Viral Video: ಆಟಿಕೆ ಎಂದು ತಿಳಿದು ಹಾವನ್ನೇ ಕಚ್ಚಿದ ಮಗು! ಕಚ್ಚಿಸಿಕೊಂಡ ಹಾವು ಸಾವು! - Vistara News

ವೈರಲ್ ನ್ಯೂಸ್

Viral Video: ಆಟಿಕೆ ಎಂದು ತಿಳಿದು ಹಾವನ್ನೇ ಕಚ್ಚಿದ ಮಗು! ಕಚ್ಚಿಸಿಕೊಂಡ ಹಾವು ಸಾವು!

ಬಿಹಾರದಲ್ಲಿ ಒಂದು ವರ್ಷದ ಮಗು ಟೆರೇಸ್‌ನಲ್ಲಿ ಆಟವಾಡುತ್ತಿದ್ದಾಗ ಹಾವನ್ನು ಕಂಡು ಆಟವಾಡುವ ಸಾಮಗ್ರಿ ಎಂದು ತಿಳಿದು ಕಚ್ಚಿದೆ. ಹಾವು ಸಾವನ್ನಪ್ಪಿದ್ದು, ಮಗು ಅಪಾಯದಿಂದ ಪಾರಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಂಬೆಗಾಲಿಡುವ ಮಗುವೊಂದು ಹಾವನ್ನು ಕಚ್ಚಿ (Boy Bites Snake) ಕೊಂದಿರುವ ಘಟನೆ ಬಿಹಾರದ ಗಯಾ (Gaya district) ಜಿಲ್ಲೆಯ ಜಮುಹರ್ ಗ್ರಾಮದಲ್ಲಿ ನಡೆದಿದ್ದು, ಮಗು ಅಪಾಯದಿಂದ ಪಾರಾಗಿದೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದ್ದು, ಬಳಿಕ ಸಾಕಷ್ಟು ಮಂದಿ ಮಗುವನ್ನು ಕಾಣಲು ಬರುತ್ತಿದ್ದಾರೆ ಎನ್ನಲಾಗಿದೆ.

ಮಗು ಟೆರೇಸ್‌ನಲ್ಲಿ ಆಟವಾಡುತ್ತಿದ್ದಾಗ ಹಾವನ್ನು ಕಂಡು ಆಟವಾಡುವ ಸಾಮಗ್ರಿ ಎಂದು ತಿಳಿದು ಕಚ್ಚಿದೆ. ಹಾವು ಸಾವನ್ನಪ್ಪಿದ್ದು, ಬಾಲಕ ಅಪಾಯದಿಂದ ಪಾರಾಗಿರುವುದು ಆತನ ಕುಟುಂಬ ಹಾಗೂ ವೈದ್ಯರಿಗೆ ಅಚ್ಚರಿ ಮೂಡಿಸಿದೆ.

ಮಗು ಹಾವನ್ನು ಜಗಿಯುತ್ತಿರುವುದನ್ನು ಕಂಡ ಕೂಡಲೇ ತಾಯಿ ಅದನ್ನು ಮಗುವಿನ ಬಾಯಿಯಿಂದ ತೆಗೆದು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಆರೋಗ್ಯ ಕೇಂದ್ರದ ವೈದ್ಯಕೀಯ ಸಿಬ್ಬಂದಿ ಮಗುವನ್ನು ಪರೀಕ್ಷಿಸಿ ದೈಹಿಕವಾಗಿ ಯಾವುದೇ ಹಾನಿಯಿಲ್ಲ ಎಂದು ದೃಢಪಡಿಸಿ, ಮಗು ಆರೋಗ್ಯವಾಗಿರುವುದಾಗಿ ಘೋಷಿಸಿದರು.

ಈ ಹಾವು ವಿಷಕಾರಿಯಲ್ಲ. ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ ಎಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ. ವ್ಯಕ್ತಿಯೊಬ್ಬ ಮಗುವಿನ ಬಾಯಿಯನ್ನು ತೆರೆಯುವಂತೆ ಪ್ರಯತ್ನಿಸಿದನು. ಸತ್ತ ಹಾವಿನ ಚಿತ್ರವನ್ನೂ ವಿಡಿಯೋದಲ್ಲಿ ತೋರಿಸಲಾಗಿದೆ.


ಇನ್ನೊಂದು ಘಟನೆಯಲ್ಲಿ ಕಳೆದ ತಿಂಗಳು ಬಿಹಾರದ ರಜೌಲಿಯಲ್ಲಿ ಹಾವೊಂದು ವ್ಯಕ್ತಿಯೊಬ್ಬನಿಗೆ ಕಚ್ಚಿದ್ದು, ಬಳಿಕ ಹಾವು ಸಾವನ್ನಪ್ಪಿತ್ತು. ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸರಿಯಾದ ವೈದ್ಯಕೀಯ ಚಿಕಿತ್ಸೆಯಿಂದ ವ್ಯಕ್ತಿ ಬದುಕಿ ಉಳಿದನು.

ಇದನ್ನೂ ಓದಿ: Viral Video: ಬುರ್ಖಾ ಧರಿಸಿ ಬೈಕ್ ಸ್ಟಂಟ್ ಮಾಡಿದ ಯುವಕರು ಪೊಲೀಸರ ಅತಿಥಿಗಳಾದರು!

ಉತ್ತರ ಪ್ರದೇಶದ ಸೌರಾ ಗ್ರಾಮದಲ್ಲೂ 24 ವರ್ಷದ ವಿಕಾಸ್ ದುಬೆ ಎಂಬವರಿಗೆ ಹಾವು ಪದೇ ಪದೇ ಕಚ್ಚಿದ ವಿಲಕ್ಷಣ ಪ್ರಕರಣ ನಡೆದಿತ್ತು. ಸುಮಾರು 40 ದಿನಗಳಲ್ಲಿ ವಿಕಾಸ್‌ಗೆ ಏಳು ಬಾರಿ ಹಾವು ಕಚ್ಚಿತ್ತು.

ಜೂನ್ 2 ರಂದು ದುಬೆ ತನ್ನ ನಿವಾಸದಲ್ಲಿ ಹಾಸಿಗೆಯಿಂದ ಎದ್ದ ತಕ್ಷಣ ಹಾವು ಕಚ್ಚಿದ್ದು, ಅವರನ್ನು ಪಕ್ಕದ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಜೂನ್ 2 ರಿಂದ ಜುಲೈ 6 ರ ನಡುವೆ ದುಬೆ ಅವರು ಆರು ಬಾರಿ ಹಾವು ಕಡಿತಕ್ಕೆ ಒಳಗಾಗಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Starbucks CEO: ಸಿಕ್ರೆ ಇಂಥಾ ಕೆಲ್ಸ ಸಿಗ್ಬೇಕಪ್ಪಾ! 1600 ಕಿ.ಮೀ ದೂರ ಆಫೀಸ್‌..ದಿನಾ ಓಡಾಡೋಕೆ ಕಂಪನಿ ಜೆಟ್‌! ಈತ ಪುಣ್ಯವಂತನೇ ಸರಿ

Starbucks CEO: ಸ್ಟಾರ್‌ ಬಕ್ಸ್‌ ಸಂಸ್ಥೆಯ ಹೊಸ ಸಿಇಒ ಆಗಿ ಬ್ರಿಯಾನ್‌ ನಿಕೋಲ್‌(Brian Niccol) ಅವರು ಇತ್ತೀಚೆಗಷ್ಟೇ ನೇಮಕಗೊಂಡಿದ್ದಾರೆ. ಕ್ಯಾಲಿಫೋರ್ನಿಯಾ ನಿವಾಸಿ ನಿಕೋಲ್‌, ಕಂಪನಿಯ ಪ್ರಧಾನಿ ಕಚೇರಿ ಇರುವ ಸೀಟಲ್‌ಗೆ ಸ್ಥಳಾಂತರಗೊಳ್ಳಲು ಒಪ್ಪಿಲ್ಲ. ಸೀಟಲ್‌ನಿಂದ ಕ್ಯಾಲಿಫೋರ್ನಿಯಾಗೆ ಇರುವುದು ಬರೋಬ್ಬರಿ 1600 ಕಿ.ಮೀ. ಹೀಗಾಗಿ ಅವರ ಪ್ರಯಾಣಕ್ಕೆಂದು ಆಫೀಸ್‌ ವಿಮಾನವೊಂದನ್ನು ನಿಯೋಜಿಸಿದೆ. ವಾರದಲ್ಲಿ ಮೂರು ದಿನ ಕಂಪನಿಯ ಜೆಟ್‌ನಲ್ಲಿಯೇ ನಿಕೋಲ್‌ ಕಚೇರಿಗೆ ಹೋಗಿ ಬರುತ್ತಿದ್ದಾರೆ ಎಂದರೆ ನಂಬಲೇಬೇಕು.

VISTARANEWS.COM


on

Starbucks CEO
Koo

ನವದೆಹಲಿ: ತಮ್ಮ ಉದ್ಯೋಗಿಗಳು ನೆಲೆಸಿರುವ ಸ್ಥಳ ಸ್ವಲ್ಪ ದೂರದಲ್ಲಿದ್ದರೂ ರಿಲೊಕೇಟ್‌ ಆಗುವಂತೆ ಹಲವು ಕಂಪನಿಗಳು ತಾಕೀತು ಮಾಡುತ್ತವೆ. ಇನ್ನು ತಾವು ಕೆಲವು ಮಾಡುವ ಕಂಪನಿ ಸ್ವಲ್ಪ ದೂರದಲ್ಲಿದ್ದರೂ ಒಂದೂ ಕ್ಯಾಬ್‌ ವ್ಯವಸ್ಥೆ ಮಾಡಿ ಇಲ್ಲವೇ ವರ್ಕ್‌ ಫ್ರಂ ಹೋಂ ವ್ಯವಸ್ಥೆ ಮಾಡಿಕೊಡಿ ಎಂದು ಹಲವು ಉದ್ಯೋಗಿಗಳು ಮನವಿ ಮಾಡಿಕೊಳ್ಳುವುದನ್ನು ನಾವು ಕಂಡಿದ್ದೇವೆ. ಆದರೆ ಖ್ಯಾತ ಸ್ಟಾರ್‌ ಬಕ್ಸ್‌ ಸಂಸ್ಥೆಯ ಹೊಸ ಸಿಇಒ(Starbucks CEO) ನಿತ್ಯ ಆಫೀಸ್‌ ಹೋಗ್ಬೇಕಂದ್ರೆ ಅವರು ಪ್ರಯಾಣಿಸಬೇಕಾಗಿರುವುದು ಹತ್ತು ಇಪ್ಪತ್ತು ಕಿಲೋಮೀಟರ್‌ ಅಲ್ಲ. ಬರೋಬ್ಬರಿ 1600ಕಿ.ಮೀ.

ಸ್ಟಾರ್‌ ಬಕ್ಸ್‌ ಸಂಸ್ಥೆಯ ಹೊಸ ಸಿಇಒ ಆಗಿ ಬ್ರಿಯಾನ್‌ ನಿಕೋಲ್‌(Brian Niccol) ಅವರು ಇತ್ತೀಚೆಗಷ್ಟೇ ನೇಮಕಗೊಂಡಿದ್ದಾರೆ. ಕ್ಯಾಲಿಫೋರ್ನಿಯಾ ನಿವಾಸಿ ನಿಕೋಲ್‌, ಕಂಪನಿಯ ಪ್ರಧಾನಿ ಕಚೇರಿ ಇರುವ ಸೀಟಲ್‌ಗೆ ಸ್ಥಳಾಂತರಗೊಳ್ಳಲು ಒಪ್ಪಿಲ್ಲ. ಸೀಟಲ್‌ನಿಂದ ಕ್ಯಾಲಿಫೋರ್ನಿಯಾಗೆ ಇರುವುದು ಬರೋಬ್ಬರಿ 1600 ಕಿ.ಮೀ. ಹೀಗಾಗಿ ಅವರ ಪ್ರಯಾಣಕ್ಕೆಂದು ಆಫೀಸ್‌ ವಿಮಾನವೊಂದನ್ನು ನಿಯೋಜಿಸಿದೆ. ವಾರದಲ್ಲಿ ಮೂರು ದಿನ ಕಂಪನಿಯ ಜೆಟ್‌ನಲ್ಲಿಯೇ ನಿಕೋಲ್‌ ಕಚೇರಿಗೆ ಹೋಗಿ ಬರುತ್ತಿದ್ದಾರೆ ಎಂದರೆ ನಂಬಲೇಬೇಕು.

ಕಳೆದ ವಾರ ನಿಕೋಲ್‌ ಅವರ ಆಫರ್‌ ಲೆಟರ್‌ ಬಹಿರಂಗ ಆಗಿತ್ತು. ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದೆ. ಇನ್ನು ಈ ವಿಚಾರಕ್ಕೆ ಅನೇಕರು ಅನೇಕ ರೀತಿಯಲ್ಲಿ ರಿಯಾಕ್ಟ್‌ ಮಾಡಿದ್ದಾರೆ. ಇದು ದೊಡ್ಡ ದೊಡ್ಡ ಕಂಪೆನಿಗಳ ಬೂಟಾಟಿಕೆ ಪ್ರದರ್ಶನ ಎಂದಿದ್ದಾರೆ. ಇತ್ತೀಚೆಗಷ್ಟೇ ಸ್ಟಾರ್‌ಬಕ್ಸ್‌ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ತೊಡೆದುಹಾಕಲು ವಿಶ್ವದಾದ್ಯಂತ ಅಂಗಡಿಗಳಲ್ಲಿ ಕಾಗದದ ಸ್ಟ್ರಾಗಳನ್ನು ಪರಿಚಯಿಸುವ ಮೂಲಕ ಬಹಳ ಸುದ್ದಿಯಾಗಿತ್ತು.

ನಿಕೋಲ್‌ ಆಫರ್‌ ಲೆಟರ್‌ನಲ್ಲೇನಿತ್ತು?

ಆಫರ್ ಲೆಟರ್ ಪ್ರಕಾರ 50 ವರ್ಷದ ನಿಕೋಲ್ ಅವರು ಸ್ಟಾರ್‌ಬಕ್ಸ್‌ನ CEO ಆಗಿ ವಾರ್ಷಿಕವಾಗಿ $1.6 ಮಿಲಿಯನ್ ಮೂಲ ವೇತನ ಪಡೆಯುತ್ತಿದ್ದಾರೆ. ಅವರು ಪ್ರಸ್ತುತ ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿರುವ ಕಂಪನಿಯ ಪ್ರಧಾನ ಕಚೇರಿಗೆ ಸ್ಥಳಾಂತರಗೊಳ್ಳುವ ಅಗತ್ಯವಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ. ಬದಲಾಗಿ, ಅವನು ತನ್ನ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಲು ಅಗತ್ಯವಿರುವಂತೆ ಕಂಪನಿಯ ಪ್ರಧಾನ ಕಚೇರಿಗೆ (ಮತ್ತು ಇತರ ವ್ಯಾಪಾರ ಪ್ರಯಾಣದಲ್ಲಿ ತೊಡಗಿಸಿಕೊಳ್ಳಲು)” ತನ್ನ ನಿವಾಸದಿಂದ ಪ್ರಯಾಣಿಸಲು ಒಪ್ಪಿಕೊಳ್ಳಬೇಕು. ಅದಕ್ಕಾಗಿ ಪ್ರೈವೇಟ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಫರ್‌ ಲೆಟರ್‌ನಲ್ಲಿ ಉಲ್ಲೇಖಿಸಲಾಗಿದೆ.
ಸ್ಟಾರ್‌ಬಕ್ಸ್‌ನ ಹೈಬ್ರಿಡ್ ಕೆಲಸದ ನೀತಿಯ ಪ್ರಕಾರ ನಿಕೋಲ್ ವಾರಕ್ಕೆ ಕನಿಷ್ಠ ಮೂರು ಬಾರಿ ಸಿಯಾಟಲ್ ಕಚೇರಿಯಿಂದ ಕೆಲಸ ಮಾಡುವ ನಿರೀಕ್ಷೆಯಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: Saarthi AI: ಕೆಲ್ಸ ಕಳ್ಕೊಂಡ ಕೋಪಕ್ಕೆ ಬಾಸ್‌ನ ಪಾಸ್‌ಪೋರ್ಟ್‌, ವೀಸಾಕ್ಕೆ ಕನ್ನ- ಉದ್ಯೋಗಿಯ ಕಿತಾಪತಿಗೆ ಬೆಂಗಳೂರು ಸಿಇಒ ಹೈರಾಣ

Continue Reading

ಕ್ರಿಕೆಟ್

Viral News: ಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಟಿ20 ವಿಶ್ವಕಪ್​ ಟ್ರೋಫಿಗೆ ಪೂಜೆ ಸಲ್ಲಿಸಿದ ರೋಹಿತ್​ ಶರ್ಮ, ಜಯ್​ ಶಾ

Viral News: ರೋಹಿತ್​ ಶರ್ಮ(Rohit Sharma) ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(Jay Shah) ಮುಂಬಯಿಯ ಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಟಿ20 ವಿಶ್ವಕಪ್​ ಟ್ರೋಫಿಗೆ ಪೂಜೆ ಸಲ್ಲಿಸಿದ್ದಾರೆ.

VISTARANEWS.COM


on

Viral News
Koo

ಮುಂಬಯಿ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ(t20 world cup 2024) ಭಾರತ ತಂಡ ಕಪ್​ ಗೆದ್ದು ಸರಿ ಸುಮಾರು 2 ತಿಂಗಳು ಕಳೆದಿದೆ. ಇದೀಗ ತಂಡದ ನಾಯಕ ರೋಹಿತ್​ ಶರ್ಮ(Rohit Sharma) ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(Jay Shah) ಮುಂಬಯಿಯ ಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಬುಧವಾರ ಟ್ರೋಫಿಗೆ ಪೂಜೆ ಸಲ್ಲಿಸಿದರು. ಈ ಫೋಟೊ ವೈರಲ್(Viral News)​ ಆಗಿದೆ.

17ನೇ ವರ್ಷಗಳ ಬಳಿಕ ಟಿ20 ವಿಶ್ವಕಪ್(T20 World Cup final)​ ಗೆದ್ದ ಭಾರತ ತಂಡದ ಈ ಅಭೂತಪೂರ್ವ ಗೆಲುವನ್ನು ಅಭಿಮಾನಿಗಳು ದೇಶಾದ್ಯಂತ ಸಂಭ್ರಮದಿಂದ ಆಚರಿಸಿದ್ದರು. ಟಿ20 ವಿಶ್ವಕಪ್(T20 World Cup) ಗೆದ್ದ ಭಾರತ ಕ್ರಿಕೆಟ್ ತಂಡದ ಆಟಗಾರರನ್ನು ಮುಂಬೈಯಲ್ಲಿ ಭರ್ಜರಿಯಾಗಿ ಅಭಿನಂದಿಸಲಾಗಿತ್ತು. ಮರೀನ್ ಡ್ರೈವ್‌ ಪ್ರೇದೇಶದಲ್ಲಿ ಸಾಗರೋಪಾದಿಯಲ್ಲಿ ಜನ ಸೇರಿದ್ದರು.

ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಜೂನ್​ 29ರಂದು ನಡೆದಿದ್ದ ಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ(South Africa vs India) 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್​ಗಳ ಗೆಲುವು ಸಾಧಿಸಿತ್ತು.

ಟೀಮ್​ ಇಂಡಿಯಾ ಬಳಿ ಇರುವುದು ನಕಲಿ ವಿಶ್ವಕಪ್​ ಟ್ರೋಫಿ

ಟೀಮ್​ ಇಂಡಿಯಾ ಭಾರತಕ್ಕೆ ತಂದಿರುವುದು ಡುಪ್ಲಿಕೇಟ್ ಟಿ20 ವಿಶ್ವಕಪ್​ ಟ್ರೋಫಿ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜಿಸುವ ಯಾವುದೇ ವಿಶ್ವಕಪ್​ ಟೂರ್ನಿಯಲ್ಲಿ ಫೋಟೋಶೂಟ್‌ಗೆ ಮಾತ್ರ ಮೂಲ ಟ್ರೋಫಿಯನ್ನು ನೀಡಲಾಗುತ್ತದೆ. ಆ ಬಳಿಕ ಐಸಿಸಿ ವರ್ಷದ ಲಾಂಛನದೊಂದಿಗೆ ನಕಲಿ ಬೆಳ್ಳಿಯ ಟ್ರೋಫಿಯನ್ನು ವಿನ್ಯಾಸಗೊಳಿಸುತ್ತದೆ ಮತ್ತು ಇದರನ್ನು ವಿಜೇತ ತಂಡಕ್ಕೆ ನೀಡಲಾಗುತ್ತದೆ. ಮೂಲ ಟ್ರೋಫಿ ಐಸಿಸಿ ಬಳಿಯೇ ಇರುತ್ತದೆ.

ಅಸಲಿ ಟ್ರೋಫಿ ದುಬೈನಲ್ಲಿರುವ ಐಸಿಸಿ ಕೇಂದ್ರ ಕಚೇರಿಯಲ್ಲಿದೆ. ಫೋಟೋಶೂಟ್​ ನಡೆಸಿದ ಬಳಿಕ ಮೂಲ ಟ್ರೋಫಿಯನ್ನು ಕೇಂದ್ರ ಕಚೇರಿಗೆ ನೀಡಲಾಗುತ್ತದೆ. ಯಾವುದೇ ತಂಡ ಕಪ್ ಗೆದ್ದರೂ ಅದನ್ನು ಸಂಭ್ರಮಾಚರಣೆ ಮತ್ತು ಫೋಟೋ ಸೆಷನ್​ವರೆಗೂ ಮಾತ್ರ ಪ್ರಸ್ತುತಪಡಿಸಲಾಗುತ್ತದೆ. ಅದರ ನಂತರ, ಗೆದ್ದವರು ನಕಲಿ ಟ್ರೋಫಿಯೊಂದಿಗೆ ತವರಿಗೆ ಹಿಂದಿರುಗುತ್ತಾರೆ.

Continue Reading

ಕರ್ನಾಟಕ

Assault Case: ಫುಡ್ ಡೆಲಿವರಿ ಬಾಯ್‌ನ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ; ಸಿಸಿಟಿವಿಯಲ್ಲಿ ಸೆರೆ

Assault Case: ಬೆಂಗಳೂರಿನ ವಿನಾಯಕ ನಗರ ಲೇಔಟ್‌ನಲ್ಲಿ ಜೊಮ್ಯಾಟೊ ಡೆಲಿವರಿ ಬಾಯ್‌ ಮೇಲೆ ಹಲ್ಲೆ ನಡೆದಿದೆ. ಮೂವರು ಯುವಕರು, ಡೆಲಿವರಿ ಬಾಯ್ ಮೇಲೆ ಏಕಾಏಕಿ ಹಲ್ಲೆ ಮಾಡಿ, ಮೊಬೈಲ್ ಹಾಗೂ ಹಣ ದೋಚಿ ಎಸ್ಕೇಪ್ ಆಗಿದ್ದಾರೆ.

VISTARANEWS.COM


on

Assault Case
Koo

ಬೆಂಗಳೂರು: ಫುಡ್ ಡೆಲಿವರಿ ಮಾಡಲು ಬಂದಿದ್ದ ವೇಳೆ ಜೊಮ್ಯಾಟೊ ಡೆಲಿವರಿ ಬಾಯ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ (Assault Case) ನಗರದ ವಿನಾಯಕ ನಗರ ಲೇಔಟ್‌ನಲ್ಲಿ ನಡೆದಿದೆ. ಮಂಗಳವಾರ ಮಧ್ಯೆ ರಾತ್ರಿ 1 ಗಂಟೆ ವೇಳೆ ಡೆಲಿವರಿ ಬಾಯ್‌ ಮೇಲೆ ನಡೆದಿರುವ ಹಲ್ಲೆಯ ವಿಡಿಯೊ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿನಾಯಕ ನಗರ ಲೇಔಟ್‌ನಲ್ಲಿ ಮನೆಯೊಂದರಿಂದ ಹೊರಬರುತ್ತಿದ್ದಾಗ ಡಿಯೋ ಸ್ಕೂಟರ್‌ನಲ್ಲಿ ಹೋದ ಮೂವರು ಯುವಕರು, ಡೆಲಿವರಿ ಬಾಯ್ ಮೇಲೆ ಏಕಾಏಕಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಯುವಕರು ಮಾರಕಾಸ್ತ್ರ ತೆಗೆಯುತ್ತಿದ್ದಂತೆ ಡೆಲಿವರಿ ಬಾಯ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತನನ್ನು ಅಟ್ಟಾಡಿಸಿಕೊಂಡು ಹೋಗಿರುವ ಯುವಕರು, ಮೊಬೈಲ್ ಹಾಗೂ ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಡೆಲಿವರಿ ಬಾಯ್‌ ಮೇಲೆ ನಡೆದ ದಾಳಿ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ | Viral Video: ರೀಲ್ ಶೋಕಿಗಾಗಿ ನಡುರಸ್ತೆಯಲ್ಲಿ ಮಳೆಯಲ್ಲಿ ಮೈಚಳಿ ಬಿಟ್ಟು ಕುಣಿದ ಮಹಿಳೆ!

ಬಸ್‌ನಿಂದ ಆಯತಪ್ಪಿ ಕೆಳಗೆ ಬಿದ್ದು ವಿದ್ಯಾರ್ಥಿ ಸಾವು

ಉಡುಪಿ: ಬಸ್‌ನಿಂದ ಕೆಳಗೆ ಬಿದ್ದು ವಿದ್ಯಾರ್ಥಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ನಡೆದಿದೆ. ಮಾಳ ಗ್ರಾಮದ ಹುಕ್ರಟ್ಟೆಯ ಜನಿತ್ ಶೆಟ್ಟಿ (19) ಮೃತ. ಕಾರ್ಕಳದಿಂದ (Karkala News) ಬಸ್‌ನಲ್ಲಿ ಕಾಲೇಜಿಗೆ ಪ್ರಾಯಾಣಿಸುತ್ತಿದ್ದಾಗ ವಿದ್ಯಾರ್ಥಿ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.

ಮೃತ ಜನಿತ್ ಶೆಟ್ಟಿ ನಿಟ್ಟೆ ವಿದ್ಯಾಸಂಸ್ಥೆಯ ದ್ವಿತೀಯ ಪಿಯು ವಿದ್ಯಾರ್ಥಿಯಾಗಿದ್ದು, ಕಾರ್ಕಳದಿಂದ ಬಸ್‌ನಲ್ಲಿ ಕಾಲೇಜಿಗೆ ಪ್ರಾಯಾಣಿಸುತ್ತಿದ್ದಾಗ ಕೆಳಗೆ ಬಿದ್ದಿದ್ದ. ಈ ವೇಳೆ ಹಿಂಬದಿಯ ಚಕ್ರ ಹರಿದು ಗಂಭೀರ ಗಾಯಗೊಂಡಿದ್ದ. ತಕ್ಷಣ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಜನಿತ್ ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿ ತಾಯಿ ಮತ್ತು ತಂಗಿಯನ್ನು ಅಗಲಿದ್ದಾನೆ.

ಫೇಸ್‌ಬುಕ್ ಸುಂದರಿ ಹಿಂದೆ ಬಿದ್ದು 1.4 ಲಕ್ಷ ಕಳೆದುಕೊಂಡ ಪುರೋಹಿತ!

ಮಂಡ್ಯ: ಫೇಸ್‌ಬುಕ್ ಸುಂದರಿ ಹಿಂದೆ ಬಿದ್ದ ಪುರೋಹಿತನಿಗೆ ಪಂಗನಾಮ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸುಂದರಿ ಮಾತಿಗೆ ಮರುಳಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡ (Fraud Case) ಅರ್ಚಕ, ಇದೀಗ ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ‌ ವಿಜಯ್ ಕುಮಾರ್ ಹಣ ಕಳೆದುಕೊಂಡವರು. ಕುಟುಂಬದಿಂದ ದೂರವಾಗಿ ಅರ್ಚಕ ಒಬ್ಬರೇ ವಾಸಿಸುತ್ತಿದ್ದು, ಇವರಿಗೆ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಸಿರಿ ಶ್ರೇಷ ಸರಿತಾ ಎಂಬ ಸುಂದರಿ ಪರಿಚಯವಾಗಿದ್ದಾಳೆ. ಹೀಗಾಗಿ ಆಕೆ ಜತೆ ಪ್ರತಿ ದಿನ ವಿಜಯ್ ಕುಮಾರ್ ಚಾಟಿಂಗ್ ಮಾಡುತ್ತಿದ್ದರು.

ವಿಜಯ್ ಕುಮಾರ್ ಬಗ್ಗೆ ತಿಳಿದುಕೊಂಡ ಯುವತಿ, ವಸತಿ, ಆರೋಗ್ಯ ಸಮಸ್ಯೆ ಅಂತ ಹೇಳಿ ಹಂತ ಹಂತವಾಗಿ ಹಣ ಪೀಕಿದ್ದಾಳೆ. ಈ ರೀತಿ ಸುಮಾರು 1 ಲಕ್ಷದ 40 ಸಾವಿರದಷ್ಟು ಹಣವನ್ನು ಸುಂದರಿ ಪಡೆದಿದ್ದಾಳೆ. ಬಣ್ಣ ಬಣ್ಣದ ಮಾತುಗಳಿಂದ ವಿಜಯ್ ಕುಮಾರ್‌ಗೆ ಬಲೆ ಹಾಕಿದ ಸುಂದರಿ ಮಾತು ನಂಬಿ ಫೋನ್ ಪೇ ಮೂಲಕ ವಿಜಯ್ ಹಣ‌ ಕಳುಹಿಸಿದ್ದರು. ಹಣ ಕೊಟ್ಟ ಬಳಿಕ ಭೇಟಿ ಆಗುವಂತೆ ಸುಂದರಿಗೆ ವಿಜಯ್ ಒತ್ತಾಯ ಮಾಡಿದ್ದಾರೆ. ಆದರೆ, ಇಂದು, ನಾಳೆ ಎಂದು ಫೇಸ್‌ಬುಕ್‌ ಬ್ಲಾಕ್ ಮಾಡಿ ಎಸ್ಕೇಪ್ ಆಗಿದ್ದಾಳೆ.

ಸುಂದರಿ ಮಾಯವಾದ ಬಳಿಕ ತಾನು ಮೋಸ ಹೋಗಿರುವ ಬಗ್ಗೆ ವಿಜಯ್ ಕುಮಾರ್‌ಗೆ ಮನವರಿಕೆಯಾಗಿದ್ದು, ಹಣ ವಾಪಸ್ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಮಂಡ್ಯದ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದ್ದು, ಈ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.

Kolkata Doctor Murder Case: ಕೋಲ್ಕತಾ ವೈದ್ಯೆಯ ಅತ್ಯಾಚಾರ- ಕೊಲೆ ಎಸಗುವ ಮುನ್ನ 2 ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಕಾಮುಕ!

ಅರ್ಚಕನಿಗೆ ಮೋಸ ಮಾಡಿರುವ ಯುವತಿಯ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ತೆಲಂಗಾಣದ ಸೋಶಿಯಲ್‌ ಮೀಡಿಯಾ ಸ್ಟಾರ್‌ ಬರ‍್ರೆಲಕ್ಕ ಕರ್ನೆ ಶಿರೀಷಾ ಅವರ ಫೋಟೊ ಇದೆ. ಅಲ್ಲದೇ ಆ ಖಾತೆಯಲ್ಲಿ ಇನ್ನೂ ಅನೇಕ ಯುವತಿಯರ ಫೋಟೊಗಳೂ ಇವೆ. ಹೀಗಾಗಿ ಫೇಕ್‌ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಅರ್ಚಕನಿಗೆ ಮೋಸ ಮಾಡಿದವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Continue Reading

Latest

Viral Video: ರೀಲ್ ಶೋಕಿಗಾಗಿ ನಡುರಸ್ತೆಯಲ್ಲಿ ಮಳೆಯಲ್ಲಿ ಮೈಚಳಿ ಬಿಟ್ಟು ಕುಣಿದ ಮಹಿಳೆ!

Viral Video: ರೀಲ್ಸ್ ಮಾಡಲು ರಸ್ತೆ ಮಧ್ಯದಲ್ಲಿ ಡ್ಯಾನ್ಸ್ ಮಾಡುವುದು, ಸ್ಟಂಟ್ ಮಾಡುವುದು, ಎತ್ತರದ ಕಟ್ಟಡಗಳಿಂದ ಜಿಗಿಯುವುದು ಈಗಿನವರಿಗೆ ಕ್ರೇಜ್ ಆಗಿದೆ. ಅಂತಹದ್ದೇ ಒಂದು ಘಟನೆ ಈಗ ನಡೆದಿದೆ. ಈ ವೈರಲ್ ವಿಡಿಯೊದಲ್ಲಿ, ಬಿಳಿ ಮತ್ತು ಹಸಿರು ಬಟ್ಟೆ ಧರಿಸಿದ ಮಹಿಳೆಯೊಬ್ಬರು ಮಳೆಯ ನಡುವೆ ಜನನಿಬಿಡ ರಸ್ತೆಯಲ್ಲಿ ಹರ್ಯಾನ್ವಿ ಹಾಡಿಗೆ ಮೈ ಚಳಿ ಬಿಟ್ಟು ನರ್ತಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

VISTARANEWS.COM


on

Viral Video
Koo


ರೀಲ್‍ಗಳನ್ನು ಮಾಡುವ ಹುಚ್ಚು ಯುವಜನರಲ್ಲಿ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಲು ರೀಲ್ಸ್ ತಯಾರಿಸುವುದರಲ್ಲೇ ಅವರು ಮಗ್ನರಾಗಿರುತ್ತಾರೆ. ಅದರಿಂದಾಗುವ ಅಪಾಯದ ಬಗ್ಗೆ ಅವರಿಗೆ ಯಾವುದೇ ಅರಿವು ಇರುವುದಿಲ್ಲ. ರೀಲ್ಸ್ ಮಾಡಲು ಅವರು ರಸ್ತೆ ಮಧ್ಯದಲ್ಲಿ ಡ್ಯಾನ್ಸ್ ಮಾಡುವುದು, ಸ್ಟಂಟ್ ಮಾಡುವುದು, ಎತ್ತರದ ಕಟ್ಟಡಗಳಿಂದ ಜಿಗಿಯುವುದು ಹೀಗೆ ಅನೇಕ ಅಪಾಯಕಾರಿ ಕೃತ್ಯಗಳಲ್ಲಿ ತೊಡಗುತ್ತಾರೆ. ಇದೀಗ ರೀಲ್ಸ್ ಮಾಡುವುದಾಗಿ ಮಹಿಳೆಯೊಬ್ಬಳು ನಡುರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಈ ವೈರಲ್ ವಿಡಿಯೊದಲ್ಲಿ, ಬಿಳಿ ಮತ್ತು ಹಸಿರು ಬಟ್ಟೆ ಧರಿಸಿದ ಮಹಿಳೆಯೊಬ್ಬರು ಮಳೆಯ ನಡುವೆ ಜನನಿಬಿಡ ರಸ್ತೆಯಲ್ಲಿ ಹರ್ಯಾನ್ವಿ ಹಾಡಿಗೆ ನೃತ್ಯ ಮಾಡುತ್ತಿದ್ದಾಳೆ. ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊದಲ್ಲಿ, ಮಹಿಳೆ ತನ್ನ ಕಾರಿನಿಂದ ಹೊರಬಂದು, ಅದನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮತ್ತು ತನ್ನ ಸುತ್ತಲೂ ವಾಹನಗಳು ಚಲಿಸುತ್ತಿದ್ದರೂ ತನ್ನ ಬಗ್ಗೆ ಕಾಳಜಿಯಿಲ್ಲದೆ ಡ್ಯಾನ್ಸ್ ಮಾಡುತ್ತಿರುವುದನ್ನು ಸೆರೆಹಿಡಿಯಲಾಗಿದೆ.

ಅವಳು ರೀಲ್ ಮಾಡುವುದರಲ್ಲಿ ಎಷ್ಟು ಮಗ್ನಳಾಗುತ್ತಾಳೆ ಎಂದರೆ ಅವಳು ರಸ್ತೆಯ ಬಳಿ ಇರುವ ಅಪಾಯದ ಗೆರೆಯನ್ನು ದಾಟುತ್ತಾಳೆ, ಆಕೆಗೆ ಇದರ ಬಗ್ಗೆಯೂ ತಿಳಿದಿರುವುದಿಲ್ಲ. ಈ ವಿಡಿಯೊವನ್ನು ಚಿತ್ರೀಕರಿಸಿದ ಸ್ಥಳವು ಇನ್ನೂ ತಿಳಿದಿಲ್ಲ. ಆದರೆ, ಈ ಕ್ಲಿಪ್ ತ್ವರಿತವಾಗಿ ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನ ಸೆಳೆಯಿತು, ಅದರಲ್ಲೂ ಯುಪಿ ಟ್ರಾಫಿಕ್ ಪೊಲೀಸರ ಗಮನಸೆಳೆದ ಈ ವಿಡಿಯೊಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ದಯವಿಟ್ಟು ಅಗತ್ಯ ಕ್ರಮಕ್ಕಾಗಿ ವಾಹನದ ಸಂಖ್ಯೆ, ಸಮಯ, ದಿನಾಂಕ ಮತ್ತು ಸ್ಥಳವನ್ನು ಹಂಚಿಕೊಳ್ಳಿ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ, ಇದು ಅವರು ಈ ವಿಷಯವನ್ನು ತನಿಖೆ ಮಾಡುವ ಉದ್ದೇಶವನ್ನು ಸೂಚಿಸುತ್ತದೆ.

ಇದನ್ನೂ ಓದಿ: ಸೂಪರ್ ಮಾರ್ಕೆಟ್‍ನೊಳಗೇ ಒಳ ಉಡುಪು ಕಳಚಿ ಬ್ರೆಡ್ ಟ್ರೇನಲ್ಲಿಟ್ಟ ಯುವತಿ!

ಈ ವಿಡಿಯೊ 200,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಪ್ಲಾಟ್‍ಫಾರ್ಮ್‍ನಲ್ಲಿ ವಿವಿಧ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. “ಅವರು ಸುಲಭವಾಗಿ ಹಣ ಗಳಿಸಲು ಏನು ಬೇಕಾದರೂ ಮಾಡುತ್ತಾರೆ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬರು “ಇದು ಅಸಹ್ಯಕರವಾಗಿ ಕಾಣುತ್ತದೆ.” ಎಂದು ಕಾಮೆಂಟ್ ಮಾಡಿದ್ದಾರೆ, ಮೂರನೇ ಬಳಕೆದಾರರು, “ಚಲನ್ ನೀಡುವ ಮೂಲಕ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು” ಎಂದು ಸಲಹೆ ನೀಡಿದರು. ರೀಲ್ ತಯಾರಕರಿಗೂ ರಸ್ತೆಯಲ್ಲಿ ಒಂದು ಸ್ಥಳ ಇರಬೇಕು” ಎಂದು ನಾಲ್ಕನೇ ಬಳಕೆದಾರರು ತಮಾಷೆ ಮಾಡಿದ್ದಾರೆ. “ಸಾರ್ವಜನಿಕ ಸ್ಥಳದಲ್ಲಿ ರೀಲ್‍ಗಳನ್ನು ತಯಾರಿಸುವುದನ್ನು ನಿಷೇಧಿಸಬೇಕು” ಎಂದು ಐದನೇ ಬಳಕೆದಾರರು ಸೇರಿಸಿದ್ದಾರೆ.

Continue Reading
Advertisement
Fetus In Baby
ವಿಜ್ಞಾನ37 mins ago

Fetus In Baby: ಏಳು ತಿಂಗಳ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ!

CEAT Cricket Awards
ಕ್ರೀಡೆ40 mins ago

CEAT Cricket Awards: ವರ್ಷದ ಅತ್ಯುತ್ತಮ ಏಕದಿನ ಬ್ಯಾಟರ್​ ಪ್ರಶಸ್ತಿ ಗೆದ್ದ ವಿರಾಟ್​ ಕೊಹ್ಲಿ

Pharma Company Blast
ದೇಶ47 mins ago

Pharma Company Blast: ಫಾರ್ಮಾ ಕಂಪನಿಯಲ್ಲಿ ಭಾರೀ ಬ್ಲಾಸ್ಟ್‌- 17ಮಂದಿ ಬಲಿ; ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಭೀತಿ

Starbucks CEO
ವಿದೇಶ1 hour ago

Starbucks CEO: ಸಿಕ್ರೆ ಇಂಥಾ ಕೆಲ್ಸ ಸಿಗ್ಬೇಕಪ್ಪಾ! 1600 ಕಿ.ಮೀ ದೂರ ಆಫೀಸ್‌..ದಿನಾ ಓಡಾಡೋಕೆ ಕಂಪನಿ ಜೆಟ್‌! ಈತ ಪುಣ್ಯವಂತನೇ ಸರಿ

Viral News
ಕ್ರಿಕೆಟ್2 hours ago

Viral News: ಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಟಿ20 ವಿಶ್ವಕಪ್​ ಟ್ರೋಫಿಗೆ ಪೂಜೆ ಸಲ್ಲಿಸಿದ ರೋಹಿತ್​ ಶರ್ಮ, ಜಯ್​ ಶಾ

ಕರ್ನಾಟಕ2 hours ago

Almatti Dam: ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

Danish Kaneria
ಕ್ರಿಕೆಟ್2 hours ago

Danish Kaneria: ರಕ್ಷಾ ಬಂಧನ ಆಚರಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

Areca nut
ಪರಿಸರ3 hours ago

Areca Nut Price: ವಿದೇಶಿ ಅಕ್ರಮ ಅಡಿಕೆ ಸಾಗಾಣಿಕೆಯಿಂದ ದೇಶಿಯ ಅಡಿಕೆ ದರ ಕುಸಿತ; ರೈತರಲ್ಲಿ ಆತಂಕ

PM Modi Poland Visit
ವಿದೇಶ3 hours ago

PM Modi Poland Visit: ಪೋಲೆಂಡ್‌ಗೆ ಬಂದಿಳಿದ ಪ್ರಧಾನಿ ಮೋದಿ- ಗುಜರಾತಿ ನೃತ್ಯದ ಮೂಲಕ ಭರ್ಜರಿ ಸ್ವಾಗತ

PR Sreejesh
ಕ್ರೀಡೆ3 hours ago

PR Sreejesh: ಹಾಕಿ ದಿಗ್ಗಜ ಶ್ರೀಜೇಶ್​ಗೆ 2 ಕೋಟಿ ಬಹುಮಾನ ಘೋಷಣೆ ಮಾಡಿದ ಕೇರಳ ಸರ್ಕಾರ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌