ಬಿಲ್ಕಿಸ್‌ ಬಾನೊ ಅತ್ಯಾಚಾರ ಆರೋಪಿಗಳನ್ನು ಮತ್ತೆ ಜೈಲಿಗಟ್ಟಿ: ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ - Vistara News

ಕರ್ನಾಟಕ

ಬಿಲ್ಕಿಸ್‌ ಬಾನೊ ಅತ್ಯಾಚಾರ ಆರೋಪಿಗಳನ್ನು ಮತ್ತೆ ಜೈಲಿಗಟ್ಟಿ: ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ

ಬಿಲ್ಕಿಸ್‌ ಬಾನೊ ಅತ್ಯಾಚಾರ ಆರೋಪಿಗಳನ್ನು ಮತ್ತೆ ಬಂಧಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

VISTARANEWS.COM


on

Bilkis bano
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಗುಜರಾತ್‌ನ ಬಿಲ್ಕಿಸ್ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಸನ್ನಡತೆಯ ಹೆಸರಿನಲ್ಲಿ ಬಿಡುಗಡೆ ಮಾಡಿರುವುದನ್ನು ಖಂಡಿಸಿ ಮತ್ತು ಅವರ ಮರು ಬಂಧನ ಆಗ್ರಹಿಸಿ ಬೆಂಗಳೂರಿನಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಗೆ ಅಖಿಲ ಬಾರತ ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಸಾಥ್‌ ನೀಡಿವೆ. ಪ್ರತಿಭಟನೆಯಲ್ಲಿ ಹಲವು ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದು, ಆರೋಪಿಗಳನ್ನು ಮತ್ತೆ ಜೈಲಿಗೆ ಅಟ್ಟಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ʻʻಬಿಲ್ಕಿಸ್ ಜೊತೆ ಇದೆ ಕರ್ನಾಟಕʼ ಎಂಬ ಶೀರ್ಷಿಕೆಯಡಿ ಪ್ರತಿಭಟನೆ ನಡೆಯುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಮುಸ್ಲಿಂ ಮಹಿಳೆಯರೂ ಇದ್ದಾರೆ.

ಏನಿದು ಬಿಲ್ಕಿಸ್‌ ಬಾನೊ ಪ್ರಕರಣ?
೨೦೦೨ರ ಫೆಬ್ರವರಿ ೨೭ರಂದು ಗುಜರಾತ್‌ನ ಗೋಧ್ರಾದಲ್ಲಿ ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರಿದ್ದ ರೈಲಿಗೆ ಬೆಂಕಿ ಹಚ್ಚಲಾಗಿತ್ತು. ದೊಡ್ಡ ಪ್ರಮಾಣದ ಸಾವು ಸಂಭವಿಸಿದ್ದು, ಇದಕ್ಕೆ ಪ್ರತಿಯಾಗಿ ದೊಡ್ಡ ಮಟ್ಟದ ಹಿಂಸಾಚಾರ ನಡೆದಿತ್ತು. ಇದರಿಂದ ಹೆದರಿದ ಕೆಲವರು ಊರಿನಿಂದ ವಲಸೆ ಹೋಗುತ್ತಿದ್ದರು. ಆಗ ೨೦ ವರ್ಷದವರಾಗಿದ್ದ ಬಿಲ್ಕಿಸ್​ ಬಾನೊ ಕೂಡ ಮಾರ್ಚ್​ 3ರಂದು ತನ್ನ ಪತಿ, ಪುಟ್ಟ ಮಗಳು ಮತ್ತು ಕುಟುಂಬದ ಇತರ 15 ಸದಸ್ಯರೊಂದಿಗೆ ಹಳ್ಳಿಯನ್ನು ಬಿಟ್ಟು ಹೊರಟಿದ್ದರು. ಆಗ ಆಕೆ ಐದು ತಿಂಗಳ ಗರ್ಭಿಣಿ. ಆ ಸಂದರ್ಭದಲ್ಲಿ ಸುಮಾರು 20-30 ಮಂದಿ ಶಸ್ತ್ರಾಸ್ತ್ರಧಾರಿಗಳನ್ನು ಅವರನ್ನು ಮಾರ್ಗ ಮಧ್ಯೆಯೇ ತಡೆದುದಲ್ಲದೆ, ಗರ್ಭಿಣಿ ಬಿಲ್ಕಿಸ್​ ಬಾನೊ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಕುಟುಂಬದ ಏಳುಮಂದಿಯನ್ನು ಕೊಂದು ಹಾಕಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ೧೧ ಮಂದಿಯನ್ನು ಅಪರಾಧಿಗಳೆಂದು ಗುರುತಿಸಿ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಇತ್ತೀಚೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಗುಜರಾತ್‌ ಸರಕಾರ ಈ ಆರೋಪಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಸುಪ್ರೀಂಕೋರ್ಟ್‌ ಇದನ್ನು ಪರಿಶೀಲಿಸುವಂತೆ ಗುಜರಾತ್‌ ಸರಕಾರಕ್ಕೆ ಸೂಚನೆ ನೀಡಿದೆ.

ಈ ನಡುವೆ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವ ಕ್ರಮ, ಅವರನ್ನು ಹಿಂದೂ ಸಂಘಟನೆಗಳು ಹೀರೊಗಳ ಮಾದರಿಯಲ್ಲಿ ಸ್ವಾಗತಿಸಿ, ಸಿಹಿ ಹಂಚಿರುವುದು ರಾಷ್ಟ್ರಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೈಂ

Robbery Case : ರಾಯಚೂರಿನಲ್ಲಿ ಸ್ವಾಮೀಜಿ ತಲೆಗೆ ಗನ್ ಇಟ್ಟು ದರೋಡೆ!

Robbery Case : ರಾಯಚೂರಿನಲ್ಲಿ ಸಿದ್ದಲಿಂಗ ಸ್ವಾಮೀಜಿಗೆ ದರೋಡೆಕೋರರು ಶಾಕ್ ನೀಡಿದ್ದಾರೆ. ಸ್ವಾಮೀಜಿ ತಲೆಗೆ ಗನ್ ಇಟ್ಟು ಮಠದಲ್ಲಿದ್ದ ಚಿನ್ನಾಭರಣವನ್ನು ದೋಚಿ ಪರಾರಿ ಆಗಿದ್ದಾರೆ. ಮತ್ತೊಂದು ಕಡೆ ಮಚ್ಚು, ಲಾಂಗ್‌ ಹಿಡಿದು ಮನೆಗೆ ನುಗ್ಗಿ ದಂಪತಿ ಬಳಿ ಇದ್ದ ಬಂಗಾರ ಕದ್ದಿದ್ದಾರೆ.

VISTARANEWS.COM


on

By

Robbery Case
Koo

ರಾಯಚೂರು/ಬೆಳಗಾವಿ: ತಲೆಗೆ ಗನ್ ಪಾಯಿಂಟ್ ಹಿಡಿದು ಸ್ವಾಮೀಜಿಯನ್ನು ಬೆದರಿಸಿ ದರೋಡೆ (Robbery Case) ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ನಡೆದಿದೆ. ವಿಜಯಮಹಾಂತೇಶ್ವರ ಶಾಖಾ ಮಠದ ಸ್ವಾಮೀಜಿ ಸಿದ್ದಲಿಂಗಸ್ವಾಮಿ ತಲೆಗೆ ಗನ್ ಪಾಯಿಂಟ್ ಹಿಡಿದು, ಮಠದಲ್ಲಿದ್ದ ಚಿನ್ನಾಭರಣ ಮತ್ತು ಬೆಳ್ಳಿ ಸಾಮಾಗ್ರಿಗಳನ್ನು ಕದ್ದು ಪರಾರಿ ಆಗಿದ್ದಾರೆ.

ಗುರುವಾರ ರಾತ್ರಿ ಮಠಕ್ಕೆ ಬಂದಿದ್ದ ದರೋಡೆಕೋರರು ಮಲಗಲು ಜಾಗ ಕೊಡಿ ಎಂದು ಕೇಳಿಕೊಂಡಿದ್ದರು. ಯಾರೋ ಭಕ್ತರು ಇರಬೇಕೆಂದು ನಂಬಿದ ಸ್ವಾಮೀಜಿ ಆವರಣದಲ್ಲಿ ಮಲಗಿ ಎಂದು ಹೇಳಿದ್ದರು. ರಾತ್ರಿ ತಂಗಿದ್ದ ದರೋಡೆಕೋರರು ಮಧ್ಯ ರಾತ್ರಿ ಎದ್ದು ನೀರು ಕೇಳುವ ನೆಪದಲ್ಲಿ ಬಾಗಿಲು ಬಡಿದಿದ್ದಾರೆ. ವಿಜಯಮಹಾಂತೇಶ್ವರ ಶಾಖಾ ಮಠದ ಸ್ವಾಮೀಜಿ ತಮ್ಮ ಆತ್ಮರಕ್ಷಣೆಗಾಗಿ ಗನ್‌ ಇಟ್ಟುಕೊಂಡಿದ್ದರು. ಅದೇ ಗನ್ ಕಸಿದುಕೊಂಡ ತಲೆಗೆ ಗನ್ ಪಾಯಿಂಟ್‌ ಇಟ್ಟು ಬೆದರಿಸಿದ್ದಾರೆ.

ಮಠದಲ್ಲಿದ್ದ 20 ಲಕ್ಷ ರೂ. ನಗದು ಹಣ, 80 ಗ್ರಾಂ ಚಿನ್ನಾಭರಣ, 7 ಕೆಜಿ ಬೆಳ್ಳಿಯನ್ನೆಲ್ಲ ದೋಚಿ ಪರಾರಿ ಆಗಿದ್ದಾರೆ. ಸ್ಥಳಕ್ಕೆ ಎಎಸ್‌ಪಿ ಹಾಗೂ ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಿಂಗಸ್ಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

ಚಿಕ್ಕೋಡಿಯಲ್ಲಿ ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿ ದರೋಡೆ

ತಡರಾತ್ರಿ ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿದ ದರೋಡೆಕೋರರು ದಂಪತಿಗೆ ಚಾಕುವಿನಿಂದ ಇರಿದು ಮೈಮೇಲಿದ್ದ ಆಭರಣ ಕದ್ದಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಸ್ಟೇಷನ್ ವಸತಿಯಲ್ಲಿ ಘಟನೆ ನಡೆದಿದೆ. ಸಾಹುಬಾಯಿ ಸಂಕಪಾಳ ಹಾಗೂ ಯಮನಪ್ಪ ಸಂಕಪಾಳ ಎಂಬ ದಂಪತಿಗೆ ಹಲ್ಲೆ ನಡೆಸಿದ್ದಾರೆ.

ದಂಪತಿ ಮುಖ‌ ಹಾಗೂ ಹೊಟ್ಟೆಯ ಭಾಗಕ್ಕೆ‌ಮನಸೋ ಇಚ್ಛೆ ಹಲ್ಲೆ‌ ಮಾಡಿದ್ದಾರೆ. ತಡರಾತ್ರಿ ನಡೆದ ಈ ಘಟನೆಯಿಂದ‌‌ ಶೇಡಬಾಳ‌ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ದಂಪತಿಯ ಮೈಮೇಲಿದ್ದ ಒಂದು ತೊಲ ಬಂಗಾರ ಕಸಿದು ಗ್ಯಾಂಗ್ ಪರಾರಿ ಆಗಿದೆ. ಗಾಯಗೊಂಡ ದಂಪತಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದರೋಡೆಕೋರರಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

HD Kumaraswamy: ಸಿಎಂ ಕುರ್ಚಿ ಮೇಲೆ ಟವಲ್‌ ಹಾಕಿದವರಿಂದಲೇ ಮುಡಾ ಹಗರಣ ಬಯಲು: ಎಚ್‌ಡಿಕೆ

HD Kumaraswamy: ಸಿಎಂ ತಾವು ಕಳೆದುಕೊಂಡ ಸೈಟಿಗೆ 62 ಕೋಟಿ ರೂ. ಪರಿಹಾರ ಕೇಳುತ್ತಿದ್ದಾರೆ. ಇವರಿಗೆ ಬಡವರ ಕಷ್ಟ ಗೊತ್ತಿದೆಯಾ? ಹಾಗೆ ಕೇಳುವ ಸಿಎಂ ಭೂಮಿ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ಇತರ ರೈತರಿಗೂ ಹಾಗೇ ಪರಿಹಾರ ಕೊಡಿಸಲಿ. ಕೊಡಿಸ್ತಾರಾ? ಎಂದು ಅವರು ಸವಾಲು ಹಾಕಿದರು.

VISTARANEWS.COM


on

hd kumaraswamy
Koo

ಮೈಸೂರು: ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದಲೇ ಮುಡಾ ಹಗರಣ (MUDA Scam) ಬಯಲಿಗೆ ಬಂದಿದೆ. ಇಲ್ಲವಾದರೆ ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಯಾಕೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಂಡ್ಯದಲ್ಲಿ (Mandya News) ಇಂದು ಜನತಾದರ್ಶನ (Janata Darshana) ನಡೆಸಿದ ಎಚ್‌ಡಿಕೆ, ಅದಕ್ಕೂ ಮುನ್ನ ದೇವಾಲಯ ಭೇಟಿ ನೀಡುವ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದರು. ʼನನ್ನ ಜನತಾ ದರ್ಶನ ಕಾರ್ಯಕ್ರಮ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲʼ ಎಂದು ಗುಡುಗಿದರು.

ಮುಡಾ ಹಗರಣ ಬಯಲು ಹಿಂದೆ, ಸಿಎಂ ಕುರ್ಚಿ ಮೇಲೆ ಟವಲ್ ಹಾಕಿರುವವರ ಪಾತ್ರ ಇದೆ. ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ ಅಷ್ಟೇ. ಆದರೆ ಹಗರಣ ಆಚೆ ಬರಲು ಕಾಂಗ್ರೆಸ್‌ನವರೇ ಒಳಗಿನಿಂದ ಕುಮ್ಮಕ್ಕು ಕೊಡುತ್ತಿದ್ದಾರೆ. ಈಗ ಸಿಡಿ ಫ್ಯಾಕ್ಟರಿ ಕ್ಲೋಸ್ ಆಗಿದೆ, ಮುಡಾ ವಿಚಾರ ಶುರುವಾಗಿದೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಸಿಎಂ ಸಿದ್ದರಾಮಯ್ಯ ಪತ್ನಿಗೆ ಆ ಜಾಗ ಹೇಗೆ ಬಂತು ಅಂತಲೂ ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಸಿಎಂ ತಾವು ಕಳೆದುಕೊಂಡ ಸೈಟಿಗೆ 62 ಕೋಟಿ ರೂ. ಪರಿಹಾರ ಕೇಳುತ್ತಿದ್ದಾರೆ. ಇವರಿಗೆ ಬಡವರ ಕಷ್ಟ ಗೊತ್ತಿದೆಯಾ? ಹಾಗೆ ಕೇಳುವ ಸಿಎಂ ಭೂಮಿ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ಇತರ ರೈತರಿಗೂ ಹಾಗೇ ಪರಿಹಾರ ಕೊಡಿಸಲಿ. ಕೊಡಿಸ್ತಾರಾ? ಎಂದು ಅವರು ಸವಾಲು ಹಾಕಿದರು.

ನನ್ನ ಜನತಾ ದರ್ಶನ ವಿಚಾರದಲ್ಲಿ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಜನತಾ ದರ್ಶನದ ಬಗ್ಗೆಯೇ ಸಚಿವ ಸಂಪುಟದ ಸಭೆ ಕರೆದು ಚರ್ಚೆ ಮಾಡಿದ್ದಾರೆ. ನೀವು ಅಧಿಕಾರಿಗಳನ್ನು ಇದರಿಂದ ದೂರು ಇಡಬಹುದು. ಆದರೆ ಜನರನ್ನು ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಬೆಂಗಳೂರು ಗ್ರಾಮಂತರದ ಸಂಸದರು ಈ ರೀತಿ ಸಭೆ ಮಾಡಿದ್ದಾಗ ಏನು ಮಾಡ್ತಿದ್ರಿ? ಚುನಾವಣೆಗೆ ಬಂದು ಜನ ಸ್ಪಂದನ ಕಾರ್ಯಕ್ರಮ ಮಾಡಿದಾಗ ಎಲ್ಲಿ ಹೋಗಿದ್ರು? ಈಗ ಜನತಾ ದರ್ಶನ ತಪ್ಪಿಸಲು ಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ಜನತಾ ದರ್ಶನ ನಿಲ್ಲಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು.

ಇದಕ್ಕೂ ಮುನ್ನ ಅವರು ಮಂಡ್ಯ ಕಾಳಿಕಾಂಬ ದೇವಾಲಯಕ್ಕೆ ಭೇಟಿ ನೀಡಿದರು. ಅಲ್ಲಿ ದೇವಾಲಯದ ಮುಂದೆ ಬಿಜೆಪಿ ನಾಯಕರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಲ್ವ ಮರಕ್ಕೆ ಕಟ್ಟಿದ್ದ ಗೆಲುವಿನ ಗಂಟು ಬಿಚ್ಚಿ ದೇವಿಗೆ ಪೂಜೆ ಸಲ್ಲಿಸಿದರು. ಚುನಾವಣೆ ವೇಳೆ ಕುಮಾರಸ್ವಾಮಿ ಗೆಲುವಿಗಾಗಿ ಪ್ರಾರ್ಥಿಸಿ ಕಾರ್ಯಕರ್ತರು ಈ ಹರಕೆ ಕಟ್ಟಿದ್ದರು. ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಕೆ ಬಳಿಕ ಅಂಬೇಡ್ಕರ್ ಭವನದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಾವಿರಾರು ಮಂದಿ ಮುಂಜಾನೆಯಿಂದಲೇ ಕೇಂದ್ರ ಸಚಿವರ ಜನತಾ ದರ್ಶನಕ್ಕಾಗಿ ಆಗಮಿಸಿದ್ದಾರೆ.

ಇದನ್ನೂ ಓದಿ: HD Kumaraswamy: ನನ್ನ ಹೃದಯದಲ್ಲಿ ಕೆಂಪೇಗೌಡರಿದ್ದಾರೆ, ಆಹ್ವಾನ ಬೇಕಿಲ್ಲ; ಕುಮಾರಸ್ವಾಮಿ

Continue Reading

ಬೆಂಗಳೂರು

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Physical Abuse : ಮಕ್ಕಳಿಗೆ ಗುಡ್ ಆ್ಯಂಡ್ ಬ್ಯಾಡ್ ಟಚ್ ಬಗ್ಗೆ ಹೇಳಿ ಕೋಡಬೇಕಾದವರೆ ಖಾಸಗಿ ಶಾಲಾ ಶಿಕ್ಷಕಿಯೊಬ್ಬಳು ರಾಕ್ಷಸಿ ಪ್ರವೃತಿ ತೋರಿದ್ದಾಳೆ. ಬಾಲಕಿಯ ಖಾಸಗಿ ಅಂಗಾಂಗಗಳನ್ನು ಮುಟ್ಟಿ, ವಿಕೃತಿ ಮೆರೆದಿದ್ದಾಳೆ. ಲೈಂಗಿಕ ದೌರ್ಜನ್ಯ ನಡೆಸಿರುವ ಕಾಮುಕಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

VISTARANEWS.COM


on

By

Physical Abuse
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ (Physical Abuse) ನಡೆದಿದೆ. ಶಾಲೆಗೆ‌ ಸೇರಿದ 8 ದಿನಕ್ಕೆ ಶಿಕ್ಷಕಿಯೊಬ್ಬಳು ಬಾಲಕಿಗೆ ನರಕ ತೋರಿಸಿದ್ದಾಳೆ. ವೆಂಕಟೇಶ್ವರ ಪುರದ ಅನ್ವರ್ ಲೇಔಟ್‌ನ ಖಾಸಗಿ ಶಾಲೆಯಲ್ಲಿ ನರ್ಸರಿ ಓದುತ್ತಿದ್ದ 3 ವರ್ಷದ ಪುಟ್ಟ ಕಂದಮ್ಮನ ಮೇಲೆ ಲೈಂಗಿಕ ‌ಕಿರುಕುಳ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಸ್ಕೂಲಿಗೆ ಹೋಗುವುದಿಲ್ಲ ಎಂದು ಹಠ ಮಾಡುತ್ತಿದ್ದ 3 ವರ್ಷದ ಬಾಲಕಿ ಹೊಟ್ಟೆನೋವು ಎಂದು ಯಾತನೆ ಪಡುತ್ತಿದ್ದಳು. ಜತೆಗೆ ಮೂತ್ರ ವಿಸರ್ಜನೆ ಮಾಡುವ ಜಾಗದಲ್ಲಿ ನೋವಾಗುತ್ತಿದೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಳು. ಇದರಿಂದ ಗಾಬರಿಯಾದ ಮಗುವಿನ ತಾಯಿ ಕೂಡಲೇ ಆಸ್ಪತ್ರೆಗೆ ‌ಕರೆದುಕೊಂಡು‌ ಹೋಗಿದ್ದಾರೆ. ಚಿಕಿತ್ಸೆ ‌ನೀಡಿದ ವೈದ್ಯರು, ಸರ್ಕಾರಿ ‌ಆಸ್ಪತ್ರೆಗೆ‌ ಹೋಗಲು ಸೂಚಿಸಿದ್ದರು. ಹೀಗಾಗಿ ಅಲ್ಲಿಂದ ನೇರವಾಗಿ ವಾಣಿವಿಲಾಸ್ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ‌ಹೋಗಿದ್ದರು.

ಆದರೆ ಹೀಗೆ ಹೋದ ಪೋಷಕರಿಗೆ ಶಾಕ್‌ ಕಾದಿತ್ತು. ಯಾಕೆಂದರೆ ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ದೃಢಪಡಿಸಿದ್ದರು. ದೇಹದ ಖಾಸಗಿ ಅಂಗಗಳಲ್ಲಿ‌ ಗಾಯವಾಗಿ ರಕ್ತಸ್ರಾವವಾಗಿತ್ತು. ನೋವಿನಿಂದ ನರಕಯಾತನೆ ಪಡುತ್ತಿರುವ ನಡೆಯಲು ಆಗದೆ ಕಷ್ಟ ಪಡುತ್ತಿತ್ತು.

ಟೀಚರ್ ಮಾಡಿದ ಕೃತ್ಯದ ಬಗ್ಗೆ ತೊದಲು ಮಾತಿನಿಂದಲೇ ಬಾಲಕಿ ಎಲ್ಲವನ್ನೂ ಹೇಳಿದ್ದಾಳೆ. ಮಕ್ಕಳಿಗೆ ಗುಡ್ ಆ್ಯಂಡ್ ಬ್ಯಾಡ್ ಟಚ್ ಬಗ್ಗೆ ಹೇಳಿ ಕೋಡಬೇಕಾದವರೆ ಖಾಸಗಿ ಶಾಲಾ ಶಿಕ್ಷಕಿಯೊಬ್ಬಳು ರಾಕ್ಷಸಿ ಪ್ರವೃತಿ ತೋರಿದ್ದಾಳೆ. ಸದ್ಯ ಪೋಷಕರು ಕೆಜೆ‌ ಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

ಬೆಂಗಳೂರಲ್ಲಿ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ

ಬೆಂಗಳೂರು: ನಗರದಲ್ಲಿ ಮತ್ತೊಂದು ರೇಪ್ ಆ್ಯಂಡ್ ಮರ್ಡರ್ ಕೇಸ್‌ ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿರುವ ಘಟನೆ (Physical Abuse) ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡುವ ದಂಪತಿಯ 6 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಗಳು, ನಂತರ ಕೊಲೆ ಮಾಡಿ ಪಾರ್ಕಿಂಗ್‌ ಪ್ರದೇಶದ ಮರವೊಂದರ ಬಳಿ ಶವ ಎಸೆದಿದ್ದಾರೆ. ರಾತ್ರಿ ವೇಳೆ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪಾರ್ಕಿಂಗ್ ಲಾಟ್‌ನಲ್ಲಿದ್ದರೂ ಬಾಲಕಿ ಕೊಲೆ ವಿಚಾರ ಬೆಳಕಿಗೆ ಬಂದಿರಲಿಲ್ಲ. ಜನರು ಓಡಾಡುತ್ತಿದ್ದರೂ ಯಾರೂ ಗಮನ ಹರಿಸಿರಲಿಲ್ಲ. ಮೈ ಮೇಲೆ ಪರಚಿದ ಗಾಯಗಳು ಹಾಗು ರಕ್ತಸಿಕ್ತ ಬಟ್ಟೆಗಳಿಂದ ಬಾಲಕಿ ಶವ ಕಂಡುಬಂದಿದೆ. ಸದ್ಯ ಬಾಲಕಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಬಗ್ಗೆ ರೈಲ್ವೆ ಎಸ್ ಪಿ ಡಾ. ಸೌಮ್ಯ ಲತಾ ಅವರು ಪ್ರತಿಕ್ರಿಯಿಸಿ, ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‌ನಲ್ಲಿ ಒಂದು ಹೆಣ್ಣು ಮಗವಿನ ಮೃತ ದೇಹ ಸಿಕ್ಕಿದೆ. ನಮ್ಮ ಸಿಬ್ಬಂದಿ ಬಂದು ತಿಳಿಸಿದ್ದು, ಪರಿಶೀಲನೆ ನಡೆಸಲಾಗಿದೆ. ದೇಹದ ಮೇಲೆ ಸಾಕಾಷ್ಟು ಗಾಯಗಳಾಗಿವೆ, ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಲಾಗುತ್ತಿದೆ. ಕೊಲೆ ಮಾಡಿ ಎಲ್ಲಿಂದಲ್ಲೋ ತಂದು ಇಲ್ಲಿ ಎಸೆಯಲಾಗಿದೆ. ಭಿಕ್ಷಾಟನೆ ಮಾಡುತ್ತಿದ್ದ ಕುಟುಂಬದ ಮಗು ಎಂದು ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

Self Harming : ಬೆಂಗಳೂರಲ್ಲಿ ವಿವಾಹಿತ ಟೆಕ್ಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಕುಟುಂಬಸ್ಥರ ವರದಕ್ಷಿಣಿ ಕಿರುಕುಳವೇ (Dowry case) ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

VISTARANEWS.COM


on

By

Self Harming in bengaluru
Koo

ಬೆಂಗಳೂರು: ವರದಕ್ಷಿಣಿ ಕಿರುಕುಳಕ್ಕೆ ಬೇಸತ್ತು (Dowry case) ಟೆಕ್ಕಿಯೊಬ್ಬರು ಬೆಂಗಳೂರಲ್ಲಿ ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾರೆ. ಪೂಜಾ (22) ಮೃತ ದುರ್ದೈವಿ.

ಮನೆಯಲ್ಲಿ ಯಾರು ಇಲ್ಲದ ವೇಳೆ ಪೂಜಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಗಂಗಮ್ಮನ ಗುಡಿ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ.

ಪೂಜಾ ಮೂಲತಃ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತೆಗ್ಗಿ ಬಸಾಪುರ ಮೂಲದವರು. 2022ರಲ್ಲಿ ಸುನೀಲ್‌ ಎಂಬುವವರ ಜತೆಗೆ ಪೂಜಾಳ ವಿವಾಹವಾಗಿತ್ತು. ಆದರೆ ಪತಿ ಸುನೀಲ್ ಹಾಗೂ ಮೈದುನಾ ಅನಿಲ್ ವರದಕ್ಷಿಣಿ ಕಿರುಕುಳ ಆರೋಪ ಕೇಳಿ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆತ್ಮಹತ್ಯೆಗೀಡಾದ ಟೆಕ್ಕಿ ಪೂಜಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Self Harming

ಮೂರು ಎಕರೆ ಜಮೀನು, ಚಿನ್ನಾಭರಣ ತರುವಂತೆ ಪತಿ ಸುನೀಲ್ ಕಿರುಕುಳ ನೀಡುತ್ತಿದ್ದಂತೆ. ಪೂಜಾಗೆ ಬರುತ್ತಿದ್ದ 40 ಸಾವಿರ ಸಂಬಳದಲ್ಲಿ ದಿನಕ್ಕೆ 500 ರೂ. ಹಣ ಮಾತ್ರ ಖರ್ಚಿಗೆ ನೀಡುತ್ತಿದ್ದನಂತೆ. ಉಳಿದ ಸಂಬಳ ಭಾಮೈದುನಾ ಅನಿಲ್‌ಗೆ ನೀಡಬೇಕಿತ್ತು. ಪೂಜಾಗೆ ಮನೆಯಲ್ಲಿ ಊಟ ಮಾಡುವ ವಿಚಾರಕ್ಕೂ ಅವಮಾನ ಮಾಡುತ್ತಿದ್ದರಂತೆ. ಪೂಜಾ ಊಟ ಮಾಡುವ ವೇಳೆ ಜಾಸ್ತಿ ತಿನ್ನಬೇಡ ದಪ್ಪ ಆಗ್ತಿಯಾ ಎನ್ನುತ್ತಿದ್ದರಂತೆ. ಈ ಬಗ್ಗೆ ಪತಿ ಸುನೀಲ್ ಬಳಿ ಹೇಳಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಕುಟುಂಬಸ್ಥರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಸುನೀಲ್‌ನನ್ನು ವಶಕ್ಕೆ ಪಡೆದು ಗಂಗಮ್ಮ ಗುಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Actor Darshan: ದರ್ಶನ್‌ ಅತ್ಯಂತ ಸರಳ, ದೇವತಾ ಮನುಷ್ಯ; ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದ ಖ್ಯಾತ ನಟಿ!  

ದಕ್ಷಿಣ ಕೊರಿಯಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಬೋಟ್! ಕೆಲಸದ ಹೊರೆ ಕಾರಣ?

ದಕ್ಷಿಣ ಕೊರಿಯಾದ ನಾಗರಿಕ ಸೇವಕ ರೋಬೋಟ್ ಆತ್ಮಹತ್ಯೆ (Robot Suicide) ಮಾಡಿಕೊಂಡಿದೆ. ಮೆಟ್ಟಿಲಿನಿಂದ ಹಾರಿ ಅದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೆಟ್ಟಿಲುಗಳಿಂದ ಕೆಳಗೆ ಬಿದ್ದ ಬಳಿಕ ಅದು ನಿಷ್ಕ್ರಿಯವಾಗಿದೆ. ವಿಶ್ವದ ಮೊದಲ ರೋಬೋಟ್ ಆತ್ಮಹತ್ಯೆ (Suicide) ಬಳಿಕ ದಕ್ಷಿಣ ಕೊರಿಯಾ (South Korea) ನಗರದ ಜನತೆ ಶೋಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಮಿ ಸಿಟಿ ಕೌನ್ಸಿಲ್ ನ ( Gumi City Council ) ಸೈಬೋರ್ಗ್ ಎಂಬ ರೋಬೋಟ್ ಜೂನ್ 26ರಂದು ಆರೂವರೆ ಅಡಿ ಮೆಟ್ಟಿಲಿನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ. ಬಳಿಕ ಅದನ್ನು ಪರೀಕ್ಷಿಸಿದ ಪ್ರಧಾನ ಆಡಳಿತ ಅಧಿಕಾರಿ ರೋಬೋಟ್ ಸತ್ತಿದೆ ಎಂದು ಘೋಷಿಸಿದರು.

ರೋಬೋಟ್ ಒಂದು ಸ್ಥಳದಲ್ಲಿ ‘ಏನೋ ಇದ್ದಂತೆ’ ಎಂಬಂತೆ ತಿರುಗುತ್ತಿತ್ತು. ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ರೋಬೋಟ್ ನ ತುಂಡುಗಳನ್ನು ಸಂಗ್ರಹಿಸಲಾಗಿದೆ. ಕಂಪನಿಯು ಈ ಬಗ್ಗೆ ವಿಶ್ಲೇಷಿಸುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ರೋಬೋಟ್ ದೈನಂದಿನ ದಾಖಲೆಗಳ ವಿತರಣೆ, ನಗರ ಪ್ರಚಾರ ಮತ್ತು ಸ್ಥಳೀಯ ನಿವಾಸಿಗಳಿಗೆ ಮಾಹಿತಿಯನ್ನು ತಲುಪಿಸಲು ಸಹಾಯ ಮಾಡುತಿತ್ತು. ಇದು ಅಧಿಕೃತವಾಗಿ ಸಿಟಿ ಹಾಲ್‌ನ ಒಂದು ಭಾಗವಾಗಿತ್ತು. ನಮ್ಮಲ್ಲಿ ಒಬ್ಬರಾಗಿತ್ತು ಎಂದು ಗುಮಿ ಸಿಟಿ ಕೌನ್ಸಿಲ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೋಬೋಟ್ ಶ್ರದ್ಧೆಯಿಂದ ಸೇವೆ ಸಲ್ಲಿಸಿತ್ತು. ಈ ರೀತಿಯಲ್ಲಿ ಬಳಸಲಾದ ಮೊದಲ ರೋಬೋಟ್ ಇದಾಗಿದೆ ಮತ್ತು ಇದನ್ನು ಅಕ್ಟೋಬರ್ 2023 ರಲ್ಲಿ ನೇಮಿಸಲಾಗಿತ್ತು ಎನ್ನುತ್ತಾರೆ ಅಧಿಕಾರಿಗಳು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಸಾಕಷ್ಟು ಮಂದಿ ನೆಟ್ಟಿಗರು ಈಗ ರೋಬೋಟ್‌ಗೆ ನಿಭಾಯಿಸಲು ಕೆಲಸದ ಹೊರೆ ಹೆಚ್ಚು ಎಂದು ಹೇಳಿದ್ದಾರೆ.


ಕೆಲಸದ ಹೊರೆ ಜಾಸ್ತಿಯಾಗಿ ತುಂಬಾ ಹೊತ್ತು ತಿರುಗಿ ಮೆಟ್ಟಿಲಿನಿಂದ ಹಾರಿತು ಎಂದು ಒಬ್ಬರು ಹೇಳಿದ್ದರೆ ಇನ್ನೊಬ್ಬರು ಸ್ಕ್ರಾಪ್ ಮೆಟಲ್ ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಎಂದು ಹೇಳಿದ್ದಾರೆ. ಮತ್ತೊಬ್ಬರು ವಿರಾಮಗಳಿಲ್ಲ, ರಜೆಗಳಿಲ್ಲ, ಪ್ರಯೋಜನಗಳಿಲ್ಲ. ರೋಬೋಟ್‌ಗಳಿಗೆ ಒಕ್ಕೂಟದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ರೋಬೋಟಿಕ್ ಸಹಾಯಕವನ್ನು ಕ್ಯಾಲಿಫೋರ್ನಿಯಾ ಮೂಲದ ಬೇರ್ ರೋಬೋಟಿಕ್ಸ್ ಎಂಬ ಸ್ಟಾರ್ಟಪ್ ತಯಾರಿಸಿದೆ. ಅದು ಉದ್ಯೋಗಿ ಕಾರ್ಡ್ ಅನ್ನು ಹೊಂದಿತ್ತು. ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಕೆಲಸ ಮಾಡುತ್ತಿತ್ತು. ಇತರ ರೋಬೋಟ್‌ಗಳಿಗಿಂತ ಭಿನ್ನವಾಗಿ ಸಾಮಾನ್ಯವಾಗಿ ಒಂದು ಮಹಡಿಯನ್ನು ಮಾತ್ರ ಬಳಸುತ್ತಿತ್ತು. ಸದ್ಯಕ್ಕೆ ಹೊಸ ರೋಬೋಟ್ ಅನ್ನು ಅಳವಡಿಸಿಕೊಳ್ಳುವ ಯಾವುದೇ ಯೋಜನೆ ಇಲ್ಲ. ದಕ್ಷಿಣ ಕೊರಿಯಾವು ವಿವಿಧ ವೃತ್ತಿಗಳಲ್ಲಿ ರೋಬೋಟ್‌ಗಳನ್ನು ಬಳಸುವುದಕ್ಕಾಗಿ ವ್ಯಾಪಕವಾಗಿ ಹೆಸರುವಾಸಿಯಾಗಿದೆ.

ಇದನ್ನೂ ಓದಿ: PM Modi Russia Visit: ಜುಲೈ 8ರಿಂದ ಮೋದಿ ರಷ್ಯಾ ಪ್ರವಾಸ; ಉಕ್ರೇನ್‌ ಆಕ್ರಮಣದ ಬಳಿಕ ಮೊದಲ ಭೇಟಿ

ಈ ಹಿಂದೆ ವಾಷಿಂಗ್ಟನ್ ಡಿಸಿಯ ನೀರಿನ ಕಾರಂಜಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ಭದ್ರತಾ ರೋಬೋಟ್ ಸ್ಟೀವ್ ಎಂದು ಕರೆಯಲಾಗುತ್ತಿತ್ತು. ಆದರೆ ಅದು ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Robbery Case
ಕ್ರೈಂ5 mins ago

Robbery Case : ರಾಯಚೂರಿನಲ್ಲಿ ಸ್ವಾಮೀಜಿ ತಲೆಗೆ ಗನ್ ಇಟ್ಟು ದರೋಡೆ!

Jay Shah
ಕ್ರೀಡೆ11 mins ago

Jay Shah: ಕೊಹ್ಲಿಯನ್ನೇ ದಿಟ್ಟಿಸಿ ನೋಡುತ್ತಾ ನಿಂತ ಜಯ್​ ಶಾ; ವಿಡಿಯೊ ವೈರಲ್​

hd kumaraswamy
ಪ್ರಮುಖ ಸುದ್ದಿ13 mins ago

HD Kumaraswamy: ಸಿಎಂ ಕುರ್ಚಿ ಮೇಲೆ ಟವಲ್‌ ಹಾಕಿದವರಿಂದಲೇ ಮುಡಾ ಹಗರಣ ಬಯಲು: ಎಚ್‌ಡಿಕೆ

Bigg Boss Telugu 8 Astrologer Venu Swamy A Contestant
ಟಾಲಿವುಡ್26 mins ago

Bigg Boss Telugu 8: ಬಿಗ್‌ ಬಾಸ್‌ ಮನೆಗೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಎಂಟ್ರಿ?

Gold Rate Today
ಚಿನ್ನದ ದರ41 mins ago

Gold Rate Today: ಇಂದು ಏರಿಕೆಯಾಗಿಲ್ಲ ಚಿನ್ನದ ದರ; ಬೆಲೆ ಎಷ್ಟಿದೆ ನೋಡಿ

Physical Abuse
ಬೆಂಗಳೂರು47 mins ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Team India
ಕ್ರಿಕೆಟ್54 mins ago

Team India: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಡುವುದು ನಮ್ಮ ಸಂಸ್ಕೃತಿಯಲ್ಲ ಎಂದು ತೋರಿಸಿಕೊಟ್ಟ ಟೀಮ್​ ಕ್ರಿಕೆಟಿಗರು

ಉದ್ಯೋಗ1 hour ago

Job Alert: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 2,700 ಅಪ್ರೆಂಟಿಸ್ ಶಿಪ್ ಹುದ್ದೆ; ಆಯ್ಕೆಯಾಗಲು ಏನು ಮಾಡಬೇಕು? ವಿಸ್ತೃತ ಮಾಹಿತಿ

Actor Darshan SIM Secret Revealed investigation start
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್ ಬಳಸುತ್ತಿದ್ದ ಸಿಮ್ ಸೀಕ್ರೆಟ್‌ ರಿವೀಲ್; ಆಪ್ತರಿಗೆ ತಟ್ಟಿದೆ ವಿಚಾರಣೆ ಬಿಸಿ!

Brain-Eating Mmoeba
ಆರೋಗ್ಯ1 hour ago

Brain-Eating Amoeba: ಮೆದುಳು ತಿನ್ನುವ ಅಮೀಬಾಕ್ಕೆ ಮತ್ತೊಂದು ಬಲಿ; 2 ತಿಂಗಳ ಅಂತರದಲ್ಲಿ 3ನೇ ಪ್ರಕರಣ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse
ಬೆಂಗಳೂರು47 mins ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು1 hour ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ6 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ18 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ19 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ20 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ22 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ23 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ24 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ1 day ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

ಟ್ರೆಂಡಿಂಗ್‌