Personality Test: ನೀವು ಒಳ್ಳೆಯವರೇ, ಕೆಟ್ಟವರೇ?; ನಿಮ್ಮನ್ನೇ ನೀವು ಪರೀಕ್ಷಿಸಬೇಕಾದರೆ ಇದನ್ನು ಓದಿ! - Vistara News

ಲೈಫ್‌ಸ್ಟೈಲ್

Personality Test: ನೀವು ಒಳ್ಳೆಯವರೇ, ಕೆಟ್ಟವರೇ?; ನಿಮ್ಮನ್ನೇ ನೀವು ಪರೀಕ್ಷಿಸಬೇಕಾದರೆ ಇದನ್ನು ಓದಿ!

Personality Test: ಒಳ್ಳೆಯವರು ಯಾರು, ಕೆಟ್ಟವರು ಯಾರು ಎಂಬುದನ್ನು ಕಡ್ಡಿ ಮುರಿದ ಹಾಗೆ ಹೇಳುವುದು ಕಷ್ಟವೇ ಆದರೂ, ಈ ಕೆಲವು ಗುಣಗಳು ನಿಮ್ಮಲ್ಲಿ ನಿಮಗೆ ಕಾಣಿಸಿದರೆ, ಅಥವಾ ಬೇರವರಲ್ಲಿ ಕಂಡರೆ, ಅವರು ತೋರಿಕೆಗೆ ಒಳ್ಳೆಯವರೆಂದು ಅನಿಸಿದರೂ, ನೀವಂದುಕೊಂಡಷ್ಟು ಒಳ್ಳೆಯವರಲ್ಲ ಎಂದುಕೊಳ್ಳಬಹುದು. ಇದು ನಮಗೂ ಅನ್ವಯಿಸುತ್ತದೆ. ನಿಮಗೆ ನೀವು ಮಾಡಿದ್ದು ಎಲ್ಲ ಸಂದರ್ಭದಲ್ಲೂ ಸರಿಯೇ ಅನಿಸಿದರೂ ಖಂಡಿತ ಒಮ್ಮೆ ಯೋಚಿಸಿ!

VISTARANEWS.COM


on

Personality Test
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಹಳಷ್ಟು ಸಾರಿ ನಾವು ನಮ್ಮ ಜೊತೆಗಿರುವವರನ್ನು ಬಹುಬೇಗನೆ ಜಡ್ಜ್‌ ಮಾಡಿಬಿಡುತ್ತೇವೆ. ಕೆಲವು ಸಂದರ್ಭಗಳಲ್ಲಿ ಅವರ ನಡತೆಯನ್ನು ಕಂಡ ನಾವು ಅವರಿಗೆ ಹಣೆಪಟ್ಟಿ ಅಂಟಿಸಿಬಿಡುತ್ತೇವೆ. ಅಂಥ ಪರಿಸ್ಥಿತಿಯಲ್ಲಿ ನಾವು ಇದ್ದರೆ ಹೇಗೆ ಎಂದು ಯೋಚಿಸಿರುವುದಿಲ್ಲ. ಕೆಲವೊಮ್ಮೆ ನಮ್ಮನ್ನೂ ಬೇರೆಯವರು ಹಾಗೆ ತಿಳಿಯುವುದುಂಟು. ಕೆಲವರು ಹೊರಗಿನಿಂದ ಅದ್ಭುತ ಅನಿಸಿದರೂ, ಒಳಗಿನಿಂದ ಹಾಗಲ್ಲ ಎಂದು ತಿಳಿಯುವುದಕ್ಕೆ ವರ್ಷಗಳೇ ಬೇಕಾಗುತ್ತವೆ. ಹಲವು ಕಷ್ಟದ ಸಂದರ್ಭಗಳು, ಖುಷಿಯ ಸನ್ನಿವೇಶಗಳು ನಮ್ಮ ಆತ್ಮೀಯರು ಯಾರು, ಒಳ್ಳೆಯವರು ಯಾರು ಎಂಬುದನ್ನು ನಮಗೆ ಪರಿಚಯ (Personality Test) ಮಾಡಿಸಿಕೊಡುತ್ತದೆ. ಒಳ್ಳೆಯವರು ಯಾರು, ಕೆಟ್ಟವರು ಯಾರು ಎಂಬುದನ್ನು ಕಡ್ಡಿ ಮುರಿದ ಹಾಗೆ ಹೇಳುವುದು ಕಷ್ಟವೇ ಆದರೂ, ಈ ಕೆಲವು ಗುಣಗಳು ನಿಮ್ಮಲ್ಲಿ ನಿಮಗೆ ಕಾಣಿಸಿದರೆ, ಅಥವಾ ಬೇರವರಲ್ಲಿ ಕಂಡರೆ, ಅವರು ತೋರಿಕೆಗೆ ಒಳ್ಳೆಯವರೆಂದು ಅನಿಸಿದರೂ, ನೀವಂದುಕೊಂಡಷ್ಟು ಒಳ್ಳೆಯವರಲ್ಲ ಎಂದುಕೊಳ್ಳಬಹುದು. ಇದು ನಮಗೂ ಅನ್ವಯಿಸುತ್ತದೆ. ನಿಮಗೆ ನೀವು ಮಾಡಿದ್ದು ಎಲ್ಲ ಸಂದರ್ಭದಲ್ಲೂ ಸರಿಯೇ ಅನಿಸಿದರೂ ಖಂಡಿತ ಒಮ್ಮೆ ಯೋಚಿಸಿ. ಬನ್ನಿ, ಇದು ಆತ್ಮವಿಮರ್ಶೆಗೆ ಸಕಾಲ.

Personality Development
Personality Development

ಸದಾ ಕಾಲ ಒಂದೇ ಸಮನಾಗಿರುವುದಿಲ್ಲ

ನಾವೇನು ಹೇಳುತ್ತೇವೆ ಅನ್ನುವುದಕ್ಕಿಂತಲೂ, ನಾವೇನು ಮಾಡುತ್ತೇವೆ ಅನ್ನುವುದು ಮುಖ್ಯವಾಗುತ್ತದೆ. ನಮ್ಮೆದುರು ಚಂದ ಮಾತನಾಡಿ ಹೋದವರು ಮಾತಿನಲ್ಲಂದರೆ ಕೃತಿಯಲ್ಲಿರುವುದಿಲ್ಲ ಎಂಬುದು ನಂತರ ತಿಳಿಯುತ್ತದೆ. ನೀವೂ ಹೀಗೇನಾ? ಮಾತಿಗೂ ಕೃತಿಗೂ ತಾಳಮೇಳ ಸರಿ ಬರದಿದ್ದರೆ, ಖಂಡಿತ ನಾವು ನಾವಂದುಕೊಂಡಷ್ಟು ಒಳ್ಳೆಯವರಲ್ಲ.

ಯಾವಾತ್ತೂ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ

ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ ನಿಜ. ಆದರೆ, ಆ ತಪ್ಪುಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಕೆಲವೊಮ್ಮೆ ಗೊತ್ತಿಲ್ಲದೆ ತಪ್ಪುಗಳಾಗುತ್ತವೆ. ಆದರೆ, ತಪ್ಪನ್ನು ತಿದ್ದಿ ಮುನ್ನಡೆಯುವುದು, ಅದನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವುದು ಇತ್ಯಾದಿಗಳೂ ಸೇರುತ್ತವೆ. ಆ ಜವಾಬ್ದಾರಿಯನ್ನೇ ಹೊರಲು ಸಿದ್ಧವಿಲ್ಲದಿದ್ದರೆ? ಆಗ ಖಂಡಿತ ಒಳ್ಳೆಯತನವೂ ನಿರ್ಧಾರವಾಗುತ್ತದೆ.

ಸೇಡು ಉಳಿಸಿಕೊಂಡಿರುವುದು

ಮನುಷ್ಯನಾಗಿ ವರ್ತಿಸುವುದು ಎಂದರೆ, ಸದಾ ಕ್ಷಮೆಯ ಗುಣವನ್ನೂ ಹೊತ್ತಿರುವುದು. ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ. ಜೊತೆಗೆ ಪ್ರತಿಯೊಬ್ಬರೂ ಕ್ಷಮೆಗೆ ಅರ್ಹರು. ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಖಂಡಿತಾ ಬೇಕು. ಯಾವತ್ತೋ ಏನೋ ಆದ ವಿಚಾರವನ್ನೇ ಮನಸ್ಸಿನಲ್ಲಿ ಹಿಡಿದಿಟ್ಟುಕೊಂಡು ಸೇಡು ತೀರಿಸಿಕೊಳ್ಳುವುದು ಒಳ್ಳೆಯ ಮನುಷ್ಯನ ಲಕ್ಷಣವಂತೂ ಖಂಡಿತಾ ಅಲ್ಲ. ನಿಮ್ಮಲ್ಲೂ ಸೇಡಿನ ಬುದ್ಧಿ ಇದೆಯೇ?

4 ವಿಕ್ಟಿಮ್‌ ಕಾರ್ಡ್‌ ಪ್ಲೇ ಮಾಡುವವರು

ಯಾವುದೇ ಸನ್ನಿವೇಶ ಬಂದರೂ ತಮಗೆ ಅನ್ಯಾಯವಾಗಿದೆ ಎಂದು ಬಿಂಬಿಸುವ ಮಂದಿ ಇರುತ್ತಾರೆ. ಎಲ್ಲಿದ್ದರೂ, ತಮ್ಮನ್ನೇ ತಾವು ಅಂತಹ ಪರಿಸ್ಥಿತಿಯಲ್ಲಿ ನಿಲ್ಲಿಸಿಕೊಳ್ಳುತ್ತಾರೆ. ಎಲ್ಲ ಕರುಣೆ ತಮ್ಮ ಮೇಲಿರಲಿ ಎಂದು ಬಯಸುತ್ತಾರೆ. ತಮ್ಮದೇ ತಪ್ಪಿದ್ದರೂ ಅವರು ಹೀಗೆ ಮಾಡುವಲ್ಲಿ ಬಹಳ ಸಾರಿ ಯಶಸ್ವಿಯೂ ಆಗುತ್ತಾರೆ. ಇಂತಹ ಮಂದಿಯೂ ಅಷ್ಟೇ, ಒಳ್ಳೆಯ ಗುಣದವರು ಎಂದು ಹೇಳಲು ಸಾಧ್ಯವಿಲ್ಲ.

ಗಾಸಿಪ್‌ ಮಾಡುವವರು

ಗಾಸಿಪ್‌ ಮಾಡುವುದು ಬಹಳ ಸಲ ಹಾರ್ಮ್‌ಲೆಸ್‌ ಅನ್ನಬಹುದು. ಆದರೆ, ಬಹಳ ಸಲ ಇದು ಬೇರೆ ವ್ಯಕ್ತಿಯ ವ್ಯಕ್ತಿತ್ವವನ್ನು ಜಡ್ಜ್‌ ಮಾಡುವಂತೆ ಮಾಡುತ್ತದೆ. ಕೆಲವರಿಗೆ ಸದಾ ಬೇರೆಯವರ ಬಗ್ಗೆ ಆಡಿಕೊಳ್ಳುವುದರಲ್ಲೇ ಸಂತೋಷ. ಮತ್ತೊಬ್ಬರು ತಮ್ಮ ಆಪ್ತರು ಎಂದು ಹಂಚಿಕೊಂಡ ಖಾಸಗಿ ಸಂಗತಿಗಳನ್ನೂ ಇವರು ಸಿಕ್ಕಸಿಕ್ಕವರಲ್ಲಿ ಗಾಸಿಪ್‌ ಮಾಡುತ್ತಾರೆ. ಇವು ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡುತ್ತವೆ. ಹಾಗಾಗಿ ಇದು ಖಂಡಿತ ಒಳ್ಳೆಯದಲ್ಲ.

ಸಹಾನುಭೂತಿ ಇಲ್ಲದಿರುವವರು

ಮನುಷ್ಯನಿಗೆ ಸಹಾನುಭೂತಿ ಬಹಳ ಮುಖ್ಯ. ಇನ್ನೊಬ್ಬರು ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬುದನ್ನು ಅರಿತುಕೊಂಡು ಕಾಳಜಿ, ಕಳಕಳಿ ವ್ಯಕ್ತ ಪಡಿಸುವುದು, ಅರ್ಥ ಮಾಡಿಕೊಳ್ಳುವುದು, ಅವರ ನೋವಿಗೆ ಕಿವಿಯಾಗುವುದು, ಸಾಂತ್ವನ ಹೇಳುವುದು ಬಹಳ ಮುಖ್ಯ. ಅವೇ ಇಲ್ಲವಾದರೆ, ಒಳ್ಳೆಯವರಾಗುವುದು ಕಷ್ಟ.

ಇದನ್ನೂ ಓದಿ: Red Spinach Benefits: ಕೆಂಪು ಹರಿವೆ; ಇದು ಕೇವಲ ಸೊಪ್ಪಲ್ಲ, ಪೋಷಕಾಂಶಗಳ ಪವರ್‌ಹೌಸ್‌!

ಮತ್ತೊಬ್ಬರ ಸಂತೋಷವನ್ನು ಆನಂದಿಸದೆ ಇರುವವರು

ಕೆಲವರಿಗೆ ಬೇರೆವರು ಸಂತೋಷದಿಂದಿರುವುದನ್ನು ಕಂಡರೆ ಸಹಿಸಲು ಸಾಧ್ಯವಾಗುವುದಿಲ್ಲ. ಬೇರೆಯವರ ಖುಷಿ, ಗೆಲುವು, ಸಂಭ್ರಮ, ಏಳಿಗೆಗಳು ಅವರಿಗೆ ಚೇಳಿನಂತೆ ಕುಟುಕುತ್ತಿರುತ್ತದೆ. ಅಸಾಧಯವಾದ ಅಸೂಯೆ ಮೈತಳೆಯುತ್ತದೆ. ಗೆಳೆಯರೇ ಆದರೂ ಹೊಟ್ಟೆಕಿಚ್ಚಾಗುತ್ತದೆ. ಇಂತಹ ಸ್ವಭಾವವೂ ಅಷ್ಟೇ ಒಳ್ಳೆಯದನ್ನು ಮಾಡದು. ಇದು ಒಳ್ಳೆಯತನವೂ ಅಲ್ಲ. ಈ ಗುಣಗಳು ನಿಮ್ಮಲ್ಲಿವೆಯೇ? ನಿಮ್ಮ ಓರಗೆಯರಲ್ಲಿ ನಿಮಗೆ ಕಂಡಿದೆಯೇ? ಇದು ಖಂಡಿತಾ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳುವ ಸಮಯ. ನಿಮ್ಮನ್ನೇ ಚಿವುಟಿ ನೋಡೊಕೊಳ್ಳಿ ಒಮ್ಮೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips: ಏನ್ ನಿಂಗೆ ಕೊಬ್ಬಾ ಅನ್ನಬೇಡಿ ಕೊಬ್ಬೂ ಇರಬೇಕು!

Health Tips: ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ, ಕೋಶಗಳ ಬೆಳವಣಿಗೆಗೆ, ಶಕ್ತಿ ಸಂಚಯನಕ್ಕೆ, ಸತ್ವಗಳನ್ನು ಹೀರಿಕೊಳ್ಳುವುದಕ್ಕೆ- ಇಂಥ ಹಲವು ಕೆಲಸಗಳಿಗೆ ಕೊಬ್ಬಿನಂಶ ನಮಗೆ ಬೇಕಾಗುತ್ತದೆ. ಅಂದಮಾತ್ರಕ್ಕೆ ಕರಿದ ಆಹಾರಗಳನ್ನು ಮನಸೋಇಚ್ಛೆ ತಿನ್ನಬಹುದು ಎಂದರ್ಥವಲ್ಲ. ಮತ್ತೆ ಹೇಗೆ? ಇಲ್ಲಿದೆ ವಿವರ.

VISTARANEWS.COM


on

Health Tips
Koo

ಕೊಬ್ಬಿನ ಆಹಾರಗಳು ಎನ್ನುತ್ತಿದ್ದಂತೆ ಬೆಚ್ಚಿ ಬೀಳುತ್ತೇವೆ. ಮೈ-ಕೈಯೆಲ್ಲ ಕೊಬ್ಬು ತುಂಬಿ ಬಲೂನಿನಂತೆ ಊದಿಕೊಂಡು, ಒಂದು ದಿನ ಫಟ್ಟೆಂದು ಒಡೆದು ಹೋದೀತೆನ್ನುವ ಹಾಗೆ ಹೆದರಿ ನಡುಗುತ್ತೇವೆ. ನಮ್ಮ ಎಲ್ಲಾ ರಕ್ತನಾಳಗಳೂ ಕೊಲೆಸ್ಟ್ರಾಲ್‌ ತುಂಬಿಕೊಂಡು ಬಿರಿದು ಹೋಗುತ್ತವೆ ಎಂದು ಮಾಧ್ಯಮಗಳಲ್ಲೆಲ್ಲಾ ಭೀತಿ ಹುಟ್ಟಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಲೋ-ಫ್ಯಾಟು, ಲೋ-ಕಾರ್ಬು ಎನ್ನುತ್ತಾ ತುದಿಬುಡವಿಲ್ಲದ ಏನೇನೋ ಡಯೆಟ್‌ಗಳನ್ನು ಮಾಡಿಕೊಂಡು ದೇಹವನ್ನು ಸೊರಗಿಸುತ್ತೇವೆ. ಅಷ್ಟಾದರೂ ನಮ್ಮ ಫಿಟ್‌ನೆಸ್‌ ಗುರಿಯನ್ನು ತಲುಪುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ. ಬದಲಿಗೆ ಮೈ-ಕೈಯೆಲ್ಲ ನೋವಾಗಿ ಕೀಲುಗಳು ʻಕಿರ್‌…ʼಗುಡಲು ಪ್ರಾರಂಭಿಸುತ್ತವೆ. ಏನಿದರರ್ಥ? ಕೊಬ್ಬಿನ ಆಹಾರಗಳು ನಮಗೆ ಅಗತ್ಯವೆಂದೇ? ಹೌದಾದರೆ, ಎಂಥ ಕೊಬ್ಬು (Health Tips) ನಮಗೆ ಬೇಕು? ಆಹಾರದಲ್ಲಿ ಸಮತೋಲನ ಸಾಧಿಸುವುದೆಂದರೆ ದೇಹಕ್ಕೆ ಬೇಕಾದಷ್ಟು ಒಳ್ಳೆಯ ಕೊಬ್ಬಿನ ಆಹಾರಗಳನ್ನೂ ನೀಡುವುದು ಎಂದೇ ಅರ್ಥ. ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ, ಕೋಶಗಳ ಬೆಳವಣಿಗೆಗೆ, ಶಕ್ತಿ ಸಂಚಯನಕ್ಕೆ, ಸತ್ವಗಳನ್ನು ಹೀರಿಕೊಳ್ಳುವುದಕ್ಕೆ- ಇಂಥ ಹಲವು ಕೆಲಸಗಳಿಗೆ ಕೊಬ್ಬಿನಂಶ ನಮಗೆ ಬೇಕಾಗುತ್ತದೆ. ಅಂದಮಾತ್ರಕ್ಕೆ ಕರಿದ ಆಹಾರಗಳನ್ನು ಮನಸೋಇಚ್ಛೆ ತಿನ್ನಬಹುದು ಎಂದರ್ಥವಲ್ಲ. ಮತ್ಸಾಹಾರಗಳು, ಡೇರಿ ಮತ್ತು ಸಸ್ಯಜನ್ಯ ಆಹಾರಗಳು ನಮ್ಮ ದೇಹಕ್ಕೆ ಅಗತ್ಯವಾದ ಒಳ್ಳೆಯ ಕೊಬ್ಬನ್ನು ಯಥೇಚ್ಛವಾಗಿ ಒದಗಿಸಬಲ್ಲವು. ಸಸ್ಯಾಹಾರಿಗಳಿಗೆ ಸೂಕ್ತವಾದಂಥ ಕೊಬ್ಬಿನ ಮೂಲಗಳನ್ನು ಇಲ್ಲಿ ವಿವರಿಸಲಾಗಿದೆ.

Avocado slices

ಅವಕಾಡೊ

ಬೆಣ್ಣೆ ಹಣ್ಣು ಎಂದೂ ಕರೆಯಲಾಗುವ ಈ ಹಣ್ಣಿನ ಋತುವೇ ಮಳೆಗಾಲದ ಹೊತ್ತು. ಇದೀಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಬೆಣ್ಣೆ ಹಣ್ಣನ್ನು ತೃಪ್ತಿಯಾಗುವಷ್ಟು ಸವಿಯಿರಿ. ಮಾನೊಅನ್‌ಸ್ಯಾಚುರೇಟೆಡ್‌ ಎಂದು ಇದರಲ್ಲಿರುವ ಕೊಬ್ಬನ್ನು ಕರೆಯಲಾಗುತ್ತದೆ. ಹೃಯದ ಆರೋಗ್ಯಕ್ಕೆ ಹೇಳಿ ಮಾಡಿಸಿದಂಥ ಹಣ್ಣಿದು. ಇದನ್ನು ಸ್ಯಾಂಡ್‌ವಿಚ್‌, ಸ್ಮೂದಿ, ಸಲಾಡ್‌ಗಳ ಜೊತೆಗೆ ಸೇರಿಸಿಕೊಂಡು ತಿನ್ನಬಹುದು ಅಥವಾ ಹಾಗೆಯೇ ಸವಿಯಲೂಬಹುದು.

ಚೀಸ್‌

ಇದರಲ್ಲಿ ಹಲವು ರೀತಿಯ ರುಚಿಕರ ಆಯ್ಕೆಗಳು ಲಭ್ಯವಿವೆ. ಅದರಲ್ಲೂ ಕಡಿಮೆ ಕೊಬ್ಬಿನ ಫೆಟಾ ಅಥವಾ ಕಾಟೇಜ್‌ ಚೀಸ್‌ಗಳು, ಪನೀರ್‌ನಂಥವು ಸಿಕ್ಕಾಪಟ್ಟೆ ಒಳ್ಳೆಯ ಸತ್ವಗಳನ್ನು ಒದಗಿಸುತ್ತವೆ. ಪ್ರೊಟೀನ್‌ ಸಹ ಇವುಗಳಲ್ಲಿ ಸಾಂದ್ರವಾಗಿದ್ದು, ಉತ್ತಮ ಕೊಬ್ಬಿನಂಶವನ್ನು ದೇಹಕ್ಕೆ ನೀಡುತ್ತವೆ. ಆಹಾರಗಳ ರುಚಿಯನ್ನೂ ವೃದ್ಧಿಸುತ್ತವೆ.

ಕಾಯಿ-ಬೀಜಗಳು

ಬಾದಾಮಿ, ವಾಲ್‌ನಟ್‌, ಗೋಡಂಬಿ, ಪಿಸ್ತಾ ಮುಂತಾದ ಕಾಯಿಗಳಂಥವು, ಅಗಸೆ, ಚಿಯಾ, ಸೂರ್ಯಕಾಂತಿ ಬೀಜ, ಕುಂಬಳ ಬೀಜದಂಥ ಸಣ್ಣ ಬೀಜಗಳು ಅತ್ಯಂತ ಆರೋಗ್ಯಕರ ಕೊಬ್ಬನ್ನು ನೀಡುವುದರ ಜೊತೆಗೆ, ನಾರು ಮತ್ತು ಪ್ರೊಟೀನ್‌ಗಳನ್ನೂ ದೇಹಕ್ಕೆ ಒದಗಿಸುತ್ತವೆ. ಇವುಗಳಲ್ಲಿರುವ ಒಮೇಗಾ ೩ ಕೊಬ್ಬಿನಾಮ್ಲವು ಆರೋಗ್ಯಕ್ಕೆ ಬಹಳಷ್ಟು ಲಾಭಗಳನ್ನು ತಂದು ಕೊಡಬಲ್ಲದು. ಹೃದಯ, ಮೆದುಳುಗಳನ್ನು ಸ್ವಸ್ಥವಾಗಿಡುವುದಕ್ಕೆ ಇಂಥ ಒಳ್ಳೆಯ ಕೊಬ್ಬುಗಳು ಬೇಕು.

Olive oil Foods You Should Never Refrigerate

ಆಲಿವ್‌ ಎಣ್ಣೆ

ಇದು ಮೆಡಿಟರೇನಿಯನ್‌ ಆಹಾರಪದ್ಧತಿಯಲ್ಲಿ ಹೇರಳವಾಗಿ ಬಳಕೆಯಲ್ಲಿದೆ. ಇದರಲ್ಲಿಯೂ ಮಾನೊಅನ್‌ಸ್ಯಾಚುರೇಟೆಡ್‌ ಕೊಬ್ಬಿನಂಶ ವಿಫುಲವಾಗಿದೆ. ಈ ಕೊಬ್ಬು ಹೃದಯದ ಆರೋಗ್ಯ ರಕ್ಷಣೆಗೆ ಪೂರಕವಾದದ್ದು. ಆದರೆ ಇದನ್ನು ಹೆಚ್ಚಿನ ಉಷ್ಣತೆಯಲ್ಲಿ ಬಿಸಿ ಮಾಡಲು ಸಾಧ್ಯವಿಲ್ಲ. ಕಡಿಮೆ ಉಷ್ಣತೆಯ ಆಹಾರಗಳ ತಯಾರಿಕೆಗೆ, ಸಲಾಡ್‌ಗಳಿಗೆ ಇದನ್ನು ಹೇರಳವಾಗಿ ಬಳಸಬಹುದು.

ಕೊಬ್ಬರಿ ಎಣ್ಣೆ

ತೆಂಗಿನ ಕಾಯಿ ಮತ್ತು ತೆಂಗಿನ ಎಣ್ಣೆಯಲ್ಲೂ ಒಳ್ಳೆಯ ಕೊಬ್ಬಿನಂಶವಿದೆ. ಇದರಲ್ಲಿರುವ ಮಧ್ಯಮ ಕೊಂಡಿಯ ಟ್ರೈಗ್ಲಿಸರೈಡ್‌ಗಳು (ಎಂಸಿಟಿ) ಆರೋಗ್ಯಕ್ಕೆ ಪೂರಕ ಎನ್ನುತ್ತವೆ ಅ‍್ಯಯನಗಳು. ಅಡುಗೆಯಲ್ಲಿ ತೆಂಗಿನ ಕಾಯಿಯನ್ನು ಬಳಸುವುದರ ಜೊತೆಗೆ, ತೆಂಗಿನ ಹಾಲು ಮತ್ತು ತೆಂಗಿನ ಎಣ್ಣೆಯನ್ನೂ ಹಿತ-ಮಿತವಾಗಿ ಬಳಸುವುದು ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮಗಳನ್ನು ಉಂಟು ಮಾಡುತ್ತದೆ.

ಇದನ್ನೂ ಓದಿ: Mushroom Benefits: ಅಣಬೆ ಎಂಬ ವಿಟಮಿನ್‌ ಡಿ! ಇದರ ಆರೋಗ್ಯ ಲಾಭ ತಿಳಿದರೆ ನೀವು ತಿನ್ನದೆ ಇರಲಾರಿರಿ!

ಮೊಸರು, ತುಪ್ಪ

ಸಾಮಾನ್ಯವಾಗಿ ತುಪ್ಪದಿಂದ ದೊರೆಯುವ ಕೊಬ್ಬಿನ ಮೂಲವನ್ನು ಎಲ್ಲರೂ ಶಿಫಾರಸು ಮಾಡುವುದಿಲ್ಲ. ಆದರೆ ಇದು ಸಹ ಮೀಡಿಯಂ ಚೈನ್‌ ಟ್ರೈಗ್ಲಿಸರೈಡ್‌ಗಳ ಸಾಲಿಗೇ ಬರುತ್ತದೆ. ಮಿತವಾಗಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಮೊಸರು ಒಳ್ಳೆಯ ಕೊಬ್ಬಿನೊಂದಿಗೆ ಸಾಕಷ್ಟು ಪ್ರಮಾಣದ ಪ್ರೊಬಯಾಟಿಕ್‌ ಅಂಶಗಳನ್ನೂ ನೀಡುತ್ತದೆ.

Continue Reading

ಪ್ರವಾಸ

Kerala Tour: ಕೇರಳದಲ್ಲಿ ನೋಡಲೇಬೇಕಾದ 10 ಅದ್ಭುತ ಸ್ಥಳಗಳಿವು!

ಪ್ರಕೃತಿಯ ಶೃಂಗಾರಕ್ಕೆ ಕಳಶವಿಟ್ಟಂತೆ ಕೇರಳದ (Kerala Tour) ಸಂಸ್ಕೃತಿ ಶ್ರೀಮಂತ ಐತಿಹಾಸಿಕ ಪರಂಪರೆಯನ್ನು ನೆನಪಿಸುತ್ತದೆ. ಕಡಲ ತೀರದಲ್ಲಿ ಹೆಜ್ಜೆ ಹಾಕುತ್ತ ಇಲ್ಲಿನ ಸೌಂದರ್ಯವನ್ನು ಸವಿಯುತ್ತ, ಬೆಟ್ಟ ಗುಡ್ಡಗಳಲ್ಲಿ ಅಡಗಿರುವ ಗುಪ್ತ ರತ್ನಗಳನ್ನು ಶೋಧಿಸುತ್ತಾ ಹೊರಟರೆ ಪ್ರವಾಸ ಸುಂದರ ನೆನಪುಗಳನ್ನು ಕಟ್ಟಿಕೊಡುವುದು. ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಬೆರಗುಗೊಳಿಸುವ ನೈಸರ್ಗಿಕ ಸೌಂದರ್ಯ ಮತ್ತು ಬೆಚ್ಚಗಿನ ಆತಿಥ್ಯ ಪ್ರವಾಸಿಗರಿಗೆ ಮರೆಯಲಾಗದ ಅನುಭವವನ್ನು ಕೊಡುವುದು. ಕೇರಳದ ಹತ್ತು ಅದ್ಭುತ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

By

Kerala Tour
Koo

ದೇವರನಾಡು ಕೇರಳ (Kerala Tour) ಈಗ ವಯನಾಡಿನಲ್ಲಿ ಭೂಕುಸಿತದಿಂದಾಗಿ (wayanad landslide) ದೇಶಾದ್ಯಂತ ಸುದ್ದಿಯಲ್ಲಿದೆ. ಇದನ್ನು ಹೊರತುಪಡಿಸಿದರೆ ಪ್ರವಾಸೋದ್ಯಮದಲ್ಲೂ (kerala tourism) ಇದು ಹೆಸರುವಾಸಿಯಾಗಿದೆ. ಹಚ್ಚ ಹಸುರಿನ ಪ್ರಕೃತಿಯ ಸೊಬಗು ಒಂದೆಡೆಯಾದರೆ ಹಿನ್ನೀರು, ಸುಂದರವಾದ ಸಮುದ್ರ ತೀರಗಳು ಮತ್ತೊಂದು ಇಲ್ಲಿನ ಆಕರ್ಷಣೆ. ಜೊತೆಗೆ ಸಾಂಸ್ಕೃತಿಕ ಪರಂಪರೆಯ ಸೊಬಗನ್ನು ಇಲ್ಲಿ ಅನುಭವಿಸಬಹುದು.

ಕೇರಳಕ್ಕೆ ಪ್ರವಾಸ ಹೊರಡುವ ಯೋಜನೆಯಲ್ಲಿದ್ದರೆ ಇಲ್ಲಿ ಹತ್ತು ಸ್ಥಳಗಳಿಗೆ ಭೇಟಿ ನೀಡಲು ಮರೆಯದಿರಿ. ಪ್ರಕೃತಿಯ ಸೌಂದರ್ಯವನ್ನು ಬೊಗಸೆಯಲ್ಲಿ ತುಂಬಿಕೊಡುವ ಇದು ಸುಂದರ ನೆನಪುಗಳ ಅನುಭವವನ್ನು ಮನದಾಳದಲ್ಲಿ ಬಿತ್ತುವುದು.


ಗವಿ

ಕೇರಳದ ಅತ್ಯಂತ ಸುಂದರ ತಾಣ ಗವಿ. ನಗರ ಜೀವನದ ಜಂಜಾಟದಿಂದ ಇದು ಪರಿಪೂರ್ಣವಾಗಿ ದೂರ ಮಾಡುತ್ತದೆ. ಇಲ್ಲಿನ ಹಸಿರು ಕಾಡುಗಳು, ರೋಮಾಂಚಕ ಬೆಟ್ಟಗಳು ಮತ್ತು ಶಾಂತ ಸರೋವರಗಳು ಮನಸ್ಸಿಗೆ ಉಲ್ಲಾಸವನ್ನು ತುಂಬುತ್ತದೆ.


ವಾಗಮೋನ್

ಕೇರಳದ ಅತ್ಯಂತ ಸುಂದರವಾದ ಗಿರಿಧಾಮ ವಾಗ್ ಮೋನ್ ಪ್ರಶಾಂತ ವಾತಾವರಣ ಮತ್ತು ಚಹಾ ತೋಟಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಈ ಸ್ಥಳವು ಪಾದಯಾತ್ರೆ, ವಿಶ್ರಾಂತಿ ಪಡೆಯಲು ಮತ್ತು ಪ್ರಕೃತಿಯನ್ನು ಆನಂದಿಸಲು ಕೆಲವು ಸ್ಪಷ್ಟ ಕಾರಣಗಳಿಗಾಗಿ ಕೇರಳವನ್ನು ದೇವರ ಸ್ವಂತ ನಾಡು ಎಂದು ಕರೆಯಲಾಗುತ್ತದೆ. ಇದರ ರೋಮಾಂಚಕ ಹಸಿರು, ಪ್ರಶಾಂತ ಹಿನ್ನೀರು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯು ಪ್ರಯಾಣಿಸಲು ಯೋಗ್ಯವಾಗಿದೆ.

Kerala Tour
Kerala Tour


ಪೊನ್ಮುಡಿ

ಹಸಿರು ಬೆಟ್ಟಗಳು ಮತ್ತು ತಂಪಾದ ವಾತಾವರಣಕ್ಕೆ ಹೆಸರುವಾಸಿಯಾದ ಕೇರಳದ ಸುಂದರವಾದ ಗಿರಿಧಾಮ ಪೊನ್ಮುಡಿ. ಈ ಸ್ಥಳವು ಟ್ರೆಕ್ಕಿಂಗ್ ಮತ್ತು ವಿಶ್ರಾಂತಿಗೆ ಸೂಕ್ತವಾಗಿದೆ.


ಕಪ್ಪಿಲ್ ಬೀಚ್

ಶಾಂತಿಯುತ ಮತ್ತು ರಮಣೀಯ ತಾಣವಾಗಿರುವ ಕಪ್ಪಿಲ್ ಬೀಚ್ ಕಡಿಮೆ ಜನಸಂದಣಿ ಇರುವ ಪ್ರದೇಶ. ಸ್ನೇಹಿತರೊಂದಿಗೆ ಸಮಯ ಕಳೆಯಲು ಮತ್ತು ಪ್ರಶಾಂತವಾದ ಸೂರ್ಯಾಸ್ತವನ್ನು ಆನಂದಿಸಲು ಇದು ಪರಿಪೂರ್ಣ ಸ್ಥಳ. ಇಲ್ಲಿ ಕೇರಳದ ಪ್ರಶಾಂತ ಕರಾವಳಿಯ ಸೌಂದರ್ಯದಲ್ಲಿ ಮಿಂದೇಳಬಹುದು.


ಕೊಲುಕ್ಕುಮಲೈ ಟೀ ಎಸ್ಟೇಟ್

ಈ ತಾಣವು ಪಶ್ಚಿಮ ಘಟ್ಟದಲ್ಲಿದೆ. ವಾರಾಂತ್ಯವನ್ನು ಕಳೆಯಲು ಸೂಕ್ತವಾದ ಸ್ಥಳವಾಗಿದೆ. ಇದು ವಿಶ್ವದ ಅತಿ ಎತ್ತರದ ಟೀ ಎಸ್ಟೇಟ್‌ಗಳಲ್ಲಿ ಇದು ಒಂದಾಗಿದೆ.


ಎಡಕ್ಕಲ್ ಗುಹೆಗಳು

ಕೇರಳದ ವಯನಾಡ್ ಜಿಲ್ಲೆಯಲ್ಲಿರುವ ಶಿಲಾ ಕೆತ್ತನೆಗಳು ಇರುವ ಪುರಾತನ ಮತ್ತು ಪ್ರಸಿದ್ಧವಾದ ಎಡಕ್ಕಲ್ ಗುಹೆಗಳು ಭೇಟಿ ನೀಡಬಹುದಾದ ಸುಂದರ ತಾಣವಾಗಿದೆ. ಈ ಪ್ರದೇಶದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಸುಂದರವಾದ ಭೂದೃಶ್ಯಗಳನ್ನು ಆನಂದಿಸಬಹುದು.


ಅಷ್ಟಮುಡಿ ಸರೋವರ

ಭವ್ಯವಾದ ಹಸಿರಿನಿಂದ ಆವೃತವಾಗಿರುವ ಸುಂದರವಾದ ಸರೋವರವಾಗಿದೆ. ಮೀನುಗಾರಿಕೆ, ವಿಶ್ರಾಂತಿ ಮತ್ತು ಪಕ್ಷಿಗಳನ್ನು ವೀಕ್ಷಿಸಲು ಇದು ಪರಿಪೂರ್ಣ ತಾಣವಾಗಿದೆ.


ಪೂವಾರ್

ಕೇರಳದ ಈ ಸುಂದರ ಪಟ್ಟಣವು ರೋಮಾಂಚಕ ಸ್ಥಳಗಳು ಮತ್ತು ಬೆರಗುಗೊಳಿಸುವ ನೋಟಗಳಿಗೆ ಹೆಸರುವಾಸಿಯಾಗಿದೆ. ವಿಶ್ರಾಂತಿ ಪಡೆಯಲು ಬಯಸುವವರಿಗೆ ಇಷ್ಟವಾಗುವ ಸ್ಥಳವಾಗಿದೆ. ಇಲ್ಲಿ ದೋಣಿ ವಿಹಾರವನ್ನು ಆನಂದಿಸಬಹುದು.

ಇದನ್ನೂ ಓದಿ: Lakshadweep Tour: ಲಕ್ಷದ್ವೀಪದಲ್ಲಿ ಪ್ರವಾಸಿಗರನ್ನು ಸೆಳೆಯುವ ಪಂಚರತ್ನಗಳಿವು


ವಯನಾಡ್ ವನ್ಯಜೀವಿ ಅಭಯಾರಣ್ಯ

ವನ್ಯಜೀವಿ ಅಭಯಾರಣ್ಯವು ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಇದು ಆನೆಗಳು ಮತ್ತು ಹುಲಿಗಳು ಸೇರಿದಂತೆ ವಿವಿಧ ವನ್ಯಜೀವಿಗಳಿಗೆ ನೆಲೆಯಾಗಿದೆ.


ಬೇಕಲ ಕೋಟೆ

ಕಲ್ಲಿನ ಗೋಡೆಗಳು ಮತ್ತು ದೀಪಸ್ತಂಭಕ್ಕೆ ಹೆಸರುವಾಸಿಯಾದ ಈ ಐತಿಹಾಸಿಕ ಕೋಟೆಯನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇತಿಹಾಸದ ಉತ್ಸಾಹಿಗಳಿಗೆ ಮತ್ತು ನೆಮ್ಮದಿಯ ವಿಹಾರವನ್ನು ಬಯಸುವವರಿಗೆ ಇದು ಸೂಕ್ತ ತಾಣವಾಗಿದೆ.

Continue Reading

ಫ್ಯಾಷನ್

Friendshipday Fashion: ಮಾನ್ಸೂನ್‌‌‌ನಲ್ಲಿ ಟ್ರೆಂಡಿಯಾದ ಫ್ರೆಂಡ್‌‌‌ಶಿಪ್‌ ಡೇ ಫ್ಯಾಷನ್‌ ಥೀಮ್‌

Friendshipday Fashion: ಪ್ರತಿ ವರ್ಷವೂ ಅಗಸ್ಟ್ ಮೊದಲ ಭಾನುವಾರ ಸೆಲೆಬ್ರೇಟ್‌ ಮಾಡುವ ಫ್ರೆಂಡ್‌ ಶಿಪ್‌ ಡೇಯಂದು ಒಮ್ಮೆ ಕಾಣಿಸಿಕೊಂಡ ಫ್ಯಾಷನ್‌ ಮತ್ತೊಮ್ಮೆ ಕಾಣಿಸುವುದಿಲ್ಲ! ಬದಲಾಗುತ್ತಿರುತ್ತದೆ. ಹಾಗಾದಲ್ಲಿ, ಈ ಬಾರಿ ಯಾವ ರೀತಿಯ ಫ್ಯಾಷನ್‌ ಜಾರಿ ಬರುತ್ತಿದೆ. ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ಫ್ರೆಂಡ್‌ಶಿಪ್‌ ಸ್ಟೈಲಿಂಗ್‌ ಮಾಡುವುದು ಹೇಗೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.

VISTARANEWS.COM


on

friendshipday fashion
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ನಲ್ಲಿ ಫ್ರೆಂಡ್‌ಶಿಪ್‌ ಡೇ ಫ್ಯಾಷನ್‌ (Friendshipday Fashion) ಥೀಮ್‌ ಟ್ರೆಂಡಿಯಾಗಿದೆ. ಹೌದು, ಪ್ರತಿ ವರ್ಷದಂತೆ ಈ ವರ್ಷವೂ ಅಗಸ್ಟ್ ನ ಮೊದಲ ಭಾನುವಾರ ಸೆಲೆಬ್ರೇಟ್‌ ಫ್ರೆಂಡ್‌ ಶಿಪ್‌ ಡೇ ಫ್ಯಾಷನ್‌ನ ಕಾನ್ಸೆಪ್ಟ್ ಒಂದೇ ಎಂದೆನಿಸಿದರೂ ಥೀಮ್‌ ಹಾಗೂ ಸ್ಟೈಲಿಂಗ್‌ ಪ್ರತಿ ವರ್ಷ ಬದಲಾಗುತ್ತದೆ. ಫ್ರೆಂಡ್ಸ್ ಗ್ರೂಪ್‌ನಲ್ಲಿ ಒಮ್ಮೆ ಕಾಣಿಸಿಕೊಂಡ ಫ್ಯಾಷನ್‌ ಮುಂಬರುವ ವರ್ಷ ಕಾಣಿಸುವುದಿಲ್ಲ! ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಹಾಗಾದಲ್ಲಿ ಈ ಬಾರಿಯ ಫ್ರೆಂಡ್‌ಶಿಪ್‌ ಡೇ ಫ್ಯಾಷನ್‌ ಏನು? ಹೇಗೆಲ್ಲಾ ಕಾಣಿಸಿಕೊಳ್ಳಬಹುದು? ಮಾನ್ಸೂನ್‌ ಫ್ರೆಂಡ್‌ಶಿಪ್‌ ಡೇ ಲುಕ್‌ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.

Friendshipday Fashion

ಫ್ರೆಂಡ್‌ಶಿಪ್‌ ಡೇಗೂ ಬಂತು ಫ್ಯಾಷನ್‌ ಥೀಮ್‌

ಫ್ರೆಂಡ್‌ಶಿಪ್‌ ಡೇ ಆಚರಿಸುವ ಸ್ನೇಹಿತರು ಹಾಗೂ ಅವರ ಗ್ರೂಪ್‌ಗಳು, ತಮ್ಮದೇ ಆದ ಥೀಮ್‌ ಫ್ಯಾಷನ್‌ ಫಾಲೋ ಮಾಡಲಾರಂಭಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಮಾಲ್‌-ಶಾಪ್‌ಗಳಲ್ಲಿ ಬಲ್ಕ್‌ ಆರ್ಡರ್ನಲ್ಲಿ ಫ್ಯಾಷನ್‌ವೇರ್‌ಗಳೂ ದೊರೆಯುತ್ತಿವೆ. ಕಾರ್ಪೋರೇಟ್‌ ಕಚೇರಿಯ ಉದ್ಯೋಗಿಗಳಾಗಿರಬಹುದು ಅಥವಾ ಕಾಲೇಜು ಹುಡುಗ-ಹುಡುಗಿಯರಾಗಿರಬಹುದು. ಅವರವರ ಗ್ರೂಪ್‌ನ ಅಭಿರುಚಿಗೆ ತಕ್ಕಂತೆ ಫ್ಯಾಷನ್‌ ಥೀಮ್‌ಗಳನ್ನು ರೂಪಿಸಿಕೊಂಡು ಫ್ಯಾಷನ್‌ವೇರ್‌ಗಳನ್ನು ಧರಿಸುವುದು ಟ್ರೆಂಡಿಯಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇನ್ನು, ಥೀಮ್‌ ಎಂದಾಕ್ಷಣಾ ಗುಂಪಿನ ಎಲ್ಲರ ಔಟ್‌ಫಿಟ್‌ಗಳು ಒಂದೇ ಆಗಿರಬೇಕೆಂದಿಲ್ಲ! ಒಟ್ಟಿನಲ್ಲಿ ಅವರೆಲ್ಲರೂ ಧರಿಸುವ ಯಾವುದೇ ಉಡುಪು ಅಥವಾ ಆಕ್ಸೆಸರೀಸ್‌ ಇಲ್ಲವೇ ಸ್ಟೈಲಿಂಗ್‌ ಒಂದೇ ಬಗೆಯದ್ದಾಗಿರಬಹುದು. ಅದು ಔಟಿಂಗ್‌ನದ್ದಾಗಿರಬಹುದು, ಪಾರ್ಟಿವೇರ್‌ನದ್ದಾಗಿರಬಹುದು ಅಥವಾ ಕೆಫೆ ಅಥವಾ ರೆಸ್ಟೋರೆಂಟ್‌ನಲ್ಲಿ ಕಾಲ ಕಳೆಯುವಂತದ್ದಾಗಿರಬಹುದು. ಆಯಾ ಗ್ರೂಪ್‌ನ ಐಡೆಂಟಿಟಿಗೆ ತಕ್ಕಂತೆ ಥೀಮ್‌ ಫ್ಯಾಷನ್‌ ಬದಲಿಸಿಕೊಳ್ಳಬಹುದು ಎನ್ನುತ್ತಾರೆ ಡಿಸೈನರ್‌ ರಿಯಾಜ್‌ ಹಾಗೂ ರಕ್ಷ್.

Friendshipday Fashion

ಗ್ರೂಪ್‌ನ ಚಟುವಟಿಕೆಗಳಿಗೆ ತಕ್ಕಂತೆ ಸ್ಟೈಲಿಂಗ್‌

ಸ್ನೇಹಿತರ ಗ್ರೂಪ್‌ಗಳು ಕೇವಲ ಜೆನ್‌ ಜಿ, ಮಿಲೆನಿಯಲ್‌ ಜನರಿಂದ ಕೂಡಿರಬೇಕೆಂದಿಲ್ಲ, ಗ್ರೂಪ್‌ಗಳು ವಯಸ್ಸಾಗಿರುವ ಹಿರಿಯರದ್ದು ಆಗಿರಬಹುದು ಅಥವಾ ಸಮಾನ ಮನಸ್ಕರ ವಿಭಿನ್ನ ಗ್ರೂಪ್‌ಗಳಾಗಬಹುದು. ಆಯಾ ಗ್ರೂಪ್‌ನ ಚಟುವಟಿಕೆಗಳಿಗೆ ತಕ್ಕಂತೆ ಡ್ರೆಸ್ಸಿಂಗ್‌ ಹಾಗೂ ಸ್ಟೈಲಿಂಗ್‌ ಬದಲಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Friendship Band Trend: ಹೊಸ ಜನರೇಷನ್‌‌ಗೆ ಪ್ರಿಯವಾದ 4 ವಿನ್ಯಾಸದ ಫ್ರೆಂಡ್‌ ಶಿಪ್‌ ಬ್ಯಾಂಡ್‌‌ಗಳಿವು

ಫ್ರೆಂಡ್‌ಶಿಪ್‌ ಡೇ ಸ್ಟೈಲಿಂಗ್‌ಗೆ ಸಿಂಪಲ್‌ ಟಿಪ್ಸ್

  • ಫ್ರೆಂಡ್ಸ್ ಗ್ರೂಪ್‌ಗೆ ತಕ್ಕಂತೆ ಸ್ಟೈಲಿಂಗ್‌ ಮಾಡಿ.
  • ಎಥ್ನಿಕ್‌, ವೆಸ್ಟರ್ನ್‌, ಸೆಮಿ ಎಥ್ನಿಕ್‌, ಬಿಂದಾಸ್‌ ಯಾವುದಾದರೂ ಸರಿಯೇ ಕಂಫರ್ಟಬಲ್‌ ಸ್ಟೈಲಿಂಗ್‌ ಚೂಸ್‌ ಮಾಡಿ.
  • ಔಟಿಂಗ್‌ ಆದಲ್ಲಿ ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ಸ್ಟೈಲಿಂಗ್‌ ಮಾಡಿ.
  • ಆದಷ್ಟೂ ಯಂಗ್‌ ಲುಕ್‌ ನೀಡುವ ಸ್ಟೈಲಿಂಗ್‌ ಅಳವಡಿಸಿಕೊಳ್ಳಿ

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಕರ್ನಾಟಕ

Belagavi News: ಸ್ವಾತಂತ್ರ್ಯ ದಿ‌ನಾಚರಣೆಯಂದು ಅಂಗಾಂಗ ದಾನಿಗಳ ಕುಟುಂಬಗಳಿಗೆ ಗೌರವ; ದಿ‌ನೇಶ್ ಗುಂಡೂರಾವ್

Belagavi News: ಸಾವಿನ ಅಂಚಿನಲ್ಲಿರುವಾಗ ಇನ್ನೊಬ್ಬರ ಜೀವ ಉಳಿಸಲು ಅಂಗಾಂಗ ದಾನ ಮಾಡುವ ನಿರ್ಣಯ ಕೈಗೊಳ್ಳುವುದು ನಿಜಕ್ಕೂ ಪುಣ್ಯದ ಕೆಲಸ. ಅಂಗಾಂಗಗಳಿಗೆ ಇಂದು ಹೆಚ್ಚು ಬೇಡಿಕೆಯಿದೆ.‌ ಆದರೆ ಬೇಡಿಕೆಗೆ ತಕ್ಕಂತೆ ಅಂಗಾಂಗಗಳ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸುಮಾರು 8500 ರೋಗಿಗಳು ಇಂದು ಅಂಗಾಂಗಗಳಿಗೆ ಕಾಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ನಾವೆಲ್ಲರು ಇಂದು ಪ್ರತಿಜ್ಞೆ ಮಾಡಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

VISTARANEWS.COM


on

Indian Organ Donation Day program inauguration by Minister Dinesh Gundurao at Belagavi
Koo

ಬೆಳಗಾವಿ: ದೇಶದಲ್ಲಿಯೇ ಅಂಗಾಂಗ ದಾನದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ, ದಾನಿಗಳ ಸಂಖ್ಯೆ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Belagavi News) ತಿಳಿಸಿದರು.

ಆರೋಗ್ಯ ಇಲಾಖೆಯ ವತಿಯಿಂದ ಬೆಳಗಾವಿಯಲ್ಲಿ ಇಂದು ಹಮ್ಮಿಕೊಂಡಿದ್ದ ಭಾರತೀಯ ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಗಾಂಗ ದಾನಿಗಳ ಕುಟುಂಬಗಳನ್ನು ಸನ್ಮಾನಿಸಿ, ಗೌರವಿಸುವುದರ ಜತೆಗೆ ರಾಜ್ಯ ಸರ್ಕಾರದ ಪ್ರಶಂಸಾ ಪತ್ರ ವಿತರಿಸಿ ಅವರು ಮಾತನಾಡಿದರು.

ಸಾವಿನ ಅಂಚಿನಲ್ಲಿರುವಾಗ ಇನ್ನೊಬ್ಬರ ಜೀವ ಉಳಿಸಲು ಅಂಗಾಂಗ ದಾನ ಮಾಡುವ ನಿರ್ಣಯ ಕೈಗೊಳ್ಳುವುದು ನಿಜಕ್ಕೂ ಪುಣ್ಯದ ಕೆಲಸ. ಅಂಗಾಂಗಗಳಿಗೆ ಇಂದು ಹೆಚ್ಚು ಬೇಡಿಕೆಯಿದೆ.‌ ಆದರೆ ಬೇಡಿಕೆಗೆ ತಕ್ಕಂತೆ ಅಂಗಾಂಗಗಳ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸುಮಾರು 8500 ರೋಗಿಗಳು ಇಂದು ಅಂಗಾಂಗಗಳಿಗೆ ಕಾಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ನಾವೆಲ್ಲರು ಇಂದು ಪ್ರತಿಜ್ಞೆ ಮಾಡಬೇಕಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಇದನ್ನೂ ಓದಿ: 2nd PUC Exam Result 2024: ದ್ವಿತೀಯ ಪಿಯುಸಿ ಪರೀಕ್ಷೆ-1, 2, 3ರಲ್ಲಿ ಒಟ್ಟಾರೆ ಶೇ. 84.87 ವಿದ್ಯಾರ್ಥಿಗಳು ಪಾಸ್; ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ

ಅಂಗಾಂಗ ದಾನವನ್ನು ಪ್ರೇರಿಪಸಲು ಆರೋಗ್ಯ ಇಲಾಖೆ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದೆ.‌ ಅಂಗಾಂಗ ದಾನಿಗಳ ಕುಟುಂಬಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಾಕಿಕೊಂಡಿದ್ದು, ಇನ್ನು ಮುಂದೆ ದಾನಿಗಳ ಮನೆಗಳಿಗೇ ಆರೋಗ್ಯ ಇಲಾಖೆ ಅಧಿಕಾರಿಗಳು ತೆರಳಿ ಸನ್ಮಾನಿಸಲಿದ್ದಾರೆ. ಅಲ್ಲದೇ ವಿಶೇಷವಾಗಿ ಸ್ವಾತಂತ್ರ್ಯ ದಿನಾಚಾರಣೆಯ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಅಂಗಾಂಗ ದಾನಿಗಳನ್ನು ಸನ್ಮಾನಿಸಿ, ಗೌರವಿಸುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಸಚಿವರು ತಿಳಿಸಿದರು.

ಅಂಗಾಂಗ ದಾನಕ್ಕೆ ಯಾವುದೇ ಧರ್ಮದಲ್ಲಿ ಅಡ್ಡಿ ಇಲ್ಲ. ಅಂಗಾಂಗ ದಾನ ಮಾಡಿದರೆ ಪುನರ್ಜನ್ಮಕ್ಕೆ ತೊಂದರೆಯಾಗುತ್ತೆ ಎಂಬ ಕೆಲ ಮೂಢನಂಬಿಕೆಗಳು ಜನರಲ್ಲಿವೆ. ಪುನರ್ಜನ್ಮ ಗ್ಯಾರಂಟಿ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಆದರೆ ನೀವು ಮಾಡುವ ಅಂಗಾಂಗ ದಾನದಿಂದ ಇನ್ನೊಬ್ಬರ ಜೀವ ಉಳಿಯುವುದು ಗ್ಯಾರಂಟಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಇದನ್ನೂ ಓದಿ: Moon: ಭೂಮಿಯಿಂದ ದೂರ ಹೊರಟ ಚಂದ್ರ, ಶೀಘ್ರದಲ್ಲೇ ದಿನಕ್ಕೆ 24 ಅಲ್ಲ 25 ಗಂಟೆಗಳು ಇರಲಿವೆ!

ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿ

2023 ನೇ ಸಾಲಿನಲ್ಲಿ 178 ಅಂಗಾಂಗ ದಾನ ನಡೆದಿದ್ದು, ಕರ್ನಾಟಕ ರಾಜ್ಯವು ದೇಶದಲ್ಲಿ 2ನೇ ಸ್ಥಾನದಲ್ಲಿದೆ.‌ ಆದರೆ ಅಂಗಾಂಗ ಕಸಿಗಾಗಿ ಕಾಯುತ್ತಿರುವವರ ಸಂಖ್ಯೆಗೂ ಅಂಗಾಂಗಗಳ ಪೂರೈಕೆಗೂ ಅಜಗಜಾಂತರ ಅಂತರವಿದೆ. ಅತ್ಯಂತ ಬೇಡಿಕೆಯುಳ್ಳ, ಅಂಗ ಎಂದರೆ ಮೂತ್ರಪಿಂಡ, ಒಟ್ಟಾರೆಯಾಗಿ 8,500 ಕ್ಕೂ ಹೆಚ್ಚು ಜನರು ಅಂಗಾಂಗಳಿಗಾಗಿ ಜೀವಸಾರ್ಥಕತೆಯಲ್ಲಿ ನೋಂದಾಯಿಸಿಕೊಂಡಿರುತ್ತಾರೆ.

ಮೆದುಳು ನಿಷ್ಕ್ರಿಯವಾದ ಒಬ್ಬ ಮಾನವನ ಅಂಗಾಂಗ ದಾನ ಮಾಡುವುದರ ಮೂಲಕ 8 ಜನರ ಜೀವ ಉಳಿಸಬಹುದಾಗಿದೆ. ಚರ್ಮ, ಮೂಳೆ, ಅಸ್ಥಿಮಜ್ಜೆ, ಹೃದಯದ ಕವಾಟಗಳು ಇತ್ಯಾದಿ ಅಂಗಾಂಶಗಳನ್ನು ದಾನ ಮಾಡುವುದರ ಮೂಲಕ 50ಕ್ಕೂ ಹೆಚ್ಚು ರೋಗಿಗಳಿಗೆ ಗುಣಮಟ್ಟದ ಜೀವನ ನೀಡಬಹುದು.

ಅಂಗಾಂಗ ದಾನ ಪ್ರತಿಜ್ಞೆಯಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯವು ಮೂರನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ 63 ಸಾವಿರಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿರುತ್ತಾರೆ. ಪ್ರತಿಜ್ಞೆ ಮಾಡುವುದರಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. QR code scan ಮಾಡುವ ಮೂಲಕ ಎಲ್ಲಿಂದಲಾದರೂ ನೀವು ಬಯಸಿದ ಅಂಗಾಂಗಗಳು ಮತ್ತು ಅಂಗಾಂಶಗಳ ದಾನಕ್ಕೆ ಪ್ರತಿಜ್ಞೆ ಮಾಡಬಹುದಾಗಿದೆ.

ರಾಜ್ಯದಲ್ಲಿ ಸುಮಾರು 78ಕ್ಕೂ ಹೆಚ್ಚು ಅಂಗಾಂಗ ಕಸಿ ಕೇಂದ್ರ ಜೀವಸಾರ್ಥಕತೆ ಅಡಿಯಲ್ಲಿ ನೋಂದಾಯಿಸಿಕೊಂಡಿರುತ್ತವೆ. ಇದರಲ್ಲಿ ಬೆಳಗಾವಿ ವಿಭಾಗದಲ್ಲಿ ಏಳು ಆಸತ್ರೆಗಳಲ್ಲಿ ಅಂಗಾಂಗ ಕಸಿ ಮಾಡಲಾಗುತ್ತದೆ. ಬೆಳಗಾವಿಯಲ್ಲಿನ ಕೆ.ಎಲ್.ಇ ಆಸತ್ರೆ, ಕಿಡ್ನಿ, ಲಿವರ್, ಹೃದಯ ಅಂಗಾಂಗ ಕಸಿ ಸೌಲಭ್ಯ ಲಭ್ಯವಿದೆ.

ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಇದುವರೆಗೂ 27 ಕಿಡ್ನಿ (Kidney) ಅಂಗಾಂಗ ಕಸಿ ಮಾಡಲಾಗಿದೆ.. ಎಲ್ಲಾ ವೈದ್ಯಕೀಯ ಕಾಲೇಜಿನ ಆಸತ್ರೆಗಳನ್ನು ಜಿಲ್ಲಾ ಆಸತ್ರೆಗಳನ್ನು NTHORC-Non Transplant Human Organ Retrieval Centers ಆಗಿ ಸ್ಥಾಪಿಸಲು ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ.

ಈಗಾಗಲೇ 26 NTHORC ಗಳನ್ನು ನೋಂದಾಯಿಸಲಾಗಿದೆ. ಅವುಗಳಲ್ಲಿ ನಿಮಾನ್ಸ್, ಬೆಂಗಳೂರು ವೈದ್ಯಕೀಯ ಕಾಲೇಜಿನ ಟ್ರಾಮಾ ಕೇರ್ ಕೂಡ ಸೇರಿದೆ. Institute Of Nephro Urology (NU) ಮತ್ತು Institute of Gastroenterology Sciences & Organ Transplant (IGOT) ನಡೆಯುತ್ತಿವೆ. ಇಲ್ಲಿಯವರೆಗೆ 281 ಬಿಪಿಎಲ್ ರೋಗಿಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಅಂಗಾಂಗ ಕಸಿ ವೆಚ್ಚ ಭರಿಸಲಾಗಿದೆ.

ಇದನ್ನೂ ಓದಿ: KCET 2024 : ನೀಟ್‌ ಮೊದಲ ಸುತ್ತಿನ ಕೌನ್ಸೆಲಿಂಗ್ ನಂತರವೇ ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಶುರು

ಯಾವ ಧರ್ಮದಲ್ಲೂ ಅಂಗಾಂಗ ದಾನ ನಿಷಿದ್ಧವಿಲ್ಲ, ಕರ್ನಾಟಕ ರಾಜ್ಯದಲ್ಲೇ ಎಲ್ಲಾ ಧರ್ಮದವರು ಅಂಗಾಂಗ ದಾನ ಮಾಡಿರುವ ನಿದರ್ಶನಗಳಿವೆ. ಕೆ.ಎಲ್.ಇ ಆಸ್ಪತ್ರೆಯ ವೈದ್ಯರುಗಳು ನಡೆಸಿರುವ ವಿಶೇಷ ಅಂಗಾಂಗ ಕಸಿಯಲ್ಲಿ ಯಾವುದೇ ಧರ್ಮದ ತಾರತಮ್ಯವಿಲ್ಲದೆ ಹಿಂದೂ ಹೃದಯ ದಾನಿಯಿಂದ ಪಡೆದ ಅಂಗವನ್ನು ಕ್ರಿಶ್ಚಿಯನ್ ವೈದ್ಯರು ಮುಸ್ಲಿಂ ರೋಗಿಯ ದೇಹಕ್ಕೆ ಕಸಿ ಮಾಡಿ ಭಾವೈಕತೆ ಸಾರಿದ್ದಾರೆ.

Continue Reading
Advertisement
Kannada New Movie powder cinema trailer release date announce
ಸ್ಯಾಂಡಲ್ ವುಡ್6 mins ago

Kannada New Movie: ದಿಗಂತ್ ನಟನೆಯ `ಪೌಡರ್’ ಚಿತ್ರದ ಟ್ರೈಲರ್‌ ರಿಲೀಸ್‌ ಡೇಟ್‌ ಅನೌನ್ಸ್‌!

Ishan Kishan
ಕ್ರೀಡೆ14 mins ago

Ishan Kishan: ಮತ್ತೆ ದೇಶೀಯ ಕ್ರಿಕೆಟ್​ ಆಡಲು ಮುಂದಾದ ಇಶಾನ್​ ಕಿಶನ್​

Abu Salem
ವೈರಲ್ ನ್ಯೂಸ್14 mins ago

Abu Salem: ಮುಂಬೈ ಸ್ಫೋಟದ ಪ್ರಮುಖ ಆರೋಪಿ, ಭೂಗತ ಪಾತಕಿ ಅಬು ಸಲೇಂನನ್ನು ಮನ್ಮಾಡ್‌ಗೆ ರೈಲಿನಲ್ಲಿ ಕರೆತಂದ ಪೊಲೀಸರು

Leopard attack
ಚಾಮರಾಜನಗರ16 mins ago

Leopard Attack : ಮೈಸೂರಲ್ಲಿ ರೈತನ ಮೇಲೆ ಚಿರತೆ ದಾಳಿ; ಚಾಮರಾಜನಗರದಲ್ಲಿ ಬೋನಿಗೆ ಬಿದ್ದ ಚಿರತೆ

Actor Darshan Gang Use of new technology by the police
ಸ್ಯಾಂಡಲ್ ವುಡ್20 mins ago

Actor Darshan: ದರ್ಶನ್​ & ಗ್ಯಾಂಗ್​ಗೆ ಸಂಕಷ್ಟ; ಪೊಲೀಸರಿಂದ ಹೊಸ ತಂತ್ರಜ್ಞಾನ ಬಳಕೆ!

ದೇಶ28 mins ago

Wall collapsed: ದೇಗುಲದ ಗೋಡೆ ನೆಲಸಮ; ಎಂಟು ಮಕ್ಕಳು ದಾರುಣ ಸಾವು

IND vs SL
ಕ್ರೀಡೆ1 hour ago

IND vs SL: ದ್ವಿತೀಯ ಏಕದಿನ ಪಂದ್ಯಕ್ಕೂ ಮುನ್ನ ಲಂಕಾ ತಂಡಕ್ಕೆ ಆಘಾತ; ಸರಣಿಯಿಂದ ಹೊರಬಿದ್ದ ಸ್ಟಾರ್​ ಆಟಗಾರ

BJP-JDS Padayatra
ರಾಜಕೀಯ1 hour ago

BJP-JDS Padayatra: ರಾಜ್ಯದ ಹಣ ಲೂಟಿ ಮಾಡಿ ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ: ಕಾಂಗ್ರೆಸ್‌ ವಿರುದ್ಧ ವಿಜಯೇಂದ್ರ ವಾಗ್ದಾಳಿ

Road Accident
ಬೆಂಗಳೂರು1 hour ago

Road Accident : ಇನ್ನೊಂದು ವಾರದಲ್ಲಿ ಮಗಳ ಮದುವೆ ಅಂತ ಓಡಾಡುತ್ತಿದ್ದ ಅಪ್ಪ.. ಅಪಘಾತದಲ್ಲಿ ಸಾವು

KEA
ಬೆಂಗಳೂರು2 hours ago

KEA : ವೈದ್ಯಕೀಯ ಅರ್ಹತಾ ಪಟ್ಟಿ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ; ಪದ್ಮನಾಭ ಮೆನನ್‌ಗೆ ಮೊದಲ ಸ್ಥಾನ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ6 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌