Gandhi Jayanti 2024: ಗಾಂಧಿ ಜಯಂತಿ ಹಿನ್ನೆಲೆ ಸರ್ಕಾರಿ ಯೋಜನೆಗಳ ಅರಿವು ಮೂಡಿಸಿದ ಎನ್‌ಸಿಸಿ ಕೆಡೆಟ್‌ಗಳು - Vistara News

ಬೆಂಗಳೂರು

Gandhi Jayanti 2024: ಗಾಂಧಿ ಜಯಂತಿ ಹಿನ್ನೆಲೆ ಸರ್ಕಾರಿ ಯೋಜನೆಗಳ ಅರಿವು ಮೂಡಿಸಿದ ಎನ್‌ಸಿಸಿ ಕೆಡೆಟ್‌ಗಳು

Gandhi Jayanti 2024 : ಮಹಾತ್ಮ ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ ಶ್ರಮಧಾನ ಹಾಗೂ ಉಜ್ವಲ ಗ್ಯಾಸ್ ಯೋಜನೆಯ ಬಗ್ಗೆ ವೆಬಿನಾರ್ ನಡೆಯಿತು.

VISTARANEWS.COM


on

Gandhi Jayanti 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಿನ ಐ.ಟಿ.ಐ ಸೆಂಟ್ರಲ್ ಶಾಲೆಯಲ್ಲಿ ಮಹಾತ್ಮ ಗಾಂಧಿ ಜಯಂತಿಯಂದು (Gandhi Jayanti 2024) ಸ್ವಚ್ಛ ಭಾರತ ಅಭಿಯಾನದಡಿ ಎನ್.ಸಿ.ಸಿ ಕೆಡೆಟ್ಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸಲುವಾಗಿ ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್.ಸಿ.ಸಿ. ಯೂನಿಟ್ನ ವತಿಯಿಂದ ಪ್ರಧಾನಮಂತ್ರಿ ಸೌಭಾಗ್ಯ (ವಿದ್ಯುತ್) ಯೋಜನೆ , ಜನ್ ಧನ್ ಯೋಜನೆ, ಉಜ್ವಲಾ ಗ್ಯಾಸ್ ಯೋಜನೆ, ಆಯುಷ್ಮಾನ್ ಭಾರತ್ ಮಿಷನ್, ಇಂದ್ರಧನುಷ್ನಂತಹ ಯೊಜನೆಗಳನ್ನು ಜನಸಾಮಾನ್ಯರಿಗೆ ಅರಿವು ಮೂಡಿಸುವ ಸಲುವಾಗಿ ಎನ್.ಸಿ.ಸಿ. ಕೆಡೆಟ್ಗಳಿಗೆ ವೆಬಿನಾರ್ಗಳನ್ನು ಆಯೋಜಿಸಲಾಗಿತ್ತು.

ಕೆ.ಆರ್. ಪುರದ ಐ.ಟಿ.ಐ. ಸೆಂಟ್ರಲ್ ಶಾಲೆಯಲ್ಲಿ ಉಜ್ವಲಾ ಗ್ಯಾಸ್ ಯೋಜನೆಯ ವಿಷಯವಾಗಿ ವೆಬಿನಾರ್ ಹಾಗೂ ಮಹಾತ್ಮ ಗಾಂಧಿ ಜಯಂತಿಯಂದು ಮಹಾತ್ಮ ಗಾಂಧೀಜಿಯ ಆಶಯವಾದ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವ ಸಂಬಂಧ ಎನ್.ಸಿ.ಸಿ ಕೆಡೆಟ್ಗಳಿಂದ ಶ್ರಮಧಾನವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಪೊನ್ಮಲಾರ್, ಉಪಪ್ರಾಂಶುಪಾಲರಾದ ಶ್ರೀಮತಿ ಶೈಲಜಾ ಆರಾಧ್ಯ, ಮುಖ್ಯಶಿಕ್ಷಕಿ ಅರುಣಾ ಜಾನಕಿರಾಮನ್, ಹಾಗೂ ಹಲವು ಶಿಕ್ಷಕರೊಂದಿಗೆ ಶಾಲೆಯ ಎನ್.ಸಿ.ಸಿ ಅಧಿಕಾರಿ ಸೆಕಂಡ್ ಆಫೀಸರ್ ಬಾಲಕೃಷ್ಣ ವಿ.ಎಚ್. ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಪ್ರಮುಖ ಸುದ್ದಿ

Karnataka Rain : ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ; ಹೈರಾಣಾದ ವಾಹನ ಸವಾರರು

Karnataka Rain : ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ವಾಹನ ಸವಾರರು ಹೈರಾಣಗಿದ್ದರು.

VISTARANEWS.COM


on

By

Karnataka weather Forecast
Koo

ಬೆಂಗಳೂರು: ಗುರುವಾರ ಮಧ್ಯಾಹ್ನದ ಹೊತ್ತಿಗೆ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ದಿಢೀರ್‌ ಶುರುವಾದ ಮಳೆಯಿಂದಾಗಿ ಬೈಕ್‌ ಸವಾರರು, ಸಾರ್ವಜನಿಕರು ಪರದಾಡಿದರು. ಮೆಜೆಸ್ಟಿಕ್‌, ಚಿಕ್ಕಪೇಟೆ, ಉಪ್ಪಾರ್‌ಪೇಟೆ, ಶಿವಾಜಿನಗರ, ಮಲ್ಲೇಶ್ವರಂ, ವಿಧಾನಸೌಧ, ರಾಜಾಜಿನಗರ, ರೇಸ್ ಕೋರ್ಸ್, ಮಹಾರಾಣಿ ಕಾಲೇಜು, ಸಿಐಡಿ ಆಫೀಸ್ ಸೇರಿದಂತೆ ಪ್ಯಾಲೇಸ್ ರಸ್ತೆಯಲ್ಲಿ ಗುಡುಗು ಸಹಿತ ಮಳೆಯಾಗಿದೆ. ಇನ್ನೆರಡು ದಿನಗಳು ಬೆಂಗಳೂರಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Karnataka Rain
Karnataka Rain

ರಾಜಧಾನಿ ಬೆಂಗಳೂರಲ್ಲಿ‌ ಬೆಳಗಿನ ಸಮಯ ಮೋಡ ಕವಿದ ವಾತಾವರಣ ಇತ್ತು, ನಂತರ ಬಿಸಿಲು ಆವರಿಸಿತ್ತು. ನೋಡನೋಡುತ್ತಿದ್ದಂತೆ ಮಧ್ಯಾಹ್ನ ಆಗುತ್ತಿದ್ದಂತೆ ಕಗ್ಗತ್ತಲು ಆವರಿಸಿ, ಮಧ್ಯಾಹ್ನ 2ರ ಸುಮಾರಿಗೆ ಶುರುವಾದ ಮಳೆಯು (Rain News) ಅರ್ಧ ಗಂಟೆಗೂ ಹೆಚ್ಚು ಸಮಯ (Bengaluru Rain) ಅಬ್ಬರಿಸಿದೆ. ಮಳೆ ಹಿನ್ನೆಲೆ ಹಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಜನರು ಹೈರಾಣಾದರು.

Karnataka Rain
Karnataka Rain

ತಿಪಟೂರಿನಲ್ಲಿ ಭಾರಿ ಮಳೆ, ಜನ-ಜೀವನ ಅಸ್ತವ್ಯಸ್ತ

ತುಮಕೂರಿನ ತಿಪಟೂರಿನಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ತಿಪಟೂರು ನಗರದ ಗಾಂಧಿನಗರ ಹಾಗೂ ಅರಸು ನಗರ ಕಾಲೋನಿಗಳ ಮನೆಗಳಿಗೆ ಮಳೆ ಹಾಗೂ ಚರಂಡಿ ನೀರು ನುಗ್ಗಿತ್ತು. ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆ ನಗರಸಭೆ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದರು. ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲ, ಹೀಗಾಗಿ ಮನೆಗಳಿಗೆ ನೀರು ನುಗ್ಗಿದೆ ಎಂದು ಆಕ್ರೋಶ ಹೊರಹಾಕಿದರು.

ಧರೆಗುರುಳಿದ ಬೃಹತ್ ಮರ

ಬೆಂಗಳೂರಿನ ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ ಬಳಿಯ ಬೃಹತ್ ಮರವೊಂದು ಧರೆಗುರುಳಿದೆ. ಆಲದಮರ ಬಸ್‌ ನಿಲ್ದಾಣದ ಮೇಲೆಯೇ ಬೃಹತ್ ಮರ ಬಿದ್ದಿದ್ದು,ಸ್ವಲ್ಪದರಲ್ಲೇ ಹಲವರು ಪಾರಾಗಿದ್ದಾರೆ. ನಿತ್ಯ ಬಸ್ ನಿಲ್ದಾಣದಲ್ಲಿ ಹತ್ತಾರು ಜನ ಪ್ರಯಾಣಿಕರು ನಿಲುತ್ತಿದ್ದರು. ಮರ ಬೀಳುವ ಶಬ್ಧ ಕೇಳಿ ಜನರು ಓಡಿಹೋದ ಕಾರಣ ಎಲ್ಲರೂ ಬಜಾವ್ ಆಗಿದ್ದಾರೆ. ಅದೃಷ್ಟವಶಾತ್‌ ಮರ ಬೀಳುವ ಸಮಯದಲ್ಲಿ ಯಾವುದೇ ವಾಹನಗಳು ಸಂಚಾರಿಸುತ್ತಿರಲಿಲ್ಲ. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.

Continue Reading

ಬೆಂಗಳೂರು

MLA Muniratna: ಶಾಸಕ ಮುನಿರತ್ನ ಕೇಸ್‌; ರಾಜಕಾರಣಿಗಳ ಹನಿಟ್ರ್ಯಾಪ್‌ ಮಾಡುತ್ತಿದ್ದ ರೂಮಿನ ಸ್ಥಳ ಮಹಜರು ಮಾಡಿದ ಎಸ್‌ಐಟಿ ಅಧಿಕಾರಿಗಳು

MLA Muniratna: ಶಾಸಕ ಮುನಿರತ್ನ ಲೈಂಗಿಕ ದೌರ್ಜನ್ಯ, ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಸಂತ್ರಸ್ತೆಯೊಂದಿಗೆ ರಾಜಕಾರಣಿಗಳ ಹನಿಟ್ರ್ಯಾಪ್‌ ಮಾಡುತ್ತಿದ್ದ ರೂಮಿನ ಸ್ಥಳ ಮಹಜರು ಮಾಡಿದರು.

VISTARANEWS.COM


on

By

MLA Muniratna
Koo

ಬೆಂಗಳೂರು: ಶಾಸಕ ಮುನಿರತ್ನ (MLA Muniratna) ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ಮುಂದುವರಿದಿದೆ. ಸುದೀರ್ಘವಾಗಿ ಸಂತ್ರಸ್ತೆಯಿಂದ ಹೇಳಿಕೆ ದಾಖಲಿಸಿದ್ದು, ಈಗಾಗಲೇ ಮೊಬೈಲ್ ಸೀಜ್ ಮಾಡಿ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ. ಅಧಿಕಾರಿಗಳಿಗೆ ಕೆಲ ವಿಡಿಯೊಗಳು ಮತ್ತು ಕೆಲ ದಾಖಲೆಗಳನ್ನು ಸಂತ್ರಸ್ತೆ ನೀಡಿದ್ದಾರೆ.

ಈ ಹಿಂದೆ ಅತ್ಯಾಚಾರ ಆರೋಪದ ಬೆನ್ನಲ್ಲೇ ಕಗ್ಗಲೀಪುರ ಪೊಲೀಸರು ಈ ಹಿಂದೆಯೇ ಸಂತ್ರಸ್ತೆಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದರು. ಇದೀಗ ಗುರುವಾರ ಜೆಪಿ ಪಾರ್ಕ್‌ನ ಗೋಡೌನ್‌, ರಾಮಯ್ಯ ಸಮಾಧಿ ಬಳಿ ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರ್‌ ಮಾಡಿದರು. ಹನಿಟ್ರ್ಯಾಪ್‌ ಮಾಡಿದ್ದ ಜೆಪಿ ಪಾರ್ಕ್ ಬಳಿಯ ಬಾಡಿಗೆ ಮನೆಯೊಂದರಲ್ಲಿ ಸಂತ್ರಸ್ತೆ ಕರೆತಂದು ಮಹಜರ್‌ ನಡೆಸಿದರು.

ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ. ಮುನಿರತ್ನ ಸಂಬಂಧಿತ ಕೆಲ ದಾಖಲೆಗಳನ್ನು ಕೊಟ್ಟಿದ್ದಾರೆ ಎನ್ನಲಾಗಿದೆ. ಜತೆಗೆ ಮುನಿರತ್ನ ಆಪ್ತ ಸಹಾಯಕನ ವಿಚಾರಣೆ ನಡೆಸಲಾಗಿದ್ದು, ಸಂತ್ರಸ್ತೆ ಪರಿಚಿತೆ ಈ ರೀತಿ ಯಾಕೆ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

ಆರು ಮಂದಿ ನಾಪತ್ತೆ

ಶಾಸಕ ಮುನಿರತ್ನ ನಾಯ್ಡು ವಿರುದ್ಧ ಕಳೆದ ಸೆಪ್ಟೆಂಬರ್ 18ರಂದು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಒಟ್ಟು ಏಳು ಜನರ ಆರೋಪಿಗಳ‌ ಹೆಸರು ದಾಖಲಾಗಿದೆ. ಸದ್ಯ ಮುನಿರತ್ನರನ್ನು ಬಂಧನ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಎಸ್‌ಐಟಿ ಮುಂದೆ ಮುನಿರತ್ನ ನಂಗೇನು ಗೊತ್ತಿಲ್ಲ ಎಂದಿದ್ದಾರೆ. ಇನ್ನು ಇದುವರೆಗೂ ಪ್ರಕರಣದಲ್ಲಿ ಇನ್ನುಳಿದ ಆರೋಪಿಗಳು ನಾಪತ್ತೆಯಾಗಿದ್ದಾರೆ. ಪ್ರಕರಣ ದಾಖಲಾಗಿ 15 ದಿನ ಕಳೆದರೂ ಆರು ಜನ ಆರೋಪಿಗಳು ಪತ್ತೆಯಾಗಿದ್ದಾರೆ. ಮುನಿರತ್ನ‌ ನಾಯ್ಡು ಸೇರಿದಂತೆ ವಿಜಯ್ ಕುಮಾರ್, ಸುಧಾಕರ, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ್ ಮತ್ತು ಲೋಕಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ನಾಪತ್ತೆಯಾಗಿರುವ ಆರು ಜನ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಮುನಿರತ್ನರಿಗೆ ಡಿಎನ್‌ಎ ಟೆಸ್ಟ್‌

ಎಸ್‌ಐಟಿ ಅಧಿಕಾರಿಗಳು ಗುರುವಾರ 42ನೇ ಎಸಿಎಂಎಂ ಕೋರ್ಟ್‌ಗೆ ಶಾಸಕ ಮುನಿರತ್ನರನ್ನು ಹಾಜರು ಪಡಿಸಿದರು. ಇದೆ ವೇಳೆ ಎಸ್‌ಐಟಿ ಅಧಿಕಾರಿಗಳು ಡಿಎನ್‌ಎ ಟೆಸ್ಟ್ ಮಾಡಿಸಲು ಅನುಮತಿ ಕೇಳಿದರು. ಈ ವೇಳೆ ಡಿಎನ್‌ಎ ಪರೀಕ್ಷೆಗೆ ಅನುಮತಿ ನೀಡಿ ನ್ಯಾಯಾಧೀಶರು ಆದೇಶಿಸಿದರು. ಇದಕ್ಕೂ ಮೊದಲು ಪೊಲೀಸರಿಂದ ಏನಾದರೂ ಸಮಸ್ಯೆ ಆಯಿತಾ ಎಂದು ಮುನಿರತ್ನರನ್ನು ನ್ಯಾಯಾಧೀಶರು ಕೇಳಿದರು. ಯಾವುದೇ ಸಮಸ್ಯೆ ಇಲ್ಲ, ಆದರೆ ಇದೊಂದು ಪಿತೂರಿ‌ ಎಂದು ಅಳಲು ತೋಡಿಕೊಂಡರು.

ವೈದ್ಯರೊಂದಿಗೆ ಹಾಜರಾಗಿದ್ದ ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರ ಸಮ್ಮುಖದಲ್ಲಿ ಮುನಿರತ್ನರ ರಕ್ತದ ಮಾದರಿ ಸಂಗ್ರಹ ಮಾಡಲು ಮುಂದಾದರು. ಈ ವೇಳೆ ಮುನಿರತ್ನ ತಮ್ಮ ವಕೀಲರು ಬರಬೇಕು. ಅವರ ಮುಂದೆ ಸ್ಯಾಂಪಲ್ಸ್ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು. ಮನವಿಯನ್ನ ಪುರಸ್ಕರಿಸಿ ವಕೀಲರು ಬಂದ ಮೇಲೆ ಸ್ಯಾಂಪಲ್ಸ್ ತೆಗೆದುಕೊಳ್ಳಲು ಎಸ್ಐಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ಮುನಿರತ್ನ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯು 82ನೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಗುರುವಾರ ನಡೆಯಿತು. ಕೋರ್ಟ್‌ ಜಾಮೀನು ಅರ್ಜಿ ವಿಚಾರಣೆ ನಡೆಸಿ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇಂದು ಗುರುವಾರ (ಅ.3) ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಮತ್ತೊಂದು ಸುತ್ತಿನ ವಾದ ಮಂಡಿಸಿದರು. ಎಸ್‌ಐಟಿ ಪರ ಎಸ್‌ಪಿಪಿ ಪ್ರದೀಪ್ ಹಾಜರಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Water supply: ಟ್ರಾನ್ಸಫಾರ್ಮರ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತ; ಬೆಂಗಳೂರಿಗೆ ಇಂದು ನೀರಿನ ಸಮಸ್ಯೆ

Water supply: ಟ್ರಾನ್ಸಫಾರ್ಮರ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.ಇದರಿಂದಾಗಿ ಬೆಂಗಳೂರಿಗೆ ಇಂದು ನೀರಿನ ಸಮಸ್ಯೆ ಎದುರಾಗಲಿದೆ.

VISTARANEWS.COM


on

By

Power cut off due to a technical problem in the transformer Bengaluru faces water crisis today
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಇಂದು ಗುರುವಾರ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ (Water supply) ಎದುರಾಗಲಿದೆ. ನಿನ್ನೆ ಬುಧವಾರ ಸುರಿದ ಮಳೆಗೆ ಹಾರೋಹಳ್ಳಿ ಹಾಗೂ ಟಿ.ಕೆ ಹಳ್ಳಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಆಗಿದೆ. ಟ್ರಾನ್ಸಫಾರ್ಮರ್‌ಗಳಲ್ಲಿ ತಾಂತ್ರಿಕ ಸಮಸ್ಯೆ, ವಿದ್ಯುತ್ ಸಂಪರ್ಕ ಕಡಿತ ಉಂಟಾಗಿದೆ. ಹೀಗಾಗಿ ಪಂಪಿಂಗ್ ಸ್ಟೇಷನ್‌ಗಳಿಗೆ ವಿದ್ಯುತ್ ಸಂಪರ್ಕ‌ ಕಡಿತಗೊಂಡಿದೆ. ವಿದ್ಯುತ್ ಸಂಪರ್ಕ ಇಲ್ಲದೆ ನಗರಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ. ಕೆಪಿಟಿಸಿಎಲ್ ಕಡೆಯಿಂದ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ. ವಿದ್ಯುತ್ ಸಂಪರ್ಕ ಮರುಸ್ಥಾಪನೆಯವರೆಗೂ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ.

ಬೆಸ್ಕಾಂ ಆನ್‌ಲೈನ್‌ ಸೇವೆ ಸ್ಥಗಿತ!

ಅಕ್ಟೋಬರ್ 5, 6ಕ್ಕೆ ಬೆಸ್ಕಾಂ ಸಾಫ್ಟ್‌ವೇರ್‌ ಉನ್ನತೀಕರಣ ಹಿನ್ನೆಲೆಯಲ್ಲಿ ಆನ್‌ಲೈನ್‌ ಸೇವೆ ಅಲಭ್ಯವಾಗಿರಲಿದೆ. ಅಕ್ಟೋಬರ್ 4ರ ರಾತ್ರಿ 9 ರಿಂದ 7ರ ಬೆಳಗ್ಗೆ 6 ಗಂಟೆವರೆಗೂ ಅಪ್ಲಿಕೇಶನ್‌ ಡೌನ್‌ಟೈಮ್ ನಿಗದಿ ಮಾಡಲಾಗಿದೆ. ವಿದ್ಯುತ್‌ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎನ್ನಲಾಗಿದೆ. ಸೇವೆಯ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಬೆಸ್ಕಾಂ ಈ ಕಾರ್ಯಕ್ಕೆ ಮುಂದಾಗಿದೆ.

ಸ್ಥಗಿತದ ಸಮಯದಲ್ಲಿ ಈ ಸೇವೆಗಳು ಅಲಭ್ಯ:

-ಹೊಸ ಸಂಪರ್ಕಗಳ ಪ್ರಕ್ರಿಯೆ, ಹೆಸರು ಮತ್ತು ಸುಂಕ ಬದಲಾವಣೆಗಳು, ಹೆಸರು ವರ್ಗಾವಣೆ ಮತ್ತು ತಾತ್ಕಾಲಿಕ ಸಂಪರ್ಕಗಳಂತಹ ಕಾರ್ಯಾಚರಣೆಗಳಿಗೆ ‘ಆರ್‌ಎಪಿಡಿಆರ್‌ಪಿ’ ಅಪ್ಲಿಕೇಶನ್‌ ಲಭ್ಯವಿರುವುದಿಲ್ಲ.

-ಬೆಸ್ಕಾಂ ಕ್ಯಾಶ್ ಕೌಂಟರ್‌ಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ.

-ಹೊಸ ಸಂಪರ್ಕಗಳು, ಹೆಸರು ಮತ್ತು ವಿಳಾಸ ಬದಲಾವಣೆ ಸೇರಿದಂತೆ ಇನ್ನಿತರ ಸೇವೆಗಳಿಗಾಗಿ ಗ್ರಾಹಕ ಪೋರ್ಟಲ್ ಲಭ್ಯವಿರುವುದಿಲ್ಲ.

-ಗ್ರಾಹಕ ಪೋರ್ಟಲ್ ಮತ್ತು ಥರ್ಡ್ ಪಾರ್ಟಿ ಪಾವತಿ ಚಾನಲ್‌ಗಳ ಮೂಲಕ ಆನ್‌ಲೈನ್ ಬಿಲ್ ಪಾವತಿಗಳು ಅಕ್ಟೋಬರ್ 4ರ ರಾತ್ರಿ 9ರಿಂದ ಅಕ್ಟೋಬರ್ 5ರ ಬೆಳಗ್ಗೆ 11ರವರೆಗೆ ಲಭ್ಯವಿರುವುದಿಲ್ಲ. ಅಕ್ಟೋಬರ್ 5ರ ಬೆಳಗ್ಗೆ 11ರ ನಂತರ ಬಿಲ್ ಪಾವತಿ ಕಾರ್ಯವನ್ನು ಮಾತ್ರ ಪುನರಾರಂಭಿಸಲಾಗುತ್ತದೆ.

-ಆರ್‌ಎಪಿಡಿಆರ್‌ಪಿ’ ಸೇವೆ ಇಲ್ಲದ ಕಾರಣ, ಮೊಬೈಲ್ ಅಪ್ಲಿಕೇಶನ್‌ಗಳ‌ ಸೇವೆಯೂ ಅಲಭ್ಯ.

-ಡಬ್ಲ್ಯುಎಎಂಎಸ್ ಮೂಲಕ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗುತ್ತದೆ.

    ಯಾವ ನಗರಗಳಲ್ಲಿ ಆನ್‌ಲೈನ್ ಸೇವೆ ಇರುವುದಿಲ್ಲ?

    ಬೆಸ್ಕಾಂ: ಬೆಂಗಳೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಸಿರಾ, ಚನ್ನಪಟ್ಟಣ, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್, ಚಳ್ಳಕೆರೆ, ಕುಣಿಗಲ್, ಹರಪ್ಪನಹಳ್ಳಿ, ಹರಿಹರ, ಹಿರಿಯೂರು,ತಿಪಟೂರು ಹಾಗೂ ಗೌರಿಬಿದನೂರು.

    ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

    Continue Reading

    ಬೆಂಗಳೂರು

    PSI Exam : ರಾಜ್ಯಾದ್ಯಂತ ಇಂದು ಪಿಎಸ್‌ಐ ಪರೀಕ್ಷೆ; ಇಎನ್‌ಟಿ ವೈದ್ಯರಿಂದ ಅಭ್ಯರ್ಥಿಗಳಿಗೆ ತಪಾಸಣೆ

    PSI Exam : ರಾಜ್ಯಾದ್ಯಂತ ಇಂದು ಪಿಎಸ್‌ಐ ಪರೀಕ್ಷೆ ಶುರುವಾಗಿದ್ದು, ಇಎನ್‌ಟಿ ವೈದ್ಯರಿಂದ ಅಭ್ಯರ್ಥಿಗಳಿಗೆ ತಪಾಸಣೆ ನಡೆಸಲಾಗುತ್ತಿದೆ.

    VISTARANEWS.COM


    on

    By

    PSI exam slated to be held across the state today
    ಸಾಂದರ್ಭಿಕ ಚಿತ್ರ
    Koo

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ರಾಜ್ಯಾದ್ಯಂತ ಇಂದು (ಅಕ್ಟೋಬರ್ 3) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ಪರೀಕ್ಷೆಯನ್ನು (PSI Exam) ನಡೆಸಲಾಗುತ್ತಿದೆ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ದೃಷ್ಟಿಯಿಂದ ಅಭ್ಯರ್ಥಿಗಳನ್ನು ತಪಾಸಣೆ ಮಾಡಲು ಇಎನ್‌ಟಿ ವೈದ್ಯರನ್ನು ನಿಯೋಜಿಸಲಾಗಿದೆ. ಈ ಹಿಂದೆ ಸೆ.22ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆ ದಿನಾಂಕದಂದೇ ಯುಪಿಎಸ್ಸಿ ಮುಖ್ಯ ಪರೀಕ್ಷೆ ಇದ್ದ ಕಾರಣ ಈ ಪರೀಕ್ಷೆಯನ್ನು ಮುಂದೂಡಲಾಗಿತ್ತು.

    ಬಹುನಿರೀಕ್ಷಿತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (402) ಹುದ್ದೆಗಳ (PSI Exam) ನೇಮಕಾತಿಗೆ ಕ್ಯಾಮರಾ ಕಣ್ಗಾವಲಿನಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ. ಬೆಂಗಳೂರು, ವಿಜಯಪುರ, ಶಿವಮೊಗ್ಗ, ಕಲಬುರಗಿ, ಧಾರವಾಡ ಮತ್ತು ದಾವಣಗೆರೆ ನಗರಗಳ ಒಟ್ಟು 163 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 21,875 ಮಂದಿ ಸೇರಿದಂತೆ ಒಟ್ಟು 66,990 ಮಂದಿ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ.

    ವಸ್ತ್ರ ಸಂಹಿತೆ ಕಡ್ಡಾಯ

    ಪರೀಕ್ಷಾ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆ ಆರಂಭಕ್ಕೆ ಅರ್ಧ ಗಂಟೆ‌ ಮೊದಲು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಕಡ್ಡಾಯವಾಗಿ ಇರಬೇಕು. ಹೀಗಾಗಿ ಅಭ್ಯರ್ಥಿಗಳು ಬೇಗ ಬಂದು ಪೊಲೀಸರ ತಪಾಸಣೆಗೆ ಒಳಪಡಬೇಕು. ತಡವಾಗಿ ಬರುವವರಿಗೆ ಪ್ರವೇಶ ಇರುವುದಿಲ್ಲ. ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಕ್ಯಾಮೆರಾ ಅಳವಡಿಸಿದ್ದು, ವೆಬ್ ಕಾಸ್ಟಿಂಗ್ ಮೂಲಕ ಅಲ್ಲಿನ ಎಲ್ಲ ಬೆಳವಣಿಗೆಗಳನ್ನು ವೀಕ್ಷಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿ ಕೇಂದ್ರದಲ್ಲೂ ಜಾಮರ್ ಅಳವಡಿಸಲು ಕ್ರಮ ತೆಗೆದುಕೊಂಡಿದ್ದು, ಆಸುಪಾಸಿನಲ್ಲಿ ಬ್ಲೂಟೂತ್‌ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು ಕಾರ್ಯನಿರ್ವಹಿಸದಂತೆ ಮಾಡಲಾಗಿದೆ. ಜತೆಗೆ ಬೆಂಗಳೂರಿನ ಕೆಇಎ ಕಚೇರಿಯಲ್ಲಿ ರಾಜ್ಯ ಮಟ್ಟದ ಕಮಾಂಡ್ ಸೆಂಟರ್ ಸ್ಥಾಪಿಸಿದ್ದು, ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲಿ ಆಗುವ ಬೆಳವಣಿಗೆಗಳನ್ನು ಗಮನಿಸಲು ಟಿವಿಗಳನ್ನು ಅಳವಡಿಸಲಾಗಿದೆ. ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಕೂಡ ಒಂದು ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸಲಿದೆ.

    ಪ್ರಶ್ನೆ ಪತ್ರಿಕೆ ಸ್ವೀಕಾರ ಮತ್ತು ಅದರ ಬಂಡಲ್ ತೆರೆಯುವ ಎಲ್ಲ ಪ್ರಕ್ರಿಯೆಯನ್ನೂ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ. ಅಲ್ಲದೆ, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಅವರ ಬೆರಳಚ್ಚು ಮತ್ತು ಭಾವಚಿತ್ರವನ್ನು ತೆಗೆದುಕೊಂಡು ಅಲ್ಲೇ ಅದನ್ನು ಅವರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಲಗತ್ತಿಸಿರುವ ಚಿತ್ರದ ಜತೆಗೂ ಆನ್ ಲೈನ್ ನಲ್ಲಿ ಹೊಂದಾಣಿಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಹೀಗೆ ಮಾಡುವುದರಿಂದ ಯಾರದೊ ಹೆಸರಿನಲ್ಲಿ ಇನ್ಯಾರೊ ಪರೀಕ್ಷೆ ಬರೆಯುವುದನ್ನು ತಡೆಯಬಹುದು ಎಂದು ಹೇಳಿದರು. ಬೇರೆ ಜಿಲ್ಲೆಗಳ ವಿಶೇಷ ವೀಕ್ಷಕರನ್ನೂ ನಿಯೋಜಿಸಿದ್ದು, ಅವರು ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ನಿಗಾ ಇಡಲಿದ್ದಾರೆ.

    ಇಎನ್‌ಟಿ ವೈದ್ಯರಿಂದ ಪರಿಶೀಲನೆ

    ಹಿಂದೆಲ್ಲ ಪರೀಕ್ಷೆ ನಡೆದಾಗ ಕಿವಿಯೊಳಗೆ ಅತಿ ಸೂಕ್ಷ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಟ್ಟುಕೊಂಡು ಬಂದು ಪರೀಕ್ಷೆಯಲ್ಲಿ ಅಕ್ರಮ ಎಸಗಲು ಪ್ರಯತ್ನಿಸಿದ ಪ್ರಕರಣಗಳು ವರದಿಯಾಗಿರುವ‌ ಹಿನ್ನೆಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಒಬ್ಬ‌ ಇಎನ್‌ಟಿ ವೈದ್ಯರನ್ನು ನಿಯೋಜಿಸಿದ್ದು, ಅವರು ಕೂಡ ನಿಗಾ ಇಡಲಿದ್ದಾರೆ.

    ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

    Continue Reading
    Advertisement
    Karnataka weather Forecast
    ಪ್ರಮುಖ ಸುದ್ದಿ35 ನಿಮಿಷಗಳು ago

    Karnataka Rain : ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ; ಹೈರಾಣಾದ ವಾಹನ ಸವಾರರು

    MLA Muniratna
    ಬೆಂಗಳೂರು57 ನಿಮಿಷಗಳು ago

    MLA Muniratna: ಶಾಸಕ ಮುನಿರತ್ನ ಕೇಸ್‌; ರಾಜಕಾರಣಿಗಳ ಹನಿಟ್ರ್ಯಾಪ್‌ ಮಾಡುತ್ತಿದ್ದ ರೂಮಿನ ಸ್ಥಳ ಮಹಜರು ಮಾಡಿದ ಎಸ್‌ಐಟಿ ಅಧಿಕಾರಿಗಳು

    Power cut off due to a technical problem in the transformer Bengaluru faces water crisis today
    ಬೆಂಗಳೂರು3 ಗಂಟೆಗಳು ago

    Water supply: ಟ್ರಾನ್ಸಫಾರ್ಮರ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತ; ಬೆಂಗಳೂರಿಗೆ ಇಂದು ನೀರಿನ ಸಮಸ್ಯೆ

    Gandhi Jayanti 2024
    ಬೆಂಗಳೂರು3 ಗಂಟೆಗಳು ago

    Gandhi Jayanti 2024: ಗಾಂಧಿ ಜಯಂತಿ ಹಿನ್ನೆಲೆ ಸರ್ಕಾರಿ ಯೋಜನೆಗಳ ಅರಿವು ಮೂಡಿಸಿದ ಎನ್‌ಸಿಸಿ ಕೆಡೆಟ್‌ಗಳು

    Drugs Mafia
    ಕೊಡಗು4 ಗಂಟೆಗಳು ago

    Drugs Mafia: ಥೈಲ್ಯಾಂಡ್ ಟು ದುಬೈ ಡ್ರಗ್‌ ಮಾಫಿಯಾಗೆ ಇಂಡಿಯಾನೆ ಮೈನ್ ಲಿಂಕ್; 3 ಕೋಟಿ ಮೌಲ್ಯದ ಗಾಂಜಾ ವಶ

    Mysuru Dasara 2024
    ಮೈಸೂರು5 ಗಂಟೆಗಳು ago

    Mysuru Dasara 2024: ವೈಭವದ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ

    PSI exam slated to be held across the state today
    ಬೆಂಗಳೂರು9 ಗಂಟೆಗಳು ago

    PSI Exam : ರಾಜ್ಯಾದ್ಯಂತ ಇಂದು ಪಿಎಸ್‌ಐ ಪರೀಕ್ಷೆ; ಇಎನ್‌ಟಿ ವೈದ್ಯರಿಂದ ಅಭ್ಯರ್ಥಿಗಳಿಗೆ ತಪಾಸಣೆ

    Karnataka Weather Forecast
    ಮಳೆ10 ಗಂಟೆಗಳು ago

    Karnataka Weather : ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆ ಜತೆಗೆ ಬಿರುಗಾಳಿ ಎಚ್ಚರಿಕೆ

    Dina Bhavishya
    ಭವಿಷ್ಯ10 ಗಂಟೆಗಳು ago

    Dina Bhavishya : ಈ ದಿನ ಅನೇಕ ಒತ್ತಡಗಳು ದೂರವಾಗಿ ಉತ್ಸಾಹದಿಂದ ಕಾಲ ಕಳೆಯುವಿರಿ

    Gang war in Bengaluru again
    ಬೆಂಗಳೂರು22 ಗಂಟೆಗಳು ago

    Bengaluru Rowdyism: ಬೆಂಗಳೂರಿನಲ್ಲಿ ಮತ್ತೆ ಗ್ಯಾಂಗ್‌ ವಾರ್‌; ನಡುರಸ್ತೆಯಲ್ಲಿ ರಾತ್ರಿ ವೇಳೆ ಝಳಪಿಸಿದ ಮಚ್ಚು

    Kannada Serials
    ಕಿರುತೆರೆ12 ತಿಂಗಳುಗಳು ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Sharmitha Gowda in bikini
    ಕಿರುತೆರೆ12 ತಿಂಗಳುಗಳು ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    galipata neetu
    ಕಿರುತೆರೆ10 ತಿಂಗಳುಗಳು ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ1 ವರ್ಷ ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Bigg Boss- Saregamapa 20 average TRP
    ಕಿರುತೆರೆ12 ತಿಂಗಳುಗಳು ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    Kannada Serials
    ಕಿರುತೆರೆ12 ತಿಂಗಳುಗಳು ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ11 ತಿಂಗಳುಗಳು ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ10 ತಿಂಗಳುಗಳು ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    Kannada Serials
    ಕಿರುತೆರೆ1 ವರ್ಷ ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    varun
    ಕಿರುತೆರೆ11 ತಿಂಗಳುಗಳು ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Sudeep's birthday location shift
    ಸ್ಯಾಂಡಲ್ ವುಡ್1 ತಿಂಗಳು ago

    Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

    Actor Darshan
    ಸ್ಯಾಂಡಲ್ ವುಡ್1 ತಿಂಗಳು ago

    Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

    ಮಳೆ1 ತಿಂಗಳು ago

    Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

    karnataka Weather Forecast
    ಮಳೆ2 ತಿಂಗಳುಗಳು ago

    Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

    Bellary news
    ಬಳ್ಳಾರಿ2 ತಿಂಗಳುಗಳು ago

    Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

    Maravoor bridge in danger Vehicular traffic suspended
    ದಕ್ಷಿಣ ಕನ್ನಡ2 ತಿಂಗಳುಗಳು ago

    Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

    Wild Animals Attack
    ಚಿಕ್ಕಮಗಳೂರು2 ತಿಂಗಳುಗಳು ago

    Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

    Karnataka Weather Forecast
    ಮಳೆ2 ತಿಂಗಳುಗಳು ago

    Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

    assault case
    ಬೆಳಗಾವಿ2 ತಿಂಗಳುಗಳು ago

    Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

    karnataka rain
    ಮಳೆ2 ತಿಂಗಳುಗಳು ago

    Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

    ಟ್ರೆಂಡಿಂಗ್‌