Fashion Show : ಚೆಂದುಳ್ಳಿ ಚೆಲುವೆಯರ ಫ್ಯಾಷನ್ ಮಾಯೆ - Vistara News

ಫ್ಯಾಷನ್

Fashion Show : ಚೆಂದುಳ್ಳಿ ಚೆಲುವೆಯರ ಫ್ಯಾಷನ್ ಮಾಯೆ

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Jumka Bangles Fashion: ಡಿಸೈನರ್‌ ಬಳೆಗಳಿಗೆ ಜುಮ್ಕಾ ಅಲಂಕಾರ!

ಮದುವೆಯ ಸೀಸನ್‌ನಲ್ಲಿ ನಾನಾ ಬಗೆಯ ಡಿಸೈನರ್‌ ಜುಮ್ಕಾ ಬಳೆಗಳು (Jumka Bangles Fashion) ಟ್ರೆಂಡಿಯಾಗಿವೆ. ಯಾವ್ಯಾವ ಬಗೆಯವು ಮಹಿಳೆಯರ ಕೈಗಳನ್ನು ಅಲಂಕರಿಸುತ್ತಿವೆ? ಆಯ್ಕೆ ಹೇಗೆ? ಎಂಬುದರ ಬಗ್ಗೆ ಆಕ್ಸೆಸರೀಸ್‌ ಸ್ಪೆಷಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Jumka Bangles Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ, ಶೆಟ್ಟಿ, ಬೆಂಗಳೂರು
ಡಿಸೈನರ್‌ ಜುಮ್ಕಾ ಬಳೆಗಳು (Jumka Bangles Fashion) ಟ್ರೆಂಡಿಯಾಗಿವೆ. ಬಳೆ ಪ್ರಿಯ ಮಹಿಳೆಯರ ಕೈಗಳನ್ನು ಅಲಂಕರಿಸುತ್ತಿವೆ. ಜುಮ್ಕಾ ಬಳೆಗಳು ಸದಾ ವೆಡ್ಡಿಂಗ್‌ ಸೀಸನ್‌ನಲ್ಲಿ ಹೆಚ್ಚು ಚಾಲ್ತಿಗೆ ಬರುತ್ತವೆ. ಇದೀಗ ಟ್ರೆಡಿಷನಲ್‌ ಮದುವೆ ಸಮಾರಂಭಗಳು ಹಾಗೂ ಕುಟುಂಬದ ಕಾರ್ಯಕ್ರಮಗಳಲ್ಲಿ ಇವನ್ನು ಧರಿಸುವ ಮಹಿಳೆಯರು ಹೆಚ್ಚಾದಂತೆ, ನಾನಾ ಡಿಸೈನ್‌ಗಳು ಬಿಡುಗಡೆಗೊಳ್ಳುತ್ತಿವೆ.

Jumka Bangles Fashion

ಏನಿದು ಜುಮ್ಕಾ /ಜುಮಕಿ ಬಳೆಗಳು

ಅಂದಹಾಗೆ, ಕಿವಿಗೆ ಧರಿಸುವ ವೆರೈಟಿ ಡಿಸೈನ್‌ನ ಜುಮ್ಕಾಗಳು ಇದೀಗ ಬಳೆಗಳಲ್ಲಿ ನೇತಾಡುತ್ತಿವೆ. ಬಳೆಗಳಿಗೆ ಅಟ್ಯಾಚ್‌ ಆದಂತೆ ಅವನ್ನು ಡಿಸೈನ್‌ ಮಾಡಲಾಗಿರುತ್ತದೆ. ಕಡಗ, ಬಳೆಗಳ ಸೈಝಿಗೆ ತಕ್ಕಂತೆ ಜುಮ್ಕಾಗಳನ್ನು ಚೈನ್‌ ಮುಖಾಂತರ ಅಥವಾ ನೇರವಾಗಿ ಅಟ್ಯಾಚ್‌ ಮಾಡಲಾಗಿರುತ್ತದೆ. ಅವನ್ನೇ ಜುಮ್ಕಾ ಬಳೆಗಳೆನ್ನಲಾಗುತ್ತದೆ.

Jumka Bangles Fashion

ಟ್ರೆಂಡಿಯಾಗಿರುವ ಜುಮ್ಕಾ ಬಳೆಗಳು

ಈ ಸೀಸನ್‌ನಲ್ಲಿ ಜುಮ್ಕಾ ಬಳೆಗಳು, ಕೇವಲ ಗೋಲ್ಡ್ ಪ್ಲೇಟೆಡ್‌ನಲ್ಲಿ ಮಾತ್ರವಲ್ಲ, ವೈಟ್‌ ಹಾಗೂ ಬ್ಲ್ಯಾಕ್‌ ಮೆಟಲ್‌ನಲ್ಲೂ ದೊರೆಯುತ್ತಿವೆ. ಇನ್ನು ಹೆಚ್ಚು ಬೆಲೆಯಾದರೂ ಪರವಾಗಿಲ್ಲ, ನೋಡಲು ಮಾತ್ರ ಚೆನ್ನಾಗಿ ಕಾಣಿಸಬೇಕು ಎನ್ನುವವರು ಸಿಲ್ವರ್‌ ಜ್ಯುವೆಲರಿ ಹಾಗೂ ಆಕ್ಸಿಡೈಸ್ಡ್ ಜ್ಯುವೆಲರಿಗಳಲ್ಲಿ ಲಭ್ಯವಿರುವ ಜುಮ್ಕಾ ಬಳೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕೈಗೆಟುಕುವ ಬೆಲೆಯಿಂದಿಡಿದು ಸಾವಿರಾರು ರೂ.ಗಳಲ್ಲೂ ಈ ಜುಮ್ಕಾ ಬಳೆಗಳು ದೊರೆಯುತ್ತಿವೆ.

Jumka Bangles Fashion

ಗೋಲ್ಡ್ ಪ್ಲೇಟೆಡ್ ಜುಮ್ಕಾಗಳಿಗೆ ಬೇಡಿಕೆ

ಸೆಟ್‌ ಬ್ಯಾಂಗಲ್ಸ್, ಸಿಂಗಲ್‌ ಕಡ ಅಥವಾ ಕಡಗ, ಸೈಡ್‌ ಬ್ಯಾಂಗಲ್ಸ್, ಸೆಂಟರ್‌ ಬ್ಯಾಂಗಲ್‌ಗಳಲ್ಲೂ ಜುಮ್ಕಾ ಡಿಸೈನರ್‌ ಬಳೆಗಳು ಬಂದಿವೆ. ಫ್ಯಾನ್ಸಿ ಶಾಪ್‌ಗಳಲ್ಲಿ ನಾನಾ ಡಿಸೈನ್‌ನಲ್ಲಿ ದೊರೆಯುತ್ತಿರುವ ಇವು, ಇದೀಗ ಆನ್‌ಲೈನ್‌ನಲ್ಲೂ ದೊರೆಯುತ್ತಿವೆ. ಹಾಗಾಗಿ ಸಾಕಷ್ಟು ಡಿಸೈನ್‌ನವನ್ನು ಕಾಣಬಹುದು ಎನ್ನುತ್ತಾರೆ ಮಾರಾಟಗಾರರಾದ ಶೇಖರ್‌. ಅವರ ಪ್ರಕಾರ, ಜುಮ್ಕಾ ಬಳೆಗಳು ಟ್ರೆಡಿಷನಲ್‌ ಲುಕ್‌ಗೆ ಆಕರ್ಷಕವಾಗಿ ಕಾಣುವುದರಿಂದ ಅತಿ ಹೆಚ್ಚಾಗಿ ಗೋಲ್ಡ್ ಪ್ಲೇಟೆಡ್‌ ಜುಮ್ಕಾ ಬಳೆಗಳನ್ನು ಖರೀದಿಸುವುದು ಹೆಚ್ಚಂತೆ.

ಇದನ್ನೂ ಓದಿ: Dress Fashion: ಲೇಸರ್‌ ಕಟ್‌ವರ್ಕ್ ಡ್ರೆಸ್‌ಗಳಿಗೂ ಸಿಕ್ತು ಗ್ಲಾಮರಸ್ ಟಚ್‌!

ಜುಮ್ಕಾ ಬಳೆ ಪ್ರಿಯರಿಗೆ ಒಂದಿಷ್ಟು ಸಲಹೆ

  • ಫಿನಿಶಿಂಗ್‌ ಇರುವಂತಹ ಜುಮ್ಕಾ ಬಳೆಗಳನ್ನೇ ಆಯ್ಕೆ ಮಾಡಿ. ಇಲ್ಲವಾದಲ್ಲಿ ಮೈ ಕೈಗೆ ಚುಚ್ಚಬಹುದು. ಧರಿಸುವ ಸೀರೆ ಹಾಗೂ ಔಟ್‌ಫಿಟ್‌ಗಳು ಕಿತ್ತುಹೋಗಬಹುದು.
  • ಕಡದಂತ ಜುಮ್ಕಾ ಬ್ಯಾಂಗಲ್‌ ಆದಲ್ಲಿ ಯಾವುದೇ ಟ್ರೆಡಿಷನಲ್‌ ಉಡುಪಿಗೂ ಧರಿಸಬಹುದು.
  • ಜುಮಕಿಗಳನ್ನು ಧರಿಸಿದಾಗ ಇವನ್ನು ಮ್ಯಾಚ್‌ ಮಾಡಬಹುದು.
  • ಆಕ್ಸಿಡೈಸ್ಡ್ ಹಾಗೂ ಸಿಲ್ವರ್‌ನವನ್ನು ವೆಸ್ಟರ್ನ್ ಔಟ್‌ಫಿಟ್‌ಗೂ ಧರಿಸಬಹುದು.
  • ಆದಷ್ಟೂ ತೀರಾ ಉದ್ದವಿರದ ಜುಮ್ಕಾ ಬ್ಯಾಂಗಲ್ಸ್ ಆಯ್ಕೆ ಮಾಡಿ.
  • ಪರ್ಲ್, ಕುಂದನ್‌, ಸ್ಟೋನ್‌ನವು ಕೂಡ ಟ್ರೆಂಡಿಯಾಗಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Dress Fashion: ಲೇಸರ್‌ ಕಟ್‌ವರ್ಕ್ ಡ್ರೆಸ್‌ಗಳಿಗೂ ಸಿಕ್ತು ಗ್ಲಾಮರಸ್ ಟಚ್‌!

ಈ ಸೀಸನ್‌ನಲ್ಲಿ ನಾನಾ ಬಗೆಯ ಲೇಸರ್‌ ಕಟ್‌ ಡ್ರೆಸ್‌ಗಳು ಕಾಲಿಟ್ಟಿದ್ದು, ಅವುಗಳಲ್ಲಿ ಗ್ಲಾಮರಸ್‌ ಲುಕ್‌ ನೀಡುವಂತಹ ಸಾಕಷ್ಟು ಬಗೆಯವು ಸೆಲೆಬ್ರೆಟಿಗಳ ಹಾಗೂ ಮಾಡೆಲ್‌ಗಳನ್ನು ಸವಾರಿ ಮಾಡುತ್ತಿವೆ. ಅವು ಯಾವುವು? ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ ಎಂಬುದರ ಬಗ್ಗೆ (Dress Fashion) ಇಲ್ಲಿದೆ ವಿವರ.

VISTARANEWS.COM


on

Dress Fashion
ಚಿತ್ರಗಳು: ಶಿಫಾಲಿ ಝರಿವಾಲ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲೇಸರ್‌ ಕಟ್‌ ಡ್ರೆಸ್‌ ಫ್ಯಾಷನ್‌ (Dress Fashion) ಇದೀಗ ಗ್ಲಾಮರಸ್‌ ಟಚ್‌ ಪಡೆದಿದೆ. ಕೇವಲ ಡ್ರೆಸ್‌ನ ಒಂದು ಭಾಗವಾಗಿದ್ದ ಈ ಲೇಸರ್‌ ಕಟ್‌ ವಿನ್ಯಾಸ ಇದೀಗ ಇಡೀ ಡ್ರೆಸ್‌ಗಳನ್ನು ಆವರಿಸಿಕೊಂಡಿದ್ದು, ತನ್ನದೇ ಆದ ಹೊಸ ರೂಪ ಪಡೆದುಕೊಂಡಿವೆ.

Dress Fashion

ಏನಿದು ಲೇಸರ್‌ ಕಟ್‌ವರ್ಕ್ ಡ್ರೆಸ್

ಸಿಂಪಲ್‌ ಆಗಿ ಹೇಳುವುದಾದಲ್ಲಿ, ಒಂದು ಡ್ರೆಸ್‌ನ ನಿರ್ಧಿಷ್ಟ ಭಾಗವನ್ನು ಲೇಸರ್‌ ಮೂಖಾಂತರ ಸಾಕಷ್ಟು ಕಡೆ ಪಕ್ಕ ಪಕ್ಕದಲ್ಲೆ ತೂತು ಮಾಡುವ ಮೂಲಕ ವಿನ್ಯಾಸಗೊಳಿಸುವ ಒಂದು ಡಿಸೈನಿಂಗ್‌ ಕ್ರಮವಿದು. ಇದನ್ನು ಲೇಸರ್‌ ಕಟ್‌ವರ್ಕ್ ವಿನ್ಯಾಸವೆಂದು ಹೇಳಲಾಗುತ್ತದೆ. ನೋಡಲು ಕೀ ಹೋಲ್‌ ಡ್ರೆಸ್‌ನಂತೆ ಯೂ ಇವು ಕಾಣುತ್ತವೆ. ಆದರೆ, ಇವು ಆವಲ್ಲ!

Dress Fashion

ಲೇಸರ್‌ ಕಟ್‌ ವರ್ಕ್‌ನ ನಾನಾ ವಿನ್ಯಾಸ

ಈ ಸೀಸನ್‌ನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ನಾನಾ ಬಗೆಯ ಲೇಸರ್‌ ಕಟ್‌ ಡ್ರೆಸ್‌ಗಳು ಕಾಲಿಟ್ಟಿದ್ದವು. ಸಲ್ವಾರ್‌ ಸೂಟ್‌ನಿಂದಿಡಿದು ಸೀರೆಯ ಹಾಗೂ ಲೆಹೆಂಗಾ ಬ್ಲೌಸ್‌ಗಳು ಕೂಡ ಲೇಸರ್‌ ಕಟ್‌ ಡಿಸೈನ್‌ ಹೊಂದಿದ್ದವು. ನಂತರ ಉಡುಪಿನ ಸ್ಲೀವ್‌, ಆಂಕೆಲ್‌ ಪ್ಯಾಂಟ್‌ನ ತುದಿ, ನೆಕ್‌ಲೈನ್‌, ವೇಸ್ಟ್‌ಕಲೈನ್‌ ಹೀಗೆ ನಾನಾ ಕಡೆ ಆಯಾ ಡ್ರೆಸ್‌ ಡಿಸೈನರ್‌ನ ಅಭಿಲಾಷೆಗೆ ತಕ್ಕಂತೆ ವ್ಯಾಪ್ತಿ ವಿಸ್ತರಿಸಿಕೊಂಡವು. ಒಂದಿಷ್ಟು ದಿನ ಔಟ್‌ಫಿಟ್‌ಗಳ ಒಂದು ಭಾಗವಾಗಿದ್ದ ಈ ಡಿಸೈನ್ಸ್ ಇದೀಗ ಇಡೀ ಡ್ರೆಸ್‌ಗಳನ್ನು ಆವರಿಸಿಕೊಂಡವು. ಪರಿಣಾಮ, ಇವು ಲೇಸರ್‌ ಕಟ್‌ ಡ್ರೆಸ್‌ಗಳೆಂದು ನಾಮಕರಣಗೊಂಡವು ಎನ್ನುತ್ತಾರೆ ಡಿಸೈನರ್‌ ಲಿಯಾ. ಅವುಗಳಲ್ಲಿ ಕೆಲವಂತೂ ಗ್ಲಾಮರಸ್‌ ಟಚ್‌ ಪಡೆದು ಬೀಚ್‌ವೇರ್‌ನೊಳಗೂ ಸೇರಿಕೊಂಡಿವೆ. ಇನ್ನು, ಕೆಲವು ಸಾಮಾನ್ಯ ಡ್ರೆಸ್‌ನೊಳಗೂ ನುಸುಳಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಧವನ್‌. ಅಷ್ಟು ಮಾತ್ರವಲ್ಲದೇ, ಬಾಲಿವುಡ್‌ ಸೆಲೆಬ್ರೆಟಿಗಳನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ.

Dress Fashion

ಗಾಳಿಯಾಡುವ ವಿನ್ಯಾಸ

ಅರರೆ, ಇದೇನಿದು? ಎಂದು ಯೋಚಿಸುತ್ತಿದ್ದೀರಾ! ಈ ಲೇಸರ್‌ ಕಟ್‌ ವಿನ್ಯಾಸ ಡ್ರೆಸ್‌ಗಳನ್ನು ಗಾಳಿಯಾಡುವಂತೆ ಮಾಡುತ್ತವೆ. ಇದನ್ನೇ ಪ್ರಮುಖ ಅಂಶವಾಗಿರಿಸಿಕೊಂಡ ಡಿಸೈನರ್‌ಗಳು ಕಳೆದ ಸಮ್ಮರ್‌ನಲ್ಲಿ ನಾನಾ ವಿನ್ಯಾಸದ ಲೇಸರ್‌ ಕಟ್‌ ವರ್ಕ್ ಡಿಸೈನ್‌ನ ಫ್ಯಾಷನ್‌ವೇರ್‌ಗಳನ್ನು ಬಿಡುಗಡೆ ಮಾಡಿದ್ದರು. ಕೊನೆಗೆ ಇಡೀ ಡ್ರೆಸ್‌ನನ್ನೇ ಲೇಸರ್‌ ಕಟ್‌ ವಿನ್ಯಾಸದಲ್ಲಿ ಡಿಸೈನ್‌ ಮಾಡಿದ್ದರು. ಒಳಗೆ ಇನ್ನರ್‌ವೇರ್‌ ಅಥವಾ ಸ್ವೀಮ್‌ ವೇರ್‌ ಇಲ್ಲವೇ ಶಾರ್ಟ್ಸ್ ಧರಿಸಿದ ಮಾಡೆಲ್‌ಗಳು ಇವನ್ನು ಧರಿಸಿ ಟ್ರೆಂಡಿಯಾಗಿಸಿದರು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

  • ಸೀಸನ್‌ ಎಂಡ್‌ನಲ್ಲಿ ಶ್ವೇತ ವರ್ಣದವು ಟ್ರೆಂಡಿಯಾಗಿವೆ.
  • ಮುಂದಿನ ಸೀಸನ್‌ಗೆ ಮುಂದುವರಿಸಲು ಸೂಕ್ತವಲ್ಲ!
  • ಸೆಲೆಬ್ರೆಟಿಗಳ ಡ್ರೆಸ್‌ಕೋಡ್‌ ಇದು ಎಂದರೂ ತಪ್ಪಿಲ್ಲ!

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Saree Fashion: ರಫಲ್‌ ಡಿಸೈನ್‌ನಲ್ಲಿ ಬಂದಿದೆ ಜಾರ್ಜೆಟ್ ಲೆಹೆಂಗಾ ಸೀರೆ!

Continue Reading

ಫ್ಯಾಷನ್

Anant Ambani Radhika Merchant Pre Wedding: ಅಂಬಾನಿ ಫ್ಯಾಮಿಲಿಯ ಕ್ರ್ಯೂಸ್ ಟೂರ್‌ನಲ್ಲಿ ಸ್ಟಾರ್‌ಗಳ ಮಕ್ಕಳ ಲುಕ್‌ ಹೇಗಿದೆ ನೋಡಿ!

ಅಂಬಾನಿ ಫ್ಯಾಮಿಲಿಯ 2ನೇ ಲಕ್ಷುರಿ ಕ್ರ್ಯೂಸ್‌ ಪ್ರಿ -ವೆಡ್ಡಿಂಗ್‌ ಸೆಲೆಬ್ರೇಷನ್‌ನ (Anant Ambani Radhika Merchant Pre Wedding) ಟೂರಿಂಗ್‌ ಸಮಯದಲ್ಲಿ ಬಾಲಿವುಡ್‌ ತಾರೆಯರ ಮಕ್ಕಳು ಮಾತ್ರ ಜೆನ್‌ ಜಿ ಹಾಲಿ ಡೇ ಲುಕ್‌ನಲ್ಲಿ ಕಾಣಿಸಿಕೊಂಡರು. ಹಾಗಾದಲ್ಲಿ, ಅವರೆಲ್ಲರ ಡ್ರೆಸ್‌ಕೋಡ್‌ ಹೇಗಿತ್ತು? ಏನಿದು ಜೆನ್‌ ಜಿ ಹಾಲಿ ಡೇ ಲುಕ್‌? ಈ ಕುರಿತಂತೆ ಫ್ಯಾಷನ್‌ ವಿಮರ್ಶಕರು ವಿವರಿಸುವುದರೊಂದಿಗೆ ವಿಶ್ಲೇಷಿಸಿದ್ದಾರೆ.

VISTARANEWS.COM


on

Anant Ambani Radhika Merchant Pre Wedding
ಚಿತ್ರಗಳು: ಲಕ್ಷುರಿ ಕ್ರ್ಯೂಸ್‌ ಪ್ರಿ-ವೆಡ್ಡಿಂಗ್‌ ಸೆಲೆಬ್ರೇಷನ್‌ನಲ್ಲಿ ಜೆನ್‌ ಜಿ ಹಾಲಿ ಡೇ ಲುಕ್‌ನಲ್ಲಿ ಸ್ಟಾರ್‌ಗಳ ಮಕ್ಕಳು.
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲಕ್ಷುರಿ ಕ್ರ್ಯೂಸ್‌ ಪ್ರಿ -ವೆಡ್ಡಿಂಗ್‌ ಸೆಲೆಬ್ರೇಷನ್‌ನ (Anant Ambani Radhika Merchant Pre Wedding) ಹಾಲಿ ಡೇ ಲುಕ್‌ನಲ್ಲಿ ಸ್ಟಾರ್ಸ್ ಮಕ್ಕಳು ಅತ್ಯಾಕಷರ್ಕವಾಗಿ ಕಾಣಿಸಿಕೊಂಡರಲ್ಲದೇ, ತಮ್ಮದೇ ಆದ ಟ್ರಾವೆಲ್‌ ಡ್ರೆಸ್‌ಕೋಡ್‌ ಥೀಮ್‌ ಪಾಲಿಸಿದರು. ಹೌದು, ಮೂರು ದಿನಗಳ ಕಾಲ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ ತನಕ ನೀರಿನ ಮೇಲೆ ಲಕ್ಷುರಿ ಕ್ರ್ಯೂಸ್‌ನಲ್ಲಿ ನಡೆದ ಅಂಬಾನಿ ಫ್ಯಾಮಿಲಿಯ ರಾಧಿಕಾ ಮರ್ಚೆಂಟ್‌-ಆನಂತ್‌ ಅಂಬಾನಿಯ ಪ್ರಿ –ವೆಡ್ಡಿಂಗ್‌ನ ನಾನಾ ಕಾರ್ಯಕ್ರಮಗಳಲ್ಲಿ , ಹಾಲಿ ಡೇ ಎಂಜಾಯ್‌ ಮಾಡುವಂತಹ ಥೀಮ್‌ಗಳಿಗೆ ತಕ್ಕಂತೆ ಸೆಲೆಬ್ರೆಟಿಗಳೆಲ್ಲರೂ ಕಾಣಿಸಿಕೊಂಡರು. ಆದರೆ, ಅವರಲ್ಲಿ ಈ ಜನರೇಷನ್‌ನ ಸ್ಟಾರ್ ಮಕ್ಕಳು ಮಾತ್ರ, ಜೆನ್‌ ಜಿ ಟ್ರಾವೆಲ್‌ ಡ್ರೆಸ್‌ಕೋಡ್‌ನಲ್ಲಿ ಕಾಣಿಸಿಕೊಂಡು ಬಿಂದಾಸ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ನಾಂದಿ ಹಾಡಿದರು. ಪ್ರತಿಯೊಬ್ಬರ ಡ್ರೆಸ್‌ಕೋಡ್‌ ಕೂಡ ಟ್ರೆಂಡಿಯಾಗಿತ್ತಲ್ಲದೇ ಟೀನೇಜ್‌ ಹುಡುಗ-ಹುಡುಗಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಿನತ್‌.

ಏನಿದು ಜೆನ್‌ ಜಿ ಹಾಲಿ ಡೇ ಲುಕ್‌

ಜೆನ್‌ ಜಿ ಜನರೇಷನ್‌ ಹಾಲಿ ಡೇ ಲುಕ್‌ ಅವರವರ ಚಾಯ್ಸ್ಗೆ ಸಂಬಂಧಿಸಿದ್ದು, ಅದು ಫಂಕಿಯಾಗಿರಬಹುದು, ಅವುಗಳಲ್ಲಿ ಜಂಕ್ ಜ್ಯುವೆಲರಿ, ಆಕ್ಸೆಸರೀಸ್‌ ಸೇರಿರಬಹುದು ಇಲ್ಲವೇ ಮಾಡರ್ನ್ ಫ್ಯಾಷನ್‌ ಜೊತೆ ವಿಂಟೇಜ್‌ ಕೂಡ ಮಿಕ್ಸ್ ಆಗಿರಬಹುದು. ಈ ಫ್ಯಾಷನ್‌ನಲ್ಲಿ ಯಾವುದೇ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಿಗೆ ರೂಲ್ಸ್ ಇಲ್ಲ! ತಮಗೆ ಇಷ್ಟ ಬಂದಂತಹ ಕಲರ್ಸ್ ಹಾಗೂ ಸ್ಟೈಲ್‌ ಪಾಲಿಸುವುದೇ ಈ ಜೆನ್ ಜಿ ಹಾಲಿ ಡೇ ಲುಕ್‌ನ ವಿಶೇಷತೆ! ಇತ್ತ, ಥೀಮ್‌ಗೂ ಹೊಂದಬೇಕು, ತಮ್ಮಿಷ್ಟದಂತೆಯೂ ಕೂಡ ಧರಿಸಬೇಕು ಎನ್ನುವ ಎರಡು ಕಾನ್ಸೆಪ್ಟ್‌ಗಳನ್ನು ಮಿಕ್ಸ್ ಮ್ಯಾಚ್‌ ಮಾಡಿದ ಸ್ಟಾರ್ಸ್ ಮಕ್ಕಳು, ಹಾಲಿ ಡೇ ಲುಕ್‌ನಲ್ಲಿ ಅಂದವಾಗಿ ಕಾಣಿಸಿಕೊಳ್ಳುವುದರೊಂದಿಗೆ ತಮ್ಮಜನರೇಷನ್‌ನ ಫ್ಯಾಷನ್‌ ಸ್ಟೇಟ್‌ಮೆಂಟ್‌ ಇದೆ ಎಂದು ಬಿಂಬಿಸಿದರು. ಇದು ಇಂದಿನ ಜನರೇಷನ್‌ ಮಕ್ಕಳ ಸ್ಟೈಲ್‌ ಹಾಗೂ ಫ್ಯಾಷನ್‌ ಯಾವುದೇ ಡಿಸೈನರ್‌ ಹಾಗೂ ಸ್ಟೈಲಿಸ್ಟ್‌ಗಳ ಅಭಿಲಾಷೆಯಂತೆ ನಡೆಯುವುದಿಲ್ಲ ಎಂಬುದನ್ನು ತೋರಿಸಿತು. ಹಾಲಿ ಡೇಗೆ ಡಿಸೈನರ್‌ಗಳ ಅಗತ್ಯವಿಲ್ಲ ಎಂಬುದನ್ನು ಕೂಡ ಪ್ರೂವ್‌ ಮಾಡಿತು ಎಂದು ಹೇಳುವ ಫ್ಯಾಷನ್‌ ವಿಮರ್ಶಕರಾದ ಸನಾ ಜೈನ್‌ ಹೇಳುವಂತೆ, ಜೆನ್‌ ಜಿ ಜನರೇಷನ್‌ ಫ್ಯಾಷನ್‌ ಇದೀಗ ಹಿಂದಿನ ಜನರೇಷನ್‌ರವರನ್ನು ಸೆಳೆಯುತ್ತಿದೆ ಎನ್ನುತ್ತಾರೆ.

Bindas Holi day look of children of Bollywood stars

ಬಾಲಿವುಡ್‌ ತಾರೆಯರ ಮಕ್ಕಳ ಬಿಂದಾಸ್‌ ಹಾಲಿ ಡೇ ಲುಕ್‌

ನಟಿ ಸಾರಾ ಅಲಿ ಖಾನ್‌, ಇಬ್ರಾಹಿಂ ಖಾನ್‌, ಶಾರೂಖ್‌ ಮಗಳಾದ ಸುಹಾನಾ ಖಾನ್‌, ನಟಿ ಅನನ್ಯಾ ಪಾಂಡೇ, ನಟಿ ಶನಾಯಾ ಕಪೂರ್‌ ಸೇರಿದಂತೆ ಬಾಲಿವುಡ್‌ ತಾರೆಯರ ಮಕ್ಕಳು ಥೀಮ್‌ ಹೊರತುಪಡಿಸಿಯೂ ಹಾಲಿ ಡೇ ಫ್ಯಾಷನ್‌ನಲ್ಲಿ ಕಾಣಿಸಿಕೊಂಡದ್ದು ಕಂಡು ಬಂದಿತು. ಕ್ರ್ಯೂಸ್‌ ಲ್ಯಾಂಡಿಂಗ್‌ ನಂತರ ಪೋರ್ಟರ್ಸ್‌ಗಳಲ್ಲಿ, ರೋಮ್‌ ಹಾಗೂ ಫ್ರಾನ್ಸ್‌ನ ನಾನಾ ಸ್ಥಳಗಳಲ್ಲಿ ಟ್ರೆಂಡಿ ಹಾಲಿ ಡೇ ಲುಕ್‌ನಲ್ಲಿ ಕಾಣಿಸಿಕೊಂಡದ್ದು, ಅವರಲ್ಲಿನ ಟ್ರಾವೆಲ್‌ ಡ್ರೆಸ್‌ಕೋಡ್‌ ಪ್ರೇಮವನ್ನು ಪ್ರತಿಬಿಂಬಿಸಿತು. ಇದು ಬದಲಾದ ಜನರೇಷನ್‌ನ ಹಾಲಿ ಡೇ ಫ್ಯಾಷನ್‌ ಅನ್ನು ಹೈಲೈಟ್‌ ಮಾಡಿದೆ ಎಂದು ವಿಮರ್ಶಕರು ವಿಶ್ಲೇಷಿಸಿದ್ದಾರೆ.

( ಲೇಖಕಿ : ಫ್ಯಾಷನ್‌ ಲೇಖಕಿ )

ಇದನ್ನೂ ಓದಿ: Anant Ambani Radhika Merchant Pre Wedding: ಹೀಗಿದೆ ಅಂಬಾನಿ ಫ್ಯಾಮಿಲಿಯ ಲಕ್ಷುರಿ ಕ್ರ್ಯೂಸ್‌ ಪ್ರಿ-ವೆಡ್ಡಿಂಗ್‌ ಸೆಲೆಬ್ರೇಷನ್‌ನ ಡ್ರೆಸ್‌ ಕೋಡ್ಸ್!

Continue Reading

ಫ್ಯಾಷನ್

Saree Fashion: ರಫಲ್‌ ಡಿಸೈನ್‌ನಲ್ಲಿ ಬಂದಿದೆ ಜಾರ್ಜೆಟ್ ಲೆಹೆಂಗಾ ಸೀರೆ!

ಇದೀಗ ಜಾರ್ಜೆಟ್‌ ಫ್ಯಾಬ್ರಿಕ್‌ನಲ್ಲಿ ಫ್ಲೋರಲ್‌ ಪ್ರಿಂಟ್ಸ್‌ನ ರಫಲ್‌ ವಿನ್ಯಾಸದ ಲೆಹೆಂಗಾ ಸೀರೆಗಳು (Saree Fashion) ಸೀರೆಲೋಕಕ್ಕೆ ಕಾಲಿಟ್ಟಿವೆ. ಉಟ್ಟಾಗ ಡಿಫರೆಂಟಾಗಿ ಕಾಣಿಸುವ ಈ ಸೀರೆಗಳಲ್ಲಿ ಯಾವ್ಯಾವ ಪ್ರಿಂಟ್ಸ್ ಚಾಲ್ತಿಯಲ್ಲಿವೆ? ಎಂಬುದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Saree Fashion
ಚಿತ್ರಗಳು: ಉದಿತಿ ಸಿಂಗ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜಾರ್ಜೆಟ್‌ ರಫಲ್‌ ಲೆಹೆಂಗಾ ಸೀರೆಗಳು (Saree Fashion) ಸೀರೆ ಲೋಕಕ್ಕೆ ಲಗ್ಗೆ ಇಟ್ಟಿವೆ. ಹೌದು. ಇದೀಗ ಜಾರ್ಜೆಟ್‌ ಫ್ಯಾಬ್ರಿಕ್‌ನಲ್ಲಿ, ಫ್ಲೋರಲ್‌ ಪ್ರಿಂಟ್ಸ್ ಇರುವಂತಹ ರಫಲ್‌ ವಿನ್ಯಾಸದ ಬಗೆಬಗೆಯ ಲೆಹೆಂಗಾ ಸೀರೆಗಳು ನಾರಿಯರನ್ನು ಆವರಿಸಿಕೊಂಡಿವೆ. ಉಟ್ಟಾಗ ವಿಭಿನ್ನವಾಗಿ ಕಾಣಿಸುವ ಈ ಸೀರೆಗಳು ಲೆಕ್ಕವಿಲ್ಲದಷ್ಟು ಹೂವುಗಳ ಚಿತ್ತಾರದ ಪ್ರಿಂಟ್ಸ್‌ನಲ್ಲಿ ಬಂದಿವೆ. “ಲೆಹೆಂಗಾ ಸೀರೆಗಳಲ್ಲಿ ಇದೀಗ ಜಾರ್ಜೆಟ್ ಫ್ಯಾಬ್ರಿಕ್‌ನವಕ್ಕೆ ಬೇಡಿಕೆ ಹೆಚ್ಚು. ಅದರಲ್ಲೂ ಫ್ಲೋರಲ್‌ ವಿನ್ಯಾಸದವು ಈ ಸೀಸನ್‌ಗೆ ಹೇಳಿ ಮಾಡಿಸಿದಂತಿರುತ್ತವೆ. ಅಲ್ಲದೇ ಅವುಗಳ ಶೇಡ್‌ಗಳು ಕೂಡ ಮನಸ್ಸನ್ನು ಉಲ್ಲಾಸಿತಗೊಳಿಸುತ್ತವೆ. ಅಂತಹ ಕಲರ್‌ ಕಾಂಬಿನೇಷನ್‌ಗಳಲ್ಲಿ ಈ ಸೀರೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ” ಎನ್ನುತ್ತಾರೆ ಸೀರೆ ಡಿಸೈನರ್ಸ್ ಚರಿತಾ. ಅವರ ಪ್ರಕಾರ ಜಾರ್ಜೆಟ್‌ ಲೆಹೆಂಗಾ ಸೀರೆಗಳು ಎಲ್ಲರಿಗೂ ಡಿಫರೆಂಟ್‌ ಲುಕ್‌ ನೀಡುತ್ತವೆ ಎನ್ನುತ್ತಾರೆ.

Saree Fashion

ಏನಿದು ಜಾರ್ಜೆಟ್‌ ಲೆಹೆಂಗಾ ಸೀರೆ?

ಇದು ಹೆಸರಿಗೆ ಮಾತ್ರ ಸೀರೆಯಷ್ಟೇ! ಇದನ್ನು ರೆಡಿ ಸೀರೆ ಕೂಡ ಎನ್ನಬಹುದು. ಲೆಹೆಂಗಾ ಶೈಲಿಯಲ್ಲಿ ಅಥವಾ ರಫಲ್‌ ಲೆಹೆಂಗಾ ವಿನ್ಯಾಸದಲ್ಲಿ ಸ್ಟಿಚ್‌ ಮಾಡಲಾಗಿರುತ್ತದೆ. ರೆಡಿಯಾಗಿರುವ ಉಡುಪಿನಂತೆ ಧರಿಸಿದರೇ ಸಾಕು. ನೋಡಲು ಸೀರೆಯಂತೆಯೂ ಕಾಣುತ್ತದೆ. ಇತ್ತ ಲೆಹೆಂಗಾದಂತೆಯೂ ಬಿಂಬಿಸುತ್ತದೆ. ಬ್ಲೌಸ್‌ ಕೂಡ ಈ ಸೆಟ್‌ನೊಳಗೆ ಸೇರಿರುತ್ತದೆ. ಹುಡುಗಿಯರ ಚಾಯ್ಸ್‌ನಲ್ಲಿ ಇದೀಗ ಈ ಸೀರೆಗಳು ಸೇರಿವೆ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ಸ್‌. ಅವರು ಹೇಳುವಂತೆ, ಈ ಸೀಸನ್‌ನಲ್ಲಿ ಲೈಟ್‌ವೈಟ್‌ ಇರುವ ಜಾರ್ಜೆಟ್‌ ಫ್ಯಾಬ್ರಿಕ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಈ ಮೊದಲು ಸಾದಾ ವರ್ಣದವು ಹೆಚ್ಚು ಟ್ರೆಂಡಿಯಾಗಿದ್ದವು. ಇದೀಗ ಪ್ರಿಂಟ್ಸ್ ಅದರಲ್ಲೂ ಸಮ್ಮರ್‌ ಫ್ಲೋರಲ್‌ ಪ್ರಿಂಟ್ಸ್‌ನವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಲಿಲ್ಲಿ, ಸೇವಂತಿ, ವೆರೈಟಿ ರೋಸ್‌, ಟುಲಿಪ್‌ ಸೇರಿದಂತೆ ನಾನಾ ಬಗೆಯ ಗಾರ್ಡನ್‌ ಪ್ರಿಂಟ್ಸ್ ಕೂಡ ಪ್ರಚಲಿತದಲ್ಲಿವೆ.

Saree Fashion

ಆನ್‌ಲೈನ್‌ನಲ್ಲಿ ಹೆಚ್ಚು ಡಿಸೈನ್ಸ್ ಲಭ್ಯ

ಅಂದಹಾಗೆ, ಈ ಸೀರೆಗಳು ಆನ್‌ಲೈನ್‌ ಸೀರೆ ಶಾಪ್‌ಗಳಲ್ಲಿ ಅತಿ ಹೆಚ್ಚು ಡಿಸೈನ್‌ನಲ್ಲಿ ಲಭ್ಯ. ಈ ಸೀಸನ್‌ನ ಸನ್‌ ಕಲರ್‌ನಿಂದಿಡಿದು, ಪೀಚ್‌, ಪಿಂಕ್‌ ಸೇರಿದಂತೆ ನಾನಾ ಬಗೆಯ ಪಾಸ್ಟೆಲ್‌ ಶೇಡ್‌ಗಳಲ್ಲೂ ದೊರೆಯುತ್ತಿವೆ. ಸೀರೆ ಖರೀದಿಸುವವರು ಅವರವರ ಪರ್ಸನಾಲಿಟಿಗೆ ತಕ್ಕಂತೆ ಸೈಝ್‌ಗೆ ತಕ್ಕಂತೆ ಆಯ್ಕೆ ಮಾಡಿ, ಖರೀದಿಸುವ ಸೌಲಭ್ಯಗಳನ್ನು ಆನ್‌ಲೈನ್‌ ಸೀರೆ ಶಾಪಿಗ್‌ ಸೆಂಟರ್‌ಗಳು ನೀಡಿವೆ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್‌ ರಕ್ಷಾ.

ಇದನ್ನೂ ಓದಿ: Denim Tube Tops Fashion: ಡೆನಿಮ್‌ನಲ್ಲೂ ಬಂತು ಟ್ಯೂಬ್‌ ಟಾಪ್ ಫ್ಯಾಷನ್‌!

ಜಾರ್ಜೆಟ್‌ ಲೆಹೆಂಗಾ ಸೀರೆ ಆಯ್ಕೆಗೆ 5 ಟಿಪ್ಸ್

  • ಆದಷ್ಟೂ ಲೈಟ್‌ವೈಟ್‌ ಜಾರ್ಜೆಟ್‌ ಖರೀದಿಸಿ.
  • ಗಾರ್ಡನ್‌ ಪ್ರಿಂಟ್ಸ್ ಎಲ್ಲಾ ಸೀಸನ್‌ಗೂ ಹೊಂದುತ್ತವೆ.
  • ಬ್ಲೌಸ್‌ ಸಮೇತ ಸೆಟ್‌ನಲ್ಲಿ ದೊರಕುತ್ತವೆ.
  • ಡ್ರೇಪಿಂಗ್‌ ನೋಡಲು ಆಕರ್ಷಕವಾಗಿರಲಿ.
  • ಫಾಲ್ಸ್ ಹಾಕಿಸುವ ಅಗತ್ಯವಿರುವುದಿಲ್ಲ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Anna Lezhneva
ರಾಜಕೀಯ3 hours ago

Anna Lezhneva: ಚುನಾವಣೆ ಗೆದ್ದು ಬಂದ ಪವನ್‌ಗೆ ತಿಲಕವಿಟ್ಟು ಸ್ವಾಗತಿಸಿದ ಈ ವಿದೇಶಿ ಮಹಿಳೆ ಯಾರು?

BJP celebration about lok sabha election results
ಕರ್ನಾಟಕ3 hours ago

R Ashok: ಸೋಲಿನ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಆರ್‌. ಅಶೋಕ್‌ ಆಗ್ರಹ

MLC TA Sharavana latest statement about lok sabha election results 2024
ಕರ್ನಾಟಕ3 hours ago

TA Sharavana: ಫಲಿತಾಂಶದಿಂದ ಬಲಿಷ್ಠವಾದ ಜೆಡಿಎಸ್‌: ಟಿ.ಎ.ಶರವಣ

Election Results 2024
ಪ್ರಮುಖ ಸುದ್ದಿ3 hours ago

Election Results 2024: ಬಿಜೆಪಿ ಹಿನ್ನಡೆ ನಡುವೆಯೂ ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿ ಆಗುವುದು ಖಚಿತ!

Election Results 2024
ಪ್ರಮುಖ ಸುದ್ದಿ3 hours ago

Election Results 2024: ಲೋಕಸಭೆ ಚುನಾವಣೆಯ ರಾಜ್ಯವಾರು ಬಲಾಬಲ ಹೀಗಿದೆ

Assault Case
ಕರ್ನಾಟಕ3 hours ago

Assault Case: ಬೆಳ್ತಂಗಡಿಯಲ್ಲಿ ಬಿಜೆಪಿ ಮುಖಂಡನ ಮೇಲೆ ತಲ್ವಾರ್‌ನಿಂದ ಹಲ್ಲೆ; ಸುರಪುರದಲ್ಲಿ ರಾಜುಗೌಡ ಅಳಿಯನ ಕಾರಿನ ಮೇಲೆ ಕಲ್ಲೆಸೆತ

Narendra Modi Election
ದೇಶ4 hours ago

Narendra Modi Election: ಚುನಾವಣೆ ಫಲಿತಾಂಶದ ಬಳಿಕ ತಾಯಿಯ ನೆನೆದು ಭಾವುಕರಾದ ಮೋದಿ

Karnataka Election Results 2024
ಕರ್ನಾಟಕ4 hours ago

Karnataka Election Results 2024: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಮೈತ್ರಿ ಆಗಿದ್ರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರ್ತಿರಲಿಲ್ಲ: ಎಚ್‌ಡಿಕೆ

Novak Djokovic
ಕ್ರೀಡೆ4 hours ago

Novak Djokovic: ಫ್ರೆಂಚ್ ಓಪನ್‌ ಟೂರ್ನಿಯಿಂದ ಹಿಂದೆ ಸರಿದ ಜೊಕೊವಿಕ್

Election Results 2024
Lok Sabha Election 20244 hours ago

Election Results 2024: ತ.ನಾಡಿನಲ್ಲಿ ಪೈಪೋಟಿ ನೀಡಿ ಸೋತ ಅಣ್ಣಾಮಲೈ; ಬಿಜೆಪಿ ಮತ ಪ್ರಮಾಣ ಶೇ. 3.57ರಿಂದ 11.04ಕ್ಕೆ ಜಿಗಿತ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ19 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 day ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌