀನ್‌ ಮಾತ್ರ ನಮ್ಮ ದೇಹಕ್ಕೆ ಸೇರಬೇಕು ಎಂದುಕೊಂಡು ಕೇವಲ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಹೊಟ್ಟೆಗೆ ಹಾಕಿ, ಉಳಿದ ಹಳದಿ ಲೋಳೆಯನ್ನು ಏನೂ ಮಾಡದೆ ಎಸೆದುಬಿಡುತ್ತಾರೆ. ಆದರೆ, ಇವೆರಡನ್ನೂ ಒಟ್ಟಿಗೆ ತಿಂದರೆ ಮಾತ್ರ ಸಂಪೂರ್ಣ ಆಹಾರವಾಗಬಲ್ಲದು. ಹಾಗೂ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳೆಲ್ಲವೂ ಇವೆರಡೂ ಸೇರಿದಾಗಲೇ ಸಿಗುವುದರಿಂದ ಒಂದನ್ನು ಎಸೆದು ಇನ್ನೊಂದನ್ನು ಮಾತ್ರ ತಿಂದರೆ ಒಳ್ಳೆಯದಾಗದು ಎನ್ನುತ್ತಾರೆ ಹೃದ್ರೋಗ ತಜ್ಞ ಡಾ. ಅಲೋಕ್‌ ಚೋಪ್ರಾ.
ಹೌದು. ಡಾ. ಚೋಪ್ರಾ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಜಿಜ್ಞಾಸೆಯ ಬಗೆಗೆ ಬೆಳಕು ಚೆಲ್ಲಿರುವ ವಿಡಿಯೋ ಈಗ ಸಾಕಷ್ಟು ಚರ್ಚೆಯೊಂದಿಗೆ ವೈರಲ್‌ ಆಗಿದೆ. ಬಿಳಿ ಲೋಳೆಗೆ ಹೋಲಿಸಿದರೆ, ಮೊಟ್ಟೆಯ ಹಳದಿ ಯೋಕ್‌ನಲ್ಲಿ ವಿಟಮಿನ್‌ ಎ, ಇ ಹಾಗೂ ಒಮೆಗಾ 3 ಫ್ಯಾಟಿ ಆಸಿಡ್‌ಗಳು ಹೇರಳವಾಗಿವೆ. ಬಿಳಿ ಲೋಳೆಯಲ್ಲಿ ಪ್ರೊಟೀನ್‌ ಹೇರಳವಾಗಿರುವುದು ನಿಜವೇ ಆದರೂ, ಇಡೀ ಮೊಟ್ಟೆಯನ್ನು ಸಂಪೂರ್ಣವಾಗಿ ಹೊಟ್ಟೆಗಿಳಿಸಿದರೆ ಸಿಗುವ ಪೋಷಕಾಂಶಗಳು ಅಧಿಕ. ಕೊಬ್ಬು ಹಾಗೂ ಕೊಲೆಸ್ಟೆರಾಲ್‌ ಮೊಟ್ಟೆಯ ಬಿಳಿ ಲೋಳೆಯನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆ ಸೇರದು ಎಂಬುದು ನಿಜವೇ ಆದರೂ, ಇಡಿಯ ಮೊಟ್ಟೆ ತಿನ್ನುವುದರಿಂದ ಸಿಗುವ ಲಾಭಕ್ಕಿಂತ ಇದರಲ್ಲಿ ಪೋಷಕಾಂಶಗಳು ಕಡಿಮೆಯೇ. ಇಡಿಯ ಮೊಟ್ಟೆ ತಿನ್ನುವುದರಿಂದ ಎಲ್ಲ ಬಗೆಯ ವಿಟಮಿನ್‌ಗಳು, ಖನಿಜಾಂಶಗಳು ಹಾಗೂ ಆಂಟಿ ಆಕ್ಸಿಡೆಂಟ್‌ಗಳನ್ನು ನೀವು ಸಂಪೂರ್ಣ ಆಹಾರದಂತೆ ಪಡೆಯಬಹುದು. ಹೀಗಾಗಿ ನೀವು ಹಳದಿ ಭಾಗವನ್ನು ಎಸೆಯುವ ಮೂಲಕ ಮೊಟ್ಟೆಯ ನಿಜವಾದ ಲಾಭವನ್ನು ಪಡೆಯುತ್ತಿಲ್ಲ ಎಂದೇ ಅರ್ಥ ಎಂದು (Egg Yolk Benefits) ಅವರು ವಿವರಿಸಿದ್ದಾರೆ.

Egg Yolk in Egg Shell

ಕೊಲೆಸ್ಟೆರಾಲ್‌ ಇದೆಯಲ್ಲವೇ

ಹಾಗಾದರೆ ಮೊಟ್ಟೆಯ ಹಳದಿ ಭಾಗದಲ್ಲಿ ಅಧಿಕ ಕೊಲೆಸ್ಟೆರಾಲ್‌ ಇದೆಯಲ್ಲವೇ ಎಂದು ನೀವು ಮರುಪ್ರಶ್ನೆ ಹಾಕಬಹುದು. ಇದನ್ನೂ ವೈದ್ಯರು ಹೀಗೆ ಬಿಡಿಸಿ ಹೇಳುತ್ತಾರೆ. ಕೊಲೆಸ್ಟೆರಾಲ್‌ ಬಗೆಗೆ ಇಂದು ಸಾಕಷ್ಟು ತಪ್ಪು ತಿಳುವಳಿಕೆಗಳಿವೆ. ಹೃದ್ರೋಗಕ್ಕೆ ಕೊಲೆಸ್ಟೆರಾಲ್‌ ಕಾರಣವಲ್ಲ. ಕೊಲೆಸ್ಟೆರಾಲ್‌ ನಮ್ಮ ದೇಹದಲ್ಲಿರಲೇಬೇಕು. ಅಂಗಾಂಶಗಳ ರಚನೆಗೆ, ಹಾರ್ಮೋನ್‌ ಉತ್ಪಾದನೆಗೆ, ಮಿದುಳಿನ ಆರೋಗ್ಯಕ್ಕೆ, ರೋಗ ನಿರೋಧಕ ಶಕ್ತಿಯ ವರ್ಧನೆಗೆ ಕೊಲೆಸ್ಟೆರಾಲ್‌ ಬೇಕೇ ಬೇಕು. ೧೬ ಬೇರೆ ಬೇರೆ ಬಗೆಯ ಕೆಲಸಗಳನ್ನು ಈ ಕೊಲೆಸ್ಟೆರಾಲ್‌ ನಿರ್ವಹಿಸುತ್ತದೆ. ನಮ್ಮ ದೇಹವೇ ಶೇ.85ರಷ್ಟು ಕೊಲೆಸ್ಟೆರಾಲ್‌ ಅನ್ನು ಉತ್ಪಾದನೆ ಮಾಡುತ್ತದೆ ಕೂಡಾ. ನೀವು ಇಂತಹ ಆಹಾರವನ್ನು ತಿಂದರೂ ತಿನ್ನದಿದ್ದರೂ ಕೊಲೆಸ್ಟೆರಾಲ್‌ ದೇಹದಲ್ಲಿ ಉತ್ಪಾದನೆಯಾಗುತ್ತಲೇ ಇರುತ್ತದೆ ಎಂದ ಮೇಲೆ ಅದು ಹೇಗೆ ಕೆಟ್ಟದ್ದಾದೀತು ಅಲ್ಲವೇ ಎಂದು ಅವರು ಮರುಪ್ರಶ್ನಿಸುತ್ತಾರೆ. ಆದರೆ ಅವರ ಈ ಪೋಸ್ಟ್‌ ಸಾಕಷ್ಟು ಮಂದಿಯಲ್ಲಿ ಗೊಂದಲ ಹುಟ್ಟಿಸಿದೆ. ಪರ್ಸನಲ್‌ ಕೋಚ್‌ ಒಬ್ಬರು, ಈ ಹಿನ್ನೆಲೆಯಲ್ಲಿ ನೇರವಾಗಿ ಡಾಕ್ಟರ್‌ ಅವರನ್ನು ಪ್ರಶ್ನಿಸಿದ್ದಾರೆ ಕೂಡಾ. ಮೊಟ್ಟೆಯ ಬಿಳಿ ಲೋಳೆಯಲ್ಲಿರುವುದು ಅಲ್ಬುಮಿನ್.‌ ನೀವು ಹೇಳುವಂತೆ ಮೊಟ್ಟೆಯ ಬಿಳಿ ಲೋಳೆಯಲ್ಲಿ ಇನ್‌ಫ್ಲಮೇಟರಿ ಪ್ರೊಟೀನ್‌ ಹಳದಿ ಲೋಳೆಯ ಜೊತೆ ಸೇರಿಸಿ ತಿನ್ನುವಾಗ ಎಲ್ಲಿ ಹೋಗುತ್ತದೆ ಎಂದು ವಿವರಿಸುವಿರಾ ಎಂದು ಕೇಳಿದ್ದಾರೆ. ಅದಕ್ಕೆ ಅವರು ಉತ್ತರವಾಗಿ, ಮೊಟ್ಟೆಯಲ್ಲಿ ಉತ್ತಮ ಪ್ರಮಾಣದಲ್ಲಿ ಪ್ರೊಟೀನ್‌ ಇದ್ದು ಅದರಲ್ಲಿರುವ ಕೆಲವು ಭಾಗ ಇನ್‌ಫ್ಲಮೇಷನ್‌ಗೂ ಕಾರಣವಾಗುತ್ತದೆ. ಇದರಿಂದ ಬಯೋಟಿನ್‌ ಕೊರತೆ, ಜೀರ್ಣ ಸಮಸ್ಯೆಗಳೂ ಬರಬಹುದು ಎಂದಿದ್ದಾರೆ.

ಇದನ್ನೂ ಓದಿ: Nipah Virus: ಡೇಂಜರಸ್‌ ನಿಫಾ ವೈರಸ್‌; ಇದರ ಲಕ್ಷಣಗಳೇನು? ನಮಗೆ ಅಪಾಯ ಇದೆಯೆ?

ತೂಕ ಇಳಿಕೆಗೆ ಅಡ್ಡಿ?

ಮೊಟ್ಟೆಯ ಹಳದಿ ಭಾಗ ಒಳ್ಳೆಯದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ ಆದರೆ, ಇದರಲ್ಲಿ ಕೊಬ್ಬಿನಂಶ ಅಧಿಕವಾಗಿರುವುದರಿಂದ ಇದು ಹೆಚ್ಚು ಕ್ಯಾಲರಿಯ ಆಹಾರವಾಗುತ್ತದೆ. ಹಾಗಾಗಿ ಹಳದಿ ಭಾಗ ಆರೋಗ್ಯಕರವಾದರೂ, ಅದರಲ್ಲಿರುವ ಕ್ಯಾಲರಿಯೇ ತೂಕ ಇಳಿಸುವವರ ಚಿಂತೆಗೆ ಕಾರಣವಾಗುತ್ತದೆ. ಹೀಗಾಗಿ ತೂಕ ಇಳಿಸುವವರೋ, ತೂಕವನ್ನು ಹಾಗೇಯೇ ಇಡಬಯಸುವವರೋ ಎಂಬುದರ ಮೇಲೆ ಈ ಸೇವನೆ ನಿರ್ಧರಿತವಾಗುತ್ತದೆ ಎಂದು ಮತ್ತೊಬ್ಬರು ಈ ಪೋಸ್ಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Health Tips Kannada: ನಿಂತ ಮಳೆ ನೀರಿನಿಂದ ಈ 7 ರೋಗಗಳು ಬರುತ್ತವೆ ಎನ್ನುವುದು ನಿಮಗೆ ಗೊತ್ತೆ?

Health Tips Kannada: ಮಳೆ ಬಂದಾಗೊಮ್ಮೆ ರಸ್ತೆಯ ಆಚೀಚೆಯಲ್ಲಿ ನೀರು ಹರಿದು, ಮಳೆ ನಿಂತ ಒಂದೆರಡು ತಾಸಿನೊಳಗೆ ಎಲ್ಲವೂ ಸರಿ ಹೋದರೆ ಅವೆಲ್ಲ ಸಮಸ್ಯೆಯೇ ಅಲ್ಲ. ಆದರೆ ದೊಡ್ಡ ಮಳೆ ನಿಂತು ಒಂದೆರಡು ದಿನಗಳಾದರೂ ನೀರು ಹರಿದು ಖಾಲಿಯಾಗದಿದ್ದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಏನು ಸಮಸ್ಯೆಗಳವು?

VISTARANEWS.COM


on

Health Tips Kannada
Koo

ಮಳೆಗಾಲದಲ್ಲಿ ಎಲ್ಲೆಂದರಲ್ಲಿ (Health Tips Kannada) ಮಳೆ ನೀರು ನಿಲ್ಲುವುದು ಹೊಸದೇನಲ್ಲ. ಅದರಲ್ಲೂ ನಗರಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಕೆಟ್ಟಿದ್ದರೆ ಅಥವಾ ನೀರು ಹರಿಯುವ ದಾರಿ ಕಟ್ಟಿದ್ದರೆ ಊರೆಲ್ಲ ನೀರು ತುಂಬಿರುವ ದೃಶ್ಯಗಳೇ ಕಾಣುತ್ತವೆ. ಮಳೆ ಬಂದಾಗೊಮ್ಮೆ ರಸ್ತೆಯ ಆಚೀಚೆಯಲ್ಲಿ ನೀರು ಹರಿದು, ಮಳೆ ನಿಂತ ಒಂದೆರಡು ತಾಸಿನೊಳಗೆ ಎಲ್ಲವೂ ಸರಿ ಹೋದರೆ- ಅವೆಲ್ಲ ಸಮಸ್ಯೆಯೇ ಅಲ್ಲ. ಆದರೆ ದೊಡ್ಡ ಮಳೆ ನಿಂತು ಒಂದೆರಡು ದಿನಗಳಾದರೂ ನೀರು ಹರಿದು ಖಾಲಿಯಾಗದೆ ನಿಂತರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಎಂಥಾ ಆರೋಗ್ಯ ಸಮಸ್ಯೆಗಳನ್ನು ತರುತ್ತವೆ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಲೆಪ್ಟೊಸ್ಪಿರೋಸಿಸ್

ಇದೊಂದು ಬ್ಯಾಕ್ಟೀರಿಯ ಸೋಂಕು. ಈ ಸೋಂಕನ್ನು ಹೊತ್ತ ಪ್ರಾಣಿಗಳ ಮೂತ್ರ ಸೇರಿದ ನೀರಿನ ಮೂಲಕ ಇವು ಮಾನವರಿಗೆ ಹರಡುತ್ತವೆ. ಅದರಲ್ಲೂ ಇಲಿ, ಹೆಗ್ಗಣಗಳಿಂದ ಹರಡುವುದು ಹೆಚ್ಚು. ಮಳೆನೀರು ಇಂಥ ಸೋಂಕುಗಳಿಗೆ ಮೂಲವಾಗಬಲ್ಲದು. ಕೈಕಾಲುಗಳ ಮೇಲಿನ ಗಾಯಗಳು ಮಳೆ ನೀರು ಅದ್ದಿದಾಗ ಈ ಬ್ಯಾಕ್ಟೀರಿಯಗಳು ದೇಹದೊಳಗೆ ಪ್ರವೇಶಿಸುತ್ತವೆ. ಈ ಸೋಂಕಿನ ಲಕ್ಷಣಗಳ ಬಗ್ಗೆ ಹೇಳುವುದಾದರೆ, ತೀವ್ರ ಜ್ವರ, ನಡುಕ, ಅತೀವ ತಲೆನೋವು, ಸ್ನಾಯುಗಳಲ್ಲಿ ನೋವು, ಕಣ್ಣು ಕೆಂಪಾಗುವುದು ಮತ್ತು ಕಾಮಾಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸೋಂಕು ಮುಂದುವರಿದು ತೀವ್ರವಾದಲ್ಲಿ, ಕಿಡ್ನಿ, ಯಕೃತ್‌, ಪುಪ್ಪುಸಗಳಿಗೆ ಹಾನಿ ಮಾಡುತ್ತದೆ. ಹಾಗಾಗಿ ನಿಂತ ಮಳೆನೀರು ಸೋಕದಂತೆ ಎಚ್ಚರ ವಹಿಸಿ.

Malaria

ಮಲೇರಿಯಾ

ಅನಾಫಿಲಿಸ್‌ ಹೆಣ್ಣು ಸೊಳ್ಳೆಯು ಕಚ್ಚಿದಾಗ ದೇಹ ಸೇರುವ ಪ್ಮಾಸ್ಮೋಡಿಯಂ ಎಂಬ ಏಕಕೋಶ ಜೀವಿಯಿಂದ ಬರುವ ಕಾಯಿಲೆಯಿದು. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಇದು ಪ್ರಾಣಘಾತುಕವೂ ಆಗಬಲ್ಲದು. ಮುನ್ನೆಚ್ಚರಿಕೆಯಿಂದ ಇದನ್ನು ತಡೆಯುವುದು ಸಾಧ್ಯವಿದ್ದರೂ, ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಲಕ್ಷಗಟ್ಟಲೆ ಜೀವಗಳು ಈ ರೋಗಕ್ಕೆ ಬಲಿಯಾಗುತ್ತಿವೆ. ವಿಪರೀತ ಜ್ವರ, ಮೈಕೈ ನೋವು, ಚಳಿಯಾಗಿ ನಡುಕ, ಜ್ವರ ಕಡಿಮೆಯಾದರೆ ಸಿಕ್ಕಾಪಟ್ಟೆ ಬೆವರುವುದು, ತಲೆನೋವು, ವಾಂತಿ, ಡಯರಿಯದಂಥ ಚಿಹ್ನೆಗಳು ಕಂಡುಬರುತ್ತವೆ. ಈ ಯಾವುದೇ ಲಕ್ಷಣಗಳು ಕಂಡರೂ ವೈದ್ಯರೊಂದಿಗೆ ಸಮಾಲೋಚನೆ ಅಗತ್ಯ.

ಡೆಂಗ್ಯೂ

ಏಡಿಸ್‌ ಹೆಣ್ಣು ಸೊಳ್ಳೆಯಿಂದ ಹರಡುವ ವೈರಸ್‌ ಸೋಂಕಿದು. ಸೊಳ್ಳೆ ಕಚ್ಚಿದ ನಾಲ್ಕಾರು ದಿನಗಳ ನಂತರ ರೋಗದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಫ್ಲೂ ಮಾದರಿಯಲ್ಲಿ ಇರುವ ಈ ಕಾಯಿಲೆಯಲ್ಲಿ ಕೆಲವೊಮ್ಮೆ ರಕ್ತದಲ್ಲಿ ಪ್ಲೇಟ್‌ಲೆಟ್‌ಗಳು ಕುಸಿದು ಜೀವಕ್ಕೆ ಎರವಾಗುವ ಸಾಧ್ಯತೆಯಿದೆ. ಜ್ವರ, ತೀವ್ರವಾದ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಕೀಲು ಮತ್ತು ಸ್ನಾಯುಗಳಲ್ಲಿ ನೋವು, ಮೈಮೇಲೆ ದದ್ದುಗಳು, ವಾಂತಿ- ಜ್ವರದೊಂದಿಗೆ ಈ ಪೈಕಿ ಯಾವುದೇ ಎರಡು ಲಕ್ಷಣಗಳನ್ನು ಕಂಡರೂ ವೈದ್ಯರನ್ನು ಸಂಪರ್ಕಿಸಬೇಕು.

Chikungunya

ಚಿಕೂನ್‌ಗುನ್ಯಾ

ಸೊಳ್ಳೆ ಕಚ್ಚುವುದರಿಂದ ಹರಡುವ ಚಿಕೂನ್‌ಗುನ್ಯಾ ವೈರಸ್‌ನಿಂದಲೇ ಬರುವ ರೋಗವಿದು. ಜ್ವರದೊಂದಿಗೆ ತೀವ್ರವಾದ ಕೀಲುನೋವು ಇದರ ಪ್ರಮುಖ ಲಕ್ಷಣಗಳು. ಸೋಂಕಿತ ಸೊಳ್ಳೆ ಕಚ್ಚಿದ 4-8 ದಿನಗಳ ಅಂತರದಲ್ಲಿ ರೋಗಚಿಹ್ನೆಗಳು ಕಂಡುಬರುತ್ತವೆ. ಈ ಸೊಳ್ಳೆಗಳು ರಾತ್ರಿಯಲ್ಲಿ ಮಾತ್ರವೇ ಅಲ್ಲ, ಹಗಲಿನಲ್ಲೂ ಕಚ್ಚುತ್ತವೆ. ಏಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿ ಮುಖ್ಯವಾಗಿ ಈ ಕಾಯಿಲೆ ಸದ್ದು ಮಾಡುತ್ತಿದೆ.

ಟೈಫಾಯ್ಡ್

ಸಾಲ್ಮೊನೆಲ್ಲಾ ಟೈಫಿ ಎಂಬ ರೋಗಾಣುವಿನಿಂದ ಬರುವ ಇದು ಮಾರಣಾಂತಿಕ ರೋಗ. ಕಲುಷಿತವಾದ ಆಹಾರ ಮತ್ತು ನೀರಿನಿಂದಲೇ ಇದು ದೇಹ ಸೇರುತ್ತದೆ. ದೀರ್ಘ ಕಾಲದವರೆಗೆ ಜ್ವರ, ಸುಸ್ತು, ತಲೆನೋವು, ವಾಂತಿ, ಕಿಬ್ಬೊಟ್ಟೆಯಲ್ಲಿ ನೋವು, ಡಯರಿಯಾದಂಥ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ವೈದ್ಯರ ಶುಶ್ರೂಷೆಯ ಜೊತೆಗೆ ಸರಿಯಾದ ಆಹಾರವನ್ನೂ ತೆಗೆದುಕೊಳ್ಳಬೇಕು. ಆಹಾರದ ಸ್ವಚ್ಛತೆ ಕಡೆಗೆ ಗಮನ ನೀಡಲೇಬೇಕು. ಇದಕ್ಕೆ ಲಸಿಕೆ ಲಭ್ಯವಿದೆ.

ಕಾಲರಾ

ವಿಬ್ರಿಯೊ ಕಾಲೆರೆ ಎಂಬ ಬ್ಯಾಕ್ಟೀರಿಯಾದಿಂದ ಕಲುಷಿತ ನೀರು ಮತ್ತು ಆಹಾರದ ಮೂಲಕ ಇದು ಮಾನವರಿಗೆ ಹರಡುತ್ತದೆ. ತೀವ್ರವಾದ ಅತಿಸಾರ ಭೇದಿ ಇದರ ಪ್ರಮುಖ ಲಕ್ಷಣ. ಉಳಿದಂತೆ ಹೆಚ್ಚಿನ ಲಕ್ಷಣಗಳು ತೋರಿಸಿಕೊಳ್ಳುವುದಿಲ್ಲ ಈ ರೋಗ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ತೀವ್ರ ನಿರ್ಜಲೀಕರಣಕ್ಕೆ ಒಳಗಾಗಿ ಜೀವಕ್ಕೆ ಅಪಾಯ ಕಟ್ಟಿಟ್ಟಿದ್ದು. ಕಾಲರಾ, ಟೈಫಾಯ್ಡ್‌ನಂಥ ರೋಗಗಳಿಗೆ ನೀರನ್ನು ಕುದಿಸಿಯೇ ಕುಡಿಯುವುದು ಉತ್ತಮ ಉಪಾಯ.

ಇದನ್ನೂ ಓದಿ: Mouthwash Benefits: ಮೌತ್‌ವಾಷ್‌ ದಿನವೂ ಬಳಸಬಹುದೇ? ಏನು ಉಪಯೋಗ ಇದರಿಂದ?

ಹೆಪಟೈಟಿಸ್‌ ಎ, ಇ

ಕಲುಷಿತ ನೀರು ಮತ್ತು ಆಹಾರದಿಂದಲೇ ಬರುವ ವೈರಲ್‌ ಸೋಂಕಿದು. ಇವೆರಡೂ ವೈರಸ್‌ಗಳು ಪಿತ್ತಕೋಶಕ್ಕೆ ಹಾನಿ ಮಾಡುತ್ತವೆ. ಜ್ವರ, ಆಯಾಸ, ಹಸಿವಿಲ್ಲದಿರುವುದು, ಹೊಟ್ಟೆ ತೊಳೆಸುವುದು, ವಾಂತಿ, ಕಿಬ್ಬೊಟ್ಟೆಯಲ್ಲಿ ನೋವು ಮತ್ತು ಕಾಮಾಲೆಯ ಲಕ್ಷಣಗಳು ಇದರಲ್ಲಿ ಕಾಣಿಸಿಕೊಳ್ಳುತ್ತವೆ. ನೀರು, ಆಹಾರ ಶುದ್ಧವಾಗಿ ಇರುವಂತೆ ನೋಡಿಕೊಳ್ಳಬೇಕು. ಹೆಪಟೈಟಿಸ್‌ ಎ ಸೋಂಕಿಗೆ ಲಸಿಕೆ ಲಭ್ಯವಿದೆ.

Continue Reading

ಆರೋಗ್ಯ

Brain Eating Amoeba: ಮೆದುಳು ತಿನ್ನುವ ಅಮೀಬಾದಿಂದ ನಮಗೂ ಅಪಾಯ ಇದೆಯೆ?

Brain Eating Amoeba: ಮೆದುಳು ಮೆಲ್ಲುವ ಅಮೀಬಾ ಎಂದೇ ಕುಖ್ಯಾತವಾಗಿರುವ ಏಕಕೋಶ ಜೀವಿಯಿಂದ ಬರುವ ಸೋಂಕಿಗೆ ಈವರೆಗೆ ಹಲವರು ಬಲಿಯಾಗಿದ್ದಾರೆ. ನೀರಿನಲ್ಲಿ ಕಂಡುಬರುವ ಇವು ಮೂಗು ಪ್ರವೇಶಿಸಿದಾಗ ಬರುವಂಥ ಸೋಂಕಿದು. ಈ ಅಪಾಯಕಾರಿ ಅಮೀಬಾದಿಂದ ಪಾರಾಗುವುದು ಹೇಗೆ? ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

VISTARANEWS.COM


on

Amoeba
Koo

ಭಾರತದಲ್ಲಿ ಈವರೆಗೆ (Brain Eating Amoeba) ಅಷ್ಟಾಗಿ ಸುದ್ದಿ ಮಾಡದ ʻಮೆದುಳು ಮೆಲ್ಲುವ ಅಮೀಬಾʼ ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಸುದ್ದಿ ಮಾಡುತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ ಈ ಅಮೀಬಾಕ್ಕೆ ಹಲವರು ಬಲಿಯಾಗಿದ್ದಾರೆ. ನೀರಿನಲ್ಲಿರುವ ಇದು ಮೂಗಿನ ಮೂಲಕ ದೇಹ ಪ್ರವೇಶಿಸಿದರೆ 97ರಷ್ಟು ಪ್ರತಿಶತ ಉಳಿಯುವ ಸಾಧ್ಯತೆಯಿಲ್ಲ ಎನ್ನುವುದು ತೀವ್ರ ಕಳವಳದ ಸಂಗತಿ. ಇಂಥ ಅಪಾಯಕಾರಿ ಸೂಕ್ಷ್ಮಾಣುವಿನ ಬಗ್ಗೆ, ಅದು ಹರಡುವ ರೀತಿ ಮತ್ತು ಪ್ರತಿಬಂಧಕ ಕ್ರಮಗಳ ಬಗ್ಗೆ ಇಲ್ಲಿದೆ ವಿವರಗಳು. ಅಮೀಬಿಕ್‌ ಮೆನಿಂಜೈಟಿಸ್ ಎಂದೂ ಕರೆಯಲಾಗುವ ಈ ಸ್ಥಿತಿಗೆ ಮುಖ್ಯ ಕಾರಣ ನಗ್ಲೇರಿಯ ಫೌಲೇರಿ ಎಂಬ ಏಕಕೋಶ ಜೀವಿ. ಕಲುಷಿತ ನೀರಿನಲ್ಲಿ ವಾಸಿಸುವ ಈ ಸೂಕ್ಷ್ಮಾಣು ನದಿ, ಹೊಳೆ, ಕೊಳ, ಬಾವಿ, ಕೆರೆಯಂಥ ಯಾವುದೇ ರೀತಿಯ ನೀರಿನಲ್ಲಿ ಇರಬಹುದು. ಒದ್ದೆ ಮಣ್ಣು ಮತ್ತು ನೀರಿನ ಪೈಪುಗಳಲ್ಲಿದ್ದರೂ ಅಚ್ಚರಿಯಿಲ್ಲ. ಇದಕ್ಕೆ ಬದುಕುವುದಕ್ಕೆ ಯಾವುದೇ ನಿಶ್ಚಿತವಾದ ಆಶ್ರಯ ಬೇಕಿಲ್ಲ, ವಾತಾವರಣದಲ್ಲಿ ಹಲವೆಡೆ ಕಾಣಬಹುದು.

Brain Eating Amoeba

ಯಾವಾಗ ಇದು ಚುರುಕಾಗುತ್ತದೆ?

ವಾತಾವರಣ ಬೆಚ್ಚಗಿದ್ದಾಗ, ನೀರು ಸಹ ಬೆಚ್ಚಗಿದ್ದಾಗ ಈ ಅಮೀಬಾ ಚುರುಕಾಗುತ್ತವೆ. ಇವು ಸಾಮಾನ್ಯವಾಗಿ ನದೀತಳದ ಮಣ್ಣಿನಲ್ಲಿ ಹುದುಗಿರುತ್ತವೆ. ಡೈವಿಂಗ್‌, ಈಜು ಅಥವಾ ನೀರನ್ನು ಕದಡುವ ಯಾವುದಾದರೂ ಚಟುವಟಿಕೆಯಿಂದ ಇವು ಮೇಲ್ಮೈಗೆ ತಲುಪುತ್ತವೆ. ಅಲ್ಲಿಂದ ಮೂಗಿನ ಮೂಲಕ ದೇಹ ಪ್ರವೇಶಿಸಿ, ಮೆದುಳಿಗೆ ಲಗ್ಗೆ ಇಡುತ್ತವೆ. ಬಿಸಿ ನೀರಿನಲ್ಲೂ ಇವು ಇರಬಲ್ಲವು. ಆದರೆ ಅಂಥ ಕಲುಷಿತ ನೀರನ್ನು ನುಂಗಿದರೆ ಈ ಸಮಸ್ಯೆ ಆಗಲಿಕ್ಕಿಲ್ಲ, ಮೂಗಿಗೆ ಹೋದರೆ ಮಾತ್ರ ಉಳಿಗಾಲವಿಲ್ಲ. ವಯಸ್ಕರಿಗಿಂತಲೂ ಮಕ್ಕಳಿಗೆ ಈ ಸೋಂಕು ಬಲುಬೇಗ ತಾಗುತ್ತಿದೆ. ಹಾಗೆನ್ನುತ್ತಿದ್ದಂತೆ ನೀರು ಮುಟ್ಟುವುದಿಲ್ಲ ಎಂದು ಶಪಥ ಮಾಡುವ ಅಗತ್ಯವಿಲ್ಲ. ಕಾರಣ, ಒಂದು ದಶಲಕ್ಷ ಮಂದಿಯಲ್ಲಿ ಒಬ್ಬರಿಗೆ ಈ ಸೋಂಕು ಬರುತ್ತದೆನ್ನುವಷ್ಟು ಅಪರೂಪವಿದು.

ಲಕ್ಷಣಗಳೇನು?

ತೀವ್ರ ಜ್ವರ, ಅತೀವ ತಲೆನೋವು, ವಾಂತಿ ಅಥವಾ ಹೊಟ್ಟೆ ತೊಳೆಸುವುದು, ನಡುಕ, ಕುತ್ತಿಗೆ ಗಡುಸಾಗುವುದು, ಬೆಳಕು ನೋಡಲು ಕಷ್ಟ, ಗೊಂದಲ, ಕೋಮಾ… ಒಮ್ಮೆ ಈ ಅಮೀಬಾ ಮೂಗು ಪ್ರವೇಶಿಸಿದ ಮೇಲೆ, ಲಕ್ಷಣಗಳು ಕಾಣುವುದಕ್ಕೆ 2-15 ದಿನಗಳವರೆಗೆ ತೆಗೆದುಕೊಳ್ಳಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿದ ದಾಖಲೆಯೂ ಇಲ್ಲ. ಇದು ಮೂಗಿನ ಮೂಲಕವೇ ಪ್ರವೇಶಿಸಬೇಕು. ಒಮ್ಮೆ ಲಕ್ಷಣಗಳು ಕಾಣಿಸಿದ ಮೇಲೆ 7-10 ದಿನಗಳ ಒಳಗೆ ಸೋಂಕಿತರು ಮರಣಿಸಿದ ಪ್ರಕರಣಗಳೇ ಹೆಚ್ಚು. ಇದರಿಂದ ಚೇತರಿಸಿಕೊಂಡವರು ಅತಿ ವಿರಳ.

ಇದನ್ನೂ ಓದಿ: Kidney Stones: ಈ ಅಭ್ಯಾಸ ನಿಮಗಿದ್ದರೆ ಕಿಡ್ನಿಯಲ್ಲಿ ಕಲ್ಲಾಗುವ ಅಪಾಯ ಹೆಚ್ಚು!

ತಡೆಗಟ್ಟಬಹುದೇ?

ಒಮ್ಮೆ ಸೋಂಕು ಬಂದ ಮೇಲೆ ಹೆಚ್ಚೇನೂ ಮಾಡಲಾಗದು. ಇದಕ್ಕೆ ಲಸಿಕೆಯೂ ಲಭ್ಯವಿಲ್ಲ. ಆದರೆ ಬಾರದಂತೆ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು-

  • ನೀರಿನಲ್ಲಿ ಈಜುವಾಗ ಎಚ್ಚರಿಕೆ ವಹಿಸಿ. ಈಜುಕೊಳಕ್ಕೆ ಹೋಗುವುದಾದರೆ, ಸರಿಯಾಗಿ ಕ್ಲೋರಿನ್‌ ಹಾಕಿ ನೀರನ್ನು ಸೋಂಕು ರಹಿತ ಮಾಡಿದ ಕೊಳಗಳನ್ನೇ ಉಪಯೋಗಿಸಿ. ನೀರು ಬೆಚ್ಚಗಿದ್ದಷ್ಟೂ ಈ ರೋಗಾಣು ಸಕ್ರಿಯವಾಗಿರುತ್ತದೆ.
  • ಕೆರೆ ನದಿಗಳಲ್ಲಿ ಈಜುವಾಗ ತಳಭಾಗದ ಮಣ್ಣು ಕದಡದಿರಿ. ರಾಡಿ ನೀರು ಮೇಲೆ ಬಂದಂತೆ ಇಂಥ ಅಪಾಯಗಳು ಹೆಚ್ಚುತ್ತವೆ.
  • ನೈಸರ್ಗಿಕ ನೀರಿನ ತಾಣಗಳಲ್ಲಿ ಮೇಲಿಂದ ಡೈವ್‌ ಮಾಡಬೇಡಿ. ಇದರಿಂದಲೂ ಸಮಸ್ಯೆಗಳು ಕಾಡಬಹುದು.
  • ನೇತಿಯಂಥ ಕ್ರಿಯೆಗಳನ್ನು ಮಾಡುವಾಗ ಮಾಮೂಲಿ ನಲ್ಲಿ ನೀರನ್ನು ಮೂಗಿಗೆ ಹಾಕದಿರಿ. ಇದಕ್ಕಾಗಿ ಶುದ್ಧೀಕರಿಸಿದ ಸ್ವಚ್ಛ ನೀರನ್ನೇ ಬಳಸಿ. ಕುದಿಸಿ ಆರಿಸಿದ ನೀರು ಬಳಸುವುದು ಕ್ಷೇಮ.
Continue Reading

ಆರೋಗ್ಯ

Allergies During Monsoon: ಮಳೆಗಾಲದಲ್ಲಿ ಅಲರ್ಜಿ ಸಮಸ್ಯೆಯಿಂದ ಪಾರಾಗುವುದು ಹೇಗೆ?

Allergies during Monsoon: ಮಳೆಗಾಲದಲ್ಲಿ ಎಲ್ಲೆಡೆ ಒದ್ದೆ, ತೇವ ಆವರಿಸಿಕೊಂಡಿರುವಾಗ ಬ್ಯಾಕ್ಟೀರಿಯಗಳು, ಫಂಗಸ್‌ಗಳ ಕಾಟ ಹೆಚ್ಚು. ಇದರಿಂದಲೇ ಅಸ್ತಮಾ, ಅಲರ್ಜಿ ಸಮಸ್ಯೆ ಬಿಗಡಾಯಿಸುತ್ತದೆ. ಅದರಲ್ಲೂ ಮೋಡ ಬಿಗಿದಿದ್ದರಂತೂ ಶ್ವಾಸನಾಳಗಳೂ ಬಿಗಿದು ಉಸಿರಾಟವೇ ಕಷ್ಟವಾಗುತ್ತದೆ. ಮಳೆಗಾಲದಲ್ಲಿ ಅಸ್ತಮಾ, ಅಲರ್ಜಿಗಳ ನಿಯಂತ್ರಣ ಹೇಗೆ? ಈ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

Allergies During Monsoon
Koo

ಮಳೆಗೆ ಬಿಡುವಿಲ್ಲದ (Allergies during Monsoon) ಕಾಲವಿದು. ರಾತ್ರಿಯೆಲ್ಲ ಮಳೆ ಸುರಿದಾಗ, ಬೆಳಗಿನ ಸ್ವಚ್ಛ ಹವೆಯನ್ನು ನೋಡಿದರೆ ಎದೆ ಹಗುರಾಗುವಷ್ಟು ತಾಜಾ ಗಾಳಿಯನ್ನು ಉಸಿರಾಡಬಹುದು ಎನ್ನುವ ಭಾವ ಬರುತ್ತದೆ. ಆದರೆ ಅಸ್ತಮಾ, ಅಲರ್ಜಿ ಇರುವವರಿಗೆ ಮಳೆಗಾಲವೂ ಕಷ್ಟವೇ. ಎಲ್ಲೆಡೆ ಒದ್ದೆ, ತೇವ ಆವರಿಸಿಕೊಂಡಿರುವಾಗ ಬ್ಯಾಕ್ಟೀರಿಯಗಳು, ಫಂಗಸ್‌ಗಳ ಕಾಟ ಹೆಚ್ಚು. ಇದರಿಂದಲೇ ಇನ್ನಷ್ಟು ಅಲರ್ಜಿ ಸಮಸ್ಯೆ ಬಿಗಡಾಯಿಸುತ್ತದೆ. ಅದರಲ್ಲೂ ಮೋಡ ಬಿಗಿದಿದ್ದರಂತೂ ಶ್ವಾಸನಾಳಗಳೂ ಬಿಗಿದು, ಆಷಾಢದ ಗಾಳಿಯಂತೆಯೇ ಶ್ವಾಸಕೋಶವೂ ಶಬ್ದ ಮಾಡಲಾರಂಭಿಸುತ್ತದೆ. ಇವಿಷ್ಟು ಸಾಲದೆಂಬಂತೆ ನಾನಾ ರೀತಿಯ ವೈರಸ್‌ ಸೋಂಕುಗಳು ಅಮರಿಕೊಂಡು, ಸೋಂಕು ಗುಣವಾದ ಮೇಲೂ ಅಲರ್ಜಿ ಸಮಸ್ಯೆ ಉಲ್ಭಣಿಸುವಂತೆ ಮಾಡುತ್ತವೆ. ಮಳೆಗಾಲದಲ್ಲಿ ಅಸ್ತಮಾ, ಅಲರ್ಜಿಗಳ ನಿಯಂತ್ರಣ ಹೇಗೆ?

Keep the bodys immune system active with proper diet and exercise Monsoon Allergies

ಏಕೆ ಹೆಚ್ಚುತ್ತದೆ?

ಈ ಮಳೆಗೆ, ಒಂದು ಹಿಡಿ ಮಣ್ಣು ಇದ್ದಲ್ಲೂ ಹುಲ್ಲು ಹಸಿರಾಗುತ್ತದೆ. ಈ ಹುಲ್ಲಿನಿಂದ ವಾತಾವರಣ ಸೇರುವ ಅಲರ್ಜಿಕಾರಕಗಳು ಹಲವು ರೀತಿಯವು. ಜೋರು ಗಾಳಿಯಲ್ಲಿ ಇದರ ಹೂವಿನ ಪರಾಗಗಳೆಲ್ಲ ಎಲ್ಲೆಡೆ ಪಸರಿಸುತ್ತವೆ. ಅಲರ್ಜಿಗೆ ಕಾರಣವಾಗುತ್ತವೆ. ತೇವ ಹೆಚ್ಚಿದ್ದಲ್ಲಿ ಫಂಗಸ್‌ ಪ್ರಮಾಣವೂ ಹೆಚ್ಚು. ಜೋರು ಮಳೆಯ ಪರಿಸರದಲ್ಲಿ ಗೋಡೆ, ಬಾಗಿಲುಗಳ ಮೇಲೂ ಫಂಗಸ್‌ ಬೆಳೆದಿರುತ್ತದೆ. ಇವುಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸದಿದ್ದರೆ ಅಸ್ತಮಾ ಸಮಸ್ಯೆ ಬಿಗಡಾಯಿಸಬಹುದು. ಯಾವುದೇ ರೀತಿಯ ಪರಾಗಗಳ ಅಲರ್ಜಿಯೂ ಈಗ ತೊಂದರೆ ಕೊಟ್ಟೀತು. ಜೋರು ಗಾಳಿ ಮತ್ತು ಮೋಡ ಮುಸುಕಿದ ವಾತಾವರಣಗಳೇ ಇದಕ್ಕೆ ಕಾರಣ.

ಲಕ್ಷಣಗಳು

ಅಲರ್ಜಿ ಹೆಚ್ಚುತ್ತಿದೆ ಎನ್ನುವುದಕ್ಕೆ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು- ಸೀನುಗಳ ಸರಮಾಲೆ, ಮೂಗು ಸೋರುವುದು, ಒಣ ಕೆಮ್ಮು, ಉಸಿರಾಡಲು ಕಷ್ಟವಾಗುವುದು, ಉಸಿರಾಡುವಾಗ ಸಿಳ್ಳೆ ಹಾಕಿದಂತೆ ಪುಪ್ಪುಸಗಳಿಂದ ಶಬ್ದ ಬರುವುದು, ಸುಸ್ತು-ಆಯಾಸ, ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ತುರಿಕೆ, ಕಣ್ಣು ಊದಿಕೊಂಡು ನೀರು ಬರುವುದು, ತಲೆನೋವು, ಮೈ ಮೇಲೆ ಗುಳ್ಳೆಗಳು ಬಂದು ಕೆಂಪಾಗುವುದು… ಇತ್ಯಾದಿ.

Woman Suffer from Nose Allergy Snoring Solution

ಏನು ಮಾಡಬೇಕು?

ಅಸ್ತಮಾ, ಅಲರ್ಜಿ ತೊಂದರೆಯಿದೆ ಎಂದಾದರೆ ವೈದ್ಯರು ಹೇಳಿದ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಿ. ಅಲರ್ಜಿ ನಿಯಂತ್ರಣಕ್ಕೆ ಸರಿಯಾದ ಚಿಕಿತ್ಸಾ ವಿಧಾನವನ್ನು ಪಾಲಿಸುವುದು ಅತ್ಯಗತ್ಯ. ಪಫ್‌ಗಳನ್ನು ತೆಗೆದುಕೊಳ್ಳಬೇಕು ಎಂದಾದರೆ, ದಿನದ ಲೆಕ್ಕವನ್ನು ಪಕ್ಕಾ ಇರಿಸಿಕೊಳ್ಳಿ. ಸೋಂಕುಗಳಿಂದ ತಪ್ಪಿಸಿಕೊಳ್ಳುವುದು ಮುಖ್ಯ ಎಂದಾದಲ್ಲಿ ಫ್ಲೂ ಲಸಿಕೆ ಪಡೆಯಿರಿ. ಯಾವೆಲ್ಲ ಆಹಾರಗಳು ಅಲರ್ಜಿ ತರುತ್ತವೆ ನಿಮಗೆ ಎಂಬುದನ್ನು ತಿಳಿದುಕೊಳ್ಳುವುದು ಹೆಚ್ಚಿನ ನೆರವನ್ನು ನೀಡಬಹುದು. ಮನೆಯೊಳಗೆ ಹೆಚ್ಚಿನ ತೇವ ನಿಲ್ಲದಂತೆ ಜಾಗ್ರತೆ ಮಾಡಿ. ಸಾಕಷ್ಟು ಗಾಳಿ-ಬೆಳಕು ಆಡುವಂತಿರಲಿ. ಮಳೆ ಇಲ್ಲದ ಸಮಯದಲ್ಲಿ, ಬಿಸಿಲಿದ್ದಾಗ ಕಿಟಕಿಗಳನ್ನು ತೆರೆದಿಡುವುದು ಸಹಕಾರಿ. ಹಾಗಿಲ್ಲದಿದ್ದರೆ ಎಕ್ಸಾಸ್ಟ್‌ ಫ್ಯಾನ್‌ಗಳನ್ನು ಅಳವಡಿಸಿಕೊಳ್ಳಿ. ಮನೆಯೊಳಗೆ ದೂಳು, ಕಸ ಉಳಿಯದಿರಲಿ. ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ, ಅವುಗಳ ಕೂದಲಿನಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಹೆಚ್ಚು. ಹಾಸಿಗೆ-ಹೊದಿಕೆಯ ವಸ್ತ್ರಗಳನ್ನು ಕಪಾಟಿನಿಂದ ನೇರವಾಗಿ ತೆಗೆದು ಉಪಯೋಗಿಸಬೇಡಿ. ಅವುಗಳನ್ನು ಬಿಸಿಲಿಗೆ ಆರಲು ಬಿಡಿ ಅಥವಾ ಡ್ರೈಯರ್‌ಗೆ ಹಾಕಿ. ಅದಿಲ್ಲದಿದ್ದರೆ ಇಸ್ತ್ರಿ ಮಾಡಿ ಉಪಯೋಗಿಸಿ. ಇದರಿಂದ ಮೈಟ್‌ಗಳ ಉಪಟಳವನ್ನು ತಪ್ಪಿಸಬಹುದು.
ಮನೆಯಿಂದ ಹೊರಗೆ ಹೋಗುವಾಗ ಬೆಚ್ಚಗಿನ ವಸ್ತ್ರಗಳು ಅಗತ್ಯ. ಗಾಳಿ ಹೆಚ್ಚಿದ್ದರೆ ಮುಖಕ್ಕೆ ಮಾಸ್ಕ್‌ ಹಾಕಿ. ಕಟುವಾದ ಪರಿಮಳಗಳು ನಿಮಗೆ ಹೇಳಿಸಿದ್ದಲ್ಲ. ನಿಮ್ಮ ವೈಯಕ್ತಿಕ ಶುಚಿತ್ವದ ವಸ್ತುಗಳಾದ ಸೋಪು, ಶಾಂಪು, ಕ್ರೀಮ್‌ಗಳಿಗೆ ಕಟುವಾದ ಘಮವಿದ್ದರೆ, ಅದನ್ನು ಬದಲಾಯಿಸಿ. ಪರ್ಫ್ಯೂಮ್‌ಗಳು ಸಹ ತೊಂದರೆ ತಂದಾವು, ಜೋಕೆ. ಮಳೆ-ಚಳಿ ಏನೇ ಆದರೂ ದಿನವೂ ಸ್ನಾನ ಮಾಡಿ. ಹೊರಗಿನಿಂದ ಬಂದಾಕ್ಷಣ ಆ ಬಟ್ಟೆಗಳನ್ನು ಬದಲಿಸಿ, ಕೈ-ಕಾಲು ತೊಳೆದುಕೊಳ್ಳಿ. ಇದರಿಂದ ಸೋಂಕು ಮತ್ತು ಅಲರ್ಜಿಕಾರಕಗಳನ್ನು ನಿಯಂತ್ರಿಸಬಹುದು. ಉಗುರುಗಳನ್ನು ಕತ್ತರಿಸಿ, ಸ್ವಚ್ಛ ಮಾಡಿಕೊಳ್ಳಿ.

ಇದನ್ನೂ ಓದಿ: Fatty Liver Problem: ಫ್ಯಾಟಿ ಲಿವರ್‌ ಸಮಸ್ಯೆ ಎದುರಿಸುತ್ತಿದ್ದೀರಾ? ಈ ಮೂರು ಪೇಯಗಳಿಂದ ಎಂದೆಂದಿಗೂ ದೂರವಿರಿ

ಆಹಾರ

ಸಮತೋಲಿತ ಮತ್ತು ಸತ್ವಭರಿತ ಆಹಾರವನ್ನು ಸೇವಿಸುವುದು ಹೆಚ್ಚಿನ ತೊಂದರೆಯನ್ನು ಬುಡದಲ್ಲೇ ತಪ್ಪಿಸುತ್ತದೆ. ಒಮೇಗಾ 3 ಕೊಬ್ಬಿನಾಮ್ಲ ಹೆಚ್ಚಿರುವ ಆಹಾರವನ್ನು ಸೇವಿಸಿ. ಇದೀಗ ಬೆಣ್ಣೆ ಹಣ್ಣು ಅಥವಾ ಅವಕಾಡೊಗಳ ಕಾಲ. ಒಮೇಗಾ 3 ಕೊಬ್ಬಿನಾಮ್ಲ ಹೇರಳವಾಗಿರುವ ಅವುಗಳನ್ನು ಮನಸೋಇಚ್ಛೆ ತಿನ್ನಿ. ಜೊತೆಗೆ ವಿಟಮಿನ್‌ ಸಿ ಹೆಚ್ಚಿರುವ ಕಿತ್ತಳೆ, ಬೆರ್ರಿಗಳು, ಪಾಲಕ್‌ ಸೊಪ್ಪು, ಕ್ಯಾಪ್ಸಿಕಂನಂಥವು ನಿಮಗೆ ಬೇಕು. ಚೆನ್ನಾಗಿ ನೀರು ಕುಡಿಯಿರಿ, ಮಳೆಗಾಲದಲ್ಲಿ ಬಾಯಾರಿಕೆಯೇ ಆಗುವುದಿಲ್ಲ ಎಂಬ ನೆವ ಹೇಳಬೇಡಿ. ಹರ್ಬಲ್‌ ಚಹಾಗಳು, ಸೂಪ್‌ಗಳನ್ನು ಯಥೇಚ್ಛ ಕುಡಿಯಿರಿ.

Continue Reading

ಆರೋಗ್ಯ

Chai Curing Headache: ಚಹಾಗೂ ತಲೆನೋವಿಗೂ ಸಂಬಂಧ ಇರೋದು ನಿಜವೇ?

Chai curing Headache: ಚಹಾ ಪ್ರಿಯರು ಅತ್ಯಂತ ಉದಾರವಾದಿಗಳು. ಅವರಿಗೆ ಇಂಥವರು, ಹೀಗೆಯೇ ಚಹಾ ಮಾಡಿ ಕೊಡಬೇಕೆಂದಿಲ್ಲ. ಅಮ್ಮನ ಕೈಯ ಚಹಾದಷ್ಟೇ ಪ್ರೀತಿಯಿಂದ ರಸ್ತೆ ಬದಿಯ ಗೂಡಂಗಡಿಯ ಚಹಾವನ್ನು ಹೀರುತ್ತಾರೆ. ಆದರೆ ದಿನದ ಚಹಾ ಸಿಗದಿದ್ದರೆ ತಲೆನೋವು ಎಂದು ದೂರುತ್ತಾರೆ. ತಲೆನೋವಿಗೂ ಚಹಾಗೂ ಇರುವ ನಂಟೇನು? ಈ ಕುರಿತು ಇಲ್ಲಿದೆ ಕುತೂಹಲಕರ ಮಾಹಿತಿ.

VISTARANEWS.COM


on

Chai Curing Headache
Koo

“ಬೆಳಗಿಂದ ಟೀ ಕುಡಿದಿಲ್ಲ. ತಲೆ (Chai curing Headache) ಸಿಡೀತಾ ಇದೆ” ಎನ್ನುತ್ತಾ ಚಹಾ ಕೌಂಟರ್‌ನತ್ತ ಓಡುವವರನ್ನು ಎಷ್ಟು ನೋಡಿಲ್ಲ ನಾವು? ಚಹಾ ಪ್ರಿಯರು ದಿನಕ್ಕಿಷ್ಟು ಎಂದು ನಿಗದಿ ಪಡಿಸಿಕೊಂಡಿರುವಷ್ಟು ಚಹಾ ಹೀರದಿದ್ದರೆ, ಅವತ್ತಿನ ದಿನವೇ ಹಾಳು ಎಂಬಷ್ಟು ಪರದಾಡುತ್ತಾರೆ. ಚಹಾ ಇಲ್ಲದಿದ್ದಕ್ಕೇ ತಲೆನೋವು ಎಂದು ಗೊಣಗುತ್ತಾ, ಹತ್ತಿರದಲ್ಲಿ ಎಲ್ಲಿ ಚಹಾ ದೊರೆಯುತ್ತದೆ ಎಂದು ಪರಾಂಬರಿಸುತ್ತಾರೆ. ಮನೆಯಲ್ಲಿ ಮಾಡಿದ ಹದವಾದ ಚಹವೇ ಬೇಕೆಂದಿಲ್ಲ, ರಸ್ತೆ ಬದಿಯ ಗೂಡಂಗಡಿಯಲ್ಲಿನ ಬಿಸಿ ಚಹಾ ಆದರೂ ಸರಿ, ಅಂತೂ ಟೀ ಬೇಕು. ಚಳಿಗೆ ಬಿಸಿ ಚಹಾ ಎಂದು ಭಾವಿಸಬೇಡಿ. ಹೊರಗೆ ೪೫ ಡಿಗ್ರಿ ಸೆ. ನಷ್ಟು ಕುದಿಯುತ್ತಿದ್ದರೂ, ಚಹಾ ಪ್ರಿಯರು ಬಿಸಿ ಚಹಾ ಇರಲೇಬೇಕು. ಆದರೆ ಚಹಾ ಕುಡಿಯದಿರುವುದಕ್ಕೇ ತಲೆ ನೋಯುತ್ತಿದೆ ಎಂಬ ಅಪವಾದ ಎಷ್ಟು ಸರಿ? ತಲೆನೋವಿಗೂ ಚಹಾಗೂ ಇರುವ ನಂಟೇನು? ಭಾರತಿಯರಿಗೆ ಚಹಾ ಎಂದರೆ ಗ್ರೀನ್‌ ಟೀ, ಲೆಮೆನ್‌ ಟೀ ಇತ್ಯಾದಿಗಳೆಲ್ಲ ಅಲ್ಲವೇ ಅಲ್ಲ, ಅಪ್ಪಟ ಇಂಗ್ಲಿಷ್‌ ಟೀ. ಅಂದರೆ ಹಾಲು ಹಾಕಿಯೇ ಮಾಡಿದ ಚಹ. ಅದರ ಹೊರತಾಗಿ ಉಳಿದವೆಲ್ಲ ಕಷಾಯಕ್ಕೆ ಸಮ! ಇರಲಿ, ವಿಷಯ ಅದಲ್ಲವಲ್ಲ. ಈ ಹಾಲಿನ ಚಹಾಗೂ ತಲೆನೋವಿಗೂ ಏನಾದರೂ ಸಂಬಂಧ ಇದೆಯೇ?

How Much Caffeine Is Too Much

ಕೆಫೇನ್‌ ಕಾರಣ

ತಜ್ಞರ ಪ್ರಕಾರ, ಕುಡಿಯದಿದ್ದರೆ ತಲೆನೋವು ಬರಿಸುವ, ಕುಡಿದ ತಕ್ಷಣ ಹೋಗಲಾಡಿಸುವ ಯಾವುದೇ ಮಾಯೆಯೂ ಚಹಾದಲ್ಲಿಲ್ಲ. ನೇರವಾಗಿ ಇವೆರಡಕ್ಕೂ ಯಾವುದೇ ನಂಟಿಲ್ಲ. ಆದರೆ ಚಹಾದಲ್ಲಿರುವ ಕೆಫೇನ್‌ನಿಂದಾಗಿ ಈ ಲಕ್ಷಣಗಳು ಕಾಣಬಹುದು. ಹಾಗೆಂದು ಚಹಾ ಕುಡಿಯುವುದನ್ನು ತಪ್ಪಿಸಿದ ಎಲ್ಲರಿಗೂ ತಲೆನೋವು ಬರುತ್ತದೆ ಎನ್ನುವಂತಿಲ್ಲ. ಹಾಗಾಗಿ ಯಾರ ಶರೀರ ಅದೊಂದು ಸಣ್ಣ ಡೋಸ್‌ ಕೆಫೇನ್‌ಗೆ ಹೊಂದಿಕೊಂಡಿರುತ್ತದೋ, ಅವರಿಗೆ ತಲೆನೋವು ಕಾಣುವುದು ಸಹಜ. ಅಂದಹಾಗೆ, ಒಂದು ದೊಡ್ಡ ಕಪ್‌ (150 ಎಂ.ಎಲ್‌) ಫಿಲ್ಟರ್‌ ಕಾಫಿಯಲ್ಲಿ ಸುಮಾರು 80-120 ಎಂ.ಜಿ. ಕೆಫೇನ್‌ ದೊರಕೀತು ದೇಹಕ್ಕೆ. ಅಷ್ಟೇ ಪ್ರಮಾಣದ ಚಹಾದಲ್ಲಿ 30-16 ಎಂ.ಜಿ. ಕೆಫೇನ್‌ ದೇಹ ಸೇರುತ್ತದೆ. ಹೆಚ್ಚು ಕೆಫೇನ್‌ ದೇಹ ಸೇರಿದಷ್ಟೂ ಅದನ್ನು ನಾವು ಹೆಚ್ಚು ಅವಲಂಬಿಸುತ್ತೇವೆಯೇ ಹಾಗಾದರೆ? ಮಾಮೂಲಿ ಡೋಸ್‌ ಕೆಫೇನ್‌ ದೇಹ ಸೇರುತ್ತಿದ್ದ ಕೆಲವೇ ಹೊತ್ತಿನಲ್ಲಿ ತಲೆನೋವು ಮಾಯವಾಗುವುದಕ್ಕೆ ಇದೇ ಕಾರಣ ಇರಬಹುದು.
ಅಥವಾ…ದಿನದ ಆ ಹೊತ್ತಿನಲ್ಲಿ ಅದಷ್ಟು ಪೇಯ ಅಥವಾ ದ್ರವಾಹಾರ ಹೊಟ್ಟೆ ಸೇರುತ್ತದೆ. ಚಹಾ ಕುಡಿದಿಲ್ಲ ಎಂಬ ಕಾರಣ ನೀಡಿ, ನೀರನ್ನಂತೂ ಕುಡಿಯುವುದಿಲ್ಲ ನಾವು. ಹೀಗೆ ಪಾನೀಯಗಳು ಯಾವುವೂ ಹೊಟ್ಟೆ ಸೇರದಿದ್ದಾಗ, ಆ ಹೊತ್ತಿನ ನಿಗದಿತ ನೀರಿನಂಶ ಕಡಿಮೆಯಾಗಿಯೂ ತಲೆನೋವು ಬರುವ ಸಾಧ್ಯತೆಯಿದೆ. ಆದರೆ ಟೀ ಬದಲಿಗೆ ಒಂದಿಡೀ ಗ್ಲಾಸ್‌ ಬಿಸಿನೀರನ್ನೋ ಕಷಾಯವನ್ನೋ ಕುಡಿದು ಪ್ರಯೋಗ ಮಾಡಿದ್ದರೆ, ನಮಗೆ ತಲೆನೋವು ಬಂದಿದ್ದು ಇದೇ ಕಾರಣಕ್ಕೆ ಹೌದೇ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗುತ್ತಿತ್ತು. ಹಾಗಲ್ಲದೆ, ಚಹಾವನ್ನು ಹುಡುಕಿಯಾದರೂ ಕುಡಿದು ತಲೆನೋವಿನಿಂದ ಮುಕ್ತರಾಗುತ್ತೇವೆ ನಾವು.

Masala tea/chai

ಮಸಾಲೆ ಚಹಾಗಳು

ಕೆಲವೊಮ್ಮೆ ಇಂಗ್ಲಿಷ್‌ ಚಹಾ ಮಾತ್ರವಲ್ಲದೆ, ಹರ್ಬಲ್‌ ಅಥವಾ ಗ್ರೀ ಟೀ ಕುಡಿಯುವವರಿಗೂ ಈ ಲಕ್ಷಣಗಳು ತೋರಬಹುದು. ಇದಕ್ಕೂ ಕಾರಣಗಳು ಇಲ್ಲದಿಲ್ಲ. ಶುಂಠಿ ಚಹಾ, ಏಲಕ್ಕಿ ಚಹಾ, ದಾಲ್ಚಿನ್ನಿ ಚಹಾ ಮುಂತಾದ ಮಸಾಲೆ ಚಹಾಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೋವು ಕಡಿಮೆ ಮಾಡುವ ಗುಣಗಳಿವೆ. ಅದರಲ್ಲೂ ಮೈಗ್ರೇನ್‌ ಕಾಡುತ್ತಿದ್ದರೆ ಈ ಚಹಾಗಳಲ್ಲಿರುವ ಘಮವೇ ಅರೋಮಥೆರಪಿಯ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದಕ್ಕೆ ನಿಂಬೆ ಚಹಾ, ಪುದೀನಾ ಚಹಾ, ಕ್ಯಾಮೊಮೈಲ್‌ ಚಹಾ ಮುಂತಾದ ಯಾವುದೇ ಪರಿಮಳದ ಚಹಾ ಪರಿಹಾರ ನೀಡಬಲ್ಲದು. ಇದು ಮೈಗ್ರೇನ್‌ಗೆ ಮಾತ್ರವೇ ಅಲ್ಲ, ಮಾನಸಿಕ ಒತ್ತಡದಿಂದ, ಜೀರ್ಣಾಂಗದ ಸಮಸ್ಯೆಯಿಂದ ತಲೆನೋವು ಕಾಡುತ್ತಿದ್ದರೂ ಅದಕ್ಕೆ ಉಪಶಮನ ನೀಡಬಲ್ಲದು.

ಇದನ್ನೂ ಓದಿ: Egg Yolk Benefits: ಮೊಟ್ಟೆಯ ಹಳದಿ ಲೋಳೆಯನ್ನು ಎಸೆಯುತ್ತೀರಾ? ಎಸೆಯುವ ಮೊದಲು ಒಮ್ಮೆ ಯೋಚಿಸಿ!

ತಲೆನೋವು ಬರಬಹುದು!

ಚಹಾ ಕುಡಿಯುವುದರಿಂದ ತಲೆನೋವು ಹೋಗುವುದಷ್ಟೇ ಅಲ್ಲ, ಬರಲೂಬಹುದು! ಹೌದು, ಚಹಾ ಕುಡಿಯುವುದು ಮಿತಿಮೀರಿದರೆ ತೊಂದರೆಯನ್ನು ಆಹ್ವಾನಿಸಿದಂತೆ. ದಿನಕ್ಕೆ ಒಂದೆರಡು ಕಪ್‌ ಚಹಾ ಕುಡಿಯುವುದು ಸಮಸ್ಯೆ ತರುವುದು ಅನುಮಾನ. ಆದರೆ ಮೂರು ಕಪ್‌ಗಿಂತ ಹೆಚ್ಚು ಚಹಾ ಕುಡಿಯುವುದನ್ನು ನಿಯಮಿತವಾಗಿ ರೂಢಿಸಿಕೊಂಡರೆ, ಹೊಟ್ಟೆ ಹಸಿದಾಗ ಚಹಾ ಕುಡಿದರೆ, ನಿದ್ದೆಗೆಡುವುದಕ್ಕೆ ಚಹಾ ಕುಡಿದರೆ… ಆಸಿಡಿಟಿ ಅಥವಾ ಗ್ಯಾಸ್ಟ್ರೈಟಿಸ್‌ ಸಂಬಂಧಿ ತೊಂದರೆಗಳನ್ನು ತರಬಹುದು. ಆಸಿಡಿಟಿ ಹೆಚ್ಚಾದರೂ ಮೈಗ್ರೇನ್‌ ರೀತಿಯ ತಲೆನೋವು ಕಾಡುತ್ತದೆ.

Continue Reading
Advertisement
BJP Protest
ಕರ್ನಾಟಕ4 hours ago

BJP Protest: ಸದನದಲ್ಲಿ ಬಿಜೆಪಿ, ಜೆಡಿಎಸ್ ಅಹೋರಾತ್ರಿ ಧರಣಿ: ಅಲ್ಲೇ ಭಜನೆ, ಊಟ, ನಿದ್ದೆ; ಫೋಟೊ, ವಿಡಿಯೊ ಇಲ್ಲಿವೆ

Nitish Kumar
ದೇಶ5 hours ago

Nitish Kumar: ನೀನೂ ಹೆಣ್ಣು; ವಿಧಾನಸಭೆಯಲ್ಲೇ ಆರ್‌ಜೆಡಿ ಶಾಸಕಿಗೆ ನಿತೀಶ್‌ ಕುಮಾರ್‌ ಗದರಿದ್ದೇಕೆ?

Paris Olympics
ಕ್ರೀಡೆ5 hours ago

Paris Olympics: ಕೊಕೊ ಗಾಫ್ ಅಮೆರಿಕದ ಧ್ವಜಧಾರಿ; ಈ ಗೌರವ ಪಡೆದ ಅತಿ ಕಿರಿಯ ಕ್ರೀಡಾಪಟು

Anekal
ಕ್ರೈಂ6 hours ago

ಆನೇಕಲ್‌ನಲ್ಲಿ ಪುರಸಭೆ ಸದಸ್ಯನ ಬರ್ಬರ ಹತ್ಯೆ; ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ

Hardik Pandya
ಕ್ರೀಡೆ6 hours ago

Hardik Pandya: ವಿಚ್ಛೇದನ ನೀಡಿ ಒಂದು ವಾರ ಕಳೆಯುವ ಮುನ್ನವೇ ಮಾಜಿ ಪತ್ನಿಯ ಪೋಸ್ಟ್​ಗೆ ಲೈಕ್ಸ್​, ಕಮೆಂಟ್​ ಮಾಡಿದ ಹಾರ್ದಿಕ್​ ಪಾಂಡ್ಯ

King Chopper
ದೇಶ6 hours ago

Sea King Chopper: ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನನ್ನು ರಕ್ಷಿಸಿದ ಭಾರತೀಯ ನೌಕಾಪಡೆ; ಮಾನವೀಯತೆಗೆ ಮೆಚ್ಚುಗೆ

ahoratri dharani until the guilts are punished says Opposition party Leader R Ashok
ಕರ್ನಾಟಕ6 hours ago

R Ashok: ಹಗರಣಕೋರರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ; ಆರ್. ಅಶೋಕ್‌ ಘೋಷಣೆ

Traffic Restrictions
ಬೆಂಗಳೂರು7 hours ago

Traffic Restrictions: ವೈಟ್ ಟಾಪಿಂಗ್ ಕಾಮಗಾರಿ; ನಾಳೆಯಿಂದ ರಾಜಾಜಿನಗರದ ಈ ಮಾರ್ಗದಲ್ಲಿ ಸಂಚಾರ ನಿಷೇಧ

Mohammed Shami
ಕ್ರೀಡೆ7 hours ago

Mohammed Shami: 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ; ತಡೆದು ನಿಲ್ಲಿಸಿದ್ದು ಯಾರು?

KP Poorchandra Tejaswi samagra kruthi Jagattu 14 samputagalu Lokarpane On July 29 in Bengaluru
ಬೆಂಗಳೂರು7 hours ago

Book Release: ಜು.29ರಂದು ಬೆಂಗಳೂರಿನಲ್ಲಿ 14 ಸಂಪುಟಗಳ ಪೂರ್ಣಚಂದ್ರ ತೇಜಸ್ವಿ ಕೃತಿ ಲೋಕಾರ್ಪಣೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ21 hours ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ1 day ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ1 day ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ2 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ5 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ6 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ6 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ7 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

ಟ್ರೆಂಡಿಂಗ್‌