Rain News | ತಿ.ನರಸೀಪುರದಲ್ಲಿ ಧಾರಾಕಾರ ಮಳೆ: ಮನೆ ಕುಸಿತ - Vistara News

ಮೈಸೂರು

Rain News | ತಿ.ನರಸೀಪುರದಲ್ಲಿ ಧಾರಾಕಾರ ಮಳೆ: ಮನೆ ಕುಸಿತ

ಮೈಸೂರಿನಲ್ಲಿ ಧಾರಾಕಾರ ಮಳೆಯಿಂದಾಗಿ (Rain News) ರಾಚಮ್ಮ ಎಂಬವರಿಗೆ ಸೇರಿದ ಮನೆ ಕುಸಿತಗೊಂಡಿದೆ. ಬದಲಿ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

VISTARANEWS.COM


on

Rain News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು : ತಿ.ನರಸೀಪುರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ (Rain News ) ಸೋಮವಾರ (ಆ.29) ಮನೆ ಕುಸಿತಗೊಂಡಿದೆ. ತಾಲೂಕಿನ ಕಿರಗಸೂರು ಗ್ರಾಮದಲ್ಲಿ ನಿಂಗೇಗೌಡ-ರಾಚಮ್ಮ ಎಂಬವರ ಮನೆ ಕುಸಿದಿದೆ.

ಮನೆ ಒಳಗಡೆ ಇರುವ ಸಾಮಾಗ್ರಿಗಳೆಲ್ಲ ಸಂಪೂರ್ಣ ನಾಶಗೊಂಡಿವೆ. ಮನೆ ಕುಸಿದು ಬೀಳುವ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದೀಗ ವಾಸ ಮಾಡಲು ನೆಲೆ ಇಲ್ಲದ ಕಾರಣ, ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ಬದಲಿ ವ್ಯವಸ್ಥೆ ಅಥವಾ ಮನೆ ನಿರ್ಮಾಣ ಮಾಡಿಕೊಡುವಂತೆ ಸಂತ್ರಸ್ಥೆ ರಾಚಮ್ಮ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Rain News | ಬೆಂಗಳೂರು-ಮೈಸೂರು ದಶಪಥ ಅಸ್ತವ್ಯಸ್ತ: ತೋಟಕ್ಕೆ ನುಗ್ಗಿದ ನೀರು, ಹೋಟೆಲ್‌ ನಾಶ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮೈಸೂರು

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

ರಾಯಚೂರು, ಕೊಪ್ಪಳ, ಬಳ್ಳಾರಿ, ಕಲಬುರಗಿ ಭಾಗದಲ್ಲಿ ಕಲುಷಿತ ನೀರು ಸೇವನೆ (Contaminated Water) ಪ್ರಕರಣಗಳ ನಂತರ ಇದೀಗ ಮೈಸೂರಿನಲ್ಲಿ ಕಲುಷಿತ ನೀರು ಸೇವನೆ ಮಾಡಿ ಯುವಕನೊಬ್ಬ ಮೃತಪಟ್ಟಿದ್ದಾನೆ.

VISTARANEWS.COM


on

By

Contaminated Water
Koo

ಮೈಸೂರು: ಮೈಸೂರಿನ ಡಿ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು (Contaminated Water) ಹಲವರು ಅಸ್ವಸ್ಥಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಚಿಕಿತ್ಸೆ ಫಲಕಾರಿಯಾಗದೆ ಕನಕರಾಜ್ (20) ಎಂಬಾತ ಮೃತಪಟ್ಟಿದ್ದಾನೆ. ಚಾಮುಂಡೇಶ್ವರಿ ಕ್ಷೇತ್ರದ ಡಿ.ಸಾಲುಂಡಿ ಗ್ರಾಮದ ಕನಕರಾಜ್ ನಿನ್ನೆ ಸೋಮವಾರ ತೀವ್ರ ವಾಂತಿ- ಭೇದಿಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಕನಕರಾಜ್ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ (ಮೇ 21) ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಕಾಮಾಕ್ಷಿ ಆಸ್ಪತ್ರೆಗೆ ಆಗಮಿಸಿ, ಮೃತ ಕನಕರಾಜ್ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಪ್ರಕರಣದ ಕುರಿತು ವೈದ್ಯರ ಬಳಿ ಮಾಹಿತಿ ಕಲೆ ಹಾಕಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ಕಲುಷಿತ ನೀರು ಸೇವನೆಯಿಂದ 48 ಜನರಿಗೆ ವಾಂತಿ- ಭೇದಿ ಶುರುವಾಗಿದೆ. ಅಸ್ವಸ್ಥಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದರು.

ನೀರು ಕಲುಷಿತಗೊಂಡ ಕಾರಣ ಈ ಘಟನೆ ನಡೆದಿದೆ. ಈಗಾಗಲೇ ಜಿಲ್ಲಾಧಿಕಾರಿಗೆ ಸೂಚನೆ ಕೊಟ್ಟಿದ್ದೇನೆ. 5 ಜನ ವೈದ್ಯರು ಸಾಲುಂಡಿ ಗ್ರಾಮದಲ್ಲಿ ಕ್ಯಾಂಪ್ ಮಾಡಿದ್ದಾರೆ. 75 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಮತ್ತೊಬ್ಬರು‌ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Dog Attack: ಆಟವಾಡುತ್ತಿದ್ದವಳ ಕಿತ್ತು ತಿಂದ ಬೀದಿ ನಾಯಿ; ರಕ್ತಸ್ರಾವವಾಗಿ 4 ವರ್ಷದ ಬಾಲಕಿ ಸಾವು

ನಗರಾಭಿವೃದ್ಧಿ ಪಾಧಿಕಾರದಲ್ಲಿ ಯುಜಿಡಿ ಮಾಡುವಾಗ ಟ್ಯಾಂಕ್ ಮಾಡಿಲ್ಲ. ಯುವಕನ ಸಾವಿಗೆ ಮುಡಾ ಅಧಿಕಾರಿಗಳೇ ಕಾರಣ ಎಂದು ಶಾಸಕ ಜಿ.ಟಿ.ದೇವೇಗೌಡ ಗಂಭೀರ ಆರೋಪ ಮಾಡಿದರು. ಆಸ್ಪತ್ರೆ ಎಲ್ಲಾ ಚಿಕಿತ್ಸಾ ವೆಚ್ಚವನ್ನು ನಾನೇ ಭರಿಸುತ್ತೇನೆ. ಮೃತ ಕುಟುಂಬಕ್ಕೆ ಸಿಎಂ ಪರಿಹಾರ ನೀಡಬೇಕು. ಇಲ್ಲಿನ ಜನರು ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಕುಟುಂಬಕ್ಕೆ ಪರಿಹಾರ ಕೊಡುವಂತೆ ಸಿಎಂಗೆ ಮನವಿ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ ಈಗಾಲಾದರೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಯುಜಿಡಿ ಕೆಲಸಗಳನ್ನು ಶೀಘ್ರವಾಗಿ ಕೆಲಸ ಮಾಡುವಂತೆ ಸೂಚನೆ ನೀಡಬೇಕು. ಯುಜಿಡಿ ಕೆಲಸಕ್ಕೆ ಸರ್ಕಾರ ಹಣ ಕೊಡಬೇಕೆಂದು ಶಾಸಕ ಜಿ.ಟಿ ದೇವೇಗೌಡ ಮಾತಾನಾಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಗರಿಷ್ಠ ತಾಪಮಾನ ಇಳಿಕೆ; ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

ಕರಾವಳಿ, ಮಲೆನಾಡು, ಉತ್ತರ ಒಳನಾಡಿನಲ್ಲಿ ಭಾರಿ ಮಳೆಯಾಗುವ (Rain News) ನಿರೀಕ್ಷೆ ಇದ್ದು, ಯೆಲ್ಲೋ ಹಾಗೂ ಆರೆಂಜ್‌ ಆಲರ್ಟ್‌ ನೀಡಲಾಗಿದೆ. ಗಾಳಿ ವೇಗವು ಪ್ರತಿ ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ಚದುರಿದಂತೆ ಮಧ್ಯಮ ಮಳೆಯಾಗಲಿದ್ದು, ರಾಜ್ಯಾದ್ಯಂತ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯಾಗುವ (Rain News) ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚು ಮತ್ತು 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (karnataka Weather Forecast) ಎಚ್ಚರಿಕೆಯನ್ನು ನೀಡಿದೆ.

ದಕ್ಷಿಣ ಒಳನಾಡಿನ ತುಮಕೂರು, ಮೈಸೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಭಾಗಗಳಲ್ಲಿ ವ್ಯಾಪಕವಾಗಿ ಮಧ್ಯಮ ಮಳೆಯಾಗಲಿದೆ. ಉತ್ತರ ಒಳನಾಡಿನ ಹಾವೇರಿ, ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ವಿಜಯಪುರ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಧಾರವಾಡ ಜಿಲ್ಲೆಯಲ್ಲಿ ಹಗುರವಾದ ಮಳೆಯಾಗಲಿದೆ.

ಮಲೆನಾಡಿನ ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಅನುಕ್ರಮವಾಗಿ ಸುಮಾರು 29 ಮತ್ತು 22 ಡಿ.ಸೆ ಇರಲಿದೆ.

ಇದನ್ನೂ ಓದಿ: Food Department : ಜೀವಂತ ಇದ್ದವಳನ್ನು ಸತ್ತಿದ್ದಾಗಿ ಘೋಷಿಸಿದ ಆಹಾರ ಇಲಾಖೆ; ರೇಷನ್‌ ಕಾರ್ಡ್‌ನಿಂದಲೇ ಹೆಸರು ಡಿಲೀಟ್‌

ಬಿರುಗಾಳಿ ಎಚ್ಚರಿಕೆ

ಗುಡುಗು ಸಹಿತ ಭಾರೀ ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಗಾಳಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಉತ್ತರ ಕನ್ನಡ, ಧಾರವಾಡ, ಗದಗ ಮತ್ತು ಹಾವೇರಿ, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Mysore News: ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೊಳಿಸಿ ಮಾದರಿಯಾದ ಪಿಎಸ್‌ಐ

Mysore News: ಮಂಡ್ಯದ ಹೊಳಲು ವೃತ್ತದ ಬಳಿ, ಹೊಂಡ-ಗುಂಡಿಗಳಿಂದ ಹದಗೆಟ್ಟು ಅಧ್ವಾನವಾದ ರಸ್ತೆಯಿಂದ ವಾಹನ ಸವಾರರು ದಿನನಿತ್ಯ ಪರದಾಡುವುದನ್ನು ಅರಿತು ಸಾರ್ವಜನಿಕರ ಹಿತದೃಷ್ಟಿಯಿಂದ ತಾವೇ ಖುದ್ದಾಗಿ ಹಣ ವ್ಯಯಿಸಿ, ಹಾಳಾದ ರಸ್ತೆಯ ದುರಸ್ತಿಗೆ ಕ್ರಮ ಕೈಗೊಳ್ಳುವ ಮೂಲಕ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ವರ್ಷಾ ಬಿ.ವಿ. ಮಾದರಿಯಾಗಿದ್ದಾರೆ.

VISTARANEWS.COM


on

Model PSI Varsha repaired the road at own expense
Koo

ಮೈಸೂರು: ಹೊಂಡ ಮತ್ತು ಗುಂಡಿಗಳಿಂದ ಹದಗೆಟ್ಟು ಅಧ್ವಾನವಾದ ರಸ್ತೆಯಿಂದ ವಾಹನ ಸವಾರರು ದಿನನಿತ್ಯ ಪರದಾಡುವುದನ್ನು ಅರಿತು, ಸಾರ್ವಜನಿಕರ ಹಿತದೃಷ್ಟಿಯಿಂದ ತಾವೇ ಖುದ್ದಾಗಿ ಹಣ ವ್ಯಯಿಸಿ, ಹಾಳಾದ ರಸ್ತೆಯ ದುರಸ್ತಿಗೆ (Mysore News) ಕ್ರಮ ಕೈಗೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ವರ್ಷಾ ಬಿ.ವಿ.

ಹೌದು, ಮಂಡ್ಯದ ಹೊಳಲು ವೃತ್ತದ ಬಳಿ ಪ್ರತಿನಿತ್ಯ ವಾಹನ ಸವಾರರು ತೊಂದರೆ ಅನುಭವಿಸುವುದನ್ನು ಕಂಡ ಪಿಎಸ್‌ಐ ವರ್ಷಾ ಅವರು ಈ ಸಮಸ್ಯೆಗೆ ತಾವೇ ಏನಾದರೂ ಸಹಾಯ ಮಾಡಲು ನಿರ್ಧರಿಸಿ, ಸ್ವಂತ ಹಣದಿಂದ ಹಾಗೂ ಸ್ವತಃ ಮೇಲ್ವಿಚಾರಣೆ ಮಾಡುವ ಮೂಲಕ ರಸ್ತೆ ದುರಸ್ತಿ ಕೈಗೊಂಡಿರುವುದು ಜನರ ಬಗ್ಗೆ ಇರುವ ಕಾಳಜಿಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Lok Sabha Election: 5ನೇ ಹಂತದಲ್ಲಿ ಕೇವಲ ಶೇ.56ರಷ್ಟು ಮತದಾನ; ಯಾವ ರಾಜ್ಯದಲ್ಲಿ ಹೆಚ್ಚು?

ರಸ್ತೆ ದುರಸ್ತಿಗಾಗಿ ಟಿಪ್ಪರ್ ಅನ್ನು ಬಾಡಿಗೆಗೆ ಪಡೆದು ಅದರಲ್ಲಿ ಮಣ್ಣು ಸಾಗಿಸಿ ಒಂದು ದಿನ ಕಾರ್ಮಿಕರನ್ನು ಕರೆಸಿ ಗುಂಡಿಗಳನ್ನು ಮಣ್ಣಿನಿಂದ ತುಂಬಿಸಲು ವ್ಯವಸ್ಥೆ ಮಾಡಿದ್ದಾರೆ, ಇದರಿಂದ ಈ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರು ಇಂದು ಭಯವಿಲ್ಲದೆ ಸಂಚರಿಸುವಂತಾಗಿದೆ. ರಸ್ತೆಯ ಹೊಂಡ-ಗುಂಡಿಗಳನ್ನು ಮುಚ್ಚಲು ಸಾಕಷ್ಟು ವೆಚ್ಚ ತಗುಲಿತ್ತು. ಆದರೆ ಇದನ್ನು ಅವರ ಸ್ವಂತ ಹಣದಲ್ಲಿ ಭರಿಸಿದ್ದಾರೆ. ಈ ಕಾರ್ಯಕ್ಕೆ ಸುತ್ತಮುತ್ತಲಿನ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪಿಎಸ್‌ಐ ವರ್ಷಾ ಅವರು, ರಸ್ತೆಯಲ್ಲಿ ಹೊಂಡ-ಗುಂಡಿಗಳಿಂದ ಪ್ರತಿದಿನ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ಇದು ನನ್ನ ಕರ್ತವ್ಯ ಎಂದು ಭಾವಿಸಿ ಈ ಕಾರ್ಯ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ನನ್ನ ಕೆಲಸವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಆಸುಪಾಸಿನಲ್ಲಿ ಇಂತಹ ತಗ್ಗು-ಗುಂಡಿಗಳು ಹೆಚ್ಚಾಗಿದ್ದು, ನನ್ನಿಂದ ಸಾಧ್ಯವಾಗುವ ಮಟ್ಟಿಗೆ ಈ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಪಿಎಸ್‌ಐ ವರ್ಷಾ ಬಿ.ವಿ. ಹೇಳಿದ್ದಾರೆ.

ಈ ರಸ್ತೆಯಲ್ಲಿ ಹೊಂಡ ಬಿದ್ದು ಹಳ್ಳದಂತಾಗಿತ್ತು. ಕಳೆದ ವಾರ ಸುರಿದ ಭಾರೀ ಮಳೆಗೆ ಅದು ಸಣ್ಣ ಕೊಳದಂತೆ ಕಾಣುತ್ತಿತ್ತು. ರಾತ್ರಿ ವೇಳೆ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸಲು ಪರದಾಡುವಂತಾಗಿತ್ತು. ಪೊಲೀಸ್ ಅಧಿಕಾರಿ ವರ್ಷಾ ಅವರ ಈ ಕಾರ್ಯದಿಂದ ಇಂದು ಬಹಳ ಸಹಾಯವಾಗಿದೆ ಎಂದು ಸ್ಥಳೀಯರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಪಿಎಸ್‌ಐ ವರ್ಷಾ ಬಿ.ವಿ. ಅವರ ಈ ಸಮಾಜ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ: Public Exam: 5,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌; ರಾಜ್ಯ ಸರ್ಕಾರದ ಮಹತ್ವ ನಿರ್ಧಾರ

Continue Reading

ಮಳೆ

Karnataka Weather : ಯಾದಗಿರಿಯಲ್ಲಿ ಸಿಡಿಲಿಗೆ ಕುರಿಗಾಹಿ ಸಾವು ; ಬಿರುಗಾಳಿ ಸಹಿತ ಮಳೆಗೆ ಸಿಲುಕಿದ ಪ್ರವಾಸಿಗರು

Karnataka Weather Forecast : ಮಲೆನಾಡು ಹಾಗೂ ಒಳನಾಡಿನಲ್ಲಿ ಮಳೆಯು (rain News) ಅಬ್ಬರಿಸುತ್ತಿದೆ. ಯಾದಗಿರಿಯಲ್ಲಿ ಸಿಡಿಲಿಗೆ ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟರೆ, ಗೋಪಾಲಸ್ವಾಮಿ ಬೆಟ್ಟದಲ್ಲಿ ಬಿರುಗಾಳಿ ಸಹಿತ ಮಳೆಗೆ ಸಿಲುಕಿದ ಪ್ರವಾಸಿಗರು ಪರದಾಡಿದರು.

VISTARANEWS.COM


on

By

Karnataka weather Forecast
Koo

ಯಾದಗಿರಿ/ಚಿಕ್ಕಮಗಳೂರು: ಮಳೆಯ ಆರ್ಭಟ (Karnataka Weather Forecast) ಮುಂದುವರಿದಿದ್ದು, ಸಾವು-ನೋವಿಗೆ ಕಾರಣವಾಗುತ್ತಿದೆ. ಯಾದಗಿರಿಯ ಗುರುಮಠಕಲ್ ತಾಲೂಕಿನ ಭಾಗದಲ್ಲಿ ಸೋಮವಾರ ಗುಡುಗು, ಸಿಡಿಲಿನ ಜತೆಗೆ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಸಿಡಿಲು ಬಡಿದು ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುರುಮಠಕಲ್ ತಾಲೂಕಿನ ರಾಂಪುರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ.

ರಾಂಪುರು ಗ್ರಾಮದ ಕುರಿಗಾಹಿ ಚಂದಪ್ಪ (55) ಮೃತ ದುರ್ದೈವಿ. ಕುರಿಗಾಹಿ ಚಂದಪ್ಪ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡು ಕುರಿ ಮೇಯಿಸಲು ತೆರಳಿದ್ದರು. ಈ ವೇಳೆ ಮೊಬೈಲ್ ಇಟ್ಟುಕೊಂಡ ಭಾಗಕ್ಕೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗೋಪಾಲಸ್ವಾಮಿ ಬೆಟ್ಟದಲ್ಲಿ ಮಳೆಗೆ ಸಿಲುಕಿ ಪ್ರವಾಸಿಗರ ಪರದಾಟ

ಗೋಪಾಲಸ್ವಾಮಿ ಬೆಟ್ಟದಲ್ಲಿ ಜೋರು ಮಳೆಯಾಗುತ್ತಿದ್ದು ಪ್ರವಾಸಿಗರು ಪರದಾಡಿದರು. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಚೆಕ್ ಪೋಸ್ಟ್ ಸಮೀಪ ನೀರು ನದಿಯಂತೆ ಹರಿಯುತ್ತಿದೆ. ಚೆಕ್ ಪೋಸ್ಟ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವೇಳೆ ನೂರಾರು ಮಂದಿ ಮಳೆಗೆ ಸಿಲುಕಿದರು. 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ ಬೆಟ್ಟದ ಮೇಲಿಂದ ನದಿಯಂತೆ ನೀರು ಹರಿದು ಬಂದಿತ್ತು. ಮಳೆಗೆ ಸಿಲುಕಿ ಪ್ರವಾಸಿಗರ ಪರದಾಟ ಒಂದು ಕಡೆಯಾದರೆ, ಮಳಿಗೆಗಳಿಗೂ ನೀರು ನುಗ್ಗಿತ್ತು.

ಚಾಮರಾಜನಗರದಲ್ಲಿ ಮಳೆಯ ಅಬ್ಬರ

ಚಾಮರಾಜನಗರದಲ್ಲಿ ಎರಡು ಗಂಟೆಗೂ ಹೆಚ್ಚು ಸಮಯ ಮಳೆ ಸುರಿದಿದೆ. ಜಿಲ್ಲೆಯ ಕೆಲ ಕಡೆ ತುಂತುರು ಮಳೆಯಾದರೆ ಕೆಲವು ಕಡೆ ಭರ್ಜರಿ ಮಳೆಯಾಗಿದೆ. ರಸ್ತೆ ಬದಿಗಳಲ್ಲಿ ನದಿಯಂತೆ ಮಳೆ ನೀರು ಹರಿಯುತ್ತಿದೆ. ಇತ್ತ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟ, ಹಂಗಳ ಗ್ರಾಮದ ಸುತ್ತ ಮುತ್ತ ಭರ್ಜರಿ ಮಳೆಯಾಗಿದೆ.

ಶಿವಮೊಗ್ಗದಲ್ಲಿ ಧಾರಾಕಾರ ಮಳೆ

ಮಲೆನಾಡು ಶಿವಮೊಗ್ಗದಲ್ಲೂ ಧಾರಾಕಾರವಾಗಿ ಮಳೆ ಸುರಿದಿದೆ. ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಸೊರಬ, ಭದ್ರಾವತಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಒಂದು ಗಂಟೆಯಿಂದ ಬಿಡುವು ನೀಡದೆ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ.

ಇದನ್ನೂ ಓದಿ: Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಗುಡುಗು ಸಹಿತ ಮಳೆ

ದಕ್ಷಿಣ ಕನ್ನಡ, ಉಡುಪಿಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿ (40-50 kmph) ಸಹಿತ ಭಾರಿ ಮಳೆಯಾಗಲಿದೆ.

ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 ಕಿ.ಮೀ) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಭಾಗದಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿ (40-50 ಕಿ.ಮೀ.) ಮಳೆ ಸಂಭವವಿದೆ.

ಮುಂದಿನ 5 ದಿನಗಳವರೆಗೆ ಕರ್ನಾಟಕದ ಒಳನಾಡಿನಲ್ಲಿ ಗರಿಷ್ಠ ತಾಪಮಾನವು 2-4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ. ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವೊಮ್ಮೆ ಮೇಲ್ಮೈ ಗಾಳಿಯು ಬಲವಾಗಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 21 ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Viral Video
ವೈರಲ್ ನ್ಯೂಸ್4 mins ago

Viral Video: ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಈತ ಏಕಾಂಗಿಯಾಗಿ ಹೇಗೆ ನಂದಿಸಿದ ನೋಡಿ!

Contaminated Water
ಮೈಸೂರು13 mins ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Viral video
ವೈರಲ್ ನ್ಯೂಸ್19 mins ago

Chudidar Gang: ಚಡ್ಡಿ ಗ್ಯಾಂಗ್ ಆಯ್ತು, ಈಗ ದರೋಡೆಕೋರರ ಚೂಡಿದಾರ್ ಗ್ಯಾಂಗ್ ಆ್ಯಕ್ಟಿವ್ ಆಗಿದೆ; ಹುಷಾರ್! ವಿಡಿಯೊ ನೋಡಿ

Actor Upendra Ajaneesh Visited Hangary To Record Music
ಸ್ಯಾಂಡಲ್ ವುಡ್41 mins ago

Actor Upendra: ಹಂಗೆರಿಯಲ್ಲಿ ಉಪೇಂದ್ರ, ಅಜನೀಶ್: ʻUIʼ ಸಿನಿಮಾದ ಬಿಗ್‌ ಅಪ್‌ಡೇಟ್‌!

RCB
ಕ್ರೀಡೆ45 mins ago

RCB: ಅಮೆರಿಕದ ಘಟಿಕೋತ್ಸವದಲ್ಲೂ ಆರ್​ಸಿಬಿಯದ್ದೇ ಹವಾ: ವಿಡಿಯೊ ವೈರಲ್​

Dog Attack in raichur
ರಾಯಚೂರು49 mins ago

Dog Attack: ಆಟವಾಡುತ್ತಿದ್ದವಳ ಕಿತ್ತು ತಿಂದ ಬೀದಿ ನಾಯಿ; ರಕ್ತಸ್ರಾವವಾಗಿ 4 ವರ್ಷದ ಬಾಲಕಿ ಸಾವು

jain monk samadhi sena chikkodi sallekhana
ಚಿಕ್ಕೋಡಿ56 mins ago

Sallekhana: ಸಲ್ಲೇಖನ ವ್ರತ ಸ್ವೀಕರಿಸಿ ಸಮಾಧಿಸೇನ ಮುನಿ ಜಿನೈಕ್ಯ

Viral Video
ವೈರಲ್ ನ್ಯೂಸ್1 hour ago

Viral Video: ಅಬ್ಬಾ…ಇವರೆಂಥಾ ರಾಕ್ಷಸರು! ಸೊಸೆ ಮೇಲೆ ಅತ್ತೆ, ನಾದಿನಿಯಿಂದ ಅಟ್ಯಾಕ್‌; ವಿಡಿಯೋ ವೈರಲ್‌

Prashant Kishor
Lok Sabha Election 20241 hour ago

Prashant Kishor: ಈ ಬಾರಿ ಮೋದಿಗೆ ಹಿನ್ನಡೆ ಆಗುತ್ತಾ? ಪ್ರಶಾಂತ್ ಕಿಶೋರ್ ಲೇಟೆಸ್ಟ್ ಲೆಕ್ಕಾಚಾರ ಹೀಗಿದೆ

Cannes 2024 Sonam Kapoor dubs this outfit the best at Cannes this year
ಬಾಲಿವುಡ್1 hour ago

Cannes 2024: ಇವರ ಫ್ಯಾಷನ್‌ ಮುಂದೆ ಐಶ್ವರ್ಯಾ ರೈ, ಕಿಯಾರಾನೂ ಇಲ್ಲ! ಸೋನಮ್ ಹೊಗಳಿದ್ದು ಯಾರನ್ನ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ22 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌