ರಿವಾಲ್ವರ್‌ ತೋರಿಸಿ ಮನೆ ಮಾಲೀಕನಿಂದ ಅತ್ಯಾಚಾರ - Vistara News

ಕ್ರೈಂ

ರಿವಾಲ್ವರ್‌ ತೋರಿಸಿ ಮನೆ ಮಾಲೀಕನಿಂದ ಅತ್ಯಾಚಾರ

ಮನೆ ಮಾಲಿಕನೊಬ್ಬ ರಿವಾಲ್ವರ್‌ ತೋರಿಸಿ ಬೆದರಿಸಿ ಬಾಡಿಗೆಗೆ ಇದ್ದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ.

VISTARANEWS.COM


on

ಅತ್ಯಾಚಾರ
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಬಾಡಿಗೆ ಮನೆಯಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿನಿಗೆ ರಿವಾಲ್ವರ್‌ ತೋರಿಸಿ ಬೆದರಿಕೆ ಹಾಕಿ ಮನೆ ಮಾಲೀಕ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸಂತ್ರಸ್ತೆ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು, ಆರೋಪಿ ಬಿಹಾರ ಮೂಲದ ರವಿಶಂಕರ್‌ ಪ್ರಸಾದ್‌ (46)ನನ್ನು ಬಂಧಿಸಿದ್ದಾರೆ. ಮತ್ತು ಆತನ ಬಳಿ ಇರುವ ರಿವಾಲ್ವರ್‌ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ | ಗೃಹಸಚಿವರ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ಯತ್ನ

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ಮತ್ತು ಆರೋಪಿಯನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಇನ್ನೂ ವರದಿ ಬರಬೇಕಿದೆ. ಆರೋಪಿಯನ್ನು ಮೂರು ದಿನ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

20 ವರ್ಷದ ಸಂತ್ರಸ್ತೆ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಆರೋಪಿ ಮನೆಯಲ್ಲಿ ಬಾಡಿಗೆಗೆ ಇದ್ದಾರೆ. ಏ. 11ರಂದು ರಾತ್ರಿ ಮನೆಗೆ ಆಗಮಿಸಿದ್ದ ಮನೆ ಮಾಲೀಕ ರಿವಾಲ್ವರ್‌ ತೋರಿಸಿ ಬೆದರಿಕೆ ಹಾಕಿದ್ದಾರೆ. ಬಳಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.

ಸ್ನೇಹಿತರು ಮನೆಗೆ ಬಂದರೆ ಮಾಲೀಕ ಆಕ್ಷೇಪಣೆ ಮಾಡುತ್ತಿದ್ದ. ಇದೇ ವಿಚಾರಕ್ಕೆ ಹಲವಾರು ಬಾರಿ ಜಗಳವೂ ನಡೆದಿದೆ. ಇತ್ತೀಚೆಗೆ ಸ್ನೇಹಿತ ಮನೆಗೆ ಬಂದಾಗ ಆತನ ಬೈಕ್‌ ಲಾಕ್‌ ಮಾಡಿದ್ದರು. ಈ ಬಗ್ಗೆ ಪೊಲೀಸರು ವಿಚಾರಿಸಿದಾಗ ಪೊಲೀಸರು ಬೈಕ್‌ ಲಾಕ್‌ ಮಾಡಿ ಹೋಗಿದ್ದಾರೆ. ಜತೆಗೆ ಮಹಿಳೆಯರ ಕಳ್ಳ ಸಾಗಣೆ ಕೇಸ್‌ ದಾಖಲಿಸುತ್ತಾರೆ ಎಂದು ಮಾಲೀಕರು ಹೆದರಿಸಿದ್ದರು. ಅಷ್ಟೇ ಅಲ್ಲದೇ ಸ್ನೇಹಿತರು ಮನೆಗೆ ಬಂದಿರುವುದು ಪಾಲಕರಿಗೆ ಹೇಳುತ್ತೇನೆ ಎಂದು ಬ್ಲಾಕ್‌ಮೇಲ್‌ ಮಾಡುತ್ತಿದ್ದರು ಎಂದು ಯುವತಿ ದೂರಿದ್ದಾರೆ.

ಇತ್ತೀಚಿಗೆ ಮನೆ ಖಾಲಿ ಮಾಡುವುದಾಗಿ ಯುವತಿ ನಿರ್ಧಾರ ಮಾಡಿದ್ದಳು. ಇದನ್ನು ಅರಿತ ಮಾಲೀಕ ರಿವಾಲ್ವರ್‌ ತೋರಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್‌ ವಿರುದ್ಧ ಅತ್ಯಾಚಾರ ಆರೋಪ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜಯಪುರ

Electric shock : ಮೀನು ಹಿಡಿಯಲು ಹೋದಾಗ ವಿದ್ಯುತ್‌ ಪ್ರವಹಿಸಿ ಬಾಲಕರಿಬ್ಬರು ಮೃತ್ಯು; ಕುಟುಂಬಸ್ಥರ ಆಕ್ರಂದನ

Electric shock : ಹಳ್ಳದಲ್ಲಿ ಮೀನು ಹಿಡಿಯಲು ಹೋದ ಬಾಲಕರಿಬ್ಬರು ವಿದ್ಯುತ್‌ ಪ್ರವಹಿಸಿ ದುರ್ಮರಣ ಹೊಂದಿದ್ದು, ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

VISTARANEWS.COM


on

By

Electric Shock
Koo

ವಿಜಯಪುರ: ಮೀನು ಹಿಡಿಯಲು ಹೋದ ಬಾಲಕರಿಬ್ಬರು ಕರೆಂಟ್‌ ಶಾಕ್‌ನಿಂದ (Electric shock) ಮೃತಪಟ್ಟಿದ್ದಾರೆ. ರೋಹಿತ್ ಅನೀಲ್ ಚವ್ಹಾಣ್ (8), ವಿಜಯ ಪಿಂಟು ಚವ್ಹಾಣ್ (16) ಮೃತ ದುರ್ದೈವಿಗಳು.

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಇಬ್ಬರು ಬಾಲಕರು ದುರ್ಮರಣ ಹೊಂದಿದ್ದಾರೆ. ವಿಜಯಪುರ ಜಿಲ್ಲೆಯ ದ್ಯಾಬೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ವಿದ್ಯುತ್ ತಂತಿ ಕಟ್ ಆಗಿ ನೀರಿನಲ್ಲಿ ಬಿದ್ದಿತ್ತು. ಇದರ ಅರಿವು ಇರದ ಬಾಲಕರಿಬ್ಬರು ಮೀನು ಹಿಡಿಯಲು ಹೋಗಿದ್ದಾರೆ.

ಈ ವೇಳೆ ಒಮ್ಮೆಲೆ ಇಬ್ಬರು ಮಕ್ಕಳಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಲಕರ ಮೃತದೇಹವನ್ನು ತಬ್ಬಿಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹೆಸ್ಕಾಂ ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Kolar news : ಬ್ಲಾಸ್ಟಿಂಗ್‌ ವೇಳೆ ಉರುಳಿ ಬಿದ್ದ ಬಂಡೆಕಲ್ಲು, ಟ್ರ್ಯಾಕ್ಟರ್‌-ಹಿಟಾಚಿ ಅಪ್ಪಚ್ಚಿ; ಮೂವರು ಕಾರ್ಮಿಕರು ನಾಪತ್ತೆ

ಯಾದಗಿರಿಯಲ್ಲಿ ತೆರೆದ ಗುಂಡಿಗೆ ಬಾಲಕ ಬಲಿ

ಯಾದಗಿರಿ: ತೆರೆದ ಗುಂಡಿಯಲ್ಲಿ ಬಿದ್ದು ಬಾಲಕನೊರ್ವ (Drowned in Water) ಮೃತಪಟ್ಟಿದ್ದಾನೆ. ಯಾದಗಿರಿಯ ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ನಿನ್ನೆ ಸೋಮವಾರ ಸಂಜೆ ಘಟನೆ ನಡೆದಿದೆ. ಮನೋಜಕುಮಾರ (8) ಮೃತ ದುರ್ದೈವಿ.

ಮನೋಜಕುಮಾರ ತೋಟದ ಮನೆಯಲ್ಲಿ ಆಟವಾಡುತ್ತಿದ್ದ. ಆಟವಾಡುವಾಗ ಕಾಲು ಜಾರಿದ್ದು ತೆರೆದ ಗುಂಡಿಯಲ್ಲಿ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಲ್ಲಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಈ ದುರ್ಘಟನೆ ನಡೆದಿದೆ. ಗುರುಮಠಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಳಾರಿಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಸಾವು

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಸಿರಗೇರಿ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ಹತ್ತು ವರ್ಷದ ವಸಂತ್‌ ಮೃತದುರ್ದೈವಿ.

ವಸಂತ್‌ ನೀರು ಕುಡಿಯಲು ಕೃಷಿ ಹೊಂಡಕ್ಕೆ‌ ತೆರಳಿದ್ದ ಈ ವೇಳೆ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಹೊಂಡದ ನೀರಿನ ಆಳದಲ್ಲಿ ಸಿಲುಕಿದ್ದ, ಇತ್ತ ಕೂಡಲೇ ಬಾಲಕನ ರಕ್ಷಣೆಗೆ ಗ್ರಾಮಸ್ಥರು ಮುಂದಾಗಿದ್ದರು. ಆದರೆ ಉಸಿರುಗಟ್ಟಿ ಹೊಂಡದ ನೀರಲ್ಲಿ ವಸಂತ ಪ್ರಾಣ ಬಿಟ್ಟಿದ್ದಾನೆ. ಬಳ್ಳಾರಿಯ ಸಿರಗೇರಿ‌ ಪೊಲೀಸ್ ಠಾಣೆಯಲ್ಲಿ‌ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Pavithra Gowda: ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ ಅಸ್ವಸ್ಥ; ಆಸ್ಪತ್ರೆಗೆ ಶಿಫ್ಟ್‌

Pavithra Gowda: ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ವೈದ್ಯರು ತೆರಳಿ ತಪಾಸಣೆ ನಡೆಸಿದ್ದರು. ಆದರೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಹಿನ್ನೆಲೆಯಲ್ಲಿ ಪವಿತ್ರಾಗೌಡಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

VISTARANEWS.COM


on

Pavithra Gowda
Koo

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ1 ಪವಿತ್ರಾಗೌಡ ಅಸ್ವಸ್ಥಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ (Pavithra Gowda), ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ.

ಕೆಲವೇ ಕ್ಷಣಗಳ ಹಿಂದೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ವೈದ್ಯರು ಬಂದಿದ್ದರು. ಆದರೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಹಿನ್ನೆಲೆಯಲ್ಲಿ ಪವಿತ್ರಾಗೌಡಳನ್ನು ಮಲ್ಲತ್ತಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Bhavani Revanna: ಭವಾನಿ ರೇವಣ್ಣ‌ ನಿರಾಳ, ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್

ದರ್ಶನ್ ಮನೆ ಒತ್ತುವರಿ ತೆರವಿಗೆ ಸರ್ಕಾರ ಗ್ರೀನ್‌ ಸಿಗ್ನಲ್‌; ಬುಲ್ಡೋಜರ್‌ ರೆಡಿ ಮಾಡುತ್ತಿದೆ ಬಿಬಿಎಂಪಿ

Actor Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮವಾಗಿ ರಾಜಕಾಲುವೆ ಮೇಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಮನೆ ಒತ್ತುವರಿ ತೆರವು ಮಾಡಲು ರಾಜ್ಯ ಸರ್ಕಾರ ಸೂಚಿಸಿದೆ. ನಟ ದರ್ಶನ್ (Actor Darshan) ಮನೆ ತೆರವಿಗೆ ಪಾಲಿಕೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ಮೌಕಿಕ ಸೂಚನೆ ಸಿಕ್ಕಿದೆ ಎನ್ನಲಾಗಿದ್ದು, ಯಾರೇ ಒತ್ತುವರಿ ಮಾಡಿ ಸ್ಟೇ ತಂದಿದ್ದರೂ ಕಾನೂನಿನ ಪ್ರಕಾರ ತೆರವು ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ನಟ ದರ್ಶನ್ ಮನೆ ರಾಜಕಾಲುವೆ ‌ಮೇಲೆ ಇದ್ದರೂ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕಿದ್ದರು. ಇದೀಗ ಒತ್ತುವರಿಗೆ ತೆರವಿಗೆ ಸೂಚನೆ ಹಿನ್ನೆಲೆಯಲ್ಲಿ ಕ್ರಮಕ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಮಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಕೂಡ ಒತ್ತುವರಿ ವಿಚಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ.

ರಾಜಧಾನಿಯಲ್ಲಿ 2016ರಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾದಾಗ ರಾಜ ಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಕಟ್ಟಡಗಳನ್ನು ತೆರವುಗೊಳಿಸಲು ಅಂದಿನ ಸಿದ್ದರಾಮಯ್ಯ ಸರ್ಕಾರ ಬಿಬಿಎಂಪಿಗೆ ಸೂಚನೆ ನೀಡಿತ್ತು. ಆಗ ಆರ್‌.ಆರ್‌. ನಗರದ ದರ್ಶನ್‌ ಅವರ ನಿವಾಸ ಕೂಡ ರಾಜ ಕಾಲುವೆಯ ಬಫರ್‌ ಜೋನ್‌ ಮೇಲೆ ನಿರ್ಮಿಸಿರುವುದು ತಿಳಿದುಬಂದಿತ್ತು.

ಇದನ್ನೂ ಓದಿ | Self Harming: ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಇನ್ಫೋಸಿಸ್‌ ಉದ್ಯೋಗಿ ಆತ್ಮಹತ್ಯೆ; ರೈಲಿಗೆ ತಲೆಕೊಟ್ಟ ಫ್ಲಿಪ್‌ಕಾರ್ಟ್‌ ಉದ್ಯೋಗಿ

ಐಡಿಯಲ್‌ ಹೋಮ್ಸ್‌, ದರ್ಶನ್‌, ಶಾಮನೂರು ಅವರ ಆಸ್ಪತ್ರೆ ಸೇರಿ ಹಲವು ಕಟ್ಟಡಗಳನ್ನು ತೆರವುಗೊಳಿಸುವಂತೆ ನೋಟಿಸ್‌ ನೀಡಲಾಗಿತ್ತು. ನೋಟಿಸ್‌ ನೀಡಿದ್ದರಿಂದ ದರ್ಶನ್‌ ಮತ್ತಿತರರು ಸಿವಿಲ್‌ ನ್ಯಾಯಾಲಯದಿಂದ ತಡೆಯಾಜ್ಞೆ ತಂದು, ಬಳಿಕ 2016 ಅಕ್ಟೋಬರ್‌ನಲ್ಲಿ ತೆರವು ಮಾಡದಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಹೀಗಾಗಿ ಅಂದು ಒತ್ತುವರಿ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ದರ್ಶನ್‌ ಇದೀಗ ಬಂಧನವಾಗಿರುವ ಹಿನ್ನೆಲೆಯಲ್ಲಿ ಮನೆ ಒತ್ತುವರಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

Continue Reading

ದೇಶ

‘ಯಾಕ್‌ ಹೀಗ್‌ ಮೋಸ ಮಾಡ್ದೆ’ ಎನ್ನುತ್ತಲೇ ಪ್ರೇಯಸಿಯನ್ನು ನಡು ರಸ್ತೆಯಲ್ಲಿ ಬಡಿದು ಕೊಂದ ಪ್ರೇಮಿ; Video ಇದೆ

ಆರತಿ ಯಾದವ್‌ ಹಾಗೂ ರೋಹಿತ್‌ ಯಾದವ್‌ ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಆತನ ನೋವಿಗೆ ಈಕೆ ಮುಲಾಮು ಆಗುತ್ತಿದ್ದಳು. ಈಕೆಯ ಮುನಿಸನ್ನು ಆತ ಪಿಸುಮಾತಿನಿಂದಲೇ ಸಮಾಧಾನ ಮಾಡುತ್ತಿದ್ದ. ಆದರೆ, ಕೆಲ ದಿನಗಳ ಹಿಂದಷ್ಟೇ ಆರತಿ ಯಾದವ್‌, ಬ್ರೇಕಪ್‌ ಮಾಡಿಕೊಳ್ಳೋಣ ಎಂದಿದ್ದಳು. ಈಕೆಯು ಇನ್ನೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂಬ ಶಂಕೆಯೂ ರೋಹಿತ್‌ ಯಾದವ್‌ ಮನಸ್ಸಲ್ಲಿ ಮೂಡಿತ್ತು. ಹಾಗಾಗಿಯೇ, ನಡು ರಸ್ತೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

VISTARANEWS.COM


on

Mumbai News
Koo

ಮುಂಬೈ: ಬದಲಾದ ಕಾಲಘಟ್ಟದಲ್ಲಿ ಲವ್‌ ಬ್ರೇಕಪ್‌ (Love Breakup) ಎನ್ನುವುದು ತುಂಬ ಸಾಮಾನ್ಯ ಎನಿಸಿದೆ. ಆಕರ್ಷಣೆಗೆ ಒಳಗಾಗಿ ಪ್ರೀತಿಸುವುದು, ಒಂದು ವರ್ಷ ಜತೆಗೆ ತಿರುಗಾಡಿ, ಸಣ್ಣ ಭಿನ್ನಾಭಿಪ್ರಾಯ ಬಂದರೂ ಪ್ರೀತಿಗೆ ತಿಲಾಂಜಲಿ ಇಡುವುದು ಯುವಕ-ಯುವತಿಯರಿಗೆ ರೂಢಿಯಾಗಿದೆ. ಆದರೆ, ಕೆಲವೊಂದು ಪ್ರಕರಣಗಳಲ್ಲಿ ಬ್ರೇಕಪ್‌ಗಳು ಹಿಂಸೆ, ಕೊಲೆಗೂ ಕಾರಣವಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದ (Maharashtra) ಮುಂಬೈನಲ್ಲಿ (Mumbai) ವ್ಯಕ್ತಿಯೊಬ್ಬ ಲವ್‌ ಬ್ರೇಕಪ್‌ ಎಂದಿದ್ದಕ್ಕೆ ಪ್ರೇಯಸಿಯನ್ನು ನಡು ರಸ್ತೆಯಲ್ಲಿಯೇ ಸ್ಪ್ಯಾನರ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಈ ಕೃತ್ಯದ ಭೀಕರ ವಿಡಿಯೊ ಈಗ ವೈರಲ್‌ ಆಗಿದೆ.

ಮುಂಬೈ ಬಳಿಯ ವಸಾಯ್‌ ಪ್ರದೇಶದ ರಸ್ತೆಯೊಂದರಲ್ಲಿ 20 ವರ್ಷದ ಆರತಿ ಯಾದವ್ ನಡೆದುಕೊಂಡು ಹೋಗುತ್ತಿರುತ್ತಾರೆ. ಆಗ 29 ವರ್ಷದ ರೋಹಿತ್‌ ಯಾದವ್‌ ಎಂಬಾತ ಸ್ಪ್ಯಾನರ್‌ ಹಿಡಿದುಕೊಂಡೇ ಓಡಿ ಬಂದು ಯುವತಿ ಮೇಲೆ ದಾಳಿ ಮಾಡಿದ್ದಾನೆ. ಯುವತಿ ತಲೆಗೆ, ಎದೆಗೆ ಸ್ಪ್ಯಾನರ್‌ನಿಂದ ಹೊಡೆದು, ಆಕೆ ನೆಲಕ್ಕೆ ಬಿದ್ದ ಮೇಲೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ಒಂದಿಬ್ಬರು ವ್ಯಕ್ತಿಯನ್ನು ತಡೆಯಲು ಪ್ರಯತ್ನಿಸಿದರೂ ಅಷ್ಟೊತ್ತಿಗಾಗಲೇ ಗಂಭೀರವಾಗಿ ಗಾಯಗೊಂಡಿದ್ದ ಆರತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಲವ್‌ ಬ್ರೇಕಪ್‌ ಆಗಿದ್ದೇ ಕಾರಣ?

ಆರತಿ ಯಾದವ್‌ ಹಾಗೂ ರೋಹಿತ್‌ ಯಾದವ್‌ ಅವರು ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ನಡುವೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಕೆಲ ದಿನಗಳ ಹಿಂದೆ ಆರತಿ ಯಾದವ್‌ ಈತನಿಗೆ ಬ್ರೇಕಪ್‌ ಎಂದಿದ್ದಳು. ಇನ್ಯಾವತ್ತೂ ನನ್ನನ್ನು ನೋಡಲು ಬರಬೇಡ, ಮಾತನಾಡಿಸಬೇಡ, ಕಾಲ್‌ ಮಾಡಿ ತೊಂದರೆ ಕೊಡಬೇಡ ಎಂದಿದ್ದಳು. ಇದರಿಂದ ರೋಹಿತ್‌ ಯಾದವ್‌ ನೊಂದಿದ್ದ. ಅಲ್ಲದೆ, ಆರತಿ ಯಾದವ್‌ ಬೇರೊಬ್ಬನ ಜತೆ ಪ್ರೀತಿಯ ಬಲೆಗೆ ಸಿಲುಕಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿತ್ತು.

ಬೇರೆಯವನನ್ನು ಪ್ರೀತಿಸುತ್ತಿದ್ದಾಳೆ ಎಂದು ಭಾವಿಸಿದ ರೋಹಿತ್‌ ಯಾದವ್‌, ನನಗೆ ಸಿಗದವಳು ಯಾರಿಗೂ ಸಿಗಬಾರದು ಎಂದು ಭಾವಿಸಿದ್ದಾನೆ. ಇದೇ ಕಾರಣಕ್ಕಾಗಿ ತುಂಬಿದ ರಸ್ತೆಯಲ್ಲಿಯೇ ಸ್ಪ್ಯಾನರ್‌ನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಬಳಿಕ, “ನನಗೇಕೆ ಹೀಗೆ ಮಾಡಿದೆ” ಎಂದು ಹತಾಶಯ ಧ್ವನಿಯಲ್ಲಿ ಕಿರುಚಿದ್ದಾನೆ. ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Continue Reading

ಪ್ರಮುಖ ಸುದ್ದಿ

Prajwal Revanna Case: ʼಮತ್ತೆ ಮತ್ತೆ ಅದನ್ನು ತೋರಿಸೋಕೆ ಮುಜುಗರ….ʼ ಜಡ್ಜ್‌ ಮುಂದೆ ಅಲವತ್ತುಕೊಂಡ ಪ್ರಜ್ವಲ್!‌

Prajwal Revanna Case: ಪ್ರಜ್ವಲ್‌ ರೇವಣ್ಣ ಅವರ ಮೇಲೆ ಮೂರು ಪ್ರಕರಣಗಳಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಪೂರ್ಣಗೊಂಡಿದ್ದು, ಪುರುಷತ್ವ ಪರೀಕ್ಷೆ ಮಾಡಲಾಗಿದೆ. ಮೂರನೆ ಬಾರಿಗೆ ಎಸ್‌ಐಟಿ ಪ್ರಜ್ವಲ್‌ ಅವರನ್ನು ಕಸ್ಟಡಿಗೆ ಪಡೆದುಕೊಂಡು ಪರೀಕ್ಷೆಗೆ ಮುಂದಾಗಿದೆ.

VISTARANEWS.COM


on

prajwal revanna case test
Koo

ಬೆಂಗಳೂರು: “ನಾನು ಈಗಾಗಲೇ ಎರಡು ಕೇಸ್‌ಗಳಲ್ಲಿ ಪುರುಷತ್ವ ಪರೀಕ್ಷೆ (Medical Test) ಒಪ್ಪಿ ಮಾಡಿಸಿಕೊಂಡಿದ್ದೇನೆ. ಮತ್ತೆ ಮತ್ತೆ ಅದೇ ಪರೀಕ್ಷೆ ಮಾಡಿಸಿಕೊಳ್ಳಲು ಮುಜುಗರವಾಗುತ್ತದೆ. ನನಗೆ ಮುಜುಗರ ಹುಟ್ಟಿಸಲೆಂದೇ ಇದನ್ನು ಮಾಡುತ್ತಿರುವಂತೆ ಕಾಣುತ್ತಿದೆ” ಎಂದು ಲೈಂಗಿಕ ದೌರ್ಜನ್ಯ (Physical abuse) ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ನ್ಯಾಯಾಧೀಶರ ಮುಂದೆ ಅಲವತ್ತುಕೊಂಡ ಘಟನೆ ನಡೆದಿದೆ.

“ನಾನು ಎರಡು ಕೇಸ್‌ನಲ್ಲಿ ಮೆಡಿಕಲ್ ಟೆಸ್ಟ್ ಒಪ್ಪಿ ಮಾಡಿಸಿಕೊಂಡಿದ್ದೇನೆ. ಮತ್ತೆ ಅದೇ ಟೆಸ್ಟ್ ಮಾಡಿಸಲು ಕೇಳ್ತಾರೆ. ಪದೇ ಪದೆ ಖಾಸಗಿ ಅಂಗ ತೋರಿಸಲು ತುಂಬಾ ಮುಜುಗರ ಆಗುತ್ತಿದೆ. ಈಗಾಗಲೇ ಎರಡು ಕೇಸ್‌ಗಳಲ್ಲಿ ಸೇಮ್ ಪರೀಕ್ಷೆ ಆಗಿದೆ. ಈ ಮುಜುಗರದಿಂದ ಪಾರು ಮಾಡಿ” ಎಂದು ಪ್ರಜ್ವಲ್‌ ನ್ಯಾಯಾಧೀಶರ ಮುಂದೆ ವಿನಂತಿಸಿಕೊಂಡರು. ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾತ್ರ ಮಾಡಿಸುವಂತೆ ನ್ಯಾಯಾಧೀಶರು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜ್ವಲ್‌ ರೇವಣ್ಣ ಅವರ ಮೇಲೆ ಮೂರು ಪ್ರಕರಣಗಳಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಪೂರ್ಣಗೊಂಡಿದ್ದು, ಪುರುಷತ್ವ ಪರೀಕ್ಷೆ ಮಾಡಲಾಗಿದೆ. ಮೂರನೆ ಬಾರಿಗೆ ಎಸ್‌ಐಟಿ ಪ್ರಜ್ವಲ್‌ ಅವರನ್ನು ಕಸ್ಟಡಿಗೆ ಪಡೆದುಕೊಂಡಿದೆ. ಮತ್ತೆ ಮೆಡಿಕಲ್‌ ಪರೀಕ್ಷೆಗೆ ಮುಂದಾಗಿದ್ದು, ಈ ಸಂದರ್ಭದಲ್ಲಿ ಪ್ರಜ್ವಲ್‌ ಆಕ್ಷೇಪಿಸಿದರು.

ಹಿಂದಿನ ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಕೋರ್ಟ್‌ ಮುಂದೆ ಹಾಜರುಪಡಿಸಲಾಗಿದ್ದು, ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಕೆ.ಎನ್ ಶಿವಕುಮಾರ್ ಆದೇಶ ನೀಡಿದ್ದಾರೆ. ಈ ನಡುವೆ, ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

ಇದೇ ಸಂದರ್ಭದಲ್ಲಿ, ಎಸ್‌ಐಟಿ (SIT) ಅಧಿಕಾರಿಗಳು ತನ್ನ ಆರೋಗ್ಯ ಸಮಸ್ಯೆಯನ್ನು ಕಡೆಗಣಿಸಿದ್ದಾರೆ ಎಂದು ಪ್ರಜ್ವಲ್‌ ದೂರಿದ್ದು ಕೂಡ ವರದಿಯಾಗಿದೆ. ಪ್ರಜ್ವಲ್ ರೇವಣ್ಣ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಎಸ್‌ಐಟಿ ಕೋರ್ಟ್‌ಗೆ ಹಾಜರು ಪಡಿಸಿದಾಗ, “ಏನಾದ್ರೂ ಆರೋಗ್ಯ ಸಮಸ್ಯೆ ಇದೆಯಾ?ʼʼ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. “ಹೌದು ಸರ್” ಎಂದು ಪ್ರಜ್ವಲ್ ನುಡಿದರು.

“ಎಸ್ಐಟಿ ಅಧಿಕಾರಿಗಳು ಸರಿಯಾಗಿ ನೋಡ್ಕೋತಿಲ್ಲ” ಎಂದು ಪ್ರಜ್ವಲ್ ಹೇಳಿದ್ದಲ್ಲದೆ, “ಎಂಆರ್‌ಐ ಸ್ಕ್ಯಾನ್ ಮಾಡಿಸಿದ್ದೇನೆ. ಟ್ಯಾಬ್ಲೆಟ್ ತೆಗೆದುಕೊಳ್ತಿದ್ದೇನೆ” ಎಂದು ಹೇಳಿದಾಗ, ʼಆರೋಗ್ಯ ತಪಾಸಣೆ ಯಾಕೆ ಮಾಡಿಸಿಲ್ಲ?ʼ ಎಂದು ಅಧಿಕಾರಿಗಳನ್ನು ಜಡ್ಜ್ ಪ್ರಶ್ನಿಸಿದರು. “ಅವರು ಈಗ ಹೇಳ್ತಾ ಇದ್ದಾರೆ, ನಮಗೆ ಹೇಳಿಲ್ಲ” ಎಂದು ಎಸ್ಐಟಿ ಅಧಿಕಾರಿಗಳು ಉತ್ತರಿಸಿದರು.

ನಂತರ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದತ್ತ ಅವರನ್ನು ಕರೆದೊಯ್ಯಲಾಗಿದೆ. ನ್ಯಾಯಾಂಗ ಬಂಧನಕ್ಕೆ ಹೋದರೂ ನಾಳೆ ಮತ್ತೆ ಬಾಡಿ ವಾರಂಟ್ ಮೇಲೆ ಅವರನ್ನು ಕಸ್ಟಡಿಗೆ ಪಡೆಯಲು ಎಸ್ಐಟಿ ಮುಂದಾಗಿದೆ. ಸಿಐಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸ್‌ಗೆ ಸಂಬಂಧಿಸಿ ವಶಕ್ಕೆ ಪಡೆಯಲಿದೆ.

ಭವಾನಿ ರೇವಣ್ಣಗೆ ಸಿಗ್ತು ನಿರೀಕ್ಷಣಾ ಜಾಮೀನು

ಕೆಆರ್ ನಗರದಲ್ಲಿ ಲೈಂಗಿಕ ದೌರ್ಜನ್ಯ (Physical Abuse) ಸಂತ್ರಸ್ತೆಯನ್ನು ಕಿಡ್ನಾಪ್ (kidnap case) ಮಾಡಿದ ಪ್ರಕರಣದಲ್ಲಿ ಎಸ್‌ಐಟಿ (SIT) ವಿಚಾರಣೆ ಎದುರಿಸುತ್ತಿರುವ ಭವಾನಿ ರೇವಣ್ಣ (Bhavani Revanna) ಅವರಿಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು (Anticipatory Bail) ದೊರೆತಿದೆ. ಕಳೆದ ವಾರ ಕಿಡ್ನಾಪ್‌ ಕೇಸ್‌ನಲ್ಲಿ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠದಿಂದ ಆದೇಶ ಪ್ರಕಟವಾಗಿದ್ದು, ಸಂತ್ರಸ್ತೆ ಕಿಡ್ನಾಪ್ ಪ್ರಕರಣದಲ್ಲಿ ಭವಾನಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲಾಗಿತ್ತು. ಇಂದು ನಿರೀಕ್ಷಣಾ ಜಾಮೀನು ಅರ್ಜಿಯ ಅಂತಿಮ ಆದೇಶವನ್ನು ಪೀಠ ಪ್ರಕಟಿಸಿದೆ.

ಇದನ್ನೂ ಓದಿ: Prajwal Revanna Case: ಪರಾರಿಯಾಗಲು ಸಹಾಯ; ಪ್ರಜ್ವಲ್ ರೇವಣ್ಣ ಗರ್ಲ್ ಫ್ರೆಂಡ್‌ಗೆ ಎಸ್‌ಐಟಿ ನೊಟೀಸ್!

Continue Reading
Advertisement
Kannur Bomb Blast
ದೇಶ19 mins ago

Kannur Bomb Blast: ಕೇರಳದಲ್ಲಿ ಬಾಂಬ್‌ ಸ್ಫೋಟಕ್ಕೆ ವೃದ್ಧ ಬಲಿ; ಕಣ್ಣೂರು ಆಗುತ್ತಿದೆಯೇ ಬಾಂಬ್‌ ಕಾರ್ಖಾನೆ?

Bengaluru Power Cut
ಬೆಂಗಳೂರು25 mins ago

Bengaluru Power Cut: ಜೂನ್‌ 20ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ಇರಲ್ಲ

Kids Hair Fashion
ಫ್ಯಾಷನ್37 mins ago

Kids Hair Fashion: ಹೆಣ್ಣುಮಕ್ಕಳ ಸಿಂಗಾರಕ್ಕೆ ಬಂತು ಕ್ಯೂಟ್‌ ಹೇರ್ ಆಕ್ಸೆಸರೀಸ್‌

Kisan Samman Nidhi
ದೇಶ1 hour ago

Kisan Samman Nidhi: 9 ಕೋಟಿ ರೈತರ ಖಾತೆಗಳಿಗೆ 20 ಸಾವಿರ ಕೋಟಿ ರೂ. ಜಮೆ ಮಾಡಿದ ಮೋದಿ; ಹೀಗೆ ಚೆಕ್‌ ಮಾಡಿ

Alka Yagnik
Latest1 hour ago

Alka Yagnik: ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಬಾಲಿವುಡ್‌ ಖ್ಯಾತ ಹಿನ್ನೆಲೆ ಗಾಯಕಿ

Eid Celebration
ದೇಶ1 hour ago

Eid Celebration: ಯೋಗಿ ವಾರ್ನಿಂಗ್‌ ಎಫೆಕ್ಟ್‌; ಉ.ಪ್ರದೇಶದ ಯಾವ ರಸ್ತೆಯಲ್ಲೂ ಬಕ್ರೀದ್‌ ನಮಾಜ್‌ ನಡೆಯಲಿಲ್ಲ!

Kuwait Fire
ಕರ್ನಾಟಕ1 hour ago

Kuwait Fire: ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ ವಿಜಯಕುಮಾರ್ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಟ್ಟ ಸಿಎಂ

Karnataka Weather Forecast
ಮಳೆ2 hours ago

Karnataka Weather : ಗುಡುಗು, ಸಿಡಿಲಿನ ಮಳೆಗೆ ಮನೆಯ ಗೋಡೆ ಕುಸಿತ; ನಾಳೆಗೂ ಇದೆ ಅಲರ್ಟ್‌

Narendra Modi
ದೇಶ2 hours ago

Narendra Modi: 3ನೇ ಸಲ ಗೆಲ್ಲಿಸಿದ ವಾರಾಣಸಿ ಜನತೆಗೆ ಧನ್ಯವಾದ ಎಂದ ಮೋದಿ; ಗೆದ್ದ ಬಳಿಕ ಮೊದಲ ಭೇಟಿ!

Electric Shock
ವಿಜಯಪುರ2 hours ago

Electric shock : ಮೀನು ಹಿಡಿಯಲು ಹೋದಾಗ ವಿದ್ಯುತ್‌ ಪ್ರವಹಿಸಿ ಬಾಲಕರಿಬ್ಬರು ಮೃತ್ಯು; ಕುಟುಂಬಸ್ಥರ ಆಕ್ರಂದನ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು1 day ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 day ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌