IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ದ್ವಿತೀಯ ಪಂದ್ಯ ಮಳೆಯಿಂದ ರದ್ದು - Vistara News

Latest

IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ದ್ವಿತೀಯ ಪಂದ್ಯ ಮಳೆಯಿಂದ ರದ್ದು

ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯ ಮಳೆಯಿಂದ ರದ್ದುಗೊಂಡಿದ್ದು ಕಿವೀಸ್ ನಾಡಲ್ಲಿ ಸರಣಿ ಗೆಲ್ಲುವ ಭಾರತದ ಕನಸು ಭಗ್ನವಾಗಿದೆ.

VISTARANEWS.COM


on

No result
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವೆಲ್ಲಿಂಗ್ಟನ್​: ಪ್ರವಾಸಿ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಎರಡನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆಯೇ ಹ್ಯಾಮಿಲ್ಟನ್​ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.

ವೆಲಿಂಗ್ಟನ್​ನ ಸೀಡನ್​ ಪಾರ್ಕ್​ನಲ್ಲಿ ಏರ್ಪಟ್ಟಿದ ಈ ಮುಖಾಮುಖಿಯಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಲು ಆರಂಭಿಸಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಜೋಡಿ 4.5 ಓವರ್‌ಗಳಲ್ಲಿ 22 ರನ್ ಗಳಿಸಿತು. ಈ ವೇಳೆ ಮಳೆ ಸುರಿದ ಕಾರಣ ಆಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಮಳೆ ನಿಂತ ಬಳಿಕ ಮತ್ತೆ ಪಂದ್ಯ ಆರಂಭಿಸಿದರೂ 2 ಎಸೆತ ಕಾಣುವ ವೇಳೆ ಮತ್ತೆ ಮಳೆ ಕಾಡಿತು. ಇದರಿಂದ ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ ಪಂದ್ಯವನ್ನು 29 ಓವರ್​ಗಳಿಗೆ ಸೀಮಿತಗೊಳಿಸಲಾಯಿತು.

ಇದಾದ ಬಳಿಕ ಮತ್ತೆ ಪಂದ್ಯ ಆರಂಭಗೊಂಡು ಭಾರತ 12.5 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 89 ರನ್ ಗಳಿಸಿತ್ತು. ಆದರೆ ಮತ್ತೆ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಹ್ಯಾಮಿಲ್ಟನ್‌ನಲ್ಲಿ ಭಾನುವಾರ ಧಾರಾಕಾರ ಮಳೆ ಸುರಿದಿದ್ದು, ಸುದೀರ್ಘ ಕಾಯುವಿಕೆಯ ಬಳಿಕ ಉಭಯ ತಂಡಗಳ ಜತೆ ಚರ್ಚಿಸಿ ಅಂತಿಮವಾಗಿ ಅಂಪೈರ್​ಗಳು ಪಂದ್ಯವನ್ನು ಫಲಿತಾಂಶವಿಲ್ಲದೆ ರದ್ದುಗೊಳಿಸಲಾಯಿತು.

ಈಗಾಗಲೇ ಮೊದಲ ಪಂದ್ಯವನ್ನು ಸೋತ ಭಾರತ ತಂಡಕ್ಕೆ ಈ ಪಂದ್ಯ ರದ್ದಾದ ಕಾರಣ ಸರಣಿ ವಶಪಡಿಸುವ ಕನಸು ಮಳೆಯಿಂದ ಕೊಚ್ಚಿಹೋಯಿತು.

ಇದನ್ನೂ ಓದಿ | INDvsPAK | ರಮೀಜ್‌ ರಾಜಾಗೆ ಖಡಕ್‌ ಉತ್ತರ ಕೊಟ್ಟ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Lok Sabha Election 2024: ನೂತನ ಸಂಸದರಲ್ಲಿ ಶೇ. 93ರಷ್ಟು ಮಂದಿ ಕೋಟ್ಯಧೀಶರು, ಶೇ.46ರಷ್ಟು ಮಂದಿ ವಿರುದ್ಧ ಕ್ರಿಮಿನಲ್ ಕೇಸ್!

ಲೋಕಸಭಾ ಚುನಾವಣೆ (Lok Sabha Election 2024) ಗೆದ್ದು ಸಂಸತ್ತು ಪ್ರವೇಶಿಸುತ್ತಿರುವ ಒಟ್ಟು 543 ವಿಜೇತ ಅಭ್ಯರ್ಥಿಗಳಲ್ಲಿ 251 ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆಗಳು ದಾಖಲಾಗಿವೆ. 504 ವಿಜೇತ ಅಭ್ಯರ್ಥಿಗಳು ಕೋಟ್ಯಾಧೀಶ್ವರರಾಗಿದ್ದರೆ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ 240 ವಿಜೇತ ಬಿಜೆಪಿ ಅಭ್ಯರ್ಥಿಗಳಲ್ಲಿ ಶೇ.95ರಷ್ಟು ಮಂದಿ ಕೋಟ್ಯಾಧಿಪತಿಗಳಾಗಿದ್ದು, ಶೇ. 39ರಷ್ಟು ಮಂದಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ.

VISTARANEWS.COM


on

By

Lok Sabha Election 2024
Koo

ಹೊಸದಿಲ್ಲಿ: ಇತ್ತೀಚೆಗೆ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರಲ್ಲಿ (Lok Sabha Election 2024) ಚುನಾಯಿತರಾದ ಬಹುಪಾಲು ಸಂಸತ್ ಸದಸ್ಯರು (MPs) ಕೋಟ್ಯಧಿಪತಿಗಳಾಗಿದ್ದಾರೆ (crorepatis) ಮತ್ತು ಶೇ. 46 ರಷ್ಟು ಮಂದಿ ಕ್ರಿಮಿನಲ್ ಆರೋಪಗಳನ್ನು (criminal charges) ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ತಿಳಿಸಿದೆ.

ಒಟ್ಟು ವಿಜೇತರಾದ 543 ವಿಜೇತ ಅಭ್ಯರ್ಥಿಗಳಲ್ಲಿ 251 ಮಂದಿ ವಿರುದ್ಧ ಕ್ರಿಮಿನಲ್ ಆರೋಪಗಳಿದ್ದು, 504 ಅಂದರೆ ಒಟ್ಟು ವಿಜೇತ ಅಭ್ಯರ್ಥಿಗಳಲ್ಲಿ ಶೇ. 93ರಷ್ಟು ಮಂದಿ ಕೋಟ್ಯಧಿಪತಿಗಳಾಗಿದ್ದಾರೆ.


ಬಿಜೆಪಿಯಲ್ಲೇ ಅತ್ಯಧಿಕ ಕೋಟ್ಯಧೀಶರು

240 ಸೀಟುಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಗರಿಷ್ಠ ಸಂಖ್ಯೆಯ ಕೋಟ್ಯಧಿಪತಿಗಳನ್ನು ಹೊಂದಿದೆ. 240 ವಿಜೇತ ಬಿಜೆಪಿ ಅಭ್ಯರ್ಥಿಗಳ ಪೈಕಿ ಶೇ. 95ರಷ್ಟು ಮಂದಿ ಅಂದರೆ 240ರಲ್ಲಿ 227 ಮಂದಿ ಕೋಟ್ಯಧಿಪತಿಗಳಾಗಿದ್ದಾರೆ. ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ 50.04 ಕೋಟಿ ರೂ. ಆಗಿದೆ.

ಬಿಜೆಪಿಯ ವಿಜೇತ ಅಭ್ಯರ್ಥಿಗಳಲ್ಲಿ ಶೇ.39ರಷ್ಟು ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ.


ಕಾಂಗ್ರೆಸ್ ನಾಯಕರ ವಿರುದ್ಧ ಅತ್ಯಧಿಕ ಕ್ರಿಮಿನಲ್ ಕೇಸ್

ಲೋಕಸಭಾ ಚುನಾವಣೆಯಲ್ಲಿ 99 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಪಕ್ಷದಲ್ಲಿ ಶೇ. 93ರಷ್ಟು ಮಂದಿ ಕೋಟ್ಯಧಿಪತಿಗಳಾಗಿದ್ದಾರೆ. ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ 22.93 ಕೋಟಿ ಆಗಿದೆ. ಕಾಂಗ್ರೆಸ್ ನಾಯಕರಲ್ಲಿ ಅರ್ಧದಷ್ಟು ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಎಂದು ವರದಿ ಉಲ್ಲೇಖಿಸಿದೆ. ಬಿಜೆಪಿಗೆ ಹೋಲಿಸಿದರೆ ಸರಾಸರಿ ಪ್ರಕಾರ ಕಾಂಗ್ರೆಸ್ ನಲ್ಲೇ ಹೆಚ್ಚು ಕ್ರಿಮಿನಲ್ ಗಳಿದ್ದಾರೆ.

543 ವಿಜೇತ ಅಭ್ಯರ್ಥಿಗಳಲ್ಲಿ ಶೇ. 46ರಷ್ಟು ಅಂದರೆ 251 ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ.

2009ರ ಸಾರ್ವತ್ರಿಕ ಚುನಾವಣೆಯ ಅನಂತರ ಅವರ ವಿರುದ್ಧ ಘೋಷಿತ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಸಂಸದರ ಸಂಖ್ಯೆಯಲ್ಲಿ ಶೇ. 55ರಷ್ಟು ಹೆಚ್ಚಳವಾಗಿದೆ. 2024ರಲ್ಲಿ ಗೆದ್ದ 240 ಬಿಜೆಪಿ ಅಭ್ಯರ್ಥಿಗಳಲ್ಲಿ 94 ಮತ್ತು ಗೆದ್ದ 99 ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ 49 ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿರುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಈ 17 ಸಂಸದರು ಎನ್‌ಡಿಎಯಲ್ಲೂ ಇಲ್ಲ, ಇಂಡಿ ಕೂಟದಲ್ಲೂ ಇಲ್ಲ!

ಗಂಭೀರ ಪ್ರಕರಣ

543 ವಿಜೇತ ಅಭ್ಯರ್ಥಿಗಳಲ್ಲಿ ಶೇ. 31ರಷ್ಟು ಮಂದಿ ಅಂದರೆ 170 ಅಭ್ಯರ್ಥಿಗಳು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರುವುದಾಗಿ ಹೇಳಿದ್ದಾರೆ.

ಅತ್ಯಾಚಾರ, ಕೊಲೆ, ಕೊಲೆಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಗಂಭೀರ ಅಪರಾಧ ಪ್ರಕರಣಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.


ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷದ ಗೆದ್ದಿರುವ ನಾಲ್ವರು ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ. ಬಿಜೆಪಿಯಲ್ಲಿ ಗೆದ್ದಿರುವ 240 ಅಭ್ಯರ್ಥಿಗಳ ಪೈಕಿ 63 ಹಾಗೂ 99 ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ 32 ಮಂದಿ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ವರದಿ ತಿಳಿಸಿದೆ.

Continue Reading

ರಾಜಕೀಯ

Lok Sabha Election 2024: ಈ ಬಾರಿ ಆಯ್ಕೆಯಾದ 105 ಸಂಸದರು ಪಿಯುಸಿ ದಾಟಿಲ್ಲ!

ಮೊದಲ ಲೋಕಸಭೆಯಿಂದ 11ನೇ (1996-98) ಲೋಕಸಭೆವರೆಗೆ ಪದವಿಪೂರ್ವ ಪದವಿಗಳನ್ನು ಹೊಂದಿರುವ ಸಂಸದರ ಪ್ರಮಾಣವು ನಿರಂತರವಾಗಿ ಹೆಚ್ಚಾಗುತ್ತಾ ಸಾಗಿದರೂ 17ನೇ ಲೋಕಸಭೆಯಲ್ಲಿ ಶೇ. 27ರಿಂದ 18ನೇ ಲೋಕಸಭೆಯಲ್ಲಿ ಶೇ. 22 ಕ್ಕೆ ಇಳಿಕೆಯಾಗಿದೆ. ವಿಜೇತ ಅಭ್ಯರ್ಥಿಗಳ (Lok Sabha Election 2024) ಪೈಕಿ ಶೇ. 19ರಷ್ಟು ಮಂದಿಯ ಶೈಕ್ಷಣಿಕ ಅರ್ಹತೆ 12ನೇ ತರಗತಿಗಿಂತ ಕೆಳಗಿದೆ ಎಂದು ಎಡಿಆರ್ ವರದಿ ಹೇಳಿದೆ.

VISTARANEWS.COM


on

By

Lok Sabha Election 2024
Koo

ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಗೆದ್ದು ಸಂಸತ್ತು ಪ್ರವೇಶಿಸಿರುವ ಶೇ. 19ರಷ್ಟು ನೂತನ ಸಂಸದರ (MPs) ಶೈಕ್ಷಣಿಕ ಅರ್ಹತೆ (education qualification) 12 ನೇ ತರಗತಿಗಿಂತ ಕೆಳಗಿದೆ. ಶೇ. 77ರಷ್ಟು ಅಭ್ಯರ್ಥಿಗಳು ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಅರ್ಹತೆಯನ್ನು ಪಡೆದಿದ್ದಾರೆ ಎಂದು ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ಹೇಳಿದೆ.

ವಿಜೇತ ಅಭ್ಯರ್ಥಿಗಳಲ್ಲಿ ಸುಮಾರು 105 ಮಂದಿ ತಮ್ಮ ಶೈಕ್ಷಣಿಕ ಅರ್ಹತೆಯನ್ನು 5ನೇ ತರಗತಿ ಮತ್ತು 12 ನೇ ತರಗತಿಯ ನಡುವೆ ಎಂದು ಘೋಷಿಸಿದ್ದಾರೆ. 420 ಅಭ್ಯರ್ಥಿಗಳು ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿಯನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. 17 ವಿಜೇತ ಅಭ್ಯರ್ಥಿಗಳು ಡಿಪ್ಲೊಮಾ ಮಾಡಿದ್ದು, ಒಬ್ಬ ವಿಜೇತರು “ಕೇವಲ ಸಾಕ್ಷರರು” ಎಂದು ಹೇಳಿಕೊಂಡಿದ್ದಾರೆ.

ಚುನಾವಣಾ ಕಣದಲ್ಲಿ ಇಳಿಯುವಾಗ ತಾವು ಅನಕ್ಷರಸ್ಥರೆಂದು ಘೋಷಿಸಿಕೊಂಡ ಎಲ್ಲಾ 121 ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ.

ಯಾರು ಎಷ್ಟು?

5ನೇ ತರಗತಿಯವರೆಗೆ ಓದಿರುವ ಇಬ್ಬರು ವಿಜೇತ ಅಭ್ಯರ್ಥಿಗಳಿದ್ದರೆ, ನಾಲ್ವರು 8 ನೇ ತರಗತಿಯವರೆಗೆ ಓದಿದ್ದೇವೆ ಎಂದು ಹೇಳಿದ್ದಾರೆ. 34 ಅಭ್ಯರ್ಥಿಗಳು ತಾವು 10 ನೇ ತರಗತಿಯವರೆಗೆ ಮತ್ತು 65 ಅಭ್ಯರ್ಥಿಗಳು 12ನೇ ತರಗತಿಯವರೆಗೆ ಓದಿರುವುದಾಗಿ ಘೋಷಿಸಿದ್ದಾರೆ.

ಕೃಷಿಕರು

ಪಿ ಆರ್ ಎಸ್ ಶಾಸಕಾಂಗ ಸಂಶೋಧನೆ ವಿಶ್ಲೇಷಣೆಯ ಪ್ರಕಾರ 543 ಸಂಸದರಲ್ಲಿ ಛತ್ತೀಸ್‌ಗಢದ ಶೇ. 91 ಸಂಸದರು, ಮಧ್ಯಪ್ರದೇಶದಿಂದ ಶೇ. 72 ಮತ್ತು ಗುಜರಾತ್‌ನ ಶೇ. 65 ಸಂಸದರು ಕೃಷಿಯನ್ನು ತಮ್ಮ ವೃತ್ತಿ ಎಂದು ಘೋಷಿಸಿದ್ದಾರೆ.
18ನೇ ಲೋಕಸಭೆಗೆ ಚುನಾಯಿತರಾದ ಸಂಸದರಲ್ಲಿ ಸುಮಾರು ಶೇ. 7 ರಷ್ಟು ಮಂದಿ ವಕೀಲರು ಮತ್ತು ಶೇ. 4ರಷ್ಟು ಮಂದಿ ವೈದ್ಯಕೀಯ ವೃತ್ತಿಯವರು ಇದ್ದಾರೆ.


ಪ್ರಾರಂಭದಿಂದ 11ನೇ (1996-98) ಲೋಕಸಭೆಯವರೆಗೆ ಪದವಿಪೂರ್ವ, ಪದವಿಗಳನ್ನು ಹೊಂದಿರುವ ಸಂಸದರ ಪ್ರಮಾಣವು ಸ್ಥಿರವಾಗಿ ಹೆಚ್ಚಾಗಿದೆ. ಪ್ರಾರಂಭದಲ್ಲಿ ಕಾಲೇಜು ಶಿಕ್ಷಣ ಪಡೆಯದ ಸಂಸದರ ಪ್ರಮಾಣವೂ ಹೆಚ್ಚಾಗಿತ್ತು. 17 ನೇ ಲೋಕಸಭೆಯಲ್ಲಿ ಶೇ. 27ರಿಂದ 18ನೇ ಲೋಕಸಭೆಯಲ್ಲಿ ಶೇ. 22 ಕ್ಕೆ ಇಳಿದಿದೆ ಎಂದು ಪಿಆರ್ ಎಸ್ ವರದಿ ತಿಳಿಸಿದೆ.

18ನೇ ಲೋಕಸಭೆಯಲ್ಲಿ ಶೇ. 5ರಷ್ಟು ಸಂಸದರಲ್ಲಿ ಮೂವರು ಮಹಿಳೆಯರು ಡಾಕ್ಟರೇಟ್ ಪದವಿಗಳನ್ನು ಹೊಂದಿದ್ದಾರೆ ಎಂದು ವಿಶ್ಲೇಷಣೆ ವರದಿ ಬಹಿರಂಗಪಡಿಸಿದೆ.

ಇದನ್ನೂ ಓದಿ: Lok Sabha Election : ಶತಕ ಬಾರಿಸಿದ ಕಾಂಗ್ರೆಸ್​​; ಪಕ್ಷೇತರನ ಬೆಂಬಲದೊಂದಿಗೆ ಕಾಂಗ್ರೆಸ್​ನ ಸೀಟ್​ಗಳ ಸಂಖ್ಯೆ 100ಕ್ಕೆ ಏರಿಕೆ

ಕಣದಲ್ಲಿದ್ದ 8,390 ಅಭ್ಯರ್ಥಿಗಳ ಪೈಕಿ 121 ಅಭ್ಯರ್ಥಿಗಳು ತಾವು ಅನಕ್ಷರಸ್ಥರು ಮತ್ತು 359 ಅಭ್ಯರ್ಥಿಗಳು ತಾವು 5ನೇ ತರಗತಿಯವರೆಗೆ ಓದಿರುವುದಾಗಿ ಹೇಳಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ 647 ಅಭ್ಯರ್ಥಿಗಳು ತಮ್ಮ ಶಿಕ್ಷಣ ಮಟ್ಟವನ್ನು 8 ನೇ ತರಗತಿಯವರೆಗೆ ವರದಿ ಮಾಡಿದ್ದಾರೆ. ಒಟ್ಟು 1,303 ಅಭ್ಯರ್ಥಿಗಳು ತಾವು ಶಾಲೆಯನ್ನು ತೇರ್ಗಡೆಗೊಳಿಸಿರುವುದಾಗಿ ಘೋಷಿಸಿದರು. 1,502 ಅಭ್ಯರ್ಥಿಗಳು ತಾವು ಪದವಿಯನ್ನು ಹೊಂದಿರುವುದಾಗಿ ಹೇಳಿದ್ದಾರೆ. 198 ಅಭ್ಯರ್ಥಿಗಳು ಡಾಕ್ಟರೇಟ್ ಪಡೆದಿರುವುದಾಗಿ ಘೋಷಿಸಿದ್ದರು.

Continue Reading

ರಾಜಕೀಯ

Lok Sabha Election 2024: ಈ ಬಾರಿ 24 ಮುಸ್ಲಿಂ ಸಂಸದರ ಆಯ್ಕೆ; ಕಾಂಗ್ರೆಸ್‌, ಎಸ್‌ಪಿಯಿಂದಲೇ ಹೆಚ್ಚು

ತೃಣಮೂಲ ಕಾಂಗ್ರೆಸ್‌ನ ಯೂಸುಫ್ ಪಠಾಣ್ ಸೇರಿದಂತೆ ಒಟ್ಟು 24 ಮುಸ್ಲಿಂ ಅಭ್ಯರ್ಥಿಗಳ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಗೆಲುವು ಸಾಧಿಸಿ ಸಂಸತ್ತನ್ನು ಪ್ರವೇಶಿಸಿದ್ದಾರೆ. 2019ರಲ್ಲಿ ಒಟ್ಟು 115 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದು, ಈ ಬಾರಿ ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು 78 ಮುಸ್ಲಿಮರು ಸ್ಪರ್ಧೆಗೆ ಇಳಿದಿದ್ದರು.

VISTARANEWS.COM


on

By

Lok Sabha Election 2024
Koo

ಯೂಸುಫ್ ಪಠಾಣ್ (Yusuf Pathan), ಅಸಾದುದ್ದೀನ್ ಓವೈಸಿ (Asaduddin Owaisi) ಮತ್ತು ಇಕ್ರಾ ಚೌಧರಿ (Iqra Choudhary) ಸೇರಿದಂತೆ ಒಟ್ಟು 24 ಮುಸ್ಲಿಂ ಸಂಸದರು (Muslim MPs) ಈ ಬಾರಿ ಲೋಕಸಭಾ ಚುನಾವಣೆಯನ್ನು (Lok Sabha Election 2024) ಗೆದ್ದು ಸಂಸತ್ತಿಗೆ ಪ್ರವೇಶಿಸಿದ್ದಾರೆ. 2019ರಲ್ಲಿ ಚುನಾವಣೆಯಲ್ಲಿ ಒಟ್ಟು 115 ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈ ಬಾರಿ ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು 78 ಮುಸ್ಲಿಮರು ಚುನಾವಣೆ ಕಣದಲ್ಲಿದ್ದರು.

ಮೊದಲ ಪ್ರಯತ್ನದಲ್ಲೇ ಯಶಸ್ಸು

ರಾಜಕೀಯ ಪ್ರವೇಶಿಸಿದ ಬಳಿಕ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದ ಕ್ರಿಕೆಟಿಗ- ರಾಜಕಾರಣಿ ಯೂಸುಫ್ ಪಠಾಣ್ ಅವರು ತೃಣಮೂಲ ಕಾಂಗ್ರೆಸ್ ನಲ್ಲಿ ಟಿಕೆಟ್‌ ಪಡೆದು ಪಶ್ಚಿಮ ಬಂಗಾಳದ ಬರ್ಹಾಂಪುರದಿಂದ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಅವರನ್ನು ಕೆಳಗಿಳಿಸಿದ್ದಾರೆ.

ಉತ್ತರ ಪ್ರದೇಶದ ಸಹರಾನ್‌ಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇಮ್ರಾನ್‌ ಮಸೂದ್‌ ಕೂಡ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ.

ಕಿರಿಯ ಸಂಸದ

ಕೈರಾನಾದಲ್ಲಿ ಸಮಾಜವಾದಿ ಪಕ್ಷದ ಇಕ್ರಾ ಚೌಧರಿ ಕಿರಿಯ ಸಂಸದರಲ್ಲಿ ಒಬ್ಬರಾಗಿದ್ದಾರೆ. ಇವರು ಬಿಜೆಪಿಯ ಪ್ರದೀಪ್ ಕುಮಾರ್ ಅವರನ್ನು 69,116 ಮತಗಳಿಂದ ಸೋಲಿಸಿದರು.


ಅಸಾದುದ್ದೀನ್ ಓವೈಸಿ

ದಕ್ಷಿಣದಲ್ಲಿ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು 3,38,087 ಮತಗಳ ಅಂತರದಿಂದ ಭಾರತೀಯ ಜನತಾ ಪಕ್ಷದ ಫೈರ್‌ಬ್ರಾಂಡ್ ನಾಯಕಿ ಮಾಧವಿ ಲತಾ ಅವರನ್ನು ಸೋಲಿಸುವ ಮೂಲಕ ತಮ್ಮ ಹೈದರಾಬಾದ್ ಭದ್ರಕೋಟೆಯನ್ನು ಉಳಿಸಿಕೊಂಡರು. ಲಡಾಖ್‌ನಲ್ಲಿ ಸ್ವತಂತ್ರ ಅಭ್ಯರ್ಥಿ ಮೊಹಮ್ಮದ್ ಹನೀಫಾ ಅವರು ಕಾಂಗ್ರೆಸ್‌ನ ಜಮ್ಯಾಂಗ್ ತ್ಸ್ರಿಂಗ್ ನಾಮ್ಗ್ಯಾಲ್ ಅವರನ್ನು ಸೋಲಿಸಿದರು.

2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಮುಸ್ಲಿಂ ಸಂಸದರು

ಕಾಂಗ್ರೆಸ್‌ನಿಂದ ಧುಬ್ರಿಯಲ್ಲಿ ರಾಕಿಬುಲ್ ಹುಸೇನ್, ಕಿಶನ್‌ಗಂಜ್ ನಲ್ಲಿ ಮೊಹಮ್ಮದ್ ಜಾವೇದ್, ಕತಿಹಾರ್ ನಲ್ಲಿ ತಾರಿಕ್ ಅನ್ವರ್, ವಡಕರ(3)ರಲ್ಲಿ ಶಾಫಿ ಪರಂಬಿಲ್, ಸಹರಾನ್ಪುರ್(1)ರಲ್ಲಿ ಇಮ್ರಾನ್ ಮಸೂದ್, ಮಲ್ದಹಾ ದಕ್ಷಿಣ(8)ದಲ್ಲಿ ಇಶಾ ಖಾನ್ ಚೌಧರಿ, ಲಕ್ಷದ್ವೀಪ (1)ರಲ್ಲಿ ಮುಹಮ್ಮದ್ ಹಮದುಲ್ಲಾ ಸಯೀದ್

ಸಮಾಜವಾದಿ ಪಕ್ಷ

ಕೈರಾನಾ (2)ರಲ್ಲಿ ಇಕ್ರಾ ಚೌಧರಿ, ರಾಂಪುರ(7)ರಲ್ಲಿ ಮೊಹಿಬ್ಬುಲ್ಲಾ, ಸಂಭಾಲ್(8)ರಲ್ಲಿ ಜಿಯಾ ಉರ್ ರೆಹಮಾನ್, ಗಾಜಿಪುರ (75)ರಲ್ಲಿ ಅಫ್ಜಲ್ ಅನ್ಸಾರಿ


ಟಿಎಂಸಿ

ಜಂಗೀಪುರ (9) ಖಲೀಲೂರ್ ರಹಮಾನ್, ಬಹರಂಪುರ (10) ಪಠಾಣ್ ಯೂಸುಫ್, ಮುರ್ಷಿದಾಬಾದ್ (11) ಅಬು ತಾಹರ್ ಖಾನ್, ಬಸಿರ್ಹತ್ (18) ಎಸ್ಕೆ ನೂರುಲ್ ಇಸ್ಲಾಂ, ಉಲುಬೇರಿಯಾ (26) ಸಜ್ದಾ ಅಹಮದ್

ಐಯುಎಂಎಲ್

ಮಲಪ್ಪುರಂ (6) ಇ.ಟಿ. ಮೊಹಮ್ಮದ್ ಬಶೀರ್, ಪೊನ್ನಾನಿ (7) ಡಿ.ಆರ್. ಎಂಪಿ ಅಬ್ದುಸ್ಸಮದ್ ಸಮದಾನಿ, ರಾಮನಾಥಪುರ (35) ನವಸ್ಕನಿ ಕೆ

ಎಐಎಂಐಎಂ

ಹೈದರಾಬಾದ್ (9) ಅಸಾದುದ್ದೀನ್ ಓವೈಸಿ

ಇದನ್ನೂ ಓದಿ: Modi 3.0 Government: ನರೇಂದ್ರ ಮೋದಿ ಮುಂದೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಇಟ್ಟಿರುವ ಬೇಡಿಕೆಗಳು ಇಷ್ಟು!

ಇಂದ್

ಬಾರಾಮುಲ್ಲಾ(1)ಅಬ್ದುಲ್ ರಶೀದ್ ಶೇಖ್, ಲಡಾಖ್ (1) ಮೊಹಮ್ಮದ್ ಹನೀಫಾ

ಎನ್ ಸಿ

ಶ್ರೀನಗರ (2) ಅಗಾ ಸೈಯದ್ ರುಹುಲ್ಲಾ ಮೆಹದಿ, ಅನಂತನಾಗ್-ರಾಜೌರಿ(3) ಮಿಯಾನ್ ಅಲ್ತಾಫ್ ಅಹ್ಮದ್

Continue Reading

ವೈರಲ್ ನ್ಯೂಸ್

Viral Video: ಪುಷ್ಪ 2 ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ಅಜ್ಜಿ; ವಾವ್ಹ್‌ ಕ್ಯೂಟ್ ಎಂದ ನೆಟ್ಟಿಗರು

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಮುಂಬರುವ ಪುಷ್ಪ ೨ ಚಿತ್ರದ ಸೊಸಕಿ ಹಾಡಿಗೆ ನಗುಮೊಗದಿಂದ ಅಜ್ಜಿಯೊಬ್ಬರು ಹೆಜ್ಜೆ ಹಾಕಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ. ಸಾಕಷ್ಟು ಮಂದಿ ಅಜ್ಜಿಯ ನೃತ್ಯವನ್ನು ನೋಡಿ ವಾವ್ ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ.

VISTARANEWS.COM


on

By

Viral Video
Koo

ನಗುಮೊಗದ ಅಜ್ಜಿಯೊಬ್ಬರು (grandma) ಮುಂಬರುವ ಪುಷ್ಪ 2 (Pushpa 2) ಚಿತ್ರದ ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣವಾದ (social media) ಇನ್ ಸ್ಟಾಗ್ರಾಮ್ ನಲ್ಲಿ (instagram) ವೈರಲ್ (Viral Video) ಆಗಿದ್ದು ಅಜ್ಜಿಗೆ ಪ್ರಶಂಸೆಯ ಹೊಳೆಯೇ ಹರಿದು ಬರುತ್ತಿದೆ.

ಪುಷ್ಪ: ದಿ ರೂಲ್‌ನ ಇತ್ತೀಚಿನ ಸಂಗೀತ ಟ್ರ್ಯಾಕ್ ಗೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮಾಡಿರುವ ರೋಮ್ಯಾಂಟಿಕ್ ಡ್ಯಾನ್ಸ್ ಮೂವ್‌ಗಳನ್ನು ಅಜ್ಜಿಯೊಬ್ಬರು ಮಾಡಿ ಆನಂದಿಸುತ್ತಿರುವ ವಿಡಿಯೋ ಇದಾಗಿದೆ.
ವೈರಲ್ ಡ್ಯಾನ್ಸ್ ರೀಲ್‌ನಲ್ಲಿ ಪುಷ್ಪಾ 2 ರ ‘ಸೂಸೆಕಿ’ ಹಾಡನ್ನು ಅಜ್ಜಿ ಆನಂದಿಸುತ್ತಾ ಮಾಡಿದ್ದಾರೆ. ಅವರ ‘ಮುದ್ದಾದ’ ಪ್ರದರ್ಶನವನ್ನು ನೋಡಿ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.

ಅನೇಕ ಇನ್ ಸ್ಟಾ ಬಳಕೆದಾರರು ಡ್ಯಾನ್ಸ್ ರೀಲ್‌ಗೆ ಉತ್ತರಿಸಿದ್ದು, ಅದನ್ನು “ಕ್ಯೂಟ್” ಎಂದು ಕರೆದಿದ್ದಾರೆ. ಅಜ್ಜಿಯ ಅಭಿನಯದ ಬಗ್ಗೆ ಅನೇಕರು ಸಂತೋಷ ವ್ಯಕ್ತಪಡಿಸಿದ್ದಾರೆ. “ಸೂಪರ್ ಅದ್ಬುತ… ಪಾಟಿ’ (ಪಾಟಿ ಎಂದರೆ ಬೆಂಕಿ) ಎಂದು ನೆಟಿಜನ್‌ಗಳು ಆಕೆ ಮತ್ತು ಆಕೆಯ ನೃತ್ಯದ ಭಂಗಿಯನ್ನು ಶ್ಲಾಘಿಸಿದ್ದಾರೆ.

ಅಜ್ಜಿಯು ರಶ್ಮಿಕಾ ಅವರ ನೃತ್ಯದ ಸರಳವಾದ ಹೆಜ್ಜೆಗಳನ್ನು ಹಾಕಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದಾರೆ. ಕೆಮರಾದಲ್ಲಿ ಅವರು ಕೆಲವು ಶಾಸ್ತ್ರೀಯ ನೃತ್ಯ ಭಂಗಿಗಳನ್ನು ಪ್ರದರ್ಶಿಸಲು ಸೀರೆಯನ್ನು ಧರಿಸಿದ್ದಾರೆ.

ಅಜ್ಜಿ ತನ್ನ ಮುದ್ದಾದ ನಗುವಿನ ಮೂಲಕ ವಿಡಿಯೋವನ್ನು ಪ್ರಾರಂಭಿಸಿದ್ದಾರೆ. ನಿಧಾನವಾಗಿ ತಲೆಯಾಡಿಸುತ್ತಾ, ತಮ್ಮ ಬೆರಳುಗಳ ಮೂಲಕ ಉಂಗುರದಂತಹ ಸನ್ನೆಯನ್ನು ಮಾಡಿದ್ದಾರೆ. ಕಣ್ಣಿನ ದೃಷ್ಟಿಯನ್ನು ಅತ್ತಿತ್ತ ಹಾರಿಸುತ್ತ ಹಾಡಿಗೆ ತಕ್ಕನಾಗಿ ತಮ್ಮ ಹೆಜ್ಜೆಯನ್ನು ಹಾಕಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: Viral Video: ಹೃದಯ ಸ್ತಬ್ಧಗೊಳಿಸುವ ಈ 3ಡಿ ದೃಶ್ಯ ನೋಡಿ! ಇನ್ನಾದರು ಸುರಕ್ಷಿತವಾಗಿ ವಾಹನ ಚಲಾಯಿಸಿ

ಮುಂದಿನದು ಚಿತ್ರದ ಅತ್ಯಂತ ನಿರೀಕ್ಷಿತ ಭಂಗಿಯಾಗಿದೆ. ಅದು ಇಲ್ಲದೆ ಪ್ರದರ್ಶನವು ಅಪೂರ್ಣವಾಗಿ ಉಳಿಯುತ್ತದೆ. ಅಜ್ಜಿಗೆ ಇದರಲ್ಲಿ ಮೊಮ್ಮಗ ಅಕ್ಷಯ್ ಪಾರ್ಥ ಸಾಥಿಯಾಗಿದ್ದಾರೆ.

ಸೂಸೆಕಿ ಮೂಲತಃ ತೆಲುಗು ಹಾಡು. ಮುಂಬರುವ ಚಿತ್ರ ಪುಷ್ಪ: ದಿ ರೂಲ್‌ನಲ್ಲಿ ಗಣೇಶ್ ಆಚಾರ್ಯ ಅವರ ನೃತ್ಯ ಸಂಯೋಜನೆಯ ಈ ಹಾಡಿಗೆ ಪುಷ್ಪರಾಜ್ ಮತ್ತು ಶ್ರೀವಲ್ಲಿ ಜೋಡಿ ಹೆಜ್ಜೆ ಹಾಕಿದೆ.

Continue Reading
Advertisement
Lok Sabha Election 2024
ರಾಜಕೀಯ35 seconds ago

Lok Sabha Election 2024: ನೂತನ ಸಂಸದರಲ್ಲಿ ಶೇ. 93ರಷ್ಟು ಮಂದಿ ಕೋಟ್ಯಧೀಶರು, ಶೇ.46ರಷ್ಟು ಮಂದಿ ವಿರುದ್ಧ ಕ್ರಿಮಿನಲ್ ಕೇಸ್!

rahul gandhi dk shivakumar cm siddaramaiah
ಪ್ರಮುಖ ಸುದ್ದಿ12 mins ago

Rahul Gandhi: ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಹಾಜರಾಗಲು ಬೆಂಗಳೂರಿಗೆ ಆಗಮಿಸಿದ ರಾಹುಲ್‌ ಗಾಂಧಿ

Hamare Baarah Karnataka bans release of movie
ಬಾಲಿವುಡ್16 mins ago

Hamare Baarah: ಮುಸ್ಲಿಂ ಮಹಿಳೆಯರ ಕುರಿತಾದ ‘ಹಮಾರೆ ಬಾರಾ’ ಸಿನಿಮಾ ಬ್ಯಾನ್‌ ಮಾಡಿದ ಕರ್ನಾಟಕ ಸರ್ಕಾರ

Sunita Williams
ವೈರಲ್ ನ್ಯೂಸ್34 mins ago

Sunita Williams: ಡ್ಯಾನ್ಸ್‌ ಮಾಡುತ್ತಲೇ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಭಾರತ ಮೂಲದ ಸುನೀತಾ ವಿಲಿಯಮ್ಸ್; ವಿಡಿಯೊ ವೈರಲ್‌

Parliament Security Breach
ದೇಶ54 mins ago

Parliament Security Breach: ನಕಲಿ ಆಧಾರ್‌ ಕಾರ್ಡ್‌ ಬಳಸಿ ಸಂಸತ್‌ಗೆ ಎಂಟ್ರಿ ಕೊಡೋಕೆ ಯತ್ನ; ತಪ್ಪಿದ ಭಾರೀ ಅವಘಡ

road accident gauribidanuru
ಕ್ರೈಂ57 mins ago

Road Accident: ಭೀಕರ ಕಾರು ಅಪಘಾತ, 3 ಸಾವು, ಮರದಲ್ಲಿ ನೇತಾಡಿದ ಪ್ರಯಾಣಿಕನ ಶವ

Bigg Boss OTT 3 Know when and where to stream the show
ಬಿಗ್ ಬಾಸ್1 hour ago

Bigg Boss OTT 3: ಬಿಗ್​ ಬಾಸ್​ ಒಟಿಟಿ ಪ್ರಸಾರಕ್ಕೆ ಮುಹೂರ್ತ ಫಿಕ್ಸ್​: ಹೊಸ ನಿರೂಪಕನಾಗಿ ಅನಿಲ್​ ಕಪೂರ್​ ಎಂಟ್ರಿ!

Election Results 2024
Lok Sabha Election 20241 hour ago

Election Results 2024: ಸಂಸದರಾಗಿ ಆಯ್ಕೆಯಾದ ಉತ್ತರ ಪ್ರದೇಶದ ಎಂಟು ಶಾಸಕರು; ಶೀಘ್ರ ಉಪಚುನಾವಣೆ

self harming attempt
ಕ್ರೈಂ1 hour ago

Self Harming Attempt: ಮತ್ತೊಬ್ಬ ಅಧಿಕಾರಿ ಆತ್ಮಹತ್ಯೆ ಯತ್ನ; ಅಕ್ಷರ ದಾಸೋಹದಲ್ಲಿ ಮೇಲಧಿಕಾರಿಗಳ ಕಿರುಕುಳ?

Lok Sabha Election 2024
ರಾಜಕೀಯ1 hour ago

Lok Sabha Election 2024: ಈ ಬಾರಿ ಆಯ್ಕೆಯಾದ 105 ಸಂಸದರು ಪಿಯುಸಿ ದಾಟಿಲ್ಲ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ21 hours ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 weeks ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌