SSC Stenographer 2022 | ಸ್ಟೆನೋಗ್ರಾಫರ್‌ ನೇಮಕಕ್ಕೆ ಅರ್ಜಿ ಆಹ್ವಾನ - Vistara News

ಉದ್ಯೋಗ

SSC Stenographer 2022 | ಸ್ಟೆನೋಗ್ರಾಫರ್‌ ನೇಮಕಕ್ಕೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ, ಇಲಾಖೆ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಸ್ಟೆನೋಗ್ರಾಫರ್ “ಸಿʼʼ ಮತ್ತು “ಡಿ” ಹುದ್ದೆಗಳ ನೇಮಕಕ್ಕೆ ಎಸ್‌ಎಸ್‌ಸಿ ಅರ್ಜಿ ಆಹ್ವಾನಿಸಿದೆ (SSC Stenographer 2022). ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

SSC CGL Notification 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ, ಇಲಾಖೆ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಸ್ಟೆನೋಗ್ರಾಫರ್ “ಸಿʼʼ ಮತ್ತು “ಡಿ” ಹುದ್ದೆಗಳ ನೇಮಕಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು (SSC Stenographer 2022), ಅಧಿಸೂಚನೆ ಹೊರಡಿಸಿದೆ.

ಸ್ಟೆನೋಗ್ರಫಿ ಕಲಿತವರು ಮಾತ್ರ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಸ್ಟೆನೋಗ್ರಫಿಯ ಪರೀಕ್ಷೆ ನಡೆಸಿಯೇ ನೇಮಕ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಅನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್‌ 5 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅಂದು ರಾತ್ರಿ 11 ಗಂಟೆಯ ಒಳಗೆ ಅರ್ಜಿ ಸಲ್ಲಿಸಬೇಕಿರುತ್ತದೆ. ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್‌ 6 ಕೊನೆಯ ದಿನವಾಗಿರುತ್ತದೆ. ನವೆಂಬರ್‌ನಲ್ಲಿ ಕಂಪ್ಯೂಟರ್‌ ಆಧಾರಿತ ಪರೀಕ್ಷೆ ನಡೆಯಲಿದ್ದು, ನಂತರ ಕೌಶಲ ಪರೀಕ್ಷೆ ನಡೆಸಲಾಗುತ್ತದೆ.

ಎಷ್ಟು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿಯನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿಲ್ಲ. ಖಾಲಿ ಇರುವ ಹುದ್ದೆಗಳನ್ನು ನೋಡಿಕೊಂಡು ಸಂಖ್ಯೆಯನ್ನು ನಿಗದಿಪಡಿಸಲಾಗುವುದು. ಈ ಕುರಿತ ಮಾಹಿತಿಯನ್ನು ಎಸ್‌ಎಸ್‌ಸಿ ವೆಬ್‌ಸೈಟ್‌ನ ಕ್ಯಾಂಡಿಡೇಟ್ಸ್‌ ಕಾರ್ನರ್‌ನಲ್ಲಿ (Candidate’s Corner>Tentative Vacancy) ಒದಗಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಪರೀಕ್ಷೆಯ ವೇಳಾ ಪಟ್ಟಿ ಹೀಗಿದೆ;

SSC Stenographer 2022

ಅರ್ಹತೆಗಳೇನು?
ಅರ್ಜಿ ಸಲ್ಲಿಸಲಿಚ್ಚಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ. ಸ್ಟೆನೋಗ್ರಾರ್ ಗ್ರೇಡ್ “ಸಿʼʼ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 30 ವರ್ಷ ಮತ್ತು ಸ್ಟೇನೋಗ್ರಾರ್ ಗ್ರೇಡ್ “ಡಿʼʼ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 27 ವರ್ಷ. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಲಿಂಕ್‌: https://ssc.nic.in/Portal/Apply

ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕಾಗಿರುತ್ತದೆ. ಎಸ್‌ಸಿ/ಎಸ್‌ಟಿ/ವಿಕಲಚೇತನ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ನೀಡಲಾಗಿದೆ. ಆನ್‌ಲೈನ್‌ನಲ್ಲಿ ಮಾತ್ರವಲ್ಲದೆ ಆಫ್‌ಲೈನ್‌ನಲ್ಲಿ ಕೂಡ (ಎಸ್‌ಬಿಐ ಚಲನ್‌ ಮೂಲಕ) ಅರ್ಜಿ ಶುಲ್ಕ ಪಾವತಿಸಬಹುದಾಗಿರುತ್ತದೆ.

ಸಿಬಿಟಿ ಹೇಗಿರುತ್ತದೆ?
ನವೆಂಬರ್‌ನಲ್ಲಿ ನಡೆಸಲಾಗುವ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯಲ್ಲಿ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಪ್ರಶ್ನೆಪತ್ರಿಕೆ ಇರುತ್ತದೆ. ಇದರಲ್ಲಿ ಜನರಲ್‌ ಅವೇರ್ನೆಸ್‌, ಜನರಲ್‌ ಇಂಟಲಿಜೆನ್ಸ್‌ ಮತ್ತು ರೀಸನಿಂಗ್‌ಗೆ ಸಂಬಂಧಿಸಿ ದಂತೆ ತಲಾ 50 ಅಂಕಗಳ ಪ್ರಶ್ನೆಗಳು, ಇಂಗ್ಲಿಷ್‌ ಲಾಂಗ್ವೇಜ್‌ ಮತ್ತು ಕಾಂಪ್ರಹೆನ್ಷನ್‌ಗೆ ಸಂಬಂಧಪಟ್ಟಂತೆ 100 ಅಂಕಗಳ ಪ್ರಶ್ನೆಗಳು ಸೇರಿ ಒಟ್ಟು 200 ಅಂಕಗಳಿಗೆ 200 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಅಭ್ಯರ್ಥಿಗಳಿಗೆ ಉತ್ತರಿಸಲು 2 ಗಂಟೆ 40 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ 0.25ಅಂಕ ಕಳೆಯಾಗುತ್ತದೆ.

ಪರೀಕ್ಷೆಯು ರಾಜ್ಯದ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಯಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕಿರುತ್ತದೆ.
ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸ್ಟೆನೋಗ್ರಫಿಗೆ ಸಂಬಂಧಪಟ್ಟಂತೆ ಕೌಶಲ ಪರೀಕ್ಷೆ ನಡೆಸಲಾಗುತ್ತದೆ. ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಈ ಪರೀಕ್ಷೆ ನಡೆಯಲಿದೆ.

ಕೌಶಲ ಪರೀಕ್ಷೆ ಹೀಗಿರಲಿದೆ;

SSC Stenographer 2022

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ವೆಬ್‌: https://ssc.nic.in

ಇದನ್ನೂ ಓದಿ| SSC JE Recruitment 2022 | ಕೇಂದ್ರ ಸರ್ಕಾರದ ಜೂನಿಯರ್‌ ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

 

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉದ್ಯೋಗ

Job Alert: ಗಮನಿಸಿ; 76 ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ: ಇಲ್ಲಿದೆ ಹೊಸ ವೇಳಾಪಟ್ಟಿ

Job Alert: ಕರ್ನಾಟಕ ಲೋಕಸೇವಾ ಆಯೋಗ ಖಾಲಿ ಇರುವ ಒಟ್ಟು 76 ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಜೂನ್‌ 30. ಉಳಿಕೆ ಮೂಲ ವೃಂದದಲ್ಲಿ 70 ಮತ್ತು ಹೈದರಾಬಾದ್‌ ಕರ್ನಾಟಕ ವೃಂದದಲ್ಲಿ 6 ಹುದ್ದೆಗಳಿವೆ. ಕೆಪಿಎಸ್‌ಸಿಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಅಂಗೀಕೃತ ಮಂಡಳಿ, ವಿಶ್ವವಿದ್ಯಾನಿಲಯದಿಂದ ಎಸ್ಸೆಸ್ಸೆಲ್ಸಿ, ಡಿಪ್ಲೋಮಾ, ಆಟೋ ಮೊಬೈಲ್/ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌ ಪಡೆದುಕೊಂಡಿರಬೇಕು. ಜತೆಗೆ ಲೈಸನ್ಸ್‌ ಹೊಂದಿರಬೇಕು.

VISTARANEWS.COM


on

Job Alert
Koo

ಬೆಂಗಳೂರು: ಸರ್ಕಾರಿ ಉದ್ಯೋಗ ಹುಡುಕುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಕರ್ನಾಟಕ ಲೋಕಸೇವಾ ಆಯೋಗ (Karnataka Public Service Commission) ಖಾಲಿ ಇರುವ ಒಟ್ಟು 76 ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ (Motor Vehicle Inspector)​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (KPSC Recruitment 2024). ಈ ಹಿಂದೆ ಅರ್ಜಿ ಸಲ್ಲಿಕೆಗೆ ಮೇ 21 ಕೊನೆಯ ದಿನಾಂಕ ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಿ ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆ ಹೊರಡಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜೂನ್‌ 30 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಉಳಿಕೆ ಮೂಲ ವೃಂದದಲ್ಲಿ 70 ಮತ್ತು ಹೈದರಾಬಾದ್‌ ಕರ್ನಾಟಕ ವೃಂದದಲ್ಲಿ 6 ಹುದ್ದೆಗಳಿವೆ. ಕೆಪಿಎಸ್‌ಸಿಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಅಂಗೀಕೃತ ಮಂಡಳಿ, ವಿಶ್ವವಿದ್ಯಾನಿಲಯದಿಂದ ಎಸ್ಸೆಸ್ಸೆಲ್ಸಿ, ಡಿಪ್ಲೋಮಾ, ಆಟೋ ಮೊಬೈಲ್/ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌ ಪಡೆದುಕೊಂಡಿರಬೇಕು. ಜತೆಗೆ ಲೈಸನ್ಸ್‌ ಹೊಂದಿರಬೇಕು.

ವಯೋಮಿತಿ ಮತ್ತು ಅರ್ಜಿ ಅರ್ಜಿ ಶುಲ್ಕ

ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಲಿಕೆ ಲಭ್ಯ. ಎಸ್‌ಸಿ / ಎಸ್‌ಟಿ / ಕ್ಯಾಟಗರಿ-1ರ ಅಭ್ಯರ್ಥಿಗಳಿಗೆ 5 ವರ್ಷ, ಕ್ಯಾಟಗರಿ 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳು 3 ವರ್ಷ ಮತ್ತು ಪಿಡಬ್ಲ್ಯುಡಿ / ವಿಧವಾ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ. ಎಸ್‌ಸಿ / ಎಸ್‌ಟಿ / ಕ್ಯಾಟಗರಿ-1/ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಮಾಜಿ ಯೋಧರು ಅರ್ಜಿ ಶುಲ್ಕವಾಗಿ 50 ರೂ., ಕ್ಯಾಟಗರಿ 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳು 300 ರೂ., ಸಾಮಾನ್ಯ ವಿಭಾಗದ ಅಭ್ಯರ್ಥಿಗಳು 600 ರೂ. ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸುವುದು ಕಡ್ಡಾಯ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 33,450 ರೂ. – 62,600 ರೂ. ಮಾಸಿಕ ವೇತನ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್‌ ನಂಬರ್‌: 080-30574957 / 30574901ಕ್ಕೆ ಕರೆ ಮಾಡಿ.

ದಿನಾಂಕ ವಿಸ್ತರಣೆಯ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ನಿಮ್ಮ ಮೊಬೈಲ್‌ ನಂಬರ್‌ ಮತ್ತು ಇಮೇಲ್‌ ಐಡಿ ನಮೂದಿಸಿ ಹೆಸರು ನೋಂದಾಯಿಸಿ.
  • ಹೊಸ ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಅಗತ್ಯ ಮಾಹಿತಿ ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆ, ಫೋಟೊ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
  • ಮತ್ತೊಮ್ಮೆ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ನಂಬರ್‌ / ರಿಕ್ವೆಸ್ಟ್‌ ನಂಬರ್‌ ತೆಗೆದಿಡಿ.

ಇದನ್ನೂ ಓದಿ: Job Alert: ಯುಪಿಎಸ್‌ಸಿಯಿಂದ 312 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

Continue Reading

ಉದ್ಯೋಗ

Job Alert: ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿದೆ ಗುಡ್‌ನ್ಯೂಸ್‌; ಪಶುಪಾಲನಾ ನಿಗಮದಿಂದ 5,250 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Job Alert: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಬರೋಬ್ಬರಿ 5,250 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದ್ದು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಕೊನೆಯ ದಿನ ಜೂನ್‌ 2.

VISTARANEWS.COM


on

Job Alert
Koo

ಬೆಂಗಳೂರು: ಒಂದೊಳ್ಳೆ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ (Bhartiya Pashupalan Nigam Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (BPNL Recruitment 2024). ಬರೋಬ್ಬರಿ 5,250 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದ್ದು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಕೊನೆಯ ದಿನ ಜೂನ್‌ 2 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಕೃಷಿ ನಿರ್ವಹಣಾ ಅಧಿಕಾರಿ (Farming Management Officer) – 250, ಕೃಷಿ ಅಭಿವೃದ್ಧಿ ಅಧಿಕಾರಿ (Farming Development Officer) – 1,250 ಮತ್ತು ಕೃಷಿ ಸ್ಫೂರ್ತಿ (Farming Inspiration) – 3,750 ಹುದ್ದೆಗಳು ಖಾಲಿ ಇವೆ. ಅಂಗೀಕೃತ ವಿಶ್ವ ವಿದ್ಯನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಕೃಷಿ ನಿರ್ವಹಣಾ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಕೃಷಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ದ್ವಿತೀಯ ಪಿಯುಸಿ ತೇರ್ಗಡೆ. ಇನ್ನು ಕೃಷಿ ಸ್ಫೂರ್ತಿ ಹುದ್ದೆಗೆ ಅರ್ಜಿ ಸಲ್ಲಿಸುವವರು 10ನೇ ತರಗತಿ ಉತ್ತೀರ್ಣರಾಗಿರಬೇಕು.

ವಯೋಮಿತಿ

ಕೃಷಿ ನಿರ್ವಹಣಾ ಅಧಿಕಾರಿ – 25-45 ವರ್ಷ, ಕೃಷಿ ಅಭಿವೃದ್ಧಿ ಅಧಿಕಾರಿ – 21-40 ವರ್ಷ ಮತ್ತು ಕೃಷಿ ಸ್ಫೂರ್ತಿ – 18-40 ವರ್ಷ ವಯೋಮಿತಿಯವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ವರ್ಗಕ್ಕೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ವರ್ಗಕ್ಕೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಶುಲ್ಕದಲ್ಲಿ ವ್ಯತ್ಯಾಸವಿದೆ. ಕೃಷಿ ನಿರ್ವಹಣಾ ಅಧಿಕಾರಿ – 944 ರೂ., ಕೃಷಿ ಅಭಿವೃದ್ಧಿ ಅಧಿಕಾರಿ – 826 ರೂ. ಮತ್ತು ಕೃಷಿ ಸ್ಫೂರ್ತಿ – 708 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಒಂದೇ ತೆರನಾಗಿದ್ದು, ಆನ್‌ಲೈನ್‌ ಮೂಲಕ ಪಾವತಿಸಬೇಕು. ಆನ್‌ಲೈನ್‌ ಪರೀಕ್ಷೆ, ಡಾಕ್ಯುಮೆಂಟ್‌ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಮಾಸಿಕ ವೇತನ

ಕೃಷಿ ನಿರ್ವಹಣಾ ಅಧಿಕಾರಿ – 50,000 ರೂ., ಕೃಷಿ ಅಭಿವೃದ್ಧಿ ಅಧಿಕಾರಿ – 40,000 ರೂ. ಮತ್ತು ಕೃಷಿ ಸ್ಫೂರ್ತಿ – 25,000 ರೂ. ಮಾಸಿಕ ವೇತನ ಲಭ್ಯ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಅಗತ್ಯ ಮಾಹಿತಿಗಳನ್ನು ತುಂಬಿ.
  • ಅಗತ್ಯವಾದ ಡಾಕ್ಯುಮೆಂಟ್‌, ಫೋಟೊ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಮತ್ತೊಮ್ಮೆ ವಿವರಗಳನ್ನು ಪರಿಶೀಲಿಸಿ ಎಲ್ಲವೂ ಸರಿ ಇದೆ ಎಂದು ಖಚಿತಪಡಿಸಿ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌ ತೆಗೆದಿಡಿ.

ಇದನ್ನೂ ಓದಿ: Job Alert: ಗುಡ್‌ನ್ಯೂಸ್‌; ರೈಲ್ವೆ ಇಲಾಖೆಯಲ್ಲಿದೆ 1,202 ಹುದ್ದೆ: ಐಟಿಐ ಪಾಸಾದವರೂ ಅಪ್ಲೈ ಮಾಡಿ

Continue Reading

ಕರ್ನಾಟಕ

LinkedIn: ಉದ್ಯೋಗ ಹುಡುಕಾಟದಲ್ಲಿರುವ ಪದವೀಧರರಿಗೆ ಲಿಂಕ್ಡ್‌ಇನ್‌ ಸಲಹೆಗಳು ಪ್ರಕಟ; ಏನೇನಿವೆ ತಪ್ಪದೇ ಓದಿ

LinkedIn: ವಿಶ್ವದ ಅತಿದೊಡ್ಡ ಪ್ರೊಫೆಷನಲ್ ನೆಟ್‌ವರ್ಕ್ ಆಗಿರುವ ಲಿಂಕ್ಡ್‌ಇನ್ ಇಂದು ಉದ್ಯೋಗ ಹುಡುಕಾಟದಲ್ಲಿರುವ ಇತ್ತೀಚಿನ ಪದವೀಧರರಿಗಾಗಿ ಭಾರತದಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಹುದ್ದೆಗಳು, ಕೈಗಾರಿಕೆಗಳು, ಕೆಲಸಗಳು ಮತ್ತು ಕೌಶಲ್ಯಗಳ ಕುರಿತು ಹೊಸ ಮಾಹಿತಿಯನ್ನು ಬಹಿರಂಗಪಡಿಸಿದೆ. ಪ್ರಸ್ತುತ ಸಂದರ್ಭದಲ್ಲಿ ಆರಂಭಿಕ ಹಂತದ ಹುದ್ದೆಗಳಿಗೆ ಡಿಸೈನ್ (ವಿನ್ಯಾಸ), ಅನಾಲಿಟಿಕ್ಸ್ (ವಿಶ್ಲೇಷಣೆ) ಮತ್ತು ಪ್ರೋಗ್ರಾಮಿಂಗ್‌ಗಳು ಅತ್ಯುನ್ನತ ಕೌಶಲ್ಯಗಳು ಎಂದು ಲಿಂಕ್ಡ್‌ಇನ್ ತಿಳಿಸಿದೆ.

VISTARANEWS.COM


on

LinkedIns Tips for Graduates in the Job Search
ಸಾಂದರ್ಭಿಕ ಚಿತ್ರ.
Koo

ಬೆಂಗಳೂರು: ವಿಶ್ವದ ಅತಿದೊಡ್ಡ ಪ್ರೊಫೆಷನಲ್ ನೆಟ್‌ವರ್ಕ್ ಆಗಿರುವ ಲಿಂಕ್ಡ್‌ಇನ್ (LinkedIn) ಇಂದು ಉದ್ಯೋಗ ಹುಡುಕಾಟದಲ್ಲಿರುವ ಇತ್ತೀಚಿನ ಪದವೀಧರರಿಗಾಗಿ ಭಾರತದಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಹುದ್ದೆಗಳು, ಕೈಗಾರಿಕೆಗಳು, ಕೆಲಸಗಳು ಮತ್ತು ಕೌಶಲ್ಯಗಳ ಕುರಿತು ಹೊಸ ಮಾಹಿತಿಯನ್ನು ಬಹಿರಂಗಪಡಿಸಿದೆ. ಪ್ರಸ್ತುತ ಸಂದರ್ಭದಲ್ಲಿ ಆರಂಭಿಕ ಹಂತದ ಹುದ್ದೆಗಳಿಗೆ ಡಿಸೈನ್ (ವಿನ್ಯಾಸ), ಅನಾಲಿಟಿಕ್ಸ್ (ವಿಶ್ಲೇಷಣೆ) ಮತ್ತು ಪ್ರೋಗ್ರಾಮಿಂಗ್‌ಗಳು ಅತ್ಯುನ್ನತ ಕೌಶಲ್ಯಗಳು ಎಂದು ಲಿಂಕ್ಡ್‌ಇನ್ ತಿಳಿಸಿದೆ.

2024ರಲ್ಲಿ ಕಂಪನಿಗಳು ಹೊಂದಿಕೊಳ್ಳುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದನ್ನು ಮುಂದುವರೆಸುತ್ತಿವೆ. ಹೆಚ್ಚು ಹೊಂದಿಕೊಳ್ಳುವ ಕೆಲಸದ ವ್ಯವಸ್ಥೆಗಳ ಕಡೆಗೆ ಗಮನ ಕೊಡುವ ಟ್ರೆಂಡ್ ಈಗ ನಡೆಯುತ್ತಿದೆ. ಆನ್-ಸೈಟ್ ಹುದ್ದೆಗಳು 15% ರಷ್ಟು ಕಡಿಮೆಯಾಗುತ್ತಿವೆ ಮತ್ತು ವರ್ಷದಿಂದ ವರ್ಷಕ್ಕೆ ಆರಂಭಿಕ ಹಂತದ ಹುದ್ದೆಗಳಿಗೆ 52% ರಷ್ಟು ಹೈಬ್ರಿಡ್ ಸ್ಥಾನಗಳು ಹೆಚ್ಚಾಗುತ್ತಿವೆ. ಈ ಬದಲಾವಣೆಯು ಹೊಸ ಪದವೀಧರರಿಗೆ ಆಯ್ಕೆ ಮಾಡಲು ಮತ್ತು ವೃತ್ತಿ ಜೀವನ ಮುಂದುವರಿಸಲು ವಿಸ್ತಾರವಾದ ಕೆಲಸದ ಅವಕಾಶಗಳನ್ನು ಒದಗಿಸುತ್ತದೆ.

ಇದನ್ನೂ ಓದಿ: Money Guide: ಮೇ 31ರೊಳಗೆ ಪ್ಯಾನ್‌-ಆಧಾರ್‌ ಲಿಂಕ್‌ ಆಗದಿದ್ದರೆ ಟಿಡಿಎಸ್ ದುಪ್ಪಟ್ಟು ಕಡಿತ; ಹೀಗೆ ಲಿಂಕ್‌ ಮಾಡಿ

ಲಿಂಕ್ಡ್‌ಇನ್‌ನ ಕರಿಯರ್ ಸ್ಟಾರ್ಟರ್ 2024 ವರದಿಯ ಪ್ರಕಾರ, ಯುಟಿಲಿಟೀಸ್ ಕ್ಷೇತ್ರ ಬಹಳ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದ್ದು, ಬ್ಯಾಚುಲರ್ ಡಿಗ್ರಿ ಅಥವಾ ಪದವಿ ಹೊಂದಿರುವ ಯುವ ವೃತ್ತಿಪರರು ಆಯ್ಕೆಗೆ ಪರಿಗಣಿಸಬಹುದಾಗಿದೆ. ತೈಲ, ಅನಿಲ ಮತ್ತು ಗಣಿಗಾರಿಕೆ, ರಿಯಲ್ ಎಸ್ಟೇಟ್, ಸಲಕರಣೆ ಬಾಡಿಗೆ ಸೇವೆಗಳು ಮತ್ತು ಗ್ರಾಹಕ ಸೇವಾ ಕ್ಷೇತ್ರಗಳು ಹೊಸ ಪದವೀಧರರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಇನ್ನಿತರ ಉನ್ನತ ಉದ್ಯಮಗಳಾಗಿವೆ. ಜತೆಗೆ ಬ್ಯಾಚುಲರ್ ಡಿಗ್ರಿ ಅಥವಾ ಪದವಿ ಹೊಂದಿಲ್ಲದವರು ಶಿಕ್ಷಣ, ಮಾಹಿತಿ ಹಾಗೂ ತಂತ್ರಜ್ಞಾನ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಪಡೆಯಬಹುದಾಗಿದೆ ಎಂದು ತಿಳಿಸಿದೆ.

ವಿಭಿನ್ನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವವರಿಗೆ ಉನ್ನತ ಉದ್ಯೋಗ

ಲಿಂಕ್ಡ್‌ಇನ್‌ನ ಮಾಹಿತಿಯು ವಿಭಿನ್ನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ ವೃತ್ತಿಪರರಿಗೆ ವಿವಿಧ ಶ್ರೇಣಿಯ ಉನ್ನತ ಉದ್ಯೋಗಗಳ ವಿವರಗಳನ್ನು ತಿಳಿಸುತ್ತದೆ. ಪದವೀಧರರು ಸಾಫ್ಟ್‌ವೇರ್ ಎಂಜಿನಿಯರ್, ಸಿಸ್ಟಮ್ ಎಂಜಿನಿಯರ್ ಮತ್ತು ಪ್ರೋಗ್ರಾಮಿಂಗ್ ಅನಾಲಿಸ್ಟ್ ನಂತಹ ಹುದ್ದೆಗಳಿಗೆ ಹುಡುಕಾಟ ನಡೆಸಬಹುದು. ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಡೇಟಾ ಅನಾಲಿಸ್ಟ್ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯ ಪದವೀಧರರನ್ನು ನೇಮಿಸಿಕೊಳ್ಳಲಾಗುತ್ತಿದೆ. ಪದವಿ ಇಲ್ಲದವರು ಕೂಡ ಸಾಫ್ಟ್‌ವೇರ್ ಎಂಜಿನಿಯರ್, ಸೆಕ್ರೆಟರಿ ಮತ್ತು ಡಿಸೈನ್ ಎಂಜಿನಿಯರ್‌ನಂತಹ ಹುದ್ದೆಗಳಲ್ಲಿ ಕೆಲಸ ಮಾಡಬಹುದು.

ಶೈಕ್ಷಣಿಕ ಹಿನ್ನೆಲೆ ಹೊರತಾಗಿಯೂ ಅನೇಕ ಕೆಲಸಗಳು

ಶೈಕ್ಷಣಿಕ ಹಿನ್ನೆಲೆ ಹೊರತಾಗಿಯೂ ಅನೇಕ ಕೆಲಸಗಳು ವೇಗದ ಬೆಳವಣಿಗೆ ಹೊಂದುವ ಅವಕಾಶ ನೀಡುತ್ತವೆ. ಸಮುದಾಯ ಮತ್ತು ಸಾಮಾಜಿಕ ಸೇವೆಗಳು, ಕಾನೂನು, ಮಾರ್ಕೆಟಿಂಗ್, ಮಾಧ್ಯಮ ಮತ್ತು ಸಂವಹನದಂತಹ ಕ್ಷೇತ್ರಗಳಲ್ಲಿ ಪದವೀಧರರಿಗೆ ಸಾಕಷ್ಟು ಅವಕಾಶಗಳು ಲಭ್ಯವಿದೆ. ಪದವಿ ಇಲ್ಲದವರು ಶಿಕ್ಷಣ, ಮಾನವ ಸಂಪನ್ಮೂಲ, ಮಾರ್ಕೆಟಿಂಗ್ ಹಾಗೂ ಮಾಧ್ಯಮ ಮತ್ತು ಸಂವಹನದಾದ್ಯಂತ ಸಾಕಷ್ಟು ಉದ್ಯೋಗಾವಕಾಶಗಳನ್ನು ಪಡೆಯುತ್ತಾರೆ.

ಇದನ್ನೂ ಓದಿ: TOP 5 Movies: ಒಟಿಟಿಯಲ್ಲಿ ನೋಡಲೇಬೇಕಾದ ಟಾಪ್‌ 5 ಬಿಗ್‌ ಬಜೆಟ್‌ ಸಿನಿಮಾಗಳು!

ಈ ಕುರಿತು ಲಿಂಕ್ಡ್‌ಇನ್ ಕರಿಯರ್ ಎಕ್ಸ್‌ಪರ್ಟ್ ಆಂಡ್ ಇಂಡಿಯಾ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ನಿರಾಜಿತಾ ಬ್ಯಾನರ್ಜಿ ಮಾತನಾಡಿ, “ಉದ್ಯೋಗ ಮಾರುಕಟ್ಟೆ ಸ್ವಲ್ಪ ಬಿಗುವಾಗಿದ್ದಾಗ ಆರಂಭಿಕ ಹಂತದಲ್ಲಿ ಉದ್ಯೋಗ ದೊರೆಯುವುದು ಕಷ್ಟವಾಗುತ್ತದೆ. ಉದ್ಯಮದ ಟ್ರೆಂಡ್‌ಗಳು ಮತ್ತು ಬೇಡಿಕೆಯ ಉದ್ಯೋಗಗಳ ಕುರಿತು ಅಪ್‌ಡೇಟ್ ಆಗಿರುವುದರಿಂದ ಮತ್ತು ಆರಂಭದಲ್ಲಿಯೇ ಸಿಗುವ ಹುದ್ದೆಗಳಲ್ಲಿ ಮುನ್ನಡೆಯುವುದರಿಂದ ಮುಂದೆ ಆಯ್ಕೆಗಳು ದೊಡ್ಡದಾಗುತ್ತಾ ಹೋಗುತ್ತದೆ. ಇಂದು ಅನೇಕ ಕೌಶಲ್ಯಗಳನ್ನು ಬೇರೆ ಬೇರೆ ಕೈಗಾರಿಕೆಗಳಲ್ಲಿ ಬಳಸಬಹುದಾಗಿದೆ, ಮತ್ತು ಎಐ ಬಳಕೆ ಹೆಚ್ಚುತ್ತಿರುವುದರಿಂದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಟೆಕ್-ಸಂಬಂಧಿತ ಹುದ್ದೆಗಳು ಸೃಷ್ಟಿಯಾಗುತ್ತಿವೆ.

ಈ ನೇಮಕಾತಿ ಟ್ರೆಂಡ್‌ಗಳು ಇಂಧನ ವಲಯದಲ್ಲಿರುವಂತಹ ವಿಶಾಲವಾದ ಆರ್ಥಿಕ ಮಾದರಿಗಳನ್ನು ಪ್ರತಿಬಿಂಬಿಸುತ್ತವೆ. ವೈವಿಧ್ಯಮಯ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ವೃತ್ತಿಪರರನ್ನು ಕಂಪನಿಗಳು ಹುಡುಕಲು ತೊಡಗಿವೆ. ತಮ್ಮ ದಿಗಂತವನ್ನು ವಿಸ್ತರಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳು ತಮ್ಮ ಕೌಶಲ್ಯಗಳನ್ನುಮತ್ತು ವೃತ್ತಿಪರರ ಜತೆಗಿನ ನೆಟ್‌ವರ್ಕಿಂಗ್ ಅನ್ನು ಬಲಪಡಿಸಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.

ಉದ್ಯೋಗ ಹುಡುಕಾಟವನ್ನು ಪ್ರಾರಂಭಿಸುವವರಿಗೆ ಲಿಂಕ್ಡ್‌ಇನ್‌ನ ಸಲಹೆಗಳು

ನೇಮಕಾತಿದಾರರ ಗಮನ ಸೆಳೆಯಲು, ಹೆಚ್ಚಿಸಲು ನಿಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ನಿಮ್ಮ ಕೌಶಲ್ಯಗಳನ್ನು ಗಮನ ಸೆಳೆಯುವಂತೆ ನಮೂದಿಸಿ. ಲಿಂಕ್ಡ್‌ಇನ್ ನೀವು ತಿಳಿಸಿದ ಕೌಶಲ್ಯಗಳ ಆಧಾರದ ಮೇಲೆ ನಿಮಗೆ ಈ ಮೊದಲು ತಿಳಿದಿರದ, ಆದರೆ ನಿಮಗೆ ಹೊಂದುವ ಉದ್ಯೋಗಾವಕಾಶಗಳನ್ನು ತಿಳಿಸುತ್ತದೆ.

ಲಿಂಕ್ಡ್‌ಇನ್‌ನ ಓಪನ್ ಟು ವರ್ಕ್ ಫೀಚರ್ ಮೂಲಕ ನೀವು ಹೊಸ ಉದ್ಯೋಗದಲ್ಲಿ ಆಸಕ್ತಿಯನ್ನು ಹೊಂದಿದ್ದೀರಿ ಎಂಬುದನ್ನು ತಿಳಿಸಿ. ಜತಗೆ ಈ ಕಾಲದ ಟ್ರೆಂಡ್ ಅಥವಾ ವಿಚಾರಗಳಿಗೆ ತಕ್ಕಂತೆ ನಿಮ್ಮ ಸ್ವಂತ ವಿಚಾರಗಳನ್ನು ಪೋಸ್ಟ್ ಮಾಡುವ ಮೂಲಕ ಮತ್ತು ಸಂಭಾವ್ಯ ಉದ್ಯೋಗದಾತರಿಗೆ ಸಂಬಂಧಿಸಿದ ವಿಷಯಗಳ ಕುರಿತು ಅರ್ಥಪೂರ್ಣವಾಗಿ ಸಂವಹನ ನಡೆಸುವ ಮೂಲಕ ಗಮನ ಸೆಳೆಯಬಹುದಾಗಿದೆ. ನಿಮ್ಮ ಭವಿಷ್ಯದ ಉದ್ಯೋಗದಾತರು ನಿಮ್ಮಿಂದ ಕೇವಲ ಒಂದು ಕಾಮೆಂಟ್ ದೂರದಲ್ಲಿರಬಹುದು ಎಂಬುದು ನೆನಪಲ್ಲಿರಲಿ.

ಇದನ್ನೂ ಓದಿ: Gold Rate Today: ಇಂದು ಚಿನ್ನದ ಬೆಲೆಯಲ್ಲಿ ತುಸು ಏರಿಕೆ; ಖರೀದಿಗೆ ಮುನ್ನ ದರ ಗಮನಿಸಿ

ಔಟ್ ಆಫ್ ದಿ ಬಾಕ್ಸ್ ಯೋಚಿಸಿ. ಅಂದರೆ ವಿಭಿನ್ನವಾಗಿ ಯೋಚಿಸಿ. ಎಲ್ಲಾ ಕಡೆ ಎಐ ಆವರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಪ್ರೋಗ್ರಾಮಿಂಗ್ ಕೌಶಲ್ಯಗಳನ್ನು ಹೊಂದಿರುವವರನ್ನು ತಂತ್ರಜ್ಞಾನ ಕ್ಷೇತ್ರಕ್ಕೆ ಹೊರತಾದ ಬೇರೆ ಅಭಿವೃದ್ಧಿ ಹೊಂದುತ್ತಿರುವ ಕೈಗಾರಿಕೆಗಳು ನೇಮಕಮಾಡಿಕೊಳ್ಳುತ್ತಿವೆ. ನಿಮ್ಮ ಮುಂದಿನ ಕೆಲಸ ಅಥವಾ ಹುದ್ದೆಗಾಗಿ ನೀವು ಹುಡುಕಾಟ ನಡೆಸುತ್ತಿರುವಾಗ ಈ ರೀತಿಯ ವೃತ್ತಿ ಪರಿವರ್ತನೆಯ (ಕರಿಯರ್ ಟ್ರಾನ್ಸಿಷನ್) ಟ್ರೆಂಡ್‌ಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಏಕೆಂದರೆ ಅದರಿಂದ ನಿಮ್ಮ ಮುಂದೆ ಅವಕಾಶಗಳ ಸಂಖ್ಯೆ ಹೆಚ್ಚುತ್ತದೆ. ನಿಮ್ಮ ಕೌಶಲ್ಯಗಳಿಗೆ ಸಂಬಂಧಿಸಿದ ಲಿಂಕ್ಡ್‌ಇನ್ ಗುಂಪುಗಳಲ್ಲಿ ತೊಡಗಿಸಿಕೊಳ್ಳಿ. ಇದು ನೆಟ್‌ವರ್ಕ್‌ ಸಾಧಿಸಲು ಉತ್ತಮ ಮಾರ್ಗವಾಗಿದೆ ಮತ್ತು ಲಭ್ಯವಿರುವ ವಿಶಾಲವಾದ ಅವಕಾಶಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅನುವು ಮಾಡಿ ಕೊಡಲಿದೆ.

ಇದನ್ನೂ ಓದಿ: World Digestive Health Day: ಜೀರ್ಣಕ್ರಿಯೆಯಲ್ಲಿ ತೊಡಕು ಅನಾರೋಗ್ಯಕ್ಕೆ ದಾರಿ; ಈ ಸಲಹೆ ಪಾಲಿಸಿ

ಪದವೀಧರರು ತಮ್ಮ ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡಲು, ಲಿಂಕ್ಡ್‌ಇನ್ 30 ಜೂನ್ 2024ರವರೆಗೆ ಉಚಿತ ಲಿಂಕ್ಡ್‌ಇನ್ ಕಲಿಕಾ ಕೋರ್ಸ್‌ಗಳನ್ನು ಬಿಡುಗಡೆ ಮಾಡಿದೆ, ಆ ಕೋರ್ಸುಗಳು ಹೀಗಿವೆ.

● ಕಾಲೇಜು ಪದವೀಧರರಿಗೆ ಉದ್ಯೋಗ ಹುಡುಕಾಟ.
● ಇಂಟರ್ನ್‌ಶಿಪ್ ಅನ್ನು ಉದ್ಯೋಗವನ್ನಾಗಿ ಪರಿವರ್ತಿಸಿಕೊಳ್ಳುವುದು.
● ವೃತ್ತಿ ಆರಂಭಿಸುವವರಿಗೆ ಪ್ರೊಫೆಷನಲ್ ನೆಟ್‌ವರ್ಕಿಂಗ್.
● 30-ನಿಮಿಷದ ರೆಸ್ಯೂಮ್ ರಿಫ್ರೆಶ್.
● ಸಾಮಾನ್ಯ ಸಂದರ್ಶನ ಪ್ರಶ್ನೆಗಳಿಗೆ ಸಿದ್ಧರಾಗಿರುವುದು.
● ನಿಮ್ಮ ಕಾಂಪನ್ಸೇಷನ್ ಪ್ಯಾಕೇಜ್ ಮಾತುಕತೆ ನಡೆಸುವುದು.

Continue Reading

ಉದ್ಯೋಗ

Job Alert: ಯುಪಿಎಸ್‌ಸಿಯಿಂದ 312 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

Job Alert: ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ (UPSC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅಸಿಸ್ಟಂಟ್ ಪ್ರೊಫೆಸರ್, ಟ್ರೈನಿಂಗ್ ಆಫೀಸರ್, ಎಂಜಿನಿಯರ್ ಮತ್ತು ಶಿಪ್ ಸರ್ವೇಯರ್ ಕಮ್ ಡೆಪ್ಯೂಟಿ ಡೈರೆಕ್ಟರ್ ಜನರಲ್ ಸೇರಿ ಸುಮಾರು 312 ಹುದ್ದೆಗಳಿವೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜೂನ್‌ 13.

VISTARANEWS.COM


on

Job Alert
Koo

ನವದೆಹಲಿ: ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ (UPSC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅಸಿಸ್ಟಂಟ್ ಪ್ರೊಫೆಸರ್, ಟ್ರೈನಿಂಗ್ ಆಫೀಸರ್, ಎಂಜಿನಿಯರ್ ಮತ್ತು ಶಿಪ್ ಸರ್ವೇಯರ್ ಕಮ್ ಡೆಪ್ಯೂಟಿ ಡೈರೆಕ್ಟರ್ ಜನರಲ್ ಸೇರಿ ಸುಮಾರು 312 ಹುದ್ದೆಗಳಿವೆ (UPSC Specialist Grade III, Assistant Director Grade-II & Other Recruitment 2024). ಪದವಿ, ಡಿಪ್ಲೋಮಾ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜೂನ್‌ 13. ಅಪ್ಲಿಕೇಶನ್‌ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ ಜೂನ್‌ 14 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಉಪ ಅಧೀಕ್ಷಕ ಪುರಾತತ್ವ ರಸಾಯನ ಶಾಸ್ತ್ರಜ್ಞ – 4 ಹುದ್ದೆ, ವಿದ್ಯಾರ್ಹತೆ- ಪದವಿ / ಸ್ನಾತಕೋತ್ತರ ಪದವಿ (ರಸಾಯನ ಶಾಸ್ತ್ರ)
ಉಪ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ – 67 ಹುದ್ದೆ, ವಿದ್ಯಾರ್ಹತೆ- ಪಿಜಿ (ಪುರಾತತ್ವಶಾಸ್ತ್ರ / ಭಾರತೀಯ ಇತಿಹಾಸ)
ಸಿವಿಲ್ ಹೈಡ್ರೋಗ್ರಾಫಿಕ್ ಆಫೀಸರ್, ಇಂಟಿಗ್ರೇಟೆಡ್ ಹೆಡ್‌ಕ್ವಾರ್ಟಸ್‌ (ನೌಕಾಪಡೆ) – 4 ಹುದ್ದೆ, ವಿದ್ಯಾರ್ಹತೆ: ಪದವಿ / ಪಿಜಿ (ಸಂಬಂಧಿತ ಎಂಜಿನಿಯರಿಂಗ್)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಫೋರೆನ್ಸಿಕ್ ಮೆಡಿಸಿನ್) – 6 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಜನರಲ್ ಮೆಡಿಸಿನ್) – 61 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಜನರಲ್ ಸರ್ಜರಿ) – 39 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಪೀಡಿಯಾಟ್ರಿಕ್ ನೆಫ್ರಾಲಜಿ) 3 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಪೀಡಿಯಾಟ್ರಿಕ್ಸ್) – 23 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್-3 (ಅನಸ್ತೇಶಿಯಾಲಜಿ) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಡರ್ಮಟಾಲಜಿ, ವೆನೆರಿಯಾಲಜಿ ಮತ್ತು ಕುಷ್ಠರೋಗ) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಜನರಲ್ ಮೆಡಿಸಿನ್) – 4 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಜನರಲ್ ಸರ್ಜರಿ) – 7 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಪ್ರಸೂತಿ ಮತ್ತು ಜ್ಞಾನಶಾಸ್ತ್ರ) – 5 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ನೇತ್ರಶಾಸ್ತ್ರ) – 3 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಆರ್ಥೋಪೆಡಿಕ್ಸ್) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 ಓಟೊ-ರೈನೋ-ಲಾರಿಂಗಲಜಿ (ಕಿವಿ, ಮೂಗು ಮತ್ತು ಗಂಟಲು) – 3 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಪೀಡಿಯಾಟ್ರಿಕ್ಸ್) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಪ್ಯಾಥಾಲಜಿ) – 4 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಸೈಕಿಯಾಟ್ರಿ) – 1 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಡೆಪ್ಯುಟಿ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ (ಟೆಕ್ನಿಕಲ್) (ಡಿಸಿಐಒ / ಟೆಕ್) 9 ಹುದ್ದೆ, ವಿದ್ಯಾರ್ಹತೆ: ಪದವಿ / ಪಿಜಿ (ಸಂಬಂಧಿತ ಎಂಜಿನಿಯರಿಂಗ್)
ಸಹಾಯಕ ನಿರ್ದೇಶಕರು (ತೋಟಗಾರಿಕೆ) 4 ಹುದ್ದೆ, ವಿದ್ಯಾರ್ಹತೆ ಎಂಎಸ್‌ಸಿ ತೋಟಗಾರಿಕೆ
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಕೆಮಿಕಲ್) 5 ಹುದ್ದೆ, ವಿದ್ಯಾರ್ಹತೆ: ಡಿಪದವಿ (ಸಂಬಂಧಿತ ವಿಭಾಗ)/ ಪಿಜಿ (ರಸಾಯನಶಾಸ್ತ್ರ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಆಹಾರ) 19 ಹುದ್ದೆ, ವಿದ್ಯಾರ್ಹತೆ: ಪದವಿ (ಫುಡ್ ಟೆಕ್ನಾಲಜಿ)/ ಪಿಜಿ ಡಿಪ್ಲೋಮಾ (ಫ್ರೂಟ್ಸ್ ಟೆಕ್ನಾಲಜಿ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಹೊಸೇರಿ) 12 ಹುದ್ದೆ, ವಿದ್ಯಾರ್ಹತೆ: ಪದವಿ (ಟೆಕ್ಸ್ ಟೈಲ್ ಟೆಕ್ನಾಲಜಿ ಅಥವಾ ಹೋಸಿಯರಿ ಟೆಕ್ನಾಲಜಿ ಅಥವಾ ನೈಟಿಂಗ್‌ ಟೆಕ್ನಾಲಜಿ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಲೆದರ್ & ಪಾದರಕ್ಷೆ) – 8 ಹುದ್ದೆ, ವಿದ್ಯಾರ್ಹತೆ: ಪದವಿ (ಲೆದರ್ ಟೆಕ್ನಾಲಜಿ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಮೆಟಲ್ ಫಿನಿಶಿಂಗ್) – 2 ಹುದ್ದೆ, ವಿದ್ಯಾರ್ಹತೆ: ಪದವಿ (ಕೆಮಿಕಲ್)
ಟೆಕ್ನಾಲಜಿ ಅಥವಾ ಕೆಮಿಕಲ್ ಎಂಜಿನಿಯರಿಂಗ್) / ಪಿಜಿ (ಕೆಮಿಸ್ಟ್ರಿ)
ಎಂಜಿನಿಯರ್ ಮತ್ತು ಹಡಗು ಸರ್ವೇಯರ್ ಕಮ್-ಡೆಪ್ಯುಟಿ ಡೈರೆಕ್ಟರ್ ಜನರಲ್ (ಟೆಕ್ನಿಕಲ್) – 2 ಹುದ್ದೆ, ವಿದ್ಯಾರ್ಹತೆ: ಮೆರೈನ್ ಎಂಜಿನಿಯರ್ ಆಫೀಸರ್ ಕ್ಲಾಸ್ -1ರ ಪ್ರಮಾಣ ಪತ್ರ
ತರಬೇತಿ ಅಧಿಕಾರಿ (ಮಹಿಳಾ ತರಬೇತಿ)- ಉಡುಪು ತಯಾರಿಕೆ – 5 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ / ಪದವಿ (ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ)
ತರಬೇತಿ ಅಧಿಕಾರಿ (ಮಹಿಳಾ ತರಬೇತಿ) – ಎಲೆಕ್ಟ್ರಾನಿಕ್ ಮಕಾನಿಕ್ – 3 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ / ಪದವಿ (ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ)
ಅಸಿಸ್ಟೆಂಟ್‌ ಫೊಫೆಸರ್‌ – 1 ಹುದ್ದೆ, ವಿದ್ಯಾರ್ಹತೆ: ಎಂ.ಸಿ.ಎಚ್. ಯುರಾಲಜಿ ಅಥವಾ ಡಿಎನ್‌ಬಿ (ಯುರಾಲಜಿ)

ಅರ್ಜಿ ಶುಲ್ಕ ಮತ್ತು ವಯೋಮಿತಿ

ಅರ್ಜಿ ಶುಲ್ಕವಾಗಿ ಸಾಮಾನ್ಯ ವರ್ಗ ಅಭ್ಯರ್ಥಿಗಳಿ 25 ರೂ. ಪಾವತಿಸಬೇಕು. ಮೀಸಲಾತಿ ಹೊಂದಿರುವವರಿಗೆ ಅರ್ಜಿ ಶುಲ್ಕವಿಲ್ಲ. ಇನ್ನು ಒಂದೊಂದು ಹುದ್ದೆಗೆ ಒಂದೊಂದು ರೀತಿಯ ವಯೋಮಾನ ನಿಗದಿಪಡಿಸಲಾಗಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡಲು ಮೇ 31 ಕೊನೆಯ ದಿನ

Continue Reading
Advertisement
World Milk Day
ಆರೋಗ್ಯ15 mins ago

World Milk Day: ಹಾಲಿಗೊಂದು ದಿನವೇ ಬೇಕೆಂದಿಲ್ಲ, ವರ್ಷವಿಡೀ ಆಚರಿಸಬಹುದು!

Narendra Modi
ಪ್ರಮುಖ ಸುದ್ದಿ23 mins ago

Narendra Modi : 45 ಗಂಟೆಗಳ ಸುದೀರ್ಘ ಧ್ಯಾನ ಪೂರ್ಣಗೊಳಿಸಿದ ಪ್ರಧಾನಿ ಮೋದಿ

KCET Result 2024
ಕರ್ನಾಟಕ29 mins ago

KCET Result 2024: ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡಲು ಲಿಂಕ್‌ ಇಲ್ಲಿದೆ

Exit Poll Live 2024
Live News35 mins ago

Exit Poll 2024 Live: ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಗದ್ದುಗೆ? ಕೆಲವೇ ಕ್ಷಣಗಳಲ್ಲಿ ಎಕ್ಸಿಟ್‌ ಪೋಲ್‌, ಕ್ಷಣಕ್ಷಣದ ಮಾಹಿತಿ ಇಲ್ಲಿದೆ

Shah Rukh Khan shooting for King in Spain
ಬಾಲಿವುಡ್47 mins ago

Shah Rukh Khan: ಮಗಳ ಜತೆ ಶಾರುಖ್ ಅಭಿನಯಿಸಲಿರುವ ಸಿನಿಮಾ ದೃಶ್ಯ ಲೀಕ್‌!

Liquor ban
ಬೆಂಗಳೂರು56 mins ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

IPL 2025 Mega Auction
ಕ್ರೀಡೆ58 mins ago

IPL 2025 Mega Auction: ಕೇವಲ ಇಷ್ಟು ಆಟಗಾರರ ರಿಟೇನ್​ಗೆ ಮಾತ್ರ ಅವಕಾಶ!

Rohit Sharma
ಪ್ರಮುಖ ಸುದ್ದಿ1 hour ago

Rohit Sharma : ಹಿರಿಯರಿರುವ ತಂಡಕ್ಕಿಂತ ಕಿರಿಯರ ತಂಡವೇ ಬೆಸ್ಟ್​ ಎಂದ ರೋಹಿತ್ ಶರ್ಮಾ; ಯಾಕೆ ಗೊತ್ತಾ?

Exit Poll 2024
ದೇಶ1 hour ago

Exit Poll 2024: ಸಟ್ಟಾ ಬಜಾರ್‌, ರಾಜಕೀಯ ಪರಿಣತರ ಪ್ರಕಾರ ಈ ಬಾರಿಯೂ ಮೋದಿ; ನಿಮ್ಮ ಪ್ರಕಾರ ಯಾರಿಗೆ ಅಧಿಕಾರ? ತಿಳಿಸಿ

POK
ವಿದೇಶ1 hour ago

POK: ಪಿಒಕೆ ತನ್ನ ಭಾಗವಲ್ಲ ಎಂದು ಅಧಿಕೃತವಾಗಿಯೇ ಒಪ್ಪಿಕೊಂಡ ಪಾಕಿಸ್ತಾನ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು56 mins ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌