Sowmya Reddy: ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ನೇಮಕ - Vistara News

ರಾಜಕೀಯ

Sowmya Reddy: ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ನೇಮಕ

Sowmya Reddy: ಕರ್ನಾಟಕ ಸೇರಿ ಮೂರು ರಾಜ್ಯಗಳ ಮಹಿಳಾ ಕಾಂಗ್ರೆಸ್‌ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.

VISTARANEWS.COM


on

Sowmya Reddy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ (Sowmya Reddy) ನೇಮಕವಾಗಿದ್ದಾರೆ. ಕರ್ನಾಟಕ ಸೇರಿ ಮೂರು ರಾಜ್ಯಗಳ ಮಹಿಳಾ ಕಾಂಗ್ರೆಸ್‌ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಮಹಿಳಾ ಕಾಂಗ್ರೆಸ್‌ಗೆ ಸೌಮ್ಯಾ ರೆಡ್ಡಿ, ಚಂಡೀಗಢಕ್ಕೆ ನಂದಿತಾ ಹೂಡ, ಅರುಣಾಚಲ ಪ್ರದೇಶ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಚುಕು ನಾಚಿ ನೇಮಕವಾಗಿದ್ದಾರೆ.

ಸೌಮ್ಯಾ ರೆಡ್ಡಿ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. 2023ರ ಚುನಾವಣೆಯಲ್ಲಿ ಕೇವಲ 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಎದುರು ಸೋತಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕೈ ಅಭ್ಯರ್ಥಿ ಸೌಮ್ಯಾ ರೆಡ್ಡಿ ಸೋಲು ಕಂಡಿದ್ದರು.

ಇದನ್ನೂ ಓದಿ | Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ಗೆ ಅಹವಾಲು ಸಲ್ಲಿಸಲು ಸಾಲುಸಾಲು ಜನ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಅವರಿಗೆ ಅಹವಾಲು ಸಲ್ಲಿಸಲು ಮಂಗಳವಾರ ವಿವಿಧ ಭಾಗಗಳಿಂದ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೂ ಊಟ, ತಿಂಡಿ ಬಿಟ್ಟು ಸಚಿವರು ಅಹವಾಲು ಸ್ವೀಕರಿಸಿದರು.

ಸಚಿವರು ಬೆಳಗಾವಿಯಲ್ಲಿದ್ದಾಗಲೆಲ್ಲ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡು ಸಚಿವರ ಮನೆಯ ಬಳಿ ಗೃಹ ಕಚೇರಿಗೆ ನೂರಾರು ಜನರು ಆಗಮಿಸುತ್ತಾರೆ. ತಾಳ್ಮೆಯಿಂದ ಎಲ್ಲರ ಅಹವಾಲು ಆಲಿಸಿ, ಸಮಾಧಾನ ಪಡಿಸಿ ಕಳುಹಿಸುತ್ತಾರೆ. ಮಂಗಳವಾರವೂ ದೊಡ್ಡ ಸಂಖ್ಯೆಯಲ್ಲೇ ಜನರು ಆಗಮಿಸಿದ್ದರು.

ಇದನ್ನೂ ಓದಿ: Kannada New Movie: ರವೀಂದ್ರ ಸೊರಗಾವಿ ಕಂಠಸಿರಿಯಲ್ಲಿ ʼಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರುʼ ಚಿತ್ರದ ಹಾಡು

ಕಳದ 4 ದಿನಗಳಿಂದ ಲಕ್ಷ್ಮೀ ಹೆಬ್ಬಾಳಕರ್ ಅವರು, ಮೈಸೂರು, ಭದ್ರಾವತಿ, ಗದಗ ಪ್ರವಾಸದಲ್ಲಿದ್ದಾರೆ. ಸೋಮವಾರ ಗದಗ ಜಿಲ್ಲಾ ಪ್ರವಾಸ ಮಾಡಿ ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ಬೆಳಗಾವಿ ತಲುಪಿದ್ದಾರೆ. ಮಂಗಳವಾರ ಸಂಜೆ ಬೆಂಗಳೂರಿಗೆ ತೆರಳಿ, ಬುಧವಾರ ಉಡುಪಿಗೆ ಹೋಗುವ ಕಾರ್ಯಕ್ರಮವಿದೆ. ಆದರೂ ಮಂಗಳವಾರ ಬಹು ಹೊತ್ತಿನವರೆಗೂ ಜನರ ಸಮಸ್ಯೆಗಳಿಗೆ ಕಿವಿಯಾದರು. ಬಂದ ಜನರು ಸಚಿವರ ಸ್ಪಂದನೆಗೆ ಧನ್ಯವಾದ ಸಲ್ಲಿಸಿ ಮರಳುತ್ತಿದ್ದರು.


ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Cauvery Water Dispute: ಕಾವೇರಿ ನೀರು ನಿಗದಿಗಿಂತ ಹೆಚ್ಚು ಹರಿಸಿದರೂ ತಮಿಳುನಾಡು ಆಕ್ಷೇಪ!

Cauvery Water Dispute: ಕಾವೇರಿ ನೀರು ನಿಯಂತ್ರಣ ಸಮಿತಿಯು ಆ.11ರಂದು ನಿಗದಿಪಡಿಸಿದ ನೀರಿನ ಹರಿವಾದ 56.73 ಟಿಎಂಸಿಗೆ ಬದಲಾಗಿ153.802 ಟಿಎಂಸಿ ನೀರು ಕರ್ನಾಟಕದಿಂದ ತಮಿಳುನಾಡಿಗೆ ಹರಿದಿದೆ. ಹೆಚ್ಚುವರಿ ನೀರು ಹರಿದರೂ ಕೂಡ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ.

VISTARANEWS.COM


on

Cauvery Water Dispute
Koo

ಬೆಂಗಳೂರು: ನಿಗದಿಗಿಂತ ಹೆಚ್ಚು ಕಾವೇರಿ ನೀರು (Cauvery Water Dispute) ಹರಿಸಿದರೂ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿರುವುದು ಕಂಡುಬಂದಿದೆ. ನವ ದೆಹಲಿಯಲ್ಲಿ ಮಂಗಳವಾರ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) 101ನೇ ಸಭೆಯಲ್ಲಿ ಕರ್ನಾಟಕದ ವಿರುದ್ಧ ತಮಿಳುನಾಡು ಅಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ. ಈ ಬಾರಿಯೂ ಕರ್ನಾಟಕವು ತನ್ನ ಜಲಾಶಯಗಳು ತುಂಬಿದ ನಂತರವಷ್ಟೇ ನೀರನ್ನು ಹರಿಸಿದೆ ಎಂದು ತಿಳಿಸಿದೆ.

ಆ.11ರಂದು ನಿಗದಿಪಡಿಸಿದ ನೀರಿನ ಹರಿವಾದ 56.73 ಟಿಎಂಸಿಗೆ ಬದಲಾಗಿ ಬಿಳಿಗುಂಡ್ಲುವಿನಲ್ಲಿ 153.802 ಟಿಎಂಸಿ ನೀರು ಹರಿದಿದೆ. ಬಿಳಿಗುಂಡ್ಲುವಿನಲ್ಲಿ ಹರಿದ ಹೆಚ್ಚುವರಿ ನೀರಿನ ಪ್ರಮಾಣವನ್ನು ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯವು ಹರಿಸಬೇಕಾದ ನೀರಿನ ಮೊತ್ತಕ್ಕೆ ಜಮೆ ಮಾಡಿಕೊಳ್ಳಬೇಕು. ಮುಂದಿನ ಮಾನ್ಸೂನ್ ತಿಂಗಳುಗಳಲ್ಲಿಯೂ ಒಳ್ಳೆಯ ಮಳೆಯ ನಿರೀಕ್ಷೆ ಇದ್ದು, ಎರಡೂ ರಾಜ್ಯದ ರೈತರು ಸಹ ಲಾಭ ಪಡೆದುಕೊಳ್ಳಬಹುದೆಂದು ಆಶಿಸುತ್ತೇವೆ ಎಂದು ಸಭೆಯಲ್ಲಿ ಕರ್ನಾಟಕ ತಿಳಿಸಿದೆ.

ಇದಕ್ಕೆ ತಮಿಳುನಾಡು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಬಿಳಿಗುಂಡ್ಲುವಿನಲ್ಲಿ ಹರಿದ ನೀರಿನ ಪ್ರಮಾಣವು ಕರ್ನಾಟಕದ ಜಲಾಶಯಗಳಲ್ಲಿನ ಹೆಚ್ಚುವರಿ ನೀರಿನ ಪ್ರಮಾಣವಾಗಿರುತ್ತದೆ. ಈ ಬಾರಿಯೂ ಕರ್ನಾಟಕ ರಾಜ್ಯವು ತನ್ನ ಜಲಾಶಯಗಳು ತುಂಬಿದ ನಂತರವಷ್ಟೇ ನೀರನ್ನು ಹರಿಸಿದೆ ಎಂದು ತಿಳಿಸಿದ್ದಾರೆ.

    1992ರ ಏ.3ರ ಕಾವೇರಿ ನ್ಯಾಯಾಧಿಕರಣದ ಆದೇಶದಂತೆ ಒಂದು ವಾರದಲ್ಲಿ ಹರಿಸಬೇಕಾದ ನೀರಿನ ಪ್ರಮಾಣದಲ್ಲಿ ಕೊರತೆ ಉಂಟಾದಲ್ಲಿ, ಅದನ್ನು ಮುಂಬರುವ ವಾರಗಳಲ್ಲಿ ಹರಿಸಬೇಕು. ಆದ್ದರಿಂದ, ಕರ್ನಾಟಕ ರಾಜ್ಯವು ತನ್ನ ಜಲಾಶಯಗಳು ಭರ್ತಿ ಆಗುವವರೆಗೆ ನಿರೀಕ್ಷಿಸಿ ಹೆಚ್ಚುವರಿ ನೀರನ್ನು ಹರಿಸಲು ಕಾಯುವ ಹಾಗಿಲ್ಲ ಎಂದು ತಮಿಳುನಾಡು ಅಧಿಕಾರಿಗಳು ಹೇಳಿದ್ದಾರೆ.

    ಕರ್ನಾಟಕವು ಹೆಚ್ಚುವರಿ ನೀರು ಹರಿಸಿರುವುದರಿಂದ ಕಾವೇರಿ ಜಲ ನಿಯಂತ್ರಣ ಸಮಿತಿಯಲ್ಲಿ (CWRC) ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಯಾವುದೇ ರೀತಿಯ ನಿರ್ಣಯ, ಆದೇಶ ಮಾಡದೆ ಸಭೆಯು ಮುಕ್ತಾಯಗೊಂಡಿದೆ.

    ಇದನ್ನೂ ಓದಿ | Government Employees: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಆ.17ರಂದು ವಿಶೇಷ ಸಾಂದರ್ಭಿಕ ರಜೆ

    ಗೇಟ್‌ ರಿಪೇರಿಗಾಗಿ 60 ಟಿಎಂಸಿ ನೀರು ಖಾಲಿ, 8 ಜಿಲ್ಲೆಗಳ ರೈತರಿಗೆ ನೀರಿಲ್ಲ!

    ವಿಜಯನಗರ: ಹೊಸಪೇಟೆಯ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರೆಸ್ಟ್‌ ಗೇಟ್ ಮುರಿದಿರುವುದು (Crest Gate Crash) ಮಳೆಗಾಲ ಮುಗಿಯುವ ಮುನ್ನವೇ ಕಲ್ಯಾಣ ಕರ್ನಾಟಕ (Kalyana Karntaka) ಭಾಗದ ಅನ್ನದಾತರಿಗೆ (Farmers) ಶಾಕ್ ನೀಡಿದೆ. ಕ್ರೆಸ್ಟ್‌ ಗೇಟ್‌ ಮುರಿದುದರಿಂದ ಸುಮಾರು 15 ಟಿಎಂಸಿಯಷ್ಟು (TMC) ನೀರು ಹರಿದುಹೋಗಿದ್ದು, ಭರ್ತಿಯಾಗಿದ್ದ ಜಲಾಶಯ ಅಷ್ಟರ ಮಟ್ಟಿಗೆ ಈಗ ಖಾಲಿಯಾಗಿದೆ. ಇದರ ಪರಿಣಾಮ ಮೂರು ರಾಜ್ಯಗಳ 8 ಜಿಲ್ಲೆಗಳ ಲಕ್ಷಾಂತರ ರೈತರು ತಮ್ಮ ಎರಡು ಬೆಳೆಗಳನ್ನು ಕಳೆದುಕೊಳ್ಳುವ ಅನುಮಾನ ಮೂಡಿದೆ.

    ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ ಒಟ್ಟು ಹನ್ನೆರಡು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮೂರು ರಾಜ್ಯದ 8 ಜಿಲ್ಲೆಗಳಿಗೆ ಆಸರೆ ಆಗಿರುವ ತುಂಗಭದ್ರಾ ಜಲಾಶಯ ಕಲ್ಯಾಣ ಕರ್ನಾಟಕದ ಬಳ್ಳಾರಿ, ವಿಜಯನಗರ, ಕೊಪ್ಪಳ‌, ರಾಯಚೂರು, ಆಂಧ್ರ ಪ್ರದೇಶದ ಕರ್ನೂಲ್, ಅನಂತಪುರ, ಕಡಪ, ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಗಳಿಗೆ ಜೀವನಾಡಿ.

    ಈ ಬಾರಿ ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಅಷ್ಟಾಗಿ ಮಳೆ ಆಗಿಲ್ಲ. ಆದರೆ ಡ್ಯಾಂ ತುಂಬಿದ್ದರಿಂದ ಕಾಲುವೆ ನೀರು ನಂಬಿಕೊಂಡು ರೈತು ಬಿತ್ತನೆ ಮಾಡಿದ್ದಾರೆ. ಬಳ್ಳಾರಿಯಲ್ಲಿ 70 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬಿತ್ತನೆ ಮಾಡಲಾಗಿದೆ. 80 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ.

    ಆದರೆ ಗೇಟ್ ರಿಪೇರಿಗಾಗಿ 60 TMC ನೀರನ್ನು ಅಣೆಕಟ್ಟಿನಿಂದ ಖಾಲಿ ಮಾಡುವ ಅನಿವಾರ್ಯತೆ ಇದೆ. 105 TMC ಸಾಮರ್ಥ್ಯದ TB ಡ್ಯಾಂನಲ್ಲಿ 20 ಅಡಿ ನೀರು ಕುಗ್ಗಿಸಿ 60 TMCಯಷ್ಟು ನೀರನ್ನು‌ ಅಧಿಕಾರಿಗಳು ಖಾಲಿ ಮಾಡುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿಂದ ಮಳೆ ಪ್ರಮಾಣ ಕುಗ್ಗಬಹುದು. ಹೀಗಾಗಿ ಖಾಲಿಯಾದ 60 ಟಿಎಂಸಿ ನೀರನ್ನು ಮತ್ತೆ ತುಂಬಿಸುವುದು ಕಷ್ಟಸಾಧ್ಯ. ಬೇಸಿಗೆಯಲ್ಲಿ ನಿರ್ವಹಣೆಗಾಗಿ ಡ್ಯಾಂ ತುಂಬಿಸುವುದು ಅಧಿಕಾರಿಗಳಿಗೆ ಸವಾಲು ಆಗುತ್ತದೆ. ಸೆಪ್ಟೆಂಬರ್ ಬಳಿಕ ಕಾಲುವೆ ನೀರು ಕೈಕೊಟ್ಟರೆ ಬೆಳೆಗಳು ಬಾಡುತ್ತವೆ. ಹೀಗಾಗಿ ಈ ಬಾರಿ ಬೆಳೆಗಳಿಗೆ‌ ಡ್ಯಾಂ ನೀರು ಸಿಗುವುದೇ ಅನುಮಾನ ಎಂಬಂತಾಗಿದೆ.

    ಎರಡನೇ ಬೆಳೆಗಿಂತ ಮೊದಲ ಬೆಳೆಗಾದರೂ ಸರಿಯಾಗಿ ನೀರು ಸಿಗುವುದೇ ಎಂಬ ಆತಂಕವೂ ರೈತರನ್ನು ಕಾಡುತ್ತಿದೆ. 60 ಟಿಎಂಸಿ ನೀರು ಖಾಲಿಯಾದ್ರೆ ಡ್ಯಾಂನಲ್ಲಿ ಉಳಿಯುವುದು ಕೇವಲ 45 ಟಿಎಂಸಿ ನೀರು ಮಾತ್ರ. ಇದರಲ್ಲಿ ಆಂಧ್ರಪ್ರದೇಶದ ಕೋಟಾ ಕೂಡಾ ಇದೆ. ಹೀಗಾಗಿ ಕರ್ನಾಟಕ ಕೋಟಾ ಉಳಿಯುವುದು ಕೇವಲ ಇಪ್ಪತ್ತೈದು ಟಿಎಂಸಿ ನೀರು. ಇದರಲ್ಲಿಯೇ ಕುಡಿಯುವ ನೀರಿಗೆ ಹೆಚ್ಚಿನ ನೀರು ಇಟ್ಟುಕೊಳ್ಳುವುದರಿಂದ ರೈತರಿಗೆ ಇದೀಗ ಬೆಳೆಗೆ ನೀರು ಸಿಗುತ್ತಾ ಇಲ್ಲವೋ ಅನ್ನೋ ಆತಂಕ ಎದುರಾಗಿದೆ.

    ಇದನ್ನೂ ಓದಿ | Lakshmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ಗೆ ಅಹವಾಲು ಸಲ್ಲಿಸಲು ಸಾಲುಸಾಲು ಜನ

    ತುಂಗಭದ್ರಾ ಜಲಾಶಯದ ನೀರಿನ ಮೇಲೆಯೇ ನಾಲ್ಕು ಜಿಲ್ಲೆಗಳ ಅನೇಕ ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತದೆ. ಡ್ಯಾಂನಲ್ಲಿರೋ ನೀರು ಖಾಲಿಯಾದ್ರೆ ಕುಡಿಯುವ ನೀರಿಗೆ ಕೂಡಾ ತತ್ವಾರವಾಗುತ್ತದೆ. ಕಳೆದ ಬೇಸಿಗೆಯಲ್ಲಿ ಅನೇಕ ಕಡೆ ಕುಡಿಯಲು ಕೂಡಾ ನೀರು ಬಿಡದ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮತ್ತೆ ಡ್ಯಾಂ ಖಾಲಿಯಾಗುತ್ತಿರುವುದರಿಂದ ಬೇಸಿಗೆಯಲ್ಲಿ ಈ ಬಾರಿ ಕೂಡಾ ತತ್ವಾರವಾಗೋ ಸಾಧ್ಯತೆ ಹೆಚ್ಚಾಗಿದೆ.

      Continue Reading

      ಕರ್ನಾಟಕ

      Government Employees: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಆ.17ರಂದು ವಿಶೇಷ ಸಾಂದರ್ಭಿಕ ರಜೆ

      Government Employees: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ವೃಂದ ಸಂಘಗಳ ವತಿಯಿಂದ ಆ.17ರಂದು ನಗರದ ಅರಮನೆ ಆವರಣದಲ್ಲಿ ಅಭಿನಂದನಾ ಕಾರ್ಯಕ್ರಮ ಹಾಗೂ ಕಾರ್ಯಾಗಾರ ಆಯೋಜಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ.

      VISTARANEWS.COM


      on

      Government Employees
      Koo

      ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ (Government Employees) ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಕೃತಜ್ಞತೆ ಸಲ್ಲಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ವೃಂದ ಸಂಘಗಳ ವತಿಯಿಂದ ಆ.17ರಂದು ನಗರದ ಅರಮನೆ ಆವರಣದಲ್ಲಿ ಅಭಿನಂದನಾ ಕಾರ್ಯಕ್ರಮ ಹಾಗೂ ಕಾರ್ಯಾಗಾರ ಆಯೋಜಿಸಲಾಗಿದೆ. ಹೀಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಕೂಲವಾಗಲೆಂದು ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು (Special casual leave) ರಾಜ್ಯ ಸರ್ಕಾರ ಮಂಜೂರು ಮಾಡಿದೆ.

      ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ. ಬಿ ಸುತ್ತೋಲೆ ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ವೃಂದ ಸಂಘಗಳ ವತಿಯಿಂದ ಆ.17ರಂದು ಬೆಂಗಳೂರು ನಗರದ ಅರಮನೆ ಆವರಣದಲ್ಲಿ ಅಭಿನಂದನೆ ಹಾಗೂ ಕಾರ್ಯಾಗಾರ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ನೌಕರರು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

      ಸಮ್ಮೇಳನದಲ್ಲಿ ಭಾಗವಹಿಸಿದ ಬಗ್ಗೆ ಅಧಿಕೃತ ಹಾಜರಾತಿ ಪತ್ರವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಅಥವಾ ಅವರಿಂದ ನಾಮನಿರ್ದೇಶನ ಹೊಂದಿದ ಅಧಿಕಾರಿಗಳಿಂದ ಪಡೆದು ಒದಗಿಸಬೇಕು. ಈ ಷರತ್ತಿಗೊಳಪಟ್ಟು ಬೆಂಗಳೂರು ನಗರ ಜಿಲ್ಲೆಯ ಹಾಗೂ ರಾಜ್ಯದ ಇತರೆ ಜಿಲ್ಲೆಗಳ ಅಧಿಕಾರಿ, ನೌಕರರಿಗೆ ಆ.17ರಂದು ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ಒಂದು ದಿನದ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

      Government Employees Sports

      ಇದನ್ನೂ ಓದಿ | Independence day 2024: ಆಗಸ್ಟ್ 15ರಂದು ಪ್ರಧಾನಿ ಮೋದಿ ಭಾಷಣವನ್ನು ಎಷ್ಟು ಹೊತ್ತಿಗೆ, ಎಲ್ಲಿ ವೀಕ್ಷಿಸಬಹುದು?

      ಆ.17ರಿಂದ 19ರವರೆಗೆ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ

      Government Employees Sports
      Government Employees Sports

      ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಆ. 17ರಿಂದ 19ರವರೆಗೆ ಬೆಂಗಳೂರಿನಲ್ಲಿ 2023-24ನೇ ಸಾಲಿನ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ (Government Employees Sports) ಆಯೋಜಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಕ್ರೀಡಾಕೂಟ ಆಯೋಜನೆಗೆ ಸಿದ್ಧತೆ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೂಚನೆ ನೀಡಿದೆ.

      ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಜೂನ್ 3ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಶಿವಮೊಗ್ಗದಲ್ಲಿ ಕ್ರೀಡಾಕೂಟವನ್ನು ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಇದೀಗ ಕ್ರೀಡಾಕೂಟವನ್ನು ಬೆಂಗಳೂರು ನಗರದಲ್ಲಿ ಆ.17ರಿಂದ 19ರವರೆಗೆ (ಮೂರು ದಿನ) ನಡೆಸಲು ಸಂಘವು ತೀರ್ಮಾನಿಸಿದೆ. ಅದರಂತೆ ಕ್ರೀಡಾಕೂಟವನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ ಆಯೋಜಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ.

      ಕ್ರೀಡಾಕೂಟದಲ್ಲಿ ಭಾಗವಹಿಸಲು ನಿಯಮಾವಳಿ

      1. ಕ್ರೀಡಾಕೂಟದಲ್ಲಿ ರಾಜ್ಯ ಸರ್ಕಾರದ ಎಲ್ಲಾ ಕಾಯಂ ನೌಕರರು ಭಾಗವಹಿಸಲು ಅರ್ಹರಾಗಿರುತ್ತಾರೆ.
      2. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿನ ತರಬೇತುದಾರರು. ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕರು, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಕ್ರೀಡಾಕೋಟಾದಡಿ ನೇಮಕಗೊಂಡ ನೌಕರರು ಭಾಗವಹಿಸಲು ಅರ್ಹರಾಗಿರುವುದಿಲ್ಲ.
      3. ಎಲ್ಲಾ ಕ್ರೀಡಾಪಟುಗಳು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕ್ರೀಡೆಯಲ್ಲಿ ಭಾಗವಹಿಸಲು ನೀಡಿರುವ ಅಧಿಕೃತ ಗುರುತಿನ ಚೀಟಿ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
      4. ಸಂಗೀತ, ನೃತ್ಯ ಮತ್ತು ಕಲಾ ಶಿಕ್ಷಕರು, ಸಂಗೀತ, ನೃತ್ಯ ಮತ್ತು ಕರಕುಶಲ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ.
      5. ದಿನಗೂಲಿ ನೌಕರರು, ಅರೆಕಾಲಿಕ ನೌಕರರು, ಕ್ಷೇಮಾಭಿವೃದ್ಧಿ ನೌಕರರು, ಗುತ್ತಿಗೆ ನೌಕರರು, ನಿಗಮ/ಮಂಡಳಿ ನೌಕಕರು ಮತ್ತು ಇತರೇ ಕಾಯಂ ಅಲ್ಲದ ನೌಕರರು ಭಾಗವಹಿಸಲು ಅರ್ಹರಾಗಿರುವುದಿಲ್ಲ.
      6. ಪೊಲೀಸ್ ಇಲಾಖೆ, ಅರಣ್ಯ ಇಲಾಖೆಗಳಲ್ಲಿ ಸಮವಸ್ತ್ರ ವೃಂದಕ್ಕೆ ಪ್ರತ್ಯೇಕ ಕ್ರೀಡಾಕೂಟಗಳಿರುವುದರಿಂದ ಈ ಎರಡೂ ಇಲಾಖೆಗಳ ಕಛೇರಿ ಹಾಗೂ ಲಿಪಿಕ ನೌಕರರು/ಕಚೇರಿ ಸಿಬ್ಬಂದಿ ಮಾತ್ರ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿದೆ.
      7. ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಅಬಕಾರಿ, ಅರಣ್ಯ, ಅಗ್ನಿಶಾಮಕ ಇಲಾಖೆಗಳ ಕ್ರೀಡಾ ಕೋಟಾದಡಿ ನೇಮಕವಾದ ನೌಕರರು ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
      8. 1 ಟ್ರಾಕ್ ಮತ್ತು 2 ಫೀಲ್ಡ್ ಅಥವಾ 2 ಟ್ರ್ಯಾಕ್ ಮತ್ತು 1 ಫೀಲ್ಡ್ ಸೇರಿ ಒಟ್ಟು ಮೂರು ಆಟಗಳಲ್ಲಿ ಮಾತ್ರ ಭಾಗವಹಿಸತಕ್ಕದ್ದು
      9. 45 ವರ್ಷ ಮೇಲ್ಪಟ್ಟ ಸ್ಪರ್ಧಿಗಳು 45 ವರ್ಷಕ್ಕೊಳಪಟ್ಟವರಿಗೆ ಇರುವ ಸ್ಪರ್ಧೆಗಳಲ್ಲಿ, ಸ್ವಂತ ಜವಾಬ್ದಾರಿ ಮೇಲೆ ಭಾಗವಹಿಸಬಹುದು. 45 ವರ್ಷಕ್ಕೊಳಪಟ್ಟವರು 45 ವರ್ಷ ಮೇಲ್ಪಟ್ಟವರ ಜೊತೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
      10. ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ, ತಕರಾರಿಗೆ ಅವಕಾಶವಿರುವುದಿಲ್ಲ.
      11. ಏಕಕಾಲದಲ್ಲಿ ಸ್ಪರ್ಧೆಗಳನ್ನು ನಡೆಸಲಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧಿಗಳನ್ನು ಕಾಯುವುದಿಲ್ಲ.
      12. ಕರಕುಶಲ ವಸ್ತು ಪ್ರದರ್ಶನದಲ್ಲಿ ಸಿದ್ಧವಿರುವ ವಸ್ತುಗಳ ಪ್ರದರ್ಶನಕ್ಕೆ ಅವಕಾಶವಿರುವುದಿಲ್ಲ. ಸ್ಥಳದಲ್ಲಿ ತಯಾರಾಗಿ (ಮೊದಲನೇ ದಿನ) ಇಡಬೇಕು. 2ನೇ ದಿನ ತೀರ್ಪುಗಾರರಿಂದ ಪರಿಶೀಲಿಸಲಾಗುವುದು.
      13. ಸ್ಪರ್ಧೆ ನಡೆಯದ ಕ್ರೀಡೆಗಳಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಕ್ರೀಡಾ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ನೀಡಲಾಗುವುದಿಲ್ಲ.
      14. ಸಂಘಟಕರೊಡನೆ ಅಥವಾ ತೀರ್ಪುಗಾರರೊಡನೆ ಅಸಭ್ಯವಾಗಿ ವರ್ತಿಸುವ ಕ್ರೀಡಾಪಟುಗಳನ್ನು ಕ್ರೀಡಾ ಸ್ಪರ್ಧೆಯಿಂದ ಹೊರಹಾಕುವುದಲ್ಲದೆ, ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತಂದು ತಪ್ಪಿತಸ್ಯ ಕ್ರೀಡಾಪಟುವಿನ ಮೇಲೆ ಸೇವಾ ನಿಯಮಗಳ ರೀತ್ಯಾ ಶಿಸ್ತಿನ ಕ್ರಮ ಜರುಗಿಸಲು ಶಿಫಾರಸು ಮಾಡಲಾಗುವುದು.
      15. ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸ್ಪರ್ಧೆ ಪ್ರಾರಂಭವಾಗುವ ನಿಗದಿತ ಸಮಯಕ್ಕೆ ಕನಿಷ್ಠ 1 ಗಂಟೆ ಮುಂಚಿತವಾಗಿ ಹಾಜರಿದ್ದು, ಕ್ರೀಡಾ ಸಂಘಟಕನಾಧಿಕಾರಿಗಳಲ್ಲಿ ವರದಿ ಮಾಡಿಕೊಳ್ಳತಕ್ಕದ್ದು.
      16. ಕ್ರೀಡಾ ಸ್ಪರ್ಧೆಗಳಲ್ಲಿ ಸಂಗೀತ, ನೃತ್ಯ ಹಾಗೂ ನಾಟಕಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ತಮ್ಮದೇ ಆದ ಸಲಕರಣೆಗಳನ್ನು ತರತಕ್ಕದ್ದು
      17. ಸಂಗೀತ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ಚಲನಚಿತ್ರ ಗೀತೆಯ ತುಣುಕು ಇತ್ಯಾದಿಗಳಿಗೆ ಅವಕಾಶವಿಲ್ಲ
      18. ಸಂಗೀತ, ನೃತ್ಯ, ಚೆಸ್ ಮತ್ತು ನಾಟಕ ಸ್ಪರ್ಧೆಗಳಲ್ಲಿ ಪ್ರತ್ಯೇಕವಾಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಸ್ಪರ್ಧೆಗಳು ಇರುವುದಿಲ್ಲ.
      19. ಸ್ಪರ್ಧಿಗಳು ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ಆಯಾ ಜಿಲ್ಲೆಯ ಬಾವುಟದೊಂದಿಗೆ ಭಾಗವಹಿಸುವುದು ಕಡ್ಡಾಯವಾಗಿದೆ. ಉದ್ಘಾಟನಾ ಸಮಾರಂಭಕ್ಕೆ ಮೊದಲು ನೋಂದಾವಣೆ ಮಾಡಿಕೊಳ್ಳುವ ಕ್ರೀಡಾಪಟುಗಳಿಗೆ ಮಾತ್ರ ಹಾಜರಾತಿ ನೀಡಲಾಗುವುದು.
      20. ಸರ್ಕಾರಿ ಆದೇಶ ಸಂ:ಎಫ್‌ಡಿಎ/ಎಸ್‌ಆರ್‌ಎಸ್/2002, ಬೆಂಗಳೂರು, ದಿನಾಂಕ:27-11-2002ರಂ ರಾಜ್ಯ ಸರ್ಕಾರದ ವತಿಯಿಂದ ನಡೆಸುವ ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮತ್ತು ಪ್ರಯಾಣ ಭತ್ಯೆ ಸೌಲಭ್ಯಗಳನ್ನು ಷರತ್ತಿಗೊಳಪಟ್ಟು ಮಂಜೂರಾತಿ ನೀಡಿದೆ.
      21. ಒಬ್ಬ ಸರ್ಕಾರಿ ನೌಕರನು ಹಲವು ಕ್ರೀಡೆಗಳಲ್ಲಿ ಭಾಗವಹಿಸಲು ನೋಂದಾಯಿಸಿದ್ದರು ಸಹ ಒಂದು ಜೊತೆ ಕ್ರೀಡಾ ಸಮವಸ್ತ್ರ/ಟ್ರ್ಯಾಕ್ ಸೂಟ್ ನೀಡಲು ಕ್ರಮವಹಿಸುವುದು.
      22. ಯಾವ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು ಭಾಗವಹಿಸಿರುವುದಿಲ್ಲವೋ ಅಂತಹ ಸ್ಪರ್ಧೆಗಳಿಗೆ ಕ್ರೀಡಾಪಟುವಲ್ಲದ ನೌಕರರನ್ನು ಸೇರ್ಪಡೆಗೊಳಿಸುವ ಕ್ರಮವನ್ನು ಕೈಬಿಡುವುದು. ಒಂದು ವೇಳೆ ತಪ್ಪು ಮಾಹಿತಿ ನೀಡಿರುವುದು ಕಂಡುಬಂದಲ್ಲಿ ಅಂತಹ ಸಹಾಯಕ ನಿರ್ದೇಶಕರು ಹಾಗೂ ನೌಕರರ ವಿರುದ್ಧ ಶಿಸ್ತು ಕ್ರಮ ಅನಿವಾರ್ಯವಾಗಲಿದೆ ಎಂಬ ಅಂಶವನ್ನು ಸ್ಪಷ್ಟಪಡಿಸುವುದು.

      ಇದನ್ನೂ ಓದಿ | Part Time Lecturers: ಅರೆಕಾಲಿಕ ಉಪನ್ಯಾಸಕರಿಗೆ ಗುಡ್ ನ್ಯೂಸ್; ಗೌರವಧನದಲ್ಲಿ ಭಾರಿ ಹೆಚ್ಚಳ

      Continue Reading

      ಕರ್ನಾಟಕ

      Muda Scam: ಸಿಎಂ ವಿರುದ್ಧದ ಸ್ನೇಹಮಯಿ ಕೃಷ್ಣ ಅರ್ಜಿ ಆದೇಶ ಆ.20ಕ್ಕೆ ಕಾಯ್ದಿರಿಸಿದ ಕೋರ್ಟ್‌; ಅಬ್ರಹಾಂ ಅರ್ಜಿ ವಿಚಾರಣೆ ಮುಂದೂಡಿಕೆ

      Muda Scam: ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ಟ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾಗಿದ್ದ ಎರಡು ಖಾಸಗಿ ದೂರಿನ ಅರ್ಜಿಗಳ ವಿಚಾರಣೆ ನಡೆಸಿದ್ದಾರೆ. ಸ್ನೇಹಮಯಿ ಕೃಷ್ಣ ದಾಖಲಿಸಿದ್ದ ಅರ್ಜಿಯ ಆದೇಶ ಆ.20ಕ್ಕೆ ಕಾಯ್ದಿರಿಸಿದ್ದು, ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಆ.21ಕ್ಕೆ ಮುಂದೂಡಿದ್ದಾರೆ.

      VISTARANEWS.COM


      on

      Muda Scam
      Koo

      ಬೆಂಗಳೂರು: ಮುಡಾ ಹಗರಣಕ್ಕೆ (Muda Scam) ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ದಾಖಲಿಸಿದ್ದ ಖಾಸಗಿ ದೂರಿನ ಅರ್ಜಿ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆ.20ಕ್ಕೆ ಕಾಯ್ದಿರಿಸಿದೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಖಾಸಗಿ ಅರ್ಜಿ ವಿಚಾರಣೆಯನ್ನು ಆಗಸ್ಟ್ 21ಕ್ಕೆ ಮುಂದೂಡಿದೆ.

      ಮುಡಾದಲ್ಲಿ ಕಾನೂನು ಬಾಹಿರವಾಗಿ ನಿವೇಶನ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸುವಂತೆ ಸಲ್ಲಿಕೆಯಾಗಿದ್ದ ಎರಡು ಖಾಸಗಿ ದೂರಿನ ಅರ್ಜಿಗಳನ್ನು ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿದೆ. ಮೊದಲಿಗೆ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ಟ ಅವರು, ದೂರಿನ ಸಂಬಂಧ ಅಂತಿಮ ಆದೇಶವನ್ನು ಆ.20ಕ್ಕೆ ಕಾಯ್ದಿರಿಸಿದರು. ಅದೇ ರೀತಿ ಮಾಹಿತಿ ಆರ್‌ಟಿಐ ಟಿ.ಜೆ.ಅಬ್ರಹಾಂ ದಾಖಲಿಸಿದ್ದ ಅರ್ಜಿ ವಿಚಾರಣೆಯನ್ನು ಆ.21ಕ್ಕೆ ಮುಂದೂಡಿದರು.

      ಟಿ.ಜೆ.ಅಬ್ರಹಾಂ ವಾದ ಮಂಡನೆ; ನಕಲಿ ದಾಖಲೆ ಸೃಷ್ಟಿಸಿ ಜಾಗ ಮಾರಾಟ ಆರೋಪ

      ಪ್ರಕರಣದಲ್ಲಿ ದೂರುದಾರ ಅಬ್ರಹಾಂ ಅವರೇ ವಾದ ಮಂಡಿಸಿ, ಮೈಸೂರಿನ ಹೊರವಲಯದ ಕೆಸರೆ ಗ್ರಾಮ ಹಾಗೂ ದೇವನೂರು ಗ್ರಾಮಗಳಲ್ಲಿ ನಡೆದಿರುವ ಹಗರಣದ ಬಗ್ಗೆ ಮಾಹಿತಿ ನೀಡಿದರು. ಕೆಸರೆ ಗ್ರಾಮದಲ್ಲಿ ದೇವನೂರು ಬಡವಾಣೆ ನಿರ್ಮಾಣ ಮಾಡಲಾಗಿದೆ. ಆದರೆ, ಅಲ್ಲಿ ಜಮೀನೇ ಇಲ್ಲದಿದ್ದರೂ ದೇವರಾಜ್ ನಕಲಿ‌ ದಾಖಲೆ ಸೃಷ್ಟಿಸಿದ್ದಾನೆ. ನಕಲಿ ದಾಖಲೆಗಳ ಮೂಲಕ‌ ಸೃಷ್ಟಿಸಿದ ಜಾಗವನ್ನು ಮಲ್ಲಿಕಾರ್ಜುನಗೆ ಮಾರಾಟ ಮಾಡಿದ್ದ ಎಂದು ತಿಳಿಸಿದರು.

      ಇದನ್ನೂ ಓದಿ | Lakshmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ಗೆ ಅಹವಾಲು ಸಲ್ಲಿಸಲು ಸಾಲುಸಾಲು ಜನ

      ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ರೆವಿನ್ಯೂ ಲ್ಯಾಂಡ್ ಅನ್ನು ಕನ್ವರ್ಷನ್ ಮಾಡಲಾಗಿದೆ. ಬಳಿಕ 2010ರಲ್ಲಿ ಕಾನೂನು ಬಾಹಿರವಾಗಿ ಗಿಫ್ಟ್ ಡೀಡ್ ಮಾಡಲಾಗಿದೆ. ಅದರ ಫಲಾನುಭವಿ ಸಿದ್ದರಾಮಯ್ಯ ಅವರ ಪತ್ನಿಯಾಗಿದ್ದಾರೆ.
      ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಬೋಗಸ್ ಕನ್ವರ್ಷನ್ ಆಗಿದೆ. ಜಿಲ್ಲಾಧಿಕಾರಿ ಜಾಗವನ್ನು ಪರಿಶೀಲನೆ ಮಾಡಿ ಕನ್ವರ್ಷನ್ ಮಾಡ್ಡಿದ್ದೇವೆ ಎನ್ನುವುದು ಸುಳ್ಳು. 2010ರಲ್ಲಿ ಪಾರ್ವತಿಯವರಿಗೆ ಕಾನೂನು ಬಾಹಿರವಾಗಿ ದಾನ ನೀಡಲಾಗಿದೆ ಎಂದು ಟಿ‌.ಜೆ. ಅಬ್ರಹಾಂ ತಿಳಿಸಿದ್ದಾರೆ.

      2013ರ ಚುನಾವಣೆಯಲ್ಲಿ ಈ ಜಾಗದ ಮಾಹಿತಿಯನ್ನು ಸಿದ್ದರಾಮಯ್ಯ ಮುಚ್ಚಿಟ್ಟಿದ್ದಾರೆ. 2011 ರಿಂದ 2014 ರವರೆಗೆ ಲೋಕಾಯುಕ್ತಕ್ಕೆ ಸಿದ್ದರಾಮಯ್ಯ ನೀಡಿದ್ದ ಮಾಹಿತಿಯಲ್ಲೂ‌ ಮುಚ್ಚಿಡಲಾಗಿದೆ. ಇವರು ಹೇಗೆ ದೇವನೂರು ಬಡಾವಣೆಯನ್ನು ಕೆಸರೆ ಗ್ರಾಮ ಮಾಡುತ್ತಾರೆ. ಹೇಗೆ ಬಡಾವಣೆಯನ್ನು ಕೃಷಿ ಭೂಮಿಯಲ್ಲಿ ಮಾಡುತ್ತಾರೆ? ಆದರೂ ಬಹಳ ಅಭಿವೃದ್ಧಿ ಹೊಂದಿದ ಅರ್ಜಿಯನ್ನು 55 ಕೋಟಿ 80 ಲಕ್ಷ ಬೆಲೆಯ ಸೈಟ್‌ಗಳ ನೀಡಿದ್ದಾರೆ. ಅದು ಕೂಡ ತುಂಬಾ ಡೆವಲಪ್ಮೆಂಟ್ ಆಗಿರುವ ಲೇಔಟ್ ನಲ್ಲಿ ನೀಡ್ತಾರೆ.

      ಸಿದ್ದರಾಮಯ್ಯ ಪತ್ನಿಯ ಸ್ವಾಧೀನದಲ್ಲೇ ಇಲ್ಲದ ಜಾಗವನ್ನು ಹೇಗೆ ರಿಲೀಸ್ ಡೀಡ್ ನೀಡಲು ಹೇಗೆ ಸಾಧ್ಯ.? ಪಾರ್ವತಿ ಅವರು ಕ್ಲೈಂ ಮಾಡುವ ರೀತಿ ಕೃಷಿ ಭೂಮಿ ಇರಲೇ ಇಲ್ಲ. ಕೇವಲ ದಾಖಲೆಗಳನ್ನು ಮಾತ್ರ ಸೃಷ್ಟಿ ಮಾಡಿ ಪರಿಹಾರ ಪಡೆದಿದ್ದಾರೆ. ಈ ಸಂಬಂಧ ಮೈಸೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿದೆ. ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಖಾಸಗಿ ದೂರು ಸಲ್ಲಿಸಲಾಗಿದೆ. ಭ್ರಷ್ಟಾಚಾರ ಕಾಯಿದೆ 17A ಸಿದ್ದರಾಮಯ್ಯ ಅವರಿಗೆ ಅನ್ವಯ ಆಗಲ್ಲ. ಪಿ.ಸಿ.ಆ್ಯಕ್ಟ್ 19ರ ಅಡಿ ಕಾಗ್ನಿಜೆನ್ಸ್ ತೆಗೆದುಕೊಳ್ಳಲು ಕೋರ್ಟ್‌ಗೆ ಟಿ.ಜೆ.ಅಬ್ರಹಾಂ ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್‌, ವಿಚಾರಣೆಯನ್ನು ಆಗಸ್ಟ್ 21ಕ್ಕೆ ಮುಂದೂಡಿತು.

      ಏನಿದು ಕೋರ್ಟ್​ ಪ್ರಕರಣ?

      ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳನ್ನು ತಮ್ಮ ಪತ್ನಿಯ ಹೆಸರಿಗೆ ಪಡೆದುಕೊಂಡಿರುವ ಆರೋಪ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವುದಕ್ಕೆ ಸೂಚನೆ ನೀಡಬೇಕು ಎಂದು ಕೋರಿ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮೈಸೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರು ಖಾಸಗಿ ದೂರು ಸಲ್ಲಿಸಿದ್ದರು. ಅದರ ವಿಚಾರಣೆ ನಡೆಯುತ್ತಿರುವ ನಡುವೆಯೇ ಬೆಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಟಿ.ಜೆ. ಅಬ್ರಾಹಂ ಮತ್ತೊಂದು ದೂರು ಸಲ್ಲಿಸಿದ್ದರು.

      ಮೂಲ ಜಮೀನಿಗೆ ಮಾಲೀಕರೇ ಇಲ್ಲ. ಆ ಜಮೀನು ಸಿದ್ದರಾಮಯ್ಯ ಸಂಬಂಧಿಕರ ಹೆಸರಿಗೆ ಬಂದಿದೆ. ಅಲ್ಲಿಂದ ಸಿದ್ದರಾಮಯ್ಯ ಪತ್ನಿ ಹೆಸರಿಗೆ ಉಡುಗೊರೆಯಾಗಿ ಬಂದಿದ್ದು, ಅಂತಹ ಜಮೀನಿಗೆ ಬದಲಿ ನಿವೇಶನ ಪಡೆದುಕೊಳ್ಳಲಾಗಿದೆ. ಇಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

      ಇದನ್ನೂ ಓದಿ | Muda Case : ಪಿಸಿಆರ್​ ಏನೆಂದು ಗೊತ್ತಿಲ್ಲದವರು ಸಿದ್ದರಾಮಯ್ಯ ಪರ ಅರ್ಜಿ ಸಲ್ಲಿಸಿದ್ದೀರಾ? ಸಿಎಂ ಪರ ಅರ್ಜಿ ಸಲ್ಲಿಸಿದವರಿಗೆ ಕೋರ್ಟ್ ತರಾಟೆ

      ಮುಡಾದಲ್ಲಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅಕ್ರಮವಾಗಿ 14 ನಿವೇಶನಗಳನ್ನು ಪಡೆದಿದ್ದಾರೆ ಎಂಬ ಆರೋಪ ಸಂಬಂಧ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

      Continue Reading

      ಪ್ರಮುಖ ಸುದ್ದಿ

      Muda Case : ಪಿಸಿಆರ್​ ಏನೆಂದು ಗೊತ್ತಿಲ್ಲದವರು ಸಿದ್ದರಾಮಯ್ಯ ಪರ ಅರ್ಜಿ ಸಲ್ಲಿಸಿದ್ದೀರಾ? ಸಿಎಂ ಪರ ಅರ್ಜಿ ಸಲ್ಲಿಸಿದವರಿಗೆ ಕೋರ್ಟ್ ತರಾಟೆ

      MUDA SCAM : ಅರ್ಜಿಯನ್ನು ಕೈಗೆತ್ತಿಕೊಂಡ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಯಾವ ಕಾನೂನಿನ ಅಡಿಯಲ್ಲಿ ನೀವು ಈ ಅರ್ಜಿ ಸಲ್ಲಿಸಿದ್ದೀರಾ ಎಂದು ಅರ್ಜಿದಾರ ಆಲಂ ಪಾಷಾ ಅವರಿಗೆ ಪ್ರಶ್ನಿಸಿದರು. ಈ ವೇಳೆ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಡಿ ಎಂದು ಉತ್ತರಿಸಿದರು. ಈ ವೇಳೆ ನ್ಯಾಯಾಧೀಶರು, ನೀವು ದೂರು ದಾಖಲಿಸಿಕೊಳ್ಳುವುದಕ್ಕೆ ಅನುಮತಿ ಕೇಳುತ್ತಿಲ್ಲ.

      VISTARANEWS.COM


      on

      MUDA SCAM
      Koo

      ಬೆಂಗಳೂರು: ಮುಡಾ ಪ್ರಕರಣಕ್ಕೆ (Muda Case) ಸಂಬಂಧಿಸಿದಂತೆ ಸಿಎಂ ವಿರುದ್ಧದ ಖಾಸಗಿ ಆರ್ಜಿ ಸ್ವೀಕರಿಸಬಾರದು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಂಡಿದೆ. ಪ್ರಾಸಿಕ್ಯೂಷನ್ ಅನುಮತಿ ಇಲ್ಲದೆ ಈ ಪ್ರಕರಣವನ್ನು ಸ್ವೀಕರಿಸಬಾರದು ಎಂದು ಆಲಂ ಪಾಷಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರಾದ ಸಂತೋಷ್​ ಗಜಾನನ ಭಟ್ ಅವರು ವಜಾ ಮಾಡಲು ಅರ್ಹ ಎಂದು ಅಭಿಪ್ರಾಯಪಟ್ಟರು.

      ಅರ್ಜಿಯನ್ನು ಕೈಗೆತ್ತಿಕೊಂಡ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಯಾವ ಕಾನೂನಿನ ಅಡಿಯಲ್ಲಿ ನೀವು ಈ ಅರ್ಜಿ ಸಲ್ಲಿಸಿದ್ದೀರಾ ಎಂದು ಅರ್ಜಿದಾರ ಆಲಂ ಪಾಷಾ ಅವರಿಗೆ ಪ್ರಶ್ನಿಸಿದರು. ಈ ವೇಳೆ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಡಿ ಎಂದು ಉತ್ತರಿಸಿದರು. ಈ ವೇಳೆ ನ್ಯಾಯಾಧೀಶರು, ನೀವು ದೂರು ದಾಖಲಿಸಿಕೊಳ್ಳುವುದಕ್ಕೆ ಅನುಮತಿ ಕೇಳುತ್ತಿಲ್ಲ. ಬದಲಾಗಿ ಕಾನೂನು ಪ್ರಕ್ರಿಯೆಗಳನ್ನು ತಡೆಯುವಂತೆ ಕೋರುತ್ತಿದ್ದೀರಿ. ಹೀಗಾಗಿ ಈ ಅರ್ಜಿ ವಜಾ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

      ಈ ಪ್ರಕರಣದಲ್ಲಿ ಖಾಸಗಿ ದೂರು ಸಲ್ಲಿಸಿದ್ದ ಮೈಸೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ವಕೀಲರಾದ ಲಕ್ಷ್ಮೀ ಅಯ್ಯಂಗಾರ್​ ಅವರು, ಆಲಂ ಪಾಷಾ ಅವರ ಅರ್ಜಿಗೆ ತಕರಾರರು ಎತ್ತಿದರು. ಈ ಸಂದರ್ಭದಲ್ಲಿ ಸಂಬಂಧವೇ ಇಲ್ಲದ ವ್ಯಕ್ತಿಯ ವಾದ ಆಲಿಸಬಾರದು ಎಂದು ಕೋರಿದರು. ಅವರು ಕೋರ್ಟ್​ ಸಮಯವನ್ನು ಹಾಳುಗೆಡವುತ್ತಿರುವ ಕಾರಣ ಅವರಿಗೆ ದಂಡ ವಿಧಿಸಬೇಕು ಎಂದು ಮನವಿ ಮಾಡಿದರು.

      ಇದನ್ನೂ ಓದಿ: Bengaluru Police: ಸಿಟಿ ಸಿವಿಲ್‌ ಕೋರ್ಟ್‌ನಿಂದ ಕೊಲೆ ಆರೋಪಿ ಎಸ್ಕೇಪ್‌! ಸಿನಿಮಾ ಸ್ಟೈಲ್‌ನಲ್ಲಿ ಚೇಸ್‌ ಮಾಡಿದ ಖಾಕಿ

      ಈ ವೇಳೆ ನ್ಯಾಯಾಧೀಶರು ಪಿಸಿಆರ್​ (PROTECTION OF CIVIL RIGHTS ) ಅಂದೇ ಏನು ಎಂದು ಅರ್ಜಿದಾರ ಆಲಂ ಪಾಷಾ ಅವರಿಗೆ ಕೇಳಿದರು. ಅವರು ಅದಕ್ಕೆ ಪಬ್ಲಿಕ್ ಕಂಟ್ರೊಲ್ ರೂಮ್ ಎಂದು ಉತ್ತರಿಸಿದರು. ಅವರ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ಪಿಸಿಆರ್​ ಅಂದರೆ ಏನು ಅಂಥ ಗೊತ್ತಿಲ್ಲದೇ ದೂರು ಸಲ್ಲಿಸಿದ್ದೀರಾ ಎಂದು ಪ್ರಶ್ನಿಸಿದರು. ಅಲ್ಲದೆ, ನ್ಯಾಯಾಲಯಕ್ಕೆ ಬಂದು ತಮಾಷೆ ಮಾಡುತ್ತೀರಾ? ಈ ಪ್ರಕರಣದಲ್ಲಿ ನೀವು ಸಂತ್ರಸ್ತರಾ ಅಥವಾ ದೂರುದಾರರಾ ಎಂದು ತರಾಟೆಗೆ ತೆಗೆದುಕೊಂಡರು.

      ಏನಿದು ಕೋರ್ಟ್​ ಪ್ರಕರಣ?

      ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳನ್ನು ತಮ್ಮ ಪತ್ನಿಯ ಹೆಸರಿಗೆ ಪಡೆದುಕೊಂಡಿರುವ ಆರೋಪ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವುದಕ್ಕೆ ಸೂಚನೆ ನೀಡಬೇಕು ಎಂದು ಕೋರಿ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮೈಸೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರು ಖಾಸಗಿ ದೂರು ಸಲ್ಲಿಸಿದ್ದರು. ಅದರ ವಿಚಾರಣೆ ನಡೆಯುತ್ತಿರುವ ನಡುವೆಯೇ ಬೆಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಟಿ.ಜೆ. ಅಬ್ರಾಹಂ ಮತ್ತೊಂದು ದೂರು ಸಲ್ಲಿಸಿದ್ದರು.

      ಮೂಲ ಜಮೀನಿಗೆ ಮಾಲೀಕರೇ ಇಲ್ಲ. ಆ ಜಮೀನು ಸಿದ್ದರಾಮಯ್ಯ ಸಂಬಂಧಿಕರ ಹೆಸರಿಗೆ ಬಂದಿದೆ. ಅಲ್ಲಿಂದ ಸಿದ್ದರಾಮಯ್ಯ ಪತ್ನಿ ಹೆಸರಿಗೆ ಉಡುಗೊರೆಯಾಗಿ ಬಂದಿದ್ದು, ಅಂತಹ ಜಮೀನಿಗೆ ಬದಲಿ ನಿವೇಶನ ಪಡೆದುಕೊಳ್ಳಲಾಗಿದೆ. ಇಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

      ಮುಡಾದಲ್ಲಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅಕ್ರಮವಾಗಿ 14 ನಿವೇಶನಗಳನ್ನು ಪಡೆದಿದ್ದಾರೆ ಎಂಬ ಆರೋಪ ಸಂಬಂಧ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

      Continue Reading
      Advertisement
      Ashwini Ponnappa
      ಪ್ರಮುಖ ಸುದ್ದಿ4 hours ago

      Ashwini Ponnappa : ಷಟ್ಲರ್​ಗಳನ್ನೇ ಗುರಿಯಾಗಿಸಿದ ಕ್ರೀಡಾ ಇಲಾಖೆ ವಿರುದ್ಧವೇ ತಿರುಗಿ ಬಿದ್ದ ಅಶ್ವಿನಿ ಪೊನ್ನಪ್ಪ

      Sowmya Reddy
      ರಾಜಕೀಯ4 hours ago

      Sowmya Reddy: ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ನೇಮಕ

      Cricket News
      ಪ್ರಮುಖ ಸುದ್ದಿ4 hours ago

      Cricket News : ಬಾಂಗ್ಲಾದೇಶ ವಿರುದ್ಧದ ಸರಣಿಯ ವೇಳಾಪಟ್ಟಿ ಬದಲಾಯಿಸಿದ ಬಿಸಿಸಿಐ

      Koppala News
      ಕೊಪ್ಪಳ4 hours ago

      Koppala News: ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್ ನಿರ್ಮಾಣದಲ್ಲೂ ಕಮಿಷನ್ ರಾಜಕೀಯ; ಕಾಂಗ್ರೆಸ್ ಮುಖಂಡನಿಂದಲೇ ಆರೋಪ

      Koppala News
      ಕರ್ನಾಟಕ5 hours ago

      Koppala News: ಮಕ್ಕಳ ತಟ್ಟೆಯಲ್ಲಿನ ಮೊಟ್ಟೆ ಕಸಿದುಕೊಂಡ ಅಂಗನವಾಡಿಗೆ ನ್ಯಾಯಾಧೀಶರ ದಿಢೀರ್ ಭೇಟಿ!

      Kannada New Movie
      ಬೆಂಗಳೂರು5 hours ago

      Kannada New Movie: ತೆರೆಗೆ ಬರಲು ಸಿದ್ಧವಾಗಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ʼಸ್ವಪ್ನ ಮಂಟಪʼ ಚಿತ್ರ

      Independence Day 2024
      ದೇಶ5 hours ago

      Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

      Vinesh Phogat
      ಪ್ರಮುಖ ಸುದ್ದಿ5 hours ago

      Vinesh Phogat : ವಿನೇಶ್​ ಪೋಗಟ್​ ಅನರ್ಹತೆ ತೀರ್ಪು ಆಗಸ್ಟ್​​​ 16ಕ್ಕೆ ಮುಂದೂಡಿಕೆ

      Cauvery Water Dispute
      ಕರ್ನಾಟಕ5 hours ago

      Cauvery Water Dispute: ಕಾವೇರಿ ನೀರು ನಿಗದಿಗಿಂತ ಹೆಚ್ಚು ಹರಿಸಿದರೂ ತಮಿಳುನಾಡು ಆಕ್ಷೇಪ!

      Sheikh Hasina
      ಪ್ರಮುಖ ಸುದ್ದಿ6 hours ago

      Sheikh Hasina : ಬಾಂಗ್ಲಾದಿಂದ ಪಲಾಯನ ಮಾಡಿದ ಬಳಿಕ ಮೊದಲ ಬಾರಿ ಹೇಳಿಕೆ ನೀಡಿದ ಶೇಖ್​ ಹಸೀನಾ

      Sharmitha Gowda in bikini
      ಕಿರುತೆರೆ10 months ago

      Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

      Kannada Serials
      ಕಿರುತೆರೆ10 months ago

      Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

      Bigg Boss- Saregamapa 20 average TRP
      ಕಿರುತೆರೆ10 months ago

      Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

      Kannada Serials
      ಕಿರುತೆರೆ11 months ago

      Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

      galipata neetu
      ಕಿರುತೆರೆ9 months ago

      Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

      Kannada Serials
      ಕಿರುತೆರೆ10 months ago

      Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

      Bigg Boss' dominates TRP; Sita Rama fell to the sixth position
      ಕಿರುತೆರೆ10 months ago

      Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

      geetha serial Dhanush gowda engagement
      ಕಿರುತೆರೆ8 months ago

      Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

      Kannada Serials
      ಕಿರುತೆರೆ11 months ago

      Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

      varun
      ಕಿರುತೆರೆ9 months ago

      Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

      karnataka Weather Forecast
      ಮಳೆ5 days ago

      Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

      Bellary news
      ಬಳ್ಳಾರಿ5 days ago

      Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

      Maravoor bridge in danger Vehicular traffic suspended
      ದಕ್ಷಿಣ ಕನ್ನಡ6 days ago

      Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

      Wild Animals Attack
      ಚಿಕ್ಕಮಗಳೂರು1 week ago

      Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

      Karnataka Weather Forecast
      ಮಳೆ1 week ago

      Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

      assault case
      ಬೆಳಗಾವಿ1 week ago

      Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

      karnataka rain
      ಮಳೆ2 weeks ago

      Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

      karnataka Rain
      ಮಳೆ2 weeks ago

      Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

      Karnataka Rain
      ಮಳೆ2 weeks ago

      Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

      karnataka Rain
      ಮಳೆ2 weeks ago

      Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

      ಟ್ರೆಂಡಿಂಗ್‌