ವಿಸ್ತಾರ TOP 10 NEWS | ಸ್ಕೂಲ್‌ ಬ್ಯಾಗಲ್ಲಿ ಕಾಂಡೊಮ್‌, ಸಿಗರೇಟ್‌ ಪತ್ತೆಯಿಂದ, ಪಿಎಫ್‌ಐ ಬ್ಯಾನ್‌ ಎತ್ತಿಹಿಡಿದವರೆಗಿನ ಪ್ರಮುಖ ಸುದ್ದಿಗಳು - ವಿಸ್ತಾರ ನ್ಯೂಸ್
Connect with us

ಕರ್ನಾಟಕ

ವಿಸ್ತಾರ TOP 10 NEWS | ಸ್ಕೂಲ್‌ ಬ್ಯಾಗಲ್ಲಿ ಕಾಂಡೊಮ್‌, ಸಿಗರೇಟ್‌ ಪತ್ತೆಯಿಂದ, ಪಿಎಫ್‌ಐ ಬ್ಯಾನ್‌ ಎತ್ತಿಹಿಡಿದವರೆಗಿನ ಪ್ರಮುಖ ಸುದ್ದಿಗಳು

ವಿಸ್ತಾರ TOP 10 NEWS: ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ, ಕ್ರೀಡಾ ಕ್ಷೇತ್ರದಲ್ಲಿ ನಡೆದ ಬೆಳವಣಿಗೆಗಳ ಆಯ್ದ ಟಾಪ್‌ 10 ಸುದ್ದಿಗಳ ಗುಚ್ಛ ಇಲ್ಲಿದೆ.

VISTARANEWS.COM


on

TOP 10 News 30 11
Koo

ಬೆಂಗಳೂರು: ರಾಜ್ಯವೇ ಬೆಚ್ಚಿಬೀಳುವ ವಿದ್ಯಮಾನವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಹೈಸ್ಕೂಲ್‌ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸ್ಕೂಲ್‌ ಬ್ಯಾಗಲ್ಲಿ ಕಾಂಡೊಮ್‌, ಸಿಗರೇಟ್‌ ಮತ್ತಿತರ ವಸ್ತುಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಉಗ್ರ ಚಟುವಟಿಕೆಗಳನ್ನು ನಡೆಸುತ್ತಿರುವ ಆರೋಪದಲ್ಲಿ ಕೇಂದ್ರ ಸರಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದ್ದನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ರಾಜ್ಯದಲ್ಲಿ ೧೦ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಗೆ ವಿರೋಧ ವ್ಯಕ್ತವಾಗಿದೆ. ಬೆಂಗಳೂರಿನ ಚಿಲುಮೆ ಮಾದರಿಯಲ್ಲಿ ವಿಜಯಪುರದಲ್ಲೂ ಗೋಲ್‌ ಮಾಲ್‌ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಹಾವೇರಿಯಲ್ಲಿರುವ ಕರ್ನಾಟಕ ಜಾನಪದ ವಿವಿಯ 100 ಎಕರೆಗೂ ಹೆಚ್ಚು ಭೂಮಿ ಒತ್ತುವರಿ ಮಾಡಿದ್ದನ್ನು ವಿಸ್ತಾರ ನ್ಯೂಸ್‌ ವರದಿ ಮಾಡಿದೆ. ಇದರ ಬೆನ್ನಿಗೇ ಅದನ್ನು ತೆರವು ಮಾಡುವ ಭರವಸೆಯನ್ನು ಉನ್ನತ ಶಿಕ್ಷಣ ಸಚಿವರು ನೀಡಿದ್ದಾರೆ. ಹೀಗೆ ಎಲ್ಲ ವಲಯಗಳ ಮಹತ್ವದ ಸುದ್ದಿಗಳನ್ನು ಒಳಗೊಂಡ ವಿಸ್ತಾರ TOP 10 NEWS bulletin ಇಲ್ಲಿದೆ.

‌೧. ಬೆಂಗಳೂರು ಹೈಸ್ಕೂಲ್ ಮಕ್ಕಳ ಬ್ಯಾಗ್‌ಗಳಲ್ಲಿ ಕಾಂಡೋಮ್ಸ್, ಸಿಗರೇಟ್ಸ್, ಗರ್ಭನಿರೋಧಕ ಮಾತ್ರೆ!
ವಿದ್ಯಾರ್ಥಿಗಳ ಸ್ಕೂಲ್‌ ಬ್ಯಾಗ್‌ನಲ್ಲಿ ಪುಸ್ತಕಗಳು, ನೋಟ್‌ಬುಕ್ ಬಿಟ್ಟು ಬೇರೆ ಇನ್ನೇನು ಇರಲು ಸಾಧ್ಯ? ನಿಮ್ಮ ಊಹೆ ತಪ್ಪು, ಬೆಂಗಳೂರಿನ ಕೆಲವು ಶಾಲೆಗಳ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗಿನಲ್ಲಿ(School Bag) ಕಾಂಡೋಮ್ಸ್, ಗರ್ಭ ನಿರೋಧಕಗಳು, ಲೈಟರ್ಸ್, ಸಿಗರೇಟ್ಸ್, ವೈಟ್ನರ್ ಮತ್ತು ಹಣ ದೊರೆತಿದೆ. ಇನ್ನೂ ಕೆಲವು ಮಕ್ಕಳ ನೀರಿನ ಬಾಟಲಿಯಲ್ಲಿ ಮದ್ಯ ಕೂಡ ಸಿಕ್ಕಿದೆ. ಸ್ಕೂಲ್ ಮಕ್ಕಳ ಬ್ಯಾಗಿನಲ್ಲಿ ದೊರೆತ ಈ ವಸ್ತುಗಳನ್ನ ಕಂಡು ಅಧಿಕಾರಿಗಳೇ ಹೌಹಾರಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2. ಪಿಎಫ್‌ಐ ನಿಷೇಧ: ಕೇಂದ್ರ ಸರಕಾರದ ಆದೇಶ ಎತ್ತಿ ಹಿಡಿದ ರಾಜ್ಯ ಹೈಕೋರ್ಟ್‌
ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ, ಯುವಜನತೆಗೆ ಉಗ್ರ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿರುವ ಆರೋಪದೊಂದಿಗೆ ಪಾಪ್ಯುಲರ್‌ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ಎತ್ತಿ ಹಿಡಿದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ರಾಜ್ಯದಲ್ಲಿ 10 ಮುಸ್ಲಿಂ ಕಾಲೇಜು ಸ್ಥಾಪನೆಗೆ ವಿರೋಧ: ಬಲಿದಾನವಾದ್ರೂ ಸರಿ ತಡೀತೀವಿ ಎಂದ ಮುತಾಲಿಕ್‌
ರಾಜ್ಯದಲ್ಲಿ ಮುಸ್ಲಿಂ ಹೆಣ್ಮಕ್ಕಳಿಗಾಗಿಯೇ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಕೆಲವು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ವಕ್ಫ್‌ ಬೋರ್ಡ್‌ ಸರಕಾರ ನೀಡುವ ಅನುದಾನದಲ್ಲಿ ಪ್ರತಿ ಕಾಲೇಜಿಗೆ ೨.೫ ಕೋಟಿ ರೂ. ನೀಡುವ ಬಗ್ಗೆ ನಿರ್ಧಾರ ಮಾಡಲಾಗಿದೆ. ವಕ್ಫ್‌ ಬೋರ್ಡ್‌ ಮತ್ತು ಸರಕಾರದ ನಡುವಿನ ಚರ್ಚೆಯ ವೇಳೆ ಈ ತೀರ್ಮಾನಕ್ಕೆ ಬರಲಾಗಿದ್ದು, ಸದ್ಯವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಲೇಜಿಗೆ ಶಿಲಾನ್ಯಾಸ ನೆರವೇರಿಸುವ ನಿರೀಕ್ಷೆ ಇದೆ. ಇದನ್ನು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ತೀವ್ರವಾಗಿ ವಿರೋಧಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೪. ಚಿಲುಮೆ ಮಾದರಿಯಲ್ಲೇ ವಿಜಯಪುರದಲ್ಲೂ ಗೋಲ್‌ಮಾಲ್‌: ಸಿಕ್ಕಿಬಿದ್ದವನ ಹಿಂದಿದ್ದಾರಾ ಯತ್ನಾಳ್‌?
ರಾಷ್ಟ್ರಾದ್ಯಂತ ಸುದ್ದಿ ಮಾಡಿದ ಬೆಂಗಳೂರಿನ ಮತದಾರರ ಮಾಹಿತಿ ಕಳವು ಪ್ರಕರಣದ ಮಾದರಿಯಲ್ಲೇ ವಿಜಯಪುರದಲ್ಲೂ ದೊಡ್ಡ ಮಟ್ಟದ ಗೋಲ್‌ಮಾಲ್‌ ನಡೆದಿದೆ ಎಂಬ ಆರೋಪ ಗಂಭೀರವಾಗಿ ಕೇಳಿಬಂದಿದೆ. ವಿಜಯಪುರ ನಗರದಲ್ಲಿ ಮನೆ ಮನೆಗೆ ಹೋಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಹೆಸರಿನಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಹೀಗೆ ಸಿಕ್ಕಿಬಿದ್ದವನನ್ನು ಮಹಾಂತೇಶ ಪೂಜಾರಿ ಎಂದು ಗುರುತಿಸಲಾಗಿದ್ದು, ಈತನನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಕಡೆಯವನು ಎಂಬ ಮಾತು ಕೇಳಿಬರುತ್ತಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

೫. ಕ್ರಿಮಿನಲ್‌ ಹಿನ್ನೆಲೆ ಬಗ್ಗೆ ಫೈಟರ್‌ ರವಿಯಿಂದ ಮಾಹಿತಿ ಕೇಳಿದ ನಳಿನ್‌ ಕುಮಾರ್‌ ಕಟೀಲ್‌
ಬೆಂಗಳೂರು:
ರೌಡಿಸಂ ಮತ್ತು ಗೂಂಡಾ ಹಿನ್ನೆಲೆಯ (Criminal politics) ವ್ಯಕ್ತಿಗಳು ಪಕ್ಷ ಸೇರುತ್ತಿದ್ದಾರೆ ಎಂಬ ಆಕ್ಷೇಪಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ಈ ಬಗ್ಗೆ ಪರಿಶೀಲನೆ ಮುಂದಾಗಿದೆ. ಯಾವ ಕಾರಣಕ್ಕೂ ಸೈಲೆಂಟ್‌ ಸುನಿಲ್‌ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು, ಈಗಾಗಲೇ ಪಕ್ಷ ಸೇರಿರುವ ನೆಲಮಂಗಲದ ಫೈಟರ್‌ ರವಿ ಅಲಿಯಾಸ್‌ ಮಲ್ಲಿಕಾರ್ಜುನ್‌ನಿಂದ ಕ್ರಿಮಿನಲ್‌ ಹಿನ್ನೆಲೆಯ ಬಗ್ಗೆ ಮಾಹಿತಿ ಕೇಳಿದ್ದಾರೆ.‌ ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೬. ಮುಸ್ಲಿಮರನ್ನು ಬೆದರುಗೊಂಬೆ ಆಗಿಟ್ಟುಕೊಂಡು ದೇಶ ಒಡೆಯುತ್ತಿರುವ ಆರೆಸ್ಸೆಸ್‌: ಸಿದ್ದರಾಮಯ್ಯ
ನಮ್ಮಲ್ಲಿ ಜಾತಿ ವ್ಯವಸ್ಥೆ ಇನ್ನೂ ಹಾಗೆಯೇ ಇದೆ. ಆರ್‌ಎಸ್‌ಎಸ್‌ನವರು ಬದಲಾವಣೆ‌ ಬೇಡ ಎಂದು ಹೇಳುವವರು. ಅವರಿಗೆ ದೌರ್ಜನ್ಯ ಮಾಡಲು, ಶೋಷಣೆ ಮಾಡಲು ಅಸಮಾನತೆ ಇರಬೇಕು. ಮುಸ್ಲಿಂರನ್ನು ಬೆದರುಗೊಂಬೆಯಾಗಿಟ್ಟುಕೊಂಡು‌ ದೇಶ ಒಡೆಯುವ ಕೆಲಸ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೭. ಕರ್ನಾಟಕ ಜಾನಪದ ವಿವಿಯ 100 ಎಕರೆಗೂ ಹೆಚ್ಚು ಭೂಮಿ ಒತ್ತುವರಿ; ಜಿಲ್ಲಾಡಳಿತಕ್ಕೆ ಮೊರೆ
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ (Janapada University) ೧66 ಎಕರೆ ಜಮೀನಿನಲ್ಲಿ 1೧೩ ಎಕರೆಗೂ ಹೆಚ್ಚಿನ ಭೂಮಿ ಒತ್ತುವರಿಯಾಗಿದೆ. ಪ್ರಸ್ತುತ ವಿವಿ ಇರುವ ಪ್ರದೇಶದ ಹೊರತಾಗಿ ಉಳಿದ ಎಲ್ಲ ಕಡೆಯೂ ಒತ್ತುವರಿಯನ್ನು ಮಾಡಿಕೊಳ್ಳಲಾಗಿದೆ ಎಂದು ವಿವಿ ಆಡಳಿತ ಮಂಡಳಿ ಈಗ ಜಿಲ್ಲಾಡಳಿತದ ಕದ ತಟ್ಟಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ವಿಸ್ತಾರ ವರವಿ ಇಂಪ್ಯಾಕ್ಟ್‌: ಒತ್ತುವರಿ ಸಂಬಂಧ ಪೊಲೀಸ್‌ ದೂರು ಕೊಟ್ಟರೆ ತೆರವು: ಅಶ್ವತ್ಥನಾರಾಯಣ

8. ಗುಜರಾತ್‌ನಲ್ಲಿ ನಾಳೆ ಮೊದಲ ಹಂತದ ಮತದಾನ, ಹೇಗಿದೆ ಚುನಾವಣೆ ಹವಾಮಾನ?
ದೇಶದ ಗಮನ ಸೆಳೆದಿರುವ, ೨೦೨೪ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿರುವ, ಪ್ರತಿಷ್ಠೆಯ ಕಣವೂ ಆಗಿರುವ ಗುಜರಾತ್‌ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ (Gujarat Election) ಗುರುವಾರ (ಡಿಸೆಂಬರ್‌ ೧) ನಡೆಯಲಿದೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಕ್ಷವು ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸಿದ್ದು, ಮೊದಲ ಹಂತದ ಮತದಾನದ ಮೇಲೆ ಎಲ್ಲರ ಗಮನ ಇದೆ. ಹಾಗಾದರೆ, ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ? ಸಮೀಕ್ಷೆಗಳು ಏನು ಹೇಳುತ್ತವೆ? ಪಕ್ಷಗಳ ಬಲಾಬಲ ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೯. ಮಂಗಳೂರು ಸ್ಫೋಟ | ಶಂಕಿತ ಉಗ್ರ ಶಾರಿಕ್‌ಗೆ ಮತ್ತೊಬ್ಬ ಸಾಥ್‌ ಕೊಟ್ಟಿದ್ದು ಖಚಿತ, ಯಾರವನು?
ಮಂಗಳೂರು: ನವೆಂಬರ್‌ ೧೯ರಂದು ಸಂಜೆ ೪.೧೯ಕ್ಕೆ ಮಂಗಳೂರಿನ ನಾಗುರಿಯಲ್ಲಿ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡ ಶಾರಿಕ್‌ಗೆ ಇನ್ನೊಬ್ಬ ಸಾಥ್‌ ನೀಡಿರುವುದು ನಿಜ ಎನ್ನುವುದು ಬಹುತೇಕ ಸ್ಪಷ್ಟವಾಗಿದೆ. ಶಾರಿಕ್‌ ಐಸಿಸ್‌ ಮಾದರಿಯಲ್ಲಿ ದಿರಸು ಧರಿಸಿ ಕುಕ್ಕರ್‌ನ್ನು ಕೈಯಲ್ಲಿ ಹಿಡಿದುಕೊಂಡಿರುವ ಫೋಟೊವನ್ನು ಅನಾಲಿಸಿಸ್‌ಗೆ ಒಳಪಡಿಸಿದಾಗ ಕೆಲವೊಂದು ಮಹತ್ವದ ಮಾಹಿತಿಗಳು ಸಿಕ್ಕಿವೆ. ಪೂರ್ಣ ವರದಿಗೆ ಲಿಂಕ್‌ ಕ್ಲಿಕ್‌ ಮಾಡಿ

೧೦. ದತ್ತಪೀಠ ವಿವಾದ | ಡಿ.6ರಿಂದ ಮೂರು ದಿನ ದತ್ತ ಜಯಂತಿ ಆಚರಣೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್​ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ (ದತ್ತ ಪೀಠ ವಿವಾದ) ಡಿಸೆಂಬರ್‌ ೬,೭ ಮತ್ತು ೮ರಂದು ದತ್ತ ಜಯಂತಿ ಆಚರಣೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದೆ. ರಾಜ್ಯ ಸರಕಾರ ಇತ್ತೀಚೆಗೆ ದತ್ತ ಪೀಠ ಪೂಜೆಗೆ ಅರ್ಚಕರನ್ನು ನೇಮಿಸಲು ನಿರ್ವಹಣಾ ಸಮಿತಿ ರಚಿಸಿ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಅರ್ಚಕರ ನೇಮಕ ಪ್ರಶ್ನಿಸಿ ಗೌಸ್ ಮೌಸಿನ್ ಶಾ ಖಾದ್ರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ದತ್ತ ಜಯಂತಿ ಆಚರಣೆಗೆ ಅವಕಾಶವನ್ನು ನೀಡಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

ಇತರ ಪ್ರಮುಖ ಸುದ್ದಿಗಳು
೧. ಮೊದಲ ಬಾರಿಗೆ 63,099 ಅಂಕಗಳ ಎತ್ತರಕ್ಕೇರಿ ದಿನದ ವಹಿವಾಟು ಮುಕ್ತಾಯಗೊಳಿಸಿದ ಸೆನ್ಸೆಕ್ಸ್
೨. Cristiano Ronaldo | ಸೌದಿ ಅರೇಬಿಯಾದ ಫುಟ್ಬಾಲ್​ ಕ್ಲಬ್‌ ಸೇರಿದರೇ ಕ್ರಿಸ್ಟಿಯಾನೋ ರೊನಾಲ್ಡೊ!
೩. ಅಮೆರಿಕ-ಬೆಂಗಳೂರು ನಡುವೆ ಡಿಸೆಂಬರ್‌ 2ರಿಂದ ಏರ್‌ ಇಂಡಿಯಾ ನಾನ್‌ಸ್ಟಾಪ್‌ ಹಾರಾಟ
೪. ಮಾತಿನ ಮಲ್ಲ, ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್‌ ಇನ್ನಿಲ್ಲ
೫. ಬಿಜೆಪಿ ಮುಖಂಡನ ಪುತ್ರನಿಂದ ರೆಸ್ಟೋರೆಂಟ್‌ನಲ್ಲಿ ದಾಂಧಲೆ; 10 ದಿನವಾದ್ರೂ ಆಗಿಲ್ಲ ಅರೆಸ್ಟ್‌

ಕರ್ನಾಟಕ

JDS Politics : ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ನಿರ್ಧಾರವೇ ಅಂತಿಮ, ನಮ್ಮಿಬ್ಬರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದ ರೇವಣ್ಣ

JDS Politics: ಭವಾನಿ ರೇವಣ್ಣ ಅವರು ಹಾಸನ ಕ್ಷೇತ್ರದ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ರಾಜಕೀಯ ಊಹಾಪೋಹಗಳಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

VISTARANEWS.COM


on

Edited by

JDS Politics
Koo

ಹಾಸನ: ಕುಮಾರಣ್ಣ ನಮ್ಮ ಸರ್ವೋಚ್ಚ ನಾಯಕ. ಎಚ್‌.ಡಿ.ದೇವೇಗೌಡರು, ಎಚ್‌.ಡಿ. ಕುಮಾರಸ್ವಾಮಿ ಹಾಗೂ ಜಿಲ್ಲೆಯ ಶಾಸಕರು ಕುಳಿತು ಟಿಕೆಟ್‌ ನೀಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ನಾನು ಬದುಕಿರುವವರೆಗೂ ಕುಮಾರಸ್ವಾಮಿ ಹಾಗೂ ನಾನು ಹೊಡೆದಾಡುವ ಪ್ರಶ್ನೆಯೇ ಇಲ್ಲ, ನಮ್ಮಿಬ್ಬರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ (JDS Politics) ಹೇಳಿದ್ದಾರೆ.

ಹಾಸನ ಕ್ಷೇತ್ರ ಟಿಕೆಟ್‌ ಫೈಟ್ ಬಗ್ಗೆ ನಗರದಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಅವರು, ದೇವೇಗೌಡರ ಕುಟುಂಬದವರಾದ ಕುಮಾರಣ್ಣ, ರೇವಣ್ಣ ಹೊಡೆದಾಡುತ್ತಾರೆ ಎಂದು ತಿಳಿದುಕೊಂಡಿದ್ದರೆ ಅಂತಹವರಿಗೆ ಭ್ರಮನಿರಸನ ಆಗುತ್ತದೆ. ಆತನಿಗೆ ಎರಡು ಬಾರಿ ಬೈಪಾಸ್ ಸರ್ಜರಿ ಆಗಿದೆ, ಹಗಲು ರಾತ್ರಿ ಎನ್ನದೆ ಪಕ್ಷಕ್ಕಾಗಿ ಹೋರಾಟ ಮಾಡುತ್ತಿದ್ದಾನೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

ʻʻನಮ್ಮ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮವಾಗಿ ತೀರ್ಮಾನ ಮಾಡುವುದು ದೇವೇಗೌಡರು, ಕುಮಾರಸ್ವಾಮಿ, ಸಿ.ಎಂ ಇಬ್ರಾಹಿಂ ಅವರು. ಪ್ರಜ್ವಲ್ ಹೇಳಿದರೂ ಅಷ್ಟೇ, ರೇವಣ್ಣ ಹೇಳಿದರೂ ಅಷ್ಟೇ ಎಂದ ಅವರು, ಬೇಲೂರಲ್ಲಿ, ಕೆ.ಆರ್.ಪೇಟೆಯಲ್ಲಿ ನಿಲ್ಲುತ್ತಾರೆ ಎನ್ನುತ್ತಾರೆ, ಸೀಟ್ ಕೊಟ್ಟೇವಾ? ಇವತ್ತು ಅರಕಲಗೂಡಿನಲ್ಲಿ ಟಿಕೆಟ್ ಕೊಡಿ ಎನ್ನುತ್ತಾರೆ, ಕೊಡುತ್ತೇವಾ? ಪಾಪ ಭವಾನಿ ಅವರನ್ನು ಕಾರ್ಯಕ್ರಮಕ್ಕೆ ಕರೆಯುತ್ತಾರೆ ಹೋಗಬೇಕು. ಪ್ರಜ್ವಲ್‌ ಹಾಗೂ ದೇವೇಗೌಡರಿಗೆ ಓಟು ಹಾಕಿದ್ದಾರೆ. ಆದ್ದರಿಂದ ಹೋಗಬೇಕಾಗುತ್ತದೆʼʼ ಎಂದರು.

ಇದನ್ನೂ ಓದಿ | Karnataka Politics : ಬಿಜೆಪಿಯಿಂದಲೂ ರಥಯಾತ್ರೆ ಪ್ಲಾನ್‌: ಅರುಣ್‌ ಸಿಂಗ್‌ ಸುಳಿವು

ʻʻಕಳೆದ ಮೂರು ದಿನದಿಂದ ಹಾಸನ ಟಿಕೆಟ್‌ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮ ಜಿಲ್ಲೆಯ ಎಲ್ಲಾ ಸೀಟ್ ಬಗ್ಗೆ ಕುಮಾರಸ್ವಾಮಿ, ಶಾಸಕರು, ಅಧ್ಯಕ್ಷರು, ದೇವೇಗೌಡರ ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇವೆ. ನಾನಾಗಲಿ, ಪ್ರಜ್ವಲ್ ಆಗಲಿ ಏನು ಹೇಳುತ್ತೇವೆ ಎಂಬುವುದು ಮುಖ್ಯವಲ್ಲ ಎಂದು ಟಿಕೆಟ್ ಹಂಚಿಕೆ ಗೊಂದಲಕ್ಕೆ ತೆರೆ ಎಳೆದರು.

ʻʻಕುಟುಂಬ ರಾಜಕಾರಣ ಎನ್ನುವುದಾದರೆ ಎಲ್ಲ ರಾಜಕೀಯ ಪಕ್ಷದ ನಾಯಕರು, ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂದು ಕಾನೂನು ಮಾಡಲಿ. ಬೇಕಿದ್ದರೆ ಪ್ರಜ್ವಲ್, ಸೂರಜ್‌ ರಾಜಿನಾಮೆ ಕೊಡಿಸುತ್ತೇನೆ. ಕುಮಾರಸ್ವಾಮಿ ಏನು ಹೇಳುತ್ತಾರೆ ಅದೇ ನಮಗೆ ಅಂತಿಮʼʼ ಎಂದ ಅವರು, ದೇವೇಗೌಡರ ಕಣ್ಣಮುಂದೆ ಸರ್ಕಾರ ತರಬೇಕು ಎಂದು ಕುಮಾರಸ್ವಾಮಿ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | B.S. Yediyurappa : ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ಬಿ.ಎಸ್‌. ಯಡಿಯೂರಪ್ಪ ಮಹತ್ವದ ಘೋಷಣೆ

ಕೊಟ್ಟ ಮಾತಿನಂತೆ ನಡೆಯುವ ರಾಜಕಾರಣಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ಕೊಟ್ಡ ಮಾತಿನಂತೆ ರೈತರ ಸಾಲ ಮನ್ನಾ ಮಾಡಿದರು. ನಮಗೆ ಬಹುಮತ ಬಂದಿಲ್ಲ, ಸಾಲ ಮನ್ನಾ ಮಾಡಲು ಆಗಲ್ಲ ಎನ್ನಬಹುದಿತ್ತು. ಆದರೆ ಕೊಟ್ಟ ಮಾತಿನಂತೆ ಕುಮಾರಸ್ವಾಮಿ ನಡೆದುಕೊಡಿದ್ದಾರೆ. ಹೊಸ ಶಾಲೆ, ಕಾಲೇಜುಗಳನ್ನು ಮಾಡಲು ಕುಮಾರಸ್ವಾಮಿ ಬರಬೇಕಾಯಿತು ಎಂದು ವಿರೋಧಿಗಳ ವಿರುದ್ಧ ಹರಿಹಾಯ್ದರು.

ಬಿಜೆಪಿಯ ಎಲ್ಲ ನಾಯಕರು ಬಂದು ಬಂದು ಜೆಡಿಎಸ್ ಬಗ್ಗೆ ಮಾತನಾಡುತ್ತಾರೆ. ನಮಗೆ ಶಕ್ತಿ ಇಲ್ಲ ಎಂದ ಮೇಲೆ ನಮ್ಮ ಹೆಸರು ಯಾಕೆ ಹೇಳುತ್ತಾರೆ. ಕಾಂಗ್ರೆಸ್ ನಾಯಕರಿಗೆ ಮಾನ ಮರ್ಯಾದೆ ಇದ್ದರೆ ಬಿಜೆಪಿ ಜತೆ ವಿಲೀನ ಮಾಡಲಿ ಎಂದರು.

ʻʻಹಾಸನ ಜಿಲ್ಲೆಗೆ ಸಂಬಂಧಪಟ್ಟಂತೆ ಕಳೆದ ಹತ್ತು ವರ್ಷಗಳಿಂದ ಎರಡು ರಾಷ್ಟ್ರೀಯ ಪಕ್ಷಗಳು ಈ ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕಿದ್ದಾರೆ ಎಂದು ಘಂಟಾಘೋಷವಾಗಿ ಹೇಳುತ್ತಿದ್ದೇನೆ. ಈ ಜಿಲ್ಲೆಯ ಜನರು ರಾಜಕೀಯವಾಗಿ ದೇವೇಗೌಡರಿಗೆ, ನನಗೆ, ಪ್ರಜ್ವಲ್‌ಗೆ ಶಕ್ತಿ ತುಂಬಿದ್ದಾರೆ. ಜಿಲ್ಲೆಯ ಜನತೆ, ನಾಯಕರ ಆಶೀರ್ವಾದದಿಂದ ನನೆಗುದಿಗೆ ಬಿದ್ದಿದ್ದ ಕೆಲಸಗಳು ಆಗಿವೆ. ಕೆಲ ಬಿಜೆಪಿ ಮುಖಂಡರು ಹಾಸನ ಬಜೆಟ್ ಎನ್ನುತ್ತಿದ್ದರು. ಈಗ ಬೇರೆ ಬೇರೆ ಜಿಲ್ಲೆಗೆ ಏನು ಅನುದಾನ ಕೊಟ್ಟಿದಾರೆ. ಹಾಗಿದ್ದರೆ ಅದು ಬಿಜೆಪಿ ಬಜೆಟ್ಟಾ? ಏನು ನನಗೆ ಗೊತ್ತಿಲ್ಲʼʼ ಎಂದರು ರೇವಣ್ಣ.

Continue Reading

ಕರ್ನಾಟಕ ಎಲೆಕ್ಷನ್

Kshatriya Convention : ನಾಡಿನ ರಕ್ಷಣೆ, ಪರಂಪರೆಗೆ ಕ್ಷತ್ರಿಯರ ಕೊಡುಗೆ ಅಪಾರ: ಡಾ. ಸಿ.ಎನ್‌. ಅಶ್ವತ್ಥನಾರಾಯಣ

ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಆಯೋಜಿಸಿದ್ದ ಕ್ಷತ್ರಿಯ ಸಮಾವೇಶದಲ್ಲಿ (Kshatriya Convention) ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಮಾತನಾಡಿದರು.

VISTARANEWS.COM


on

Edited by

Dr CN Ashwathnarayana speech in Kshatriya Convention
Koo

ಬೆಂಗಳೂರು: ನಾಡಿನ ರಕ್ಷಣೆ ಹಾಗೂ ಸಂಸ್ಕೃತಿ ಪರಂಪರೆಗಳ ಹಿರಿಮೆಗೆ ಕ್ಷತ್ರಿಯರ ಕೊಡುಗೆ ಅಪಾರವಾದದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ಕರ್ನಾಟಕ ಕ್ಷತ್ರಿಯರ ಒಕ್ಕೂಟದ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬೃಹತ್ ಕ್ಷತ್ರಿಯ ಸಮಾವೇಶದಲ್ಲಿ (Kshatriya Convention) ಪಾಲ್ಗೊಂಡು ಅವರು ಮಾತನಾಡಿದರು.

“ಕ್ಷತ್ರಿಯರ ನಡೆ, ರಾಜಧಾನಿಯ ಕಡೆ” ಎಂಬ ಘೋಷವಾಕ್ಯದೊಂದಿಗೆ ಈ ಸಮಾವೇಶ ನಡೆಯುತ್ತಿದೆ. ಅದಕ್ಕೂ ಮೀರಿ ಕ್ಷತ್ರಿಯರ ನಡೆ ವಿಧಾನಸೌಧದ ಒಳಕ್ಕೂ ಮುಂದುವರಿಯಬೇಕು ಎಂದು ಅವರು ಈ ಸಂದರ್ಭದಲ್ಲಿ ಆಶಿಸಿದರು. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಕ್ಷತ್ರಿಯರ ಹಿತರಕ್ಷಣೆಗೆ ಬದ್ಧವಾಗಿದ್ದು, ಅದಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ಹೇಳಿದರು.

ಇದನ್ನೂ ಓದಿ : Kshatriya Convention : ಕ್ಷತ್ರಿಯ ಸಮಾಜದ ಜತೆಗೆ ಸರ್ಕಾರ ಸದಾ ಇರುತ್ತದೆ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

ಅಖಂಡ ಭಾರತ ನಿರ್ಮಾಣಕ್ಕೆ ಕ್ಷತ್ರಿಯರ ಕೊಡುಗೆ ಏನೆಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ನಮ್ಮ ಧರ್ಮ, ಭಾಷೆ ಹಾಗೂ ಭೂಪ್ರದೇಶದ ರಕ್ಷಣೆಗೆ ಹೆಚ್ಚಿನ ಕೊಡುಗೆ ನೀಡಿರುವ ಕ್ಷತ್ರಿಯರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಆರವಿಂದ ಲಿಂಬಾವಳಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೂ ಮಾತನಾಡಿದರು. ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್, ತಿಗಳರ ಜನಾಂಗದ ಮುಖಂಡ ಸುಬ್ಬಣ್ಣ ಮತ್ತಿತರರು ಇದ್ದರು.

Continue Reading

ಕರ್ನಾಟಕ

Baraguru Ramachandrappa : ಕವಿ ಗೋಷ್ಠಿಗೆ ಹೋಗಿದ್ದ ಬರಗೂರು ರಾಮಚಂದ್ರಪ್ಪ ಆರೋಗ್ಯದಲ್ಲಿ ಏರುಪೇರು

ಹರಿಹರದಲ್ಲಿ ನಡೆಯುತ್ತಿರುವ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿರುವ ಬರಗೂರು ರಾಮಚಂದ್ರಪ್ಪ ಅವರು ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

VISTARANEWS.COM


on

Edited by

ಬರಗೂರು ರಾಮಚಂದ್ರಪ್ಪ ಅನಾರೋಗ್ಯ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಬರಗೂರು ಆರಾಮವಾಗಿದ್ದಾರೆ.
Koo

ದಾವಣಗೆರೆ: ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ (Baraguru Ramachandrappa) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯ ಹರಿಹರದಲ್ಲಿ ಆಯೋಜನೆಗೊಂಡಿರುವ ಬಂಡಾಯ ಸಾಹಿತ್ಯ ಗೋಷ್ಠಿಯಲ್ಲಿ ಭಾಗವಹಿಸಿದ್ದ ಬರಗೂರು ಅವರನ್ನು ಹರಿಹರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಸಾಮಾನ್ಯ ಅನಾರೋಗ್ಯವಾಗಿದ್ದು, ಯಾವುದೇ ಆತಂಕವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುತ್ತಿರುವ ಬರಗೂರು

ಹರಿಹರದ ಗುರುಭವನದಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ಕಾರು ಏರುವಾಗ ತಲೆ ಸುತ್ತು ಬಂದು ಸುಸ್ತಾದ ಬರಗೂರು ರಾಮಚಂದ್ರಪ್ಪ ಅವರು ಅಲ್ಲೇ ಕುಸಿದು ಕುಳಿತರು. ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಯಿತು.

Continue Reading

ಕರ್ನಾಟಕ

IAF Fighter Jets Crash: ಯುದ್ಧ ವಿಮಾನ ದುರಂತ; ಸ್ವಗ್ರಾಮಕ್ಕೆ ವಿಂಗ್‌ ಕಮಾಂಡರ್‌ ಪಾರ್ಥಿವ ಶರೀರ, ಮುಗಿಲು ಮುಟ್ಟಿದ ಆಕ್ರಂದನ

IAF Fighter Jets Crash: ಯುದ್ಧ ವಿಮಾನ ದುರುಂತದಲ್ಲಿ ಹುತಾತ್ಮರಾದ ವಿಂಗ್‌ ಕಮಾಂಡರ್‌ ಹನುಮಂತರಾವ್‌ ಸಾರಥಿ ಅವರ ಪಾರ್ಥಿವ ಶರೀರವು ಸ್ವಗ್ರಾಮಕ್ಕೆ ಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ, ಸಚಿವೆ ಶಶಿಕಲಾ ಜೊಲ್ಲೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌ ಸೇರಿದಂತೆ ಇತರೆ ಗಣ್ಯರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

VISTARANEWS.COM


on

Edited by

Koo

ಬೆಳಗಾವಿ: ಗ್ವಾಲಿಯರ್ ಸಮೀಪ ನಡೆದ ವಾಯುಪಡೆಯ ಯುದ್ಧ ವಿಮಾನಗಳ (IAF Fighter Jets Crash) ಪತನ ವೇಳೆ ಹುತಾತ್ಮರಾದ ಪೈಲಟ್, ವಿಂಗ್ ಕಮಾಂಡರ್‌ ಬೆಳಗಾವಿಯ ಗಣೇಶಪುರದ ಹನುಮಂತರಾವ್ ರೇವಣಸಿದ್ದಪ್ಪ ಸಾರಥಿ ಅವರಿಗೆ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಹುತಾತ್ಮ ಹನುಮಂತರಾವ್‌ ಮನೆಗೆ ಭೇಟಿ ನೀಡಿದ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಅಂತಿಮ ದರ್ಶನ ಮಾಡಿ, ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಯಡಿಯೂರಪ್ಪ ಅವರ ಜತೆ ಸಚಿವೆ ಶಶಿಕಲಾ ಜೊಲ್ಲೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌ ಇದ್ದರು.

IAF Fighter Jets Crash

ಯೋಧನ ಪಾರ್ಥೀವ ಶರೀರವನ್ನು ಸೇನೆಯ‌ ವಿಶೇಷ ವಿಮಾನದ ಮೂಲಕ ಭಾನುವಾರ ಮಧ್ಯಾಹ್ನ 12.30 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ.ದರ್ಶನ್, ಮತ್ತಿತರ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಗಣೇಶಪುರ ಬಡಾವಣೆ ಸಂಪೂರ್ಣ ಸ್ತಬ್ಧ

ಪಾರ್ಥೀವ ಶರೀರವು ಸ್ವಗ್ರಾಮಕ್ಕೆ ಬಂದೊಡನೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಂತಿಮ ಯಾತ್ರೆ ಉದ್ದಕ್ಕೂ ಹುತಾತ್ಮ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಾಯಿತು. ಬೆಳಗಾವಿಯ ಗಣೇಶಪುರ ವೃತ್ತದಿಂದ ನಿವಾಸದವರೆಗೆ ಸಾರ್ವಜನಿಕರು ರಸ್ತೆಯ ಎರಡು ಬದಿಯಲ್ಲಿ ನಿಂತು ಹೂ ಹಾಕಿ ನಮನ ಸಲ್ಲಿಸಿದರು. ಹನುಮಂತರಾವ್‌ ಅಮರ ರಹೇ ಅಮರ ರಹೇ ಎಂದು ಘೋಷಣೆ ಕೂಗಿದರು. ಹುತಾತ್ಮ ಯೋಧನಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಸ್ವಯಂಪ್ರೇರಣೆಯಿಂದ ಅಂಗಡಿಮುಂಗಟ್ಟು ಬಂದ್ ಮಾಡಿದ್ದರು. ಗಣೇಶಪುರ ಬಡಾವಣೆ ಸಂಪೂರ್ಣ ಸ್ತಬ್ಧವಾಗಿ ನೀರವ ಮೌನ ಆವರಿಸಿತ್ತು.

IAF Fighter Jets Crash

ದೇಶಕ್ಕೆ ತುಂಬಲಾರದ ನಷ್ಟ- ಜಿಲ್ಲಾಧಿಕಾರಿ ಪಾಟೀಲ ಸಂತಾಪ

ಗ್ವಾಲಿಯರ್‌ನಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿದ್ದ ಯುದ್ಧ ವಿಮಾನ ಪತನದಿಂದ ಬೆಳಗಾವಿಯ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ನಿಧನರಾದ ವಿಷಯ ತಿಳಿದು ತುಂಬ ದುಃಖವಾಯಿತು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಂತಾಪ ವ್ಯಕ್ತಪಡಿಸಿದರು.

ಇದನ್ನೂ ಓದಿ: Star Beauty Secret: ನ್ಯಾಚುರಲ್‌ ಆಗಿರಲು ಬಯಸುವ ರಾಧಿಕಾ ಆಪ್ಟೆ

ಹೆಮ್ಮೆಯ ಯೋಧ ಹನುಮಂತ ರಾವ್‌ ಅವರನ್ನು ಕಳೆದುಕೊಂಡಿದ್ದು ದೇಶಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬದ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಜಿಲ್ಲಾಧಿಕಾರಿ ಪಾಟೀಲ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Continue Reading
Advertisement
Twitter Removed option to send direct message Says some reports
ಗ್ಯಾಜೆಟ್ಸ್38 seconds ago

Direct Message ಆಯ್ಕೆ ತೆಗೆದು ಹಾಕಿದ ಟ್ವಿಟರ್!

Ram Mandir Stone
ದೇಶ5 mins ago

Ram Lalla New Idol: ಅಯೋಧ್ಯೆ ಮಂದಿರದಲ್ಲಿ ರಾಮನ ನೂತನ ಮೂರ್ತಿ, ನೇಪಾಳದಿಂದ ಬರುತ್ತಿವೆ ವಿಶೇಷ ಶಿಲೆಗಳು

JDS Politics
ಕರ್ನಾಟಕ8 mins ago

JDS Politics : ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ನಿರ್ಧಾರವೇ ಅಂತಿಮ, ನಮ್ಮಿಬ್ಬರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದ ರೇವಣ್ಣ

Arshdeep Singh
ಕ್ರಿಕೆಟ್10 mins ago

Arshdeep Singh | ಅರ್ಶ್​ದೀಪ್​ ಸಿಂಗ್​ಗೆ ಮಾಜಿ ಬೌಲರ್​ ಲಕ್ಷ್ಮೀಪತಿ ಬಾಲಾಜಿ ಕೊಟ್ಟ ಸಲಹೆಯೇನು?

Dr CN Ashwathnarayana speech in Kshatriya Convention
ಕರ್ನಾಟಕ ಎಲೆಕ್ಷನ್11 mins ago

Kshatriya Convention : ನಾಡಿನ ರಕ್ಷಣೆ, ಪರಂಪರೆಗೆ ಕ್ಷತ್ರಿಯರ ಕೊಡುಗೆ ಅಪಾರ: ಡಾ. ಸಿ.ಎನ್‌. ಅಶ್ವತ್ಥನಾರಾಯಣ

Sandalwood Star Fashion
ಫ್ಯಾಷನ್25 mins ago

Sandalwood Star Fashion : ಅಜೆರ್ಬೈಜಾನ್‌ನ ವಿಂಟರ್‌ ಸ್ಟ್ರೀಟ್‌ ಫ್ಯಾಷನ್‌ಗೆ ಸೈ ಎಂದ ನಟಿ ಶ್ರದ್ಧಾ ಶ್ರೀನಾಥ್‌

vishnuvardhan smaraka
ಸಿನಿಮಾ29 mins ago

Vishnuvardhan: ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಯ ಫೋಟೊಗಳು ಇಲ್ಲಿವೆ

ಬರಗೂರು ರಾಮಚಂದ್ರಪ್ಪ ಅನಾರೋಗ್ಯ
ಕರ್ನಾಟಕ32 mins ago

Baraguru Ramachandrappa : ಕವಿ ಗೋಷ್ಠಿಗೆ ಹೋಗಿದ್ದ ಬರಗೂರು ರಾಮಚಂದ್ರಪ್ಪ ಆರೋಗ್ಯದಲ್ಲಿ ಏರುಪೇರು

Uber Driver Refuses Ride Because He is Sleepy
ವೈರಲ್ ನ್ಯೂಸ್34 mins ago

ರೈಡ್ ಕ್ಯಾನ್ಸಲ್​ ಮಾಡಲು ಉಬರ್​ ಚಾಲಕ ಕೊಟ್ಟ ಕಾರಣವನ್ನು ಮೆಚ್ಚಿಕೊಂಡ ಯುವತಿ; ನೆಟ್ಟಿಗರಿಂದಲೂ ಹೊಗಳಿಕೆ

Railway Minister's cleaning at Vande Bharat train video goes viral
ದೇಶ43 mins ago

Viral Video: ರೈಲ್ವೆ ಸಚಿವರ ಕ್ಲೀನಿಂಗ್ ವಿಡಿಯೋ ವೈರಲ್!, ಈಗ ವಂದೇ ಭಾರತ್ ಟ್ರೈನ್‌ಗಳಲ್ಲಿ ಸ್ವಚ್ಛತಾ ವ್ಯವಸ್ಥೆ ಬದಲು

7th Pay Commission
ನೌಕರರ ಕಾರ್ನರ್3 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

betel nut smuggling Areca News
ಕರ್ನಾಟಕ1 month ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

suvachana featured image
ಸುವಚನ2 days ago

ದಿನಕ್ಕೊಂದು ಸುವಚನ, ಬದುಕಿನಲ್ಲಿ ಅಳವಡಿಸಿಕೊಳ್ಳೋಣ

Teacher Transfer
ನೌಕರರ ಕಾರ್ನರ್3 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ3 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

horoscope today
ಪ್ರಮುಖ ಸುದ್ದಿ6 months ago

Horoscope Today | ದ್ವಾದಶಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೀಗಿದೆ

7th Pay Commission
ನೌಕರರ ಕಾರ್ನರ್3 months ago

7th Pay Commission | 7ನೇ ವೇತನ ಆಯೋಗ ರಚನೆ; ಶಿಫಾರಸನ್ನು ನಾವೇ ಜಾರಿಗೆ ತರುತ್ತೇವೆ ಎಂದ ಸಿಎಂ

graduate teacher promotion
ನೌಕರರ ಕಾರ್ನರ್3 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ

Hariprakash Konemane
ಪ್ರಮುಖ ಸುದ್ದಿ6 months ago

ವಿಸ್ತಾರ ಮೀಡಿಯಾ: ಏನು, ಎತ್ತ? | ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮುಕ್ತ ಮಾತು

wife finds out that husband
ವೈರಲ್ ನ್ಯೂಸ್4 months ago

ಸೆಕ್ಸ್​ಗೆ ಒಪ್ಪದ ಪತಿಯ ನಿಜ ಸ್ವರೂಪ ತಿಳಿದು ದಂಗಾದ ಮಹಿಳೆ; 8 ವರ್ಷದ ನಂತರ ತಿಳಿಯಿತು ಸತ್ಯ!

Rahu Kaala
ಧಾರ್ಮಿಕ2 hours ago

Rahu Kaala : ರಾಹು ಕಾಲದಲ್ಲಿ ಯಾವೆಲ್ಲಾ ಕೆಲಸ ಮಾಡಬಾರದು?, ಯಾವ ಕೆಲಸಕ್ಕೆ ಈ ಕಾಲ ಸೂಕ್ತ?

vasishta simha and haripriya reception
ಸಿನಿಮಾ8 hours ago

Vasishta Simha and Haripriya: ಸಿಂಹಪ್ರಿಯಾ ಅದ್ಧೂರಿ ಆರತಕ್ಷತೆ; ಶುಭಕೋರಿದ ಗಣ್ಯರು

Dk Shivakumar questions PM Modi, asks if he has fulfilled even one of his promises
ಕರ್ನಾಟಕ22 hours ago

Prajadhwani: ಮೋದಿ ಕೊಟ್ಟ ಭರವಸೆಗಳಲ್ಲಿ ಒಂದಾದರೂ ಈಡೇರಿಸಿದ್ದಾರಾ: ಡಿ.ಕೆ. ಶಿವಕುಮಾರ್

karnataka election news bhavani swaroop to contest for hassan jds ticket a rift among the activists
ಕರ್ನಾಟಕ23 hours ago

Karnataka Election: ಹಾಸನ ಜೆಡಿಎಸ್‌ ಟಿಕೆಟ್‌ಗೆ ಭವಾನಿ-ಸ್ವರೂಪ್‌ ಪೈಪೋಟಿ; ಕಾರ್ಯಕರ್ತರಲ್ಲಿ ಇಬ್ಬಣ

Janardhana Reddy
ಕರ್ನಾಟಕ2 days ago

Karnataka Election: ಫೆಬ್ರವರಿ 10ರೊಳಗೆ ಕೆಆರ್‌ಪಿಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಜನಾರ್ದನ ರೆಡ್ಡಿ

Kumaraswamy is like a stork goes where there is a fish says CPY
ಕರ್ನಾಟಕ2 days ago

Karnataka Election: ಸಿ.ಪಿ. ಯೋಗೇಶ್ವರ್‌-ಎಚ್.ಡಿ. ಕುಮಾರಸ್ವಾಮಿ ಕೊಕ್ಕರೆ, ಮೀನು ಜಟಾಪಟಿ!

Last time the ticket was lost at the last minute I will contest wherever the party says Vijayendra
ಕರ್ನಾಟಕ2 days ago

Karnataka Election: ಯಡಿಯೂರಪ್ಪ ಎಲ್ಲರೂ ಒಪ್ಪಿರುವ ಧೀಮಂತ ನಾಯಕ; ಅವರಿಗೆ ಕಲ್ಲು ಹೊಡೆದರೆ ಬಿಜೆಪಿಗೆ ನಷ್ಟ: ವಿಜಯೇಂದ್ರ

ಕರ್ನಾಟಕ2 days ago

Siddeshwara Swamiji: ಶಾಲಾ ವಿದ್ಯಾರ್ಥಿಗಳಿಂದ ಸಿದ್ದೇಶ್ವರ ಶ್ರೀಗಳ ಮರುಸೃಷ್ಟಿ; ದೃಶ್ಯ ರೂಪಕ ವೈರಲ್‌

ಕರ್ನಾಟಕ2 days ago

Padma Awards 2023: ಮುಖ್ಯಮಂತ್ರಿಯಿಂದ ಪದ್ಮ ಪುರಸ್ಕೃತರ ಭೇಟಿ; ಸನ್ಮಾನ, ಅಭಿನಂದನೆ

Groundnut Oil
ವಿಡಿಯೋ2 days ago

Groundnut Oil | ಒಂದು ಗಾಣದಿಂದ ತಿಂಗಳಿಗೆ 30,000 ಲಾಭ

ಟ್ರೆಂಡಿಂಗ್‌

ಕಾಪಿರೈಟ್ © 2022 ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್. ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಅವರಿಂದ ಕಸ್ಟಮೈಸ್ ಮಾಡಲಾಗಿದೆ

error: Content is protected !!
VISTARA NEWS KANNADA

FREE
VIEW