NEET UG 2022 | ದೇಶಕ್ಕೇ ಮೊದಲ ರ‍್ಯಾಂಕ್‌ ಪಡೆದ ತನಿಷ್ಕಾ ಎಷ್ಟು ಹೊತ್ತು ಓದುತ್ತಿದ್ದರು ಗೊತ್ತೇ? - Vistara News

ಶಿಕ್ಷಣ

NEET UG 2022 | ದೇಶಕ್ಕೇ ಮೊದಲ ರ‍್ಯಾಂಕ್‌ ಪಡೆದ ತನಿಷ್ಕಾ ಎಷ್ಟು ಹೊತ್ತು ಓದುತ್ತಿದ್ದರು ಗೊತ್ತೇ?

ನೀಟ್‌ ಪರೀಕ್ಷೆಯ ಫಲಿತಾಂಶ (NEET UG 2022) ಬುಧವಾರ ಪ್ರಕಟಗೊಂಡಿದೆ. ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್‌ ಪಡೆದ ತನಿಷ್ಕಾ ತಮ್ಮ ಯಶಸ್ಸಿನ ಕುರಿತು ಮಾಹಿತಿ ನೀಡಿದ್ದಾರೆ. ಜತೆಗೆ ಮುಂದೆ ನೀಟ್‌ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಟಿಪ್ಸ್‌ ಕೂಡ ನೀಡಿದ್ದಾರೆ.

VISTARANEWS.COM


on

NEET UG 2022
ಕುಟುಂಬದ ಸದಸ್ಯರೊಂದಿಗೆ ಮೊದಲ ರ‍್ಯಾಂಕ್‌ ಪಡೆದ ತನಿಷ್ಕಾ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

“ನನಗೆ ಯಾವುದಾದರೂ ವಿಷಯ ಅರ್ಥ ಆಗಲಿಲ್ಲ ಎಂದರೆ ಕೇಳಲು ಹಿಂಜರಿಯುತ್ತಿರಲಿಲ್ಲ. ಆ ವಿಷಯ ಮನದಟ್ಟಾಗುವವರೆಗೂ ಪ್ರಶ್ನೆ ಕೇಳಿ ನನ್ನೆಲ್ಲಾ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತಿದ್ದೆʼʼ– ಹೀಗೆ ತನ್ನ ಯಶಸ್ಸಿನ ಗುಟ್ಟು ತೆರೆದಿಟ್ಟವರು ಈ ಬಾರಿಯ ನೀಟ್‌ ಪರೀಕ್ಷೆಯಲ್ಲಿ (NEET UG 2022) ಮೊದಲ ರ‍್ಯಾಂಕ್‌ ಪಡೆದ ರಾಜಸ್ಥಾನದ ತನಿಷ್ಕಾ.

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ತನಿಷ್ಕಾ ಅಖಿಲ ಭಾರತ ಮಟ್ಟದಲ್ಲಿ (AIR) ಮೊದಲ ಸ್ಥಾನ ಪಡೆದಿದ್ದಾರೆ.
ಹರಿಯಾಣಾ ಮೂಲದ ತನಿಷ್ಕಾ ರಾಜಸ್ಥಾನದ ಕೋಟಾಕ್ಕೆ ಆಗಮಿಸಿ,ಅಲ್ಲಿಯೇ ಕಳೆದ ಎರಡು ವರ್ಷಗಳಿಂದ ನೀಟ್‌ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದರು. ಒಟ್ಟಾರೆ 720 ಅಂಕಗಳಲ್ಲಿ ತನಿಷ್ಕಾ 715 ಅಂಕ ಪಡೆದು ದೇಶಕ್ಕೇ ಮೊದಲ ಸ್ಥಾನ ಪಡೆದಿದ್ದಾರೆ.

2020ರಲ್ಲಿ ನಡೆದ ನೀಟ್‌ ಪರೀಕ್ಷೆಯಲ್ಲಿ ಅಲೆನ್‌ ಅಫ್ತಾಬ್‌ ಎಂಬ ವಿದ್ಯಾರ್ಥಿ 720ಕ್ಕೆ 720 ಅಂಕ ಪಡೆದಿದ್ದರು. ತನಿಷ್ಕಾಗೆ ಐದು ಅಂಕ ಕಡಿಮೆ ಬಂದಿದೆ. ಈ ಬಾರಿ ಒಟ್ಟು ನಾಲ್ವರು 715 ಅಂಕ ಪಡೆದಿದ್ದರೂ, ಎನ್‌ಟಿಎ ನಿಯಮದ ಪ್ರಕಾರ ತನಿಷ್ಕಾ ಅವರಿಗೆ ಟಾಪ್‌ ಸ್ಥಾನ ನೀಡಲಾಗಿದೆ.

ನೀಟ್‌ಗೆ ತನಿಷ್ಕಾ ನೀಡಿದ 5 ಟಿಪ್ಸ್‌

NEET UG 2022
  1. ಕೋಚಿಂಗ್‌ ಸೆಂಟರ್‌ಗೆ ಹೋದರೂ ನೀವೇ ನಿತ್ಯ 6 ರಿಂದ 7 ಗಂಟೆ ಸ್ವಂತವಾಗಿ ಓದಿ.
  2. ನೀವು ಓದಿದ್ದನ್ನು ಆಗಾಗ ಪುನರ್‌ ಮನನ ಮಾಡುತ್ತಿರಿ.
  3. ಪ್ರತಿಯೊಂದು ವಿಷಯಕ್ಕೂ ಸಂಬಂಧಪಟ್ಟಂತೆ ಸಣ್ಣ ನೋಟ್ಸ್‌ ಬರೆದಿಟ್ಟುಕೊಂಡು ಬಿಡುವಿದ್ದಾಗ ಅದರ ಮೇಲೆ ಕಣ್ಣು ಹಾಯಿಸುತ್ತಿರಿ.
  4. ನಿಯಮಿತವಾಗಿ ಅಣಕು ಪರೀಕ್ಷೆ (ಮಾಕ್‌ ಟೆಸ್ಟ್‌) ಬರೆದು, ನಿಮ್ಮ ಸಾಮರ್ಥ್ಯ ಪರೀಕ್ಷಿಸಿಕೊಳ್ಳಿ. ಈ ಪರೀಕ್ಷೆಗಳಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಮುಂದೆ ಹೋಗಿ.
  5. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಗೊಂದಲ ಉಂಟಾದರೂ ಅದನ್ನು ಪರಿಹರಿಸಿಕೊಳ್ಳಲು ಹಿಂಜರಿಯಬೇಡಿ. ಪ್ರಶ್ನೆಗಳನ್ನು ಕೇಳಲು ಹಿಂಜರಿಕೆ ಬೇಡ.

“ನೀವು ಬೇರೆಯವರಿಗೆ ನೆರವಾಗುತ್ತಲೇ ನೀವು ಸಾಧನೆ ಮಾಡಬುದಾದದ ಕ್ಷೇತ್ರವೆಂದರೆ ವೈದ್ಯಕೀಯ ಕ್ಷೇತ್ರ. ಹೀಗಾಗಿ ನಾನು ವೈದ್ಯಳಾಗಳು ಬಯಸುತ್ತಿದ್ದೇನೆʼʼ ಎಂದಿರುವ ತನಿಷ್ಕಾ, “ನಾನು ತರಬೇತಿ ಪಡೆಯುತ್ತಿದ್ದ ಅಲೆನ್‌ ಇನ್‌ಸ್ಟಿಟ್ಯೂಟ್‌ನಲ್ಲಿ ನನ್ನ ಗೊಂದಲ, ಪ್ರಶ್ನೆಗಳಿಗೆ ಉತ್ತರ ದೊರೆಯುತ್ತಿತ್ತು. ವಾರದಲ್ಲಿ, ತಿಂಗಳಿನಲ್ಲಿ ನಿಯಮಿತವಾಗಿ ಅಣಕು ಪರೀಕ್ಷೆ (ಮಾಕ್‌ ಟೆಸ್ಟ್‌) ನಡೆಸಿ, ನಾವು ಎಷ್ಟು ಓದಿದ್ದೇವೆ, ಇನ್ನೆಷ್ಟು ಸಾಧನೆ ಮಾಡಬೇಕಿದೆ ಎಂಬುದನ್ನು ನಮಗೆ ಅರಿವು ಮೂಡಿಸಲಾಗುತ್ತಿತ್ತು ಎಂದು ತಾವು ಪಡೆದ ಕೋಚಿಂಗ್‌ ಕುರಿತು ವಿವಿರಿಸಿದ್ದಾರೆ.

ತನಿಷ್ಕಾರ ತಂದೆ ಕೃಷ್ಣ ಕುಮಾರ್‌ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದರೆ, ತಾಯಿ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ತಂದೆ-ತಾಯಿ ಪ್ರೇರಣೆಯಿಂದಾಗಿ ನನಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದಿರುವ ಅವರು, ಅರ್ಥವಾಗದಿದ್ದರೆ ಪದೇ ಪದೇ ಪ್ರಶ್ನೆಯನ್ನು ಕೇಳುವಂತೆ ಅವರೇ ನನಗೆ ಪ್ರೋತ್ಸಾಹ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.

“ನಾನು ಪರೀಕ್ಷೆಗಳಲ್ಲಿ ಕಡಿಮೆ ಅಂಕ ಪಡೆದಾದ ಹೆಚ್ಚು ಅಂಕ ತೆಗೆಯುವಂತೆ ಒತ್ತಡ ಹೇರುತ್ತಿರಲಿಲ್ಲ. ಬದಲಾಗಿ, ಇನ್ನಷ್ಟು ಸಾಧನೆ ಮಾಡುವಂತೆ ನನ್ನನ್ನು ಪ್ರೇರೇಪಿಸುತ್ತಿದ್ದರುʼʼ ಎಂದು ಹೇಳಿದ್ದಾರೆ. “ನಾನು ಪ್ರತಿ ನಿತ್ಯ ಆರರಿಂದ ಏಳು ಗಂಟೆ ಓದುತ್ತಿದ್ದೆ. ಬಿಡುವಾಗಿದ್ದಾಗ ನೋಟ್ಸ್‌ಗಳನ್ನು ನೋಡಿಕೊಳ್ಳುತ್ತಿದ್ದೆʼʼ ಎಂದು ಅವರು ತಮ್ಮ ಅಭ್ಯಾಸದ ಕುರಿತು ಮಾಹಿತಿ ನೀಡಿದ್ದಾರೆ.

NEET UG 2022
ತನಿಷ್ಕಾ ಅವರ ಸ್ಕೋರ್‌ ಕಾರ್ಡ್‌

“ನೀಟ್‌ ಪರೀಕ್ಷೆಗೆ ಕೊನೆಯ ದಿನಗಳಲ್ಲಿ ಸಿದ್ಧತೆ ನಡೆಸಿದರೆ ಪ್ರಯೋಜನವಾಗದು. ಮೊದಲ ದಿನದಿಂದಲೇ ವ್ಯವಸ್ಥಿತಿ ಟೈಮ್‌ ಟೇಬಲ್‌ ರೂಪಿಸಿಕೊಂಡು ಅಧ್ಯಯನ ನಡೆಸಬೇಕುʼʼ ಎಂದು ತನಿಷ್ಕಾ ಹೇಳಿದ್ದಾರೆ.

ತನಿಷ್ಕಾ ದ್ವಿತೀಯ ಪಿಯುಸಿಯಲ್ಲಿ ಶೇ.98.6 ಅಂಕ ಪಡೆದು ಉತ್ತೀರ್ಣರಾಗಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.96.4 ಅಂಕ ಪಡೆದಿದ್ದರೆ, ಜೆಇಇ ಮೇನ್ಸ್‌ನಲ್ಲಿ ಶೇ.99.50 ಅಂಕ ಪಡೆದಿದ್ದರು. ಈಗ ದೆಹಲಿಯ ಎಐಐಎಂಎಸ್‌ನಲ್ಲಿ ಎಂಬಿಬಿಎಸ್‌ ಮಾಡಲು ತನಿಷ್ಕಾ ನಿರ್ಧರಿಸಿದ್ದಾರೆ.

ಫಲಿತಾಂಶ ನೋಡಲು ವೆಬ್‌: https://ntaresults.nic.in/resultservices/NEET-2022-auth

ಇದನ್ನೂ ಓದಿ | NEET Result | ನೀಟ್‌ ಫಲಿತಾಂಶ ಪ್ರಕಟ, ದೇಶಕ್ಕೇ ಕರ್ನಾಟಕದ ರಿಷಿಕೇಶ್‌ 3ನೇ, ರುಚಾ 4ನೇ ರ‍್ಯಾಂಕ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Teach For India : ಟೀಚ್ ಫಾರ್ ಇಂಡಿಯಾದಿಂದ 2025ರ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಜಿಗಳ ಆಹ್ವಾನ

Teach for India: ಟೀಚ್ ಫಾರ್ ಇಂಡಿಯಾ ಫೆಲೋಶಿಪ್ ಎರಡು ವರ್ಷದ, ಪೂರ್ಣಕಾಲಿಕ ಫೆಲೋಶಿಪ್ ಕಾರ್ಯಕ್ರಮವಾಗಿದ್ದು ಶೈಕ್ಷಣಿಕ ವಲಯದಲ್ಲಿ ಆಸಕ್ತಿಯುಳ್ಳ ಮತ್ತು ಬದಲಾವಣೆಯ ನಾಯಕರಾಗಲು ಬಯಸುವವರಿಗೆ ಸಬಲೀಕರಿಸುವ ಉದ್ದೇಶ ಹೊಂದಿದೆ. 640ಕ್ಕೂ ಹೆಚ್ಚು ಫೆಲೋಗಳು 2024 ಸಮೂಹ ಸೇರಿದ್ದು ಈ ಕಾರ್ಯಕ್ರಮದ ಬೆಳೆಯುತ್ತಿರುವ ಪ್ರಭಾವಕ್ಕೆ ಮತ್ತು ಶಿಕ್ಷಣ- ಸಮಾನತೆಯ ಚಳವಳಿಯ ಪರಿಣಾಮದ ಸದೃಢ ಸಾಕ್ಷಿಯಾಗಿದೆ.

VISTARANEWS.COM


on

Teach for India
Koo

ಬೆಂಗಳೂರು: ಮಕ್ಕಳಿಗೆ ಶೈಕ್ಷಣಿಕ ಸಮಾನತೆ ತರಲು ಶ್ರಮಿಸುತ್ತಿರುವ ಟೀಚ್ ಫಾರ್ ಇಂಡಿಯಾ (Teach for India) ತನ್ನ 2025ರ ಫೆಲೋಶಿಪ್ ಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಸೆಪ್ಟೆಂಬರ್ 1, 2024. ಟೀಚ್ ಫಾರ್ ಇಂಡಿಯಾ ಫೆಲೋಶಿಪ್ ಎರಡು ವರ್ಷದ, ಪೂರ್ಣಕಾಲಿಕ ಫೆಲೋಶಿಪ್ ಕಾರ್ಯಕ್ರಮವಾಗಿದ್ದು ಶೈಕ್ಷಣಿಕ ವಲಯದಲ್ಲಿ ಆಸಕ್ತಿಯುಳ್ಳ ಮತ್ತು ಬದಲಾವಣೆಯ ನಾಯಕರಾಗಲು ಬಯಸುವವರಿಗೆ ಸಬಲೀಕರಿಸುವ ಉದ್ದೇಶ ಹೊಂದಿದೆ. 640ಕ್ಕೂ ಹೆಚ್ಚು ಫೆಲೋಗಳು 2024 ಸಮೂಹ ಸೇರಿದ್ದು ಈ ಕಾರ್ಯಕ್ರಮದ ಬೆಳೆಯುತ್ತಿರುವ ಪ್ರಭಾವಕ್ಕೆ ಮತ್ತು ಶಿಕ್ಷಣ- ಸಮಾನತೆಯ ಚಳವಳಿಯ ಪರಿಣಾಮದ ಸದೃಢ ಸಾಕ್ಷಿಯಾಗಿದೆ.

ಈ ಫೆಲೋಶಿಪ್ ಅರ್ಜಿ ಪ್ರಕ್ರಿಯೆ ಅತ್ಯಂತ ಎಚ್ಚರದಿಂದ ಆಯ್ಕೆ ಮಾಡಲಾಗುತ್ತದೆ ಮತ್ತು ಭಾರತದ ಅತ್ಯಂತ ಉಜ್ವಲ ಮತ್ತು ಭರವಸೆಯ ವ್ಯಕ್ತಿಗಳ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಆಯ್ದ ಫೆಲೋಗಳು ಕಠಿಣ ತರಬೇತಿ ಕಾರ್ಯಕ್ರಮ ಪಡೆಯುತ್ತಾರೆ ಅದರಲ್ಲಿ ಅವರು ಶಿಕ್ಷಣ ವ್ಯವಸ್ಥೆಯನ್ನು ಅದರ ಬೇರುಮಟ್ಟದಿಂದ ಅರ್ಥ ಮಾಡಿಕೊಳ್ಳಲು ಪ್ರೇರಣೆ ನೀಡಲಾಗುತ್ತದೆ.

ಇದನ್ನೂ ಓದಿ : Dharwad News: ಧಾರವಾಡದಲ್ಲಿ ಜು.7ರಂದು ಡಾ. ಜಿನದತ್ತ ಅ. ಹಡಗಲಿಗೆ ಅಭಿನಂದನಾ ಸಮಾರಂಭ

ಟೀಚ್ ಫಾರ್ ಇಂಡಿಯಾ ಫೆಲೋಶಿಪ್ ನ ವಿಶಿಷ್ಟ ಆಯಾಮವೆಂದರೆ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರಿವರ್ತನೀಯ ಬದಲಾವಣೆ ತರುವ ಅವಕಾಶ. ಇದು ಅವರಿಗೆ ನಾಯಕತ್ವ, ಸಮಸ್ಯೆ ಪರಿಹರಿಸುವುದು ಮತ್ತು ನಿಜ ಜೀವನದ ಸವಾಲುಗಳನ್ನು ಎದುರಿಸುವ ಹಲವು ಆಯಾಮಗಳ ಕುರಿತು ಒಳನೋಟಗಳನ್ನು ನೀಡುತ್ತದೆ ಅದು ಅವರ ಒಟ್ಟಾರೆ ವೃತ್ತಿಯ ಪ್ರಗತಿಗೆ ಮಹತ್ತರ ಬದಲಾವಣೆ ತರುತ್ತದೆ.

ಟೀಚ್ ಫಾರ್ ಇಂಡಿಯಾ ಫೆಲೋಶಿಪ್ ಕುರಿತು ಹೆಚ್ಚು ತಿಳಿಯಲು ಮತ್ತು ಆಯ್ಕೆ ಪ್ರಕ್ರಿಯೆಗೆ ಈ ಕೆಳಕಂಡ ಲಿಂಕ್ ಗಳಿಗೆ ಭೇಟಿ ನೀಡಿ:

Continue Reading

ಶಿಕ್ಷಣ

NEET PG 2024: ನೀಟ್-ಪಿಜಿ ಪರೀಕ್ಷೆಯ ದಿನಾಂಕ ಪ್ರಕಟ; ಆ. 11ರಂದು ನಡೆಯಲಿದೆ ಟೆಸ್ಟ್‌

NEET PG 2024: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ಆಗಸ್ಟ್ 11ರಂದು ಎರಡು ಪಾಳಿಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

VISTARANEWS.COM


on

NEET PG 2024
Koo

ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (NEET PG 2024) ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (National Board of Examinations) ಪ್ರಕಟಿಸಿದೆ. ಆಗಸ್ಟ್ 11ರಂದು ಎರಡು ಪಾಳಿಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ natboard.edu.in ಇಲ್ಲಿಗೆ ಭೇಟಿ ನೀಡಿ.

ಜೂನ್ 23ರಂದು ನಿಗದಿಯಾಗಿದ್ದ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಯುಜಿ ನೀಟ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆ ಸೇರಿದಂತೆ ವಿವಿಧ ವಿವಾದ ಭುಗಿಲೆದ್ದ ಹಿನ್ನಲೆಯಲ್ಲಿ ಜೂನ್‌ 22ರಂದು ಪರೀಕ್ಷೆ ಮುಂದೂಡಿ ಪ್ರಕಟಣೆ ಹೊರಡಿಸಲಾಗಿತ್ತು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಹಲವು ದೂರುಗಳು ದಾಖಲಾಗಿದ್ದವು. ಸಾಮಾಜಿಕ ಮಾಧ್ಯಮಗಳ ಮೂಲಕ ಆಕಾಂಕ್ಷಿಗಳಿಗೆ ಹಣಕ್ಕಾಗಿ ಪ್ರಶ್ನೆ ಪತ್ರಿಕೆಯನ್ನು ನೀಡುವ ಆಮಿಷ ಒಡ್ಡಲಾಗಿದೆ ಎಂದು ದೂರಲಾಗಿತ್ತು. ಹೀಗಾಗಿ ಪರೀಕ್ಷೆಯನ್ನೇ ರದ್ದು ಮಾಡಲಾಗಿತ್ತು.

ನೀಟ್-ಪಿಜಿ ಪ್ರವೇಶ ಪರೀಕ್ಷೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತ್ತು. ಪರೀಕ್ಷಾ ಪ್ರಕ್ರಿಯೆಗಳ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಮೌಲ್ಯಮಾಪನ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ಸಮರ್ಥನೆ ನೀಡಿತ್ತು.

ಸಚಿವಾಲಯ ಹೇಳಿದ್ದೇನು?

ಕೊನೇ ಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಉಂಟಾದ ಅನಾನುಕೂಲತೆಗೆ ಆರೋಗ್ಯ ಸಚಿವಾಲಯವು ವಿಷಾದಿಸುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಪರೀಕ್ಷಾ ಪ್ರಕ್ರಿಯೆ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲ ಪ್ರಕಟಣೆ ಹೊರಡಿಸಿ ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸುವುದಾಗಿ ಹೇಳಿತ್ತು.

ಡಾರ್ಕ್​ನೆಟ್​​ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಯುಜಿಸಿ-ನೆಟ್ ರದ್ದುಗೊಳಿಸಿದ ನಂತರ ಮುಂದೂಡಲ್ಪಟ್ಟ ಎರಡನೇ ಸ್ಪರ್ಧಾತ್ಮಕ ಪರೀಕ್ಷೆ ಇದಾಗಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (UG) ಅಕ್ರಮಗಳು ನಡೆದಿವೆ ಎಂಬ ಆರೋಪದ ಬಗ್ಗೆಯೂ ವಿವಾದವಿದೆ. ಜೂನ್‌ 21ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂನ್ 25ರಿಂದ ನಡೆಯಬೇಕಿದ್ದ ಸಿಎಸ್ಐಆರ್-ಯುಜಿಸಿ-ನೆಟ್ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿತ್ತು.

ನೀಟ್​ ಪರೀಕ್ಷೆ ಅಕ್ರಮಗಳ ತನಿಖೆ ಹೊಣೆ ಸಿಬಿಐಗೆ ಒಪ್ಪಿಸಿದ ಕೇಂದ್ರ

ನವದೆಹಲಿ: ಪದವಿಪೂರ್ವ ವೈದ್ಯಕೀಯ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸ್ಪರ್ಧಾತ್ಮಕ ನೀಟ್ ಪರೀಕ್ಷೆಯಲ್ಲಿ (NEET UG) ನಡೆದಿರುವ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ತನಿಖೆ ಹೊಣೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಸಿಬಿಐ ಒಪ್ಪಿಸಿದೆ. ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ “ಕೆಲವು ಅಕ್ರಮಗಳು, ವಂಚನೆ ಮತ್ತು ದುಷ್ಕೃತ್ಯಗಳ ಪ್ರಕರಣಗಳು ವರದಿಯಾಗಿವೆ ಮತ್ತು ಪರೀಕ್ಷಾ ಪ್ರಕ್ರಿಯೆಯ ನಿರ್ವಹಣೆಯಲ್ಲಿ ಪಾರದರ್ಶಕತೆಗಾಗಿ, ಶಿಕ್ಷಣ ಸಚಿವಾಲಯದ ಪರಿಶೀಲನೆಯ ನಂತರ ಈ ಬಗ್ಗೆ ಸಮಗ್ರ ತನಿಖೆಗಾಗಿ ಸಿಬಿಐಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪರೀಕ್ಷೆಗಳ ಪಾವಿತ್ರ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರ ಬದ್ಧ. ಮೋಸದಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿ, ಸಂಸ್ಥೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಂದು ಸಚಿವಾಲಯ ಹೇಳಿದೆ. ಮೇ 5 ರಂದು ದೇಶದ 4,750 ಕೇಂದ್ರಗಳಲ್ಲಿ ನೀಟ್-ಯುಜಿ ನಡೆದಿದ್ದು, ಸುಮಾರು 24 ಲಕ್ಷ ಅಭ್ಯರ್ಥಿಗಳು ಭಾಗವಹಿಸಿದ್ದರು. ನಿರೀಕ್ಷಿತ ದಿನಾಂಕಕ್ಕಿಂತ ಹತ್ತು ದಿನ ಮುಂಚಿತವಾಗಿ ಜೂನ್ 4 ರಂದು ಫಲಿತಾಂಶಗಳನ್ನು ಘೋಷಿಸಲಾಗಿತ್ತು. ಫಲಿತಾಂಶದ ನಂತರ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ದುಷ್ಕೃತ್ಯಗಳ ಆರೋಪಗಳು ಕೇಳಿಬಂದಿದ್ದವು.

ಇದನ್ನೂ ಓದಿ: NEET UG Row : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮುಖ್ಯಸ್ಥರನ್ನು ವಜಾಗೊಳಿಸಿದ ಕೇಂದ್ರ ಸರ್ಕಾರ

Continue Reading

ಶಿಕ್ಷಣ

Edu Guide: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌: IDFC FIRST ಬ್ಯಾಂಕ್‌ನಿಂದ 2 ಲಕ್ಷ ರೂ. ಸ್ಕಾಲರ್‌ಶಿಪ್‌; ಹೀಗೆ ಅಪ್ಲೈ ಮಾಡಿ

Edu Guide: ಎಂಬಿಎ ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌. ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ನೀಡುವ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ. 2 ಲಕ್ಷ ರೂ. ನೀಡುವ ಸ್ಕಾಲರ್‌ಶಿಪ್‌ ಇದಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 31. ಅರ್ಜಿ ಸಲ್ಲಿಸುವ ವಿಧಾನ, ಯಾರೆಲ್ಲ ಅರ್ಹರು ಮುಂತಾದ ವಿವರ ಇಲ್ಲಿದೆ.

VISTARANEWS.COM


on

Edu Guide
Koo

ಬೆಂಗಳೂರು: ದೇಶದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡುತ್ತಿದೆ. ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತಿದೆ. ಅದಾಗ್ಯೂ ಉನ್ನತ ಶಿಕ್ಷಣ ಎನ್ನುವುದು ಇನ್ನೂ ಹಲವು ಕಡೆ ಗಗನ ಕುಸುಮ ಎನಿಸಿಕೊಂಡಿದೆ. ಅದರಲ್ಲಿಯೂ ಎಂಜಿನಿಯರಿಂಗ್‌, ಮೆಡಿಕಲ್‌, ಎಂಬಿಎಯಂತಹ ಉನ್ನತ ಶಿಕ್ಷಣದಲ್ಲಿದಲ್ಲಿನ ದುಬಾರಿ ಫೀಸ್‌ ಕಾರಣದಿಂದ ಹಣ ಹೊಂದಿಸಲು ಬಡ ಮತ್ತು ಮಧ್ಯಮ ವರ್ಗದ ಮಂದಿ ಇಂದಿಗೂ ಪರದಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸರ್ಕಾರಗಳು ಮತ್ತು ಬ್ಯಾಂಕ್‌ನಂತಹ ಕೆಲವು ಖಾಸಗಿ ಸಂಸ್ಥೆಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡಲು ಮುಂದು ಬಂದಿವೆ (Scholarship For Students). ಈ ಪೈಕಿ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ನೀಡುವ ಸ್ಕಾಲರ್‌ಶಿಪ್‌ ಪ್ರಮುಖವಾದುದು (IDFC FIRST Bank MBA Scholarship 2024-26). ಬ್ಯಾಂಕ್‌ ಬಡ ಎಂಬಿಎ ವಿದ್ಯಾರ್ಥಿಗಳಿಗೆ 2 ವರ್ಷಕ್ಕೆ 2 ಲಕ್ಷ ರೂ. ಒದಗಿಸುತ್ತಿದೆ. ಇದಕ್ಕೆ ಯಾರೆಲ್ಲ ಅರ್ಹರು? ಅಪ್ಲೈ ಮಾಡುವುದು ಹೇಗೆ? ಮುಂತಾದ ವಿವರ ಇಲ್ಲಿದೆ (Edu Guide).

ಏನಿದು ಯೋಜನೆ?

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಎಂಬಿಎ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಈ ಯೋಜನೆಯನ್ನು 2018ರಲ್ಲಿ ಪರಿಚಯಿಸಿದೆ. ಈ ಯೋಜನೆ ಮೂಲಕ ಅರ್ಹ ವಿದ್ಯಾರ್ಥಿಗಳ ಶಿಕ್ಷಣಕ್ಕೆ 2 ಲಕ್ಷ ರೂ. ನೆರವು ಒದಗಿಸಲಾಗುತ್ತದೆ. ಇದುವರೆಗೆ 152 ಕಾಲೇಜುಗಳ ಸುಮಾರು 1,154 ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ ಪಡೆದುಕೊಂಡಿದ್ದಾರೆ.

ಯಾರೆಲ್ಲ ಅರ್ಹರು?

ಈ ಬಾರಿಯ ಸ್ಕಾಲರ್‌ಶಿಪ್‌ನ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಹರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಜುಲೈ 31. ಸ್ಕಾಲರ್‌ಶಿಪ್‌ಗೆ ಈ ಕೆಳಗಿನ ಅರ್ಹತೆ ಅಗತ್ಯ.

  • ಭಾರತೀಯ ನಾಗರಿಕರಾಗಿರಬೇಕು.
  • ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ಇರಬೇಕು.
  • ಪಟ್ಟಿಯಲ್ಲಿ ಇರುವ ಕಾಲೇಜಿನಲ್ಲಿ ಪ್ರವೇಶ ಪಡೆದಿರಬೇಕು (ಕಾಲೇಜಿನ ಪಟ್ಟಿ ಕೆಳಗೆ ನೀಡಲಾಗಿದೆ).
  • 2 ವರ್ಷಗಳ ಪೂರ್ಣ ಅವಧಿಯ ಎಂಬಿಎ ಕೋರ್ಸ್‌ನ ಮೊದಲ ವರ್ಷದಲ್ಲಿರಬೇಕು.
  • ಆಧಾರ್‌ ನಂಬರ್‌ ಜತೆ ಲಿಂಕ್‌ ಆಗಿರುವ ಮೊಬೈಲ್‌ ನಂಬರ್‌ ಹೊಂದಿರಬೇಕು.

ಅಗತ್ಯ ದಾಖಲೆಗಳು

  • ಕಾಲೇಜಿಗೆ ಪ್ರವೇಶ ಪಡೆದಿರುವ ಪುರಾವೆ (ಕಾಲೇಜು ಹೆಸರು, ಅಡ್ಮಿಷನ್‌ ವರ್ಷ ಇತ್ಯಾದಿ ಮಾಹಿತಿ ಒಳಗೊಂಡಿರಬೇಕು).
  • ಶುಲ್ಕ ಪಾವತಿಯ ರಸೀದಿ.
  • ಪದವಿ ತರಗತಿಯ ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣಪತ್ರದ ಪ್ರತಿ.
  • ಆದಾಯ ಪ್ರಮಾಣ ಪತ್ರ.

ಕಾಲೇಜಿನ ಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ (https://d2w7l1p59qkl0r.cloudfront.net/static/files/list-of-institutions-idfc-first-bank-mba-scholarship-2024-26.pdf)

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://www.buddy4study.com/page/idfc-first-bank-mba-scholarship#scholarships)
  • ಹೆಸರು ನೋಂದಾಯಿಸಿ.
  • ಈಗ IDFC FIRST Bank MBA Scholarship 2024-26 ಪುಟ ಕಾಣಿಸುತ್ತದೆ.
  • ವಿವರಗಳನ್ನು ಓದಿ ‘Apply Now’ ಬಟನ್‌ ಕ್ಲಿಕ್‌ ಮಾಡಿ.
  • ಆಧಾರ್‌ ನಂಬರ್‌ನೊಂದಿಗೆ ಲಿಂಕ್‌ ಆಗಿರುವ ಮೊಬೈಲ್‌ ನಂಬರ್‌ ನಮೂದಿಸಿ.
  • ಈಗ ಯುಆರ್‌ಎಲ್‌, ಯೂಸರ್‌ ಐಡಿ, ಮತ್ತು ಪಾಸ್‌ವರ್ಡ್‌ ಸ್ವೀಕರಿಸುತ್ತೀರಿ.
  • ಅದನ್ನು ಬಳಸಿ ಲಾಗಿನ್‌ ಆಗಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

ಇದನ್ನೂ ಓದಿ: Edu Guide: ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸಿಗಲಿವೆ ಇವೆಲ್ಲ ಸ್ಕಾಲರ್‌ಶಿಪ್‌

Continue Reading

ಹಾಸನ

Hassan News: ಆಲೂರಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ನೋಟ್‌ಬುಕ್‌, ಬ್ಯಾಗ್‌ ವಿತರಣೆ

Hassan News: ಬೆಂಗಳೂರಿನ ಹಂಜಳಿಗೆ ಕಾಳಿಂಗಪ್ಪ ವೆಲ್ಪೇರ್‌ ಅಸೋಸಿಯೇಷನ್‌ನ ಸಂಸ್ಥಾಪಕ ಎಚ್‌.ಕೆ. ಮಂಜುನಾಥ್‌, 30 ಸಾವಿರ ನೋಟ್ ಪುಸ್ತಕಗಳು, 1100 ಶಾಲಾ ಬ್ಯಾಗ್‌ಗಳನ್ನು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಎಲ್ಲ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತವಾಗಿ ವಿತರಿಸಿದ್ದಾರೆ.

VISTARANEWS.COM


on

Hassan News Distribution of free notebook bag to government primary schools in Alur
Koo

ಹಾಸನ: ಬೆಂಗಳೂರಿನ ಹಂಜಳಿಗೆ ಕಾಳಿಂಗಪ್ಪ ವೆಲ್ಪೇರ್‌ ಅಸೋಸಿಯೇಷನ್ ವತಿಯಿಂದ ಹಾಸನ ಜಿಲ್ಲೆಯ (Hassan News) ಆಲೂರು ತಾಲೂಕಿನ ಎಲ್ಲ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.

ಬೆಂಗಳೂರಿನ ಹಂಜಳಿಗೆ ಕಾಳಿಂಗಪ್ಪ ವೆಲ್ಪೇರ್‌ ಅಸೋಸಿಯೇಷನ್‌ನ ಸಂಸ್ಥಾಪಕ ಎಚ್‌.ಕೆ. ಮಂಜುನಾಥ್‌ ಅವರು, “ನಮ್ಮ ನಡಿಗೆ ಸರ್ಕಾರಿ ಶಾಲೆಯ ಕಡೆಗೆ ” ಎಂಬ ಅಭಿಯಾನವನ್ನು ಹಮ್ಮಿಕೊಂಡು ಸರ್ಕಾರಿ ಶಾಲೆಗಳ ಸಬಲೀಕರಣಗೊಳಿಸಲು ಕಳೆದ 12 ವರ್ಷಗಳಿಂದ ಈ ಕಾಯಕವನ್ನು ಮಾಡಿಕೊಂಡು ಬರುತಿದ್ದಾರೆ.

ಅಸೋಸಿಯೇಷನ್‌ನ ಸಂಸ್ಥಾಪಕ ಎಚ್‌.ಕೆ. ಮಂಜುನಾಥ್‌, 30 ಸಾವಿರ ನೋಟ್ ಪುಸ್ತಕಗಳು, 1100 ಶಾಲಾ ಬ್ಯಾಗ್‌ಗಳನ್ನು ಆಲೂರು ತಾಲೂಕಿನ ಎಲ್ಲ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕಗಳನ್ನು, ಬ್ಯಾಗ್‌ಗಳನ್ನು ಉಚಿತವಾಗಿ ವಿತರಿಸಿದರು.

ಇದನ್ನೂ ಓದಿ: Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

ನೋಟ್ ಬುಕ್ಸ್‌ನ ಕವರ್ ಪೇಜ್‌ನಲ್ಲಿ ಮುದ್ರಿಸಿರುವ 5 ಪಂಚ ಸೂತ್ರಗಳು ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿಯನ್ನು ನೀಡುವುದಲ್ಲದೇ ಪ್ರತಿ ಶಾಲೆಯಲ್ಲಿ ಪ್ರಮಾಣ ವಚನ ಬೋಧಿಸುವುದರೊಂದಿಗೆ ನೀಡಲಾಯಿತು. ಗುರುಹಿರಿಯರಲ್ಲಿ ಭಕ್ತಿ ಭಾವ, ವಿನಯ, ತಂದೆ ತಾಯಿಯನ್ನು ಕೊನೆಯವರೆಗೂ ನೋಡಿಕೊಳ್ಳುವುದು, ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಇರುವುದು, ಶಾಲೆಯೊಂದಿಗೆ ನಿಕಟ ಸಂಪರ್ಕ, ಯಾವುದೇ ಸಂದರ್ಭದಲ್ಲಿಯೂ ಹಣದ ಆಮಿಷಕ್ಕೆ ಒಳಗಾಗದೆ ಇರುವುದು ಇವು ಪಂಚ ಸೂತ್ರಗಳಾಗಿವೆ.

ಈ ಸಂದರ್ಭದಲ್ಲಿ ಹಂಜಳಿಗೆ ಕಾಳಿಂಗಪ್ಪ ವೆಲ್ಪೇರ್‌ ಅಸೋಸಿಯೇಷನ್‌ನ ಸಂಸ್ಥಾಪಕ ಎಚ್‌.ಕೆ. ಮಂಜುನಾಥ್, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ, ಬ್ಯಾಗ್‌ಗಳನ್ನು ವಿತರಣೆ ಮಾಡಿ, ಬಳಿಕ ಮಾತನಾಡಿದರು.

ಇದನ್ನೂ ಓದಿ: Toyota Kirloskar Motor: ಮೊಬಿಲಿಟಿ ಎಂಜಿನಿಯರಿಂಗ್ ಲ್ಯಾಬ್ ಸ್ಥಾಪಿಸಲು ಐಐಎಸ್‌ಸಿಯೊಂದಿಗೆ ಕೈಜೋಡಿಸಿದ ಟಿಕೆಎಂ

ಕಾರ್ಯಕ್ರಮದಲ್ಲಿ ಪಿಯು ಕಾಲೇಜು ಪ್ರಾಚಾರ್ಯ ಕುಮಾರಪ್ಪ, ಎಚ್‌.ಎಂ. ಮಹಾದೇವಪ್ಪ, ಎಸ್‌ಡಿಎಂಸಿಯ ಶೇಖರ್, ಕಾಂತರಾಜ್, ರಾಜಣ್ಣ, ಶಾಲಾ ಶಿಕ್ಷಕರು, ಪೋಷಕರು ಪಾಲ್ಗೊಡಿದ್ದರು.

Continue Reading
Advertisement
road accident bike
ಬೆಂಗಳೂರು8 mins ago

Road Accident: ರಾಜಕಾಲುವೆಗೆ ಬಿದ್ದು ಕೊಚ್ಚಿಕೊಂಡು ಹೋದ ಬೈಕ್‌ ಸವಾರ

Lok Sabha Election 2024
Lok Sabha Election 202431 mins ago

Lok Sabha Election 2024: ಲೋಕಸಭೆ ಚುನಾವಣೆಯಲ್ಲಿ 7 ಸಂಸದರಿಗೆ ಸಿಕ್ಕಿದ್ದು ಶೇ. 70ಕ್ಕಿಂತ ಹೆಚ್ಚು ಮತ; ಯಾರಿವರು?

A high level delegation of the state led by Minister MB Patil
ಕರ್ನಾಟಕ32 mins ago

Foreign Investment: ರಾಜ್ಯದಲ್ಲಿ ಸ್ಮಾರ್ಟ್ ಫೋನ್ ಕ್ಯಾಮೆರಾ ಬಿಡಿಭಾಗ ತಯಾರಿಕೆ ಘಟಕ; ದ.ಕೊರಿಯಾ ಜತೆ ಕರ್ನಾಟಕ ಒಪ್ಪಂದ

Janaspandana programme in Kottur
ವಿಜಯನಗರ38 mins ago

Vijayanagara News: ಕೊಟ್ಟೂರಿನಲ್ಲಿ ಜನಸ್ಪಂದನ ಕಾರ್ಯಕ್ರಮ; ಸಾರ್ವಜನಿಕರ ಅಹವಾಲು ಆಲಿಸಿದ ಡಿಸಿ

Superfoods
ಆರೋಗ್ಯ38 mins ago

Superfoods: ಮಾರುಕಟ್ಟೆಯಲ್ಲಿ ಸೂಪರ್‌ಫುಡ್‌ಗಳೆನ್ನುವ ಈ ಆಹಾರಗಳು ನಿಜಕ್ಕೂ ಸೂಪರ್‌ಫುಡ್‌ಗಳೇ?

Latest39 mins ago

Branded Company: ಬ್ರಾಂಡೆಡ್‌ ಬ್ಯಾಗ್‌ ಕಂಪನಿಗಳ ಲೂಟಿ; ಸಾವಿರಕ್ಕೆ ಖರೀದಿಸಿ ಲಕ್ಷಕ್ಕೆ ಸೇಲ್‌!

karnataka Weather Forecast
ಮಳೆ1 hour ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Cheating Case
ಪ್ರಮುಖ ಸುದ್ದಿ8 hours ago

Cheating case : ಭಕ್ತರ 40 ಲಕ್ಷ ರೂ. ಗುಳುಂ ಮಾಡಲು ದರೋಡೆ ಕತೆ ಕಟ್ಟಿದ ಸ್ವಾಮೀಜಿ!

Snake
ವೈರಲ್ ನ್ಯೂಸ್8 hours ago

ತನಗೆ ಒಮ್ಮೆ ಕಚ್ಚಿದ ಹಾವಿಗೆ ಮೂರು ಬಾರಿ ಕಚ್ಚಿ ಸೇಡು ತೀರಿಸಿಕೊಂಡ ವ್ಯಕ್ತಿ; ಕೊನೆಗೆ ಬದುಕುಳಿದಿದ್ದು ಯಾರು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 hour ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ13 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ15 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ16 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ18 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ19 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು20 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು21 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

ಟ್ರೆಂಡಿಂಗ್‌