Common Cooking Mistakes: ಅಡುಗೆ ಎಡವಟ್ಟಾದರೆ ಸರಿ ಪಡಿಸುವುದು ಹೇಗೆ? ಇಲ್ಲಿದೆ ಉಪಾಯ! - Vistara News

ಲೈಫ್‌ಸ್ಟೈಲ್

Common Cooking Mistakes: ಅಡುಗೆ ಎಡವಟ್ಟಾದರೆ ಸರಿ ಪಡಿಸುವುದು ಹೇಗೆ? ಇಲ್ಲಿದೆ ಉಪಾಯ!

Common cooking mistakes: ಅಡುಗೆ ಮನೆಯಲ್ಲಿ ತಪ್ಪುಗಳಾದರೆ ಹೊಸ ರುಚಿಯೊಂದು ಸಿದ್ಧವಾದಂತೆ ಎನ್ನುವ ಮಾತಿದೆ. ಮಾಡಿದ್ದು ರುಚಿಯಾದ ತಪ್ಪಾದರೆ ಈ ಮಾತು ಸತ್ಯ. ಹಾಗೆ ಅಲ್ಲದಿದ್ದರೆ? ತಿನ್ನಲಾಗದಂತೆ ಹಾಳಾದರೆ? ಅಡುಗೆಯಲ್ಲಿ ಸಾಮಾನ್ಯವಾಗಿ ಆಗುವಂಥ ಎಡವಟ್ಟುಗಳಿಗೆ ಅಲ್ಲಿಯೇ ಮೇಕಪ್‌ ಮಾಡುವ ಪರಿಯನ್ನು ಅರಿತವರೇ ಜಾಣರು ಎನ್ನೋಣವೇ? ಅಂಥ ಕೆಲವು ನಿದರ್ಶನಗಳು ಇಲ್ಲಿವೆ.

VISTARANEWS.COM


on

Common Cooking Mistakes
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇವತ್ತೇನೋ ಪಾಯಸ ಮಾಡುವುದಕ್ಕೆ (Common cooking mistakes) ಮನಸ್ಸು ಮಾಡಿದ್ದೀರಿ. ಶಾವಿಗೆಯನ್ನು ಚೆನ್ನಾಗಿ ಹುರಿಯೋಣವೆಂದು ತೊಡಗಿದರೆ ಅಗತ್ಯಕ್ಕಿಂತ ಹೆಚ್ಚು ಕೆಂಪಾಗಿಬಿಡುತ್ತದೆ. ಆಗಿದ್ದಾಯಿತು ಎಂದು ಬೇಯಿಸುವುದಕ್ಕೆ ಮೊದಲಾದರೆ, ಸ್ವಲ್ಪ ಹೆಚ್ಚೇ ಬೆಂದು ಪೇಸ್ಟಿನಂತಾಗಿ ಬಿಡುತ್ತದೆ. ಇದಿಷ್ಟು ಸಾಲದೆಂಬಂತೆ, ಹಾಲೂ ಒಡೆದಂತಾಗಿ ಯಾಕಾದರೂ ಪಾಯಸ ಮಾಡುವ ಮನಸ್ಸಾಯಿತೋ ಎಂದು ಪರದಾಡುವಂತಾಗುತ್ತದೆ. ಇಂಥ ಅಡುಗೆ ಮನೆಯ ಎಡವಟ್ಟುಗಳು ಯಾರಿಗೆ ಬೇಕಿದ್ದರೂ ಆಗಬಹುದು. ರುಚಿಕಟ್ಟಾಗಿ ಪಾಕ ಕಾಯಿಸುವ ಉದ್ದೇಶವೇ ಇದ್ದರೂ ತಳ ಸೀಯುವುದು, ಉಕ್ಕುವುದು ಮುಂತಾದವು ಆಗಿಯೇ ಬಿಡುತ್ತವೆ. ಇಂಥ ಕೆಲವು ತಪ್ಪುಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?

Improved Cognitive Function Dark Chocolate Benefits

ಚಾಕಲೇಟ್‌

ಮಕ್ಕಳಿಗೆಲ್ಲ ಇಷ್ಟವೆಂಬ ನೆವದಿಂದ ಚಾಕಲೇಟ್‌ ಕುಲ್ಫಿಯನ್ನೊ ಏನನ್ನೋ ಮಾಡುವುದಕ್ಕೆ ಪ್ರಾರಂಭಿಸಿದ್ದೀರಿ. ಬೇಕಾದಷ್ಟು ಚಾಕಲೇಟ್‌ ಕರಗಿಸಿಕೊಳ್ಳುವಾಗಲೇ ಎಡವಟ್ಟಾಗುತ್ತದೆ. ಇದನ್ನು ಅತಿಯಾಗಿ ಕಾಯಿಸಿದರೆ ರವೆರವೆಯಾಗಿ ಬೇಕಾದಂತೆ ಕುಲ್ಫಿಯ ಮೇಲ್ಮೈ ಬರುವುದಿಲ್ಲ. ಹಾಗಾಗಿ ಇದನ್ನು ಸ್ವಲ್ಪವಾಗಿಯೇ ಕಾಯಿಸಿಕೊಳ್ಳುವುದು ಸೂಕ್ತ. ಮೈಕ್ರೋವೇವ್‌ನಲ್ಲಿ ಕಾಯಿಸುತ್ತೀರಿ ಎಂದಾದರೆ 20-30 ಸೆಕೆಂಡ್‌ಗಳಿಗೆ ಮಾತ್ರವೇ ಇಡುತ್ತಾ ಹೋಗಿ. ಆಗ ನಿಮಗೆ ಬೇಕಾದಂತೆ ಆಗುತ್ತಿದ್ದಂತೆ ನಿಲ್ಲಿಸಬಹುದು. ಬಹುತೇಕ ಕರಗಿದೆ ಎಂದಾಗುತ್ತಿದ್ದಂತೆ ಇದನ್ನು ಕಾವಿನಿಂದ ತೆಗೆದು ಚೆನ್ನಾಗಿ ತಿರುಗಿಸಿ. ಆಗ ಬೆಣ್ಣೆಯಂಥ ಮೇಲ್ಮೈ ತರಬಹುದು.

cooking owen

ಒವೆನ್

ಬೇಕ್‌ ಮಾಡುವುದಕ್ಕೆಂದು ಇರಿಸಿರುವ ತಿನಿಸು ಉಬ್ಬಿತೇ ಎಂದು ಘಳಿಗೆಗೊಮ್ಮೆ ಒವೆನ್‌ ಮುಚ್ಚಳ ತೆಗೆದು ನೋಡುವವರು ಎಷ್ಟೋ ಮಂದಿ. ಹೀಗೆ ಮಾಡಿಯೇ ಅಲ್ಲಿ ಆಗಬೇಕಾದ ಕೆಲಸ ಆಗುವುದಿಲ್ಲ. ಪದೇಪದೇ ತಣ್ಣನೆಯ ಗಾಳಿ ಒವೆನ್‌ ಒಳಗೆ ತೂರಿ ಬಂದರೆ, ಬೇಕಾದ ಉಷ್ಣತೆಗೆ ಅದನ್ನು ನಿಲ್ಲಿಸುವುದಕ್ಕೆ ಹೆಚ್ಚಿನ ಸಮಯ ಬೇಕು. ಹಾಗಾಗಿ ಅದರಷ್ಟಕ್ಕೆ ಅದನ್ನು ಬಿಟ್ಟರೆ ಸಾಕು.

ಉಪ್ಪು

ಒಮ್ಮೆ ಅಡುಗೆಗೆ ಉಪ್ಪು ಬಿದ್ದೇ ಹೋಯಿತೆಂದರೆ ಅದನ್ನು ತೆಗೆಯಲಾಗದು. ಸಾಂಬಾರಿಗೆ ಹಾಕಿದ ಉಪ್ಪು ಹೆಚ್ಚಾಯಿತು ಎನಿಸಿದರೆ, ಒಂದೆರಡು ಆಲೂಗಡ್ಡೆಗಳನ್ನು ದೊಡ್ಡದಾಗಿ ಕತ್ತರಿಸಿ ಅದರೊಳಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಆಲೂ ಬೇಡಿದ್ದರೆ ತೆಗೆಯಿರಿ ಅಥವಾ ಹಾಗೇ ಇರಿಸಿದರೂ ತೊಂದರೆಯಿಲ್ಲ. ಹೆಚ್ಚುವರಿ ಉಪ್ಪನ್ನಿದು ಹೀರಿಕೊಳ್ಳುತ್ತದೆ. ಇಂಥದ್ದಕ್ಕೆ ಅವಕಾಶವಿಲ್ಲ ಎಂದಾದರೆ, ಕೊಂಚ ಹುಳಿ, ಖಾರ ಮತ್ತು ಚಿಟಿಕೆ ಸಿಹಿಯನ್ನು ಅಡುಗೆಗೆ ಸೇರಿಸಬಹುದು. ಇದರಿಂದ ಪಾಕದ ಒಟ್ಟಾರೆ ರುಚಿ ತೀಕ್ಷ್ಣವಾಗುತ್ತದೆ, ಉಪ್ಪು ಮುಂದಾಗಿರುವುದು ತಿಳಿಯುವುದಿಲ್ಲ.

ಪ್ಯಾನ್‌ ತುಂಬಿಸಬೇಡಿ

ಬೇಕಿಂಗ್‌ ಮಾಡುವಾಗ ಬೆಣ್ಣೆ ಬೆಸ್ಕೆಟ್‌ಗಳನ್ನು ಪ್ಯಾನ್‌ನಲ್ಲಿ ಇರಿಸಿದ್ದೀರಿ. ಹೆಚ್ಚು ಬಿಸ್ಕೆಟ್‌ಗಳನ್ನು ಬೇಗನೇ ಮಾಡಿ ಮುಗಿಸುವ ಉತ್ಸಾಹದಲ್ಲಿ ಪ್ಯಾನ್‌ ತುಂಬಿಸಿಟ್ಟರೆ ಕೆಲಸ ಹಾಳು. ಮೊದಲಿಗೆ ಸಣ್ಣ ಆಕಾರದಲ್ಲಿದ್ದವು ನಂತರ ಹಿಗ್ಗುವುದರಿಂದ, ಇದಕ್ಕೆ ಸಾಕಷ್ಟು ಸ್ಥಳಾವಕಾಶ ಇದ್ದರೆ ಮಾತ್ರವೇ ಮಾಡಿದ್ದು ಸರಿಯಾಗುತ್ತದೆ. ಇದೊಂದೇ ಅಲ್ಲ, ಜಾಮೂನು ಕರಿಯುವಾಗ, ಸೀಮೆ ಅಕ್ಕಿ ಅಥವಾ ಉದ್ದಿನವಡೆ ಮಾಡುವಾಗ ಬಾಣಲೆ ತುಂಬಿಸಬೇಡಿ. ಅವು ಎಣ್ಣೆಯಲ್ಲಿ ಅರಳುವುದಕ್ಕೆ ಜಾಗ ಬಿಡಿ.

ತಣ್ಣಗಿನವು

ಕೆಲವು ವಸ್ತುಗಳನ್ನು ಫ್ರಿಜ್‌ನಿಂದ ತೆಗೆದು ನೇರವಾಗಿ ಅಡುಗೆಗೆ ಬಳಸಿದರೆ, ಬೇಕಾದ ಸ್ವರೂಪಕ್ಕೆ ಪಾಕ ಬರುವುದಿಲ್ಲ. ಉದಾ, ಬೆಣ್ಣೆಯನ್ನು ಕರಗಿಸಿ ಕೇಕ್‌ ಮಿಶ್ರಣಕ್ಕೆ ಹಾಕಿದರೆ ಮಾತ್ರವೇ ಮಿಶ್ರಣ ಸರಿಯಾಗುತ್ತದೆ. ಇಲ್ಲದಿದ್ದರೆ ಅಂಟಾದ ಪೇಸ್ಟ್‌ನಂತಾಗಿ, ಸರಿ ಮಾಡಿಕೊಳ್ಳಲು ಒದ್ದಾಡಬೇಕು. ಹಾಗಾಗಿ ಫ್ರಿಜ್‌ನ ವಸ್ತುಗಳನ್ನು, ಫ್ರೀಜ್‌ ಮಾಡಿದ ಸಾಮಗ್ರಿಗಳನ್ನು ಮೊದಲಿಗೆ ತೆಗೆದಿಟ್ಟುಕೊಳ್ಳುವ ಅಗತ್ಯವಿದ್ದರೆ, ಮರೆಯಬೇಡಿ.

ಇದನ್ನೂ ಓದಿ: Personality Test: ನೀವು ಒಳ್ಳೆಯವರೇ, ಕೆಟ್ಟವರೇ?; ನಿಮ್ಮನ್ನೇ ನೀವು ಪರೀಕ್ಷಿಸಬೇಕಾದರೆ ಇದನ್ನು ಓದಿ!

ಜಿಡ್ಡು ಸವರುವುದು

ಯಾವುದೋ ಹಲ್ವಾ ಅಥವಾ ಬರ್ಫಿ ಮಾಡುತ್ತಿದ್ದರೆ, ಅದನ್ನು ಹರಡುವ ಪ್ಲೇಟಿಗೆ ಮುಂಚಿತವಾಗಿ ಜಿಡ್ಡು ಸವರಿಟ್ಟುಕೊಳ್ಳುವುದು ಅಗತ್ಯ. ಇಲ್ಲದಿದ್ದರೆ ಕಷ್ಟಪಟ್ಟು ಮಾಡಿದ್ದು, ನಿಮಿಷದಲ್ಲಿ ಪುಡಿಯಾಗುತ್ತದೆ. ಮೈಸೂರ್‌ ಪಾಕ್‌, ಕೊಬ್ಬರಿ ಮಿಠಾಯಿ ಮುಂತಾದ ಯಾವುದೇ ಪಾಕಗಳು ಕತ್ತರಿಸಿದ ಮೇಲೆ ಚೆನ್ನಾದ ಆಕೃತಿಯಲ್ಲಿ ಕೈಗೆತ್ತಲು ಬರಬೇಕು. ಹಾಗೆಯೇ ಕೇಕ್‌, ಮಫಿನ್‌ ಮುಂತಾದ ಯಾವುದನ್ನೇ ಬೇಕ್‌ ಮಾಡುವಾಗಲೂ ಬೇಕಿಂಗ್‌ ಪಾತ್ರೆಗೆ ಜಿಡ್ಡು ಸವರುವುದು ಅಗತ್ಯ. ಪಾರ್ಚ್‌ಮೆಂಟ್‌ ಪೇಪರ್‌ ಹಾಕಿದರೆ ಇನ್ನೂ ಸುಲಭ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Water For Health: ಆರೋಗ್ಯವಾಗಿರಬೇಕೆಂದರೆ ನಾವು ದಿನಕ್ಕೆಷ್ಟು ನೀರು ಕುಡಿಯಬೇಕು?

Water for Health: ಬಾಯಾರಿದಾಗ ನೀರು ಕುಡಿಯುತ್ತೇವೆ ಎಂಬು ಸರಳ ತತ್ವವೇ ಆದರು, ಎಲ್ಲ ಸಾರಿಯೂ ಇವಿಷ್ಟೇ ಮಾಡಿದರೆ ಸಾಕಾಗುವುದಿಲ್ಲ. ನಮ್ಮ ದೈಹಿಕ ಚಟುವಟಿಕೆ, ವಾತಾವರಣ, ಋತುಮಾನ, ತಿಂದ ಆಹಾರ… ಹೀಗೆ ಹಲವು ವಿಷಯಗಳ ಮೇಲೆ ನಮ್ಮ ನೀರಿನ ಅಗತ್ಯವೆಷ್ಟು ಎಂಬುದು ನಿರ್ಧಾರವಾಗಬೇಕಲ್ಲವೇ?

VISTARANEWS.COM


on

drink water
Koo

ನೀರಿನ ವಿಷಯ ಪ್ರಸ್ತಾಪ (Water for Health) ಆಗುತ್ತಿದ್ದಂತೆ, ದಿನಕ್ಕೆಂಟು ಗ್ಲಾಸ್‌ ನೀರು ಕುಡಿಯಿರಿ ಎಂಬ ಸಲಹೆ ಎಲ್ಲೆಡೆಯಿಂದ ಹರಿದು ಬರುತ್ತದೆ. ಎಲ್ಲರ ದೇಹವೂ ಒಂದೇ ತೆರನಾಗಿ ಇರುವುದಿಲ್ಲ ಎಂದಾದರೆ, ಎಲ್ಲರಿಗೂ ಅಷ್ಟೇ ಪ್ರಮಾಣದಲ್ಲಿ ನೀರು ಕುಡಿಯುವುದು ಸಾಕಾದೀತೇ ಅಥವಾ ಬೇಕಾದೀತೆ? ನಮ್ಮ ದೇಹಕ್ಕೆಷ್ಟು ನೀರು ಅಗತ್ಯ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುವುದು ಹೇಗೆ? ಬಾಯಾರಿದಾಗ ನೀರು ಕುಡಿಯುತ್ತೇವೆ ಎಂಬು ಸರಳ ತತ್ವವೇ ಆದರು, ಎಲ್ಲ ಸಾರಿಯೂ ಇವಿಷ್ಟೇ ಮಾಡಿದರೆ ಸಾಕಾಗುವುದಿಲ್ಲ. ನಮ್ಮ ದೈಹಿಕ ಚಟುವಟಿಕೆ, ವಾತಾವರಣ, ಋತುಮಾನ, ತಿಂದ ಆಹಾರ… ಹೀಗೆ ಹಲವು ವಿಷಯಗಳ ಮೇಲೆ ನಮ್ಮ ನೀರಿನ ಅಗತ್ಯವೆಷ್ಟು ಎಂಬುದು ನಿರ್ಧಾರವಾಗಬೇಕಲ್ಲವೇ? ನಮಗೆಷ್ಟು ನೀರು ಬೇಕು ಮತ್ತು ಸಾಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇಲ್ಲಿದೆ ಉಪಯುಕ್ತ ಮಾಹಿತಿ.

Pure water Rules of Drinking Water for a Healthier You

ಪರಿಣಾಮ ಬೀರುವುದು ಯಾವುದು?

ನಮ್ಮ ದೈನಂದಿನ ನೀರಿನ ಅಗತ್ಯವೆಷ್ಟು ಎನ್ನುವುದು ಹಲವು ವಿಷಯಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಹೇಳುವುದಾದರೆ, ಎತ್ತರದ ಪ್ರದೇಶದಲ್ಲಿ ಇರುವವರು, ದೈಹಿಕವಾಗಿ ಕಠಿಣ ಕೆಲಸಗಳನ್ನು ಮಾಡುವವರು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಇದಲ್ಲದೆ, ದೇಹದಲ್ಲಿ ದೊಡ್ಡದಾಗಿರುವವರು, ಸ್ನಾಯುಗಳನ್ನು ಹೆಚ್ಚು ಬೆಳೆಸಿಕೊಂಡವರಿಗೆ ಅಧಿಕ ನೀರು ಬೇಕು. ಫಿಟ್‌ನೆಟ್‌ ತರಬೇತಿಯಲ್ಲಿ ಇದ್ದರೆ, ಉಷ್ಣತೆ ಮತ್ತು ತೇವಾಂಶ ಹೆಚ್ಚಿರುವ ವಾತಾವರಣದಲ್ಲಿದ್ದರೆ ನೀರಿನ ಆವಶ್ಯಕತೆ ಹೆಚ್ಚಿರುತ್ತದೆ. ಎತ್ತರದ ಪ್ರದೇಶದಲ್ಲಿ ಉಸಿರಾಟ ತೀವ್ರವಾಗಿದ್ದು, ಮೂತ್ರದ ಉತ್ಪಾದನೆಯೂ ಹೆಚ್ಚಾಗಿರುತ್ತದೆ. ಹಾಗಾಗಿ ನೀರು ಹೆಚ್ಚು ಬೇಕು. ಜ್ವರ, ವಾಂತಿ, ಅತಿಸಾರದಂಥ ಆರೋಗ್ಯ ಏರುಪೇರಿನಲ್ಲಿ ನೀರು ಕುಡಿದಷ್ಟಕ್ಕೂ ಬೇಕು. ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ತಿಂದಿದ್ದರೆ, ಅಧಿಕ ಪ್ರೊಟೀನ್‌ ತಿಂದರೆ ಹೆಚ್ಚು ನೀರನ್ನು ದೇಹಕ್ಕೆ ಒದಗಿಸಲೇಬೇಕು. ಗರ್ಭಿಣಿಯರು ತಮ್ಮ ಮತ್ತು ಶಿಶುವಿನ ಆರೋಗ್ಯಕ್ಕಾಗಿ ಹೆಚ್ಚಿನ ನೀರು ಕುಡಿಯುವುದು ಮುಖ್ಯ. ಹಾಲುಣಿಸುವ ತಾಯಂದಿರಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕು.
ಯಾರಿಗೆ ಮತ್ತು ಎಂಥ ಹವಾಮಾನಗಳಲ್ಲಿ ಹೆಚ್ಚಿನ ನೀರು ಬೇಕು ಎಂಬುದನ್ನು ತಿಳಿದಾಗಿದೆ. ಈ ಹೆಚ್ಚಿನ ನೀರು ಎಂದರೇನು? ದಿನಕ್ಕೆ ಎಂಟು ಗ್ಲಾಸ್‌ಗಳ ದ್ರವಾಹಾರಕ್ಕೆ ಮೇಲ್ಪಟ್ಟವನ್ನು ಹೀಗೆಂದು ಕರೆಯಬಹುದು. ಅದರಲ್ಲಿ ನೀರು, ಹಾಲು, ಮಜ್ಜಿಗೆ, ಎಳನೀರು, ಕಾಫಿ, ಚಹಾ, ಸೂಪ್‌, ಹಣ್ಣಿನ ರಸ, ನಿಂಬೆ ಚಹಾ ಅಥವಾ ಕಷಾಯದಂಥವು ಮತ್ತು ಸಕ್ಕರೆ ರಹಿತವಾದ ಯಾವುದೇ ಆರೋಗ್ಯಕರ ಪೇಯಗಳನ್ನು ಈ ಎಂಟು ಗ್ಲಾಸ್‌ಗಳ ಲೆಕ್ಕಕ್ಕೆ ಸೇರಿಸಬಹುದು. ಹಾಗಾಗಿ ದಿನಕ್ಕೆ ಅದಷ್ಟು ದ್ರವಾಹಾರವನ್ನು ತೆಗೆದುಕೊಳ್ಳುವುದು ಖಂಡಿತ ಕಷ್ಟವಲ್ಲ. ಈಗ ಹೆಚ್ಚಿನ ನೀರು ಎಂದರೆ, ಈ ಎಂಟು ಗ್ಲಾಸ್‌ಗಳ ಲೆಕ್ಕಕ್ಕಿಂತ ಅಧಿಕ. ಅತಿ ಕಡಿಮೆ ದೈಹಿಕ ಚಟುವಟಿಕೆಯಿದ್ದು, ವಾತಾವರಣವೂ ಹದವಾಗಿದ್ದಾಗ, ಹೆಚ್ಚು ಹಣ್ಣು, ಪಾನಕ, ಮಜ್ಜಿಗೆಯಂಥವನ್ನು ಕುಡಿಯುತ್ತಿದ್ದಾಗ ನೀರು ಕೊಂಚ ಕಡಿಮೆಯೇ ಸಾಕು ದೇಹಕ್ಕೆ. ದಿನದ ಲೆಕ್ಕಕ್ಕೆ ಹೇಳುವುದಾದರೂ, ನಿತ್ಯವೂ 3 ಲೀ. ನೀರನ್ನೇ ಕುಡಿಯಬೇಕಾದ ಅಗತ್ಯವಿಲ್ಲ. ತಿನ್ನುವ ಆಹಾರಗಳು ರಸಭರಿತವಾಗಿದ್ದರೆ, ಮಜ್ಜಿಗೆ, ಎಳನೀರು, ಸ್ಮೂದಿ ಮುಂತಾದ ಆರೋಗ್ಯಕರ ಪೇಯಗಳನ್ನು ಸಾಕಷ್ಟು ಸೇವಿಸುವವರು ನೀವಾದರೆ- 1.5ರಿಂದ 1.8 ಲೀ. ನಷ್ಟು ನೀರು ಕುಡಿಯುವುದು ಸಾಕಾಗುತ್ತದೆ. ಉಳಿದಷ್ಟು ಆಹಾರದಿಂದಲೇ ಒದಗುತ್ತದೆ. ನೀರು ಕುಡಿಯುವುದನ್ನು ಮರೆಯಂತೆ ಮಾಡುವುದು ಹೇಗೆ?

Image Of Rules of Drinking Water for a Healthier You

ಬಾಟಲಿ ಇರಿಸಿಕೊಳ್ಳಿ

ಚೆಂದದ ನೀರಿನ ಬಾಟಲಿಯೊಂದನ್ನು ಇದಕ್ಕಾಗಿ ಇರಿಸಿಕೊಳ್ಳಿ. ಅದರಲ್ಲೂ ತಾಮ್ರದ, ಗಾಜಿನ, ಪಿಂಗಾಣಿಯಂಥ ನೀರಿನ ಬಾಟಲಿ/ ಪಾತ್ರೆಗಳು ಹೆಚ್ಚಿನ ಉತ್ಸಾಹವನ್ನು ತುಂಬುತ್ತವೆ. ಈ ಬಾಟಲಿಗಳ ಅಳತೆ ತಿಳಿಯುವುದರಿಂದ ದಿನಕ್ಕೆ ಎಷ್ಟು ಬಾರಿ ಅದನ್ನು ಮರುಪೂರಣ ಮಾಡಿದ್ದೀರಿ ಎನ್ನುವುದರ ಮೇಲೆ ಕುಡಿದ ನೀರಿದ ಪ್ರಮಾಣವನ್ನು ಸುಲಭದಲ್ಲಿ ಲೆಕ್ಕ ಹಾಕಬಹುದು.

Ginger Benefits: ಮಳೆಗಾಲದ ಸೋಂಕುಗಳಿಗೆ ಬೇಕು ಶುಂಠಿಯೆಂಬ ಮದ್ದು!ಇದನ್ನೂ ಓದಿ:

ಅಲರಾಂ

ನಿತ್ಯದ ಜಂಜಾಟದಲ್ಲಿ ನೀರಿನ ಬಾಟಲಿಯನ್ನು ಇಟ್ಟುಕೊಳ್ಳುವುದೂ ಕೆಲಸ ಮಾಡುವುದಿಲ್ಲ ಎಂದಾದರೆ ತಾಸಿಗೊಮ್ಮೆ ನೀರು ಕುಡಿಯುವ ಅಲರಾಂ ಇಟ್ಟುಕೊಳ್ಳಿ. ಅದು ಕಿರುಚುವ ಹೊತ್ತಿಗೆ ನೀರು ಗುಟುಕರಿಸಬೇಕು ಎನ್ನುವುದು ನಿಶ್ಚಿತವಾಗಿ ನೆನಪಾಗುತ್ತದೆ.

Continue Reading

ಅಂಕಣ

ರಾಜಮಾರ್ಗ ಅಂಕಣ: ಕೃತಜ್ಞತೆ ಎಂಬ ಮಹಾನ್ ಪ್ರವಾಹ

ರಾಜಮಾರ್ಗ ಅಂಕಣ: ನೀವು ಯಾರಿಗಾದರೂ ಬೆನ್ನು ತಟ್ಟಲು ಬಾಕಿ ಇದ್ದರೆ ಈಗಲೇ ತಟ್ಟಿ ಬಿಡಿ. ಯಾಕೆಂದರೆ ಮುಂದೆ ಒಂದು ದಿನ ಅವರಿಗೆ ನಿಮ್ಮ ಮೆಚ್ಚುಗೆಯು ಬೇಡವಾಗಿ ಹೋಗಬಹುದು!

VISTARANEWS.COM


on

gratitude ರಾಜಮಾರ್ಗ ಅಂಕಣ
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ನೀವು ಯಾರಿಗಾದರೂ ಧನ್ಯವಾದ (Thanks) ಹೇಳಲು ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ. ಯಾರಿಗೆ ಗೊತ್ತು ನಾಳೆ ಅವರು ಮಾಡಿದ ಒಳ್ಳೆಯ ಕೆಲಸವು ಅವರಿಗೇ ಮರೆತು ಹೋಗಿರಬಹುದು!

ನೀವು ಯಾರ ಮನಸ್ಸನ್ನಾದರೂ ನೋಯಿಸಿದ್ದರೆ ಇಂದೇ ಕ್ಷಮೆ ಕೇಳಿಬಿಡಿ. ಏಕೆಂದರೆ ಅವರು ನಿಮ್ಮ ಹಾಗೆ ಕಣ್ಣೀರು ಸುರಿಸುತ್ತಾ ದೂರದಲ್ಲಿ ಕುಳಿತಿರಬಹುದು!

ನೀವು ಯಾರಿಗಾದರೂ ಬೆನ್ನು ತಟ್ಟಲು ಬಾಕಿ ಇದ್ದರೆ ಈಗಲೇ ತಟ್ಟಿ ಬಿಡಿ. ಯಾಕೆಂದರೆ ಮುಂದೆ ಒಂದು ದಿನ ಅವರಿಗೆ ನಿಮ್ಮ ಮೆಚ್ಚುಗೆಯು ಬೇಡವಾಗಿ ಹೋಗಬಹುದು!

ನೀವು ಯಾರಿಗಾದರೂ ‘ ಆಲ್ ದ ಬೆಸ್ಟ್’ (All the Best) ಹೇಳಲು ಬಾಕಿ ಇದ್ದರೆ ಈಗಲೇ ಹೇಳಿಬಿಡಿ. ಯಾಕೆಂದರೆ ಅವರು ಗೆದ್ದ ಮೇಲೆ ಅವರಿಗೆ ಸಾವಿರ ಜನ ಶಾಭಾಷ್ ಹೇಳಲು ಕಾಯುತ್ತಿರಬಹುದು!

ನೀವು ಯಾರಿಗಾದರೂ ನಿಮ್ಮ ಪ್ರೀತಿಪಾತ್ರರಿಗೆ ಗುಟ್ಟುಗಳನ್ನು ಶೇರ್ ಮಾಡಲು ಬಾಕಿ ಇದ್ದರೆ ಈಗಲೇ ಹೇಳಿಬಿಡಿ. ಯಾಕೆಂದ್ರೆ ಮುಂದೆ ಅದು ಬೇರೆಯವರ ಮೂಲಕ ಗೊತ್ತಾದರೆ ಅವರಿಗೆ ತುಂಬ ನೋವಾಗಬಹುದು!

ನಿಮ್ಮ ತಲೆಯಲ್ಲಿ ಏನಾದರೂ ಹೊಸ ಐಡಿಯಾ ಫ್ಲಾಶ್ ಆದರೆ ಅದನ್ನು ಬರೆದಿಡಿ ಮತ್ತು ತಕ್ಷಣ ಅನುಷ್ಟಾನಿಸಿ. ಏಕೆಂದರೆ ನಿಮ್ಮ ಐಡಿಯಾಗಳಿಗೆ ಕಾಪಿ ರೈಟ್ ಇರುವುದಿಲ್ಲ!

ನಿಮಗೆ ಯಾರಿಗಾದರೂ ಸಾರಿ ಹೇಳಲು ಬಾಕಿ ಇದ್ದರೆ ಇಂದೆ ಹೇಳಿಬಿಡಿ, ಯಾಕೆಂದರೆ ಆ ನಾಳೆ ಬಾರದೆ ಹೋಗಬಹುದು. ಬಂದರೂ ಅವರು ನಿಮಗೆ ಸಿಗದೇ ಹೋಗಬಹುದು!

ನಿಮಗೆ ಯಾರ ಬಗ್ಗೆಯಾದರೂ ಪ್ರಾರ್ಥನೆ ಮಾಡಲು ಬಾಕಿ ಇದ್ದರೆ ಈಗಲೇ ಮಾಡಿಬಿಡಿ. ಏಕೆಂದರೆ ನಾಳೆ ನಿಮ್ಮ ಪ್ರಾರ್ಥನೆಯನ್ನು ಸ್ವೀಕಾರ ಮಾಡಲು ದೇವರಿಗೆ ಸಮಯ ದೊರೆಯದೆ ಹೋಗಬಹುದು!

ನೀವು ಯಾರಿಗಾದರೂ ಏನನ್ನಾದರೂ ಕೊಡಲು ಯೋಚನೆ ಮಾಡಿದರೆ ಈಗಲೇ ಕೊಟ್ಟುಬಿಡಿ. ಯಾಕೆಂದ್ರೆ ಭೂಮಿ ಗುಂಡಗೆ ಇದ್ದರೂ ಅವರು ನಿಮಗೆ ಮುಂದೆ ಸಿಗದೇ ಹೋಗಬಹುದು!

ನೀವು ಯಾರಿಗಾದರೂ ಕಣ್ಣೀರು ಒರೆಸಲು ಬಾಕಿ ಇದ್ದರೆ ಇಂದೆ ಒರೆಸಿಬಿಡಿ. ಏಕೆಂದರೆ ಮುಂದೆ ಅವರ ಕಣ್ಣೀರು ಒರೆಸಲು ಬಹಳ ಕೈಗಳು ದೊರೆಯಬಹುದು!

ನಿಮಗೆ ಯಾವುದೇ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಆಸೆ ಇದ್ದರೆ ಈಗಲೇ ಕೊಟ್ಟುಬಿಡಿ. ಏಕೆಂದರೆ ಆ ವಸ್ತುವಿನ ಮೇಲೆ ನಿಮಗೆ ನಾಳೆ ಮೋಹ ಹೆಚ್ಚಾಗಬಹುದು!

ಯಾರದಾದರೂ ಆಳುವ ಕಣ್ಣೀರಿಗೆ ನಿಮ್ಮ ಹೆಗಲು ಕೊಡಲು ಆಸೆ ಇದ್ದರೆ ಈಗಲೇ ಕೊಟ್ಟುಬಿಡಿ. ಯಾಕೆಂದರೆ ಮುಂದೆ ನಿಮ್ಮ ಕಣ್ಣೀರಿಗೆ ಯಾವುದೇ ಹೆಗಲು ದೊರೆಯದೆ ಹೋಗಬಹುದು!

ನೀವು ಯಾರಿಗಾದರೂ ಬೆಸ್ಟ್ ಫ್ರೆಂಡಗೆ ಸಾಲ ಕೊಡುವ ಪ್ರಸಂಗ ಬಂದರೆ ಸಾಲ ಎಂದು ಕೊಡಬೇಡಿ. ಹಾಗೆ ಕೊಟ್ಟುಬಿಡಿ. ಯಾಕೆಂದರೆ ಆ ದುಡ್ಡು ಹೇಗೂ ಹಿಂದೆ ಬರುವುದಿಲ್ಲ!

ನೀವು ಯಾರದೇ ತಪ್ಪನ್ನು ನೇರವಾಗಿ ಹೇಳುವ ಮೊದಲು ನೂರು ಬಾರಿ ಯೋಚನೆ ಮಾಡಿ. ಏಕೆಂದರೆ ಅದರಲ್ಲಿ ನಿಮ್ಮ ತಪ್ಪಿನ ಪಾಲು ಕೂಡ ಇರಬಹುದು!

ನೀವು ಯಾವುದೇ ಹುಡುಗಿಗೆ ಪ್ರೊಪೋಸ್ ಮಾಡುವ ಅವಕಾಶ ದೊರೆತಾಗ ತಕ್ಷಣ ಪ್ರೊಪೋಸ್ ಮಾಡಿಬಿಡಿ. ಏಕೆಂದರೆ ಅದೇ ಹುಡುಗಿಯು ಮುಂದೆ ಬೇರೆ ಯಾರನ್ನಾದರೂ ಮದುವೆಯಾಗಿ ನಿಮ್ಮ ನೆರೆಮನೆಗೆ ಬಾಡಿಗೆಗೆ ಬಂದು ‘ನೀನು ಯಾಕೋ ಪ್ರೊಪೋಸ್ ಮಾಡಿಲ್ಲ, ನಾನು ಕಾಯ್ತಾ ಇದ್ದೆ ಕಣೋ’ ಎಂದು ಹೇಳಬಹುದು!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಬಾಲ್ಯದಲ್ಲಿ ಎರಡೂ ಕಾಲು ಪೋಲಿಯೋ ಪೀಡಿತಳಾದ ಹುಡುಗಿ ಮಹೋನ್ನತ ಕ್ರೀಡಾಪಟು ಆದ ಕಥೆ!

Continue Reading

ಆರೋಗ್ಯ

Health Tips: ಪಾದಗಳ ಊತ, ನೋವನ್ನು ಕಡಿಮೆ ಮಾಡಲು ಇಲ್ಲಿದೆ ಸರಳ ಉಪಾಯ

ಸರಳವಾದ ಮನೆಮದ್ದುಗಳನ್ನು (Health Tips) ಬಳಸಿಕೊಂಡು ಪಾದದ ಊತ ಮತ್ತು ನೋವನ್ನು ತ್ವರಿತವಾಗಿ ಕಡಿಮೆ ಮಾಡಬಹುದು. ಈ ಅಭ್ಯಾಸಗಳನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಪಾದದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ರೋಗಲಕ್ಷಣಗಳು ಮುಂದುವರಿದರೆ ಅಥವಾ ಹದಗೆಟ್ಟರೆ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.

VISTARANEWS.COM


on

By

Health Tips
Koo

ಸಾಮಾನ್ಯವಾಗಿ ಹೆಚ್ಚು ಕಾಲ ಕುಳಿತುಕೊಂಡು ಕೆಲಸ ಮಾಡುವುದು, ಹಳೆಯ ಗಾಯ, ಆರೋಗ್ಯದಲ್ಲಾಗುವ (Health Tips) ಏರುಪೇರುಗಳಿಂದ ಪಾದಗಳಲ್ಲಿ ಊತ, ನೋವು (feet Swelling and Pain) ಉಂಟಾಗುತ್ತದೆ. ಇದು ಸಾಕಷ್ಟು ಅಹಿತಕರವಾಗಿರುತ್ತದೆ ಮತ್ತು ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯನ್ನು ಉಂಟು ಮಾಡುತ್ತದೆ. ಇದನ್ನು ಕೆಲವು ಸರಳ ಮನೆಮದ್ದುಗಳ (home remedies) ಮೂಲಕ ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಿದೆ.

ಕಾಲು ನೋವು ಮತ್ತು ಊತವನ್ನು ತ್ವರಿತವಾಗಿ ಕಡಿಮೆ ಮಾಡಲು ಕೆಲವು ಮನೆ ಮದ್ದುಗಳು ಇಂತಿವೆ.

Health Tips
Health Tips


ಅರಿಶಿನ ಚಿಕಿತ್ಸೆ

ಅರಿಶಿನವು ಉರಿಯೂತ ಮತ್ತು ನೋವು ನಿವಾರಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಊತ ಮತ್ತು ನೋವನ್ನು ಕಡಿಮೆ ಮಾಡಲು ಅತ್ಯುತ್ತಮ ಆಯ್ಕೆಯಾಗಿದೆ.

ಒಂದು ಬೌಲ್ ಬೆಚ್ಚಗಿನ ನೀರಿಗೆ ಒಂದು ಚಮಚ ಅರಿಶಿನ ಪುಡಿಯನ್ನು ಸೇರಿಸಿ. ಇದಕ್ಕೆ ಒಂದು ಟೀ ಚಮಚ ಉಪ್ಪನ್ನು ಕೂಡ ಸೇರಿಸಬಹುದು. ಈ ಮಿಶ್ರಣದಲ್ಲಿ ಪಾದಗಳನ್ನು ಸುಮಾರು 15- 20 ನಿಮಿಷಗಳ ಕಾಲನೆನೆಸಿಟ್ಟರೆ ಸ್ನಾಯುಗಳಿಗೆ ವಿಶ್ರಾಂತಿ ದೊರೆಯುತ್ತದೆ ಮತ್ತು ಉರಿಯೂತ ಕಡಿಮೆ ಮಾಡುತ್ತದೆ.

ಅರಿಶಿನಕ್ಕೆ ತೆಂಗಿನೆಣ್ಣೆ ಬೆರೆಸಿ ಪೇಸ್ಟ್ ಮಾಡಿ ಪಾದಗಳ ಊತ ಅಥವಾ ನೋವಿನ ಪ್ರದೇಶಗಳಿಗೆ ಹಾಕಿ. ಒಣಗಿದ ಮೇಲೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದು ಕೂಡ ಉರಿಯೂತ, ನೋವನ್ನು ನಿವಾರಿಸುತ್ತದೆ.

Health Tips
Health Tips


ಉಪ್ಪು ನೀರು

ಉಪ್ಪನ್ನು ಬಳಸುವುದು ಪಾದದ ಊತ ಮತ್ತು ನೋವನ್ನು ನಿರ್ವಹಿಸಲು ಮತ್ತೊಂದು ಪರಿಣಾಮಕಾರಿ ಮಾರ್ಗವಾಗಿದೆ.

ಅರ್ಧ ಕಪ್ ಉಪ್ಪನ್ನು ಬೆಚ್ಚಗಿನ ನೀರಿನಲ್ಲಿ ಕರಗಿಸಿ ಇದರಲ್ಲಿ ಸುಮಾರು 20- 30 ನಿಮಿಷಗಳ ಕಾಲ ಪಾದಗಳನ್ನು ನೆನೆಸಿ. ಉಪ್ಪಿನಲ್ಲಿರುವ ಮೆಗ್ನೀಸಿಯಮ್ ಉರಿಯೂತವನ್ನು ಕಡಿಮೆ ಮಾಡುತ್ತದೆ. ಸ್ನಾಯುವಿನ ನೋವನ್ನು ಕಡಿಮೆ ಮಾಡುತ್ತದೆ.

Health Tips
Health Tips


ಐಸ್ ಪ್ಯಾಕ್

ಐಸ್ ಪ್ಯಾಕ್ ಅನ್ನು ಅನ್ವಯಿಸುವುದು ಊತ ಮತ್ತು ಮರಗಟ್ಟುವಿಕೆ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೆಲವು ಐಸ್ ತುಂಡುಗಳನ್ನು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಅಥವಾ ಐಸ್ ಪ್ಯಾಕ್ ಬಳಸಿ. ಇದನ್ನು 15- 20 ನಿಮಿಷಗಳ ಕಾಲ ಪಾದಗಳ ಊತ ಅಥವಾ ನೋವಿನ ಪ್ರದೇಶಕ್ಕೆ ಅನ್ವಯಿಸಿ. ಫ್ರಾಸ್ಬೈಟ್ ಅನ್ನು ತಡೆಗಟ್ಟಲು ಐಸ್ ಮತ್ತು ನಚರ್ಮದ ನಡುವೆ ಬಟ್ಟೆಯನ್ನು ಇರಿಸಲು ಮರೆಯದಿರಿ. ಶೀತವು ರಕ್ತನಾಳಗಳನ್ನು ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ. ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.

Health Tips
Health Tips


ಪಾದಗಳನ್ನು ಎತ್ತರದಲ್ಲಿ ಇರಿಸುವುದು

ಪಾದಗಳನ್ನು ಎತ್ತರದಲ್ಲಿ ಇಟ್ಟುಕೊಳ್ಳುವುದು ರಕ್ತ ಪರಿಚಲನೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ.

ವಿಶ್ರಾಂತಿ ಪಡೆಯುವಾಗ ಅಥವಾ ನಿದ್ರಿಸುವಾಗ ದಿಂಬುಗಳನ್ನು ಇತ್ತು ಪಾದಗಳನ್ನು ಹೃದಯ ಮಟ್ಟದಿಂದ ಮೇಲಕ್ಕೆತ್ತಿ. ಇದು ಪಾದಗಳಲ್ಲಿ ದ್ರವದ ಶೇಖರಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಿನಕ್ಕೆ ಹಲವಾರು ಬಾರಿ ನಿಮ್ಮ ಪಾದಗಳನ್ನು 15- 30 ನಿಮಿಷಗಳ ಕಾಲ ಎತ್ತರದಲ್ಲಿ ಇರಿಸಿ ಇದು ಉರಿಯೂತ, ನೋವನ್ನು ನಿವಾರಿಸುತ್ತದೆ.

Health Tips
Health Tips


ಬೆಚ್ಚಗಿನ ಎಣ್ಣೆ ಮಸಾಜ್

ಮೃದುವಾಗಿ ಬೆಚ್ಚಗಿನ ಎಣ್ಣೆ ಮಸಾಜ್ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಊತ ಮತ್ತು ನೋವಿನಿಂದ ಪರಿಹಾರವನ್ನು ನೀಡುತ್ತದೆ.

ಸಾಸಿವೆ ಎಣ್ಣೆ, ಎಳ್ಳಿನ ಎಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ ನಂತಹ ಬೆಚ್ಚಗಿನ ಎಣ್ಣೆಗಳನ್ನು ಬಳಸಿ ವೃತ್ತಾಕಾರವಾಗಿ ಪಾದಗಳಿಗೆ ಎಣ್ಣೆಯನ್ನು ನಿಧಾನವಾಗಿ ಮಸಾಜ್ ಮಾಡಿ. ಉಷ್ಣತೆ ಮತ್ತು ಮಸಾಜ್ ಕ್ರಿಯೆಯು ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ. ಬಿಗಿತವನ್ನು ಕಡಿಮೆ ಮಾಡುತ್ತದೆ. ಉತ್ತಮ ಫಲಿತಾಂಶಗಳಿಗಾಗಿ ಮಲಗುವ ಮುನ್ನ ಪಾದಗಳಿಗೆ ಮಸಾಜ್ ಮಾಡಿ.

Health Tips
Health Tips


ಪಾದದ ವ್ಯಾಯಾಮಗಳು

ಸರಳವಾದ ಕಾಲು ವ್ಯಾಯಾಮಗಳನ್ನು ಮಾಡುವುದರಿಂದ ಊತವನ್ನು ಕಡಿಮೆ ಮಾಡಬಹುದು.
ಕುಳಿತಿರುವಾಗ ಪದಗಳನ್ನು ಪ್ರದಕ್ಷಿಣಾಕಾರವಾಗಿ ಮತ್ತು ಅಪ್ರದಕ್ಷಿಣಾಕಾರವಾಗಿ ವೃತ್ತಗಳಲ್ಲಿ ತಿರುಗಿಸಿ. ಪ್ರತಿ ಪಾದದಲ್ಲಿ ಸುಮಾರು 1 ನಿಮಿಷ ಇದನ್ನು ಮಾಡಿ.

ರಕ್ತಪರಿಚಲನೆಯನ್ನು ಸುಧಾರಿಸಲು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡಲು ಕಾಲ್ಬೆರಳುಗಳನ್ನು ಪದೇ ಪದೇ ಬಗ್ಗಿಸಿ.

Health Tips
Health Tips


ನೀರು, ಆಹಾರ

ಹೆಚ್ಚು ನೀರು ಕುಡಿಯುವುದು, ಆರೋಗ್ಯಕರ ಆಹಾರವನ್ನು ಕಾಪಾಡಿಕೊಳ್ಳುವುದು ಕಾಲು ಊತವನ್ನು ನಿರ್ವಹಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ದೇಹದಿಂದ ಹೆಚ್ಚುವರಿ ದ್ರವವನ್ನು ಹೊರಹಾಕಲು ಸಹಾಯ ಮಾಡಲು ದಿನವಿಡೀ ಸಾಕಷ್ಟು ನೀರು ಕುಡಿಯಿರಿ.

ಇದನ್ನೂ ಓದಿ: Tea vs Coffee: ಟೀ ಒಳ್ಳೆಯದಾ ಕಾಫಿ ಒಳ್ಳೆಯದಾ? ಇಲ್ಲಿದೆ ಉತ್ತರ

ಹಣ್ಣು, ತರಕಾರಿಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ. ಬಾಳೆಹಣ್ಣುಗಳಂತಹ ಪೊಟ್ಯಾಸಿಯಮ್ ಅಧಿಕವಾಗಿರುವ ಆಹಾರಗಳು ದೇಹದಲ್ಲಿ ದ್ರವವನ್ನು ಸಮತೋಲನಗೊಳಿಸಲು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Continue Reading

ಆರೋಗ್ಯ

Health tips for Over 40: ನಿಮಗೆ 40 ದಾಟಿತೇ? ಹಾಗಾದರೆ ಈ ಸಪ್ಲಿಮೆಂಟ್‌ಗಳು ನಿಮಗೆ ಬೇಕಾಗಬಹುದು!

Health tips for Over 40: ನಲವತ್ತಕ್ಕೆ ಕಾಲಿಡುತ್ತಿರುವಾಗಲೇ ದೇಹದಲ್ಲಿ ಹಲವಾರು ಬದಲಾವಣೆಗಳು ನಿಧಾನವಾಗಿ ಕಾಣಿಸಿಕೊಳ್ಳಲಾರಂಭಿಸುತ್ತವೆ. ಎಲುಬಿನ ಸಾಂದ್ರತೆ, ಮಾಂಸಖಂಡಗಳು ಇಳಿಮುಖವಾಗುವುದು, ಜೀರ್ಣಕ್ರಿಯೆ ನಿಧಾನವಾಗುವುದು, ಹಾರ್ಮೋನಿನ ಬದಲಾವಣೆಗಳು ಇವೆಲ್ಲವೂ ಬಹಳ ಸಾಮಾನ್ಯ. ಕೆಲವು ಸಪ್ಲಿಮೆಂಟ್‌ಗಳು, ಪೋಷಕಾಂಶಯುಕ್ತ ಆಹಾರ, ವ್ಯಾಯಾಮ, ಚಟುವಟಿಕೆಯಿಂದಿರುವುದು ಇತ್ಯಾದಿಗಳು ಅತ್ಯಂತ ಮುಖ್ಯ. ಈ ಕುರಿತಂತೆ ಉಪಯುಕ್ತ ಸಲಹೆ ಇಲ್ಲಿದೆ.

VISTARANEWS.COM


on

Health tips for Over 40 supplimnt
Koo

ನಲವತ್ತಕ್ಕೆ ಪದಾರ್ಪಣೆ (Health tips for Over 40) ಮಾಡುವುದು ಎಂದರೆ, ದೇಹ ಹಲವಾರು ಬದಲಾವಣೆಗಳಿಗೆ ಒಳಗೊಳ್ಳುವುದು. ಹೌದು. ನಲವತ್ತಕ್ಕೆ ಕಾಲಿಡುತ್ತಿರುವಾಗಲೇ ದೇಹದಲ್ಲಿ ಹಲವಾರು ಬದಲಾವಣೆಗಳು ನಿಧಾನವಾಗಿ ಕಾಣಿಸಿಕೊಳ್ಳಲಾರಂಭಿಸುತ್ತದೆ. ಎಲುಬಿನ ಸಾಂದ್ರತೆ, ಮಾಂಸಖಂಡಗಳು ಇಳಿಮುಖವಾಗುವುದು, ಜೀರ್ಣಕ್ರಿಯೆ ನಿಧಾನವಾಗುವುದು, ಹಾರ್ಮೋನಿನ ಬದಲಾವಣೆಗಳು ಇವೆಲ್ಲವೂ ಬಹಳ ಸಾಮಾನ್ಯ. ಕೆಲವು ಸಪ್ಲಿಮೆಂಟ್‌ಗಳು, ಪೋಷಕಾಂಶಯುಕ್ತ ಆಹಾರ, ವ್ಯಾಯಾಮ, ಚಟುವಟಿಕೆಯಿಂದಿರುವುದು ಇತ್ಯಾದಿಗಳು ಅತ್ಯಂತ ಮುಖ್ಯ. ಬನ್ನಿ, ನಲವತ್ತು ದಾಟುತ್ತಿದ್ದಂತೆ, ಅಗತ್ಯವಾಗಿ ಬೇಕಾಗುವ ಸಪ್ಲಿಮೆಂಟ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ವಿಟಮಿನ್‌ ಡಿ

ನಮಗೆ ವಯಸ್ಸಾಗುತ್ತಿದ್ದಂತೆಯೇ, ನಮ್ಮ ಚರ್ಮಕ್ಕೆ ಸೂರ್ಯನ ಬೆಳಕಿನಲ್ಲಿರುವ ವಿಟಮಿನ್‌ ಡಿಯನ್ನು ಸಂಸ್ಕರಿಸಿ ಪಡೆಯುವ ಶಕ್ತಿ ಕುಂಠಿತವಾಗುತ್ತದೆ. ವಿಟಮಿನ್‌ ಡಿ ನಮ್ಮ ದೇಹದಲ್ಲಿ ಕ್ಯಾಲ್ಶಿಯಂ ಹೀರಿಕೆಗೆ ಅತ್ಯಂತ ಅಗತ್ಯವಾಗಿ ಬೇಕಾದ ಪೋಷಕಾಂಶವಾದ್ದರಿಂದ ಇದರ ಕೊರತೆ ಕಾಡದಂತೆ ನೋಡಬೇಕು. ಹಾಗಾಗಿ ಆಗಾಗ, ಪರೀಕ್ಷೆಗಳಿಂದ ವಿಟಮಿನ್‌ ಡಿಯ ಕೊರತೆಯಿದ್ದರೆ ಅದನ್ನು ದೃಢಪಡಿಸಿಕೊಂಡು ವೈದ್ಯರ ಸಲಹೆಯಂತೆ ವಿಟಮಿನ್‌ ಡಿ ಸಪ್ಲಿಮೆಂಟ್‌ ಸೇವನೆ ಮಾಡುವುದು ಒಳ್ಳೆಯದು.

ಕ್ಯಾಲ್ಶಿಯಂ

ಎಲುಬಿನ ಸಾಂದ್ರತೆಯನ್ನು ಕಾಯ್ದುಕೊಳ್ಳಲು ಕ್ಯಾಲ್ಶಿಯಂ ಅಗತ್ಯವಾಗಿ ಬೇಕು. ನಲವತ್ತಾಗುತ್ತಿದ್ದಂತೆ ನಿಧಾನವಾಗಿ ಮೂಳೆ ಸವೆತ, ಸಂಧಿನೋವುಗಳು ಇತ್ಯಾದಿಗಳು ಕಾಡಲಾರಂಭಿಸುತ್ತದೆ. ಮುಖ್ಯವಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಬರುವುದು ಹೆಚ್ಚು. ಕಾರಣ ಆಕೆ ಹೆರಿಗೆ ಇತ್ಯಾದಿಗಳಿಂದಾಗಿ ಸಾಕಷ್ಟು ಬದಲಾವಣೆಗಳನ್ನು ಕಾಣುವುದರಿಂದ ಹಾಗೂ ಮೆನೋಪಾಸ್‌ ಇತ್ಯಾದಿಗಳಿಂದಾಗಿಯೂ ಕ್ಯಾಲ್ಶಿಯಂ ದೇಹಕ್ಕೆ ಕೊರತೆಯಾಗುತ್ತದೆ. ಹೀಗಾಗಿ ಕ್ಯಾಲ್ಶಿಯಂ ಶ್ರೀಮಂತವಾಗಿರುವ ಆಹಾರ ಸೇವನೆ ಹಾಗೂ ಅಗತ್ಯ ಬಿದ್ದರೆ ವೈದ್ಯರ ಸಲಹೆಯಂತೆ, ಸಪ್ಲಿಮೆಂಟ್‌ ಸೇವನೆಯ ಮೊರೆ ಹೋಗಬಹುದು.

ಇದನ್ನೂ ಓದಿ: Actor Kiran Raj: ಕಿರಣ್‌ರಾಜ್‌ `ರಾನಿ’ ಸಿನಿಮಾಗೆ ಯು/ಎ ಸರ್ಟಿಫಿಕೇಟ್; ತೆರೆಗೆ ಯಾವಾಗ?

ಒಮೆಗಾ 3 ಫ್ಯಾಟಿ ಆಸಿಡ್‌

ಒಮೆಗಾ 3 ಫ್ಯಾಟಿ ಆಸಿಡ್‌ಗಳು ಮೀನಿನ ಎಣ್ಣೆ ಸಪ್ಲಿಮೆಂಟ್‌ಗಳ ಮೂಲಕ ಪಡೆಯಬಹುದು. ಇವುಗಳಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳಿದ್ದು, ಇವು ಹೃದಯದ ಆರೋಗ್ಯವನ್ನು ವರ್ಧಿಸುತ್ತದೆ. ಇದು ಟ್ರೈಗ್ಲಿಸರಾಯ್ಡ್‌ಗಳನ್ನು ಇಳಿಸಿ, ಹೃದಯಾಘಾತ ಇತ್ಯಾದಿಗಳಿಂದ ರಕ್ಷಣೆ ನೀಡುತ್ತದೆ. ಮಿದುಳಿನ ಕೆಲಸವನ್ನು ಚುರುಕುಗೊಳಿಸುತ್ತದೆ. ಅಷ್ಟೇ ಅಲ್ಲ, ಸಂಧಿನೋವು, ಆರ್ಥೈಟಿಸ್‌ ಇತ್ಯಾದಿಗಳಿಗೂ ಒಳ್ಳೆಯದು.

ಮೆಗ್ನೀಶಿಯಂ

ದೇಹದ ಶಕ್ತಿವರ್ಧನೆಗೆ, ಮಾಂಸಖಂಡಗಳು ಕೆಲಸ ಮಾಡಲು, ನರಮಂಡಲದ ಚುರುಕಿಗೆ ಮೆಗ್ನೀಶಿಯಂ ಬೇಕು. ಹೃದಯದ ಆರೋಗ್ಯಕ್ಕೂ ಮೆಗ್ನೀಶಿಯಂ ಒಳ್ಳೆಯದು. ನಿದ್ದೆಯ ಗುಣಮಟ್ಟ ವೃದ್ಧಿಸಲು, ಮೂಳೆ ಗಟ್ಟಿಗೊಳ್ಳಲೂ ಮೆಗ್ನೀಶಿಯಂ ಸಹಾಯ ಮಾಡುತ್ತದೆ.

ಪ್ರೊಬಯಾಟಿಕ್‌ಗಳು

ಇಡಿಯ ಜೀರ್ಣಾಂಗ ವ್ಯೂಹ ಸಮರ್ಪಕವಾಗಿ ಕೆಲಸ ಮಾಡಲು ಸಹಾಯ ಮಾಡುವ ಬ್ಯಾಕ್ಟೀರಿಯಾ, ಪ್ರೊಬಯಾಟಿಕ್‌ನಲ್ಲಿದೆ. ನಲುವತ್ತು ದಾಟುತ್ತಿದ್ದಂತೆ, ಜೀರ್ಣಕ್ರಿಯೆ ಕುಂಠಿತವಾಗುತ್ತಿರುವಾಗ ಪ್ರೊಬಯಾಟಿಕ್‌ನ ಸಹಾಯವಿದ್ದರೆ ಒಳ್ಳೆಯದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮಾನಸಿಕವಾಗಿ ಸದೃಢವಾಗಿರಲೂ ಕೂಡಾ ಇದು ಒಳ್ಳೆಯದು.

ವಿಟಮಿನ್‌ ಬಿ

ವಿಟಮಿನ್ ಬಿ6, ಬಿ12, ಫೋಲೇಟ್‌ ಸೇರಿದಂತೆ ವಿಟಮಿನ್‌ ಬಿ ದೇಹದ ಶಕ್ತಿವರ್ಧನೆಗೆ ನಲುವತ್ತರ ನಂತರ ಅತೀ ಅಗತ್ಯ. ಕೆಂಪು ರಕ್ತಕಣಗಳು ವೃದ್ಧಿಯಾಗಲು ಕೂಡಾ ಇದರಿಂದ ಸಹಾಯವಾಗುತ್ತದೆ. ವಯಸ್ಸಾಗುತ್ತಾ ಆಗುತ್ತಾ, ವಿಟಮಿನ್‌ ಬಿಯ (ಮುಖ್ಯವಾಗಿ ಬಿ12) ಹೀರಿಕೆಯ ಸಾಮರ್ಥ್ಯ ದೇಹಕ್ಕೆ ಕಡಿಮೆಯಾಗುತ್ತಾ ಬಂದಂತೆ ದೇಹದ ಶಕ್ತಿ ಕುಂದದಂತೆ, ಅನೀಮಿಯಾದಂತಹ ಕಾಯಿಲೆ ಬರದಂತೆ ತಡೆಯಲು ಸಪ್ಲಿಮೆಂಟ್‌ಗಳನ್ನು ನೀಡಬೇಕಾಗುತ್ತದೆ.

ಕೊಲಾಜೆನ್‌

ಕೊಲಾಜೆನ್‌ ಇಂದು ಕೇಳಿಬರುತ್ತಿರುವ ದೊಡ್ಡ ಹೆಸರು. ವಯಸ್ಸಾಗುತ್ತಾ ಸೌಂದರ್ಯ ಕಳೆದು ಹೋಗದಂತೆ ಇಂದು ಸಾಕಷ್ಟು ಮಂದಿ ಕೊಲಾಜೆನ್‌ ಸಪ್ಲಿಮೆಂಟ್‌ ಸೇವಿಸುತ್ತಿರುವುದು ಸಾಮಾನ್ಯವಾಗಿದೆ. ಚರ್ಮದಲ್ಲಿ ನೆರಿಗೆಗಳು, ವಯಸ್ಸಾದ ಲಕ್ಷಣಗಳನ್ನು ಕಡಿಮೆಗೊಳಿಸಲು ಇದು ನೆರವಾಗುತ್ತದೆ. ಅಷ್ಟೇ ಅಲ್ಲ, ಚರ್ಮಕ್ಕೆ ಮೃದುತ್ವವನ್ನು ನೀಡಿ, ಚರ್ಮದಲ್ಲಿ ನೀರಿನಂಶವನ್ನು ಉಳಿಸುವಂತೆ ಮಾಡಿ, ನಯವೂ ಹೊಳಪೂ ಆಗಿಸುತ್ತದೆ.

ವಿಟಮಿನ್‌ ಸಿ

ವಿಟಮಿನ್‌ ಸಿ ಅತ್ಯಂತ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್‌. ಇದು ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸಿಗಲೇಬೇಕು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ಚರ್ಮದ ಆರೋಗ್ಯವೂ ಹೆಚ್ಚುತ್ತದೆ. ಅಗತ್ಯವಿದ್ದರೆ ಮಾತ್ರ ಇವುಗಳ ಸಪ್ಲಿಮೆಂಟ್‌ ಸೇವಿಸಬಹುದು.

Continue Reading
Advertisement
Stock Market
ವಾಣಿಜ್ಯ8 mins ago

Stock Market: ಷೇರುಪೇಟೆಯಲ್ಲಿ ಮಹಾ ಪತನ; ಸೆನ್ಸೆಕ್ಸ್‌ 2,000 ಅಂಕಗಳಷ್ಟು ಕುಸಿತ

murder case
ಹಾಸನ14 mins ago

Murder Case : ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ; ಕೈ-ಕಾಲು ಬಿಗಿದು, ಕಲ್ಲು ಕಟ್ಟಿ ಕೆರೆಗೆ ಎಸೆದ ಹಂತಕರು

ಪ್ರಮುಖ ಸುದ್ದಿ33 mins ago

AAP VS Delhi LG: ಆಪ್‌ಗೆ ಹಿನ್ನಡೆ; ದಿಲ್ಲಿ ನಗರಸಭೆಗೆ ಸದಸ್ಯರನ್ನು ನೇಮಿಸುವ ಎಲ್‌ಜಿ ಅಧಿಕಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್

Drowned in water
ಚಿಕ್ಕೋಡಿ46 mins ago

Drowned in water : ಆಟವಾಡುತ್ತಾ ಕಾಲುವೆಗೆ ಕಾಲು ಜಾರಿ ಬಿದ್ದು 4 ವರ್ಷದ ಬಾಲಕ ಸಾವು

Gold Rate Today
ಚಿನ್ನದ ದರ59 mins ago

Gold Rate Today: ಸತತ ಎರಡನೆ ದಿನವೂ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

Actor Darshan wife Vijayalakshmi darshan temple run
ಸ್ಯಾಂಡಲ್ ವುಡ್59 mins ago

Actor Darshan: ದರ್ಶನ್‌ ಬಿಡುಗಡೆಗಾಗಿ ವಿಜಯಲಕ್ಷ್ಮಿ ಹಾಗೂ ಅಳಿಯ ಟೆಂಪಲ್ ರನ್‌

Road Accident
ಬೆಂಗಳೂರು1 hour ago

Road Accident: ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಕ್ಲೀನರ್ ಸಾವು; ಬೈಕ್‌ ಅಪಘಾತದಲ್ಲಿ ಸವಾರರಿಬ್ಬರು ಮೃತ್ಯು

Rahul Gandhi
ವೈರಲ್ ನ್ಯೂಸ್1 hour ago

Rahul Gandhi: ರಾಹುಲ್ ಗಾಂಧಿ ಅಲ್ಲ, ರಾಹುಲ್ ಖಾನ್! ಪಾಕಿಸ್ತಾನದ ಟಿವಿಯಲ್ಲಿ ಬಿಸಿಬಿಸಿ ಚರ್ಚೆ!

police inspector death thimmegowda
ಬೆಂಗಳೂರು2 hours ago

Inspector Death: ಮತ್ತೊಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ, ಎರಡು ತಿಂಗಳ ಹಿಂದೆ ಟ್ರಾನ್ಸ್‌ಫರ್‌ ಆಗಿದ್ದ ಸಿಸಿಬಿ ಎಸ್‌ಐ

Road Accident
ತುಮಕೂರು2 hours ago

Road Accident : ಬಲ ತಿರುವು ಪಡೆಯುವಾಗ ಬೈಕ್‌ ಸವಾರನ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್‌; ಸಿಸಿ ಕ್ಯಾಮೆರಾದಲ್ಲಿ ಅಪಘಾತ ಸೆರೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ23 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ7 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ7 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌