Mr. Bean: 'ಮಿಸ್ಟರ್ ಬೀನ್' ಖ್ಯಾತಿಯ ರೋವನ್ ಅಟ್ಕಿನ್ಸನ್ ಹಾಸಿಗೆ ಹಿಡಿದಿದ್ದಾರೆಯೇ? ಭಾರೀ ವೈರಲಾಗ್ತಿದೆ ಈ ಫೋಟೊ - Vistara News

Latest

Mr. Bean: ‘ಮಿಸ್ಟರ್ ಬೀನ್’ ಖ್ಯಾತಿಯ ರೋವನ್ ಅಟ್ಕಿನ್ಸನ್ ಹಾಸಿಗೆ ಹಿಡಿದಿದ್ದಾರೆಯೇ? ಭಾರೀ ವೈರಲಾಗ್ತಿದೆ ಈ ಫೋಟೊ

Mr. Bean ಮನಸ್ಸಿಗೆ ಎಷ್ಟೇ ನೋವಾಗಿದ್ದರೂ ತಿಳಿ ಹಾಸ್ಯವೊಂದು ಆ ಘಾಸಿಗೊಳಿಸಿದ ಮನಸ್ಸನ್ನು ತಂಗಾಳಿಯೊಂದು ತಾಕಿ ಹೋದ ಹಾಗೇ ತಂಪನೀಯುತ್ತದೆ. ಮಿಸ್ಟರ್ ಬೀನ್ ಎಷ್ಟೋ ನೊಂದ ಮನಸ್ಸಿನ ನೋವನ್ನು ತಮ್ಮ ಹಾಸ್ಯ ನಟನೆಯ ಮೂಲಕ ಕಡಿಮೆ ಮಾಡಿದ್ದಾರೆಂದರೆ ತಪ್ಪಾಗಲಾರದು. ಅವರ ನಟನೆ ಬಿದ್ದು ಬಿದ್ದು ನಗುವ ಹಾಗೇ ಮಾಡುತ್ತಿತ್ತು. ಈಗ ಮಿಸ್ಟರ್ ಬೀನ್ ಖ್ಯಾತಿಯ ಹಾಲಿವುಡ್ ನಟ ರೋವನ್ ಅಟ್ಕಿನ್ಸನ್ ಆರೋಗ್ಯ ಹದಗೆಟ್ಟು ಬೆಡ್ ಮೇಲೆ ಮಲಗಿರುವ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 69 ವರ್ಷದ ನಟ ಹಾಸಿಗೆ ಮೇಲೆ ಮಲಗಿದ್ದ ಪೋಟೊ ನೋಡಿ ಅವರ ಅಭಿಮಾನಿಗಳು ದಂಗಾಗಿದ್ದಾರೆ.

VISTARANEWS.COM


on

Mr. Bean
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ


ಲಂಡನ್ :ತಮ್ಮ ವಿಭಿನ್ನ ವಿಚಿತ್ರ ಹಾವಭಾವದೊಂದಿಗೆ ನಟಿಸಿ ಜನರನ್ನು ನಗೆಯ ಕಡಲಿನಲ್ಲಿ ತೇಲುವಂತೆ ಮಾಡುತ್ತಿದ್ದ ಮಿಸ್ಟರ್ ಬೀನ್ ಖ್ಯಾತಿಯ ಹಾಲಿವುಡ್ ನಟ ರೋವನ್ ಅಟ್ಕಿನ್ಸನ್ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರು ಕೂಡ ಇವರ ಹಾಸ್ಯವನ್ನು ನೋಡಿ ನಗುತ್ತಿದ್ದರು ಮತ್ತು ತಮ್ಮ ಎಲ್ಲಾ ನೋವನ್ನು ಮರೆಯುತ್ತಿದ್ದರು. ಅಂತಹ ಮಹಾನ್ ನಟನ ಬಗ್ಗೆ ಕಳೆದ ಕೆಲವು ದಿನಗಳಲ್ಲಿ, ಕೆಟ್ಟ ಸುದ್ದಿಯೊಂದು ಹರಿದಾಡುತ್ತಿತ್ತು. ಅದೇನೆಂದರೆ ಮಿಸ್ಟರ್ ಬೀನ್ (Mr. Bean) ಖ್ಯಾತಿಯ ಹಾಲಿವುಡ್ ನಟ ರೋವನ್ ಅಟ್ಕಿನ್ಸನ್ ಆರೋಗ್ಯ ಹದಗೆಟ್ಟು ಬೆಡ್ ಮೇಲೆ ಮಲಗಿರುವ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಕೂಡಲೇ, ಇದು ಹೆಚ್ಚಿನ ಗಮನ ಸೆಳೆಯುವ ಮೂಲಕ ಸಖತ್ ವೈರಲ್ ಆಯಿತು. 69 ವರ್ಷದ ನಟ ಹಾಸಿಗೆ ಮೇಲೆ ಮಲಗಿದ್ದ ಪೋಟೊ ನೋಡಿ ಅವರ ಅಭಿಮಾನಿಗಳು ದಂಗಾಗಿದ್ದರು.

ಆದರೆ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಮಿಸ್ಟರ್ ಬೀನ್ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡಿದ್ದವು. 2017ರಲ್ಲಿ ಮೊದಲ ಬಾರಿಗೆ ರೋವನ್ ಅಟ್ಕಿನ್ಸನ್ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ ಅನ್ನೋ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದು ಅವರ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನುಂಟುಮಾಡಿತ್ತು. ಆದರೆ ಈ ಸುದ್ಧಿ ಸುಳ್ಳು ಎಂದಾಗ ನಿಟ್ಟುಸಿರು ಬಿಟ್ಟಿದ್ದರು. ಹಾಗಾಗಿ ಅಟ್ಕಿನ್ಸನ್ ಅವರು ಅನಾರೋಗ್ಯದಲ್ಲಿರುವಂತೆ ತೋರಿಸುತ್ತಿದ್ದ ವೈರಲ್ ಆದ ಫೋಟೊದ ಬಗ್ಗೆ ಮಾಹಿತಿ ಕಲೆಹಾಕಿದಾಗ ಆ ಫೋಟೊ ಸಂಪೂರ್ಣವಾಗಿ ನಕಲಿ ಎಂಬುದಾಗಿ ತಿಳಿದುಬಂದಿದೆ. ವರದಿ ಪ್ರಕಾರ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಟೊವನ್ನು ತಂತ್ರಜ್ಞಾನಗಳನ್ನು ಬಳಸಿ ಎಡಿಟ್ ಮಾಡಿರುವುದಾಗಿ ತಿಳಿದುಬಂದಿದೆ. ಅಲ್ಲದೇ ವೈರಲ್ ಪೋಟೋದಲ್ಲಿರುವುದು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಬ್ಯಾರಿ ಬಾಲ್ಡರ್ಸ್ಟೋನ್ ಎಂಬ ವೃದ್ಧನದು ಎಂಬುದು ತಿಳಿದುಬಂದಿದೆ.

ಎಡಿಟ್ ಮಾಡಿದ ಫೋಟೊವನ್ನು ಮೂಲ ಫೋಟೊದೊಂದಿಗೆ ಹೋಲಿಸಿದಾಗ, ‘ಮಿಸ್ಟರ್ ಬೀನ್ ಇನ್ 2024’ ಎಂದು ಹೇಳಿಕೊಳ್ಳುವ ಫೋಟೊಗಳು ನಕಲಿ ಎಂಬುದು ಸ್ಪಷ್ಟವಾಯಿತು. ತಂತ್ರಜ್ಞಾನಗಳು ಪ್ರಗತಿ ಹೊಂದುತ್ತಿರುವ ಈ ಕಾಲದಲ್ಲಿ ಈ ವಿಷಯಗಳು ಸಾಮಾನ್ಯವಾಗಿವೆ. ಹಾಗಾಗಿ ಇಂತಹ ವಿಚಾರಗಳು ಇನ್ನು ಮುಂದೆ ಜನರಲ್ಲಿ ಆಘಾತವನ್ನುಂಟು ಮಾಡುವುದಿಲ್ಲ. ಮುಲ್ತಾನ್ ಸುಲ್ತಾನ್ಸ್ ಮತ್ತು ಇಸ್ಲಾಮಾಬಾದ್ ಯುನೈಟೆಡ್ ನಡುವಿನ ಪಿಎಸ್ಎಲ್ 2024 ಫೈನಲ್ ಪಂದ್ಯದ ವೇಳೆ ಪಾಕ್ ಬೀನ್ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ವೃದ್ಧನ ಗುದದ್ವಾರದಲ್ಲಿತ್ತು 16 ಇಂಚಿನ ಸೋರೆಕಾಯಿ! ವೈದ್ಯರಿಗೇ ಗಾಬರಿ!

ಹಾಲಿವುಡ್ ನಟ ಇತ್ತೀಚೆಗೆ ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಆರೋಗ್ಯಕರವಾಗಿ ಮತ್ತು ಸದೃಢವಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ರೋವನ್ ಅಟ್ಕಿನ್ಸನ್ ಅವರ ಆರೋಗ್ಯದ ಬಗ್ಗೆ ಇನ್ನೂ ಚಿಂತಿಸಬೇಕಾಗಿಲ್ಲ. ಬಿಬಿಸಿ ಕಾಮಿಡಿ ಶೋ ‘ನಾಟ್ ದಿ ನೈನ್ ಒ’ಕ್ಲಾಕ್’ ನ್ಯೂಸ್ ಮೂಲಕ ಖ್ಯಾತಿ ಗಳಿಸಿದ ಹಾಲಿವುಡ್ ನಟ ಜಾನಿ ಇಂಗ್ಲಿಷ್, ಮ್ಯಾನ್ ವರ್ಸಸ್ ಬೀ, ಜಾನಿ ಇಂಗ್ಲಿಷ್ ರೀಬಾರ್ನ್ ಮತ್ತು ದಿ ಥಿನ್ ಬ್ಲೂ ಲೈನ್ ಮುಂತಾದ ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಸಚಿವ ಜಮೀರ್‌ರಿಂದ ಸಾಕಷ್ಟು ಅನುಭವಿಸಿದ್ದೇನೆ, ಅವರನ್ನು ಮತ್ತೆ ಜೆಡಿಎಸ್‌ಗೆ ಸೇರಿಸಿಕೊಳ್ಳಲ್ಲ; ಕುಮಾರಸ್ವಾಮಿ ಸ್ಪಷ್ಟೋಕ್ತಿ

VISTARANEWS.COM


on

HD Revanna

ಹಾಸನ: ದಾವಣಗೆರೆ ದಂಗಲ್‌ ನಿಂದಾಗಿ ಕಾಂಗ್ರೆಸ್‌ ಪಕ್ಷದಿಂದ ಕಠಿಣ ಕ್ರಮದ ಭೀತಿಯಲ್ಲಿರುವ ಸಚಿವ ಜಮೀರ್‌ ಅಹಮದ್‌ ಖಾನ್‌ರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಜೆಡಿಎಸ್‌ ವರಿಷ್ಠ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.


ಜಮೀರ್‌ ಅವರಿಂದ ಈಗಾಗಲೇ ಸಾಕಷ್ಟು ಅನುಭವಿಸಿದ್ದೇನೆ. ರಾಜಕೀಯದಲ್ಲಿ ಶಕ್ತಿ ಬರುತ್ತೆ ಎಂದು ಹೇಳಿ ಅವರನ್ನು ಮತ್ತೆ ಪಕ್ಷ ಬರಮಾಡಿಕೊಳ್ಳುವ ಪ್ರೇಮಯವೇ ಇಲ್ಲ, ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲ ಎಂದು ಅವರು ಸ್ಪಷ್ಟಪಡಿಸಿದರು.


ಹೊಳೆನರಸೀಪುರ ತಾಲೂಕಿನ ಉದ್ದನ ಹೊಸಹಳ್ಳಿ ಗ್ರಾಮದಲ್ಲಿ ಶ್ರೀವೀರಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್‌ ಪಕ್ಷದ ವಿರುದ್ಧ ತೀವ್ರವಾಗಿ ಹರಿಹಾಯ್ದರು. ಕೇವಲ ₹2೦೦೦ ಗ್ಯಾರಂಟಿ ಹಣದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳೆಯರು ಈ ಸಣ್ಣ ಮೊತ್ತಕ್ಕೆ ಮರುಳಾಗಬಾರದು, ಇದರಿಂದ ಅವರ ಉದ್ಧಾರ ಅಸಾಧ್ಯ ಎಂದರು. ಇಂತಹ ಗ್ಯಾರೆಂಟಿಗಳಿಂದ ರಾಜ್ಯ ಸರ್ಕಾರಗಳಿಗೆ ಸಂಬಳ ಕೊಡಲಾಗದಂತ ದುಸ್ಥಿತಿ ಎದುರಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.


ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಮಾರ್ಚ್ ತಿಂಗಳ ವೇತನವನ್ನು ಇನ್ನು ಕೊಟ್ಟಿಲ್ಲ ಎನ್ನುವ ಮಾಹಿತಿ ಇದೆ. ಹಾಗೆಯೇ ಕಾಂಗ್ರೆಸ್ ಆಡಳಿತ ಇರುವ ಹಿಮಾಚಲ ಪ್ರದೇಶದಲ್ಲಿಯೂ ಸರ್ಕಾರಿ ನೌಕರರ ಸಂಬಳವನ್ನು ನೀಡಲು ಪರದಾಡುತ್ತಿದೆ. ಆ ಸರ್ಕಾರವು ನೌಕರರ ಸಂಬಳವನ್ನು ಕಡಿತ ಮಾಡಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ರಾಜ್ಯಗಳ ಅಭಿವೃದ್ಧಿ ಸಂಪೂರ್ಣವಾಗಿ ಹಳಿತಪ್ಪಿದೆ ಇದೆಕ್ಕೆಲ್ಲಾ ಕಾಂಗ್ರೆಸ್ ಪಕ್ಷವೇ ಹೊಣೆ ಎಂದರು.


ಸರಿ ಸುಮಾರು 7.2600 ಲಕ್ಷ ಕೋಟಿಗೂ ಸಾಲವನ್ನು ರಾಜ್ಯ ಸರ್ಕಾರ ಮಾಡಿದೆ. ರಾಜ್ಯದ ಪ್ರತಿಯೊಬ್ಬರ ತಲೆಯ ಮೇಲೆಯೂ ಕನಿಷ್ಠವೆಂದರೂ ಒಂದು ಲಕ್ಷ ರೂಪಾಯಿಗೂ ಅಧಿಕ ಸಾಲವಿದೆ. ಇಷ್ಟು ಸಾಲ ಮಾಡಿದರೆ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವೇ ಎಂದು ಸಚಿವ ಕುಮಾರಸ್ವಾಮಿ ಪ್ರಶ್ನಿಸಿದರು.


ಒಂದು ಕೈಯಲ್ಲಿ ಜನರಿಗೆ 2 ಸಾವಿರ ಕೊಡುತ್ತಾರೆ. ಇನ್ನೊಂದು ಕೈಯಲ್ಲಿ ತೆರಿಗೆ ಮೇಲೆ ತೆರಿಗೆ ವಿಧಿಸುತ್ತಾರೆ. ಬೆಲೆ ಏರಿಕೆಗಳ ಬಗ್ಗೆ ಹೇಳುವ ಹಾಗೆಯೇ ಇಲ್ಲ. ಇತ್ತೀಚೆಗೆ ವಿದ್ಯುತ್ ದರವನ್ನು ಹೆಚ್ಚಿಸಿದರು. ಹಾಗೆಯೇ ಮದ್ಯದ ದರವನ್ನು ಏರಿಸಿದರು. ಎಷ್ಟು ಸಾಧ್ಯವೊ ಅಷ್ಟು ಕಡೆ ಜನರನ್ನು ಕಿತ್ತು ತಿನ್ನುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಸಚಿವರು ಕಿಡಿಕಾರಿದರು.


ನನಗೆ ದೊರೆತ ಸಣ್ಣ ಅವಧಿಯಲ್ಲಿ ಇಷ್ಟೆಲ್ಲ ಕೆಲಸಗಳನ್ನು ಮಾಡಿದ್ದೇನೆ. ಸಾವಿರಾರು ಶಿಕ್ಷಕರನ್ನು ನೇರವಾಗಿ ಮತ್ತು ಪಾರದರ್ಶಕವಾಗಿ ನೇಮಕ ಮಾಡಿದ್ದೆ. ಆದರೆ ಈಗಿನ ಸರ್ಕಾರಕ್ಕೆ ಒಂದೇ ಒಂದು ನೇಮಕಾತಿ ಮಾಡುವ ಶಕ್ತಿಯು ಇಲ್ಲವಾಗಿದೆ ಎಂದು ಕೇಂದ್ರ ಸಚಿವರು ದೂರಿದರು.

Continue Reading

Latest

ಮತದಾನಕ್ಕೆ ಕ್ಯೂನಲ್ಲಿ ನಿಂತರೂ ಕಷ್ಟ; ನಿಲ್ಲದಿದ್ದರೂ ಕಷ್ಟ: ಹಾಗಾದ್ರೆ ನಟ ಕಮಲ್‌ ಹಾಸನ್‌ ಏನು ಮಾಡಬೇಕಿತ್ತು?

VISTARANEWS.COM


on

ಚೆನ್ನೈ: ಇಂದು ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಚಿತ್ರನಟರು, ರಾಜಕಾರಣಿಗಳು ಸೇರಿದಂತೆ ಅನೇಕ ಸೆಲಬ್ರಿಟಿಗಳು ಮತದಾನ ಮಾಡಿದ್ದಾರೆ. ಆದರೆ ಖ್ಯಾತ ನಟ ಕಮಲ್‌ ಹಾಸನ್‌ ಅವರು ಮತದಾನ ಮಾಡಿದ ರೀತಿಗೆ ಟೀಕೆ ಟಿಪ್ಪಣಿಗಳು ವ್ಯಕ್ತವಾಗುವುದರ ಜತೆಗೆ ಅವರನ್ನು ಬೆಂಬಲಿಸಿಯೂ ಪೋಸ್ಟ್‌ ಗಳು ಪ್ರಕಟವಾಗುತ್ತಿವೆ. ಅವರ ಪರಿಸ್ಥಿತಿ ಹೇಗಿತ್ತು ಎಂದರೆ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತರೂ ಕಷ್ಟ, ನಿಲ್ಲದಿದ್ದರೂ ಕಷ್ಟ ಎನ್ನುವಂತಾಗಿತ್ತು.
ಮತದಾನ ಮಾಡಲು ಬಂದಿದ್ದ ನಟ ಕಮಲ್ ಹಾಸನ್ ಮತ್ತು ಅವರ ಪುತ್ರಿ ಶ್ರುತಿ ಹಾಸನ್ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಸರತಿಯ ಸಾಲನ್ನು ಮೀರಿ ನೇರವಾಗಿ ಒಳಗೆ ಹೋಗಿ ಮತ ಚಲಾಯಿಸಿದ್ದೇ ಈ ಟೀಕೆಗೆ ಕಾರಣ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಕಟುವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಕಮಲ್ ಹಾಸನ್ ಮತ್ತು ಶ್ರುತಿ ಹಾಸನ್ ಅವರು ಚೆನ್ನೈನ ಆಳ್ವಾರ್‌ಪೇಟೆ ಶಾಲೆಯ ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತಿದ್ದರು. ಅಲ್ಲಿ ನೆರೆದಿದ್ದ ಕ್ಯಾಮೆರಾಗಳು ಕಮಲ್‌ ಹಾಸನ್‌ ಮತ್ತು ಶ್ರುತಿ ಹಾಸನ್ ಅವರತ್ತಲೇ ಫೋಕಸ್‌ ಮಾಡುತ್ತಿದ್ದವು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬುದನ್ನು ಅರಿತ ಅಲ್ಲಿದ್ದ ಪೊಲೀಸರು ಕಮಲ್ ಮತ್ತು ಶ್ರುತಿ ಅವರಿಗೆ ನೇರವಾಗಿ ಒಳಗೆ ಹೋಗಲು ಸೂಚಿಸಿದ್ದಾರೆ. ಆಗ ಇಬ್ಬರೂ ತಮ್ಮ ಮುಂದೆ ನಿಂತಿದ್ದ ವ್ಯಕ್ತಿಯ ಬಳಿ ಕ್ಷಮೆಯಾಚಿಸಿ ನೇರವಾಗಿ ಮತದಾನದ ಕೊಠಡಿಗೆ ತೆರಳಿದ್ದಾರೆ.
ಕಮಲ್‌ ಹಾಸನ್‌ ಅವರ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಹೋಗಿದ್ದನ್ನು ಕೆಲವು ನೆಟ್ಟಿಗರು ಖಂಡಿಸಿದ್ದಾರೆ. ಮತ್ತೊಬ್ಬರು ಕಮಲ್ ಹಾಸನ್ ಅವರು ಸಮಾಜವಾದ, ಸಮಾನತೆ ಮತ್ತು ಆದರ್ಶಗಳನ್ನು ಕುರಿತು ಭಾಷಣ ಮಾಡುತ್ತಾರೆ. ಅವರೇ ಹೀಗೆ ನಡೆದುಕೊಳ್ಳಬಹುದೇ ಎಂದು ಪ್ರಶ್ನಿಸಿದ್ದಾರೆ. ಎರಡು ನಿಮಿಷ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲವೇ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.
ಕಮಲ್ ಹಾಸನ್ ಪರವಾಗಿ ಕಾಮೆಂಟ್‌ ಮಾಡಿದವರ ಸಂಖ್ಯೆಗೇನೂ ಕಡಿಮೆ ಇಲ್ಲ. ಸೆಲಬ್ರಿಟಿಗಳು ಸರತಿ ಸಾಲಿನಲ್ಲಿ ನಿಂತರೆ ಅವರನ್ನು ನೋಡಲು ಜನ ಮುಗಿಬೀಳುತ್ತಾರೆ. ಇದರಿಂದ ಮತದಾನಕ್ಕೆ ಅಡಚಣೆಯಾಗುತ್ತದೆ ಮತ್ತು ಭದ್ರತಾ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ. ಅವರು ನೇರವಾಗಿ ಮತಗಟ್ಟೆಗೆ ತೆರಳಿದ್ದು ಸರಿ ಎಂದು ಸಮರ್ಥಿಸಿಕೊಂಡಿದ್ದಾರೆ.

Continue Reading

Latest

ವಿಜಯ್ ಪಕ್ಷಕ್ಕೆ ಮತ ಚಲಾಯಿಸಲು ಸಾಧ್ಯವಾಗದೆ ಬಿಕ್ಕಿ ಬಿಕ್ಕಿ ಅತ್ತ ಯುವತಿ! ವಿಡಿಯೋ ವೈರಲ್

VISTARANEWS.COM


on

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಕಣ ರಂಗೇರಿದ್ದು, ನಟ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶ ಈ ಬಾರಿಯ ಚುನಾವಣೆಯನ್ನು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದೆ. ಇದೇ ಹೊತ್ತಲ್ಲಿ, ಮಲೇಷ್ಯಾದಿಂದ ತನ್ನ ನೆಚ್ಚಿನ ನಟನಿಗಾಗಿ ಮತ ಚಲಾಯಿಸಲು ಬಂದ ಯುವತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕೆಲಸದ ನಿಮಿತ್ತ ಮಲೇಷ್ಯಾದಲ್ಲಿದ್ದ ಈ ಯುವತಿ, ಮತದಾನದ ದಿನದಂದೇ ತಾಯ್ನಾಡಿಗೆ ಬರುವ ವಿಮಾನವನ್ನು (Flight) ತಪ್ಪಿಸಿಕೊಂಡ ಕಾರಣ, ಮತ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ನಡುರಸ್ತೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತು ವಿಜಯ್ ಬಳಿ ಕ್ಷಮೆಯಾಚಿಸಿದ್ದರು.

“ನನ್ನ ತಪ್ಪಿನಿಂದ ಫ್ಲೈಟ್ ಮಿಸ್ ಆಯ್ತು, ವಿಜಯ್ ಅಣ್ಣನ ಮೊದಲ ಹೆಜ್ಜೆಗೆ ಬೆಂಬಲ ನೀಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ. ನನ್ನ ಒಂದು ವೋಟ್‌ನಿಂದ ಏನಾಗುತ್ತೆ ಎಂದು ಕೆಲವರು ಕೇಳಬಹುದು, ಆದರೆ ‘ನಾವು ನಿಮ್ಮ ಜೊತೆ ಇದ್ದೀವಿ’ ಎಂದು ಅವರಿಗೆ ಭರವಸೆ ನೀಡುವ ದಾರಿ ಇದಾಗಿತ್ತು” ಎಂದು ಆ ಯುವತಿ ಕಣ್ಣೀರಿಡುತ್ತಾ ಹೇಳಿಕೊಂಡಿದ್ದರು. ಈ ಹೃದಯವಿದ್ರಾವಕ ವಿಡಿಯೋ ನೋಡಿ ದಳಪತಿ ಅಭಿಮಾನಿಗಳು ಸಹ ಬೇಸರ ವ್ಯಕ್ತಪಡಿಸಿದ್ದರು. ಆದರೆ ಈ ಕಥೆಗೆ ಒಂದು ಸುಖಾಂತ್ಯವಿದ್ದು, ಆ ಯುವತಿ ಕೇವಲ ಅತ್ತು ಸುಮ್ಮನಾಗದೆ, ಎಲ್ಲಾ ಅಡೆತಡೆಗಳನ್ನು ದಾಟಿ ಮತ್ತೊಂದು ವಿಮಾನದ ಮೂಲಕ ಹೇಗಾದರೂ ಮಾಡಿ ತಮಿಳುನಾಡಿಗೆ ತಲುಪಿದ್ದಾರೆ.

ಏಪ್ರಿಲ್ 22, 2026 ರಂದು ಹರಿದಾಡುತ್ತಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ, ಕಣ್ಣೀರಿಟ್ಟಿದ್ದ ಅದೇ ಯುವತಿ ಕೊನೆಗೂ ಸಮಯಕ್ಕೆ ಸರಿಯಾಗಿ ತನ್ನ ಮತಗಟ್ಟೆಗೆ ಬಂದು ಮತ ಚಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. “ಧೈರ್ಯ ಬಿಡದೆ ಮನೆಗೆ ಬಂದು ಮತ ಚಲಾಯಿಸಿದ್ದಾರೆ” ಎಂಬ ಟ್ವೀಟ್‌ಗಳು ಈಗ ಅಭಿಮಾನಿಗಳ ವಲಯದಲ್ಲಿ ಸಂಚಲನ ಮೂಡಿಸಿವೆ. ಇನ್ನುಳಿದಂತೆ ತಮಿಳುನಾಡು ಚುನಾವಣೆಯಲ್ಲಿ ನಟ ಅಜಿತ್ ಕುಮಾರ್ ಮೊದಲನೆಯವರಾಗಿ ಮತ ಚಲಾಯಿಸಿದರೆ, ನಂತರ ರಜನಿಕಾಂತ್, ತ್ರಿಷಾ, ವಿಕ್ರಮ್ ಮತ್ತು ಸೂರ್ಯ ಸೇರಿದಂತೆ ದಿಗ್ಗಜ ನಟರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುವ ಮೂಲಕ ಸಾರ್ವಜನಿಕರಿಗೆ ಮಾದರಿಯಾದರು.

Continue Reading

Latest

ಸಮಂತಾ ಕೇಳಿದ ಪ್ರಶ್ನೆಗೆ ದಿಗಂತ್ ಶಾಕ್! ‘ದೂದ್ ಪೇಡ’ ಅಂದ್ರೆ ಯಾರು ಎಂದಿದ್ದಕ್ಕೆ ‘ಚಾಕೊಲೇಟ್ ಹೀರೊ’ ನೀಡಿದ ರಿಯಾಕ್ಷನ್ ಹೇಗಿತ್ತು?

VISTARANEWS.COM


on

ಕನ್ನಡ ಚಿತ್ರರಂಗದ ಚಾಕೊಲೇಟ್ ಹೀರೊ ದಿಗಂತ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಈಗ ಭರ್ತಿ 20 ವರ್ಷಗಳಾಗಿವೆ. 2006ರಲ್ಲಿ ‘ಮಿಸ್ ಕ್ಯಾಲಿಫೋರ್ನಿಯಾ’ ಮೂಲಕ ಆರಂಭವಾದ ಇವರ ಸಿನಿ ಪಯಣ ಇಂದು ‘ರುದ್ರ ಕಾಲ’ ಎಂಬ ವಿಭಿನ್ನ ಸಬ್ಜೆಕ್ಟ್‌ನ ಸಿನಿಮಾವರೆಗೆ ಬಂದು ನಿಂತಿದೆ. ಇತ್ತೀಚೆಗೆ ಈ ಚಿತ್ರದ ಪೋಸ್ಟರ್ ಅನ್ನು ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅನಾವರಣಗೊಳಿಸಿದ್ದರು. ಈ ವೇಳೆ ನಡೆದ ಒಂದು ತಮಾಷೆಯ ಪ್ರಸಂಗದ ಬಗ್ಗೆ ದಿಗಂತ್ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಪೋಸ್ಟರ್ ಲಾಂಚ್ ಆದ ಮೇಲೆ ಯೂಟ್ಯೂಬ್ ಕಮೆಂಟ್ ಬಾಕ್ಸ್‌ನಲ್ಲಿ ಅಭಿಮಾನಿಗಳು ಸತತವಾಗಿ ‘ದೂದ್ ಪೇಡ’ ಎಂದು ಕರೆಯುತ್ತಿರುವುದನ್ನು ನೋಡಿ ಸಮಂತಾ ಅವರು ಆಶ್ಚರ್ಯಚಕಿತರಾಗಿ ದಿಗಂತ್ ಅವರನ್ನೇ ಪ್ರಶ್ನೆ ಮಾಡಿದ್ದರಂತೆ!

“ಯಾರಿದು ದೂದ್ ಪೇಡ? ಕಮೆಂಟ್ಸ್‌ನಲ್ಲಿ ಯಾಕೆ ಈ ರೀತಿ ಬರೆಯುತ್ತಿದ್ದಾರೆ?” ಎಂದು ಸಮಂತಾ ಕುತೂಹಲದಿಂದ ದಿಗಂತ್ ಅವರನ್ನು ಕೇಳಿದ್ದಾರೆ. ಇದಕ್ಕೆ ಮುಗುಳ್ನಕ್ಕ ದಿಗಂತ್, “ಇದು ನನಗಿರುವ ಬಿರುದು, ‘ಗಾಳಿಪಟ’ ಸಿನಿಮಾದ ನಂತರ ಕನ್ನಡಿಗರು ಪ್ರೀತಿಯಿಂದ ನನ್ನನ್ನು ದೂದ್ ಪೇಡ ಎಂದು ಕರೆಯುತ್ತಾರೆ” ಎಂದು ವಿವರಿಸಿದ್ದಾರೆ. ಸಮಂತಾ ಅವರ ಈ ಮುಗ್ಧ ಪ್ರಶ್ನೆಗೆ ದಿಗಂತ್ ಒಂದು ಕ್ಷಣ ಶಾಕ್ ಆದರೂ, ನಂತರ ತಮ್ಮ ಹೆಸರಿನ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟು ನಗೆ ಬೀರಿದ್ದಾರೆ. ಸಮಂತಾ ಅವರು ದಿಗಂತ್ ಅವರ ಹೊಸ ಚಿತ್ರತಂಡಕ್ಕೆ ಶುಭ ಹಾರೈಸಿದ್ದಲ್ಲದೆ, ನಟನ ವೃತ್ತಿಜೀವನದ 20 ವರ್ಷಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.

ತಮ್ಮ 20 ವರ್ಷಗಳ ಸುದೀರ್ಘ ಪಯಣದ ಬಗ್ಗೆ ಮಾತನಾಡಿದ ದಿಗಂತ್, “ಹಿಂತಿರುಗಿ ನೋಡಿದಾಗ ಒಂದಷ್ಟು ಏಳು-ಬೀಳುಗಳು, ಒಳ್ಳೆಯ ಅನುಭವಗಳು ಸಿಕ್ಕಿವೆ. ‘ರುದ್ರ ಕಾಲ’ ಸಿನಿಮಾದ ಕಥೆ ಇವತ್ತಿನ ಟ್ರೆಂಡ್‌ಗೆ ತಕ್ಕಂತಿದ್ದು, ದೈವಶಕ್ತಿಯ ಎಳೆಯನ್ನು ಹೊಂದಿದೆ. ನಿರ್ದೇಶಕರ ಪ್ರತಿಭೆ ಮತ್ತು ವಿಭಿನ್ನ ಸಬ್ಜೆಕ್ಟ್ ನನ್ನನ್ನು ಈ ಸಿನಿಮಾ ಒಪ್ಪಿಕೊಳ್ಳುವಂತೆ ಮಾಡಿತು” ಎಂದು ಹೇಳಿದ್ದಾರೆ. ಸದ್ಯ ಸಮಂತಾ ಮತ್ತು ದಿಗಂತ್ ನಡುವಿನ ಈ ‘ದೂದ್ ಪೇಡ’ ಸಂಭಾಷಣೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸುತ್ತಿದ್ದಾರೆ

Continue Reading
Advertisement
HD Revanna
Latest4 hours ago

ಸಚಿವ ಜಮೀರ್‌ರಿಂದ ಸಾಕಷ್ಟು ಅನುಭವಿಸಿದ್ದೇನೆ, ಅವರನ್ನು ಮತ್ತೆ ಜೆಡಿಎಸ್‌ಗೆ ಸೇರಿಸಿಕೊಳ್ಳಲ್ಲ; ಕುಮಾರಸ್ವಾಮಿ ಸ್ಪಷ್ಟೋಕ್ತಿ

Latest4 hours ago

ಮತದಾನಕ್ಕೆ ಕ್ಯೂನಲ್ಲಿ ನಿಂತರೂ ಕಷ್ಟ; ನಿಲ್ಲದಿದ್ದರೂ ಕಷ್ಟ: ಹಾಗಾದ್ರೆ ನಟ ಕಮಲ್‌ ಹಾಸನ್‌ ಏನು ಮಾಡಬೇಕಿತ್ತು?

Latest4 hours ago

ವಿಜಯ್ ಪಕ್ಷಕ್ಕೆ ಮತ ಚಲಾಯಿಸಲು ಸಾಧ್ಯವಾಗದೆ ಬಿಕ್ಕಿ ಬಿಕ್ಕಿ ಅತ್ತ ಯುವತಿ! ವಿಡಿಯೋ ವೈರಲ್

Latest5 hours ago

ಸಮಂತಾ ಕೇಳಿದ ಪ್ರಶ್ನೆಗೆ ದಿಗಂತ್ ಶಾಕ್! ‘ದೂದ್ ಪೇಡ’ ಅಂದ್ರೆ ಯಾರು ಎಂದಿದ್ದಕ್ಕೆ ‘ಚಾಕೊಲೇಟ್ ಹೀರೊ’ ನೀಡಿದ ರಿಯಾಕ್ಷನ್ ಹೇಗಿತ್ತು?

Latest5 hours ago

ಮಹಿಳಾ ಮೀಸಲಾತಿ: ಡಿಎಂಕೆ ಹುನ್ನಾರಕ್ಕೆ ರಾಜ್ಯ ಬಲಿ ಕೊಡುತ್ತಿರುವ ಸಿಎಂ ಸಿದ್ದರಾಮಯ್ಯ: ಬಸವರಾಜ ಬೊಮ್ಮಾಯಿ ಆರೋಪ

Latest5 hours ago

ಬೆಸ್ಕಾಂ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಚಾಲನೆ; ಹೆಚ್‌ಟಿ ಗ್ರಾಹಕರಿಗೆ ಅನುಕೂಲ

Latest5 hours ago

ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಭಾರತಕ್ಕೆ ಅವಮಾನ: ಭಾರತ-ಚೀನಾ ‘ನರಕ’ ಎಂದ ಮೈಕೆಲ್ ಸ್ಯಾವೇಜ್ ಪೋಸ್ಟ್ ಹಂಚಿಕೊಂಡ ಅಧ್ಯಕ್ಷ

HD DeveGowda Wont celebrate 92nd birthday
Latest5 hours ago

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಬಸವ ಶ್ರೀ, ಗುರುರಾಜ ಕರ್ಜಗಿ ಅವರಿಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿ

Latest6 hours ago

ಪಶ್ಚಿಮ ಬಂಗಾಳ: ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ; ಥಳಿಸಿದ ಗ್ರಾಮಸ್ಥರು

Latest6 hours ago

ಪಂಚರಾಜ್ಯ ಚುನಾವಣೆ ನಂತರ,ಪೆಟ್ರೋಲ್‌,ಡೀಸೆಲ್‌ ದರ ಏರಿಕೆ ಇಲ್ಲ : ಕೇಂದ್ರದ ಸ್ಪಷ್ಟನೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌