ಮಹಾರಾಷ್ಟ್ರದಲ್ಲಿ ಕೋವಿಡ್ 4ನೇ ಅಲೆ ಭೀತಿ ಇದ್ದರೂ ಬೆಳಗಾವಿಯಲ್ಲಿ ನಿರ್ಲಕ್ಷ್ಯ - Vistara News

ಬೆಳಗಾವಿ

ಮಹಾರಾಷ್ಟ್ರದಲ್ಲಿ ಕೋವಿಡ್ 4ನೇ ಅಲೆ ಭೀತಿ ಇದ್ದರೂ ಬೆಳಗಾವಿಯಲ್ಲಿ ನಿರ್ಲಕ್ಷ್ಯ

ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿ 5 ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಆದರೂ ಬೆಳಗಾವಿ ಗಡಿ ಭಾಗದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿಲ್ಲ.

VISTARANEWS.COM


on

ಕೋವಿಡ್ 4ನೇ ಅಲೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ನಾಲ್ಕನೇ ಅಲೆಯ ಭೀತಿ ಎದುರಾಗಿದೆ. ಹೀಗಾಗಿ ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಆತಂಕ ಹೆಚ್ಚಾಗಿದೆ. ಆದರೂ ಗಡಿ ಭಾಗದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಮಹಾರಾಷ್ಟ್ರದ ಪ್ರಯಾಣಿಕರು ಬಿಂದಾಸ್‌ ಆಗಿ ರಾಜ್ಯದೊಳಗೆ ಪ್ರವೇಶಿಸುತ್ತಿದ್ದಾರೆ.

ಕೋವಿಡ್‌ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಮತ್ತೆ ಕಠಿಣ ನಿಯಮಗಳು ಜಾರಿಗೆ ಬಂದಿವೆ. ಜೂನ್ ತಿಂಗಳ ಆರಂಭದಿಂದ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆ ಆಗುತ್ತಲೇ ಇದೆ. ಹೀಗಾಗಿ ಕರ್ನಾಟಕ, ಮಹಾರಾಷ್ಟ್ರ ಸೇರಿ 5 ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ| ಕೋವಿಡ್ ಬಳಿಕ ಹೆಚ್ಚಿದೆ ದೈವ ಭಕ್ತಿ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಭಾರಿ ಡಿಮ್ಯಾಂಡ್‌

ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಗಡಿಜಿಲ್ಲೆಗಳಲ್ಲಿ ಎಚ್ಚರಿಕೆ ಅಗತ್ಯ ಆಗಿದೆ. ಬೆಳಗಾವಿಯ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆ ಅನಿವಾರ್ಯ ಮಾಡಿದಾರೆ. ಬೆಳಗಾವಿ ಜಿಲ್ಲಾಡಳಿತಕ್ಕೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ‌‌‌ನೀಡಿಲ್ಲ ಅಂದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಭಾರಿ ಮಳೆಗೆ ಶ್ರೀನಿವಾಸಪುರದ ರೈಲ್ವೆ ಅಂಡರ್‌ ಪಾಸ್‌ ಜಲಾವೃತ; ಇನ್ನೈದು ದಿನ ಭಾರಿ ವರ್ಷಧಾರೆ

Karnataka Weather Forecast: ರಾಜ್ಯಾದ್ಯಂತ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಲಿದ್ದು, ಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಇರಲಿದೆ ಎಂದು (Rain News) ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

VISTARANEWS.COM


on

By

Karnataka weather Forecast
Koo

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮುಂದಿನ 24 ಗಂಟೆ ಭರ್ಜರಿ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ಗುಡುಗು, ಮಿಂಚು ಮತ್ತು ಬಿರುಗಾಳಿಯೊಂದಿಗೆ ಮಳೆಯಾಗಲಿದೆ.

ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಕೋಲಾರ, ಹಾಸನದ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಇನ್ನು ಗಾಳಿ ವೇಗವು 30-40 ಕಿ.ಮೀ ವ್ಯಾಪ್ತಿಯಲ್ಲಿ ಇರಲಿದೆ.

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಒಳನಾಡಿನ ಬೀದರ್‌, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಹಾಗೂ ರಾಯಚೂರು, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳುರು, ಚಿತ್ರದುರ್ಗ, ದಾವಣಗೆರೆ, ಕೊಡಗು ಹಾಗೂ ಮೈಸೂರು, ಮಂಡ್ಯ, ರಾಮನಗರ, ಶಿವಮೊಗ್ಗ, ವಿಜಯನಗರದ ಸುತ್ತಮುತ್ತ ಹಗುರದಿಂದ ಕೂಡಿದ ಮಳೆಯಾಗಲಿದೆ.

ಇದನ್ನೂ ಓದಿ: Physical Abuse : ಮಹಿಳೆಯರು ಚಳಿ ಬಿಡಿಸಲು ಬಂದಾಗ ಕಾಂಪೌಂಡ್‌ ಹಾರಿದ ಪುರಸಭೆ ಮಾಜಿ ಅಧ್ಯಕ್ಷೆಯ ಪತಿಗೆ ಧರ್ಮದೇಟು

ಮುಂದುವರಿದ ಮಳೆ ಅವಾಂತರ

ಕೋಲಾರದಲ್ಲಿ ಗುರುವಾರ ಸುರಿದ ದಿಢೀರ್‌ ಮಳೆಗೆ ಶ್ರೀನಿವಾಸಪುರದ ರೈಲ್ವೆ ಅಂಡರ್‌ ಪಾಸ್‌ ಜಲಾವೃತಗೊಂಡಿತ್ತು. ಸುಮಾರು 2-3 ಅಡಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ದೊಡ್ಡ ದೊಡ್ಡ ವಾಹನಗಳು ಜಲಾವೃತಗೊಂಡ ರಸ್ತೆಯಲ್ಲೇ ಬಂದರೆ, ಬೈಕ್‌ ಸವಾರರು ತಳ್ಳಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.

karnataka weather Forecast

ಇತ್ತ ಶಾಲಾ ‌ಮಕ್ಕಳು ಮನೆಗೆ ತೆರಳಲು ಹರಸಾಹಸ ಪಡೆಬೇಕಾಯಿತು. ಅಪಾಯವನ್ನು ಲೆಕ್ಕಿಸದೆ ಸೈಕಲ್‌ನಲ್ಲಿ ಹೋದ ಶಾಲಾ ವಿದ್ಯಾರ್ಥಿಯೊಬ್ಬ ನೀರಿನ ರಭಸಕ್ಕೆ ವಾಪಸ್‌ ಹಿಂದಕ್ಕೆ ಬಂದಿದ್ದ. ಅಂಡರ್‌ಪಾಸ್‌ನಲ್ಲಿ ನೀರು ಸರಿಯಾಗಿ ಹರಿದು ಹೋಗಲು ಆಗದ ಕಾರಣಕ್ಕೆ ಈ ಸಮಸ್ಯೆ ಆಗಿದೆ ಎಂದು ಸಾರ್ವಜನಿಕರು ಕಿಡಿಕಾರಿದರು.

karnataka weather Forecast

ಮಾವಿನ ಮಾರುಕಟ್ಟೆಗೆ ತೆರಳಲು ಇರುವ ಏಕೈಕ ಮಾರ್ಗವಿದು. ಪ್ರತಿ ಬಾರಿ ಮಳೆಯಾದರೂ ಇದೇ ಪರಿಸ್ಥಿತಿ ಎದುರಾಗುತ್ತದೆ. ಆದರೆ ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

Karnataka weather Forecast

ಇನ್ನೂ ರಾಜಧಾನಿ ಬೆಂಗಳೂರು ನಗರದಲ್ಲಿ ಮಳೆ ಅಬ್ಬರಕ್ಕೆ ಮರಗಳು ನೆಲಕ್ಕುರುಳಿವೆ. ಆದರೆ ಕೆಲವೆಡೆ ಮರಗಳ ತೆರವು ಕಾರ್ಯಾಚರಣೆ ನಡೆದಿಲ್ಲ. ರಸ್ತೆ ಹಾಗೂ ಫುಟ್‌ಪಾತ್‌ ಮಧ್ಯೆ ಮರದ ರೆಂಬೆ, ಕೊಂಬೆಗಳು ಬಿದ್ದಿವೆ. ಹೀಗಾಗಿ ಜನರ ಓಡಾಟ ಸೇರಿ ವ್ಯಾಪಾರಸ್ಥರು ಪರದಾಡಬೇಕಾಗಿದೆ. ಇನ್ನೂ ಜಯನಗರದಲ್ಲಿ ಮರಗಳು ಬಿದ್ದ ಕಾರಣ ವ್ಯಾಪಾರಸ್ಥರಿಗೆ ಅನಾನುಕೂಲವಾಗಿದೆ. ಬಿಬಿಎಂಪಿ‌ಯವರು ಮರ ಕತ್ತರಿಸಿ ಪಕ್ಕಕ್ಕೆ ಹಾಕಿ ಹೋಗಿದ್ದಾರೆ. ಆದರೆ ಅದನ್ನು ತೆರವು ಮಾಡದೆ ಇರುವುದರಿಂದ ವ್ಯಾಪಾರ ಮಾಡಲು ಕಷ್ಟವಾಗುತ್ತಿದೆ ಎಂದು ವೃದ್ಧೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Karnataka Rain : ತಡರಾತ್ರಿ ಸುರಿದ ಭಾರಿ ಮಳೆಯು ಸಾವು-ನೋವಿಗೆ ಕಾರಣವಾಗಿದೆ. ತುಮಕೂರಲ್ಲಿ ಮಳೆಗೆ (Rain Effected) ಮರ ಬಿದ್ದು ಮೇಕೆಗಳು ಮೃತಪಟ್ಟರೆ, ಮನೆಗಳು, ವಾಹನಗಳು ಜಖಂಗೊಂಡಿವೆ. ಶಿವಮೊಗ್ಗದಲ್ಲಿ ಸಿಡಿಲಿಗೆ ಎಲೆಕ್ಟ್ರಾನಿಕ್‌ ಅಂಗಡಿ ಸುಟ್ಟು ಭಸ್ಮವಾಗಿದೆ.

VISTARANEWS.COM


on

By

Karnataka Rain
Koo

ತುಮಕೂರು: ತುಮಕೂರು ಜಿಲ್ಲೆಯಲ್ಲಿ ರಾತ್ರಿ ಗಾಳಿ ಸಹಿತ ಸುರಿದ ಭಾರಿ ಮಳೆಗೆ (Karnataka Rain) ಹಳೆಯ ಬೇವಿನ ಮರವೊಂದು ಕುಸಿದು ಬಿದ್ದಿದೆ. ಪರಿಣಾಮ ಮೂರು ಮನೆಗಳು ಹಾಗೂ ಒಂದು ಇಟಿಯೋಸ್ ಕಾರು ಜಖಂಗೊಂಡಿದೆ. ಸುಮಾರು 120 ವರ್ಷದ ಹಳೆಯ ಬೃಹತ್ ಮರ ಬಿದ್ದು ಅವಾಂತರವೇ ಸೃಷ್ಟಿಯಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಹುಸೇನ್ ಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ನರಸಿಂಹ ಎಂಬುವರಿಗೆ ಸೇರಿದ ಕಾರು ಹಾಗೂ ನಾಗರಾಜ್, ಮಾಧವರಾಜ್, ಅಕಲಪ್ಪ ಎಂಬುವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದೆ. ಒಂದು ಬೈಕ್ ಕೂಡ ಜಖಂ ಆಗಿದ್ದು, ಮರದಡಿ ಕಟ್ಟಿದ್ದ ಎರಡು ಮೇಕೆಗಳು ಮೃತಪಟ್ಟಿವೆ. ಸುಮಾರು ನಾಲ್ಕೈದು ಜನರಿಗೆ ಸಣ್ಣಪುಟ್ಟ ಗಾಯವಾಗಿದೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮರ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಸಿಡಿಲು ಬಡಿದು ಹೊತ್ತಿ ಉರಿದ ಅಂಗಡಿ

ಶಿವಮೊಗ್ಗ ಹೊರವಲಯದ ಜಾವಳ್ಳಿ ಗ್ರಾಮದಲ್ಲಿ ಸಿಡಿಲು ಸಹಿತ ಧಾರಾಕಾರವಾಗಿ ಸುರಿದ ಮಳೆಗೆ ಅಂಗಡಿಯೊಂದು ಹೊತ್ತಿ ಉರಿದಿದೆ. ಸಿಡಿಲು ಬಡಿದ ಕಾರಣಕ್ಕೆ ಎಲೆಕ್ಟ್ರಿಕ್‌ ಅಂಗಡಿ ಧಗೆ ಧಗೆನೇ ಹೊತ್ತಿ ಉರಿದಿದೆ. ಮಳೆಯಲ್ಲೇ ಬೆಂಕಿ ಜ್ವಾಲೆಗೆ ಅಂಗಡಿ ಸಂಪೂರ್ಣ ಭಸ್ಮವಾಗಿದೆ. 10 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಗಾಹುತಿಯಾಗಿವೆ. ವೀರಭದ್ರಪ್ಪ ಎಂಬುವರಿಗೆ ಅಂಗಡಿ ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ: Dead Body Found : ಸೇತುವೆ ಸಮೀಪದಲ್ಲಿತ್ತು ಕೊಳೆತ ಮಹಿಳೆಯ ಶವ; ಹಂತಕರು ಯಾರು?

ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ದೊಡ್ಡಬಳ್ಳಾಪುರ: ರಾಜ್ಯದ ಹಲವೆಡೆ ಬುಧವಾರ ಸಂಜೆ ಭಾರಿ ಮಳೆಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯಲ್ಲಿ ಅಂಗಡಿ ಹಾಗೂ ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಪಕ್ಕದ ಅಂಗಡಿಗಳು ಹಾಗೂ ಮೆಡಿಕಲ್ ಸ್ಟೋರ್‌ಗೂ ನೀರು ನುಗ್ಗಿ ಹಾನಿಯಾಗಿದೆ.

ಕೆಆರ್‌ಡಿಸಿಎಲ್‌ನವರು ರಸ್ತೆ ಕಾಮಗಾರಿ ವೇಳೆ ಚರಂಡಿ ವ್ಯವಸ್ಥೆ ಮಾಡದಿರುವುದೇ ಮಳೆ ನೀರು ನುಗ್ಗಲು ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಎತ್ತರದ ಪ್ರದೇಶದಲ್ಲಿನ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದೆ. ರಾತ್ರಿಯೆಲ್ಲ ಮನೆಗಳಲ್ಲಿ ವಿದ್ಯುತ್ ಇಲ್ಲದೆ ಜನರು ಪರದಾಡಿದ್ದಾರೆ. ಮಳೆ ನೀರನ್ನು ಮನೆಯಿಂದ ಹೊರಗೆ ಎತ್ತೋಯ್ಯೊಲು ಹರಸಾಹಸ ಪಟ್ಟಿದ್ದಾರೆ. ಮನೆಯಲ್ಲಿದ್ದ ದಿನಸಿ, ಅಂಗಡಿಗಳಲ್ಲಿನ ತರಕಾರಿ ಎಲ್ಲವೂ ನೀರು ಪಾಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಳಗಾವಿ

Murder Case : ಸ್ನೇಹಿತರೇ ಕೊಲೆಗಾರರು; ಬರ್ತ್‌ ಡೇ ಪಾರ್ಟಿಗೆ ಹೋದ ಯುವಕನ ಬರ್ಬರ ಹತ್ಯೆ

Murder case : ಸ್ನೇಹಿತನ ಬರ್ತ್‌ ಡೇ ಪಾರ್ಟಿಗೆಂದು (Birthday Party) ಹೋದ ಯುವಕನೊಬ್ಬ ಕೊಲೆಯಾಗಿ ಹೋಗಿದ್ದಾನೆ. ಬರ್ತ್‌ ಡೇ ಪಾರ್ಟಿಯಲ್ಲಿ ಸಣ್ಣದೊಂದು ಕಿರಿಕ್‌ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಧಿಸಿ ಎಂದು ಆಕ್ರೋಶಿಸಿದ್ದಾರೆ.

VISTARANEWS.COM


on

By

Murder Case
ಮೃತ ಬಸವರಾಜ
Koo

ಬೆಳಗಾವಿ: ಸ್ನೇಹಿತನ ಬರ್ತ್ ಡೇ ಪಾರ್ಟಿಗೆ (Birthday Party) ತೆರಳಿದ್ದ ಯುವಕನ ಬರ್ಬರ (Murder Case) ಹತ್ಯೆಯಾಗಿದೆ. ಬೆಳಗಾವಿ ಜಿಲ್ಲೆಯ (Belgavi News) ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಚಾಕುವಿನಿಂದ ಇರಿದು ಬಸವರಾಜ ಮುದ್ದಣ್ಣವರ (23) ಎಂಬಾತನ ಹತ್ಯೆಯಾಗಿದೆ.

ಎಂಎಸ್‌ಡಬ್ಲ್ಯೂ ವ್ಯಾಸಂಗ ಮಾಡುತ್ತಿದ್ದ ಬಸವರಾಜ ಮುದ್ದಣ್ಣವರ, ನಿನ್ನೆ ಬುಧವಾರ ರಾತ್ರಿ ಸ್ನೇಹಿತ ಮಲ್ಲಿಕಾರ್ಜುನ ಎಂಬಾತನ ಬರ್ತ್ ಡೇ ಪಾರ್ಟಿಗೆ ತೆರಳಿದ್ದ. ಈ ವೇಳೆ ಬರ್ತ್ ಡೇ ಪಾರ್ಟಿಗೆ ಆಗಮಿಸಿದ್ದ ಸ್ನೇಹಿತರ ಮಧ್ಯೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಸ್ನೇಹಿತರೇ ಬಸವರಾಜ ಮುದ್ದಣ್ಣವರಗೆ ಹೊಟ್ಟೆ, ಬೆನ್ನಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.

ತೀವ್ರ ಹಲ್ಲೆಗೊಳಾದ ಬಸೌರಾಜನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಕಲಾಗಿದೆ. ಬಸವರಾಜ ಮೃತದೇಹವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇನ್ನು ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಹತ್ಯೆಗೈದವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಬಸವರಾಜ ತಾಯಿ ಒತ್ತಾಯಿಸಿದ್ದಾರೆ. ನನ್ನ ಮಗ ಯಾರ ತಂಟೆಗೂ ಹೋಗುತ್ತಿರಲಿಲ್ಲ, ಕಾಲೇಜಿನಲ್ಲಿ ಚಿನ್ನದ ಪದಕ ಪಡೆದಿದ್ದ. ಬರ್ತ್ ಡೇ ಪಾರ್ಟಿಗೆ ಹೋಗುತ್ತೇನೆ ಎಂದರೆ ಕಳಿಸುತ್ತಿರಲಿಲ್ಲ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ ಎಂದು ಕಣ್ಣೀರಿಟ್ಟರು.

ಇದನ್ನೂ ಓದಿ: Prajwal Revanna Case: ಬೆಡ್‌ಶೀಟ್‌ ಮೇಲಿರುವ `ಕಲೆಗಳ ಮಾಲಿಕ ನಾನಲ್ಲ…’ ಎನ್ನುತ್ತಿರುವ ಪ್ರಜ್ವಲ್!

ಸತ್ತ ವ್ಯಕ್ತಿಯ ದೇಹವನ್ನು ಏಕಾಂಗಿಯಾಗಿ ಬಿಡಬಾರದು ಅನ್ನೋದು ಯಾಕೆ ಗೊತ್ತೇ?

ಭೂಮಿಯಲ್ಲಿ (earth) ಹುಟ್ಟಿದ ಮನುಷ್ಯ, ಪ್ರಾಣಿ, ಸಸ್ಯಗಳು ಸೇರಿ ಪ್ರತಿಯೊಂದು ಜೀವ ಜಂತುಗಳು ಒಂದಲ್ಲ ಒಂದು ದಿನ ಸಾಯಲೇಬೇಕು (death) ಎಂಬುದು ಜೀವನದ ಕಟು ಸತ್ಯ. ಜೀವನ ಮತ್ತು ಸಾವಿನ ಚಕ್ರವು ನಾವೆಲ್ಲರೂ ಒಪ್ಪಿಕೊಳ್ಳಬೇಕಾದ ಅನಿವಾರ್ಯ ಸತ್ಯವಾಗಿದೆ. ಹಿಂದೂ ಧರ್ಮದ ನಂಬಿಕೆ (Hinduism Beliefs) ಪ್ರಕಾರ ಸತ್ತ ವ್ಯಕ್ತಿಯ ದೇಹವನ್ನು (dead body) ಒಂಟಿಯಾಗಿ ಬಿಡಬಾರದು ಎನ್ನಲಾಗುತ್ತದೆ.

ವ್ಯಕ್ತಿಯ ಕರ್ಮಗಳ ಪ್ರಕಾರ ಒಬ್ಬನು ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾನೆ ಎಂದು ಹೇಳಲಾಗುತ್ತದೆ. ಗರುಡ ಪುರಾಣವು ಹುಟ್ಟಿನಿಂದ ಸಾವಿನವರೆಗೆ ಎಲ್ಲವನ್ನೂ ವಿವರಿಸುವ ಒಂದು ಪಠ್ಯವಾಗಿದೆ. ಅದರೊಂದಿಗೆ, ಒಬ್ಬ ವ್ಯಕ್ತಿಯು ತನ್ನ ಮರಣದ ಅನಂತರ ಯಾವ ನೋವುಗಳು ಮತ್ತು ಫಲಿತಾಂಶಗಳನ್ನು ಪಡೆಯಬೇಕು ಎಂಬುದರ ಕುರಿತು ಸಹ ವಿವರಿಸಲಾಗಿದೆ.

ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ಒಬ್ಬ ವ್ಯಕ್ತಿ ಸತ್ತಾಗ ಅಂತ್ಯಕ್ರಿಯೆ ನಡೆಯುವವರೆಗೆ ಆತನ ದೇಹವನ್ನು ಒಂಟಿಯಾಗಿ ಇರಲು ಬಿಡುವುದಿಲ್ಲ.

ಸನಾತನ ಧರ್ಮದ ನಿಯಮದ ಪ್ರಕಾರ ವ್ಯಕ್ತಿಯನ್ನು ಸಾಯಂಕಾಲ ಅಥವಾ ರಾತ್ರಿ ಶವಸಂಸ್ಕಾರ ಮಾಡುವಂತಿಲ್ಲ. ಒಬ್ಬ ವ್ಯಕ್ತಿ ರಾತ್ರಿಯಲ್ಲಿ ಸತ್ತಾಗ, ವ್ಯಕ್ತಿಯ ಮೃತ ದೇಹವನ್ನು ರಾತ್ರಿಯಿಡೀ ಮನೆಯಲ್ಲಿ ಇಡಲಾಗುತ್ತದೆ. ಪಂಚಕಾಲದಲ್ಲಿ ಅಂದರೆ ಧನಿಷ್ಠ, ಶತಭಿಷ, ಪೂರ್ವಭಾದ್ರ, ಉತ್ತರಾಭಾದ್ರ ನಕ್ಷತ್ರಗಳಲ್ಲಿ ವ್ಯಕ್ತಿ ಸತ್ತರೆ ಪಂಚಕ ವಿಧಿಯನ್ನು ನಡೆಸಿಯೇ ಮೃತ ವ್ಯಕ್ತಿಯ ದೇಹವನ್ನು ಸುಡಬೇಕಾಗುತ್ತದೆ.

ಒಬ್ಬ ವ್ಯಕ್ತಿ ಸತ್ತಾಗ ಆತನ ಮಕ್ಕಳು ಹತ್ತಿರದಲ್ಲಿಲ್ಲದಿದ್ದರೆ ಅವರು ಬರುವವರೆಗೂ ಶವವನ್ನು ಮನೆಯಲ್ಲಿ ಇಡಲಾಗುತ್ತದೆ. ಆದರೆ ಯಾವುದೇ ಸಂದರ್ಭಗಳಲ್ಲಿ ಮೃತ ದೇಹವನ್ನು ಮಾತ್ರ ಒಂಟಿಯಾಗಿ ಬಿಡುವುದಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಗರುಡ ಪುರಾಣದಲ್ಲಿ ವಿವರವಾಗಿ ವಿವರಿಸುತ್ತದೆ.

ಮೃತ ದೇಹವನ್ನು ಏಕಾಂಗಿಯಾಗಿ ಏಕೆ ಬಿಡುವುದಿಲ್ಲ?

ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ಸತ್ತಾಗ ಸತ್ತ ವ್ಯಕ್ತಿಯ ದೇಹದ ಸುತ್ತಲೂ ದುಷ್ಟಶಕ್ತಿಗಳು ಸುತ್ತಾಡುತ್ತಲೇ ಇರುತ್ತವೆ. ಮೃತ ದೇಹವನ್ನು ಏಕಾಂಗಿಯಾಗಿ ಬಿಟ್ಟರೆ ಸತ್ತ ವ್ಯಕ್ತಿಯ ದೇಹವನ್ನು ದುಷ್ಟಶಕ್ತಿಗಳು ಪ್ರವೇಶಿಸಬಹುದು ಎಂದು ನಂಬಲಾಗಿದೆ.

ಮೃತದೇಹವನ್ನು ಮಾತ್ರ ಬಿಟ್ಟು ಹೋಗುವುದು ಅಪಾಯಕಾರಿ ಎನ್ನಲಾಗುತ್ತದೆ. ಕುಟುಂಬ ಸದಸ್ಯರಿಗೆ ಕೆಟ್ಟದನ್ನು ಉಂಟು ಮಾಡಬಹುದು ಎನ್ನಲಾಗುತ್ತದೆ. ಆದ್ದರಿಂದ, ಸತ್ತ ವ್ಯಕ್ತಿಯ ಮೃತ ದೇಹವನ್ನು ಎಂದಿಗೂ ಒಂಟಿಯಾಗಿ ಬಿಡುವುದಿಲ್ಲ.


ಎರಡನೆಯದಾಗಿ ಸತ್ತ ವ್ಯಕ್ತಿಯ ದೇಹವನ್ನು ಏಕಾಂಗಿಯಾಗಿ ಬಿಟ್ಟರೆ ಕೆಂಪು ಇರುವೆಗಳು ಅಥವಾ ಪ್ರಾಣಿಗಳಂತಹ ಹತ್ತಿರದ ನರಭಕ್ಷಕ ಜೀವಿಗಳು ದೇಹವನ್ನು ಹಾನಿಗೊಳಿಸಬಹುದು ಎಂಬುದೂ ಒಂದು ಕಾರಣವಾಗಿದೆ. ಆದ್ದರಿಂದ ಸತ್ತ ವ್ಯಕ್ತಿಯ ದೇಹವನ್ನು ಸುಡುವವರೆಗೆ ಅದನ್ನು ಸುಮ್ಮನೆ ಬಿಡುವುದಿಲ್ಲ. ಒಂಟಿಯಾಗಿ ಬಿಟ್ಟರೆ ಸತ್ತ ಆತ್ಮವೂ ಯಮಲೋಕಕ್ಕೆ ಹೋಗುವ ದಾರಿಯಲ್ಲಿ ಹಿಂಸೆಗಳನ್ನು ಅನುಭವಿಸಬೇಕಾಗುತ್ತದೆ ಎನ್ನಲಾಗುತ್ತದೆ.

ಇದಲ್ಲದೇ ಮೃತದೇಹವನ್ನು ಸುದೀರ್ಘ ಕಾಲ ಒಂಟಿಯಾಗಿ ಬಿಟ್ಟರೆ ದುರ್ವಾಸನೆ ಬರಲಾರಂಭಿಸುತ್ತದೆ ಎನ್ನುವುದೂ ಒಂದು ಕಾರಣವಾಗಿದೆ. ಹಾಗಾಗಿ ಯಾರಾದರೂ ಅಲ್ಲಿ ಕುಳಿತುಕೊಂಡು ಮೃತದೇಹದ ಸುತ್ತಲೂ ಅಗರಬತ್ತಿಗಳನ್ನು ಉರಿಸಬೇಕು. ಇದರಿಂದ ಮೃತದೇಹದಿಂದ ಬರುವ ದುರ್ವಾಸನೆಯು ಸುತ್ತಲೂ ಹರಡುವುದಿಲ್ಲ.

ಇದನ್ನೂ ಓದಿ: Vastu Tips: ಮನೆಯ ಯಾವ ಕೋಣೆಗೆ ಯಾವ ಬಣ್ಣ ಇದ್ದರೆ ನೆಮ್ಮದಿ ಸಿಗುತ್ತದೆ? ವಾಸ್ತು ಸಲಹೆ ಹೀಗಿದೆ

ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ಸತ್ತಾಗ ಮೃತ ವ್ಯಕ್ತಿಯ ಆತ್ಮವು ಅಂತ್ಯಕ್ರಿಯೆ ನಡೆಯುವವರೆಗೆ ಕುಟುಂಬದೊಂದಿಗೆ ಸಂಪರ್ಕದಲ್ಲಿರುತ್ತದೆ. ಕುಟುಂಬ ಸದಸ್ಯರು ಮೃತದೇಹವನ್ನು ಬಿಟ್ಟು ಹೋದರೆ ಸತ್ತ ವ್ಯಕ್ತಿಯ ಆತ್ಮವು ಪರಿತ್ಯಕ್ತಗೊಂಡಾಗ ದುಃಖಿತ ಆಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಮೃತ ದೇಹವನ್ನು ಎಂದಿಗೂ ಒಂಟಿಯಾಗಿ ಬಿಡಬಾರದು.

ಹಿಂದೂ ಧರ್ಮದಲ್ಲಿ ಸೂರ್ಯಾಸ್ತದ ಅನಂತರ ಯಾರಾದರೂ ಸತ್ತರೆ ಅವರ ದೇಹವನ್ನು ರಾತ್ರಿಯಿಡೀ ಮನೆಯಲ್ಲಿ ಇರಿಸಲಾಗುತ್ತದೆ ಮತ್ತು ಮರುದಿನ ಅವರ ಅಂತ್ಯಕ್ರಿಯೆಯನ್ನು ಮಾಡಲಾಗುತ್ತದೆ. ರಾತ್ರಿ ವೇಳೆ ಶವ ಸಂಸ್ಕಾರ ಮಾಡಿದರೆ ಮೋಕ್ಷ ಸಿಗುವುದಿಲ್ಲ ಎಂಬುದು ಇದರ ಹಿಂದಿನ ನಂಬಿಕೆ. ಹೀಗೆ ಮಾಡಿದರೆ ಅಂತಹ ಆತ್ಮವು ರಾಕ್ಷಸ, ದೆವ್ವ ಅಥವಾ ಪಿಶಾಚಿಯ ಗರ್ಭದ ಮೂಲಕ ಜನಿಸುತ್ತದೆ ಎಂಬ ಉಲ್ಲೇಖ ಗರುಡ ಪುರಾಣದಲ್ಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಳಗಾವಿ

ಲಕ್ಷ್ಮೀ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಶೆಟ್ಟರ್‌ಗೆ 50 ಸಾವಿರ ಮತಗಳ ಲೀಡ್; ಕ್ಷೇತ್ರವಾರು ಪಟ್ಟಿ ಇಲ್ಲಿದೆ!

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಪುತ್ರನನ್ನು ಕಣಕ್ಕಿಸಿದ ಕಾರಣ ಬೆಳಗಾವಿ ಲೋಕಸಭೆ ಕ್ಷೇತ್ರವನ್ನು ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಇದಕ್ಕಾಗಿ ಅವರು ಅಬ್ಬರದ ಪ್ರಚಾರ ಕೈಗೊಂಡಿದ್ದರು, ರಣತಂತ್ರ ರೂಪಿಸಿದ್ದರು. ಆದರೆ, ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಎದುರಾಳಿ ಪಕ್ಷದ ಅಭ್ಯರ್ಥಿಗೆ ಭಾರಿ ಪ್ರಮಾಣದ ಲೀಡ್‌ ಸಿಕ್ಕಿದೆ.

VISTARANEWS.COM


on

Belagavi Election Result 2024
Koo

ಬೆಳಗಾವಿ: ರಾಜ್ಯದ ಗಮನ ಸೆಳೆದಿದ್ದ ಬೆಳಗಾವಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ (Lok Sabha Election Result 2024) ಬಿಜೆಪಿಯ ಜಗದೀಶ್‌ ಶೆಟ್ಟರ್‌ (Jagadish Shettar) ಅವರು ಗೆಲುವು ಸಾಧಿಸಿದ್ದಾರೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರ ಪುತ್ರ ಮೃಣಾಲ್‌ ಹೆಬ್ಬಾಳ್ಕರ್ (Mrinal Hebbalkar) ಅವರು ನಿರೀಕ್ಷೆ ಹುಟ್ಟಿಸಿದ್ದರೂ ಸೋಲನುಭವಿಸಿದ್ದಾರೆ. ಮೃಣಾಳ್‌ ಹೆಬ್ಬಾಳ್ಕರ್‌ ವಿರುದ್ಧ ಜಗದೀಶ್‌ ಶೆಟ್ಟರ್‌ ಅವರು 1,78,437 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು, ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ವಿಧಾನಸಭೆ ಕ್ಷೇತ್ರವಾದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿಯೇ ಜಗದೀಶ್‌ ಶೆಟ್ಟರ್‌ ಅವರಿಗೆ 50,529 ಮತಗಳ ಲೀಡ್‌ ಸಿಕ್ಕಿರುವುದು ಸಚಿವೆಗೆ ಆದ ಹಿನ್ನಡೆ ಎಂದೇ ಹೇಳಲಾಗುತ್ತಿದೆ.

Lok Sabha Election 2024 Laxmi Hebbalkar launches election campaign for Mrinal Hebbalkar

ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಜಗದೀಶ್‌ ಶೆಟ್ಟರ್‌ ಅವರಿಗೆ 7,62,029 ಮತಗಳು ಲಭಿಸಿದರೆ, ಮೃಣಾಲ್‌ ಹೆಬ್ಬಾಳ್ಕರ್‌ ಅವರಿಗೆ 5,83,592 ಮತಗಳು ಲಭಿಸಿವೆ. ಇನ್ನು, ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜಗದೀಶ್‌ ಶೆಟ್ಟರ್‌ ಅವರಿಗೆ 1,24,970 ಮತಗಳು ಲಭಿಸಿದರೆ, ಮೃಣಾಲ್‌ ಹೆಬ್ಬಾಳ್ಕರ್‌ ಅವರಿಗೆ 74,441 ಮತಗಳು ಲಭಿಸಿವೆ. ಸಚಿವೆಯ ಕ್ಷೇತ್ರದಲ್ಲಿಯೇ ಬಿಜೆಪಿಯ ಶೆಟ್ಟರ್‌ ಅವರಿಗೆ 50,529 ಮತಗಳ ಲೀಡ್‌ ಸಿಕ್ಕಿದೆ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಪುತ್ರನನ್ನು ಕಣಕ್ಕಿಸಿದ ಕಾರಣ ಬೆಳಗಾವಿ ಲೋಕಸಭೆ ಕ್ಷೇತ್ರವನ್ನು ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು.

ಬೆಳಗಾವಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ ಲೀಡ್?

ಅರಭಾವಿ ಕ್ಷೇತ್ರ
ಜಗದೀಶ್ ಶೆಟ್ಟರ್: 1,01,114 ಮತಗಳು
ಮೃಣಾಲ್ ಹೆಬ್ಬಾಳ್ಕರ್: 79,639 ಮತಗಳು
ಶೆಟ್ಟರ್ 21,475 ಮತಗಳ ಮುನ್ನಡೆ

ಗೋಕಾಕ್ ಕ್ಷೇತ್ರ
ಜಗದೀಶ್ ಶೆಟ್ಟರ್: 1,02519
ಮೃಣಾಲ್ ಹೆಬ್ಬಾಳ್ಕರ್: 78,622
ಶೆಟ್ಟರ್ 23,897 ಮತಗಳ ಮುನ್ನಡೆ

ಬೆಳಗಾವಿ ಉತ್ತರ
ಜಗದೀಶ್ ಶೆಟ್ಟರ್: 83,938
ಮೃಣಾಲ್ ಹೆಬ್ಬಾಳ್ಕರ್: 81,537
ಶೆಟ್ಟರ್ 2‌,401 ಮತಗಳ ಮುನ್ನಡೆ

ಬೆಳಗಾವಿ ದಕ್ಷಿಣ
ಜಗದೀಶ್ ಶೆಟ್ಟರ್: 1,19,249
ಮೃಣಾಲ್ ಹೆಬ್ಬಾಳ್ಕರ್: 81,537
ಶೆಟ್ಟರ್ 73,220 ಮತಗಳ ಮುನ್ನಡೆ

ಬೆಳಗಾವಿ ಗ್ರಾಮೀಣ
ಜಗದೀಶ್ ಶೆಟ್ಟರ್: 1,24970
ಮೃಣಾಲ್ ಹೆಬ್ಬಾಳ್ಕರ್: 74,441
ಶೆಟ್ಟರ್ 50,529 ಮತಗಳ ಮುನ್ನಡೆ

ಬೈಲಹೊಂಗಲ
ಜಗದೀಶ್ ಶೆಟ್ಟರ್: 82,015
ಮೃಣಾಲ್ ಹೆಬ್ಬಾಳ್ಕರ್: 60,618
ಶೆಟ್ಟರ್ 21,397 ಮತಗಳ ಮುನ್ನಡೆ

ಸವದತ್ತಿ
ಜಗದೀಶ್ ಶೆಟ್ಟರ್: 67,937
ಮೃಣಾಲ್ ಹೆಬ್ಬಾಳ್ಕರ್: 84,888
ಮೃಣಾಲ್ 16,951 ಮತಗಳ ಮುನ್ನಡೆ

ರಾಮದುರ್ಗ
ಜಗದೀಶ್ ಶೆಟ್ಟರ್: 74,729
ಮೃಣಾಲ್ ಹೆಬ್ಬಾಳ್ಕರ್: 75,123
ಮೃಣಾಲ್ 394 ಮತಗಳ ಮುನ್ನಡೆ

ಅಂಚೆ ಮತಗಳ ವಿವರ:
ಜಗದೀಶ ಶೆಟ್ಟರ್: 5,558
ಮೃಣಾಲ್ ಹೆಬ್ಬಾಳ್ಕರ್: 2,695
ಶೆಟ್ಟರ್ 2,863 ಮತಗಳ ಮುನ್ನಡೆ

ಪಿ.ಸಿ. ಮೋಹನ್‌ ಗೆದ್ದಿದ್ದೂ ಇದೇ ರೀತಿ

ಕರ್ನಾಟಕದ ಮತದಾರರ ಪಾಲಿಗೆ ಅತ್ಯಂತ ಕುತೂಹಲ ಮೂಡಿಸಿದ ಕ್ಷೇತ್ರವೆಂದರೆ ಬೆಂಗಳೂರು ಸೆಂಟ್ರಲ್​. ಇಲ್ಲಿ ಕೊನೇ ತನಕ ಕಾಂಗ್ರೆಸ್​ನ ಮನ್ಸೂರ್ ಅಲಿ ಖಾನ್​ ಗೆದ್ದಿದ್ದಾರೆ ಎಂದು ಅಂದುಕೊಂಡರೆ ಕೊನೇ ಕ್ಷಣದಲ್ಲಿ ಹಾಲಿ ಸಂಸದ ಪಿ. ಸಿ ಮೋಹನ್ ಅವರೇ ಗೆದ್ದು ಬೀಗಿದ್ದಾರೆ. ಈ ರೋಚಕ ಫಲಿತಾಂಶಕ್ಕೆ ಕಾರಣ ಮಂಜುಳಾ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ ಕ್ಷೇತ್ರ. ಈ ಕ್ಷೇತ್ರವೊಂದೇ ಪಿ. ಸಿ ಮೋಹನ್ ಅವರಿಗೆ ದೊಡ್ಡ ಪ್ರಮಾಣದಲ್ಲಿ ಲೀಡ್​ ಕೊಡುವೆ ಮೂಲ ಅವರ ಮರ್ಯಾದೆ ಕಾಪಾಡಿದೆ.

ಮಹದೇವಪುರ ಕ್ಷೇತ್ರದಲ್ಲಿ ಎಣಿಕೆ ಆರಂಭಗೊಂಡಾಗ ಪಿ.ಸಿ ಮೋಹನ್ ಅವರಿಗೆ ಮುನ್ನಡೆ ಸಿಗಲು ಆರಂಭವಾಯಿತು. ಈ ವೇಳೆ ಎಣಿಕೆ ಕೇಂದ್ರನ್ನು ತೊರೆದಿದ್ದ ಬಿಜೆಪಿ ಕಾರ್ಯಕರ್ತರು ಮತ್ತೆ ಅಲ್ಲಿಗೆ ಬರಲು ಆರಂಭಿಸಿದರು. ಈ ಕ್ಷೇತ್ರವೊಂದೇ ಮೋಹನ್ ಅವರಿಗೆ 1,18,046 ಮತದ ಮುನ್ನಡೆ ತಂದುಕೊಟ್ಟಿತು. 32,707 ಮತಗಳ ಅಂತರದಿಂದ ಅವರು ಗೆದ್ದೇ ಬಿಟ್ಟರು.

ಇದನ್ನೂ ಓದಿ: J Shantha: ಅಣ್ಣ-ತಂಗಿಗೆ ಕಹಿ; ಕರ್ನಾಟಕದಲ್ಲಿ ಶ್ರೀರಾಮುಲು, ಆಂಧ್ರದಲ್ಲಿ ಜೆ. ಶಾಂತಾಗೆ ಸೋಲು!

Continue Reading
Advertisement
Valmiki Corporation Scam
ಕರ್ನಾಟಕ6 seconds ago

Valmiki Corporation Scam: ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಿ.ನಾಗೇಂದ್ರ

Kangana Ranaut
ಪ್ರಮುಖ ಸುದ್ದಿ2 mins ago

Kangana Ranaut : ಪಂಜಾಬ್​ನಲ್ಲಿ ಭಯೋತ್ಪಾದನೆ ಹೆಚ್ಚುತ್ತಿದೆ; ತಮ್ಮ ಮೇಲೆ ಹಲ್ಲೆ ನಡೆಸಿದ ಬಗ್ಗೆ ಕಂಗನಾ ಪ್ರತಿಕ್ರಿಯೆ ಹೀಗಿತ್ತು

Kangana Ranaut
ಪ್ರಮುಖ ಸುದ್ದಿ46 mins ago

Kangana Ranaut : ನಟಿ ಕಂಗನಾಗೆ ಏರ್​ಪೋರ್ಟ್​ ಮಹಿಳಾ ಪೇದೆ ಹೊಡೆಯಲು ಕಾರಣವೇನು? ರೈತರ ಬಗ್ಗೆ ಅವರು ನೀಡಿದ ವಿವಾದಾತ್ಮಕ ಹೇಳಿಕೆ ಯಾವುದು?

Lok Sabha Election 2024
ದೇಶ53 mins ago

Lok Sabha Election 2024: ಈ 17 ಸಂಸದರು ಎನ್‌ಡಿಎಯಲ್ಲೂ ಇಲ್ಲ, ಇಂಡಿ ಕೂಟದಲ್ಲೂ ಇಲ್ಲ!

Viral Video
ವೈರಲ್ ನ್ಯೂಸ್1 hour ago

Viral Video: ಏಕಾಏಕಿ ಕುಸಿದು ಸಾವನ್ನಪ್ಪಿದ ಮೆಡಿಕಲ್ ಸಿಬ್ಬಂದಿ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕರ್ನಾಟಕ1 hour ago

MLC Election Results: ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಜಯಭೇರಿ

ಬೆಂಗಳೂರು2 hours ago

Bangalore News : ಕೇಳಚಂದ್ರ ಕಾಫಿಗೆ ಎಚ್​ಆರ್​ಡಿ ಮುಖ್ಯಸ್ಥರಾಗಿ ಡಾ.ಪಿ.ಕುರಿಯನ್ ರಾಫೆಲ್ ನೇಮಕ

MLC Election Results
ಪ್ರಮುಖ ಸುದ್ದಿ2 hours ago

MLC Election Results: ದಕ್ಷಿಣ ಶಿಕ್ಷಕರ ಕ್ಷೇತ್ರ; ಮೊದಲ ಪ್ರಾಶಸ್ತ್ಯ ಮತದಲ್ಲೇ ಮೈತ್ರಿ ಅಭ್ಯರ್ಥಿ ವಿವೇಕಾನಂದ ಭರ್ಜರಿ ಗೆಲುವು

TA Sharavana congratulated former CM hd Kumaraswamy who was elected to Lok Sabha from Mandya
ಬೆಂಗಳೂರು2 hours ago

TA Sharavana: ಮಂಡ್ಯದಿಂದ ಕುಮಾರಸ್ವಾಮಿ ಲೋಕಸಭೆಗೆ ಆಯ್ಕೆ; ಸಾಯಿಬಾಬಾ ಪ್ರಸಾದ ನೀಡಿ, ಅಭಿನಂದಿಸಿದ ಟಿ.ಎ.ಶರವಣ

Stock market Crash
ಪ್ರಮುಖ ಸುದ್ದಿ2 hours ago

Stock market Crash : ಜೂ. 4ರ ಷೇರುಪೇಟೆ ಕುಸಿತ ಮೋದಿ, ಅಮಿತ್​ ಶಾ ನಡೆಸಿದ ಮಹಾ ಹಗರಣ; ರಾಹುಲ್ ಗಾಂಧಿ ಆರೋಪ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ8 hours ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌