Tips for Monsoon: ಮಳೆಗಾಲದಲ್ಲಿ ಬಟ್ಟೆಗಳನ್ನು ಗರಿಗರಿಯಾಗಿ ಇರಿಸುವುದು ಹೇಗೆ? - Vistara News

ಲೈಫ್‌ಸ್ಟೈಲ್

Tips for Monsoon: ಮಳೆಗಾಲದಲ್ಲಿ ಬಟ್ಟೆಗಳನ್ನು ಗರಿಗರಿಯಾಗಿ ಇರಿಸುವುದು ಹೇಗೆ?

Tips for Monsoon: ಮಳೆಗಾಲದಲ್ಲಿ ದಿನಬಳಕೆಯ ಟವೆಲ್‌ಗಳನ್ನು ಮುಗ್ಗಲು ವಾಸನೆಯಿಲ್ಲದಂತೆ ಇರಿಸಿಕೊಳ್ಳುವುದು ಹೇಗೆ? ಬೆಡ್‌ಶೀಟ್‌ನಂಥ ದಪ್ಪನೆಯ ವಸ್ತ್ರಗಳಿಂದ ಹಸಿ ವಾಸನೆ ತೆಗೆಯುವುದು ಹೇಗೆ?- ಇಂಥ ಪ್ರಶ್ನೆಗಳು ಭಾರೀ ದೊಡ್ಡದಲ್ಲದಿದ್ದರೂ ಸರಿಯಾಗಿ ನಿರ್ವಹಿಸದಿದ್ದರೆ ಕಿರಿಕಿರಿ ನೀಡುತ್ತವೆ. ಇವಕ್ಕೆಲ್ಲ ಇಲ್ಲಿದೆ ಉತ್ತರ.

VISTARANEWS.COM


on

Tips for Monsoon
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಳೆಗಾಲದಲ್ಲಿ ಒಣಗಿ ಗರಿಯಾದ (Tips for Monsoon) ವಸ್ತ್ರಗಳನ್ನು ಹಾಕಿಕೊಳ್ಳಬೇಕೆಂಬ ಆಸೆ ಎಷ್ಟೋ ಬಾರಿ ಕೈಗೂಡುವುದಿಲ್ಲ. ಹಸಿ ವಾಸನೆ, ಮುಗ್ಗಲು ನಾತ ಇತ್ಯಾದಿಗಳು ಮಳೆಗಾಲದ ಸಂಗಾತಿಗಳಂತೆ ಜೊತೆಗೇ ಇರುತ್ತವೆ. ತೊಳೆದ ವಸ್ತ್ರಗಳಲ್ಲೇ ಇಂಥ ಸಮಸ್ಯೆಗಳಾದರೆ ದಿನವೂ ಒದ್ದೆಯಾಗುವ ಟವೆಲ್‌ಗಳ ಗತಿ ಏನು? ತೆಳುವಾದ ಹತ್ತಿಯ ಟವೆಲ್‌ಗಳಾದರೆ ಕಷ್ಟಪಟ್ಟಾದರೂ ಒಣಗಬಹುದು ಮಾರನೇ ದಿನಕ್ಕೆ. ದಪ್ಪನೆಯ ಟರ್ಕಿ ಟವೆಲ್‌ಗಳಾದರಂತೂ ದಿನವೂ ಅರ್ಧ ಒದ್ದೆಯಾಗಿದ್ದು ಗಬ್ಬು ನಾತ ಬೀರಲು ಪ್ರಾರಂಭಿಸುತ್ತದೆ. ಫಂಗಸ್‌ ಬೆಳೆದು, ಟಬೆಲ್‌ ತುಂಬಾ ಕಪ್ಪು ಚುಕ್ಕಿಗಳ ಚಿತ್ತಾರ ರಚನೆಯಾಗುತ್ತದೆ. ನಿಮ್ಮಿಷ್ಟದ ಟವೆಲ್‌ಗಳನ್ನು ಮಳೆಗಾಲದ ಮೂರು ತಿಂಗಳು ಮುಗಿಯುವಷ್ಟರಲ್ಲಿ ಬಿಸಾಡುವ ಅವಸ್ಥೆ ಬಂದರೆ ಕಷ್ಟತಾನೇ? ಹಾಗಾಗಿ ವರ್ಷ ಋತುವಿನ ಸಮಯದಲ್ಲಿ ಟವೆಲ್‌ಗಳನ್ನು ತಾಜಾ ಇರಿಸಿಕೊಳ್ಳುವುದು ಹೇಗೆ ಎನ್ನುವ ಟಿಪ್ಸ್‌ ಇಲ್ಲಿದೆ.

ಕರ್ಪೂರ

ಮನೆಯಲ್ಲಿ ಆಗೀಗ ಕರ್ಪೂರವನ್ನು ಉರಿಸುವುದು ಇದಕ್ಕೆ ಸರಳವಾದ ಉಪಾಯ. ಮನೆಯೆಲ್ಲ ಹಸಿವಾಸನೆಯಿದ್ದರೆ, ಸಹಜವಾಗಿ ಬಟ್ಟೆಗಳೂ ಮುಗ್ಗಲು ನಾತ ಸೂಸುತ್ತವೆ. ಇವೆಲ್ಲ ಮನೆಯ ಮೂಲೆಗಳಲ್ಲಿ ಕಾಣದಂತೆ ಬೆಳೆಯುವ ಶಿಲೀಂಧ್ರಗಳ ಉಪಟಳದಿಂದ ಆಗುವಂಥದ್ದು. ಬಾಗಿಲು, ಕಿಟಕಿಗಳನ್ನೆಲ್ಲ ಭದ್ರವಾಗಿ ಮುಚ್ಚಿ, ಒಳಗೆ ಒಂದಿಷ್ಟು ಕರ್ಪೂರಗಳನ್ನು ಉರಿಸಿ. ಒಂದರ್ಧ ಗಂಟೆ ಬಾಗಿಲು-ಕಿಟಕಿಗಳನ್ನು ಮುಚ್ಚಿಯೇ ಇರಿಸಿ, ನಂತರ ತೆರೆಯಿರಿ. ಇದರಿಂದ ಶಿಲೀಂಧ್ರಗಳ ವಾಸನೆಯನ್ನು ಹೋಗಲಾಡಿಸಬಹುದು. ಬಟ್ಟೆ ಇರಿಸುವ ಕಪಾಟುಗಳಲ್ಲೂ ಈ ಕರ್ಪೂರಗಳನ್ನು ಒಂದೊಂದಾಗಿ ಮೂಲೆಯಲ್ಲಿರಿಸಿ. ಇದರಿಂದ ಟವೆಲ್‌ ಸೇರಿದಂತೆ ಎಲ್ಲ ವಸ್ತ್ರಗಳ ಮುಗ್ಗಲು ವಾಸನೆ ಕಡಿಮೆಯಾಗುತ್ತದೆ.

ಬೇಕಿಂಗ್‌ ಸೋಡಾ

ವಾಷಿಂಗ್‌ ಮಿಷನ್‌ಗೆ ಟವೆಲ್‌, ಬೆಡ್‌ಶೀಟ್‌ನಂಥ ಭಾರದ ವಸ್ತ್ರಗಳನ್ನು ಹಾಕುವಾಗ ಅರ್ಧ ಚಮಚ ಬೇಕಿಂಗ್‌ ಸೋಡಾ ಸೇರಿಸಿ. ಮಾಮೂಲಿ ಡಿಟರ್ಜಂಟ್‌ ಜೊತೆಗೆ ಇದನ್ನು ಸೇರಿಸಬೇಕು. ಒಂದೊಮ್ಮೆ ವಾಷಿಂಗ್‌ ಮಿಷನ್‌ ಅಲ್ಲದೆಯೆ, ಬಟ್ಟೆಗಳನ್ನು ಬಕೆಟ್‌ನಲ್ಲಿ ನೆನೆಸುವುದಾದರೂ ಇದೇ ಕ್ರಮವನ್ನು ಅನುಸರಿಸಿ. ಇದರಿಂದ ಬಟ್ಟೆಗಳ ಮೇಲಿನ ತೇವದ ಕಲೆಗಳು ಮಾಯವಾಗಿ, ದುರ್ವಾಸನೆಯೂ ದೂರವಾಗುತ್ತದೆ.

ಇಸ್ತ್ರಿ

ದಿನವೂ ಒದ್ದೆಯಾಗುವ ಟವೆಲ್ ಒಣಗುತ್ತಲೇ ಇಲ್ಲ ಎಂದಾದರೆ ಇಸ್ತ್ರಿ ಮಾಡಿ ಹರವಿಡುವುದು ಸುಲಭವಾದ ಉಪಾಯ. ಮಾಡಿದರೆ, ಮನೆಮಂದಿ ಎಲ್ಲರ ವಸ್ತ್ರಗಳನ್ನೂ ಇಸ್ತ್ರಿ ಮಾಡುವುದು ಅಗತ್ಯ ಎನ್ನುವ ದಿನಗಳೂ ಬರಬಹುದು ಮಳೆಗಾಲದಲ್ಲಿ. ಮನೆಯಲ್ಲೇ ಡ್ರೈಯರ್‌ ಇರಿಸಿಕೊಂಡಿದ್ದರೆ ಇಂಥ ಯಾವ ಸಮಸ್ಯೆಗಳೂ ಇರುವುದಿಲ್ಲ. ಆದರೆ ಮಳೆಗಾಲದ ಮೂರ್ನಾಲ್ಕು ತಿಂಗಳ ಹೊರತಾಗಿ ಈ ಡ್ರೈಯರ್‌ಗಳು ಉಳಿದ ದಿನಗಳಲ್ಲಿ ಅಗತ್ಯ ಎನಿಸುವುದಿಲ್ಲ.

ಸಿಲಿಕಾ ಪ್ಯಾಕೆಟ್‌

ಹೆಚ್ಚುವರಿ ತೇವವನ್ನು ಹೀರಿಕೊಳ್ಳುವ ಕೆಲಸಕ್ಕೆ ಪುಟ್ಟ ಸಿಲಿಕಾ ಪ್ಯಾಕೆಟ್‌ಗಳನ್ನೂ ಬಳಸಬಹುದು. ಕಪಾಟಿನ ಬಟ್ಟೆಗಳ ನಡುವೆ ಕೆಲವು ಸಿಲಿಕಾ ಪ್ಯಾಕೆಟ್‌ಗಳನ್ನು ಇರಿಸಿದರೆ, ವಾರ್ಡ್‌ರೋಬ್‌ ಒಳಗೆ ಹೆಚ್ಚುವರಿ ತೇವ ನಿಲ್ಲದಂತೆ ಇವು ಹೀರಿಕೊಳ್ಳುತ್ತವೆ. ಬೆಡ್‌ಶೀಟ್‌, ಟವೆಲ್‌ನಂಥ ದಪ್ಪ ಬಟ್ಟೆಗಳ ಒಳಗೇ ಇದನ್ನು ಇರಿಸಿದರೂ ಒಳ್ಳೆಯದೇ.

Vinegar
Vinegar

ವಿನೇಗರ್‌

ವಾಷಿಂಗ್‌ ಮಶೀನ್‌ ಉಪಯೋಗಿಸುವವರು, ಅದರ ರಿನ್ಸ್‌ ಆವರ್ತದಲ್ಲಿ 2-4 ಚಮಚ ವಿನೇಗರ್‌ ಸೇರಿಸಬಹುದು. ಇದರಿಂದಲೂ ಬಟ್ಟೆಗಳ ದುರ್ವಾಸನೆ ಹೋಗಲಾಡಿಸಬಹುದು. ಕರ್ಪೂರ ಇರಿಸಿದಂತೆಯೇ, ಮನೆಯಲ್ಲಿ ಲೋಬಾನ ಹಾಕುವ ಕ್ರಮವೂ ಪ್ರಯೋಜನಕಾರಿ. ಇಂಥ ಯಾವುದೇ ಕ್ರಮಗಳನ್ನು ಅನುಸರಿಸಿದಾಗಲೂ ಮೊದಲಿಗೆ, ಒಂದರ್ಧ ತಾಸು ಕಿಟಕಿ-ಬಾಗಿಲುಗಳನ್ನು ಮುಚ್ಚಿಡಿ. ನಂತರ ಗಾಳಿಯಾಡಲು ಬಿಡಿ.

ಇದನ್ನೂ ಓದಿ: Nonstick Pans: ನಾನ್‌ಸ್ಟಿಕ್‌ ಪಾತ್ರೆಗಳ ತಪ್ಪು ಬಳಕೆಯಿಂದಲೂ ಜ್ವರ ಬಾಧಿಸುತ್ತದೆ!

ಎಲ್ಲಿರಿಸುತ್ತೀರಿ?

ಟವೆಲ್‌ಗಳನ್ನು ಬಳಕೆಯ ಬಳಿಕ ಯಾವ ಜಾಗದಲ್ಲಿ ಇಡುತ್ತೀರಿ ಎಂಬುದೂ ಮುಖ್ಯವಾಗುತ್ತದೆ. ಬಾತ್‌ರೂಮಿನ ಆಚೀಚಿನ ಕಪಾಟುಗಳು ಇದಕ್ಕೆ ಸೂಕ್ತವಲ್ಲ. ಕಾರಣ, ವಾತಾವರಣದಲ್ಲಿ ಈಗಾಗಲೇ ಸಾಕಷ್ಟು ತೇವವಿದೆ. ಜೊತೆಗೆ ಬಚ್ಚಲುಮನೆಯ ಆಚೀಚಿನ ಸ್ಥಳಗಳಲ್ಲಿ ಇನ್ನೂ ಹೆಚ್ಚು ಒದ್ದೆಯಾಗಿರುತ್ತದೆ. ಬದಲಿಗೆ, ಚೆನ್ನಾಗಿ ಗಾಳಿಯಾಡುವ ಜಾಗಗಳು ಸೂಕ್ತ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಸಾಧನೆಯ ಹಾದಿಯ 25 ಮೈಲಿಗಲ್ಲುಗಳು

ರಾಜಮಾರ್ಗ ಅಂಕಣ: ಯಶಸ್ಸು ಗಳಿಸಲು ಬೇಕಾದ್ದು ಗುರಿ, ಆತ್ಮವಿಶ್ವಾಸ, ನಿರಂತರ ಪ್ರಯತ್ನ, ಎಚ್ಚರ. ಇತ್ಯಾದಿ. ನಿಮ್ಮನ್ನು ಗೆಲುವಿನ ಕಡೆಗೆ ಒಯ್ಯುವ 25 ಸೂತ್ರಗಳು ಇಲ್ಲಿವೆ.

VISTARANEWS.COM


on

winning tips ರಾಜಮಾರ್ಗ ಅಂಕಣ
Koo

ಗೆಲ್ಲಲು ಹೊರಟವರಿಗೆ ನಿಜವಾದ ಬೂಸ್ಟರ್ ಡೋಸ್ ಈ ಸೂತ್ರಗಳು

Rajendra-Bhat-Raja-Marga-Main-logo

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಗೆಲ್ಲುವುದು (Winning) ಯಾರಿಗೆ ಬೇಡ ಹೇಳಿ? ಸೋಲಲು ಯಾರೂ ಬಯಸುವುದಿಲ್ಲ. ದಿಗಂತದ ಕಡೆಗೆ ದೃಷ್ಟಿ ನೆಟ್ಟು ಸಾಧನೆಯ (achievement) ಹಸಿವು ಮತ್ತು ಕನಸಿನ ಕಸುವುಗಳನ್ನು ಜೋಡಿಸಿಕೊಂಡು ನಾವು ಖಂಡಿತ ಗೆಲ್ಲಲೇಬೇಕು ಎಂದು ಹೊರಟಾಗ ಈ 25 ಸೂತ್ರಗಳು (Success Tips) ನಿಮ್ಮನ್ನು ಗೆಲ್ಲಿಸುತ್ತವೆ.

1) ಗಮ್ಯ (Aim) – ನಾವು ತಲುಪಬೇಕಾದ ಸ್ಥಳದ ಸರಿಯಾದ ಅರಿವು.

2) ದಾರಿ (Way)- ನಾವು ಕ್ರಮಿಸಬೇಕಾದ ನ್ಯಾಯಯುತವಾದ ಮತ್ತು ನೇರವಾದ ದಾರಿ.

3) ಆತ್ಮವಿಶ್ವಾಸ (confidence) – ಖಂಡಿತ ಗಮ್ಯವನ್ನು ತಲುಪುವೆ ಎಂಬ ನಂಬಿಕೆಯು ನಮಗೆ ಇಂಧನ ಆಗುತ್ತದೆ.

4) ಎಚ್ಚರ – ಎಂದಿಗೂ ತಪ್ಪು ದಾರಿ ಹಿಡಿಯುವುದಿಲ್ಲ ಎಂಬ ನಮ್ಮ ನಿರ್ಧಾರ

5) ಮಾರ್ಗದರ್ಶಕರು – ಕೈ ಹಿಡಿದು ನಡೆಸುವ ಮಂದಿ ಸದಾ ನಮ್ಮನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುತ್ತಾರೆ.

6) ಇಚ್ಛಾ ಶಕ್ತಿ – ಎಲ್ಲೂ ನಾನು ಕ್ವಿಟ್ ಮಾಡುವುದಿಲ್ಲ ಎಂಬ ಹಠ. ಅದೇ ನಮಗೆ ಲುಬ್ರಿಕೆಂಟ್.

7) ಪಾಸಿಟಿವ್ ಥಿಂಕಿಂಗ್ (Positive thinking)- ಎಂತಹ ಸವಾಲು, ಸಮಸ್ಯೆಗಳು ಎದುರಾದರೂ ಎದುರಿಸಿ ನಿಲ್ಲುವೆ ಎನ್ನುವ ಗಟ್ಟಿ ನಿಲುವು.

8) ಕಾಳಜಿ – ನಮ್ಮ ಜೊತೆಗೆ ಹೆಜ್ಜೆ ಹಾಕಿ ನಡೆಯುವವರ ಬಗ್ಗೆ ತೀವ್ರವಾದ ಕಾಳಜಿ.

9) ಸ್ಟಾಟರ್ಜಿ – ದುರ್ಗಮವಾದ ಹಾದಿಯಲ್ಲಿ ಹೆಜ್ಜೆಯಿಟ್ಟು ನಡೆಯುವಾಗ ಅದಕ್ಕೆ ಪೂರಕವಾದ ತಂತ್ರಗಾರಿಕೆ ಮತ್ತು ಯೋಜನೆ.

10) ತಾಳ್ಮೆ – ನಮ್ಮೊಳಗಿನ ಸತ್ವವನ್ನು ಹೆಚ್ಚಿಸುವ ಮತ್ತು ನಮ್ಮನ್ನು ಎಂದಿಗೂ ಸೋಲಲು ಬಿಡದ ಟೆಂಪರಮೆಂಟ್.

11) ಫೋಕಸ್ – ಒಂದಿಷ್ಟೂ ವಿಚಲಿತವಾಗದ ಮನಸ್ಥಿತಿ. ಆಮಿಷಗಳಿಗೆ, ಅಡ್ಡ ದಾರಿಗಳಿಗೆ ನಮ್ಮನ್ನು ಎಳೆಯದ ಗಟ್ಟಿ ಮನಸ್ಸು.

12) ಅಹಂ ರಾಹಿತ್ಯ – ಒಂದಿಷ್ಟೂ ಅಹಂ ಇಲ್ಲದ, ಎಷ್ಟು ಸಾಧನೆ ಮಾಡಿದರೂ ನಾನೇನು ಮಾಡಿಲ್ಲ ಎನ್ನುವ ವಿಕ್ಷಿಪ್ತ ಭಾವನೆ.

13) ನಿರಂತರತೆ – ಯಾವ ಏರು,ತಗ್ಗಿನ ರಸ್ತೆಯಲ್ಲಿಯೂ ವೇಗವನ್ನು ಕಳೆದುಕೊಳ್ಳದ ಶಕ್ತಿ.

14) ಕಾಂಪಿಟೆನ್ಸಿ – ಯಾವ ರೀತಿಯ ಸ್ಪರ್ಧೆಗೂ ನಮ್ಮನ್ನು ತೆರೆದುಕೊಳ್ಳುವ ಮತ್ತು ಎದುರಿಸಿ ನಿಲ್ಲುವ ಗಟ್ಟಿತನ.

15) ನಮ್ಮ ಕಾಂಪಿಟಿಟರ್ – ನೀವು ಒಪ್ಪುತ್ತೀರೋ ಅಥವಾ ಬಿಡುತ್ತೀರೋ ಗೊತ್ತಿಲ್ಲ. ನಮ್ಮ ಸ್ಪರ್ಧಿಗಳು ನಮ್ಮನ್ನು ಸದಾ ಜಾಗೃತವಾಗಿ ಇಟ್ಟುಕೊಂಡು ಗೆಲುವಿನ ಕಡೆಗೆ ಮುನ್ನಡೆವ ಉತ್ಸಾಹ ತುಂಬುತ್ತಾರೆ.

16) ಸವಾಲುಗಳು – ನಾವು ಒಳ್ಳೆಯ ಚಾಲಕ ಆಗಬೇಕು ಎಂದು ನೀವು ನಿರ್ಧರಿಸಿದರೆ ದೊಡ್ಡ ಹೆದ್ದಾರಿಯಲ್ಲಿ ಗಾಡಿ ಓಡಿಸುವುದಲ್ಲ. ದುರ್ಗಮವಾದ ರಸ್ತೆಗಳನ್ನು ಆಯ್ಕೆ ಮಾಡಬೇಕು!

17) ಆದ್ಯತೆಗಳು – ಹೊರಳು ದಾರಿಯಲ್ಲಿ ಸರಿಯಾದದ್ದನ್ನು ಮತ್ತು ಸೂಕ್ತವಾದದ್ದನ್ನು ನಮ್ಮ ವಿವೇಚನೆಯಿಂದ ಆಯ್ಕೆ ಮಾಡಿಕೊಳ್ಳುವುದು.

18) ಉತ್ಕೃಷ್ಟತೆ – ಯಾವಾಗಲೂ ಉತ್ತಮವಾದದ್ದನ್ನು ಮತ್ತು ಸರಿಯಾದದ್ದನ್ನು ಆರಿಸುವ ಪ್ರೌಢಿಮೆ.

19)ಪ್ಲಾನಿಂಗ್ – ಸರಿಯಾದ ಯೋಜನೆ ಇದ್ದರೆ ಸೋಲು ಕೂಡ ಸೋಲುತ್ತದೆ.

business man
business man

20) ಉದ್ದೇಶದ ಸ್ಪಷ್ಟತೆ – ನಮ್ಮ ಪ್ರಯಾಣದ ಉದ್ದೇಶವು ನಮಗೆ ಸ್ಪಷ್ಟವಾಗಿದ್ದರೆ ಗೆಲುವು ಸುಲಭ. ಯಾಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಹೇಗೆ? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭ ಆಗುತ್ತದೆ.

21) ಅನುಭವಗಳಿಂದ ಪಾಠ ಕಲಿಯುವುದು – ನಮ್ಮ ತಪ್ಪುಗಳಿಂದ ಪಾಠ ಕಲಿಯುವಷ್ಟು ನಮ್ಮ ಆಯಸ್ಸು ದೊಡ್ಡದಲ್ಲ. ಬೇರೆಯವರ ತಪ್ಪುಗಳಿಂದ ಕೂಡ ಪಾಠ ಕಲಿಯಬಹುದು.

22) ಟೀಮ್ ವರ್ಕ್ – ತಂಡವಾಗಿ ಕೆಲಸ ಮಾಡುವ ಖುಷಿ ನಮ್ಮ ಗೆಲುವನ್ನು ಖಾತರಿ ಮಾಡುತ್ತದೆ.

23) ಸ್ವಯಂ ಶಿಸ್ತು – ನಮಗೆ ನಾವೇ ಹಾಕಿಕೊಂಡ ಶಿಸ್ತು ಮತ್ತು ಅನುಶಾಸನಗಳ ಗೆರೆಗಳು ನಮ್ಮನ್ನು ಸೋಲಲು ಬಿಡುವುದಿಲ್ಲ.

24) ವಾಸ್ತವದ ಪ್ರಜ್ಞೆ – ನಮ್ಮ ಭ್ರಮೆಗಳಿಂದ ಹೊರಬಂದು ವಾಸ್ತವದ ಪ್ರಜ್ಞೆಯೊಂದಿಗೆ ಮುನ್ನಡೆಯುವುದು ನಮ್ಮ ಗೆಲುವನ್ನು ಸುಲಭ ಮಾಡುತ್ತದೆ.

25) ಅವಲೋಕನ- ಒಮ್ಮೆ ನಾವು ಪ್ರಯಾಣ ಮಾಡಿದ ದಾರಿಯನ್ನು ಹಿಂತಿರುಗಿ ನೋಡಿ ಮತ್ತೆ ಮುಂದಿನ ಗಮ್ಯಕ್ಕೆ ತಯಾರಿ ಮಾಡುವುದು.

ಇವಿಷ್ಟನ್ನು ಬಂಡವಾಳ ಮಾಡಿಕೊಂಡು ಹೊರಡಿ. ನಿಮ್ಮನ್ನು ಸೋಲಿಸಲು ನಿಮ್ಮ ಶತ್ರುಗಳಿಗೂ ಸಾಧ್ಯ ಇಲ್ಲ. ಗೆಲುವು ನಿಮ್ಮದಾಗಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಈ 20 ಅಂಶಗಳನ್ನು ಸರಿಯಾಗಿ ಪಾಲಿಸಿದರೆ ಗೋಲ್ಡನ್ ಮೆಮೊರಿ ನಿಮ್ಮದು!

Continue Reading

ಆರೋಗ್ಯ

Ear Infections During Monsoon: ಮಳೆಗಾಲದಲ್ಲಿ ಕಾಡುವ ಕಿವಿನೋವಿನಿಂದ ಮುಕ್ತರಾಗಲು ಸರಳ ಉಪಾಯ ಇಲ್ಲಿದೆ

Ear Infections during Monsoon: ವಾತಾವರಣದಲ್ಲಿ ತೇವಾಂಶ ಹೆಚ್ಚಿದಾಗ ಕಿವಿಯ ಸೋರುವುದು, ಕಿವಿನೋವು ಕಾಟ ಕೊಡುತ್ತಲೇ ಇರುತ್ತವೆ. ಕಿವಿ ಕಟ್ಟಿದಂತಾಗುವುದು, ಕಿರಿಕಿರಿ, ಸರಿಯಾಗಿ ಕೇಳದಂತಾಗುವುದು, ಬಿಟ್ಟು ಬಿಟ್ಟು ಕಾಡುವ ನೋವು ಇತ್ಯಾದಿಗಳೆಲ್ಲ ಸೋಂಕಿನ ಲಕ್ಷಣಗಳು. ಮಳೆಗಾಲದಲ್ಲಿ ಕಾಡುವ ಕಿವಿಯ ಸೋಂಕುಗಳನ್ನು ನಿಯಂತ್ರಿಸುವುದು ಹೇಗೆ? ಈ ಬಗ್ಗೆ ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

Ear Infections during Monsoon
Koo

ಮಳೆಗಾಲದ ಆರೋಗ್ಯ ಸಮಸ್ಯೆಗಳು (Ear Infections during Monsoon) ನಾನಾ ರೀತಿಯವು. ಹೆಚ್ಚಿನ ತೇವಾಂಶ ಇರುವಲ್ಲೆಲ್ಲ ವೈರಸ್‌, ಫಂಗಸ್‌ ಮತ್ತು ಬ್ಯಾಕ್ಟೀರಿಯಗಳ ಬೆಳವಣಿಗೆ ಸಮೃದ್ಧವಾಗಿ ಆಗುತ್ತದೆ. ಉದಾ: ಕಿವಿಯನ್ನೇ ಗಮನಿಸಿದರೆ ಮುಖದಂಚಿಗಿನ ಈ ಪುಟ್ಟ ಬಾವಿಗಳಲ್ಲಿ ಎಷ್ಟೊಂದು ತೇವಾಂಶ ಸೇರಿಕೊಳ್ಳುತ್ತದೆಂದರೆ ಜೋರು ಮಳೆಯಲ್ಲಿ ಕಿವಿನೋವು ಎಷ್ಟೋ ಮಂದಿಗೆ ಬಿಡುವುದೇ ಇಲ್ಲ. ಆಗಾಗ ಕಿವಿಯ ಸೋರುವುದು, ಸೋಂಕುಗಳು ಕಾಟ ಕೊಡುತ್ತಲೇ ಇರುತ್ತವೆ. ಕಿವಿ ಕಟ್ಟಿದಂತಾಗುವುದು, ಕಿರಿಕಿರಿ, ಸರಿಯಾಗಿ ಕೇಳದಂತಾಗುವುದು, ಸೋರುವುದು, ಬಿಟ್ಟು ಬಿಟ್ಟು ಕಾಡುವ ನೋವು ಇತ್ಯಾದಿಗಳೆಲ್ಲ ಸೋಂಕಿನ ಲಕ್ಷಣಗಳು. ಮಳೆಗಾಲದಲ್ಲಿ ಕಾಡುವ ಕಿವಿಯ ಸೋಂಕುಗಳನ್ನು ನಿಯಂತ್ರಿಸುವುದು ಹೇಗೆ?

ear clean

ಸ್ವಚ್ಛತೆ

ಕಿವಿಯ ಹೊರಭಾಗದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಲ್ಳುವುದು ಅಗತ್ಯ. ಅದಕ್ಕಾಗಿ ಸ್ವಚ್ಛವಾದ ಹತ್ತಿಯ ವಸ್ತ್ರದಿಂದ ಕಿವಿಯ ಹೊರಭಾಗವನ್ನು ಒರೆಸಿ ಶುಚಿ ಮಾಡಿ. ಸ್ನಾನ ಆದ ನಂತರ ಅಥವಾ ಹೊರಗಿನಿಂದ ಬಂದಾಗ ಮಳೆಯಲ್ಲಿ ನೆನೆದಿದ್ದರೆ ಕಿವಿಯ ಹೊರಭಾಗವನ್ನು ಒರೆಸಿ ಒಣಗಿಸಿಕೊಳ್ಳುವುದು ಅಗತ್ಯ. ಇದಕ್ಕಾಗಿ ಕಿವಿಯೊಳಗೆ ಹತ್ತಿಯನ್ನೋ ಅಥವಾ ಇನ್ನೇನನ್ನಾದರೂ ತುರುಕುವ ಸಾಹಸ ಮಾಡಬೇಡಿ.

ಇಯರ್‌ ಪ್ಲಗ್‌

ಕಿವಿಯೊಳಗೆ ಹಾಕುವಂಥ ಯಾವುದೇ ಉಪಕರಣಗಳಾದರೂ ಕಿವಿಯ ಪೊರೆಯ ಅತ್ಯಂತ ಸಮೀಪದಲ್ಲೇ ಇರುತ್ತವೆ. ಹಾಗಾಗಿ ಅವುಗಳ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ. ಅವುಗಳಲ್ಲೂ ಫಂಗಸ್‌ ಬೆಳೆಯುವ ಅಪಾಯವಿದೆ. ಹಾಗಾಗಿ ಇಯರ್‌ಪ್ಲಗ್‌, ಹೆಡ್‌ಫೋನ್‌ ಗಳನ್ನು ಆಗಾಗ ಶುಚಿ ಮಾಡಿ ಇರಿಸಿಕೊಳ್ಳಿ. ಇದರಿಂದ ರೋಗಾಣುಗಳು ಕಿವಿಯನ್ನು ಪ್ರವೇಶಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

ear bud
ear bud

ಕಡ್ಡಿ ಹಾಕಬೇಡಿ

ಕಡ್ಡಿಗಳು, ಹತ್ತಿಯ ಸ್ವಾಬ್‌ಗಳು ಮುಂತಾದ ಯಾವುದನ್ನೂ ಕಿವಿಯೊಳಗೆ ಸ್ವಚ್ಛತೆಯ ನೆವದಿಂದ ಹಾಕಬೇಡಿ. ಕಿವಿಯನ್ನು ಸ್ವಚ್ಛ ಮಾಡುವುದಕ್ಕಿಂತ ಹೆಚ್ಚು ಹಾನಿಯನ್ನೇ ಮಾಡುತ್ತವೆ ಈ ವಸ್ತುಗಳು. ಹೀಗೆ ಹಾಕುವ ವಸ್ತುಗಳಲ್ಲೇ ರೋಗಾಣುಗಳು ಇರಬಹುದು. ಅವು ಶುಚಿ ಮಾಡುವ ಬದಲು ಕಿವಿಯಲ್ಲಿರುವ ಕುಗ್ಗೆಯನ್ನು ಇನ್ನಷ್ಟು ಒಳಗೆ ತಳ್ಳಿ ಹಾನಿ ಮಾಡಬಹುದು. ಒಂದೊಮ್ಮೆ ಕಿವಿಯನ್ನು ಶುಚಿ ಮಾಡುವುದು ಅಗತ್ಯ ಎಂದಾದರೆ, ತಜ್ಞರ ನೆರವು ಪಡೆಯಿರಿ.

ಈಜಬೇಡಿ

ಮಳೆಗಾಲದ ದಿನಗಳಲ್ಲಿ ಈಜುಕೊಳಗಳಿಗೆ ಇಳಿಯುವುದು ಕ್ಷೇಮವಲ್ಲ. ಆ ನೀರಿನಲ್ಲಿ ಹಲವು ರೀತಿಯ ರೋಗಾಣುಗಳು ಇರಬಹುದು. ಕೇವಲ ಈಜುವುದೇ ಅಲ್ಲ, ಯಾವುದೇ ರೀತಿಯ ಜಲಸಾಹಸಗಳು ಈ ದಿನಗಳಲ್ಲಿ ಸರಿಯಲ್ಲ. ಇಷ್ಟಾಗಿಯೂ ನೀರಿಗಿಳಿಯುವುದು ಅನಿವಾರ್ಯ ಎಂದಾದರೆ ಜಲ ನಿರೋಧಕ (ವಾಟರ್‌ ರೆಸಿಸ್ಟೆಂಟ್‌) ಇಯರ್‌ ಪ್ಲಗ್‌ಗಳನ್ನು ಬಳಸುವುದು ಒಳ್ಳೆಯದು. ಇವು ಕಿವಿ ಮತ್ತು ನೀರಿನ ನಡುವೆ ಗೋಡೆಯನ್ನು ಸೃಷ್ಟಿ ಮಾಡಿ, ಕಿವಿಗೆ ನೀರು ಹೋಗದಂತೆ ತಡೆಯುತ್ತವೆ.

ವಿಶ್ರಾಂತಿ ನೀಡಿ

ನಮ್ಮ ಕಿವಿಗೂ ವಿಶ್ರಾಂತಿ ಬೇಕು. ಸದಾ ಕಾಲ ಕೇಳುತ್ತಲೇ ಇರುವ ಅವುಗಳಿಗೆ ದಿನವಿಡೀ ಇಯರ್‌ ಫೋನ್‌ ತುಂಬಿಸಿಟ್ಟರೆ ಕಷ್ಟ. ಇದರಿಂದ ಕಿವಿಯಲ್ಲಿನ ತೇವಾಂಶವೂ ಹೆಚ್ಚುತ್ತದೆ. ಹಾಗಾಗಿ ಕೇಳುವ ಕಾಯಕದಿಂದ ದಿನದ ಸ್ವಲ್ಪ ಹೊತ್ತು ಅವುಗಳಿಗೆ ವಿಶ್ರಾಂತಿ ನೀಡಿ. ಸುತ್ತಲಿನ ಜಗತ್ತಿನ ಶಬ್ದಗಳನ್ನು ನಿಲ್ಲಿಸಲಂತೂ ಸಾಧ್ಯವಿಲ್ಲ. ಹಾಗಾಗಿ ಕಿವಿಗೆ ಹಾಕುವ ಉಪಕರಣಗಳನ್ನು ಕಡಿಮೆ ಮಾಡಿ.

ಇದನ್ನೂ ಓದಿ:Thyroid Health Formulas: ನಿಮ್ಮ ಥೈರಾಯ್ಡ್‌ ನಿಮ್ಮ ಕೈಯಲ್ಲಿ! ಥೈರಾಯ್ಡ್‌ ಆರೋಗ್ಯಕ್ಕೆ ಇಲ್ಲಿವೆ ಆರು ಸೂತ್ರಗಳು

ತಜ್ಞರೇ ಬೇಕು

ಇಷ್ಟಾಗಿ ಕಿವಿಯಲ್ಲಿ ನೋವು, ಕಿರಿಕಿರಿ ಅಥವಾ ಯಾವುದೇ ರೀತಿಯ ತೊಂದರೆಯಿದ್ದರೂ ಸ್ವಯಂವೈದ್ಯ ಮಾಡಬೇಡಿ. ಔಷಧಿ ಅಂಗಡಿಯಿಂದ ಯಾವುದಾದರೂ ಡ್ರಾಪ್ಸ್‌ ತಂದು ಹಾಕುವುದು, ಪ್ರತಿಜೈವಿಕ ಡ್ರಾಪ್‌ ಪ್ರಯೋಗಿಸುವುದು, ಯಾವುದೋ ಸೊಪ್ಪಿನ ರಸ ಅಥವಾ ತೈಲ ಕಿವಿಗೆ ಹನಿಸುವುದು ಮುಂತಾದ ಯಾವುದೇ ನಾಟಿ ಪದ್ಧತಿಗಳು ಕಿವಿಯನ್ನು ತೀವ್ರ ತೊಂದರೆಗೆ ದೂಡಬಹುದು. ಬದಲಿಗೆ, ನೇರವಾಗಿ ಇಎನ್‌ಟಿ ವೈದ್ಯರ ಬಳಿ ಹೋಗಿ.

Continue Reading

ಆರೋಗ್ಯ

Thyroid Health Formulas: ನಿಮ್ಮ ಥೈರಾಯ್ಡ್‌ ನಿಮ್ಮ ಕೈಯಲ್ಲಿ! ಥೈರಾಯ್ಡ್‌ ಆರೋಗ್ಯಕ್ಕೆ ಇಲ್ಲಿವೆ ಆರು ಸೂತ್ರಗಳು

Thyroid Health Formulas: ಚಿಟ್ಟೆಯ ಆಕಾರದಲ್ಲಿರುವ ಥೈರಾಯ್ಡ್‌ ಗ್ರಂಥಿ ನಮ್ಮ ದೇಹದಲ್ಲಿ ಹಲವು ಕೆಲಸಗಳನ್ನು ನಿರ್ವಹಿಸುತ್ತದೆ. ಮುಖ್ಯವಾಗಿ ನಮ್ಮ ಒಳ್ಳೆಯ ನಿದ್ದೆಗೆ, ತೂಕ ಸಮತೋಲನದಲ್ಲಿ ಇಟ್ಟುಕೊಳ್ಳಲು, ಖಿನ್ನತೆ ಹಾಗೂ ಉದ್ವೇಗದಂತಹ ಮಾನಸಿಕ ಸಮಸ್ಯೆಗಳು ಬರದಂತೆ ಇರಲು ಥೈರಾಯ್ಡ್‌ ಪಾತ್ರವೂ ದೊಡ್ಡದು. ನಮ್ಮ ರಕ್ತದ ಪರೀಕ್ಷೆ ನಡೆಸಿ ಥೈರಾಯ್ಡ್‌ ಸಮಸ್ಯೆಯಿದೆಯೇ ಎಂದು ನೋಡಿದಾಗ ಅದಕ್ಕೆ ಸಂಬಂಧಿಸಿದ ಔಷಧವನ್ನು ನೀಡಲಾಗುತ್ತದೆ. ಆದರೆ ನಮ್ಮ ಆಹಾರ ಕ್ರಮ, ಸೇವಿಸಬೇಕಾದ ಆಹಾರದ ಬಗ್ಗೆ ಅಷ್ಟಾಗಿ ಯಾರೂ ಗಮನ ಹರಿಸುವುದಿಲ್ಲ. ಥೈರಾಯ್ಡ್‌ಗ್ರಂಥಿಯ ಆರೋಗ್ಯಕ್ಕೆ ನಾವು ತೆಗೆದುಕೊಳ್ಳುವ ಆಹಾರವೂ ಅಷ್ಟೇ ಮುಖ್ಯ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Thyroid problem
Koo

ಥೈರಾಯ್ಡ್‌ ನಮ್ಮ ದೇಹದ ಅತ್ಯಂತ ಮುಖ್ಯವಾದ ಹಾಗೂ ಅಷ್ಟೇ ನಿರ್ಲಕ್ಷ್ಯಕ್ಕೆ ಒಳಗಾದ ಗ್ರಂಥಿಗಳಲ್ಲಿ ಒಂದು. ಚಿಟ್ಟೆಯ ಆಕಾರದಲ್ಲಿರುವ ಥೈರಾಯ್ಡ್‌ ಗ್ರಂಥಿ ನಮ್ಮ ದೇಹದಲ್ಲಿ ಹಲವು ಕೆಲಸಗಳನ್ನು ನಿರ್ವಹಿಸುತ್ತದೆ. ಮುಖ್ಯವಾಗಿ ನಮ್ಮ ಒಳ್ಳೆಯ ನಿದ್ದೆಗೆ, ತೂಕ ಸಮತೋಲನದಲ್ಲಿ ಇಟ್ಟುಕೊಳ್ಳಲು, ಖಿನ್ನತೆ ಹಾಗೂ ಉದ್ವೇಗದಂತಹ ಮಾನಸಿಕ ಸಮಸ್ಯೆಗಳು ಬರದಂತೆ ಇರಲು ಥೈರಾಯ್ಡ್‌ ಪಾತ್ರವೂ ದೊಡ್ಡದು. ನಮ್ಮ ರಕ್ತದ ಪರೀಕ್ಷೆ ನಡೆಸಿ ಥೈರಾಯ್ಡ್‌ ಸಮಸ್ಯೆಯಿದೆಯೇ ಎಂದು ನೋಡಲಾಗಿ ಅದಕ್ಕೆ ಸಂಬಂಧಿಸಿದ ಔಷಧವನ್ನು ನೀಡಲಾಗುತ್ತದೆ. ಆದರೆ, ನಮ್ಮ ಆಹಾರ ಕ್ರಮ, ಸೇವಿಸಬೇಕಾದ ಆಹಾರದ ಬಗ್ಗೆ ಅಷ್ಟಾಗಿ ಯಾರೂ ಗಮನ ಹರಿಸುವುದಿಲ್ಲ. ಥೈರಾಯ್ಡ್‌ಗ್ರಂಥಿಯ ಆರೋಗ್ಯಕ್ಕೆ ನಾವು ತೆಗೆದುಕೊಳ್ಳುವ ಆಹಾರವೂ ಅಷ್ಟೇ ಮುಖ್ಯ. ಥೈರಾಯ್ಡ್‌ ಗ್ರಂಥಿಯ ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಗಳು ಸುಲಭವಾಗಿ ನಾವು ಸೇವಿಸುವ ಆಹಾರಗಳಲ್ಲಿ ದೊರೆಯುತ್ತದೆ. ಆದರೆ, ಅವುಗಳನ್ನು ಸೇವಿಸಬೇಕಾದ್ದು ನಮ್ಮ ಕರ್ತವ್ಯ ಅಷ್ಟೇ. ಬನ್ನಿ, ನಮ್ಮ ಥೈರಾಯ್ಡ್‌ ಆರೋಗ್ಯವಾಗಿರಬೇಕೆಂದರೆ ನಾವು (Thyroid Health Formulas) ಗಮನಿಸಬೇಕಾದ ಅಂಶಗಳೇನು ನೋಡೋಣ.

ಅಯೋಡಿನ್‌ ನಿರ್ಲಕ್ಷಿಸಬೇಡಿ

ಥೈರಾಯ್ಡ್‌ ಹಾರ್ಮೋನ್‌ ಥೈರಾಕ್ಸಿನ್‌ ಉತ್ಪಾದನೆಗೆ ಅಯೋಡಿನ್‌ ಬೇಕೇ ಬೇಕು. ಆದರೆ, ಈ ಅಯೋಡಿನ್‌ ಕಡಿಮೆಯೂ ಆಗಬಾರದು. ಹೆಚ್ಚೂ ಆಗಬಾರದು. ಹೆಚ್ಚಾದರೆ, ಗಾಯಟೆರ್‌ ಎಂಬ ಸಮಸ್ಯೆ ಬಂದೀತು. ಅಯೋಡಿನ್‌ ಕಡಿಮೆಯಾಗದಂತೆ ಅಯೋಡಿನ್‌ ಹೆಚಿರುವ ಆಹಾರಗಳಾದ ಸೀವೀಡ್‌ಗಳು, ಅಯೋಡೈಸ್ಡ್‌ ಉಪ್ಪು, ಮೀನು ಮತ್ತಿತರ ಸೀಫುಡ್‌ ಸೇವಿಸಬಹುದು. ಸೀವೀಡ್‌ಗಳ ಸೇವನೆಯಿಂದ ಹಲವು ಬಗೆಯ ಖನಿಜಾಂಶಗಳನ್ನು ನಾವು ಪಡೆಯಬಹುದು. ಕೆಲ್ಪ್‌, ನೊರಿ, ಕೊಂಬು ಮತ್ತಿತರ ಸೀವೀಡ್‌ಗಳು ಥೈರಾಯ್ಡ್‌ಗೆ ಬಹಳ ಒಳ್ಳೆಯದು. ಇವುಗಳು ರೈಬೋಫ್ಲೇವಿನ್‌ ಎಂಬ ಬಿ ವಿಟಮಿನ್‌ ಬಗೆಯನ್ನೂ ಹೊಂದಿದ್ದು, ಇವು ಖಿನ್ನತೆ ಹಾಗೂ ಉದ್ವೇಗದ ಸಮಸ್ಯೆಗಳಿಗೂ ಬಹಳ ಸಹಕಾರಿ.

ಪ್ರೊಟೀನ್‌ ಹೆಚ್ಚು ಸೇವಿಸಿ

ಥೈರಾಯ್ಡ್‌ ಹಾರ್ಮೋನನ್ನು ದೇಹದ ಎಲ್ಲ ಅಂಗಾಂಶಗಳಿಗೆ ಸಾಗಿಸುವ ಕೆಲಸ ಮಾಡುವುದು ಪ್ರೊಟೀನ್‌. ಹೀಗಾಗಿ ಥೈರಾಯ್ಡ್‌ನ ಆರೋಗ್ಯದಲ್ಲಿ ಪ್ರೊಟೀನ್‌ನ ಪಾತ್ರ ಮಹತ್ವದ್ದು. ಮೊಟ್ಟೆ, ಬೀಜಗಳು, ಮೀನು, ಪನೀರ್‌, ಟೋಫು, ಬೇಳೆಕಾಳುಗಳು ಇತ್ಯಾದಿಗಳನ್ನು ಸೇವಿಸುವ ಮೂಲಕ ಪ್ರೊಟೀನ್‌ ದೇಹಕ್ಕೆ ಸದಾ ಲಭ್ಯವಾಗುವಂತೆ ನೋಡಿಕೊಳ್ಳಿ.

ಇವುಗಳಿಂದ ದೂರವಿರಿ

ನಿಮಗೆ ಥೈರಾಯ್ಡ್‌ ಸಮಸ್ಯೆ ಇದ್ದರೆ ಗಾಯೆಟ್ರೋಜೆನ್‌ಗಳಿಂದ ದೂರವಿರಿ. ಅಂದರೆ ಗಾಯೆಟ್ರೋಜೆನ್‌ ಎಂಬ ರಾಸಾಯಿಕಗಳು ಅಯೋಡಿನ್‌ ಹೀರುವಿಕೆಗೆ ಅಡ್ಡಗಾಲು ಹಾಕುತ್ತವೆ. ಇದು ಬ್ರೊಕೋಲಿ, ಕ್ಯಾಬೇಜ್‌, ಹೂಕೋಸು, ಟರ್ನಿಪ್‌, ನೆಲಗಡಲೆ, ಮೂಲಂಗಿ, ಸೋಯಾಬೀನ್‌, ಬಸಳೆಯಂತಹುಗಳಲ್ಲಿ ಇವೆ. ಇವುಗಳನ್ನು ಆದಷ್ಟೂ ಹಸಿಯಾಘಿ ತಿನ್ನದಿರಿ. ಬೇಯಿಸಿ ತಿನ್ನಲಡ್ಡಿಯಿಲ್ಲ. ಯಾಕೆಂದರೆ ಬೇಯಿಸಿದಾಗ ಇವುಗಳ ಗಾಯೆಟ್ರೋಜೆನ್‌ ಕ್ರಿಯಾಶೀಲತೆ ಕಳೆದುಕೊಳ್ಳುತ್ತದೆ.

Sour Curd

ಮೊಸರು, ಮಜ್ಜಿಗೆ ಸೇವಿಸಿ

ನಿಮ್ಮ ಜೀರ್ಣಾಂಗವ್ಯೂಹದ ಆರೋಗ್ಯ ಹೆಚ್ಚು ನೋಡಿಕೊಳ್ಳಿ. ಮುಖ್ಯವಾಗಿ ಪ್ರೊಬಯಾಟಿಕ್‌ಗಳನ್ನು ಸೇವಿಸಿ. ಮೊಸರು, ಮಜ್ಜಿಗೆ ಸೇವಿಸಿ. ಬೆಳ್ಳುಳ್ಳಿಯನ್ನೂ ಹೆಚ್ಚು ಸೇವಿಸಿ.

ಕೊಬ್ಬು ಮರೆಯಬೇಡಿ

ಕೊಬ್ಬುಯುಕ್ತ ಆಹಾರ ಸೇವಿಸಿ. ಹಾರ್ಮೋನಿನ ಸಮತೋಲನಕ್ಕೆ ಒಳ್ಳೆಯ ಕೊಬ್ಬು ಬೇಕೇಬೇಕು. ಆದರೆ ಹೆಚ್ಚಾಗಬಾರದು ಅಷ್ಟೇ. ದೇಸೀ ತುಪ್ಪ, ಚೀಸ್‌, ಬೆಣ್ಣೆ, ತೆಂಗಿನೆಣ್ಣೆ, ಹಾಲು, ಫ್ಲ್ಯಾಕ್‌ಸೀಡ್‌, ಸಿಯಾ ಸೀಡ್‌ ಇತ್ಯಾದಿಗಳನ್ನು ಸೇವಿಸಿ.

ಇದನ್ನೂ ಓದಿ: Vitamin D Deficiency: ನೀವು ಸಂತೋಷವಾಗಿಲ್ಲವೇ? ವಿಟಮಿನ್‌ ಡಿ ಕೊರತೆಯೂ ಇದಕ್ಕೆ ಕಾರಣವಿರಬಹುದು!

ಸಕ್ಕರೆ ಸೇವನೆಯ ಬಗ್ಗೆ ನಿಗಾ ಇಡಿ

ಥೈರಾಯ್ಡ್‌ಗೂ ಸಕ್ಕರೆಗೂ ಅಷ್ಟಾಗಿ ಆಗಿಬರದು. ಇನ್ಸುಲಿನ್‌ ಮಟ್ಟದಲ್ಲಿ ವ್ಯತ್ಯಾಸವಾದರೆ ಥೈರಾಯ್ಡ್‌ ಗ್ರಂಥಿ ಆರೋಗ್ಯವಾಗಿರದು. ಇವಲ್ಲದೆ, ನಿತ್ಯವೂ ವ್ಯಾಯಾಮ, ನಡಿಗೆ, ಚುರುಕಾಗಿರುವುದು ಅತ್ಯಂತ ಮುಖ್ಯ. ಒಳ್ಳೆಯ ಆಹಾರ ಸೇವನೆ ಅತ್ಯಗತ್ಯ. ಸಂಸ್ಕರಿಸಿದ ಆಹಾರಗಳನ್ನು ದೂರವಿಡಿ. ಎಲ್ಲ ಪೋಷಕಾಂಶಗಳೂ ದೇಹಕ್ಕೆ ಲಭಿಸುವಂತೆ ಆಹಾರಕ್ರಮ ರೂಪಿಸಿ. ಆಗ ನಿಮ್ಮ ಥೈರಾಯ್ಡ್‌ ಗ್ರಂಥಿ ಆರೋಗ್ಯವಾಗಿರುತ್ತದೆ.

Continue Reading

ಫ್ಯಾಷನ್

Monsoon Jacket Fashion: ಸ್ಟೈಲಿಶ್‌ ಜಾಕೆಟ್ ಸ್ಟೈಲಿಂಗ್‌ಗೆ ನಟ ದರ್ಶ್ ಚಂದ್ರಪ್ಪ ಸಿಂಪಲ್‌ ರೂಲ್ಸ್!

Monsoon Jacket Fashion: ಮಾನ್ಸೂನ್‌ ಮೆನ್ಸ್ ಫ್ಯಾಷನ್‌ಗೆ ಸೈ ಎಂದಿರುವ ನಟ ದರ್ಶ್ ಚಂದ್ರಪ್ಪರಿಗೆ ಜಾಕೆಟ್‌ಗಳೆಂದರೇ ಬಲು ಪ್ರಿಯವಂತೆ. ಮಳೆಗಾಲದಲ್ಲಿ ಜಾಕೆಟ್‌ಗಳು ಸ್ಟೈಲಿಶ್‌ ಲುಕ್‌ ನೀಡುತ್ತವೆ ಎನ್ನುವ ಅವರು ಯುವಕರಿಗೆ ಜಾಕೆಟ್‌ ಸ್ಟೈಲಿಂಗ್‌ ಬಗ್ಗೆ ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

VISTARANEWS.COM


on

Monsoon Jacket Fashion
ಚಿತ್ರಗಳು : ದರ್ಶ್ ಚಂದ್ರಪ್ಪ, ನಟ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ ಮೆನ್ಸ್ ಫ್ಯಾಷನ್‌ಗೆ (Monsoon Jacket Fashion) ಸೈ ಎಂದಿರುವ ನಟ ದರ್ಶ್ ಚಂದ್ರಪ್ಪರವರಿಗೆ ಜಾಕೆಟ್‌ಗಳೆಂದರೇ ಬಲು ಪ್ರಿಯವಂತೆ. ಸೀಸನ್‌ಗೆ ತಕ್ಕಂತೆ ನಾನಾ ಬಗೆಯ ಜಾಕೆಟ್‌ಗಳನ್ನು ಧರಿಸುವ ದರ್ಶ್, ಮಳೆಗಾಲದ ಫ್ಯಾಷನ್‌ಗೆ ತಕ್ಕಂತೆ ಬದಲಾಗುತ್ತಾರಂತೆ. ಅಲ್ಲದೇ, ಯುವಕರು ಕೂಡ ಸೀಸನ್‌ಗೆ ತಕ್ಕಂತೆ ಔಟ್‌ಫಿಟ್‌ ಧರಿಸಬೇಕು ಎನ್ನುತ್ತಾರೆ.

Monsoon Jacket Fashion

ದರ್ಶ್ ಚಂದ್ರಪ್ಪ ಮಾನ್ಸೂನ್‌ ಲವ್‌

ಮೂಲತಃ ಮಾಡೆಲ್‌ ಆಗಿರುವ ದರ್ಶ್, ಈಗಾಗಲೇ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ತೆಲುಗು ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಶೆಡ್ಯೂಲ್‌ಗಳ ನಡುವೆಯೂ ಜಾಹೀರಾತುಗಳಲ್ಲೂ ಮಾಡೆಲ್‌ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಮೊದಲಿನಿಂದಲೂ ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿರುವ ದರ್ಶ್, ಸೀಸನ್‌ಗೆ ತಕ್ಕಂತೆ ತಮ್ಮ ಸ್ಟೈಲಿಂಗ್‌ ಕೂಡ ಸ್ಟೈಲಿಶ್‌ ಆಗಿ ಬದಲಿಸುತ್ತಿರುತ್ತಾರೆ. ಸದಾ ಒಂದೇ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಹುಡುಗರಿಗೆ ಈ ಮಾನ್ಸೂನ್‌ ಸೀಸನ್‌ ನಾನಾ ಬಗೆಯ ಲೇಯರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಸದಾವಕಾಶ ನೀಡುತ್ತದೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎನ್ನುತ್ತಾರೆ ದರ್ಶ್. ಮಾನ್ಸೂನ್‌ನಲ್ಲಿ ಹುಡುಗರು ಜಾಕೆಟ್‌ ಧರಿಸುವುದು ಕಾಮನ್‌. ಕೆಲವರಂತೂ ಈ ಸೀಸನ್‌ನಲ್ಲಿ ಹೊಸತನ್ನು ಖರೀದಿ ಮಾಡುತ್ತಾರೆ ಕೂಡ. ಇನ್ನು , ಕೆಲವರು ತಮ್ಮ ವಾರ್ಡ್ರೋಬ್‌ನಲ್ಲಿರುವ ಹಳೆಯ ಜಾಕೆಟ್‌ಗಳನ್ನು ಮರುಬಳಕೆ ಮಾಡುತ್ತಾರೆ. ಸೋ, ಜಾಕೆಟ್‌ ಸ್ಟೈಲಿಂಗ್‌ ಹೇಗೆ? ಎಂಬುದರ ಬಗ್ಗೆ ದರ್ಶ್ ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

ವ್ಯಕ್ತಿತ್ವಕ್ಕೆ ತಕ್ಕಂತಿರಲಿ ಜಾಕೆಟ್‌ ಸ್ಟೈಲಿಂಗ್‌

ಆಯಾ ವ್ಯಕ್ತಿಯ ವ್ಯಕ್ತಿತ್ವಕ್ಕೆ ತಕ್ಕಂತೆ ಜಾಕೆಟ್‌ ಧರಿಸುವುದು ಉತ್ತಮ. ಎಲ್ಲದಕ್ಕಿಂತ ಹೆಚ್ಚಾಗಿ ಅವರವರ ಪ್ರೊಫೆಷನ್‌ಗೆ ಹೊಂದುವಂತಿರಬೇಕು.

Monsoon Jacket Fashion

ಯುವಕರ ಜಾಕೆಟ್‌ ಚಾಯ್ಸ್

ಇನ್ನು, ಕಾಲೇಜು ಹುಡುಗರಾದಲ್ಲಿ ಇದೀಗ ಟ್ರೆಂಡ್‌ನಲ್ಲಿರುವಂತಹ ಬಾಂಬರ್‌ ಜಾಕೆಟ್‌, ಸಾಲಿಡ್‌ ಒಪನ್‌ ಜಾಕೆಟ್‌, ಜರ್ಸಿ ಜಾಕೆಟ್‌ ಸೇರಿದಂತೆ ನಾನಾ ಹೈ ಸ್ಟ್ರೀಟ್ ಫ್ಯಾಷನ್‌ನಲ್ಲಿರುವಂತವನ್ನು ಆಯ್ಕೆ ಮಾಡಿಕೊಂಡು ಧರಿಸಬಹುದು.

Monsoon Jacket Fashion

ಮಳೆಗಾಲಕ್ಕೆ ಯಾವುದು ಬೆಸ್ಟ್

ಮಳೆಗಾಲದಲ್ಲಿ ಒದ್ದೆಯಾದರೇ ಮುದ್ದೆಯಾಗುವ ಲೆದರ್‌ ಜಾಕೆಟ್‌ ಬೇಡ. ಯಾವುದೇ ವಾಟರ್‌ಪ್ರೂಫ್‌ ಜಾಕೆಟ್ಸ್ ಚೂಸ್‌ ಮಾಡಿ. ಬೈಕರ್ಸ್ ಜಾಕೆಟ್‌ಗಳಲ್ಲೂ ನಾನಾ ಡಿಸೈನ್ಸ್ ದೊರೆಯುತ್ತವೆ. ಇವನ್ನು ಧರಿಸಿದಾಗ ಆಕರ್ಷಕವಾಗಿ ಕಾಣಿಸುತ್ತವೆ.

ಇದನ್ನೂ ಓದಿ: Star Saree Styling Tips: ಎಂಬ್ರಾಯ್ಡರಿ ಸೀರೆಯಲ್ಲಿ ನಟಿ ರಶ್ಮಿಕಾ ಮಂದಣ್ಣರಂತೆ ಕಾಣಿಸಬೇಕೇ? ಈ 5 ಟಿಪ್ಸ್ ಫಾಲೋ ಮಾಡಿ

ಜಾಕೆಟ್‌ ಸ್ಟೈಲಿಶ್‌ ಲುಕ್ಸ್

ಜಾಕೆಟ್‌ನಲ್ಲಿಯೂ ಸ್ಟೈಲಿಶ್‌ ಆಗಿ ಕಾಣಿಸಬೇಕಿದ್ದಲ್ಲಿ, ಶೂ ಧರಿಸಿ, ಜೀನ್ಸ್ ಅಥವಾ ಕಾರ್ಗೋ ಪ್ಯಾಂಟ್‌ ಧರಿಸಿ. ಹುಡುಗರ ಆಕ್ಸೆಸರೀಸ್‌ ಮಿನಿಮಲ್‌ ಆಗಿರಲಿ. ಹೇರ್‌ಸ್ಟೈಲ್‌ ಟ್ರೆಂಡಿಯಾಗಿರಲಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Sruthi Hariharan female friendship nangeallava shashwati chandrashekar
ಸ್ಯಾಂಡಲ್ ವುಡ್17 mins ago

Sruthi Hariharan: ʻನೀ ನಂಗೆ ಅಲ್ಲವಾʼ? ಎಂದು ಸ್ನೇಹಿತೆಯ ಜತೆ ಪೋಸ್‌ ಕೊಟ್ಟ ಮೂಗುತಿ ಸುಂದರಿ ಶ್ರುತಿ ಹರಿಹರನ್!

wayanad landslide mandya family
ಮಂಡ್ಯ25 mins ago

Wayanad Landslide: ಮಂಡ್ಯದ 9 ಜನರ ಕುಟುಂಬ ಭೂಕುಸಿತದಲ್ಲಿ ಸಂಪೂರ್ಣ ಕಣ್ಮರೆ

Wayanad Landslide
ದೇಶ27 mins ago

Wayanad Landslide: ಎಲ್ಲೆಂದರಲ್ಲಿ ಹೆಣಗಳ ರಾಶಿ; ಕೊಚ್ಚಿ ಹೋದ ಬದುಕು: ಸ್ಮಶಾನದಂತಾದ ಭೂಲೋಕದ ಸ್ವರ್ಗ ವಯನಾಡು

Vanitha Vijaykumar Set To Tie The Knot Again
ಟಾಲಿವುಡ್39 mins ago

Vanitha Vijaykumar: 43 ವರ್ಷದ ನಟಿ ವನಿತಾ ವಿಜಯಕುಮಾರ್ 4ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜು?

Viral Video
Latest47 mins ago

Viral Video: 3 ತಿಂಗಳಿಂದ ಕಾಣೆಯಾಗಿದ್ದ ಬಾಲಕಿ ಗುಹೆಯಲ್ಲಿ ಡಿಢೀರ್‌ ಪ್ರತ್ಯಕ್ಷ; ಹಾವಿನಂತೆ ವರ್ತನೆ ಕಂಡು ಜನ ಶಾಕ್‌-ವಿಡಿಯೋ ಇದೆ

Charminar Clock
Latest59 mins ago

Charminar Clock: 135 ವರ್ಷ ಇತಿಹಾಸ ಇರೋ ಚಾರ್‌ಮಿನಾರ್ ಗಡಿಯಾರ ಸೌಂದರ್ಯಕ್ಕೆ ಪಾರಿವಾಳಗಳಿಂದ ಧಕ್ಕೆ

Ram Pothineni Double iSmart Bachchan Director Breaks Silence On Clash
ಟಾಲಿವುಡ್1 hour ago

Ram Pothineni: ಗುರುವಿಗೆ ತಿರುಮಂತ್ರ ಹಾಕಿದ ಶಿಷ್ಯ; ನಟನ ಅನ್​ಫಾಲೋ ಮಾಡಿದ ಖ್ಯಾತ ನಟಿ!

wayanad landslide car driver
ವೈರಲ್ ನ್ಯೂಸ್1 hour ago

Wayanad Landslide: ಒಂದು ಮೆಸೇಜ್‌ನಿಂದ ಉಳಿಯಿತು ಜೀವ! ವೈನಾಡಿನ ದುರಂತದ ನಡುವೆ ಪಾರಾದ ಕನ್ನಡಿಗ ಕಾರು ಚಾಲಕ

Gold Rate Today
ಚಿನ್ನದ ದರ1 hour ago

Gold Rate Today: ಆಭರಣ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಶಾಕ್‌; 10 ಗ್ರಾಂಗೆ 800 ರೂ. ಹೆಚ್ಚಳ

anurag thakur
ದೇಶ2 hours ago

Anurag Thakur: ಇಂಡಿಯಾ ಕೂಟದ ಕೊಳಕು ರಾಜಕಾರಣ ತೆರೆದಿಟ್ಟ ಅನುರಾಗ್ ಠಾಕೂರ್; ಈ ವಿಡಿಯೊ ತಪ್ಪದೇ ನೋಡಿ ಎಂದ ಮೋದಿ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ19 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ22 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ23 hours ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌