7th pay commission: ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ವೇತನ ಶ್ರೇಣಿ ಪ್ರಕಟ; ಯಾರಿಗೆ ಎಷ್ಟು ಏರಿಕೆ? - Vistara News

ಕರ್ನಾಟಕ

7th pay commission: ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ವೇತನ ಶ್ರೇಣಿ ಪ್ರಕಟ; ಯಾರಿಗೆ ಎಷ್ಟು ಏರಿಕೆ?

7th pay commission: ರಾಜ್ಯ 7ನೇ ವೇತನ ಆಯೋಗದ ಶಿಫಾರಸುಗಳ ಅನ್ವಯ ಪರಿಷ್ಕೃತ ಮುಖ್ಯ ವೇತನ ಶ್ರೇಣಿ ಮತ್ತು 25 ಪರಿಷ್ಕೃತ ಸ್ಥಾಯಿ ವೇತನ ಶ್ರೇಣಿಗಳನ್ನು, ವೇತನ ಸಂಬಂಧಿತ ಭತ್ಯೆಗಳು ಮತ್ತು ಪರಿಷ್ಕೃತ ಪಿಂಚಣಿಯನ್ನು ಅನುಷ್ಠಾನಗೊಳಿಸಿ ಸರ್ಕಾರದ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.

VISTARANEWS.COM


on

7th pay commission
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಪರಿಷ್ಕರಿಸಲು ರಚನೆ ಮಾಡಿದ್ದ ರಾಜ್ಯ 7ನೇ ವೇತನ ಆಯೋಗದ (7th Pay Commission) ಶಿಫಾರಸುಗಳನ್ನು ಆ.1ರಿಂದ ಜಾರಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಇದೀಗ ಪರಿಷ್ಕೃತ ಮುಖ್ಯ ವೇತನ ಶ್ರೇಣಿ ಮತ್ತು 25 ಪರಿಷ್ಕೃತ ಸ್ಥಾಯಿ ವೇತನ ಶ್ರೇಣಿಗಳನ್ನು, ವೇತನ ಸಂಬಂಧಿತ ಭತ್ಯೆಗಳು ಮತ್ತು ಪರಿಷ್ಕೃತ ಪಿಂಚಣಿಯನ್ನು ಅನುಷ್ಠಾನಗೊಳಿಸಿ ಸರ್ಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ.ರೇಜು ಆದೇಶ ಹೊರಡಿಸಿದ್ದು, ಯಾರಿಗೆ ಎಷ್ಟು ವೇತನ ಹೆಚ್ಚಾಗಲಿದೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

2022ರ ನ.19ರಂದು ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳು ಹಾಗೂ ಪಿಂಚಣಿ ಪರಿಷ್ಕರಣೆ ಕುರಿತಂತೆ ತನ್ನ ವರದಿಯನ್ನು ಸಲ್ಲಿಸಿತ್ತು. 7ನೇ ರಾಜ್ಯ ವೇತನ ಆಯೋಗವು ಶಿಫಾರಸು ಮಾಡಿರುವ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ಜುಲೈ 1ರಿಂದ ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.

1. ಪರಿಷ್ಕೃತ ವೇತನ ಶ್ರೇಣಿಗಳು

ಔದ್ಯಮಿಕ ಕೆಲಸಗಾರರ ಅಖಿಲ ಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (ಸಾಮಾನ್ಯ) 361.704 (ಆಧಾರ ವರ್ಷ 2001=100) ಅಂಶಗಳ ಸೂಚ್ಯಂಕ ಸರಾಸರಿಯಿಂದ ನಿರೂಪಿಸಲಾದ 2022ರ ಜುಲೈ 1ರ ಜೀವನ ಪರಿಸ್ಥಿತಿ ವೆಚ್ಚಕ್ಕೆ ಪರಿಷ್ಕೃತ ವೇತನ ಶ್ರೇಣಿಗಳು ಹೊಂದಿಕೊಂಡಿರುತ್ತವೆ.

ಪರಿಷ್ಕೃತ ವೇತನ ಶ್ರೇಣಿಗಳು ಮುಖ್ಯ ವೇತನ ಶ್ರೇಣಿ ರೂ.27000-650-29600-725- 32500-800-35700-900-39300-1000-43300-1125-47800-1250-52800-1375-58300- 1500-64300-1650-74200-1900-85600-2300-99400-2700-115600-3100-134200- 3500-155200-4000-179200-4500-206200-5000-2412000 ನಿರ್ದಿಷ್ಟ ಭಾಗಗಳಾಗಿವೆ.

1ನೇ ಜುಲೈ 2012ಕ್ಕೆ ಅನ್ವಯಿಸುವಂತೆ ಹುದ್ದೆಗಳಿಗೆ ಅನ್ವಯವಾಗುವ ಪ್ರಸಕ್ತ ವೇತನ ಶ್ರೇಣಿ ಮತ್ತು ಅದಕ್ಕೆ ಸಂವಾದಿ ಸಮಾನಾಂತರ ಪರಿಷ್ಕೃತ ವೇತನ ಶ್ರೇಣಿಗಳು ಮೇಲಿನ ಕಂಡಿಕೆ 1.1 ರ (2) ಮತ್ತು (3)ನೇ ಅಂಕಣಗಳಲ್ಲಿ ನಿರ್ದಿಷ್ಟಪಡಿಸಿದಂತೆ ಇರತಕ್ಕದ್ದು.

ಜಾರಿಗೆ ಬರುವ ದಿನಾಂಕ:

2024ರ ಪರಿಷ್ಕೃತ ವೇತನ ಶ್ರೇಣಿಗಳು 1ನೇ ಜುಲೈ 2022ರಿಂದ ಜಾರಿಗೆ ಬರುವಂತೆ ಅನ್ವಯವಾಗುತ್ತವೆ. ಪರಿಷ್ಕೃತ ವೇತನ ಶ್ರೇಣಿಗಳ ಅನುಷ್ಠಾನದ ಕಾರಣದಿಂದ ಉಂಟಾಗುವ ವೇತನ ಮತ್ತು ಪಿಂಚಣಿಯ ಆರ್ಥಿಕ ಲಾಭವು ಆಗಸ್ಟ್ 1ರಿಂದ ಲಭ್ಯವಾಗುತ್ತದೆ.

ವೇತನ ಶ್ರೇಣಿಗಳ ಮತ್ತು ಪಿಂಚಣಿಯ ಪರಿಷ್ಕರಣೆಯ ಕಾರಣದಿಂದ ಉಂಟಾಗುವ ವೇತನ ಮತ್ತು ಭತ್ಯೆಗಳು ಹಾಗೂ ಪಿಂಚಣಿಯ ಮೊತ್ತದಲ್ಲಿನ ಹೆಚ್ಚಳವನ್ನು 1ನೇ ಆಗಸ್ಟ್ 2024 ರಿಂದ ನಗದಾಗಿ ಸಂದಾಯ ಮಾಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Love Jihad: ಹಿಂದೂ ಯುವತಿಯ ಕರೆದೊಯ್ದ ಮುಸ್ಲಿಂ ಯುವಕ; ಕಾರ್ಕಳ ಪ್ರಕ್ಷುಬ್ಧ

Love Jihad: ಕಾರ್ಕಳದ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಲ್ತಾಫ್‌ ಎಂಬಾತ ಕಾರಿನಲ್ಲಿ ಹಿಂದೂ ಯುವತಿಯನ್ನು ಕೂರಿಸಿಕೊಂಡು ಹೋಗಿದ್ದ. ಸಂಜೆಯಾಗುತ್ತಲೇ ಯುವತಿಯನ್ನ ವಾಪಸ್ ಕರೆ ತಂದಿದ್ದ, ವಿಷಯ ತಿಳಿಯುತ್ತಿದ್ದಂತೆ ಕಾರು ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. ಇನ್ನು ಕಾರಿನಲ್ಲಿದ್ದ ಯುವತಿ ನಶೆಯಲ್ಲಿದ್ದುದ್ದನ್ನು ಕಂಡ ಹಿಂದೂ ಕಾರ್ಯಕರ್ತರು ಗರಂ ಆಗಿದ್ದಾರೆ.

VISTARANEWS.COM


on

Love jihad
Koo

ಉಡುಪಿ: ಕರಾವಳಿಯಲ್ಲಿ ಮತ್ತೆ ಲವ್‌ ಜಿಹಾದ್‌(Love Jihad) ಪ್ರಕರಣ ಬೆಳಕಿಗೆ ಬಂದಿದೆ. ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಯನ್ನು ಕರೆದೊಯ್ದಿರುವ ಘಟನೆ ಉಡುಪಿ(Udupi)ಯ ಕಾರ್ಕಳದಲ್ಲಿ ನಡೆದಿದೆ. ಘಟನೆ ಬೆನ್ನಲ್ಲೇ ಇಡೀ ಕಾರ್ಕಳ(Karkala)ದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗೆ ಕಾರಿನಲ್ಲಿ ಹಿಂದೂ ಯುವತಿಯನ್ನು ಮುಸ್ಲಿಂ ಯುವಕನೋರ್ವ ಕಾರಿನಲ್ಲಿ ಕರೆದೊಯ್ದಿದಿದ್ದ ಎನ್ನಲಾಗಿದೆ. ಇದರ ಬೆನ್ನಲ್ಲೇ ಹಿಂದೂ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ.

ಏನಿದು ಘಟನೆ?

ಕಾರ್ಕಳದ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಲ್ತಾಫ್‌ ಎಂಬಾತ ಕಾರಿನಲ್ಲಿ ಹಿಂದೂ ಯುವತಿಯನ್ನು ಕೂರಿಸಿಕೊಂಡು ಹೋಗಿದ್ದ. ಸಂಜೆಯಾಗುತ್ತಲೇ ಯುವತಿಯನ್ನ ವಾಪಸ್ ಕರೆ ತಂದಿದ್ದ, ವಿಷಯ ತಿಳಿಯುತ್ತಿದ್ದಂತೆ ಕಾರು ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. ಇನ್ನು ಕಾರಿನಲ್ಲಿದ್ದ ಯುವತಿ ನಶೆಯಲ್ಲಿದ್ದುದ್ದನ್ನು ಕಂಡ ಹಿಂದೂ ಕಾರ್ಯಕರ್ತರು ಗರಂ ಆಗಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಯುವತಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಿಂದೂ ಸಂಘಟನೆ ಕಾರ್ಯಕರ್ತರು ಆಸ್ಪತ್ರೆ ಮುಂಭಾಗ ಜಮಾಯಿಸಿದ್ದಾರೆ. ಇನ್ನು ಯುವತಿ ಕಾರ್ಕಳದಲ್ಲಿ ಉದ್ಯೋಗವೊಂದರಲ್ಲಿ ಇದ್ದು, ಅಲ್ತಾಫ್ ಗೆ ಈಗಾಗಲೇ ಮದುವೆಯಾಗಿ ಮಕ್ಕಳಿರುವುದಾಗಿ ಆರೋಪ ಕೇಳಿಬಂದಿದೆ. ಕಾರ್ಕಳ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಕರೆತಂದಿದ್ದ ಅನ್ಯಕೋಮಿನ ಯುವಕನಿಗೆ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ಹುಬ್ಬಳ್ಳಿಯ ಗಬ್ಬೂರನಲ್ಲಿ ಅನ್ಯಕೋಮಿನ ಯುವಕನ ಜತೆ ಬಾಲಕಿ ಇದ್ದಳು. ಬಾಗಲಕೋಟೆ ಜಿಲ್ಲೆಯಿಂದ ಹುಬ್ಬಳ್ಳಿಗೆ ಬಾಲಕಿಯನ್ನು ಯುವಕ ಕರೆತಂದಿದ್ದ. ಗಬ್ಬೂರ ಹೋಟೆಲ್‌ನಲ್ಲಿ ಇದ್ದವನನ್ನು ಗಮನಿಸಿ ಸ್ಥಳೀಯರು ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದಿದ್ದಾರೆ. ಈ ವೇಳೆ ಹಿಂದು ಜಾಗರಣಾ ವೇದಿಕೆ ಮುಖಂಡರು, ಯುವಕನಿಗೆ ಥಳಿಸಿ, ಹುಬ್ಬಳ್ಳಿಯ ಬೇಂಡಿಗೇರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಅಪ್ರಾಪ್ತ ಬಾಲಕಿ ಕಾಣೆಯಾಗಿರುವ ಕುರಿತು ಕೇಸ್ ದಾಖಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಿತಿ ಮೀರಿದ ಪುಂಡರ ಹಾವಳಿ; ಹಾಡ ಹಗಲೇ ಯುವತಿಗೆ ಅನ್ಯಕೋಮಿನ ಯುವಕರಿಂದ ಕಿರುಕುಳ

ಇನ್ನು ಇದಕ್ಕೂ ಮುನ್ನ ಹಾಡ ಹಗಲೇ ರಸ್ತೆಯ ಪಕ್ಕ ನಿಂತಿದ್ದ ಯುವತಿಗೆ ಇಬ್ಬರು ಮುಸ್ಲಿಂ ಯುವಕರು ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡಿದ ಘಟನೆ ನಡೆದಿದ್ದು ಹಲವರನ್ನು ಬೆಚ್ಚಿ ಬೀಳಿಸಿತ್ತು. ಅಲ್ಲದೇ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ರಸ್ತೆಯ ಪಕ್ಕ ಸ್ಕೂಟಿ ನಿಲ್ಲಿಸಿ ಯುವತಿ ತಮ್ಮ ಪಾಡಿಗೆ ತಾವು ನಿಂತಿದ್ದರು. ಅಲ್ಲಿಗೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ಮುಸ್ಲಿಂ ಯುವಕರು, ʼʼಕುಡಿದ ನಶೆಯಲ್ಲಿ ರೋಡ್ ಶೋ ಮಾಡುತ್ತೀಯಾ?ʼʼ ಎಂದು ಬೈದಿದ್ದಾರೆ. ಯುವಕರ ಅವಾಚ್ಯ ನಿಂದನೆಯಿಂದ ಒಂದು ಕ್ಷಣ ಗಾಬರಿಗೊಳಗಾದ ಯುವತಿ ಬಳಿಕ ಅವರನ್ನು ದಿಟ್ಟವಾಗಿ ಎದುರಿಸಿದ್ದಾರೆ. ಅವರನ್ನೇ ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಪುಂಡರು ಅಶ್ಲೀಲ ಪದಗಳಿಂದ ಯುವತಿಯನ್ನು ಹಿಂದಿಯಲ್ಲಿ ನಿಂದಿಸಿದ್ದಾರೆ. ಹೀಗೆ ಯುವಕರು ಕೆಲಕಾಲ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.

Continue Reading

ಕರ್ನಾಟಕ

Assault Case: ಮಾರ್ಕ್ಸ್‌ ಕಡಿಮೆ ಬಂತೆಂದು 4ನೇ ತರಗತಿ ಬಾಲಕನಿಗೆ ಬಾಸುಂಡೆ ಬರುವಂತೆ ಬಾರಿಸಿದ ಶಿಕ್ಷಕ

Assault Case: ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ಘಟನೆ ನಡೆದಿದ್ದು, ಶಿಕ್ಷಕನ ದುರ್ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸೈದಾಪುರ ಪಟ್ಟಣದ ಖಾಸಗಿ ಶಾಲಾ ಶಿಕ್ಷಕ ಡೆಲವಿನ್‌ ಎಂಬಾತ ವಿದ್ಯಾರ್ಥಿಗಳ ಮೇಲೆ ಇದೇ ರೀತಿ ಕ್ರೌರ್ಯ ಮೆರೆಯುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಈತ ಕುಮಾರ್‌ ಯುವರಾಜ್‌ ಎಂಬ ಬಾಲಕನನ್ನು ಅಮಾನುಷವಾಗಿ ಥಳಿಸಿದ್ದಾನೆ.

VISTARANEWS.COM


on

assault case
Koo

ಯಾದಗಿರಿ: ಕೆಲವು ದಿನಗಳ ಹಿಂದೆ ವಿಜಯನಗರದಲ್ಲಿ ಹೋಂವರ್ಕ್‌ ಮಾಡದಕ್ಕೆ ವಿದ್ಯಾರ್ಥಿಯನ್ನು ಮುಖ್ಯಶಿಕ್ಷಕಿಯೊಬ್ಬರು ವಿದ್ಯಾರ್ಥಿಯನ್ನು ಮನಸ್ಸೋಇಚ್ಛೆ ಥಳಿಸಿರುವ ಘಟನೆ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಗಣಿತದಲ್ಲಿ ಕಡಿಮೆ ಅಂಕ ಪಡೆದ ನಾಲ್ಕನೇ ತರಗತಿಯ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಶಿಕ್ಷಕನೋರ್ವ ಬಾರಿಸಿದ್ದಾನೆ(Assault Case).

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ಘಟನೆ ನಡೆದಿದ್ದು, ಶಿಕ್ಷಕನ ದುರ್ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸೈದಾಪುರ ಪಟ್ಟಣದ ಖಾಸಗಿ ಶಾಲಾ ಶಿಕ್ಷಕ ಡೆಲವಿನ್‌ ಎಂಬಾತ ವಿದ್ಯಾರ್ಥಿಗಳ ಮೇಲೆ ಇದೇ ರೀತಿ ಕ್ರೌರ್ಯ ಮೆರೆಯುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಈತ ಕುಮಾರ್‌ ಯುವರಾಜ್‌ ಎಂಬ ಬಾಲಕನನ್ನು ಅಮಾನುಷವಾಗಿ ಥಳಿಸಿದ್ದಾನೆ. ಡೆಲವಿನ್‌ ವಿದ್ಯಾರ್ಥಿಯ ಬೆನ್ನಿಗೆ ಬಾಸುಂಡೆ ಬರುವಂತೆ ಥಳಿಸಿದ್ದಾನೆ ಎನ್ನಲಾಗಿದೆ. ಅಗಸ್ಟ್ 19 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಸೈದಾಪುರ ಠಾಣೆಯಲ್ಲಿ ಶಿಕ್ಷಕ ಡೆಲವಿನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಕೆಲವು ದಿನಗಳ ಹಿಂದೆ ವಿಜಯನಗರಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಹೋಮ್‌ ವರ್ಕ್ (Home Work) ಮಾಡದಿದ್ದಕ್ಕೆ ವಿದ್ಯಾರ್ಥಿನಿಗೆ ಕಾಲು ಊತ ಬರುವಂತೆ ಮುಖ್ಯ ಶಿಕ್ಷಕಿ (Assault Case) ಬಾರಿಸಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿರುವ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ.

ವಿಜ್ಞಾನ ವಿಷಯದ ಹೋಂ ವರ್ಕ್ ಮಾಡದಿದ್ದಕ್ಕೆ ಮುಖ್ಯ ಶಿಕ್ಷಕಿ ವಾಣಿ ಎಂಬುವವರು ವಿದ್ಯಾರ್ಥಿನಿಗೆ ಮನಬಂದಂತೆ ಹೊಡೆದಿದ್ದಾರೆ. ಮಾನಸ ಎಂಬಾಕೆಗೆ ಈ ಮೊದಲು ಅಪಘಾತ ಆಗಿದ್ದರಿಂದ ಕಾಲಿಗೆ ರಾಡ್ ಅಳವಡಿಸಲಾಗಿತ್ತು. ಮತ್ತೆ ಅದೇ ಕಾಲಿಗೆ ಶಿಕ್ಷಕಿ ವಾಣಿ ಸ್ಕೇಲ್‌ನಿಂದ ಜೋರಾಗಿ ಹೊಡೆದಿದ್ದಾರೆ. ಜೋರಾಗಿ ಹೊಡೆತದಿಂದಾಗಿ ಕಾಲು ಊದಿಕೊಂಡು ಬಾಲಕಿಗೆ ನಡೆದಾಡುವುದಕ್ಕೂ ಸಾಧ್ಯವಾಗಿಲ್ಲ.

ಇನ್ನೂ ಮನಸೋ ಇಚ್ಛೆ ಥಳಿಸಿದ ಶಿಕ್ಷಕಿ ವಾಣಿಯೇ ಬಾಲಕಿಯನ್ನು ಚಿತ್ರದುರ್ಗದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎಲುಬು ಮತ್ತು ಮೂಳೆ ತಜ್ಞರಿಂದ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕಿಯ ಕಾಲಿಗೆ ಬ್ಯಾಂಡೇಜ್ ಹಾಕಿ ಸೂಕ್ತ ಚಿಕಿತ್ಸೆ ನೀಡಿ ವೈದ್ಯರು ಕಳಿಸಿದ್ದಾರೆ. ಇತ್ತ ಬಾಲಕಿಯನ್ನು ನೋಡಲೆಂದು ಪಾಲಕರು ಭಾನುವಾರ ಶಾಲೆಗೆ ಬಂದಿದ್ದಾರೆ. ಆಗಲೇ ಮಗಳ ಕಾಲಿನ ಸ್ಥಿತಿ ನೋಡಿ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ಪೋಷಕರು ಬಳಿಕ ಮುಖ್ಯ ಶಿಕ್ಷಕಿ ವಾಣಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Chikkaballapur News: ವಿದ್ಯಾರ್ಥಿಯನ್ನು ಚುಡಾಯಿಸಿದ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ

Continue Reading

ಧಾರ್ಮಿಕ

Yadgiri News: ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

ಯಾದಗಿರಿ ಜಿಲ್ಲೆಯ (Yadgiri News) ಗುರುಮಠಕಲ್ ತಾಲೂಕಿನ ಬೋರಬಂಡಾ ಗ್ರಾಮದ ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಶುಕ್ರವಾರ 101 ದಂಪತಿಗಳಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನೆರವೇರಿತು.

VISTARANEWS.COM


on

Yadgiri News
Koo

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಬೋರಬಂಡಾ ಗ್ರಾಮದ ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಶುಕ್ರವಾರ 101 ದಂಪತಿಗಳಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ (Yadgiri News) ನೆರವೇರಿತು.

ಶ್ರಾವಣ ಮಾಸದ ಅಂಗವಾಗಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮ ನಡೆಸಲಾಯಿತು. ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಂಘದ ವ್ಯವಸ್ಥಾಪಕ ನರೇಂದ್ರ ರಾಠೋಡ ಅವರ ನೇತೃತ್ವದಲ್ಲಿ ಪೂಜೆ ಕಾರ್ಯಕ್ರಮ ನಡೆಸಲಾಯಿತು. ವಿವಿಧ ಭಾಗದಿಂದ ಆಗಮಿಸಿದ ದಂಪತಿಗಳು ಶ್ರೀ ಲಕ್ಷ್ಮಿ ದೇವಿಯ ಮೂರ್ತಿಗೆ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: 7th pay commission: ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ವೇತನ ಶ್ರೇಣಿ ಪ್ರಕಟ; ಯಾರಿಗೆ ಎಷ್ಟು ಏರಿಕೆ?

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಗುರುಮಠಕಲ್‌ನ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಆಶೀರ್ವಚನ ನೀಡಿ‌ ಮಾತನಾಡಿ, ಶ್ರಾವಣ ಮಾಸದ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಹಮ್ಮಿಕೊಂಡಿದ್ದು ಉತ್ತಮ ಧಾರ್ಮಿಕ ಕಾರ್ಯ ಇದಾಗಿದೆ ಎಂದರು.

ಮಹಾ ನೈವೇದ್ಯ, ಮಹಾಮಂಗಳಾರತಿ ವಿವಿಧ ಪೂಜಾ ಕಾರ್ಯಗಳನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಜಿಲ್ಲೆಯ ವಿವಿಧ ಭಾಗದಿಂದ ಭಕ್ತರು ಆಗಮಿಸಿ, ಶ್ರೀ ಲಕ್ಷ್ಮಿ ದೇವಿಯ ದರ್ಶನ ಪಡೆದರು.

ಇದನ್ನೂ ಓದಿ:UPSC Exam calendar: UPSC ಪರಿಷ್ಕೃತ ಪರೀಕ್ಷಾ ಕ್ಯಾಲೆಂಡರ್‌ ರಿಲೀಸ್‌; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಕಾರ್ಯಕ್ರಮದಲ್ಲಿ ಗುರುಮಠಕಲ್ ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಅನಂತಪ್ಪ ಯದ್ಲಾಪುರ, ಕಾಶಿನಾಥ ರಾಠೋಡ, ವಿರೇಶ್ ಆವಂಟಿ, ಗುರು ತಲಾರಿ, ಶಂಕರ ನಾಯಕ, ಶರಣು, ಸಂಜೀವ್ ಚಂದಾಪುರ, ಅಯ್ಯಪ್ಪ ರಾಠೋಡ, ಮನೋಹರ್ ರಾಠೋಡ, ರಾಮು ಪವಾರ್, ರವಿಕುಮಾರ ಹಾಗೂ ಇನ್ನಿತರರು ಇದ್ದರು.

Continue Reading

ಕರ್ನಾಟಕ

Lorry Accident: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ; 16 ಕಾರ್ಮಿಕರಿಗೆ ಗಂಭೀರ ಗಾಯ

Lorry Accident: ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಮಿರಿಯಾಣದ ಸರ್ಕಾರಿ‌ ಆಸ್ಪತ್ರೆ ಸಮೀಪ ಅಪಘಾತ ನಡೆದಿದೆ. ಚಾಲಕ ಮದ್ಯ ಸೇವಿಸಿ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

VISTARANEWS.COM


on

Lorry Accident
Koo

ಕಲಬುರಗಿ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ 16 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ (Lorry Accident) ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಮಿರಿಯಾಣದ ಸರ್ಕಾರಿ‌ ಆಸ್ಪತ್ರೆ ಸಮೀಪ ನಡೆದಿದೆ. ಮಿರಿಯಾಣದಿಂದ ತಾಂಡೂರ್ ಕಡೆ ಹೊರಟಿದ್ದ ಲಾರಿ ಅಪಘಾತಕ್ಕೀಡಾಗಿದ್ದು, ಸ್ಥಳಕ್ಕೆ ಮಿರಿಯಾಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಾಲಕ ಕೃಷ್ಣ ಪಾನ‌ಮತ್ತನಾಗಿ ಲಾರಿ ಚಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಕಲಬುರಗಿ ಹಾಗೂ ಬೀದರ್ ಸರ್ಕಾರಿ‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಅತ್ತೆ ಮನೆಗೆ ಬಂದ ಅಳಿಯನ ಅಟ್ಟಾಡಿಸಿದ ಕಾಡಾನೆ! ಮುಂದೇನಾಯ್ತು

Wild animals Attack
Wild animals Attack

ಹಾಸನ: ಅತ್ತೆ ಮನೆಗೆ ಬಂದ ಅಳಿಯನನ್ನು ಕಾಡಾನೆಯೊಂದು (Wild Animals Attack) ಅಟ್ಟಾಡಿಸಿಕೊಂಡು ಬಂದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮದಲ್ಲಿ ಘಟನೆ ನಡೆದಿದೆ.

ಕೋಲಾರ ಮೂಲದ ನಾಗೇಶ್ (35) ಎಂಬುವವರು ಉದೇವಾರ ಗ್ರಾಮದಲ್ಲಿದ್ದ ತಮ್ಮ ಅತ್ತೆ ಮನೆಗೆ ಬಂದಿದ್ದರು. ಊಟಕ್ಕೆ ಮೊಸರು ತರಲೆಂದು ಅಂಗಡಿಗೆ ತೆರಳುತ್ತಿದ್ದರು. ಅದ್ಯಾವ ಕಡೆಯಿಂದಲೋ ಓಡಿ ಬಂದ ಕಾಡಾನೆಯೊಂದು ನಾಗೇಶ್‌ರನ್ನು ಅಡ್ಡಗಟ್ಟಿತ್ತು.

ಕಾಡಾನೆಯಿಂದ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ ನಾಗೇಶ್‌ ಗಾಬರಿಯಲ್ಲಿ ಮುಗ್ಗರಿಸಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಗಾಯಗೊಂಡ ನಾಗೇಶ್‌ ಸಕಲೇಶಪುರ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಾಯಾಳು ಆರೋಗ್ಯ ವಿಚಾರಣೆಗೆ ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Prabhas: ಶಾರುಖ್, ಸಲ್ಮಾನ್ ಹಿಂದಿಕ್ಕಿ ‘ಅತ್ಯಂತ ಜನಪ್ರಿಯ ಪುರುಷ ತಾರೆ’ಯಾಗಿ ಹೊರಹೊಮ್ಮಿದ ಪ್ರಭಾಸ್!

ಕೊಚ್ಚಿ ಹೋಗುತ್ತಿದ್ದ ಹಸುವನ್ನು ರಕ್ಷಿಸಿದ ಯುವಕರು

ನೋಡ ನೋಡುತ್ತಿದ್ದಂತೆ ರಭಸವಾಗಿ ಹರಿಯುತ್ತಿದ್ದ ಕಾಲುವೆ ನೀರಲ್ಲಿ ಹಸುವೊಂದು ಕೊಚ್ಚಿ ಹೋಗುತ್ತಿತ್ತು. ಇದನ್ನು ಗಮನಿಸಿದ ಯುವಕರು ಪ್ರಾಣವನ್ನು ಲೆಕ್ಕಿಸದೆ ಹಸು ರಕ್ಷಣೆ ಮಾಡಿದ್ದಾರೆ. ವಿಜಯನಗರದ ಹೊಸಪೇಟೆ ಹೊರವಲಯದ ಎಚ್‌ಎಲ್‌ಸಿ ಕಾಲುವೆಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ | Physical Abuse : 10 ವರ್ಷದ ಅಪ್ರಾಪ್ತೆ ಮೇಲೆ ಎರಗಿದ ಕಾಮುಕ; ಅತ್ಯಾಚಾರದ ವೇಳೆ ಕಿರುಚಾಡಿದ್ದಕ್ಕೆ ಕೊಲೆಗೈದ ಹಂತಕ

31ನೇ ವಾರ್ಡಿನ ಯುವಕ ಕೃಷ್ಣನ ನೇತೃತ್ವದಲ್ಲಿ ರಕ್ಷಣೆ ಮಾಡಲಾಗಿದೆ. ನೀರು ಕುಡಿಯಲು ಹೋದ ಸಂದರ್ಭದಲ್ಲಿ ಹಸುವೊಂದು ಆಯತಪ್ಪಿ ಬಿದ್ದಿತ್ತು. ಅಲ್ಲಿಯೇ ಇದ್ದ ಸ್ಥಳೀಯ ಯುವಕರು ಕೂಡಲೇ ಅಗ್ಗದ ಮೂಲಕ ಹಸು ರಕ್ಷಣೆಗೆ ಮುಂದಾಗಿದ್ದಾರೆ.

Continue Reading
Advertisement
Love jihad
ಕರ್ನಾಟಕ46 mins ago

Love Jihad: ಹಿಂದೂ ಯುವತಿಯ ಕರೆದೊಯ್ದ ಮುಸ್ಲಿಂ ಯುವಕ; ಕಾರ್ಕಳ ಪ್ರಕ್ಷುಬ್ಧ

assault case
ಕರ್ನಾಟಕ1 hour ago

Assault Case: ಮಾರ್ಕ್ಸ್‌ ಕಡಿಮೆ ಬಂತೆಂದು 4ನೇ ತರಗತಿ ಬಾಲಕನಿಗೆ ಬಾಸುಂಡೆ ಬರುವಂತೆ ಬಾರಿಸಿದ ಶಿಕ್ಷಕ

pm modi Ukraine Visit
ವಿದೇಶ2 hours ago

PM Modi Ukraine Visit: ಉಕ್ರೇನ್‌ಗೆ ಭೀಷ್ಮ್‌ ಕ್ಯೂಬ್‌ ಉಡುಗೊರೆ ನೀಡಿದ ಪ್ರಧಾನಿ ಮೋದಿ…ಏನಿದರ ವಿಶೇಷತೆ?

Yadgiri News
ಧಾರ್ಮಿಕ2 hours ago

Yadgiri News: ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

viral video
ವೈರಲ್ ನ್ಯೂಸ್3 hours ago

Viral Video: ಮೈಮೇಲೆ ಒಂದಲ್ಲ..ಎರಡಲ್ಲ ಬರೋಬ್ಬರಿ 25ಕೆ.ಜಿ ಚಿನ್ನ; ತಿಮ್ಮಪ್ಪನ ಸನ್ನಿಧಿಗೆ ಬಂದ ವಿಶೇಷ ಭಕ್ತರು ಇವರೇ ನೋಡಿ

Lorry Accident
ಕರ್ನಾಟಕ3 hours ago

Lorry Accident: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ; 16 ಕಾರ್ಮಿಕರಿಗೆ ಗಂಭೀರ ಗಾಯ

ಕರ್ನಾಟಕ3 hours ago

Muda Scam: ದೆಹಲಿಯಲ್ಲಿ ರಾಹುಲ್‌ ಗಾಂಧಿಯನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ; ಕಾನೂನು ಹೋರಾಟದ ಬಗ್ಗೆ ಚರ್ಚೆ

Uttara Kannada News
ಉತ್ತರ ಕನ್ನಡ4 hours ago

Uttara Kannada News: ಹೊಸ ಆಧಾರ್ ನೋಂದಣಿ, ತಿದ್ದುಪಡಿಗೆ ಅವಕಾಶ

Invest Karnataka
ಬೆಂಗಳೂರು4 hours ago

Invest Karnataka: ಇಂಧನ ತಂತ್ರಜ್ಞಾನ; ರಾಜ್ಯದಲ್ಲಿ 8,300 ಕೋಟಿ ರೂ. ಹೂಡಿಕೆ ಮಾಡಲಿರುವ ಷೆರ್ವನ್‌ ಇಂಡಿಯಾ

UPSC Exam calendar
ದೇಶ4 hours ago

UPSC Exam calendar: UPSC ಪರಿಷ್ಕೃತ ಪರೀಕ್ಷಾ ಕ್ಯಾಲೆಂಡರ್‌ ರಿಲೀಸ್‌; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌