Union Budget 2024: ಇನ್ನೊಂದು ವರ್ಷದಲ್ಲಿ ಹಳೇ ತೆರಿಗೆ ಪದ್ಧತಿ ರದ್ದು? ಕೇಂದ್ರ ವಿತ್ತ ಸಚಿವೆ ಹೇಳಿದ್ದಿಷ್ಟು - Vistara News

ಬಜೆಟ್ 2024

Union Budget 2024: ಇನ್ನೊಂದು ವರ್ಷದಲ್ಲಿ ಹಳೇ ತೆರಿಗೆ ಪದ್ಧತಿ ರದ್ದು? ಕೇಂದ್ರ ವಿತ್ತ ಸಚಿವೆ ಹೇಳಿದ್ದಿಷ್ಟು

Union Budget 2024: ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಹೊಸ ತೆರಿಗೆ ಪದ್ಧತಿಯಲ್ಲಿಯೇ ಕೆಲ ಬದಲಾವಣೆ ಮಾಡಿದ್ದಾರೆಯೇ ಹೊರತು, ಹಳೆಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಮಾಡಿಲ್ಲ. ಹಾಗಾಗಿ, ಹಳೆಯ ತೆರಿಗೆ ಪದ್ಧತಿಯನ್ನು ರದ್ದುಗೊಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ರದ್ದತಿ ಕುರಿತು ನಿರ್ಮಲಾ ಸೀತಾರಾಮನ್‌ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.

VISTARANEWS.COM


on

Union Budget 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ (Union Budget 2024) ಯುವಕರು ಹಾಗೂ ರೈತರಿಗೆ ಭರ್ಜರಿ ಘೋಷಣೆ ಮಾಡಿರುವ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ತೆರಿಗೆ ವಿಚಾರದಲ್ಲೂ ಪ್ರಮುಖ ಘೋಷಣೆ ಮಾಡಿದ್ದಾರೆ. ಅದರಲ್ಲೂ, ತೆರಿಗೆದಾರರಿಗೆ ಸ್ಟಾಂಡರ್ಡ್‌ ಡಿಡಕ್ಷನ್‌ 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ, ಹಳೆಯ ತೆರಿಗೆ ಪದ್ಧತಿಯನ್ನು ರದ್ದುಗೊಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಸುದ್ದಿಯನ್ನು ನಿರ್ಮಲಾ ಸೀತಾರಾಮನ್‌ ಅವರು ಅಲ್ಲಗಳೆದಿದ್ದಾರೆ.

“ಹಳೆಯ ತೆರಿಗೆ ಪದ್ಧತಿಯನ್ನು ರದ್ದುಗೊಳಿಸುವ ಕುರಿತು ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಏಕಾಏಕಿ ಹಳೆಯ ತೆರಿಗೆ ಪದ್ಧತಿಯನ್ನು ತೆಗೆದುಹಾಕಲು ಕೂಡ ಆಗುವುದಿಲ್ಲ. ಹಳೆಯ ತೆರಿಗೆ ಪದ್ಧತಿಯನ್ನು ಇನ್ನಷ್ಟು ಸುಲಭಗೊಳಿಸುವ ದಿಸೆಯಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸಲಾಗಿದೆ. ಆದರೆ, ಹಳೆಯ ತೆರಿಗೆ ಪದ್ಧತಿಯನ್ನು ತೆಗೆದುಹಾಕುವ ನಿರ್ಧಾರ ತೆಗೆದುಕೊಂಡಿಲ್ಲ” ಎಂದು ಬಜೆಟ್‌ ಮಂಡನೆ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತೆರಿಗೆ ಉಳಿತಾಯ ಲೆಕ್ಕಾಚಾರ ಹೀಗಿದೆ…

ಹೊಸ ತೆರಿಗೆ ಪದ್ಧತಿಯಲ್ಲಿ ಸ್ಟಾಂಡರ್ಡ್‌ ಡಿಡಕ್ಷನ್‌, ಹೊಸ ಸ್ಲ್ಯಾಬ್‌ಗಳ ಪರಿಚಯದಿಂದ ತೆರಿಗೆದಾರರು 17,500 ರೂ. ತೆರಿಗೆ ಉಳಿತಾಯ ಮಾಡಬಹುದಾಗಿದೆ ಎಂದು ಕೇಂದ್ರ ಸಚಿವೆ ತಿಳಿಸಿದ್ದಾರೆ. ಇನ್ನು, ಎನ್‌ಜಿಒ ಸೇರಿ ಯಾವುದೇ ರೀತಿಯ ದಾನ ಮಾಡುವವರಿಗೆ ಎರಡು ಸ್ಲ್ಯಾಬ್‌ ಬದಲು, ಒಂದು ಸ್ಲ್ಯಾಬ್‌ ಮಾಡಲಾಗಿದೆ. ಟಿಡಿಎಸ್‌ ನಿಯಮಗಳನ್ನೂ ಸುಲಭಗೊಳಿಸಲು ತೀರ್ಮಾನಿಸಲಾಗಿದೆ. ಟಿಡಿಎಸ್‌ ಮರುಪಾವತಿ ವಿಳಂಬವಾಗುವುದನ್ನೂ ತಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಇ-ಕಾಮರ್ಸ್‌ ಮೇಲಿನ ತೆರಿಗೆಯನ್ನೂ ಇಳಿಸಲು ತೀರ್ಮಾನಿಸಲಾಗಿದೆ. ಆದರೆ, ಮ್ಯೂಚುವಲ್‌ ಫಂಡ್‌ ಮೇಲಿನ ಹೂಡಿಕೆಗೆ ತೆರಿಗೆ ವಿನಾಯಿತಿ ಇರುವುದಿಲ್ಲ ಎಂಬುದಾಗಿ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಕಸ್ಟಮ್ಸ್‌ ತೆರಿಗೆ ಇಳಿಸಿದ ಕೇಂದ್ರ

ಜಿಎಸ್‌ಟಿಯು ಬಡವರ ಮೇಲಿನ ತೆರಿಗೆ ಹೊರೆಯನ್ನು ಇಳಿಸಿದೆ. ಜಿಎಸ್‌ಟಿಯನ್ನು ಇನ್ನಷ್ಟು ಸರಳಗೊಳಿಸಲು ಕೇಂದ್ರ ಸರ್ಕಾರ ತಿಳಿಸಿದೆ. ಕಸ್ಟಮ್ಸ್‌ ಸುಂಕವನ್ನು ಇದಕ್ಕೂ ಮೊದಲು ಇಳಿಸಲಾಗಿದೆ. ಇನ್ನಷ್ಟು ಕಸ್ಟಮ್ಸ್‌ ಸುಂಕವನ್ನು ಇಳಿಸಲು ಪ್ರಸ್ತಾಪ ಇದೆ. ಅದರಂತೆ, ಔಷಧ, ಮೆಡಿಕಲ್‌ ಉಪಕರಣಗಳು, ಮೂರು ಕ್ಯಾನ್ಸರ್‌ ಔಷಧಿಗಳನ್ನು ಕಸ್ಟಮ್ಸ್‌ ಸುಂಕದಿಂದ ಮುಕ್ತಗೊಳಿಸಲಾಗಿದೆ. ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಶೇ.15ರಷ್ಟು ಕಸ್ಟಮ್ಸ್‌ ಸುಂಕವನ್ನು ಇಳಿಸಿದೆ. ಆಮದು ಮಾಡಿಕೊಳ್ಳುವ ಮೊಬೈಲ್‌, ಮೊಬೈಲ್ ಭಾಗಗಳ ಮೇಲಿನ ಸುಂಕವನ್ನೂ ಕೇಂದ್ರ ಸರ್ಕಾರ ಇಳಿಸಿದೆ.

ಇದನ್ನೂ ಓದಿ: Union Budget 2024 : ಕೇಂದ್ರ ಬಜೆಟ್​ನಲ್ಲಿ ಕರ್ನಾಟಕಕ್ಕೆ ‘ಚೊಂಬು’ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ದೇಶ

Nirmala Sitharaman: ಕಾಂಗ್ರೆಸ್‌ ಅವಧಿ ಬಜೆಟ್‌ನಲ್ಲಿ 26 ರಾಜ್ಯಗಳ ಹೆಸರೇ ಇರಲಿಲ್ಲ; ನಿರ್ಮಲಾ ಸೀತಾರಾಮನ್‌ ಟಾಂಗ್

Nirmala Sitharaman: ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನುದಾನ ನೀಡಿಲ್ಲ ಎಂಬುದಾಗಿ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಸಂಸತ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಬಜೆಟ್‌ ಭಾಷಣದಲ್ಲಿ ರಾಜ್ಯಗಳ ಹೆಸರು ಇಲ್ಲ ಎಂದ ಮಾತ್ರಕ್ಕೆ ಆ ರಾಜ್ಯಕ್ಕೆ ಅನುದಾನ ಹೋಗುವುದಿಲ್ಲ ಎಂಬ ಅರ್ಥವಲ್ಲ ಎಂದಿದ್ದಾರೆ.

VISTARANEWS.COM


on

Nirmala Sitharaman
Koo

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಕೆಲ ದಿನಗಳ ಹಿಂದೆ ಮಂಡಿಸಿದ ಬಜೆಟ್‌ನಲ್ಲಿ (Union Budget 2024) ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಕೊಟ್ಟಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ನಾಯಕರು ಆರೋಪಿಸುತ್ತಿದ್ದಾರೆ. ಜನರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಕ್ಷಿಣ ಭಾರತದ ಹಲವು ರಾಜ್ಯಗಳು ಟೀಕಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಸಂಸತ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದು, “ಕಾಂಗ್ರೆಸ್‌ ನೇತೃತ್ವದ ಯುಪಿಎ ಅವಧಿಯ ಬಜೆಟ್‌ನಲ್ಲೂ 26 ರಾಜ್ಯಗಳ ಹೆಸರು ಇರಲಿಲ್ಲ. ಹಾಗಂತ, ಆ ರಾಜ್ಯಗಳಿಗೆ ಅನುದಾನ ನೀಡಿಲ್ಲ ಎಂದು ಅರ್ಥವೇ” ಎಂಬುದಾಗಿ ಪ್ರಶ್ನಿಸಿದ್ದಾರೆ.

“ಬಜೆಟ್‌ ಭಾಷಣದಲ್ಲಿ ಕೆಲ ರಾಜ್ಯಗಳ ಹೆಸರು ಇಲ್ಲದ ಕಾರಣ, ಕೇಂದ್ರ ಸರ್ಕಾರವು ಆ ರಾಜ್ಯಗಳಿಗೆ ಅನುದಾನವನ್ನೇ ಕೊಟ್ಟಿಲ್ಲ ಎಂಬ ರೀತಿ ಪ್ರತಿಪಕ್ಷಗಳು ಬಿಂಬಿಸುತ್ತಿಲ್ಲ. ಆದರೆ, ನಾನು 2004-05ರಿಂದಲೂ ಮಂಡಿಸಿದ ಬಜೆಟ್‌ ಪ್ರತಿಗಳನ್ನು ಗಮನಿಸಿದ್ದೇನೆ. 2004-05ರ ಬಜೆಟ್‌ನಲ್ಲಿ ಅಂದರೆ ಯುಪಿಎ ಅವಧಿಯಲ್ಲಿ ಪ್ರಸ್ತುತಪಡಿಸಿದ ಬಜೆಟ್‌ ಭಾಷಣದಲ್ಲಿ 17 ರಾಜ್ಯಗಳ ಹೆಸರು ಇರಲಿಲ್ಲ. 2006-07ರಲ್ಲಿ 16, 2009ರಲ್ಲಿ 26 ರಾಜ್ಯಗಳ ಹೆಸರುಗಳೇ ಇರಲಿಲ್ಲ. ಹಾಗಂತ, ಈ ರಾಜ್ಯಗಳಿಗೆ ಹಣವೇ ನೀಡಲಿಲ್ಲವೇ” ಎಂಬುದಾಗಿ ಬಜೆಟ್‌ ಕುರಿತ ಚರ್ಚೆಯ ವೇಳೆ ನಿರ್ಮಲಾ ಸೀತಾರಾಮನ್‌ ಅವರು ಪ್ರತಿಪಕ್ಷಗಳನ್ನು ಪ್ರಶ್ನಿಸಿದ್ದಾರೆ.

“ಸಂಸತ್‌ನ ಎಲ್ಲ ಸದಸ್ಯರಿಗೂ ನಾನು ಒಂದು ಮನವಿ ಮಾಡುತ್ತೇನೆ. ಬಜೆಟ್‌ ಭಾಷಣದಲ್ಲಿ ಯಾವುದಾದರೂ ರಾಜ್ಯಗಳ ಹೆಸರು ಇಲ್ಲ ಎಂದರೆ, ಆ ರಾಜ್ಯಗಳಿಗೆ ಹಣ ನೀಡುವುದಿಲ್ಲ ಎಂದು ಅರ್ಥವಲ್ಲ. ಸುಳ್ಳು ಹಾಗೂ ಜನರ ದಾರಿ ತಪ್ಪಿಸುವ ರೀತಿ ಅಭಿಯಾನ ಆರಂಭಿಸಲಾಗುತ್ತಿದೆ. ಒಂದು ರಾಜ್ಯದ ಹೆಸರನ್ನು ಬಜೆಟ್‌ ಭಾಷಣದಲ್ಲಿ ಪ್ರಸ್ತಾಪಿಸಿಲ್ಲ ಎಂದ ಮಾತ್ರಕ್ಕೆ, ಆ ರಾಜ್ಯಕ್ಕೆ ಅನುದಾನವನ್ನೇ ನೀಡಿಲ್ಲ ಎಂಬ ರೀತಿ ಹೇಳುತ್ತಿರುವುದು ನೋವು ತಂದಿದೆ” ಎಂಬುದಾಗಿ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನುದಾನ ನೀಡಿಲ್ಲ ಎಂಬುದಾಗಿ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಸ್ಪಷ್ಟನೆ ನೀಡಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಆಯವ್ಯಯದ ಲೆಕ್ಕಾಚಾರದ ಮೂಲಪಾಠವೇ ಗೊತ್ತಿಲ್ಲದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದರು.

ನಿರ್ಮಲಾ ಸೀತಾರಾಮನ್ ಅವರ ಪ್ರಕಾರ ಹಿಂದಿನ ಯುಪಿಎ ಸರ್ಕಾರ (2004-2014) ಹತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಿರುವ ಅನುದಾನ ರೂ.60,779 ಕೋಟಿ. ಎನ್‌ಡಿಎ ಸರ್ಕಾರ (2014-2024) ಹತ್ತು ವರ್ಷಗಳ ಅವಧಿಯಲ್ಲಿ ನೀಡಿದ್ದ ಹಣ ರೂ.2,36,955 ಕೋಟಿ ಎಂದು ಸಚಿವೆ ಹೇಳಿದ್ದಾರೆ. ಆದರೆ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ಎಷ್ಟು ಪಟ್ಟು ಹೆಚ್ಚಾಗಿದೆ ಎನ್ನುವುದನ್ನು ಅವರು ಮರೆತಿದ್ದಾರೆ. ಇದು ಅವರ ಅಜ್ಞಾನವೋ, ಇಲ್ಲವೇ ಜನತೆಯ ದಾರಿ ತಪ್ಪಿಸುವ ಹುನ್ನಾರವೋ? ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು.

ಇದನ್ನೂ ಓದಿ: HD Devegowda: ಮೋದಿ ಬಜೆಟ್‌ಗೆ ಎಚ್‌.ಡಿ.ದೇವೇಗೌಡರ ಮೆಚ್ಚುಗೆ; ಬೆಂಗಳೂರು ನೀರಿನ ಸಮಸ್ಯೆ ಬಗೆಹರಿಸಲು ಮನವಿ

Continue Reading

ಕರ್ನಾಟಕ

Union Budget 2024: ವಾರ್ಷಿಕ 7.5 ಲಕ್ಷ ವೇತನ ಪಡೆಯುವವರಿಗೆ ಯಾವುದೇ ತೆರಿಗೆ ಇಲ್ಲ: ನಿರ್ಮಲಾ ಸೀತಾರಾಮನ್

Union Budget 2024: ಕರ್ನಾಟಕಕ್ಕೆ ಹತ್ತು ವರ್ಷದಲ್ಲಿ ಯುಪಿಎ ಸರ್ಕಾರ 81,791 ಕೋಟಿ ಅನುದಾನ ನೀಡಿದೆ. ಎನ್‌ಡಿಎ ಸರ್ಕಾರ 2,95,818 ಅನುದಾನ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

VISTARANEWS.COM


on

Union Budget 2024
Koo

ಬೆಂಗಳೂರು: ವಾರ್ಷಿಕ 7.5 ಲಕ್ಷ ವೇತನ ಪಡೆಯುವವರಿಗೆ ಯಾವುದೇ ತೆರಿಗೆ ಇಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನದ (Union Budget 2024) ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಮಾಹಿತಿ ಕೊಡುತ್ತಿದೆ. ಕೇಂದ್ರದಿಂದ ಯಾವುದೇ ಬಾಕಿ ಇಲ್ಲ. ಹತ್ತು ವರ್ಷದಲ್ಲಿ ಯುಪಿಎ ಸರ್ಕಾರ 81,791 ಕೋಟಿ ಅನುದಾನ ನೀಡಿದೆ. ಎನ್‌ಡಿಎ ಸರ್ಕಾರ 10 ವರ್ಷಗಳಲ್ಲಿ 2,95,818 ಅನುದಾನ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ 60,679 ಕೋಟಿ ಗ್ರ್ಯಾಂಟ್ ಇನ್ ಏಡ್ ನೀಡಲಾಗಿದ್ದು, ಮೋದಿ ಸರ್ಕಾರದಲ್ಲಿ 2,36,955 ಕೋಟಿ ನೀಡಲಾಗಿದೆ. ಯುಪಿಎ ವಾರ್ಷಿಕ 8,179 ಕೋಟಿಯಾದರೆ, ಮೋದಿ ಸರ್ಕಾರದಲ್ಲಿ ವಾರ್ಷಿಕ 45,485 ಕೋಟಿ ನೀಡಲಾಗಿದೆ.

ಕಲಬುರಗಿಯ ಪಿಎಂ ಮಿತ್ರಾ ಮೆಗಾ ಟೆಕ್ಸ್‌ಟೈಲ್ಸ್ ಪಾರ್ಕ್‌ಗೆ 200 ಕೋಟಿ ಅನುದಾನ ನೀಡಲಾಗಿದೆ. ಕರ್ನಾಟಕದಲ್ಲಿ ರೈಲ್ವೆಗೆ 2009-14ರವರೆಗೂ 835 ಕೋಟಿ ನೀಡಲಾಗಿತ್ತು. 2024-25ನೇ ಸಾಲಿನ ಬಜೆಟ್‌ನಲ್ಲಿ 7,559 ಕೋಟಿ ನೀಡಲಾಗಿದೆ. ರೈಲ್ವೆ ಹಳಿಗಳ ನಿರ್ಮಾಣಕ್ಕೆ, 47,016 ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ. 7 ಒಂದೇ ಭಾರತ್ ರೈಲು ಸಂಚರಿಸುತ್ತಿವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಐಐಟಿ ಧಾರವಾಡ ಸ್ಥಾಪನೆ ಆಗಿದೆ. ತುಮಕೂರಿನಲಿ ಸೌತ್ ಇಂಡಿಯಾ ಕಾರಿಡಾರ್ ನಡೆಯುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಗಾಗಿ 6,428 ಕೋಟಿ ಅನುದಾನ ನೀಡಲಾಗಿದೆ. 7 ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದ್ದು, 1,600 ಕೋಟಿ ವೆಚ್ಚದಲ್ಲಿ ಖಾಸಗಿ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಟೆಕ್ನಾಲಜಿ ಸೆಂಟರ್ ಬೆಂಗಳೂರಿನಲ್ಲಿ ನಿರ್ಮಾಣ ಮಾಡಲಾಗಿದೆ.

4,600 ಕಿ.ಮೀ ರಸ್ತೆ ನಿರ್ಮಾಣ ಆಗಿದೆ. ಭಾರತ್ ಮಾಲಾ ಯೋಜನೆಯಡಿ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಸೇರಿ ಮೂರು ಎಕ್ಸ್‌ಪ್ರೆಸ್ ವೇ ನಿರ್ಮಾಣವಾಗುತ್ತಿವೆ ಎಂದು ಹೇಳಿದರು.

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕರ್ನಾಟಕ ಸರ್ಕಾರ ಪೆಟ್ರೋಲ್, ಡೀಸೆಲ್, ಹಾಲು, ಗೈಡ್‌ಲೈನ್ಸ್ ವ್ಯಾಲ್ಯೂ, ಇವಿ ವಾಹನಗಳ ದರ ಎಲ್ಲವೂ ಹೆಚ್ಚಳ ಮಾಡಿದೆ. ಉದ್ಯೋಗ ಸೃಷ್ಟಿ ಸಂಪೂರ್ಣ ಕುಸಿದಿದೆ. ಕಳೆದ ವರ್ಷ ಆದಾಯ ಬಜೆಟ್ ಮಂಡನೆಯಾಗಿತ್ತು, ಒಂದೇ ವರ್ಷದಲ್ಲಿ ಖೋತಾ ಬಜೆಟ್ ಆಗಿದೆ. ಎಸ್‌ಸಿ, ಎಸ್‌ಟಿ ಯೋಜನೆಯಿಂದ ಹಣ ತೆಗೆಯಲಾಗಿದೆ. ವಾಲ್ಮೀಕಿ ಹಗರಣ ನಿಮಗೆಲ್ಲಾ ಗೊತ್ತಿದೆ ಎಂದು ತಿಳಿಸಿದರು.

ಉದ್ಯೋಗ ವಿಚಾರವಾಗಿ ದೆಹಲಿಯಲ್ಲಿ ತಿಳಿಸಿದ್ದೇನೆ. ಯುವಕರಿಗೆ ಉದ್ಯೋಗ, ಎಂಎಸ್‌ಎಂಇ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಮೂರು ರೀತಿ ಉದ್ಯೋಗ ಸೃಷ್ಟಿ ಮಾಡಲಾಗುತ್ತಿದ್ದು, ಮೊದಲ ಬಾರಿ ಉದ್ಯೋಗಕ್ಕೆ ಬರುವವರಿಗಾಗಿ ಉದ್ಯೋಗ, ನವೋದ್ಯಮ 4.0 ಕೈಗಾರಿಕೆಗಳಿಗಾಗಿ ಸ್ಕಿಲ್ ಟ್ರೈನಿಂಗ್ ನೀಡಲಾಗುತ್ತಿದೆ. ಇದರಿಂದ ಹೊಸ ಕಂಪನಿಗಳು ನೇಮಕಕ್ಕೆ ಸಹಾಯವಾಗಲಿದೆ. ಯುವಕರು ಓದಲು ಕಡಿಮೆ ಬಡ್ಡಿ ದರದಲ್ಲಿ 7.5ಲಕ್ಷದವರೆಗೂ ಸಾಲ ನೀಡಲಾಗುತ್ತದೆ, ಸ್ಕಿಲ್ ಟ್ರೈನಿಂಗ್‌ಗಾಗಿ ಸಾಲ ನೀಡಲಾಗುತ್ತದೆ. ಎಂಎಸ್‌ಎಂಇ ಮೂಲಕ ಹೆಚ್ಚು ಉದ್ಯೋಗ ನೀಡಲಾಗುತ್ತಿದೆ ಎಂದು ತಿಳಿಸಿದರು

ಸಂಶೋಧನೆ ಮತ್ತು ಅಭಿವೃದ್ಧಿ (R&D)ಯಿಂದ ಬೆಂಗಳೂರಿಗೆ ಹೆಚ್ಚು ಉಪಯೋಗ ಆಗಲಿದೆ. ಬೆಂಗಳೂರಿನಲ್ಲಿ ಸ್ಪೇಸ್ ರಿಸರ್ಚ್ ಈ ಹಿಂದಿನಿಂದಲೂ ನಡೆಯುತ್ತಿದೆ. ಹೀಗಾಗಿ ರಿಸರ್ಚ್‌ಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಇದರಿಂದ ಹೆಚ್ಚು ಅನುಕೂಲ ಆಗಲಿದೆ. ಏಂಜೆಲ್ ಟ್ಯಾಕ್ಸ್ ಕೂಡ ಅನೇಕ ಜನರಿಗೆ ಲಾಭ ಆಗಲಿದೆ. ಕರ್ನಾಟಕ ಕೂಡ ಇದರ ಲಾಭ ಪಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ | Mann Ki Baat: ಪ್ಯಾರಿಸ್ ಒಲಿಂಪಿಕ್ಸ್​: ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಂತೆ ʼಮನ್​ ಕಿ ಬಾತ್​ʼನಲ್ಲಿ ಮೋದಿ ಕರೆ

ಇನ್ನು ಬಜೆಟ್‌ನಿಂದ ಮಹಿಳೆಯರಿಗೆ ಹೆಚ್ಚು ಅನುಕೂಲ ಆಗಲಿದೆ. ಮಹಿಳೆಯರಿಗೆ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ಕೃಷಿ ಮತ್ತು ಸಂಶೋಧನೆಯಲ್ಲಿ ಕರ್ನಾಟಕ ಹೆಚ್ಚು ಲಾಭ ಪಡೆದಿದೆ. ಬೆಂಗಳೂರು ಮತ್ತು ರಾಯಚೂರಿನಲ್ಲಿ ಇದರ ಉಪಯೋಗವಾಗಿದೆ. ಅದರಲ್ಲೂ ಹೆಚ್ಚು ಉತ್ತರ ಕರ್ನಾಟಕಕ್ಕೆ ಅನುಕೂಲ ಆಗಿದೆ ಎಂದು ತಿಳಿಸಿದರು.

ವಾಲ್ಮೀಕಿ ನಿಗಮ ಹಗರಣದ ಬಗ್ಗೆ ಪ್ರತಿಕ್ರಿಯಿಸಿ, ಈ ಅಕ್ರಮದ ಬಗ್ಗೆ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಏನು ಹೇಳುತ್ತೀರಿ? ಬ್ಯಾಂಕ್ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಿ. ಕೇಂದ್ರ ಸರ್ಕಾರದ ಸಿಬ್ಬಂದಿ ಆದರೂ ಸರಿ ಅವರನ್ನು ಬಂಧನ ಮಾಡಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

Continue Reading

ವಾಣಿಜ್ಯ

Mukesh Ambani: ಬಜೆಟ್ ದಿನ 9,200 ಕೋಟಿ ರೂ. ಕಳೆದುಕೊಂಡಿದ್ದ ಮುಕೇಶ್ ಅಂಬಾನಿ!

ಕೇಂದ್ರ ಬಜೆಟ್‌ ಮಂಡನೆಯಾದ ದಿನ ಷೇರು ಮಾರುಕಟ್ಟೆಯು ಸಣ್ಣ ಕುಸಿತದೊಂದಿಗೆ ಕ್ಲೋಸ್‌ ಆಗಿತ್ತು. ಆದರೆ ಇದು ವಹಿವಾಟಿನ ವೇಳೆ ಬಹುದೊಡ್ಡ ಪರಿಣಾಮವನ್ನು ಬೀರಿತ್ತು. ಕೆಲವು ಷೇರುಗಳು ತೀವ್ರವಾಗಿ ಕುಸಿದರೆ, ಇನ್ನು ಸಣ್ಣ ಪ್ರಮಾಣದಲ್ಲಿ ಏರಿಕೆ ಕಂಡವು. ಇದು ಮುಕೇಶ್ ಅಂಬಾನಿ (Mukesh Ambani) ಸೇರಿದಂತೆ ದೇಶದ ದೊಡ್ಡ ಬಿಲಿಯನೇರ್‌ಗಳ ಸಂಪತ್ತಿನ ಮೇಲೆ ಭಾರೀ ಪರಿಣಾಮವನ್ನು ಬೀರಿತು.

VISTARANEWS.COM


on

By

Mukesh Ambani
Koo

ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವನ್ನು (Ananth Ambani and Radhika Merchant’s wedding) ಅದ್ಧೂರಿಯಾಗಿ ನಡೆಸಿ ವಿಶ್ವದ ಗಮನ ಸೆಳೆಯುವಂತೆ ಮಾಡಿದ್ದ ರಿಲಯನ್ಸ್ ಉದ್ಯಮಿ ಮುಕೇಶ್ ಅಂಬಾನಿ (businessman Mukesh Ambani) 2024ರ ಕೇಂದ್ರ ಬಜೆಟ್ (Union Budget 2024) ಮಂಡನೆಯಾದ ದಿನ ಷೇರು ಮಾರುಕಟ್ಟೆಯಲ್ಲಿ ಆದ ಏರುಪೇರಿನಿಂದಾಗಿ ಬರೋಬ್ಬರಿ 9,200 ಕೋಟಿ ರೂ. ಕಳೆದುಕೊಂಡಿದ್ದರು!

ಕೇಂದ್ರ ಬಜೆಟ್‌ ದಿನ ಷೇರು ಮಾರುಕಟ್ಟೆಯು ಸಣ್ಣ ಕುಸಿತದೊಂದಿಗೆ ಕ್ಲೋಸ್‌ ಆಗಿತ್ತು. ಆದರೆ ಇದು ವಹಿವಾಟಿನ ವೇಳೆ ಬಹುದೊಡ್ಡ ಪರಿಣಾಮವನ್ನು ಬೀರಿತ್ತು. ಈ ಸಂದರ್ಭದಲ್ಲಿ ವಹಿವಾಟಿನಲ್ಲಿ ಗಮನಾರ್ಹವಾದ ಏರಿಳಿತಗಳು ಕಂಡುಬಂದವು. ಕೆಲವು ಷೇರುಗಳು ತೀವ್ರವಾಗಿ ಕುಸಿದರೆ ಇನ್ನು ಸಣ್ಣ ಪ್ರಮಾಣದಲ್ಲಿ ಏರಿಕೆ ಕಂಡವು. ಇದು ದೇಶದ ದೊಡ್ಡ ಬಿಲಿಯನೇರ್‌ಗಳ ಸಂಪತ್ತಿನ ಮೇಲೆ ಭಾರೀ ಪರಿಣಾಮವನ್ನು ಬೀರಿತು.

ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯದಲ್ಲಿ ಈ ದಿನ ಗಣನೀಯ ಇಳಿಕೆಯಾಗಿದೆ. ಬಜೆಟ್ ದಿನದಂದು, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಏರುವ ನಿರೀಕ್ಷೆ ಇತ್ತು. ಇದರಿಂದ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವನ್ನು ಹೆಚ್ಚಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರಿತು.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅಂಬಾನಿ ಅವರ ನಿವ್ವಳ ಮೌಲ್ಯವು 1.10 ಬಿಲಿಯನ್ ಡಾಲರ್‌ ಅಂದರೆ ಸರಿಸುಮಾರು 9200 ಕೋಟಿ ರೂ. ಗಳಷ್ಟು ಕಡಿಮೆಯಾಗಿದೆ. ಈ ಕುಸಿತದ ಹೊರತಾಗಿಯೂ ಈ ವರ್ಷದ ಆರಂಭದಲ್ಲಿ ಅವರ ಸಂಪತ್ತು 16 ಶತಕೋಟಿ ಡಾಲರ್‌ಗಳಷ್ಟು ಹೆಚ್ಚಾಗಿತ್ತು.

ಕಳೆದ ಕೆಲವು ದಿನಗಳಲ್ಲಿ ಅಂಬಾನಿ ಅವರ ನಿವ್ವಳ ಮೌಲ್ಯವು 7 ಶತಕೋಟಿ ಡಾಲರ್‌ಗಿಂತ ಕಡಿಮೆಯಾಗಿದೆ. ಜುಲೈ 19ರಂದು ಅವರ ನಿವ್ವಳ ಮೌಲ್ಯವು 119 ಶತಕೋಟಿ ಡಾಲರ್ ಆಗಿತ್ತು. ಆದರೆ ಅದು ಈಗ 112 ಶತಕೋಟಿ ಡಾಲರ್‌ಗೆ ಇಳಿದಿದೆ ಎನ್ನಲಾಗಿದೆ.

ಇದನ್ನೂ ಓದಿ: Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್‌?

ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಇತ್ತೀಚೆಗೆ ಕುಸಿಯುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಅಂಬಾನಿ ಸಂಪತ್ತಿನಲ್ಲಿ ಮತ್ತಷ್ಟು ಕುಸಿತ ಉಂಟಾಗಬಹುದು ಎನ್ನಲಾಗಿದೆ.

Mukesh Ambani
Mukesh Ambani


ಇದಕ್ಕೆ ವ್ಯತಿರಿಕ್ತವಾಗಿ ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತು ಹೆಚ್ಚಳವಾಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅದಾನಿ ಅವರ ನಿವ್ವಳ ಮೌಲ್ಯವು 751 ಮಿಲಿಯನ್ ಡಾಲರ್‌ಗಳು ಅಂದರೆ ಸರಿಸುಮಾರು 63 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಅವರ ಸಂಪತ್ತು 102 ಬಿಲಿಯನ್ ಡಾಲರ್‌ ಗಳನ್ನು ತಲುಪಿದೆ. ಈ ವರ್ಷ ಅವರ ಸಂಪತ್ತು 17.8 ಬಿಲಿಯನ್ ಡಾಲರ್‌ಗಳಷ್ಟು ಏರಿಕೆಯಾಗಿದೆ.

Continue Reading

ದೇಶ

Union Budget 2024: ಕೇಂದ್ರ ಬಜೆಟ್‌ನಲ್ಲಿ ಮಾಲ್ಡೀವ್ಸ್‌ಗೆ ಅನುದಾನದಲ್ಲಿ ಭಾರೀ ಕಡಿತ! ನೆರೆಯ ರಾಷ್ಟ್ರಗಳಿಗೆ ಎಷ್ಟೆಷ್ಟು ನೆರವು ಘೋಷಣೆ?

Union Budget 2024: 2,068 ಕೋಟಿ ರೂ.ಗಳ ಹಂಚಿಕೆಯೊಂದಿಗೆ ಭೂತಾನ್ ಭಾರತದಿಂದ ಅತಿಹೆಚ್ಚು ಅಭಿವೃದ್ಧಿ ನೆರವು ಪಡೆಯುತ್ತಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಹೆಚ್ಚಳವು ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಯನ್ನು ಒತ್ತಿಹೇಳುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಮಾಲ್ಡೀವ್ಸ್ ಹಿಂದಿನ 770 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಕೇವಲ 400 ಕೋಟಿ ರೂಪಾಯಿಗಳನ್ನು ಪಡೆಯುವುದರ ಮೂಲಕ ತೀವ್ರ ಇಳಿಕೆಗೆ ಸಾಕ್ಷಿಯಾಯಿತು. ಮಧ್ಯಂತರ ಬಜೆಟ್ ಈಗಾಗಲೇ 22% ಕಡಿತವನ್ನು ಪ್ರಸ್ತಾಪಿಸಿದೆ, ಆದರೆ ಅಂತಿಮ ಬಜೆಟ್ ಸಹಾಯವನ್ನು 48% ರಷ್ಟು ಕಡಿತಗೊಳಿಸಿತು

VISTARANEWS.COM


on

union budget 2024
Koo

ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್‌(Union Budget 2024)ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Seetharaman) ಅವರು ಭಾರತದ ವಿದೇಶಿ ನೆರವು ಹಂಚಿಕೆಗಳಲ್ಲಿ ಗಣನೀಯ ಬದಲಾವಣೆಗಳನ್ನು ಘೋಷಿಸಿದ್ದಾರೆ. ಇದರದಲ್ಲಿ ನೆರೆಯ ರಾಷ್ಟ್ರಗಳಾದ ಮಾಲ್ಡೀವ್ಸ್‌ ಮತ್ತು ಭೂತಾನ್‌ಗೆ ಅನುದಾನ ಹಂಚಿಕೆಯಲ್ಲಿ ಈ ಬಾರಿ ಗಣನೀಯ ಬದಲಾವಣೆ ತರಲಾಗಿದೆ. ಮಾಲ್ಡೀವ್ಸ್‌ ಅನುದಾನದಲ್ಲಿ ಈ ಬಾರಿ ಭಾರೀ ಕಡಿತ ಮಾಡಲಾಗಿದೆ. ಹಾಗೆಯೇ ಭೂತಾನ್‌ ಅನುದಾನದಲ್ಲಿ ಏರಿಕೆ ಮಾಡಲಾಗಿದೆ.

2,068 ಕೋಟಿ ರೂ.ಗಳ ಹಂಚಿಕೆಯೊಂದಿಗೆ ಭೂತಾನ್ ಭಾರತದಿಂದ ಅತಿಹೆಚ್ಚು ಅಭಿವೃದ್ಧಿ ನೆರವು ಪಡೆಯುತ್ತಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಹೆಚ್ಚಳವು ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಯನ್ನು ಒತ್ತಿಹೇಳುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಮಾಲ್ಡೀವ್ಸ್ ಹಿಂದಿನ 770 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಕೇವಲ 400 ಕೋಟಿ ರೂಪಾಯಿಗಳನ್ನು ಪಡೆಯುವುದರ ಮೂಲಕ ತೀವ್ರ ಇಳಿಕೆಗೆ ಸಾಕ್ಷಿಯಾಯಿತು. ಮಧ್ಯಂತರ ಬಜೆಟ್ ಈಗಾಗಲೇ 22% ಕಡಿತವನ್ನು ಪ್ರಸ್ತಾಪಿಸಿದೆ, ಆದರೆ ಅಂತಿಮ ಬಜೆಟ್ ಸಹಾಯವನ್ನು 48% ರಷ್ಟು ಕಡಿತಗೊಳಿಸಿತು.

ಚೀನಾ ಪರ ನಿಲುವಿಗೆ ಹೆಸರುವಾಸಿಯಾದ ಮೊಹಮದ್ ಮುಯಿಝು ಅವರು ಮಾಲ್ಡೀವ್ಸ್‌ ಅಧ್ಯಕ್ಷರಾಗಿ ಚುನಾಯಿತರಾದ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿದೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಅವರ ಆಡಳಿತದ ವಿಮರ್ಶಾತ್ಮಕ ಹೇಳಿಕೆಗಳು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುವ “ಮಾಲ್ಡೀವ್ಸ್ ಬಹಿಷ್ಕಾರ” ಅಭಿಯಾನವನ್ನು ಹುಟ್ಟುಹಾಕಿತು.

ಈ ಬಾರಿ ನೇಪಾಳವು 700 ಕೋಟಿ ರೂಪಾಯಿ ಅತ್ಯಧಿಕ ನೆರವನ್ನು ಪಡೆದುಕೊಂಡಿದೆ. ಇದು ನೇಪಾಳ ಮತ್ತು ಭಾರತದ ಬದ್ಧತೆಯನ್ನು ಬಲಪಡಿಸುತ್ತದೆ. ಶ್ರೀಲಂಕಾವು ಕಳೆದ ವರ್ಷದ 60 ಕೋಟಿ ರೂಪಾಯಿಗಳ ನೆರವು ಪಡೆದಿತ್ತು. ಈ ಬಾರಿ 245 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದು, ನೆರವಿನಲ್ಲಿ ಗಣನೀಯ ಏರಿಕೆ ಕಂಡಿದೆ.

ಬಜೆಟ್‌ನಲ್ಲಿ ದಕ್ಷಿಣ ಏಷ್ಯಾದ ಆಚೆಗಿನ ದೇಶಗಳಿಗೂ ಮೀಸಲಿಡಲಾಗಿದೆ. ಇರಾನ್‌ನ ಚಬಹಾರ್ ಬಂದರು 100 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದು, ಅದರ ಕಾರ್ಯತಂತ್ರದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಅಫ್ಘಾನಿಸ್ತಾನದ ನೆರವನ್ನು 220 ಕೋಟಿಯಿಂದ 200 ಕೋಟಿಗೆ ಸ್ವಲ್ಪ ಕಡಿಮೆ ಮಾಡಲಾಗಿದೆ. ಬಾಂಗ್ಲಾದೇಶಕ್ಕೆ 120 ಕೋಟಿ ರೂ., ಮ್ಯಾನ್ಮಾರ್‌ನ ನೆರವನ್ನು 320 ಕೋಟಿ ರೂ.ಗಳಿಂದ 250 ಕೋಟಿ ರೂ.ಗೆ ಇಳಿಸಲಾಯಿತು. ಆಫ್ರಿಕನ್ ರಾಷ್ಟ್ರಗಳು ಒಟ್ಟಾರೆಯಾಗಿ 200 ಕೋಟಿ ರೂಪಾಯಿಗಳನ್ನು ಪಡೆದಿವೆ ಮತ್ತು ಮಾರಿಷಸ್‌ಗೆ 370 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

ಒಟ್ಟಾರೆ ವಿದೇಶಾಂಗ ವ್ಯವಹಾರಗಳ ಬಜೆಟ್‌ ಎಷ್ಟು?

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಒಟ್ಟು ಬಜೆಟ್ ಅನ್ನು 29,121 ಕೋಟಿ ರೂಗಳಿಂದ 22,154 ಕೋಟಿಗೆ ಇಳಿಸಲಾಗಿದ್ದು, ಇದು ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಹಂಚಿಕೆಯೊಂದಿಗೆ ಹೊಂದಿಕೆಯಾಗುತ್ತದೆ. ಕೇಂದ್ರ ಬಜೆಟ್ 2024-25 ಭಾರತದ ಕ್ರಿಯಾತ್ಮಕ ವಿದೇಶಾಂಗ ನೀತಿಯನ್ನು ಪ್ರತಿಬಿಂಬಿಸುತ್ತದೆ. ಭೂತಾನ್ ಮತ್ತು ಇತರ ನೆರೆಹೊರೆಗಳಿಗೆ ಹೆಚ್ಚಿದ ಬೆಂಬಲವು ಭಾರತದ ವಿಕಸನಗೊಳ್ಳುತ್ತಿರುವ ರಾಜತಾಂತ್ರಿಕ ಆದ್ಯತೆಗಳನ್ನು ಒತ್ತಿಹೇಳುತ್ತದೆ.

ಇದನ್ನೂ ಓದಿ: Mudra loan: ಕೇಂದ್ರ ಬಜೆಟ್‌ನಲ್ಲಿ ಮುದ್ರಾ ಸಾಲ ಮಿತಿ ಹೆಚ್ಚಳ; ಷರತ್ತುಗಳೇನು? ಯಾರಿಗೆ ಪ್ರಯೋಜನ?

Continue Reading
Advertisement
Kodava Family Hockey Tournament Website Launched
ಕೊಡಗು2 ವಾರಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು2 ವಾರಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ2 ವಾರಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ2 ವಾರಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು2 ವಾರಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ12 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್3 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌