Rohit Sharma | ಸಿಕ್ಸರ್​ ಮೂಲಕ ಯುವರಾಜ್​ ಸಿಂಗ್​ ದಾಖಲೆ ಮುರಿದ ರೋಹಿತ್​ ಶರ್ಮಾ - Vistara News

T20 ವಿಶ್ವಕಪ್

Rohit Sharma | ಸಿಕ್ಸರ್​ ಮೂಲಕ ಯುವರಾಜ್​ ಸಿಂಗ್​ ದಾಖಲೆ ಮುರಿದ ರೋಹಿತ್​ ಶರ್ಮಾ

ಟಿ20 ವಿಶ್ವ ಕಪ್​ನಲ್ಲಿ ಅತೀ ಹೆಚ್ಚು ಸಿಕ್ಸರ್​ ಸಿಡಿಸಿದ ಭಾರತೀಯ ಬ್ಯಾಟರ್​ ಎಂಬ ದಾಖಲೆ ನಿರ್ಮಿಸಿದ ರೋಹಿತ್​ ಶರ್ಮಾ(Rohit Sharma).

VISTARANEWS.COM


on

t20
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಸಿಡ್ನಿ: ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ(Rohit Sharma) ಟಿ20 ವಿಶ್ವ ಕಪ್‌ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಮೂರು ಸಿಕ್ಸರ್ ಸಿಡಿಸಿದ ರೋಹಿತ್, ಟಿ20 ವಿಶ್ವ ಕಪ್‌ನಲ್ಲಿ ಒಟ್ಟಾರೆ 34 ಸಿಕ್ಸರ್ ಸಿಡಿಸುವ ಮೂಲಕ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಬರೆದರು. ಈ ಮೂಲಕ 33 ಸಿಕ್ಸರ್ ಸಿಡಿಸಿದ್ದ ಯುವರಾಜ್ ಸಿಂಗ್ ದಾಖಲೆಯನ್ನು ಅಳಿಸಿ ಹಾಕಿದರು.

ಸಿಡ್ನಿ ಮೈದಾನದಲ್ಲಿ ಗುರುವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ತಂಡ. ಟಿ20 ವಿಶ್ವ ಕಪ್​ನ ಸೂಪರ್ ​12 ಹಂತದ ಪಂದ್ಯದಲ್ಲಿ ನೆದರ್ಲೆಂಡ್ಸ್​(India vs Netherlands) ತಂಡವನ್ನು ಭರ್ಜರಿ 56 ರನ್​ ಅಂತರದಿಂದ ಮಣಿಸಿ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಜತೆಗೆ ಬಿ ಗ್ರೂಪ್​ನ ಅಂಕಪಟ್ಟಿಯಲ್ಲಿ 4 ಅಂಕದೊಂದಿಗೆ ಮೊದಲ ಸ್ಥಾನ ಕಾಯ್ದುಕೊಂಡಿದೆ.

ಪಾಕಿಸ್ತಾನ ಎದುರು 4 ರನ್‌ಗೆ ವಿಕೆಟ್‌ ಕೈಚೆಲ್ಲಿದ್ದ ರೋಹಿತ್‌, ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿದರು. ಮೂರು ಸಿಕ್ಸರ್​ ಮತ್ತು ನಾಲ್ಕು ಬೌಂಡರಿ ಸಹಿತ 53 ರನ್​ ಪೇರಿಸಿದರು.

ಇದನ್ನೂ ಓದಿ | India vs Netherlands | ನೆದರ್ಲೆಂಡ್ಸ್‌ ವಿರುದ್ಧ ಭಾರತಕ್ಕೆ ಭರ್ಜರಿ ಜಯ! ರೋಹಿತ್, ವಿರಾಟ್, ಸೂರ್ಯ, ಭುವಿ ಮಿಂಚಿಂಗ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

Inzamam Ul Haq: ಭಾರತ ತಂಡದ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ ಪಾಕ್​ ಮಾಜಿ ನಾಯಕ

Inzamam Ul Haq: ಪಾಕ್​ ತಂಡ ಈ ಬಾರಿ ಆಡಿದ ಟಿ20 ವಿಶ್ವಕಪ್​ ಪಂದ್ಯದಲ್ಲಿ ಕ್ರಿಕೆಟ್​ ಶಿಶು ಅಮೆರಿಕ ವಿರುದ್ಧವೂ ಹೀನಶಯವಾಗಿ ಸೋಲು ಕಂಡಿತ್ತು. ಆಡಿದ 4 ಪಂದ್ಯಗಳಲ್ಲಿ ಕೇವ 2 ಪಂದ್ಯ ಮಾತ್ರ ಗೆದ್ದು ಲೀಗ್​ ಹಂತದಿಂದಲೇ ನಿರ್ಗಮನ ಕಂಡಿತ್ತು. ಈ ಸೋಲು ಪಾಕ್​ನ ಮಾಜಿ ಆಟಗಾರರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

VISTARANEWS.COM


on

Inzamam Ul Haq
Koo

ಕರಾಚಿ: ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮಾತಿನಂತೆ ಪಾಕಿಸ್ತಾನದ ತಕರಾರು ಮುಗಿದಂತೆ ಕಾಣುತ್ತಿಲ್ಲ. ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯಿಂದ ಹೊರಬಿದ್ದಿರುವುದನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತೋರುತ್ತಿದೆ. ಪಾಕಿಸ್ತಾನದ ಮಾಜಿ ನಾಯಕ ಹಾಗೂ ಆಟಗಾರ ಇಂಜಮಾಮ್ ಉಲ್ ಹಕ್(Inzamam Ul Haq) ಅವರು ಭಾರತದ ತಂಡದ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ವಿಶ್ಲೇಷಣಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಇಂಜಮಾಮ್ ಉಲ್ ಹಕ್ ಈ ಆರೋಪ ಮಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿದ್ದ ಸಲೀಂ ಮಲಿಕ್ ಅವರು ವೇಗಿ ಅರ್ಶ್​ದೀಪ್ ಸಿಂಗ್(Arshdeep Singh) ಅವರ ರಿವರ್ಸ್ ಸ್ವಿಂಗ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಆದರೆ, ಇಂಜಮಾಮ್ ಅವರು ಅರ್ಶ್​ದೀಪ್ ರಿವರ್ಸ್ ಸ್ವಿಂಗ್ ಬಗ್ಗೆ ಅನುಮಾನವಿದೆ ಎಂದು ಹೇಳಿದರು.

“15ನೇ ಓವರ್​ನಲ್ಲಿ ಅರ್ಶದೀಪ್​ ಸಿಂಗ್​ ಬೌಲಿಂಗ್​ ನಡೆಸುವ ವೇಳೆ ಚೆಂಡು ಹೆಚ್ಚು ಸ್ವಿಂಗ್​ ಆಗುತ್ತಿತ್ತು. ನಾನು ಗಮನಿಸಿದ ಹಾಗೆ ಈ ರೀತಿ ಚೆಂಡು ಏಕಾಏಕಿ ಸ್ವಿಂಗ್​ ಆಗಲು ಸಾಧ್ಯವಿಲ್ಲ. ನನ್ನ ಪ್ರಕಾರ ಭಾರತೀಯ ಆಟಗಾರರು 12 ಅಥವಾ 13ನೇ ಓವರ್​ನಲ್ಲಿ ಚೆಂಡಿಗೆ ಶೈನಿಂಗ್​ ಹಚ್ಚಿದಂತೆ ಕಾಣುತ್ತಿದೆ. ಅಂಪೈರ್​ಗಳು ಇದನ್ನು ಸೂಕ್ಷವಾಗಿ ಪರಿಗಣಿಸಬೇಕು. ಇಲ್ಲಿ ಯಾವುದೋ ಮೋಸದಾಟ ನಡೆದಂತಿದೆ” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ ಪಾಕ್​ ತಂಡದ ಸರಣಿ ಸೋಲಿನ ರಹಸ್ಯ ಬಯಲು ಮಾಡಿದ ಮಾಜಿ ನಾಯಕ

ಇಂಜಮಾಮ್ ಅವರ ಈ ಆರೋಪಕ್ಕೆ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸರಿಯಾದ ತಿಇರುಗೇಟು ನೀಡಿದ್ದಾರೆ. ನೀವು ಮಾಡುತ್ತಿರುವ ಈ ಆರೋಪ ಯಾವ ಕಾರಣಕ್ಕೆ ಎಂದು ಭಾರತೀಯರಿಗೆ ಮಾತ್ರವಲ್ಲ ಬೇರೆ ದೇಶದ ಕ್ರಿಕೆಟಿಗರಿಗು ತಿಳಿದಿದೆ. ಟೂರ್ನಿಯಿಂದ ಹೊರ ಬಿದ್ದರೂ ಕೂಡ ಕೊಂಕು ಬಯಸುವ ನಿಮ್ಮ ಈ ನರಿ ಬುದ್ದಿಯನ್ನು ಮೊದಲು ಬಿಟ್ಟು ಬಿಡಿ ಎಂದಿದ್ದಾರೆ.

ಪಾಕ್​ ತಂಡ ಈ ಬಾರಿ ಆಡಿದ ಟಿ20 ವಿಶ್ವಕಪ್​ ಪಂದ್ಯದಲ್ಲಿ ಕ್ರಿಕೆಟ್​ ಶಿಶು ಅಮೆರಿಕ ವಿರುದ್ಧವೂ ಹೀನಶಯವಾಗಿ ಸೋಲು ಕಂಡಿತ್ತು. ಆಡಿದ 4 ಪಂದ್ಯಗಳಲ್ಲಿ ಕೇವ 2 ಪಂದ್ಯ ಮಾತ್ರ ಗೆದ್ದು ಲೀಗ್​ ಹಂತದಿಂದಲೇ ನಿರ್ಗಮನ ಕಂಡಿತ್ತು. ಈ ಸೋಲು ಪಾಕ್​ನ ಮಾಜಿ ಆಟಗಾರರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಭಾರತದ ಬಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲಾರಂಭಿಸಿದ್ದಾರೆ.

ಪಾಕಿಸ್ತಾನದ ಮಾಜಿ ಆಟಗಾರರು ಭಾರತೀಯ ಆಟಗಾರರ ಮೇಲೆ ಈ ರೀತಿಯ ಆರೋಪಗಳು ಮಾಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯ ವೇಳೆಯೂ ಇಂತಹ ಹಲವು ಆರೋಪಗಳನ್ನು ಮಾಡಿದ್ದರು. ಭಾರತೀಯ ಆಟಗಾರರು ಬೌಲಿಂಗ್​ ಮತ್ತು ಬ್ಯಾಟಿಂಗ್​ ನಡೆಸುವ ವೇಳೆ ಬೇರೆ ಬೆಂಡನ್ನು ಬಳಸುತ್ತಾರೆ, ಐಸಿಸಿ ಕೂಡ ಭಾರತಕ್ಕೆ ಬೆಂಬಲ ನೀಡುತ್ತಿದೆ ಎಂದು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದರು.

Continue Reading

ಕ್ರೀಡೆ

IND vs ENG: ಭಾರತ-ಇಂಗ್ಲೆಂಡ್​ ಸೆಮಿ ಕಾದಾಟಕ್ಕೆ ಮೀಸಲು ದಿನ ಇಲ್ಲ; ಪಂದ್ಯ ರದ್ದಾದರೆ ಯಾರಾಗಲಿದ್ದಾರೆ ವಿಜೇತರು?

IND vs ENG: ಭಾರತ-ಇಂಗ್ಲೆಂಡ್​ ನಡುವಿನ 2ನೇ ಸೆಮಿಫೈನಲ್​ ಪಂದ್ಯಕ್ಕೆ ಮೀಸಲು ದಿನವಿಲ್ಲ. ಹೀಗಾಗಿ ಒಂದು ವೇಳೆ ಪಂದ್ಯ ರದ್ದುಗೊಂಡರೆ ಭಾರತ ತಂಡ ಫೈನಲ್​ಗೇರಲಿದೆ. ಏಕೆಂದರೆ ಸೂಪರ್​-8 ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಸಂಪಾದಿಸಿದೆ.

VISTARANEWS.COM


on

IND vs ENG
Koo

ಗಯಾನಾ: ಹಾಲಿ ಆವೃತ್ತಿಯ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯಲ್ಲಿ ಅಜೇಯ ಗೆಲುವಿನೋಟ ಮುಂದುವರಿಸಿರುವ ಟೀಮ್​ ಇಂಡಿಯಾ ನಾಳೆ(ಗುರುವಾರ) ಪ್ರಾವಿಡೆನ್ಸ್​ ಸ್ಟೇಡಿಯಂನಲ್ಲಿ ನಡೆಯಲಿರುವ 2ನೇ ಸೆಮಿಫೈನಲ್(India vs England semi-final)​ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್(IND vs ENG)​ ತಂಡದ ಸವಾಲು ಎದುರಿಸಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡಚಣೆ ತರುವ ಭೀತಿ ಎದುರಾಗಿದೆ.

ಹವಾಮಾನ ವರದಿಗಳ ಪ್ರಕಾರ ಭಾರಿ ಮಳೆಯಿಂದಾಗಿ ಪಂದ್ಯ ರದ್ದಾದರೂ ಅಚ್ಚರಿ ಇಲ್ಲ ಎಂದು ಎಚ್ಚರಿಕೆ ನೀಡಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ವಿಜೇತರನ್ನು ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಅಭಿಮಾನಿಗಳಲ್ಲಿ ಈ ಪ್ರಶ್ನೆ ಕಾಡಲೂ ಕೂಡ ಒಂದು ಕಾರಣವಿದೆ. ದಕ್ಷಿಣ ಆಫ್ರಿಕಾ-ಅಫಘಾನಿಸ್ತಾನ ನಡುವಿನ ಮೊದಲ ಸೆಮಿಫೈನಲ್​ ಪಂದ್ಯಕ್ಕೆ ಮೀಸಲು ದಿನವಿದ್ದರೂ, ಭಾರತ-ಇಂಗ್ಲೆಂಡ್​ ನಡುವಿನ 2ನೇ ಸೆಮಿಫೈನಲ್​ ಪಂದ್ಯಕ್ಕೆ ಮೀಸಲು ದಿನವಿಲ್ಲ. ಹೀಗಾಗಿ ಒಂದು ವೇಳೆ ಪಂದ್ಯ ರದ್ದುಗೊಂಡರೆ ಭಾರತ ತಂಡ ಫೈನಲ್​ಗೇರಲಿದೆ. ಏಕೆಂದರೆ ಸೂಪರ್​-8 ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಸಂಪಾದಿಸಿದೆ. ಇಂಗ್ಲೆಂಡ್​ ಸೂಪರ್​-8 ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿತ್ತು. ಹೀಗಾಗಿ ಈ ಲಾಭ ಭಾರತಕ್ಕೆ ಲಭಿಸಲಿದೆ.

ಶೇ. 88 ರಷ್ಟು ಮಳೆ


ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಪಂದ್ಯದ ಸಮಯದಲ್ಲಿ ಮಳೆ ಸುರಿಯುವ ಸಾಧ್ಯತೆ ಶೇ. 88ರಷ್ಟಿದೆ. ಫೈನಲ್​ ಪಂದ್ಯ ಶನಿವಾರವೇ ನಡೆಯಲಿರುವುದರಿಂದ, 2ನೇ ಸೆಮೀಸ್​ಗೆ ಮೀಸಲು ದಿನವಿಲ್ಲ ಎಂದು ಐಸಿಸಿ ಈ ಮೊದಲೇ ಸ್ಪಷ್ಟಪಡಿಸಿತ್ತು. ಈ ಪಂದ್ಯಕ್ಕೆ ಮೀಸಲು ದಿನ ಇರದಿದ್ದರೂ ಕೂಡ ಪಂದ್ಯ ಮುಗಿಸಲು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಐಸಿಸಿ ನೀಡಿದೆ. ಜತೆಗೆ ಸೆಮಿಫೈನಲ್​ನಲ್ಲಿ ಸ್ಪಷ್ಟ ಫಲಿತಾಂಶ ಬರಬೇಕಾದರೆ ಉಭಯ ತಂಡಗಳು ಕನಿಷ್ಠ 10 ಓವರ್​ಗಳ ಪಂದ್ಯ ಆಡಬೇಕಾಗಿದೆ. ಲೀಗ್​, ಸೂಪರ್​-8ನಲ್ಲಿ ಫಲಿತಾಂಶಕ್ಕೆ ಕನಿಷ್ಠ 5 ಓವರ್​ಗಳ ಪಂದ್ಯ ಸಾಕಾಗಿತ್ತು.

ಇದನ್ನೂ ಓದಿ IND vs AUS : ಟಿ20 ವಿಶ್ವ ಕಪ್​ 2024ರಲ್ಲಿ ಗರಿಷ್ಠ ಸ್ಕೋರ್ ಬಾರಿಸಿದ ಭಾರತ ತಂಡ; 5 ವಿಕೆಟ್​ಗೆ 205

ಫೈನಲ್​ಗಿದೆ ಮೀಸಲು ದಿನ


ಮೊದಲ ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಕ್ಕೆ ಮೀಸಲು ದಿನ ಇದೆ. ಜೂನ್​ 29ಕ್ಕೆ ಬ್ರಿಜ್​ಟೌನ್​ನಲ್ಲಿ ಫೈನಲ್​ ಪಂದ್ಯ ನಡೆಯಲಿದೆ. ನಿಗದಿತ ದಿನದಂದು ಪಂದ್ಯ ಪೂರ್ಣಗೊಳ್ಳಲಿದ್ದರೆ. ಪಂದ್ಯ ಎಲ್ಲಿಗೆ ನಿಂತಿರುತ್ತದೆಯೇ ಅಲ್ಲಿಂದಲೇ ಮೀಸಲು ದಿನ ಅಂದರೆ ಜೂನ್​ 30 (ಭಾನುವಾರ) ನಡೆಯಲಿದೆ. ಫೈನಲ್​ನಲ್ಲೂ ಫಲಿತಾಂಶ ನಿರ್ಧಾರಕ್ಕೆ ಉಭಯ ತಂಡಗಳು ಕನಿಷ್ಠ 10 ಓವರ್​ ಆಡಬೇಕು. ಮೀಸಲು ದಿನವೂ ಮಳೆ ಅಡ್ಡಿಪಡಿಸಿದರೆ, ಫೈನಲ್​ಗೇರಿದ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್​ ಎಂದು ಐಸಿಸಿ ಘೋಷಿಸಲಿದೆ.

Continue Reading

ಕ್ರೀಡೆ

AFG vs SA: ಅಜೇಯ ದಕ್ಷಿಣ ಆಫ್ರಿಕಾಗೆ ಸವಾಲೊಡ್ಡೀತೇ ಆಫ್ಘನ್?​; ನಾಳೆ ಮೊದಲ ಸೆಮಿ ಫೈನಲ್​

AFG vs SA: ಅಫಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೂ ಟಿ20 ಕ್ರಿಕೆಟ್​ನಲ್ಲಿ 2 ಬಾರಿ ಮುಖಾಮುಖಿಯಾಗಿವೆ. ಈ ಎರಡೂ ಪಂದ್ಯಗಳನ್ನು ಕೂಡ ದಕ್ಷಿಣ ಆಫ್ರಿಕಾವೇ ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಹರಿಣ ಪಡೆಯೇ ಬಲಿಷ್ಠವಾಗಿ ಗೋಚರಿಸಿದೆ

VISTARANEWS.COM


on

AFG vs SA
Koo

ಟ್ರಿನಿಡಾಡ್: ಹಾಲಿ ಟಿ20 ವಿಶ್ವಕಪ್‌(T20 World Cup 2024) ಕ್ರಿಕೆಟ್‌ ಪಂದ್ಯಾವಳಿಯಲ್ಲಿ ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳಿಗೆ ಸೊಕ್ಕಡಗಿಸಿ ಕನಸಿನ ಓಟ ಬೆಳೆಸಿರುವ ಅಫಘಾನಿಸ್ತಾನ(AFG vs SA), ನಾಳೆ ನಡೆಯುವ ಮಹತ್ವದ ಸೆಮಿಫೈನಲ್​ ಪಂದ್ಯದಲ್ಲಿ ಕೂಟದ ಅಜೇಯ ತಂಡವಾದ ದಕ್ಷಿಣ ಆಫ್ರಿಕಾದ ಸವಾಲನ್ನು(South Africa vs Afghanistan Semi Final 1) ಎದುರಿಸಲಿದೆ. ಈ ಪಂದ್ಯ ಭಾರತದಲ್ಲಿ ಬೆಳಗಿನ ಜಾವ 6 ಗಂಟೆಗೆ ಪ್ರಸಾರಗೊಳ್ಳಲಿದೆ.

ಈ ಬಾರಿಯ ಟೂರ್ನಿಯಲ್ಲಿ ಇತ್ತಂಡಗಳಿಗೂ ಕೂಡ ಅದೃಷ್ಠ ಕೈ ಹಿಡಿದಿದೆ. ಲೀಗ್​ ಹಂತದಲ್ಲಿ ಸೋಲುವ ಪಂದ್ಯಗಳನ್ನು ಗೆದ್ದು ಸೂಪರ್​-8 ಹಂತಕ್ಕೇರಿತ್ತು. ಪ್ರತಿ ಐಸಿಸಿ ಟೂರ್ನಿಯಲ್ಲಿ ಗೆಲ್ಲುವ ಪಂದ್ಯಗಳನ್ನು ಸೋಲುವ ಮತ್ತು ಮಳೆಯಿಂದ ಹೊನ್ನಡೆ ಅನುಭವಿಸಿ ಚೋಕರ್ಸ್​ ಎನಿಸಿಕೊಳ್ಳುತ್ತಿದ್ದ ದಕ್ಷಿಣ ಆಫ್ರಿಕಾದ ನಸೀಬು ಈ ಬಾರಿ ಬದಲಾದಂತಿದೆ. ಲೀಗ್​ ಹಂತದಲ್ಲಿ ಬಾಂಗ್ಲಾ ವಿರುದ್ಧ 1 ರನ್​ ಅಂತರದಿಂದ ಗೆದ್ದದ್ದು, ಸೂಪರ್​-8 ಪಂದ್ಯದಲ್ಲಿ ವಿಂಡೀಸ್​ ಎದುರು ಮಳೆ ಪೀಡಿತ ಪಂದ್ಯವನ್ನು ಜಯಿಸಿದ್ದು ನೋಡುವಾಗ ಹರಿಣ ಪಡೆ ಈ ಬಾರಿ ಚೋಕರ್ಸ್​ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಸಾಧ್ಯತೆಯೊಂದು ಕಂಡಿಬಂದಿದೆ.

ದಕ್ಷಿಣ ಆಫ್ರಿಕಾ ಪರ ಡಿ ಕಾಕ್​ ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್​ ಇದುವರೆಗೂ ನಿರೀಕ್ಷತ ಬ್ಯಾಟಿಂಗ್​ ಪ್ರದರ್ಶನ ತೋರದಿದ್ದರು. ಕೂಡ ಬೌಲಿಂಗ್​ ಮತ್ತು ಫೀಲ್ಡಿಂಗ್​ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು ಗೆದ್ದಿದ್ದಾರೆ. ಆದರೆ, ಸೆಮಿಫೈನಲ್​ನಲ್ಲಿಯೂ ಇದೇ ರೀತಿಯಲ್ಲಿ ಪಂದ್ಯವನ್ನು ಗೆಲ್ಲಬಹುದು ಎಂದು ಯೋಚಿಸಿ ಕುಳಿತರೆ ಸೋಲು ಎದುರಾಗುವುದು ಖಚಿತ ಎನ್ನಲಡ್ಡಿಯಿಲ್ಲ. ಏಕೆಂದರೆ, ಅಫಘಾನಿಸ್ತಾನ 100 ರನ್​ ಬಾರಿಸಿದರೂ ಕೂಡ ಇದನ್ನು ಹಿಡಿದು ನಿಲ್ಲಿಸುವ ತಾಕತ್ತು ಈ ತಂಡದ ಬೌಲರ್​ಗಳಿಗಿದೆ. ಸ್ಪಿನ್​, ಸ್ಪೀಡ್​ ಎರಡೂ ವಿಭಾಗದಲ್ಲಿಯೂ ವೈವಿಧ್ಯಮಯವಾಗಿದೆ. ಬ್ಯಾಟಿಂಗ್​ನಲ್ಲಿ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಪ್ರತಿ ಪಂದ್ಯದಲ್ಲಿಯೂ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಮಧ್ಯಮ ವೇಗಿ ನವೀನ್​ ಉಲ್​ ಹಕ್​ ಕೂಡ ಘಾತಕ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.

ಇದನ್ನೂ ಓದಿ AFG vs BAN: ಕಾಬುಲ್​ನಲ್ಲಿ ಆಫ್ಘನ್ನರ ಮುಗಿಲು ಮುಟ್ಟಿದ ಸಂಭ್ರಮಾಚರಣೆ; ಗುಂಪು ಚದುರಿಸಲು ಜಲಫಿರಂಗಿ ಪ್ರಯೋಗ

ಮುಖಾಮುಖಿ


ಅಫಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೂ ಟಿ20 ಕ್ರಿಕೆಟ್​ನಲ್ಲಿ 2 ಬಾರಿ ಮುಖಾಮುಖಿಯಾಗಿವೆ. ಈ ಎರಡೂ ಪಂದ್ಯಗಳನ್ನು ಕೂಡ ದಕ್ಷಿಣ ಆಫ್ರಿಕಾವೇ ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಹರಿಣ ಪಡೆಯೇ ಬಲಿಷ್ಠವಾಗಿ ಗೋಚರಿಸಿದೆ. ಆದರೂ ಕೂಡ ಅಪಾಯಕಾರಿ ಆಫ್ಘನ್​ ಸವಾಲನ್ನು ಹಗುರವಾಗಿ ಕಾಣಬಾರದು. ಏಕೆಂದರೆ ಹೊಡಿ ಬಡಿ ಆಟವಾದ ಟಿ20 ಕ್ರಿಕೆಟ್​ನಲ್ಲಿ ಕೊನೆಯ ಎಸೆತದಲ್ಲಿಯೂ ಪಂದ್ಯದ ಫಲಿತಾಂಶ ಬದಲಾದ ನಿದರ್ಶನವಿದೆ.

ಹವಾಮಾನ ವರದಿ


ಸೂಪರ್​-8 ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದರೂ ಕೂಡ ನಾಳೆ(ಬುಧವಾರ) ನಡೆಯುವ ಸೆಮಿ ಫೈನಲ್​ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಎದುರಾಗಿಲ್ಲ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ.

ಸಂಭಾವ್ಯ ತಂಡಗಳು


ದಕ್ಷಿಣ ಆಫ್ರಿಕಾ:
ಕ್ವಿಂಟನ್ ಡಿ ಕಾಕ್ (ವಿಕೆಟ್​ ಕೀಪರ್​), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಆನ್ರಿಚ್ ನಾರ್ಜೆ, ಒಟ್ನೀಲ್ ಬಾರ್ಟ್‌ಮನ್.

ಅಫಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್​ ಕೀಪರ್​), ಇಬ್ರಾಹಿಂ ಜದ್ರಾನ್, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ಕರೀಂ ಜನತ್, ರಶೀದ್ ಖಾನ್ (ನಾಯಕ), ನಂಗೆಯಾಲಿಯಾ ಖರೋಟೆ, ನೂರ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.

Continue Reading

ಕ್ರೀಡೆ

David Warner Retirement: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಡೇವಿಡ್ ವಾರ್ನರ್

David Warner Retirement: 37 ವರ್ಷದ ಡೇವಿಡ್​ ವಾರ್ನರ್​, 2009ರಲ್ಲಿ ಮೆಲ್ಬೋರ್ನ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆಸ್ಟ್ರೇಲಿಯಾ ಪರ ಒಟ್ಟು 110 ಪಂದ್ಯಗಳನ್ನು ಆಡಿ 3277 ರನ್​ ಬಾರಿಸಿದ್ದಾರೆ.

VISTARANEWS.COM


on

David Warner Retirement
Koo

ಸಿಡ್ನಿ: ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್(David Warner Retirement) ಅವರು ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವ ಮೂಲಕ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಹಾಲಿ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ವಿರುದ್ಧ ಸೋಲು ಕಾಣುವ ಮೂಲಕ ಆಸ್ಟ್ರೇಲಿಯಾ ಹೊರಬಿದ್ದ ಬಳಿಕ ವಾರ್ನರ್​ ತಮ್ಮ ನಿವೃತ್ತಿ ಪ್ರಕಟಿಸಿದರು. ಈ ವರ್ಷದ ಜನವರಿಯಲ್ಲಿ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ಗೂ ವಾರ್ನರ್‌ ವಿದಾಯ ಹೇಳಿದ್ದರು.

37 ವರ್ಷದ ಡೇವಿಡ್​ ವಾರ್ನರ್​, 2009ರಲ್ಲಿ ಮೆಲ್ಬೋರ್ನ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆಸ್ಟ್ರೇಲಿಯಾ ಪರ ಒಟ್ಟು 110 ಪಂದ್ಯಗಳನ್ನು ಆಡಿ 3277 ರನ್​ ಬಾರಿಸಿದ್ದಾರೆ. ಈ ವೇಳೆ 1 ಶತಕ ಮತ್ತು 28 ಅರ್ಧಶತಕ ಬಾರಿಸಿದ್ದಾರೆ. ವಿದಾಯ ಹೇಳಿದರೂ ಕೂಡ ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ತಂಡ ಬಯಸಿದರೆ ಆಡಲು ಸಿದ್ಧ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ರಿಕಿ ಪಾಂಟಿಂಗ್, ಆ್ಯಡಂ ಗಿಲ್ ಕ್ರಿಸ್ಟ್​, ಶೇನ್​ ವಾರ್ನ್​ ಅವರಂತಹ ದಿಗ್ಗಜ ಆಟಗಾರರೊಂದಿಗೆ ಆಡಿದ ಅನುಭವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ಕ್ರಿಕೆಟ್​ ವೃತ್ತಿಜೀವನದಲ್ಲಿ ಸಾಧಿಸುವುದು ಇನ್ನೂ ಯಾವುದೂ ಉಳಿದಿಲ್ಲ. ಮೂರು ಮಾದರಿಯ (ಏಕದಿನ, ಟೆಸ್ಟ್ ಮತ್ತು ಟಿ20) ವಿಶ್ವಕಪ್​ ತಂಡದ ಸದಸ್ಯ ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿ. ನನ್ನ ಕ್ರಿಕೆಟ್​ ಜರ್ನಿಯಲ್ಲಿ ಸಹಕರಿಸಿದ ಎಲ್ಲ ಸಿಬ್ಬಂದಿ, ಸಹ ಆಟಗಾರರಿಗೆ ನಾನು ಚಿರಋಣಿ ಎಂದು ವಾರ್ನರ್​ ಹೇಳಿದ್ದಾರೆ. ​

ಇದನ್ನೂ ಓದಿ IND vs AUS: ಟೀಮ್​ ಇಂಡಿಯಾ ಆಟಗಾರರ ಮೇಲೆ ಹಿಟ್ ಅಂಡ್ ರನ್ ಗಂಭೀರ ಆರೋಪ ಮಾಡಿದ ದೆಹಲಿ ಪೊಲೀಸರು!

ವಾರ್ನರ್​ ಟೆಸ್ಟ್​ ಸಾಧನೆ


2011 ಜನವರಿ 4ರಂದು ಬ್ರಿಸ್ಬೇನ್‌ನಲ್ಲಿ ಕಿವೀಸ್​ ವಿರುದ್ಧದ ಪಂದ್ಯವನ್ನಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಡೇವಿಡ್ ವಾರ್ನರ್ ಒಟ್ಟು 205 ಇನಿಂಗ್ಸ್‌ಗಳಲ್ಲಿ 8,786 ರನ್ ಗಳಿಸಿದ್ದಾರೆ. 26 ಶತಕ ಹಾಗೂ 37 ಅರ್ಧಶತಕ ಬಾರಿಸಿದ್ದಾರೆ. ಅಜೇಯ 335 ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 4 ವಿಕೆಟ್​ ಕೂಡ ಪಡೆದಿದ್ದಾರೆ.

ಏಕದಿನ ಸಾಧನೆ


161 ಏಕದಿನ ಪಂದ್ಯಗಳನ್ನು ಆಡಿರುವ ವಾರ್ನರ್​ 159 ಇನಿಂಗ್ಸ್​ಗಳಿಂದ 6932 ರನ್​ ಬಾರಿಸಿದ್ದಾರೆ. 22 ಶತಕ ಮತ್ತು 33 ಅರ್ಧಶತಕ ಒಳಗೊಂಡಿದೆ. 179 ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಕಳೆದ ವರ್ಷ ಭಾರತ ವಿರುದ್ಧ ಏಕದಿನ ವಿಶ್ವಕಪ್​ ಪಂದ್ಯವೇ ವಾರ್ನರ್​ಗೆ ಕೊನೆಯ ಏಕದಿನ ಪಂದ್ಯವಾಗಿತ್ತು.

Continue Reading
Advertisement
Inzamam Ul Haq
ಕ್ರೀಡೆ4 mins ago

Inzamam Ul Haq: ಭಾರತ ತಂಡದ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ ಪಾಕ್​ ಮಾಜಿ ನಾಯಕ

rain news wall collapse 4 death
ಕ್ರೈಂ5 mins ago

Rain News: ಭಾರಿ ಮಳೆಗೆ ಮನೆ ಗೋಡೆ ಕುಸಿದು ನಾಲ್ವರು ಸಾವು

Sanjith Hegde Nange Allava song Out
ಸ್ಯಾಂಡಲ್ ವುಡ್28 mins ago

Sanjith Hegde: ಸಂಜನಾ ದಾಸ್‌ಗೆ ʻನೀ ನಂಗೆ ಅಲ್ಲವಾʼ ಎಂದ ಸಂಜಿತ್ ಹೆಗಡೆ!

suraj revanna case 12
ಕ್ರೈಂ37 mins ago

Suraj Revanna Case: ಅಮಾವಾಸ್ಯೆ ದಿನ ಸೂರಜ್‌ ಬಳೆ ತೊಡ್ತಾನೆ, ಸೀರೆ ಉಡ್ತಾನೆ! ಬಯಲು ಮಾಡಿದ ಸಂತ್ರಸ್ತ

Lok Sabha Speaker Election
ದೇಶ39 mins ago

Lok Sabha Speaker Election: ಲೋಕಸಭೆ ಸ್ಪೀಕರ್ ಚುನಾವಣೆ ಇಂದು; ಆಡಳಿತ ಪಕ್ಷ-ಪ್ರತಿಪಕ್ಷ ಬಲಾಬಲ ಹೀಗಿದೆ

Albania vs Spain
ಕ್ರೀಡೆ40 mins ago

Albania vs Spain: ಯುರೋ ಕಪ್​ನಲ್ಲಿ ನಾಕೌಟ್‌ ಹಂತಕ್ಕೇರಿದ ಸ್ಪೇನ್‌

Parliament Session 2024
ದೇಶ46 mins ago

Parliament Session 2024: ಇಂದು ಐತಿಹಾಸಿಕ ಲೋಕಸಭಾ ಸ್ಪೀಕರ್‌ ಚುನಾವಣೆ; ಕ್ಷಣ ಕ್ಷಣದ ಮಾಹಿತಿಗಾಗಿ Live ನೋಡಿ

Pavithra Gowda Cried After In Jail darshan case
ಕ್ರೈಂ53 mins ago

Pavithra Gowda: ನನ್ನನ್ನು ನೋಡಲು ಯಾರೂ ಬರೋದಿಲ್ಲ ಎಂದು ಪವಿತ್ರಾ ಕಣ್ಣೀರು; ʻದಚ್ಚುʼ ನಿರಾಳ!

Sunita Williams
ವಿದೇಶ1 hour ago

Sunita Williams: ತಾಂತ್ರಿಕ ಸಮಸ್ಯೆ- ಎರಡು ವಾರಗಳಿಂದ ಬಾಹ್ಯಾಕಾಶದಲ್ಲೇ ಸಿಲುಕಿದ ಸುನೀತಾ ವಿಲಿಯಮ್ಸ್‌

IND vs ENG
ಕ್ರೀಡೆ1 hour ago

IND vs ENG: ಭಾರತ-ಇಂಗ್ಲೆಂಡ್​ ಸೆಮಿ ಕಾದಾಟಕ್ಕೆ ಮೀಸಲು ದಿನ ಇಲ್ಲ; ಪಂದ್ಯ ರದ್ದಾದರೆ ಯಾರಾಗಲಿದ್ದಾರೆ ವಿಜೇತರು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌