Pavel Durov: ಮದುವೆಯಾಗದೆ 100 ಮಕ್ಕಳಿಗೆ ತಂದೆಯಾದ ಟೆಲಿಗ್ರಾಂ ಸಿಇಒ ಪಾವೆಲ್‌ ದುರೋವ್! ಈತ ರಿಯಲ್‌ ಲೈಫ್‌ 'ವಿಕ್ಕಿ ಡೋನರ್' - Vistara News

ವಿದೇಶ

Pavel Durov: ಮದುವೆಯಾಗದೆ 100 ಮಕ್ಕಳಿಗೆ ತಂದೆಯಾದ ಟೆಲಿಗ್ರಾಂ ಸಿಇಒ ಪಾವೆಲ್‌ ದುರೋವ್! ಈತ ರಿಯಲ್‌ ಲೈಫ್‌ ‘ವಿಕ್ಕಿ ಡೋನರ್’

Pavel Durov: 15 ವರ್ಷದ ಹಿಂದೆ ನನ್ನ ಗೆಳೆಯನೊಬ್ಬ ವಿಚಿತ್ರ ಮನವಿಯೊಂದಿಗೆ ನನ್ನ ಬಳಿ ಬಂದ. ಫಲವತ್ತತೆ (Fertility) ಸಮಸ್ಯೆಯಿಂದ ಬಳಲುತ್ತಿದ್ದು, ನಾನು ನನ್ನ ಹೆಂಡತಿ ಮಕ್ಕಳನ್ನು ಹೊಂದಲು ನೀನು ವೀರ್ಯ ದಾನ ಮಾಡಬೇಕು ಎಂದ. ಇದೆಲ್ಲ ತಮಾಷೆ ಎಂಬುದಾಗಿ ನಾನು ನಕ್ಕೆ. ಆದರೆ, ಆತ ಸೀರಿಯಸ್‌ ಆಗಿದ್ದ ಎಂಬುದಾಗಿ ಪಾವೆಲ್‌ ದುರೋವ್‌ ಅವರು ವೀರ್ಯದಾನದ ಕುರಿತ ಕುತೂಹಲಕರ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.

VISTARANEWS.COM


on

Pavel Durov
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಾಸ್ಕೋ: ವಾಟ್ಸ್‌ಆ್ಯಪ್‌ ರೀತಿಯ ಮೆಸೆಂಜರ್‌ ಆ್ಯಪ್‌ ಆಗಿರುವ ಟೆಲಿಗ್ರಾಂ ಸಿಇಒ ಪಾವೆಲ್‌ ದುರೋವ್‌ (Pavel Durov) ಅವರು ಸ್ಫೋಟಕ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. “ನಾನು ಮದುವೆಯನ್ನೇ ಆಗದೆ 100 ಮಕ್ಕಳ ತಂದೆಯಾಗಿದ್ದೇನೆ” ಎಂದು ಟೆಲಿಗ್ರಾಂ ಆ್ಯಪ್‌ನಲ್ಲಿಯೇ (Telegram App) ಹಂಚಿಕೊಂಡಿದ್ದಾರೆ. ಹೌದು, ವೀರ್ಯ ದಾನದ ಮೂಲಕ ಪಾವೆಲ್‌ ದುರೋವ್‌ ಅವರು 100 ಮಕ್ಕಳ ಜನನಕ್ಕೆ ಕಾರಣರಾಗಿದ್ದಾರೆ. ಆ ಮೂಲಕ ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನ ನಟನೆಯ ವಿಕ್ಕಿ ಡೋನರ್‌ ಸಿನಿಮಾದಂತೆ 39 ವರ್ಷದ ಪಾವೆಲ್‌ ದುರೋವ್‌ ಕೂಡ ನಿಜ ಜೀವನದ ವಿಕ್ಕಿ ಡೋನರ್‌ ಎನಿಸಿದ್ದಾರೆ.

“ನಾನು 100 ಮಕ್ಕಳ ತಂದೆ ಎಂಬುದಾಗಿ ತಿಳಿಸಿದ್ದಾರೆ. ಒಮ್ಮೆಯೂ ಮದುವೆಯಾಗದ, ಏಕಾಂಗಿಯಾಗಿಯೇ ಬದುಕಲು ಇಚ್ಛಿಸಿರುವ ನನಗೆ ಇದು ಹೇಗೆ ಸಾಧ್ಯ” ಎಂದು ಅವರು ಪ್ರಶ್ನೆ ಹಾಕಿದ್ದಾರೆ. ಬಳಿಕ ಇದು ಹೇಗೆ ಸಾಧ್ಯ ಎಂಬುದನ್ನು ವಿವರಿಸಿದ್ದಾರೆ. “15 ವರ್ಷದ ಹಿಂದೆ ನನ್ನ ಗೆಳೆಯನೊಬ್ಬ ವಿಚಿತ್ರ ಮನವಿಯೊಂದಿಗೆ ನನ್ನ ಬಳಿ ಬಂದ. ಫಲವತ್ತತೆ (Fertility) ಸಮಸ್ಯೆಯಿಂದ ಬಳಲುತ್ತಿದ್ದು, ನಾನು ನನ್ನ ಹೆಂಡತಿ ಮಕ್ಕಳನ್ನು ಹೊಂದಲು ನೀನು ವೀರ್ಯ ದಾನ ಮಾಡಬೇಕು” ಎಂದ. “ಇದೆಲ್ಲ ತಮಾಷೆ ಎಂಬುದಾಗಿ ನಾನು ನಕ್ಕೆ. ಆದರೆ, ಆತ ಸೀರಿಯಸ್‌ ಆಗಿದ್ದ” ಎಂಬುದಾಗಿ ಪಾವೆಲ್‌ ದುರೋವ್‌ ತಿಳಿಸಿದ್ದಾರೆ.

“ಮಕ್ಕಳ ಜನನಕ್ಕೆ ಕಾರಣವಾಗುವ ಸಾಮರ್ಥ್ಯ ಇರುವ ವ್ಯಕ್ತಿಯಿಂದ ವೀರ್ಯ ಪಡೆಯಬೇಕು ಎಂಬುದಾಗಿ ವೈದ್ಯರು ಹೇಳಿದ್ದಾರೆ” ಎಂದು ಗೆಳೆಯ ಮನವರಿಕೆ ಮಾಡಿದ. “ವೈದ್ಯರು ಕೂಡ ವೀರ್ಯ ದಾನ ಮಾಡುವುದು ನಾಗರಿಕ ಕರ್ತವ್ಯವಾಗಿದೆ” ಎಂಬುದಾಗಿ ನನ್ನನ್ನು ಒಪ್ಪಿಸಿದರು. “ವೈದ್ಯರು ಮನವರಿಕೆ ಮಾಡಿದ ಬಳಿಕ ನಾನು ವೀರ್ಯ ದಾನ ಮಾಡುತ್ತಲೇ ಬಂದೆ. ಈಗ ನಾನು 100 ಮಕ್ಕಳ ಜನನಕ್ಕೆ ಕಾರಣನಾಗಿದ್ದೇನೆ” ಎಂಬುದಾಗಿ ಟೆಲಿಗ್ರಾಂನಲ್ಲಿ ಪಾವೆಲ್‌ ದುರೋವ್‌ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

“ನಿಯಮಿತವಾಗಿ ನಾನು ವೀರ್ಯವನ್ನು ದಾನ ಮಾಡುತ್ತಲೇ ಬಂದೆ. ಸುಮಾರು 12 ದೇಶಗಳಲ್ಲಿ 100ಕ್ಕೂ ಅಧಿಕ ಮಕ್ಕಳು ನನ್ನಿಂದಾಗಿ ಜನಿಸಿದ್ದಾರೆ ಎಂಬ ಸಂಗತಿ ಗೊತ್ತಾಯಿತು. ಕೆಲ ವರ್ಷಗಳ ಹಿಂದೆ ನಾನು ವೀರ್ಯವನ್ನು ದಾನ ಮಾಡುವುದನ್ನು ನಿಲ್ಲಿಸಿದೆ. ಆದರೆ, ಐವಿಎಫ್‌ ಕ್ಲಿನಿಕ್‌ಗಳಲ್ಲಿ ಈಗಲೂ ನನ್ನ ವೀರ್ಯವನ್ನು ಸಂಗ್ರಹಿಸಿ ಇಟ್ಟಿದ್ದಾರೆ. ನನ್ನ ವೀರ್ಯದಿಂದ ಮಕ್ಕಳು ಜನಿಸುವ ಚಟುವಟಿಕೆಯು ನಡೆಯುತ್ತಲೇ ಇದೆ. ನಾನು ಮಾಡಿದ ಕೆಲಸಕ್ಕೆ ನನಗೆ ಹೆಮ್ಮೆ ಇದೆ. ಬೇರೆಯವರು ಕೂಡ ಇದನ್ನು ಮಾಡಬೇಕು ಎಂಬುದಾಗಿ ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Rajendra Nagar Tragedy: ನೆಲಮಾಳಿಗೆ ಗೇಟ್‌ಗೆ SUV ಕಾರು ಡಿಕ್ಕಿ ಹೊಡೆದಿದ್ದ ಚಾಲಕ ಅರೆಸ್ಟ್‌- ವಿಡಿಯೋ ವೈರಲ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Street Girlfriends: 115 ರೂ.ಗೆ ಚುಂಬನ, 11 ರೂ.ಗೆ ಬಿಸಿ ಅಪ್ಪುಗೆಯ ಸುಖ; ಸ್ಟ್ರೀಟ್‌ ಗರ್ಲ್‌ಫ್ರೆಂಡ್ ಟ್ರೆಂಡ್‌!

Street Girlfriends: ಕೆಲವೊಮ್ಮೆ ಹೆಗಲ ಮೇಲೆ ಬಿದ್ದ ಜವಾಬ್ದಾರಿಗಳ ಹೊರೆ ಯಾವುದೇ ಕೆಲಸವಾದರೂ ಸೈ ಅನ್ನುವ ಹಾಗೇ ಮಾಡುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಚೀನಾದಲ್ಲಿ ಈಗ ಸ್ಟ್ರೀಟ್ ಗರ್ಲ್‌ಫ್ರೆಂಡ್‌ ಟ್ರೆಂಡ್ ಹುಟ್ಟಿಕೊಂಡಿದೆ. ಚೀನಾದ ಯುವತಿಯರು ಹಣಕ್ಕಾಗಿ ಮುತ್ತು ಕೊಡುವುದು, ಅಪ್ಪಿಕೊಳ್ಳುವುದು, ಒಟ್ಟಿಗೆ ಸಿನಿಮಾ ನೋಡುವುದು, ಮನೆಗೆಲಸಕ್ಕೆ ಸಹಾಯ ಮಾಡುವುದು, ಒಟ್ಟಿಗೆ ಮದ್ಯಪಾನ ಮಾಡುವುದು ಮುಂತಾದವುಗಳ ಮೂಲಕ ಯುವಕರನ್ನು ಆಕರ್ಷಿಸುತ್ತಿದ್ದಾರೆ. ಆದರೆ ಇದರಲ್ಲಿ ಮಹಿಳೆಯರು ಯಾವುದೇ ರೀತಿಯ ದೈಹಿಕ ಸಂಬಂಧ ಹೊಂದುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

VISTARANEWS.COM


on

Viral News
Koo


ಕೆಲವು ಜನರ ಪರಿಸ್ಥಿತಿ ಹೇಗಿರುತ್ತದೆ ಅಂದರೆ ಜೀವನ ನಡೆಸಲು ಒಂದು ದಿನದ ಊಟಕ್ಕೂ ಪರದಾಡಬೇಕಾಗುತ್ತದೆ. ತಮ್ಮ ಜೊತೆಗೆ ತಮ್ಮ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಂಡರ ಕತೆ ಇನ್ನೂ ಶೋಚನೀಯವಾಗಿದೆ. ಹಾಗಾಗಿ ಚೀನಾದಲ್ಲಿ ಕೆಲಸದ ಜೊತೆಗೆ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುವ ಒತ್ತಡ ಚೀನಾದ ಯುವತಿಯರಿಗೆ ಹೆಚ್ಚಾಗಿದ್ದ ಪರಿಣಾಮ ಅವರು ಬೀದಿಯಲ್ಲಿ ಹೋಗುವ ದಾರಿಹೋಕರ ಜೊತೆ ಭಾವನಾತ್ಮಕ ಸಂಪರ್ಕಗಳನ್ನು ಬೆಳೆಸುವ ವ್ಯಾಪಾರ ಮಾಡುತ್ತಿದ್ದಾರೆ. ಹುಡುಗಿಯರು ಹಣಕ್ಕಾಗಿ ಇಂತಹ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Street Girlfriends) ಆಗಿದೆ.

Viral News
Viral News

ಚೀನಾದ ಯುವತಿಯರು ಹಣಕ್ಕಾಗಿ ಮುತ್ತು ಕೊಡುವುದು, ಅಪ್ಪಿಕೊಳ್ಳುವುದು, ಒಟ್ಟಿಗೆ ಸಿನಿಮಾ ನೋಡುವುದು, ಮನೆಗೆಲಸಕ್ಕೆ ಸಹಾಯ ಮಾಡುವುದು, ಒಟ್ಟಿಗೆ ಮದ್ಯಪಾನ ಮಾಡುವುದು ಮುಂತಾದವುಗಳ ಮೂಲಕ ಯುವಕರನ್ನು ಆಕರ್ಷಿಸುತ್ತಿದ್ದಾರೆ. ಆದರೆ ಇದರಲ್ಲಿ ಮಹಿಳೆಯರು ಯಾವುದೇ ರೀತಿಯ ದೈಹಿಕ ಸಂಬಂಧ ಹೊಂದುವುದಿಲ್ಲ ಎಂಬುದಾಗಿ ಖಡಕ್‌ ಹಾಕಿ ತಿಳಿಸುತ್ತಿದ್ದಾರೆ. ಬೀದಿಗಳಲ್ಲಿ ಕುಳಿತ ಯುವತಿಯರು ಒಂದು ಬೋರ್ಡ್‌ನಲ್ಲಿ ದರಗಳನ್ನು ಪಟ್ಟಿ ಮಾಡಿದ್ದಾರೆ ಮತ್ತು ಅದರ ಜೊತೆಗೆ ‘ನೋ ಸೆಕ್ಸ್’ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಇವರದೇನಿದ್ದರೂ ʼಸ್ಪರ್ಶ ಸುಖʼದ ವ್ಯವಹಾರ ಮಾತ್ರ!

Viral News
Viral News

ಇತ್ತೀಚೆಗೆ, ಖ್ಯಾತ ಇಂಟರ್ನೆಟ್ ಬಳಕೆದಾರರು ಶೆನ್ಜೆನ್‍ನ ಗದ್ದಲದ ಬೀದಿಗಳಲ್ಲಿ ಯುವತಿಯರ ಈ ರೀತಿಯ ವ್ಯಾಪಾರವನ್ನು ನೋಡಿದ್ದಾರೆ. ಯುವತಿಯರು ಹಣಕ್ಕಾಗಿ ಬೀದಿಯಲ್ಲಿ ಅಪ್ಪುಗೆ, ಚುಂಬನ ಮುಂತಾದವುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಡಿದ್ದು, ಚರ್ಚೆಗೆ ಕಾರಣವಾಗಿದೆ. ಶೆನ್ಜೆನ್‍ನ ಸುರಂಗಮಾರ್ಗ ನಿಲ್ದಾಣದ ಪಕ್ಕದಲ್ಲಿ, ಯುವತಿಯೊಬ್ಬಳು “ಅಪ್ಪುಗೆಗೆ ಒಂದು ಯುವಾನ್ (14 ಯುಎಸ್ ಸೆಂಟ್ಸ್), ಚುಂಬನಕ್ಕಾಗಿ 10 ಯುವಾನ್, ಒಟ್ಟಿಗೆ ಚಲನಚಿತ್ರವನ್ನು ವೀಕ್ಷಿಸಲು 15 ಯುವಾನ್, ಮನೆಕೆಲಸಗಳಲ್ಲಿ ಸಹಾಯ ಮಾಡಲು 20 ಯುವಾನ್ (ಯುಎಸ್ $ 2.8), ನಿಮ್ಮೊಂದಿಗೆ ಕುಡಿಯಲು ಗಂಟೆಗೆ 40 ಯುವಾನ್” ಎಂಬ ಫಲಕದೊಂದಿಗೆ ಸ್ಟಾಲ್ ಅನ್ನು ಹಾಕಿದ್ದಾಳೆ. ಆಕೆಯ ಜೊತೆಗೆ ಇತರ ಇಬ್ಬರು ಮಹಿಳೆಯರು ಈ ಫಲಕದೊಂದಿಗೆ ಪಾದಚಾರಿಗಳು ನಡೆದಾಡುವ ಬೀದಿ ಚೌಕದಲ್ಲಿ ಮಳಿಗೆಗಳನ್ನು ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಇದರಿಂದ ಅವರು ದಿನಕ್ಕೆ 100 ಯುವಾನ್ ಗಳಿಸಬಹುದು ಎಂದು ವರದಿಯಾಗಿದೆ. 1 ಯುವಾನ್‌ ಅಂದರೆ 11.55 ರೂಪಾಯಿ.

Viral News
Viral News

ಸ್ಟ್ರೀಟ್ ಗರ್ಲ್‌ಫ್ರೆಂಡ್‌ ಸೋಶಿಯಲ್ ಮೀಡಿಯಾದಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. “ಇದರಿಂದ ಈ ಹುಡುಗಿಯರು ವಾರಾಂತ್ಯದಲ್ಲಿ ಸಮಯವನ್ನು ಕಳೆಯಬಹುದು ಮತ್ತು ಅನೇಕ ಆಸಕ್ತಿದಾಯಕ ಜನರನ್ನು ಭೇಟಿಯಾಗಬಹುದು. ನಾನು ಅವರೊಂದಿಗೆ ಚಾಟ್ ಮಾಡಲು ಪ್ರಯತ್ನಿಸಲು ಇಷ್ಟಪಡುತ್ತೇನೆ” ಎಂದು ಒಬ್ಬರು ಬರೆದಿದ್ದಾರೆ.

“ಸ್ಟ್ರೀಟ್ ಗರ್ಲ್‌ಫ್ರೆಂಡ್ ಚಟುವಟಿಕೆಯು ಗ್ರಾಹಕರು ಮತ್ತು ಹುಡುಗಿಯರಿಬ್ಬರಿಗೂ ಸ್ವಯಂಪ್ರೇರಿತವಾಗಿದೆ. ಅಲ್ಲದೆ, ಒತ್ತಡವನ್ನು ನಿವಾರಿಸಲು ಮತ್ತು ಸಾಮಾಜಿಕವಾಗಿ ಬೆರೆಯಲು ಇದನ್ನು ಒಂದು ಮಾರ್ಗವೆಂದು ಪರಿಗಣಿಸಬಹುದು” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಆದರೆ ಇನ್ನೊಬ್ಬರು “ಮಹಿಳೆಯರ ಒಡನಾಟಕ್ಕೆ ಬೆಲೆ ತೆರುವುದು ಅಗೌರವ ಮತ್ತು ಅವರ ಘನತೆಯನ್ನು ದುರ್ಬಲಗೊಳಿಸುತ್ತದೆ.” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಚ್ಛೇದನದ ಬಳಿಕ ಪತ್ನಿಗೆ ದುಬಾರಿ ʼಜೀವನಾಂಶʼ ನೀಡಿದ ಬಾಲಿವುಡ್ ಸ್ಟಾರ್‌ಗಳಿವರು!

“ಇದು ಕಾನೂನುಬಾಹಿರವಾಗಿರಬಹುದು. ಹುಡುಗಿಯರು ತಮ್ಮ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸಬೇಕು” ಎಂದು ಇನ್ನೊಬ್ಬ ವ್ಯಕ್ತಿ ಹೇಳಿದ್ದಾರೆ. ಈ ಬಗ್ಗೆ ವಕೀಲರೊಬ್ಬರು ಪೋಸ್ಟ್ ಮಾಡಿ, “ಸ್ಟ್ರೀಟ್ ಗರ್ಲ್‍ಫ್ರೆಂಡ್’ ಸೇವೆಯು ಪ್ರಸ್ತುತ ಅಸ್ತಿತ್ವದಲ್ಲಿರುವ ಕಾನೂನುಗಳ ಚೌಕಟ್ಟಿನ ಹೊರಗೆ ಕಾರ್ಯನಿರ್ವಹಿಸುತ್ತದೆ ಮತ್ತು ಇದು ವೇಶ್ಯಾವಾಟಿಕೆ ಅಥವಾ ಲೈಂಗಿಕ ಸೇವಾ ವಹಿವಾಟುಗಳಾಗಿ ರೂಪಾಂತರಗೊಳ್ಳುವ ಅಪಾಯವನ್ನು ಹೊಂದಿದೆ ಎಂಬುದಾಗಿ ತಿಳಿಸಿದ್ದಾರೆ.

Continue Reading

ಕ್ರೈಂ

Murder Attempt: ದಟ್ಟ ಅರಣ್ಯದಲ್ಲಿ ಮಹಿಳೆಯನ್ನು ಸರಪಳಿಯಿಂದ ಕಟ್ಟಿ ಪರಾರಿಯಾದ ಮಾಜಿ ಪತಿ!

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೋನುರ್ಲಿ ಗ್ರಾಮದ ಕಾಡಿನಲ್ಲಿ 50 ವರ್ಷದ ಅಮೆರಿಕನ್ ಮಹಿಳೆಯೊಬ್ಬರನ್ನು ಆಕೆಯ ಮಾಜಿ ಪತಿ ಮರಕ್ಕೆ ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕಿ (Murder Attempt) ಹೋಗಿದ್ದಾಗಿ ತಿಳಿದು ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಾಗಿ ತಮಿಳುನಾಡು, ಗೋವಾದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

VISTARANEWS.COM


on

By

Murder Attempt
Koo

ಮುಂಬಯಿ: ದಟ್ಟವಾದ ಅರಣ್ಯದಲ್ಲಿ (forest area) ಅಮೆರಿಕನ್ ಮಹಿಳೆಯೊಬ್ಬರನ್ನು (American woman) ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿ (Murder Attempt) ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಮಹಾರಾಷ್ಟ್ರ ಪೊಲೀಸರು (Maharashtra Police) ಆಕೆಯನ್ನು ರಕ್ಷಿಸಿದ್ದಾರೆ. ಆಕೆಯ ಮಾಜಿ ಪತಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೋನುರ್ಲಿ ಗ್ರಾಮದ ಕಾಡಿನಲ್ಲಿ 50 ವರ್ಷದ ಲಲಿತಾ ಕಯಿ ಕುಮಾರ್ ಎಂಬಾಕೆಯನ್ನು ಮರಕ್ಕೆ ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕಲಾಗಿತ್ತು. ತನ್ನ ಮಾಜಿ ಪತಿ ತನ್ನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿ ಹೋಗಿರುವುದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ ಎನ್ನಲಾಗಿದೆ.

ಮಹಿಳೆಯ ಕೂಗು ಕೇಳಿದ ಕುರುಬನೊಬ್ಬ ಸರಪಳಿಯಲ್ಲಿ ಸಿಲುಕಿ ಸಂಕಷ್ಟದಲ್ಲಿರುವ ಆಕೆಯನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರಿಗೆ ಆಕೆಯ ಬಳಿ ಆಧಾರ್ ಕಾರ್ಡ್‌ ಸಿಕ್ಕಿದ್ದು, ಇದರಿಂದ ಆಕೆಯ ತಮಿಳುನಾಡು ವಿಳಾಸ ಸಿಕ್ಕಿದೆ. ಜೊತೆಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಪಾಸ್‌ಪೋರ್ಟ್‌ನ ಫೋಟೋಕಾಪಿಯೂ ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ.

ಆಕೆಯ ವೀಸಾ ಅವಧಿ ಮುಗಿದಿದೆ ಮತ್ತು ಆಕೆಯ ರಾಷ್ಟ್ರೀಯತೆಯನ್ನು ಖಚಿತಪಡಿಸಿಕೊಳ್ಳಲು ಆಕೆಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಪೊಲೀಸರಿಗೆ ದೊರೆತ ಪ್ರಾಥಮಿಕ ಮಾಹಿತಿಯಂತೆ ಮಹಿಳೆ ಕಳೆದ 10 ವರ್ಷಗಳಿಂದ ಭಾರತದಲ್ಲಿದ್ದಾರೆ. ಮಹಿಳೆ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಒಂದೆರಡು ದಿನಗಳಿಂದ ಏನನ್ನೂ ಸೇವಿಸದ ಕಾರಣ ಮತ್ತು ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ದುರ್ಬಲವಾಗಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಕೆಯನ್ನು ಮೊದಲು ಕೊಂಕಣ ಪ್ರದೇಶದ ಸಾವಂತವಾಡಿಯ ಆಸ್ಪತ್ರೆಗೆ ಸೇರಿಸಿ ಬಳಿಕ ಸಿಂಧುದುರ್ಗದ ಓರೋಸ್‌ಗೆ ಕರೆದೊಯ್ಯಲಾಯಿತು. ಆಕೆಯ ಮಾನಸಿಕ ಮತ್ತು ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಹೆಚ್ಚಿನ ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಆಕೆ ಅಪಾಯದಿಂದ ಪಾರಾಗಿದ್ದಾಳೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಆಕೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಆಕೆಯ ಬಳಿ ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ಗಳನ್ನು ನಾವು ಕಂಡುಕೊಂಡಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಮಹಿಳೆ ಬರೆದಿರುವ ಟಿಪ್ಪಣಿಯನ್ನು ಆಧರಿಸಿ ಆಕೆಯ ಮಾಜಿ ಪತಿ ವಿರುದ್ಧ ಕೊಲೆ ಯತ್ನ, ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕೃತ್ಯ ಮತ್ತು ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ಅಕ್ರಮ ಬಂಧನದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಸಿಂಧುದುರ್ಗ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸೌರಭ್ ಅಗರವಾಲ್ ಹೇಳಿದ್ದಾರೆ.

ಮಹಿಳೆಯ ಹೇಳಿಕೆಯನ್ನು ಇನ್ನೂ ಅಧಿಕೃತವಾಗಿ ದಾಖಲಿಸಿಕೊಳ್ಳಬೇಕಾಗಿದೆ. ಆದರೆ ಪ್ರಕರಣದ ದಾಖಲಾದ ಅನಂತರ, ಪೊಲೀಸ್ ತಂಡಗಳು ತನಿಖೆಯನ್ನು ಪ್ರಾರಂಭಿಸಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ: Murder Case : ಇನ್‌ಸ್ಟಾಗ್ರಾಮ್‌ ಗೆಳೆಯನಿಗಾಗಿ ಗಂಡನನ್ನೇ ಕೊಲೆ ಮಾಡಿಸಿದ ಐನಾತಿ ಹೆಂಡತಿ

ಪೊಲೀಸರು ಆಕೆಯಿಂದ ವಶಪಡಿಸಿಕೊಂಡಿರುವ ಪ್ರಿಸ್ಕ್ರಿಪ್ಷನ್‌ಗಳು ಆಕೆ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಸೂಚಿಸುತ್ತದೆ. ಆಕೆಯ ಪತಿ ಮತ್ತು ಇತರ ಸಂಬಂಧಿಕರನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ಪ್ರಸ್ತುತ ತಮಿಳುನಾಡು ಮತ್ತು ಗೋವಾದಲ್ಲಿವೆ ಎಂದು ಅವರು ಹೇಳಿದರು. ತನಿಖೆಯ ಭಾಗವಾಗಿ ಆಕೆಯ ಸಂಬಂಧಿಕರನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ತಮಿಳುನಾಡು, ಗೋವಾ ಮತ್ತು ಇತರ ಕೆಲವು ಸ್ಥಳಗಳಿಗೆ ತೆರಳಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

Continue Reading

Latest

Viral Video: ಸಾಕ್ಸ್‌ನೊಳಗೆ ವಿದೇಶಿ ಕರೆನ್ಸಿ ಕಳ್ಳಸಾಗಣೆ; ಸಿಕ್ಕಿಬಿದ್ದ ಪಾಕ್‌ ಗಗನಸಖಿ!

Viral Video ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್‌ಲೈನ್ಸ್‌ನಲ್ಲಿ ಗಗನಸಖಿಯೊಬ್ಬಳು ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾಳೆ . ಲಾಹೋರ್‌ನ ಅಲ್ಲಮಾ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಕಸ್ಟಮ್ಸ್ ಅಧಿಕಾರಿಗಳು, ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಮತ್ತು ಇಮಿಗ್ರೇಶನ್ ಅಥಾರಿಟಿಯ ಸಹಯೋಗದೊಂದಿಗೆ, ಗಗನಸಖಿಯೊಬ್ಬಳ ಕಾಲಿನಲ್ಲಿರುವ ಸಾಕ್ಸ್ ಅನ್ನು ಪರಿಶೀಲನೆ ನಡೆಸಲಾಯಿತು. ಆ ವೇಳೆ ಆಕೆಯ ಕಾಲಿನ ಸಾಕ್ಸ್‌ನಲ್ಲಿ ಹಲವು ವಿದೇಶಿ ಕರೆನ್ಸಿಯನ್ನು ಪತ್ತೆಯಾಗಿದೆ. ಹಾಗಾಗಿ ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದಾರೆ.

VISTARANEWS.COM


on

Viral Video
Koo


ವಿಮಾನ ನಿಲ್ದಾಣಗಳಲ್ಲಿ ಕಳ್ಳಸಾಗಾಣಿಕೆ ವ್ಯವಹಾರಗಳು ಹೆಚ್ಚು ನಡೆಯುತ್ತಿರುತ್ತದೆ. ವಿಮಾನ ನಿಲ್ದಾಣದಲ್ಲಿ ಭದ್ರತೆಯ ವ್ಯವಸ್ಥೆಯ ಇದ್ದರೂ ಕೂಡ ಕೆಲವರು ಅವರ ಕಣ್ಣು ತಪ್ಪಿಸಿ ಕಳ್ಳಸಾಗಾಣಿಕೆಯಲ್ಲಿ ತೊಡಗುತ್ತಾರೆ. ಹೆಚ್ಚಾಗಿ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಳ್ಳಸಾಗಾಣಿಕೆಯಲ್ಲಿ ತೊಡಗಿರುವ ವಿಚಾರ ಕೇಳಿಬರುತ್ತಿತ್ತು. ಆದರೆ ಇತ್ತೀಚಿಗೆ ವಿಮಾನದಲ್ಲಿ ಕೆಲಸ ಮಾಡುವ ಗಗನಸಖಿಯರು ಕೂಡ ಇಂತಹ ನೀಚ ಕೃತ್ಯದಲ್ಲಿ ತೊಡಗುತ್ತಿವುದು ವರದಿಯಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ (Viral Video) ಆಗಿದೆ.

ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್‌ಲೈನ್ಸ್‌ನಲ್ಲಿ ಗಗನಸಖಿಯೊಬ್ಬಳು ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾಳೆ. ಈ ಬಾರಿ ಗಗನಸಖಿ ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾಳೆ . ಲಾಹೋರ್‌ನ ಅಲ್ಲಮಾ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು, ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಮತ್ತು ಇಮಿಗ್ರೇಶನ್ ಆಥೋರಿಟಿಯ ಸಹಯೋಗದೊಂದಿಗೆ ಗಗನಸಖಿಯೊಬ್ಬಳ ಕಾಲಿನಲ್ಲಿರುವ ಸಾಕ್ಸ್ ಅನ್ನು ಪರಿಶೀಲನೆ ನಡೆಸಲಾಯಿತು. ಆ ವೇಳೆ ಆಕೆಯ ಕಾಲಿನ ಸಾಕ್ಸ್ ನಲ್ಲಿ ಹಲವು ವಿದೇಶಿ ಕರೆನ್ಸಿಯನ್ನು ಪತ್ತೆಯಾಗಿದೆ. ಹಾಗಾಗಿ ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಮಾಹಿತಿ ಪ್ರಕಾರ, ಕಸ್ಟಮ್ಸ್ ಅಧಿಕಾರಿಗಳು ಗಗನಸಖಿಯ ಬ್ಯಾಗ್‍ನಲ್ಲಿ 37,318 ಡಾಲರ್ (ಸುಮಾರು 3,124,356 ಭಾರತೀಯ ರೂಪಾಯಿಗಳು) ಮತ್ತು 40,000 ಸೌದಿ ರಿಯಾಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು 892,653 ಭಾರತೀಯ ರೂಪಾಯಿಗಳಾಗಿವೆ ಎನ್ನಲಾಗಿದೆ. ಗಗನಸಖಿ ಜೆಡ್ಡಾಗೆ ಹೋಗಲು ಪಿಐಎ ವಿಮಾನವನ್ನು ಹತ್ತಬೇಕಾಗಿತ್ತು. ಆಗ ಅಧಿಕಾರಿಗಳು ಆಕೆಯ ಮೇಲೆ ಅನುಮಾನಗೊಂಡು ಅವಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಆಕೆ ಈಗಾಗಲೇ ಬಚ್ಚಿಟ್ಟ ಪಾಕಿಸ್ತಾನಿ ರೂಪಾಯಿಗಳ ಹಲವಾರು ಲಕ್ಷ ರೂಪಾಯಿಗಳ ಕರೆನ್ಸಿಯನ್ನು ನಂತರ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಉಪ ಕಲೆಕ್ಟರ್ ಕಸ್ಟಮ್ಸ್ ರಾಜಾ ಬಿಲಾಲ್ ಗಗನಸಖಿಯನ್ನು ಬಂಧಿಸಿರುವುದಾಗಿ ದೃಢಪಡಿಸಿದ್ದಾರೆ ಮತ್ತು ಕರೆನ್ಸಿ ಕಳ್ಳಸಾಗಣೆಯನ್ನು ತಡೆಗಟ್ಟುವ ಬಗ್ಗೆ ಸರ್ಕಾರ ಗಂಭೀರವಾಗಿದೆ ಎಂದು ಹೇಳಿದ್ದಾರೆ. ಗಗನಸಖಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕ್ಕಾಗಿ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: 20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಚಿನ್ನಾಭರಣ ಎಗರಿಸಿದ್ದ ವಂಚಕ ಪೊಲೀಸ್‌ ಬಲೆಗೆ ಬಿದ್ದಿದ್ದು ಹೇಗೆ?

ಈ ಹಿಂದೆ ಪಾಕಿಸ್ತಾನದ ಗಗನಸಖಿಗೆ ಸಂಬಂಧಪಟ್ಟ ಇನ್ನೊಂದು ಹಗರಣ ಬೆಳಕಿಗೆ ಬಂದಿತ್ತು. ಮಾರ್ಚ್‍ನಲ್ಲಿ, ಪಿಐಎ ಗಗನಸಖಿ ಹೀನಾ ಸಾನಿ ಅವರನ್ನು ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಅನೇಕ ಪಾಸ್‍ಪೋರ್ಟ್‍ಗಳನ್ನು ಹೊಂದಿದ್ದಕ್ಕಾಗಿ ಬಂಧಿಸಲಾಗಿತ್ತು. ಇದು ಗಂಭೀರವಾದ ಅಪರಾಧವಾದ ಕಾರಣ, ಈ ಪ್ರಕರಣವು ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯೊಳಗೆ ತೊಂದರೆಯನ್ನುಂಟುಮಾಡಿತ್ತು. ಈ ಪ್ರಕರಣ ಪಿಐಎಯೊಳಗೆ ಭದ್ರತೆ ಮತ್ತು ಸಮಗ್ರತೆಯ ಕಾಳಜಿಯನ್ನು ಒತ್ತಿಹೇಳಿದೆ, ಇದರಿಂದ ವಿಮಾನಸಂಸ್ಥೆ ಆಂತರಿಕ ಸವಾಲುಗಳನ್ನು ಎದುರಿಸುವಂತಾಗಿದೆ ಮತ್ತು ಅದರ ಸಿಬ್ಬಂದಿ ತೊಡಗಿರುವ ಕಳ್ಳಸಾಗಣೆ ಮತ್ತು ಇತರ ಅಪರಾಧಗಳಿಂದ ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಿದೆ ಎನ್ನಲಾಗಿದೆ.

Continue Reading

ದೇಶ

Russia-Ukraine War: ಕೆಲಸ ಕೊಡಿಸ್ತೇವೆ ಅಂತಾ ಸೇನೆಗೆ ತಳ್ಳಿದ್ರು..ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಭಾರತೀಯ ಯುವಕ ಸಾವು

Russia-Ukraine War:ಉಕ್ರೇನ್‌ ವಿರುದ್ಧ ಹೋರಾಡಲು ರಷ್ಯಾದ ಸೇನೆಯಿಂದ ಕಳುಹಿಸಲ್ಪಟ್ಟ ರವಿ ಮೌನ್ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. ಇನ್ನು ಈ ವಿಚಾರವನ್ನು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ ಎಂದು ಅವರ ಸಹೋದರ ಅಜಯ್ ಮೌನ್ ಹೇಳಿದ್ದಾರೆ. ಹರಿಯಾಣದ ಕೈತಾಲ್ ಜಿಲ್ಲೆಯ ಮತ್ತೂರ್ ಗ್ರಾಮದವರಾದ ರವಿಮೌನ್ ಜನವರಿ 13 ರಂದು ಡ್ರೈವರ್‌ ಕೆಲಸಕ್ಕಾಗಿ ರಷ್ಯಾಕ್ಕೆ ಹೋಗಿದ್ದರು ಎನ್ನಲಾಗಿದೆ.

VISTARANEWS.COM


on

Russia Ukraine War
Koo

ನವದೆಹಲಿ: ಭಾರತೀಯ ಯುವಕರನ್ನು ಬಲವಂತವಾಗಿ ರಷ್ಯಾ ಸೇನೆ(Russia Army)ಗೆ ಸೇರಿಸಿಕೊಳ್ಳುತ್ತಿರುವ ಪ್ರಕರಣ ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಉಕ್ರೇನ್‌ ವಿರುದ್ಧದ ಯುದ್ಧ(Russia-Ukraine War)ದಲ್ಲಿ ಭಾರತೀಯ ಯುವಕನೋರ್ವ ಪ್ರಾಣ ಕಳೆದುಕೊಂಡಿದ್ದಾನೆ. ಇನ್ನು ಸಾವನ್ನಪ್ಪಿರುವ ಯುವಕನನ್ನು 22 ವರ್ಷದ ಹರಿಯಾಣ ಮೂಲದ ರವಿ ಮೌನ್‌ ಎಂದು ಗುರುತಿಸಲಾಗಿದೆ.

ಉಕ್ರೇನ್‌ ವಿರುದ್ಧ ಹೋರಾಡಲು ರಷ್ಯಾದ ಸೇನೆಯಿಂದ ಕಳುಹಿಸಲ್ಪಟ್ಟ ರವಿ ಮೌನ್ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. ಇನ್ನು ಈ ವಿಚಾರವನ್ನು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ ಎಂದು ಅವರ ಸಹೋದರ ಅಜಯ್ ಮೌನ್ ಹೇಳಿದ್ದಾರೆ. ಹರಿಯಾಣದ ಕೈತಾಲ್ ಜಿಲ್ಲೆಯ ಮತ್ತೂರ್ ಗ್ರಾಮದವರಾದ ರವಿಮೌನ್ ಜನವರಿ 13 ರಂದು ಡ್ರೈವರ್‌ ಕೆಲಸಕ್ಕಾಗಿ ರಷ್ಯಾಕ್ಕೆ ಹೋಗಿದ್ದರು ಎನ್ನಲಾಗಿದೆ.

ಕೆಲಸ ಕೊಡಿಸೋದಾಗಿ ಏಜೆಂಟ್‌ ಒಂದು ನಂಬಿಸಿ ರವಿ ಅವರನ್ನು ರಷ್ಯಾಗೆ ಕಳುಹಿಸಿತ್ತು. ಆದರೆ ಅಲ್ಲಿ ಅವರನ್ನು ಬಲವಂತವಾಗಿ ಮಿಲಿಟರಿ ಹಾಕಲಾಯಿತು ಎಂದು ಅವರ ಸಹೋದರ ಹೇಳಿದ್ದಾರೆ. ಅಜಯ್ ಮೌನ್ ಜುಲೈ 21 ರಂದು ತನ್ನ ಸಹೋದರನ ಇರುವಿಕೆಯ ಮಾಹಿತಿಯನ್ನು ಕೋರಿ ರಾಯಭಾರ ಕಚೇರಿಗೆ ಪತ್ರ ಬರೆದಿದ್ದರು. ಅದಕ್ಕೆ ಉತ್ತರವಾಗಿ ನಿಮ್ಮ ಸೋದರ ಸತ್ತಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ ಎಂದು ಅವರು ಹೇಳಿದರು. ಮೃತದೇಹವನ್ನು ಗುರುತಿಸಲು ಡಿಎನ್‌ಎ ಪರೀಕ್ಷೆಯ ವರದಿಯನ್ನು ಕಳುಹಿಸುವಂತೆ ರಾಯಭಾರ ಕಚೇರಿಯು ಕೇಳಿಕೊಂಡಿದೆ ಎಂದು ಕುಟುಂಬ ತಿಳಿಸಿದೆ.

ಕೆಲಸಕ್ಕೆಂದು ಹೋದವನು ಹೆಣವಾಗಿ ವಾಪಾಸ್‌

ರವಿ ಸಾವಿನಿಂದ ಅವರ ಕುಟುಂಬ ಸಂಪೂರ್ಣವಾಗಿ ಕಂಗಾಲಾಗಿದೆ. ಅಜಯ್‌ ಮೌನ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರವಿ ಜನವರಿ 13 ರಂದು ರಷ್ಯಾಕ್ಕೆ ಹೋಗಿದ್ದರು. ಒಬ್ಬ ಏಜೆಂಟ್ ಅವರನ್ನು ಸಾರಿಗೆ ಕೆಲಸಕ್ಕಾಗಿ ರಷ್ಯಾಕ್ಕೆ ಕಳುಹಿಸಿದರು. ಆದರೆ, ಅವರನ್ನು ರಷ್ಯಾದ ಸೈನ್ಯಕ್ಕೆ ಸೇರಿಸಲಾಯಿತು. ಉಕ್ರೇನಿಯನ್ ಪಡೆಗಳ ವಿರುದ್ಧ ಹೋರಾಡಲು ಮುಂಚೂಣಿಗೆ ಹೋಗುವಂತೆ ರಷ್ಯಾದ ಸೈನ್ಯವು ತನ್ನ ಸಹೋದರನನ್ನು ಕೇಳಿದೆ. ಇಲ್ಲವಾದರೆ 10 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಹೆದರಿಸಿದ್ದಾರೆ ಎಂದು ಅಜಯ್ ಮೌನ್ ಆರೋಪಿಸಿದರು. ನಾವು ಮಾರ್ಚ್ 12 ರವರೆಗೆ ಸೋದರನ ಜೊತೆ ಸಂಪರ್ಕದಲ್ಲಿದ್ದೆವು. ಆತ ಸಾಕಷ್ಟು ಬೇಸರದಲ್ಲಿದ್ದ ಎಂದು ಅಜಯ್ ಮೌನ್ ಹೇಳಿದ್ದಾರೆ.

ರಷ್ಯಾ ಮಿಲಿಟರಿಗೆ ಸೇರ್ಪಡೆಗೊಂಡ ಭಾರತೀಯ ಪ್ರಜೆಗಳನ್ನು ಶೀಘ್ರ ಬಿಡುಗಡೆ ಮತ್ತು ವಾಪಸಾತಿಯನ್ನು ಖಚಿತಪಡಿಸಿಕೊಳ್ಳುವ ಭಾರತದ ಬೇಡಿಕೆಯನ್ನು ರಷ್ಯಾ ಒಪ್ಪಿಕೊಂಡ ಕೆಲವು ದಿನಗಳ ನಂತರ ಈ ಸುದ್ದಿ ಬಂದಿದೆ ಎಂದಿದ್ದಾರೆ. ಇನ್ನು ರವಿ ಮೌನ್‌ ಅವರ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಅವರ ಕುಟುಂಬಸ್ಥರು ಪ್ರಧಾನಿ ನರೇಂದ್ರ ಮೋದಿಯವರನ್ನು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Business Ideas: 20 ದೇಶಗಳಿಗೆ ಮಣ್ಣಿನ ಪಾತ್ರೆಗಳ ರಫ್ತು; ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದೆ ಈ ಕುಟುಂಬ!

Continue Reading
Advertisement
Kenchanala Marikamba Jatra
ಶಿವಮೊಗ್ಗ3 mins ago

Shivamogga News: ವಿಜೃಂಭಣೆಯಿಂದ ನಡೆದ ಕೆಂಚನಾಲ ಮಾರಿಕಾಂಬಾ ಜಾತ್ರೆ

Aryan Khan
ಸಿನಿಮಾ8 mins ago

Aryan Khan: ದಿಲ್ಲಿಯ ಸಣ್ಣ ಮನೆಯಲ್ಲಿದ್ದ ಶಾರುಖ್‌ ದಂಪತಿ; ಅಲ್ಲಿನ ಬಂಗಲೆಯನ್ನು 37 ಕೋಟಿ ರೂ.ಗೆ ಖರೀದಿಸಿದ ಪುತ್ರ!

IND vs SL
ಪ್ರಮುಖ ಸುದ್ದಿ11 mins ago

IND vs SL : ಭಾರತ ವಿರುದ್ಧದ ಏಕ ದಿನ ಸರಣಿಗೆ ಶ್ರೀಲಂಕಾ ತಂಡ ಪ್ರಕಟ; ಹೊಸ ನಾಯಕನ ಘೋಷಣೆ

ಪ್ರಮುಖ ಸುದ್ದಿ15 mins ago

Wayanad Landslide: ಕೇರಳದಲ್ಲಿ ರಕ್ಷಣೆ, ಪರಿಹಾರ ಕಾರ್ಯಾಚರಣೆಗೆ ಇಬ್ಬರು IAS ಅಧಿಕಾರಿಗಳನ್ನು ನಿಯೋಜಿಸಿದ ಸಿಎಂ ಸಿದ್ದರಾಮಯ್ಯ

Star Saree Styling Tips
ಫ್ಯಾಷನ್16 mins ago

Star Saree Styling Tips: ಎಂಬ್ರಾಯ್ಡರಿ ಸೀರೆಯಲ್ಲಿ ನಟಿ ರಶ್ಮಿಕಾ ಮಂದಣ್ಣರಂತೆ ಕಾಣಿಸಬೇಕೇ? ಈ 5 ಟಿಪ್ಸ್ ಫಾಲೋ ಮಾಡಿ

karnataka Weather Forecast
ಮಳೆ17 mins ago

Karnataka Weather : ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ; ಮಲೆನಾಡಿನ ಶಾಲಾ-ಕಾಲೇಜು ರಜೆ

Love Jihad
ದೇಶ29 mins ago

Love Jihad: ಲವ್‌ ಜಿಹಾದ್‌ ವಿರುದ್ಧ ಯೋಗಿ ದಿಟ್ಟ ಕ್ರಮ; ಇನ್ನು ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ಗ್ಯಾರಂಟಿ!

Tata Motors launched two programs Vidyadhana and Utkarsha to facilitate higher education of technician children
ವಾಣಿಜ್ಯ30 mins ago

Tata Motors: ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಟಾಟಾ ಮೋಟಾರ್ಸ್‌ನಿಂದ ‘ವಿದ್ಯಾಧನ’, ‘ಉತ್ಕರ್ಷ’ ಯೋಜನೆ

ಕರ್ನಾಟಕ39 mins ago

Wayanad Landslide: ಕೇರಳ ಭೂ ಕುಸಿತ; ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲು ಸರ್ಕಾರಕ್ಕೆ ಎಚ್‌ಡಿಕೆ ಸಲಹೆ

Custard Apple Benefits
Latest1 hour ago

Custard Apple Benefits: ಕ್ಯಾನ್ಸರ್‌ ಸೇರಿದಂತೆ ಹಲವು ರೋಗಗಳನ್ನು ತಡೆಯುವ ಶಕ್ತಿ ಸೀತಾಫಲಕ್ಕಿದೆ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ7 hours ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 day ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 day ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ1 day ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌