Honoring to the Ancestors: ಈ ಸಮುದಾಯದ ಜನ ಪ್ರತಿ ವರ್ಷ ಸಮಾಧಿಯಿಂದ ಶವ ಹೊರತೆಗೆದು ಸ್ವಚ್ಛಗೊಳಿಸುತ್ತಾರೆ! - Vistara News

ವಿದೇಶ

Honoring to the Ancestors: ಈ ಸಮುದಾಯದ ಜನ ಪ್ರತಿ ವರ್ಷ ಸಮಾಧಿಯಿಂದ ಶವ ಹೊರತೆಗೆದು ಸ್ವಚ್ಛಗೊಳಿಸುತ್ತಾರೆ!

ಇಂಡೋನೇಷಿಯಾದ ದಕ್ಷಿಣ ಸುಲವೆಸಿಯ ಟೊರಾಜಾ ಪ್ರದೇಶದಲ್ಲಿ ದತೊರಾಜಾ ಸಮುದಾಯದ ಜನರು ಮಾನೆನ್ (Honoring to the Ancestors) ಎಂಬ ಅಸಾಮಾನ್ಯ ಸಂಪ್ರದಾಯವನ್ನು ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದಾರೆ. ಕುಟುಂಬಗಳು ತಮ್ಮ ಸತ್ತ ಸಂಬಂಧಿಕರ ಶವಗಳನ್ನು ಸಮಾಧಿಯಿಂದ ಹೊರತೆಗೆದು ಸ್ವಚ್ಛಗೊಳಿಸುತ್ತಾರೆ. ಪ್ರತಿ ವರ್ಷ ಅಥವಾ ಮೂರು ವರ್ಷ ಅಥವಾ ಐದು ವರ್ಷಗಳಿಗೊಮ್ಮೆ ಆಗಸ್ಟ್‌ನಲ್ಲಿ ಈ ಸಂಪ್ರದಾಯವನ್ನು ನಡೆಸಲಾಗುತ್ತದೆ.

VISTARANEWS.COM


on

Honoring to the Ancestors
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಪ್ರತಿ ವರ್ಷ ಆಗಸ್ಟ್ ನಲ್ಲಿ ಇಂಡೋನೇಷ್ಯಾ (Indonesia) ದತೊರಾಜಾ ಸಮುದಾಯದ (Datoraja community) ಜನರು ಪ್ರತಿ ವರ್ಷ ಆಗಸ್ಟ್ ನಲ್ಲಿ ತಮ್ಮ ಕುಟುಂಬ ಸದಸ್ಯರ ಶವಗಳನ್ನು ಸಮಾಧಿಯಿಂದ ಹೊರತೆಗೆದು ಅವುಗಳನ್ನು ಸ್ವಚ್ಛಗೊಳಿಸಿ, ಬಟ್ಟೆ ಬದಲಾಯಿಸಿ ನೆಚ್ಚಿನ ವಸ್ತುಗಳೊಂದಿಗೆ ಮತ್ತೆ ಸಮಾಧಿಯಲ್ಲಿ ಇರಿಸುವ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದ್ದು, ಇದನ್ನು ‘ಮನೆನ್’ (Honoring to the Ancestors) ಎಂದು ಕರೆಯಲಾಗುತ್ತದೆ. ಇದರಿಂದ ಅವರು ಸಮಾಧಿಯಲ್ಲಿ ನೆಮ್ಮದಿಯಾಗಿ ಇರುತ್ತಾರೆ ಎನ್ನುವುದು ನಂಬಿಕೆ.

ಇಂಡೋನೇಷಿಯಾದ ದಕ್ಷಿಣ ಸುಲವೆಸಿಯ ಟೊರಾಜಾ ಪ್ರದೇಶದಲ್ಲಿ ( Toraja region) ದತೊರಾಜಾ ಸಮುದಾಯದ ಜನರು ಮಾನೆನ್ ಎಂಬ ಅಸಾಮಾನ್ಯ ಸಂಪ್ರದಾಯವನ್ನು ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದಾರೆ.

ಕುಟುಂಬಗಳು ತಮ್ಮ ಸತ್ತ ಸಂಬಂಧಿಕರ ಶವಗಳನ್ನು ಸಮಾಧಿಯಿಂದ ಹೊರತೆಗೆದು ಸ್ವಚ್ಛಗೊಳಿಸುತ್ತಾರೆ. ಪ್ರತಿ ವರ್ಷ ಅಥವಾ ಮೂರು ವರ್ಷ ಅಥವಾ ಐದು ವರ್ಷಗಳಿಗೊಮ್ಮೆ ಆಗಸ್ಟ್‌ನಲ್ಲಿ ಈ ಸಂಪ್ರದಾಯವನ್ನು ನಡೆಸಲಾಗುತ್ತದೆ.

ದತೊರಾಜಾ ಸಮುದಾಯದ ಜನರು ಅಂತ್ಯಕ್ರಿಯೆ ಮತ್ತು ಅನಂತರದ ವಿಧಿಗಳಿಗೆ ಹೆಚ್ಚಿನ ಸಮಯ ಮತ್ತು ಹಣವನ್ನು ವಿನಿಯೋಗಿಸುತ್ತಾರೆ. ಮರಣವು ಅಂತ್ಯವಲ್ಲ ಎಂಬುದಾಗಿ ನಂಬುತ್ತಾರೆ. ಪೂರ್ವಜರ ಆತ್ಮಗಳನ್ನು ಸಮಾಧಾನಪಡಿಸುವುದು ಅವರಿಗೆ ಮುಖ್ಯವಾಗಿದೆ. ಪೂರ್ವಜರು ಅಸಮಾಧಾನಗೊಂಡರೆ ಕಳಪೆ ಭತ್ತದ ಕೊಯ್ಲಿಗೆ ಕಾರಣವಾಗಬಹುದು ಎನ್ನುವುದು ಅವರ ನಂಬಿಕೆ.

ಕುಟುಂಬ ಸದಸ್ಯರು ಸತ್ತ ಬಳಿಕ ಅವರ ದೇಹಗಳನ್ನು ಸುದೀರ್ಘ ಕಾಲದವರೆಗೆ ಮನೆಯಲ್ಲಿ ಇರಿಸುತ್ತಾರೆ. ಅದ್ದೂರಿಯಾಗಿ ಅಂತ್ಯಕ್ರಿಯೆಗಳನ್ನು ನಡೆಸುತ್ತಾರೆ.


ಇದನ್ನೂ ಓದಿ: Worlds Oldest Office Worker: ನಿವೃತ್ತಿ ಬಗ್ಗೆ ಇನ್ನೂ ಯೋಚನೆಯನ್ನೇ ಮಾಡಿಲ್ಲವಂತೆ 94ರ ಈ ಅಜ್ಜಿ!

ದತೊರಾಜಾ ಸಮುದಾಯದ ಜನರು ನಿಧನರಾದ ಜನರ ಶವಗಳನ್ನು ಮನೆಯಲ್ಲಿಯೇ ಇರಿಸುತ್ತಾರೆ. ಕೆಲವೊಮ್ಮೆ ವರ್ಷಗಳವರೆಗೆ ಇಟ್ಟುಕೊಳ್ಳುತ್ತಾರೆ. ಕುಟುಂಬವು ಅಂತ್ಯಕ್ರಿಯೆಗೆ ಸಾಕಷ್ಟು ಹಣವನ್ನು ಹೊಂದಿಸುವವರೆಗೂ ಶವವನ್ನು ಇಟ್ಟುಕೊಳ್ಳುತ್ತಾರೆ. ಅಂತ್ಯಕ್ರಿಯೆಯ ಸಮಾರಂಭಗಳು 12 ದಿನಗಳವರೆಗೆ ನಡೆಯುತ್ತದೆ. ಇದರಲ್ಲಿ ನೂರಾರು ಎಮ್ಮೆ, ಹಂದಿಗಳ ಬಲಿಯನ್ನು ಕೊಡಲಾಗುತ್ತದೆ. ಇಂತಹ ಸಮಾರಂಭಗಳಿಗೆ ನೂರಾರು ಸಾವಿರ ಡಾಲರ್‌ಗಳಷ್ಟು ವೆಚ್ಚವಾಗುವುದು.

ದತೊರಾಜಾ ಸಮುದಾಯದ ಜನರು ಹೆಚ್ಚಾಗಿ ಕ್ರಿಶ್ಚಿಯನ್ನರು. ಅವರ ಅಂತ್ಯಕ್ರಿಯೆಯ ಆಚರಣೆಗಳು ಪುರಾತನವಾದದ್ದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಇಸ್ರೇಲ್ ದಾಳಿಗೆ ನಲುಗಿದ ಇರಾನ್ ಸರ್ವೋಚ್ಚ ನಾಯಕ! ಮುಖ ಸುಟ್ಟು ಮಾತನಾಡಲಾಗದ ಸ್ಥಿತಿಯಲ್ಲಿರುವ ಮೊಜ್ತಬಾ

VISTARANEWS.COM


on

ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿ ಮತ್ತು ಅವರು ಆಡಳಿತ ನಡೆಸುತ್ತಿರುವ ರೀತಿ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಫೆಬ್ರವರಿ 28ರಂದು ನಡೆದ ಅಮೆರಿಕ-ಇಸ್ರೇಲಿ ವೈಮಾನಿಕ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಅವರು, ಪ್ರಸ್ತುತ ‘ನಿಗೂಢ ನಾಯಕ’ನಾಗಿ ಉಳಿದಿದ್ದಾರೆ. ವರದಿಗಳ ಪ್ರಕಾರ, ದಾಳಿಯಲ್ಲಿ ಅವರ ಮುಖ ಮತ್ತು ತುಟಿಗಳು ತೀವ್ರವಾಗಿ ಸುಟ್ಟುಹೋಗಿದ್ದು, ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಸಾಮಾನ್ಯ ಸ್ಥಿತಿಗೆ ಮರಳಲು ಅವರಿಗೆ ಪ್ಲಾಸ್ಟಿಕ್ ಸರ್ಜರಿಯ ಅಗತ್ಯವಿದ್ದು, ಒಂದು ಕಾಲನ್ನು ಕಳೆದುಕೊಂಡಿರುವ ಅವರಿಗೆ ಕೃತಕ ಅಂಗ ಜೋಡಣೆ ಮಾಡಬೇಕಿದೆ.

ದೈಹಿಕವಾಗಿ ಅಶಕ್ತರಾಗಿರುವ ಮೊಜ್ತಬಾ ಅವರು ಇಂದು ‘ಕೈಬರಹದ ಚೀಟಿಗಳ’ ಮೂಲಕ ದೇಶದ ಆಡಳಿತ ನಡೆಸುತ್ತಿರುವುದು ಬೆಚ್ಚಿಬೀಳಿಸುವ ಸಂಗತಿಯಾಗಿದೆ. ಡಿಜಿಟಲ್ ಯುಗದಲ್ಲೂ ಭದ್ರತಾ ಕಾರಣಗಳಿಂದಾಗಿ ಅವರು ಯಾವುದೇ ತಂತ್ರಜ್ಞಾನ ಬಳಸದೆ, ಮೊಹರು ಮಾಡಿದ ಚೀಟಿಗಳ ಮೂಲಕ ಮಿಲಿಟರಿ ಕಮಾಂಡರ್‌ಗಳಿಗೆ ಆದೇಶ ನೀಡುತ್ತಿದ್ದಾರೆ. ಇಸ್ರೇಲ್ ತನ್ನನ್ನು ಪತ್ತೆಹಚ್ಚಿ ಕೊಲ್ಲಬಹುದು ಎಂಬ ಭೀತಿಯಿಂದ ಅವರು ಅತ್ಯಂತ ರಹಸ್ಯ ಸ್ಥಳದಲ್ಲಿದ್ದು, ದೇಶದ ಪ್ರಮುಖ ಸಚಿವರು ಅಥವಾ ಹಿರಿಯ ಅಧಿಕಾರಿಗಳಿಗೂ ಅವರ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ. ಈ ನಿಗೂಢತೆಯು ಇರಾನ್ ಆಡಳಿತ ವ್ಯವಸ್ಥೆಯಲ್ಲಿ ಭಾರಿ ಗೊಂದಲ ಮೂಡಿಸಿದೆ.

ಸರ್ವೋಚ್ಚ ನಾಯಕ ಸಕ್ರಿಯವಾಗಿ ಲಭ್ಯವಿಲ್ಲದ ಕಾರಣ ಇರಾನ್ ನಾಯಕತ್ವದೊಳಗೆ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ದೇಶದ ಪ್ರಮುಖ ನಿರ್ಧಾರಗಳನ್ನು ಪ್ರಸ್ತುತ ಮಿಲಿಟರಿ ನಾಯಕರು ತೆಗೆದುಕೊಳ್ಳುತ್ತಿದ್ದು, ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ವಿದೇಶಾಂಗ ಸಚಿವರು ಅಮೆರಿಕದೊಂದಿಗಿನ ಸಂಧಾನದ ವಿಚಾರದಲ್ಲಿ ಭಿನ್ನಾಭಿಪ್ರಾಯ ಎದುರಿಸುತ್ತಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಮೊಜ್ತಬಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆಯೇ ಅಥವಾ ಇರಾನ್ ಸಂಪೂರ್ಣವಾಗಿ ಮಿಲಿಟರಿ ಆಡಳಿತಕ್ಕೆ ಒಳಗಾಗುತ್ತದೆಯೇ ಎಂಬುದು ಈಗ ಜಾಗತಿಕ ಮಟ್ಟದ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

Continue Reading

Latest

ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಭಾರತಕ್ಕೆ ಅವಮಾನ: ಭಾರತ-ಚೀನಾ ‘ನರಕ’ ಎಂದ ಮೈಕೆಲ್ ಸ್ಯಾವೇಜ್ ಪೋಸ್ಟ್ ಹಂಚಿಕೊಂಡ ಅಧ್ಯಕ್ಷ

VISTARANEWS.COM


on

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಚೀನಾ ರಾಷ್ಟ್ರಗಳ ವಿರುದ್ಧ ಮತ್ತೊಮ್ಮೆ ವಿವಾದಾತ್ಮಕ ಧೋರಣೆ ತಳೆದಿದ್ದಾರೆ. ಅಮೆರಿಕದ ರಾಜಕೀಯ ನಿರೂಪಕ ಮೈಕೆಲ್ ಸ್ಯಾವೇಜ್ ಅವರ ‘ಜನಾಂಗೀಯ ನಿಂದನೆ’ಯಿಂದ ಕೂಡಿದ ಪಾಡ್‌ಕಾಸ್ಟ್ ಅನ್ನು ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಪ್ಲಾಟ್‌ಫಾರ್ಮ್‌ನಲ್ಲಿ ಮರುಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸ್ಯಾವೇಜ್, ಭಾರತ ಮತ್ತು ಚೀನಾವನ್ನು “ಭೂಮಿಯ ಮೇಲಿನ ನರಕಗಳು” ಎಂದು ಬಣ್ಣಿಸಿದ್ದು, ಈ ದೇಶಗಳ ಜನರು ಕೇವಲ ಪೌರತ್ವ ಪಡೆಯುವ ಉದ್ದೇಶದಿಂದ ಅಮೆರಿಕಕ್ಕೆ ಬರುತ್ತಾರೆ ಎಂದು ಹೀಯಾಳಿಸಿದ್ದಾರೆ. ಇದು ಅನಿವಾಸಿ ಭಾರತೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮೈಕೆಲ್ ಸ್ಯಾವೇಜ್ ತಮ್ಮ ಹೇಳಿಕೆಯಲ್ಲಿ, ಏಷ್ಯಾದ ರಾಷ್ಟ್ರಗಳ ಗರ್ಭಿಣಿಯರು “ಒಂಬತ್ತನೇ ತಿಂಗಳಲ್ಲಿ ಮಗುವನ್ನು ಹಡೆಯಲು” ಅಮೆರಿಕಕ್ಕೆ ಬರುತ್ತಾರೆ ಮತ್ತು ಇಲ್ಲಿ ಮಗು ಜನಿಸಿದ ತಕ್ಷಣ ಅಮೆರಿಕದ ನಾಗರಿಕರನ್ನಾಗಿ ಮಾಡಲಾಗುತ್ತದೆ. ನಂತರ ಅವರು ತಮ್ಮ ಇಡೀ ಕುಟುಂಬವನ್ನು “ಭಾರತ ಅಥವಾ ಚೀನಾದಂತಹ ನರಕದಿಂದ” ಇಲ್ಲಿಗೆ ಕರೆತರುತ್ತಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಭಾರತೀಯ ವಲಸಿಗರನ್ನು “ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು” ಎಂದು ಕರೆದಿರುವ ಅವರು, ಈ ವಲಸಿಗರು ಅಮೆರಿಕದ ಧ್ವಜದ ಮೇಲೆ ಕಾಲಿಟ್ಟಿದ್ದಾರೆ ಮತ್ತು ದೇಶವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಅತಿರೇಕದ ಜನಾಂಗೀಯ ಕಾಮೆಂಟ್ ಮಾಡಿದ್ದಾರೆ.

ಈ ಬೆಳವಣಿಗೆಯು ಟ್ರಂಪ್ ಅವರ ‘ಜನ್ಮಸಿದ್ಧ ಪೌರತ್ವ’ (Birthright Citizenship) ರದ್ದತಿ ಅಭಿಯಾನದ ಭಾಗವಾಗಿದೆ. ಅಮೆರಿಕದ ಸಂವಿಧಾನದ 14ನೇ ತಿದ್ದುಪಡಿಯ ಅಡಿಯಲ್ಲಿ ನೆಲದಲ್ಲಿ ಜನಿಸಿದವರಿಗೆ ಸಿಗುವ ಸ್ವಯಂಚಾಲಿತ ಪೌರತ್ವವನ್ನು ಕೊನೆಗೊಳಿಸಲು ಟ್ರಂಪ್ ಕಾರ್ಯಕಾರಿ ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಈ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿದ್ದು, ಟ್ರಂಪ್ ಸುಳ್ಳು ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಜಗತ್ತಿನಲ್ಲಿ ಅಮೆರಿಕ ಮಾತ್ರ ಪೌರತ್ವ ನೀಡುತ್ತದೆ ಎಂದು ಟ್ರಂಪ್ ಹೇಳಿದ್ದರೂ, ವಾಸ್ತವದಲ್ಲಿ ಕೆನಡಾ, ಮೆಕ್ಸಿಕೋ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ದೇಶಗಳಲ್ಲಿ ಈ ಕಾನೂನು ಜಾರಿಯಲ್ಲಿದೆ.

Continue Reading

Latest

ನೇಪಾಳದಲ್ಲಿ ‘ರ‍್ಯಾಪರ್’ ಪ್ರಧಾನಿ ಬಾಲೆನ್ ಶಾ ಕ್ರಾಂತಿ: ಭ್ರಷ್ಟಾಚಾರಕ್ಕೆ ಜಾಗವಿಲ್ಲ, ಆರೋಪ ಕೇಳಿಬಂದ 26 ದಿನಕ್ಕೇ ಇಬ್ಬರು ಸಚಿವರ ಔಟ್!

VISTARANEWS.COM


on

ಕಠ್ಮಂಡು: ದಕ್ಷಿಣ ಏಷ್ಯಾದ ರಾಜಕಾರಣದಲ್ಲಿ ಹಿರಿಯ ನಾಯಕರ ನಡುವೆ 35 ವರ್ಷದ ಯುವ ರ‍್ಯಾಪರ್-ರಾಜಕಾರಣಿ ಬಾಲೆನ್ ಶಾ (Balen Shah) ಹೊಸ ಮನ್ವಂತರ ಸೃಷ್ಟಿಸುತ್ತಿದ್ದಾರೆ. ನೇಪಾಳದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳೊಳಗೆ, ತಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಕ್ಕೆ ಕಿಂಚಿತ್ತೂ ಅವಕಾಶವಿಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಮಂತ್ರಿಗಳ ಮೇಲೆ ಸಣ್ಣ ಆರೋಪ ಕೇಳಿಬಂದರೂ ಸಹನೆ ತೋರದೆ, ಕೇವಲ 26 ದಿನಗಳ ಅವಧಿಯಲ್ಲಿ ಇಬ್ಬರು ಪ್ರಭಾವಿ ಸಚಿವರ ರಾಜೀನಾಮೆ ಪಡೆಯುವ ಮೂಲಕ ಬಾಲೆನ್ ಶಾ ಭಾರತದಂತಹ ನೆರೆರಾಷ್ಟ್ರಗಳ ರಾಜಕಾರಣಿಗಳಿಗೂ ಮಾದರಿ ಎನಿಸುವಂತಹ ಕಠಿಣ ಸಂದೇಶ ರವಾನಿಸಿದ್ದಾರೆ.

ಸಾಮಾನ್ಯವಾಗಿ ರಾಜಕೀಯದಲ್ಲಿ ಆರೋಪಗಳು ಕೇಳಿಬಂದಾಗ ನಾಯಕರು ತಮ್ಮ ಸಚಿವರನ್ನು ಸಮರ್ಥಿಸಿಕೊಳ್ಳುವುದು ಅಥವಾ ತನಿಖೆ ಮುಗಿಯುವವರೆಗೆ ಕಾಯುವುದು ವಾಡಿಕೆ. ಆದರೆ ಬಾಲೆನ್ ಶಾ ಸರ್ಕಾರದಲ್ಲಿ ‘ನೈತಿಕತೆ’ಗೆ ಮೊದಲ ಆದ್ಯತೆ ನೀಡಲಾಗಿದೆ. ತಮ್ಮ ಕಚೇರಿಯನ್ನು ದುರುಪಯೋಗಪಡಿಸಿಕೊಂಡ ಆರೋಪ ಎದುರಿಸಿದ ಕಾರ್ಮಿಕ ಸಚಿವ ದೀಪಕ್ ಕುಮಾರ್ ಸಾ ಅವರನ್ನು ಪ್ರಮಾಣವಚನ ಸ್ವೀಕರಿಸಿದ ಕೇವಲ 13 ದಿನಕ್ಕೆ ವಜಾಗೊಳಿಸಲಾಯಿತು. ಅದರ ಬೆನ್ನಲ್ಲೇ, ವೈಯಕ್ತಿಕ ವ್ಯವಹಾರಗಳ ಬಗ್ಗೆ ಪ್ರಶ್ನೆ ಎದುರಾದಾಗ ಗೃಹ ಸಚಿವ ಸುಡಾನ್ ಗುರುಂಗ್ ಅವರೇ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ್ದು, “ಸ್ಥಾನಕ್ಕಿಂತ ನೈತಿಕತೆ ದೊಡ್ಡದು” ಎಂಬ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಇದು ಅಧಿಕಾರಕ್ಕಾಗಿ ಅಂಟಿ ಕುಳಿತುಕೊಳ್ಳುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆಯಾಗಿದೆ.

ಬಾಲೆನ್ ಶಾ ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಕ್ಷವು (RSP) ಜನರಲ್ಲಿ ಸುಧಾರಣೆಯ ಭರವಸೆ ಮೂಡಿಸಿದ್ದರೂ, ಪ್ರಸ್ತುತ ದೇಶವು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. ಇಂಧನ ಬೆಲೆ ಏರಿಕೆ ಮತ್ತು ಭಾರತದ ಗಡಿಯಿಂದ ಬರುವ ಸರಕುಗಳ ಮೇಲಿನ ಕಟ್ಟುನಿಟ್ಟಿನ ಸುಂಕದ ನೀತಿ ಜನರಲ್ಲಿ ಅಸಮಾಧಾನ ಮೂಡಿಸಿರುವುದು ನಿಜ. ಆದರೆ, ಆಡಳಿತದಲ್ಲಿ ಪಾರದರ್ಶಕತೆ ತರಲು ಅವರು ತೋರುತ್ತಿರುವ ಧೈರ್ಯ ಮತ್ತು ಭ್ರಷ್ಟರನ್ನು ತಕ್ಷಣವೇ ಸಂಪುಟದಿಂದ ಹೊರಹಾಕುವ ಅವರ “ಝೀರೋ ಟಾಲರೆನ್ಸ್” ನೀತಿ ಯುವ ಪೀಳಿಗೆಯ ಮೆಚ್ಚುಗೆಗೆ ಪಾತ್ರವಾಗಿದೆ. ಹಳೆಯ ರಾಜಕೀಯ ವ್ಯವಸ್ಥೆಯನ್ನು ಬುಡಮೇಲು ಮಾಡಿ ಸ್ವಚ್ಛ ಆಡಳಿತ ನೀಡಲು ಹೊರಟಿರುವ ಈ Gen Z ನಾಯಕನ ನಡೆ ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

Continue Reading

Latest

ಇರಾನ್ ಮೇಲಿನ ದಾಳಿ ಸದ್ಯಕ್ಕೆ ಸ್ಥಗಿತ: ಪಾಕ್ ಮಧ್ಯಸ್ಥಿಕೆಗೆ ಟ್ರಂಪ್ ಸಮ್ಮತಿ

VISTARANEWS.COM


on

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಸ್ಫೋಟಕ ಹಂತ ತಲುಪಿರುವಾಗಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ದಾಳಿಯನ್ನು ಸದ್ಯಕ್ಕೆ ತಡೆಹಿಡಿಯುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಹಿಂದೆ ಘೋಷಿಸಲಾಗಿದ್ದ ಕದನ ವಿರಾಮದ ಅವಧಿ ಬುಧವಾರಕ್ಕೆ ಅಂತ್ಯಗೊಂಡಿದ್ದರೂ, ರಾಜತಾಂತ್ರಿಕತೆಗೆ ಮತ್ತೊಂದು ಅವಕಾಶ ನೀಡುವ ಸಲುವಾಗಿ ಟ್ರಂಪ್ ಈ ಕ್ರಮಕ್ಕೆ ಮುಂದಾಗಿದ್ದಾರೆ. ಇರಾನ್ ಕಡೆಯಿಂದ ಅಧಿಕೃತ ಮತ್ತು ಏಕೀಕೃತ ಸಂಧಾನದ ಪ್ರಸ್ತಾಪ ಬರುವವರೆಗೆ ಅಮೆರಿಕದ ಸೇನೆ ಯಾವುದೇ ಆಕ್ರಮಣ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಅಮೆರಿಕದ ಪಡೆಗಳು ಯಾವುದೇ ಕ್ಷಣದಲ್ಲಿ ಯುದ್ಧಕ್ಕೆ ಸಜ್ಜಾಗಿರುವಂತೆ ಕಟ್ಟುನಿಟ್ಟಿನ ಆದೇಶವನ್ನೂ ನೀಡಿದ್ದಾರೆ.

ಈ ಅನಿರೀಕ್ಷಿತ ಬೆಳವಣಿಗೆಯ ಹಿಂದೆ ಪಾಕಿಸ್ತಾನದ ರಾಜತಾಂತ್ರಿಕ ಪ್ರಯತ್ನಗಳು ಪ್ರಮುಖ ಪಾತ್ರ ವಹಿಸಿವೆ. ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರು ಟ್ರಂಪ್ ಅವರನ್ನು ಸಂಪರ್ಕಿಸಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಕಾಲಾವಕಾಶ ಕೋರಿದ್ದರು. ಪಾಕಿಸ್ತಾನದ ಈ ವಿಶೇಷ ಮನವಿಯನ್ನು ಪುರಸ್ಕರಿಸಿದ ಟ್ರಂಪ್, ತಮ್ಮ ‘ಟ್ರುತ್ ಸೋಶಿಯಲ್’ ಪ್ಲಾಟ್ ಫಾರ್ಮ್ ಮೂಲಕ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಇರಾನ್ ಮಂಡಿಸಲಿರುವ ಹೊಸ ಪ್ರಸ್ತಾಪವು ತಾರ್ಕಿಕ ಅಂತ್ಯ ಕಾಣುವವರೆಗೆ ದಾಳಿಯನ್ನು ತಡೆಹಿಡಿಯಲಾಗಿದೆ, ಇದು ಇರಾನ್‌ಗೆ ನೀಡಲಾದ ಕೊನೆಯ ಅವಕಾಶ ಎಂಬ ಸೂಚನೆಯೂ ಇದರಲ್ಲಿದೆ.

ಮತ್ತೊಂದೆಡೆ, ಆರ್ಥಿಕವಾಗಿ ಇರಾನ್ ಅನ್ನು ಕಟ್ಟಿಹಾಕಲು ಟ್ರಂಪ್ ‘ಹಾರ್ಮುಜ್ ಜಲಸಂಧಿ’ಯನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಜಾಗತಿಕ ತೈಲ ವ್ಯಾಪಾರದ ಆಯಕಟ್ಟಿನ ಪ್ರದೇಶವಾದ ಈ ಮಾರ್ಗಕ್ಕೆ ಅಮೆರಿಕ ನೌಕಾಪಡೆಯು ದಿಗ್ಬಂಧನ ವಿಧಿಸಿರುವುದರಿಂದ ಇರಾನ್‌ನ ದಿನಕ್ಕೆ 500 ಮಿಲಿಯನ್ ಡಾಲರ್ ಆದಾಯಕ್ಕೆ ಕತ್ತರಿ ಬಿದ್ದಿದೆ. ಇರಾನ್ ತನ್ನ ಅಸಹಾಯಕತೆಯನ್ನು ಮುಚ್ಚಿಕೊಳ್ಳಲು ತಾನೇ ಜಲಸಂಧಿ ಮುಚ್ಚಿರುವುದಾಗಿ ಹೇಳಿಕೊಳ್ಳುತ್ತಿದ್ದರೂ, ವಾಸ್ತವದಲ್ಲಿ ಅಮೆರಿಕದ ಬಿಗಿ ಹಿಡಿತದಿಂದಾಗಿ ಆ ದೇಶ ಕಂಗೆಟ್ಟಿದೆ. ಈ ಆರ್ಥಿಕ ಸಂಕಷ್ಟವೇ ಇರಾನ್ ಅನ್ನು ಮಾತುಕತೆಯ ಮೇಜಿಗೆ ಬರುವಂತೆ ಮಾಡಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

Continue Reading
Advertisement
Latest16 minutes ago

ಹುಯ್ಯಲೆದೆಯಂತೆ ಇವತ್ತು ಗುಡುಗು ಸಹಿತ ಆಲಿಕಲ್ಲು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

Latest17 minutes ago

ಎಸ್‌.ಟಿ. ಸಮುದಾಯಕ್ಕೆ ಶೇ.17 ಮೀಸಲಾತಿ ಉಳಿಸಿಕೊಳ್ಳಲು ಹೋರಾಟ ನಡೆಸಿ; ಕಾಂಗ್ರೆಸ್‌ ಸರ್ಕಾರಕ್ಕೆ ಬಿ.ವೈ. ವಿಜಯೇಂದ್ರ ಆಗ್ರಹ

Latest36 minutes ago

ಇದು ಕದನ ವಿರಾಮವೇ?; ಹೊರ್ಮುಜ್‌ನಲ್ಲಿ ಇರಾನ್‌ನ ಮತ್ತೊಂದು ಹಡಗಿಗೆ ತಡೆಯೊಡ್ಡಿದ ಅಮೆರಿಕ

Latest49 minutes ago

ಹೊಸ ರಾಜಕೀಯ ಪಕ್ಷ ಘೋಷಿಸಿದ ಕೆಸಿಆರ್ ಪುತ್ರಿ ಕೆ.ಕವಿತಾ; ಪಕ್ಷದ ಹೆಸರು TRS

Latest1 hour ago

ಇ-ಗಸ್ತು ಪರಿಣಾಮಕಾರಿಯಾಗಿ ಬಳಸಿ ವನ್ಯಜೀವಿ ದಾಳಿ ತಪ್ಪಿಸಿ: ಈಶ್ವರ ಖಂಡ್ರೆ ಕರೆ

Latest19 hours ago

ಇನ್ನು ಮುಂದೆ ಒಳಮೀಸಲಾತಿ ಅನ್ವಯ ಹುದ್ದೆಗಳ ಭರ್ತಿ: ಸಿಎಂ ಸಿದ್ದರಾಮಯ್ಯ ಘೋಷಣೆ

Latest19 hours ago

29 ವರ್ಷಗಳ ‘ನೋ ಕಿಸ್ ಪಾಲಿಸಿ’ ಮುರಿದ ಕಾಜೋಲ್: ಆ ಒಂದು ದೃಶ್ಯಕ್ಕಾಗಿ ಕಟ್ಟುನಿಟ್ಟಿನ ನಿಯಮ ಬದಿಗಿಟ್ಟಿದ್ದೇಕೆ?

Latest19 hours ago

ಒಳ ಮೀಸಲಾತಿ ಹಂಚಿಕೆ: ಎಡಗೈ, ಬಲಗೈ ಜಾತಿಗಳಿಗೆ ತಲಾ ಶೇ. 5.25 ಸ್ಪೃಶ್ಯ ಜಾತಿಗೆ ಶೇ.4.5 ಹಂಚಿಕೆ; ಸಚಿವ ಸಂಪುಟ ಮಹತ್ವದ ನಿರ್ಧಾರ

Latest20 hours ago

ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ, ಬಿಸಿನೆಸ್‌ನಲ್ಲೂ ಸಚಿನ್ ಅವರದ್ದೇ ಸಿಕ್ಸರ್! ತೆಂಡೂಲ್ಕರ್‌ ಒಟ್ಟು ಆಸ್ತಿ ಎಷ್ಟು ಗೊತ್ತಾ?

Latest20 hours ago

ಇಂಜಿನಿಯರಿಂಗ್‌ ಶುಲ್ಕ: ಅಂತಿಮ ನಿರ್ಧಾರ ಮಾಡಿಲ್ಲ: ಸಚಿವ ಡಾ. ಎಂ.ಸಿ. ಸುಧಾಕರ್‌

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌