Halal Certification | ಹಲಾಲ್‌ ವಿಷಯದಿಂದ ಅಂತರ ಕಾಯ್ದುಕೊಂಡ ಸಿಎಂ ಬೊಮ್ಮಾಯಿ; ಖಾಸಗಿ ವಿಧೇಯಕಕ್ಕೆ ಹಿನ್ನಡೆ - Vistara News

ಕರ್ನಾಟಕ

Halal Certification | ಹಲಾಲ್‌ ವಿಷಯದಿಂದ ಅಂತರ ಕಾಯ್ದುಕೊಂಡ ಸಿಎಂ ಬೊಮ್ಮಾಯಿ; ಖಾಸಗಿ ವಿಧೇಯಕಕ್ಕೆ ಹಿನ್ನಡೆ

ಹಲಾಲ್‌ ಪ್ರಮಾಣಪತ್ರ (Halal Certification) ನೀಡುವ ಖಾಸಗಿ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕೆಂದು ಅನೇಕ ಸಮಯದಿಂದ ಸಂಘ ಪರಿವಾರದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಈ ಕುರಿತು ಖಾಸಗಿ ವಿಧೇಯಕ ಮಂಡನೆಗೆ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಮುಂದಾಗಿದ್ದರು.

VISTARANEWS.COM


on

CM bommai says gvt has nothing to do with halal-certification-ban bill
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ಆಹಾರ ಪದಾರ್ಥಗಳೂ ಸೇರಿ ಯಾವುದೇ ಉತ್ಪನ್ನಗಳಿಗೆ ಖಾಸಗಿ ಸಂಸ್ಥೆಗಳು ಹಲಾಲ್‌ ಪ್ರಮಾಣಪತ್ರ (Halal Certification) ನೀಡುವುದನ್ನು ನಿಷೇಧಿಸಬೇಕು ಎಂದು ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಮಂಡಿಸಲು ಮುಂದಾಗಿದ್ದ ಖಾಸಗಿ ವಿಧೇಯಕಕ್ಕೆ ಪ್ರಾರಂಭದಲ್ಲೇ ಹಿನ್ನಡೆ ಉಂಟಾಗಿದೆ.

ಹಲಾಲ್‌ ಪ್ರಮಾಣಪತ್ರ ವಿಚಾರಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಲಾಲ್‌ ಪ್ರಮಾಣಪತ್ರಗಳನ್ನು ಈ ಹಿಂದೆ ಆಹಾರ ಪದಾರ್ಥಗಳಿಗೆ ನೀಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಸೌಂದರ್ಯ ವರ್ಧಕಗಳು, ರಿಯಲ್‌ ಎಸ್ಟೇಟ್‌ ಉದ್ಯಮ, ಆಸ್ಪತ್ರೆ, ದಿನಬಳಕೆ ವಸ್ತುಗಳಿಗೂ ನೀಡಲಾಗುತ್ತಿದೆ. ಇದನ್ನು ತಡೆಯಲು ಎನ್‌. ರವಿಕುಮಾರ್‌ ಖಾಸಗಿ ವಿಧೇಯಕ ಮಂಡನೆಗೆ ಮುಂದಾಗಿದ್ದರು.

ಆಹಾರ ಸುರಕ್ಷತೆ ಕಾಯ್ದೆಯಲ್ಲಿ ತಿದ್ದುಪಡಿ ತರಲು ಅವಕಾಶ ನೀಡಬೇಕು ಎಂದು ರವಿಕುಮಾರ್‌ ಖಾಸಗಿ ವಿಧೇಯಕ ಮಂಡನೆಗೆ ಅನುಮತಿ ಕೋರಿದ್ದರು. ಇದು ಚುನಾವಣೆ ವರ್ಷದಲ್ಲಿ ಬಿಜೆಪಿಯ ಹಿಂದುತ್ವ ಕಾರ್ಡ್‌ ಎಂದೂ ವಿಶ್ಲೇಷಣೆ ಮಾಡಲಾಗಿತ್ತು.

ಬೆಳಗಾವಿಯಲ್ಲಿ ಈ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದ ಕೂಡಲೆ ಸಿಎಂ ಬಸವರಾಜ ಬೊಮ್ಮಾಯಿ ಸಿಟ್ಟಿಗೆದ್ದರು. ನೀವು ಮೊದಲಿಗೆ ಈ ಹಲಾಲ್‌ ವಿಚಾರದಿಂದ ಹೊರಗೆ ಬನ್ನಿ. ಪ್ರಪಂಚ ಸಾಕಷ್ಟು ಮುಂದುವರಿದಿದೆ ಎಂದರು. ನಿಮ್ಮದೇ ಪಕ್ಷದ ವಿಧಾನ ಪರಿಷತ್‌ ಸದಸ್ಯರು ಖಾಸಗಿ ವಿಧೇಯಕ ಮಂಡಿಸಿದ್ದಾರಲ್ಲ ಎಂದು ಪ್ರತಿಪ್ರಶ್ನೆ ಕೇಳಿದ್ದಕ್ಕೆ, ಸರ್ಕಾರಕ್ಕೂ ಈ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜಾರಕಿಹೊಳಿ, ಈಶ್ವರಪ್ಪ ಸಂಪರ್ಕದಲ್ಲಿದ್ದೇನೆ
ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಅವರು ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸದೇ ಇರುವುದು ಬಹಿಷ್ಕಾರವಲ್ಲ. ತಮ್ಮ ಮೇಲಿದ್ದ ಪ್ರಕರಣಗಳಲ್ಲಿ ಮುಕ್ತರಾದ ಮೇಲೆ ಮತ್ತೊಮ್ಮೆ ಸಂಪುಟಕ್ಕೆ ಸೇರಬೇಕೆನ್ನುವ ಅವರ ಚಿಂತನೆ ಸರಿಯಿದೆ. ಅವರ ವಿಚಾರವನ್ನು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಚರ್ಚೆ ಮಾಡಿದ್ದೇನೆ. ಅವರೂ ಕೂಡ ಸಕಾರಾತ್ಮಕ ವಾಗಿದ್ದಾರೆ. ಮಿಕ್ಕ ವಿಚಾರಗಳನ್ನು ವೈಯಕ್ತಿಕವಾಗಿ ಹೇಳಲಾಗುವುದು. ಕೆಲವು ವಿಚಾರಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದರು.

ಸಿಬಿಐ ದಾಳಿ
ಸಿಬಿಐ ದಾಳಿ ಬಗ್ಗೆ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಸಂವಿಧಾನಾತ್ಮಕವಾಗಿ ಸ್ವಾಯತ್ತವಾಗಿರುವ ಸಂಸ್ಥೆ ಅವರ ಬಳಿ ಇರುವ ಪ್ರಕರಣ ಇದೆ ಅದರ ಮೇಲೆ ಅವರು ಕ್ರಮ ಕೈಗೊಳ್ಳುತ್ತಾರೆ. ಇದು ಡಿ.ಕೆ.ಶಿವಕುಮಾರ್ ಅವರಿಗೂ ತಿಳಿದಿರುವ ವಿಚಾರ ಎಂದರು.

ಇದನ್ನೂ ಓದಿ | Halal Certification | ಮತ್ತೆ ಮುನ್ನೆಲೆಗೆ ಬಂದ ಹಲಾಲ್‌ ಪ್ರಮಾಣ ಪತ್ರ ವಿಚಾರ: ಅಧಿವೇಶನದಲ್ಲಿ ವಿಧೇಯಕ ಮಂಡನೆಗೆ ಸಿದ್ಧತೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

HD Revanna: ಛೇ, ಎಂಥ ಸ್ಥಿತಿ ಬಂತಪ್ಪ; ಎಸ್‌ಐಟಿ ಸೆಲ್‌ನಲ್ಲಿ ಗಳಗಳನೆ ಅತ್ತ ಎಚ್‌.ಡಿ.ರೇವಣ್ಣ

HD Revanna: ಎಚ್‌.ಡಿ.ರೇವಣ್ಣ ಸಂಬಂಧಿಯಾದ ಸತೀಶ್‌ ಬಾಬು ಎಂಬಾತನು ಲೈಂಗಿಕ ದೌರ್ಜನ್ಯಕೀಡಾದ ಸಂತ್ರಸ್ತೆಯನ್ನು ಅಪಹರಿಸಿ, ಹುಣಸೂರಿನ ಕಾಳೇನಹಳ್ಳಿಯ ತೋಟದ ಮನೆಯಲ್ಲಿ ಇರಿಸಿದ್ದು, ಮಹಿಳೆಯನ್ನು ಎಸ್‌ಐಟಿ ಅಧಿಕಾರಿಗಳು ರಕ್ಷಿಸಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಎಸ್‌ಐಟಿ ಅಧಿಕಾರಿಗಳು ಎಚ್‌.ಡಿ.ರೇವಣ್ಣ ಅವರನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಮನೆಯಿಂದಲೇ ವಶಪಡಿಸಿಕೊಂಡಿಸಿಕೊಂಡಿದ್ದಾರೆ. ರೇವಣ್ಣ ಅವರನ್ನು ಭಾನುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

HD Revanna
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ (A 1) ಆಗಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ (HD Revanna) ಅವರನ್ನು ವಶಕ್ಕೆ ಪಡೆದುಕೊಂಡಿರುವ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ (Bowring Hospital) ವೈದ್ಯಕೀಯ ಪರೀಕ್ಷೆ (Medical Test) ಮಾಡಿಸಿದ್ದಾರೆ. ಇದಾದ ಬಳಿಕ ಎಚ್‌.ಡಿ.ರೇವಣ್ಣ ಅವರನ್ನು ಅಧಿಕಾರಿಗಳು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದು, ಇಡೀ ರಾತ್ರಿ ಎಸ್‌ಐಟಿ ಸೆಲ್‌ನಲ್ಲಿಯೇ ಮಾಜಿ ಸಚಿವ ಕಳೆಯಲಿದ್ದಾರೆ. ಇನ್ನು, ಎಸ್‌ಐಟಿ ಸೆಲ್‌ನಲ್ಲಿ ಎಚ್‌.ಡಿ.ರೇವಣ್ಣ ಅವರು ಗಳಗಳನೆ ಅತ್ತಿದ್ದಾರೆ ಎಂದು ತಿಳಿದುಬಂದಿದೆ.

ಎಚ್‌.ಡಿ.ದೇವೇಗೌಡರ ಮನೆಯಲ್ಲಿ ಎಚ್‌.ಡಿ. ರೇವಣ್ಣ ಅವರನ್ನು ವಶಪಡಿಸಿಕೊಂಡ ಎಸ್‌ಐಟಿ ಅಧಿಕಾರಿಗಳು ಮೊದಲು ಅವರನ್ನು ಸಿಐಡಿ ಕಚೇರಿಗೆ ಕರೆದುಕೊಂಡು ಹೋದರು. ಇದಾದ ಬಳಿಕ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಮತ್ತೆ ಸಿಐಡಿ ಕಚೇರಿಗೆ ಕರೆತಂದು, ಎಸ್‌ಐಟಿ ಸೆಲ್‌ನಲ್ಲಿ ಇರಿಸಿದರು. ಎಚ್‌.ಡಿ.ರೇವಣ್ಣ ಅವರು ಮಲಗಲು ಹಾಸಿಗೆ ಹಾಗೂ ಬೆಡ್‌ಶೀಟ್‌ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ. ಎಚ್‌.ಡಿ.ರೇವಣ್ಣ ಅವರನ್ನು ವಿಚಾರಣೆ ಮಾಡಲಿರುವ ಅಧಿಕಾರಿಗಳು, ಬಳಿಕ ವಿಶ್ರಾಂತಿಗೆ ಅವಕಾಶ ನೀಡಲಿದ್ದಾರೆ. ಸೆಲ್‌ನಲ್ಲಿ ರೇವಣ್ಣ ಅವರಿಗೆ ಒಂದು ಸಾಮಾನ್ಯ ಬೆಡ್‌ ಹಾಗೂ ಕುರ್ಚಿ ನೀಡಲಾಗಿದೆ. ಇದೆಲ್ಲವನ್ನೂ ಕಂಡ ರೇವಣ್ಣ ಅವರು ಕಣ್ಣೀರು ಹಾಕಿದ್ದಾರೆ. ಮಗ ವಿದೇಶಕ್ಕೆ ಪರಾರಿಯಾಗಿದ್ದಾನೆ. ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿದೆ. ಈಗ ನಾನು ಸೆಲ್‌ನಲ್ಲಿ ಇರಬೇಕಾಯಿತಲ್ಲ ಎಂಬುದನ್ನು ನೆನೆದು ರೇವಣ್ಣ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ಬೆಳಗ್ಗೆ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ. ಕೋರಮಂಗಲದಲ್ಲಿರುವ ನ್ಯಾಯಾಧೀಶರ ಎದುರು ಹಾಜರುಪಡಿಸಲಿರುವ ಅಧಿಕಾರಿಗಳು, ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ನ್ಯಾಯಾಧೀಶರು ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ರೇವಣ್ಣ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲು ಎಸ್‌ಐಟಿ ಅಧಿಕಾರಿಗಳಿಗೆ ಭಾನುವಾರ ಸಂಜೆವರೆಗೆ ಸಮಯವಿದೆ.

ನಮ್ಮನ್ನೆಲ್ಲ ಸಾಯಿಸ್ತಾರೆ ಎಂದ ಮಹಿಳೆ

ಮೈಸೂರಿನ ತೋಟದ ಮನೆಯಿಂದ ರಕ್ಷಿಸಲ್ಪಟ್ಟ ಸಂತ್ರಸ್ತ ಮಹಿಳೆಯು ಎಸ್‌ಐಟಿ ಅಧಿಕಾರಿಗಳ ಕಸ್ಟಡಿಯಲ್ಲಿದ್ದರೂ ರೇವಣ್ಣ ಕುಟುಂಬದ ಭಯದಲ್ಲಿದ್ದಾರೆ. “ನಮ್ಮನ್ನೆಲ್ಲ ಅವರು ಸಾಯಿಸಿಬಿಡ್ತಾರೆ. ನನಗೆ ಭಯವಾಗುತ್ತಿದೆ” ಎಂದಷ್ಟೇ ಮಹಿಳೆಯು ಹೇಳುತ್ತಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಭದ್ರತೆ ಕುರಿತು ಎಷ್ಟು ಹೇಳಿದರೂ ಮಹಿಳೆಯು ಮಾನಸಿಕವಾಗಿ ಕುಗ್ಗಿದ್ದಾರೆ. ಅವರಿಗೆ ಎಚ್‌.ಡಿ.ರೇವಣ್ಣ ಕುಟುಂಬಸ್ಥರು ಏನಾದರೂ ಮಾಡಿಬಿಡುತ್ತಾರೆ ಎಂಬ ಭಯ ಕಾಡುತ್ತಿದೆ. ಇದರ ಬೆನ್ನಲ್ಲೇ, ಕೆ.ಆರ್‌.ನಗರ ಪೊಲೀಸ್‌ ಠಾಣೆಯಲ್ಲಿ ಅಪಹರಣದ ಕುರಿತು ಕೇಸ್‌ ದಾಖಲಿಸಿದ ಪುತ್ರನಿಗೂ ಜೀವ ಭಯ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದಲ್ಲಿ ಮಹತ್ತರ ಮುನ್ನಡೆ ಸಾಧಿಸಲು ಎಸ್‌ಐಟಿ ಅಧಿಕಾರಿಗಳು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಸೂಕ್ತ ಭದ್ರತೆ ಒದಗಿಸುವ ಕುರಿತು ಭರವಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: HD Revanna: ಫಲಿಸಲಿಲ್ಲ ಜ್ಯೋತಿಷಿ ಭವಿಷ್ಯ, ಹೋಮ; ರೇವಣ್ಣರನ್ನು ‘ನಿಂಬೆಹಣ್ಣೂ’ ಕಾಪಾಡಲಿಲ್ಲ!

Continue Reading

ಕರ್ನಾಟಕ

Road Accident: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವು

Road Accident: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದುಗಲ್ ಬಳಿ ಅಪಘಾತ ನಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

VISTARANEWS.COM


on

Road Accident
Koo

ರಾಯಚೂರು: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದುಗಲ್ ಬಳಿ ನಡೆದಿದೆ. ಬೈಕ್ ಸವಾರ ಭೀಮಣ್ಣ (55) ಮೃತರು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿದೆ.

ಕಾಲುವೆಗೆ ಈಜಲು ಹೋಗಿದ್ದ ಬಾಲಕ ನೀರು ಪಾಲು

ರಾಯಚೂರು: ಕಾಲುವೆಗೆ ಈಜಲು ಹೋಗಿದ್ದ ಬಾಲಕ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಲಿಂಗಸುಗೂರಿನ‌ ಕೊಠಾ ಗ್ರಾಮದ ಬಳಿ ನಡೆದಿದೆ. ಅಯ್ಯನ್ ಶಫಿ (17) ನೀರು ಪಾಲಾದ ಬಾಲಕ. ಮೂವರು ಸ್ನೇಹಿತರೊಂದಿಗೆ ಕಾಲುವೆಗೆ ಈಜಲು ಹೋಗಿದ್ದಾಗ ದುರ್ಘಟನೆ ನಡೆದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಲಿಂಗಸುಗೂರು ಅಗ್ನಿ ಶಾಮಕ ದಳದ ಸಿಬ್ಬಂದಿ ತೆರಳಿ, ಶೋಧಕಾರ್ಯ ನಡೆಸಿ ಯುವಕನ ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Prajwal Revanna Case: ನನ್ನ ಸಾಯಿಸ್ತಾರೆ; ಪ್ರಜ್ವಲ್‌ ವಿದೇಶದಲ್ಲಿದ್ದರೂ ಸಂತ್ರಸ್ತೆಗೆ ಭಯ, ಪೊಲೀಸರಿಗೂ ಮಾಹಿತಿ ನೀಡಲು ಹಿಂಜರಿಕೆ!

ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಕುರಿಗಾಹಿ ಯುವಕ ಸಾವು

ವಿಜಯನಗರ: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ಕುರಿಗಾಹಿ ಯುವಕ ಮೃತಪಟ್ಟಿರುವ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕು ಬಸರಕೋಡು ಗ್ರಾಮದ ಬಳಿ ನಡೆದಿದೆ.

ಕೊಟ್ಟೂರು ತಾಲೂಕು ಹರಾಳು ಗ್ರಾಮದ ಅಂಜಿನಪ್ಪ (26) ಮೃತಪಟ್ಟ ಕುರಿಗಾಹಿ. ತುಂಗಭದ್ರಾ ನದಿ ದಂಡೆಯಲ್ಲಿ ಕುರಿ ಮೇಯಿಸಲು ಹೋಗಿದ್ದ ಕುರಿಗಾಹಿ ಈಜಲು ನದಿಗೆ ಇಳಿದಿದ್ದ. ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಕರ್ನಾಟಕ

HD Revanna: ಎಸ್‌ಐಟಿ ಸೆಲ್‌ನಲ್ಲೇ ‘ಮೊದಲ ರಾತ್ರಿ’ ಕಳೆಯಲಿರುವ ರೇವಣ್ಣ; ಬೆಳಗ್ಗೆ ಜಡ್ಜ್‌ ಎದುರು ಹಾಜರ್!

HD Revanna: ಎಚ್‌.ಡಿ.ರೇವಣ್ಣ ಸಂಬಂಧಿಯಾದ ಸತೀಶ್‌ ಬಾಬು ಎಂಬಾತನು ಲೈಂಗಿಕ ದೌರ್ಜನ್ಯಕೀಡಾದ ಸಂತ್ರಸ್ತೆಯನ್ನು ಅಪಹರಿಸಿ, ಹುಣಸೂರಿನ ಕಾಳೇನಹಳ್ಳಿಯ ತೋಟದ ಮನೆಯಲ್ಲಿ ಇರಿಸಿದ್ದು, ಮಹಿಳೆಯನ್ನು ಎಸ್‌ಐಟಿ ಅಧಿಕಾರಿಗಳು ರಕ್ಷಿಸಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಎಸ್‌ಐಟಿ ಅಧಿಕಾರಿಗಳು ಎಚ್‌.ಡಿ.ರೇವಣ್ಣ ಅವರನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಮನೆಯಿಂದಲೇ ವಶಪಡಿಸಿಕೊಂಡಿಸಿಕೊಂಡಿದ್ದಾರೆ. ರೇವಣ್ಣ ಅವರನ್ನು ಭಾನುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

HD Revanna
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ (A 1) ಆಗಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ (HD Revanna) ಅವರನ್ನು ವಶಕ್ಕೆ ಪಡೆದುಕೊಂಡಿರುವ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ (Bowring Hospital) ವೈದ್ಯಕೀಯ ಪರೀಕ್ಷೆ (Medical Test) ಮಾಡಿಸಿದ್ದಾರೆ. ಇದಾದ ಬಳಿಕ ಎಚ್‌.ಡಿ.ರೇವಣ್ಣ ಅವರನ್ನು ಅಧಿಕಾರಿಗಳು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದು, ಇಡೀ ರಾತ್ರಿ ಎಸ್‌ಐಟಿ ಸೆಲ್‌ನಲ್ಲಿಯೇ ಮಾಜಿ ಸಚಿವ ಕಳೆಯಲಿದ್ದಾರೆ.

ಎಚ್‌.ಡಿ.ದೇವೇಗೌಡರ ಮನೆಯಲ್ಲಿ ಎಚ್‌.ಡಿ. ರೇವಣ್ಣ ಅವರನ್ನು ವಶಪಡಿಸಿಕೊಂಡ ಎಸ್‌ಐಟಿ ಅಧಿಕಾರಿಗಳು ಮೊದಲು ಅವರನ್ನು ಸಿಐಡಿ ಕಚೇರಿಗೆ ಕರೆದುಕೊಂಡು ಹೋದರು. ಇದಾದ ಬಳಿಕ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಮತ್ತೆ ಸಿಐಡಿ ಕಚೇರಿಗೆ ಕರೆತಂದು, ಎಸ್‌ಐಟಿ ಸೆಲ್‌ನಲ್ಲಿ ಇರಿಸಿದರು. ಎಚ್‌.ಡಿ.ರೇವಣ್ಣ ಅವರು ಮಲಗಲು ಹಾಸಿಗೆ ಹಾಗೂ ಬೆಡ್‌ಶೀಟ್‌ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿದುಬಂದಿಎ.

ಭಾನುವಾರ ಬೆಳಗ್ಗೆ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ. ಕೋರಮಂಗಲದಲ್ಲಿರುವ ನ್ಯಾಯಾಧೀಶರ ಎದುರು ಹಾಜರುಪಡಿಸಲಿರುವ ಅಧಿಕಾರಿಗಳು, ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ನ್ಯಾಯಾಧೀಶರು ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ರೇವಣ್ಣ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲು ಎಸ್‌ಐಟಿ ಅಧಿಕಾರಿಗಳಿಗೆ ಭಾನುವಾರ ಸಂಜೆವರೆಗೆ ಸಮಯವಿದೆ.

ನಮ್ಮನ್ನೆಲ್ಲ ಸಾಯಿಸ್ತಾರೆ ಎಂದ ಮಹಿಳೆ

ಮೈಸೂರಿನ ತೋಟದ ಮನೆಯಿಂದ ರಕ್ಷಿಸಲ್ಪಟ್ಟ ಸಂತ್ರಸ್ತ ಮಹಿಳೆಯು ಎಸ್‌ಐಟಿ ಅಧಿಕಾರಿಗಳ ಕಸ್ಟಡಿಯಲ್ಲಿದ್ದರೂ ರೇವಣ್ಣ ಕುಟುಂಬದ ಭಯದಲ್ಲಿದ್ದಾರೆ. “ನಮ್ಮನ್ನೆಲ್ಲ ಅವರು ಸಾಯಿಸಿಬಿಡ್ತಾರೆ. ನನಗೆ ಭಯವಾಗುತ್ತಿದೆ” ಎಂದಷ್ಟೇ ಮಹಿಳೆಯು ಹೇಳುತ್ತಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಭದ್ರತೆ ಕುರಿತು ಎಷ್ಟು ಹೇಳಿದರೂ ಮಹಿಳೆಯು ಮಾನಸಿಕವಾಗಿ ಕುಗ್ಗಿದ್ದಾರೆ. ಅವರಿಗೆ ಎಚ್‌.ಡಿ.ರೇವಣ್ಣ ಕುಟುಂಬಸ್ಥರು ಏನಾದರೂ ಮಾಡಿಬಿಡುತ್ತಾರೆ ಎಂಬ ಭಯ ಕಾಡುತ್ತಿದೆ. ಇದರ ಬೆನ್ನಲ್ಲೇ, ಕೆ.ಆರ್‌.ನಗರ ಪೊಲೀಸ್‌ ಠಾಣೆಯಲ್ಲಿ ಅಪಹರಣದ ಕುರಿತು ಕೇಸ್‌ ದಾಖಲಿಸಿದ ಪುತ್ರನಿಗೂ ಜೀವ ಭಯ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದಲ್ಲಿ ಮಹತ್ತರ ಮುನ್ನಡೆ ಸಾಧಿಸಲು ಎಸ್‌ಐಟಿ ಅಧಿಕಾರಿಗಳು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಸೂಕ್ತ ಭದ್ರತೆ ಒದಗಿಸುವ ಕುರಿತು ಭರವಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: HD Revanna: ರೇವಣ್ಣ ಬಂಧನ ಬೆನ್ನಲ್ಲೇ ಕುಮಾರಸ್ವಾಮಿ ಮೀಟಿಂಗ್;‌ ಮಗನ ಬಳಿಕ ತಂದೆಯೂ ಅಮಾನತು?

Continue Reading

ಕರ್ನಾಟಕ

Dingaleshwar Swamiji: ದ್ವೇಷ ಭಾಷಣ; ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಎಫ್‌ಐಆರ್

Dingaleshwar Swamiji: ನವಲಗುಂದದಲ್ಲಿ ನಡೆದಿದ್ದ ಸ್ವಾಭಿಮಾನಿ ಮತದಾರರ ಸಮಾವೇಶದಲ್ಲಿ ವಿಭಿನ್ನ ವರ್ಗಗಳ ಮಧ್ಯೆ ವೈರತ್ವ ಮತ್ತು ದ್ವೇಷ ಭಾವನೆಯನ್ನುಂಟು ಮಾಡೋ ಹೇಳಿಕೆ ನೀಡಿದ್ದರಿಂದ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಕೇಸ್‌ ದಾಖಲಾಗಿದೆ.

VISTARANEWS.COM


on

Dingaleshwar Swamiji
Koo

ಧಾರವಾಡ: ವಿಭಿನ್ನ ವರ್ಗಗಳ ಮಧ್ಯೆ ವೈರತ್ವ ಮತ್ತು ದ್ವೇಷ ಭಾವನೆಯನ್ನುಂಟು ಮಾಡುವ ಹೇಳಿಕೆ ನೀಡಿದ ಆರೋಪದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಜಿಲ್ಲೆಯ ನವಲಗುಂದ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನವಲಗುಂದ ಮಾರ್ಕೆಟ್‌ನಲ್ಲಿ ನಡೆದಿದ್ದ ಸ್ವಾಭಿಮಾನಿ ಮತದಾರರ ಸಮಾವೇಶ ಚುನಾವಣೆ ಭಾಷಣದ ವೇಳೆ ಸ್ವಾಮೀಜಿ ಎಡವಟ್ಟು ಮಾಡಿದ್ದರು. ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸ್ವಾಮೀಜಿ, ಭಸ್ಮ ಹೋಗಿ ಕುಂಕುಮ ಬಂತು ಹಾಗೂ ಭಂಡಾರ ಹೋಗಿ ಕುಂಕುಮ ಬಂತು. ಶರಣು ಶರಣಾರ್ಥಿ ಹೋಗಿ ಹರಿ ಓಂ ಬಂತು ಎಂದು ಭಾಷಣ ಮಾಡಿದ್ದರು. ಹೀಗಾಗಿ ವಿಭಿನ್ನ ವರ್ಗಗಳ ಮಧ್ಯೆ ವೈರತ್ವ ಮತ್ತು ದ್ವೇಷ ಭಾವನೆಯನ್ನುಂಟು ಮಾಡಿದ್ದಾರೆ ಎಂಬ ಆರೋಪದಲ್ಲಿ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ | Lok Sabha Election : ಚುನಾವಣೆ ಖರ್ಚಿಗೆ ಹಣ ಕೊಡದ್ದಕ್ಕೆ ಟಿಕೆಟ್​ ವಾಪಸ್​ ಕೊಟ್ಟ ಕಾಂಗ್ರೆಸ್​ ಅಭ್ಯರ್ಥಿ!

ಜೈ ಶ್ರೀರಾಮ್ ಘೋಷಣೆ ಕೂಗಿದ್ರೆ ಬೂಟುಗಾಲಲ್ಲಿ ಒದೆಯಿರಿ ಎಂದಿದ್ದ ಕೈ ಮುಖಂಡ ಅಮಾನತು

Jai Shri Ram Slogan

ರಾಯಚೂರು: ಜೈ ಶ್ರೀರಾಮ್ ಘೋಷಣೆ (Jai Shri Ram Slogan) ಕೂಗಿದವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಮುಖಂಡನನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ. ರಾಯಚೂರು ಕಾಂಗ್ರೆಸ್ ಮುಖಂಡ ಬಷಿರುದ್ದೀನ್ ಅವರನ್ನು ಪಕ್ಷದಿಂದ ಅಮಾನತು ಮಾಡಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.

‌ಅತಿ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡಬಾರದು ಎಂಬ ಕೆಪಿಸಿಸಿ ಸೂಚನೆಯ ನಡುವೆ ಚುನಾವಣೆ ಹೊತ್ತಿನಲ್ಲಿ ಪಕ್ಷ ಮತ್ತು ನಾಯಕರಿಗೆ ಮುಜುಗಗರವಾಗುವ ರೀತಿಯಲ್ಲಿ ಹೇಳಿಕೆ ನೀಡಿದ್ದರಿಂದ ನಿಮ್ಮನ್ನು ಕಾಂಗ್ರೆಸ್ ‌ಪಕ್ಷದಿಂದ ಅಮಾನತು ಮಾಡಲಾಗಿದೆ. ತಾವು 7 ದಿನಗಳೊಳಗಾಗಿ ಈ ಹೇಳಿಕೆಗಳ ವಿವರಣೆ ನೀಡಬೇಕು ಎಂದು ಕೈ ಮುಖಂಡ ಬಷೀರುದ್ದೀನ್‌ ಅವರಿಗೆ ಅಮಾನತು ಆದೇಶ ಪತ್ರದಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ | Prajwal Revanna Case: ಪೆನ್‌ಡ್ರೈವ್‌ ಕೇಸ್;‌ ದೇವೇಗೌಡರ ನಿವಾಸದಲ್ಲೇ ಎಚ್‌.ಡಿ.ರೇವಣ್ಣ ಬಂಧನ

ನಗರಸಭೆ ಕಮಿಷನರ್ ಗುರುಸಿದ್ದಯ್ಯ ಹಿರೇಮಠ ಅವರ ಮುಂದೆಯೇ ಕಾಂಗ್ರೆಸ್‌ ಮುಖಂಡ ಬಷಿರುದ್ದೀನ್ ಉದ್ಧಟತನದ ಹೇಳಿಕೆ ನೀಡಿದ್ದರು. ರಾಯಚೂರಲ್ಲಿ ಜೈ ಶ್ರೀರಾಮ್ ಎನ್ನುವವರನ್ನು ಪೊಲೀಸರು ಬೂಟುಗಾಲಲ್ಲೇ ಒದ್ದು‌ ಒಳಗೆ ಹಾಕಬೇಕು‌ ಎಂದು ಹೇಳಿದ್ದರು. ಹೀಗಾಗಿ ಬಷಿರುದ್ದೀನ್ ಹೇಳಿಕೆ ಎಲ್ಲೆಡೆ ವೈರಲ್ ಆಗಿತ್ತು. ಕೈ‌ ಮುಖಂಡನ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಕಾಂಗ್ರೆಸ್‌ ಮುಖಂಡನನ್ನು ಅಮಾತುಗೊಳಿಸಲಾಗಿದೆ.

Continue Reading
Advertisement
HD Revanna
ಕರ್ನಾಟಕ3 hours ago

HD Revanna: ಛೇ, ಎಂಥ ಸ್ಥಿತಿ ಬಂತಪ್ಪ; ಎಸ್‌ಐಟಿ ಸೆಲ್‌ನಲ್ಲಿ ಗಳಗಳನೆ ಅತ್ತ ಎಚ್‌.ಡಿ.ರೇವಣ್ಣ

Road Accident
ಕರ್ನಾಟಕ3 hours ago

Road Accident: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವು

Virat kohli
ಪ್ರಮುಖ ಸುದ್ದಿ3 hours ago

IPL 2024 : ಟೀಕೆಗಳಿಗೆ ಪ್ರತಿಕ್ರಿಯಿಸುವುದು ಯಾಕೆ? ಕೊಹ್ಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗವಾಸ್ಕರ್​

IPL 2024
ಕ್ರೀಡೆ3 hours ago

IPL 2024 : ಅತಿ ವೇಗದ ಬೌಲರ್​ ಮಯಾಂಕ್ ಐಪಿಎಲ್​ನಿಂದ ಔಟ್​​

HD Revanna
ಕರ್ನಾಟಕ3 hours ago

HD Revanna: ಎಸ್‌ಐಟಿ ಸೆಲ್‌ನಲ್ಲೇ ‘ಮೊದಲ ರಾತ್ರಿ’ ಕಳೆಯಲಿರುವ ರೇವಣ್ಣ; ಬೆಳಗ್ಗೆ ಜಡ್ಜ್‌ ಎದುರು ಹಾಜರ್!

IPL 2024
ಕ್ರೀಡೆ3 hours ago

IPL 2024 : ಅಭಿಮಾನಿಗಳಿಗೆ ಸತಾಯಿಸಿ ಖುಷಿ ಕೊಟ್ಟ ಆರ್​ಸಿಬಿ, ಗುಜರಾತ್​ ವಿರುದ್ಧ 4 ವಿಕೆಟ್​ ಜಯ

Dingaleshwar Swamiji
ಕರ್ನಾಟಕ4 hours ago

Dingaleshwar Swamiji: ದ್ವೇಷ ಭಾಷಣ; ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಎಫ್‌ಐಆರ್

Virat kohli
ಕ್ರೀಡೆ4 hours ago

Virat kohli : ಸಿಕ್ಸರ್ ಹೊಡೆದು ಕಿಂಗ್​ ಥರ ಪೋಸ್​​ ಕೊಟ್ಟ ಕೊಹ್ಲಿ, ಇಲ್ಲಿದೆ ವಿಡಿಯೊ

Prajwal Revanna Case
ಕರ್ನಾಟಕ4 hours ago

Prajwal Revanna Case: ನನ್ನ ಸಾಯಿಸ್ತಾರೆ; ಪ್ರಜ್ವಲ್‌ ವಿದೇಶದಲ್ಲಿದ್ದರೂ ಸಂತ್ರಸ್ತೆಗೆ ಭಯ, ಪೊಲೀಸರಿಗೂ ಮಾಹಿತಿ ನೀಡಲು ಹಿಂಜರಿಕೆ!

Bangalore To Belagavi Train
ಕರ್ನಾಟಕ4 hours ago

Bangalore To Belagavi Train: ಮೇ 6ರಂದು ಬೆಂಗಳೂರು-ಬೆಳಗಾವಿ ವಿಶೇಷ ರೈಲು ಸಂಚಾರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ22 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ1 day ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌