Coronavirus | ರೂಪಾಂತರಿ BF.7 ವೈರಸ್‌ ಎಷ್ಟು ಡೇಂಜರ್‌? ಇದರ ಸಂಶೋಧನೆ ನಡೆಯುವುದು ಬೆಂಗಳೂರಿನಲ್ಲಿ! - Vistara News

ಆರೋಗ್ಯ

Coronavirus | ರೂಪಾಂತರಿ BF.7 ವೈರಸ್‌ ಎಷ್ಟು ಡೇಂಜರ್‌? ಇದರ ಸಂಶೋಧನೆ ನಡೆಯುವುದು ಬೆಂಗಳೂರಿನಲ್ಲಿ!

ಕೊರೊನಾ (Coronavirus) ಮೊದಲೆರಡು ಅಲೆಯಿಂದಾಗಿ ಜನರು ತತ್ತರಿಸಿ ಹೋಗಿದ್ದರು. ಇದೀಗ ನೆರೆ ರಾಷ್ಟ್ರಗಳಲ್ಲಿ ಹೊಸ ರೂಪಾಂತರಿಯಿಂದ ಭೀತಿ ಹೆಚ್ಚಾಗಿದ್ದು, ಇದೀಗ ವಿಜ್ಞಾನಿಗಳು ಸೋಂಕಿನ ವರ್ತನೆ ತಿಳಿಯಲು ಮುಂದಾಗಿದ್ದಾರೆ.

VISTARANEWS.COM


on

coronavirus2 bioinvatioon
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಒಮಿಕ್ರಾನ್‌ ರೂಪಾಂತರಿ ವೈರಸ್‌ BF.7ನ (Coronavirus) ತೀವ್ರತೆ ಹೇಗಿರಬಹುದು? ಭಾರತಕ್ಕೆ ಕಾಲಿಟ್ಟರೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದರ ಕುರಿತು ಸಂಶೋಧನೆ ನಡೆಸಲು ವಿಜ್ಞಾನಿಗಳು ಸಜ್ಜಾಗುತ್ತಿದ್ದಾರೆ. ನೆರೆ ರಾಷ್ಟ್ರಗಳಲ್ಲಿ ರೂಪಾಂತರಿ ಅತಿವೇಗವಾಗಿ ಹರಡುತ್ತಿದ್ದು, ಸಾವು ನೋವಿಗೆ ಕಾರಣವಾಗುತ್ತಿದೆ. ಇದೇ ರೂಪಾಂತರಿ ವೈರಸ್‌ ಭಾರತದಲ್ಲಿ ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ತಿಳಿಯಲು ತಜ್ಞರು ಮುಂದಾಗಿದ್ದಾರೆ.

Coronavirus

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು ಕಡಿಮೆ ಇದ್ದರೂ ಹೊಸ ರೂಪಾಂತರಿ ಯಾವ ಸ್ವರೂಪದಲ್ಲಿ ಎಷ್ಟು ಪರಿಣಾಮ ಬೀರಬಹುದು ಎಂಬುದರ ಕುರಿತು ಅಂದಾಜಿಲ್ಲ. ಈ ಬಗ್ಗೆ ಆತಂಕ ಇದ್ದು, ಬೆಂಗಳೂರಿನ ಬಯೋ ಇನ್ನೋವೇಷನ್‌ ಸೆಂಟರ್‌ನಲ್ಲಿ BF.7 ತಳಿಯ ಸಂಶೋಧನೆ ನಡೆಸಲು ಚಿಂತನೆ ನಡೆದಿದೆ.

ಇದಕ್ಕಾಗಿ ಚೀನಾದಿಂದ ಬೆಂಗಳೂರಿಗೆ BF.7ನ ಪ್ರೋಟಿನ್ ತರಿಸಿಕೊಳ್ಳಲು ಬಯೋ ಇನ್ನೋವೇಷನ್‌ನ ವಿಜ್ಞಾನಿಗಳು ಮುಂದಾಗಿದ್ದಾರೆ. ಡಾ. ಹೃಷಿಕೇಶ್ ದಾಮ್ಲೆ ಹಾಗೂ ಡಾ. ಶಿವ ಬಾಲಸುಬ್ರಮಣ್ಯರಿಂದ ಸಂಶೋಧನೆ ನಡೆಯಲಿದೆ. ಎರಡು ವಾರಗಳಲ್ಲಿ ರೂಪಾಂತರಿ ವೈರಸ್‌ನ ಪ್ರೋಟಿನ್ ತರಿಸುವ ಚಿಂತನೆ ಇದ್ದು, ಸರ್ಕಾರದ ಅನುಮತಿ ಪಡೆದು ಸಂಶೋಧನೆ ಆರಂಭವಾಗಲಿದೆ.

ದೇಹದಲ್ಲಿನ T cell ಇಮ್ಯುನಿಟಿಯ ಬಗ್ಗೆ ಸಂಶೋಧನೆ ನಡೆಸಲಾಗುತ್ತದೆ. ಇದರಲ್ಲಿ BF.7 ನಲ್ಲಿ ರೆಸ್ಪಾನ್ಸ್ ಇಲ್ಲ ಎಂದಾದರೆ ವ್ಯಾಕ್ಸಿನ್ ಪಡೆಯಬೇಕಾಗುತ್ತದೆ. ಇದರಿಂದಾಗಿ ವೈರಸ್‌ನಿಂದ ಏನೆಲ್ಲಾ ಪರಿಣಾಮ ಆಗಲಿದೆ ಎಂದು ತಿಳಿಯಲಿದೆ. ಈ ಹಿಂದೆ ಮೂರನೇ ಅಲೆಯ ಸಮಯದಲ್ಲಿ BA.5 ಪ್ರೋಟಿನ್ ತರಿಸಿ ಸಂಶೋಧನೆ ನಡೆಸಲಾಗಿತ್ತು. ಈ ವೇಳೆ ಭಾರತೀಯರಿಗೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂಬ ವರದಿ ಬಂದಿತ್ತು. ಬಹುಬೇಗವಾಗಿ ವೈರಸ್‌ ಹರುಡುವಿಕೆ ಇದ್ದರೂ ಸಾವು-ನೋವಿಗೆ ಕಾರಣವಾಗಲಿಲ್ಲ. ಹೀಗಾಗಿ ಹೊಸ ರೂಪಾಂತರಿ ಕುರಿತು ತಿಳಿಯಲು ವಿಜ್ಞಾನಿಗಳು ಮುಂದಾಗಿದ್ದಾರೆ.

ಭಾರತದಲ್ಲಿ ಯಾವೆಲ್ಲ ರೂಪಾಂತರಿ ಕಾಲಿಟ್ಟಿವೆ?
1.ಆಲ್ಫಾ
2.ಬೀಟಾ
೩.ಡೆಲ್ಟಾ ಮತ್ತು ಸಬ್ ಲೈನ್‌ಗಳು
4. ಈಟಾ, ಕಪ್ಪಾ, ಪ್ಯಾಂಗೋ
5. ಒಮಿಕ್ರಾನ್‌
6. ಒಮಿಕ್ರಾನ್‌ನ ರೂಪಾಂತರಿಗಳಾದ BA1.1.529, BA1, BA2, BA3 ಮತ್ತು BA4, BA5

ಇದನ್ನೂ ಓದಿ | Coronavirus | ಕೋವಿಡ್‌ ಎದುರಿಸಲು ಇಂದು ಸಿಎಂ ಸಭೆ; ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್‌?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips: ನಮ್ಮ ದೇಹಕ್ಕೆ ಪ್ರೊಟೀನ್‌ ಪುಷ್ಟಿ ನೀಡಲು ಯಾವ ಮೊಳಕೆ ಕಾಳುಗಳು ಸೂಕ್ತ?

Health Tips: ಮೊಳಕೆ ಕಾಳುಗಳಲ್ಲಿ ಸಾಕಷ್ಟು ಪ್ರೊಟೀನ್‌ಗಳೂ ಸೇರಿದಂತೆ ಎಲ್ಲ ಬಗೆಯ ಪೋಷಕಾಂಶಗಳಿರುವುದರಿಂದಲೇ ಇದನ್ನು ಪೋಷಕಾಂಶಗಳ ವಿಚಾರದಲ್ಲಿ ಪವರ್‌ ಹೌಸ್‌ ಎಂದೂ ಕರೆಯುತ್ತಾರೆ. ಕಾಳುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು, ಅದನ್ನು ನೀರಿನಲ್ಲಿ ನೆನೆಹಾಕಿ, ನಂತರ ಒಂದೆರಡು ದಿನ ಮೊಳಕೆ ಬರಿಸಿಕೊಳ್ಳುವುದು ಕೊಂಚ ತಾಳ್ಮೆ ಬೇಡುವ ಕೆಲಸವಾದರೂ, ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು.

VISTARANEWS.COM


on

Health Tips
Koo

ನೀವು ತೂಕ ಇಳಿಸುವೆಡೆ ಗಮನ ಹರಿಸುತ್ತಾ ನಿಮ್ಮ ಆಹಾರಾಭ್ಯಾಸಗಳಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದರೆ ಖಂಡಿತವಾಗಿ ನೀವು ನಿಮ್ಮ ನಿತ್ಯಾಹಾರದಲ್ಲಿ ಮೊಳಕೆ ಕಾಳುಗಳನ್ನೂ ಸೇರಿಸಿರುತ್ತೀರಿ. ಮೊಳಕೆ ಕಾಳುಗಳಲ್ಲಿ ಸಾಕಷ್ಟು ಪ್ರೊಟೀನ್‌ಗಳೂ ಸೇರಿದಂತೆ ಎಲ್ಲ ಬಗೆಯ ಪೋಷಕಾಂಶಗಳಿರುವುದರಿಂದಲೇ ಇದನ್ನು ಪೋಷಕಾಂಶಗಳ ವಿಚಾರದಲ್ಲಿ ಪವರ್‌ ಹೌಸ್‌ ಎಂದೂ ಕರೆಯುತ್ತಾರೆ. ಕಾಳುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು, ಅದನ್ನು ನೀರಿನಲ್ಲಿ ನೆನೆಹಾಕಿ, ನಂತರ ಒಂದೆರಡು ದಿನ ಮೊಳಕೆ ಬರಿಸಿಕೊಳ್ಳುವುದು ಕೊಂಚ ತಾಳ್ಮೆ ಬೇಡುವ ಕೆಲಸವಾದರೂ, ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬ ಸತ್ಯವು ಇಷ್ಟು ತಾಳ್ಮೆಯನ್ನು ಕಾಯುವಂತೆ ಮಾಡುತ್ತದೆ. ಹಾಗಾದರೆ, ಮೊಳಕೆ ಕಾಳುಗಳು ನಿಜವಾಗಿಯೂ ಬೇಕಾದಷ್ಟು ಪ್ರೊಟೀನನ್ನು ಹೊಂದಿವೆಯೇ? ಇದು ಪ್ರೊಟೀನ್‌ನಿಂದ ಸಮೃದ್ಧವಾಗಿರುವ ಆಹಾರವೇ? ನಿಮಗೆ ಈ ಸಂದೇಹ ಇನ್ನೂ ಇದ್ದರೆ, ಗೊಂದಲಗಳಿದ್ದರೆ ಇಲ್ಲಿದೆ (Health Tips) ಉತ್ತರ.

Sprouted moong, mung or green gram

ಮೊಳಕೆ ಹೆಸರುಕಾಳಿನಲ್ಲಿ ಪ್ರೊಟೀನ್‌ ಎಷ್ಟಿದೆ?

ಪೋಷಕಾಂಶ ತಜ್ಞರು ಹೇಳುವ ಪ್ರಕಾರ, ಸಾಮಾನ್ಯವಾಗಿ ಹೆಸರು ಬೇಳೆಯಲ್ಲಿರುವ ಪ್ರೊಟೀನ್‌ಗಿಂತಲೂ ಮೊಳಕೆ ಬಂದ ಹೆಸರುಕಾಳಿನಲ್ಲಿ ಕಡಿಮೆ ಇರುತ್ತದೆ. ಇದಕ್ಕೆ ಕಾರಣವನ್ನೂ ಅವರೇ ಹೇಳುತ್ತಾರೆ. ಹೆಸರು ಕಾಳನ್ನು ನೀರಿನಲ್ಲಿ ನೆನೆಸಿ ಅದನ್ನು ಮೊಳಕೆ ಬರಿಸುವ ಪ್ರಕ್ರಿಯೆಯಲ್ಲಿ, ಅದರಲ್ಲಿರುವ ಕಾರ್ಬೋಹೈಡ್ರೇಟ್‌, ಪ್ರೊಟೀನ್‌ ಕೊಬ್ಬು ಮತ್ತಿತರ ಎಲ್ಲ ಬಗೆಯ ಪೋಷಕಾಂಶಗಳನ್ನೂ ಬಳಸಿಕೊಂಡೇ ಅದು ಮೊಳಕೆಯೊಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಕಾಳಿನಲ್ಲಿರುವ ಒಂದಿಷ್ಟು ಪೋಷಕಾಂಶವು ಬಳಕೆಯಾಗಿಬಿಡುತ್ತದೆ. ಅಲ್ಲದೆ, ನೂರು ಗ್ರಾಂನಷ್ಟು ಕಾಳು ಮೊಳಕೆ ಬಂದ ಮೇಲೆ ೩೦೦ ಗ್ರಾಂನಷ್ಟು ತೂಕ ಪಡೆದುಕೊಳ್ಳುತ್ತದೆ. ಕಾರಣ ಅದರಲ್ಲಿರುವ ನೀರಿನ ಅಂಶ. ಹೀಗಾಗಿ 300 ಗ್ರಾಂ ಮೊಳಕೆ ಕಾಳನ್ನು ಒಮ್ಮೆಲೇ ತಿನ್ನಲು ಸಾಧ್ಯವಾಗುವುದಿಲ್ಲ. ಬದಲಾಗಿ ನೂರು ಗ್ರಾಂ ಕಾಳನ್ನು ನಾವು ಸುಲಭವಾಗಿ ಒಂದು ದಿನದಲ್ಲಿ ತಿನ್ನಬಹುದು. ಆದರೆ ನೂರು ಗ್ರಾಂ ಮೊಳಕೆ ಕಾಳು ನಮಗೆ 8 ಗ್ರಾಂನಷ್ಟೇ ಪ್ರೊಟೀನ್‌ ಅನ್ನು ನೀಡಬಹುದು ಎಂಬುದು ಪೋಷಕಾಂಶ ತಜ್ಞರುಗಳ ಲೆಕ್ಕಾಚಾರ. ಮೊಳಕೆ ಕಾಳಿಗೆ ಹೋಲಿಸಿದರೆ ಹೆಸರು ಬೇಳೆ ಅಥವಾ ಹೆಸರು ಕಾಳಿನಲ್ಲಿ 350 ಕ್ಯಾಲರಿಗಳಿದ್ದು ಇದರಲ್ಲಿ 24 ಗ್ರಾಂ ಪ್ರೊಟೀನ್‌ ಲಭ್ಯವಾಗುತ್ತದೆ. ಆದರೆ, ಮೊಳಕೆ ಕಾಳಿನಲ್ಲಿ ಪ್ರೊಟೀನ್‌ ಹೆಚ್ಚಿರುತ್ತದೆ ಎಂಬುದು ಹಲವು ವರ್ಷಗಳಿಂದ ತಪ್ಪು ತಿಳಿಯಲಾಗಿದೆ. ಆದರೆ, ಮೊಳಕೆ ಕಾಳಿನಲ್ಲಿರುವ ಒಳ್ಳೆಯ ಗುಣ ಎಂದರೆ ಇದು ಪ್ರೊಟೀನನ್ನು ದೇಹಕ್ಕೆ ಸೇರುವ ಸಾಧ್ಯತೆಯನ್ನು ಹಿಗ್ಗಿಸುತ್ತದೆ ಹಾಗೂ ದೇಹದಲ್ಲಿ ಪ್ರೊಟೀನ್‌ ಕರಗುವುದಿಕೆ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ದೇಹಕ್ಕೆ ಪ್ರೊಟೀನ್‌ ಸುಲಭವಾಗಿ ಸೇರುತ್ತದೆ.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಮೊಳಕೆ ಛೋಲೆ ಒಳ್ಳೆಯದು

ಇನ್ನೂ ಒಂದು ತಪ್ಪು ತಿಳುವಳಿಕೆ ಎಂದರೆ, ಎಲ್ಲ ಬಗೆಯ ಮೊಳಕೆ ಕಾಳಿನಲ್ಲಿ ಹೆಚ್ಚು ಪ್ರೊಟೀನ್‌ ಇದೆ ಎಂದು ತಿಳಿದಿರುವುದು. ಆದರೆ ಎಲ್ಲ ಕಾಳುಗಳೂ ಕೂಡಾ ಮೊಳಕೆಯೊಡೆವ ಸಂದರ್ಭ ಹೆಚ್ಚು ಪ್ರೊಟೀನ್‌ ಹೊಂದಿರುವುದಿಲ್ಲ. ಬಹುಮುಖ್ಯವಾಗಿ, ಮೊಳಕೆಯೊಡೆದ ಮೇಲೆ ಹೆಚ್ಚು ಪ್ರೊಟೀನ್‌ ಹೊಂದಿರುವ ಕಾಳು ಎಂದರೆ ಕಡಲೆ ಕಾಳು. ಅಧರೆ, ಛೋಲೆ ಅಥವಾ ಕಾಬೂಲಿ ಕಡಲೆ. ಅಷ್ಟೇ ಅಲ್ಲ, ಇದರಲ್ಲಿರುವ ವಿಟಮಿನ್‌ ಬಿ ಹಾಗೂ ಸಿಯ ಪ್ರಮಾಣವೂ ಹೆಚ್ಚಾಗುತ್ತದೆ. ಜೊತೆಗೆ ಅವುಗಳು ದೇಹಕ್ಕೆ ಹೀರಲ್ಪಡುವ ಪ್ರಮಾಣವೂ ಹೆಚ್ಚಾಗುತ್ತದೆ. ಇದು ಆಹಾರದ ಗಾತ್ರವನ್ನೂ ಹಿಗ್ಗಿಸುತ್ತದೆ. ಹೀಗಾಗಿ, ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಅನುಭವವನ್ನೂ ಇದು ನೀಡುತ್ತದೆ. ಇದೇ ಕಾರಣಕ್ಕೆ ಇವನ್ನು ತೂಕ ಇಳಿಸುವ ಸಂದರ್ಭ ತಿಂದರೆ ಹೆಚ್ಚಿನ ಪ್ರಯೋಜನ ಪಡೆಯಬಹುದು. ಆದರೆ ಹೆಸರು ಕಾಳನ್ನು ಮಾತ್ರ ಮೊಳಕೆಯೊಡೆವಷ್ಟು ಸಮಯ ನೀಡದೇ, ಅದನ್ನು ನೀರಲ್ಲಿ ನೆನೆ ಹಾಕಿ ಮೆತ್ತಗಾದ ತಕ್ಷಣ, ಚೀಲಾ, ದೋಸೆ, ಚಾಟ್‌, ಟಿಕ್ಕಿಯಂತಹ ತಿನಿಸುಗಳನ್ನು ಮಾಡಿ ಅಥವಾ ಹದವಾಗಿ ಹಬೆಯಲ್ಲಿ ಬೇಯಿಸಿ ತಿನ್ನುವುದು ಒಳ್ಳೆಯದು ಎನ್ನುತ್ತಾರೆ ಪೋಷಕಾಂಶ ತಜ್ಞರು.

Continue Reading

ಆರೋಗ್ಯ

Yoga for Fertility: ಈ 6 ಆಸನಗಳಿಂದ ಸಂತಾನ ಭಾಗ್ಯ ಸಾಧ್ಯ!

ಯೋಗದಿಂದ ರೋಗ ನಾಶ (Yoga for Fertility) ಎಂಬುದನ್ನು ಸಾಕಷ್ಟು ಕೇಳಿದ್ದೇವೆ. ಯೋಗವು ಫಲವಂತಿಕೆಯ ಸಮಸ್ಯೆಗೂ ಮದ್ದಾಗಬಲ್ಲದೇ? ಹಾಗಲ್ಲ, ಕೆಲವು ಆಸನಗಳು ಫಲವಂತಿಕೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ನೆರವಾಗಬಲ್ಲವು. ಈ ನಿಟ್ಟಿನಲ್ಲಿ ಕೆಲವು ಆಸನಗಳನ್ನು ಇಲ್ಲಿ ಹೇಳಲಾಗಿದೆ.

VISTARANEWS.COM


on

Yoga for Fertility
Koo

ಹಲವು ರೀತಿಯ ಆರೋಗ್ಯ (Yoga for Fertility) ಸಮಸ್ಯೆಗಳಿಗೆ ಯೋಗ ಉತ್ತರ ನೀಡಬಲ್ಲದು. ಉಳಿದೆಲ್ಲ ವ್ಯಾಯಾಮಗಳಂತೆ ಕೇವಲ ದೈಹಿಕ ವಿಷಯಗಳತ್ತ ಗಮನ ನೀಡದ ಯೋಗ, ಮಾನಸಿಕ ಸ್ತರದಿಂದಲೇ ಅಂದರೆ ಮೂಲದಿಂದಲೇ ವಿಷಯಗಳನ್ನು ಉದ್ದೇಶಿಸುತ್ತಾ ಬರುತ್ತದೆ. ಈ ಮೂಲಕ ದೇಹದ ಹಲವಾರು ಗ್ರಂಥಿಗಳು, ಚೋದಕಗಳು, ಅಂಗಗಳು ಸರಿಯಾಗಿ ಕೆಲಸ ಮಾಡಲು ನೆರವು ನೀಡುತ್ತದೆ. ಹೀಗೆ ಸಮತೋಲನಕ್ಕೆ ತರಬಹುದಾದ ಹಲವು ತೊಂದರೆಗಳ ಪೈಕಿ ಫಲವಂತಿಕೆಯ ಸಮಸ್ಯೆಯೂ ಒಂದು.
ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೂ ಫಲವಂತಿಕೆಗೂ ನಿಟಕ ಸಂಬಂಧವಿದೆ. ಅದರಲ್ಲೂ ಒತ್ತಡ, ಆತಂಕ ಮುಂತಾದ ಚಿತ್ತ ವಿಕಾರಗಳು ಹೆಚ್ಚಿದಂತೆ ಫಲವಂತಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಮಹಿಳೆ ಮತ್ತು ಪುರುಷರಿಬ್ಬರ ವಿಷಯದಲ್ಲೂ ಸತ್ಯ. ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಲು ಯೋಗ ಬಹುದೊಡ್ಡ ಕೊಡುಗೆಯನ್ನು ನೀಡುತ್ತದೆ. ಜೊತೆಗೆ ಹಾರ್ಮೋನುಗಳ ಸಮತೋಲನಕ್ಕೆ ಮತ್ತು ತೂಕ ಇಳಿಸಿ ಬೊಜ್ಜು ಕಡಿಮೆ ಮಾಡುವಲ್ಲೂ ಯೋಗ ಅನುಕೂಲ ಕಲ್ಪಿಸುತ್ತದೆ. ಹೀಗೆ ಫಲವಂತಿಕೆಯ ಹೆಚ್ಚಳಕ್ಕೆ ಯೋಗಾಭ್ಯಾಸ ನೆರವು ನೀಡಬಲ್ಲದು. ಇದಕ್ಕೆ ಯಾವೆಲ್ಲ ಆಸನಗಳು ಸೂಕ್ತ?

Setubandhasana

ಸೇತುಬಂಧಾಸನ

ಇದು ಎದೆ, ಕುತ್ತಿಗೆ, ಬೆನ್ನುಹುರಿ, ಸೊಂಟ, ಕಿಬ್ಬೊಟ್ಟೆಯ ಭಾಗಗಳಿಗೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಹೊಟ್ಟೆಯ ಎಲ್ಲ ಅಂಗಗಳಿಗೂ ರಕ್ತ ಪರಿಚಲನೆಯನ್ನು ಹೆಚ್ಚಿಸಿ, ಫಲವಂತಿಕೆಯ ಸಾಧ್ಯತೆಯನ್ನು ದಟ್ಟವಾಗಿಸುತ್ತದೆ. ಎರಡೂ ಪಾದಗಳನ್ನು ಊರಿ ನೆಲಕ್ಕೆ ಒತ್ತಿ, ಮುಂಡದ ಭಾಗವನ್ನು ಮೇಲಕ್ಕೆತ್ತಿ 5-10 ಬಾರಿ ಉಸಿರಾಡಬಹುದು. ಇದನ್ನು ಹಲವು ಬಾರಿ ಪುನರಾವರ್ತಿಸಬಹುದು.

ವಿಪರೀತ ಕರಣಿ

ಕಿಬ್ಬೊಟ್ಟೆಯ ಭಾಗಕ್ಕೆಲ್ಲ ರಕ್ತ ಪರಿಚಲನೆಯನ್ನು ಸುಧಾರಿಸುವ ಆಸನವಿದು. ಜೊತೆಗೆ ಹೊಟ್ಟೆಯ ಭಾಗವನ್ನೆಲ್ಲ ಸಶಕ್ತಗೊಳಿಸುತ್ತದೆ. ಗೋಡೆಯ ಪಕ್ಕದಲ್ಲಿ ನೇರ ಮಲಗಿ, ನಿಧಾನಕ್ಕೆ ಕಾಲನ್ನು ಮೇಲ್ಮುಖವಾಗಿ ಗೋಡೆಗೆ ಆನಿಸಿ ನೇರವಾಗಿ ಚಾಚಿ. ಇದೀಗ ಶರೀರ ʻಎಲ್‌ʼ ಆಕೃತಿಯಲ್ಲಿ ಕಾಣಬೇಕು. ಈ ಭಂಗಿಯಲ್ಲಿ 5-10 ನಿಮಿಷಗಳವರೆಗೂ ಹಿಡಿಯಬಹುದು.

Veerabhadrasana

ವೀರಭದ್ರಾಸನ

ಈ ಆಸನವನ್ನು ಒಂದಕ್ಕಿಂತ ಹೆಚ್ಚಿನ ಕ್ರಮದಲ್ಲಿ ಅಭ್ಯಾಸ ಮಾಡಲಾಗುತ್ತದೆ. ಈ ಎಲ್ಲಾ ಆಸನಗಳು ಕಾಲು, ತೋಳು ಮತ್ತು ಹೊಟ್ಟೆ, ಬೆನ್ನಿನ ಸ್ನಾಯುಗಳನ್ನು ಬಲಗೊಳಿಸುವಂಥವು. ನಿಯಮಿತವಾಗಿ ಈ ಆಸನ ಅಭ್ಯಾಸ ಮಾಡುವುದರಿಂದ ಬಹಳಷ್ಟು ಕ್ಯಾಲರಿಗಳನ್ನು ಕರಗಿಸಿ, ದೇಹದ ಅದಷ್ಟೂ ಭಾಗಗಳ ಕೊಬ್ಬು ಇಳಿಸಬಹುದು. ತೂಕ ಹೆಚ್ಚಳದಿಂದ ಫಲವಂತಿಕೆಯ ಸಮಸ್ಯೆಯಿದ್ದರೆ ಇಂಥ ಆನಸಗಳು ಸೂಕ್ತ.

Dhanurasana

ಧನುರಾಸನ

ಈ ಆಸನ ಮಾಡುವ ಲಾಭಗಳು ಬಹಳಷ್ಟಿವೆ. ದೇಹದ ಚಯಾಪಚಯವನ್ನು ಹೆಚ್ಚಿಸಿ, ಹೊಟ್ಟೆ ಮತ್ತು ತೊಡೆಗಳು ಬೊಜ್ಜು ನಿವಾರಿಸಿ, ಜೀರ್ಣಾಂಗಗಳ ಆರೋಗ್ಯ ಸುಧಾರಿಸುತ್ತದೆ. ಮುಟ್ಟಿನ ಹೊಟ್ಟೆ ನೋವಿನ ಉಪಶಮನಕ್ಕೂ ಇದು ಉಪಯುಕ್ತವಾಗಿದೆ. ಬೆನ್ನು ಮತ್ತು ಸೊಂಟದ ಬಲವರ್ಧನೆಗೂ ಇದು ಸಹಾಯಕ. ಮೊದಲಿಗೆ, ಮುಖ ಅಡಿಯಾಗುವಂತೆ ಮಲಗಿ, ಕೈಕಾಲುಗಳನ್ನು ನೇರವಾಗಿ ಚಾಚಬೇಕು. ಕಾಲು ಮಡಿಸಿ, ಗಜ್ಜೆ ಹಾಕುವ ಭಾಗವನ್ನು ಕೈಗಳಿಂದ ಹಿಡಿಯಬೇಕು. ಕಾಲುಗಳನ್ನು ದೇಹದ ಅಗಲಕ್ಕಿಂತ ಹೆಚ್ಚು ಅಗಲ ಇರಿಸುವಂತಿಲ್ಲ. ಈಗ ಕೈಗಳಿಂದ ಕಾಲೆಳೆಯುತ್ತಾ, ಕಾಲುಗಳಿಂದ ಕೈ ಎಳೆಯುತ್ತಾ ಎರಡೂ ಕಾಲುಗಳನ್ನು ಮತ್ತು ಮುಖವನ್ನು ಮೇಲಕ್ಕೆತ್ತಬೇಕು.

ಸುಪ್ತ ಬದ್ಧಕೋನಾಸನ

ಮೊದಲು ನೇರವಾಗಿ ಮಲಗಿ. ನಂತರ, ಮಂಡಿಗಳನ್ನು ಮಡಿಸಿ, ಪಾದಗಳನ್ನು ಒಂದಕ್ಕೊಂದು ಸೇರಿಸಿ ʻನಮಸ್ತೆʼ ಮಾಡುವಂತೆ ಹಿಡಿಯಿರಿ. ಇದರಿಂದ ತೊಡೆ, ಪೃಷ್ಠ ಮತ್ತು ಕಿಬ್ಬೊಟ್ಟೆಯ ಕೆಳಭಾಗದವರೆಗೂ ಸ್ನಾಯುಗಳು ಚುರುಕಾಗುತ್ತದೆ. ಇದನ್ನು ಮೂರ್ನಾಲ್ಕು ನಿಮಿಷಗಳವರೆಗೂ ಹಿಡಿಯಬಹುದು.

ಇದನ್ನೂ ಓದಿ: International Yoga day 2024: ಎಚ್ಚರವಾಗಿದ್ದೇ ನಿದ್ದೆ ಮಾಡಬಹುದೆ? ಯೋಗನಿದ್ರೆ ತಂತ್ರ ಕಲಿಯಿರಿ!

ಭುಜಂಗಾಸನ

ಹೊಟ್ಟೆ ಮತ್ತು ಬೆನ್ನುಹುರಿಯ ಅಕ್ಕಪಕ್ಕದ ಸ್ನಾಯುಗಳು ಇದರಿಂದ ಬಲಗೊಳ್ಳುತ್ತವೆ. ಜೊತೆಗೆ, ಸೊಂಟ, ಕಿಬ್ಬೊಟ್ಟೆ, ಎದೆ, ಭುಜ ಮತ್ತು ತೋಳುಗಳ ಸ್ನಾಯುಗಳ ಮೇಲೂ ಇದು ಕೆಲಸ ಮಾಡುತ್ತದೆ. ಹೆಡೆ ಎತ್ತಿದ ಹಾವಿನಂತೆ ಕಾಣುವ ಭಂಗಿಯಿದು. ಮೊದಲಿಗೆ ಮುಖ ಅಡಿ ಮಾಡಿ ಮಲಗಿ. ಹಸ್ತಗಳನ್ನು ಎದೆಯ ಪಕ್ಕದಲ್ಲಿ ಊರಿ, ಕಟಿಯಿಂದ ಮೇಲೆ ಭಾಗವನ್ನು ನಿಧಾನಕ್ಕೆ ಮೇಲೆತ್ತಿ ನಿಲ್ಲಿಸಿ. ಇದರಿಂದ ಗರ್ಭಾಶಯದ ಭಾಗಕ್ಕೆಲ್ಲ ರಕ್ತ ಪರಿಚಲನೆ ಹೆಚ್ಚುತ್ತದೆ.

Continue Reading

ಕರ್ನಾಟಕ

Pralhad Joshi: ಕಿಮ್ಸ್‌ಗೆ ಅತ್ಯಾಧುನಿಕ “ವೈರಾಣು ಸಂಶೋಧನೆ, ರೋಗ ನಿರ್ಣಯ ಪ್ರಯೋಗಾಲಯ” ಮಂಜೂರು

Pralhad Joshi: ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಅತ್ಯಾಧುನಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ ಸ್ಥಾಪನೆಗಾಗಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ನವದೆಹಲಿ (NCDC) ಮತ್ತು ಕಿಮ್ಸ್‌ ನಿರ್ದೇಶಕರ ನಡುವೆ ಒಡಂಬಡಿಕೆಗೆ ಶುಕ್ರವಾರ ಸಹಿ ಹಾಕಲಾಯಿತು.

VISTARANEWS.COM


on

regional Laboratory sanctioned to Kims Hubballi
Koo

ನವದೆಹಲಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಗೆ ಕೇಂದ್ರ ಸರ್ಕಾರ (Central Government) ಅತ್ಯಾಧುನಿಕ “ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ” ಕ್ಕೆ ಮಂಜೂರಾತಿ ನೀಡಿದೆ.

ಉತ್ತರ ಕರ್ನಾಟಕದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ಹುಬ್ಬಳ್ಳಿಯ ‘ಕಿಮ್ಸ್‌’ ನಲ್ಲಿ ಈ ಪ್ರಯೋಗಾಲಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಇದೀಗ ಅಸ್ತು ಎಂದಿದೆ.

ಇದನ್ನೂ ಓದಿ: KAS Exam: ಕೆಎಎಸ್‌ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಪರೀಕ್ಷೆ ಬರೆಯಲು ಒಂದು ಬಾರಿ ಹೆಚ್ಚುವರಿ ಅವಕಾಶ

ಕಿಮ್ಸ್‌ನಲ್ಲಿ ಅತ್ಯಾಧುನಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ ಸ್ಥಾಪನೆಗಾಗಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ನವದೆಹಲಿ (NCDC) ಮತ್ತು ಕಿಮ್ಸ್‌ ನಿರ್ದೇಶಕರ ನಡುವೆ ಒಡಂಬಡಿಕೆಗೆ ಶುಕ್ರವಾರ ಸಹಿ ಹಾಕಲಾಯಿತು.

ಸಚಿವ ಪ್ರಲ್ಹಾದ್‌ ಜೋಶಿ ಪ್ರಯತ್ನದ ಫಲ

ಹುಬ್ಬಳ್ಳಿಯಲ್ಲಿ ಈ ಪ್ರಯೋಗಾಲಯ ನಿರ್ಮಾಣಕ್ಕಾಗಿ ಜೆ.ಪಿ. ನಡ್ಡಾ ಅವರು ಆರೋಗ್ಯ ಸಚಿವರಾಗಿದ್ದಾಗಲೇ ಧಾರವಾಡ ಸಂಸದರು ಆಗಿರುವ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಮನವಿ ಮಾಡಿದ್ದರು. ಅವರ ಸತತ ಪ್ರಯತ್ನದ ಫಲವಾಗಿ ಇಂದು ಪ್ರಯೋಗಾಲಯ ಸ್ಥಾಪನೆ ಸಾಕಾರಗೊಂಡಿದೆ.

ದೇಶದ 8 ಕಡೆ ಶಾಖೆ

ಪ್ರಸ್ತುತ, ದೇಶದ 8 ಕಡೆಗಳಲ್ಲಿ ಶಾಖೆಗಳನ್ನು ಹೊಂದಿರುವ ಈ ಸಂಶೋಧನಾ ಮತ್ತು ರೋಗ ನಿಯಂತ್ರಣ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಯಲ್ಲಿ ಸ್ಥಾಪನೆಗೂ ಇದೀಗ ಹಸಿರು ನಿಶಾನೆ ತೋರಿದ್ದಾರೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ತಮ್ಮ ಪ್ರಸ್ತಾಪ, ಮನವಿಯನ್ನು ಪುರಸ್ಕರಿಸಿ ಪ್ರಧಾನಿ ಮೋದಿ ಅವರು ಪ್ರಸ್ತುತ ಪ್ರಾದೇಶಿಕ ಪ್ರಯೋಗಾಲಯವನ್ನು ಮಂಜೂರು ಮಾಡಿದ್ದಾರೆ. ಇದಕ್ಕಾಗಿ ಕಿಮ್ಸ್ ಅವರಣದಲ್ಲಿ 27 ಗುಂಟೆ ಪ್ರತ್ಯೇಕ ಜಾಗವನ್ನೂ ಮೀಸಲಿರಿಸಲಾಗಿದೆ. ಸಂಪೂರ್ಣ ಕೇಂದ್ರ ಸರ್ಕಾರದ ಪ್ರಾಯೋಜಿತವಾದ ಈ ಪ್ರಯೋಗಾಲಯದ ಶಾಖೆಗೆ ಅಂದಾಜು 16 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದೂ ಸಚಿವ ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ: T20 World Cup 2024 : ಭಾರತ- ಬಾಂಗ್ಲಾ ಸೂಪರ್​ 8 ಪಂದ್ಯಕ್ಕೆ ಮಳೆ ಅಡಚಣೆ ಇದೆಯೇ?

ಎಚ್ 1 ಎನ್ I (H1N1), ಕೊರೋನಾ, ಚಿಕನ್ ಗುನ್ಯಾ, ನಿಫಾದಂತಹ ಸಾಂಕ್ರಾಮಿಕ ರೋಗಗಳು ಬದಲಾದ ರೂಪದಲ್ಲಿ ಮತ್ತೆ ಮತ್ತೆ ಹರಡುತ್ತಿರುವ ಕಾರಣ ಉತ್ತರ ಕರ್ನಾಟಕ ಭಾಗದಲ್ಲಿ ಈ ಪ್ರಯೋಗಾಲಯದ ಅಗತ್ಯತೆ ಇತ್ತು ಎಂದು ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಪಾದಿಸಿದ್ದಾರೆ.

ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯಕ್ಕಾಗಿ ದೂರದ ಪ್ರದೇಶಗಳಿಗೆ ಅಲೆಯುವುದರಿಂದ ರೋಗ ಪೀಡಿತರ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಅಲ್ಲದೇ, ಕೆಲವೊಮ್ಮೆ ಪ್ರಾಣ ಹಾನಿ ಸಂಭವವನ್ನೂ ತಳ್ಳಿ ಹಾಕುವಂತಿರಲಿಲ್ಲ. ಹೀಗಾಗಿ ಈ ಅಂಶಗಳನ್ನು ಆರೋಗ್ಯ ಸಚಿವರಾಗಿದ್ದ ನಡ್ಡಾ ಮತ್ತು ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರ ಪರಿಣಾಮ ಇಂದು ಪ್ರಯೋಗಾಲಯ ಸ್ಥಾಪನೆ ಒಡಂಬಡಿಕೆ ಸಾಫಲ್ಯ ಕಂಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಸಾಸ್ಟಕ್ಟರ್ ಮಿಶನ್ ಅಡಿ BSL3 ಫೆಸಿಲಿಟಿಸ್ ಮಾದರಿಯ ಒಟ್ಟು 13 ಹೊಸ (4 ಮೊಬೈಲ್ ಮತ್ತು 9 ಸಾಂಸ್ಥಿಕ) ಪ್ರಯೋಗಾಲಯಗಳನ್ನು ಆಯ್ದ ಆರೋಗ್ಯ ಸಂಸ್ಥೆಗಳಲ್ಲಿ ಸ್ಥಾಪಿಸಲಾಗುತ್ತಿದ್ದು, ಈ ಪೈಕಿ ಹುಬ್ಬಳ್ಳಿಯ ಕಿಮ್ಸ್ ಕೂಡಾ ಸೇರಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Rishabh Pant : ವಿಶ್ವ ಕಪ್​ನಲ್ಲಿ ವಿನೂತನ ವಿಕೆಟ್​ಕೀಪಿಂಗ್​​ ದಾಖಲೆ ಬರೆದ ರಿಷಭ್​ ಪಂತ್​

ಶೀಘ್ರ ಭೂಮಿಪೂಜೆ

ಹುಬ್ಬಳ್ಳಿಯಲ್ಲಿ ಶೀಘ್ರದಲ್ಲೇ ಪ್ರಾದೇಶಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ ಶಾಖೆ ನಿರ್ಮಾಣಕ್ಕೆ ಭೂಮಿ ಪೂಜೆ ಸಹ ನೆರವೇರಲಿದೆ ಎಂದು ತಿಳಿಸಿರುವ ಅವರು, ಹುಬ್ಬಳ್ಳಿಗೆ ಈ ಸಂಶೋಧನಾ ಕೇಂದ್ರವನ್ನು ಮಂಜೂರು ಮಾಡಿದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಆರೋಗ್ಯ ಸಚಿವರಿಗೆ, ಸಚಿವ ಪ್ರಲ್ಹಾದ್‌ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.

Continue Reading

ಆರೋಗ್ಯ

International Yoga day 2024: ಎಚ್ಚರವಾಗಿದ್ದೇ ನಿದ್ದೆ ಮಾಡಬಹುದೆ? ಯೋಗನಿದ್ರೆ ತಂತ್ರ ಕಲಿಯಿರಿ!

International Yoga day 2024: ಯೋಗನಿದ್ರೆಯನ್ನು ಸರಿಯಾದ ರೀತಿಯಲ್ಲಿ (Benefits of Yoga Nidra) ಅಭ್ಯಾಸ ಮಾಡುವುದರಿಂದ ಮೆದುಳು ಗಾಢವಾದ ವಿಶ್ರಾಂತಿಗೆ ಜಾರುತ್ತದೆ ಮತ್ತು ಯೋಗನಿದ್ರೆಯ ನಂತರ, ಪ್ರಖರವಾದ ಜಾಗೃತ ಸ್ಥಿತಿಯಲ್ಲಿ ಇರುತ್ತದೆ ಎನ್ನುತ್ತವೆ ವೈಜ್ಞಾನಿಕವಾಗಿ ನಡೆಸಿದ ಅಧ್ಯಯನಗಳು. ಆದರೆ ಈ ಬಗ್ಗೆ ಪ್ರಾಚೀನ ಯೋಗಗ್ರಂಥಗಳು ಹೇಳುವುದು ಭಿನ್ನವಾಗಿದೆ. ಏನಿದು? ಈ ಲೇಖನ ಓದಿ.

VISTARANEWS.COM


on

International Yoga day 2024
Koo

ನಿದ್ದೆ ಎಂದರೆ ಮೈ-ಮೆದುಳಿಗೆಲ್ಲ (International Yoga day 2024) ಒಳ್ಳೆಯ ವಿಶ್ರಾಂತಿ ದೊರೆತಂತೆ. ಆದರೆ ಯೋಗ ನಿದ್ರೆ ಇದಕ್ಕಿಂತ ಸ್ವಲ್ಪ ಭಿನ್ನ. ಮೈಮರೆತು ನಿದ್ದೆ ಮಾಡದೆಯೇ, ಮೈ-ಮನಗಳಿಗೆ ಆಳವಾದ ವಿಶ್ರಾಂತಿಯನ್ನು ನೀಡುವಂಥ ಕ್ರಮವಿದು. ನರಗಳಿಗೆಲ್ಲ ಪುನಶ್ಚೇತನ ನೀಡಿ, ಚೈತನ್ಯವನ್ನು ಹೆಚ್ಚಿಸುವ ಸಾಮರ್ಥ್ಯ ಯೋಗನಿದ್ರೆಗಿದೆ ಎನ್ನುವುದು ವೈಜ್ಞಾನಿಕ ಪ್ರಯೋಗಗಳಿಂದ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ, ಎಚ್ಚರ ಇದ್ದಂತೆಯೇ ನಿದ್ದೆಗೆ ಜಾರುವ ಇದೆಂಥ ಯೋಗ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ದೆಹೆಲಿಯ ಐಐಟಿ, ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ ಸಹಿತ ಕೆಲವು ವೈದ್ಯಕೀಯ ಸಂಸ್ಥೆಗಳು ಯೋಗ ನಿದ್ರೆಯಿಂದ ಮೆದುಳಿನ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿವೆ. ಈ ಅಧ್ಯಯನಗಳ ಪ್ರಕಾರ, ಯೋಗನಿದ್ರೆಯನ್ನು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡುವುದರಿಂದ ಮೆದುಳು ಗಾಢವಾದ ವಿಶ್ರಾಂತಿಗೆ ಜಾರುತ್ತದೆ ಮತ್ತು ಯೋಗನಿದ್ರೆಯ ನಂತರ, ಪ್ರಖರವಾದ ಜಾಗೃತ ಸ್ಥಿತಿಯಲ್ಲಿ ಇರುತ್ತದೆ. “ಭಾವನೆಗಳನ್ನು ಸಂಸ್ಕರಿಸುವ ಮೆದುಳಿನ ಭಾಗವೇ ಜಾಗೃತಗೊಳ್ಳುವುದನ್ನು ಯೋಗನಿದ್ರೆ ಮಾಡುವಾಗ ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಇಡೀ ಅಧ್ಯಯನ ಕುತೂಹಲ ಕೆರಳಿಸಿದೆ” ಎನ್ನುತ್ತಾರೆ ಅಧ್ಯಯನಕಾರರು. ಕೇವಲ ಇದೊಂದೇ ಅಲ್ಲ, ಈವರೆಗೆ ನಡೆಸಲಾದ ಬಹಳಷ್ಟು ವೈಜ್ಞಾನಿಕ ಅಧ್ಯಯನಗಳು ಯೋಗನಿದ್ರೆಯು ಮೆದುಳಿನ ಮೇಲೆ, ಭಾವನಾತ್ಮಕ ಆರೋಗ್ಯದ ಮೇಲೆ ಹಾಗೂ ಈ ಮೂಲಕ ದೇಹಾರೋಗ್ಯದ ಮೇಲೆ ಬೀರುವ ಧನಾತ್ಮಕ ಪರಿಣಾಮಗಳನ್ನು ಸ್ಪಷ್ಟವಾಗಿ ಗುರುತಿಸಿವೆ.

what is yoga nidra

ಏನಿದು ಯೋಗನಿದ್ರೆ?

ಯೋಗನಿದ್ರೆ ಎಂದರೆ ನಿದ್ರೆ ಹಾಗೂ ಎಚ್ಚರಗಳ ನಡುವಿನ ಒಂದು ಸ್ಥಿತಿ. ಅಂದರೆ ಜಾಗೃತ ಕನಸಿನಂತೆ ಎಂದು ಭಾವಿಸಬೇಡಿ, ಹಾಗಲ್ಲ. ದೇಹ ಮತ್ತು ಮನಸ್ಸಿಗೆ ನಮ್ಮೊಳಗಿನದೇ ಪ್ರಜ್ಞೆಯೊಂದು ವಿಶ್ರಾಂತಿಯನ್ನು ಒದಗಿಸುತ್ತದೆ. ಸುಖನಿದ್ರೆಯ ಅನುಭವವನ್ನು ನೀಡಿದರೂ, ನಿದ್ರೆಗೆ ಜಾರಿರುವುದಿಲ್ಲ. ಪ್ರಪಂಚದ ವ್ಯವಹಾರಗಳಿಂದ ದೂರವಾಗಿ, ಮಾನಸಿಕ ಗೋಜಲುಗಳೆಲ್ಲ ಮಾಯವಾಗಿ, ಸುಪ್ತ ಚೈತನ್ಯವೊಂದು ಎಚ್ಚರಗೊಳ್ಳುವ ಸ್ಥಿತಿಯಿದು. ಅಭ್ಯಾಸದ ಮೂಲಕ ಈ ಅಂಶಗಳು ನಮ್ಮ ಅರಿವಿಗೆ ಬರುವುದಕ್ಕೆ ಸಾಧ್ಯ.
ಯೋಗನಿದ್ರೆಯ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ಹೇಳುವುದು ಹೀಗಾದರೆ, ಪ್ರಾಚೀನ ಯೋಗ ಗ್ರಂಥಗಳು ಹೇಳುವುದು ಬೇರೆ. ಯೋಗನಿದ್ರೆಯನ್ನು ನಿಯಮಿತವಾಗಿ ಮಾಡುವುದರಿಂದ, ನಮ್ಮ ಸುಪ್ತ ಮನದಲ್ಲಿ ಹುದುಗಿ ಹೋದ ವಿಷಯಗಳನ್ನು ಮೇಲೆತ್ತಿ ತಂದು, ಅದರಲ್ಲಿ ಬೇಕಾದ್ದನ್ನು ಇರಿಸಿಕೊಂಡು ಬೇಡದ್ದನ್ನು ಹೊರಗೆಸೆಯಲು ಸಾಧ್ಯವಿದೆ. ಈ ಮೂಲಕ ಗಾಢವಾದ ಚಿಕಿತ್ಸಕ ಗುಣವನ್ನಿದು ಹೊಂದಿದೆ. ನಿದ್ರೆಗೆ ಜಾರದೆಯೇ ಗಾಢವಾದ ವಿಶ್ರಾಂತಿಗೆ ಜಾರುವುದು ಅಭ್ಯಾಸದಿಂದಲೇ ಸಿದ್ಧಿಸಬೇಕು. ಆದರೆ ಸೂಕ್ತ ಮಾರ್ಗದರ್ಶನದಿಂದ ಇದನ್ನು ಸುಲಭವಾಗಿಯೇ ಅಭ್ಯಾಸ ಮಾಡಬಹುದು.

ಇದನ್ನೂ ಓದಿ: International Yoga Day 2024: ಯೋಗ ಮಾಡುವ ಮ್ಯಾಟ್‌ ಹೇಗಿದ್ದರೆ ಅನುಕೂಲ?

ಹೇಗೆ ನಡೆಯಿತು?

ಈ ಅಧ್ಯಯನಕ್ಕಾಗಿ, ಎರಡು ಪ್ರತ್ಯೇಕ ಗುಂಪುಗಳನ್ನು ಇರಿಸಿಕೊಳ್ಳಲಾಗಿತ್ತು. ಒಂದು ಗುಂಪಿನಲ್ಲಿ ಧ್ಯಾನ ಮತ್ತು ಯೋಗನಿದ್ರೆಯಂಥ ಕ್ರಮಗಳ ಅಭ್ಯಾಸವೇ ಇಲ್ಲದವರಿದ್ದರು. ಇನ್ನೊಂದು ಗುಂಪಿನಲ್ಲಿ ಧ್ಯಾನ ಮತ್ತು ಯೋಗಾಭ್ಯಾಸದಲ್ಲಿ ಸುಮಾರು 3000 ತಾಸುಗಳಷ್ಟು ಸರಾಸರಿ ಅನುಭವ ಹೊಂದಿದವರಿದ್ದರು. ಇವರುಗಳ ಮೆದುಳು ಮತ್ತು ನರಮಂಡಲಗಳನ್ನು ಅಧ್ಯಯನ ನಡೆಸಿದಾಗ, ಯೋಗನಿದ್ರೆಯ ಅಭ್ಯಾಸದಿಂದ ದೇಹ ಮತ್ತು ಮೆದುಳಿನ ಮೇಲಾಗುವ ಪೂರಕ ಪರಿಣಾಮಗಳು ಸ್ಪಷ್ಟವಾದವು. ಯೋಗನಿದ್ರೆಯನ್ನು ಹೆಚ್ಚು ನಿಯಮಿತವಾಗಿ ಮತ್ತು ದೀರ್ಘವಾಗಿ ಅಭ್ಯಾಸ ಮಾಡುವವರಲ್ಲಿ, ಮೆದುಳಿನ ಹಿನ್ನೆಲೆಯ ಚಟುವಟಿಕೆಗಳು ಅಂದರೆ ಬೇಡದ ಯೋಚನೆಗಳು, ಚಿಂತೆಯ ಗೋಜಲುಗಳು- ಇಂಥವೆಲ್ಲ ಕಡಿಮೆಯಿದ್ದವು. ಮಾತ್ರವಲ್ಲ, ಮೆದುಳಿನೊಳಗೆ ಒಂದಕ್ಕೊಂದು ಭಾಗಗಳ ಸಂವಹನ ಉಳಿದವರಿಗಿಂತ ಚೆನ್ನಾಗಿತ್ತು.
ಯೋಗ ನಿದ್ರೆಗಾಗಿ ಈ ಎರಡೂ ಗುಂಪುಗಳ ಸದಸ್ಯರಿಗೆ ನಿರ್ದೇಶಿತ ಧ್ಯಾನ ಅಥವಾ ಯೋಗನಿದ್ರೆಯ ಆಡಿಯೊಗಳನ್ನು ಕೇಳಿಸಲಾಗುತ್ತಿತ್ತು. ಇವೆಲ್ಲ ಅಭ್ಯಾಸವಿಲ್ಲದ ಗುಂಪು ಕ್ರಮೇಣ ಇದಕ್ಕೆ ಹೊಂದಿಕೊಂಡು, ಕೆಲವು ಬದಲಾವಣೆಗಳಿಗೆ ಸ್ಪಂದಿಸುತಿತ್ತು. ಆದರೆ ಈ ಎರಡೂ ಗುಂಪುಗಳಲ್ಲಿ ಭಾಷೆ, ಸಂವಹನ ಮತ್ತು ಭಾವನೆಗಳಿಗೆ ಸಂಬಂಧಿಸಿದ ಮೆದುಳಿನ ಭಾಗಗಳು ಯೋಗನಿದ್ರೆಯ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಇದ್ದಿದ್ದನ್ನು ಅಧ್ಯಯನ ದಾಖಲಿಸಿದೆ.

Continue Reading
Advertisement
ಕ್ರೀಡೆ14 mins ago

T20 World Cup 2024: ವಿಂಡೀಸ್​ಗೆ ಆಘಾತ; ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ಕಿಂಗ್

PGCET 2024
ಶಿಕ್ಷಣ15 mins ago

PGCET 2024 : ಪಿಜಿಸಿಇಟಿ ಅಪ್‌ಡೇಟ್ಸ್‌ ; ಶುಲ್ಕ ಪಾವತಿ, ತಿದ್ದುಪಡಿ, ಪರೀಕ್ಷಾ ಕೇಂದ್ರ ಆಯ್ಕೆಗೆ ಜೂ.24 ಕೊನೆ ದಿನ

The Lion King 30 years influence on fans and actors
ಬಾಲಿವುಡ್15 mins ago

The Lion King: ಆಲ್‌ ಟೈಮ್‌ ಫೇವರೇಟ್‌ ಕಾರ್ಟೂನ್‌ `ದಿ ಲಯನ್ ಕಿಂಗ್’ 30ನೇ ವಾರ್ಷಿಕೋತ್ಸವ

Viral Video
ವೈರಲ್ ನ್ಯೂಸ್20 mins ago

Viral Video: ಕಾರು ತಡೆದ ಟ್ರಾಫಿಕ್‌ ಪೊಲೀಸ್‌ ಕ್ಯಾಬ್‌ ಡ್ರೈವರ್‌ ಮಾಡಿದ್ದೇನು ಗೊತ್ತಾ?

Floods In Assam
ದೇಶ22 mins ago

Floods In Assam: ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸಾಂ; 37ಕ್ಕೆ ಏರಿದ ಸಾವಿನ ಸಂಖ್ಯೆ

Actor Darshan
ಕರ್ನಾಟಕ24 mins ago

Actor Darshan: ದರ್ಶನ್ ಸೇರಿ ನಾಲ್ವರು ಸ್ಟೇಷನ್‌ನಿಂದ ಪರಪ್ಪನ ಅಗ್ರಹಾರ ಜೈಲಿಗೆ

Swamji Murder
ಪ್ರಮುಖ ಸುದ್ದಿ40 mins ago

Swamji Murder : ಆಸ್ತಿ, ಅಧಿಕಾರಕ್ಕಾಗಿ ಗಲಾಟೆ; ಸ್ವಾಮೀಜಿಯೊಬ್ಬರನ್ನು ಕೊಲೆ ಮಾಡಿದ ಸ್ವಾಮೀಜಿಗಳ ಗುಂಪು

Child Death
ಬೆಳಗಾವಿ46 mins ago

Child Death : ಮಕ್ಕಳ ಮಾರಾಟ ಜಾಲದಲ್ಲಿ ರಕ್ಷಣೆಯಾಗಿದ್ದ ಮಗು ಮೃತ್ಯು; ಅಂತ್ಯ ಸಂಸ್ಕಾರ ನೆರವೇರಿಸಿದ ಪೊಲೀಸರು

Shobha Shetty car gift to yashwanth birthday
ಟಾಲಿವುಡ್1 hour ago

Shobha Shetty: ಭಾವಿ ಪತಿಗೆ ಕಾರ್ ಗಿಫ್ಟ್ ನೀಡಿದ ‘ಅಗ್ನಿಸಾಕ್ಷಿ’ ಖ್ಯಾತಿಯ ನಟಿ!

IND vs BAN
ಕ್ರೀಡೆ1 hour ago

IND vs BAN: ಕೊಹ್ಲಿ ಬ್ಯಾಟಿಂಗ್​ ಬಗ್ಗೆ ಸ್ವತಃ ಬೇಸರ ವ್ಯಕ್ತಪಡಿಸಿದ ಬ್ಯಾಟಿಂಗ್​ ಕೋಚ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ22 hours ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 day ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ2 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು5 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ6 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ6 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ6 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌