WPL Player Auction: ಡಬ್ಲ್ಯುಪಿಎಲ್ ಆಟಗಾರ್ತಿಯರ ಹರಾಜು ಮುಂದೂಡಿಕೆ - Vistara News

ಕ್ರಿಕೆಟ್

WPL Player Auction: ಡಬ್ಲ್ಯುಪಿಎಲ್ ಆಟಗಾರ್ತಿಯರ ಹರಾಜು ಮುಂದೂಡಿಕೆ

ವುಮೆನ್ಸ್​ ಪ್ರೀಮಿಯರ್​ ಲೀಗ್ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಫೆಬ್ರವರಿ 11 ಅಥವಾ 13ರಂದು ನಡೆಯಲಿದೆ ಎಂದು ತಿಳಿದುಬಂದಿದೆ.

VISTARANEWS.COM


on

WPL player auction
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಚೊಚ್ಚಲ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್(ಡಬ್ಲ್ಯುಪಿಎಲ್)​ ಆಟಗಾರ್ತಿಯರ(WPL Player Auction) ಹರಾಜು ಪ್ರಕ್ರಿಯೆ ಮುಂದೂಡಿಕೆಯಾಗಿದೆ ಎಂದು ತಿಳಿದು ಬಂದಿದೆ. ನೂತನ ವರದಿ ಪ್ರಕಾರ ಫೆಬ್ರವರಿ 11 ಅಥವಾ 13ರಂದು ಹರಾಜು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ಮೊದಲು ಆಟಗಾರ್ತಿಯರ ಹರಾಜು ಪ್ರಕ್ರಿಯೆ ಫೆಬ್ರವರಿ 6ರಂದು ನಡೆಸಲು ಬಿಸಿಸಿಐ ಚಿಂತನೆ ನಡೆಸಿತ್ತು. ಆದರೆ ಇದೀಗ ಐದೂ ತಂಡಗಳ ಮಾಲಕರು ಸದ್ಯ ಯುಎಇನಲ್ಲಿ ನಡೆಯುತ್ತಿರುವ ಐಎಲ್ ಟಿ20 ಮತ್ತು ಸೌತ್ ಆಫ್ರಿಕಾ ಟಿ20 ಯಲ್ಲಿ ತಂಡಗಳನ್ನು ಹೊಂದಿದ್ದಾರೆ. ಕ್ರಮವಾಗಿ ಈ ಟೂರ್ನಿಗಳ ಫೈನಲ್ ಪಂದ್ಯಗಳು ಫೆಬ್ರವರಿ 11 ಮತ್ತು 12ರಂದು ನಡೆಯಲಿದೆ.

ಇದನ್ನೂ ಓದಿ WPL 2023: ವುಮೆನ್ಸ್ ಐಪಿಎಲ್​ಗೆ ಹೊಸ ಹೆಸರಿಟ್ಟ ಬಿಸಿಸಿಐ

ಹೀಗಾಗಿ ಫೆಬ್ರವರಿ 11 ಅಥವಾ 13ರಂದು ಮುಂಬಯಿಯಲ್ಲಿ ಆಟಗಾರ್ತಿಯರ ಹರಾಜು ನಡೆಯಬಹುದು ಎಂದು ವರದಿಯಾಗಿದೆ. ಜತೆಗೆ ಮಾರ್ಚ್ 4ರಿಂದ 24ರವರೆಗೆ ಡಬ್ಲ್ಯೂಪಿಎಲ್ ಕೂಟ ನಡೆಯಲಿದೆ ಎಂದು ತಿಳಿದುಬಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IND vs PAK: ಭಾರತ-ಪಾಕ್​ ಪಂದ್ಯಕ್ಕೆ 4 ಹಂತದ ಭದ್ರತಾ ವ್ಯವಸ್ಥೆ; ಮೈದಾನಕ್ಕೆ ನುಗ್ಗಿದರೆ ಜೈಲೂಟ ಖಚಿತ!

IND vs PAK: ಕಳೆದ ವಾರ ಐಸಿಸ್-ಕೆ ಹೆಸರಿನ ಭಯೋತ್ಪಾದಕ ಸಂಘಟನೆಯು “ಲೋನ್ ವುಲ್ಫ್” ದಾಳಿ ನಡೆಸುವುದಾಗಿ ಘೋಷಿಸಿತ್ತು. ಹೀಗಾಗಿ ಪಂದ್ಯ ನಡೆಯುವ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ(Nassau County International Cricket Stadium)ಗೆ ನ್ಯೂಯಾರ್ಕ್​ ಪೊಲೀಸರಿಂದ ಮತ್ತು ಮಿಲಿಟರಿ ಪಡೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಟಿ20 ವಿಶ್ವಕಪ್(T20 world cup 2024) ಪಂದ್ಯ​ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತಂಡಗಳ ಈ ಹೋರಾಟ ನಾಳೆ(ಜೂನ್​ 9ರಂದು) ನಡೆಯಲಿದೆ. ಈ ಪಂದ್ಯಕ್ಕೆ ಉಗ್ರರ ದಾಳಿಯ ಭೀತಿ(india vs pak terror threat) ಮತ್ತು ಅಮೆರಿಕ ವಿರುದ್ಧ ಸೋಲು ಕಂಡ ಕಾರಣ ಪಾಕ್​ಗೆ ಭಾರತ ವಿರುದ್ಧ ಗೆಲ್ಲಲೇ ಬೇಕು. ಸೋತರೆ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಅಧಿಕವಾಗಿದೆ. ಹೀಗಾಗಿ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರುವ ನಿಟ್ಟಿನಲ್ಲಿ ಅಭಿಮಾನಿಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ಸ್ಟೇಡಿಯಂಗೆ ಬರುವ ಸಾಧ್ಯತೆ ಇದೆ. ಇದೇ ಕಾರಣದಿಂದ ಸ್ಟೇಡಿಯಂಗೆ 5 ಹಂತದ ಭಾರೀ ಭದ್ರತೆ ಏರ್ಪಡಿಸಲಾಗಿದೆ.

ಕಳೆದ ವಾರ ಐಸಿಸ್-ಕೆ ಹೆಸರಿನ ಭಯೋತ್ಪಾದಕ ಸಂಘಟನೆಯು “ಲೋನ್ ವುಲ್ಫ್” ದಾಳಿ ನಡೆಸುವುದಾಗಿ ಘೋಷಿಸಿತ್ತು. ಹೀಗಾಗಿ ಪಂದ್ಯ ನಡೆಯುವ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ(Nassau County International Cricket Stadium)ಗೆ ನ್ಯೂಯಾರ್ಕ್​ ಪೊಲೀಸರಿಂದ ಮತ್ತು ಮಿಲಿಟರಿ ಪಡೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.

1. ಸ್ನೈಪರ್ ಗನ್​ ಕಣ್ಗಾವಲು

ನ್ಯೂಯಾರ್ಕ್​ನ(New York stadium) ವಿಶೇಷ ಮಿಲಿಟರಿ ಪಡೆ ಸ್ನೈಪರ್ ಗನ್ ಹಿಡಿದು ಸ್ಟೇಡಿಯಂನ ಮೇಲ್ಛಾವಣಿಯಲ್ಲಿ ಕಣ್ಗಾವಲಿಟ್ಟಿದೆ. ಇದರ ಫೋಟೊಗಳು ಈಗಾಗಲೇ ವೈರಲ್​ ಆಗಿದೆ.

2. ನೊ-ಫ್ಲೈ ಝೋನ್

ಪಂದ್ಯದ ವೇಳೆ ಡ್ರೋನ್ ದಾಳಿ ನಡೆಸುವ ಸಾಧ್ಯತೆ ಕೂಡ ಕಂಡುಬಂದಿರುವ ಕಾರಣ ಪಂದ್ಯ ನಡೆಯುವ ಕ್ರೀಡಾಂಗಣದ ಸುತ್ತ ‘ನೊ-ಫ್ಲೈ ಝೋನ್’ ಎಂದು ಘೋಷಿಸಲಾಗಿದೆ. ಆದರೆ, ವಿಶೇಷ ಸೇನಾ ಹೆಲಿಕಾಪ್ಟರ್‌ಗಳು ಸ್ಕೈಲೈನ್‌ನಲ್ಲಿ ಗಸ್ತು ತಿರುಗಲಿದೆ.

ಇದನ್ನೂ ಓದಿ Rohit Sharma Injury: ಪಾಕ್​ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆತಂಕ; ಅಭ್ಯಾಸದ ವೇಳೆ ರೋಹಿತ್​ಗೆ ಗಾಯ

3. ಸಿಸಿಟಿವಿ ಕಣ್ಗಾವಲು

ಪಂದ್ಯ ನೋಡಲು ಬರುವ ಪ್ರೇಕ್ಷಕರ ಗುಂಪಿನ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಪತ್ತೆಹಚ್ಚಲು ಸ್ಟೇಡಿಯಂ ಒಳಗಡೆ ಮತ್ತು ಹೊರಗಡೆ ಹೈಟೆಕ್ ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಲಾಗಿದೆ. ಇದು ಕ್ರೀಡಾಂಗಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾಗಿದೆ.

4. ವಿಶೇಷ ಪೊಲೀಸ್​ ಪಡೆ

ನ್ಯೂಯಾರ್ಕ್ ಪೊಲೀಸ್ ಇಲಾಖೆ (NYPD) ಮತ್ತು ಇತರ ಭದ್ರತಾ ಏಜೆನ್ಸಿಗಳು ಸಮಗ್ರ ಭದ್ರತಾ ಯೋಜನೆಯನ್ನು ಕಲ್ಪಿಸಿದೆ. ಪಂದ್ಯದ ವೇಳೆ ಯಾರು ಕೂಡ ಮೈದಾನಕ್ಕೆ ನುಗ್ಗದಂತೆ ಎಚ್ಚರ ವಹಿಸಲಾಗಿದೆ. ಅಲ್ಲದೆ ಭದ್ರತಾ ನಿಯಮಗಳನ್ನು ಕೂಡ ಪ್ರಕಟಿಸಲಾಗಿದೆ. ಯಾರಾದರು ಮೈದಾನಕ್ಕೆ ನುಗ್ಗಿ ಆಟಗಾರರನ್ನು ತಬ್ಬಿಕೊಂಡರೆ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.

ಹೈವೋಲ್ಟೇಜ್ ಕದನ ನ್ಯೂಯಾರ್ಕ್(NEW YORK) ಹೊರವಲಯದಲ್ಲಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕೂಡ ಕಾರಣ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ಏರ್ಪಡಿಸಲಾಗಿದೆ ಎನ್ನಲಾಗಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್.

ಪಾಕಿಸ್ತಾನ ತಂಡ: ಬಾಬರ್ ಅಜಂ (ನಾಯಕ), ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಶಾಹೀನ್ ಶಾಹ್ಮಾನ್ ಅಫ್ರಿದಿ, ಉಸ್ಮಾನ್ ಖಾನ್.

Continue Reading

ಕ್ರೀಡೆ

Rohit Sharma Injury: ಪಾಕ್​ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆತಂಕ; ಅಭ್ಯಾಸದ ವೇಳೆ ರೋಹಿತ್​ಗೆ ಗಾಯ

Rohit Sharma Injury: ಈ ಮೊದಲೇ ಗಾಯಗೊಂಡಿದ್ದ ರೋಹಿತ್(Rohit Sharma)​ ಇದೀಗ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ. ಪಾಕ್​ ಪಂದ್ಯಕ್ಕೂ ಮುನ್ನ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಚೆಂಡು ರೋಹಿತ್ ಬೆರಳಿಗೆ ತಾಗಿದೆ. ಮೂಲಗಳ ಪ್ರಕಾರ ಅವರು ಗಾಯದಿಂದ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ.

VISTARANEWS.COM


on

Rohit Sharma Injury
Koo

ನ್ಯೂಯಾರ್ಕ್​: ಐರ್ಲೆಂಡ್​ ವಿರುದ್ಧದ ಮೊದಲ ಲೀಗ್​ ಪಂದ್ಯವನ್ನು ಗೆದ್ದಿರುವ ಭಾರತ ತಂಡ ಇದೀಗ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ನಾಳೆ(ಭಾನುವಾರ) ನಡೆಯುವ ಪಂದ್ಯಲ್ಲಿ ಪಾಕಿಸ್ತಾನದ(IND vs PAK) ಸವಾಲು ಎದುರಿಸಲಿದೆ. ಈ ಪಂದ್ಯವನ್ನು ಹೈವೋಲ್ಟೇಜ್​ ಎಂದು ನಿರೀಕ್ಷಿಸಲಾಗಿದೆ. ಆದರೆ, ಈ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾಕ್ಕೆ(Team India) ದೊಡ್ಡ ಆತಂಕವೊಂದು ಎದುರಾಗಿದೆ.

ಹೌದು, ಐಲೆಂರ್ಡ್​ ವಿರುದ್ಧದ ಪಂದ್ಯದಲ್ಲಿ ಭುಜಕ್ಕೆ ಚೆಂಡಿನೇಟು ತಿಂದು ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್​ ನಿಲ್ಲಿಸಿದ್ದ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮಾ(Injury Scare For Rohit Sharma) ಅವರು ನಾಳಿನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಇದು ತಂಡಕ್ಕೆ ಚಿಂತೆಗೀಡು ಮಾಡಿದೆ.

ಈ ಮೊದಲೇ ಗಾಯಗೊಂಡಿದ್ದ ರೋಹಿತ್(Rohit Sharma)​ ಇದೀಗ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ. ಪಾಕ್​ ಪಂದ್ಯಕ್ಕೂ ಮುನ್ನ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಚೆಂಡು ರೋಹಿತ್ ಬೆರಳಿಗೆ ತಾಗಿದೆ. ಮೂಲಗಳ ಪ್ರಕಾರ ಅವರು ಗಾಯದಿಂದ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ. ಆದರೆ, ಈ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ನಸೌ ಮೈದಾನದ ಪಿಚ್​ ಕೂಡ ಅತ್ಯಂತ ಅಪಾಯಕಾರಿಯಾಗಿ ವರ್ತಿಸುತ್ತಿದೆ. ಚೆಂಡಿನ ಚಲನೆಯನ್ನು ತಿಳಿಯುವಲ್ಲಿ ಬ್ಯಾಟರ್​ಗಳು ಪರದಾಡುತ್ತಿದ್ದಾರೆ. ಹೆಚ್ಚಾಗಿ ಚೆಂಡು ಬ್ಯಾಟರ್​ಗಳ ದೇಹಕ್ಕೆ ತಾಗುತ್ತಿದೆ. ಹೀಗಾಗಿ ಬ್ಯಾಟರ್​ಗಳು ಎಚ್ಚರಿಕೆಯಿಂದ ಆಡುವ ಅಗತ್ಯವಿದೆ. ಒಂದೊಮ್ಮೆ ರೋಹಿತ್​ ಆಡದೇ ಹೋದರೆ, ಇವರ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್​ ಕಣಕ್ಕಿಳಿಯಬಹುದು. ಕೊಹ್ಲಿ ಮತ್ತು ಜೈಸ್ವಾಲ್​ ಭಾರತದ ಇನಿಂಗ್ಸ್​ ಆರಂಭಿಸುವ ಸಾಧ್ಯತೆ ಇದೆ.

ಪಿಚ್​ ಬಗ್ಗೆ ಅಸಮಾಧಾನ


ಐರ್ಲೆಂಡ್​ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ್ದ ರೋಹಿತ್​ ಶರ್ಮ, ನಾಸೌ ಮೈದಾನದ ಡ್ರಾಪ್​ ಇನ್​ ಪಿಚ್​ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಈ ಪಿಚ್​ ಕ್ರಿಕೆಟ್​ ಆಡಲು ಅಷ್ಟು ಯೋಗ್ಯವಾಗಿಲ್ಲ. ಬಿರುಕುಗಳು ಅಧಿಕವಾಗಿದೆ. ಬೌಲರ್​ಗಳಿಗೆ ಅನುಕೂಲಕರವಾಗಿದ್ದರೂ ಕೂಡ ಬ್ಯಾಟರ್​ಗಳಿಗೆ ಇದು ಸೂಕ್ತವಾಗಿಲ್ಲ. ಚೆಂಡಿನ ಚಲನೆಯನ್ನು ಸರಿಯಾಗಿ ಗ್ರಹಿಸಿಕೊಳ್ಳಲು ಆಗುತ್ತಿಲ್ಲ. ಇದೇ ಕಾರಣಕ್ಕೆ ನಾನು ಗಾಯಗೊಂಡೆ. ಈ ಪಿಚ್​ ವರ್ತನೆ ಅರ್ಥೈಸುವುದು ಅಷ್ಟು ಸುಲಭವಾಗಿಲ್ಲ ಎಂದಿದ್ದರು.

ಇದನ್ನೂ ಓದಿ IND vs PAK: ಪಾಕ್​ ವಿರುದ್ಧ ಈ ಬಾರಿಯೂ ಮರುಕಳಿಸಲಿ ಕೊಹ್ಲಿಯ ಬ್ಯಾಟಿಂಗ್​ ಗತವೈಭವ

‘ಇದು ಹೊಸ ಪಿಚ್ ಆಗಿದ್ದು, ಉತ್ತಮವಾದ ಹುಲ್ಲಿನ ಹೊದಿಕೆ ಇದೆ. ಆದರೆ, ಅದರೊಂದಿಗೆ ದೊಡ್ಡ ಬಿರುಕುಗಳೂ ಇವೆ. ಇದರಿಂದ ಚೆಂಡಿನ ಬೌನ್ಸ್ ಕುಗ್ಗುತ್ತದೆ. ಈ ರೀತಿಯ ಪಿಚ್‌ಗಳಲ್ಲಿ ಅಭ್ಯಾಸ ಪಂದ್ಯಗಳನ್ನು ನಡೆಸಿ ಇದನ್ನು ಸೆಟ್ ಮಾಡಬೇಕು​. ಬಳಿಕ, ದೊಡ್ಡ ಪಂದ್ಯಗಳನ್ನು ಆಯೋಜಿಸಬೇಕು. ಎಲ್ಲ 4 ಪಿಚ್‌ಗಳು ಇದೇ ರೀತಿ ಆಗಿದ್ದು, ಟಿ-20 ಟೂರ್ನಿಗೆ ಯೋಗ್ಯವಲ್ಲ’ ಎಂದು ಕ್ರಿಕೆಟ್​ ವಿಶ್ಲೇಷಕರೊಬ್ಬರು ಹೇಳಿದ್ದರು. ಆಸ್ಟ್ರೇಲಿಯಾದಿಂದ ತರಿಸಿದ ಡ್ರಾಪ್ ಇನ್ ಪಿಚ್‌ ಇದಾಗಿದೆ.

ಪಾಕಿಸ್ತಾನ ಮತ್ತು ಭಾರತ ತಂಡದ ಪರ ಘಾತಕ ಬೌಲರ್​ಗಳು ಇರುವ ಕಾರಣ ಉಭಯ ತಂಡಗಳ ಬ್ಯಾಟರ್​ಗಳಿಗೆ ಇಲ್ಲಿ ಆಡುವುದೇ ಸವಾಲಾಗಿ ಪರಿಣಮಿಸಿದೆ. ಬ್ಯಾಟರ್​ಗಳು ಗಾಯಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಅದರಲ್ಲೂ ಸ್ಟಾರ್​ ಬ್ಯಾಟರ್​ಗಳು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದರೆ ತಂಡಕ್ಕೆ ದೊಡ್ಡ ನಷ್ಟವಾಗಲಿದೆ. ಹೀಗಾಗಿ ಎಲ್ಲ ತಂಡದ ಬ್ಯಾಟರ್​ಗಳು ಕೂಡ ಜಾಗರೂಕರಾಗಿ ಆಡಬೇಕಿದೆ.

Continue Reading

ಕ್ರೀಡೆ

IND vs PAK: ಪಾಕ್​ ವಿರುದ್ಧ ಈ ಬಾರಿಯೂ ಮರುಕಳಿಸಲಿ ಕೊಹ್ಲಿಯ ಬ್ಯಾಟಿಂಗ್​ ಗತವೈಭವ

IND vs PAK: ಭಾರತ ತಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ ದಾಖಲೆ ಹೊಂದಿದೆ. ಆದರೆ, ಟಿ20 ವಿಶ್ವಕಪ್​ನಲ್ಲಿ ಭಾರತ ಅಜೇಯವಲ್ಲ. ಒಟ್ಟು 7 ಬಾರಿ ಇತ್ತಂಡಗಳು ಟಿ20 ವಿಶ್ವಕಪ್​ನಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 6 ಪಂದ್ಯ ಗೆದ್ದರೆ, ಪಾಕಿಸ್ತಾನ ಒಂದು ಪಂದ್ಯ ಗೆದ್ದಿದೆ.

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಯಾವುದೇ ಐಸಿಸಿ ಕೂಟದಲ್ಲಿಯೂ ಭಾರತ-ಪಾಕಿಸ್ತಾನ(IND vs PAK) ಪಂದ್ಯಕ್ಕೆ ಇರುವಂತಹ ಕ್ರೇಜ್‌ ಉಳಿದ ಯಾವ ಪಂದ್ಯಕ್ಕೂ ಕಾಣಸಿಗದು. ನಿರೀಕ್ಷೆಗೂ ಮೀರಿದ ಕ್ರೇಜ್‌ ಕಂಡುಬರುತ್ತದೆ. ಕಳೆದ 2022ರಲ್ಲಿ ಮೆಲ್ಬೋರ್ನ್​ನಲ್ಲಿ(IND vs PAK 2022 T20 World Cup) ನಡೆದಿದ್ದ ಟಿ20 ವಿಶ್ವಕಪ್​ನ ಸೂಪರ್ 12 ಹಂತದ ಸೂಪರ್‌ ಥ್ರಿಲ್ಲಿಂಗ್‌ ಪಂದ್ಯದಲ್ಲಿ ವಿರಾಟ್​ ಕೊಹ್ಲಿಯ ಅಸಾಮಾನ್ಯ ಬ್ಯಾಟಿಂಗ್​ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ಕೊಹ್ಲಿಯ ಬ್ಯಾಟಿಂಗ್​ ಆರ್ಭಟ ಕಂಡು ಪಾಕ್ ಅಕ್ಷರಶಃ ನಲುಗಿ ಹೋಗಿತ್ತು. ​ಕೊಹ್ಲಿಯ(Virat Kohli) ಅಂದಿನ ಬ್ಯಾಟಿಂಗ್​ ಗತವೈಭವ ಮತ್ತೆ ಮರುಕಳಿಸಲಿ ಎನ್ನುವುದು ಭಾರತೀಯ ಅಭಿಮಾನಗಳ ಆಶಯ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನಾಳೆ(ಭಾನುವಾರ) ನಡೆಯಲಿದೆ.

ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಪಾಕಿಸ್ತಾನ(India vs Pakistan) ಶಾನ್​ ಮಸೂದ್​ ಮತ್ತು ಇಫ್ತಿಕಾರ್​ ಅಹ್ಮದ್​ ಬಾರಿಸಿದ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 159 ರನ್​ ಬಾರಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ 10 ರನ್​ ಗಳಿಸುವಷ್ಟರಲ್ಲಿ ರೋಹಿತ್​ ಶರ್ಮ(4) ಮತ್ತು ಕೆ.ಎಲ್​ ರಾಹುಲ್(4)​ ವಿಕೆಟ್​ ಕಳೆದುಕೊಂಡಿತು. ಆ ಬಳಿಕ ಬಂದ ಸೂರ್ಯಕುಮಾರ್​(15) ಮತ್ತು ಅಕ್ಷರ್​ ಪಟೇಲ್​(2) ಕೂಡ ನಿರಾಸೆ ಮೂಡಿಸಿದರು.

ಆರಂಭಿಕ ಆಘಾತ ಅನುಭವಿಸಿ ಸೋಲಿನತ್ತ ಮುಖಮಾಡಿದ್ದ ಭಾರತಕ್ಕೆ ಆಸರೆಯಾದದ್ದು ವಿರಾಟ್‌ ಕೊಹ್ಲಿ. ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಕೂಡ ತಂಡದ ಗೆಲುವಿಗಾಗಿ ಪಣ ತೊಟ್ಟಿದ್ದ ಕೊಹ್ಲಿ 53 ಎಸೆತದಲ್ಲಿ ಅಜೇಯ 82 ರನ್‌ ಬಾರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಹಾರ್ದಿಕ್​ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ 40 ರನ್​ ಬಾರಿಸಿ ಕೊಹ್ಲಿಗೆ ಉತ್ತಮ ಸಾಥ್​ ನೀಡಿದ್ದು ಕೂಡ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಇದನ್ನೂ ಓದಿ IND vs PAK: ಇಂಡೋ-ಪಾಕ್ ಟಿ20 ವಿಶ್ವಕಪ್​ ಕೌತುಕ; ಹೇಗಿದೆ ಇತ್ತಂಡಗಳ ದಾಖಲೆ? 

ಅಂತಿಮ ಒಂದು ಎಸೆತಕ್ಕೆ 2 ರನ್​ ಬೇಕಿದ್ದಾಗ ಕ್ರೀಸ್​ನಲ್ಲಿದ್ದ ಅಶ್ವಿನ್​ ಅವರು ಮೊಹಮ್ಮದ್​ ನವಾಜ್ ಅವರ​ ಲೆಗ್​ಸೈಡ್​ ಎಸೆತವನ್ನು ಅಷ್ಟೇ ಸೊಗಸಾಗಿ ವೈಡ್​ ಬಿಟ್ಟರು. ಪಂದ್ಯ ಟೈಗೊಂಡಿತು. ಕೊನೆಯ ಎಸೆತದಲ್ಲಿ ಸಿಂಗಲ್​ ತೆಗೆದು ಭಾರತದ ಗೆಲುವು ಸಾರಿದರು. ಕೊಹ್ಲಿಯ ಅಸಾಮಾನ್ಯ ಬ್ಯಾಟಿಂಗ್​ ಇನ್ನಿಂಗ್ಸ್ ಕಂಡ ನಾಯಕ ರೋಹಿತ್ ಶರ್ಮಾ ಓಡಿ ಬಂದು ಕೊಹ್ಲಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಾಚರಣೆ ಮಾಡಿದ್ದರು.

ಭಾರತ ತಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ ದಾಖಲೆ ಹೊಂದಿದೆ. ಆದರೆ, ಟಿ20 ವಿಶ್ವಕಪ್​ನಲ್ಲಿ ಭಾರತ ಅಜೇಯವಲ್ಲ. ಒಟ್ಟು 7 ಬಾರಿ ಇತ್ತಂಡಗಳು ಟಿ20 ವಿಶ್ವಕಪ್​ನಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 6 ಪಂದ್ಯ ಗೆದ್ದರೆ, ಪಾಕಿಸ್ತಾನ ಒಂದು ಪಂದ್ಯ ಗೆದ್ದಿದೆ. ಭಾರತಕ್ಕೆ ಸೋಲು ಎದುರಾದದ್ದು 2021ರಲ್ಲಿ ದುಬೈನಲ್ಲಿ ನಡೆದಿದ್ದ ಟೂರ್ನಿಯಲ್ಲಿ. ವಿರಾಟ್​ ಕೊಹ್ಲಿ ಸಾರಥ್ಯದ ಟೀಮ್​ ಇಂಡಿಯಾ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು.

ಒಟ್ಟಾರೆಯಾಗಿ ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದ್ದರೂ ಕೂಡ ಪಾಕ್​ ಸವಾಲನ್ನು ಅಷ್ಟು ಹಗುರವಾಗಿ ಕಡೆಗಣಿಸುವಂತಿಲ್ಲ.

Continue Reading

ಕ್ರೀಡೆ

IND vs PAK: ಇಂಡೋ-ಪಾಕ್ ಟಿ20 ವಿಶ್ವಕಪ್​ ಕೌತುಕ; ಹೇಗಿದೆ ಇತ್ತಂಡಗಳ ದಾಖಲೆ? 

IND vs PAK: ಭಾರತ ಮತ್ತು ಪಾಕ್​ ಪಂದ್ಯಗಳಲ್ಲಿ ಗೆಲುವಿನ ರೂವಾರಿಗಳು ಕ್ರಿಕೆಟಿನ ದೊಡ್ಡ ಹೀರೋಗಳಾಗಿ ಮೆರೆಯುತ್ತಾರೆ. ಹಾಗೆಯೇ ಕೆಲವು ವಿಲನ್‌ಗಳೂ ಹುಟ್ಟಿ ಕೊಳ್ಳುತ್ತಾರೆ. ಪಾಕಿಸ್ತಾನ ಸೋತರೆ ಅಲ್ಲಿ ಇವರ ಪ್ರತಿಕೃತಿ ದಹನವಾಗಲಿದೆ; ಮನೆಗೆ ಕಲ್ಲು ಬೀಳಲಿದೆ. ಇದರಿಂದ ಬಚಾವಾಗುವುದು ಪಾಕ್‌ ಕ್ರಿಕೆಟಿಗರ ಪಾಲಿಗೆ ಇನ್ನೂ ದೊಡ್ಡ ಸವಾಲು.

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಹೈವೋಲ್ಟೇಜ್​ ಕದನ ನಾಳೆ(ಭಾನುವಾರ) ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಈ ಎರಡೂ ದೇಶಗಳ ನಡುವಿನ ಕ್ರಿಕೆಟ್‌ ಹೋರಾಟವನ್ನು ಯಾವುದೇ ಉತ್ಪ್ರೇಕ್ಷಿತ ವರ್ಣನೆ, ಹೋಲಿಕೆ, ಉಪಮೆಗಳಿಗೆ ಬೇಕಾದರೂ ಬಳಸಿಕೊಳ್ಳಬಹುದು. ಉಳಿದ ಸಂದರ್ಭದಲ್ಲಿ ಯಾವುದನ್ನು ನಾವು ಉತ್ಪ್ರೇಕ್ಷೆ ಎನ್ನಬಹುದೋ, ಈ ಎರಡು ದೇಶಗಳ ಕ್ರಿಕೆಟ್‌ ಹೋರಾಟದ ಸಂದರ್ಭದಲ್ಲಿ ಅವು ನಿಜವಾಗಿರುತ್ತವೆ. ಜಗತ್ತಿನ ಇತರೆ ಯಾವುದೇ ದೇಶಗಳ ನಡುವಿನ ಕ್ರಿಕೆಟ್‌ ಸಮರದಲ್ಲಿ ಈ ತೀವ್ರತೆಯನ್ನು ನೀವು ಕಾಣಲು ಸಾಧ್ಯವೇ ಇಲ್ಲ.

ಎರಡೂ ದೇಶಗಳ ನಡುವಿನ ಹದಗೆಟ್ಟ ಸಂಬಂಧ ಹಾಗೂ ತ್ವೇಷಮಯ ವಾತಾವರಣದ ನಡುವೆ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ವಿಶ್ವಕಪ್‌(IND vs PAK T20 World Cup) ಆಗಿರಲಿ ಇತರ ಯಾವುದೇ ಟೂರ್ನಿಯ ಪಂದ್ಯವಾಗಿರಲಿ ಇದನ್ನು ನೋಡುವುದೇ ಒಂದು ರೋಮಾಂಚನ.

ಭಾರತ ಮತ್ತು ಪಾಕ್​ ಪಂದ್ಯಗಳಲ್ಲಿ ಗೆಲುವಿನ ರೂವಾರಿಗಳು ಕ್ರಿಕೆಟಿನ ದೊಡ್ಡ ಹೀರೋಗಳಾಗಿ ಮೆರೆಯುತ್ತಾರೆ. ಹಾಗೆಯೇ ಕೆಲವು ವಿಲನ್‌ಗಳೂ ಹುಟ್ಟಿ ಕೊಳ್ಳುತ್ತಾರೆ. ಪಾಕಿಸ್ತಾನ ಸೋತರೆ ಅಲ್ಲಿ ಇವರ ಪ್ರತಿಕೃತಿ ದಹನವಾಗಲಿದೆ; ಮನೆಗೆ ಕಲ್ಲು ಬೀಳಲಿದೆ. ಇದರಿಂದ ಬಚಾವಾಗುವುದು ಪಾಕ್‌ ಕ್ರಿಕೆಟಿಗರ ಪಾಲಿಗೆ ಇನ್ನೂ ದೊಡ್ಡ ಸವಾಲು.

ಇದನ್ನೂ ಓದಿ AFG vs NZ: ಅಫಘಾನಿಸ್ತಾನ ವಿರುದ್ಧ ಹೀನಾಯ ಸೋಲು ಕಂಡ ನ್ಯೂಜಿಲ್ಯಾಂಡ್​

ಟಿ20 ವಿಶ್ವಕಪ್​ನಲ್ಲಿ ಭಾರತ ಅಜೇಯವಲ್ಲ

ಭಾರತ ತಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ ದಾಖಲೆ ಹೊಂದಿದೆ. ಆದರೆ, ಟಿ20 ವಿಶ್ವಕಪ್​ನಲ್ಲಿ ಭಾರತ ಅಜೇಯವಲ್ಲ. ಒಟ್ಟು 7 ಬಾರಿ ಇತ್ತಂಡಗಳು ಟಿ20 ವಿಶ್ವಕಪ್​ನಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 6 ಪಂದ್ಯ ಗೆದ್ದರೆ, ಪಾಕಿಸ್ತಾನ ಒಂದು ಪಂದ್ಯ ಗೆದ್ದಿದೆ. ಭಾರತಕ್ಕೆ ಸೋಲು ಎದುರಾದದ್ದು 2021ರಲ್ಲಿ ದುಬೈನಲ್ಲಿ ನಡೆದಿದ್ದ ಟೂರ್ನಿಯಲ್ಲಿ. ವಿರಾಟ್​ ಕೊಹ್ಲಿ ಸಾರಥ್ಯದ ಟೀಮ್​ ಇಂಡಿಯಾ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು.

ಒಟ್ಟಾರೆಯಾಗಿ ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದ್ದರೂ ಕೂಡ ಪಾಕ್​ ಸವಾಲನ್ನು ಅಷ್ಟು ಹಗುರವಾಗಿ ಕಡೆಗಣಿಸುವಂತಿಲ್ಲ.

ನ್ಯೂಯಾರ್ಕ್‌ನಲ್ಲಿ ಪಂದ್ಯ ನಡೆಸಲು ಕಾರಣವೇನು?

ಇತ್ತಂಡಗಳ ನಡುವಣ ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಅಣಿಯಾಗಲಿದೆ. ಈ ಪಂದ್ಯಕ್ಕಾಗಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ಭಾರತ ಮತ್ತು ಪಾಕ್​ ನಡುವಣ ಪಂದ್ಯಕ್ಕಾಗಿಯೇ ನಿರ್ಮಿಸಲಾಗಿದೆ. ಈ ಪಂದ್ಯವನ್ನು ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕೂಡ ಒಂದು ಕಾರಣವಿದೆ. ಅದೇನೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ನಡೆಸಲಾಗುತ್ತಿದೆ. ಆಘಾತಕಾರಿ ನಸೌ ಪಿಚ್​ನಲ್ಲಿ ಆಡುವುದೇ ಉಭಯ ತಂಡಗಳಿಗೆ ದೊಡ್ಡ ಚಿಂತೆಯಾಗಿದೆ.

Continue Reading
Advertisement
IND vs PAK
ಕ್ರೀಡೆ19 mins ago

IND vs PAK: ಭಾರತ-ಪಾಕ್​ ಪಂದ್ಯಕ್ಕೆ 4 ಹಂತದ ಭದ್ರತಾ ವ್ಯವಸ್ಥೆ; ಮೈದಾನಕ್ಕೆ ನುಗ್ಗಿದರೆ ಜೈಲೂಟ ಖಚಿತ!

Money Guide
ಮನಿ-ಗೈಡ್21 mins ago

Money Guide: ಈಗಿನ ಆರೋಗ್ಯ ವಿಮಾ ಪಾಲಿಸಿ ಬಗ್ಗೆ ಸಮಾಧಾನ ಇಲ್ಲವೆ? ಹೆಲ್ತ್ ಇನ್ಶೂರೆನ್ಸ್ ಪೋರ್ಟೆಬಿಲಿಟಿ ಬಳಸಿ

Niveditha Gowda chandan shetty age differance
ಸ್ಯಾಂಡಲ್ ವುಡ್25 mins ago

Niveditha Gowda: ಚಂದನ್‌ ಶೆಟ್ಟಿ-ನಿವೇದಿತಾ ನಡುವಿನ ವಯಸ್ಸಿನ ಅಂತರವೆಷ್ಟು?

Viral Video
ವೈರಲ್ ನ್ಯೂಸ್29 mins ago

Viral Video: ಹೊಟೇಲ್‌ ಮಾಲೀಕನನ್ನು ಮುಖಾಮೂತಿ ನೋಡದೆ ಚಚ್ಚಿದ ಶಾಸಕ; ವಿಡಿಯೋ ಫುಲ್‌ ವೈರಲ್‌

Congress Guarantee
ಕರ್ನಾಟಕ31 mins ago

Congress Guarantee: ʼಸ್ಯಾಡಿಸ್ಟ್‌ʼ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟವಾಗಿಲ್ಲ, ನಿಲ್ಲಿಸೋದೇ ಒಳಿತು ಎಂದ ಲಕ್ಷ್ಮಣ್‌!

Food Tips Kannada
ಆರೋಗ್ಯ36 mins ago

Food Tips Kannada: ಇನ್‌ಸ್ಟಂಟ್‌ ನೂಡಲ್ಸ್‌ ತಿಂದರೆ ಆರೋಗ್ಯಕ್ಕೆ ತೊಂದರೆ ಇದೆಯೆ?

Murder case in Mysuru
ಮೈಸೂರು44 mins ago

Murder Case : ತಂಗಿಗೆ ವರದಕ್ಷಿಣೆ ಟಾರ್ಚರ್‌; ಬಾಮೈದನ ಕೊಲೆ ಮಾಡಿದ ಬಾವ

Rohit Sharma Injury
ಕ್ರೀಡೆ58 mins ago

Rohit Sharma Injury: ಪಾಕ್​ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆತಂಕ; ಅಭ್ಯಾಸದ ವೇಳೆ ರೋಹಿತ್​ಗೆ ಗಾಯ

Niveditha Gowda Demand For Divorce Alimony
ಸ್ಯಾಂಡಲ್ ವುಡ್1 hour ago

Niveditha Gowda: ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ರಾ ನಿವೇದಿತಾ ಗೌಡ?

Kangana Ranaut
ದೇಶ1 hour ago

Kangana Ranaut: ಕಾರಣ ಇದ್ದರೆ ಕೊಲೆ, ಅತ್ಯಾಚಾರ ಮಾಡಬಹುದೆ? ; ವಿರೋಧಿಗಳ ವಿರುದ್ಧ ಗುಡುಗಿದ ಕಂಗನಾ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ23 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ1 day ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ5 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ5 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌