Masaba Gupta: ಮದುವೆಗೆ ಹಾಜರಾದ ಮಸಾಬಾ ಗುಪ್ತಾ ಮಲ ತಂದೆ; ವಿವಾಹದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ! - Vistara News

ಬಾಲಿವುಡ್

Masaba Gupta: ಮದುವೆಗೆ ಹಾಜರಾದ ಮಸಾಬಾ ಗುಪ್ತಾ ಮಲ ತಂದೆ; ವಿವಾಹದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ!

ನೀನಾ ಗುಪ್ತಾ ಅವರ ಮಗಳು ಮಸಾಬಾ ಗುಪ್ತಾ (Masaba Gupta) ಮತ್ತು ಸತ್ಯದೀಪ್ ಸರಳವಾಗಿ ವಿವಾಹವಾಗಿದ್ದಾರೆ. ಸದಾ ನ್ಯಾಚುರಲ್‌ ಆಗಿರುವಂತದ್ದನ್ನೇ ಮಸಾಬಾ ಪ್ರಿಫರ್‌ ಮಾಡುತ್ತಾರೆ. ಇನ್ನು ಮಸಾಬಾ ಜತೆಗೆ ನಟ, ಪತಿ ಸತ್ಯದೀಪ್‌ ಡಿಸೈನರ್‌ವೇರ್‌ ಕೂಡ ಪತ್ನಿ ಡಿಸೈನ್‌ ಮಾಡಿದ್ದನ್ನೇ ಧರಿಸಿದ್ದಾರೆ.

VISTARANEWS.COM


on

Masaba Gupta Interesting facts
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ನಟಿ ನೀನಾ ಗುಪ್ತಾ ಅವರ ಮಗಳು ಮಸಾಬಾ ಗುಪ್ತಾ (Masaba Gupta) ಮತ್ತು ಸತ್ಯದೀಪ್ ಸರಳವಾಗಿ ವಿವಾಹವಾಗಿದ್ದಾರೆ. ಮಸಾಬಾ ಅವರದ್ದು ಇದು ಎರಡನೇ ಮದುವೆ. ಪತಿ ಸತ್ಯದೀಪ್‌ ಮಿಶ್ರಾಗೂ ಕೂಡ ಇದು ಎರಡನೇ ಮದುವೆ.

ಸರಳ ಮದುವೆಯಾಗಿರುವುದರ ಕುರಿತು ನಟಿ ಹೇಳಿದ್ದೇನು?

ಮಸಾಬ ಗುಪ್ತಾ ಮತ್ತು ಸತ್ಯದೀಪ್ ಅವರು ಸರಳವಾಗಿ ವಿವಾಹವಾಗಿದ್ದಾರೆ. ನಟಿ ಈ ಬಗ್ಗೆ ಮಾತನಾಡಿ “ಇಂದು ತುಂಬ ಸ್ಮರಣೀಯ ದಿನ. ಈ ದಿನ ನಮ್ಮ ಆತ್ಮೀಯರೊಟ್ಟಿಗೆ ಸಂಭ್ರಮಿಸುವ ಕ್ಷಣವಾಗಿದೆ. ನಾವು ನಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಉಪಸ್ಥಿತಿಯಲ್ಲಿರಲು ಬಯಸುತ್ತೇವೆ. ಇದು ನಿಜವಾಗಿಯೂ ನಮ್ಮಿಬ್ಬರ ಖಾಸಗಿ ಕ್ಷಣವಾಗಿದೆ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಾವು ಅದನ್ನು ಆನಂದಿಸಲು ಬಯಸುತ್ತೇವೆ. ಕೆಲವೊಮ್ಮೆ ಕೆಲವರು ಮಾಡುವ ತಪ್ಪು ಏನೆಂದರೆ ನೀವು ಜನರನ್ನು ಮೆಚ್ಚಿಸಲು, ತೋರಿಕೆಗೆ ಅದ್ಧೂರಿಯಾಗಿ ಮದುವೆ ಆಗಬೇಕಿಲ್ಲ. ನಿಮಗೆ ಅದರ ಮೌಲ್ಯ ತಿಳಿದಿದ್ದರೆ ಸಾಕು. ನಮಗೆ ಅದ್ಯಾವುದೂ ಬೇಕಾಗಿಲ್ಲ. ಆದ್ದರಿಂದ ಸರಳವಾಗಿ ಮದುವೆಯಾದೆವುʼʼಎಂದು ದಂಪತಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Star Dress Shopping : ಮಾರಾಟಕ್ಕಿವೆ ಬಾಲಿವುಡ್‌ ನಟಿ ಕತ್ರೀನಾ ಕೈಫ್‌ ಡಿಸೈನರ್‌ವೇರ್ಸ್‌

ಮದುವೆಗೆ ಹಾಜರಾದ ತಂದೆ ವಿವಿಯನ್‌ ರಿಚರ್ಡ್

ತನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ತನ್ನ ಮಲತಂದೆ, ತನ್ನ ತಂದೆ, ತಾಯಿ, ಅತ್ತೆ, ಮಾವ ಎಲ್ಲರೂ ಒಟ್ಟಿಗೆ ಇದ್ದು ನಮಗೆ ಆಶೀವರ್ದಿಸಿದ್ದಾರೆ. ಇದು ನನ್ನ ಜೀವನದ ಅಮೂಲ್ಯ ಕ್ಷಣವಾಗಿದೆ ಎಂದು ಹೇಳಿದ್ದಾರೆ.

ಸ್ಪೆಷಲ್‌ ಆಗಿತ್ತು ವಧು, ವರರ ಔಟ್‌ಫಿಟ್‌

ಸೆಲೆಬ್ರಿಟಿ ಡಿಸೈನರ್‌ ಮಸಾಬಾ ಗುಪ್ತಾ ತಮ್ಮ ಲೆಹೆಂಗಾವನ್ನು ಅತ್ಯಂತ ಪ್ರೀತಿಯಿಂದಲೇ ಸಿದ್ಧಪಡಿಸಿದ್ದಾರೆ. ಪಾನ್‌ ಪತ್ತಿ ಥೀಮ್‌ ಲೆಹೆಂಗಾ ಇದಾಗಿದ್ದು, ಎರಡು ದುಪಟ್ಟಾ ಇದಕ್ಕೆ ಜತೆ ಮಾಡಲಾಗಿದೆ. ವಾಲ್‌ ಪ್ರಿಂಟ್‌ ಇರುವ ಲೈಮ್‌ ಗ್ರೀನ್‌ ಹಾಗೂ ರಾಣಿ ಪಿಂಕ್‌ನ ಸಿಕ್ವಿನ್ಸ್‌ ವಿನ್ಯಾಸ ಹೊಂದಿರುವುದು ಜತೆಯಾಗಿದೆ. ಕಸ್ಟಮೈಸ್ಡ್‌ ಬಾರ್ಡರ್‌ ಟ್ರೆಡಿಷನಲ್‌ ಡಿಸೈನ್‌ಗೆ ಸಾಕ್ಷಿಯಾಗಿದೆ. ಇನ್ನು ಈ ಲೆಹೆಂಗಾದೊಂದಿಗೆ ಧರಿಸಿರುವ ಹೇರ್‌ ಆಕ್ಸೆಸರೀಸ್‌ನಲ್ಲಿ ಸೂರ್ಯ ಹಾಗೂ ಚಂದ್ರನ ಕ್ಲಿಪ್‌ಗಳನ್ನು ಧರಿಸಲಾಗಿದೆ. ಇದೇ ವಿನ್ಯಾಸದ ಕಿವಿಯ ಹ್ಯಾಂಗಿಂಗ್ಸ್‌ ಹಾಗೂ ಲೆಯರ್‌ ನೆಕ್ಲೇಸ್‌ಗಳು ಮತ್ತಷ್ಟು ಆಕರ್ಷಣೀಯವಾಗಿವೆ. ಇದು ಎನರ್ಜಿಯ ಸಂಕೇತ ಎಂದು ಮಸಾಬಾ ಹೇಳಿಕೊಂಡಿದ್ದಾರೆ.

ಸದಾ ನ್ಯಾಚುರಲ್‌ ಆಗಿರುವಂತದ್ದನ್ನೇ ಮಸಾಬಾ ಪ್ರಿಫರ್‌ ಮಾಡುತ್ತಾರೆ. ಇನ್ನು ಮಸಾಬಾ ಜತೆಗೆ ನಟ, ಪತಿ ಸತ್ಯದೀಪ್‌ ಡಿಸೈನರ್‌ವೇರ್‌ ಕೂಡ ಪತ್ನಿ ಡಿಸೈನ್‌ ಮಾಡಿದ್ದನ್ನೇ ಧರಿಸಿದ್ದಾರೆ. ಇಬ್ಬರ ಡಿಸೈನರ್‌ವೇರ್‌ಗಳು ಪರ್ಫೆಕ್ಟ್‌ ಮ್ಯಾಚ್‌ ಆಗುವಂತಿದೆ.

ಇದನ್ನೂ ಓದಿ: Bollywood : ಬಾಲಿವುಡ್‌ ನಟಿ ರೇಖಾ ತಂದೆ-ತಾಯಿ ವಿವಾಹವನ್ನೇ ಆಗಿರಲಿಲ್ಲ!

ಕಲರ್‌ ಕೋಡ್‌ ಬಗ್ಗೆ ಮಾಹಿತಿ ಹಂಚಿಕೊಂಡ ಮಸಾಬಾ

ಮಸಾಬಾ ಅವರು ಹೌಸ್ ಆಫ್ ಮಸಾಬಾ ಕಲೆಕ್ಷನ್‌ಗಳಿಂದಲೇ ಬಟ್ಟೆಗಳನ್ನು ಸೆಲೆಕ್ಟ್‌ ಮಾಡಿದ್ದು, ಹಳದಿ ಬಣ್ಣ ಹೈಲೆಟ್‌ ಆಗುವಂತೆ ಔಟ್‌ ಫಿಟ್‌ಗಳನ್ನು ಮಾಡಿದ್ದಾರೆ. ದಂಪತಿ ಗುಲಾಬಿ ಬಣ್ಣದ ಉಡುಪನ್ನು ಧರಿಸಿದ್ದಾರೆ. ಪ್ರತಿಯೊಬ್ಬರ ಬಟ್ಟೆಗಳನ್ನು ಮಸಾಬಾ ವಿವರಿಸಿದ್ದರು. ʻʻಸತ್ಯದೀಪ್ ಬರ್ಫಿ ಪಿಂಕ್ ವಾಲ್‌ಫ್ಲವರ್ ಬಣ್ಣದ ಕುರ್ತಾ-ಪೈಜಾಮಾವನ್ನು ಧರಿಸಿದ್ದಾರೆ. ಪುರುಷರ ಉಡುಗೆಗೆ ಬಂದಾಗ, ಸರಳತೆಯಿಂದ ಕೂಡಿದೆ. ತಾಯಿ (ನೀನಾ ಗುಪ್ತಾ) ಸುಂದರವಾದ ಪುದೀನ ಹಸಿರು ಕ್ಯಾಂಡಿ ಮುದ್ರಿತ ಆರ್ಗನ್ಜಾ ಸೀರೆಯನ್ನು, ಕಸೂತಿ ಬಾರ್ಡರ್ ಒಳಗೊಂಡಿದೆ. ಪಲ್ಲುನಲ್ಲಿ ಗೋಟಾ ವರ್ಕ್ ಅನ್ನು ಧರಿಸಿದ್ದಾರೆ ಎಂದರು. ನನ್ನ ತಂದೆ ಬೀಜ್-ಹಳದಿ ಕುರ್ತಾ ಧರಿಸಿದ್ದಾರೆ. ಉಳಿದವರು ಸೀರೆಗಳು ಮತ್ತು ಕಫ್ತಾನ್‌ಗಳನ್ನು ಧರಿಸಿದ್ದಾರೆʼʼಎಂದು ಮಾಹಿತಿ ಹಂಚಿಕೊಂಡರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Munjya Movie: ಸ್ಟಾರ್​ ಕಲಾವಿದರೇ ಇಲ್ಲದೇ ಬರೋಬ್ಬರಿ 100 ಕೋಟಿ ರೂ. ಗಳಿಕೆ ಕಂಡ ʻಮುಂಜ್ಯʼ!

Munjya Movie: ಮುಂಜ್ಯಾʼ ಟೀಸರ್‌ ಒಂದು ನಿಮಿಷ ಇದ್ದು, CGI ಪಾತ್ರವಾದ ಮುಂಜ್ಯನನ್ನು ಪರಿಚಯಿಸಲಾಗಿತ್ತು. ಟೀಸರ್‌ನಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ 2010ರ ಬ್ಲಾಕ್‌ಬಸ್ಟರ್ ಚಿತ್ರ ದಬಾಂಗ್‌ನ ಜನಪ್ರಿಯ ಗೀತೆ ಮುನ್ನಿ ಬದ್ನಾಮ್ ಹುಯಿ ಹಾಡು ಟಿವಿಯಲ್ಲಿ ಪ್ಲೇ ಆಗುತ್ತಿದ್ದಂತೆ ʻಮುಂಜ್ಯಾʼ ಅನಾವರಣ ಆಗಿತ್ತು.

VISTARANEWS.COM


on

Munjya Movie Box Office Collection Rs 100 Cr
Koo

ಬೆಂಗಳೂರು: ಅಭಯ್ ವರ್ಮಾ ಮತ್ತು ಶಾರ್ವರಿ ಅಭಿನಯದ ಹಾರರ್-ಕಾಮಿಡಿ ಚಲನಚಿತ್ರ ʻಮುಂಜ್ಯʼ ಜೂನ್ 7 ರಂದು ತೆರೆ ಕಂಡಿತ್ತು. ಸ್ಟಾರ್​ ಕಲಾವಿದರೇ ಇಲ್ಲದ ಸಿನಿಮಾವೊಂದು ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಗಮನ ಸೆಳೆದಿದೆ. ಪ್ರಭಾಸ್​ ನಟನೆಯ ‘ಕಲ್ಕಿ 2898 ಎಡಿ’ (Munjya Movie) ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಹಿಂದಿ ಪ್ರೇಕ್ಷಕರ ವಲಯದಲ್ಲಿ ಕೂಡ ಈ ಸಿನಿಮಾ ಸದ್ದು ಮಾಡುತ್ತಿವೆ. ಬಹುತೇಕ ಚಿತ್ರಮಂದಿಗಳನ್ನು ‘ಕಲ್ಕಿ 2898 ಎಡಿ’ ಆವರಿಸಿಕೊಂಡಿದೆ. ಹಾಗಾಗಿ ಈ ಸಿನಿಮಾ ಬಿಡುಗಡೆ ಆದ ನಂತರ ‘ಮುಂಜ್ಯ’ ಕಲೆಕ್ಷನ್​ ಕುಸಿದಿದೆ.

ಇದು ಭಾರತದ ಮೊದಲ CGI ನಾಯಕನನ್ನು ಒಳಗೊಂಡಿರುವ ಸಿನಿಮಾ ಎಂದು. (first computer generated actor) . ಸಿನಿಮಾ ಬಿಡುಗಡೆ ಮುಂಚೆ ಟೀಸರ್‌ ಬಿಡುಗಡೆಯಾಗಿದ್ದರೂ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಯಾವಾಗ ಥಿಯೇಟರ್‌ನಲ್ಲಿ ರಿಲೀಸ್‌ ಆಯ್ತೋ ಸಿನಿಮಾ ಒಳ್ಳೆಯ ಕಲೆಕ್ಷನ್‌ ಮಾಡಿದೆ.

`ಮುಂಜ್ಯಾʼ ಟೀಸರ್‌ ಒಂದು ನಿಮಿಷ ಇದ್ದು, CGI ಪಾತ್ರವಾದ ಮುಂಜ್ಯನನ್ನು ಪರಿಚಯಿಸಲಾಗಿತ್ತು. ಟೀಸರ್‌ನಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ 2010ರ ಬ್ಲಾಕ್‌ಬಸ್ಟರ್ ಚಿತ್ರ ದಬಾಂಗ್‌ನ ಜನಪ್ರಿಯ ಗೀತೆ ಮುನ್ನಿ ಬದ್ನಾಮ್ ಹುಯಿ ಹಾಡು ಟಿವಿಯಲ್ಲಿ ಪ್ಲೇ ಆಗುತ್ತಿದ್ದಂತೆ ʻಮುಂಜ್ಯಾʼ ಅನಾವರಣ ಆಗಿತ್ತು. ʻಮುಂಜ್ಯಾʼ ನಗರಕ್ಕೆ ಪ್ರವೇಶಿಸುವ , ಹಾಗೇ ಟಿವಿ ನೋಡುತ್ತಿದ್ದವ ಏಕಾಏಕಿ ಟಿವಿ ಆಫ್‌ ಮಾಡುವಾಗ ಕೋಪಗೊಂಡ ʻಮುಂಜ್ಯಾʼ ಕೋಣೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸುವ ಸನ್ನಿವೇಶ ಟೀಸರ್‌ನಲ್ಲಿತ್ತು. ಮೇ 24 ರಂದು ಚಿತ್ರತಂಡ ಟ್ರೈಲರ್‌ ಅನಾವರಣಗೊಳಿಸಲಿದೆ. ಟೀಸರ್‌ ನೋಡಿದರೆ ಹಾರರ್‌ ಜತೆ ಕಾಮಿಡಿ ಕೂಡ ಇತ್ತು.

ಇದನ್ನೂ ಓದಿ: Highest Collection Movie: ಅತೀ ಹೆಚ್ಚು ಗಳಿಕೆ ದಾಖಲಿಸಿದ ಭಾರತದ ಟಾಪ್‌ 10 ಸಿನಿಮಾಗಳಿವು

ಮುಂಜ್ಯ’ ಸಿನಿಮಾಗೆ ಮೊದಲ ದಿನ 4.21 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. ಎರಡನೇ ದಿನ 7.40 ಕೋಟಿ ರೂಪಾಯಿ ಗಳಿಕೆ ಆಯಿತು. ಮೂರನೇ ದಿನ 8.43 ಕೋಟಿ ರೂಪಾಯಿ ಹರಿದುಬಂತು. ನಂತರ ಪ್ರತಿ ದಿನ 3 ಅಥವಾ 4 ಕೋಟಿ ರೂಪಾಯಿ ಗಳಿಸುತ್ತಾ ಈ ಸಿನಿಮಾ ಮುನ್ನುಗ್ಗಿತು. ನಂತರದ ವಾರಾಂತ್ಯದಲ್ಲಿ ಕಲೆಕ್ಷನ್​ ಹೆಚ್ಚಾಯಿತು. 25 ದಿನಗಳ ಯಶಸ್ವಿ ಪ್ರದರ್ಶನ ಕಂಡು ಈ ಸಿನಿಮಾದ ಒಟ್ಟು ಕಲೆಕ್ಷನ್​ 100 ಕೋಟಿ ರೂಪಾಯಿ ಮೀರಿತ್ತು.

ಮುಂಜ್ಯ ಚಿತ್ರವನ್ನು ಆದಿತ್ಯ ಸರ್ಪೋತದಾರ್ ನಿರ್ದೇಶಿಸಿದ್ದಾರೆ ಮತ್ತು ಶಾರ್ವರಿ, ಅಭಯ್ ವರ್ಮಾ, ಮೋನಾ ಸಿಂಗ್ ಮತ್ತು ಬಾಹುಬಲಿ ಚಲನಚಿತ್ರ ಖ್ಯಾತಿಯ ಸತ್ಯರಾಜ್ ಅವರ ಸಮಗ್ರ ತಾರಾಗಣವನ್ನು ಒಳಗೊಂಡಿದೆ. ನಿರೇನ್ ಭಟ್ ಅವರ ಚಿತ್ರಕಥೆ, ಯೋಗೇಶ್ ಚಂಡೇಕರ್ ಸಂಭಾಷಣೆ ಇದೆ. ಸಚಿನ್-ಜಿಗರ್ ಸಂಗೀತ ಸಂಯೋಜಿಸಿದ್ದಾರೆ. ಅಮಿತಾಭ್‌ ಭಟ್ಟಾಚಾರ್ಯ ಸಾಹಿತ್ಯ ಇದೆ. ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣದ ಮುಂಜ್ಯವನ್ನು ದಿನೇಶ್ ವಿಜನ್ ಮತ್ತು ಅಮರ್ ಕೌಶಿಕ್ ನಿರ್ಮಿಸಿದ್ದಾರೆ.  ಇದೀಗ ಕಲ್ಕಿ ಬಿಡುಗಡೆಯಾದ ಕಾರಣ ಸಿನಿಮಾ ಕಲೆಕ್ಷನ್‌ನಲ್ಲಿ ಭಾರಿ ಹೊಡೆತ ಬಿದ್ದಿದಂತಾಗಿದೆ.

Continue Reading

ಸಿನಿಮಾ

Highest Collection Movie: ಅತೀ ಹೆಚ್ಚು ಗಳಿಕೆ ದಾಖಲಿಸಿದ ಭಾರತದ ಟಾಪ್‌ 10 ಸಿನಿಮಾಗಳಿವು

Highest Collection Movie: ಭಾರತೀಯ ಸಿನಿಮಾ (Indian Movies) ರಂಗದಲ್ಲಿ ಕೆಲವು ಚಿತ್ರಗಳು ಗಳಿಕೆಯಲ್ಲಿ ವಿಶ್ವ ದಾಖಲೆಯನ್ನೇ ಮಾಡಿದೆ. ಅದರಲ್ಲಿ ಅತಿ ಹೆಚ್ಚು ಗಳಿಕೆಯನ್ನು ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಬರೆದಿರುವ ಹತ್ತು ಸಿನಿಮಾಗಳನ್ನು ಇಂದಿಗೂ ಹಲವು ಮಂದಿ ಪದೇ ಪದೇ ನೋಡುತ್ತಿರುತ್ತಾರೆ. ಆ ಚಿತ್ರಗಳು ಯಾವುದು, ಗಳಿಕೆ ಎಷ್ಟಾಗಿತ್ತು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Highest Collection Movie
Koo

ಭಾರತೀಯ ಸಿನಿಮಾ (Indian Movies) ರಂಗದಲ್ಲಿ ಬಾಲಿವುಡ್ (Highest Collection Movie) ದಾಖಲೆಗಳು ನಿರಂತರವಾಗಿವೆ. ಹಲವಾರು ಚಿತ್ರಗಳು ಸಾರ್ವಕಾಲಿಕವಾಗಿ ಅತಿ ಹೆಚ್ಚು ಗಳಿಕೆಯನ್ನು ಪಡೆದಿವೆ. ದಂಗಲ್‌ (Dangal), ಜವಾನ್ (Jawan), ಪಠಾಣ್ (Pathaan), ಬಜರಂಗಿ ಭಾಯಿಜಾನ್ (Bajrangi Bhaijaan), ಸೀಕ್ರೆಟ್ ಸೂಪರ್‌ಸ್ಟಾರ್ (Secret Superstar), ಪಿಕೆ (PK) ಈ ಚಿತ್ರಗಳು ತೆರೆಗೆ ಬಂದು ಹತ್ತು ವರ್ಷಗಳೇ ಕಳೆದರೂ ಇಂದಿಗೂ ಬಹುತೇಕ ಮಂದಿಯ ಮೆಚ್ಚಿನ ಚಿತ್ರವಾಗಿ ಉಳಿದಿದೆ.

ಭಾರತೀಯ ಸಿನಿಮಾ ರಂಗದಲ್ಲಿ ಕೆಲವು ಚಿತ್ರಗಳು ಗಳಿಕೆಯಲ್ಲಿ ವಿಶ್ವ ದಾಖಲೆಯನ್ನೇ ಮಾಡಿದೆ. ಅದರಲ್ಲಿ ಅತಿ ಹೆಚ್ಚು ಗಳಿಕೆಯನ್ನು ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ (box office) ದಾಖಲೆ ಬರೆದಿರುವ ಹತ್ತು ಸಿನಿಮಾಗಳನ್ನು ಇಂದಿಗೂ ಹಲವು ಮಂದಿ ಪದೇ ಪದೇ ನೋಡುತ್ತಿರುತ್ತಾರೆ. ಆ ಚಿತ್ರಗಳು ಯಾವುದು, ಗಳಿಕೆ ಎಷ್ಟಾಗಿತ್ತು ಎನ್ನುವ ಮಾಹಿತಿ ಇಲ್ಲಿದೆ.

1. ದಂಗಲ್

ಕುಸ್ತಿ ಪಟುಗಳಾದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಅವರ ಜೀವನಾಧಾರಿತ ಚಿತ್ರದಲ್ಲಿ ಮಹಾವೀರ್ ಸಿಂಗ್ ಪಾತ್ರಧಾರಿಯಾಗಿ ಆಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. 2016ರಲ್ಲಿ ತೆರೆಗೆ ಬಂದ ಈ ಚಿತ್ರ 30 ಕೋಟಿ ರೂ. ಬಜೆಟ್‌ನದ್ದಾಗಿದ್ದು, ವಿಶ್ವಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ 2,024 ಕೋಟಿ ರೂ. ಗಳಿಸಿ ದಾಖಲೆ ಬರೆದು ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಆದಾಯಗಳಿಸಿದ ಸಿನೆಮಾ ಎಂಬ ಖ್ಯಾತಿಯನ್ನು ಪಡೆದಿದೆ. ಅದರಲ್ಲೂ ಚೀನಾದಲ್ಲಿ ಈ ಸಿನಿಮಾ ಅತಿ ಹೆಚ್ಚು ಆದಾಯವನ್ನು ಗಳಿಸಿದ ಅನ್ಯ ಭಾಷೆಯ ಮೂರನೇ ಸಿನಿಮಾ ಇದು ಎನ್ನುವ ಖ್ಯಾತಿಯೂ ʼದಂಗಲ್ʼ ಚಿತ್ರದ್ದಾಗಿದೆ.


2. ಬಾಹುಬಲಿ 2

ಪ್ರಭಾಸ್ ಅಭಿನಯದ ‘ಬಾಹುಬಲಿ 2’ ಚಿತ್ರ 2012ರಲ್ಲಿ ತೆರೆಗೆ ಬಂದಿದ್ದು, ಎಸ್.ಎಸ್. ರಾಜಮೌಳಿ ಮತ್ತು ವಿ. ವಿಜಯೇಂದ್ರ ಪ್ರಸಾದ್ ಬರೆದು ನಿರ್ದೇಶಿಸಿದ್ದಾರೆ. 250 ಕೋಟಿ ರೂ. ಬಜೆಟ್ ನ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ 1,810.60 ಕೋಟಿ ರೂ. ಆದಾಯ ಗಳಿಸಿ ದಾಖಲೆ ಬರೆದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಗಳಿಸಿರುವ ಚಿತ್ರ ಎಂಬ ಖ್ಯಾತಿ ಈ ಸಿನೆಮಾದ್ದಾಗಿದೆ. ಚಿತ್ರ ಬಿಡುಗಡೆಯಾದ ಮೊದಲ ಆರು ದಿನದಲ್ಲಿ 789 ಕೋಟಿ ರೂ. ಗಳಿಸಿರುವುದು ಮಾತ್ರವಲ್ಲ 10 ದಿನದಲ್ಲಿ 1 ಸಾವಿರ ಕೋಟಿ ರೂ. ಆದಾಯ ಪಡೆದ ಸಿನೆಮಾ ಇದಾಗಿದೆ.


3. ಆರ್ ಆರ್ ಆರ್

ರಾಮ್ ಚರಣ್ ಮತ್ತು ಜ್ಯೂ. ಎನ್ ಟಿ ಆರ್ ಅಭಿನಯದ ಆರ್ ಆರ್ ಆರ್ ಚಿತ್ರ 2022ರಲ್ಲಿ ತೆರೆಗೆ ಬಂದಿದ್ದು, 550 ಕೋಟಿ ರೂ. ಬಜೆಟ್ ನದ್ದಾಗಿದೆ. ಅತ್ಯಂತ ದುಬಾರಿ ಖರ್ಚು ಮಾಡಿ ನಿರ್ಮಿಸಿರುವ ಈ ಚಿತ್ರ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 405.9 ಕೋಟಿ ರೂ. ಗಳಿಸಿದೆ. ವಿಶ್ವದಾದ್ಯಂತ 1,387.26 ಕೋಟಿ ರೂ. ಆದಾಯ ಗಳಿಸಿದೆ. ಭಾರತದಲ್ಲಿ ಮೂರನೇ ಅತಿ ಹೆಚ್ಚು ಆದಾಯ ಗಳಿಸಿದ ಚಿತ್ರವಾಗಿ ಮಾತ್ರವಲ್ಲ ತೆಲುಗಿನಲ್ಲಿ ಎರಡನೇ ಅತಿ ಹೆಚ್ಚು ಆದಾಯಗಳಿಸಿರುವ ಚಿತ್ರವಾಗಿ ಗುರುತಿಸಿಕೊಂಡಿದೆ.


4. ಕೆಜಿಎಫ್ ಚಾಪ್ಟರ್ 2

2022ರಲ್ಲಿ ತೆರೆಗೆ ಬಂದ ಯಶ್ ಅಭಿನಯದ ಕನ್ನಡ ಚಿತ್ರ ಕೆಜಿಎಫ್ ಚಾಪ್ಟರ್ 2 ಅನ್ನು ಪ್ರಶಾಂತ್ ನೀಲ್ ಅವರು ನಿರ್ದೇಶಿಸಿದ್ದಾರೆ. ವಿಜಯ ಕಿರಗಂದೂರ್ ನಿರ್ಮಿಸಿದ್ದಾರೆ.

100 ಕೋಟಿ ಬಜೆಟ್‌ನ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ 1,250 ಕೋಟಿ ರೂ. ಆದಾಯ ಗಳಿಸಿದೆ. ವಿಶ್ವದಲ್ಲಿ (ಭಾರತೀಯ ಚಿತ್ರ) ನಾಲ್ಕನೇ ಹಾಗೂ ಭಾರತದಲ್ಲಿ ಎರಡನೇ ಅತಿ ಹೆಚ್ಚು ಆದಾಯ ಗಳಿಸಿರುವ ಚಿತ್ರವಾಗಿ ಇದು ಗುರುತಿಸಿಕೊಂಡಿದೆ.

5. ಜವಾನ್

ಶಾರುಖ್ ಖಾನ್ ಅಭಿನಯದ ‘ಜವಾನ್’ ಚಿತ್ರ 2023ರಲ್ಲಿ ತೆರೆಗೆ ಬಂದಿದ್ದು, 1,148.32 ಕೋಟಿ ರೂ. ಆದಾಯ ಗಳಿಸಿದೆ. 300 ಕೋಟಿ ರೂ. ಬಜೆಟ್‌ನ ಈ ಚಿತ್ರದಲ್ಲಿ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರ ಕೂಡ ಕಾಣಿಸಿಕೊಂಡಿದ್ದಾರೆ.

ಹಿಂದಿ ಭಾಷೆಯಲ್ಲಿ ಎರಡನೇ ಅತಿ ಹೆಚ್ಚು ಆದಾಯ ಗಳಿಸಿರುವ ಚಿತ್ರವಾಗಿ ಇದು ಗುರುತಿಸಿಕೊಂಡಿದ್ದು, ಭಾರತೀಯ ಸಿನಿಮಾದಲ್ಲಿ ಐದನೇ ಸ್ಥಾನ ಪಡೆದಿದೆ.


6. ಪಠಾಣ್

ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿರುವ ಚಿತ್ರ ʼಪಠಾಣ್ʼ ವಿಶ್ವದಾದ್ಯಂತ 1,050.30 ಕೋಟಿ ರೂ. ಆದಾಯ ಗಳಿಸಿದೆ. ಶಾರುಖ್ ಖಾನ್ ಅಭಿನಯದ ಈ ಚಿತ್ರ ಗಳಿಕೆಯಲ್ಲಿ ಹಿಂದಿ ಭಾಷೆಯಲ್ಲಿ ಮೂರನೇ ಸ್ಥಾನ ಹಾಗೂ ಭಾರತೀಯ ಸಿನಿಮಾ ರಂಗದಲ್ಲಿ ಆರನೇ ಸ್ಥಾನವನ್ನು ಗಳಿಸಿದೆ. 240 ಕೋಟಿ ರೂ. ಬಜೆಟ್ ನ ಚಿತ್ರ ಇದಾಗಿದೆ.


7. ಬಜರಂಗಿ ಭಾಯಿಜಾನ್

ಭಾರತದಾದ್ಯಂತ ಬಾಯಿಜಾನ್ ಎಂದೇ ಕರೆಯಲ್ಪಡುವ ಸಲ್ಮಾನ್ ಖಾನ್, ಕರೀನಾ ಕಪೂರ್ ಅಭಿನಯದ ಈ ಚಿತ್ರ 2015ರಲ್ಲಿ ತೆರೆಗೆ ಬಂದಿದ್ದು, ಕಬೀರ್ ಖಾನ್ ನಿರ್ದೇಶಿಸಿದ್ದಾರೆ. ವಿಶ್ವದಾದ್ಯಂತ 969 ಕೋಟಿ ರೂ. ಆದಾಯವನ್ನು ಈ ಚಿತ್ರ ಗಳಿಸಿದ್ದು, ಅತಿ ಹೆಚ್ಚು ಆದಾಯ ಗಳಿಸಿದ ಭಾರತದ 7ನೇ ಚಿತ್ರ ಹಾಗೂ ಹಿಂದಿ ಭಾಷೆಯ 4ನೇ ಚಿತ್ರವಾಗಿ ಗುರುತಿಸಿಕೊಂಡಿದೆ.


8. ಅನಿಮಲ್

ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ದಿಮ್ರಿ ಅಭಿನಯದ ಈ ಚಿತ್ರ ವಿಶ್ವದಾದ್ಯಂತ 917.36 ಕೋಟಿ ರೂ. ಆದಾಯ ಗಳಿಸಿದೆ. ಈ ಚಿತ್ರವನ್ನು 200 ಕೋಟಿ ರೂ. ಬಜೆಟ್ ನಲ್ಲಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ.


9. ಸೀಕ್ರೆಟ್ ಸೂಪರ್ ಸ್ಟಾರ್

2017ರಲ್ಲಿ ತೆರೆಗೆ ಬಂದ ‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರವನ್ನು ಅದ್ವತ್ ಚಂದನ್ ನಿರ್ದೇಶಿಸಿದ್ದು, ಆಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಶ್ವದಾದ್ಯಂತ 905.7 ಕೋಟಿ ರೂ. ಆದಾಯ ಗಳಿಸಿರುವ ಈ ಚಿತ್ರವನ್ನು ಅತೀ ಕಡಿಮೆ ಬಜೆಟ್ 15 ಕೋಟಿ ರೂ.ನಲ್ಲಿ ನಿರ್ಮಿಸಲಾಗಿದೆ.


ಇದನ್ನೂ ಓದಿ: Kalki 2898 AD: ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ʼಕಲ್ಕಿʼ; ಬಿಡುಗಡೆಯಾದ 5ನೇ ದಿನ ಗಳಿಸಿದ್ದು ಬರೋಬ್ಬರಿ 84 ಕೋಟಿ ರೂ.

10. ಪಿಕೆ

ಆಮೀರ್ ಖಾನ್, ಅನುಷ್ಕಾ ಶರ್ಮಾ, ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಈ ಚಿತ್ರ 2014ರಲ್ಲಿ ತೆರೆಗೆ ಬಂದಿತ್ತು. ರಾಜಕುಮಾರ್ ಹಿರಾನಿ ನಿರ್ದೇಶಿರುವ ಈ ಚಿತ್ರವನ್ನು 122 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಿಸಲಾಗಿದ್ದು, ವಿಶ್ವದಾದ್ಯಂತ 769.89 ಕೋಟಿ ರೂ. ಆದಾಯವನ್ನು ಗಳಿಸಿದೆ.

Continue Reading

Latest

Sha Rukh Khan: ಸಾಲದ ಇಎಂಐ ಕಟ್ಟಲಾಗದೆ ಕಾರನ್ನು ಕಳೆದುಕೊಂಡಿದ್ದ ಶಾರುಖ್ ಖಾನ್!

Sha Rukh Khan: ಕೋಟಿ ಕೋಟಿ ಸಂಭಾವನೆ ಪಡೆಯುವ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಕೂಡ ಒಂದು ಕಾಲದಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲಿದ್ದರಂತೆ. ಕಾರಿನ ಇಎಂಐ ಪಾವತಿಸಲು ಸಾಧ್ಯವಾಗದ ಕಾರಣ ಶಾರುಖ್ ಖಾನ್ ಅವರ ಕಾರನ್ನು ಬ್ಯಾಂಕ್‌ನವರು ತೆಗೆದುಕೊಂಡು ಹೋಗಿದ್ದರು ಎಂದು ಶಾರುಖ್ ಖಾನ್ ಬಗ್ಗೆ ಅವರ ಸ್ನೇಹಿತೆ ನಟಿ ಜೂಹಿ ಚಾವ್ಲಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಆಗ ಶಾರುಕ್ ಖಾನ್ ನಟಿ ಜೂಹಿ ಚಾವ್ಲಾ ಹಾಗೂ ನಟ ಜಾಕಿಶ್ರಾಫ್ ಅವರ ಕಾರಿನಲ್ಲಿ ಓಡಾಡುತ್ತಿದ್ದರಂತೆ.

VISTARANEWS.COM


on

Sha Rukh Khan
Koo

ಮುಂಬೈ : ಹಣದ ಸಮಸ್ಯೆ ಎನ್ನುವುದು ಬಡವರಿಗೆ, ಮಧ್ಯಮವರ್ಗದವರಿಗೆ ಮಾತ್ರವಲ್ಲ, ಕೆಲವೊಮ್ಮೆ ಶ್ರೀಮಂತರು, ಸ್ಟಾರ್ ನಟರೂ ಕೂಡ ಆರ್ಥಿಕ ಸಮಸ್ಯೆಯಿಂದ ಬಳಲುತ್ತಾರೆ. ಶಾರುಖ್ ಖಾನ್ (Sha Rukh Khan) ಅವರು ಬಾಲಿವುಡ್ ಸ್ಟಾರ್ ನಟರಲ್ಲಿ ಒಬ್ಬರು. ಕೋಟಿ ಕೋಟಿ ಸಂಭಾವನೆ ಪಡೆಯುವ ಈ ಸ್ಟಾರ್ ನಟ ಕೂಡ ಆರ್ಥಿಕ ಸಮಸ್ಯೆಯಿಂದ ಒಂದು ಕಾಲದಲ್ಲಿ ಬಳಲಿದ್ದರು ಎಂದು ಅವರ ಸ್ನೇಹಿತೆ ನಟಿ ಜೂಹಿ ಚಾವ್ಲಾ ಹೇಳಿಕೆ ನೀಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Sha Rukh Khan

ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ 90ರ ದಶಕದಲ್ಲಿ ಬಾಲಿವುಡ್‌ನ ಹಲವಾರು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಆವಾಗಿನಿಂದ ಇವರಿಬ್ಬರು ಆಪ್ತ ಸ್ನೇಹಿತರಾಗಿದ್ದರು. ಇಬ್ಬರೂ ಸೇರಿ ಡ್ರೀಮ್ಸ್‌ ಅನ್‌ಲಿಮಿಟೆಡ್‌ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನೂ ಸ್ಥಾಪಿಸಿದ್ದರು.

Sha Rukh Khan

ಅಲ್ಲದೇ ಇವರಿಬ್ಬರು ಐಪಿಎಲ್ ತಂಡದ ಮಾಲೀಕರಾಗಿ ಸಹ ಜೊತೆಯಾಗಿದ್ದರು. ಇತ್ತೀಚೆಗೆ, ಕಾರ್ಯಕ್ರಮವೊಂದರಲ್ಲಿ, ನಟಿ ಜೂಹಿ ಚಾವ್ಲಾ ಅವರು ಮಾತನಾಡಿ ಇಎಂಐ ಪಾವತಿಸಲು ಸಾಧ್ಯವಾಗದ ಕಾರಣ ಶಾರುಖ್ ಖಾನ್ ಅವರ ಕಾರನ್ನು ಬ್ಯಾಂಕ್‌ನವರು ತೆಗೆದುಕೊಂಡು ಹೋಗಿದ್ದರು ಎಂಬ ಸಂಗತಿಯನ್ನು ಶಾರುಖ್ ಖಾನ್ ವೃತ್ತಿ ಜೀವನದ ಆರಂಭದ ದಿನಗಳನ್ನು ಸ್ಮರಿಸಿಕೊಂಡು ಹೇಳಿದ್ದಾರೆ.

Sha Rukh Khan

ಶಾರುಖ್ ಖಾನ್ ಅವರ ಬಳಿ ಕಪ್ಪು ಜಿಪ್ಸಿ ಕಾರ್ ಇತ್ತು. ಶಾರುಖ್ ಖಾನ್ ಅವರು ಹಗಲಿರುಳು ತಮ್ಮ ಸಿನಿಮಾ ಶೂಟಿಂಗ್‌ಗಾಗಿ ಆ ಕಾರಿನಲ್ಲೇ ಹೋಗುತ್ತಿದ್ದರು. ಆದರೆ ಕೆಲವು ಕಾರಣಗಳಿಂದಾಗಿ, ಅವರು ತಮ್ಮ ಕಾರಿಗೆ ಇಎಂಐ ಪಾವತಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಕಾರನ್ನು ತೆಗೆದುಕೊಂಡು ಹೋದರು ಎಂದು ಹೇಳಿದ್ದಾರೆ. ಅಲ್ಲದೇ ಅವರಿಗೆ ಮುಂಬೈನಲ್ಲಿ ಮನೆ ಇರಲಿಲ್ಲ. ಹಾಗೇ ಅವರಿಗೆ ಅಡುಗೆ ಮಾಡಲು ಯಾರೂ ಇರಲಿಲ್ಲ. ಅವರ ಬಗ್ಗೆ ಚಿಂತಿಸುತ್ತಿದ್ದೆ ಎಂದು ನಟಿ ಹಿಂದೆ ನಡೆದ ಘಟನೆಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಆದರೆ ಈಗ ಅವರು ದೊಡ್ಡ ನಟ ಆಗಿದ್ದಾರೆ ಎಂದು ಅವರು ಖುಷಿ ಪಟ್ಟಿದ್ದಾರೆ.

2015ರಲ್ಲಿ ಇದೇ ವಿಚಾರದ ಬಗ್ಗೆ ನಟ ಶಾರುಖ್ ಖಾನ್‌ವರು ಕೂಡ ಟಿವಿ ಚಾನೆಲ್‌ವೊಂದರಲ್ಲಿ ಹೇಳಿದ್ದರು. ತಾನು ಖರೀದಿಸಿದ ಮೊದಲ ಕಾರಿಗೆ ಇಎಂಐ ಕಟ್ಟಲು ಆಗದ ಕಾರಣ ಬ್ಯಾಂಕಿನವರು ತೆಗೆದುಕೊಂಡು ಹೋಗಿದ್ದರು. ಆಗ ನಟಿ ಜೂಹಿ ಚಾವ್ಲಾ ತಮ್ಮ ಕಾರನ್ನು ನೀಡಿರುವುದಾಗಿ ಹೇಳಿದ್ದರು. ಮತ್ತು ಕೆಲವೊಮ್ಮೆ ನಟ ಜಾಕಿಶ್ರಾಫ್ ಅವರ ಕಾರಿನಲ್ಲಿ ಓಡಾಡುತ್ತಿದ್ದೆ ಎಂದು ತಿಳಿಸಿದ್ದರು.

Sha Rukh Khan

ಇದನ್ನೂ ಓದಿ: ದಳಪತಿ ವಿಜಯ್‌ಗೆ ಭುಜದ ಮೇಲಿನ ಕೈ ತೆಗೆಯಲು ಹೇಳಿದ ಹುಡುಗಿ; ವಿಡಿಯೊ ವೈರಲ್

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಹಿರಿಯ ನಟ ಗೋವಿಂದ್ ನಾಮದೇವ್ ಅವರು 2000ರಲ್ಲಿ ಬಿಡುಗಡೆಯಾದ “ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ” ಚಿತ್ರದ ಚಿತ್ರೀಕರಣ ಸಮಯದಲ್ಲಿ ಶಾರುಖ್ ಖಾನ್ ಅವರ ಜೊತೆ ಕಳೆದ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ. ಆ ವೇಳೆ ಅವರು ಕೆಲಸದ ಒತ್ತಡದಿಂದ ಅವರು ಧೂಮಪಾನ ಮಾಡುತ್ತಿದ್ದರು ಎಂದು ಶಾಕಿಂಗ್ ಹೇಳಿಕೆ ನೀಡಿದ್ದರು.

Continue Reading

ಬಾಲಿವುಡ್

Munawar Faruqui: ಮೊದಲ ಬಾರಿಗೆ ಪತ್ನಿ ಜತೆ ಇರುವ ಫೋಟೊ ಹಂಚಿಕೊಂಡ  ʻಬಿಗ್ ಬಾಸ್ 17ʼರ ವಿಜೇತ  ಮುನಾವರ್ ಫಾರೂಕಿ!

Munawar Faruqui: ಕೊನೆಯ ಚಿತ್ರವು ಮುನಾವರ್ ಮತ್ತು ಮೆಹಜಬೀನ್ ಕೋಟ್ವಾಲಾ ಸಂಜೆ ಪರಸ್ಪರ ಕೈ ಹಿಡಿದುಕೊಂಡು ನಿಂತಿರುವುದು ಇದೆ. ಫೋಟೋದಲ್ಲಿ, ಮುನಾವರ್ ಕಪ್ಪು ಟೀ ಶರ್ಟ್, ಆಲಿವ್ ಹಸಿರು ಪ್ಯಾಂಟ್, ಶೂ ಮತ್ತು ಕ್ಯಾಪ್ ಧರಿಸಿದ್ದರು. ಮುದ್ರಿತ ಟಿ-ಶರ್ಟ್, ಡೆನಿಮ್ಸ್ ಮತ್ತು ಸ್ನೀಕರ್ಸ್‌ನಲ್ಲಿ ಮೆಹಜಬೀನ್ ಕಾಣಿಸಿಕೊಂಡಿದ್ದಾರೆ. ಮುನಾವರ್ ಅವರ ಪತ್ನಿಗೂ ಪೋಟೊವನ್ನು ಟ್ಯಾಗ್ ಮಾಡಿದ್ದಾರೆ.

VISTARANEWS.COM


on

Munawar Faruqui shares first pic with new wife
Koo

ಬೆಂಗಳೂರು:  ಬಿಗ್ ಬಾಸ್ 17 ವಿನ್ನರ್ ಮತ್ತು ಸ್ಟ್ಯಾಂಡ್-ಅಪ್ ಕಮಿಡಿಯನ್ಮು ಮುನಾವರ್ ಫಾರೂಕಿ (Munawar Faruqui) ಎರಡನೇ ಬಾರಿಗೆ ವಿವಾಹವಾದರು ಎಂದು ವರದಿಯಾಗಿತ್ತು. ಮೇಕಪ್ ಕಲಾವಿದೆ ಮೆಹಜಬೀನ್ ಕೋಟ್ವಾಲಾ ಅವರೊಂದಿಗೆ ಮದುವೆಯಾಗಿದ್ದರು. ಇದೀಗ ಇದೇ ಮೊದಲ ಬಾರಿಗೆ ಪತ್ನಿ ಜತೆ ಇರುವ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ. ಒಂದು ತಿಂಗಳ ವಿವಾಹ ವಾರ್ಷಿಕೋತ್ಸವವನ್ನು ದುಬೈನಲ್ಲಿ ಸೆಲೆಬ್ರೆಟ್‌ ಮಾಡಿರುವ ಫೋಟೊವನ್ನು ಶೇರ್‌ ಮಾಡಿಕೊಂಡಿದ್ದಾರೆ.

ಮೊದಲ ಫೋಟೊದಲ್ಲಿ , ಮುನಾವರ್ ಅವರು ವಿಶ್ರಾಂತಿ ತೆಗೆದುಕೊಳ್ಳುವ, ಶಾಪಿಂಗ್ ಮುಗಿಸಿ ದುಬೈನ ಸ್ಟ್ರೀಟ್‌ನಲ್ಲಿ ಸುತ್ತಾಡುವ. ಸಂಜೆಯ ವಿಹಾರಕ್ಕೆ ಹೋವ, ಉಪಹಾರದ ಫೋಟೋ ಹಾಗೇ ತಮ್ಮ ಶೋ ಒಂದರ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.

ಕೊನೆಯ ಚಿತ್ರವು ಮುನಾವರ್ ಮತ್ತು ಮೆಹಜಬೀನ್ ಕೋಟ್ವಾಲಾ ಸಂಜೆ ಪರಸ್ಪರ ಕೈ ಹಿಡಿದುಕೊಂಡು ನಿಂತಿರುವುದು ಇದೆ. ಫೋಟೋದಲ್ಲಿ, ಮುನಾವರ್ ಕಪ್ಪು ಟೀ ಶರ್ಟ್, ಆಲಿವ್ ಹಸಿರು ಪ್ಯಾಂಟ್, ಶೂ ಮತ್ತು ಕ್ಯಾಪ್ ಧರಿಸಿದ್ದರು. ಮುದ್ರಿತ ಟಿ-ಶರ್ಟ್, ಡೆನಿಮ್ಸ್ ಮತ್ತು ಸ್ನೀಕರ್ಸ್‌ನಲ್ಲಿ ಮೆಹಜಬೀನ್ ಕಾಣಿಸಿಕೊಂಡಿದ್ದಾರೆ. ಮುನಾವರ್ ಅವರ ಪತ್ನಿಗೂ ಪೋಟೊವನ್ನು ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ: Samarjit Lankesh: ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಅಭಿನಯದ `ಗೌರಿ’ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

ಇದೀಗ ಈ ಫೋಟೊಗೆ ಮುನಾವರ್‌ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻಕೊನೆಯ ಫೋಟೋ ನಮ್ಮ ಹೃದಯ ಕದ್ದಿದೆʼʼಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻನಿಮ್ಮಿಬ್ಬರ ಮುಂದಿನ ಜೀವನಕ್ಕಾಗಿ ದೇವರು ಆಶೀರ್ವದಿಸಲಿʼʼಎಂದು ಕಮೆಂಟ್‌ ಮಾಡಿದ್ದಾರೆ.

ಮೇಕಪ್ ಕಲಾವಿದೆ ಮೆಹಜಬೀನ್ ಕೋಟ್ವಾಲಾ

ಮೆಹಜಬೀನ್ ಮೇಕಪ್ ಕಲಾವಿದೆ. ಆರ್ ಮಾಧವನ್, ವರುಣ್ ಧವನ್, ಯುಜ್ವೇಂದ್ರ ಚಾಹಲ್ ನಂತಹ ನಟರುಗಳ ಪತ್ನಿಯರಿಗೆ, ನೃತ್ಯಗಾರ್ತಿ ಧನಶ್ರೀ ವರ್ಮಾ ಅವರಂತಹ ಅನೇಕ ಗಣ್ಯ ವ್ಯಕ್ಯಿಗಳಿಗೆ ಮೇಕಪ್‌ ಮಾಡಿದ್ದಾರೆ. ಸಾಕಷು ಫ್ಯಾನ್ಸ್‌ ಫಾಲೋವರ್ಸ್‌ ಕೂಡ ಹೊಂದಿದ್ದಾರೆ. ವರದಿಯ ಪ್ರಕಾರ, ಮುನಾವರ್‌ನಂತೆ, ಮೆಹಜಬೀನ್ ಅವರಿಗೆ ಕೂಡ ಇದು ಎರಡನೇ ಮದುವೆ. ಮುನಾವರ್ ಅವರಿಗೆ ಈಗಾಗಲೇ ಒಬ್ಬ ಮಗನೂ ಇದ್ದಾನೆ. ಮೊದಲ ಹೆಂಡತಿ ಜತೆ ವಿಚ್ಛೇದನ ಕೂಡ ಪಡೆದುಕೊಂಡಿದ್ದಾರೆ ಮುನಾವರ್‌.

ಇನ್ನು ಮೇಕಪ್ ಕಲಾವಿದೆ ಮೆಹಜಬೀನ್ ಕೋಟ್ವಾಲಾ ಕೂಡ ಸಿಂಗಲ್‌ ಪೇರೆಂಟ್‌ ಎಂದು ವರದಿಯಾಗಿದೆ. ಮೆಹಜಬೀನ್‌ಗೆ ಈಗಾಗಲೇ 10 ವರ್ಷದ ಮಗಳಿದ್ದಾಳೆ ಎಂದು ವರದಿಯಾಗಿದೆ. ಮೆಹಜಬೀನ್ ಕೋಟ್ವಾಲಾ ಆಗಗಾಗ ಮಗಳ ಜತೆ ಇರುವ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಮೆಹಜಬೀನ್ ಕೋಟ್ವಾಲಾ ಕೂಡ ಮೊದಲ ಗಂಡನಿಂದ ಡಿವೋರ್ಸ್‌ ಪಡೆದುಕೊಂಡಿದ್ದಾರೆ.

ಮುನಾವರ್‌ 2017ರಲ್ಲಿ ಜಾಸ್ಮಿನ್‌ ಎಂಬುವರನ್ನು ಮುನಾವರ್‌ ವಿವಾಹವಾಗಿದ್ದರು. ವಿಚ್ಛೇದನ ಬಳಿಕ ಮಗನನ್ನು ಇವರೇ ನೋಡಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಮುನಾವರ್‌ ನಾಜಿಲ್‌ ಸಿತೈಶಿ ಎಂಬುವರ ಜತೆ ಡೇಟಿಂಗ್‌ ನಡೆಸುತ್ತಿದ್ದರು. ಮುನಾವರ್‌ ಅವರು ಸಾಕಷ್ಟು ವಿವಾದಾತ್ಮಕ ಸುದ್ದಿಗಳಿಗೆ ಹೆಸರುವಾಸಿ. ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದರು. ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಗೆ ಬಂದಿದ್ದರು ಮುನಾವರ್.

Continue Reading
Advertisement
Viral Video
Latest3 mins ago

Viral Video: ಮಕ್ಕಳನ್ನು ಬೆಲ್ಟ್‌ನಿಂದ ಕ್ರೂರವಾಗಿ ಥಳಿಸಿದ ತಾಯಿ; ವಿಡಿಯೊ ನೋಡಿ ಜನಾಕ್ರೋಶ

sudha murthy pm narendra modi
ಪ್ರಮುಖ ಸುದ್ದಿ11 mins ago

Sudha Murthy: ʼಹೆಣ್ಣುಮಕ್ಕಳಿಗೆ ಇದೊಂದು ಕೊಟ್ಟುಬಿಡಿ, ಪ್ಲೀಸ್‌ʼ ಎಂದ ಸುಧಾ ಮೂರ್ತಿ; ರಾಜ್ಯಸಭೆಯಲ್ಲಿ ಭಾಷಣಕ್ಕೆ ಮೋದಿ ಮೆಚ್ಚುಗೆ

James Anderson
ಕ್ರೀಡೆ16 mins ago

James Anderson: 41ನೇ ವಯಸ್ಸಿನಲ್ಲಿಯೂ 7 ವಿಕೆಟ್​ ಕಿತ್ತ ಜೇಮ್ಸ್ ಆಂಡರ್ಸನ್

Mangalore News
ಕರ್ನಾಟಕ26 mins ago

Mangalore News: ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ; ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು

Parliament Sessions
ದೇಶ35 mins ago

Parliament Sessions: “ಕಾಂಗ್ರೆಸ್‌ನದ್ದು ರಿಮೋಟ್‌ ಕಂಟ್ರೋಲ್‌ ಸರ್ಕಾರ”-ಸೋನಿಯಾ ವಿರುದ್ಧ ಮೋದಿ ವಾಗ್ಬಾಣ

Physical Abuse
ಕರ್ನಾಟಕ1 hour ago

Physical Abuse: ಬೆಂಗಳೂರಲ್ಲಿ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ

Narendra Modi
ದೇಶ1 hour ago

Narendra Modi: ಮುಂದಿನ 5 ವರ್ಷ ಬಡತನ ವಿರುದ್ಧದ ಹೋರಾಟಕ್ಕೆ ಮೀಸಲು; ರಾಜ್ಯಸಭೆಯಲ್ಲಿ ಮೋದಿ ಭರವಸೆ

Double Ismart Steppa Maar electrifies with mass beats
ಟಾಲಿವುಡ್1 hour ago

Double Ismart: ಪ್ರಚಾರ ಅಖಾಡದಲ್ಲಿ ‘ಡಬಲ್ ಇಸ್ಮಾರ್ಟ್’: ಮೊದಲ ಹಾಡು ರಿಲೀಸ್!

Actor Darshan
ಕರ್ನಾಟಕ2 hours ago

Actor Darshan: ಮಗುವನ್ನು ಕೈದಿ ಮಾಡಿದವರಿಗೆ ಕಾನೂನು ಕಂಟಕ; ಪಾಲಕರಿಗೆ ನೋಟಿಸ್‌!

IPL 2025
ಕ್ರೀಡೆ2 hours ago

IPL 2025: ಮುಂದಿನ ವರ್ಷ ಆರ್​ಸಿಬಿಗೆ ವಿರಾಟ್​ ಕೊಹ್ಲಿ ನಾಯಕ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ20 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌