IND VS ENG | 35 ವರ್ಷಗಳ ಬಳಿಕ ಭಾರತ-ಇಂಗ್ಲೆಂಡ್​ ಮಧ್ಯೆ ಸೆಮಿಫೈನಲ್​ ಕಾದಾಟ - Vistara News

Latest

IND VS ENG | 35 ವರ್ಷಗಳ ಬಳಿಕ ಭಾರತ-ಇಂಗ್ಲೆಂಡ್​ ಮಧ್ಯೆ ಸೆಮಿಫೈನಲ್​ ಕಾದಾಟ

35 ವರ್ಷದ ಬಳಿಕ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ವಿರುದ್ಧದ ಗುರುವಾರದ ಟಿ20 ಸೆಮಿ ಸಮರದಲ್ಲಿ ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮೀ

VISTARANEWS.COM


on

t20
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಡಿಲೇಡ್​: ಭಾರತ ಮತ್ತು ಇಂಗ್ಲೆಂಡ್​ ವಿರುದ್ಧ ಗುರುವಾರ ಅಡಿಲೇಡ್​ ಮೈದಾನದಲ್ಲಿ ಸೆಮಿಫೈನಲ್​ ಕಾದಾಟ ನಡೆಯಲಿದೆ. ಉಭಯ ತಂಡಗಳಿಗೂ ಫೈನಲ್​ ಪ್ರವೇಶಿಸಲು ಈ ಪಂದ್ಯ ಮಾಡು ಇಲ್ಲ ಮಡಿ ಪಂದ್ಯವಾಗಿದೆ ಆದರೆ ಇದ್ದಕೂ ಮಿಗಿಲಾದ ಸ್ವಾರಸ್ಯಕರ ವಿಚಾರವೆಂದರೆ ಭಾರತ ಮತ್ತು ಇಂಗ್ಲೆಂಡ್​ ತಂಡಗಳು ಬರೋಬ್ಬರಿ 35 ವರ್ಷಗಳ ಬಳಿಕ ನಕೌಟ್​ನಲ್ಲಿ ಮುಖಾಮುಖಿಯಾಗುತ್ತಿರುವುದು. ಈ ಮುಖಾಮುಖಿಯಲ್ಲಿ ಏನಾಗಿತ್ತು ಎಂಬ ಮಾಹಿತಿ ಈ ಕೆಳಗೆ ವಿವರಿಸಲಾಗಿದೆ.

ಭಾರತ ಮತ್ತು ಇಂಗ್ಲೆಂಡ್​ ತಂಡ ಕೊನೆಯದಾಗಿ ಸೆಮಿಫೈನಲ್​ ಮುಖಾಮುಖಿಯಾದದ್ದು 1987ರ ಏಕದಿನ ವಿಶ್ವ ಕಪ್​ನಲ್ಲಿ. ಮುಂಬಯಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೈಕ್​ ಗ್ಯಾಟಿಂಗ್​ ಸಾರಥ್ಯದ ಇಂಗ್ಲೆಂಡ್​ ತಂಡ ಭಾರತ ವಿರುದ್ಧ 35 ರನ್​ಗಳಿಂದ ಗೆದ್ದು ಭಾರತವನ್ನು ಕೂಟದಿಂದ ಹೊರದಬ್ಬಿತು. ಇದರ ಬಳಿಕ ಭಾರತ ಮತ್ತು ಇಂಗ್ಲೆಂಡ್​ ತಂಡಗಳು ಸೆಮಿಫೈನಲ್​ನಲ್ಲಿ ಒಮ್ಮೆಯೂ ಮುಖಾಮುಖಿಯಾಗಿಲ್ಲ.

ಭಾರತ ಮತ್ತು ಇಂಗ್ಲೆಂಡ್​ ಸೆಮಿಫೈನಲ್​ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದು 1983ರ ಏಕದಿನ ವಿಶ್ವ ಕಪ್​ ಸೆಮಿಫೈನಲ್​ನಲ್ಲಿ ಮ್ಯಾಂಚೆಸ್ಟರ್​ ಮೈದಾನದಲ್ಲಿ ನಡೆದ ಈ ಸೆಣಸಾಟದಲ್ಲಿ ಕಪಿಲ್​ ಸಾರಥ್ಯದ ಟೀಮ್​ ಇಂಡಿಯಾ 6 ವಿಕೆಟ್​ ಅಂತರದಿಂದ ಆಂಗ್ಲರನ್ನು ಸದೆಬಡಿದು ಫೈನಲ್​ ಪ್ರವೇಶಿಸಿ ಚಾಂಪಿಯನ್​ ಆಗಿತ್ತು. ಇದು ಭಾರತಕ್ಕೆ ಒಲಿದ ಮೊದಲ ವಿಶ್ವ ಕಪ್​ ಕಿರೀಟವಾಗಿದೆ. ಇದೀಗ 35 ವರ್ಷದ ಬಳಿಕದ ಈ ಮುಖಾಮುಖಿಯಲ್ಲಿ ಭಾರತ ಮತ್ತೆ ಗೆದ್ದು ಫೈನಲ್​ ಪ್ರವೇಶಿಸಿ ಚಾಂಪಿಯನ್​ ಆಗಲಿದೆಯಾ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ | T20 World Cup | ಇಂಗ್ಲೆಂಡ್‌ ವಿರುದ್ಧವೂ ಪಂತ್‌ ಕಣಕ್ಕಿಳಿಯುವ ಸುಳಿವು ನೀಡಿದ ಡ್ರಾವಿಡ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Blood Pressure: ರಕ್ತದೊತ್ತಡ ನಿಯಂತ್ರಿಸಲು ಈ ಆಹಾರಗಳು ಸೂಕ್ತ

Bood Pressure: ಅತ್ಯಂತ ಅಪಾಯಕಾರಿ ಕಾಯಿಲೆಯಾಗಿ ಪ್ರಸ್ತುತ ರಕ್ತದೊತ್ತಡ ಕಾಣಿಸುತ್ತಿದೆ. ಇದನ್ನು ನಿಯಂತ್ರಿಸಲು ಆಹಾರ ಕ್ರಮದೊಂದಿಗೆ ಜೀವನ ಶೈಲಿಯನ್ನೂ ಬದಲಾಯಿಸಬೇಕಿದೆ. ಯಾವ ಆಹಾರಗಳನ್ನು, ತರಕಾರಿಗಳನ್ನು ಸೇವಿಸಿದರೆ ರಕ್ತದೊತ್ತಡ ಕಡಿಮೆ ಮಾಡಬಹುದು? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

Blood Pressure
Koo

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುತ್ತಿರುವ ಕಾಯಿಲೆ (Illness) ಮಧುಮೇಹ (diabetes) ಮತ್ತು ಅಧಿಕ ರಕ್ತದೊತ್ತಡ (Blood Pressure). ಇವೆರಡನ್ನೂ ನಿರ್ಲಕ್ಷಿಸಿದರೆ ಅಪಾಯ ಹೆಚ್ಚು. ಅದರಲ್ಲೂ ಅಧಿಕ ರಕ್ತದೊತ್ತಡವು (HIGH bp) ಸಾಮಾನ್ಯವಾಗಿ ನಾವು ಯೋಚಿಸುವುದಕ್ಕಿಂತ ಹೆಚ್ಚು ಅಪಾಯಕಾರಿಯಾಗಿರುತ್ತದೆ. ಅನಿಯಂತ್ರಿತ ರಕ್ತದೊತ್ತಡವು ಅಪಧಮನಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.


ಇಂದಿನ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ಅತಿಯಾದ ಒತ್ತಡ ಮತ್ತು ದೈಹಿಕ ನಿಷ್ಕ್ರಿಯತೆಯು ಅಧಿಕ ರಕ್ತದೊತ್ತಡಕ್ಕೆ ಮುಖ್ಯ ಕಾರಣವಾಗುತ್ತದೆ. ಆರೋಗ್ಯಕರ ರಕ್ತದೊತ್ತಡದ ಸಂಖ್ಯೆಯನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರದಿಂದ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಬಹುಮುಖ್ಯ. ಹಲವಾರು ಸರಳ ಬದಲಾವಣೆಗಳು ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೂ ನೈಸರ್ಗಿಕವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಏನು ತಿನ್ನಬೇಕು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ.

ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುವ ತರಕಾರಿಗಳನ್ನು ನಮ್ಮ ದೈನಂದಿನ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ರಕ್ತದೊತ್ತಡದ ನಿಯಂತ್ರಿಸಿಕೊಳ್ಳಬಹುದು. ಅವುಗಳು ಯಾವುದು ಗೊತ್ತೇ?


ಬೀಟ್ರೂಟ್

ಅಧ್ಯಯನಗಳ ಪ್ರಕಾರ ಬೀಟ್ರೂಟ್ ನಲ್ಲಿರುವ ನೈಟ್ರೇಟ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೀಟ್ರೂಟ್ ರಸವನ್ನು ಕುಡಿಯುವುದು ಅಥವಾ ಸಲಾಡ್, ಸೂಪ್ ಅಥವಾ ಮೇಲೋಗರಗಳಿಗೆ ಸೇರಿಸುವುದು ರಕ್ತದೊತ್ತಡವನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ.


ಹಸಿರು ಸೊಪ್ಪು ತರಕಾರಿಗಳು

ಹಸಿರು ಸೊಪ್ಪು ತರಕಾರಿಗಳು ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿವೆ. ಸೊಪ್ಪು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ. ಪಾಲಕ್, ಹಸಿರು ಬಾಳೆ ಮತ್ತು ಸಾಸಿವೆ ಗ್ರೀನ್ಸ್ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.


ಬೆಳ್ಳುಳ್ಳಿ

ಆಂಟಿಫಂಗಲ್ ಮತ್ತು ಆ್ಯಂಟಿಬಯೋಟಿಕ್ ಗುಣಗಳಿರುವ ಬೆಳ್ಳುಳ್ಳಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಕೂಡ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.


ಸಿಹಿ ಆಲೂಗಡ್ಡೆ

ಫೈಬರ್, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಹೇರಳವಾಗಿರುವ ಸಿಹಿ ಆಲೂಗಡ್ಡೆ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಬ್ರೊಕೊಲಿ

ಬ್ರೊಕೊಲಿಯನ್ನು ಆಹಾರದಲ್ಲಿ ಸೇರಿಸುವುದು ಅಧಿಕ ಬಿಪಿಯನ್ನು ನಿಯಂತ್ರಿಸಲು ಪರಿಣಾಮಕಾರಿ ಮಾರ್ಗವಾಗಿದೆ. ಕೋಸುಗಡ್ಡೆಯು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ, ಪೊಟ್ಯಾಸಿಯಮ್, ವಿಟಮಿನ್ ಕೆ, ಪ್ರೋಟೀನ್ ಮತ್ತು ಫೈಬರ್‌ನಿಂದ ಕೂಡಿದೆ.


ಆಲೂಗಡ್ಡೆ

ಆಲೂಗಡ್ಡೆ ಪೊಟ್ಯಾಸಿಯಮ್‌ನ ರಕ್ತದೊತ್ತಡ ನಿಯಂತ್ರಿಸಲು ಉತ್ತಮ ಮಾರ್ಗವಾಗಿದೆ. ಆಲೂಗಡ್ಡೆಯನ್ನು ಆಹಾರದಲ್ಲಿ ಹಲವಾರು ವಿಧದಲ್ಲಿ ಸೇರಿಸಿ ರಕ್ತದೊತ್ತಡವನ್ನು ದೂರವಿಡಬಹುದು.


ಇದನ್ನೂ ಓದಿ: Mobile Side Effect: ಅತಿಯಾದ ಮೊಬೈಲ್ ಬಳಕೆ; ಮಕ್ಕಳು ಕಿವುಡರಾಗುತ್ತಿದ್ದಾರೆ!

ಕ್ಯಾರೆಟ್

ದೃಷ್ಟಿಯ ಸಮಸ್ಯೆಯನ್ನು ನಿವಾರಿಸುವ ಕ್ಯಾರೆಟ್ ಹಲವಾರು ಪ್ರಯೋಜನಕಾರಿ ಸಸ್ಯ-ಆಧಾರಿತ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ನಿಯಂತ್ರಿತ ರಕ್ತದೊತ್ತಡ ಸೇರಿದಂತೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಅಧಿಕ ರಕ್ತದೊತ್ತಡ ಹೊಂದಿದ್ದರೆ ಇದಕ್ಕೆ ಕೇವಲ ಆಹಾರ ಮಾತ್ರ ಸಹಾಯ ಮಾಡುವುದಿಲ್ಲ. ದೈಹಿಕವಾಗಿ ಸಕ್ರಿಯವಾಗಿರುವುದು ಕೂಡ ಅಷ್ಟೇ ಅಗತ್ಯವಾಗಿದೆ. ಉಪ್ಪು ಸೇವನೆ, ಕೆಫೀನ್ ಅನ್ನು ಕಡಿಮೆ ಮಾಡುವುದು ಮತ್ತು ಒತ್ತಡದ ಮಟ್ಟವನ್ನು ನಿರ್ವಹಿಸುವುದು ಕೂಡ ಅತ್ಯಗತ್ಯ. ದೀರ್ಘಕಾಲದ ಅಧಿಕ ರಕ್ತದೊತ್ತಡ ಹೊಂದಿದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯ.

Continue Reading

ಆಹಾರ/ಅಡುಗೆ

Tips To Prevent Curd: ಮೊಸರು ಹುಳಿಯಾಗದೇ ಇರಲು ಈ ಟಿಪ್ಸ್ ಪಾಲಿಸಿ

Tips To Prevent Curd: ಮೊಸರು ಬೇಗನೆ ಹುಳಿಯಾಗುತ್ತದೆ. ಆದರೆ ಸರಿಯಾಗಿ ಸಂಗ್ರಹಿಸಿದರೆ ಅನೇಕ ದಿನಗಳವರೆಗೆ ಮೊಸರು ಹುಳಿಯಾಗುವುದನ್ನು ತಪ್ಪಿಸಬಹುದು. ಅದಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ.

VISTARANEWS.COM


on

By

Tips To Prevent Curd
Koo

ಬೇಸಿಗೆಯ (summer) ಬಿಸಿಲಿನಿಂದ ಪಾರಾಗಲು ದೇಹವನ್ನು ತಂಪು ಮಾಡುವ ಯಾವುದಾದರೂ ಪಾನೀಯ ಸಿಕ್ಕರೆ ಸಾಕು ಎಂದು ಬಯಸುತ್ತೇವೆ. ಆದರೆ ಏನೇನೋ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕಿಂತ ಮನೆಯಲ್ಲಿ ಸುಲಭವಾಗಿ ಮೊಸರು (curd) ಬೆರೆಸಿ ಮಜ್ಜಿಗೆ (buttermilk) ಮಾಡಿದರೆ ದೇಹಕ್ಕೂ ತಂಪು ಮತ್ತು ಆರೋಗ್ಯಕರವೂ ಆಗಿರುತ್ತದೆ. ಆದರೆ ಬೇಸಗೆಯಲ್ಲಿ ಒಂದೇ ಚಿಂತೆ ಆಹಾರ ಪದಾರ್ಥಗಳು ಬೇಗ ಕೆಡುತ್ತವೆ ಎಂಬುದು. ಅದರಲ್ಲೂ ಮೊಸರು ಬಹುಬೇಗನೆ ಹುಳಿಯಾಗುತ್ತದೆ. ಇದನ್ನು ತಡೆಯಲು ಕೆಲವು ಟಿಪ್ಸ್ ಗಳನ್ನು (Tips To Prevent Curd) ಪಾಲಿಸಿದರೆ ಸಾಕು.


ಬೇಸಿಗೆಯಲ್ಲಿ ವಾತಾವರಣದ ಉಷ್ಣತೆಯ ಹೆಚ್ಚಳದಿಂದಾಗಿ ತೇವಾಂಶವುಳ್ಳ ಸ್ಥಳಗಳಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತದೆ. ಇದರಿಂದ ಆಹಾರ ಪದಾರ್ಥಗಳ ಶೇಖರಣೆಯಲ್ಲಿ ಸ್ವಲ್ಪ ಅಜಾಗರೂಕತೆ ಉಂಟಾದರೂ ಆಹಾರವು ಬಹು ಬೇಗನೆ ಹಾಳಾಗುತ್ತದೆ. ಇದರಲ್ಲಿ ವಿಶೇಷವಾಗಿ ಡೈರಿ ಉತ್ಪನ್ನಗಳು.

ಮೊಸರು ಬೇಗನೆ ಹುಳಿಯಾಗುತ್ತದೆ. ಆದರೆ ಅದನ್ನು ಸರಿಯಾಗಿ ಸಂಗ್ರಹಿಸಿದರೆ ಅನೇಕ ದಿನಗಳವರೆಗೆ ಮೊಸರು ಹುಳಿಯಾಗುವುದನ್ನು ತಪ್ಪಿಸಬಹುದು. ಮಾರುಕಟ್ಟೆಯಲ್ಲಿ ಮೊಸರು ಸುಲಭವಾಗಿ ಸಿಗುತ್ತದೆಯಾದರೂ ಮನೆಯಲ್ಲಿ ತಯಾರಿಸಿದ ಮೊಸರಿಗೆ ಹೆಚ್ಚಿನವರು ಆದ್ಯತೆ ನೀಡುತ್ತಾರೆ. ಹೀಗಾಗಿ ಮನೆಯಲ್ಲಿ ತಯಾರಿಸಿದ ಮೊಸರನ್ನು ಹುಳಿಯಾಗದಂತೆ ರಕ್ಷಿಸಲು ಮತ್ತು ಸುದೀರ್ಘ ಕಾಲ ಅದು ಬಾಳಿಕೆ ಬರಲು ಅನುಸರಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ.


ಸಣ್ಣ ಭಾಗ ಮೊಸರು ಸೇರಿಸಿ

ಮೊಸರು ಹುಳಿಯಾಗದಂತೆ ತಡೆಯಲು ಒಂದು ಸುಲಭ ಮತ್ತು ಸರಳವಾದ ಉಪಾಯವೆಂದರೆ ಹಾಲಿಗೆ ಸೇರಿಸುವ ಮೊದಲು ಅದರ ಸ್ವಲ್ಪ ಭಾಗವನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಬಿಸಿ ಹಾಲಿಗೆ ಮೊಸರು ಹಾಕಬಾರದು. ಹಾಲಿಗೆ ಮೊಸರು ಹಾಕಿದ ಬಳಿಕ ಚೆನ್ನಾಗಿ ಅದನ್ನು ಮಿಕ್ಸ್ ಮಾಡಿ. ಇದರಿಂದ ಹಾಲು ಶೀಘ್ರದಲ್ಲಿ ಮೊಸರಾಗುತ್ತದೆ ಮತ್ತು ಸುದೀರ್ಘ ಅವಧಿಯವರೆಗೆ ಬಾಳಿಕೆ ಬರುತ್ತದೆ.


ಮೊಸರು ಹುಳಿ ಕಡಿಮೆ ಮಾಡಿ

ಮನೆಯಲ್ಲಿ ತಯಾರಿಸಿದ ಮೊಸರಿನ ಹುಳಿಯನ್ನು ಕಡಿಮೆ ಮಾಡಲು ಇನ್ನೊಂದು ವಿಧಾನವೆಂದರೆ ಅದನ್ನು ಸರಿಯಾದ ವಿಧಾನದಲ್ಲಿ ಮಾಡುವುದು. ಮೊಸರಿನ ಮೇಲ್ಭಾಗ ಮತ್ತು ಅಂಚುಗಳಲ್ಲಿ ರೂಪುಗೊಳ್ಳುವ ದ್ರವವನ್ನು ತೆಗೆದುಹಾಕುವುದರಿಂದ ಹುಳಿ ಕಡಿಮೆಯಾಗುತ್ತದೆ. ಮೊಸರನ್ನು ರಾತ್ರಿಯಿಡೀ ಮಸ್ಲಿನ್ ಬಟ್ಟೆಯಲ್ಲಿ ಇಟ್ಟು ಜರಡಿಯಲ್ಲಿ ಸೋಸಿದರೆ ಆಮ್ಲೀಯತೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಹೀಗೆ ಮಾಡುವುದರಿಂದ ಮೊಸರಿನಲ್ಲಿ ಹಾಲಿನ ಘನಾಂಶಗಳು ಹೆಚ್ಚುತ್ತವೆ ಮತ್ತು ದಪ್ಪವಾಗುತ್ತವೆ. ಈ ಪ್ರಕ್ರಿಯೆಯನ್ನು ಲ್ಯಾಬ್ನೆ, ಗ್ರೀಕ್ ಮೊಸರು ಅದ್ದು ಮಾಡಲು ಬಳಸಲಾಗುತ್ತದೆ. ಇದನ್ನು ಬ್ರೆಡ್ನೊಂದಿಗೆ ತಿನ್ನಲು ರುಚಿಯಾಗಿರುತ್ತದೆ.


ಸರಿಯಾದ ಸಮಯ

ಮೊಸರನ್ನು ಬೆಳಗ್ಗೆ ಫ್ರೀಜ್ ಮಾಡುವುದು ಸರಿಯಲ್ಲ. ಇದರಿಂದ ಅದು ಹೆಚ್ಚು ದಪ್ಪವಾಗುವುದಿಲ್ಲ ಮತ್ತು ನೀರು ಬಿಡುವುದಿಲ್ಲ. ರಾತ್ರಿಯಲ್ಲೇ ಮೊಸರನ್ನು ಫ್ರೀಜ್ ಮಾಡಿದರೆ ಉತ್ತಮ. ಬೆಳಗ್ಗೆ ಅದು ಹೆಪ್ಪುಗಟ್ಟಿದಾಗ ಅದನ್ನು ಕೆಲವು ಗಂಟೆಗಳ ಕಾಲ ರೆಫ್ರಿಜರೇಟರ್ ನಲ್ಲಿ ಇರಿಸಿ. ಇದರಿಂದ ಮೊಸರು ಹೆಚ್ಚು ಹುಳಿಯಾಗುವುದಿಲ್ಲ. ಮತ್ತು ತಿನ್ನಲು ರುಚಿಯಾಗಿರುತ್ತದೆ.

ಇದನ್ನೂ ಓದಿ: Top 10 Puddings: ಭಾರತದ ಫಿರ್ನಿ, ಖೀರು, ಸಿಹಿ ಪೊಂಗಲ್‌ಗೆ ವಿಶ್ವದ ಟಾಪ್‌ 10 ತಿಂಡಿ ಪಟ್ಟಿಯಲ್ಲಿ ಸ್ಥಾನ!

ತಂಪಾದ ಸ್ಥಳದಲ್ಲಿ ಸಂಗ್ರಹಿಸಿ

ಮೊಸರನ್ನು ಬಿಸಿ ಸ್ಥಳದಲ್ಲಿಟ್ಟರೆ ಅದು ಬೇಗನೆ ಹುಳಿಯಾಗಲು ಪ್ರಾರಂಭಿಸುತ್ತದೆ. ಮೊಸರನ್ನು ಯಾವಾಗಲೂ ಕೋಣೆಯ ಉಷ್ಣಾಂಶಕ್ಕಿಂತ ಸ್ವಲ್ಪ ತಂಪಾಗಿರುವ ಸ್ಥಳದಲ್ಲಿ ಅಥವಾ ರೆಫ್ರಿಜರೇಟರ್‌ನಲ್ಲಿ ಇರಿಸಿ. ಅದರಲ್ಲೂ ಮೊಸರಿನ ಪಾತ್ರೆಯನ್ನು ಮಣ್ಣಿನ ಮಡಕೆಯಲ್ಲಿ ಇರಿಸಿ ಅಥವಾ ಎಸಿ ಅಥವಾ ಕೂಲರ್ ಹೊಂದಿರುವ ಕೋಣೆಯಲ್ಲಿ ಇಟ್ಟರೆ ಅದು ಬಹುಬೇಗನೆ ಹಾಳಾಗುವುದಿಲ್ಲ.

Continue Reading

ಆರೋಗ್ಯ

World Laughter Day 2024: ಇಂದು ವಿಶ್ವ ನಗುವಿನ ದಿನ; ನಗುನಗುತ ಬಾಳೋಣ

ನಗುವುದರಿಂದ ಆರೋಗ್ಯ ಎಷ್ಟೊಂದು ಲಾಭವಿದೆ ಗೊತ್ತೇ. ಇದನ್ನು ತಿಳಿಸಲೆಂದೇ ವಿಶ್ವದಾದ್ಯಂತ ಮೇ ತಿಂಗಳ ಮೊದಲ ಭಾನುವಾರ ವಿಶ್ವ ನಗುವಿನ ದಿನವನ್ನು (Laughter Day 2024) ಆಚರಿಸಲಾಗುತ್ತದೆ.

VISTARANEWS.COM


on

By

World Laughter Day
Koo

ಎಲ್ಲ ಕಾಯಿಲೆಗಳನ್ನು (illness) ದೂರ ಮಾಡುವ ಶಕ್ತಿ ನಗುವಿಗೆ ಇದೆ. ನಗು ನಮ್ಮ ದೇಹಾರೋಗ್ಯವನ್ನು ಮಾತ್ರವಲ್ಲ ಮನಸ್ಸಿನ ಆರೋಗ್ಯವನ್ನು (mental health) ಉತ್ತಮ ಗೊಳಿಸುತ್ತದೆ. ಹೀಗಾಗಿಯೇ ನಗುವಿನ ಪ್ರಾಮುಖ್ಯತೆಯನ್ನು ಸಾರಲು ವಿಶ್ವದಾದ್ಯಂತ ಮೇ (may) ತಿಂಗಳ ಮೊದಲ ಭಾನುವಾರ ವಿಶ್ವ ನಗುವಿನ ದಿನವನ್ನು (World Laughter Day) ಆಚರಿಸಲಾಗುತ್ತದೆ.


ಮೇ 5ರಂದು ಈ ಬಾರಿ ವಿಶ್ವ ನಗುವಿನ ದಿನವನ್ನು ಆಚರಿಸಲಾಗುತ್ತಿದೆ. ಈ ದಿನವು ಬಹಳಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಯಾಕೆಂದರೆ ಇದು ನಗುವಿನ ಅನೇಕ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.

ವಿಶ್ವ ನಗು ದಿನವನ್ನು ಮೊದಲ ಬಾರಿಗೆ 1998ರಲ್ಲಿ ಡಾ. ಮದನ್ ಕಟಾರಿಯಾ ಅವರು ಆಚರಿಸಬೇಕು ಎನ್ನುವುದನ್ನು ಪ್ರಸ್ತಾಪಿಸಿದರು. ಇದರ ಮುಖ್ಯ ಉದ್ದೇಶ ಜಾಗತಿಕ ಏಕತೆ ಮತ್ತು ಸ್ನೇಹದ ಭಾವವನ್ನು ಬೆಳೆಸುವುದಾಗಿತ್ತು. ಆದರೆ ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರಿಂದ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಸುಧಾರಿಸಲು ಪ್ರಯೋಜನಕಾರಿಯಾಗಿದೆ ಎಂಬುದು ಸಂಶೋಧನೆಗಳಿಂದ ಸಾಬೀತಾದ ಬಳಿಕ ವಿಶ್ವ ನಗುವಿನ ದಿನಾಚರಣೆಯ ಮಹತ್ವ ಮತ್ತಷ್ಟು ಹೆಚ್ಚಾಗಿದೆ.

ನಗುವಿನ ಪ್ರಯೋಜನಗಳೇನು?

ದಕ್ಷತೆ ಸುಧಾರಣೆ

ಸಂತೋಷದ ಸ್ವಭಾವ ಮತ್ತು ನಗು ಸರಳತೆಯ ಭಾವನೆಯನ್ನು ಪ್ರೋತ್ಸಾಹಿಸುವ ಮೂಲಕ ಉತ್ತಮ ಕೆಲಸದ ವಾತಾವರಣವನ್ನು ನಿರ್ಮಿಸಿ ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತದೆ.

ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ

ಒತ್ತಡವನ್ನು ಕಡಿಮೆ ಮಾಡುವ ಮೂಲಕ ನಗುವು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲ ಪಡಿಸುತ್ತದೆ. ರೋಗಗಳನ್ನು ದೂರವಿರಿಸುತ್ತದೆ. ಸಂತೋಷವನ್ನು ಸ್ವೀಕರಿಸುವ ಮನಸ್ಥಿತಿ ಇದ್ದರೆ ಜೀವನದ ಕಷ್ಟಗಳನ್ನು ಸುಲಭವಾಗಿ ನಿಭಾಯಿಸಲು ಮಾನಸಿಕವಾಗಿ ನಾವು ಸದೃಢರಾಗುತ್ತೇವೆ.

ಉತ್ತಮ ಹಾರ್ಮೋನು ಬಿಡುಗಡೆ

ನಗು ಎಂಡಾರ್ಫಿನ್‌ಗಳ ಆಗಮನವನ್ನು ಪ್ರಚೋದಿಸುತ್ತದೆ ಮತ್ತು ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್‌ನಂತಹ ಒತ್ತಡದ ಹಾರ್ಮೋನ್‌ಗಳನ್ನು ಕಡಿಮೆ ಮಾಡುತ್ತದೆ. ಇದು ನೋವನ್ನು ನಿವಾರಿಸುತ್ತದೆ, ಕ್ಯಾಲೊರಿಗಳನ್ನು ಸುಡುತ್ತದೆ ಮತ್ತು ದೇಹದಲ್ಲಿನ ಅಂಗಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಧನಾತ್ಮಕ ಚಿಂತನೆಗೆ ಪ್ರೇರಣೆ

ನಗು ಮನಸ್ಸು ಮತ್ತು ದೇಹವನ್ನು ಧನಾತ್ಮಕವಾಗಿ ಚಿಂತಿಸಲು ಪ್ರೇರಣೆ ನೀಡುತ್ತದೆ. ತೃಪ್ತಿ ಮತ್ತು ಆಸಕ್ತಿಯ ಭಾವನೆಯು ಖಿನ್ನತೆ, ಒತ್ತಡ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಇದು ಧನಾತ್ಮಕ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಮೇಲೆ ಮನಸ್ಸಿನ ಹಿಡಿತ ಸಾಧಿಸುವಂತೆ ಮಾಡುತ್ತದೆ.


ಆತ್ಮವಿಶ್ವಾಸ ವೃದ್ಧಿ

ನಗುವುದು ಮತ್ತು ಸಂತೋಷವನ್ನು ಅಳವಡಿಸಿಕೊಳ್ಳುವುದು ಸರಳ ಜೀವನಕ್ಕೆ ದಾರಿಯಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಇದು ಸಹಾಯ ಮಾಡುತ್ತದೆ. ಪ್ರ ಆತ್ಮವಿಶ್ವಾಸವನ್ನು ವೃದ್ಧಿಸಿ ಶಾಂತ ಮನೋಭಾವವನ್ನು ಬೆಳೆಸುತ್ತದೆ.

ಅಸ್ವಸ್ಥತೆ ದೂರ

ನಗುವಿನಿಂದ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ವೃದ್ಧಿಯಾಗಿ ಮಾನಸಿಕ ಅಸ್ವಸ್ಥತೆಯಿಂದ ನಮ್ಮನ್ನು ದೂರವಿರಿಸುತ್ತದೆ. ಒತ್ತಡದಂತಹ ಋಣಾತ್ಮಕ ಪರಿಣಾಮಗಳಿಂದ ನಮ್ಮನ್ನು ರಕ್ಷಿಸುತ್ತದೆ. ಒಳ್ಳೆಯ ನಗು ನಿಮ್ಮ ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯ ಉಂಟು ಮಾಡುತ್ತದೆ.

ಇದನ್ನೂ ಓದಿ: Covaxin: ಕೊವ್ಯಾಕ್ಸಿನ್‌ ಸುರಕ್ಷಿತ ಲಸಿಕೆ ಎಂದ ಭಾರತ್‌ ಬಯೋಟೆಕ್;‌ ಸೈಡ್‌ ಎಫೆಕ್ಟ್‌ ಆರೋಪದ ಬೆನ್ನಲ್ಲೇ ಸ್ಪಷ್ಟನೆ!

ಭಾವನೆಗಳ ಸಮತೋಲನ

ನಗು ನಮ್ಮಲ್ಲಿ ಭರವಸೆಯನ್ನು ಹುಟ್ಟುಹಾಕುತ್ತದೆ. ನಗು ನಮ್ಮನ್ನು ಇತರರೊಂದಿಗೆ ಸುಲಭವಾಗಿ ಹೊಂದಿಕೊಂಡು ಹೋಗಲು ಸಹಾಯ ಮಾಡುತ್ತದೆ. ಇದರಿಂದ ಆಕ್ರೋಶ ಕಡಿಮೆಯಾಗುತ್ತದೆ. ಕ್ಷಮೆಯ ಗುಣವನ್ನು ಉತ್ತೇಜಿಸುತ್ತದೆ.

ಸಂಬಂಧಗಳನ್ನು ಬಲಪಡಿಸುತ್ತದೆ

ನಗು ಸಂಬಂಧಗಳಲ್ಲಿ ಇರುವ ಹಲವಾರು ಸಮಸ್ಯೆಗಳನ್ನು ಪರಿಹರಿಸಲು, ಸಂಬಂಧಗಳನ್ನು ಬಲಪಡಿಸಲು ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

Continue Reading

ಕ್ರೀಡೆ

IPL 2024 : ಅತಿ ವೇಗದ ಬೌಲರ್​ ಮಯಾಂಕ್ ಐಪಿಎಲ್​ನಿಂದ ಔಟ್​​

IPL 2024: ಎಂಐ ವಿರುದ್ಧದ ಪಂದ್ಯದ ವೇಳೆ ಮಯಾಂಕ್ ತಂಡಕ್ಕೆ ಮರಳಿದ್ದರು. ಆದರೆ ಗಾಯ ಮತ್ತೆ ಉಲ್ಬಣಗೊಂಡ ಕಾರಣ 3.1 ಓವರ್​ಗಳ ಎಸೆದ ನಂತರ ಮೈದಾನದಿಂದ ಹೊರಗುಳಿಯಬೇಕಾಯಿತು. ಯುವ ಆಟಗಾರನ ಅಭಿಯಾನವು ಮುಗಿದಿದೆ ಎಂದು ಲ್ಯಾಂಗರ್ ಈಗ ಬಹಿರಂಗಪಡಿಸಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಲಕ್ನೊ ಸೂಪರ್​ ಜೈಂಟ್ಸ್​ ವೇಗದ ಬೌಲರ್​​ ಮಯಾಂಕ್ ಯಾದವ್ ಗಾಯದ ಸಮಸ್ಯೆ ಹೆಚ್ಚಾಗಿದ್ದು ಐಪಿಎಲ್​ನ (IPL 2024) ಉಳಿದ ಪಂದ್ಯಗಳಿಂದ ಹೊರಕ್ಕೆ ಉಳಿಯುವಂತಾಗಿದೆ. ಹಿಂದಿನ ಪಂದ್ಯದಲ್ಲಿ ಅರ್ಧದಲ್ಲೇ ಮೈದಾನದಿಂದ ಹೊರಕ್ಕೆ ಹೋಗಿದ್ದ ಅವರು ಐಪಿಎಲ್ 2024 ಋತುವಿನ ಉಳಿದ ಭಾಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ಎಲ್ಎಸ್​ಜಿ ಕೋಚ್ ಜಸ್ಟಿನ್ ಲ್ಯಾಂಗರ್ ಖಚಿತಪಡಿಸಿದ್ದಾರೆ. ಐಪಿಎಲ್ 2024 ರಲ್ಲಿ ಮಯಾಂಕ್ 2 ಪಂದ್ಯಗಳಲ್ಲಿ 6 ವಿಕೆಟ್ ಪಡೆಯುವ ಮೂಲಕ ತಮ್ಮ ಜೀವನಕ್ಕೆ ಅದ್ಭುತ ಆರಂಭ ನೀಡಿದ್ದರು. ನಂತರ ದೆಹಲಿ ವೇಗಿ ಗಾಯಗೊಂಡು 5 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ಎಂಐ ವಿರುದ್ಧದ ಪಂದ್ಯದ ವೇಳೆ ಮಯಾಂಕ್ ತಂಡಕ್ಕೆ ಮರಳಿದ್ದರು. ಆದರೆ ಗಾಯ ಮತ್ತೆ ಉಲ್ಬಣಗೊಂಡ ಕಾರಣ 3.1 ಓವರ್​ಗಳ ಎಸೆದ ನಂತರ ಮೈದಾನದಿಂದ ಹೊರಗುಳಿಯಬೇಕಾಯಿತು. ಯುವ ಆಟಗಾರನ ಅಭಿಯಾನವು ಮುಗಿದಿದೆ ಎಂದು ಲ್ಯಾಂಗರ್ ಈಗ ಬಹಿರಂಗಪಡಿಸಿದ್ದಾರೆ. ಮಯಾಂಕ್ ಅವರಿಗೆ ಸ್ಕ್ಯಾನ್ ಮಾಡಲಾಯಿತು ಮತ್ತು ಅವರು ಮೊದಲ ಗಾಯ ಮಾಡಿಕೊಂಡ ಅದೇ ಪ್ರದೇಶದಲ್ಲಿ ಅವರಿಗೆ ಸಣ್ಣ ಗಾಯವಿದೆ ಎಂದು ಎಲ್ಎಸ್​ಜಿ ಕೋಚ್ ಹೇಳಿದರು.

ಇಲ್ಲ, ಅವರು ಪ್ಲೇ-ಆಫ್​ನಲ್ಲಿ ಆಡಬಹುದೆಂದು ನಮ್ಮ ಆಶಾವಾದ ಇಟ್ಟುಕೊಂಡಿದ್ದೆವು. ಆದರೆ ನಾನು ವಾಸ್ತವವಾದಿಯೂ ಹೌದು. ಪಂದ್ಯಾವಳಿಯ ಕೊನೆ ಹಂತಕ್ಕೆ ಬರುವುದು ಅವರಿಗೆ ಕಷ್ಟಕರವಾಗಿರುತ್ತದೆ ಎಂದು ಹೇಳಿದರು.

“ಅವರು (ಮಯಾಂಕ್) ಸ್ಕ್ಯಾನ್ ಮಾಡಿಸಿಕೊಂಡಿದ್ದಾರೆ. ಅವರ ಕೊನೆಯ ಗಾಯ (ಗಾಯ) ಇದ್ದ ಪ್ರದೇಶಕ್ಕೆ ಹೋಲುವ ಪ್ರದೇಶದಲ್ಲಿ ಅವರಿಗೆ ಸಣ್ಣ ಹರಿತ ಕಂಡು ಬಂದಿದೆ. ಇದು ತುಂಬಾ ದುರದೃಷ್ಟಕರ. ಅವರು ಆಟಕ್ಕೆ ಮರಳಿದಾಗ ಅವರು ಬೀರಿದ ಪರಿಣಾಮವನ್ನು ನಾವು ನೋಡಿದ್ದೇವೆ, “ಎಂದು ಲ್ಯಾಂಗರ್ ಹೇಳಿದರು.

ಪಂದ್ಯದ ನಂತರ ಮಯಾಂಕ್ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಮಾತನಾಡಿದ್ದಾರೆ. ಅವರು ವೇಗದ ಬೌಲರ್ ಆಗಲು ಹೊರಟರೆ ಅಂತಹ ಗಾಯಗಳನ್ನು ಎದುರಿಸಬೇಕಾಗುತ್ತದೆ ಹೇಳಿದರು ಎಂದು ಲ್ಯಾಂಗರ್ ಹೇಳಿದರು.

“ವೇಗದ ಬೌಲರ್ಗಳ ಬಗ್ಗೆ ಯಾವಾಗಲೂ ಸಾಕಷ್ಟು ಚರ್ಚೆ ಇರುತ್ತದೆ. ಪಂದ್ಯದ ನಂತರ ಅವರು [ಜಸ್ಪ್ರೀತ್] ಬುಮ್ರಾ ಅವರೊಂದಿಗೆ ಮಾತನಾಡಿದ್ದಾರೆ ಎಂದು ನನಗೆ ತಿಳಿದಿದೆ. ವೇಗದ ಬೌಲರ್ ಆಗಲು ಹೊರಟರೆ ಆಗುವ ಗಾಯವನ್ನು ವಿವರಿಸಿದ್ದಾರೆ. ನನ್ನ ಅನುಭವದಲ್ಲಿ, ಪ್ರತಿಯೊಬ್ಬ ಯುವ ವೇಗದ ಬೌಲರ್, ಬಹುಶಃ ಅವರು 25 ಅಥವಾ 26 ವರ್ಷ ವಯಸ್ಸಿನವರೆಗೆ ವಿಭಿನ್ನ ಗಾಯಗಳನ್ನು ಅನುಭವಿಸಲಿದ್ದಾರೆ. ಇದು ಅತ್ಯಂತ ದುರದೃಷ್ಟಕರ. ಆದಾಗ್ಯೂ ಅವರು ಅಪಾರ ಸಾಮರ್ಥ್ಯವನ್ನು ಹೊಂದಿದ್ದಾರೆ, “ಎಂದು ಲ್ಯಾಂಗರ್ ಹೇಳಿದರು.

ಮಯಾಂಕ್ ಅವರ ವಿಚಾರದಲ್ಲಿ ಎಲ್ಎಸ್ಜಿ ತಂಡದ ಗಾಯ ನಿರ್ವಹಣೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಲ್ಯಾಂಗರ್ ಇದಕ್ಕೆ ಪ್ರತಿಕ್ರಿಯಿಸಿದ್ದು, ಅವರ ಪುನಶ್ಚೇತನವು ಉತ್ತಮವಾಗಿ ಸಾಗಿದೆ ಮತ್ತು ವೇಗಿ ನೋವು ಮುಕ್ತರಾಗಿದ್ದಾರೆ ಎಂದು ಹೇಳಿದರು.

ಅವರ ಪುನಶ್ಚೇತನ ಅತ್ಯುತ್ತಮವಾಗಿತ್ತು. ಅವರು [ಎಂಐ ವಿರುದ್ಧ] ಆಟಕ್ಕೆ ಪ್ರವೇಶಿಸಿದರು. ಪಂದ್ಯಕ್ಕೆ ಮೊದಲು ಒಂದೆರಡು ಸಮಸ್ಯೆಗಳನ್ನು ಹೊಂದಿದ್ದರು. ಸಂಪೂರ್ಣವಾಗಿ ನೋವು ಮುಕ್ತರಾಗಿದ್ದರು. ಆದ್ದರಿಂದ, ಇದು ಅವರಿಗೆ ತುಂಬಾ ಬೇಸರದ ವಿಯ. ಅವರು (ಪಂದ್ಯಾವಳಿಯ ಉಳಿದ ಭಾಗ) ಆಡದಿರುವುದು ಎಲ್ಎಸ್ಜಿಗೆ ನಿರಾಶಾದಾಯಕ ಎಂದು ಹೇಳಿದ್ದಾರೆ.

Continue Reading
Advertisement
Prajwal Revanna Case HD Revanna arrest is correct says R Ashok
ರಾಜಕೀಯ38 mins ago

Prajwal Revanna Case: ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಕೇಸ್‌; ರೇವಣ್ಣ ಬಂಧನ ಕ್ರಮ ಸರಿ ಇದೆ ಎಂದ ಆರ್.‌ ಅಶೋಕ್‌!

Vicky Pedia New reels about heat in Karnataka
ವೈರಲ್ ನ್ಯೂಸ್40 mins ago

Vicky Pedia: ʻಬಿಸಿ ಗಾಳಿ.. ಬಿಸಿ ಗಾಳಿ.. ಸಹಿ ಹಾಕಿದೆ ಬಿಸಿಲಿನಲಿʼಎಂದು ಹಾಡಿದ ವಿಕಾಸ್ ವಿಕ್ಕಿಪಿಡಿಯ: ಫ್ಯಾನ್ಸ್‌ ಫಿದಾ!

Lok Sabha Election 2024
Lok Sabha Election 202447 mins ago

Lok Sabha Election 2024: ಬಿಜೆಪಿಯ ʼಮೊಟ್ಟೆʼ ವಿಡಿಯೊ ವಿರುದ್ಧ ಕಾಂಗ್ರೆಸ್‌ ಕೆಂಡಾಮಂಡಲ; ಅಂತಹದ್ದೇನಿದೆ?

Prajwal Revanna Case Siddaramaiah tweets vote for Prajwal Full class from BJP!
ಕ್ರೈಂ59 mins ago

Prajwal Revanna Case: ಪ್ರಜ್ವಲ್‌ಗೆ ವೋಟ್‌ ಹಾಕಿ ಎಂಬ ಸಿದ್ದರಾಮಯ್ಯ ಟ್ವೀಟ್‌; ಬಿಜೆಪಿಯಿಂದ ಫುಲ್‌ ಕ್ಲಾಸ್‌!

bajrang punia Suspended
ಕ್ರೀಡೆ60 mins ago

Bajrang Punia: ಬಜರಂಗ್​ಗೆ ಅಮಾನತು ಶಿಕ್ಷೆ ವಿಧಿಸಿದ ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ; ಪ್ಯಾರಿಸ್ ಒಲಿಂಪಿಕ್ಸ್​ಗೆ ಹಿನ್ನಡೆ

Kannada New Movie Adhipatra audio rights
ಸಿನಿಮಾ1 hour ago

Kannada New Movie: ಭಾರಿ ಮೊತ್ತಕ್ಕೆ ಸೇಲ್ ಆಯ್ತು ರೂಪೇಶ್ ಶೆಟ್ಟಿ-ಜಾಹ್ನವಿ ಸಿನಿಮಾ ಆಡಿಯೊ ರೈಟ್ಸ್!

assault case
Lok Sabha Election 20241 hour ago

Assault Case : ಕಾಂಗ್ರೆಸ್‌ಗೆ ಅಲ್ಲ.. ಬಿಜೆಪಿಗೆ ಮತ ಹಾಕುವೆ ಎಂದಿದ್ದಕ್ಕೆ ರಸ್ತೆಗೆ ಎಳೆದು ತಂದು ಕೈ-ಕಾಲು ಮುರಿದರು ದುರುಳರು

Viral News
ವೈರಲ್ ನ್ಯೂಸ್1 hour ago

Viral News: ಅಣ್ಣನ ಕತ್ತು ಸೀಳಿದ ತಂಗಿ; ಮೊಬೈಲ್‌ಗಾಗಿ ನಡೀತು ಘೋರ ಕೃತ್ಯ

FIFA World Cup qualifiers
ಕ್ರೀಡೆ2 hours ago

FIFA World Cup qualifiers: ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ; ಬಲಿಷ್ಠ ಸಂಭಾವ್ಯ ತಂಡ ಪ್ರಕಟಿಸಿದ ಭಾರತ

Prajwal Revanna Case HD Revanna mobile phone seized SIT to collect technical evidence
ಕ್ರೈಂ2 hours ago

Prajwal Revanna Case: ಎಚ್.ಡಿ. ರೇವಣ್ಣ ಮೊಬೈಲ್‌ ವಶಕ್ಕೆ? ಟೆಕ್ನಿಕಲ್‌ ಎವಿಡೆನ್ಸ್‌ ಕಲೆ ಹಾಕಲು ಮುಂದಾದ ಎಸ್‌ಐಟಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌