Wedding Mens Fashion | ಮದುಮಗನಿಗೆ ರಾಯಲ್‌ ಲುಕ್‌ ನೀಡುವ ಶೆರ್ವಾನಿ - Vistara News

ಫ್ಯಾಷನ್

Wedding Mens Fashion | ಮದುಮಗನಿಗೆ ರಾಯಲ್‌ ಲುಕ್‌ ನೀಡುವ ಶೆರ್ವಾನಿ

ಮದುಮಗನಿಗೆ ರಾಯಲ್‌ ಲುಕ್‌ ನೀಡುವ ಶೆರ್ವಾನಿಗಳು ಈ ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

wedding Mens Fashion
ಚಿತ್ರಗಳು: ಶ್ರೀರಾಮ್‌, ಮಾಡೆಲ್‌ ಹಾಗೂ ನಟ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮದುಮಗನಿಗೆ ರಾಯಲ್‌ ಇಮೇಜ್‌ ನೀಡುವ ಶೆರ್ವಾನಿಗಳು ಈ ವೆಡ್ಡಿಂಗ್‌ ಸೀಸನ್‌ಗೆ ಎಂಟ್ರಿ ನೀಡಿವೆ.

“ಪ್ರತಿ ಮದುಮಗನು ಮದುವೆಯ ದಿನ ಎಲ್ಲರಿಗಿಂತ ಭಿನ್ನವಾಗಿ ಕಾಣಿಸಬೇಕೆಂದು ಬಯಸುತ್ತಾನೆ. ಇತರರ ಉಡುಪುಗಳಿಗಿಂತ ಆಕರ್ಷಕವಾಗಿ ಕಾಣಬೇಕು ಜತೆಗೆ ಲುಕ್‌ ರಾಯಲ್‌ ಇಮೇಜ್‌ನದ್ದಾಗಿರಬೇಕು ಎಂದುಕೊಳ್ಳುತ್ತಾನೆ. ಅದಕ್ಕೆ ಸೂಟ್‌ ಆಗುವಂತೆ ಇದೀಗ ರಾಯಲ್‌ ಶೆರ್ವಾನಿಗಳು ಫ್ಯಾಷನ್‌ಲೋಕಕ್ಕೆ ಕಾಲಿಟ್ಟಿವೆ ಎನ್ನುತ್ತಾರೆ ಮಾಡೆಲ್‌ ಹಾಗೂ ನಟ ಶ್ರೀರಾಮ್‌.

wedding Mens Fashion

ಶೆರ್ವಾನಿ ಹಿಸ್ಟರಿ

ಅಂದಹಾಗೆ, ಶೆರ್ವಾನಿ ಮೂಲತಃ ಪರ್ಶಿಯನ್‌ರ ಉಡುಪಾಗಿದೆ. ಸಿಲ್ಕ್‌, ಟೆರ್ರಿ ವೂಲ್‌, ಕಾಟನ್‌ ಫ್ಯಾಬ್ರಿಕ್‌ಮಿಶ್ರದಿಂದ ಸಿದ್ಧಪಡಿಸಲಾಗುವ ಶೆರ್ವಾನಿಯನ್ನು ರಾಜ-ಮಹಾರಾಜರು ಧರಿಸುತ್ತಿದ್ದರು. ಕಾಲಕ್ಕೆ ತಕ್ಕಂತೆ ರೂಪಾಂತರಗೊಂಡು ಇದೀಗ ಮದುವೆಯ ಧಿರಿಸಾಗಿ ಮಾರ್ಪಾಡಾಗಿದೆ. ಎಂಬ್ರಾಯ್ಡರಿ, ಫ್ಯೂಶನ್‌, ಪ್ರಿಂಟೆಡ್‌ ಲಾಂಗ್‌ ಬಂದಗಾಲ, ಜೋಧ್‌ಪುರಿ, ಅನ್ರ್ಗಾಕಾ ಸೇರಿದಂತೆ ನಾನಾ ಹೊಸ ವಿನ್ಯಾಸದ ಶೆರ್ವಾನಿಗಳು ಈ ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.

ಡಿಫರೆಂಟ್‌ ಲುಕ್‌ಗಾಗಿ ಶೆರ್ವಾನಿ

ಪಂಚೆ-ಶಲ್ಯ ಮ್ಯಾಚ್‌ ಆಗುವುದಿಲ್ಲ ಎನ್ನುವ ಹುಡುಗರಿಗೆ, ವಿವಿಧ ರೀತಿಯ ಮತ್ತು ಶೈಲಿಯ ಶೆರ್ವಾನಿಗಳು ಹೊಂದಿಕೆ ಆಗಬಹುದು. ತಮ್ಮ ಪರ್ಸನಾಲಿಟಿಗೆ ಹೊಂದುವಂತಹ ಶೆರ್ವಾನಿಗಳನ್ನು ಆಯ್ಕೆ ಮಾಡಿ ಖರೀದಿಸಬಹುದು. ಇವುಗಳಲ್ಲಿ ಸಿಂಪಲ್‌ ಆಗಿರುವ ಕ್ಯಾಶುವಲ್‌ ಶೆರ್ವಾನಿಯಿಂದಿಡಿದು ಗ್ರಾಂಡ್‌ ಶೆರ್ವಾನಿಗಳು ದೊರೆಯುತ್ತವೆ. ಇದನ್ನು ಧರಿಸಿದಾಗ ಆಫ್‌ ಶೂ ಧರಿಸಿ, ಒಂದೆರೆಡು ಜುವೆಲರಿ ಹಾಕಿಕೊಂಡಲ್ಲಿ ಥೇಟ್‌ ಮಹಾರಾಜರ ಲುಕ್‌ ನಿಮ್ಮದಾಗುವುದು. ಎಲ್ಲರನ್ನು ಸೆಳೆಯಬಹುದು ಎಂದು ಸಲಹೆ ನೀಡುತ್ತಾರೆ ವಿಭಿನ್ನ ಡಿಸೈನರ್ಸ್.

wedding Mens Fashion

ವೆರೈಟಿ ಶೆರ್ವಾನಿ ವಿನ್ಯಾಸ

ಗ್ರ್ಯಾಂಡ್‌ ಲುಕ್‌ ನೀಡುವ ಕಿಂಗ್‌ ಇಮೇಜ್‌ ಶೆರ್ವಾನಿಗಳು ಈ ವೆಡ್ಡಿಂಗ್‌ ಸೀಸನ್‌ನಲ್ಲಿ ಹಂಗಾಮ ಎಬ್ಬಿಸಿದ್ದು, ಸಿಂಪಲ್‌ ಶೆರ್ವಾನಿಗಳನ್ನು ಮದುವೆಯನ್ನು ಅಟೆಂಡ್‌ ಮಾಡುವವರೂ ಧರಿಸಬಹುದು. ಇನ್ನು ಕಿಂಗ್‌ ಲುಕ್‌ ನೀಡುವ ಭಾರಿ ವಿನ್ಯಾಸದ ಹ್ಯಾಂಡ್‌ವರ್ಕ್ ಇಲ್ಲವೇ ಕಾಲರ್‌ ನೆಕ್‌ಲೈನ್‌ ಡಿಸೈನ್‌ ಇರುವಂತವನ್ನು ಮದುಮಗ ಧರಿಸಬಹುದು. ಇನ್ನು ಡಿಫರೆಂಟ್‌ ಲುಕ್‌ ಬೇಕೆಂದಲ್ಲಿ ಶೆರ್ವಾನಿಯ ಎರಡೂ ಕಡೆ ಇರುವ ಬಾರ್ಡರ್‌ ಸ್ಲಿಟ್‌ ಇರುವಂತವನ್ನು ಧರಿಸಬಹುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ರೆಡಿಮೇಡ್‌ ಶೆರ್ವಾನಿ

ಈ ಹಿಂದೆ ಶೆರ್ವಾನಿಗಳನ್ನು ಹೊಲೆಸಬೇಕಾಗಿತ್ತು. ಇಲ್ಲವೇ ದೊರೆಯುತ್ತಿದ್ದ ಸೆಮಿ ಶೆರ್ವಾನಿಗಳನ್ನು ಬೋಟಿಕ್‌ಗಳಲ್ಲಿ ಸಿದ್ಧಪಡಿಸಲು ಕೊಡಬೇಕಾಗಿತ್ತು. ಆದರೆ, ಈಗ ಕಾಲ ಬದಲಾಗಿದೆ. ಆಯಾ ಪುರುಷರಿಗೆ ಹೊಂದುವಂತಹ ರೆಡಿಮೇಡ್ ಶೆರ್ವಾನಿಗಳು ಶೋರೂಂಗಳಲ್ಲಿ ದೊರೆಯುತ್ತಿವೆ. ಫ್ಯಾಬ್ರಿಕ್‌ ಆಧಾರದ ಮೇಲೆ ಬೆಲೆ ನಿಗಧಿಯಾಗಿರುತ್ತದೆ. ಡಿಸೈನ್‌ಗಳಿಗೆ ತಕ್ಕಂತೆ ದರ ನಿಗಧಿಪಡಿಸಲಾಗಿರುತ್ತದೆ.

ರೆಡಿಮೇಡ್‌ ಶೆರ್ವಾನಿಗಳ ಒಂದು ಪ್ಲಸ್‌ ಪಾಯಿಂಟ್‌ ಎಂದರೇ ಟ್ರಯಲ್‌ ನೋಡಿ, ತಮಗೆ ಸೂಟ್‌ ಆಗುವಂತದ್ದನ್ನು ಕೂಡಲೇ ಖರೀದಿಸಬಹುದು.

wedding Mens Fashion

ಶೆರ್ವಾನಿ ಧರಿಸುವವರ ಗಮನಕ್ಕಿರಲಿ:

  • ಡೆರ್ಬಿ ಶೂಗಳನ್ನು ಧರಿಸುವುದು ಉತ್ತಮ.
  • ಡಿಸೈನರ್‌ ಬಟನ್ಸ್‌ ಇರುವಂತವನ್ನು ಚೂಸ್‌ ಮಾಡಿ.
  • ಸ್ಲಿಟ್‌ ಶೆರ್ವಾನಿ ಕೂಡ ಟ್ರೆಂಡ್‌ನಲ್ಲಿದೆ.
  • ಡಾರ್ಕ್ ಶೇಡ್‌ ಶೆರ್ವಾನಿಗಳು ಆಕರ್ಷಕವಾಗಿ ಕಾಣುತ್ತವೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Wedding Fashion: ಮರಳಿದ ಗ್ರ್ಯಾಂಡ್‌ ಡಿಸೈನರ್‌ ಬಾರ್ಡರ್ ರೇಷ್ಮೆ ಸೀರೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Off Shoulder Tops Fashion: ನೀವೂ ಆಫ್‌ ಶೋಲ್ಡರ್‌ ಟಾಪ್‌ ಧರಿಸಬಹುದು! ಆದರೆ ಈ ಎಚ್ಚರಿಕೆ ವಹಿಸಿ

ಶೋಲ್ಡರ್ ಇಲ್ಲದ ಟಾಪ್‌ಗಳು (Off Shoulder Tops Fashion) ಧರಿಸುವುದು ಇಷ್ಟವಾದರೂ ಹೆಚ್ಚಾಗಿ ನಾವು ಇದರಲ್ಲಿ ಕಂಫರ್ಟ್ ಆಗಿರೋದು ಸಾಧ್ಯವಿಲ್ಲ. ಇದನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಸ್ಟೈಲಿಶ್ ಆಗಿ ಮಿಂಚಬಹುದು ಮಾತ್ರವಲ್ಲ ನೀವು ಹೆಚ್ಚು ಕಂಫರ್ಟ್ ಆಗಿ ಇರಬಹುದು. ಅದಕ್ಕಾಗಿ ಇಲ್ಲಿದೆ ಟಿಪ್ಸ್.

VISTARANEWS.COM


on

By

Off Shoulder Tops Fashion
Koo

ಶೋಲ್ಡರ್ ಇಲ್ಲದ ಟಾಪ್‌ಗಳು (Off Shoulder Tops Fashion) ಹೆಚ್ಚು ಸ್ಟೈಲಿಶ್ (stylish) ಲುಕ್ ನೀಡುವುದು ಮಾತ್ರವಲ್ಲ ಇದು ಟ್ರೆಂಡಿ (trendy) ಆಯ್ಕೆಯೂ ಹೌದು. ಆದರೆ ಹೆಚ್ಚಿನವರಿಗೆ ಇದನ್ನು ಧರಿಸುವುದು, ನಿರ್ವಹಣೆ ಮಾಡುವುದು ಸವಾಲಿನ ಕೆಲಸ. ಹೀಗಾಗಿ ಇಷ್ಟವಿದ್ದರೂ ಇಂತಹ ದಿರಸು ಹಾಕಿಕೊಂಡು ಹೊರಗೆ ಹೋಗಲು ಬಹುತೇಕ ಮಂದಿ ಹಿಂಜರಿಯುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ಶೋಲ್ಡರ್ ಇಲ್ಲದ ದಿರಸು ಧರಿಸಿದರೆ ಹೆಚ್ಚು ಕಂಫರ್ಟ್ ಫೀಲ್ ಆಗುವುದು ಮಾತ್ರವಲ್ಲ ಎಲ್ಲರ ನಡುವೆ ಸ್ಟೈಲಿಶ್ ಆಗಿಯೂ ಮಿಂಚಬಹುದು.

ಶೋಲ್ಡರ್ ಇಲ್ಲದ ದಿರಸುಗಳನ್ನು ಧರಿಸಲು ಈ ಆರು ಪ್ರಮುಖ ಸಲಹೆಗಳನ್ನು ಪಾಲಿಸಿ. ಆಗ ನೀವೂ ಸ್ಟೈಲಿಶ್ ಆಗಿ ಮಿಂಚಬಹುದು.

ಸ್ಟ್ರಾಪ್ ಇಲ್ಲದ ಬ್ರಾ ಆಯ್ಕೆ ಮಾಡಿ

ಶೋಲ್ಡರ್ ಇಲ್ಲದ ದಿರಸು ಧರಿಸಿ ಹೆಚ್ಚು ಕಂಫರ್ಟ್ ಆಗಬೇಕಾದರೆ ಸ್ಟ್ರಾಪ್ ಇಲ್ಲದ ಬ್ರಾ ಆಯ್ಕೆ ಮಾಡಬೇಕು. ಇದು ಆಫ್-ದ-ಶೋಲ್ಡರ್ ಟಾಪ್‌ಗಳಿಗೆ ಹೆಚ್ಚು ಬೆಂಬಲವನ್ನು ನೀಡುತ್ತದೆ. ಮುಖ್ಯವಾಗಿ ಎದೆ ಭಾಗ ಅಗಲವಾಗಿದ್ದರೆ ಸರಿಯಾದ ಒಳ ಉಡುಪು ಆಯ್ದುಕೊಳ್ಳುವುದು ಬಹು ಮುಖ್ಯವಾಗಿರುತ್ತದೆ. ಬ್ರ್ಯಾಂಡೆಡ್ ಒಳ ಉಡುಪುಗಳನ್ನು ಆಯ್ಕೆ ಮಾಡಿ. ಇದರಲ್ಲಿ ಒಳ ಉಡುಪಿನ ಮೇಲ್ಭಾಗ ಮತ್ತು ಕೆಳ ಭಾಗದಲ್ಲಿ ನಯವಾದ ಮತ್ತು ಆಕರ್ಷಕವಾದ ಸ್ಟ್ರಾಪ್ ಗಳನ್ನು ಹೊಂದಿರುತ್ತದೆ. ಇಂತವುಗಳು ಹೆಚ್ಚು ಕಂಫರ್ಟ್ ಕೊಡುತ್ತದೆ ಮತ್ತು ದಿರಿಸಿನ ಮೇಲಿನ ಅನುಮಾನವನ್ನು ಮನಸ್ಸಿನಿಂದ ತೊಡೆದು ಹಾಕುತ್ತದೆ.


ಸ್ಟ್ರಕ್ಚರ್ಡ್ ಟಾಪ್ಸ್

ಶೋಲ್ಡರ್ ಇಲ್ಲದ ದಿರಸು ಧರಿಸುವಾಗ ಮೇಲ್ಭಾಗದಲ್ಲಿ ಹೆಚ್ಚುವರಿ ಬೆಂಬಲ ಮತ್ತು ಸಹಾಯಕ್ಕೆ ಬಿಲ್ಟ್-ಇನ್ ಬೋನಿಂಗ್, ಅಂಡರ್‌ವೈರ್ ಅಥವಾ ನೆಕ್‌ಲೈನ್ ಸುತ್ತಲೂ ದಪ್ಪವಾದ ರಬ್ಬರ್ ಬ್ಯಾಂಡ್‌ ಇರುವುದನ್ನು ಖಚಿತಪಡಿಸಿಕೊಳ್ಳಿ. ರಚನಾತ್ಮಕ ಮೇಲ್ಭಾಗಗಳು ಹೆಚ್ಚು ಸ್ಟೈಲಿಶ್ ಲುಕ್ ನೀಡುವುದು ಮಾತ್ರವಲ್ಲ ದೇಹದ ಗಾತ್ರಕ್ಕೆ ತಕ್ಕಂತೆ ಸರಿಯಾಗಿ ಹೊಂದಿಕೆಯಾಗುವಂತೆ ಮಾಡಿ ಕೊಂಚ ಸ್ಲಿಮ್ ಮತ್ತು ಫಿಟ್ ಆಗಿರುವಂತೆ ತೋರಿಸುತ್ತದೆ.

ಮೃದು ಬಟ್ಟೆಗಳಿಗೆ ಆದ್ಯತೆ ನೀಡಿ

ಆಫ್-ದಿ-ಶೋಲ್ಡರ್ ಟಾಪ್‌ಗಳಿಗಾಗಿ ಹೆಚ್ಚು ದಪ್ಪವಾದ ಬಟ್ಟೆಗಳು ಸರಿಯಾದ ಆಯ್ಕೆಯಲ್ಲ. ತೆಳು ಮತ್ತು ಮೃದುವಾದ ಬಟ್ಟೆಗಳು ಹೆಚ್ಚು ಕಂಫರ್ಟ್ ಫೀಲ್ ಕೊಡುತ್ತದೆ. ಹತ್ತಿ, ಲೆನಿನ್ ಬಟ್ಟೆಗಳಿಂದ ವಿನ್ಯಾಸಗೊಳಿಸಿರುವ ದಿರಿಸನ್ನು ಆಯ್ಕೆ ಮಾಡಿಕೊಳ್ಳಬಹುದು.


ಸರಿಯಾದ ಬಾಟಮ್ ದಿರಸನ್ನು ಆಯ್ಕೆ ಮಾಡಿ

ಶೋಲ್ಡರ್ ಇಲ್ಲಿದ ದಿರಸು ಧರಿಸುವಾಗ ಸರಿಯಾದ ಬಾಟಮ್ ದಿರಸನ್ನು ಆಯ್ಕೆ ಮಾಡುವುದು ಕೂಡ ಬಹು ಮುಖ್ಯವಾಗಿದೆ. ಇದು ಶೋಲ್ಡರ್ ಲೆಸ್ ಟಾಪ್‌ಗಳಿಗೆ ಸಪೋರ್ಟಿವ್ ಆಗಿದ್ದರೆ ಹೆಚ್ಚು ಕಂಫರ್ಟ್ ಫೀಲ್ ಕೊಡುತ್ತದೆ. ಹೊಕ್ಕುಳ ಬಳಿ ಬರುವ ಜೀನ್ಸ್ ಅಥವಾ ಸ್ಕರ್ಟ್‌ ಗಳನ್ನು ಆಯ್ಕೆ ಮಾಡುವುದು ಮತ್ತು ಹೆಚ್ಚು ದಪ್ಪ, ಅಗಲವಾದ ಎಲಾಸ್ಟಿಕ್ ಇರುವ ಶೋಲ್ಡರ್ ಲೆಸ್ ಟಾಪ್ ಗಳಿಗೆ ಸ್ಟೈಲಿಶ್ ಲುಕ್ ನೀಡುತ್ತದೆ ಮಾತ್ರವಲ್ಲ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಎ-ಲೈನ್ ಸ್ಕರ್ಟ್‌ಗಳು ಮತ್ತು ವೈಡ್ ಲೆಗ್ ಪ್ಯಾಂಟ್‌ಗಳು ಹೆಚ್ಚು ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

ಸರಿಯಾದ ವಿನ್ಯಾಸವನ್ನು ಆಯ್ಕೆ ಮಾಡಿ

ಶೋಲ್ಡರ್ ಲೆಸ್ ಟಾಪ್ ಗಳಲ್ಲಿ ಭುಜದ ಮೇಲ್ಭಾಗ ಸಮಾನವಾಗಿ ಇರುವುದಿಲ್ಲ. ಎದೆ ಭಾಗ ದೊಡ್ಡದಾಗಿರುವವರಿಗೆ ಕಂಠರೇಖೆಯ ದಿರಿಸುಗಳು ಹೆಚ್ಚು ಸುಂದರವಾಗಿ ಕಾಣುತ್ತದೆ. ಇದು ಎದೆಯ ಭಾಗದಲ್ಲಿ ಸುತ್ತುವರೆದಿರುವ ಲೇಯರ್‌ಗಳು, ರಫಲ್ಸ್ ಅಥವಾ ಇತರ ವಿಶೇಷ ವಿನ್ಯಾಸವನ್ನು ಒಳಗೊಂಡಿರುತ್ತದೆ.


ಸೂಕ್ತ ಆಭರಣ ಧರಿಸಿ

ಶೋಲ್ಡರ್ ಲೆಸ್ ಟಾಪ್‌ಗಳನ್ನು ಆಯ್ಕೆ ಮಾಡುವಾಗ ದಪ್ಪ ಕಿವಿಯೋಲೆಗಳು, ನೆಕ್ಲೇಸ್‌ಗಳು ಕೂಡ ಗಮನ ಸೆಳೆಯುವಂತಿರಬೇಕು. ನೆಕ್ಲೇಸ್ ಧರಿಸಲು ಇಷ್ಟವಿಲ್ಲದೇ ಇದ್ದರೆ ಸ್ಟ್ರೈಕಿಂಗ್ ಕಿವಿಯೋಲೆಗಳನ್ನು ಆಯ್ಕೆ ಮಾಡಿ. ಇದರೊಂದಿಗೆ ಆಕರ್ಷಕ ಬೆಲ್ಟ್‌ ಗಳು ಸ್ಟೈಲಿಶ್ ಲುಕ್ ನೀಡುತ್ತದೆ ಮಾತ್ರವಲ್ಲ ಇದು ಸೊಂಟದ ಭಾಗ ಬಿಗಿಗೊಳಿಸಲು ಅದ್ಭುತವಾದ ಪರಿಕರವಾಗಿದೆ.

Continue Reading

ಫ್ಯಾಷನ್

Kids Fashion: ಮಕ್ಕಳ ಕ್ಯೂಟ್‌ ಲುಕ್‌ಗೆ ಸಾಥ್‌ ನೀಡುವ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್ಸ್!

Kids Fashion: : ಚಿಣ್ಣರ ಸೆಲೆಬ್ರೇಷನ್‌ಗೆ ಸಾಥ್‌ ನೀಡುವಂತಹ ನಾನಾ ಬಗೆಯ ಹೆಡ್‌ಬ್ಯಾಂಡ್‌ಗಳು ಕಾಲಿಟ್ಟಿದ್ದು, ಅವುಗಳಲ್ಲಿ ರ‍್ಯಾಬಿಟ್‌ & ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್‌ಗಳು ಟ್ರೆಂಡಿಯಾಗಿವೆ. ಇವುಗಳಲ್ಲಿ ಯಾವ್ಯಾವ ಬಗೆಯವು ದೊರೆಯುತ್ತಿವೆ. ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Kids Fashion: Bunny Ears Head Bands for Kids' Cute Look!
ಚಿತ್ರಗಳು : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಕ್ಕಳನ್ನು ಕ್ಯೂಟಾಗಿ ಬಿಂಬಿಸುವ ಪಾರ್ಟಿ ಹಾಗೂ ಸೆಲೆಬ್ರೇಷನ್‌ಗೆ ಸಾಥ್‌ ನೀಡುವಂತಹ ನಾನಾ ಬಗೆಯ ರ‍್ಯಾಬಿಟ್‌ & ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. “ಹೆಣ್ಣುಮಕ್ಕಳ ಕೂದಲ ಸೌಂದರ್ಯವನ್ನು ಹೆಚ್ಚಿಸುವಂತಹ ಹೇರ್‌ ಆಕ್ಸೆಸರೀಸ್‌ನಲ್ಲಿ, ಇದೀಗ ರ‍್ಯಾಬಿಟ್‌ ಹಾಗೂ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್‌ಗಳು (kids fashion) ಬಂದಿದ್ದು, ನಾನಾ ಕಲರ್‌ಗಳಲ್ಲಿ ಬಿಡುಗಡೆಗೊಂಡಿವೆ. ತಲೆಯ ಮೇಲೆ ಧರಿಸಿದಾಗ ಮಕ್ಕಳನ್ನು ಮುದ್ದು ಮುದ್ದಾಗಿ ಬಿಂಬಿಸುತ್ತವೆ. ಅಲ್ಲದೇ, ಸೆಲೆಬ್ರೇಷನ್‌ಗೆ ಸಾಥ್‌ ನೀಡುತ್ತವೆ” ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ರಿಂಕು. ಅವರ ಪ್ರಕಾರ, ಬನ್ನಿ ಹಾಗೂ ರ‍್ಯಾಬಿಟ್‌ ಇಯರ್ಸ್ ಹೆಡ್‌ ಬ್ಯಾಂಡ್‌ಗಳು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಬಂದಿರುವುದು ಬೇಡಿಕೆ ಹೆಚ್ಚಾಗಲು ಕಾರಣ ಎನ್ನುತ್ತಾರೆ.

kids fashion

ಏನಿದು ರ‍್ಯಾಬಿಟ್‌ & ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್ಸ್

ಮೊಲದ ಉದ್ದನಾದ ಕಿವಿಗಳನ್ನು ಹೋಲುವ ವಿನ್ಯಾಸದ ಹೆಡ್‌ ಬ್ಯಾಂಡ್‌ಗಳನ್ನು ಹೀಗೆ ಕರೆಯಲಾಗುತ್ತದೆ. ಕೆಲವು ಫರ್‌ನಂತಹ ಮೆಟಿರಿಯಲ್‌ನಲ್ಲಿ ದೊರೆಯುತ್ತವೆ. ಇನ್ನು ಕೆಲವು ಮಕ್ಕಳ ಬರ್ತ್ ಡೇ ಪಾರ್ಟಿಗೆ ಹೊಂದುವಂತಹ ಮಿರಮಿರ ಮಿನುಗುವ ಡಿಸೈನ್‌ನಲ್ಲಿ ಸಿಗುತ್ತವೆ. ಇನ್ನು, ಕೆಲವು ರಬ್ಬರ್‌ಬ್ಯಾಂಡ್‌ನಂತಹ ವಿನ್ಯಾಸದಲ್ಲೂ ಲಭ್ಯ. ಬ್ಲಾಸಂ ಫ್ಲವರ್ಸ್, ಸ್ಯಾಟಿನ್‌ ಫ್ಯಾಬ್ರಿಕ್‌ನ ಪೋಲ್ಕಾ ಡಾಟ್ಸ್, ಇಯರ್‌ ಮಫ್‌ ಶೈಲಿಯವು, ಎಲ್‌ಇಡಿ ಅಥವಾ ಬ್ಯಾಟರಿ ಶೆಲ್‌ನಿಂದ ಮಿರಮಿರ ಮಿನುಗುವ ಲೈಟ್ಸ್‌ನ ಹೆಡ್‌ ಬ್ಯಾಂಡ್ಸ್, ಕ್ಯಾಂಡಿ ಕಲರ್ಸ್ ಬನ್ನಿ ಹೆಡ್‌ ಬ್ಯಾಂಡ್ಸ್, ನಾಟ್‌ ಬನ್ನಿ ಹೆಡ್‌ ಬ್ಯಾಂಡ್ಸ್, ಮಲ್ಟಿ ಕಲರ್‌ನ ಬನ್ನಿ ಬ್ಯಾಂಡ್ಸ್, ಹಾಲೋಗ್ರಾಫ್‌ನ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್ಸ್‌ ಚಾಲ್ತಿಯಲ್ಲಿವೆ.

ಆನ್‌ಲೈನ್‌ನಲ್ಲಿ ಬನ್ನಿಇಯರ್ಸ್ ಹೆಡ್‌ ಬ್ಯಾಂಡ್ಸ್

ಇನ್ನು, ಆನ್‌ಲೈನ್‌ನಲ್ಲಿ ರ‍್ಯಾಬಿಟ್‌ ಅಥವಾ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್‌ಗಳ ವಿನ್ಯಾಸಗಳಿಗೆ ಬರವಿಲ್ಲ. ಮ್ಯಾಚಿಂಗ್‌ ಹೆಡ್‌ ಬ್ಯಾಂಡ್‌ನಿಂದಿಡಿದು ಚಿಣ್ಣರ ಪಾರ್ಟಿ ಹೆಡ್‌ ಬ್ಯಾಂಡ್‌ಗಳು ಲಭ್ಯ. ಆ ಮಟ್ಟಿಗೆ ಸಾಕಷ್ಟು ಆಪ್ಷನ್‌ಗಳಿವೆ ಎನ್ನುತ್ತಾರೆ ಮಾರಾಟಗಾರರು.

kids fashion

ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್ಸ್ ಆಯ್ಕೆಗೆ 5 ಸಿಂಪಲ್‌ ಟಿಪ್ಸ್

  • ಪಾರ್ಟಿಗಾದಲ್ಲಿ ಆದಷ್ಟೂ ಮಿನುಗುವ ಹೆಡ್‌ ಬ್ಯಾಂಡ್ಸ್ ಆಯ್ಕೆ ಮಾಡಿ.
  • ಚಿಕ್ಕ ಮಕ್ಕಳಿಗಾದಲ್ಲಿ ಸಾಫ್ಟ್ ಫ್ಯಾಬ್ರಿಕ್‌ ಅಥವಾ ಫರ್‌ನಂತವನ್ನು ಸೆಲೆಕ್ಟ್ ಮಾಡಿ.
  • ಪುಟ್ಟ ಕಂದಮ್ಮಗಳಿಗೆ ಎಲ್‌ಇಡಿ ಲೈಟ್‌ನಂತವು ಬೇಡ. ಅದೇನಿದ್ದರೂ ಫೋಟೋಶೂಟ್‌ಗೆ ಮಾತ್ರವಿರಲಿ.
  • ಸೆಟ್‌ ಹೆಡ್‌ ಬ್ಯಾಂಡ್‌ಗಳು ದೊರೆಯುತ್ತವೆ.
  • ಕೂದಲಿಗೆ ಸಿಕ್ಕಿ ಹಾಕಿಕೊಳ್ಳದಂತಹ, ಒತ್ತದಂತಹ ಹೆಡ್‌ ಬ್ಯಾಂಡ್‌ ಆಯ್ಕೆ ನಿಮ್ಮದಾಗಿರಲಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Monsoon Rain Boots Fashion: ಮಕ್ಕಳ ಮಾನ್ಸೂನ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಬಗೆಯ ರೈನ್‌ ಬೂಟ್ಸ್

Continue Reading

ಫ್ಯಾಷನ್

Shirt Dress Fashion: ಶರ್ಟ್ ಡ್ರೆಸ್‌ ನ್ಯೂ ಲುಕ್‌ಗೆ 3 ಸಿಂಪಲ್‌ ಐಡಿಯಾ

Shirt Dress Fashion: ನಿಮ್ಮ ಬಳಿಯಿರುವ ಶರ್ಟ್ ಡ್ರೆಸ್‌ಗೆ ಹೊಸ ಲುಕ್‌ ನೀಡಬಹುದು. ಸದಾ ಹಳೇ ಸ್ಟೈಲಿಂಗ್‌ನಲ್ಲೆ ಕಾಣಿಸಿಕೊಳ್ಳುತ್ತಿರುವ ನಿಮಗೆ ಈ ಹೊಸ ಐಡಿಯಾ ಡಿಫರೆಂಟ್‌ ಇಮೇಜ್‌ ನೀಡಬಹುದು. ಯಾವ ಬಗೆಯ ಸ್ಟೈಲಿಂಗ್‌ ನಿಮ್ಮ ಈ ಲುಕ್‌ ಬದಲಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು 3 ಸಿಂಪಲ್‌ ಐಡಿಯಾ ನೀಡಿದ್ದಾರೆ.

VISTARANEWS.COM


on

Shirt Dress Fashion
ಚಿತ್ರ ಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೀಸನ್‌ ಬದಲಾದರೂ ಶರ್ಟ್ ಡ್ರೆಸ್‌ ಫ್ಯಾಷನ್‌ (Shirt Dress Fashion) ಮಾತ್ರ ಸೈಡಿಗೆ ಸರಿಯುವುದಿಲ್ಲ! ಬದಲಿಗೆ ನಾನಾ ಸ್ಟೈಲಿಂಗ್‌ಗಳಲ್ಲಿ ಡಿಫರೆಂಟ್‌ ವಿನ್ಯಾಸದಲ್ಲಿ ಆಗಾಗ್ಗೆ ಲಗ್ಗೆ ಇಡುತ್ತಲೇ ಇರುತ್ತದೆ. ಪ್ರತಿ ಹುಡುಗಿಯ ಬಳಿಯೂ ಒಂದಲ್ಲ ಒಂದು ಶರ್ಟ್ ಡ್ರೆಸ್ ಇದ್ದೇ ಇರುತ್ತದೆ. ಅದು ಸಿಂಪಲ್‌ ಆಗಿರಬಹುದು ಅಥವಾ ಪ್ರಿಂಟೆಡ್‌ ಆಗಿರಬಹುದು, ಇಲ್ಲವೇ ಚೆಕ್ಸ್, ಗಿಂಗ್ನಂ ಹೀಗೆ ನಾನಾ ವಿನ್ಯಾಸದ್ದಾಗಿರಬಹುದು. ಸದಾ ಒಂದೇ ಶೈಲಿಯಲ್ಲಿ ಇವನ್ನು ಧರಿಸಿದಲ್ಲಿ ನೋಡಲು ಒಂದೇ ತರಹದ್ದಾಗಿ ಕಾಣಿಸಬಹುದು. ಇದರ ಬದಲು ಧರಿಸುವ ಶೈಲಿಯನ್ನು ಬದಲಿಸಿದಲ್ಲಿ ನ್ಯೂ ಲುಕ್‌ ನೀಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Shirt Dress Fashion

ಶರ್ಟ್ ಡ್ರೆಸ್‌ಗೂ ನ್ಯೂ ಲುಕ್‌

ಹೌದು. ನಿಮ್ಮ ಬಳಿಯಿರುವ ಯಾವುದೇ ಬಗೆಯ ಶರ್ಟ್ ಡ್ರೆಸ್‌ಗೆ ಹೊಸ ಲುಕ್‌ ನೀಡಬಹುದು. ಸದಾ ಹಳೇ ಸ್ಟೈಲಿಂಗ್‌ನಲ್ಲೆ ಕಾಣಿಸಿಕೊಳ್ಳುತ್ತಿರುವ ನಿಮಗೆ ಈ ಹೊಸ ಐಡಿಯಾ ಡಿಫರೆಂಟ್‌ ಇಮೇಜ್‌ ನೀಡಬಹುದು ಎನ್ನುವ ಫ್ಯಾಷನಿಸ್ಟ್‌ಗಳು, 3 ಸಿಂಪಲ್‌ ಐಡಿಯಾಗಳನ್ನು ನೀಡಿದ್ದಾರೆ. ಟ್ರೈ ಮಾಡಿ ನೋಡಿ.

ಶರ್ಟ್ ಡ್ರೆಸ್‌ಗೆ ಬಿಗ್‌ ಬಕಲ್‌ ಬೆಲ್ಟ್

ಶರ್ಟ್ ಡ್ರೆಸ್‌ಗೆ ಬಿಗ್‌ ಬೆಲ್ಟ್‌ಗಳನ್ನು ಧರಿಸಿದಲ್ಲಿ ಇಡೀ ಡ್ರೆಸ್‌ನ ಲುಕ್‌ ಬದಲಾಗುವುದು. ಜೊತೆಗೆ ನೋಡಲು ಡಿಫರೆಂಟಾಗಿ ಕಾಣಿಸುವುದು. ನೋಡಲು ಮಿಡಿ ಸ್ಕರ್ಟ್‌ನಂತೆ ಕಾಣಿಸುವುದು. ಇದೀಗ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಕಲ್‌ ಬೆಲ್ಟ್‌ಗಳು ಹಾಗೂ ಸ್ಟೇಟ್‌ಮೆಂಟ್‌ ಬೆಲ್ಟ್‌ಗಳು ಈ ಡ್ರೆಸ್‌ಗೆ ಸಖತ್ತಾಗಿ ಮ್ಯಾಚ್‌ ಆಗುತ್ತವೆ. ಬ್ಲ್ಯಾಕ್‌ ಶೇಡ್‌ ಹೊರತುಪಡಿಸಿ, ಇತರೇ ಡಿಸೈನ್‌ ಹಾಗೂ ಕಲರ್‌ಗಳಲ್ಲೂ ಲಭ್ಯವಿರುವ ಇವನ್ನು ಧರಿಸಿದಲ್ಲಿ, ಹೊಸ ಡ್ರೆಸ್‌ನಂತೆ ಕಾಣುವುದು.

Shirt Dress Fashion

ಇನ್ನರ್‌ ಟಾಪ್‌ ಮೇಲೆ ಶರ್ಟ್ ಡ್ರೆಸ್‌

ಇನ್ನರ್‌ ಟಾಪ್‌ ಧರಿಸಿ ಅದರ ಮೇಲೆ ಶರ್ಟ್ ಡ್ರೆಸ್‌ ಧರಿಸಬಹುದು. ಆದರೆ, ಇದಕ್ಕಾಗಿ ಒಂದೆರೆಡು ಬಟನ್‌ಗಳು ಓಪನ್‌ ಆಗಿರಬೇಕು. ಆಗ ಮಾತ್ರ, ಮಿಕ್ಸ್ ಮ್ಯಾಚ್‌ ಆದಂತಿರುವ ಶರ್ಟ್ ಡ್ರೆಸ್‌ ಹೈಲೈಟಾಗುತ್ತದೆ. ಕಾಂಟ್ರಸ್ಟ್ ಶೇಡ್‌ನವನ್ನು ಧರಿಸಬಹುದು. ಬೇಕಿದ್ದಲ್ಲಿ ಶರ್ಟ್ ಡ್ರೆಸ್‌ನ ಬಟನ್‌ ಕೋಟ್‌ನಂತೆ ಅರ್ಧಂಬರ್ಧ ಓಪನ್‌ ಮಾಡಬಹುದು. ಕೋಟ್‌ ಡ್ರೆಸ್‌ನಂತೆ ಕಾಣಿಸುವುದು.

ಇದನ್ನೂ ಓದಿ: Monsoon Footwear Fashion: ಮಳೆಗಾಲಕ್ಕೆ ತಕ್ಕಂತೆ ಬದಲಾಗುವ ಫುಟ್‌ವೇರ್‌ ಸ್ಟೈಲಿಂಗ್‌

ಲೇಯರ್‌ ಲುಕ್‌

ಮಳೆಗಾಲದಲ್ಲೂ ಲೇಯರ್‌ ಲುಕ್‌ ನೀಡಬಹುದು. ಶರ್ಟ್ ಡ್ರೆಸ್‌ ಮೇಲೆ ತೆಳುವಾದ ಅಥವಾ ಶೀರ್‌ ಕೋಟ್‌ನಂತಹ ಲಾಂಗ್‌ ಶ್ರಗ್ಸ್ ಅಥವಾ ಜಾಕೆಟ್‌ ಧರಿಸಿದಲ್ಲಿ ಕಂಪ್ಲೀಟ್‌ ಡಿಫರೆಂಟ್‌ ಲುಕ್‌ ನೀಡುವುದರಲ್ಲಿ ಸಂಶಯವಿಲ್ಲ!

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

International Mud Day: ಇಂದು ಅಂತಾರಾಷ್ಟ್ರೀಯ ಮಣ್ಣಿನ ದಿನ. ಮಣ್ಣು ಮುಕ್ಕುವುದೆಂದರೆ ಸೋಲುವ, ಮಣ್ಣೆರಚುವುದೆಂದರೆ ಹಾಳು ಮಾಡುವುದೆಂದೇ ಭಾವಿಸುವ ನಮಗೆ, ಮಣ್ಣಿನ ಸಾಂಗತ್ಯದಿಂದ ಬದುಕಿನಲ್ಲಿ ಆಗುವ ಧನಾತ್ಮಕ ಪರಿಣಾಮವನ್ನು ಅರಿಯುವುದಕ್ಕೆ ಇಂಥ ದಿನಗಳು ಅನುವು ಮಾಡಿಕೊಡುತ್ತವೆ.

VISTARANEWS.COM


on

International Mud Day
Koo

ಇಂದು ಅಂತಾರಾಷ್ಟ್ರೀಯ ಮಣ್ಣಿನ ದಿನ (International Mud Day). ಇತ್ತೀಚೆಗೆ ಮಣ್ಣಿನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಸುದ್ದಿಯನ್ನೇ ಕೇಳುತ್ತಿರುವ ನಮಗೆ ಮಣ್ಣಿನ ದಿನವೆಂದರೆ ಕಣ್‌ ಬಿಡುವಂತಾಗುವುದು ಸಹಜ. ಅಥವಾ ಎಂದಾದರೂ ಮಣ್ಣಲ್ಲಿ ಮಣ್ಣಾಗಿ ಹೋಗುವಂಥ ಆಧ್ಯಾತ್ಮದ ಬಗ್ಗೆ ಯೋಚಿಸಲೂ ಬಹುದು. ಇಂಥ ಯಾವ ವಿಷಯಕ್ಕೂ ಅಲ್ಲ, ಮಣ್ಣಾಟ ಆಡುವುದರಲ್ಲಿರುವ ಸೊಗಸನ್ನು ಎತ್ತಿ ಹಿಡಿಯುವ ಉದ್ದೇಶ ಈ ದಿನಕ್ಕಿದೆಯಂತೆ. ಮಣ್ಣು ಮುಕ್ಕುವುದೆಂದರೆ ಸೋಲುವ, ಮಣ್ಣೆರಚುವುದೆಂದರೆ ಹಾಳು ಮಾಡುವುದೆಂದೇ ಭಾವಿಸುವ ನಮಗೆ, ಮಣ್ಣಿನ ಸಾಂಗತ್ಯದಿಂದ ಬದುಕಿನಲ್ಲಿ ಆಗುವ ಧನಾತ್ಮಕ ಪರಿಣಾಮವನ್ನು ಅರಿಯುವುದಕ್ಕೆ ಇಂಥ ದಿನಗಳು ಅನುವು ಮಾಡಿಕೊಡುತ್ತವೆ. ಮಣ್ಣೆಂದರೆ ಕೃಷಿ ಎನ್ನುವ ಜನಪ್ರಿಯ ಕಲ್ಪನೆಯೇ ಮನಸ್ಸಿಗೆ ಬರುತ್ತದೆ. ಅದು ನಿಜವೂ ಹೌದು. ಅದಲ್ಲದೆ ಮಣ್ಣಿನ ಮಡಿಕೆಗಳಲ್ಲಿ ಆಹಾರ ಬೇಯಿಸುತ್ತಿದ್ದ ದಿನಗಳಿಂದ ಹಿಡಿದು ಮಣ್ಣನ್ನು ಔಷಧಿಯಾಗಿ ಉಪಯೋಗಿಸುವವರೆಗೆ ಬಹಳಷ್ಟು ಬಗೆಯಲ್ಲಿ ಮಣ್ಣಿನೊಂದಿಗೆ ನಮಗೆ ನಂಟಿದೆ. ಮಣ್ಣು ತಿಂದು ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿದ ತುಂಟ ಕೃಷ್ಣನಿಂದ ತೊಡಗಿ, ಮಣ್ಣಲ್ಲಾಡುವ ಎಲ್ಲ ಮಕ್ಕಳಿಗೂ ಕಲ್ಲು-ಮಣ್ಣುಗಳೇ ಮಿತ್ರರು. ಆದರೀಗ ಮಕ್ಕಳು ಮಣ್ಣಲ್ಲಾಡುವುದಕ್ಕಿಂತ ಮೊಬೈಲ್‌ನಲ್ಲಿ ಆಡುವುದೇ ಹೆಚ್ಚು. ಅಂದಹಾಗೆ, ಮಣ್ಣನ್ನು ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ ಎಂಬುದು ಗೊತ್ತೇ?

Mud Girl

ಮಣ್ಣಿಗೂ ಮಹತ್ವವಿದೆ

ಈಜಿಪ್ತ್‌ನ ರಾಣಿ ಕ್ಲಿಯೋಪಾತ್ರ ತನ್ನ ಚೆಲುವಿಗೂ ಹೆಸರಾಗಿದ್ದವಳು. ಅವಳ ಚರ್ಮದ ಕಾಂತಿಯ ದೇಖರೇಖಿಯಲ್ಲಿ ಮೃತ ಸಮುದ್ರದ (ಡೆಡ್‌ ಸೀ) ಮಣ್ಣನ್ನು ಬಳಸುತ್ತಿದ್ದಳಂತೆ. ಇಷ್ಟೇ ಅಲ್ಲ, 19ನೇ ಶತಮಾನದಲ್ಲಿ ಐರೋಪ್ಯ ದೇಶಗಳ ಸ್ಪಾಗಳಲ್ಲಿ ʻಮಡ್‌ ಬಾತ್‌ʼ ಜನಪ್ರಿಯಗೊಂಡಿತು. ನೋವುಗಳಿಂದ ಮುಕ್ತರಾಗುವುದಕ್ಕೆ, ಚರ್ಮದ ಕಾಂತಿಗೆ ಹಾಗೂ ಇನ್ನೂ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಇದೇ ಮದ್ದು ಎಂಬಂತೆ ಇದನ್ನು ಬಿಂಬಿಸಲಾಗುತ್ತಿತ್ತು. ಇವೆಲ್ಲ ನಿಜವೇ? ಮಣ್ಣನ್ನು ಮೈಗೆಲ್ಲ ಮೆತ್ತಿಕೊಳ್ಳುವುದರಿಂದ ಆರೋಗ್ಯ ಚೆನ್ನಾಗಿ ಆಗುವುದೇ ಅಥವಾ ಇದೂ ಗಾಳಿ ಮೇಲಿನ ಗುಳ್ಳೆಯೇ? ಅಂತಾರಾಷ್ಟ್ರೀಯ ಮಣ್ಣಿನ ದಿನದ ಹಿನ್ನೆಲೆಯಲ್ಲಿ ಮಣ್ಣಿನ ಆರೋಗ್ಯ ಮತ್ತು ಸೌಂದರ್ಯವರ್ಧಕ ಅಂಶಗಳ ಬಗ್ಗೆ ಮಾಹಿತಿ.

ಮಣ್ಣಿನ ಸ್ನಾನ

ಹಲವಾರು ಶತಮಾನಗಳಿಂದ ಮಣ್ಣಿನ ಸ್ನಾನವನ್ನು ಚಿಕಿತ್ಸೆಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಹಳೆಯ ಕಾಲದ ಈಜಿಪ್ತ್‌, ಗ್ರೀಕ್‌ ಮತ್ತು ರೋಮನ್ನರು ಇದನ್ನು ಸ್ವಾಸ್ಥ್ಯ ಮತ್ತು ಸೌಂದರ್ಯವನ್ನು ಉದ್ದೀಪಿಸುವ ಮಾರ್ಗವಾಗಿ ಬಳಸುತ್ತಿದ್ದರು. ಬೆಚ್ಚಗಿನ ಮಣ್ಣಿನಲ್ಲಿ ದೇಹವನ್ನು ನೆನೆಸುವುದು, ಆ ಮೂಲಕ ಆರ್ಥರೈಟಿಸ್‌ ನೋವುಗಳನ್ನು ಕಡಿಮೆ ಮಾಡಿಕೊಳ್ಳುವುದು ಅವರ ಕ್ರಮವಾಗಿತ್ತು. ಇದಕ್ಕಾಗಿ ಬಿಸಿನೀರಿನ ಬುಗ್ಗೆಗಳ ಪ್ರದೇಶವನ್ನು ಅವಲಂಬಿಸುತ್ತಿದ್ದರು. ಅದಲ್ಲದೆ, ಮಣ್ಣಿನ ಪುಟ್ಟ ಕೊಳಗಳನ್ನೂ ನಿರ್ಮಿಸಿಕೊಳ್ಳುತ್ತಿದ್ದರು. ಈ ನಿಸರ್ಗ ಚಿಕಿತ್ಸೆ ಇಂದಿಗೂ ಜನಪ್ರಿಯವಾಗಿದೆ. ಇದಕ್ಕಾಗಿ ಹಲವು ರೀತಿಯ ಮಣ್ಣುಗಳನ್ನು ಬಳಸಲಾಗುತ್ತದೆ. ಒಂದೊಂದು ಬಗೆಯ ಮಣ್ಣಿಗೂ ಅದರದ್ದೇ ಆದ ಅನುಕೂಲಗಳಿವೆ.

Dead Sea Mud bath Treatment
  • ಮೃತ ಸಮುದ್ರದ ಮಣ್ಣು: ಖನಿಜಗಳಿಂದ ಭರಿತವಾದ ಮಣ್ಣಿದು. ಮೆಗ್ನೀಶಿಯಂ, ಸೋಡಿಯಂ ಮತ್ತು ಪೊಟಾಶಿಯಂ ಅಂಶಗಳು ಇದರಲ್ಲಿ ಅತ್ಯಂತ ಸಾಂದ್ರವಾಗಿರುತ್ತವೆ. ಇದನ್ನು ಡಿಟಾಕ್ಸ್‌ ಮಾಡುವುದಕ್ಕೆ ಮತ್ತು ಚರ್ಮದ ತೇವ ಹೆಚ್ಚಿಸುವುದಕ್ಕೆ ಉಪಯೋಗಿಸಲಾಗುತ್ತದೆ.
  • ಜ್ವಾಲಾಮುಖಿಯ ಬೂದಿ-ಮಣ್ಣು: ಇದನ್ನು ಜ್ವಾಲಾಮುಖಿ ಇದ್ದಂಥ ಜಾಗಗಳಿಂದ ಮಾತ್ರವೇ ಸಂಗ್ರಹಿಸಬಹುದು. ಇದರ ಬೂದಿಯಲ್ಲಿ ಬಹಳಷ್ಟು ರೀತಿಯ ಖನಿಜಗಳು ಸೇರಿಕೊಂಡಿರುತ್ತವೆ. ಚರ್ಮವನ್ನು ಎಕ್‌ಫಾಲಿಯೇಟ್‌ ಮಾಡುವುದಕ್ಕೆ ಮತ್ತು ಶುದ್ಧೀಕರಿಸುವುದಕ್ಕೆ ಇದಕ್ಕಿಂತ ಒಳ್ಳೆಯದು ಇನ್ನೊಂದಿಲ್ಲ ಎಂಬ ಅಭಿಪ್ರಾಯವಿದೆ.
  • ಬೆಂಟೋನೈಟ್‌ ಮಣ್ಣು: ಇದು ಜೇಡಿಮಣ್ಣಿನಂಥದ್ದು. ಆದರೆ ಇದನ್ನೂ ಜ್ವಾಲಾಮುಖಿಯ ಪ್ರದೇಶದಿಂದಲೇ ಸಂಗ್ರಹಿಸಲಾಗುತ್ತದೆ.
  • ಮುಲ್ತಾನಿ ಮಿಟ್ಟಿ (ಫುಲ್ಲರ್ಸ್‌ ಅರ್ಥ್): ಇದೂ ಸಹ ಜೇಡಿಮಣ್ಣಿನಂಥದ್ದೇ ಆಗಿದ್ದು,‌ ಅತಿಯಾದ ಎಣ್ಣೆ ಸೂಸುವ ಮುಖಕ್ಕೆ ಇದನ್ನು ಬಳಸಲಾಗುತ್ತದೆ.

ಲಾಭಗಳೇನು?

ಮುಖಕ್ಕೆ ಮಣ್ಣಿನ ಲೇಪ ಮಾಡುವುದಕ್ಕೆ ಅದರದ್ದೇ ಆದ ಲಾಭಗಳಿವೆ. ಚರ್ಮದ ಕಶ್ಮಲಗಳನ್ನು ತೆಗೆದು, ಮುಖಕ್ಕೆ ಬೇಕಾದ ತೇವವನ್ನು ನೀಡುವುದು ಇದರ ಉದ್ದೇಶ. ಅದರಲ್ಲೂ ಖನಿಜಯುಕ್ತವಾದ ಮಣ್ಣನ್ನು ಲೇಪಿಸುವುದರಿಂದ ಚರ್ಮಕ್ಕೆ ಕಾಂತಿಯನ್ನು ಮರಳಿಸಬಹುದು. ಚರ್ಮದ ಮೇಲಿನ ಸತ್ತ ಕೋಶಗಳನ್ನು ತೆಗೆದು, ಹೊಳಪು ನೀಡುತ್ತದೆ. ನೋವುಗಳ ಪರಿಹಾರಕ್ಕಾಗಿ ಬೆಚ್ಚಗಿನ ಮಣ್ಣಿನಿಲ್ಲಿ ಹುದುಗಿ ಕೂರುವುದು ಜನಪ್ರಿಯ ಕ್ರಮ. ಇದರಿಂದ ಶರೀರಕ್ಕೆ ಬೇಕಾದ ವಿಶ್ರಾಂತಿಯನ್ನು ನೀಡಿ, ಒತ್ತಡವನ್ನೂ ನಿವಾರಿಸಿಕೊಳ್ಳಬಹುದು.

ಇದನ್ನೂ ಓದಿ: Orange Peel Benefits: ಕಿತ್ತಳೆ ಸಿಪ್ಪೆ ಎಸೆಯಬೇಡಿ; ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು!

ತೊಂದರೆಗಳಿವೆಯೇ?

ಎಲ್ಲಕ್ಕಿಂತ ಮುಖ್ಯವಾಗಿದ್ದು ಅಲರ್ಜಿ. ಮಣ್ಣಲ್ಲಿ ಇರಬಹುದಾದ ಕೆಲವು ಖನಿಜಗಳು ಹಲವರ ಚರ್ಮಕ್ಕೆ ಅಲರ್ಜಿಯನ್ನು ತರಬಹುದು. ಇದಲ್ಲದೆ ಸ್ವಚ್ಛತೆಯ ಬಗ್ಗೆಯೂ ಗಮನ ನೀಡಬೇಕು. ಯಾವುದೇ ಸ್ಪಾದಲ್ಲಿ ಇಂಥವನ್ನು ಬಳಸುವುದಾದರೂ, ಶುಚಿತ್ವದ ಬಗ್ಗೆ ಬಹಳ ಲಕ್ಷ್ಯ ವಹಿಸುವಂಥ ಜಾಗವನ್ನೇ ಆಯ್ಕೆ ಮಾಡಿ. ಈಗಾಗಲೇ ಒಣ ಚರ್ಮದ ಸಮಸ್ಯೆ ಇರುವವರಿಗೆ ಬೆಂಟೋನೈಟ್‌ ಮಣ್ಣಿನ ಪ್ಯಾಕ್‌ ಹಾಕಿದರೆ ಶುಷ್ಕತೆ ಹೆಚ್ಚುತ್ತದೆ. ಹಾಗಾಗಿ ಯಾರಿಗೆ ಯಾವುದು ಎಂಬ ಬಗ್ಗೆ ಮಾಹಿತಿ ಹೊಂದುವುದು ಅಗತ್ಯ.

Continue Reading
Advertisement
Arecanut Insurance Karnataka last date
ಕೃಷಿ18 mins ago

Arecanut Insurance : ಮೆಣಸು, ಅಡಿಕೆಗೆ ವಿಮೆ ಪ್ರೀಮಿಯಂ ಕಟ್ಟಲು ಜು.31 ಕೊನೆಯ ದಿನ

Thalapathy Vijay
Latest38 mins ago

Thalapathy Vijay: ದಳಪತಿ ವಿಜಯ್‌ಗೆ ಭುಜದ ಮೇಲಿನ ಕೈ ತೆಗೆಯಲು ಹೇಳಿದ ಹುಡುಗಿ; ವಿಡಿಯೊ ವೈರಲ್

The whole society should be very careful about fake news says CM Siddaramaiah
ಕರ್ನಾಟಕ40 mins ago

Press Day: ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ: ಸಿದ್ದರಾಮಯ್ಯ

Money Guide
ಮನಿ-ಗೈಡ್48 mins ago

Money Guide: ವಿದೇಶ ಪ್ರವಾಸಕ್ಕೆ ಮುಂದಾಗಿದ್ದೀರಾ? ಅತ್ಯುತ್ತಮ ಕೊಡುಗೆ ನೀಡುವ ಈ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ ಬಗ್ಗೆ ತಿಳಿಯಿರಿ

Suraj Revanna Case
ಪ್ರಮುಖ ಸುದ್ದಿ1 hour ago

Suraj Revanna Case: ಸೂರಜ್ ರೇವಣ್ಣ ಮತ್ತೆ 2 ದಿನ ಸಿಐಡಿ ಕಸ್ಟಡಿಗೆ; ವಕೀಲ ದೇವರಾಜೇಗೌಡಗೆ ಜಾಮೀನು

Actor Yash to recreate the 50s and 70s era in Toxic
ಸಿನಿಮಾ1 hour ago

Actor Yash: ರಾಕಿಂಗ್‌ ಸ್ಟಾರ್‌ ಯಶ್‌ ʼಟಾಕ್ಸಿಕ್‌ʼ ಸಿನಿಮಾದಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌!

New Rules
ವಾಣಿಜ್ಯ1 hour ago

New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

new criminal law
ಕ್ರೈಂ2 hours ago

New Criminal Law: ರಾಜ್ಯದ ಮೊದಲ ಬಿಎನ್‌ಎಸ್‌ ಪ್ರಕರಣ ಹಾಸನದಲ್ಲಿ ದಾಖಲು, ಯಾವ ಕೇಸ್?‌

tumkur News Assault Case
ತುಮಕೂರು2 hours ago

Tumkur News : ತುಮಕೂರಿನಲ್ಲಿ ಗ್ರಾಪಂ ಸದಸ್ಯನ ಮೇಲೆ ಚಪ್ಪಲಿ ಎಸೆದು ಮನಬಂದಂತೆ ಥಳಿಸಿದ ಉಪಾಧ್ಯಕ್ಷ!

Amith Shah
ದೇಶ2 hours ago

Amit Shah: ಹೊಸ ಕ್ರಿಮಿನಲ್ ಕಾನೂನಿನಲ್ಲಿ ಶಿಕ್ಷೆಯ ಬದಲು ನ್ಯಾಯಕ್ಕೆ ಪ್ರಾಧಾನ್ಯತೆ; ಅಮಿತ್ ಶಾ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ24 hours ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು1 day ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ4 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌