Border dispute | ರಾಜ್ಯದ ಬಸ್‌ ಅಡ್ಡಗಟ್ಟಿ ಪುಂಡಾಟ ಮೆರೆದ ಮಹಾ ಪುಂಡರು, ಬೊಮ್ಮಾಯಿ ವಿರುದ್ಧ ಪ್ರತಿಭಟನೆ - Vistara News

ಕರ್ನಾಟಕ

Border dispute | ರಾಜ್ಯದ ಬಸ್‌ ಅಡ್ಡಗಟ್ಟಿ ಪುಂಡಾಟ ಮೆರೆದ ಮಹಾ ಪುಂಡರು, ಬೊಮ್ಮಾಯಿ ವಿರುದ್ಧ ಪ್ರತಿಭಟನೆ

ಕರ್ನಾಟಕದ ಕೆಲವು ಭಾಗಗಳು ತನ್ನವು ಎಂದು ಹೇಳಿ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿರುವ ಮಹಾರಾಷ್ಟ್ರದ ವಿರುದ್ದ ಕರ್ನಾಟಕ ಚೆನ್ನಾಗಿ ತಿರುಗೇಟು ನೀಡುತ್ತಿದೆ. ಇದನ್ನು ಸಹಿಸಲಾಗದೆ ಮಹಾರಾಷ್ಟ್ರದ ಕೆಲವರು ಪುಂಡಾಟ ಮೆರೆಯುತ್ತಿದ್ದಾರೆ.

VISTARANEWS.COM


on

ಗಡಿಯಲ್ಲಿ ಮರಾಠಿಗರ ಪುಂಡಾಟ, ಬಸ್‌ಗೆ ಮಸಿ
ಔರಂಗಾಬಾದ್‌ನಲ್ಲಿ ಬಸ್‌ ತಡೆದು ಪ್ರತಿಭಟನೆ ನಡೆಸುತ್ತಿರುವುದು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕೋಡಿ: ಮತ್ತೆ ಎದ್ದು ಬಂದಿರುವ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದಕ್ಕೆ ಕೆಲವು ಮರಾಠಿ ಪುಂಡರು ಬೆಂಕಿ ಹಚ್ಚುತ್ತಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಮರಾಠ ಮಹಾ ಸಂಘದಿಂದ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರತಿಭಟನೆ ನಡೆದಿದೆ, ಜತೆಗೆ ಕರ್ನಾಟಕದ ಬಸ್‌ಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆಯಲಾಗಿದೆ.

ಕರ್ನಾಟಕದ ಕೆಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಕಟಕಟೆ ಹತ್ತಿದ ಮಹಾರಾಷ್ಟ್ರ ಸರಕಾರ, ಅದರ ಬೆನ್ನಿಗೇ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಹೇಳಿದೆ. ಈ ನಡುವೆ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವುದೇ ಕಾರಣಕ್ಕೂ ಕರ್ನಾಟಕದ ಒಂದಿಂಚೂ ನೆಲವನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದೀಗ ಕೈಲಾಗದವನು ಮೈಪರಚಿಕೊಂಡ ಎಂಬಂತೆ ಕೆಲವು ಮರಾಠಿ ಪುಂಡರು ಬೀದಿ ರಂಪಕ್ಕೆ ಇಳಿದಿದ್ದಾರೆ. ಜತ್ತ ತಾಲೂಕಿನ 40 ಗ್ರಾಮ ಕರ್ನಾಟಕಕ್ಕೆ ಸೇರಬೇಕೆಂದು ಠರಾವು ಹೊರಡಿಸಿದ್ದರು ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಳಗಾವಿ, ನಿಪ್ಪಾಣಿ, ಖಾನಾಪುರ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದು ನೆರೆ ರಾಜ್ಯ ಹೇಳುತ್ತಿದೆ.

ಗಡಿಯಲ್ಲಿ ಮರಾಠಿಗರ ಪುಂಡಾಟ, ಬಸ್‌ಗೆ ಮಸಿ ಬಳಿದು ಪ್ರತಿಭಟನೆ

ಔರಂಗಾಬಾದ್‌ನಲ್ಲಿ ಪುಂಡಾಟ
ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ ‌ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದಲ್ಲಿ ಕರ್ನಾಟಕದ ಬಸ್‌ ತಡೆದ ಪುಂಡರು ಕಪ್ಪು ಬಸಿ ಬಳಿದಿದ್ದಾರೆ.
ನಿಪ್ಪಾಣಿ – ಔರಂಗಾಬಾದ್ ಮಧ್ಯೆ ಸಂಚರಿಸುವ ನಿಪ್ಪಾಣಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ಗೆ ಅಖಿಲ ಭಾರತೀಯ ಮರಾಠಾ ಸಂಘದ ಕಾರ್ಯಕರ್ತರು ಮಸಿ ಬಳಿದರು. ಬಸ್ಸಿನ ಮೇಲೆ ಜೈ ಮರಾಠ ಎಂದು ಬರೆದುಕೊಂಡಿದೆ.

ಇದನ್ನೂ ಓದಿ | Border Dispute | ಗಡಿ ವಿವಾದದ ವಾದಕ್ಕೇ ನಾವು ಬದ್ಧ, ಮತ್ತೊಮ್ಮೆ ಸರ್ವಪಕ್ಷ ಸಭೆಯಲ್ಲಿ ತೀರ್ಮಾನ; ಶಿಂಧೆಗೆ ಸಿಎಂ ಬೊಮ್ಮಾಯಿ ತಿರುಗೇಟು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಿಕ್ಕಬಳ್ಳಾಪುರ

Road Accident : ಲಾರಿ ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ಬೈಕ್‌ ಸವಾರರು

Road Accident : ಚಿಕ್ಕಬಳ್ಳಾಪುರದಲ್ಲಿ ಲಾರಿ ಹಾಗೂ ಬೈಕ್‌ ನಡುವೆ ಅಪಘಾತ ಸಂಭವಿಸಿದ್ದು, ಯುವಕರಿಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ವಿಜಯಪುರದಲ್ಲೂ ಟಂಟಂ ಹಾಗೂ ಬೈಕ್‌ ಮಧ್ಯೆ ಡಿಕ್ಕಿಯಾಗಿದ್ದು, ಸವಾರ ಗಂಭೀರ ಗಾಯಗೊಂಡಿದ್ದಾರೆ.

VISTARANEWS.COM


on

By

Road Accident
Koo

ಚಿಕ್ಕಬಳ್ಳಾಪುರ: ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ (Road Accident) ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಸಂತೇಕಲ್ಲಹಳ್ಳಿ ಗೇಟ್ ಬಳಿ ಅಪಘಾತ ನಡೆದಿದೆ.

ಚಿಂತಾಮಣಿ ತಾಲೂಕಿನ ಭುವನ್ (30) ಹಾಗೂ ಭಾನು ಪ್ರಕಾಶ್ (30) ಮೃತ ದುರ್ದೈವಿಗಳು. ಹೊಸಕೋಟೆ ಪಿಲ್ಲಗುಂಪೆ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ವಾಪಸ್‌ ಮನೆಗೆ ಬರುವಾಗ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಡಿವೈಎಸ್‌ಪಿ ಮುರುಳಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯುವಕರಿಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಟಂಟಂ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ

ವಿಜಯಪುರ ನಗರದ ಜಮಖಂಡಿ ರಸ್ತೆಯಲ್ಲಿ ಟಂಟಂ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದಲ್ಲಿ ಬೈಕ್, ಟಂಟಂ ಸಂಪೂರ್ಣವಾಗಿ ಜಖಂಗೊಂಡಿದೆ. ವಿಜಯಪುರ ಸಂಚಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Self Harming : ವಯಸ್ಸಲ್ಲದ ವಯಸ್ಸಲ್ಲಿ ಲವ್; 15ನೇ ವರ್ಷಕ್ಕೆ ಮದುವೆ ಆದವಳು 17ನೇ ವರ್ಷಕ್ಕೆ ಆತ್ಮಹತ್ಯೆ

ಕುಡಿತಕ್ಕೆ ಬಲಿಯಾದ ಬೊಲೆರೋ ಚಾಲಕ

ಸರ್ಕಾರಿ ಬಸ್ ಹಾಗೂ ಬೊಲೆರೋ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮದ ಬಳಿ ಎನ್ಎಚ್ 52 ರಲ್ಲಿ ಅಪಘಾತ ಸಂಭವಿಸಿದೆ. ಬೊಲೆರೋ ವಾಹನದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬಸ್‌ಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಹಿಂಬದಿಯಿಂದ ಎರ್ಟಿಗಾ ಕಾರಿಗೂ ಗುದ್ದಿದೆ. ಸದ್ಯ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಬೊಲೆರೋ ವಾಹನದ ಚಾಲಕ ಮಧ್ಯದ ಅಮಲಿನಲ್ಲಿ ವೇಗವಾಗಿ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಇನ್ನೂ ಅಪಘಾತದ ಕಾರಣ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅಪಘಾತಕ್ಕೀಡಾದ ವಾಹನಗಳ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Self Harming : ವಯಸ್ಸಲ್ಲದ ವಯಸ್ಸಲ್ಲಿ ಲವ್; 15ನೇ ವರ್ಷಕ್ಕೆ ಮದುವೆ ಆದವಳು 17ನೇ ವರ್ಷಕ್ಕೆ ಆತ್ಮಹತ್ಯೆ

Bengaluru News : ಓದು-ಬರಹ ಅಂತ ಇರಬೇಕಾದ ಬಾಲಕಿ ಪ್ರೀತಿಗೆ (Love) ಬಿದ್ದಿದ್ದಳು. ಪ್ರೀತಿ ಎಂಬ ಮಾಯೆಗೆ ಸಿಲುಕಿ ಪೋಷಕರ ವಿರೋಧದ ನಡುವೆಯು ಮದುವೆಯಾಗಿದ್ದಳು. ಆದರೆ ಕೇವಲ ಒಂದೆರಡು ವರ್ಷಗಳ ಅಂತರದಲ್ಲೇ ಪತಿ ಕಿರುಕುಳಕ್ಕೆ (Husband harassment) ಬೇಸತ್ತು ನೇಣು ಬಿಗಿದುಕೊಂಡು (Self Harming) ಮೃತಪಟ್ಟಿದ್ದಾಳೆ.

VISTARANEWS.COM


on

By

Self Harming
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ವಯಸ್ಸಲ್ಲದ ವಯಸ್ಸಲ್ಲಿ ಲವ್ ಮಾಡಿ ಮದುವೆಯಾದ (Love marriage) ಬಾಲಕಿಯೊಬ್ಬಳು ಇದೀಗ ಸಾವಿನ ಕಾದ ತಟ್ಟಿದ್ದಾಳೆ. ಬಾಲಕಿ ಜೀವನದಲ್ಲಿ ಪ್ರೀತಿ ಎಂಬ ಎರಡಕ್ಷರ ಬಿರುಗಾಳಿಯಂತೆ ಅಪ್ಪಳಿಸಿತ್ತು. 15ನೇ ವರ್ಷಕ್ಕೆ ಮದುವೆಯಾದವಳು, 17ನೇ ವರ್ಷಕ್ಕೆ ಆತ್ಮಹತ್ಯೆಗೆ (Self Harming) ಶರಣಾಗಿದ್ದಾಳೆ.

ಪತಿ ಕಿರುಕುಳಕ್ಕೆ ಬೇಸತ್ತು (Husband harassment) ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರಿನ ಕಮ್ಮಗೊಂಡನಹಳ್ಳಿಯಲ್ಲಿ ಘಟನೆ ನಡೆದಿದೆ. ಯುವಕನನ್ನು ಪ್ರೀತಿಸಿದ್ದ 17 ವರ್ಷದ ಬಾಲಕಿ, ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದಳು.

ವಿವಾಹ ಬಳಿಕ ದಂಪತಿಗೆ ಒಂದು ಮಗು ಜನನವಾಗಿತ್ತು. ಆದರೆ ಇತ್ತೀಚೆಗೆ ಪತಿ- ಪತ್ನಿಗೆ ಕಿರುಕುಳ ನೀಡುವುದು ಹೆಚ್ಚಾಗಿತ್ತು. ಇದೇ ವಿಚಾರಕ್ಕೆ ಮನನೊಂದು ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಈ ಸಂಬಂಧ ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Ismail Haniyeh: ಇಸ್ರೇಲ್‌ ಮೇಲೆ ನಡೆಯುತ್ತಾ ಭಾರೀ ಏರ್‌ಸ್ಟ್ರೈಕ್‌? ಹನಿಯೆಹ್‌ ಹತ್ಯೆ ಪ್ರತೀಕಾರಕ್ಕೆ ಇರಾನ್‌ ಸಜ್ಜು

ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿತ್ರದುರ್ಗದ ಜೆಎಂಐಟಿ ಕಾಲೇಜಿನ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಸವೇಶ್ವರ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಮನೋಜ್ (22) ಮೃತ ದುರ್ದೈವಿ.

ಚೆನ್ನರಾಯಪಟ್ಟಣ ಮೂಲದ ಮನೋಜ್ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದ. ಎಂಬಿಬಿಎಸ್‌ ಓದಲು ಆಗುತ್ತಿಲ್ಲ, ಒತ್ತಡ ಆಗುತ್ತಿದೆ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೋಜ್ ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ. ಜತೆಗೆ ಪೋಷಕರಿಗೆ ಕ್ಷಮೆ ಕೇಳಿದ್ದಾನೆ. ಡೆತ್ ನೋಟ್ ಬರೆದಿಟ್ಟು ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಎಎಸ್‌ಪಿ ಕುಮಾರಸ್ವಾಮಿ ಹಾಗೂ ಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಅವರಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Yashashree Shinde Murder: ಮುಂಬಯಿಯ ಯಶಶ್ರೀ ಶಿಂಧೆಯನ್ನು ಕರ್ನಾಟಕದ ದಾವೂದ್ ಶೇಖ್ ಕೊಂದಿದ್ದು ಹೇಗೆ? ಆಘಾತಕಾರಿ ಮಾಹಿತಿ

Yashashree Shinde Murder: ತನ್ನೊಂದಿಗೆ ಕರ್ನಾಟಕಕ್ಕೆ ಓಡಿಬಂದು ಮದುವೆಯಾಗುವಂತೆ ದಾವೂದ್‌ ಶೇಖ್, ಯಶಸ್ರೀಯನ್ನು ಸದಾ ಒತ್ತಾಯಿಸುತ್ತಿದ್ದ. ಆದರೆ ಆಕೆ ಆತನೊಂದಿಗೆ ಹೋಗಲು ಸಿದ್ಧಳಿರಲಿಲ್ಲ. ಹಲವಾರು ಸಲ ಆತನ ನಂಬರ್‌ ಅನ್ನು ಆಕೆ ಬ್ಲಾಕ್‌ ಮಾಡಿದ್ದಳು.

VISTARANEWS.COM


on

Hindu Girl Murder
Koo

ಮುಂಬಯಿ: ಮುಂಬಯಿಯ ಉರಾನ್‌ನ 20 ವರ್ಷದ ಯಶಶ್ರೀ ಶಿಂಧೆಯನ್ನು (yashashree shinde Murder) ಕೊಲೆ ಮಾಡಿದ 23 ವರ್ಷದ ಕೊಲೆಪಾತಕಿ ದಾವೂದ್ ಶೇಖ್ (Dawood Sheik), ಸಂತ್ರಸ್ತೆಯನ್ನು ಕರ್ನಾಟಕಕ್ಕೆ ಕರೆದೊಯ್ದು ಮದುವೆಯಾಗಲು ಬಯಸಿದ್ದ ಎಂಬುದು ಇದೀಗ ಗೊತ್ತಾಗಿದೆ. ಆಕೆ ನಿರಾಕರಿಸಿದ್ದರಿಂದ ಇರಿದು ಕೊಲೆ ಮಾಡಿದ್ದಾನೆ.

ತನ್ನೊಂದಿಗೆ ಕರ್ನಾಟಕಕ್ಕೆ ಓಡಿಬಂದು ಮದುವೆಯಾಗುವಂತೆ ದಾವೂದ್‌ ಶೇಖ್, ಯಶಸ್ರೀಯನ್ನು ಸದಾ ಒತ್ತಾಯಿಸುತ್ತಿದ್ದ. ಆದರೆ ಆಕೆ ಆತನೊಂದಿಗೆ ಹೋಗಲು ಸಿದ್ಧಳಿರಲಿಲ್ಲ. ಹಲವಾರು ಸಲ ಆತನ ನಂಬರ್‌ ಅನ್ನು ಆಕೆ ಬ್ಲಾಕ್‌ ಮಾಡಿದ್ದಳು. ಹೀಗಾಗಿ ಕುಪಿತಗೊಂಡು ಜುಲೈ 25ರಂದು ಮಧ್ಯಾಹ್ನ ಆಕೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಡಿಸಿಪಿ (ಅಪರಾಧ) ಅಮಿತ್ ಕಾಳೆ ಹೇಳಿದ್ದಾರೆ.

ಸಂತ್ರಸ್ತೆಯ ಕುಟುಂಬವು 2019ರಲ್ಲಿಯೇ ತಮ್ಮ ಮಗಳಿಗೆ ಕಿರುಕುಳ ನೀಡಿದ್ದಕ್ಕಾಗಿ ಶೇಖ್ ವಿರುದ್ಧ ದೂರು ದಾಖಲಿಸಿತ್ತು. ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ಶೇಖ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತ ಒಂದೂವರೆ ತಿಂಗಳು ಜೈಲಿನಲ್ಲಿ ಕಳೆದಿದ್ದ. ಜಾಮೀನು ಪಡೆದ ನಂತರ ಶೇಖ್ 2019ರಲ್ಲಿ ಉರಾನ್‌ನಲ್ಲಿ ಸ್ವಲ್ಪ ಸಮಯ ಕಳೆದಿದ್ದ. COVID-19 ಸಾಂಕ್ರಾಮಿಕದ ಸಮಯದಲ್ಲಿ ಕರ್ನಾಟಕಕ್ಕೆ ಮರಳಿದ್ದ. ಇಲ್ಲಿ ಗುರುತು ಬದಲಿಸಿಕೊಂಡು ಚಾಲಕನಾಗಿ ಕೆಲಸ ಮಾಡಿದ್ದ.

ಅದರ ನಡುವೆ ನಿರಂತರವಾಗಿ ಹುಡುಗಿಯೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸಿದ್ದ. ಯಶಶ್ರೀ ತನ್ನ ಫೋನ್‌ ನಂಬರ್‌ ಬ್ಲಾಕ್‌ ಮಾಡಿದ್ದಳು. ಬಳಿಕ ಆಕೆಯನ್ನು ಸಂಪರ್ಕಿಸಲು ತನ್ನ ಸಂಬಂಧಿ ಮೋಶಿನ್‌ನ ಮೊಬೈಲ್ ಅನ್ನು ಬಳಸಿದ್ದ.

ತನ್ನೊಂದಿಗೆ ಬರಲು ನಿರಾಕರಿಸಿದರೆ ಬಾಲಕಿಯನ್ನು ಕೊಲ್ಲುವ ಉದ್ದೇಶದಿಂದಲೇ ಶೇಖ್ ಜುಲೈ 23ರಂದು ಉರಾನ್‌ಗೆ ಮರಳಿದ್ದ. ತನ್ನನ್ನು ಭೇಟಿಯಾಗಬೇಕೆಂದು ಯಶಶ್ರೀಯನ್ನು ಒತ್ತಾಯಿಸಿದ್ದ. ಬೇಲಾಪುರದಲ್ಲಿ ಕೆಲಸ ಮಾಡುತ್ತಿದ್ದ ಯಶಶ್ರೀ, ಅರ್ಧ ದಿನ ರಜೆ ತೆಗೆದುಕೊಂಡು ಜುಲೈ 24ರಂದು ಮಧ್ಯಾಹ್ನ ಜೂಯಿ ನಗರ ರೈಲು ನಿಲ್ದಾಣದಲ್ಲಿ ಆತನನ್ನು ಭೇಟಿಯಾಗಿದ್ದಳು. ಜುಲೈ 25ರ ಬೆಳಿಗ್ಗೆ ತನ್ನನ್ನು ಮತ್ತೆ ಭೇಟಿಯಾಗುವಂತೆ ಶೇಖ್ ಆಕೆಯ ಮೇಲೆ ಒತ್ತಡ ಹೇರುತ್ತಲೇ ಇದ್ದ. ಅಂದು ಆತ ಫೇಸ್‌ಬುಕ್‌ನಲ್ಲಿ ಫೋಟೋವನ್ನು ಕೂಡ ಅಪ್‌ಲೋಡ್ ಮಾಡಿದ್ದ. ಅದನ್ನು ಅಳಿಸುವಂತೆ ಯಶಶ್ರೀ ವಿನಂತಿಸಿದ್ದಳು. ಆಕೆ ಮತ್ತೆ ಭೇಟಿಯಾದರೆ ಮಾತ್ರ ಫೋಟೋ ಅಳಿಸುವುದಾಗಿ, ಇಲ್ಲವಾದರೆ ವೈರಲ್‌ ಮಾಡುವುದಾಗಿ ಆತ ಬ್ಲ್ಯಾಕ್‌ಮೇಲ್‌ ಮಾಡಿದ್ದ. ನಂತರ ಭೇಟಿಯಾಗಲು ಆಕೆ ಒಪ್ಪಿದಾಗ ಆತ ಫೋಟೋ ಡಿಲೀಟ್ ಮಾಡಿದ್ದ.

ಜುಲೈ 25ರಂದು ಯಶಶ್ರೀ ಮತ್ತೆ ಅವನನ್ನು ಭೇಟಿಯಾದಳು. ತನ್ನೊಂದಿಗೆ ಕರ್ನಾಟಕಕ್ಕೆ ಬರುವಂತೆ ಶೇಖ್ ಆಕೆಯನ್ನು ಒತ್ತಾಯಿಸಿದ್ದ. ಆಕೆ ತನ್ನೊಂದಿಗೆ ಬರಲು ನಿರಾಕರಿಸಿದಾಗ ಶೇಖ್‌ ಸಿಟ್ಟಿಗೆದ್ದು ಕರ್ನಾಟಕದಿಂದ ತಂದಿದ್ದ ಚಾಕುವನ್ನು ಬಳಸಿ ಆಕೆಯನ್ನು ಹಲವಾರು ಬಾರಿ ಇರಿದು ಪರಾರಿಯಾಗಿದ್ದ. ಯಶಶ್ರೀ ಆ ಸಂದರ್ಭದಲ್ಲಿ ಸಹಾಯಕ್ಕಾಗಿ ತನ್ನ ಸ್ನೇಹಿತೆಯೊಬ್ಬಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಳು. ಆದರೆ ನೆಟ್‌ವರ್ಕ್‌ ಸಿಗದೆ ಹೋದುದರಿಂದ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಬಳಿಕ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ಚೂರಿಯಿಂದ ಇರಿದ ಬಳಿಕ ಶೇಖ್ ತನ್ನ ಸ್ನೇಹಿತನೊಬ್ಬನ ಬಳಿ ಹಣ ಕೇಳಿದ್ದು, ಪನ್ವೇಲ್ ರೈಲು ನಿಲ್ದಾಣದ ಬಳಿಯ ಎಟಿಎಂನಿಂದ ಹಣವನ್ನು ಡ್ರಾ ಮಾಡಿದ್ದ. ನಂತರ ಕಳಂಬೋಳಿ ವೃತ್ತಕ್ಕೆ ಆಗಮಿಸಿ ಬಸ್ಸಿನಲ್ಲಿ ಕರ್ನಾಟಕದ ಗುಲ್ಬರ್ಗಕ್ಕೆ ತೆರಳಿದ್ದ. ಜುಲೈ 30ರಂದು ಗುಲ್ಬರ್ಗ ಜಿಲ್ಲೆಯ ಶಹಾಪುರ ಬೆಟ್ಟ ಪ್ರದೇಶದಲ್ಲಿ ಶೇಖ್‌ನನ್ನು ಬಂಧಿಸಲಾಗಿತ್ತು. ಶೇಖ್‌ನನ್ನು ಪನ್ವೇಲ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಲ್ಲಿ ಆತನನ್ನು ಆಗಸ್ಟ್ 7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಜಾಮೀನು ರಹಿತ ವಾರಂಟ್

ಏತನ್ಮಧ್ಯೆ, ಪನ್ವೇಲ್ ನ್ಯಾಯಾಲಯವು 2019ರ ಪ್ರಕರಣದಲ್ಲಿ ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯ್ದೆಯಡಿಯಲ್ಲಿ ಶೇಖ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂದು ತಿಳಿದುಬಂದಿದೆ. ಶೇಖ್ ಒಂದೂವರೆ ತಿಂಗಳು ಜೈಲಿನಲ್ಲಿ ಕಳೆದಿದ್ದ. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೆ ಪನ್ವೇಲ್ ನ್ಯಾಯಾಲಯವು ಜುಲೈ 20, 2024ರಂದು ಅವನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಜುಲೈ 20ರಂದು ಪೊಲೀಸರು ಶೇಖ್‌ನನ್ನು ಏಕೆ ಬಂಧಿಸಲಿಲ್ಲ ಎಂದು ಕೇಳಿದಾಗ, ಆ ಬೆಳವಣಿಗೆಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಡಿಸಿಪಿ ಕಾಳೆ ಹೇಳಿದ್ದಾರೆ.

ಇದನ್ನೂ ಓದಿ: Hindu Girl Murder: ಯುವತಿ ಬರ್ಬರ ಕೊಲೆ ಪ್ರಕರಣ; ಹಂತಕ ದಾವೂದ್‌ ಶೇಖ್‌ ಹಿಂಬಾಲಿಸುತ್ತಿದ್ದ ಸಿಸಿಟಿವಿ ದೃಶ್ಯ ಪತ್ತೆ

Continue Reading

ಪ್ರಮುಖ ಸುದ್ದಿ

Kaveri River Flood: ಕಾವೇರಿ ನದಿಯಲ್ಲಿ ಪ್ರವಾಹ, 9 ಗ್ರಾಮಗಳ ಜನ ಸ್ಥಳಾಂತರ

Kaveri River Flood: ದಾಸನಪುರ, ಹರಳೆ, ಅಗ್ರಹಾರ, ಹಳೆ ಹಂಪಾಪುರ, ಹೊಸ ಹಂಪಾಪುರ, ಮುಳ್ಳೂರು, ಹಳೆಅಣಗಳ್ಳಿ, ಯಡಕುರಿಯ, ಧನಗೆರೆ, ಸರಗೂರು ಗ್ರಾಮಗಳು ಜಲಾವೃತವಾಗಿವೆ. ಈ 9 ಗ್ರಾಮಗಳಿಗೆ ತೆರಳದಂತೆ ಬ್ಯಾರಿಕೇಡ್ ಅಳವಡಿಸಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ದಾಸನಪುರ, ಹಳೇ ಅಣಗಳ್ಳಿ ಗ್ರಾಮಸ್ಥರನ್ನು ಕೊಳ್ಳೇಗಾಲದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

VISTARANEWS.COM


on

Kaveri River Flood
Koo

ಚಾಮರಾಜನಗರ: ಕೃಷ್ಣರಾಜಸಾಗರ ಅಣೆಕಟ್ಟು (KRS Dam) ಹಾಗು ಕಬಿನಿ‌ ಜಲಾಶಯಗಳಿಂದ (Kabini Dam) ಅಧಿಕ ನೀರು ಬಿಡುಗಡೆ (Water release) ಮಾಡಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ (Flood Situation in Kaveri River) ಉಂಟಾಗಿದ್ದು, ಚಾಮರಾಜನಗರ (Chamarajanagar) ಜಿಲ್ಲೆ ಕೊಳ್ಳೇಗಾಲ ತಾಲೂಕಿನ 9 ಗ್ರಾಮಗಳು ಜಲಾವೃತವಾಗಿವೆ.

ದಾಸನಪುರ, ಹರಳೆ, ಅಗ್ರಹಾರ, ಹಳೆ ಹಂಪಾಪುರ, ಹೊಸ ಹಂಪಾಪುರ, ಮುಳ್ಳೂರು, ಹಳೆಅಣಗಳ್ಳಿ, ಯಡಕುರಿಯ, ಧನಗೆರೆ, ಸರಗೂರು ಗ್ರಾಮಗಳು ಜಲಾವೃತವಾಗಿವೆ. ಈ 9 ಗ್ರಾಮಗಳಿಗೆ ತೆರಳದಂತೆ ಬ್ಯಾರಿಕೇಡ್ ಅಳವಡಿಸಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ದಾಸನಪುರ, ಹಳೇ ಅಣಗಳ್ಳಿ ಗ್ರಾಮಸ್ಥರನ್ನು ಕೊಳ್ಳೇಗಾಲದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಇಲ್ಲಿನ ಮನೆ, ಜಮೀನುಗಳಿಗೆ ನೀರು ನುಗ್ಗಿದೆ. 9 ಗ್ರಾಮಗಳಲ್ಲಿ ಇಂದು ಶಾಲಾಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾಗು ಇತರ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಗ್ರಾಮಸ್ಥರು ನೀರಿನ ಬಳಿ ಹೋಗದಂತೆ ಎಚ್ಚರಿಕೆ ವಹಿಸಲು ಸಿಬ್ಬಂದಿ ನಿಯೋಜಿಸಲಾಗಿದೆ. ಸಂಭವನೀಯ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದ್ದು, ದೋಣಿಗಳು ಸೇರಿದಂತೆ ರಕ್ಷಣಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಹೆಚ್ಚಿದ ಕಬಿನಿ ಜಲಾಶಯ ಒಳಹರಿವು

ಕೇರಳದ ವೈನಾಡಿನಲ್ಲಿ ಮಳೆ ಆರ್ಭಟ ಮುಂದುವರಿದ ಪರಿಣಾಮ ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಹೆಚ್‌ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಜಲಾಶಯದ ಒಳ ಹರಿವು ಹೆಚ್ಚಿದ್ದು, ಇದರಿಂದ ಹೊರ ಹರಿವಿನಲ್ಲೂ ಹೆಚ್ಚಳವಾಗಿದೆ. ಜಲಾಶಯದ ಗರಿಷ್ಟ ನೀರಿನ ಮಟ್ಟ 2284 ಅಡಿ ಹಾಗೂ ಇಂದಿನ ನೀರಿನ ಮಟ್ಟ 2281.59 ಅಡಿ. ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಉಂಟಾಗಿದ್ದು, ನದಿ ಪಾತ್ರದ ಜನತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಕಬಿನಿ, ಕೆಆರ್‌ಎಸ್ ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ತಲಕಾಡಿನ ಹೆಮ್ಮಿಗೆ ಸೇತುವೆ ಹಾಗೂ ಸುತ್ತೂರು ಸೇತುವೆಗಳು ಮುಳುಗಡೆಯಾಗಿವೆ. ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ತಾಲ್ಲೂಕಿನ ಹೆಮ್ಮಿಗೆ ಸೇತುವೆ ಮುಳುಗಡೆಯಿಂದ ತಿ. ನರಸೀಪುರ- ತಲಕಾಡು ಸಂಚಾರ ಬಂದ್ ಆಗಿದೆ. ಸೇತುವೆ ಮೇಲೆ ಎರಡು ಅಡಿಗಳಷ್ಟು ನೀರು ಹರಿಯುತ್ತಿದೆ. ಒಂದೇ ವಾರದ ಅಂತರದಲ್ಲಿ ಎರಡು ಬಾರಿ ಸೇತುವೆ ಮುಳುಗಡೆಯಾಗಿದೆ. ಸೇತುವೆಯ ಎರಡು ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಮೈಸೂರು ತಾಲ್ಲೂಕಿನ ವರುಣ ಕ್ಷೇತ್ರ ವ್ಯಾಪ್ತಿಯ ಸುತ್ತೂರು ಸೇತುವೆ ಮುಳುಗಡೆಯಿಂದ ಮೈಸೂರು ಸುತ್ತೂರು ಮಾರ್ಗದ ಸಂಚಾರ ಬಂದ್ ಆಗಿದೆ. ಸುತ್ತೂರು ಸೇರಿದಂತೆ ಅನೇಕ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಒಂದೇ ವಾರದಲ್ಲಿ ಎರಡು ಬಾರಿ ಸುತ್ತೂರು ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಅಕ್ಕ ಪಕ್ಕದ ತೆಂಗಿನ ತೋಟಕ್ಕೂ ನೀರು ನುಗ್ಗಿದೆ.

ಇದನ್ನೂ ಓದಿ: KRS Dam: ಸಂಪ್ರದಾಯಕ್ಕೆ ಎಳ್ಳು ನೀರು; ಕಾವೇರಿಗೆ ಬಾಗಿನ ಕಾರ್ಯಕ್ರಮದಲ್ಲಿ ಬಾಡೂಟ!

Continue Reading
Advertisement
Road Accident
ಚಿಕ್ಕಬಳ್ಳಾಪುರ4 mins ago

Road Accident : ಲಾರಿ ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ಬೈಕ್‌ ಸವಾರರು

IND vs SL 1st ODI
ಕ್ರೀಡೆ25 mins ago

IND vs SL 1st ODI: ವಿಶ್ವಕಪ್​ ಫೈನಲ್​ ಸೋಲಿನ ಬಳಿಕ ಮೊದಲ ಏಕದಿನ ಆಡಲು ಸಜ್ಜಾದ ಕೊಹ್ಲಿ, ರೋಹಿತ್​, ಬುಮ್ರಾ

Heavy Rain
ದೇಶ30 mins ago

Heavy Rain: ನೋಡ ನೋಡುತ್ತಿದ್ದಂತೆ ನದಿಯಲ್ಲಿ ಕೊಚ್ಚಿ ಹೋಯ್ತು ಬಹುಮಹಡಿ ಕಟ್ಟಡ; ಭೀಕರ ದೃಶ್ಯ ಇಲ್ಲಿದೆ

India Couture Week 2024 Vicky Kaushal Rashmika Mandanna turn showstoppers
ಬಾಲಿವುಡ್30 mins ago

India Couture Week 2024: ಕೌಚರ್ ವೀಕ್ ಗ್ರ್ಯಾಂಡ್ ಫಿನಾಲೆಯಲ್ಲಿ ಮಿಂಚಿದ ರಶ್ಮಿಕಾ- ವಿಕ್ಕಿ ಕೌಶಲ್!

Self Harming
ಬೆಂಗಳೂರು38 mins ago

Self Harming : ವಯಸ್ಸಲ್ಲದ ವಯಸ್ಸಲ್ಲಿ ಲವ್; 15ನೇ ವರ್ಷಕ್ಕೆ ಮದುವೆ ಆದವಳು 17ನೇ ವರ್ಷಕ್ಕೆ ಆತ್ಮಹತ್ಯೆ

Urfi Javed Octopus Dress Is The Most EPIC Thing Of The Day
ವೈರಲ್ ನ್ಯೂಸ್50 mins ago

Urfi Javed: ಚಿಟ್ಟೆ, ಬ್ರಹ್ಮಾಂಡ ಎಲ್ಲಾ ಆಯ್ತು! ಈಗ ಅಕ್ಟೋಪಸ್​​ನಂತೆ ಬಂದ ಉರ್ಫಿ!

Hindu Girl Murder
ಕ್ರೈಂ51 mins ago

Yashashree Shinde Murder: ಮುಂಬಯಿಯ ಯಶಶ್ರೀ ಶಿಂಧೆಯನ್ನು ಕರ್ನಾಟಕದ ದಾವೂದ್ ಶೇಖ್ ಕೊಂದಿದ್ದು ಹೇಗೆ? ಆಘಾತಕಾರಿ ಮಾಹಿತಿ

Terror Attack
ದೇಶ57 mins ago

Terror Attack: ಒಂದು ತಿಂಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ಉಗ್ರರ ದಾಳಿ; 14 ಯೋಧರು ಹುತಾತ್ಮ

ಕ್ರೀಡೆ59 mins ago

Paris Olympics: ನೇರಳೆ ಟ್ರ್ಯಾಕ್​ನಲ್ಲಿ ಕಮಾಲ್​ ಮಾಡಲು ಸಜ್ಜಾದ ಅಥ್ಲೀಟ್​ಗಳು

Parliament Session
ರಾಜಕೀಯ1 hour ago

Parliament Session: ಸಂಸತ್ ಅಧಿವೇಶನದಲ್ಲಿ ಪ್ರತಿಧ್ವನಿಸಲಿದೆ ವಯನಾಡು ದುರಂತ; ಕ್ಷಣ ಕ್ಷಣದ ಮಾಹಿತಿಗಾಗಿ Live ನೋಡಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ4 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ4 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ4 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌