Union Budget 2024: ಚಿನ್ನ, ಬೆಳ್ಳಿ ಖರೀದಿದಾರರಿಗೆ ಸಿಹಿ ಸುದ್ದಿ; ಕಸ್ಟಮ್ಸ್‌ ಸುಂಕ 6% ಇಳಿಸಿದ ಕೇಂದ್ರ - Vistara News

ಬಜೆಟ್ 2024

Union Budget 2024: ಚಿನ್ನ, ಬೆಳ್ಳಿ ಖರೀದಿದಾರರಿಗೆ ಸಿಹಿ ಸುದ್ದಿ; ಕಸ್ಟಮ್ಸ್‌ ಸುಂಕ 6% ಇಳಿಸಿದ ಕೇಂದ್ರ

Union Budget 2024: ಚಿನ್ನ ಖರೀದಿದಾರರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಿಹಿ ಸುದ್ದಿ ನೀಡಿದ್ದಾರೆ. ಹೌದು, ಚಿನ್ನ ಹಾಗೂ ಬೆಳ್ಳಿಯ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ.6ರಷ್ಟು ಇಳಿಕೆ ಮಾಡಲಾಗುವುದು ಎಂಬುದಾಗಿ ನಿರ್ಮಲಾ ಸೀತಾರಾಮನ್‌ ಅವರು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಚಿನ್ನದ ಬೆಲೆಯು ಇಳಿಕೆಯಾಗಲಿದೆ ಎಂದು ತಿಳಿದುಬಂದಿದೆ.

VISTARANEWS.COM


on

Union Budget 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಸತತ ಏರಿಕೆಯಾಗುತ್ತಿರುವುದರಿಂದ ಗ್ರಾಹಕರಿಗೆ ಭಾರಿ ಹೊರೆಯಾಗಿತ್ತು. ಆದರೆ, ಕೇಂದ್ರ ಬಜೆಟ್‌ನಲ್ಲಿ (Union Budget 2024) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಚಿನ್ನ ಖರೀದಿದಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹೌದು, ಚಿನ್ನ ಹಾಗೂ ಬೆಳ್ಳಿಯ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ.6ರಷ್ಟು ಇಳಿಕೆ ಮಾಡಲಾಗುವುದು ಎಂಬುದಾಗಿ ನಿರ್ಮಲಾ ಸೀತಾರಾಮನ್‌ ಅವರು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಚಿನ್ನದ ಬೆಲೆಯು ಇಳಿಕೆಯಾಗಲಿದೆ ಎಂದು ತಿಳಿದುಬಂದಿದೆ.

ಇದಲ್ಲದೆ, ಪ್ಲಾಟಿನಮ್‌ ಮೇಲಿನ ಕಸ್ಟಮ್‌ ಸುಂಕವನ್ನು ಕೂಡ ಶೇ.6.4ರಷ್ಟು ಇಳಿಕೆ ಮಾಡಲಾಗಿದೆ. ಕಸ್ಟಮ್ಸ್‌ ಸುಂಕವನ್ನು ಇದಕ್ಕೂ ಮೊದಲು ಇಳಿಸಲಾಗಿದೆ. ಇನ್ನಷ್ಟು ಕಸ್ಟಮ್ಸ್‌ ಸುಂಕವನ್ನು ಇಳಿಸಲು ಪ್ರಸ್ತಾಪ ಇದೆ. ಅದರಂತೆ, ಔಷಧ, ಮೆಡಿಕಲ್‌ ಉಪಕರಣಗಳು, ಮೂರು ಕ್ಯಾನ್ಸರ್‌ ಔಷಧಿಗಳನ್ನು ಕಸ್ಟಮ್ಸ್‌ ಸುಂಕದಿಂದ ಮುಕ್ತಗೊಳಿಸಲಾಗಿದೆ. ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಶೇ.15ರಷ್ಟು ಕಸ್ಟಮ್ಸ್‌ ಸುಂಕವನ್ನು ಇಳಿಸಿದೆ. ಆಮದು ಮಾಡಿಕೊಳ್ಳುವ ಮೊಬೈಲ್‌, ಮೊಬೈಲ್ ಬಿಡಿ ಭಾಗಗಳ ಮೇಲಿನ ಸುಂಕವನ್ನೂ ಕೇಂದ್ರ ಸರ್ಕಾರ ಶೇ.15ರಷ್ಟು ಇಳಿಸಿದೆ ಎಂಬುದಾಗಿ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಮೊಬೈಲ್‌ಗಳ ಬೆಲೆ ಅಗ್ಗ

ಭಾರತದಲ್ಲಿ ಮೊಬೈಲ್‌ ಉತ್ಪಾದನೆಯ ಏರಿಕೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಹಾಗಾಗಿ, ಮೊಬೈಲ್‌ ಹಾಗೂ ಎಲೆಕ್ಟ್ರಿಕಲ್‌ ವಾಹನಗಳಿಗೆ ಅತ್ಯವಶ್ಯಕವಾದ ಲೀಥಿಯಂ ಇಯಾನ್‌ ಬ್ಯಾಟರಿಗಳ ಮೇಲಿನ ತೆರಿಗೆಯನ್ನು ಕೂಡ ಇಳಿಕೆ ಮಾಡಲಾಗಿದೆ. ಇದರಿಂದ ಭಾರತದಲ್ಲಿ ಮೊಬೈಲ್‌ ಹಾಗೂ ವಿದ್ಯುಚ್ಛಾಲಿತ ವಾಹನಗಳ ಉತ್ಪಾದನೆ ಜತೆಗೆ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಇವು ಸಿಗಲು ನೆರವಾಗಲಿದೆ ಎಂದು ಸಚಿವೆಯು ಮಾಹಿತಿ ನೀಡಿದರು.

ಹೂಡಿಕೆ ಮೇಲಿನ ತೆರಿಗೆ ಹೆಚ್ಚಳದ ಶಾಕ್

ಹೂಡಿಕೆ ಮೇಲಿನ ತೆರಿಗೆಯನ್ನು ಏರಿಕೆ ಮಾಡಿರುವುದು ಹೂಡಿಕೆದಾರರಿಗೆ ನುಂಗಲಾರದ ತುತ್ತಾಗಿದೆ. ಅಲ್ಪಾವಧಿ ಹೂಡಿಕೆ ಮೇಲಿನ ತೆರಿಗೆಯನ್ನು ಶೇ.15ರಿಂದ 20ಕ್ಕೆ ಏರಿಕೆ ಮಾಡಲಾಗಿದೆ. ಇನ್ನು, ದೀರ್ಘಾವಧಿ ಹೂಡಿಕೆ ಮೇಲಿನ ತೆರಿಗೆಯನ್ನು ಶೇ.10ರಿಂದ 12ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ಷೇರುಪೇಟೆಯಲ್ಲಿ ಕುಸಿತವಾಗಿದೆ.

ಇದನ್ನೂ ಓದಿ: Union Budget 2024: ಬಜೆಟ್‌ ಮಂಡನೆಗೂ ಮುನ್ನ ನಿರ್ಮಲಾ ಸೀತಾರಾಮನ್‌ಗೆ ಮೊಸರು ಸಕ್ಕರೆ ತಿನ್ನಿಸಿದ ರಾಷ್ಟ್ರಪತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Mudra loan: ಕೇಂದ್ರ ಬಜೆಟ್‌ನಲ್ಲಿ ಮುದ್ರಾ ಸಾಲ ಮಿತಿ ಹೆಚ್ಚಳ; ಷರತ್ತುಗಳೇನು? ಯಾರಿಗೆ ಪ್ರಯೋಜನ?

ಮುದ್ರಾ ಸಾಲದ (Mudra loan) ಮಿತಿಗಳನ್ನು ಹೆಚ್ಚಿಸಿರುವುದರಿಂದ ಅನೇಕರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ. ಮುಖ್ಯವಾಗಿ ಸಣ್ಣ ಉದ್ಯಮಿಗಳು ಮತ್ತು ಉದ್ಯಮಿಗಳು ಇದರ ಲಾಭ ಪಡೆಯಲಿದ್ದಾರೆ. ಹೆಚ್ಚಿನ ಸಾಲದ ಮಿತಿಯೊಂದಿಗೆ ಇದಕ್ಕೆ ಕೆಲವು ಷರತ್ತುಗಳನ್ನು ಸಹ ಪರಿಚಯಿಸಲಾಗಿದೆ. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

VISTARANEWS.COM


on

By

Mudra loan
Koo

ಕೇಂದ್ರ ಬಜೆಟ್‌ನಲ್ಲಿ (Union Budget 2024) ಈ ಬಾರಿ ಹಲವಾರು ವಿಷಯಗಳ ಬಗ್ಗೆ ಕಾಳಜಿ ವಹಿಸಲಾಗಿದೆ. ಮೋದಿ ಸರ್ಕಾರದ (Modi government) ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಸಂಸತ್ತಿನಲ್ಲಿ ಮಂಡಿಸಿ ಹಲವು ಜನಪರ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಈ ವೇಳೆ ಅವರು ಮುದ್ರಾ ಸಾಲದ (Mudra loan) ಕುರಿತು ಮಾತನಾಡಿದ್ದು, ಅದರ ಮಿತಿಗಳನ್ನು ಹೆಚ್ಚಿಸಿರುವುದಾಗಿ ತಿಳಿಸಿದ್ದಾರೆ.

ಮುದ್ರಾ ಸಾಲದ ಮಿತಿಗಳನ್ನು ಹೆಚ್ಚಿಸಿರುವುದರಿಂದ ಅನೇಕರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ. ಮುಖ್ಯವಾಗಿ ಸಣ್ಣ ಉದ್ಯಮಿಗಳು ಮತ್ತು ಉದ್ಯಮಿಗಳು ಇದರ ಲಾಭ ಪಡೆಯಲಿದ್ದಾರೆ. ಹೆಚ್ಚಿನ ಸಾಲದ ಮಿತಿಯೊಂದಿಗೆ ಇದಕ್ಕೆ ಕೆಲವು ಷರತ್ತುಗಳನ್ನು ಸಹ ಪರಿಚಯಿಸಲಾಗಿದೆ. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.
ಮುದ್ರಾ ಸಾಲದ ಮಿತಿಯನ್ನು 10 ಲಕ್ಷದಿಂದ 20 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದು ಉದ್ಯಮಿಯಾಗಲು ಬಯಸುವವರಿಗೆ ವರದಾನವಾಗಿದೆ.

ಷರತ್ತುಗಳು ಏನು?

ಹೆಚ್ಚಿದ ಸಾಲದ ಮಿತಿಗೆ ಅರ್ಹತೆ ಪಡೆಯಲು ಸಾಲಗಾರರು ಈ ಹಿಂದೆ ಮುದ್ರಾ ಸಾಲವನ್ನು ತೆಗೆದುಕೊಂಡು ಪೂರ್ಣವಾಗಿ ಮರುಪಾವತಿಸಿರಬೇಕು. ಹಾಗಿದ್ದರೆ ಮಾತ್ರ ಹೊಸ ಪ್ರಯೋಜನಗಳನ್ನು ಪಡೆಯಬಹುದು.

ಮುದ್ರಾ ಸಾಲ ವಿಭಾಗಗಳು

ಮುದ್ರಾ ಸಾಲಗಳನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ʼಶಿಶುʼ ವಿಭಾಗದಲ್ಲಿ 50,000 ರೂ.ವರೆಗೆ ಸಾಲ, ʼಕಿಶೋರʼ ವಿಭಾಗದಲ್ಲಿ 50,000 ರೂ.ನಿಂದ 5 ಲಕ್ಷ ರೂ. ವರೆಗೆ ಸಾಲ, ʼತರುಣ್ʼ ವಿಭಾಗದಲ್ಲಿ 5 ಲಕ್ಷದಿಂದ 10 ಲಕ್ಷ ರೂ.ವರೆಗಿನ ಸಾಲಗಳು.

ಪರಿಣಾಮ ಮತ್ತು ವ್ಯಾಪ್ತಿ ಏನು?

ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ 47 ಕೋಟಿಗೂ ಹೆಚ್ಚು ಸಣ್ಣ ಮತ್ತು ದೊಡ್ಡ ಉದ್ಯಮಗಳಿಗೆ 27.75 ಲಕ್ಷ ಕೋಟಿ ರೂ.ಗಳ ಸಾಲವನ್ನು ವಿತರಿಸಲಾಗಿದೆ. ಗಮನಾರ್ಹ ಸಂಗತಿ ಎಂದರೆ ಮಂಜೂರಾದ ಒಟ್ಟು 44.46 ಕೋಟಿ ಸಾಲದಲ್ಲಿ ಶೇ.69ರಷ್ಟು ಮಹಿಳಾ ಉದ್ಯಮಿಗಳಿಗೆ ನೀಡಲಾಗಿದೆ.

Mudra loan
Mudra loan


ಹಿಂದುಳಿದ ವರ್ಗದವರಿಗೆ ಬೆಂಬಲ

2015ರ ಏಪ್ರಿಲ್ 8ರಂದು ಪ್ರಾರಂಭವಾದ ಮುದ್ರಾ ಯೋಜನೆಯು 2016ರಲ್ಲಿ ಪ್ರಾರಂಭವಾದ ಎಸ್‌ಯುಪಿಐ ಯೋಜನೆಯೊಂದಿಗೆ ವಿಶೇಷವಾಗಿ ಮಹಿಳೆಯರು ಮತ್ತು ಎಸ್ ಸಿ/ ಎಸ್‌ಟಿ ಸಮುದಾಯಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಗಳು ಹೊಸ ಉದ್ಯಮಗಳ ಸ್ಥಾಪನೆಯನ್ನು ಬೆಂಬಲಿಸುತ್ತವೆ ಮತ್ತು ಮಹಿಳೆಯರ ಆರ್ಥಿಕ ಉನ್ನತಿಗೆ ಪ್ರೋತ್ಸಾಹ ನೀಡುತ್ತದೆ.

ಇದನ್ನೂ ಓದಿ: Union Budget 2024: ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ ₹7,559 ಕೋಟಿ ಅನುದಾನ; ಕಳೆದ ವರ್ಷಕ್ಕಿಂತ ಕಡಿಮೆ

ಉದ್ಯಮಶೀಲತೆಗೆ ಉತ್ತೇಜನ

ʼಮುದ್ರಾʼ ಯೋಜನೆ ಮತ್ತು ಎಸ್‌ಯುಪಿಐ ಯೋಜನೆಗಳು ಅಗತ್ಯ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ. ವ್ಯಾಪಾರ ಅವಕಾಶಗಳನ್ನು ಮುಂದುವರಿಸಲು ಅನನುಕೂಲಕರ ಪರಿಸ್ಥಿತಿ ಎದುರಿಸುತ್ತಿರುವವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಬ್ಯಾಂಕ್‌ಗಳ ಸ್ಥಳೀಯ ಶಾಖೆಗೆ ಹೋಗಿ ಮುದ್ರಾ ಸಾಲ ಯೋಜನೆಯ ಮಾಹಿತಿ ಪಡೆಯಬಹುದು.

Continue Reading

ಬಜೆಟ್ 2024

Union Budget 2024: ಹಳೇ ತೆರಿಗೆ Vs ಹೊಸ ತೆರಿಗೆ; ಯಾರಿಗೆ ಯಾವುದು ಅನುಕೂಲ? ಇಲ್ಲಿದೆ ಕಂಪ್ಲೀಟ್ ಮಾಹಿತಿ

Union Budget 2024: ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಂಡವರ ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತದ ಏರಿಕೆ, ಸ್ಲ್ಯಾಬ್‌ಗಳ ಸ್ಟ್ರಕ್ಚರ್‌ ಬದಲಿಸಿದ ಕಾರಣ ಬಹುತೇಕ ಜನ ಹೊಸ ತೆರಿಗೆ ಪದ್ಧತಿಯೇ ಹೆಚ್ಚು ಅನುಕೂಲ ಎಂಬುದಾಗಿ ಭಾವಿಸಿದ್ದಾರೆ. ಆದರೆ, ಹೆಚ್ಚು ಸಂಬಳ ಇರುವವರಿಗೆ ಹಳೆಯ ತೆರಿಗೆ ಪದ್ಧತಿಯೇ ಹೆಚ್ಚು ಲಾಭದಾಯಕವಾಗಿದೆ. ಯಾರಿಗೆ ಯಾವ ತೆರಿಗೆ ಪದ್ಧತಿ ಹೆಚ್ಚು ಅನುಕೂಲ ಎಂಬುದರ ಮಾಹಿತಿ ಹೀಗಿದೆ…

VISTARANEWS.COM


on

Union Budget 2024
Koo

ನವದೆಹಲಿ: ಉದ್ಯೋಗಿಗಳಿಗೆ, ತೆರಿಗೆ ಪಾವತಿದಾರರಿಗೆ ಅನುಕೂಲವಾಗುವ ದಿಸೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಬಜೆಟ್‌ನಲ್ಲಿ (Union Budget 2024) ಹಲವು ಕ್ರಮಗಳನ್ನು ಘೋಷಣೆ ಮಾಡಿದ್ದಾರೆ.‌ ಅದರಲ್ಲೂ, ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತದ ಏರಿಕೆ, ಹೊಸ ತೆರಿಗೆ ಪದ್ಧತಿಯ ಸ್ಲ್ಯಾಬ್‌ಗಳ ಬದಲಾವಣೆ ಮಾಡಿದ ಕಾರಣ ಹೊಸ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಒಳಿತು ಎಂದು ಹೇಳಲಾಗುತ್ತಿದೆ. ಹಾಗಂತ, ಹಳೆಯ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಳ್ಳುವವರಿಗೆ ನಷ್ಟ ಎಂದಲ್ಲ. ಹೆಚ್ಚಿನ ಸಂಬಳ ಪಡೆಯುವವರಿಗೆ ಹಳೆಯ ತೆರಿಗೆ ಪದ್ಧತಿಯು ತೆರಿಗೆ ಉಳಿಸುತ್ತದೆ. ಹಾಗಾದರೆ, ಎಷ್ಟು ಸಂಬಳ ಇರುವವರು ಯಾವ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ? ಇಲ್ಲಿದೆ ಮಾಹಿತಿ.

ಹೊಸ ತೆರಿಗೆ ಪದ್ಧತಿ ಯಾರಿಗೆ ಅನುಕೂಲ?

ಸ್ಟಾಂಡರ್ಡ್‌ ಡಿಡಕ್ಷನ್‌ ಎಂಬುದು ತೆರಿಗೆ ವಿನಾಯಿತಿ ಆಗಿದ್ದು, ಇದಕ್ಕಾಗಿ ನೌಕರರು ಹೂಡಿಕೆ ಮಾಡಬೇಕಿಲ್ಲ. ತೆರಿಗೆ ಪಾವತಿಸಲು ಅರ್ಹವಿರುವವರು ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತದ ಅಡಿಯಲ್ಲಿ ವಿನಾಯಿತಿ ಪಡೆಯಲಿದ್ದಾರೆ. ಈ ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು ಕೇಂದ್ರ ಸರ್ಕಾರವೀಗ ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಏರಿಕೆ ಮಾಡಿರುವುದರಿಂದ, ಹೊಸ ತೆರಿಗೆಯ ಸ್ಲ್ಯಾಬ್‌ಗಳ ಸ್ಟ್ರಕ್ಚರ್‌ ಬದಲಾವಣೆ ಮಾಡಿರುವುದರಿಂದ 6-7 ಲಕ್ಷ ರೂ. ಆದಾಯ ಗಳಿಸುವವರು ಶೇ.10ರಷ್ಟು ಬದಲು ಶೇ.5ರಷ್ಟು ತೆರಿಗೆ ಪಾವತಿಸುತ್ತಾರೆ. ಇನ್ನು, 9-10 ಲಕ್ಷ ರೂ. ಆದಾಯ ಗಳಿಸುವವರು ಶೇ.15ರ ಬದಲು ಶೇ.10ರಷ್ಟು ತೆರಿಗೆ ಪಾವತಿಸಲಿದ್ದಾರೆ.

Viral Video
ITR Filing

ವರ್ಷಕ್ಕೆ ಸುಮಾರು 7.75 ಲಕ್ಷ ರೂ.ವರೆಗೆ ಸಂಬಳ ಪಡೆಯುವವರು ಇನ್ನು ಮುಂದೆ ಯಾವುದೇ ತೆರಿಗೆ ಪಾವತಿ ಮಾಡಬೇಕಿಲ್ಲ. ಅವರು ಶೂನ್ಯ ತೆರಿಗೆ ವ್ಯಾಪ್ತಿಯಲ್ಲೇ ಬರಲಿದ್ದಾರೆ. ಹಾಗಾಗಿ, ಮಧ್ಯಮ ವರ್ಗದವರಿಗೆ ಹೊಸ ತೆರಿಗೆ ಪದ್ಧತಿಯು ಹೆಚ್ಚು ಅನುಕೂಲಕರವಾಗಿದೆ.

ಹಳೆಯ ತೆರಿಗೆ ಪದ್ಧತಿಯಿಂದ ಯಾರಿಗೆ ಲಾಭ?

8 ಲಕ್ಷ ರೂಪಾಯಿಗಿಂತ ಹೆಚ್ಚು ವಾರ್ಷಿಕ ಸಂಬಳ ಪಡೆಯುವವರಿಗೆ ಹಳೆಯ ತೆರಿಗೆ ಪದ್ಧತಿಯು ಹೆಚ್ಚು ಲಾಭದಾಯಕವಾಗಲಿದೆ. ಸುಮಾರು 11 ಲಕ್ಷ ರೂ. ವಾರ್ಷಿಕ ಆದಾಯ ಪಡೆಯುವವರು, ಹಳೆಯ ತೆರಿಗೆ ಪದ್ಧತಿ ಅನ್ವಯ ಸ್ಟಾಂಡರ್ಡ್‌ ಡಿಡಕ್ಷನ್‌, 2 ಲಕ್ಷ ರೂ.ವರೆಗಿನ ಗೃಹ ಸಾಲ, ಮನೆ ಬಾಡಿಗೆ (HRA) ಮೊತ್ತವನ್ನು ಡಿಡಕ್ಷನ್‌ ಮಾಡಿಕೊಂಡರೆ, ಹಳೆಯ ತೆರಿಗೆ ಪದ್ಧತಿಯು ಹೆಚ್ಚು ಅನುಕೂಲವಾಗಲಿದೆ.

ITR Filing
ITR Filing

ಇನ್ನು, ಗಂಡ-ಹೆಂಡತಿ ಇಬ್ಬರೂ 11 ಲಕ್ಷ ರೂ. ಆದಾಯ ಹೊಂದಿದ್ದರಂತೂ, ಹೆಚ್ಚಿನ ಲಾಭ ಪಡೆಯಲಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ. ಅಷ್ಟೇ ಅಲ್ಲ, 11 ಲಕ್ಷ ರೂ.ನಿಂದ 60 ಲಕ್ಷ ರೂ.ವರೆಗೆ ಸಂಬಳ ಪಡೆಯುವವರು ಕೂಡ ಹಳೆಯ ತೆರಿಗೆ ಪದ್ಧತಿ ಅನ್ವಯ ಹೆಚ್ಚು ಹಣವನ್ನು ಉಳಿಸಬಹುದಾಗಿದೆ ಎಂಬುದಾಗಿ ಹಣಕಾಸು ತಜ್ಞರು ತಿಳಿಸಿದ್ದಾರೆ.

ಹಳೇ ತೆರಿಗೆ ಪದ್ಧತಿ ರದ್ದಾಗುತ್ತದೆಯೇ?

ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಳ್ಳುವವರಿಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವ ಕಾರಣ ಹಳೆಯ ತೆರಿಗೆ ಪದ್ಧತಿಯನ್ನು ಒಂದು ವರ್ಷದಲ್ಲಿ ರದ್ದುಗೊಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅಲ್ಲಗಳೆದಿದ್ದಾರೆ.

“ಹಳೆಯ ತೆರಿಗೆ ಪದ್ಧತಿಯನ್ನು ರದ್ದುಗೊಳಿಸುವ ಕುರಿತು ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಏಕಾಏಕಿ ಹಳೆಯ ತೆರಿಗೆ ಪದ್ಧತಿಯನ್ನು ತೆಗೆದುಹಾಕಲು ಕೂಡ ಆಗುವುದಿಲ್ಲ. ಹಳೆಯ ತೆರಿಗೆ ಪದ್ಧತಿಯನ್ನು ಇನ್ನಷ್ಟು ಸುಲಭಗೊಳಿಸುವ ದಿಸೆಯಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸಲಾಗಿದೆ. ಆದರೆ, ಹಳೆಯ ತೆರಿಗೆ ಪದ್ಧತಿಯನ್ನು ತೆಗೆದುಹಾಕುವ ನಿರ್ಧಾರ ತೆಗೆದುಕೊಂಡಿಲ್ಲ” ಎಂದು ಬಜೆಟ್‌ ಮಂಡನೆ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದನ್ನೂ ಓದಿ: NPS Vatsalya Scheme: ಏನಿದು ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಎನ್‌ಪಿಎಸ್ ವಾತ್ಸಲ್ಯ ಯೋಜನೆ? ನಮ್ಮ ಮಕ್ಕಳಿಗೆ ಇದರಿಂದೇನು ಪ್ರಯೋಜನ?

Continue Reading

ಮನಿ-ಗೈಡ್

NPS Vatsalya Scheme: ಏನಿದು ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಎನ್‌ಪಿಎಸ್ ವಾತ್ಸಲ್ಯ ಯೋಜನೆ? ನಮ್ಮ ಮಕ್ಕಳಿಗೆ ಇದರಿಂದೇನು ಪ್ರಯೋಜನ?

ಇನ್ನು ಮುಂದೆ ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಗುವಿನ ಹೆಸರಿನಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯ (NPS Vatsalya Scheme) ಖಾತೆಯನ್ನು ತೆರೆಯಬಹುದು ಎಂದು ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಎನ್‌ಪಿಎಸ್ ವಾತ್ಸಲ್ಯ ಯೋಜನೆ ಎಂದರೆ ಏನು, ಇದಕ್ಕೆ ಯಾರು ಅರ್ಹರು, ಯಾರು ಅರ್ಜಿ ಸಲ್ಲಿಸಬಹುದು ಮತ್ತು ಮೆಚ್ಯೂರಿಟಿಯನ್ನು ಪಡೆದ ಅನಂತರ ಖಾತೆ ಏನಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

NPS Vatsalya Yojana
Koo

ಮಕ್ಕಳಿಗಾಗಿ ರಾಷ್ಟ್ರೀಯ ಪಿಂಚಣಿ ವಾತ್ಸಲ್ಯ ಯೋಜನೆಯನ್ನು (NPS Vatsalya scheme) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (finance minister Nirmala Sitharaman) ಅವರು 2024ರ ಕೇಂದ್ರ ಬಜೆಟ್‌ನಲ್ಲಿ (Union Budget 2024) ಘೋಷಿಸಿದ್ದಾರೆ. ರಾಷ್ಟ್ರೀಯ ಪಿಂಚಣಿ ಯೋಜನೆಯು (National Pension Scheme) ನಿವೃತ್ತಿ ಯೋಜನೆಯಾಗಿದ್ದು, ಇದರಲ್ಲಿ 18ನೇ ವಯಸ್ಸಿನಿಂದಲೇ ಹೂಡಿಕೆಯನ್ನು ಪ್ರಾರಂಭಿಸಿ 70ನೇ ವಯಸ್ಸಿನವರೆಗೆ ಹೂಡಿಕೆಯನ್ನು ಮಾಡಬಹುದು.

ಇದೀಗ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ರಾಷ್ಟ್ರೀಯ ಪಿಂಚಣಿ ಯೋಜನೆ ವಾತ್ಸಲ್ಯವನ್ನು ಘೋಷಿಸಲಾಗಿದೆ. ಎನ್‌ಪಿಎಸ್-ವಾತ್ಸಲ್ಯ ಯೋಜನೆಯನ್ನು ಅಪ್ರಾಪ್ತ ವಯಸ್ಕ ಮಕ್ಕಳಿಗೆ ಪೋಷಕರು ಮಾಡಬಹುದಾದ ಉಳಿತಾಯ ಯೋಜನೆಯಾಗಿದೆ. ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಮ್ಯಾಕ್ಸ್ ಲೈಫ್ ಪಿಂಚಣಿ ನಿಧಿ ನಿರ್ವಹಣೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಣಭೀರ್ ಸಿಂಗ್ ಧರಿವಾಲ್, ನಿವೃತ್ತಿ ಉಳಿತಾಯ ಮತ್ತು ದೀರ್ಘಾವಧಿಯ ಆರ್ಥಿಕ ಭದ್ರತೆಯನ್ನು ಉತ್ತೇಜಿಸುವಲ್ಲಿ ಕೇಂದ್ರ ಬಜೆಟ್‌ನ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ವಾತ್ಸಲ್ಯವು ಶ್ಲಾಘನೀಯ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಗುವಿನ ಎನ್‌ಪಿಎಸ್ ಖಾತೆಯನ್ನು ಪ್ರಾರಂಭಿಸಲು ಅವಕಾಶ ನೀಡುವ ಮೂಲಕ ಚಿಕ್ಕ ವಯಸ್ಸಿನಿಂದಲೇ ಜವಾಬ್ದಾರಿಯುತ ಹಣಕಾಸು ನಿರ್ವಹಣೆಗೆ ಅಡಿಪಾಯವನ್ನು ಹೊಂದಿಸಿದಂತಾಗುತ್ತದೆ. ಪ್ರೌಢಾವಸ್ಥೆಯಲ್ಲಿ ಈ ಖಾತೆಗಳು ನಿಯಮಿತ ಎನ್ ಪಿ ಎಸ್ ಯೋಜನೆಗಳಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಮಕ್ಕಳ ಪ್ರೌಢಾವಸ್ಥೆಯಲ್ಲಿ ಉಳಿತಾಯ ಅಭ್ಯಾಸಗಳ ಸುಗಮವಾಗಿ ಮುಂದುವರಿಯುತ್ತದೆ.

ಎನ್‌ಪಿಎಸ್ ವಾತ್ಸಲ್ಯ ಯೋಜನೆಗೆ ಯಾರು ಅರ್ಹರು, ಯಾರು ಅರ್ಜಿ ಸಲ್ಲಿಸಬಹುದು ಮತ್ತು ಮೆಚ್ಯೂರಿಟಿಯನ್ನು ಪಡೆದ ಅನಂತರ ಖಾತೆಗೆ ಏನಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

NPS Vatsalya Yojana
NPS Vatsalya Yojana


ಎನ್ ಪಿ ಎಸ್ ಎಂದರೇನು?

ಎನ್‌ಪಿಎಸ್ ನಿವೃತ್ತಿ ಯೋಜನೆಯಾಗಿದ್ದು, ಆರ್ಥಿಕ ವರ್ಷದಲ್ಲಿ ಒಮ್ಮೆಯಾದರೂ ನಿರ್ದಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡಬಹುದು.

ಎನ್ ಪಿ ಎಸ್ ಅನ್ನು ಮಾರುಕಟ್ಟೆಗೆ ಲಿಂಕ್ ಮಾಡಲಾಗಿದ್ದು, ಇದರಲ್ಲಿ ನಿಧಿ ಯೋಜನೆ ಮತ್ತು ಈಕ್ವಿಟಿ ಮಾನ್ಯತೆಯ ಶೇಕಡಾವಾರು ಪ್ರಮಾಣವನ್ನು ಆಯ್ಕೆ ಮಾಡಬಹುದು.

ನಿಧಿಯಲ್ಲಿ ಹೂಡಿಕೆಯಾಗಿರುವ ಮೊತ್ತದ ಕಾರ್ಯಕ್ಷಮತೆಯ ಆಧಾರದ ಮೇಲೆ ಎನ್ ಪಿ ಎಸ್ ಖಾತೆದಾರರು ನಿವೃತ್ತಿಯ ಸಮಯದಲ್ಲಿ ಒಂದು ದೊಡ್ಡ ಮೊತ್ತವನ್ನು ಪಡೆಯುತ್ತಾರೆ ಮತ್ತು ಮಾಸಿಕ ಪಿಂಚಣಿಗಾಗಿ ವರ್ಷಾಶನವನ್ನು ಖರೀದಿಸುವ ಆಯ್ಕೆ ಇದರಲ್ಲಿದೆ.

60 ವರ್ಷಗಳ ನಿವೃತ್ತಿ ವಯಸ್ಸಿನಲ್ಲಿ ನಿವೃತ್ತಿ ಮೊತ್ತದ ಗರಿಷ್ಠ ಶೇ. 60ರಷ್ಟನ್ನು ಹಿಂತೆಗೆದುಕೊಳ್ಳುವ ಇನ್ನೊಂದು ಆಯ್ಕೆ ಇದರಲ್ಲಿದೆ. ಇದರಲ್ಲಿ ಉಳಿದ ಶೇ. 40ರಷ್ಟನ್ನು ವರ್ಷಾಶನವಾಗಿ ಖರೀದಿ ಮಾಡಬಹುದು. ಈ ರೀತಿಯ ನಿವೃತ್ತಿ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.

ಎನ್‌ಪಿಎಸ್ ವಾತ್ಸಲ್ಯ ಯೋಜನೆ ಎನ್‌ಪಿಎಸ್‌ಗಿಂತ ಏಕೆ ಭಿನ್ನ?

ಎನ್ ಪಿ ಎಸ್‌ನಲ್ಲಿ 18 ವರ್ಷ ವಯಸ್ಸಿನಲ್ಲೇ ಖಾತೆಯನ್ನು ತೆರೆಯಬಹುದು. ಎನ್ ಪಿ ಎಸ್ ವಾತ್ಸಲ್ಯದಲ್ಲಿ ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಖಾತೆಯನ್ನು ತೆರೆಯಬಹುದು. ಇದರಲ್ಲಿ ಅಪ್ರಾಪ್ತರ ಕನಿಷ್ಠ ವಯಸ್ಸನ್ನು ಹಣಕಾಸು ಸಚಿವರು ತಿಳಿಸಿಲ್ಲ.

NPS Vatsalya Yojana
NPS Vatsalya Yojana


ಮುಕ್ತಾಯದ ಅನಂತರ ಖಾತೆ ಏನಾಗುತ್ತದೆ?

ಅಪ್ರಾಪ್ತ ವಯಸ್ಸಿನವರು ಪ್ರಾಪ್ತ ವಯಸ್ಸಿಗೆ ಬಂದಾಗ ಅವರ ಖಾತೆ ಎನ್‌ಪಿಎಸ್ ವಾತ್ಸಲ್ಯ ಯೋಜನೆಯಿಂದ ಸಾಮಾನ್ಯ ಎನ್‌ಪಿಎಸ್ ಖಾತೆಯಾಗಿ ಪರಿವರ್ತಿಸಬಹುದು ಎಂದಿದ್ದಾರೆ ಹಣಕಾಸು ಸಚಿವರು.

ಇದನ್ನೂ ಓದಿ: Ayushamn Card: 5 ಲಕ್ಷದವರೆಗೆ ಉಚಿತ ಚಿಕಿತ್ಸೆ; ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ?

ಎನ್ ಪಿ ಎಸ್ ಪ್ರಯೋಜನವೇನು?

ಎನ್‌ಪಿಎಸ್ ಯೋಜನೆಯಡಿ ಖಾತೆದಾರರು ನಿರ್ದಿಷ್ಟ ಮೊತ್ತದ ಬಡ್ಡಿಯನ್ನು ಪಡೆಯುತ್ತಾರೆ. ಪೂರ್ಣ ಎನ್ ಪಿ ಎಸ್ ಖಾತೆಯಾಗಿ ಪರಿವರ್ತನೆಯಾದ ಬಳಿಕ ಖಾತೆದಾರನು 60ರ ನಿವೃತ್ತಿ ವಯಸ್ಸನ್ನು ತಲುಪಿದ ಮೇಲೆ ಖಾತೆಯಲ್ಲಿರುವ ಸಂಗ್ರಹ ಮೊತ್ತದೊಂದಿಗೆ ಬಡ್ಡಿ ಸೇರಿ ಗಣನೀಯ ಮೊತ್ತವನ್ನು ಪಡೆಯಬಹುದು.

Continue Reading

ದೇಶ

Union Budget 2024: “ಮಿತ್ರಪಕ್ಷಗಳ ಓಲೈಕೆಗಾಗಿ ಬಜೆಟ್‌”- ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ಕಿಡಿ, ಭಾರೀ ಪ್ರತಿಭಟನೆ

Union Budget 2024:ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge), ಸೋನಿಯಾ ಗಾಂಧಿ(Sonia Gandhi) ಮತ್ತು ರಾಹುಲ್‌ ಗಾಂಧಿ(Rahul Gandhi), ಕಾಂಗ್ರೆಸ್‌, ಟಿಎಂಸಿ, ಸಮಾಜವಾದಿ ಪಕ್ಷ, ಡಿಎಂಕೆ ಮತ್ತು ಎಡಪಕ್ಷಗಳ ನಾಯಕರು ಸಂಸತ್‌ನ ಮಕರ ದ್ವಾರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

VISTARANEWS.COM


on

Union budget 2024
Koo

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಂಗಳವಾರ ಏಳನೇ ಬಾರಿಗೆ ಬಜೆಟ್‌ (Union Budget 2024) ಮಂಡಿಸಿದರು. ಆದರೆ ಈ ಬಜೆಟ್​ ಆಂಧ್ರಪ್ರದೇಶ ಹಾಗೂ ಬಿಹಾರ ಹೊರತುಪಡಿಸಿ ಬೇರೆ ರಾಜ್ಯಗಳಿಗೆ ಬಜೆಟ್‌ನಿಂದ ಯಾವುದೇ ಅನುಕೂಲ ಆಗಿಲ್ಲ ಎಂದು ಆರೋಪಿಸಿರುವ ವಿರೋಧ ಪಕ್ಷದ ಇಂಡಿಯಾ(INDIA) ಒಕ್ಕೂಟ ಇಂದು ಸಂಸತ್ತಿನ ಎದುರು ಪ್ರತಿಭಟನೆ(INDIA Bloc Protest) ನಡೆಸಿವೆ.

ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge), ಸೋನಿಯಾ ಗಾಂಧಿ(Sonia Gandhi) ಮತ್ತು ರಾಹುಲ್‌ ಗಾಂಧಿ(Rahul Gandhi), ಕಾಂಗ್ರೆಸ್‌, ಟಿಎಂಸಿ, ಸಮಾಜವಾದಿ ಪಕ್ಷ, ಡಿಎಂಕೆ ಮತ್ತು ಎಡಪಕ್ಷಗಳ ನಾಯಕರು ಸಂಸತ್‌ನ ಮಕರ ದ್ವಾರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

ಬಜೆಟ್​ ಮುಕ್ತಾಯದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಭಾರತ ಬ್ಲಾಕ್ ಪಕ್ಷಗಳ ಉನ್ನತ ನಾಯಕರು ಸಭೆ ನಡೆಸಿ ನಾಳೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಸಂಸದರಾದ ರಾಹುಲ್ ಗಾಂಧಿ ಮತ್ತು ಕೆಸಿ ವೇಣುಗೋಪಾಲ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಶಿವಸೇನೆ (ಯುಬಿಟಿ) ಸಂಸದರಾದ ಸಂಜಯ್ ರಾವುತ್ ಮತ್ತು ಅರವಿಂದ್ ಸಾವಂತ್, ಡಿಎಂಕೆ ಸಂಸದರಾದ ಟಿಆರ್ ಬಾಲು ಮತ್ತು ತಿರುಚಿ ಶಿವ, ಜಾರ್ಖಂಡ್ ಮುಕ್ತಿ ಮುಂತಾದ ನಾಯಕರು ಭಾಗವಹಿಸಿದ್ದರು. ಮೋರ್ಚಾ ಸಂಸದ ಮಹುವಾ ಮಜಿ, ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ, ಆಮ್ ಆದ್ಮಿ ಪಕ್ಷದ ಸಂಸದರಾದ ಸಂಜಯ್ ಸಿಂಗ್ ಮತ್ತು ರಾಘವ್ ಚಡ್ಡಾ ಮತ್ತಿತರರು ಭಾಗಿಯಾಗಿದ್ದರು.

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಸಿ.ವೇಣುಗೋಪಾಲ್, ಈ ಬಾರಿಯ ಕೇಂದ್ರ ಬಜೆಟ್‌ನಿಂದ ಈಗಾಗಲೇ ಬಜೆಟ್ ಪರಿಕಲ್ಪನೆಯನ್ನು ನಾಶಪಡಿಸಿದೆ. ಅವರು ಬಹುತೇಕ ರಾಜ್ಯಗಳನ್ನು ಸಂಪೂರ್ಣವಾಗಿ ತಾರತಮ್ಯ ಮಾಡಿದ್ದಾರೆ, ಆದ್ದರಿಂದ ನಾವು ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Union Budget 2024: ಬಜೆಟ್‌ನಲ್ಲಿ ಬಿಹಾರ, ಆಂಧ್ರಪ್ರದೇಶಕ್ಕೆ ಬಂಪರ್‌ ಕೊಡುಗೆ: ಇಲ್ಲಿದೆ ನಗೆಯುಕ್ಕಿಸುವ ಮೀಮ್ಸ್‌

Continue Reading
Advertisement
IPL 2025
ಕ್ರೀಡೆ7 mins ago

IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರಮುಖ ಬೇಡಿಕೆ ಮುಂದಿಟ್ಟ ಫ್ರಾಂಚೈಸಿಗಳು

karnataka weather Forecast
ಮಳೆ16 mins ago

Karnataka Weather : ಭಾರಿ ಮಳೆ ಎಚ್ಚರಿಕೆ; ನಾಳೆ ಹಾಸನದ ಈ ಶಾಲೆಗಳಿಗೆ ರಜೆ ಘೋಷಣೆ

NEET UG 2024
ದೇಶ20 mins ago

NEET UG 2024: ನೀಟ್‌ ಪರಿಷ್ಕೃತ ಫಲಿತಾಂಶ ಪ್ರಕಟ ಆಗಿಲ್ಲ, ಹಳೇ ಲಿಂಕ್‌ ಹಂಚಿಕೆ ಎಂದ ಕೇಂದ್ರ; ಮತ್ತೊಂದು ಪ್ರಮಾದ?

Prime Minister 15 Point Programme District Level Meeting at Yadgiri
ಯಾದಗಿರಿ21 mins ago

Yadgiri News: ಜಿಲ್ಲಾ ಮಟ್ಟದಲ್ಲಿ ಪ್ರಗತಿಗೆ ಪ್ರಧಾನಿಯ 15 ಅಂಶಗಳ ಕಾರ್ಯಕ್ರಮ

Sara Ali Khan
Latest32 mins ago

Sara Ali Khan: ವಿಮಾನದಲ್ಲಿ ಸಾರಾ ಅಲಿ ಖಾನ್‌ ಮೇಲೆ ಜ್ಯೂಸ್‌ ಚೆಲ್ಲಿದ ಗಗನಸಖಿ! ಮುಂದೇನಾಯ್ತು? ವಿಡಿಯೊ ನೋಡಿ

Parliament Session
ದೇಶ36 mins ago

Parliament Session: ʼತಾಕತ್ತಿದ್ದರೆ ಬಾʼ- ಸಂಸತ್‌ನಲ್ಲಿ ಸಂಸದರ ಪಂಥಾಹ್ವಾನ; ಭಾರೀ ಕೋಲಾಹಲ

Samsung Galaxy Z Fold6 Z Flip6 Smartphones Good Customer Response
ವಾಣಿಜ್ಯ40 mins ago

Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?

ಕ್ರೀಡೆ43 mins ago

Paris Olympics 2024: 2ನೇ ಸುತ್ತಿನಲ್ಲಿ ಜೊಕೊ-ನಡಾಲ್ ಮುಖಾಮುಖಿ ಸಾಧ್ಯತೆ

Assembly session
ಕರ್ನಾಟಕ47 mins ago

Assembly session: ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ; ನಾಳೆ ಮುಗಿಯಬೇಕಿದ್ದ ಕಲಾಪ ಇಂದೇ ಮೊಟಕು!

Viral Video
Latest1 hour ago

Viral Video: ತಲೆಯಿಂದ ಡಿಚ್ಚಿ ಹೊಡೆದು ಬೋಟ್‌ಅನ್ನೇ ಪಲ್ಟಿ ಮಾಡಿದ ತಿಮಿಂಗಿಲ! ಮೈನವಿರೇಳಿಸುವ ವಿಡಿಯೊ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 hour ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್5 hours ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ5 hours ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ7 hours ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ1 day ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ2 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ2 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ2 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ5 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌