ಆಘಾತಕಾರಿ ಸುದ್ದಿ | ಕೇವಲ 13 ವರ್ಷದ ಬಾಲಕಿ ಹೃದಯಾಘಾತದಿಂದ ಸಾವು, ಓದುತ್ತಿದ್ದಾಗ ಕುಸಿದು ಬಿದ್ದು ಮೃತ್ಯು - Vistara News

ಆರೋಗ್ಯ

ಆಘಾತಕಾರಿ ಸುದ್ದಿ | ಕೇವಲ 13 ವರ್ಷದ ಬಾಲಕಿ ಹೃದಯಾಘಾತದಿಂದ ಸಾವು, ಓದುತ್ತಿದ್ದಾಗ ಕುಸಿದು ಬಿದ್ದು ಮೃತ್ಯು

ಕುಂದಾಪುರದ ತಲ್ಲೂರಿನಲ್ಲಿ ಕೇವಲ 13 ವರ್ಷದ ಬಾಲಕಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಹೃದಯಾಘಾತ ಚಿಕ್ಕ ಮಕ್ಕಳನ್ನೂ ಬಲಿ ಪಡೆಯುತ್ತಿರುವುದು ಆತಂಕ ಮೂಡಿಸಿದೆ.

VISTARANEWS.COM


on

balaki death
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕುಂದಾಪುರ: ಮಧ್ಯ ವಯಸ್ಸು ದಾಟಿದ ಬಳಿಕವಷ್ಟೇ ಕಾಡುತ್ತಿದ್ದ ಹೃದಯಾಘಾತದ ಸಮಸ್ಯೆ ಕಳೆದ ಕೆಲವು ವರ್ಷಗಳಿಂದ ಯುವಜನರನ್ನೂ ಬಲಿ ಪಡೆಯುತ್ತಿದೆ. ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ ಕೇವಲ ೧೩ ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಈ ಮೂಲಕ ಇದು ಮಕ್ಕಳನ್ನೂ ಬಿಡುತ್ತಿಲ್ಲ ಎಂಬಂತಾಗಿದೆ.

ಹಟ್ಟಿಯಂಗಡಿಯ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಅನುಶ್ರೀ ಹೃದಯಾಘಾತಕ್ಕೆ ಒಳಗಾದವಳು. ಮನೆಯಲ್ಲಿ ಓದುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡ ಅನುಶ್ರೀ ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಕೊನೆಯುಸಿರೆಳೆದಿದ್ದಳು.

ಅನುಶ್ರೀಯ ಕುಂದಾಪುರದ ಅಕ್ಷರ ದಾಸೋಹ ಯೋಜನೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಮತ್ತು ಹಕ್ಲಾಡಿ ಪ್ರೌಢಶಾಲೆಯ ಶಿಕ್ಷಕಿ ಭಾರತಿ ದಂಪತಿಯ ಪುತ್ರಿಯಾಗಿದ್ದಾಳೆ.

ಅನುಶ್ರೀಯ ಮೃತದೇಹದ ಮರಣೋತ್ತರ ಪರೀಕ್ಷೆ ಮಣಿಪಾಲ ಆಸ್ಪತ್ರೆಯಲ್ಲಿ ನಡೆದಿದೆ. ಅನುಶ್ರೀಯ ಕಣ್ಣುಗಳನ್ನು ದಾನ ಮಾಡಲಾಗಿದೆ.

ಇದನ್ನೂ ಓದಿ | World Heart day | ವಾಲ್ನಟ್‌ ತಿನ್ನಿ, ಹೃದಯದ ಆರೋಗ್ಯ ಕಾಪಾಡಿಕೊಳ್ಳಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Condom Cause Cancer: ಕಾಂಡೋಮ್, ಲೂಬ್ರಿಕೆಂಟ್‍ ಬಳಸಿದರೂ ಕ್ಯಾನ್ಸರ್‌! ಅಧ್ಯಯನ ವರದಿಯಲ್ಲಿ ಆಘಾತಕಾರಿ ಸಂಗತಿ

Condom Cause Cancer: ಕಾಂಡೋಮ್ ಹಾಗೂ ಲೂಬ್ರಿಕೆಂಟ್‌ಗಳಲ್ಲಿ ಬಂಜೆತನ, ಕ್ಯಾನ್ಸರ್ ಸೇರಿದಂತೆ ಇತರ ಸಮಸ್ಯೆಗಳಿಗೆ ಕಾರಣವಾಗುವ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಪಿಎಫ್ಎಎಸ್ ಅನ್ನು ಹೆಚ್ಚು ಬಳಸುವುದರಿಂದ ಕ್ಯಾನ್ಸರ್, ಯಕೃತ್ತಿನ ಹಾನಿ, ಥೈರಾಯ್ಡ್ ಸಮಸ್ಯೆಗಳು, ಜನನ ದೋಷಗಳು ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆಯಂತೆ.

VISTARANEWS.COM


on

Condom Cause Cancer
Koo


ಸಾಮಾನ್ಯವಾಗಿ ದಂಪತಿ ಬೇಡದ ಗರ್ಭವನ್ನು ತಡೆಯಲು ಕಾಂಡೋಮ್‌ಗಳನ್ನು ಬಳಸುತ್ತಾರೆ. ಹಾಗೇ ಸಂಭೋಗದ ವೇಳೆ ಯೋನಿಯಲ್ಲಿ ಲೋಳೆ ಸ್ರಾವ ಕಡಿಮೆಯಾದಾಗ ಯೋನಿ ನಾಳದ ನೋವು, ಬಿಗಿತವನ್ನು ಕಡಿಮೆ ಮಾಡಲು ಕೆಲವರು ಲೂಬ್ರಿಕೆಂಟ್ ಅನ್ನು ಬಳಸುತ್ತಾರೆ. ಆದರೆ ನೀವು ಬಳಸುವಂತಹ ಈ ಕಾಂಡೋಮ್ (Condom Cause Cancer) ಹಾಗೂ ಲೂಬ್ರಿಕೆಂಟ್‍ಗಳಲ್ಲಿ ಬಂಜೆತನ, ಕ್ಯಾನ್ಸರ್ ಸೇರಿದಂತೆ ಇತರ ಸಮಸ್ಯೆಗಳಿಗೆ ಕಾರಣವಾಗುವ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ!

ಕಾಂಡೋಮ್‍ಗಳು ಮತ್ತು ಲೂಬ್ರಿಕೆಂಟ್‍ಗಳ ಹಲವಾರು ಪ್ರಸಿದ್ಧ ಬ್ರಾಂಡ್‍ಗಳಲ್ಲಿ ಈ ವಿಷಕಾರಿ ಪಿಎಫ್ಎಎಸ್ ರಾಸಾಯನಿಕಗಳ ಅಪಾಯಕಾರಿ ಮಟ್ಟಲ್ಲಿದೆ ಎಂಬುದನ್ನು ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ. ಗ್ರಾಹಕ ನ್ಯಾಯವಾದಿ ಸಂಸ್ಥೆಯಾದ ಮಾಮಾವೇಶನ್ ನಡೆಸಿದ ಸಂಶೋಧನೆಯು ಈ ಉತ್ಪನ್ನಗಳಿಗೆ ಸಂಬಂಧಿಸಿದ ಗಮನಾರ್ಹ ಆರೋಗ್ಯ ಅಪಾಯಗಳನ್ನು ಬಹಿರಂಗಪಡಿಸಿದೆ. ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ ಪ್ರಯೋಗಾಲಯವು ನಡೆಸಿದ ಅಧ್ಯಯನವು ಟ್ರೋಜನ್ ಅಲ್ಟ್ರಾ ಥಿನ್ ಕಾಂಡೋಮ್‍ಗಳು ಮತ್ತು ಕೆ-ವೈ ಜೆಲ್ಲಿ ಕ್ಲಾಸಿಕ್ ವಾಟರ್ ಬೇಸಡ್ ಫರ್ಸನಲ್ ಲೂಬ್ರಿಕೆಂಟ್ ಸೇರಿದಂತೆ ವಿವಿಧ ಸಂತಾನೋತ್ಪತ್ತಿಗೆ ಸಂಬಂಧಿಸಿದ ಆರೋಗ್ಯ ಉತ್ಪನ್ನಗಳಲ್ಲಿ ಪಿಎಫ್ಎಎಸ್ ಅನ್ನು ಪತ್ತೆ ಮಾಡಿದೆ.

ಟ್ರೋಜನ್ ಅಲ್ಟ್ರಾ ಥಿನ್ ಕಾಂಡೋಮ್‍ಗಳು ಮತ್ತು ಯೂನಿಯನ್ ಸ್ಟ್ಯಾಂಡರ್ಡ್ ಅಲ್ಟ್ರಾ ಥಿನ್ ಲೂಬ್ರಿಕೇಟೆಡ್ ಮೇಲ್ ಲ್ಯಾಟೆಕ್ಸ್ ಕಾಂಡೋಮ್‍ಗಳಲ್ಲಿ ಪಿಎಫ್ಎಎಸ್ ಮಟ್ಟವು ವಿಶೇಷವಾಗಿ ಹೆಚ್ಚಾಗಿದೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಇತರ ಲೂಬ್ರಿಕೆಂಟ್‍ಗಳಾದ ಲೋಲಾ ಟಿಂಗ್ ಲಿಂಗ್ ಮಿಂಟ್ ಪ್ಲೆಷರ್ ಜೆಲ್ ಸಹ ಈ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿವೆ ಎನ್ನಲಾಗಿದೆ.

ಪಿಎಫ್ಎಎಸ್ ಎಂಬುದು ನೀರು, ಕಲೆಗಳು ಮತ್ತು ಶಾಖ ನಿರೋಧಕ ಉತ್ಪನ್ನಗಳನ್ನು ತಯಾರಿಸಲು ಬಳಸುವ ಸುಮಾರು 15,000 ಸಂಶ್ಲೇಷಿತ ರಾಸಾಯನಿಕಗಳ ಗುಂಪು. ಅವುಗಳನ್ನು “ಫಾರೇವರ್ ಕೆಮಿಕಲ್ಸ್” ಎಂದು ಕರೆಯಲಾಗುತ್ತದೆ. ಏಕೆಂದರೆ ಅವು ಪರಿಸರದಲ್ಲಿ ನೈಸರ್ಗಿಕವಾಗಿ ಕರಗುವುದಿಲ್ಲ ಮತ್ತು ಮಾನವ ದೇಹದಲ್ಲಿ ಸಂಗ್ರಹವಾಗುವಂತಹ ರಾಸಾಯನಿಕವಾಗಿದೆ. ಹಾಗಾಗಿ ಪಿಎಫ್ಎಎಸ್ ಅನ್ನು ಹೆಚ್ಚು ಬಳಸುವುದರಿಂದ ಕ್ಯಾನ್ಸರ್, ಯಕೃತ್ತಿನ ಹಾನಿ, ಥೈರಾಯ್ಡ್ ಸಮಸ್ಯೆಗಳು, ಜನನ ದೋಷಗಳು ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು. ಅಲ್ಲದೇ ಇಂತಹ ಕಾಂಡೋಮ್‍ಗಳು ಮತ್ತು ಲೂಬ್ರಿಕೆಂಟ್‍ಗಳನ್ನು ಶಿಶ್ನ ಮತ್ತು ಯೋನಿಯಂತಹ ತುಂಬಾ ಸೂಕ್ಷ್ಮ ಪ್ರದೇಶಗಳಿಗೆ ಬಳಸುವುದರಿಂದ ಹೆಚ್ಚು ಆತಂಕಕಾರಿಯಾಗಿದೆ. ಯಾಕೆಂದರೆ ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಅವು ರಾಸಾಯನಿಕಗಳನ್ನು ಸುಲಭವಾಗಿ ಹೀರಿಕೊಳ್ಳಬಲ್ಲವು. ಅಲ್ಲದೇ ಈ ರಾಸಾಯನಿಕಗಳ ಕಾಂಡೋಮ್ ಬಳಕೆ ಮಾಡುವುದರಿಂದ ಸ್ತ್ರೀ ಸಂತಾನೋತ್ಪತ್ತಿಯ ನಾಳವು ಹಾನಿಗೊಳಗಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ತಂದೆಯ ಜೀವ ಉಳಿಸಲು ಮೊಸಳೆ ಬಾಯಿಗೆ ಕೈ ಹಾಕಿದ ಬಾಲಕ!

ಈ ರಾಸಾಯನಿಕಗಳನ್ನು ತಮ್ಮ ಉತ್ಪನ್ನಗಳಿಂದ ತೆಗೆದುಹಾಕಲು ಕೈಗಾರಿಕೆಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಸಂಭವಿಸಬಹುದಾದ ಆರೋಗ್ಯ ಅಪಾಯಗಳನ್ನು ತಡೆಗಟ್ಟಲು ಕಾಂಡೋಮ್ ಮತ್ತು ಲೂಬ್ರಿಕೆಂಟ್‍ಗಳಿಂದ ಪಿಎಫ್ಎಎಸ್ ಅನ್ನು ತೆಗೆದುಹಾಕಲು ತಕ್ಷಣದ ಕ್ರಮಕ್ಕೆ ಮಾಮಾವತಿ ಕರೆ ನೀಡುತ್ತಿದೆ. ತಯಾರಕರು ತಮ್ಮ ಉತ್ಪನ್ನಗಳಿಂದ ಈ ಹಾನಿಕಾರಕ ರಾಸಾಯನಿಕಗಳನ್ನು ತೆಗೆದುಹಾಕುವ ಮೂಲಕ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸಂಸ್ಥೆ ಒತ್ತಾಯಿಸುತ್ತಿದೆ.

Continue Reading

ಆರೋಗ್ಯ

In Vitro Fertilization: ಐವಿಎಫ್ ವಿಧಾನದಿಂದ ಮಕ್ಕಳಾಗುವುದು ಹೇಗೆ? ಇದಕ್ಕೆ ಎಷ್ಟು ವೆಚ್ಚವಾಗುತ್ತದೆ?

ಬಂಜೆತನದ ಸಮಸ್ಯೆಗಳನ್ನು ಎದುರಿಸುತ್ತಿರುವ ಪೋಷಕರಾಗ ಬಯಸುವ ದಂಪತಿಗೆ ಐವಿಎಫ್ (In Vitro Fertilization) ಆಶಾಕಿರಣವಾಗಿದೆ. ಆದರೆ ಚಿಕಿತ್ಸೆಯ ದುಬಾರಿ ವೆಚ್ಚದಿಂದಾಗಿ ಇದು ಕೇವಲ ಶ್ರೀಮಂತರ ಕೈಗೆ ಮಾತ್ರ ಎಟಕುವಂತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಬೇಡಿಕೆ ಪಡೆಯಲಿದೆ. ಸಾಕಷ್ಟು ದಂಪತಿ ಈ ವಿಧಾನದಿಂದ ಮಕ್ಕಳನ್ನು ಪಡೆಯುತ್ತಿದ್ದಾರೆ. ಏನಿದು ಐವಿಎಫ್? ಈ ಕುರಿತ ಸರಳ ಮಾಹಿತಿ ಇಲ್ಲಿದೆ.

VISTARANEWS.COM


on

By

In Vitro Fertilization
Koo

ತಾಯಿಯಾಗಬೇಕು (Motherhood) ಎನ್ನುವ ಕನಸು ಎಲ್ಲ ಮಹಿಳೆಯರಲ್ಲೂ ಇರುತ್ತದೆ. ಆದರೆ ಕೆಲವು ತೊಂದೆರೆಗಳಿಂದ ಕೆಲವು ಮಹಿಳೆಯರಿಗೆ ಈ ಸೌಭಾಗ್ಯ ಪ್ರಾಪ್ತವಾಗುವುದಿಲ್ಲ. ಆದರೆ ಈಗ ಬೆಳೆದಿರುವ ತಂತ್ರಜ್ಞಾನ ಬಂಜೆತನದ (Infertility) ಸವಾಲುಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಆಶಾಕಿರಣವಾಗಿದೆ. ಇನ್ ವಿಟ್ರೋ ಫರ್ಟಿಲೈಸೇಶನ್ (In Vitro Fertilization) ಇತ್ತೀಚಿನ ದಿನಗಳಲ್ಲಿ ಪೋಷಕರಾಗ ಬಯಸುವ ದಂಪತಿಗೆ ವರದಾನವಾಗಿದೆ.

ಗರ್ಭಧಾರಣೆಯ ತೊಂದರೆಗಳನ್ನು ಎದುರಿಸುತ್ತಿರುವವರಿಗೆ ವೈದ್ಯಕೀಯ ತಂತ್ರಜ್ಞಾನದಲ್ಲಿ ನಡೆದಿರುವ ಈ ಬೆಳವಣಿಗೆಯು ಜಾಗತಿಕ ಮರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿದೆ. ಜಾಗತಿಕವಾಗಿ ಐವಿಎಫ್ ಮಾರುಕಟ್ಟೆಯು 2026 ರ ವೇಳೆಗೆ 36.2 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಯಿದೆ.

ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಐವಿಎಫ್ ವಲಯವು ಗಮನಾರ್ಹವಾಗಿ ಬೆಳವಣಿಗೆ ಕಾಣುತ್ತಿದೆ. ಭಾರತದಲ್ಲಿ ಐವಿಎಫ್ ಚಿಕಿತ್ಸೆಗೆ ಕನಿಷ್ಠ ಸರಾಸರಿ 2 ಲಕ್ಷ ರೂ. ನಿಂದ 6 ಲಕ್ಷ ರೂ. ವರೆಗೆ ವೆಚ್ಚವಾಗುತ್ತದೆ. ಆದರೆ ಆಸ್ಪತ್ರೆಯ ಖ್ಯಾತಿ, ವೈದ್ಯರ ಅರ್ಹತೆ ಮತ್ತು ಬಂಜೆತನದ ತೀವ್ರತೆಯಂತಹ ಅಂಶಗಳ ಆಧಾರದ ಮೇಲೆ ಬದಲಾಗುತ್ತದೆ.

ಭಾರತದಲ್ಲಿ ಪ್ರಸ್ತುತ ಈ ಚಿಕಿತ್ಸೆಗೆ ಗರಿಷ್ಠ ಸರಿಸುಮಾರು 5- 6 ಲಕ್ಷ ರೂ. ವೆಚ್ಚವಾಗುತ್ತಿದ್ದು, ಇದರ ಮಾರುಕಟ್ಟೆ ಮೌಲ್ಯವು 2030 ರ ವೇಳೆಗೆ 66.37 ಕೋಟಿ ರೂ. ಗಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ.

In Vitro Fertilization
In Vitro Fertilization


ಭಾರತದಲ್ಲಿ ಯಶಸ್ಸಿನ ಪ್ರಮಾಣ ಎಷ್ಟು?

ಪ್ರಸ್ತುತ ಭಾರತದಲ್ಲಿ ಇದರ ಯಶಸ್ಸಿನ ಪ್ರಮಾಣ ಸುಧಾರಿಸುತ್ತಿದೆ. ಪೋಷಕರ ವಯಸ್ಸನ್ನು ಆಧರಿಸಿ ಜನನ ದರಗಳು ಶೇ. 30ರಿಂದ ಶೇ. 35ರಷ್ಟಿದೆ.

ಐವಿಎಫ್ ಎಂದರೇನು?

ಐವಿಎಫ್ ಅಥವಾ ಇನ್ ವಿಟ್ರೊ ಫರ್ಟಿಲೈಸೇಶನ್ ಬಂಜೆತನದಿಂದ ಹೋರಾಡುತ್ತಿರುವ ವ್ಯಕ್ತಿಗಳು ಅಥವಾ ದಂಪತಿ ಮಗುವನ್ನು ಪಡೆಯಲು ಸಹಾಯ ಮಾಡುವ ವೈದ್ಯಕೀಯ ವಿಧಾನವಾಗಿದೆ. ಇದು ಮಹಿಳೆಯ ಅಂಡಾಶಯದಿಂದ ಮೊಟ್ಟೆಗಳನ್ನು ಪಡೆದು ಪ್ರಯೋಗಾಲಯದ ವ್ಯವಸ್ಥೆಯಲ್ಲಿ ವೀರ್ಯದೊಂದಿಗೆ ಅವುಗಳನ್ನು ಫಲವತ್ತಾಗಿಸಿ ಅನಂತರ ಭ್ರೂಣವನ್ನಾಗಿ ಮಾಡಿ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಯು ವಿವಿಧ ಫಲವತ್ತತೆಯ ಅಡೆತಡೆಗಳನ್ನು ತಡೆಯುತ್ತದೆ.

ಹೇಗಿರುತ್ತದೆ ಐವಿಎಫ್ ಪ್ರಕ್ರಿಯೆ?

ಐವಿಎಫ್ ಪ್ರಕ್ರಿಯೆಯು ಹಲವಾರು ಹಂತಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಹಂತವೂ ಚಿಕಿತ್ಸೆಯ ಯಶಸ್ಸಿಗೆ ನಿರ್ಣಾಯಕವಾಗಿರುತ್ತದೆ. ಆರಂಭಿಕ ಹಾರ್ಮೋನ್ ಪ್ರಚೋದನೆಯಿಂದ ಅಂತಿಮ ಗರ್ಭಧಾರಣೆಯ ಪರೀಕ್ಷೆಯವರೆಗೆ ಪೋಷಕರಾಗಬೇಕು ಎಂದು ಬಯಸುವ ದಂಪತಿ ಅದನ್ನು ಅರ್ಥಮಾಡಿಕೊಳ್ಳುವುದು, ತಾಳ್ಮೆಯಿಂದ ಕಾಯುವುದು ಬಹುಮುಖ್ಯವಾಗಿರುತ್ತದೆ.

ಇದರಲ್ಲಿ ಮುಖ್ಯವಾಗಿ ಆರಂಭಿಕ ಸಮಾಲೋಚನೆ, ರೋಗನಿರ್ಣಯ ಪರೀಕ್ಷೆಗಳು, ಚಿಕಿತ್ಸೆಯ ಯೋಜನೆ, ಅಂಡಾಶಯದ ಪ್ರಚೋದನೆ, ಟ್ರಿಗ್ಗರ್ ಚುಚ್ಚುಮದ್ದು, ಮೊಟ್ಟೆ ಮರುಪಡೆಯುವಿಕೆ, ವೀರ್ಯಾಣು ಸಂಗ್ರಹ, ಫಲೀಕರಣ, ಭ್ರೂಣ ಬೆಳವಣಿಗೆ, ಪೂರ್ವನಿಯೋಜಿತ ಜೆನೆಟಿಕ್ ಟೆಸ್ಟಿಂಗ್ (PGT), ಪ್ರೆಗ್ನೆನ್ಸಿ ಟೆಸ್ಟ್ ಮೊದಲಾದವುಗಳನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆಯ ಉದ್ದಕ್ಕೂ ವೈದ್ಯಕೀಯ ತಂಡವು ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುತ್ತದೆ. ಐವಿಎಫ್ ನ ಸಂಕೀರ್ಣವೆಂದು ತೋರುತ್ತದೆಯಾದರೂ ತಜ್ಞರು ಇದನ್ನು ಪೋಷಕರಾಗ ಬಯಸುವ ದಂಪತಿಗೆ ಸಾಧ್ಯವಾದಷ್ಟು ಸುಲಭವಾಗುವಂತೆ, ಅರ್ಥವಾಗುವಂತೆ ವಿವರಿಸುತ್ತಾರೆ.

In Vitro Fertilization
In Vitro Fertilization


ತಿಳಿದಿರಲಿ

ಐವಿಎಫ್ ಪ್ರಕ್ರಿಯೆಗೆ ಒಳಗಾಗ ಬಯಸುವವರು ಐವಿಎಫ್ ಪ್ರಕ್ರಿಯೆ, ಸಂಭಾವ್ಯ ಅಪಾಯಗಳು ಮತ್ತು ಯಶಸ್ಸಿನ ದರಗಳನ್ನು ಮೊದಲು ತಿಳಿದುಕೊಳ್ಳಬೇಕು. ಇದಕ್ಕಾಗಿ ತಜ್ಞರನ್ನು ಸಂಪರ್ಕಿಸಿ.

ಸರಿಯಾದ ಚಿಕಿತ್ಸೆ ಎಲ್ಲಿ ದೊರೆಯುತ್ತದೆ ಎಂಬುದನ್ನು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಕೊಳ್ಳಿ. ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದು ಬಹುಮುಖ್ಯವಾಗಿದೆ.

ವೈದ್ಯರು ಸೂಚಿಸುವ ಔಷಧಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಿ. ಅಗತ್ಯವಿದ್ದಾಗ ಭಾವನಾತ್ಮಕವಾಗಿ ಬೆಂಬಲ ಪಡೆಯಲು ಸಿದ್ದರಾಗಿರಿ.

ಇದನ್ನೂ ಓದಿ: Ear Infections During Monsoon: ಮಳೆಗಾಲದಲ್ಲಿ ಕಾಡುವ ಕಿವಿನೋವಿನಿಂದ ಮುಕ್ತರಾಗಲು ಸರಳ ಉಪಾಯ ಇಲ್ಲಿದೆ

ನಿರ್ಲಕ್ಷಿಸಬೇಡಿ

ಐವಿಎಫ್ ಚಿಕಿತ್ಸೆಯ ಕುರಿತು ಏನೇ ಸವಾಲುಗಳಿದ್ದರೂ ತಜ್ಞರೊಂದಿಗೆ ಮುಕ್ತವಾಗಿ ಚರ್ಚಿಸಿ. ಯಾವುದೇ ಭಾವನೆಗಳನ್ನು ಮನದೊಳಗೆ ಇಟ್ಟುಕೊಳ್ಳಬೇಡಿ. ನಿಗ್ರಹಿಸಬೇಡಿ.

ಚಿಕಿತ್ಸೆಯ ಸಮಯದಲ್ಲಿ ದೇಹದ ಮೇಲೆ ಹೆಚ್ಚಿನ ಒತ್ತಡ ಹೇರಬೇಡಿ. ಶ್ರಮದಾಯಕ ವ್ಯಾಯಾಮ ಅಥವಾ ಚಟುವಟಿಕೆಗಳನ್ನು ತಪ್ಪಿಸಿ.

ಚಿಕಿತ್ಸೆಯ ವೇಳೆ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ತಕ್ಷಣವೇ ವೈದ್ಯರ ಗಮನಕ್ಕೆ ತನ್ನಿ.

ಸಕಾರಾತ್ಮಕ ಮನಸ್ಥಿತಿಯಲ್ಲಿ ಈ ಚಿಕಿತ್ಸೆ ಪಡೆಯಲು ಸಿದ್ಧರಾಗಿ. ಪ್ರತಿಯೊಂದು ಹಂತದಲ್ಲೂ ಭರವಸೆ ಇಟ್ಟಿರಿ.

ಎಷ್ಟು ವೆಚ್ಚವಾಗುತ್ತದೆ?

ಈ ವಿಧಾನದಿಂದ ಮಕ್ಕಳನ್ನು ಪಡೆಯಲು ಭಾರತದ ಆಸ್ಪತ್ರೆಗಳಲ್ಲಿ ಸುಮಾರು 1 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೂ ಶುಲ್ಕ ವಿಧಿಸಲಾಗುತ್ತದೆ. ಈ ವೆಚ್ವ ನುರಿತ ವೈದ್ಯರು ಮತ್ತು ಆಸ್ಪತ್ರೆಯ ಸೌಲಭ್ಯವನ್ನು ಆಧರಿಸಿದೆ.

Continue Reading

ಆರೋಗ್ಯ

Health tips Kannada: ವೃತ್ತಿನಿರತ ತಾಯಂದಿರೇ, ಖಿನ್ನತೆ ಆವರಿಸಿಕೊಳ್ಳುವ ಮೊದಲೇ ಎಚ್ಚೆತ್ತುಕೊಳ್ಳಿ!

Health tips Kannada: ಬಹಳಷ್ಟು ಹೊಸ ತಾಯಂದಿರು ಮಗು ಹುಟ್ಟುತ್ತಿದ್ದಂತೆಯೇ ಅದರ ಲಾಲನೆ ಪೋಷಣೆಯಲ್ಲೇ ಕಳೆದುಹೋಗಿ ಇದ್ದಕ್ಕಿದ್ದಂತೆ ಬೇಸರ, ಏಕತಾನತೆ, ಉದ್ವೇಗ, ಖಿನ್ನತೆ ಇತ್ಯಾದಿ ಮಾನಸಿಕ ತಲ್ಲಣಗಳನ್ನು ಅನುಭವಿಸುತ್ತಾರೆ. ಇದು ಮಗುವಿನ ಪೋಷಣೆಯ ಮೇಲೂ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಈ ಸಂದರ್ಭ ಆಕೆಯನ್ನು ಕಾಳಜಿ ಮಾಡುವ ಕುಟುಂಬ, ಜೊತೆಗಿರುವ ಸಂಗಾತಿ ಅತ್ಯಂತ ಮುಖ್ಯ. ಈ ಗಂಭೀರ ಸಮಸ್ಯೆ ಬಗ್ಗೆ ಇಲ್ಲಿದೆ ಕಳವಳಿಯ ಲೇಖನ.

VISTARANEWS.COM


on

Health tips Kannada
Koo

ಮಗುವಿನ ಹೆರಿಗೆಯ ನಂತರ ಮತ್ತೆ ಕೆಲಸಕ್ಕೆ ಮರಳುವುದು ಬಹಳ ಸವಾಲಿನ ಕೆಲಸ. ಅದರಲ್ಲೂ, ಬಾಣಂತನದ ಸಂದರ್ಭ ಆವರಿಸಿಕೊಳ್ಳುವ ಖಿನ್ನತೆಯಂತಹ (postpartum depression (PPD) ಸಮಸ್ಯೆಯೂ ಆರಂಭವಾದರೆ ಇದು ತ್ರಾಸದಾಯಕವಾದ ಪಯಣ. ಬಹಳಷ್ಟು ಹೊಸ ತಾಯಂದಿರು ಮಗು ಹುಟ್ಟುತ್ತಿದ್ದಂತೆಯೇ ಅದರ ಲಾಲನೆ ಪೋಷಣೆಯಲ್ಲೇ ಕಳೆದುಹೋಗಿ ಇದ್ದಕ್ಕಿದ್ದಂತೆ ಬೇಸರ, ಏಕತಾನತೆ, ಉದ್ವೇಗ, ಖಿನ್ನತೆ ಇತ್ಯಾದಿ ಮಾನಸಿಕ ತಲ್ಲಣಗಳನ್ನು ಅನುಭವಿಸುತ್ತಾರೆ. ಇದು ಮಗುವಿನ ಪೋಷಣೆಯ ಮೇಲೂ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಈ ಸಂದರ್ಭ ಆಕೆಯನ್ನು ಕಾಳಜಿ ಮಾಡುವ ಕುಟುಂಬ, ಜೊತೆಗಿರುವ ಸಂಗಾತಿ ಅತ್ಯಂತ ಮುಖ್ಯ.
ಮಹಿಳೆ ಗರ್ಭಿಣಿಯಾಗಿದ್ದಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾಳೆ. ತನ್ನ ದೇಹದಲ್ಲಾಗುವ ಬದಲಾವಣೆ, ತೂಕದಲ್ಲಿ ಏರಿಕೆ, ದೈಹಿಕವಾದ ನೋವುಗಳು, ಇತ್ಯಾದಿಗಳನ್ನು ದಾಟಿ ಮಗುವಿಗೆ ಜನ್ಮ ನೀಡುತ್ತಾಳೆ. ತಾಯಿಯಾಗುವುದು ಅದ್ಭುತ ಅನುಭವ, ಪ್ರಕೃತಿಯ ವಿಸ್ಮಯವೇ ಆದರೂ, ಬಹಳಷ್ಟು ಮಹಿಳೆಯರಿಗೆ ಈ ಹಂತದಲ್ಲಿ ಖಿನ್ನತೆಯಂಥ ಲಕ್ಷಣಗಳೂ ಕಂಡು ಬರುತ್ತವೆ. ಬಹಳಷ್ಟು ಮಂದಿಗೆ ಮತ್ತೆ ಕೆಲಸಕ್ಕೆ ಮರಳುವುದು ಬಹಳ ಸವಾಲಾಗಿ ಪರಿಣಮಿಸುತ್ತದೆ. ಇದರಿಂದ ಆಗುವ ಮನೋತಲ್ಲಣಗಳು, ಮಗುವನ್ನು ಮನೆಯಲ್ಲೇ ಬಿಟ್ಟು ಹೋಗುವಾಗ ಆಗುವ ಗಿಲ್ಟ್‌, ತಾಯ್ತನಕ್ಕೆ ನ್ಯಾಯ ಸಲ್ಲಿಸಲಾಗದ ಕೊರಗು, ಮನೆಯಲ್ಲಿನ ಹಾಗೂ ಕಚೇರಿಯ ಕೆಲಸಗಳನ್ನು ಸಂಭಾಳಿಸಲು ಕಷ್ಟವಾಗುವುದು, ನಿದ್ದೆಯಿಲ್ಲದ ರಾತ್ರಿಗಳು, ಮೈತುಂಬ ಕೆಲಸ, ಜೊತೆಗೆ ತನ್ನ ಆರೋಗ್ಯದ ಕಾಳಜಿ ಇತ್ಯಾದಿಗಳು ಆಕೆಯನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಬಹಳಷ್ಟು ಸಾರಿ ಇದು ಮಾನಸಿಕ ಸಮಸ್ಯೆಯತ್ತಲೂ ದೂಡುತ್ತದೆ. ಹಾಗಾಗಿ, ಹೊಸ ತಾಯಂದಿರು ಮೊದಲೇ ಇದರ ಗಂಭೀರತೆಯನ್ನು ಅರಿತುಕೊಂಡು ಜಾಗರೂಕರಾಗಿರಬೇಕು. ಇವೆಲ್ಲವುಗಳನ್ನು ನಿಭಾಯಿಸಲು ಸಾಧ್ಯವಾಗುವಂಥ ಕೆಲವು ಟಿಪ್ಸ್‌ ಇಲ್ಲಿವೆ. ಮಗು ಹುಟ್ಟಿದ, ಕೆಲಸಕ್ಕೆ ಹೊರಟ ಪ್ರತಿ ತಾಯಂದಿರೂ ಪ್ರಾಮಾಣಿಕವಾಗಿ (Health tips Kannada) ಇವನ್ನು ಪ್ರಯತ್ನಿಸಬಹುದು.

Two Serious Business Women Talking in Cafe
Young indian female employee look in distance planning

ನಿಮ್ಮ ಭಾವನೆಗಳನ್ನು ಮನಬಿಚ್ಚಿ ಹೇಳಿ

ಜೀವನದಲ್ಲಾದ ಬದಲಾವಣೆಗಳಿಂದ ಮನಸ್ಸಿನಲ್ಲಾಗುವ ಕ್ಷೋಭೆಯನ್ನು ಜೊತೆಗಿರುವ ಮಂದಿಗೆ ಬಿಡಿಸಿ ಹೇಳಿ. ಯಾವ ಭಾವನೆಯನ್ನೂ ಮುಚ್ಚಿಟ್ಟುಕೊಳ್ಳಬೇಡಿ. ನಿಮಗಾಗುತ್ತಿರಯವ ಮಾನಸಿಕ ತಲ್ಲಣಗಳನ್ನು, ಅನುಭವಗಳನ್ನು ಮನಬಿಚ್ಚಿ ಹೇಳಿದರೆ, ನೀವು ತಾಯಿಯಾಗಿ ಕರ್ತವ್ಯ ನಿರ್ವಹಿಸುವಲ್ಲಿ ಸೋತಿದ್ದೀರಿ ಎಂಬರ್ಥವಲ್ಲ.

ಮನೋವೈದ್ಯರನ್ನು ಭೇಟಿಯಾಗಿ

ಹೊಸ ತಾಯಿಯ ಮನಸ್ಸಿನ ತಲ್ಲಣಗಳು ಪ್ರಪಂಚದ ಹೊಸ ಸಂಗತಿಯೇನಲ್ಲ. ಇದು ಸಾಮಾನ್ಯ. ಇದು ಗಂಭೀರ ಸ್ವರೂಪವನ್ನು ತಾಳುತ್ತದೆ ಎನಿಸುತ್ತಿದ್ದರೆ ಖಂಡಿತವಾಗಿ ಮನೋವೈದ್ಯರನ್ನೊಮ್ಮೆ ಭೇಟಿಯಾಗಿ. ಸಲಹೆ ಪಡೆಯಿರಿ.

Happy young women sitting on couch and talking
Young indian female employee look in distance planning

ಹಿತೈಷಿಗಳನ್ನು ಸುತ್ತ ಇರಿಸಿಕೊಳ್ಳಿ

ನಿಮ್ಮನ್ನು ಅರ್ಥ ಮಾಡಿಕೊಳ್ಳುವ, ಗೆಳೆಯರು, ಕುಟುಂಬಸ್ಥರು, ಸಹೋದ್ಯೋಗಿಗಳನ್ನು ಸುತ್ತಮುತ್ತ ಇರಿಸಿಕೊಳ್ಳಿ. ನೆಗೆಟಿವ್‌ ಹರಡುವ ಮಂದಿಯನ್ನು ದೂರವಿರಿಸಿ.

ಹೊಂದುವ ಕೆಲಸ ಮಾಡಿ

ಸಾಧ್ಯವಾದರೆ ನಿಮಗೆ ಹೊಂದಿಕೆಯಾಗುವ ವೃತ್ತಿಸಮಯವನ್ನು ಕೇಳಿ ಪಡೆಯಿರಿ. ನಿಮಗೆ ಬೇರೆ ಮುಖ್ಯ ಜವಾಬ್ದಾರಿಗಳಿರುವುದರಿಂದ ಕೆಲಕಾಲ ನಿಮಗೆ ಹೊಂದುವಂಥ ವೃತ್ತಿ ಆದ್ಯತೆಯತ್ತ ಹೊರಳಿ.

Photo Of Women Talking To Each Other
Young indian female employee look in distance planning

ಸಹೋದ್ಯೋಗಿಗಳ ನೆರವು ಪಡೆಯಿರಿ

ನಿಮ್ಮ ಸಹೋದ್ಯೋಗಿಗಳ ಜೊತೆ ಮಾತನಾಡಿ. ಅವರ ಸಹಕಾರ ಪಡೆಯಿರಿ. ನಿಮ್ಮ ಅನನುಕೂಲತೆಗಳನ್ನು, ಹೊಂದಿಕೆಯಾಗದ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಿ.

ನಿಮ್ಮ ಕಾಳಜಿ ಮಾಡಿಕೊಳ್ಳಿ

ನಿಮ್ಮನ್ನು ನೀವು ಕೆಳಕ್ಕೆ ತಳ್ಳಬೇಡಿ. ಮಗುವಿನ ಆರೈಕೆ ಮಾಡಲು ನೀವು ಆರೋಗ್ಯವಾಗಿ ಪುಟಿಯುವ ಚಿಲುಮೆಯಂತಿದ್ದರೆ ಮಾತ್ರ ಸಾಧ್ಯ. ಹಾಗಾಗಿ ನಿಮ್ಮ ಕಾಳಜಿಗೆ ಸಮಯ ಕಡ್ಡಾಯವಾಗಿ ಮೀಸಲಿಡಿ. ಒಳ್ಳೆಯ ನಿದ್ದೆ, ವ್ಯಾಯಾಮ, ಪೋಷಕಾಂಶಯುಕ್ತ ಆಹಾರ, ನಿಮಗಾಗಿ ದಿನದ ಒಂದಿಷ್ಟು ಸಮಯ ಇರಲಿ.

Young indian female employee look in distance planning
Young indian female employee look in distance planning

ಚಿಕ್ಕ ಹೆಜ್ಜೆಯಿಡಿ

ಅತಿಯಾದ, ಸಾಧ್ಯವಾಗದ ಗುರಿಗಳನ್ನಿಡಬೇಡಿ. ನಿಮ್ಮ ಕೈಯಲ್ಲಿ ಸಾಧ್ಯವಾಗುವ, ತಲುಪಬಹುದಾದ ಗುರಿಗಳು ನಿಮ್ಮೆದುರಿರಲಿ. ನಿಧಾನವಾಗಿ ನಿಮ್ಮನ್ನು ನೀವು ಪಳಗಿಸಿಕೊಳ್ಳಿ. ಅವಸರ ಬೇಡ.

ನಿಮ್ಮ ಹಾಗೂ ಮಗುವಿನ ಸಮಯ

ಮಗುವಿನ ಜೊತೆಗೆ ಸಮಯ ಕಳೆಯಿರಿ. ಮಗುವಿನ ಸಣ್ಣ ಸಣ್ಣ ಬೆಳವಣಿಗೆಯಲ್ಲೂ ಹಿತ ಕಾಣಿ. ಕೆಲಸಕ್ಕೆ ಹೋಗುತ್ತಿದ್ದರೂ, ಒಂದಿಷ್ಟು ಸಮಯ ಮಗುವಿನ ಜೊತೆಗೆ ಗುಣಮಟ್ಟ್ದ ಸಮಯ ಕಳೆಯಿರಿ. ಕಚೇರಿಯಲ್ಲಿದ್ದಾಗಲೂ ಈಗಿನ ತಂತ್ರಜ್ಞಾನಗಳ ಮೂಲಕ ಮಗುವಿನ ಮೇಲೆ ಒಂದು ಕಣ್ಣಿಟ್ಟಿರಬಹುದು.

ಇದನ್ನೂ ಓದಿ: Nutrients For The Human Body: ನಮ್ಮ ದೇಹವೆಂಬ ಕಾರ್ಯಾಲಯದಲ್ಲಿ ಕೆಲಸ ಮಾಡುವ 22 ಪೋಷಕಾಂಶಗಳ ಬಗ್ಗೆ ನಿಮಗೆ ಗೊತ್ತೇ?

ಧ್ಯಾನ, ಪ್ರಾಣಾಯಾಮ ಮಾಡಿ

ಒಂದಿಷ್ಟು ಸಮಯ ಉಸಿರಾಟದ ಅಭ್ಯಾಸಗಳು, ಧ್ಯಾನ, ಪ್ರಾಣಾಯಾಮಕ್ಕೆ ಸಮಯ ಇಡಿ. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ, ನಿಮಗೆ ಅಗತ್ಯವಾಗಿ ಈ ಸಮಯದಲ್ಲಿ ಬೇಕಾಗಿರುವ ಶಾಂತಿ ನೆಮ್ಮದಿಯನ್ನು ನೀಡುತ್ತದೆ.

Continue Reading

ಆರೋಗ್ಯ

World Lung Cancer Day: ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರತಿವರ್ಷ 16 ಲಕ್ಷ ಮಂದಿ ಬಲಿ; ಇದರಿಂದ ಪಾರಾಗುವುದು ಹೇಗೆ?

World Lung Cancer Day: ವಿಶ್ವದೆಲ್ಲೆಡೆ ಪ್ರತಿವರ್ಷ ಸುಮಾರು 16 ಲಕ್ಷ ಮಂದಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆಯುತ್ತಿದ್ದಾರೆ. ಕ್ಯಾನ್ಸರ್‌ ಸಂಬಂಧಿ ಸಾವುಗಳ ಪೈಕಿ ಈ ರೋಗವೂ ಮುಂಚೂಣಿಯಲ್ಲಿದ್ದು, ಆರಂಭಿಕ ಹಂತದಲ್ಲಿ ಪತ್ತೆಯಾಗದ ಪ್ರಕರಣಗಳೇ ಹೆಚ್ಚುತ್ತಿವೆ. ಹಾಗಾಗಿ ಆಗಸ್ಟ್‌ 1ನೇ ದಿನವನ್ನು ವಿಶ್ವ ಶ್ವಾಸಕೋಶದ ಕ್ಯಾನ್ಸರ್‌ ಜಾಗೃತಿ ದಿನವನ್ನಾಗಿ ಗುರುತಿಸಲಾಗಿದೆ.

VISTARANEWS.COM


on

World Lung Cancer Day
Koo

ವಿಶ್ವದೆಲ್ಲೆಡೆ ಆಗಸ್ಟ್‌ ಮೊದಲ ದಿನವನ್ನು (World Lung Cancer Day) ಶ್ವಾಸಕೋಶದ ಕ್ಯಾನ್ಸರ್‌ ವಿರುದ್ಧದ ಜಾಗೃತಿ ದಿನವನ್ನಾಗಿ ಗುರುತಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪುಪ್ಪುಸದ ಕ್ಯಾನ್ಸರ್‌ ಪ್ರಮಾಣ ಮಿತಿಮೀರಿದ್ದು, ಆರಂಭಿಕ ಹಂತದಲ್ಲಿ ಪತ್ತೆಯಾಗದ ಪ್ರಕರಣಗಳೇ ಹೆಚ್ಚುತ್ತಿವೆ. ನಟಿ, ನಿರೂಪಕಿ ಅಪರ್ಣಾ ಅವರ ಅಕಾಲಿಕ ಸಾವು ಎಲ್ಲರ ಮನದಲ್ಲಿ ಹಸಿರಾಗಿರುವ ಹೊತ್ತಿನಲ್ಲಿ, ಈ ರೋಗದ ಕುರಿತಾದ ಜಾಗೃತಿಯನ್ನು ಹರಡುವುದು ಇನ್ನೂ ಹೆಚ್ಚಿನ ಮಹತ್ವವನ್ನು ಪಡೆದಿದೆ. ಕ್ಯಾನ್ಸರ್‌ ಸಂಬಂಧಿ ಸಾವುಗಳ ಪೈಕಿ ಈ ರೋಗವೂ ಮುಂಚೂಣಿಯಲ್ಲಿದ್ದು, ಪ್ರತಿವರ್ಷ ವಿಶ್ವದೆಲ್ಲೆಡೆ ಸುಮಾರು 16 ಲಕ್ಷ ಮಂದಿ ಇದಕ್ಕೆ ಕೊನೆಯುಸಿರೆಳೆಯುತ್ತಿದ್ದಾರೆ. ತಂಬಾಕಿನ ಚಟ ಮತ್ತು ಆನುವಂಶೀಯತೆ ಇದಕ್ಕೆ ಪ್ರಮುಖ ಕಾರಣಗಳು ಎಂಬುದು ಹೌದಾದರೂ, ಇದರ ರೋಗಿಗಳಲ್ಲಿ ಶೇ. 15ಕ್ಕಿಂತ ಹೆಚ್ಚು ಮಂದಿ ಜೀವನದಲ್ಲಿ ತಂಬಾಕನ್ನೇ ಮುಟ್ಟದವರು. ಮಹಿಳಾ ರೋಗಿಗಳಲ್ಲಿ ಶೇ. 20ಕ್ಕಿಂತ ಹೆಚ್ಚು ಮಂದಿ ಸಿಗರೇಟ್‌ ಹಿಡಿದವರೇ ಅಲ್ಲ. ಕ್ಯಾನ್ಸರ್‌ ಸಾವುಗಳ ಪೈಕಿ ಆರನೇ ಸ್ಥಾನದಲ್ಲಿದ್ದಾರೆ ಹೀಗೆ ತಂಬಾಕಿನ ಚಟ ಇಲ್ಲದವರು ಎನ್ನುವುದು ಇನ್ನೂ ಆತಂಕದ ಸಂಗತಿ. ಭಾರತದಲ್ಲಿಯೂ ತಂಬಾಕಿನ ಹತ್ತಿರವೂ ಸುಳಿಯದ ಬಹಳಷ್ಟು ಮಂದಿ ಪುಪ್ಪುಸ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ.

Doctor listens to the human lungs

ಲಕ್ಷಣಗಳೇನು?

ಈ ರೋಗ ಆರಂಭಿಕ ಹಂತದಲ್ಲಿ ಪತ್ತೆಯಾಗುವುದು ಕಡಿಮೆಯೇ. ಮೂರು ವಾರಗಳಿಂದ ವಾಸಿಯಾಗದ ಕೆಮ್ಮು, ಉಸಿರಾಟದ ತೊಂದರೆ, ಕೆಮ್ಮಿನಲ್ಲಿ ರಕ್ತ, ಎದೆನೋವು, ಕಾರಣವಿಲ್ಲದೆ ತೂಕ ಇಳಿಯುವುದು, ಮುಗಿಯದ ಸುಸ್ತು, ಆಯಾಸ, ಮೂಳೆ-ಕೀಲುಗಳಲ್ಲಿ ನೋವು, ತೀವ್ರ ಉರಿಯೂತ, ಮುಖದ ಪಾರ್ಶ್ವವಾಯು ಮುಂತಾದ ಯಾವುದೇ ಲಕ್ಷಣಗಳು ಇದ್ದರೂ ತುರ್ತಾಗಿ ವೈದ್ಯರಲ್ಲಿಗೆ ಧಾವಿಸಿ.

ಕಾರಣಗಳೇನು?

ಧೂಮಪಾನ ಮತ್ತು ತಂಬಾಕು ಇಂದಿಗೂ ಪುಪ್ಪುಸ ಕ್ಯಾನ್ಸರ್‌ನ ಕಾರಣಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಆನುವಂಶೀಯತೆಯೂ ಇದರ ಪ್ರಮುಖ ಕಾರಣಗಳಲ್ಲೊಂದು. ಇದಲ್ಲದೆ, ವ್ಯೋಮವನ್ನೆಲ್ಲ ಕವಿದಿರುವ ವಾಯು ಮಾಲಿನ್ಯ ಇದಕ್ಕೆ ದೊಡ್ಡ ಮಟ್ಟದಲ್ಲಿ ಕಾರಣವಾಗಿದೆ. ಆಸ್ಬೆಸ್ಟೋಸ್‌, ಆರ್ಸೆನಿಕ್‌, ಯುರೇನಿಯಂ, ವಾಹನಗಳ ಹೊಗೆ, ಸಿಲಿಕಾ, ಕಲ್ಲಿದ್ದಲ ಉತ್ಪನ್ನಗಳು ಮತ್ತು ಕೆಲವು ಕೈಗಾರಿಕಾ ರಾಸಾಯನಿಕಗಳು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಲ್ಲವು.
ನೇರವಾಗಿ ಧೂಮಪಾನ ಮಾಡದಿದ್ದರೂ, ಮನೆಯಲ್ಲಿ ಧೂಮಪಾನಿಗಳಿದ್ದರೆ, ಕಚೇರಿಯಲ್ಲಿ ಅಥವಾ ಸುತ್ತಮುತ್ತ ಅಂಥವರಿದ್ದರೆ, ಅದರ ಪಾರ್ಶ್ವ ಪರಿಣಾಮವಾಗಿ ಧೂಮಪಾನಿಗಳಲ್ಲದವರಿಗೂ ಕ್ಯಾನ್ಸರ್‌ ಬಂದಿರುವ ಉದಾಹರಣೆಗಳಿವೆ. ಇದೇ ಘೋರ ಪರಿಣಾಮವನ್ನು ಸರ್ವವ್ಯಾಪಿಯಾಗಿರುವ ವಾಯು ಮಾಲಿನ್ಯ ಉಂಟುಮಾಡುತ್ತಿದೆ. ಅದರಲ್ಲೂ ಘನ ಕಣಗಳು ಸಾಂದ್ರವಾಗಿರುವ (ಪಾರ್ಟಿಕಲ್‌ ಮ್ಯಾಟರ್‌) ಮಾಲಿನ್ಯ ಪುಪ್ಪುಸಗಳಿಗೆ ತೀವ್ರಹಾನಿಯನ್ನು ತರಬಲ್ಲದು. ಈ ಸೂಕ್ಷ್ಮ ಕಣಗಳು ಘನ ಮತ್ತು ದ್ರವ ಕಣಗಳ ಮಿಶ್ರಣ. ಯಾವುದೇ ಉರುವಲು ಮತ್ತು ಇಂಧನಗಳು ಸೂಸುವಂಥ ಹೊಗೆಯಿಂದ ಇವು ವಾತಾವರಣ ಸೇರುತ್ತವೆ. ಅದರಲ್ಲೂ ೨.೫ ಮೈಕ್ರಾನ್‌ಗಿಂತ (ಪಿಎಂ 2.5) ಸಣ್ಣದಾದ (ನಮ್ಮ ಕೂದಲಿನ ವ್ಯಾಸದ 1/7ರಷ್ಟು ಸೂಕ್ಷ್ಮವಾದವು!) ಕಣಗಳು ಸಿಕ್ಕಾಪಟ್ಟೆ ಅಪಾಯ ಒಡ್ಡುತ್ತವೆ. ಇವು ನಮ್ಮ ಶ್ವಾಸಕೋಶಗಳಲ್ಲಿ ಗಪ್ಪಾಗಿ ಕೂತು, ಪ್ರತಿರೋಧಕ ಶಕ್ತಿಗಳ ಹಿಡಿತಕ್ಕೂ ಸಿಗದೆ ಕ್ಯಾನ್ಸರ್‌ ತರುತ್ತಿವೆ.
ಪುಪ್ಪುಸ ಕ್ಯಾನ್ಸರ್‌ಗಳ ಪೈಕಿ ಸುಮಾರು ಶೇ. 8ರಷ್ಟು ಪ್ರಕರಣಗಳಿಗೆ ಪಿಎಂ 2.5 ಕಣಗಳೇ ಮೂಲವಾಗಿವೆ. ಇವು ಹೊರಗಿನ ವಾತಾವರಣದಲ್ಲಿ ಮಾತ್ರವಲ್ಲ, ಮನೆಯೊಳಗೂ ಇರಬಲ್ಲವು. ಸೌದೆ ಒಲೆಗಳ ಹೊಗೆಯಲ್ಲಿ, ಯಾವುದೇ ವಸ್ತುಗಳನ್ನು ಕೆಂಡದಲ್ಲಿ ಸುಟ್ಟು ಬೇಯಿಸುವಾಗಲೂ ಇವು ಹೊರಹೊಮ್ಮಬಲ್ಲವು. ಅದರಲ್ಲೂ ಹೀಗೆ ಒಲೆ ಉರಿ ಇರುವಂಥ ಸ್ಥಳಗಳಲ್ಲಿ ಚೆನ್ನಾಗಿ ಗಾಳಿ-ಬೆಳಕು ಇಲ್ಲದಿದ್ದರೆ ಸಮಸ್ಯೆ ಇನ್ನೂ ಹೆಚ್ಚುತ್ತದೆ. ಹಾಗಾಗಿ ಮನೆಯೊಳಗೆ ಹೊಗೆ ಸಾಂದ್ರವಾಗದಂತೆ ಜಾಗ್ರತೆ ಮಾಡಿ.

ಇದನ್ನೂ ಓದಿ: Vitamin D Deficiency: ನೀವು ಸಂತೋಷವಾಗಿಲ್ಲವೇ? ವಿಟಮಿನ್‌ ಡಿ ಕೊರತೆಯೂ ಇದಕ್ಕೆ ಕಾರಣವಿರಬಹುದು!

ಕಾಪಾಡಿಕೊಳ್ಳುವುದು ಹೇಗೆ?

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸುತ್ತಮುತ್ತಲಿನ ವಾಯು ಗುಣಮಟ್ಟವನ್ನು ವೃದ್ಧಿಸಿಕೊಳ್ಳುವುದು ಮಹತ್ವದ್ದು. ನಾವು ವಾಸಿಸುವ ಪ್ರದೇಶ ಆದಷ್ಟೂ ಹಸಿರಾಗಿರುವಂತೆ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ನಿಮ್ಮ ಸ್ಥಳದ ವಾಯು ಗುಣಮಟ್ಟ ಸೂಚಿಯನ್ನು ಆಗಾಗ ಪರಿಶೀಲಿಸಿ, ಅದು ಹೆಚ್ಚಿದ್ದಲ್ಲಿ ಹೊರಗಿನ ಚಟುವಟಿಕೆಯನ್ನು ಕಡಿಮೆ ಮಾಡಿ. ಯಾವುದೇ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ಓಡುವುದು, ನಡೆಯುವುದು, ವ್ಯಾಯಾಮ ಮಾಡುವುದು ಮುಂತಾದವನ್ನು ಮಾಡದಿರಿ.
ಮನೆಯೊಳಗಿನ ಗಾಳಿಯನ್ನು ಶುದ್ಧೀಕರಿಸುವಂಥ ಗಿಡಗಳನ್ನು ಇರಿಸಿಕೊಳ್ಳಿ. ಅಗತ್ಯವಿದ್ದರೆ ಏರ್‌ ಪ್ಯೂರಿಫಯರ್‌ ಬಳಸಿ. ಸುಮ್ಮನೆ ನಿಂತು ಮಾತಾಡುವಾಗ ವಾಹನದ ಎಂಜಿನ್‌ ಸ್ತಬ್ಧಗೊಳಿಸಿ. ಅದರಲ್ಲೂ ಡೀಸೆಲ್‌ ಎಂಜಿನ್‌ಗಳು ಹೆಚ್ಚಿನ ಮಾಲಿನ್ಯವನ್ನು ಉಂಟುಮಾಡುತ್ತವೆ. ಕಸವನ್ನು ಎಂದಿಗೂ ಸುಡಬೇಡಿ, ಬದಲಿಗೆ ಬೇರ್ಪಡಿಸಿ ಕಸ ಸಂಗ್ರಹಿಸುವವರಿಗೆ ನೀಡಿ. ಆರೋಗ್ಯಪೂರ್ಣವಾದ ಜೀವನಕ್ಕಾಗಿ ಸತ್ವಯುತ ಆಹಾರ ತಿನ್ನಿ, ತಪ್ಪದೆ ವ್ಯಾಯಾಮ ಮಾಡಿ.

Continue Reading
Advertisement
karnataka Weather Forecast
ಮಳೆ7 mins ago

Karnataka Weather : ಫಲ್ಗುಣಿ ಅಬ್ಬರಕ್ಕೆ ಮುಳುಗಿದ ದೇಗುಲಗಳು; ಆಗಸ್ಟ್‌ 5ರವರೆಗೆ ಭಾರಿ ಮಳೆ ಸಾಧ್ಯತೆ

Paris Olympics
ಕ್ರೀಡೆ12 mins ago

Paris Olympics: ಕ್ವಾರ್ಟರ್‌ ಫೈನಲ್‌ನಲ್ಲಿ ಸಾತ್ವಿಕ್​-ಚಿರಾಗ್​ ಜೋಡಿಗೆ ಆಘಾತಕಾರಿ ಸೋಲು

MS Dhoni
ಪ್ರಮುಖ ಸುದ್ದಿ20 mins ago

MS Dhoni: ಆ ಒಂದು ರನ್​​ ಔಟ್ ನನ್ನ ​​ ಕ್ರಿಕೆಟ್​ ವೃತ್ತಿ ಜೀವನದ ಅತ್ಯಂತ ಕೆಟ್ಟ ಕ್ಷಣ; ವಿಶ್ವ ಕಪ್​ ಆಘಾತವನ್ನು ವಿವರಿಸಿದ ಧೋನಿ

MLA Belur Gopalakrishna visits and inspects flood affected areas in hosanagara taluk
ಶಿವಮೊಗ್ಗ20 mins ago

Hosanagara News: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ

State Level hasiru nairmalya shala abhyudaya Award for Hadlubailu Government School
ಶಿವಮೊಗ್ಗ21 mins ago

Hosanagara News: ಹಡ್ಲುಬೈಲು ಸರ್ಕಾರಿ ಶಾಲೆಗೆ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ

Viral Video
Latest23 mins ago

Viral Video: ಜಲಾವೃತ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಮಹಿಳೆಗೆ ಪುಂಡರ ಕಿರುಕುಳ; ವಿಡಿಯೊ ನೋಡಿ ಜನಾಕ್ರೋಶ

Viral Video
Latest31 mins ago

Viral Video: ಪ್ರೀತಿಸಿದ ಹುಡುಗಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವಕ; ಗಾಬರಿಗೊಳಿಸುವ ವಿಡಿಯೊ

New Traffic Rules
ಕರ್ನಾಟಕ35 mins ago

New Traffic Rules: ಹೆದ್ದಾರಿಯಲ್ಲಿ ವೇಗದ ಮಿತಿ 130 ಕಿ.ಮೀ ದಾಟಿದರೆ ದಂಡ, ಜೈಲು ಶಿಕ್ಷೆ; ಇಂದಿನಿಂದಲೇ ಹೊಸ ರೂಲ್ಸ್‌

Wayanad Tragedy
Latest46 mins ago

Wayanad Tragedy: ಈ ಮುದ್ದು ವಿದ್ಯಾರ್ಥಿನಿಯರ ನಗು, ಸೈಕಲ್‌ ಸವಾರಿ ಇನ್ನೆಲ್ಲಿ? ಮಣ್ಣಿನಡಿ ಸಮಾಧಿ; ಕಣ್ಣಂಚಲಿ ನೀರು ತರಿಸುವ ವಿಡಿಯೊ

murder case
ಬೆಂಗಳೂರು50 mins ago

Murder Case : ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ4 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌