Use of ORS: ಡಿಹೈಡ್ರೇಶನ್‌ ಆದಾಗ ಬಳಸುವ ಒಆರ್‌ಎಸ್‌ ಮನೆಯಲ್ಲೇ ಸಿದ್ಧಪಡಿಸಿಕೊಳ್ಳಬಹುದಾ? - Vistara News

ಆರೋಗ್ಯ

Use of ORS: ಡಿಹೈಡ್ರೇಶನ್‌ ಆದಾಗ ಬಳಸುವ ಒಆರ್‌ಎಸ್‌ ಮನೆಯಲ್ಲೇ ಸಿದ್ಧಪಡಿಸಿಕೊಳ್ಳಬಹುದಾ?

ವಾಂತಿ, ಭೇದಿಯಾದಾಗ (Use of ORS) ನಿರ್ಜಲೀಕರಣ ಸ್ಥಿತಿಯುಂಟಾಗಿ ದೇಹ ವಿಪರೀತ ಬಳಲುತ್ತದೆ. ಆಯಾಸವಾಗುತ್ತದೆ. ವಾಂತಿ, ಭೇದಿಯಾಗಿ ಕೆಲಸಗಳನ್ನು ಮಾಡಲು ಸಾಧ್ಯವಾಗದೆ, ನಿತ್ರಾಣವಾಗಿ ಮಲಗಿಬಿಡುತ್ತೇವೆ. ದೇಹದಲ್ಲಿ ಮತ್ತೆ ಚೈತನ್ಯ ತರಲು, ನೀರಿನಂಶವನ್ನು, ಎಲೆಕ್ಟ್ರೋಲೈಟ್‌ ಅನ್ನು ಮರಳಿಸಲು ನಾವು ಬಹುತೇಕರು ಒಆರ್‌ಎಸ್‌ ಸೇವಿಸುತ್ತೇವೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬ ವಿವರ ಇಲ್ಲಿದೆ.

VISTARANEWS.COM


on

Use of ORS be prepared at home for dehydration
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಮ್ಮ ದೇಹಕ್ಕೆ (Use of ORS) ಸದಾ ಸೋಡಿಯಂ, ಪೊಟಾಶಿಯಂ, ಕ್ಯಾಲ್ಶಿಯಂ ಸೇರಿದಂತೆ ಹಲವು ಬಗೆಯ ಎಲೆಕ್ಟರೋಲೈಟ್‌ಗಳು ನಿತ್ಯದ ಆರೋಗ್ಯಕ್ಕೆ ಬೇಕೇಬೇಕು. ಅವು ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಸದಾ ಸಮತೋಲನದಲ್ಲಿಟ್ಟಿರುವ ಕೆಲಸವನ್ನು ಮಾಡುತ್ತವೆ. ಜೊತೆಗೆ ಹಲವು ಕೆಲಸಗಳನ್ನೂ ನಿರ್ವಹಿಸುತ್ತವೆ. ಆದರೂ ಕೆಲವೊಮ್ಮೆ ಈ ಸಮತೋಲನದಲ್ಲಿ ವ್ಯತ್ಯಾಸವಾಗುತ್ತದೆ. ದೇಹ ನೀರಿನಂಶವನ್ನು ಕಳೆದುಕೊಳ್ಳುತ್ತದೆ. ನಿರ್ಜಲೀಕರಣದ ಸ್ಥಿತಿಯುಂಟಾಗಿ ದೇಹ ವಿಪರೀತ ಬಳಲುತ್ತದೆ. ಆಯಾಸವಾಗುತ್ತದೆ. ವಾಂತಿ, ಬೇದಿಯಾಗಿ ಕೆಲಸಗಳನ್ನು ಮಾಡಲು ಸಾಧ್ಯವಾಗದೆ, ನಿತ್ರಾಣವಾಗಿ ಮಲಗಿಬಿಡುತ್ತೇವೆ. ದೇಹದಲ್ಲಿ ಮತ್ತೆ ಚೈತನ್ಯ ತರಲು, ನೀರಿನಂಶವನ್ನು, ಎಲೆಕ್ಟ್ರೋಲೈಟ್‌ ಅನ್ನು ಮರಳಿಸಲು ನಾವು ಬಹುತೇಕರು ಒಆರ್‌ಎಸ್‌ ಸೇವಿಸುತ್ತೇವೆ.

ಓರಲ್‌ ರಿಹೈಡ್ರೇಶನ್‌ ಸಾಲ್ಟ್ಸ್‌ (ಒಆರ್‌ಎಸ್‌) ಹಲವು ಖನಿಜಾಂಶಗಳನ್ನು ಸೇರಿಸಿ ಮಾಡಿದ ಒಂದು ಫಾರ್ಮುಲಾ. ಮೆಡಿಕಲ್‌ ಶಾಪ್‌ಗಳಲ್ಲಿ ಸಿಗುವ ಇದನ್ನು ನಾವು ನೀರಿನ ಜೊತೆ ಸೇರಿಸಿ ಕುಡಿದರೆ, ಡಿಹೈಡ್ರೇಶನ್‌ ಸಮಯದಲ್ಲಿ ಸಮಾಧಾನ ಸಿಗುತ್ತದೆ. ದೇಹಕ್ಕೆ ಮತ್ತೆ ಖನಿಜಾಂಶಗಳು ದೊರೆತು, ಸಮತೋಲನ ಸಾಧ್ಯವಾಗಿ ದೇಹದಲ್ಲಿ ಮತ್ತೆ ಶಕ್ತಿ ಚಿಗಿತುಕೊಳ್ಳುತ್ತದೆ. ಹಾಗಾಗಿಯೇ ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಅತ್ಯಂತ ಅವಶ್ಯಕ ಔಷಧಿಗಳ ಪಟ್ಟಿಯಲ್ಲಿ ಸೇರಿಸಿದೆ.
ಆದರೆ ಈ ಒಆರ್‌ಎಸ್‌ ಬಗೆಗೆ ಇಂದಿಗೂ ಸಾಕಷ್ಟು ತಪ್ಪು ತಿಳುವಳಿಕೆಗಳಿವೆ. ಬನ್ನಿ, ತಪ್ಪು ತಿಳಿವಳಿಕೆಗಳನ್ನು ಅರಿತುಕೊಂಡು ಸತ್ಯವನ್ನು ತಿಳಿಯೋಣ.

ಇದನ್ನೂ ಓದಿ: Healthcare Workers : ಆರೋಗ್ಯ ಸೇವಕರ ಮೇಲೆ ದಾಳಿಯಾದರೆ 6 ಗಂಟೆಯೊಳಗೆ ಎಫ್​ಐಆರ್​ ದಾಖಲಿಸಿ; ಸರ್ಕಾರಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರದ ನಿರ್ದೇಶನ

ಯಾವ ಬ್ರಾಂಡ್‌ ಸೂಕ್ತ?

ಯಾವ ಬ್ರ್ಯಾಂಡ್‌ನ ಒಆರ್‌ಎಸ್‌ ಕುಡಿದರೂ ಸಮಸ್ಯೆ ಪರಿಹಾರವಾಗುತ್ತದೆ ಎಂಬ ತಪ್ಪು ತಿಳಿವಳಿಕೆ ಹಲವರಲ್ಲಿದೆ. ಆದರೆ ಸತ್ಯ ಬೇರೆಯೇ ಇದೆ. ಎಲ್ಲ ಬಗೆಯ ಓಆರ್‌ಎಸ್‌ನಿಂದಲೂ ಡಿಹೈಡ್ರೇಶನ್‌ ಸಮಸ್ಯೆ ಪರಿಹಾರವಾಗದು. ಕೆಲವು ಬ್ರ್ಯಾಂಡ್‌ಗಳಲ್ಲಿರುವ ಸೊಲ್ಯೂಷನ್‌ಗಳಲ್ಲಿ ಎಲ್ಲ ಬಗೆಯ ಖನಿಜಾಂಶಗಳೂ ಇಲ್ಲ. ಹಾಗಾಗಿ, ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಒಆರ್‌ಎಸ್‌ ಸೇವನೆ ಒಳ್ಳೆಯದು. ಇದರಲ್ಲಿ, ಗ್ಲುಕೋಸ್‌, ಕಾರ್ಬೋಹೈಡ್ರೇಟ್‌, ಸೋಡಿಯಂ, ಪೊಟಾಶಿಯಂ, ಕ್ಲೋರೈಡ್‌ಗಳನ್ನು ಒಂದು ಪರಿಮಾಣದಲ್ಲಿ ಮಿಶ್ರಗೊಳಿಸಲಾಗಿದೆ.

ಮನೆಯಲ್ಲೇ ಮಾಡಬಹುದಾ?

ಎಲೆಕ್ಟ್ರೋಲೈಟ್‌ ಅನ್ನು ಮನೆಯಲ್ಲೇ ನಾವು ಮಾಡಿಕೊಳ್ಳಬಹುದಾದ್ದರಿಂದ ಮೆಡಿಕಲ್‌ ಶಾಪ್‌ನಲ್ಲಿ ಖರೀದಿಸುವ ಅಗತ್ಯವಿಲ್ಲ ಎಂಬ ನಂಬಿಕೆಯಿದೆ. ಆದರೆ ಇದು ತಪ್ಪು ತಿಳುವಳಿಕೆ. ಸಕ್ಕರೆ ಹಾಗೂ ಉಪ್ಪನ್ನು ಸೇರಿಸಿ ಎಲೆಕ್ಟ್ರೋಲೈಟ್‌ ಮಾಡುವುದು ಬಹಳ ಪ್ರಸಿದ್ಧವಾದ ಮನೆಮದ್ದು. ಆದರೆ, ಇದು ಮೆಟಿಕಲ್‌ ಶಾಪ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಒಆರ್‌ಎಸ್‌ನಷ್ಟು ಪರಿಣಾಮಕಾರಿಯಾಗಿ ವರ್ತಿಸದು. ಒಆರ್‌ಎಸ್‌ನಲ್ಲಿ ವೈಜ್ಞಾನಿಕವಾಗಿ ದೇಹಕ್ಕೆ ಅಗತ್ಯವಾಗುವ ಖನಿಜ ಲವಣಗಳನ್ನು ಬೆರೆಸಿ, ನಿರ್ಜಲೀಕರಣ ಸ್ಥಿತಿಗೆ ಅಗತ್ಯವಿರುವಂತೆ ಮಾಡಲಾದ್ದರಿಂದ ಮನೆಯಲ್ಲೇ ತಯಾರು ಮಾಡಿದ ಉಪ್ಪು-ಸಕ್ಕರೆಯ ಎಲೆಕ್ಟ್ರೋಲೈಟ್‌ಗಿಂತ ಖಂಡಿತವಾಗಿಯೂ ಹೆಚ್ಚು ಪರಿಣಾಮಕಾರಿ.

ಒಆರ್‌ಎಸ್‌ ಮಕ್ಕಳಿಗೆ, ಎನರ್ಜಿ/ಸ್ಪೋರ್ಟ್ಸ್‌ ಡ್ರಿಂಕ್‌ಗಳು ದೊಡ್ಡವರಿಗೆ ಎಂಬ ತಪ್ಪು ಅಭಿಪ್ರಾಯವೂ ಬಹಳ ಮಂದಿಯಲ್ಲಿದೆ. ಆದರೆ ಇದು ಸಂಪೂರ್ಣ ತಪ್ಪು ಅಭಿಪ್ರಾಯ. ಎನರ್ಜಿ ಪೇಯಗಳಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಸಕ್ಕರೆಯಿದ್ದು, ಇದು ಅನಾರೋಗ್ಯಕರ. ಇದು ಯಾವುದೇ ಬಗೆಯಲ್ಲಿ ನಿರ್ಜಲೀಕರಣ ಅಂದರೆ ಡಿಹೈಡ್ರೇಶನ್‌ಗೆ ಪರಿಣಾಮಕಾರಿಯಾಗಿ ವರ್ತಿಸದು. ಬೇದಿಗೂ ಇದು ಸೂಕ್ತವಲ್ಲ. ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಒಆರ್‌ಎಸ್‌ಗಿಂದ ಸೂಕ್ತವಾದ ಪೇಯ ಬೇರೆ ಯಾವುದೂ ಇಲ್ಲ. ಮಕ್ಕಳಿಂದ ಹಿಡಿದು ಮುದುಕರವರೆಗೆ ನಿರ್ಜಲೀಕರಣ ಸಮಸ್ಯೆ ಬಂದಾಗ ಒಆರ್‌ಎಸ್‌ ಕುಡಿಯುವುದು ಅತ್ಯಂತ ಒಳ್ಳೆಯದು.

ಪ್ರವಾಸದ ಸಂದರ್ಭವೂ ಸೇರಿದಂತೆ, ಎಲ್ಲ ಸಮಯದಲ್ಲೂ ಇದನ್ನು ನಿಮ್ಮ ಜೊತೆ ತುರ್ತು ಚಿಕಿತ್ಸೆಯ ಔಷಧಿಯ ಡಬ್ಬದಲ್ಲಿ ನೀವು ಸದಾ ಇಟ್ಟುಕೊಳ್ಳುವುದು ಅತ್ಯಂತ ಒಳ್ಳೆಯದು. ಪ್ರವಾಸದ ಸಂದರ್ಭ ಇದು ಅತ್ಯಂತ ಅಗತ್ಯವಾಗಿ ಬೇಕಾಗುವ ಔಷಧಿಗಳಲ್ಲಿ ಒಂದು ಎಂಬುದನ್ನು ಸದಾ ನೆನಪಿಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು ಗ್ರಾಮಾಂತರ

Zika Virus : ಆನೇಕಲ್‌ನಲ್ಲಿ ಆರು ಮಂದಿಗೆ ಝಿಕಾ ವೈರಸ್ ಪತ್ತೆ; 3 ಕಿ.ಮೀ ರೇಡಿಯಸ್ ಕಂಟೋನ್ಮೆಂಟ್ ಜೋನ್‌

Zika Virus : ಡೆಂಗ್ಯೂ (Dengue Virus) ಬಳಿಕ ಇದೀಗ ರಾಜ್ಯದಲ್ಲಿ ಝಿಕಾ ವೈರಸ್‌ ಭೀತಿ ಶುರುವಾಗಿದೆ. ಆನೇಕಲ್‌ನಲ್ಲಿ ಡೆಂಗ್ಯೂ ರ‍್ಯಾಂಡಮ್‌ ಟೆಸ್ಟ್‌ ವೇಳೆ ಆರು ಮಂದಿಗೆ ಝಿಕಾ ಸೋಂಕು ಕಾಣಿಸಿಕೊಂಡಿದೆ.

VISTARANEWS.COM


on

By

zika Virus
ಸಾಂದರ್ಭಿಕ ಚಿತ್ರ
Koo

ಆನೇಕಲ್‌: ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಆರು ಮಂದಿ ರೋಗಿಗಳಲ್ಲಿ ಝಿಕಾ ವೈರಸ್ (Zika Virus) ಪತ್ತೆಯಾಗಿದೆ. ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಆರು‌ ಮಂದಿಗೆ ಚಳಿ, ಜ್ವರ ಮತ್ತು ಮೈಕೈ ನೋವಿನಿಂದ ಡೆಂಗ್ಯೂ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಡೆಂಗ್ಯೂ ರ‍್ಯಾಂಡಮ್‌ ಟೆಸ್ಟ್ ವೇಳೆ ಝಿಕಾ ವೈರಸ್ ಪತ್ತೆಯಾಗಿದೆ. ಸದ್ಯ ಮನೆಯಲ್ಲಿ ಎಲ್ಲರೂ ವಿಶ್ರಾಂತಿ ಪಡೆಯುತ್ತಿದ್ದಾರೆ. ಝಿಕಾ ವೈರಸ್ ಪತ್ತೆ ಹಿನ್ನೆಲೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ.

ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ 3 ಕಿ.ಮೀ ರೇಡಿಯಸ್ ಕಂಟೋನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಸೊಳ್ಳೆಗಳ ಸಂತಾನೋತ್ಪತ್ತಿ ಆಗದಂತೆ ಕ್ರಮವಹಿಸಲಾಗಿದ್ದು, ಫಾಗಿಂಗ್, ಲಾರ್ವ ನಾಶ ಸೇರಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ ರವಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:Karnataka Weather : ಭಾರಿ ಮಳೆ ಎಫೆಕ್ಟ್‌; ಹಳ್ಳ ದಾಟಲು ಹೋಗಿ ಕೊಚ್ಚಿ ಹೋದ 20ಕ್ಕೂ ಹೆಚ್ಚು ಕುರಿಗಳು

ರೋಗದ ಲಕ್ಷಣಗಳೇನು?

ಕಣ್ಣು ಕೆಂಪಾಗುವಿಕೆ, ತಲೆ ನೋವು, ವಿಪರೀತ ಜ್ವರ, ಕೀಲುಗಳಲ್ಲಿ ನೋವು, ಗಂಧೆಗಳು, ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳಲಿದೆ.

ಝಿಕಾ ವೈರಸ್ ತಡೆಗಟ್ಟಲು ಏನು ಮಾಡಬೇಕು?

1) ನೀರು ಶೇಖರಣಾ ಪರಿಕರಗಳನ್ನು (ಟ್ಯಾಂಕ್‌, ಟಬ್‌ ಇತ್ಯಾದಿ) ಮುಚ್ಚಿಡಬೇಕು. ಅಲ್ಲದೆ, ವಾರಕ್ಕೊಮ್ಮೆ ಅವುಗಳನ್ನು ಸ್ವಚ್ಛಗೊಳಿಸಬೇಕು.
2) ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಜತೆಗೆ ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.
3) ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ, ಮಕ್ಕಳು, ವಯೋವೃದ್ಧರು ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಬೇಕು.
4) ಸೊಳ್ಳೆಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿ ಮಾಡುವುದು ನಿಂತ ನೀರಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಮನೆಯ ಸುತ್ತಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು.
5) ಪ್ರತಿಯೊಬ್ಬ ವ್ಯಕ್ತಿಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ವೈರಸ್ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ.

ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2 ರಿಂದ 7 ದಿನಗಳವರೆಗೆ ಇರುತ್ತದೆ. ಗರ್ಭಿಣಿಯರು ವಿಶೇಷವಾಗಿ ಎಚ್ಚರಿಕೆ ವಹಿಸಬೇಕು. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಳಗಾವಿ

Heart Attack : ಬೈಕ್‌ನಲ್ಲಿ ತೆರಳುತ್ತಿದ್ದಾಗಲೇ ಬಡಿತ ನಿಲ್ಲಿಸಿದ ಹೃದಯ; ಯೋಧನ ಸಾವಿನ ಕೊನೆ ಕ್ಷಣ ಸೆರೆ

ಯೋಧರೊಬ್ಬರಿಗೆ ಅವರ ಹೃದಯವೇ (Heart Attack) ಯಮಪಾಶವಾಗಿತ್ತು. ಬೆಳಗಾವಿಯಲ್ಲಿ ಚಲಿಸುತ್ತಿದ್ದ ಬೈಕ್‌ನಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸಾವಿನ ಕೊನೆ ಕ್ಷಣವು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.

VISTARANEWS.COM


on

By

Heart attack
Koo

ಬೆಳಗಾವಿ: ಯಾವುದೇ ಸೂಚನೆಯನ್ನು ನೀಡದೆ ಬರುವ ಜವರಾಯನ ಅಟ್ಟಹಾಸಕ್ಕೆ ಮಧ್ಯಮ ವಯಸ್ಸಿನವರ ಪ್ರಾಣಪಕ್ಷಿ ಹಾರಿಹೋಗುತ್ತಿದೆ. ಬದುಕು ಹೇಗೆಲ್ಲ ಅಂತ್ಯವಾಗುತ್ತೆ ಎಂಬುದನ್ನು ಅಂದಾಜಿಸಲೂ ಸಾಧ್ಯವಿಲ್ಲ. ಹೃದಯವು ಯಾವ ಕ್ಷಣದಲ್ಲಿ ಕೈಕೊಡುತ್ತೆ ಎಂಬುದು ಊಹಿಸಲು ಆಗುತ್ತಿಲ್ಲ. ನಿಂತ ನಿಲುವಿನಲ್ಲೇ ಬದುಕನ್ನು ಸ್ತಬ್ಧಗೊಳಿಸುವ ನಿರ್ನಾಮ ಶಕ್ತಿಯನ್ನು ಅದು ಹೊಂದಿದೆ. ಕುಳಿತಲ್ಲೇ ಕುಸಿಯುವುದು, ನಿಂತಲ್ಲೇ ಉರುಳಿ ಬೀಳುವುದು, ಮಲಗಿದಲ್ಲೇ ಮರಣಿಸುವುದು, ನೃತ್ಯ ಮಾಡುತ್ತಲೇ ಹೃದಯ (Heart Attack) ಸ್ತಬ್ಧವಾಗುವುದು. ಹೀಗೆ ಸಾವಿನ ಹತ್ತಾರು ಭಯಾನಕ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಇದೀಗ ಬೆಳಗಾವಿಯಲ್ಲಿ ಯೋಧರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಯೋಧ ಬೈಕ್‌ನಲ್ಲಿ ಹೋಗುತ್ತಿದ್ದಾಗ ಸಹಿಸಲು ಆಗದ ಎದೆನೋವು ಕಾಣಿಸಿಕೊಂಡಿದೆ. ಬೈಕ್‌ ನಿಧಾನಿಸಿ ಎದೆ ಸವಾರಿಕೊಂಡು ನಿಲ್ಲಲ್ಲು ಯತ್ನಿಸಿದ್ದಾರೆ. ಆದರೆ ಕರುಣೆಯೇ ಇಲ್ಲದ ಹೃದಯ ತನ್ನ ಬಡಿತವನ್ನು ನಿಲ್ಲಿಸಿತ್ತು. ನೋಡನೋಡುತ್ತಲೇ ಆ ಯೋಧ ರಸ್ತೆ ಬದಿಗೆ ಕುಸಿದು ಬಿದ್ದಿದ್ದರು. ಸಾವಿನ ಕ್ಷಣವು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಬೆಳಗಾವಿಯ ಎಂಎಲ್ಐಆರ್‌ಸಿ ಕ್ಯಾಂಪ್‌ನಲ್ಲಿ ಈ ಘಟನೆ ನಡೆದಿದೆ. ಹೃದಯಾಘಾತದಿಂದ ಸುನೀಲ್ ಸಲಾಂ (37) ಎಂಬುವವರು ಮೃತಪಟ್ಟಿದ್ದಾರೆ. ಸುನೀಲ್‌ ಮರಾಠ ಲಘು ಪದಾತಿದಳಲ್ಲಿ ಹವಾಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು. ಬೈಕ್‌ನಲ್ಲಿ ತೆರಳುತ್ತಿದ್ದಾಗ ದಿಢೀರ್‌ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Heart attack
Heart attack

ಇದನ್ನೂ ಓದಿ: Physical Abuse : ಕೋರಮಂಗಲದ ಪಬ್‌ನಿಂದ ಮನೆಗೆ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಬೈಕ್‌ ಚಲಿಸುತ್ತಿದ್ದಾಗಲೇ ಎದೆ ನೋವು ಕಾಣಿಸಿಕೊಂಡಿದೆ. ಎದೆಯನ್ನು ಸವರಿಸಿಕೊಳ್ಳುತ್ತಲೇ ಬ್ರೇಕ್‌ ಹಿಡಿದು ಬೈಕ್‌ ನಿಧಾನ ಮಾಡಿದ್ದಾರೆ. ಆದರೆ ನಡುರಸ್ತೆಯಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸುನೀಲ್‌ ಅವರು ಬೈಕ್‌ನಿಂದ ರಸ್ತೆ ಬದಿಗೆ ಬೀಳುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಸುನೀಲ್‌ ಮೃತದೇಹವನ್ನು ಮಹಾರಾಷ್ಟ್ರದ ಚಂದಗಡ ತಾಲೂಕಿನ ಘುಳೇವಾಡಿಗೆ ರವಾನಿಸಿದ್ದು, ಸಕಲ ಸರ್ಕಾರಿ ಗೌರವಗೊಂದಿಗೆ ಯೋಧನ ಅಂತ್ಯಕ್ರಿಯೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

5 Seeds for Weight Loss: ಈ 5 ಕಿರು ಬೀಜಗಳು ತೂಕ ಇಳಿಕೆಗೆ ಸಹಕಾರಿ

5 Seeds for Weight Loss: ತೂಕ ಇಳಿಸುವುದಕ್ಕೆ ಉಪವಾಸ ಮಾಡುವುದಲ್ಲ, ತಿನ್ನಬೇಕು! ಆದರೆ ಸರಿಯಾಗಿ ತಿನ್ನಬೇಕು. ದೇಹ ಬಳಲದಂತೆ ಕಾಪಾಡಿಕೊಂಡು, ಅಗತ್ಯ ಸತ್ವಗಳನ್ನು ಮರುಪೂರಣ ಮಾಡುತ್ತಲೇ ಇರುವುದು ತೂಕ ಇಳಿಸುವವರಿಗೆ ದೊಡ್ಡ ಸವಾಲು. ಇದಕ್ಕೆ ನೆರವಾಗುವಂಥ ಕೆಲವು ಕಿರು ಬೀಜಗಳ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ.

VISTARANEWS.COM


on

Weight Loss Tips kannada
Koo

ತೂಕ ಇಳಿಸುವ ವಿಷಯ (5 Seeds for Weight Loss) ಬಂದರೆ, ತಿನ್ನುವುದಕ್ಕಿಂತ ತಿನ್ನದೇ ಇರುವುದಕ್ಕೇ ಅಧಿಕ ಮಹತ್ವ ನೀಡುತ್ತೇವೆ ನಾವು. ವಿಷಯವೇನೆಂದರೆ ತೂಕ ಇಳಿಸುವುದಕ್ಕೆ ತಿನ್ನಬೇಕು, ಆದರೆ ಸರಿಯಾಗಿ ತಿನ್ನಬೇಕು. ಬಹಳಷ್ಟು ರೀತಿಯ ಖನಿಜಗಳು ಮತ್ತು ಜೀವಸತ್ವಗಳು ಹಾಗೂ ನಾರು ಇರುವಂಥ ಆಹಾರಗಳ ಜೊತೆಗೆ ಲೀನ್‌ ಪ್ರೊಟೀನ್‌ ತಿನ್ನುವುದು ಮಹತ್ವದ್ದೆನಿಸುತ್ತದೆ. ಇವೆಲ್ಲವನ್ನೂ ಹೊಂದಿರುವಂಥ ಕೆಲವು ಸಂಪೂರ್ಣ ಆಹಾರಗಳ ಪೈಕಿ ಕಿರುಬೀಜಗಳು ಮುಂಚೂಣಿಯ ಸ್ಥಾನ ಪಡೆಯುತ್ತವೆ. ಚಿತ್ರ ಗಾತ್ರದ ಈ ಬೀಜಗಳಲ್ಲಿ ಅಪಾರ ಪ್ರಮಾಣದ ಪೋಷಕಾಂಶಗಳು ಹುದುಗಿವೆ. ಅದರಲ್ಲೂ ತೂಕ ಇಳಿಸುವವರಿಗೆ ಇಂಥ ಬೀಜಗಳು ಅಮೂಲ್ಯ ನೆರವನ್ನು ನೀಡುತ್ತವೆ. ಯಾವ ಬೀಜಗಳವು? ಇವುಗಳಿಂದ ತೂಕ ಇಳಿಸುವುದಕ್ಕೆ ಏನು ಮತ್ತು ಹೇಗೆ ಪ್ರಯೋಜನ?

Sunflower seed Different Types of Seeds with Health Benefits

ಸೂರ್ಯಕಾಂತಿ ಬೀಜ

ಪ್ರೊಟೀನ್‌, ನಾರು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುವ ಈ ಬೀಜಗಳಲ್ಲಿ ಖನಿಜಗಳು ಮತ್ತು ಜೀವಸತ್ವಗಳು ಭರಪೂರ ಇವೆ. ಇದರಲ್ಲಿರುವ ನಾರು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವ ನೀಡಿ, ಆಗಾಗ ತಿನ್ನಬೇಕು ಎನ್ನುವ ಬಯಕೆಯನ್ನು ತಡೆಯುತ್ತದೆ. ಇದರಲ್ಲಿರುವ ವಿಟಮಿನ್‌ ಇ ಅಂಶವು ದೇಹದ ಚಯಾಪಚಯವನ್ನು ಹೆಚ್ಚಿಸುವಂಥ ಉತ್ಕರ್ಷಣ ನಿರೋಧಕದಂತೆ ಕೆಲಸ ಮಾಡುತ್ತದೆ. ಜೊತೆಗೆ ಈ ಬೀಜಗಳು ತಿನ್ನುವುದಕ್ಕೆ ರುಚಿಯಾಗಿದ್ದು, ಯಾವುದೇ ಬಡಿವಾರವಿಲ್ಲದೇ ಸುಮ್ಮನೆಯೂ ತಿನ್ನಬಹುದು.

Flax Seeds in a Wooden Spoon

ಅಗಸೆ ಬೀಜ

ಸಸ್ಯಾದಿಗಳಲ್ಲಿ ದೊರೆಯುವ ಒಮೇಗಾ ೩ ಕೊಬ್ಬಿನಾಮ್ಲದ ಮೂಲಗಳ ಪೈಕಿ ಅಗಸೆ ಬೀಜ ಅತ್ಯಂತ ಹೆಚ್ಚಿನದ್ದು. ಆಲ್ಫಲಿನೊಲೆನಿಕ್‌ ಆಮ್ಲವು ಈ ಸಣ್ಣ ಬೀಜಗಳಲ್ಲಿ ಸಾಂದ್ರವಾಗಿದೆ. ಇದಲ್ಲದೆ, ನಾರು, ಪ್ರೊಟೀನ್‌, ಹಲವು ರೀತಿಯ ವಿಟಮಿನ್‌ಗಳು, ಖನಿಜಗಳು ಇದರಲ್ಲಿ ಹೇರಳವಾಗಿವೆ. ಹಾಗಾಗಿ ಈ ಬೀಜದ ಚಟ್ಣಿಪುಡಿಯಿಂದ ತೊಡಗಿ, ಎಣ್ಣೆಯವರೆಗೆ ಹಲವು ರೀತಿಯಲ್ಲಿ ಇದನ್ನು ನಿತ್ಯವೂ ಆಹಾರದಲ್ಲಿ ಉಪಯೋಗಿಸುವುದರಿಂದ ತೂಕ ಇಳಿಕೆಗೆ ಅನುಕೂಲವಾಗುತ್ತದೆ. ಇವುಗಳನ್ನು ಪುಡಿ ಮಾಡಿ ತಿನ್ನಿ, ಒಗ್ಗರಣೆಗೆ ಬಳಸಿ, ಟ್ರೇಲ್‌ ಮಿಕ್ಸ್‌ಗೆ ಉಪಯೋಗಿಸಿ- ಹೇಗಾದರೂ ಸರಿ, ತಿನ್ನಿ.

Chia Seeds Black Foods

ಚಿಯಾ ಬೀಜ

ಈ ಬೀಜಗಳಂತೂ ಅಗಸೆ ಬೀಜಕ್ಕಿಂತಲೂ ಸಣ್ಣವು. ಆದರೆ ಒಮೇಗಾ ೩ ಕೊಬ್ಬಿನಾಮ್ಲದ ವಿಷಯಕ್ಕೆ ಬಂದರೆ ಮಾತ್ರ ಸಣ್ಣವಲ್ಲ. ಇದರಲ್ಲೂ ಆಲ್ಫ ಲಿನೋಲೆನಿಕ್‌ ಆಮ್ಲ ಧಾರಾಳವಾಗಿದೆ. ಇದನ್ನು ಆಹಾರದಲ್ಲಿ ಬಳಸುವುದೂ ಸಹ ಕಷ್ಟವಲ್ಲ. ನಿತ್ಯವೂ ನೀರಿಗೆ ಹಾಕಿ ಕುಡಿದರೂ ಸಾಕಾಗುತ್ತದೆ. ಇದರಿಂದ ಜೀರ್ಣಾಂಗಗಳ ಆರೋಗ್ಯ ವೃದ್ಧಿಸುತ್ತದೆ, ತೂಕ ನಿರ್ವಹಣೆಗೆ ಸಹಾಯವಾಗುತ್ತದೆ, ಹೃದಯದ ಆರೋಗ್ಯ ರಕ್ಷಣೆಗೂ ನೆರವಾಗುತ್ತದೆ. ಇದರಲ್ಲಿರುವ ಪ್ರೊಟೀನ್‌ ಅಂಶವು ತೂಕ ಇಳಿಕೆಗೆ ಪೂರಕವಾಗಿದ್ದು, ಕ್ಯಾಲ್ಶಿಯಂನಂಥ ಖನಿಜಗಳು ಮೂಳೆಗಳ ರಕ್ಷಣೆಗೆ ಬೇಕಾದವು.

Hemp seed Different Types of Seeds with Health Benefits

ಹೆಂಪ್‌ ಬೀಜಗಳು

ಭಾರತದಲ್ಲಿ ಅಷ್ಟಾಗಿ ಪ್ರಚಲಿತವಿಲ್ಲದ ಬೀಜಗಳಿವು. ಆದರೆ ಸತ್ವಗಳ ವಿಷಯದಲ್ಲಿ ಕಡಿಮೆಯಿಲ್ಲ. ಇದರಲ್ಲಿಯೂ ಒಮೇಗಾ 3 ಕೊಬ್ಬಿನಾಮ್ಲ ಸಾಂದ್ರವಾಗಿದೆ. ಜೊತೆಗೆ ಹಲವು ರೀತಿಯ ಖನಿಜಗಳು ದೇಹಕ್ಕೆ ದೊರೆಯುತ್ತವೆ. ಇದರಲ್ಲಿ ಎಲ್ಲಾ ಒಂಬತ್ತು ರೀತಿಯ ಅಮೈನೊ ಆಮ್ಲಗಳು ಲಭ್ಯವಿದ್ದು, ಸಂಪೂರ್ಣ ಪ್ರೊಟೀನ್‌ಗಳ ಸಾಲಿಗೆ ಸೇರುತ್ತವೆ. ಇದರ ತೈಲವೂ ಲಭ್ಯವಿದ್ದು, ಅಡುಗೆಗೆ ಬಳಸಲು ಸಾಧ್ಯವಿದೆ. ಗೋಡಂಬಿಯಂತೆಯೇ ಹೆಂಪ್‌ ಬೀಜಗಳನ್ನು ಸಹ ನಾನಾ ಖಾದ್ಯಗಳಿಗೆ ಉಪಯೋಗಿಸಬಹುದು.

Pumpkin seeds Pumpkin Seeds Benefits

ಕುಂಬಳಕಾಯಿ ಬೀಜ

ಹಲವು ಸಮಸ್ಯೆಗಳಿಗೆ ಸರಳ ಸಮಾಧಾನದಂತೆ ಈ ಪುಟ್ಟ ಬೀಜಗಳು ಕಂಡುಬರುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಹೃದಯದ ಆರೋಗ್ಯ ಸುಧಾರಿಸುವವರೆಗೆ ಹಲವು ರೀತಿಯಲ್ಲಿ ಕುಂಬಳಬೀಜ ನಮಗೆ ಉಪಕಾರಿಯಾಗಬಲ್ಲದು. ಹಲವು ರೀತಿಯ ಖನಿಜಗಳು ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಈ ಬೀಜಗಳು, ಕಳ್ಳ ಹಸಿವೆಯನ್ನು ನಿವಾರಿಸುವುದನ್ನು ಸುಮ್ಮನೆ ಬಾಯಾಡುವುದಕ್ಕೆ ಜೊತೆಯಾಗುತ್ತವೆ. ಇದನ್ನು ಗೋಡಂಬಿಯಂತೆ ಹಲವು ಖಾದ್ಯಗಳಿಗೆ ಬಳಸಬಹುದು. ಚಿಟಿಕೆ ಉಪ್ಪಿನೊಂದಿಗೆ ಹುರಿದರೆ, ಚಹಾ ಜೊತೆಗೆ ಬಾಯಿಗೆಸೆದುಕೊಳ್ಳಬಹುದು. ಕುಂಬಳಬೀಜದಲ್ಲಿ ಟ್ರಿಪ್ಟೊಫ್ಯಾನ್‌ ಎಂಬ ಅಮೈನೊ ಆಮ್ಲವಿದೆ. ಇದು ಸೆರೊಟೋನಿನ್‌ ಮತ್ತು ಮೆಲಟೋನಿನ್‌ನಂಥ ಹ್ಯಾಪಿ ಹಾರ್ಮೋನುಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಈ ಹಾರ್ಮೋನುಗಳು ನಮ್ಮ ಮೂಡ್‌ ಮತ್ತು ನಿದ್ದೆಯನ್ನು ನಿಯಂತ್ರಿಸುತ್ತವೆ. ಹಾಗಾಗಿ ಕಣ್ತುಂಬಾ ನಿದ್ದೆ ತರಿಸಿ, ತೂಕ ಇಳಿಸುವುದಕ್ಕೆ ಸೂಕ್ತವಾಗುವಂತೆ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ನೆರವಾಗುತ್ತವೆ.

Continue Reading

ಆರೋಗ್ಯ

Dengue Vaccine: ಭಾರತದ ಮೊದಲ ಡೆಂಗ್ಯೂ ಲಸಿಕೆ; 3ನೇ ಹಂತದ ಪ್ರಯೋಗ ಪ್ರಾರಂಭ

ಡೆಂಗ್ಯೂಗೆ ಭಾರತೀಯ ಲಸಿಕೆ (Dengue Vaccine) 3ನೇ ಹಂತದ ಪ್ರಯೋಗದಲ್ಲಿದೆ. ಈ ಹಿಂದೆ ನಡೆಸಿರುವ ಎರಡು ಪ್ರಯೋಗಗಳು ಯಶಸ್ವಿಯಾಗಿದ್ದು, ಐಸಿಎಂಆರ್ ಸಹಯೋಗದೊಂದಿಗೆ 3 ಹಂತದ ಪ್ರಯೋಗವು 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 19 ಪ್ರದೇಶಗಳಲ್ಲಿ 10,335ಕ್ಕೂ ಹೆಚ್ಚು ಆರೋಗ್ಯವಂತ ವಯಸ್ಕರ ಮೇಲೆ ನಡೆಯಲಿದೆ. ಈ ಲಸಿಕೆ ಯಶಸ್ವಿಯಾದರೆ ಡೆಂಗ್ಯೂ ರೋಗದಿಂದ ಉಂಟಾಗುತ್ತಿರುವ ಸಾವು ತಪ್ಪಿಸಬಹುದು.

VISTARANEWS.COM


on

By

Dengue Vaccine
Koo

ಪಂಡಿತ್ ಭಾಗವತ್ ದಯಾಳ್ ಶರ್ಮಾ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (PGIMS) ರೋಹ್ಟಕ್‌ನಲ್ಲಿ ಭಾರತದ ಮೊದಲ ಸ್ಥಳೀಯ ಡೆಂಗ್ಯೂ ಲಸಿಕೆ (Dengue Vaccine) 3ನೇ ಹಂತದ ಪ್ರಯೋಗವನ್ನು ಪ್ರಾರಂಭಿಸಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು ಪ್ಯಾನೇಸಿಯಾ ಬಯೋಟೆಕ್ (Panacea Biotec) ಘೋಷಿಸಿದೆ.

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಈ ಉಪಕ್ರಮವನ್ನು ಶ್ಲಾಘಿಸಿದ್ದು, ಡೆಂಗ್ಯೂ ಚಿಕೆತ್ಸೆಗಾಗಿ ಭಾರತದ ಮೊದಲ ಸ್ಥಳೀಯ ಲಸಿಕೆಯ 3 ಕ್ಲಿನಿಕಲ್ ಪ್ರಯೋಗದ ಪ್ರಾರಂಭವು ಡೆಂಗ್ಯೂ ವಿರುದ್ಧದ ನಮ್ಮ ಹೋರಾಟದಲ್ಲಿ ನಿರ್ಣಾಯಕ ಪ್ರಗತಿಯನ್ನು ಸೂಚಿಸುತ್ತದೆ ಎಂದು ಹೇಳಿದರು.

ಡೆಂಗ್ಯೂ ಲಸಿಕೆ ಅಭಿವೃದ್ಧಿಗೆ ಐಸಿಎಂಆರ್ ಮತ್ತು ಪ್ಯಾನೇಸಿಯಾ ಬಯೋಟೆಕ್ ನಡುವಿನ ಸಹಯೋಗದ ಪ್ರಾಮುಖ್ಯತೆಯನ್ನು ತಿಳಿಸಿದ ಕೇಂದ್ರ ಆರೋಗ್ಯ ಸಚಿವರು, ಈ ಪಾಲುದಾರಿಕೆಯ ಮೂಲಕ ನಾವು ನಮ್ಮ ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವತ್ತ ಹೆಜ್ಜೆ ಇಡುತ್ತಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತ್‌ನ ನಮ್ಮ ದೃಷ್ಟಿಯನ್ನು ಬಲಪಡಿಸುತ್ತದೆ ಎಂದು ತಿಳಿಸಿದರು.


ಪ್ರಸ್ತುತ ದೇಶವು ಡೆಂಗ್ಯೂಗೆ ಯಾವುದೇ ಆಂಟಿವೈರಲ್ ಚಿಕಿತ್ಸೆ ಅಥವಾ ಪರವಾನಗಿ ಪಡೆದ ಲಸಿಕೆಯನ್ನು ಹೊಂದಿಲ್ಲ. ಪರಿಣಾಮಕಾರಿ ಲಸಿಕೆಯನ್ನು ಅಭಿವೃದ್ಧಿಪಡಿಸುವುದು ಸಂಕೀರ್ಣ ಮತ್ತು ತುರ್ತು ಅಗತ್ಯವಾಗಿದೆ. ಡೆಂಗ್ಯೂ ವೈರಸ್‌ನ ಎಲ್ಲಾ ನಾಲ್ಕು ಸಿರೊಟೈಪ್‌ಗಳಲ್ಲಿ ಹೆಚ್ಚಿನ ಪರಿಣಾಮಕಾರಿತ್ವವನ್ನು ಸಾಧಿಸುವಲ್ಲಿ ಸವಾಲು ಇದೆ. ಇದು ದೇಶದ ಅನೇಕ ಪ್ರದೇಶಗಳಲ್ಲಿ ಹರಡುತ್ತಿದೆ ಎಂದರು.

ಟೆಟ್ರಾವಲೆಂಟ್ ಡೆಂಗ್ಯೂ ಲಸಿಕೆ ಸ್ಟ್ರೈನ್ (TV003/TV005) ಆರಂಭದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH), ಯುಎಸ್ ಎನಿಂದ ಅಭಿವೃದ್ಧಿಪಡಿಸಲಾಯಿತು. ಜಾಗತಿಕವಾಗಿ ಪೂರ್ವಭಾವಿ ಮತ್ತು ಕ್ಲಿನಿಕಲ್ ಪ್ರಯೋಗಗಳಲ್ಲಿ ಭರವಸೆಯ ಫಲಿತಾಂಶಗಳನ್ನು ತೋರಿಸಿದೆ. ಇದರ ಪ್ರಯೋಗ ಆರಂಭಿಸಿದ ಮೂರು ಭಾರತೀಯ ಕಂಪೆನಿಗಳಲ್ಲಿ ಒಂದಾದ Panacea Biotec ಸಂಪೂರ್ಣ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚು ಪ್ರಗತಿ ಸಾಧಿಸಿದೆ.

ಈ ಕೆಲಸಕ್ಕಾಗಿ ಕಂಪನಿಯು ಪ್ರಕ್ರಿಯೆಯ ಪೇಟೆಂಟ್ ಅನ್ನು ಹೊಂದಿದೆ. 2018-19ರಲ್ಲಿ ಭಾರತೀಯ ಲಸಿಕೆ ಕ್ಲಿನಿಕಲ್ ಪ್ರಯೋಗ ಹಂತ 1 ಮತ್ತು 2 ಪೂರ್ಣಗೊಂಡಿವೆ. ಇದು ಭರವಸೆಯ ಫಲಿತಾಂಶಗಳನ್ನು ನೀಡಿದೆ.
ಐಸಿಎಂಆರ್ ಸಹಯೋಗದೊಂದಿಗೆ ನಡೆಸಲಾದ ಹಂತ 3 ಕ್ಲಿನಿಕಲ್ ಪ್ರಯೋಗವು 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 10,335 ಕ್ಕೂ ಹೆಚ್ಚು ಆರೋಗ್ಯವಂತ ವಯಸ್ಕ ಭಾಗವಹಿಸುವವರನ್ನು ಒಳಗೊಂಡ 19 ಪ್ರದೇಶಗಳಲ್ಲಿ ನಡೆಯಲಿದೆ.

ಇದನ್ನೂ ಓದಿ: Bridge Collapse: 9 ವರ್ಷಗಳಿಂದ ನಿರ್ಮಾಣವಾಗುತ್ತಿರುವ ಸೇತುವೆ 3ನೇ ಬಾರಿ ಕುಸಿದು ಬಿತ್ತು; ವಿಡಿಯೊ ನೋಡಿ

ಭಾರತವು ಡೆಂಗ್ಯೂ ರೋಗದ ಅತಿ ಹೆಚ್ಚು ಸಂಭವವಿರುವ ಟಾಪ್ 30 ದೇಶಗಳಲ್ಲಿ ಒಂದಾಗಿದೆ. ಡಬ್ಲ್ಯೂ ಹೆಚ್‌ಒ ವರದಿಯ ಪ್ರಕಾರ ಭಾರತದಲ್ಲಿ ಸುಮಾರು ಶೇ. 75-80ರಷ್ಟು ಸೋಂಕುಗಳು ಲಕ್ಷಣ ರಹಿತವಾಗಿವೆ. ಆದರೂ ಈ ವ್ಯಕ್ತಿಗಳು ಈಡಿಸ್ ಸೊಳ್ಳೆಗಳ ಕಡಿತದ ಮೂಲಕ ಸೋಂಕನ್ನು ಹರಡಬಹುದು. ರೋಗ ಲಕ್ಷಣಗಳು ಪ್ರಾಯೋಗಿಕವಾಗಿ ಸ್ಪಷ್ಟವಾಗಿ ಕಂಡುಬರುವ ಶೇ. 20-25 ಪ್ರಕರಣಗಳಲ್ಲಿ ಮಕ್ಕಳು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಮರಣದ ಅಪಾಯವೂ ಹೆಚ್ಚಾಗಿರುತ್ತದೆ.

Continue Reading
Advertisement
Kundapura Kannada Habba 2024
ಕರ್ನಾಟಕ8 mins ago

Kundapura Kannada Habba 2024: ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ಸದ್ಯದಲ್ಲೇ ಸಮಿತಿ ರಚನೆ: ಜಯಪ್ರಕಾಶ ಹೆಗ್ಡೆ

Physical Abuse
ಕರ್ನಾಟಕ27 mins ago

Physical Abuse: ಕಿಡ್ನ್ಯಾಪ್ ಮಾಡಿ ಮಹಿಳೆ ಮೇಲೆ ಅತ್ಯಾಚಾರ, ಮಗನ ಮೇಲೂ ಹಲ್ಲೆ; 9 ಆರೋಪಿಗಳ ಅರೆಸ್ಟ್‌

Champai Soren
ದೇಶ48 mins ago

Champai Soren: ನನ್ನ ಎದುರು ಮೂರು ಆಯ್ಕೆಗಳಿವೆ; ಬಿಜೆಪಿ ಸೇರ್ಪಡೆ ಬಗ್ಗೆ ಚಂಪೈ ಸೊರೆನ್‌ ಹೇಳಿದ್ದೇನು? ಇಲ್ಲಿದೆ ಡಿಟೇಲ್ಸ್‌

Zika Virus Case
ಕರ್ನಾಟಕ2 hours ago

Zika Virus: ಡೆಂಗ್ಯೂ ಮಧ್ಯೆ ಝಿಕಾ ವೈರಸ್‌ ಆತಂಕ; ಸೋಂಕು ತಡೆಗೆ ಮಾರ್ಗಸೂಚಿ ಪ್ರಕಟ

CAA Act
ದೇಶ2 hours ago

CAA Act: CAA ಕಾಯ್ದೆಯಡಿಯಲ್ಲಿ 188 ಪಾಕಿಸ್ತಾನಿ ನಿರಾಶ್ರಿತರಿಗೆ ಭಾರತೀಯ ಪೌರತ್ವ ಭಾಗ್ಯ

CM Siddaramaiah
ಕರ್ನಾಟಕ3 hours ago

CM Siddaramaiah: ಆ.23ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿಗೆ; ಕಾನೂನು ಹೋರಾಟಕ್ಕೆ ಹೈ ‌ಕಮಾಂಡ್ ಬೆಂಬಲ ಕೋರಲು ಭೇಟಿ

zika Virus
ಬೆಂಗಳೂರು ಗ್ರಾಮಾಂತರ3 hours ago

Zika Virus : ಆನೇಕಲ್‌ನಲ್ಲಿ ಆರು ಮಂದಿಗೆ ಝಿಕಾ ವೈರಸ್ ಪತ್ತೆ; 3 ಕಿ.ಮೀ ರೇಡಿಯಸ್ ಕಂಟೋನ್ಮೆಂಟ್ ಜೋನ್‌

Food Poisoning
ದೇಶ3 hours ago

Food Poisoning: ಶಾಲೆಯಲ್ಲಿ ಕೊಟ್ಟ ಬಿಸ್ಕೇಟ್‌ ಸೇವಿಸಿ ಬರೋಬ್ಬರಿ 80 ವಿದ್ಯಾರ್ಥಿಗಳು ಅಸ್ವಸ್ಥ

Govt Employees
ಕರ್ನಾಟಕ4 hours ago

Govt Employees: ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ; ಕ್ರೀಡಾ ಮನೋಭಾವದಿಂದ ಭಾಗವಹಿಸಲು ಸಿ.ಎಸ್. ಷಡಾಕ್ಷರಿ ಮನವಿ

Kolkata Doctor Murder Case
ದೇಶ4 hours ago

Kolkata Doctor murder case: ಟ್ರೈನಿ ವೈದ್ಯೆ ಕೊಲೆ ಪ್ರಕರಣ; ಸ್ವಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌