Main Atal Hoon | ಅಟಲ್‌ ಜೀ ಜನುಮ ದಿನ: ʻಮೈ ಅಟಲ್‌ ಹೂಂʼ ಚಿತ್ರದ ಫಸ್ಟ್‌ ಲುಕ್‌ ಔಟ್‌ - Vistara News

ಬಾಲಿವುಡ್

Main Atal Hoon | ಅಟಲ್‌ ಜೀ ಜನುಮ ದಿನ: ʻಮೈ ಅಟಲ್‌ ಹೂಂʼ ಚಿತ್ರದ ಫಸ್ಟ್‌ ಲುಕ್‌ ಔಟ್‌

ಅಟಲ್‌ ಅವರ ಜನುಮ ದಿನದ ಪ್ರಯುಕ್ತ ‘ಮೈ ಅಟಲ್ ಹೂ’ (Main Atal Hoon) ಚಿತ್ರ ತಂಡ ಫಸ್ಟ್‌ ಲುಕ್‌ ರಿವೀಲ್‌ ಮಾಡಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Main Atal Hoon
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತದ ಮಾಜಿ ಪ್ರಧಾನಮಂತ್ರಿ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Film on Vajpayee) ಜೀವನ ಚರಿತ್ರೆ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ಇದೀಗ ಅಟಲ್‌ ಅವರ ಜನುಮದಿನದ ಪ್ರಯುಕ್ತ ‘ಮೈ ಅಟಲ್ ಹೂಂ’ (Main Atal Hoon) ಚಿತ್ರ ತಂಡ ಫಸ್ಟ್‌ ಲುಕ್‌ ರಿವೀಲ್‌ ಮಾಡಿದೆ. ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ನಟ ಪಂಕಜ್ ತ್ರಿಪಾಠಿ ನಟಿಸುತ್ತಿದ್ದು, ಅವರ ಫಸ್ಟ್ ಲುಕ್ ಅನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತ ರವಿ ಜಾಧವ್ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಫಸ್ಟ್ ಲುಕ್ ಚಿತ್ರಗಳನ್ನು ಹಂಚಿಕೊಂಡಿರುವ ಪಂಕಜ್ ತ್ರಿಪಾಠಿ ʻʻಅಟಲ್ ಜಿ ಅವರ ವ್ಯಕ್ತಿತ್ವವನ್ನು ತೆರೆಯ ಮೇಲೆ ನಿಜವಾಗಿಸಲು ನಟನೆ ಮೂಲಕ ನಾನು ಪ್ರಯತ್ತಿಸುತ್ತೇನೆ. ಈ ಪಾತ್ರವನ್ನು ನಿರ್ವಹಿಸಲು ತುಂಬ ಉತ್ಸುಕನಾಗಿದ್ದೇನೆ. ಈ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ ಆ ನಂಬಿಕೆ ಇದೆ ʼʼಎಂದು ಬರೆದುಕೊಂಡಿದ್ದಾರೆ. ವಿಡಿಯೊ ಮಾಂಟೇಜ್ ಅನ್ನು ಹಂಚಿಕೊಂಡು ʻʻಈ ಅಪರೂಪದ ವ್ಯಕ್ತಿತ್ವವನ್ನು ತೆರೆಯ ಮೇಲೆ ಚಿತ್ರಿಸಲು ನನಗೆ ಉತ್ತಮ ಅವಕಾಶ ಸಿಕ್ಕಿದೆ. ನಾನು ಕೃತಜ್ಞನಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Film on Vajpayee | ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್‌ನಲ್ಲಿ ಪಂಕಜ್ ತ್ರಿಪಾಠಿ

ಚಿತ್ರವನ್ನು ಭಾನುಶಾಲಿ ಸ್ಟುಡಿಯೋಸ್‌ ಹಾಗೂ ಲೆಜೆಂಡ್‌ ಸ್ಟುಡಿಯೋಸ್‌ ಪ್ರಸ್ತುತಪಡಿಸಲಿವೆ. ʼಜನ್‌ಹಿತ್‌ ಮೇ ಜಾರಿʼ ಖ್ಯಾತಿಯ ನಿರ್ಮಾಪಕರಾದ ವಿನೋದ್ ಭಾನುಶಾಲಿ ಮತ್ತು ಪಿಎಂ ನರೇಂದ್ರ ಮೋದಿ (2019) ಚಿತ್ರ ನಿರ್ಮಿಸಿದ ಸಂದೀಪ್ ಸಿಂಗ್ ಈ ಸಿನೆಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ವಿನೋದ್ ಭಾನುಶಾಲಿ, ಸಂದೀಪ್ ಸಿಂಗ್, ಸ್ಯಾಮ್ ಖಾನ್, ಕಮಲೇಶ್ ಭಾನುಶಾಲಿ, ವಿಶಾಲ್ ಗುರ್ನಾನಿ , ಜೂಹಿ ಪರೇಖ್ ಮೆಹ್ತಾ, ಜೀಶನ್ ಅಹ್ಮದ್ ಮತ್ತು ಶಿವ್ ಶರ್ಮಾ ಸಹ-ನಿರ್ಮಾಣ ಮಾಡಿದ್ದಾರೆ.

ಸಲೀಂ ಸುಲೈಮಾನ್ ಅವರ ಸಂಗೀತ, ಸಮೀರ್ ಅವರ ಸಾಹಿತ್ಯ ಚಿತ್ರಕ್ಕಿದೆ. ಸೋನು ನಿಗಮ್‌ ಹಾಡಿದ್ದಾರೆ. ಆದಿತ್ಯ ರಾಯ್ ಕಪೂರ್, ಸಾರಾ ಅಲಿ ಖಾನ್, ಅನುಪಮ್ ಖೇರ್, ನೀನಾ ಗುಪ್ತಾ, ಕೊಂಕಣ ಸೇನ್ ಶರ್ಮಾ, ಅಲಿ ಫಜಲ್ ಮತ್ತು ಫಾತಿಮಾ ಸನಾ ಶೇಖ್ ತಾರಾಬಳಗ ಚಿತ್ರಕ್ಕಿದೆ. ಸದ್ಯ ಕೋಲ್ಕೊತಾದಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಪಂಕಜ್ ತ್ರಿಪಾಠಿ ಅವರು ಸಂಜನಾ ಸಂಘಿ ಮತ್ತು ಪಾರ್ವತಿ ತಿರುವೋತ್ತು ಅವರೊಂದಿಗೆ ಇನ್ನೂ ಹೆಸರಿಡದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಅನಿರುದ್ಧ ರಾಯ್ ಚೌಧರಿ ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ | Film on Vajpayee | ಅಟಲ್ ಬಿಹಾರಿ ವಾಜಪೇಯಿ ಜೀವನ ಚರಿತ್ರೆ ತೆರೆಯ ಮೇಲೆ ಬರಲು ಸಜ್ಜು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Shah Rukh Khan: ಮಗಳ ಜತೆ ಶಾರುಖ್ ಅಭಿನಯಿಸಲಿರುವ ಸಿನಿಮಾ ದೃಶ್ಯ ಲೀಕ್‌!

Shah Rukh Khan : ಆರ್ಯನ್ ಮತ್ತು ಸುಹಾನಾ ವಿಮಾನ ನಿಲ್ದಾಣದಲ್ಲಿ ಒಂದೇ ಕಾರಿನಲ್ಲಿ ಬಂದಿರುವುದು ಕಂಡುಬಂದಿತ್ತು. ಅವರೊಂದಿಗೆ ಗೌರಿ ಖಾನ್, ಪೂಜಾ ಮತ್ತು ಅವರ ಇಡೀ ತಂಡವಿತ್ತು. ನಟ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ವಿವಾಹಪೂರ್ವ ಕ್ರೂಸ್ ಪಾರ್ಟಿಗೆ ಹೋಗುತ್ತಿದ್ದಾರೆ ಎನ್ನಲಾಗಿತ್ತು. ಆದರೀಗ ಸಿನಿಮಾ ಶೂಟಿಂಗ್‌ಗೆ ಹೋಗಿದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

Shah Rukh Khan shooting for King in Spain
Koo

ಬೆಂಗಳೂರು: ಸುಜೋಯ್‌ ಘೋಷ್‌ ಮತ್ತು ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ʼಕಿಂಗ್‌ʼ ಟೈಟಲ್‌ನ ಸಿನಿಮಾದಲ್ಲಿ ಶಾರುಖ್‌ (Shah Rukh Khan) ಹಾಗೂ ಮಗಳು ಸುಹಾನಾ ಖಾನ್ ಅಭಿನಯಿಸುತ್ತಿದ್ದಾರೆ. 2023ರಲ್ಲಿ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾಗಳನ್ನು ನೀಡಿದ ಬಳಿಕ ಶಾರುಖ್‌ ʻಕಿಂಗ್‌ʼ ಸಿನಿಮಾ ಮೇಲೆ ಗಮನ ಹರಿಸಿದ್ದಾರೆ. ಇದೀಗ ಶಾರುಖ್‌ ಸ್ಪೇನ್‌ನಲ್ಲಿ ಚಿತ್ರದ ಚಿತ್ರೀಕರಣದಲ್ಲಿದ್ದಾರೆ ಎಂದು ವರದಿಯಾಗಿದೆ. ಜತೆಗೆ ಶೂಟ್‌ ಮಾಡುತ್ತಿರುವ ದೃಶ್ಯವೊಂದು ಲೀಕ್‌ ಕೂಡ ಆಗಿದೆ. ಈ ಪೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಚಿತ್ರದಲ್ಲಿ, ಶಾರುಖ್ ಗುಂಪಿನಲ್ಲಿ ಸಂಭಾಷಣೆಯಲ್ಲಿ ಮುಳುಗಿರುವುದನ್ನು ಕಾಣಬಹುದು. ಲೀಕ್‌ ಆದ ಫೋಟೊದಲ್ಲಿ ನೀಲಿ ಸೂಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಕಳೆದ ವಾರ ಸುಹಾನಾ ಜತೆ ಶಾರುಖ್ ಮುಂಬೈನಿಂದ ತೆರಳಿದ್ದು ಕುತೂಹಲ ಮೂಡಿಸಿತ್ತು. ಮೇ 30 ರಂದು, ಶಾರುಖ್ ಐಪಿಎಲ್ ಟ್ರೋಫಿಯನ್ನು ಗೆದ್ದ ನಂತರ ಮಗಳ ಜತೆ ಮುಂಬೈನ ಕಲಿನಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.

ಆರ್ಯನ್ ಮತ್ತು ಸುಹಾನಾ ವಿಮಾನ ನಿಲ್ದಾಣದಲ್ಲಿ ಒಂದೇ ಕಾರಿನಲ್ಲಿ ಬಂದಿರುವುದು ಕಂಡುಬಂದಿತ್ತು. ಅವರೊಂದಿಗೆ ಗೌರಿ ಖಾನ್, ಪೂಜಾ ಮತ್ತು ಅವರ ಇಡೀ ತಂಡವಿತ್ತು. ನಟ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ವಿವಾಹಪೂರ್ವ ಕ್ರೂಸ್ ಪಾರ್ಟಿಗೆ ಹೋಗುತ್ತಿದ್ದಾರೆ ಎನ್ನಲಾಗಿತ್ತು. ಆದರೀಗ ಸಿನಿಮಾ ಶೂಟಿಂಗ್‌ಗೆ ಹೋಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Shah Rukh Khan : ಶಾರುಖ್​ ಖಾನ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಈ ಚಿತ್ರವನ್ನು ಶಾರುಖ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಅವರ ಪಠಾಣ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮಾರ್ಫ್ಲಿಕ್ಸ್ ಪಿಕ್ಚರ್ಸ್ ಸಹ-ನಿರ್ಮಾಣ ಮಾಡಿದ್ದಾರೆ.

ಇನ್ನು ಶಾರುಖ್‌ ಮಗಳು ಕಳೆದ ವರ್ಷ ಬಿಡುಗಡೆಯಾದ ʻದಿ ಆರ್ಚೀಸ್ʼ (The Archies) ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಜತೆಗೆ ಅಮಿತಾಭ್‌ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಕೂಡ ನಟಿಸಿದ್ದರು. ಈ ವೇಳೆ ಅವರಿಬ್ಬರು ಡೇಟಿಂಗ್ ನಡೆಸುತ್ತಿದ್ದರು ಎನ್ನುವ ಗುಸುಗುಸು ಹಬ್ಬಿತ್ತು. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಸುಹಾನಾ ಖಾನ್‌ ಅಭಿನಯದ ಮೊದಲ ಚಿತ್ರ ‘ದಿ ಆರ್ಚೀಸ್’ ಒಟಿಟಿಯಲ್ಲಿ ತೆರೆಕಂಡು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.

Continue Reading

ಸಿನಿಮಾ

Rameshwaram Cafe: ಅನಂತ್ ಅಂಬಾನಿ ಎರಡನೇ ಪ್ರಿ ವೆಡ್ಡಿಂಗ್‌ನಲ್ಲಿ ಮೇನ್‌ ಮೆನು ರಾಮೇಶ್ವರಂ ಕೆಫೆಯ ಪುಡಿ ಇಡ್ಲಿ ಮತ್ತು ಪುಡಿ ದೋಸೆ!

Rameshwaram Cafe: ಎರಡನೇ ಪೂರ್ವ ವಿವಾಹ ಸಮಾರಂಭವು ಮೇ 28ರಿಂದ 30ರವರೆಗೆ ನಡೆದಿದೆ. ಅಂಬಾನಿ ಕುಟುಂಬವು ಸುಮಾರು 800 ಅತಿಥಿಗಳಿಗಾಗಿ ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್‌ ಹಡಗು) ಪಾರ್ಟಿ ಆಯೋಜಿಸಿತ್ತು. ಇದು ಮೂರು ದಿನಗಳಲ್ಲಿ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ತನಕ ಸುಮಾರು 4380 ಕಿ. ಮೀ ಚಲಿಸಲಿದೆ ಎನ್ನಲಾಗಿತ್ತು. ಅತಿಥಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇದ್ದರು.

VISTARANEWS.COM


on

Rameshwaram Cafe food on Anant Ambani, Radhika Merchant
Koo

ಬೆಂಗಳೂರು: ಅನಂತ್ ಅಂಬಾನಿ (Rameshwaram Cafe) ಮತ್ತು ರಾಧಿಕಾ ಮರ್ಚಂಟ್‌ ಅವರು ಎರಡನೇ ವಿವಾಹ ಪೂರ್ವ ಸಮಾರಂಭ ಐಷಾರಾಮಿ ಹಡಗಿನಲ್ಲಿ ನಡೆದಿರುವುದು ಗೊತ್ತೆ ಇದೆ. ಈ ವಿವಾಹ ಪೂರ್ವ ಸಮಾರಂಭದಲ್ಲಿ ರಾಮೇಶ್ವರಂ ಕೆಫೆ ಕೂಡ ಭಾಗಿಯಾಗಿದೆ. ದಕ್ಷಿಣ ಭಾರತೀಯ ಆಹಾರವನ್ನು ಒದಗಿಸುವ ಏಕೈಕ ರೆಸ್ಟೋರೆಂಟ್ ಇದಾಗಿದೆ ಎಂದು ರಾಮೇಶ್ವರಂ ಕೆಫೆ ಇನ್‌ಸ್ಟಾ ಮೂಲಕ ಹೇಳಿಕೊಂಡಿದೆ. ಈವೆಂಟ್‌ಗೆ ಹಾಜರಾಗುವ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್‌ಗಳು ಕೆಫೆ ನೀಡುವ ಆಹಾರವನ್ನು ಆನಂದಿಸುತ್ತಿದ್ದಾರೆ ಎಂದು ರಾಮೇಶ್ವರಂ ಕೆಫೆ ಹೇಳಿಕೊಂಡಿದೆ.

ರಾಮೇಶ್ವರಂ ಕೆಫೆಯ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ವೈರಲ್ ಆಗಿದೆ. “ಇನ್ನೊಂದು ಮೈಲಿಗಲ್ಲು..! ಸ್ಪೇನ್‌ನಲ್ಲಿ ನಡೆಯುತ್ತಿರುವ ಪ್ರಪಂಚದ ಅತ್ಯುತ್ತಮ ವಿವಾಹ ಪೂರ್ವ ಆಚರಣೆಗಳ ಭಾಗಿಯಾಗಿದ್ದಕ್ಕೆ ನಾವು ಸಂತೋಷಪಡುತ್ತೇವೆ. ರಾಮೇಶ್ವರಂ ಕೆಫೆ ದಕ್ಷಿಣದ ಅತ್ಯುತ್ತಮ ದಕ್ಷಿಣ ಭಾರತೀಯ ಆಹಾರವನ್ನು ಒದಗಿಸುವ ಏಕೈಕ ರೆಸ್ಟೋರೆಂಟ್ ಆಗಿದೆ,” ಎಂದು ಶಿರ್ಷಿಕೆ ನೀಡಿದ್ದಾರೆ. ರಾಮೇಶ್ವರಂ ಕೆಫೆ ಸಹಸ್ಥಾಪಕ ರಾಘವೇಂದ್ರ ರಾವ್ ಮಾಧ್ಯಮವೊಂದಕ್ಕೆ ಈವೆಂಟ್‌ಗೆ ಹಾಜರಾಗುವ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್‌ಗಳು ಕೆಫೆ ನೀಡುವ ಆಹಾರವನ್ನು ಆನಂದಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ʻʻಪುಡಿ ಇಡ್ಲಿ ಮತ್ತು ಪುಡಿ ದೋಸೆಯನ್ನು ಆನಂದಿಸುತ್ತಿದ್ದಾರೆ” ಎಂದು ಅವರು ಹೇಳಿದರು.

ಇದನ್ನೂ ಓದಿ: Anant-Radhika Wedding: ಅನಂತ್‌ ಅಂಬಾನಿ-ರಾಧಿಕಾ ಮರ್ಚಂಟ್‌ ವಿವಾಹ ಸಮಾರಂಭಕ್ಕೆ ಸ್ಥಳ ನಿಗದಿ

ಎರಡನೇ ಪೂರ್ವ ವಿವಾಹ ಸಮಾರಂಭವು ಮೇ 28ರಿಂದ 30ರವರೆಗೆ ನಡೆದಿದೆ. ಅಂಬಾನಿ ಕುಟುಂಬವು ಸುಮಾರು 800 ಅತಿಥಿಗಳಿಗಾಗಿ ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್‌ ಹಡಗು) ಪಾರ್ಟಿ ಆಯೋಜಿಸಿತ್ತು. ಇದು ಮೂರು ದಿನಗಳಲ್ಲಿ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ತನಕ ಸುಮಾರು 4380 ಕಿ. ಮೀ ಚಲಿಸಲಿದೆ ಎನ್ನಲಾಗಿತ್ತು. ಅತಿಥಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇದ್ದರು.

ಈ ಮುಂಚೆ ನಡೆದ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಕ್ಕೆ ಮುಕೇಶ್‌ ಅಂಬಾನಿ ಅವರು ಸುಮಾರು 1 ಸಾವಿರ ಕೋಟಿ ರೂ. ವ್ಯಯಿಸಿದ್ದಾರೆ ಎಂದು ತಿಳಿದುಬಂದಿದೆ. ಖ್ಯಾತ ಪಾಪ್‌ ಗಾಯಕಿ ರಿಹಾನಾ, ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಕುಟುಂಬಸ್ಥರು, ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಆಮೀರ್‌ ಖಾನ್‌, ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ, ಗೌತಮ್‌ ಅದಾನಿ, ಆಲಿಯಾ ಭಟ್‌, ರಣಬೀರ್‌ ಕಪೂರ್‌, ಬಿಲ್‌ ಗೇಟ್ಸ್‌ ಸೇರಿ ದೇಶ-ವಿದೇಶಗಳ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರಿನ (Blast in Bengaluru) ವೈಟ್‌ ಫೀಲ್ಡ್‌ ಸಮೀಪದ ಬ್ರೂಕ್‌ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ ಸ್ಫೋಟಕ್ಕೂ ಗುಜರಾತ್‌ನ ಜಾಮ್‌ ನಗರದಲ್ಲಿ (Jam Nagar in Gujarat) ನಡೆಯುತ್ತಿರುವ ಖ್ಯಾತ ಉದ್ಯಮಿ ಮುಕೇಶ್‌ ಅಂಬಾನಿ (Mukesh Ambani) ಅವರ ಪುತ್ರ ಅನಂತ್‌ ಅಂಬಾನಿ ಅವರ ಮದುವೆಗೂ (Anant Amabani Marriage) ಸಂಬಂಧವಿದೆಯಾ ಎಂಬ ಪ್ರಶ್ನೆ ಈ ಹಿಂದೆ ಎದುರಾಗಿತ್ತು.

ರಾಮೇಶ್ವರಂ ಕೆಫೆ ಕಳೆದ ಎರಡೇ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಿರುವ ಹೋಟೆಲ್‌ ಚೈನ್‌. ಈಗ 4.5 ಕೋಟಿ ರೂ. ಬೆಲೆ ಬಾಳುವ ಈ ಉದ್ಯಮದ ಸ್ಥಾಪಕರು ದಿವ್ಯಾ ರಾಘವೇಂದ್ರ ರಾವ್‌ ಮತ್ತು ರಾಘವೇಂದ್ರ ರಾವ್‌. ದಿವ್ಯಾ ರಾಘವೇಂದ್ರ ರಾವ್‌ ಅವರು ಮೂಲತಃ ಒಬ್ಬ ಐಐಎಂ ಪದವೀಧರೆ. ಗುಜರಾತ್‌ನ ಅಹಮದಾಬಾದ್‌ನವರು. ಅವರು ಪ್ರೀತಿಸಿ ಮದುವೆಯಾಗಿದ್ದು ಬೆಂಗಳೂರಿನ ರಾಘವೇಂದ್ರ ರಾವ್‌ ಅವರನ್ನು. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರ ಸ್ಪೂರ್ತಿಯಿಂದ ಅವರ ಹುಟ್ಟೂರಾದ ರಾಮೇಶ್ವರಂ ಕೆಫೆ ಎಂದು ಹೆಸರಿಟ್ಟಿದ್ದರು.

ಅಂಬಾನಿ ಮದುವೆಗೆ ಏನು ಕನೆಕ್ಷನ್‌?
ಗುಜರಾತ್‌ನ ಜಾಮ್‌ ನಗರದಲ್ಲಿ ಈಗ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರ ಮದುವೆಯ ವಿವಾಹಪೂರ್ವ ಸಂಭ್ರಮಾಚರಣೆ ನಡೆಯುತ್ತಿದೆ. ಅದರಲ್ಲಿ ದಕ್ಷಿಣ ಭಾರತದ ಖಾದ್ಯ ಗಳನ್ನು ತಯಾರಿಸುವ ಹೊಣೆಗಾರಿಕೆಯನ್ನು ರಾಮೇಶ್ವರಂ ಕೆಫೆ ಹೊತ್ತುಕೊಂಡಿದೆ. ಇದು ಹಲವರ ಕಣ್ಣು ಕುಕ್ಕಿದೆ ಎಂದು ಹೇಳಲಾಗಿತ್ತು.

ದಿವ್ಯಾ ಮತ್ತು ರಾಘವೇಂದ್ರ ರಾವ್‌ ಅವರು ತಮ್ಮ ಸಂಪರ್ಕ ಬಳಸಿ ಈ ಮಹತ್ವದ ಕಾರ್ಯಕ್ರಮದ ಕ್ಯಾಟರಿಂಗ್‌ ವ್ಯವಸ್ಥೆಯನ್ನು ಪಡೆದಿದ್ದರು. ಇದರ ಜವಾಬ್ದಾರಿಯನ್ನು ಹೊತ್ತುಕೊಂಡೇ ರಾಘವೇಂದ್ರ ರಾವ್‌ ಅವರು ಶುಕ್ರವಾರ ಜಾಮ್‌ನಗರದಲ್ಲಿದ್ದರು.

ಈ ಕಾರ್ಯಕ್ರಮದ ಕ್ಯಾಟರಿಂಗ್‌ ಪಡೆಯುವ ವಿಚಾರದಲ್ಲಿ ಇನ್ನೂ ಕೆಲವರು ಪೈಪೋಟಿಯಲ್ಲಿದ್ದರು ಎನ್ನಲಾಗಿದೆ. ಅವರು ಅವಕಾಶ ಸಿಗದೆ ಸಿಟ್ಟುಗೊಂಡಿದ್ದರು ಎನ್ನಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ರಾಮೇಶ್ವರಂ ಹೋಟೆಲ್‌ನಲ್ಲಿ ಕೆಲವೊಂದು ಕಿರಿಕಿರಿ ಮಾಡುವ ಕೆಲಸಗಳನ್ನು ನಡೆಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು ಎಂದು ತಿಳಿದುಬಂದಿತ್ತು.

Continue Reading

ಬಾಲಿವುಡ್

Salman Khan: ಸಲ್ಮಾನ್ ಖಾನ್ ಕಾರಿನ ಮೇಲೆ ಗುಂಡಿನ ದಾಳಿಗೆ ಸಂಚು; ನಾಲ್ವರ ಬಂಧನ

Salman Khan: ಪೊಲೀಸ್ ಮೂಲಗಳ ಪ್ರಕಾರ, ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ತನ್ನ ಕೆನಡಾ ಮೂಲದ ಸೋದರಸಂಬಂಧಿ ಅನ್ಮೋಲ್ ಬಿಷ್ಣೋಯ್ ಮತ್ತು ಸಹವರ್ತಿ ಗೋಲ್ಡಿ ಬ್ರಾರ್ ಜತೆಗೆ ಪಾಕಿಸ್ತಾನಿ ಶಸ್ತ್ರಾಸ್ತ್ರ ವ್ಯಾಪಾರಿಯಿಂದ AK-47, M-16 ಮತ್ತು ಇತರ ಉನ್ನತ-ಕ್ಯಾಲಿಬರ್ ಶಸ್ತ್ರಾಸ್ತ್ರಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಖಾನ್ ಅವರ ಕಾರಿನ ಮೇಲೆ ದಾಳಿ ಮಾಡುವುದು ಮತ್ತು ತೋಟದ ಮನೆಯ ಮೇಲೆ ಅಟ್ಯಾಕ್‌ ಮಾಡುವುದು ಲಾರೆನ್ಸ್ ಬಿಷ್ಣೋಯ್ ಪ್ಲ್ಯಾನ್‌ ಆಗಿತ್ತು ಎನ್ನಲಾಗಿದೆ.

VISTARANEWS.COM


on

Salman Khan Cops arrest 4 with alleged links to Bishnoi gang
Koo

ಬೆಂಗಳೂರು: ಮಹಾರಾಷ್ಟ್ರದ ಪನ್ವೇಲ್‌ನಲ್ಲಿ (Maharashtra’s Panvel) ನಟ ಸಲ್ಮಾನ್ ಖಾನ್ (Salman Khan) ಅವರ ಕಾರಿನ ಮೇಲೆ ಅಟ್ಯಾಕ್‌ ಮಾಡಲು ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ನೊಂದಿಗೆ ನಂಟು ಹೊಂದಿರುವ ನಾಲ್ವರು ವ್ಯಕ್ತಿಗಳನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ಪಾಕಿಸ್ತಾನಿ ಶಸ್ತ್ರಾಸ್ತ್ರ ಪೂರೈಕೆದಾರರಿಂದ ಶಸ್ತ್ರಾಸ್ತ್ರ ಪಡೆದು ಸಲ್ಮಾನ್‌ ಖಾನ್‌ ಕಾರಿನ ಮೇಲೆ ದಾಳಿ ಮಾಡಲು ಈ ತಂಡ ಸಂಚು ರೂಪಿಸಿತ್ತು ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ತನ್ನ ಕೆನಡಾ ಮೂಲದ ಸೋದರಸಂಬಂಧಿ ಅನ್ಮೋಲ್ ಬಿಷ್ಣೋಯ್ ಮತ್ತು ಸಹವರ್ತಿ ಗೋಲ್ಡಿ ಬ್ರಾರ್ ಜತೆಗೆ ಪಾಕಿಸ್ತಾನಿ ಶಸ್ತ್ರಾಸ್ತ್ರ ವ್ಯಾಪಾರಿಯಿಂದ AK-47, M-16 ಮತ್ತು ಇತರ ಉನ್ನತ-ಕ್ಯಾಲಿಬರ್ ಶಸ್ತ್ರಾಸ್ತ್ರಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಖಾನ್ ಅವರ ಕಾರಿನ ಮೇಲೆ ದಾಳಿ ಮಾಡುವುದು ಮತ್ತು ತೋಟದ ಮನೆಯ ಮೇಲೆ ಅಟ್ಯಾಕ್‌ ಮಾಡುವುದು ಲಾರೆನ್ಸ್ ಬಿಷ್ಣೋಯ್ ಪ್ಲ್ಯಾನ್‌ ಆಗಿತ್ತು ಎನ್ನಲಾಗಿದೆ.

ಲಾರೆನ್ಸ್ ಬಿಷ್ಣೋಯ್, ಅನ್ಮೋಲ್ ಬಿಷ್ಣೋಯ್, ಸಂಪತ್ ನೆಹ್ರಾ ಮತ್ತು ಗೋಲ್ಡಿ ಬ್ರಾರ್ ಸೇರಿದಂತೆ 17ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಧನಂಜಯ್ ಅಲಿಯಾಸ್ ಅಜಯ್ ಕಶ್ಯಪ್, ಗೌರವ್ ಭಾಟಿಯಾ ಅಲಿಯಾಸ್ ನಹ್ವಿ, ವಾಸ್ಪಿ ಖಾನ್ ಅಲಿಯಾಸ್ ವಾಸಿಂ ಚಿಕ್ನಾ ಮತ್ತು ರಿಜ್ವಾನ್ ಖಾನ್ ಅಲಿಯಾಸ್ ಜಾವೇದ್ ಖಾನ್ ಬಂಧಿತ ಆರೋಪಿಗಳು ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಸಲ್ಮಾನ್‌ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ ಬಳಿಕ, ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿದ್ದರು. ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಅವರನ್ನು ಗುಜರಾತ್‌ನಲ್ಲಿ ಬಂಧಿಸಲಾಗಿತ್ತು. ಅನುಜ್ ಥಾಪನ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಪಂಜಾಬ್‌ನಲ್ಲಿ ಏಪ್ರಿಲ್ 26 ರಂದು ಬಂಧಿಸಲಾಗಿತ್ತು. ಒಟ್ಟಾರೆಯಾಗಿ, ಆರು ಮಂದಿಯನ್ನು ಬಂಧಿಸಲಾಗಿತ್ತು ಅನುಜ್ ಥಾಪನ್ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದ

ಇದನ್ನೂ ಓದಿ: Raghu Thatha: `ಪುಷ್ಪ 2′ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್‌ ಸೆಡ್ಡು: ‘ರಘು ತಾತಾ’ ರಿಲೀಸ್‌ ಡೇಟ್‌ ಅನೌನ್ಸ್‌!

ಏನಿದು ಪ್ರಕರಣ?

ಎಪ್ರಿಲ್‌ 14ರಂದು ಮುಂಬೈಯ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ಬೈಕ್‌ನಲ್ಲಿ ಬಂದು ದಾಳಿ ನಡೆಸಿದ್ದ ಶೂಟರ್‌ಗಳಾದ ಸಾಗರ್‌ ಪಾಲ್‌ ಮತ್ತು ವಿಕ್ಕಿ ಗುಪ್ತಾ ಎಂಬ ಇಬ್ಬರು ದುಷ್ಕರ್ಮಿಗಳನ್ನು ಬಳಿಕ ಅರೆಸ್ಟ್‌ ಮಾಡಲಾಗಿತ್ತು. ಮುಂಬೈ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಘೋಷಿಸಿದ್ದರು.

ಈ ಮಧ್ಯೆ ಗುಂಡಿನ ದಾಳಿ ನಡೆಸಿದ್ದ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಅನೂಜ್‌ ಥಾಪನ್‌ ಕೆಲವು ದಿನಗಳ ಹಿಂದೆ ಪೊಲೀಸ್‌ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದ. ಅನುಜ್ ಥಾಪನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆತನ ಕುಟುಂಬ ಇದರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಲಾಕಪ್‌ನಲ್ಲಿ ಥಾಪನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದರೆ ಆತನ ತಾಯಿ ಇದು ಕೊಲೆ ಎಂದು ಆರೋಪಿಸಿದ್ದರು.

Continue Reading

ಬಾಲಿವುಡ್

Lok Sabha Election 2024: ಕೊನೇ ಹಂತದ ಮತದಾನ; ವೋಟ್‌ ಮಾಡಿದ ನಟ ಮಿಥುನ್ ಚಕ್ರವರ್ತಿ

Lok Sabha Election 2024: ಭಾರತೀಯ ಜನತಾ ಪಕ್ಷ ನಾಯಕ ಮತ್ತು ನಟ ಮಿಥುನ್ ಚಕ್ರವರ್ತಿ ಲೋಕಸಭೆ ಚುನಾವಣೆಯ ಅಂತಿಮ ಹಂತದಲ್ಲಿ ಮತದಾನ ಮಾಡಿದರು ಪಶ್ಚಿಮ ಬಂಗಾಳದ ಬೆಲ್ಗಾಚಿಯಾದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇತ್ತೀಚಿನ ವರ್ಷಗಳಲ್ಲಿ ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹಿಂದಿ, ಬೆಂಗಾಲಿ, ಒಡಿಯಾ, ಭೋಜ್‌ಪುರಿ ಮತ್ತು ತಮಿಳು ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಸುಮಾರು 350 ಚಿತ್ರಗಳಲ್ಲಿ ಮಿಥುನ್ ಚಕ್ರವರ್ತಿ ನಟಿಸಿದ್ದಾರೆ.

VISTARANEWS.COM


on

Lok Sabha Election 2024 Mithun Chakraborty casting his vote
Koo

ನವದೆಹಲಿ: ದೇಶದ ಭವಿಷ್ಯವನ್ನು ನಿರ್ಧರಿಸುವ ಲೋಕಸಭೆ ಚುನಾವಣೆ (Lok Sabha Election 2024) ಕೊನೆಯ ಹಂತಕ್ಕೆ ಬಂದಿದೆ. ಇಂದು (ಜೂನ್‌ 1) ಏಳನೇ ಅಥವಾ ಕೊನೆಯ ಹಂತದ ಮತದಾನ ನಡೆಯಲಿದ್ದು, ಇದರೊಂದಿಗೆ ಸಾರ್ವತ್ರಿಕ ಚುನಾವಣೆ ಕೊನೆಗೊಳ್ಳಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದ್ದು, ಎಲ್ಲರ ಗಮನವೀಗ ಫಲಿತಾಂಶದ ಕಡೆ ವಾಲಿದೆ.  ಭಾರತೀಯ ಜನತಾ ಪಕ್ಷ ನಾಯಕ ಮತ್ತು ನಟ ಮಿಥುನ್ ಚಕ್ರವರ್ತಿ ಲೋಕಸಭೆ ಚುನಾವಣೆಯ ಅಂತಿಮ ಹಂತದಲ್ಲಿ ಮತದಾನ ಮಾಡಿದರು ಪಶ್ಚಿಮ ಬಂಗಾಳದ ಬೆಲ್ಗಾಚಿಯಾದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಬಳಿಕ ಮಾಧ್ಯಮದ ಮುಂದೆ ಮಾತನಾಡಿ , “ನಾನು ಬಿಜೆಪಿ ಕಾರ್ಯಕರ್ತ, ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ನಾನು ನಾಳೆಯಿಂದ ಸಿನಿಮಾಗಳ ಬಗ್ಗೆ ಮಾತನಾಡುತ್ತೇನೆ. ಏಕೆಂದರೆ ನಾನು ನನ್ನ ಕುಟುಂಬದ ಹೊಟ್ಟೆ ಕೂಡ ತುಂಬಿಸಬೇಕುʼʼಎಂದರು.

ಇದನ್ನೂ ಓದಿ: Raghu Thatha: `ಪುಷ್ಪ 2′ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್‌ ಸೆಡ್ಡು: ‘ರಘು ತಾತಾ’ ರಿಲೀಸ್‌ ಡೇಟ್‌ ಅನೌನ್ಸ್‌!

ಇತ್ತೀಚಿನ ವರ್ಷಗಳಲ್ಲಿ ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹಿಂದಿ, ಬೆಂಗಾಲಿ, ಒಡಿಯಾ, ಭೋಜ್‌ಪುರಿ ಮತ್ತು ತಮಿಳು ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಸುಮಾರು 350 ಚಿತ್ರಗಳಲ್ಲಿ ಮಿಥುನ್ ಚಕ್ರವರ್ತಿ ನಟಿಸಿದ್ದಾರೆ.

ಉತ್ತರ ಪ್ರದೇಶದ 13 ಲೋಕಸಭೆ ಕ್ಷೇತ್ರಗಳು, ಪಂಜಾಬ್‌ 13, ಪಶ್ಚಿಮ ಬಂಗಾಳ 9, ಬಿಹಾರ 8, ಒಡಿಶಾ 6, ಹಿಮಾಚಲ ಪ್ರದೇಶ 4, ಜಾರ್ಖಂಡ್‌ 3 ಹಾಗೂ ಚಂಡೀಗಢದ 1 ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ನಡೆಯಲಿದೆ. ಸಂಜೆ 6 ಗಂಟೆವರೆಗೆ ಜನ ಹಕ್ಕು ಚಲಾಯಿಸಬಹುದಾಗಿದ್ದು, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆಗಾಗಿ ಆಯೋಗವು ಬಿಗಿ ಬಂದೋಬಸ್ತ್‌ ಸೇರಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರ ಭವಿಷ್ಯವು ಶನಿವಾರ ಮತಯಂತ್ರಗಳಲ್ಲಿ ಭದ್ರವಾಗಲಿದೆ.

ಇಂದು ಸಂಜೆ ಎಕ್ಸಿಟ್‌ ಪೋಲ್‌

ಶನಿವಾರ ಸಂಜೆ 6 ಗಂಟೆಗೆ ಮತದಾನ ಮುಗಿಯಲಿದ್ದು, 6.30ರ ಸುಮಾರಿಗೆ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಲಿವೆ. ಹಾಗಾಗಿ, ರಾಜಕೀಯ ನಾಯಕರು, ತಜ್ಞರು, ನಾಗರಿಕರು ಸೇರಿದಂತೆ ಎಲ್ಲರ ಗಮನ ಈಗ ಎಕ್ಸಿಟ್ ಪೋಲ್‌ಗಳತ್ತ ಇದೆ. ಜೂನ್‌ 1ರಂದು ಸಂಜೆ 6.30ರ ಹೊತ್ತಿಗೆ ವಿವಿಧ ಮಾಧ್ಯಮಗಳ ಎಕ್ಸಿಟ್‌ ಪೋಲ್‌ ಪ್ರಕಟವಾಗಲಿದೆ. ಕಳೆದ ಅನೇಕ ವರ್ಷಗಳಲ್ಲಿ ಎಕ್ಸಿಟ್ ಪೋಲ್‌ಗಳು ಮತದಾರರ ಚಿತ್ತವನ್ನು ಅಳೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಚುನಾವಣಾ ಆಯೋಗದ ಅಧಿಕೃತ ಘೋಷಣೆಯ ಮೊದಲೇ ಚುನಾವಣಾ ಫಲಿತಾಂಶದ ನಿಖರವಾದ ವಿವರಣೆ ಲಭ್ಯವಾಗುತ್ತದೆ.

ಎಕ್ಸಿಟ್ ಪೋಲ್ ಜನರ ಮನಸ್ಥಿತಿಯನ್ನು ಹೇಳುತ್ತವೆ. ಆದರೆ ಅದರ ನಿಖರತೆಯು ಭೌಗೋಳಿಕ ವ್ಯಾಪ್ತಿ ಮತ್ತು ಮತದಾರರ ನಿಷ್ಕಪಟತೆಯಂತಹ ಬಹು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಜನರು ಗುಂಪುಗಳಲ್ಲಿ ಮತ ಚಲಾಯಿಸಿದಾಗ ಗಾಳಿ ಯಾವ ಕಡೆಗೆ ಬೀಸುತ್ತಿದೆ ಎಂಬುದನ್ನು ಅಳೆಯುವುದು ಸುಲಭ. ಆದರೆ ಒಂದು ಭಾಗದ ಜನರು ತಮ್ಮ ಒಲವನ್ನು ತೋರಿಸದಿರಲು ನಿರ್ಧರಿಸಿದರೆ ಅಲ್ಲಿಯೇ ಸಮೀಕ್ಷೆದಾರರು ಸಂಖ್ಯೆಗಳನ್ನು ತಪ್ಪಾಗಿ ಬಿಡುತ್ತದೆ. ಎಕ್ಸಿಟ್ ಪೋಲ್‌ಗಳು ಕೆಲವೊಮ್ಮೆ ಸರಿ ಮತ್ತು ಕೆಲವೊಮ್ಮೆ ತಪ್ಪಾಗಿವೆ.

Continue Reading
Advertisement
Stray dogs attack in Shira 4 children one woman injured
ಪ್ರಮುಖ ಸುದ್ದಿ3 hours ago

Stray Dogs Attack: ಶಿರಾದಲ್ಲಿ ಬೀದಿ ನಾಯಿಗಳ ದಾಳಿ: 4 ಮಕ್ಕಳು, ಒಬ್ಬ ಮಹಿಳೆಗೆ ಗಂಭೀರ ಗಾಯ

Somnath Bharti
ದೇಶ3 hours ago

Somnath Bharti: ಮೋದಿ 3ನೇ ಸಲ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುವೆ ಎಂದ ಆಪ್‌ ನಾಯಕ!

T 20 world cup
ಕ್ರೀಡೆ4 hours ago

T20 World Cup : ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 60 ರನ್​ ಭರ್ಜರಿ ವಿಜಯ ಸಾಧಿಸಿದ ಭಾರತ

Exit Poll
ಪ್ರಮುಖ ಸುದ್ದಿ4 hours ago

Exit Poll 2024 : ಆ್ಯಕ್ಸಿಸ್​ ಮೈ ಇಂಡಿಯಾ ಪ್ರಕಾರ ಎನ್​ಡಿಎಗೆ 401 ಸೀಟು

Poll Of Polls
ದೇಶ4 hours ago

Poll Of Polls: ಎನ್‌ಡಿಎಗೆ 350+ ಸೀಟು, ದಕ್ಷಿಣದಲ್ಲೂ ಬಿಜೆಪಿಗೆ ಸ್ವೀಟು, ಇಂಡಿಯಾ ‌ಕೂಟಕ್ಕೆ ಹಿನ್ನಡೆಯ ಏಟು!

Exit Poll 2024
ಪ್ರಮುಖ ಸುದ್ದಿ5 hours ago

Exit Poll 2024 : ಟಿಎಂಸಿಯ ಭದ್ರಕೋಟೆಗೆ ಕಮಲ ಪಕ್ಷದ ಲಗ್ಗೆ; ಮಮತಾ ಬ್ಯಾನರ್ಜಿಗೆ ಮುಖಭಂಗ?

Bangalore rain
ಪ್ರಮುಖ ಸುದ್ದಿ6 hours ago

Bangalore Rain: ರಾಜಧಾನಿಯಲ್ಲಿ ಮಳೆ ಆರ್ಭಟ; ಬೆಂಗಳೂರು-ಹೊಸೂರು ಹೆದ್ದಾರಿ ಜಲಾವೃತ, ಮನೆಗಳಿಗೆ ನುಗ್ಗಿದ ನೀರು

Dinesh Karthik
ಪ್ರಮುಖ ಸುದ್ದಿ6 hours ago

Dinesh Karthik: ಜನ್ಮದಿನದಂದೇ ಕ್ರಿಕೆಟ್‌ ಬದುಕಿಗೆ ದಿನೇಶ್‌ ಕಾರ್ತಿಕ್‌ ಭಾವುಕ ವಿದಾಯ; ಕೊಡುಗೆ ನೆನೆದ ಆರ್‌ಸಿಬಿ ಫ್ಯಾನ್ಸ್

Exit Poll
ಪ್ರಮುಖ ಸುದ್ದಿ6 hours ago

Exit Poll 2024 : ಭರ್ಜರಿ ಗೆಲುವಿನ ಮುನ್ಸೂಚನೆ ಸಿಕ್ಕಿದ ತಕ್ಷಣ ಮತದಾರರಿಗೆ ಧನ್ಯವಾದ ತಿಳಿಸಿದ ಮೋದಿ

Exit Poll 2024
ದೇಶ7 hours ago

Exit Poll 2024 : ಮತಗಟ್ಟೆ ಸಮೀಕ್ಷೆಗಳನ್ನು ನಾವು ನಂಬಲ್ಲ; ಡಿಕೆಶಿ, ಎಂಬಿ ಪಾಟೀಲ್ ಸ್ಪಷ್ಟ ನುಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು11 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 weeks ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌