ಶಿಗ್ಗಾಂವಿ: ಮನೆ ಗೋಡೆ ಕುಸಿದು ಯುವಕ ಮೃತ್ಯು, ಬಾಣಂತಿ ಪತ್ನಿ, ಪುಟ್ಟ ಮಗು ಬಚಾವ್‌ - Vistara News

ಕರ್ನಾಟಕ

ಶಿಗ್ಗಾಂವಿ: ಮನೆ ಗೋಡೆ ಕುಸಿದು ಯುವಕ ಮೃತ್ಯು, ಬಾಣಂತಿ ಪತ್ನಿ, ಪುಟ್ಟ ಮಗು ಬಚಾವ್‌

ಭಾರಿ ಮಳೆಗೆ ನಲುಗಿದ ಪುಟ್ಟ ಪುಟ್ಟ ಮನೆಗಳು ಈಗ ಕುಸಿಯಲು ಆರಂಭಿಸಿವೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ ನಡೆದ ಇಂತಹುದೇ ಘಟನೆಯಲ್ಲಿ ಒಬ್ಬ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.

VISTARANEWS.COM


on

haveri death
ಮೃತ ಮುಸ್ತಾಕ ಶರೀಫ್‌ ಸಾಬ ಯರಗುಪ್ಪಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿಗ್ಗಾಂವಿ: ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಕುನ್ನೂರ ಗ್ರಾಮದಲ್ಲಿ ಭಾರಿ ಮಳೆಗೆ ಮನೆಯೊಂದು ಕುಸಿದು ಬಿದ್ದು ಯುವಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹೆರಿಗೆಯಾಗಿದ್ದ ಪತ್ನಿ, ಮಗು, ಕುಟುಂಬದವರು ಅಪಾಯದಿಂದ ಪಾರಾಗಿದ್ದಾರೆ.

ಕುಸಿರು ಬಿದ್ದ ಮನೆ

ಕುನ್ನೂರ ಗ್ರಾಮದ ಪ್ಲಾಟ್‌ನಲ್ಲಿ ಈ ದುರಂತ ನಡೆದಿದ್ದು, ಮುಸ್ತಾಕ ಶರೀಫ್‌ ಸಾಬ ಯರಗುಪ್ಪಿ (27)ಮೃತಪಟ್ಟ ದುರ್ದೈವಿ. ತೀವ್ರ ಗಾಯಗೊಂಡ ಇವರನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಮನೆ ಮೊದಲೇ ಶಿಥಿಲವಾಗಿತ್ತು. ಈ ಪ್ರದೇಶದಲ್ಲಿ ನಿರಂತರವಾಗಿ ಬೀಳುತ್ತಿರುವ ಭಾರಿ ಮಳೆಯಿಂದ ಅದು ಇನ್ನಷ್ಟು ಶಿಥಿಲಗೊಂಡಿತ್ತು. ಮನೆಯ ಒಂದು ಭಾಗ ಕುಸಿದು ಬಿದ್ದಿದ್ದು ಅಲ್ಲೇ ಇದ್ದ ಯುವಕ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಈ ಕುಟುಂಬಕ್ಕೆ ಬೇರೆ ಕಡೆ ವಾಸದ ವ್ಯವಸ್ಥೆ ಮಾಡಲಾಗಿದೆ. ಆದರೆ, ಪುಟ್ಟ ಮಗು, ಪತ್ನಿ ಮತ್ತು ಕುಟುಂಬಿಕರು ಮನೆ ಮಗನನ್ನು ಕಳೆದುಕೊಂಡು ತೀವ್ರ ನೋವು ಅನುಭವಿಸುತ್ತಿದ್ದಾರೆ.

ಕುಮದ್ವತಿ ನದಿ ಉಕ್ಕಿರುವುದು

ಕುಮದ್ವತಿ ನದಿ ಆರ್ಭಟ
ರಾಣೆಬೆನ್ನೂರು ತಾಲೂಕಿನ ಹಲವು ಭಾಗಗಳಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದೆ. ಮಣಕೂರು- ಲಿಂಗದಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಪಕ್ಕದ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದ್ದು, ಜಮೀನುಗಳು ನದಿಯಂತಾಗಿವೆ. ರಾಣೆಬೆನ್ನೂರ ಶಾಸಕ ಅರುಣಕುಮಾರ ಪೂಜಾರ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ | ಪಕ್ಕದ ಮನೆಗೆ ಮಲಗಲು ಬಂದವರು ಮರ ಬಿದ್ದು ಮೃತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Paris Olympics 2024 : ರಿಲಯನ್ಸ್ ಫೌಂಡೇಷನ್ ಸಹಯೋಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ “ಇಂಡಿಯಾ ಹೌಸ್”

“ಭಾರತಕ್ಕೆ ಒಲಿಂಪಿಕ್ ಸಂಭ್ರಮವನ್ನು ತರಬೇಕು ಎಂಬ ನೂರಾ ನಲವತ್ತು ಕೋಟಿ ಭಾರತೀಯರ ಕನಸನ್ನು ನನಸಾಗಿಸಲು ಇಂಡಿಯಾ ಹೌಸ್ ಮತ್ತೊಂದು ಹೆಜ್ಜೆಯಾಗಲಿದೆ ಎಂದು ನಾವು ನಿಜವಾಗಿಯೂ ಭಾವಿಸುತ್ತೇವೆ!” ನೀತಾ ಅಂಬಾನಿ ಹೇಳಿದ್ದಾರೆ.

VISTARANEWS.COM


on

Paris Olympics 2024
Koo

ಮುಂಬೈ : ವಿಶ್ವ ಮಟ್ಟದಲ್ಲಿ ಪ್ರಮುಖ ಕ್ರೀಡಾಕೂಟವಾದ ಒಲಿಂಪಿಕ್ಸ್ (Paris Olympics 2024) ಆರಂಭಕ್ಕೆ ಇನ್ನು ಕೇವಲ ಒಂದು ತಿಂಗಳಷ್ಟೇ ಬಾಕಿ ಇದೆ. ಪ್ಯಾರಿಸ್ ಒಲಿಂಪಿಕ್ಸ್- 2024ರ ಕಡೆಗೆ ವಿಶ್ವಾದ್ಯಂತದ ಕ್ರೀಡಾಸಕ್ತರು ಕಣ್ಣು ನೆಟ್ಟಿದ್ದಾರೆ. ಅಂದಹಾಗೆ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ “ಇಂಡಿಯಾ ಹೌಸ್” ಕಾಣಬಹುದಾಗಿದೆ. ಭಾರತೀಯ ಒಲಿಂಪಿಕ್ಸ್ ಒಕ್ಕೂಟದ (ಐಒಎ) ಸಹಭಾಗಿತ್ವ ವಹಿಸಿರುವಂಥ ರಿಲಯನ್ಸ್ ಫೌಂಡೇಷನ್ ನಿಂದ ಈ “ಇಂಡಿಯಾ ಹೌಸ್” ಪರಿಕಲ್ಪನೆ ಮೂಡಿದೆ. ಈ ಇಂಡಿಯಾ ಹೌಸ್ ನಲ್ಲಿ ಭಾರತದ ಕ್ರೀಡಾ ಸಂಸ್ಕೃತಿ- ಪರಂಪರೆಯನ್ನು ಪ್ರದರ್ಶಿಸಲಾಗುತ್ತದೆ. ಅದರಲ್ಲಿ ಕ್ರೀಡೆಗೆ ಸಂಬಂಧಿಸಿ ಭಾರತದ ಭೂತ- ಭವಿಷ್ಯತ್ ಹಾಗೂ ವರ್ತಮಾನದ ಸಾಧನೆ, ಕನಸುಗಳನ್ನು ಸಹ ತೋರಿಸಲಾಗುತ್ತದೆ. ತಂತ್ರಜ್ಞಾನ ಮತ್ತು ಡಿಜಿಟಲೈಸೇಷನ್ ನಲ್ಲಿ ಭಾರತದ ಸಾಧನೆಯನ್ನು ಜಗತ್ತಿನೆದುರು ತೆರೆದಿಡಲಾಗುತ್ತದೆ. ವಿಶ್ವದ ವಿವಿಧ ಅಥ್ಲೀಟ್ ಗಳು, ಗಣ್ಯರು, ಕ್ರೀಡಾ ಉತ್ಸಾಹಿಗಳು ಈ ಇಂಡಿಯಾ ಹೌಸ್ ಗೆ ಭೇಟಿ ನೀಡುವ ನಿರೀಕ್ಷೆ ಇದೆ. ಇನ್ನು ಭಾರತದ ನೀತಿಯನ್ನು ವ್ಯಾಖ್ಯಾನಿಸುವ ಏಕತೆ, ವೈವಿಧ್ಯತೆ ಮತ್ತು ಶ್ರೇಷ್ಠತೆಯನ್ನು ಸಾರುವುದಕ್ಕೂ ಇದು ಸಹಕಾರಿ ಆಗುತ್ತದೆ.

ಇಂಡಿಯಾ ಹೌಸ್ ಎಂಬುದು ಯಾಕೆ ಮಹತ್ವದ್ದು ಎಂಬ ಬಗ್ಗೆ ಮಾತನಾಡಿದ ಐಒಎ ಸದಸ್ಯೆ , ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರು , “ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಇಂಡಿಯಾ ಹೌಸ್ ಅನ್ನು ಘೋಷಿಸಲು ನಾನು ಅಪಾರ ಸಂತೋಷ ಪಡುತ್ತೇನೆ ಮತ್ತು ಇದೇ ಉತ್ಸಾಹದಿಂದ ರೋಮಾಂಚನಗೊಂಡಿದ್ದೇನೆ. ಕಳೆದ ವರ್ಷ ಭಾರತದಲ್ಲಿ ನಡೆದ ಐಒಸಿ ಅಧಿವೇಶನವು 40 ವರ್ಷಗಳಲ್ಲಿ ಮೊದಲನೆಯದು, ನಮ್ಮ ಒಲಿಂಪಿಕ್ ಪಯಣದಲ್ಲಿ ಪ್ರಮುಖ ಇದು ಮೈಲುಗಲ್ಲು. ಮತ್ತು ನಮ್ಮ ಕ್ರೀಡಾಪಟುಗಳನ್ನು ಗೌರವಿಸುವ, ನಮ್ಮ ವಿಜಯಗಳನ್ನು ಆಚರಿಸುವ, ನಮ್ಮ ಯಶೋಗಾಥೆಗಳನ್ನು- ಸಾಧನೆಗಳನ್ನು ಹಂಚಿಕೊಳ್ಳುವ ಮತ್ತು ಜಗತ್ತನ್ನು ಭಾರತಕ್ಕೆ ಸ್ವಾಗತಿಸುವ ಜಾಗವಾದ ಇಂಡಿಯಾ ಹೌಸ್ ಅನ್ನು ಪ್ರಾರಂಭಿಸುವುದರೊಂದಿಗೆ ಈ ಪ್ರಯತ್ನಕ್ಕೆ ವೇಗ ನೀಡುವುದನ್ನು ಮುಂದುವರಿಸಲು ನಾವು ಸಂತೋಷಪಡುತ್ತೇವೆ,” ಎಂದಿದ್ದಾರೆ.

“ಭಾರತಕ್ಕೆ ಒಲಿಂಪಿಕ್ ಸಂಭ್ರಮವನ್ನು ತರಬೇಕು ಎಂಬ ನೂರಾ ನಲವತ್ತು ಕೋಟಿ ಭಾರತೀಯರ ಕನಸನ್ನು ನನಸಾಗಿಸಲು ಇಂಡಿಯಾ ಹೌಸ್ ಮತ್ತೊಂದು ಹೆಜ್ಜೆಯಾಗಲಿದೆ ಎಂದು ನಾವು ನಿಜವಾಗಿಯೂ ಭಾವಿಸುತ್ತೇವೆ!” ಎಂದಿದ್ದಾರೆ.

ಇದನ್ನೂ ಓದಿ: Rohit Sharma : ನಿಮ್ಮತಲೆಯಲ್ಲಿರುವ ಮೆದುಳು ಉಪಯೋಗಿಸಿ, ಪಾಕ್​ ಮಾಜಿ ನಾಯಕನ ಚೆಂಡು ವಿರೂಪದ ಆರೋಪಕ್ಕೆ ರೋಹಿತ್ ಶರ್ಮಾ ತಿರುಗೇಟು

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ಮಾತನಾಡಿ , ”ರಿಲಯನ್ಸ್ ಫೌಂಡೇನ್ ಸಹಭಾಗಿತ್ವದಲ್ಲಿ ಉದ್ಘಾಟನೆ ಆಗಲಿರುವ ಇಂಡಿಯಾ ಹೌಸ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಭಿಮಾನಿಗಳು ಮತ್ತು ಕ್ರೀಡಾಪಟುಗಳ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಅಭಿಮಾನಿಗಳಿಗೆ ಮತ್ತು ಇತರ ದೇಶಗಳ ಜನರು ಭಾರತದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಉತ್ತಮ ಮಾರ್ಗವಾಗಿದೆ. ಮತ್ತು ಭಾರತವು ಪ್ರಮುಖ ಕ್ರೀಡಾವಳಿಗಳ ಆತಿಥೇಯ ಆಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಮತ್ತು ಇಂಡಿಯಾ ಹೌಸ್ ನಾವು ಕ್ರೀಡಾ ರಾಷ್ಟ್ರವಾಗಿ ಮತ್ತು ಒಲಿಂಪಿಕ್ ನಲ್ಲಿ ಮಾಡಿದ ಸಾಧನೆಗಳನ್ನು ಪ್ರತಿಬಿಂಬಿಸುತ್ತದೆ. ಈ ಉಪಕ್ರಮ ಮತ್ತು ಭಾರತದ ಒಲಿಂಪಿಕ್ ಪಯಣಕ್ಕೆ ಚಾಲನೆ ನೀಡಿದ ಐಒಸಿ ಸದಸ್ಯೆ ನೀತಾ ಅಂಬಾನಿ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ,” ಎಂದಿದ್ದಾರೆ.

ಭಾರತೀಯ ಸಂಸ್ಕೃತಿ- ಪರಂಪರೆಯ ಪ್ರದರ್ಶನ

ಒಲಿಪಿಕ್ಸ್ ಕ್ರೀಡಾಕೂಟದ ಸಮಯದಲ್ಲಿ “ಪಾರ್ಕ್ ಆಫ್ ನೇಷನ್ಸ್” ಎಂದು ಹೆಸರಿಸಲಾದ ಐಕಾನಿಕ್ ಪಾರ್ಕ್ ಡೆ ಲಾ ವಿಲ್ಲೆಟ್ ನಲ್ಲಿ ಇಂಡಿಯಾ ಹೌಸ್ ಇರಲಿದ್ದು, ನೆದರ್ ಲೆಂಡ್ಸ್, ಕೆನಡಾ, ಬ್ರೆಜಿಲ್ ಮತ್ತು ಅತಿಥೇಯ ಫ್ರಾನ್ಸ್ ಸೇರಿದಂತೆ ಒಟ್ಟು 14 ಇತರ ಆತಿಥ್ಯ ಹೌಸ್ ಗಳಿಂದ ಸುತ್ತುವರಿದಿದೆ. ಇಂಡಿಯಾ ಹೌಸ್ ಎಂಬುದು ಸಂಸ್ಕೃತಿಯಿಂದ ಕಲೆ ಮತ್ತು ಕ್ರೀಡೆಗಳವರೆಗೆ ಅಡುಗೆಯ ಸತ್ಕಾರಗಳು ಮತ್ತು ಯೋಗ, ಕರಕುಶಲ ವಸ್ತುಗಳು, ಸಂಗೀತ, ಭಾರತೀಯ ನೃತ್ಯ ಗುಂಪುಗಳಿಂದ ಪ್ರದರ್ಶನಗಳು ಮತ್ತಿತರ ಅನುಭವಗಳನ್ನು ಅಭಿಮಾನಿಗಳಿಗೆ ದೊರಕಿಸುತ್ತದೆ. ಈ ಮೂಲಕ ಜಗತ್ತಿಗೆ ಭಾರತದ ಪ್ರತಿಭೆ, ಸಾಮರ್ಥ್ಯ ಮತ್ತು ಮಹತ್ವಾಕಾಂಕ್ಷೆಯ ಒಂದು ನೋಟವನ್ನು ನೀಡುತ್ತದೆ.

ಭಾರತೀಯ ಕ್ರೀಡಾಪಟುಗಳು ಮತ್ತು ಅಭಿಮಾನಿಗಳಿಗೆ ಮನೆಯಿಂದ ದೂರ

ಇಂಡಿಯಾ ಹೌಸ್ ಭಾರತದ ವಿಜಯಗಳು ಮತ್ತು ಪದಕ ಗೆಲುವುಗಳನ್ನು ಆಚರಿಸುವ ಗುರಿಯನ್ನು ಹೊಂದಿದೆ. ಸಂದರ್ಶಕರು, ಕ್ರೀಡಾ ದಂತಕಥೆಗಳೊಂದಿಗೆ ಮಾತುಕತೆ ನಡೆಸಲು ಮತ್ತು ತೊಡಗಿಸಿಕೊಳ್ಳುವ ಕಾರ್ಯಕ್ರಮಗಳ ಮೂಲಕ ಸ್ನೇಹಿತರೊಂದಿಗೆ ಪ್ರಮುಖ ಘಟನೆಗಳನ್ನು ಸ್ಮರಣೀಯವಾಗಿಸುವ ಗಮ್ಯಸ್ಥಾನವಾಗಿದೆ. ಇದು ಎಲ್ಲಾ ದೇಶಗಳ ಮಾಧ್ಯಮ ಮತ್ತು ಅಭಿಮಾನಿಗಳಿಗೆ ಮುಕ್ತವಾಗಿರುತ್ತದೆ. ಪ್ರಮುಖ ಭಾರತೀಯ ಕಾರ್ಯಕ್ರಮಗಳ ಸಂಭ್ರಮಾಚರಣೆಯನ್ನು ಇಂಡಿಯಾ ಹೌಸ್‌ನಲ್ಲಿ ಭಾರತದಲ್ಲಿ ಒಲಂಪಿಕ್ ಗೇಮ್ಸ್‌ನ ವಿಶೇಷ ಮಾಧ್ಯಮ ಹಕ್ಕುದಾರರಾದ ವಯಾಕಾಮ್18 ಸಹಭಾಗಿತ್ವದಲ್ಲಿ ಪ್ರತ್ಯೇಕವಾಗಿ ನಡೆಸಲಾಗುತ್ತದೆ.

ಒಂದು ಪ್ರಯತ್ನ

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA)ನ ಪ್ರಮುಖ ಪಾಲುದಾರರಾಗಿ ರಿಲಯನ್ಸ್ ಫೌಂಡೇಷನ್ ಸ್ಥಾಪಿಸಿದ ಇಂಡಿಯಾ ಹೌಸ್ ಎಂಬುದು ಜಾಗತಿಕವಾಗಿ ಭಾರತೀಯ ಕ್ರೀಡೆಗಳನ್ನು ಉನ್ನತ ಸ್ಥಾನಕ್ಕೆ ಒಯ್ಯುವ ಸಾಮೂಹಿಕ ಪ್ರಯತ್ನವನ್ನು ಪ್ರತಿನಿಧಿಸುತ್ತದೆ.

Continue Reading

ಕರ್ನಾಟಕ

Ballari News: ಬಳ್ಳಾರಿಯಲ್ಲಿ ಅಕ್ರಮ ಗಾಂಜಾ ಸಂಗ್ರಹ; ಇಬ್ಬರು ಆರೋಪಿಗಳ ಬಂಧನ

Ballari News: ಬಳ್ಳಾರಿ ನಗರದ ರೂಪನಗುಡಿ ರಸ್ತೆಯ ವಾಲ್ಮೀಕಿ ಬೀದಿಯಲ್ಲಿರುವ ಮನೆಯೊಂದರಲ್ಲಿ ಗಾಂಜಾವನ್ನು ಅಕ್ರಮವಾಗಿ ಶೇಖರಿಸಿ, ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಸುಮಾರು 19.10 ಲಕ್ಷ ರೂ. ಮೌಲ್ಯದ 19 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

VISTARANEWS.COM


on

Illegal ganja storage in Ballari Arrest of two accused Rs 19 10 lakh Valuable ganja seized
Koo

ಬಳ್ಳಾರಿ: ನಗರದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಗಾಂಜಾವನ್ನು ಅಕ್ರಮವಾಗಿ ಶೇಖರಿಸಿ, ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 19.10 ಲಕ್ಷ ರೂ. ಮೌಲ್ಯದ 19 ಕೆಜಿಯಷ್ಟು ಗಾಂಜಾವನ್ನು (Ballari News) ವಶಪಡಿಸಿಕೊಳ್ಳಲಾಗಿದೆ.

ನಗರದ ಎಸ್ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು, ಬಳ್ಳಾರಿ ನಗರದ ರೂಪನಗುಡಿ ರಸ್ತೆಯ ವಾಲ್ಮೀಕಿ ಬೀದಿಯಲ್ಲಿರುವ ಮನೆಯೊಂದರಲ್ಲಿ ಗಾಂಜಾವನ್ನು ಅಕ್ರಮವಾಗಿ ಶೇಖರಿಸಿ, ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಸುಮಾರು 19.10 ಲಕ್ಷ ರು. ಮೌಲ್ಯದ 19 ಕೆಜಿ 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಗಾಂಜಾ ಅಕ್ರಮ ಶೇಖರಣೆ ಪ್ರಕರಣದಲ್ಲಿ ನಗರದ ರಾಣಿತೋಟದ ಬೀರಪ್ಪಗುಡಿ ಹತ್ತಿರದ ನಿವಾಸಿ ವಾಹೀದ್‌ (38) ಹಾಗೂ ರೂಪನಗುಡಿ ರಸ್ತೆಯ ಮಾರಮ್ಮದೇವಿ ಗುಡಿ ಬಳಿಯ ಪಿ. ಚಾಂದ್ ಬಾಷಾ (40) ಅವರನ್ನು ಬಂಧಿಸಲಾಗಿದೆ. ಇನ್ನು ನಾಲ್ವರು ಪತ್ತೆಯಾಗಬೇಕಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Vande Bharath Train: ಬೆಂಗಳೂರು-ಮಧುರೈ ʼವಂದೇ ಭಾರತ್ʼ ರೈಲು ಜುಲೈನಿಂದ ಆರಂಭ

ಕೂಲಿ ಕೆಲಸ ಮಾಡಿಕೊಂಡಿರುವ ಬಂಧಿತ ಇಬ್ಬರು ಆರೋಪಿಗಳ ಬಳಿ ನಾಪತ್ತೆಯಾಗಿರುವ ನಾಲ್ವರು ಗಾಂಜಾವನ್ನು ತಂದಿಡುತ್ತಿದ್ದರು. ಬಳಿಕ ಇದನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನದ ಬಳಿಕ ಈ ಪ್ರಕರಣದ ಪೂರ್ಣ ಮಾಹಿತಿ ಗೊತ್ತಾಗಲಿದೆ ಎಂದು ಎಸ್ಪಿ ಹೇಳಿದರು.

ಆಂಧ್ರಪ್ರದೇಶದ ಕರ್ನೂಲ್, ಅನಂತಪುರ, ರಾಯದುರ್ಗ ಕಡೆಗಳಿಂದ ಗಾಂಜಾ ಅಕ್ರಮವಾಗಿ ಬಳ್ಳಾರಿಗೆ ಪೂರೈಕೆಯಾಗುತ್ತಿರುವುದು ತನಿಖೆ ವೇಳೆ ದೃಢಪಟ್ಟಿದೆ. ಗಾಂಜಾ ಪೂರೈಕೆ ಮಾಡುವ ಒಂದು ತಂಡ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದೆ. ಗಡಿಪ್ರದೇಶದಲ್ಲಿ ಈ ರೀತಿಯ ಅಕ್ರಮ ಮಾದಕ ದ್ರವ್ಯಗಳ ಸಾಗಾಣೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದ ಅವರು, ಈ ವರ್ಷದಲ್ಲಿ 13 ಗಾಂಜಾ ಪ್ರಕರಣಗಳು ದಾಖಲಾಗಿದ್ದು, 18 ಜನರನ್ನು ಬಂಧಿಸಲಾಗಿದೆ. ಬಳ್ಳಾರಿಗೆ ಪೂರೈಕೆಯಾಗುವ ಅಕ್ರಮ ಗಾಂಜಾ ಎಲ್ಲಿ ಸರಬರಾಜಾಗುತ್ತದೆ ಎಂಬುದರ ಕಡೆ ನಿಗಾ ಇಡಲಾಗಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಪೂರೈಕೆ ಮಾಡಲಾಗುತ್ತಿದೆಯೇ ಎಂಬುದನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಶಾಲಾ ಕಾಲೇಜುಗಳಲ್ಲಿ ಸೈಬರ್ ಕ್ರೈಂ, ಮಾದಕ ದ್ರವ್ಯ ಅಪರಾಧ ಕುರಿತು ಜಾಗೃತಿ ಮೂಡಿಸುವ ಕಾರ್ಯ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಿರಂತರವಾಗಿ ನಡೆಯುತ್ತಿದೆ. ಈವರೆಗೆ 45 ಶಾಲಾ-ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ನಡೆದಿವೆ ಎಂದು ಎಸ್ಪಿ ರಂಜೀತ್ ಕುಮಾರ್ ಬಂಡಾರು ವಿವರಿಸಿದರು.

ಗಾಂಜಾ ಪ್ರಕರಣವನ್ನು ಬೇಧಿಸಿದ ಸೈಬರ್‌ ಹಾಗೂ ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯವನ್ನು ಎಸ್ಪಿ ಶ್ಲಾಘಿಸಿದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ವಿತರಿಸಿದರು.

ಇದನ್ನೂ ಓದಿ: KMH CUP: ʼಕೆಎಂಎಚ್‌ ಕಪ್‌ʼ ಕ್ರಿಕೆಟ್‌ಗೆ ನಟಿ ಭಾವನಾ ರಾಮಣ್ಣ ರಾಯಭಾರಿ

ಈ ವೇಳೆ ಸೈಬರ್ ಪೊಲೀಸ್ ಠಾಣೆಯ ಡಿವೈಎಸ್ಪಿ ಡಾ. ಸಂತೋಷ್ ಚೌವ್ಹಾಣ್ ಹಾಗೂ ಹೆಚ್ಚುವರಿ ಎಸ್ಪಿ ನವೀನ್ ಕುಮಾರ್ ಇದ್ದರು.

Continue Reading

ಮಳೆ

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

Karnataka Weather : ಗುಡುಗು ಸಹಿತ ಭಾರಿ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

VISTARANEWS.COM


on

By

Karnataka Weather Forecast
Koo

ಮಂಗಳೂರು/ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆ (Rain news) ಸುರಿಯುತ್ತಿರುವ ಹಿನ್ನೆಲೆ ಜೂ.28ರಂದು ಎಲ್ಲಾ ಪ್ರಾಥಮಿಕ-ಪ್ರೌಢಶಾಲೆಗಳಿಗೆ ರಜೆ ಘೋಷಣೆ (Karnataka weather Forecast) ಮಾಡಲಾಗಿದೆ. ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ನದಿ ಮತ್ತು ಸಮುದ್ರ ತೀರದ ಜನರಿಗೆ ಎಚ್ಚರ ವಹಿಸುವಂತೆ ತಿಳಿಸಲಾಗಿದೆ.

ನಿರಂತರ ಗಾಳಿಯೊಂದಿಗೆ ಭಾರಿ ಮಳೆ ಎಚ್ಚರ

ಕರಾವಳಿ ಭಾಗದಲ್ಲಿ ಅಲ್ಲಲ್ಲಿ ಭಾರೀ ಮಳೆಯೊಂದಿಗೆ 40-50ಕಿ.ಮೀ ವೇಗದಲ್ಲಿ ನಿರಂತರ ಗಾಳಿ ಬೀಸುವ ಸಾಧ್ಯತೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ವ್ಯಾಪಕ ಮಳೆಯಾದರೆ, ಕರ್ನಾಟಕದ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ರಭಸವಾಗಿ ಗಾಳಿ ಬೀಸಲಿದೆ.

ಕಾರವಾರದಲ್ಲಿ ಕಾಟೇಜ್‌ಗಳು ನೆಲಸಮ

ಭಾರಿ ಗಾಳಿ ಮಳೆಗೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ದೇವಭಾಗದಲ್ಲಿ ಕಡಲಕೊರೆತ ಜೋರಾಗಿದೆ. ಜಂಗಲ್ ಲಾಡ್ಜಸ್‌‌ಗೆ ಸೇರಿದ ದೇವಭಾಗ ಬೀಚ್ ರೆಸಾರ್ಟ್ಸ್‌ನ 4 ಕಾಟೇಜ್‌ಗಳಿಗೆ ಹಾನಿಯಾಗಿದೆ. 18 ಕಾಟೇಜ್‌ಗಳಿದ್ದ ದೇವಭಾಗ್ ಬೀಚ್ ರೆಸಾರ್ಟ್‌ನಲ್ಲಿ ಮೂರ್ನಾಲ್ಕು ದಿನಗಳ ಅಂತರದಲ್ಲೇ 4 ಕಾಟೇಜ್‌ಗಳು ನೆಲಸಮವಾಗಿದೆ. ದಡಕ್ಕೆ ಅಪ್ಪಳಿಸುತ್ತಿರುವ ಆಳೆತ್ತರದ ಅಲೆಗಳಿಂದಾಗಿ ಕಾಟೇಜ್‌ಗಳು ಸಮುದ್ರಪಾಲಾದ ಪರಿಣಾಮ 1 ಕೋಟಿಗೂ ಅಧಿಕ ಹಾನಿಯಾಗಿದೆ. ಕಡಲ ತೀರಪ್ರದೇಶಕ್ಕೆ ಹೊಂದಿಕೊಂಡಿದ್ದ ಕಾಟೇಜ್‌ಗಳಿಗೆ ಹಾನಿಯಾಗಿದ್ದು, ಅರಣ್ಯ ಇಲಾಖೆಯ ನೂರಾರು ಮರಗಳು ನೆಲಕ್ಕುರುಳಿವೆ.

ಹೆದ್ದಾರಿಯಲ್ಲಿ ಗುಡ್ಡ ಕುಸಿತ

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಭಾಸ್ಕೇರಿ ಬಳಿ ಬುಧವಾರ ರಾತ್ರಿ ಗುಡ್ಡ ಕುಸಿದಿತ್ತು. ಗುಡ್ಡ ಕುಸಿತದಿಂದ ಹೊನ್ನಾವರ ಬೆಂಗಳೂರು ನಡುವಿನ ಸಂಚಾರ ಅಸ್ತವ್ಯಸ್ಥವಾಗಿತ್ತು. ಇದೀಗ ಸ್ಥಳೀಯರ ಸಹಾಯದಿಂದ ಗುಡ್ಡದ ಮಣ್ಣನ್ನು ತಾಲೂಕು ಆಡಳಿತ ತೆರವು ಮಾಡಿದೆ.

ಕೊಡಗಿನಲ್ಲಿ ಕುಸಿದು ಬಿದ್ದ ತಡೆಗೋಡೆ

ಕೊಡಗು ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರಿದಿದ್ದು, ಬುಧವಾರ ಸುರಿದ ಗಾಳಿ‌ ಮಳೆಗೆ ತಡರಾತ್ರಿ ತಡೆಗೋಡೆ ಕುಸಿದಿದೆ. ಮಡಿಕೇರಿಯ ತ್ಯಾಗರಾಜ ಕಾಲೋನಿಯಲ್ಲಿ ಘಟನೆ ನಡೆದಿದೆ. ಮನೆಗಳ ರಕ್ಷಣೆಗಾಗಿ ನಿರ್ಮಿಸಿದ ತಡೆಗೋಡೆ ಕುಸಿದ ಹಿನ್ನೆಲೆಯಲ್ಲಿ ಹಿಂಬದಿಯ ಮನೆಗಳಿಗೆ ಅಪಾಯ ಕಾಡುತ್ತಿದೆ. ತಡೆಗೋಡೆ ಕುಸಿತ ಹಿನ್ನೆಲೆಯಲ್ಲಿ ಮನೆಯ ಮುಂಭಾಗಕ್ಕೆ ಟಾರ್ಪಲ್ ಹೊದಿಕೆ ಹಾಕಲಾಗಿದೆ. ಸ್ಥಳಕ್ಕೆ ಮಡಿಕೇರಿ ನಗರಸಭೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಡಗು ಜಿಲ್ಲೆಯ ಸಂಪಾಜೆ ಸಮೀಪದ ಕೊಯ್ನಾಡಿನಲ್ಲಿ ಭಾರಿ ಗಾಳಿ ಮಳೆಗೆ ಶಾಲಾ ಕೊಠಡಿಯ ಮೇಲೆ ಗುಡ್ಡ ಕುಸಿದಿದೆ. ಶಾಲಾ ಕೊಠಡಿಯ ಮೇಲೆ ಗುಡ್ಡ ಕುಸಿದು ಗೋಡೆ, ಕಿಟಕಿ ಜಖಂಗೊಂಡಿದೆ. ಶಾಲೆಗೆ ರಜೆ ಇದ್ದಿದ್ದರಿಂದ ಅನಾಹುತ ತಪ್ಪಿದೆ. ಸುಮಾರು 80 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಬಾರಿ ಮಳೆಗಾಲದಲ್ಲಿ ಇದೇ ಸಮಸ್ಯೆ ಎದುರಾಗಿತ್ತು.

ಮಳೆ ನಿಂತರೂ ನಿಲ್ಲದ ನೆರೆಹಾವಳಿ

ಉಡುಪಿ ನಗರದ ಹಲವೆಡೆ ಮಳೆ ನಿಂತರೂ ನೆರೆಹಾವಳಿ ಕಡಿಮೆ ಆಗಿಲ್ಲ. ಮೂಡನಿಡಂಬೂರು ಪರಿಸರದಲ್ಲಿ ನೀರಿನ ಮಟ್ಟ ಹೆಚ್ಚಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಮನೆ ದೇವಾಲಯಗಳಿಗೆ ನೀರು ನುಗ್ಗಿದೆ. ದೈವಾರಾದನೆ ನಡೆಯುವ ಮೂಡನಿಡಂಬೂರು ಗರಡಿಯು ಜಲಾವೃತಗೊಂಡಿದೆ.

ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿದ ಭಾರಿ ಮಳೆ ಹಿನ್ನೆಲೆ ವಿಶ್ವ ಪ್ರಸಿದ್ಧ ಮರವಂತೆ ಬೀಚ್ ಬಳಿ ಸಮುದ್ರದ ರುದ್ರನರ್ತನ ಜೋರಾಗಿದೆ. ತೀರದಲ್ಲಿ ಹಾಕಲಾಗಿರುವ ಟೆಟ್ರಾ ಪಾರ್ಟ್ಸ್ ಗೆ ಬಂದು ಅಲೆಗಳು ಬಡಿಯುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರು, ಪ್ರವಾಸಿಗರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಉಡುಪಿಯ ಕಲ್ಸಂಕದ ಹೋಟೆಲ್- ಲಾಡ್ಜ್ ಗೆ ಮಳೆ ನೀರು ನುಗ್ಗಿದ್ದು, ಎರಡು ಪಂಪ್ ಇಟ್ಟು ನೀರು ಖಾಲಿ ಮಾಡಲಾಗಿದೆ. ಕೃಷ್ಣಮಠ, ಕಲ್ಸಂಕ, ಬೈಲಕೆರೆ ಭಾಗದ ಕೆಲ ಮನೆ ಕಟ್ಟಡಗಳಿಗೆ ನೀರು ನುಗ್ಗಿದೆ. ಲಾಡ್ಜ್, ಹೋಟೆಲ್‌ನ ಬೇಸ್ ಮೆಂಟ್‌ಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಇಂದ್ರಾಣಿ ನದಿ ತುಂಬಿ ಹರಿದ ಪರಿಣಾಮ ಸುತ್ತಮುತ್ತ ಜಲಾವೃತಗೊಂಡಿದೆ.

ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯತ್ ಬಳಿ ಕೃತಕ ನೆರೆ ಸೃಷ್ಟಿಯಾಗಿದೆ. ಯಡ್ತರೆ ಗ್ರಾಮದ ಬಂಕೇಶ್ವರ ಅಂಗನವಾಡಿ ಕೇಂದ್ರಕ್ಕೆ ನೀರು ನುಗಿದ್ದು, ಮಕ್ಕಳಿಗೆ ರಜೆ ಘೋಷಿಸಲಾಗಿದೆ. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ, ಪಟ್ಟಣಪಂಚಾಯತ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡರು. ಅಂಗನವಾಡಿಯ ಆಹಾರ ಸಾಮಾಗ್ರಿ ದಾಸ್ತಾನ ನೀರುಲಾಗಿತ್ತು. ಎರಡು ದಿನದಲ್ಲಿ ಒಳಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಸೂಚನೆ ನೀಡಲಾಗಿದೆ.

Continue Reading

ಕರ್ನಾಟಕ

Bitcoin Scam: ಬಿಟ್‌ಕಾಯಿನ್‌ ಕೇಸ್; ಪೊಲೀಸರ ಮೇಲೆ ಜೀಪ್‌ ಹತ್ತಿಸಿದ್ದ DySP ಶ್ರೀಧರ್‌ ಪೂಜಾರ್‌ಗೆ ಜಾಮೀನು!

Bitcoin Scam: ಬಿಟ್‌ಕಾಯಿನ್‌ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದ ಸಿಸಿಬಿ ತಂಡದಲ್ಲಿ ಶ್ರೀಧರ್‌ ಪೂಜಾರ್‌ ಅವರು ಕೂಡ ಇದ್ದರು. ಬಿಟ್‌ಕಾಯಿನ್‌ ಪ್ರಕರಣದ ಆರೋಪಿಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡು ಹ್ಯಾಕಿಂಗ್‌, ಪಾಸ್‌ವರ್ಡ್‌ ಬದಲಾವಣೆ, ಬಿಟ್‌ಕಾಯಿನ್‌ ವರ್ಗಾವಣೆ ಸೇರಿ ಹಲವು ಅಕ್ರಮ ಎಸಗಿರುವ ಕುರಿತು ಶ್ರೀಧರ್‌ ಪೂಜಾರ್‌ ವಿರುದ್ಧ ಆರೋಪಿಗಳು ಕೇಳಿಬಂದಿದ್ದವು. ಈಗ ಹೈಕೋರ್ಟ್‌ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

VISTARANEWS.COM


on

Bitcoin Scam
Koo

ಬೆಂಗಳೂರು: ರಾಜ್ಯದಲ್ಲಿ ನಡೆದ ಬಿಟ್‌ಕಾಯಿನ್‌ ಹಗರಣಕ್ಕೆ (Bitcoin Scam) ಸಂಬಂಧಿಸಿದಂತೆ ಡಿವೈಎಸ್‌ಪಿ ಶ್ರೀಧರ್‌ ಪೂಜಾರ್‌ (Sridhar Pujar) ಅವರಿಗೆ ಹೈಕೋರ್ಟ್‌ (Karnataka High Court) ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಶ್ರೀಧರ್‌ ಪೂಜಾರ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್‌ ಶ್ಯಾಮ್‌, “ಪೊಲೀಸರು ತಮ್ಮ ಪ್ರತಿಷ್ಠೆಗಾಗಿ ಕೇಸ್‌ ದಾಖಲಿಸಿದ್ದಾರೆ. ಪ್ರಕರಣ ನಡೆದ 4 ವರ್ಷಗಳ ನಂತರ ಬಂಧಿಸಲು ಯತ್ನಿಸಿದ್ದಾರೆ. ಒಂದೇ ಕೇಸ್‌ಗೆ ಎರಡೆರಡು ಬಾರಿ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಿದ್ದಾರೆ” ಎಂದು ಹೇಳಿದರು. ಪೊಲೀಸರ ಕ್ರಮಕ್ಕೆ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಜಿ. ಉಮಾ ಅಸಮಾಧಾನ ವ್ಯಕ್ತಪಡಿಸಿದರು. “ಜನರನ್ನು ಮೂರ್ಖರನ್ನಾಗಿಸಲು ಪೊಲೀಸರು ಯತ್ನಿಸಿದಂತಿದೆ” ಎಂದ ಅವರು, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರು.

ಬಿಟ್‌ಕಾಯಿನ್‌ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದ ಸಿಸಿಬಿ ತಂಡದಲ್ಲಿ ಶ್ರೀಧರ್‌ ಪೂಜಾರ್‌ ಅವರು ಕೂಡ ಇದ್ದರು. ಬಿಟ್‌ಕಾಯಿನ್‌ ಪ್ರಕರಣದ ಆರೋಪಿಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡು ಹ್ಯಾಕಿಂಗ್‌, ಪಾಸ್‌ವರ್ಡ್‌ ಬದಲಾವಣೆ, ಬಿಟ್‌ಕಾಯಿನ್‌ ವರ್ಗಾವಣೆ ಸೇರಿ ಹಲವು ಅಕ್ರಮ ಎಸಗಿರುವ ಕುರಿತು ಶ್ರೀಧರ್‌ ಪೂಜಾರ್‌ ವಿರುದ್ಧ ಆರೋಪಿಗಳು ಕೇಳಿಬಂದಿದ್ದವು. ಅದರಂತೆ, ಎಸ್‌ಐಟಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕಳೆದ ಪೆಬ್ರವರಿಯಲ್ಲಿ ಶ್ರೀಧರ್‌ ಪೂಜಾರ್‌ ಅವರನ್ನು ಬಂಧಿಸಲು ತೆರಳಿದ್ದರು. ಇದೇ ವೇಳೆ, ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದ ಶ್ರೀಧರ್‌ ಪೂಜಾರ್‌, ಪರಾರಿಯಾಗಿದ್ದರು.

Karnataka High court

ಏನಿದು ಬಿಟ್‌ ಕಾಯಿನ್‌ ಹಗರಣ?

ನವೆಂಬರ್ 2020ರಲ್ಲಿ, ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಶ್ರೀಕೃಷ್ಣ ಮತ್ತು ಅವರ ಸಹಚರರನ್ನು ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿಸಿದರು. ಶ್ರೀಕಿ ಅವರು ಡಾರ್ಕ್‌ನೆಟ್ ಮೂಲಕ ಬಿಟ್‌ಕಾಯಿನ್‌ಗಳನ್ನು ಬಳಸಿಕೊಂಡು ಡ್ರಗ್‌ಗಳನ್ನು ಸಂಗ್ರಹಿಸಿದ್ದಾರೆ ಮತ್ತು ಅದನ್ನು ತಮ್ಮ ಹೈ ಪ್ರೊಫೈಲ್ ಕ್ಲೈಂಟ್‌ಗಳಿಗೆ ಮಾರಾಟ ಮಾಡಿದ್ದಾರೆ ಎಂಬ ವಿಷಯ ಹೊರಬಂದಿತ್ತು. ಶ್ರೀಕಿ 2019ರಲ್ಲಿ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ನಡೆದ ಹ್ಯಾಕಿಂಗ್‌ನಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ.

2019ರ ಜುಲೈನಲ್ಲಿ 7.37 ಕೋಟಿ ಅನಧಿಕೃತ ನಿಧಿ ವರ್ಗಾವಣೆ ಬೆಳಕಿಗೆ ಬಂದಿತ್ತು. ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಎಂಬ ಹ್ಯಾಕರ್ ಕರ್ನಾಟಕ ಸರ್ಕಾರದ ಇ-ಆಡಳಿತ ಕೇಂದ್ರದ ಪೋರ್ಟಲ್ ಅನ್ನು ಹ್ಯಾಕ್ ಮಾಡಿದ್ದಾನೆ ಮತ್ತು 10.5 ಕೋಟಿ ರೂಪಾಯಿ ಮತ್ತು 1.05 ಕೋಟಿ ರೂಪಾಯಿಗಳ ಹಣವನ್ನು ಬ್ಯಾಂಕ್ NGO, M/s. ಉದಯ್ ಗ್ರಾಮ ವಿಕಾಸ ಸಂಸ್ಥೆ, ನಾಗ್‌ಪುರ ಮತ್ತು ಮಾಲೀಕತ್ವ, M/s. ನಿಮ್ಮಿ ಎಂಟರ್‌ಪ್ರೈಸಸ್, ಬುಲಂದ್‌ಶಹರ್, ಉತ್ತರ ಪ್ರದೇಶ ಹೀಗೆ ವಿವರ ಇರುವ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ಅವರಿಂದ ನಗದು ಪಡೆದಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ: Actor Darshan: ಪರಪ್ಪನ ಅಗ್ರಹಾರದಿಂದ‌ ದರ್ಶನ್ ಬೇರೆ ಜೈಲಿಗೆ ಶಿಫ್ಟ್?

Continue Reading
Advertisement
Paris Olympics 2024
ಕ್ರೀಡೆ15 mins ago

Paris Olympics 2024 : ರಿಲಯನ್ಸ್ ಫೌಂಡೇಷನ್ ಸಹಯೋಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ “ಇಂಡಿಯಾ ಹೌಸ್”

Viral Video
ವೈರಲ್ ನ್ಯೂಸ್20 mins ago

Viral Video: ಅಬ್ಬಾ.. ಎಂಥಾ ಕ್ರೌರ್ಯ! ಮಹಿಳೆ ಮೇಲೆ ಕಿಡಿಗೇಡಿಗಳಿಂದ ಇದೆಂಥಾ ದೌರ್ಜನ್ಯ-ವಿಡಿಯೋ ಇದೆ ನೋಡಿ

Jio Tariffs
ದೇಶ20 mins ago

Jio Tariffs: ಜಿಯೋ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್;‌ ಶೇ.20ರಷ್ಟು ಶುಲ್ಕ ಹೆಚ್ಚಳ, ನೂತನ ದರಪಟ್ಟಿ ಇಲ್ಲಿದೆ

Internet Addiction
ಆರೋಗ್ಯ29 mins ago

Internet Addiction: ಈ 10 ಲಕ್ಷಣಗಳು ನಿಮ್ಮಲ್ಲಿದ್ದರೆ, ನೀವೂ ಇಂಟರ್ನೆಟ್‌ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ!

Paris Olympics 2024
ಕ್ರೀಡೆ33 mins ago

Paris Olympics 2024: ಒಲಿಂಪಿಕ್ಸ್​ಗೆ ಅರ್ಹತೆ ಪಡೆದ​ ರಾಜ್ಯದ ಇಬ್ಬರು ಸ್ವಿಮ್ಮರ್​ಗಳು

Illegal ganja storage in Ballari Arrest of two accused Rs 19 10 lakh Valuable ganja seized
ಕರ್ನಾಟಕ1 hour ago

Ballari News: ಬಳ್ಳಾರಿಯಲ್ಲಿ ಅಕ್ರಮ ಗಾಂಜಾ ಸಂಗ್ರಹ; ಇಬ್ಬರು ಆರೋಪಿಗಳ ಬಂಧನ

Arvind Kejriwal
ದೇಶ1 hour ago

Arvind Kejriwal: ಪ್ಯಾಂಟ್‌ ಲೂಸ್‌ ಆಗಿದೆ, ಒಂದು ಬೆಲ್ಟ್‌ ಕೊಡಿ; ಕೋರ್ಟ್‌ಗೆ ಅರವಿಂದ್‌ ಕೇಜ್ರಿವಾಲ್‌ ಮನವಿ‌

Karnataka Weather Forecast
ಮಳೆ1 hour ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

Railway New Rules
Latest1 hour ago

Railway New Rules: ರೈಲು ಪ್ರಯಾಣಿಕರೇ, ಬರ್ತ್‌ನಲ್ಲಿ ಮಲಗುವ ಕುರಿತ ಈ ಹೊಸ ರೂಲ್ಸ್‌ ನೆನಪಿನಲ್ಲಿರಲಿ!

Ashada Sale 2024
ಫ್ಯಾಷನ್1 hour ago

Ashada Sale 2024: ಆಷಾಢ ಸೇಲ್‌ನಲ್ಲಿ ಶಾಪಿಂಗ್‌ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ1 hour ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ8 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌