ದಾವಣಗೆರೆ ದಕ್ಷಿಣ ʼಕೈʼ ವಶ, ಸಮರ್ಥ್‌ಗೆ ವಿಜಯಮಾಲೆ - Vistara News

Latest

ದಾವಣಗೆರೆ ದಕ್ಷಿಣ ʼಕೈʼ ವಶ, ಸಮರ್ಥ್‌ಗೆ ವಿಜಯಮಾಲೆ

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಕಾಂಗ್ರೆಸ್‌ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌‌‌ ಅಭ್ಯರ್ಥಿ ಸಮರ್ಥ್​ ಮಲ್ಲಿಕಾರ್ಜುನ್‌‌‌‌‌‌ ವಿಜಯ ಪತಾಕೆ ಹಾರಿಸಿದ್ದಾರೆ. ದಿವಂಗತ ಶಾಮನೂರು ಶಿವಶಂಕರಪ್ಪ ಮೊಮ್ಮಗ ಹಾಗೂ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಸಂಸದೆ ಪ್ರಭಾ ಮಲ್ಲಿಕಾರ್ಜುನ್‌ ಅವರ ಪುತ್ರ ಸಮರ್ಥ್‌ ಉಪಸಮರದಲ್ಲಿ ಗೆದ್ದು ಬೀಗಿದ್ದಾರೆ. ಇವರಿಗೆ ಪ್ರಬಲ ಪೈಪೋಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಸೋಲನುಭವಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಏ.9ರಂದು ಉಪಚುನಾವಣೆ ನಡೆದಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಕೇರಳಂ: ಯುಡಿಎಫ್‌ ಗೆಲುವಿನ ಹಿಂದಿನ ಏಳು ರಣತಂತ್ರ!

VISTARANEWS.COM


on

ಕೇರಳಂನಲ್ಲಿ ಹತ್ತು ವರ್ಷಗಳ ನಂತರ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಭರ್ಜರಿ ಬಹುಮತ ಪಡೆದಿದೆ. ಕರ್ನಾಟಕ, ತೆಲಂಗಾಣ ನಂತರ ಕೇರಳಂನಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ದಶಕದ ಆಡಳಿತದ ನಂತರ ಎಲ್‌ಡಿಎಫ್‌ ಅಧಿಕಾರ ಕಳೆದು ಕೊಂಡಿದೆ.
ಕಾಂಗ್ರೆಸ್‌ ಕೇರಳ ಜಯಭೇರಿಗೆ ಸಪ್ತ ಕಾರಣಗಳು
1. ಕಾಂಗ್ರೆಸ್‌ನಲ್ಲಿ ಒಗ್ಗಟ್ಟು:
ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಗೆದ್ದಾಗಲೇ, ಅಸೆಂಬ್ಲಿಯ ಚುನಾವಣೆ ದಿಕ್ಸೂಚಿ ಸ್ಪಷ್ಟವಾಗಿತ್ತು. ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದ ಕಾಂಗ್ರೆಸ್‌, ಮೊದಲು ಪಕ್ಷದಲ್ಲಿ ಇದ್ದ ಭಿನ್ನಮತ ಬಗೆಹರಿಸಿತು. ಎಲ್ಲಾ ನಾಯಕರನ್ನು ಮಾತುಕತೆ ಮೂಲಕ ಮನವೊಲಿಸಿ ಅಭೂತಪೂರ್ವ ಒಗ್ಗಟ್ಟು ಪ್ರದರ್ಶಿಸಿತು. ಇದು ಗೆಲುವಿಗೆ ಮೂಲ ಕಾರಣ
2. ಟಿಕೆಟ್‌ ನೀಡುವಲ್ಲಿ ಸ್ಪಷ್ಟತೆ:
ಟಿಕೆಟ್‌ ಗೊಂದಲ ತಪ್ಪಿಸಲು ಕಾಂಗ್ರೆಸ್‌ ಹೈಕಮಾಂಡ್‌, ಕೇರಳಕ್ಕೆ ಮದುಸೂಧನ್‌ ಮಿಸ್ತ್ರಿ ಅವರನ್ನು ರವಾನಿಸಿತ್ತು. ಹಾಲಿ ಸಂಸದರಿಗೆ ಟಿಕೆಟ್‌ ನೀಡಲೇ ಇಲ್ಲ. ಪ್ರಬಲ ಅಭ್ಯರ್ಥಿಗಳಿಗೆ ಮೊದಲು ಮಣೆ ಹಾಕಿತು. ಕೇರಳ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಗೊಂದಲ ಉಂಟಾಗದಂತೆ ನೋಡಿಕೊಳ್ಳಲಾಯಿತು.
3. ಶಿಸ್ತಿನ ಪಕ್ಷವಾಗಿ ರೂಪುಗೊಂಡಿದ್ದು :
ಚುನಾವಣೆಗೆ ಕೆಲವೇ ತಿಂಗಳು ಮೊದಲು ಕಾಂಗ್ರೆಸ್‌ನಲ್ಲಿ ಅದ್ಭುತ ಬದಲಾವಣೆ ಉಂಟಾಗಿತ್ತು. ಪರಸ್ಪರ ಕಿತ್ತಾಡುತ್ತಿದ್ದ ನಾಯಕರು ಒಂದಾಗಿದ್ದರು. ಪಕ್ಷದ ಇಮೇಜ್‌ ಸಂಪೂರ್ಣವಾಗಿ ಬದಲಾಗಿತ್ತು. ಕಾಂಗ್ರೆಸ್‌ ಘಟಕ ಸಂಪೂರ್ಣ ಸಂಯೋಜಿತ ತಂಡವಾಗಿ ಮಾರ್ಪಾಡಾಗಿತ್ತು. ಈ ರಣತಂತ್ರ ರೂಪಿಸಿದ್ದು ಪಕ್ಷದ ಉಸ್ತುವಾರಿ ದೀಪ್‌ ದಾಸ್‌ ಮುನ್ಶಿ.
4. ಯುವ, ಹೊಸ ಮುಖಗಳಿಗೆ ಮಣೆ:
ಎಲ್‌ಡಿಎಫ್‌ ಶಾಸಕರ ದೌರ್ಬಲ್ಯಗಳನ್ನು ಕಾಂಗ್ರೆಸ್‌ ಚೆನ್ನಾಗಿ ಅಧ್ಯಯನ ಮಾಡಿತ್ತು. ಹಾಗಾಗಿ, ಶಾಸಕರ ವಿರೋಧಿ ಅಲೆ ಹೆಚ್ಚಿರುವ ಕಡೆ ಯುವ ಹಾಗೂ ಹೊಸ ಮುಖಗಳಿಗೆ ಮಣೆ ಹಾಕಿತ್ತು. ಹಾಗಾಗಿ, ಬದಲಾವಣೆ ಬಯಸುವ ಮತದಾರ ಹೊಸ ನಾಯಕತ್ವಕ್ಕೆ ಮತಹಾಕಿದ್ದ. ಯುವಕರಿಗೆ ಮಣೆ ಹಾಕುವ ರಣತಂತ್ರ ಫಲ ನೀಡಿತ್ತು.
5. ಆಡಳಿತ ವಿರೋಧಿ ಅಲೆ:
ಪಿಣರಾಯಿ ಸರ್ಕಾರದ ಲೋಪದೋಷಗಳನ್ನು ಕಾಂಗ್ರೆಸ್‌ ಯಶಸ್ವಿಯಾಗಿಯೇ ಎಕ್ಸ್‌ಪೋಸ್‌ ಮಾಡಿತ್ತು. ಅಲ್ಲದೇ, ಹತ್ತು ವರ್ಷಗಳ ಆಡಳಿತದ ಕಾರಣ ಸಹಜವಾಗಿಯೇ ಆಡಳಿತ ವಿರೋಧಿ ಅಲೆ ದಟ್ಟವಾಗಿತ್ತು. ಆ ಅಲೆಯ ಮೇಲೆ ಸವಾರಿ ಮಾಡಿದ್ದ ಕಾಂಗ್ರೆಸ್‌ ಗೆಲುವಿನ ದಡ ಸೇರಿತ್ತು.
6. ಪವರ್‌ಫುಲ್‌ ಪ್ರಚಾರ:
ಪ್ರಚಾರದಲ್ಲಿ ಕೂಡಾ ಕಾಂಗ್ರೆಸ್‌ ಹಿಂದೆ ಬೀಳಲಿಲ್ಲ. ಗ್ಯಾರಂಟಿ ಯೋಜನೆಗಳು ಮುನ್ನೆಲೆಗೆ ಬಂತು. ರಾಹುಲ್‌ ಗಾಂಧಿ ಖುದ್ದು ಪ್ರಚಾರದ ಚುಕ್ಕಾಣಿ ಹಿಡಿದಿದ್ದರು. ಎಡರಂಗ ಸರ್ಕಾರದ ಲೋಪದೋಷಗಳನ್ನು ಜನರ ಮುಂದಿಡುವಲ್ಲಿ ಕಾಂಗ್ರೆಸ್‌ ಸಕ್ಸಸ್‌ ಆಯಿತು. ಕಾಂಗ್ರೆಸ್‌ ಪಿಣರಾಯಿಯವರನ್ನು ಟಾರ್ಗೆಟ್‌ ಮಾಡಿ ಪ್ರಚಾರ ನಡೆಸುತಿತ್ತು. ಕರ್ನಾಟಕವೂ ಸೇರಿ, ದೇಶಾದ್ಯಂತ ಇರುವ ಕಾಂಗ್ರೆಸ್‌ ನಾಯಕರ ನೆರವನ್ನೂ ಪಡೆಯಲಾಗಿತ್ತು.
೭. ಮುಸ್ಲಿಂ, ಕ್ರೈಸ್ತ ಹಾಗೂ ನಾಯರ್‌ ಸಮುದಾಯದ ಬೆಂಬಲ:
ಮುಸ್ಲಿಂ ಲೀಗ್‌ ಜೊತೆ ಮೈತ್ರಿ ಇತ್ತು. ಈ ಕಾರಣಕ್ಕೆ ಮುಸ್ಲಿಂ ಮತಗಳು ಸುಲಭವಾಗಿ ಸಿಕ್ಕಿತು. ಇಮ್ರಾನ್‌ ಪ್ರತಾಪ್‌ಗಡಿಯಂತಹ ನಾಯಕರನ್ನು ಮುಸ್ಲಿಮ್‌ ಮತಗಳಿಗಾಗಿಯೇ ನಿಯೋಜಿಸಲಾಗಿತ್ತು. ಸಂಪ್ರದಾಯಿಕ ಕ್ರೈಸ್ತರ ಮತಗಳೂ ಕಾಂಗ್ರೆಸ್‌ ಪಾಲಾಗಿತ್ತು. ಸಿಎಂ ರೇಸ್‌ನಲ್ಲಿರುವ ಕೆ.ಸಿ ವೇಣುಗೋಪಾಲ್‌, ವಿ.ಡಿ ಸತೀಶನ್‌ ಮತ್ತು ರಮೇಶ್‌ ಚೆನ್ನಿಂತಲ – ಮೂವರೂ ನಾಯರ್‌ ಸಮುದಾಯದ ನಾಯಕರಾಗಿರುವ ಕಾರಣಕ್ಕೆ, ಆ ಸಮುದಾಯವೂ ಕಾಂಗ್ರೆಸ್‌ನ್ನು ಸಂಪೂರ್ಣವಾಗಿ ಬೆಂಬಲಿಸಿತ್ತು.

Continue Reading

Latest

ಬಾಗಲಕೋಟೆಯಲ್ಲಿ ಕಾಂಗ್ರೆಸ್‌‌‌ನ ಉಮೇಶ್‌ ಮೇಟಿ ಭರ್ಜರಿ ಗೆಲುವು

VISTARANEWS.COM


on

ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌‌ ಮೇಟಿ ಗೆಲುವು ಸಾಧಿಸಿದ್ದಾರೆ. 21,866 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಮಠ ವಿರುದ್ಧ ಕಾಂಗ್ರೆಸ್‌‌ನ ಉಮೇಶ್‌ ಮೇಟಿ ಗೆಲುವು ಪಡೆದಿದ್ದಾರೆ. ಉಮೇಶ್‌ ಮೇಟಿ 97,941 ಮತಗಳನ್ನು ಪಡೆದಿದ್ರೆ, ವೀರಣ್ಣ ಚರಂತಿಮಠ 76,075 ಮತಗಳನ್ನು ಪಡೆದುಕೊಂಡಿದ್ದರು. ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಉಮೇಶ್‌‌ ಮೇಟಿಯವರ ತಂದೆ ಹೆಚ್‌.ವೈ.ಮೇಟಿ ಯವರ ನಿಧನದಿಂದ ತೆರವಾಗಿದ್ದ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಪಕ್ಷ ಯಶಸ್ವಿಯಾಗಿದೆ.

Continue Reading

Latest

ದ್ರಾವಿಡ ನಾಡಲ್ಲಿ ʼದಳಪತಿʼ ಯುಗಾರಂಭ

VISTARANEWS.COM


on

ತಮಿಳುನಾಡು ಅಕ್ಷರಶಃ ಅಚ್ಚರಿಯ ಫಲಿತಾಂಶ ನೀಡಿದೆ. ʼವಿಜಯ್‌ ವೋಟ್‌ ಕಟರ್‌ ಆಗಬಹುದು..ಒಂದು ಅಥವಾ ಎರಡು ಸೀಟು ಗೆದ್ದರೆ ಹೆಚ್ಚುʼ, ಎಂದವರ ಮಧ್ಯೆ ದಳಪತಿ ತಮಿಳುನಾಡಿನ ಅತಿದೊಡ್ಡ ಶಕ್ತಿಯಾಗಿ ಹೊಮ್ಮಿದ್ದಾರೆ. ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ. ಈ ಮೂಲಕ ಪಕ್ಷ ಕಟ್ಟಿದ ಚೊಚ್ಚಲ ಪ್ರಯತ್ನದಲ್ಲೇ ಸಿಎಂ ಆದ ನಟರ ಸಾಲಲ್ಲಿ ವಿಜಯ್‌ ನಿಂತಿದ್ದಾರೆ. ತಮಿಳುನಾಡಿನ ಎಂ.ಜಿ ರಾಮಚಂದ್ರನ್‌, ಆಂಧ್ರದ ಎನ್‌ ಟಿ ರಾಮರಾವ್‌ ಬಿಟ್ಟರೆ, ಈ ದಾಖಲೆ ಮಾಡಿದ್ದು ವಿಜಯ್‌ ಮಾತ್ರ.
ವಿಜಯ್‌ ಗೆಲುವಿಗೆ 10 ಕಾರಣಗಳೇನು?
1. ನಟ ವಿಜಯ್‌ ಜನಪ್ರಿಯತೆ:
ಇದರಲ್ಲಿ ಯಾವುದೇ ಸಂದೇಹ ಇಲ್ಲ. ವಿಜಯ್‌ ದಕ್ಷಿಣ ಭಾರತದ ಜನಪ್ರಿಯ ನಟ. ಈ ಜನಪ್ರಿಯತೆಯೇ ಮತವಾಗಿ ವಿಜಯ್‌ ಗೆಲುವಿಗೆ ಕಾರಣವಾಗಿದೆ.
2. ದ್ರಾವಿಡ ಪಕ್ಷಗಳ ಪ್ರಾಬಲ್ಯಕ್ಕೆ ಬ್ರೇಕ್‌:
ತಮಿಳುನಾಡಲ್ಲಿ ಇದುವರೆಗೆ ಡಿಎಂಕೆ, ಎಐಎಡಿಎಂಕೆಯದ್ದೇ ಪ್ರಾಬಲ್ಯ. ಕಳೆದ ಐವತ್ತು ವರ್ಷಗಳಲ್ಲಿ ಈ ಎರಡು ಪಕ್ಷಗಳು ಪರ್ಯಾಯ ಅವಧಿಗೆ ತಮಿಳುನಾಡಲ್ಲಿ ಆಡಳಿತ ನಡೆಸಿವೆ. ಬದಲಾವಣೆ ಬಯಸಿದ ಜನರಿಗೆ ಆಶಾಕಿರಣವಾಗಿ ಹೊಮ್ಮಿದ್ದು ಟಿವಿಕೆ ಮುಖ್ಯಸ್ಥ ವಿಜಯ್‌. ಹಾಗಾಗಿ, ಜನತೆ ವಿಜಯ್‌ ಮೂಲಕ ಬದಲಾವಣೆ ತಂದಿದ್ದಾರೆ ಎಂದು ಹೇಳಬಹುದು.
3. ಯುವಕರನ್ನು ಸೆಳೆದ ದಳಪತಿ:
ತಮಿಳುನಾಡಿನ ಶೇ. 42 ರಷ್ಟು ಯುವ ಮತದಾರರಿದ್ದಾರೆ. ವಿದ್ಯಾರ್ಥಿಗಳಿದ್ದಾರೆ. ಬಹುತೇಕ ಯುವ ಮತದಾರರು ಡಿಎಂಕೆ, ಎಐಡಿಎಂಕೆ ಬಿಟ್ಟು ವಿಜಯ್‌ ಕೈಹಿಡಿದಿದ್ದಾರೆ. 20ರಿಂದ 29 ವಯೋಮಾನದ ಶೇ. 59ರಷ್ಟು ಯುವಕರು ಟಿವಿಕೆಗೆ ಜೈ ಎಂದಿದ್ದಾರೆ. 30-39 ವಯೋಮಾನದ ಶೇ. 45 ಮಂದಿ ದಳಪತಿಯನ್ನು ದಡಮುಟ್ಟಿಸಿದ್ದಾರೆ ಎನ್ನಲಾಗುತ್ತಿದೆ.
4. ಹೊಸ ಮತದಾರರ ಮೊದಲ ಆಯ್ಕೆ ವಿಜಯ್‌:
ತಮಿಳುನಾಡಿನಲ್ಲಿ ನಡೆದ ಸರ್ವೇ ಪ್ರಕಾರ ಶೇ. 68 ರಷ್ಟು ಹೊಸ ವೋಟರ್ಸ್‌ ವಿಜಯ್‌ಗೆ ಬೆಂಬಲ ನೀಡಿದ್ದಾರೆ. ದ್ರಾವಿಡ ರಾಜಕಾರಣದ ಅಂತಃಸುಳಿವನ್ನೇ ಅರಿಯದ ಈ ಹೊಸ ವೋಟರ್ಸ್‌ ವಿಜಯ್‌ ವಿಜಯ ಯಾತ್ರೆಗೆ ಸಾಥ್‌ ಕೊಟ್ಟಿದ್ದಾರೆ.
5. ಟಿವಿಕೆಗೆ ಮಹಿಳೆಯರ ಬೆಂಬಲ:
ಸುಪ್ರಸಿದ್ದ ನಟ ಎಂಬುದರ ಜೊತೆಗೆ ವಿಜಯ್‌ ಅಭಿವೃದ್ಧಿ ಆಧಾರಿತ ರಾಜಕೀಯಕ್ಕೆ ಮಹಿಳೆಯರೂ ಸೈ ಎಂದಿದ್ದಾರೆ. ಟಿವಿಕೆಗೆ ಮತ ಹಾಕುವ ಮೂಲಕ ಡಿಎಂಕೆ, ಎಐಎಡಿಎಂಕೆ ಪ್ರಾಬಲ್ಯಕ್ಕೆ ಬ್ರೇಕ್‌ ಹಾಕಿದ್ದಾರೆ.
6. ಟಿವಿಕೆಗೆ ಮತ ಹಾಕಿರುವ ಗ್ರಾಮೀಣರು:
ತಮಿಳುನಾಡಿನ ಗ್ರಾಮೀಣ ಭಾಗದಲ್ಲಿರುವ 90 ಕ್ಷೇತ್ರಗಳಲ್ಲಿ ಟಿವಿಕೆ ಅತ್ಯುತ್ತಮ ಸಾಧನೆ ತೋರಿದೆ. ವಿಜಯ್‌ ಗೆಲುವಿನ ಹಿಂದಿನ ಶಕ್ತಿಯೇ ಗ್ರಾಮೀಣ ಭಾಗದ ಜನ. ಯಾವುದೇ ಅಲೋಚನೆ ಮಾಡದೆ ಜನತೆ ವಿಜಿಲ್‌ಗೆ ವೋಟ್‌ ಒತ್ತಿದ್ದಾರೆ.
7. ಜಾತಿ ಮೀರಿದ ರಾಜಕೀಯ ಶಕ್ತಿಯಾದ ವಿಜಯ್‌:
ಒಂದು ಸಮೀಕ್ಷೆ ಪ್ರಕಾರ ದಳಪತಿಗೆ ಎಲ್ಲಾ ವರ್ಗ, ಸಮುದಾಯದ ಜನರ ಬೆಂಬಲ ಸಿಕ್ಕಿದೆ. ವಿಜಯ್‌ ಮೂಲತಃ ಕ್ರೈಸ್ತ ಧರ್ಮಕ್ಕೆ ಸೇರಿದ್ದರೂ ಕೂಡಾ ಹಿಂದೂ, ಮುಸ್ಲಿಂ, ಕ್ರೈಸ್ತ, ದಲಿತ ಹೀಗೆ ಎಲ್ಲಾ ವರ್ಗಗಳ ಬೆಂಬಲವೂ ವಿಜಯ್‌ಗೆ ಸಿಕ್ಕಿದೆ ಎನ್ನಲಾಗಿದೆ.
8. ಅಭಿಮಾನಿ ಬಳಗದ ಡಿಜಿಟಲ್‌ ಪ್ರಚಾರ:
ವಿಜಯ್‌ ಅಭಿಮಾನಿಗಳ ಡಿಜಿಟಲ್‌ ಪ್ರಚಾರವೇ ಟಿವಿಕೆ ಅತಿದೊಡ್ಡ ಶಕ್ತಿ ಎನ್ನಲಾಗಿದೆ. ವಿಜಯ್‌ ಫ್ಯಾನ್ಸ್‌ ತಮ್ಮ ಡಿಜಿಟಲ್‌ ಪ್ರಚಾರದ ಮೂಲಕ ಶೇ 40ರಷ್ಟು ಮತದಾರರ ಮೇಲೆ ಪ್ರಭಾವ ಬೀರಿದ್ದರು.
9. ಟಿವಿಕೆ ಪಕ್ಷದ ಪ್ರಣಾಳಿಕೆ:
ಪ್ರಣಾಳಿಕೆಯಲ್ಲಿ ವಿಜಯ್‌ ಫೋಕಸ್‌ ಮಾಡಿದ್ದೇ ಯುವಕರನ್ನ. ಅಡಮಾನವಿಲ್ಲದ ಶೈಕ್ಷಣಿಕ ಸಾಲ, ನಿರುದ್ಯೋಗ ಭತ್ಯೆ ಇತ್ಯಾದಿ ಆಶ್ವಾಸನೆಗಳು ಜನರ ಮನಗೆದ್ದಿವೆ ಎನ್ನಲಾಗಿದೆ.
10. ತಮಿಳುನಾಡಿನಲ್ಲಿ ತ್ರಿಕೋನ ಸ್ಪರ್ಧೆ:
ಇಲ್ಲಿಯವರೆಗೆ ತಮಿಳುನಾಡಲ್ಲಿ ಡಿಎಂಕೆ-ಎಐಡಿಎಂಕೆ ನಡುವೆ ನೇರ ಸ್ಪರ್ಧೆ ಇತ್ತು. ಈ ಸಲ ಅಖಾಡಕ್ಕೆ ಟಿವಿಕೆ ಪ್ರವೇಶದಿಂದಾಗಿ ವೋಟು ಮೂರು ಭಾಗವಾಗಿತ್ತು. ಮತ ವಿಭಜನೆಯ ನೇರ ಲಾಭ ವಿಜಯ್‌ಗೆ ಆಗಿದೆ ಎನ್ನಲಾಗಿದೆ.

Continue Reading

Latest

‘ಟಾಕ್ಸಿಕ್’ ಸಿನಿಮಾದಲ್ಲಿ ಬೋಲ್ಡ್ ದೃಶ್ಯಕ್ಕೆ ಕತ್ತರಿ ಹಾಕಿ ಕಿಯಾರಾ ಅಡ್ವಾಣಿ ಮನವಿ?

VISTARANEWS.COM


on

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಕುರಿತು ದಿನಕ್ಕೊಂದು ಹೊಸ ಸುದ್ದಿ ಬರ್ತಿದೆ. ಇದೀಗ ಸಿನಿಮಾದ ಕೆಲವು ದೃಶ್ಯಗಳ ಬಗ್ಗೆ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಚಿತ್ರೀಕರಣಕ್ಕೂ ಮೊದಲು ನಿರ್ದೇಶಕರು ಈ ದೃಶ್ಯಗಳು ನಟಿಯ ಕಂಫರ್ಟ್ ಜೋನ್ ಒಳಗೇ ಇರುತ್ತವೆ ಎಂದು ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ, ಚಿತ್ರೀಕರಣ ಮುಗಿದ ನಂತರ ಔಟ್‌ಪುಟ್ ನೋಡಿದ ಕಿಯಾರಾ ಅವರಿಗೆ ಆ ದೃಶ್ಯಗಳು ತೆರೆಯ ಮೇಲೆ ಅತಿ ಎನಿಸಿದೆಯಂತೆ. ಈ ಕಾರಣದಿಂದ ಅವರು ದೃಶ್ಯಗಳನ್ನು ಎಡಿಟ್ ಮಾಡಲು ಕೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ಮತ್ತು ‘ಮಾನ್ಸ್‌ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ. ಜೂನ್ 4ರಂದು ಬಿಡುಗಡೆ ಆಗಬೇಕಿದ್ದ ಈ ಸಿನಿಮಾದ ರಿಲೀಸ್ ದಿನಾಂಕ ಸದ್ಯಕ್ಕೆ ಮುಂದೂಡಿಕೆ ಆಗಿದೆ. ಹೊಸ ರಿಲೀಸ್ ಡೇಟ್ ತಿಳಿಯಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.

Continue Reading
Advertisement
Latest55 minutes ago

ಕೇರಳಂ: ಯುಡಿಎಫ್‌ ಗೆಲುವಿನ ಹಿಂದಿನ ಏಳು ರಣತಂತ್ರ!

Latest1 hour ago

ದಾವಣಗೆರೆ ದಕ್ಷಿಣ ʼಕೈʼ ವಶ, ಸಮರ್ಥ್‌ಗೆ ವಿಜಯಮಾಲೆ

Latest2 hours ago

ಬಾಗಲಕೋಟೆಯಲ್ಲಿ ಕಾಂಗ್ರೆಸ್‌‌‌ನ ಉಮೇಶ್‌ ಮೇಟಿ ಭರ್ಜರಿ ಗೆಲುವು

Latest4 hours ago

ದ್ರಾವಿಡ ನಾಡಲ್ಲಿ ʼದಳಪತಿʼ ಯುಗಾರಂಭ

Rakshit Shetty Richard Anthony Produce By Hombale
Live News10 hours ago

ಪಂಚರಾಜ್ಯ ವಿಧಾನಸಭಾ ಚುನಾವಣೆ , ಕರ್ನಾಟಕ ಉಪಚುನಾವಣೆ ಫಲಿತಾಂಶದ ಕ್ಷಣಕ್ಷಣದ ಅಪ್‌ಡೇಟ್‌

Latest1 day ago

‘ಟಾಕ್ಸಿಕ್’ ಸಿನಿಮಾದಲ್ಲಿ ಬೋಲ್ಡ್ ದೃಶ್ಯಕ್ಕೆ ಕತ್ತರಿ ಹಾಕಿ ಕಿಯಾರಾ ಅಡ್ವಾಣಿ ಮನವಿ?

Latest2 days ago

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಾಂಗ್ಲಾದೇಶಕ್ಕೆ ಏಕೆ ಟೆನ್ಶನ್‌?

Latest2 days ago

ಜೂನಿಯರ್‌ ಡಾಲಿ ಎಂಟ್ರಿ.. ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ

Latest3 days ago

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ: ಒಂದೇ ದಿನ 993 ರೂ ಹೆಚ್ಚಳ

Latest4 days ago

ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಈಗಲೂ ನಂ.1

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌