Bangladesh Chronology: 1971ರ ದೇಶ ಉದಯದಿಂದ ಹಿಡಿದು 2024ರ ದಂಗೆಯವರೆಗೆ; ಇಲ್ಲಿದೆ ಬಾಂಗ್ಲಾದೇಶದ ಸಂಪೂರ್ಣ ರಕ್ತ ಚರಿತ್ರೆ! - Vistara News

ವಿದೇಶ

Bangladesh Chronology: 1971ರ ದೇಶ ಉದಯದಿಂದ ಹಿಡಿದು 2024ರ ದಂಗೆಯವರೆಗೆ; ಇಲ್ಲಿದೆ ಬಾಂಗ್ಲಾದೇಶದ ಸಂಪೂರ್ಣ ರಕ್ತ ಚರಿತ್ರೆ!

Bangladesh Chronology: ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿಗಳ ದಂಗೆ (Bangladesh Protest) ಹಿಂಸಾತ್ಮಕ ರೂಪ ತಾಳಿದ್ದರಿಂದ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ ದೇಶ ಬಿಟ್ಟು ಹೋಗುವಂತಾಗಿದೆ. ಅಂದಹಾಗೆ ಇಲ್ಲಿ ಇದು ನಡೆದ ಮೊದಲ ಪ್ರಕರಣವೇನಲ್ಲ. ದೇಶ ಸ್ವಾತಂತ್ರ್ಯವಾದ ಬಳಿಕ ಅನೇಕ ನಾಯಕರು ದೇಶ ಬಿಟ್ಟು ಹೋಗುವಂತಾಗಿದೆ. ಇನ್ನು ಕೆಲವು ಪ್ರಮುಖ ನಾಯಕರನ್ನು ಹತ್ಯೆ ಮಾಡಲಾಗಿದೆ. ಬಾಂಗ್ಲಾ ದೇಶದ ಚರಿತ್ರೆಯ ಹಿನ್ನೋಟ ಇಲ್ಲಿದೆ.

VISTARANEWS.COM


on

Bangladesh Protest
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾಂಗ್ಲಾದೇಶದ ಪ್ರಧಾನಿ (Bangladesh PM) ಶೇಖ್ ಹಸೀನಾ (Sheikh Hasina) ಪ್ರಜಾ ದಂಗೆಗೆ (Bangladesh Chronology) ಹೆದರಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ದೇಶದ ನಾಯಕರು ಈ ರೀತಿ ಪಲಾಯನ ಮಾಡುವುದು ಹೊಸದಲ್ಲ. ಬಾಂಗ್ಲಾ ದೇಶವು ಸ್ವಾತಂತ್ರ್ಯ ಗಳಿಸಿದ ಬಳಿಕ ಇಲ್ಲಿನ ಅನೇಕ ನಾಯಕರನ್ನು ದೇಶ ಬಿಟ್ಟು ಹೋಗುವಂತೆ ಮಾಡಲಾಗಿದೆ. ಹಿಂಸಾತ್ಮಕ ಘಟನೆಗಳಿಂದ (Bangladesh Protest) ಹಲವರು ಅಧಿಕಾರ ಬಿಟ್ಟು ತೆರಳಿದ್ದಾರೆ.

ಬಾಂಗ್ಲಾದೇಶ ಎಂದರೆ ಅದೊಂದು ರಕ್ತಸಿಕ್ತ ಹೋರಾಟದ ಅಧ್ಯಾಯವೇ ಆಗಿದೆ. ಆ ದೇಶದ ಚರಿತ್ರೆಯ ಹಿನ್ನೋಟ ಇಲ್ಲಿದೆ.

1975

1971ರಲ್ಲಿ ಭಾರತವು ಗಡಿಯೊಳಗೆ ನುಗ್ಗಿ ಪಾಕಿಸ್ತಾನದ ಸೇನೆಯನ್ನು ಹೀನಾಯವಾಗಿ ಸೋಲಿಸಿದ ಬಳಿಕ ಬಾಂಗ್ಲಾದೇಶವು ಪಾಕಿಸ್ತಾನದಿಂದ ಪ್ರತ್ಯೇಕವಾಗಿ ಸ್ವತಂತ್ರವಾಯಿತು. 1971ರಲ್ಲಿ ಬಾಂಗ್ಲಾದೇಶ ಹೊಸ ರಾಷ್ಟ್ರವಾಗಿ ನಿರ್ಮಾಣವಾಯಿತು. ಸ್ವಾತಂತ್ರ್ಯ ವೀರ ಶೇಖ್ ಮುಜಿಬುರ್ ರೆಹಮಾನ್ ದೇಶದ ಮೊದಲ ಅಧ್ಯಕ್ಷರಾದರು.

Bangladesh Protest
Bangladesh Protest


1975ರ ಜನವರಿಯಲ್ಲಿ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರ ವಹಿಸಿಕೊಂಡ ವರ್ಷದೊಳಗೆ ಅವರನ್ನು ಅಂದರೆ ಆಗಸ್ಟ್ 15ರಂದು ಅವರ ಪತ್ನಿ ಮತ್ತು ಮೂವರು ಪುತ್ರರೊಂದಿಗೆ ಸೈನಿಕರ ಗುಂಪು ಭೀಕರವಾಗಿ ಹತ್ಯೆ ಮಾಡಿತು. ಇದು ದೇಶದಲ್ಲಿ ಸುಧೀರ್ಘ ಕಾಲದ ಮಿಲಿಟರಿ ಆಡಳಿತವನ್ನು ತಂದಿತು. ಬಳಿಕ ಸೇನೆಯ ಬೆಂಬಲದೊಂದಿಗೆ ಖೊಂಡಕರ್ ಮೊಸ್ತಾಕ್ ಅಹ್ಮದ್ ಅಧಿಕಾರ ವಹಿಸಿಕೊಂಡರು.

ಅಹ್ಮದ್ ಅವರ ಅಧಿಕಾರಾವಧಿಯು ಅಲ್ಪಕಾಲವಾಗಿತ್ತು. ನವೆಂಬರ್ 3ರಂದು ಅವರ ಪ್ರತಿಸ್ಪರ್ಧಿ ಸೈನ್ಯದ ಮುಖ್ಯಸ್ಥ ಖಲೀದ್ ಮೊಶರಫ್ ಅವರಿಂದ ಪದಚ್ಯುತರಾದರು. ಆದರೆ ದಂಗೆಕೋರರಿಂದ ಮೊಷರಫ್‌ ಕೂಡ ಹತ್ಯೆಗೀಡಾದರು. ಬಳಿಕ ಸಾಕಷ್ಟು ದಂಗೆ, ಪ್ರತಿ ದಂಗೆಗಳು ನಡೆದವು. ಅಂತಿಮವಾಗಿ ಜನರಲ್ ಜಿಯಾವುರ್ ರೆಹಮಾನ್ ಅಧಿಕಾರವನ್ನು ವಹಿಸಿಕೊಂಡರು.

1981-83

ಆರು ವರ್ಷಗಳ ಅಧಿಕಾರದ ಅನಂತರ 1981ರ ಮೇ 30ರಂದು ಜಿಯಾವುರ್ ರೆಹಮಾನ್ ಅವರು ವಾಸಿಸುತ್ತಿದ್ದ ಚಿತ್ತಗಾಂಗ್ ನಗರದ ಸರ್ಕಾರಿ ಅತಿಥಿ ಗೃಹಕ್ಕೆ ನುಗ್ಗಿದ ಬಂಡುಕೋರರು ಅವರನ್ನು ಹತ್ಯೆ ಮಾಡಿದರು. ಈ ಹಿಂಸಾಚಾರವು ಸೈನ್ಯದ ಅಧಿಕಾರಿಗಳ ಸಣ್ಣ ಗುಂಪಿನ ಕೃತ್ಯವೆಂದು ಹೇಳಲಾಗಿತ್ತು. ರೆಹಮಾನ್ ಅವರ ಉಪಾಧ್ಯಕ್ಷರಾದ ಅಬ್ದುಸ್ ಸತ್ತಾರ್ ಅವರು ಜನರಲ್ ಹುಸೇನ್ ಮುಹಮ್ಮದ್ ಇರ್ಷಾದ್ ಅವರ ಬೆಂಬಲದೊಂದಿಗೆ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಇರ್ಷಾದ್ ಒಂದು ವರ್ಷದೊಳಗೆ ಸತ್ತಾರ್ ವಿರುದ್ಧ ತಿರುಗಿಬಿದ್ದರು. 1982ರ ಮಾರ್ಚ್ 24ರಂದು ನಡೆದ ದಂಗೆಯಲ್ಲಿ ಸತ್ತಾರ್ ಅವರನ್ನು ಅಧಿಕಾರದಿಂದ ಹೊರಹಾಕಲಾಯಿತು. ಬಳಿಕ ಅವರು ಮುಖ್ಯ ಸಮರ-ಕಾನೂನು ನಿರ್ವಾಹಕರಾಗಿ ಅಧಿಕಾರ ವಹಿಸಿಕೊಂಡರು. ಅನಂತರ ಅಹ್ಸಾನುದ್ದೀನ್ ಚೌಧರಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು.

1983ರ ಡಿಸೆಂಬರ್ 11ರಂದು, ಇರ್ಷಾದ್ ಸ್ವತಃ ರಾಷ್ಟ್ರದ ಮುಖ್ಯಸ್ಥ ಎಂದು ಘೋಷಿಸಿಕೊಂಡರು. ಗೌರವಾನ್ವಿತ ಸ್ಥಾನವನ್ನು ಹೊಂದಿದ್ದ ಚೌಧರಿ ಅವರು ರಾಜಕೀಯ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡರು.


1990

ಬಾಂಗ್ಲಾದೇಶ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಕರೆ ನೀಡುವ ಪ್ರತಿಭಟನೆ ಆರಂಭ ತೀವ್ರಗೊಂಡ ಬಳಿಕ ಇರ್ಷಾದ್ 1990ರ ಡಿಸೆಂಬರ್ 6ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅನಂತರ ಅವರನ್ನು ಬಂಧಿಸಿ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹಾಕಲಾಯಿತು. ನ್ಯಾಯಾಂಗ ಸಚಿವ ಶಹಾಬುದ್ದೀನ್ ಅಹ್ಮದ್ ಅವರು ಮುಂದಿನ ವರ್ಷ ಚುನಾವಣೆ ನಡೆಯುವವರೆಗೆ ಹಂಗಾಮಿ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಇರ್ಷಾದ್ ಜನವರಿ 1997ರಲ್ಲಿ ಜೈಲಿನಿಂದ ಬಿಡುಗಡೆಯಾದರು.


1991

ದೇಶದ ಮೊದಲ ಚುನಾವಣೆಗಳು 1991ರ ಆರಂಭದಲ್ಲಿ ನಡೆದವು. ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಸ್ಪಷ್ಟ ಬಹುಮತ ಗಳಿಸಿತ್ತು. ಜನರಲ್ ಜಿಯಾವುರ್ ರೆಹಮಾನ್ ಅವರ ಪತ್ನಿ ಖಲೀದಾ ಜಿಯಾ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾದರು.

1996

ಈ ಚುನಾವಣೆಯಲ್ಲಿ ಅವಾಮಿ ಲೀಗ್ ಬಿಎನ್‌ಪಿಯನ್ನು ಸೋಲಿಸಿದ ಬಳಿಕ ದೇಶದ ಸಂಸ್ಥಾಪಕ ಮುಜಿಬುರ್ ರೆಹಮಾನ್ ಅವರ ಮಗಳು ಶೇಖ್ ಹಸೀನಾ ಅವರು ಖಲೀದಾ ಜಿಯಾ ಅವರ ಉತ್ತರಾಧಿಕಾರಿಯಾದರು.

2001

ಈ ಚುನಾವಣೆಯಲ್ಲಿ ಬಿಎನ್‌ಪಿ ಮತ್ತೆ ಅಧಿಕಾರಕ್ಕೆ ಮರಳಿತು. ಜಿಯಾ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾದರು. ಅಕ್ಟೋಬರ್ 2006ರಲ್ಲಿ ಅವರ ಅಧಿಕಾರದ ಅವಧಿ ಪೂರ್ಣಗೊಂಡಿತು.

2007

ಸೇನಾ ಮುಖ್ಯಸ್ಥರು ಮಿಲಿಟರಿ ದಂಗೆಯನ್ನು ನಡೆಸಿದರು. ಅಧ್ಯಕ್ಷ ಇಯಾಜುದ್ದೀನ್ ಅಹ್ಮದ್ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಹಸೀನಾ ಮತ್ತು ಜಿಯಾ ಇಬ್ಬರನ್ನೂ ಬಂಧಿಸಲಾಯಿತು. 2009ರಲ್ಲಿ ಹಸೀನಾ ಅಧಿಕಾರಕ್ಕೆ ಬರುವವರೆಗೂ ಎರಡು ವರ್ಷಗಳ ಕಾಲ ದೇಶವನ್ನು ಆಳಿದ ಉಸ್ತುವಾರಿ ಸರ್ಕಾರವನ್ನು ಅಹ್ಮದ್ ಬೆಂಬಲಿಸಿದರು.

2008

ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣೆ ಗೆದ್ದ ಹಸೀನಾ ಮತ್ತೊಮ್ಮೆ ದೇಶದ ಪ್ರಧಾನಮಂತ್ರಿಯಾದರು.

2009

ವೇತನ ಮತ್ತು ಜೀವನ ಪರಿಸ್ಥಿತಿಗಳ ಬಗ್ಗೆ ಅತೃಪ್ತಿಗೊಂಡ ಅರೆಸೈನಿಕ ಪಡೆಗಳು ರಾಜಧಾನಿ ಢಾಕಾದಲ್ಲಿ 70ಕ್ಕೂ ಹೆಚ್ಚು ಜನರನ್ನು ಕೊಂದವು. ಅವರಲ್ಲಿ ಹೆಚ್ಚಿನವರು ಸೇನಾ ಅಧಿಕಾರಿಗಳು. ಸುಮಾರು ಹನ್ನೆರಡು ಪಟ್ಟಣಗಳಿಗೆ ಹರಡಿದ ದಂಗೆಯು ಆರು ದಿನಗಳ ಅನಂತರ ಕೊನೆಗೊಂಡಿತು.

ಇದನ್ನೂ ಓದಿ: Bangladesh Protest: ಶೇಖ್‌ ಹಸೀನಾ ರಾಜೀನಾಮೆ ಬೆನ್ನಲ್ಲೇ ರಾಜಕೀಯ ಶತ್ರು ಖಲೇದಾ ಜಿಯಾ ರಿಲೀಸ್‌ಗೆ ಆದೇಶ!

2012

ದೇಶಾದ್ಯಂತ ಷರಿಯಾ ಅಥವಾ ಇಸ್ಲಾಮಿಕ್ ಕಾನೂನನ್ನು ಪರಿಚಯಿಸುವ ಬೃಹತ್‌ ಹೋರಾಟ ಶುರುವಾಯಿತು. ನಿವೃತ್ತ ಮತ್ತು ಸೇವೆಯಲ್ಲಿರುವ ಅಧಿಕಾರಿಗಳಿಂದ ನಡೆದ ಈ ದಂಗೆಯ ಪ್ರಯತ್ನವನ್ನು ಬಾಂಗ್ಲಾದೇಶದ ಸೇನೆ ವಿಫಲಗೊಳಿಸಿತು.

Bangladesh Protest
Bangladesh Protest


2024

ಸರ್ಕಾರಿ ಉದ್ಯೋಗದಲ್ಲಿ ಬಾಂಗ್ಲಾ ವಿಮೋಚನೆ ಹೋರಾಟಗಾರರ ಕುಟುಂಬದವರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿ ಪ್ರಾರಂಭವಾದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪ್ರಧಾನಿ ಶೇಕ್‌ ಹಸೀನಾ ರಾಜೀನಾಮೆ ನೀಡಬೇಕಾಯಿತು. ಈ ದಂಗೆಯಲ್ಲಿ 400ಕ್ಕೂ ಹೆಚ್ಚು ಜನ ಸತ್ತರು. ದೇಶವನ್ನು ಮುನ್ನಡೆಸಲು ಮಧ್ಯಂತರ ಸರ್ಕಾರವನ್ನು ರಚಿಸಲು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಕಾರ್-ಉಜ್-ಜಮಾನ್ ಈಗ ಮುಂದಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Bangladesh Unrest: ಶೇಖ್ ಹಸೀನಾ ಬೆಂಬಲಿಗನ ಫೈವ್‌ ಸ್ಟಾರ್‌ ಹೊಟೇಲ್‌ಗೆ ಬೆಂಕಿ; 24 ಜನ ಸಜೀವ ದಹನ

Bangladesh Unrest: ಜೋಶೋರ್ ಜಿಲ್ಲೆಯ ಜಿಲ್ಲಾ ಅವಾಮಿ ಲೀಗ್ ಪ್ರಧಾನ ಕಾರ್ಯದರ್ಶಿ ಶಾಹಿನ್ ಚಕ್ಲಾದಾರ್ ಒಡೆತನದ ಜಬೀರ್ ಇಂಟರ್ನ್ಯಾಷನಲ್ ಹೋಟೆಲ್‌ಗೆ ಉದ್ರಿಕ್ಯ ಗುಂಪು ಬೆಂಕಿ ಇಟ್ಟಿದ್ದಾರೆ. ಆಗ ಹೊಟೇಲ್‌ ಒಳಗಿದ್ದ ಅನೇಕ ಗಣ್ಯರು ಸುಟ್ಟು ಕರಕಲಾಗಿದ್ದಾರೆ. ಇನ್ನು ಘಟನೆಯಲ್ಲಿ ಇಬ್ಬರು ಭಾರತೀಯ ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

VISTARANEWS.COM


on

Bangladesh unrest
Koo

ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರ(Bangladesh Unrest)ಕ್ಕೆ ಮಿತಿಯೇ ಇಲ್ಲ ಎನಿಸುತ್ತಿದೆ. ನಿನ್ನೆಯಷ್ಟೇ ಪ್ರಧಾನಿ ಶೇಖ್‌ ಹಸೀನಾ(Sheikh Hasina) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಬೆನ್ನಲ್ಲೇ ಬಾಂಗ್ಲಾದೇಶದ ಅವಾಮಿ ಲೀಗ್ ಪಕ್ಷದ ನಾಯಕರೊಬ್ಬರ ಒಡೆತನದ ಹೋಟೆಲ್‌ಗೆ ಉದ್ರಿಕ್ತ ಪ್ರತಿಭಟನಾಕಾರರು ಬೆಂಕಿ ಇಟ್ಟಿದ್ದಾರೆ. ಪರಿಣಾಮವಾಗಿ ಇಂಡೋನೇಷ್ಯಾ ಪ್ರಜೆ ಸೇರಿದಂತೆ ಕನಿಷ್ಠ 24 ಜನರನ್ನು ಗುಂಪು ಸಜೀವ ದಹನಗೊಂಡಿದೆ.

ಇನ್ನು ಈ ಬಗ್ಗೆ ಸ್ಥಳೀಯ ಪತ್ರಕರ್ತರು ಮತ್ತು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದ್ದು, ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ನಂತರ ಸೋಮವಾರ ತಡರಾತ್ರಿ ಈ ದುರಂತ ಘಟನೆ ನಡೆದಿದೆ ಎನ್ನಲಾಗಿದೆ. ಜೋಶೋರ್ ಜಿಲ್ಲೆಯ ಜಿಲ್ಲಾ ಅವಾಮಿ ಲೀಗ್ ಪ್ರಧಾನ ಕಾರ್ಯದರ್ಶಿ ಶಾಹಿನ್ ಚಕ್ಲಾದಾರ್ ಒಡೆತನದ ಜಬೀರ್ ಇಂಟರ್ನ್ಯಾಷನಲ್ ಹೋಟೆಲ್‌ಗೆ ಉದ್ರಿಕ್ಯ ಗುಂಪು ಬೆಂಕಿ ಇಟ್ಟಿದ್ದಾರೆ. ಆಗ ಹೊಟೇಲ್‌ ಒಳಗಿದ್ದ ಅನೇಕ ಗಣ್ಯರು ಸುಟ್ಟು ಕರಕಲಾಗಿದ್ದಾರೆ. ಇನ್ನು ಘಟನೆಯಲ್ಲಿ ಇಬ್ಬರು ಭಾರತೀಯ ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರಲ್ಲಿ ಇಂಡೋನೇಷ್ಯಾ ಪ್ರಜೆಯೂ ಸೇರಿದ್ದಾರೆ ಎಂದು ಸ್ಥಳೀಯ ಪತ್ರಕರ್ತರೊಬ್ಬರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಜೋಶೋರ್ ಜನರಲ್ ಆಸ್ಪತ್ರೆಯ ವೈದ್ಯರು 24 ಶವಗಳು ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನು ಅದರಲ್ಲಿ ಹೊಟೇಲ್‌ ಸಿಬ್ಬಂದಿಯ ಮೃತದೇಹವೂ ಸೇರಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಅವಾಮಿ ಲೀಗ್ (ಎಎಲ್) ಆಡಳಿತವನ್ನು ವಿರೋಧಿಸುವ ಅಪರಿಚಿತ ಗುಂಪು ಹೋಟೆಲ್‌ನ ನೆಲಮಹಡಿಗೆ ಬೆಂಕಿ ಹಚ್ಚಿದೆ, ಅದು ಶೀಘ್ರದಲ್ಲೇ ಮೇಲಿನ ಮಹಡಿಗಳಿಗೆ ಹರಡಿತು ಎಂದು ಮಾಧ್ಯಮ ವರದಿಗಳು ಸೂಚಿಸಿವೆ.

ಇದನ್ನೂ ಓದಿ: Bangladesh Chronology: 1971ರ ದೇಶ ಉದಯದಿಂದ ಹಿಡಿದು 2024ರ ದಂಗೆಯವರೆಗೆ; ಇಲ್ಲಿದೆ ಬಾಂಗ್ಲಾದೇಶದ ಸಂಪೂರ್ಣ ರಕ್ತ ಚರಿತ್ರೆ!

Continue Reading

ದೇಶ

Bangladesh Unrest: ಶೇಖ್‌ ಹಸೀನಾಗೆ 8 ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದ ಭಾರತದ ಜ್ಯೋತಿಷಿ; ಆತನ ಭವಿಷ್ಯವಾಣಿ ಏನು?

Bangladesh Unrest: ಖ್ಯಾತ ಜ್ಯೋತಿಷಿ ಪ್ರಶಾಂತ್‌ ಕಿಣಿಯವರು ಕಳೆದ ವರ್ಷವೇ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿ, ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರು 2024ರ ಮೇ, ಜೂನ್‌, ಜುಲೈ ಮತ್ತು ಆಗಸ್ಟ್‌ನಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಅವರ ಹತ್ಯೆಗೂ ಯತ್ನ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದರು ಇಂದು ಮತ್ತೆ ಅದೇ ಟ್ವೀಟನ್ನು ಉಲ್ಲೇಖಿಸಿ ಮತ್ತೊಂದು ಟ್ವೀಟನ್ನು ಕಿಣಿ ಅವರು ಮಾಡಿದ್ದಾರೆ.

VISTARANEWS.COM


on

Bangladesh unrest
Koo

ಢಾಕಾ: ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಭಾರೀ ದಂಗೆ(Bangladesh Unrest) ನಿಯಂತ್ರಣಕ್ಕೆ ಬಾರದೇ ಇರುವ ಹಿನ್ನೆಲೆ ರಾಜೀನಾಮೆ ನೀಡಿರುವ ಅಲ್ಲಿನ ಪ್ರಧಾನಿ ಶೇಖ್‌ ಹಸೀನಾ(Sheikh Hasina) ದೇಶವನ್ನು ತೊರೆದು ಭಾರತಕ್ಕೆ ಪಲಾಯಣ ಮಾಡಿದ್ದಾರೆ. ಇನ್ನು ಅಲ್ಲಿ ಪ್ರಧಾನಿ ಅಧಿಕೃತ ನಿವಾಸಕ್ಕೆ ನುಗ್ಗಿ ಜನ ಕೈಗೆ ಸಿಕ್ಕ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಇದರ ನಡುವೆ ಬಾಂಗ್ಲಾದಲ್ಲಿ ಇಂತಹ ದಂಗೆ ನಡೆಯುವ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದೆ ಎಂದು ಭಾರತದ ಜ್ಯೋತಿಷಿಯೊಬ್ಬರು ಹೇಳಿದ್ದಾರೆ.

ಖ್ಯಾತ ಜ್ಯೋತಿಷಿ ಪ್ರಶಾಂತ್‌ ಕಿಣಿಯವರು ಕಳೆದ ವರ್ಷವೇ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿ, ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರು 2024ರ ಮೇ, ಜೂನ್‌, ಜುಲೈ ಮತ್ತು ಆಗಸ್ಟ್‌ನಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಅವರ ಹತ್ಯೆಗೂ ಯತ್ನ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದರು ಇಂದು ಮತ್ತೆ ಅದೇ ಟ್ವೀಟನ್ನು ಉಲ್ಲೇಖಿಸಿ ಮತ್ತೊಂದು ಟ್ವೀಟನ್ನು ಕಿಣಿ ಅವರು ಮಾಡಿದ್ದಾರೆ.

ನಾನು ಈ ಹಿಂದೆಯೇ ಬಾಂಗ್ಲಾದ ಸ್ಥಿತಿಯ ಬಗ್ಗೆ ಭವಿಷ್ಯ ನುಡಿದಿದ್ದೆ. ಶೇಖ್‌ ಹಸೀನಾ ಅವರು 2024ರ ಆಗಸ್ಟ್‌ನಲ್ಲಿ ತೊಂದರೆ ಅನುಭವಿಸಲಿದ್ದಾರೆ ಎಂದು ಹೇಳಿದ್ದೆ. ಈ ಅವರು ತಮ್ಮದೇ ದೇಶದಿದಂ ಓಡಿ ಪಲಾಯಣ ಮಾಡಿದ್ದಾರೆಯೇ ಎಂದು ಪೋಸ್ಟ್‌ ಮಾಡಿದ್ದಾರೆ. ಕಿಣಿಯವರ ಪೋಸ್ಟ್‌ 2.6 ಮಿಲಿಯನ್‌ಗೂ ಅಧಿಕ ವ್ಯೂಸ್‌ ಪಡೆದುಕೊಂಡಿದ್ದು, ಅನೇಕರು ಲೈಕ್‌, ಶೇರ್‌ ಮತ್ತು ಕಮೆಂಟ್‌ ಮಾಡಿದ್ದಾರೆ.

ಕಿಣಿಯವರ ಪೋಸ್ಟ್‌ಗೆ ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಬ್ಬಾ… ಎಂಥಾ ಭವಿಷ್ಯ? ನಮ್ಮ ಭವಿಷ್ಯವನ್ನೂ ಹೇಳಿ ಎಂದು ಕೇಳಿದ್ದಾರೆ. ಮತ್ತೊರ್ವ ಬಾಂಗ್ಲಾದೇಶಕ್ಕಿಂತ ನನ್ನ ಜೀವನ ಬಹಳ ಮುಖ್ಯ. ಅದರ ಬಗ್ಗೆ ಭವಿಷ್ಯ ನುಡಿಯಿರಿ ಎಂದು ತಮಾಶೆ ಮಾಡಿದ್ದಾನೆ.

ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶವನ್ನು ತೊರೆದಿರುವ ಬೆನ್ನಲ್ಲೇ ಬಾಂಗ್ಲಾದೇಶ ರಾಷ್ಟ್ರಪತಿ ಮೊಹಮ್ಮದ್‌ ಶಹಬುದ್ದೀನ್‌ ಇಂದು ಸಂಸತ್ತನ್ನು ವಿಸರ್ಜಿಸಿದ್ದಾರೆ. ಮೂರು ಸೇನೆಯ ಮುಖ್ಯಸ್ಥರು, ವಿವಿಧ ಪಕ್ಷಗಳ ಮುಖಂಡರು, ನಾಗರಿಕ ಸಮಾಜದ ಮುಖಂಡರು ಹಾಗೂ ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಸಂಘಟನೆ ಮುಖಂಡರ ಜೊತೆ ಚರ್ಚೆ ನಡೆಸಿದ ಬಳಿಕ ರಾಷ್ಟ್ರಪತಿಯವರು ಈ ನಿರ್ಧಾರವನ್ನು ಘೋಷಿಸಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನೂ ಹೊರಹಾಕಿದ್ದಾರೆ.

ಮತ್ತೊಂದೆಡೆ ಶೇಖ್‌ ಹಸೀನಾ ಅವರ ಬದ್ಧ ವಿರೋಧಿ ಜೈಲಿನಲ್ಲಿದ್ದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನೂ ಇಂದು ಬಿಡುಗಡೆಗೊಳಿಸಲಾಗಿದೆ. ಜಿಯಾರನ್ನು 2018ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸ್ಟ್‌ ಮಾಡಲಾಗಿತ್ತು. ಶಹಾಬುದ್ದೀನ್ ನೇತೃತ್ವದ ಸಭೆಯಲ್ಲಿ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷರ ಪತ್ರಿಕಾ ತಂಡವು ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Bangladesh Unrest: ಆಲ್‌ ಐಸ್‌ ಆನ್‌ ಬಾಂಗ್ಲಾದೇಶ್‌ ಹಿಂದೂಸ್‌; ರಫಾ.. ರಫಾ.. ಎಂದು ಬೊಬ್ಬಿಡುತ್ತಿದ್ದ ಸೆಲೆಬ್ರಿಟಿಗಳು ಈಗೇಕೆ ಸೈಲೆಂಟ್‌?

Continue Reading

ವಿದೇಶ

Bangladesh Unrest: ಆಲ್‌ ಐಸ್‌ ಆನ್‌ ಬಾಂಗ್ಲಾದೇಶ್‌ ಹಿಂದೂಸ್‌; ರಫಾ.. ರಫಾ.. ಎಂದು ಬೊಬ್ಬಿಡುತ್ತಿದ್ದ ಸೆಲೆಬ್ರಿಟಿಗಳು ಈಗೇಕೆ ಸೈಲೆಂಟ್‌?

Bangladesh Unrest: ಬಾಂಗ್ಲಾದೇಶದ ಹಿಂದೂಗಳು ಮತ್ತು ದೇವಾಲಯಗಳ ಮೇಲಿನ ದಾಳಿಯ ಬಗ್ಗೆ ಮೌನವಾಗಿರುವುದಕ್ಕೆ ಬಾಲಿವುಡ್ ಸೆಲೆಬ್ರಿಟಿಗಳನ್ನು ನೆಟ್ಟಿಗರು ಟೀಕಿಸುತ್ತಿರುವ ಪರಿಕಲ್ಪನೆ ‘ಎಲ್ಲಾ ಕಣ್ಣುಗಳು ಬಾಂಗ್ಲಾದೇಶ ಹಿಂದೂಗಳ ಮೇಲೆ’ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿವೆ. ಕೆಲವು ತಿಂಗಳುಗಳ ಹಿಂದೆ ಇಸ್ರೇಲ್ ದಾಳಿಯನ್ನು ಖಂಡಿಸಿ ಪ್ಯಾಲೆಸ್ಟೈನ್‌ ಗೆ ಬೆಂಬಲ ಸೂಚಿಸಿ ಅನೇಕರು ಇನ್ ಸ್ಟಾ ಗ್ರಾಮ್ ನಲ್ಲಿ ‘ಆಲ್ ಐಸ್ ಆನ್ ರಫಾ’ ಘೋಷಣೆಯೊಂದಿಗೆ ಹಂಚಿಕೊಂಡಿದ್ದಾರೆ.

VISTARANEWS.COM


on

Bangladesh Unrest
Koo

ಢಾಕಾ: ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ದಂಗೆ ಕ್ಷಣ ಕ್ಷಣಕ್ಕೂ ಭೀಕರವಾಗುತ್ತಿದೆ. ಅಲ್ಲಿನ ಜನರ ದುಸ್ಥಿತಿ ಕೇಳುವಂತಿಲ್ಲ. ಅದರಲ್ಲೂ ಬಾಂಗ್ಲಾದೇಶ(Bangladesh Unrest)ದಲ್ಲಿ ತಲೆದೋರಿರುವ ಅರಾಜಕತೆ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಜೀವಕ್ಕೆ ಅಪಾಯವನ್ನು ತಂದೊಡ್ಡಿದೆ. ಅದಕ್ಕೆ ಪೂರಕ ಎನ್ನುವಂತೆ ಅಲ್ಲಿನ ಹಿಂದೂಗಳು ಸಹಾಯಕ್ಕಾಗಿ ಅಂಗಲಾಚುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ನಡುವೆ ಆಲ್‌ ಐಸ್‌ ಆನ್‌ ಬಾಂಗ್ಲಾದೇಶ್‌ ಹಿಂದೂಸ್‌(All eyes on Bangladesh Hindus) ಎಂಬ ಪರಿಕಲ್ಪನೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ ಆಗುತ್ತಿದೆ.

ಏನಿದು ಹೊಸ ಟ್ರೆಂಡಿಂಗ್‌?

ಬಾಂಗ್ಲಾದೇಶದ ಹಿಂದೂಗಳು ಮತ್ತು ದೇವಾಲಯಗಳ ಮೇಲಿನ ದಾಳಿಯ ಬಗ್ಗೆ ಮೌನವಾಗಿರುವುದಕ್ಕೆ ಬಾಲಿವುಡ್ ಸೆಲೆಬ್ರಿಟಿಗಳನ್ನು ನೆಟ್ಟಿಗರು ಟೀಕಿಸುತ್ತಿರುವ ಪರಿಕಲ್ಪನೆ ‘ಎಲ್ಲಾ ಕಣ್ಣುಗಳು ಬಾಂಗ್ಲಾದೇಶ ಹಿಂದೂಗಳ ಮೇಲೆ’ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿವೆ. ಕೆಲವು ತಿಂಗಳುಗಳ ಹಿಂದೆ ಇಸ್ರೇಲ್ ದಾಳಿಯನ್ನು ಖಂಡಿಸಿ ಪ್ಯಾಲೆಸ್ಟೈನ್‌ ಗೆ ಬೆಂಬಲ ಸೂಚಿಸಿ ಅನೇಕರು ಇನ್ ಸ್ಟಾ ಗ್ರಾಮ್ ನಲ್ಲಿ ‘ಆಲ್ ಐಸ್ ಆನ್ ರಫಾ’ ಘೋಷಣೆಯೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿರುವವರ ಸಂಖ್ಯೆ 30 ಮಿಲಿಯನ್ ದಾಟಿತ್ತು. ಈ ಪೋಸ್ಟನ್ನು ಬಾಲಿವುಡ್‌ ತಾರೆಯರು ತಮ್ಮ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು.

ಇದೀಗ ಬಾಂಗ್ಲಾದಲ್ಲಿ ಹಿಂದೂಗಳ ಮನೆ ಮನೆಗೆ ನುಗ್ಗಿ ಕಿಡಿಗೇಡಿಗಳು ದಾಂಧಲೆ ಎಬ್ಬಿಸುತ್ತಿದ್ದರೂ, ಯಾರೋಬ್ಬರು ತುಟಿಕ್‌ ಪಿಟಿಕ್‌ ಅನ್ನದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತಿದೆ. ಸಿನಿತಾರೆಯರ ಏಕಪಕ್ಷೀಯ ನಡೆಗೆ ಹಲವು ಟೀಕೆ ವ್ಯಕ್ತಪಡಿಸಿದ್ದಾರೆ.

ಭಾರತೀಯ ನಟರಾದ ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಕರೀನಾ ಕಪೂರ್ ಖಾನ್ ಮತ್ತು ವರುಣ್ ಧವನ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಸಲಹೆಗಾರ ಮ್ಯಾಟ್ ನವರ್ರಾ ಅವರು “‘ಆಲ್ ಐಸ್ ಆನ್ ರಾಫಾ’ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: Bangladesh Protest : ಆಘಾತಕಾರಿ ಬೆಳವಣಿಗೆ; ಬಾಂಗ್ಲಾದಲ್ಲಿ ಹಿಂದೂಗಳಿಗೆ ಜೀವ ಬೆದರಿಕೆ; ಕಣ್ಣೀರಿಡುತ್ತಿದ್ದಾರೆ ಮಹಿಳೆಯರು…

Continue Reading

ವಿದೇಶ

Bangladesh Unrest: ಬಾಂಗ್ಲಾ ಸಂಸತ್‌ ವಿಸರ್ಜನೆ; ಮಾಜಿ ಪ್ರಧಾನಿ ಖಲೀದಾ ಜಿಯಾ ಜೈಲಿನಿಂದ ರಿಲೀಸ್‌

Bangladesh Unrest: ಶೇಖ್‌ ಹಸೀನಾ ಅವರ ಬದ್ಧ ವಿರೋಧಿ ಜೈಲಿನಲ್ಲಿದ್ದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನೂ ಇಂದು ಬಿಡುಗಡೆಗೊಳಿಸಲಾಗಿದೆ. ಜಿಯಾರನ್ನು 2018ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸ್ಟ್‌ ಮಾಡಲಾಗಿತ್ತು. ಶಹಾಬುದ್ದೀನ್ ನೇತೃತ್ವದ ಸಭೆಯಲ್ಲಿ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷರ ಪತ್ರಿಕಾ ತಂಡವು ಹೇಳಿಕೆಯಲ್ಲಿ ತಿಳಿಸಿದೆ.

VISTARANEWS.COM


on

Bangladesh unrest
Koo

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಲಿನ ಸರ್ಕಾರದ ವಿರುದ್ಧ ನಡೆಯುತ್ತಿದ್ದ (Bangladesh Unrest) ಪ್ರತಿಭಟನೆ ಪ್ರತಿಭಟನೆ ಸೇನಾ ದಂಗೆಯಾಗಿ ಮಾರ್ಪಟ್ಟಿದೆ. ಇದರ ಬೆನ್ನಲ್ಲೇ ಶೇಖ್ ಹಸೀನಾ (Sheikh Hasina) ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶವನ್ನು ತೊರೆದಿದ್ದರು. ಇದೀಗ ಬಾಂಗ್ಲಾದೇಶ ರಾಷ್ಟ್ರಪತಿ ಮೊಹಮ್ಮದ್‌ ಶಹಬುದ್ದೀನ್‌ ಇಂದು ಸಂಸತ್ತನ್ನು ವಿಸರ್ಜಿಸಿದ್ದಾರೆ.

ಮೂರು ಸೇನೆಯ ಮುಖ್ಯಸ್ಥರು, ವಿವಿಧ ಪಕ್ಷಗಳ ಮುಖಂಡರು, ನಾಗರಿಕ ಸಮಾಜದ ಮುಖಂಡರು ಹಾಗೂ ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಸಂಘಟನೆ ಮುಖಂಡರ ಜೊತೆ ಚರ್ಚೆ ನಡೆಸಿದ ಬಳಿಕ ರಾಷ್ಟ್ರಪತಿಯವರು ಈ ನಿರ್ಧಾರವನ್ನು ಘೋಷಿಸಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನೂ ಹೊರಹಾಕಿದ್ದಾರೆ.

ಖಲೀದಾ ಜಿಯಾ ರಿಲೀಸ್‌

ಮತ್ತೊಂದೆಡೆ ಶೇಖ್‌ ಹಸೀನಾ ಅವರ ಬದ್ಧ ವಿರೋಧಿ ಜೈಲಿನಲ್ಲಿದ್ದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನೂ ಇಂದು ಬಿಡುಗಡೆಗೊಳಿಸಲಾಗಿದೆ. ಜಿಯಾರನ್ನು 2018ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸ್ಟ್‌ ಮಾಡಲಾಗಿತ್ತು. ಶಹಾಬುದ್ದೀನ್ ನೇತೃತ್ವದ ಸಭೆಯಲ್ಲಿ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷರ ಪತ್ರಿಕಾ ತಂಡವು ಹೇಳಿಕೆಯಲ್ಲಿ ತಿಳಿಸಿದೆ. ಸಭೆಯಲ್ಲಿ ಸೇನಾ ಮುಖ್ಯಸ್ಥ ಜನರಲ್ ವಕಾರ್ ಉಜ್ ಜಮಾನ್, ನೌಕಾಪಡೆ ಮತ್ತು ವಾಯುಪಡೆ ಮುಖ್ಯಸ್ಥರು ಮತ್ತು ಬಿಎನ್‌ಪಿ, ಜಮಾತ್-ಎ-ಇಸ್ಲಾಮಿ ಪಾರ್ಟಿ ಸೇರಿದಂತೆ ಹಲವು ವಿರೋಧ ಪಕ್ಷಗಳ ಉನ್ನತ ನಾಯಕರು ಉಪಸ್ಥಿತರಿದ್ದರು.

ಇನ್ನು ದಂಗೆ ಪ್ರಾರಂಭವಾದಗಿನಿಂದ ಆ.5ರವರೆಗೆ ಅರೆಸ್ಟ್‌ ಮಾಡಿರುವ ಜನರನ್ನು ಬಿಡುಗಡೆಗೊಳಿಸಲಾಗಿದೆ. ಮತ್ತೊಂದೆಡೆ ಜಮಾತ್‌ ಎ ಇಸ್ಲಾಮಿ ಮುಖ್ಯಸ್ಥ ಡಾ. ಶಾಫಿಖರ್‌ ರೆಹ್ಮಾನ್‌ ಪತ್ರಿಕಾಗೋಷ್ಠಿ ಕರೆದು ಬಾಂಗ್ಲಾದ ಪ್ರಸ್ತುತ ಸ್ಥಿತಿಗತಿ ಬಗ್ಗೆ ವಿವರಿಸಿದ್ದಾರೆ.

ಶೇಖ್ ಹಸೀನಾ (Sheikh Hasina) ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶವನ್ನು ತೊರೆದಿದ್ದರು. ಹಸೀನಾ ಬಾಂಗ್ಲಾದೇಶದಿಂದ ಮಿಲಿಟರಿ ವಿಮಾನದಲ್ಲಿ ಪಲಾಯನ ಮಾಡಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ, ಪ್ರತಿಭಟನಾಕಾರರು ಮಾಜಿ ಪ್ರಧಾನಿಯ ನಿವಾಸಕ್ಕೆ ನುಗ್ಗಿ ಮಾಜಿ ಅವರ ಬ್ರಾಗಳನ್ನೂ ಬಿಡಿದೇ ದೋಚಿದ್ದಾರೆ. ಇದರ ವಿಡಿಯೊ ಹಾಗೂ ಚಿತ್ರಗಳು ವೈರಲ್​ ಆಗಿವೆ. ಅಲ್ಲಿನ ಪ್ರತಿಭಟನಾಕಾರರ ಮನಸ್ಥಿತಿಯ ಬಗ್ಗೆ ಜಾಗತಿಕವಾಗಿ ಟೀಕೆಗಳು ಕೇಳಿ ಬಂದಿವೆ.

ಪ್ರತಿಭಟನಾಕಾರರು ಸೀರೆಗಳು ಸೇರಿದಂತೆ ತಮ್ಮಿಂದ ಸಾಧ್ಯವಾದದ್ದನ್ನು ನಿರಂತರವಾಗಿ ಲೂಟಿ ಮಾಡಿದ್ದರು. ವೈರಲ್ ವೀಡಿಯೊಗಳು ಮತ್ತು ಚಿತ್ರಗಳು ಪ್ರತಿಭಟನಾಕಾರರೊಬ್ಬರು ನಾಚಿಕೆಯಿಲ್ಲದೆ ಕೈಯಲ್ಲಿ ಬ್ರಾಗಳನ್ನು ಹಿಡಿದುಕೊಂಡು ಮಾಜಿ ಪ್ರಧಾನಿಯ ಅಧಿಕೃತ ನಿವಾಸದಿಂದ ಲೂಟಿ ಮಾಡಿರುವುದನ್ನು ತೋರಿಸಿದೆ. ಇದು ಪ್ರತಿಭಟನೆಯಲ್ಲ ಕೇವಲ ದೊಂಬಿ ಎಂಬುದನ್ನು ಸಾಬೀತು ಮಾಡಿದೆ.

ಇದನ್ನೂ ಓದಿ: Bangladesh Protest: ಬಾಂಗ್ಲಾದೇಶದಲ್ಲಿನ ಹಿಂಸಾಚಾರದ ಹಿಂದೆ ಬೇರೆ ದೇಶಗಳ ಕೈವಾಡವಿದೆಯೇ?; ರಾಹುಲ್‌ ಗಾಂಧಿ ಪ್ರಶ್ನೆ

Continue Reading
Advertisement
ಕ್ರೀಡೆ3 hours ago

Paris Olympics 2024 : ಸೆಮಿಫೈನಲ್​​​​ನಲ್ಲಿ ಭಾರತ ಹಾಕಿ ತಂಡಕ್ಕೆ ಆಘಾತಕಾರಿ ಸೋಲು, ಇನ್ನೂ ಇದೆ ಪದಕ ಗೆಲ್ಲುವ ಅವಕಾಶ

Shira News
ತುಮಕೂರು3 hours ago

Shira News: ವರ್ಗಾವಣೆಗೊಂಡ ಶಿರಾ ತಾ.ಪಂ ಇಓ ಅನಂತ್‌ರಾಜ್‌ಗೆ ಬೀಳ್ಕೊಡುಗೆ

Rekha Sharma
ದೇಶ3 hours ago

Rekha Sharma: ರಾಷ್ಟ್ರೀಯ ಮಹಿಳಾ ಆಯೋಗ ಅಧ್ಯಕ್ಷೆ ರೇಖಾ ಶರ್ಮಾ ಅಧಿಕಾರಾವಧಿ ಪೂರ್ಣ

Bangladesh unrest
ದೇಶ4 hours ago

Bangladesh Unrest: ಶೇಖ್ ಹಸೀನಾ ಬೆಂಬಲಿಗನ ಫೈವ್‌ ಸ್ಟಾರ್‌ ಹೊಟೇಲ್‌ಗೆ ಬೆಂಕಿ; 24 ಜನ ಸಜೀವ ದಹನ

Paris Olympics
ಕ್ರೀಡೆ4 hours ago

Paris Olympics: ಫೈನಲ್​ ಪ್ರವೇಶಿಸಿ ಐತಿಹಾಸಿಕ ಪದಕ ಖಾತ್ರಿಪಡಿಸಿದ ಕುಸ್ತಿಪಟು ವಿನೇಶ್ ಫೋಗಟ್

Bangladesh unrest
ದೇಶ5 hours ago

Bangladesh Unrest: ಶೇಖ್‌ ಹಸೀನಾಗೆ 8 ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದ ಭಾರತದ ಜ್ಯೋತಿಷಿ; ಆತನ ಭವಿಷ್ಯವಾಣಿ ಏನು?

Pralhad Joshi
ದೇಶ5 hours ago

Pralhad Joshi: 2030ರಲ್ಲೂ ನಾವಿಲ್ಲೇ ಇರುತ್ತೇವೆ, ನೀವಲ್ಲೇ ಇರುತ್ತೀರಿ; ಸಂಸತ್‌ನಲ್ಲಿ ಪ್ರತಿಪಕ್ಷಗಳಿಗೆ ಜೋಶಿ ಟಾಂಗ್

Bangladesh Protest
ವಿದೇಶ5 hours ago

Bangladesh Chronology: 1971ರ ದೇಶ ಉದಯದಿಂದ ಹಿಡಿದು 2024ರ ದಂಗೆಯವರೆಗೆ; ಇಲ್ಲಿದೆ ಬಾಂಗ್ಲಾದೇಶದ ಸಂಪೂರ್ಣ ರಕ್ತ ಚರಿತ್ರೆ!

Reliance Foundation
ಕರ್ನಾಟಕ5 hours ago

Reliance Foundation: ವಯನಾಡಿನ ಭೂಕುಸಿತ ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ನೆರವು

B.Ed Exam Scam
ಕರ್ನಾಟಕ5 hours ago

B.Ed Exam Scam: ಬಿ.ಇಡಿ ಪರೀಕ್ಷೆ ಅಕ್ರಮ; ಗುಲ್ಬರ್ಗಾ ವಿವಿ ಕುಲಸಚಿವೆ ಸೇರಿ ಐವರ ವಿರುದ್ಧ ಎಫ್‌ಐಆರ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು9 hours ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ10 hours ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ6 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ6 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ6 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌