Viral Video : ಹಾಸ್ಟೆಲ್ ಊಟ ಹೀಗಿರತ್ತೆ ನೋಡಿ! ಐರನ್ ಚಪಾತಿ ವಿಡಿಯೊ ವೈರಲ್ - Vistara News

ವೈರಲ್ ನ್ಯೂಸ್

Viral Video : ಹಾಸ್ಟೆಲ್ ಊಟ ಹೀಗಿರತ್ತೆ ನೋಡಿ! ಐರನ್ ಚಪಾತಿ ವಿಡಿಯೊ ವೈರಲ್

ಹಾಸ್ಟೆಲ್ ಊಟ ಹೇಗಿರುತ್ತದೆ ಎಂದು ತೋರಿಸುವಂತಹ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಮೇಜಿನ ಮೇಲೆ ಹೊಡೆದರೂ ಮುರಿಯದ ಚಪಾತಿಯ ವಿಡಿಯೊ ವೈರಲ್ (Viral Video) ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮನೆಯಲ್ಲಿದ್ದು ಬೆಳೆದವರಿಗೆ ಹಾಸ್ಟೆಲ್ ಒಂದು ರೀತಿಯ ಜೈಲಿನಂತೆಯೇ. ಅಪ್ಪ ಅಮ್ಮನ ನಿಯಂತ್ರಣವಿಲ್ಲದೆ ಸ್ವತಂತ್ರರಾಗಿ ಇರುತ್ತಾರಾದರೂ ಅಲ್ಲಿ ಮನೆಯಲ್ಲಿದ್ದಷ್ಟು ನೆಮ್ಮದಿ ಸಿಗಲು ಸಾಧ್ಯವೇ ಇಲ್ಲ. ಅದರಲ್ಲೂ ಹಾಸ್ಟೆಲ್ ಅಲ್ಲಿ ಇರುವವರೆಲ್ಲರೂ ಮಿಸ್ ಮಾಡಿಕೊಳ್ಳುವುದೆಂದರೆ ಅದು ಮನೆಯ ಅಡುಗೆ. ಮನೆ ಅಡುಗೆ ಬಿಟ್ಟು ಬಂದು ಹಾಸ್ಟೆಲ್ ಊಟ ಮಾಡುವವರ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದಕ್ಕೆ ಸಾಕ್ಷಿಯಂತಿರುವ ವಿಡಿಯೊ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.

ಇದನ್ನೂ ಓದಿ: Viral News : ಕೈಗೆ ಸಿಕ್ಕಿದ್ದ ಲಕ್ಷಾಂತರ ಮೌಲ್ಯದ ನಾಣ್ಯವನ್ನು ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಯುವತಿ
ಯುವತಿಯೊಬ್ಬರು ಕೈನಲ್ಲಿ ಹಾಸ್ಟೆಲ್ ಅಡುಗೆಯ ಭಾಗವಾದ ಚಪಾತಿಯನ್ನು ಹಿಡಿದುಕೊಂಡಿದ್ದಾರೆ. ಸಾಮಾನ್ಯವಾಗಿ ಚಪಾತಿ ಎಂದರೆ ಅದು ಮೃದುವಾಗಿರುತ್ತದೆ. ಆದರೆ ಈ ವಿಡಿಯೊದಲ್ಲಿ ಯುವತಿ ಹಿಡಿದಿರುವ ಚಪಾತಿ ಮೃದುವಾಗಿಲ್ಲ. ಸಣ್ಣ ವೃತ್ತಾಕಾರದಲ್ಲಿರುವ ಅದನ್ನು ಯುವತಿ ಮರದ ಟೇಬಲ್ ಮೇಲೆ ಬಡಿದರೂ ಚಪಾತಿ ಬಾಗುತ್ತಿಲ್ಲ ಅಥವಾ ಮುರಿಯುತ್ತಿಲ್ಲ. ಸಾಕಷ್ಟು ಬಾರಿ ಬಡಿದರೂ ಚಪಾತಿ ತುಂಡಾಗದ್ದನ್ನು ಯುವತಿ ವಿಡಿಯೊದಲ್ಲಿ ತೋರಸಿದ್ದಾರೆ.


ಸಾಕ್ಷಿ ಜೈನ್ ಹೆಸರಿನವರು ಈ ವಿಡಿಯೊವನ್ನು ಟ್ವಿಟರ್ ಅಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ. “ಇದು ಇಂದಿನ ಚಪಾತಿಯೋ ಅಥವಾ ಎರಡು ದಿನ ಹಿಂದಿನದೋ?” ಎಂದು ಒಬ್ಬರು ಪ್ರಶ್ನೆ ಕೇಳಿದ್ದಾರೆ. “ಇದು ಕಬ್ಬಿಣಾಂಶ ಹೆಚ್ಚಿರುವ ಚಪಾತಿ”, “ಈ ಚಪಾತಿಯನ್ನು ಹುಡುಗಿಯರು ತಮ್ಮ ರಕ್ಷಣೆ ಮಾಡಿಕೊಳ್ಳಲೆಂದು ಮಾಡಲಾಗಿದೆ. ಯಾರಾದರೂ ಕೀಟಲೆ ಮಾಡಲು ಬಂದರೆ ಇದರಿಂದ ಅವರಿಗೆ ಹೊಡೆದರೆ ಅವರು ಮತ್ತೆ ಮೇಲೆ ಏಳುವುದೇ ಇಲ್ಲ” ಎನ್ನುವಂತಹ ಹಲವಾರು ಕಾಮೆಂಟ್ ವಿಡಿಯೊಗೆ ಬಂದಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Rajendra Nagar Tragedy: ದೆಹಲಿ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಅವಾಂತರ; ದುರಂತದಿಂದ ಪಾರಾದವರ Video ಇಲ್ಲಿದೆ

Rajendra Nagar Tragedy: ಶನಿವಾರ (ಜುಲೈ 27) ದೆಹಲಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ರಾಜೇಂದ್ರ ನಗರದಲ್ಲಿರುವ ರಾವ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ಗೆ ನೀರು ನುಗಿ ಮೂವರು ಮೃತಪಟ್ಟಿದ್ದಾರೆ. ಇದೀಗ ಈ ದುರಂತದಿಂದ ಪಾರಾದವರ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

VISTARANEWS.COM


on

Rajendra Nagar Tragedy
Koo

ನವದೆಹಲಿ: ಶನಿವಾರ (ಜುಲೈ 27) ದೆಹಲಿಯಲ್ಲಿ (Delhi Floods) ಸುರಿದ ಧಾರಾಕಾರ ಮಳೆಯಿಂದ ಐಎಎಸ್‌ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ (Rajendra Nagar Tragedy). ರಾಜೇಂದ್ರ ನಗರದಲ್ಲಿರುವ ರಾವ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ (Rau’s IAS Coaching Institute)ನಲ್ಲಿ ಈ ದುರಂತ ಸಂಭವಿಸಿದೆ. ಸಂಜೆ ಏಕಾಏಕಿ ನೀರು ನುಗ್ಗಿದ ಕಾರಣ ನೆಲಮಹಡಿಯಲ್ಲಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತರನ್ನು ಐಎಎಎಸ್‌ ಆಕಾಂಕ್ಷಿಗಳಾದ ತೆಲಂಗಾಣ, ಉತ್ತರ ಪ್ರದೇಶ ಮತ್ತು ಕೇರಳ ಮೂಲದ ತಾನಿಯಾ ಸೋನಿ (25), ಶ್ರೇಯಾ ಯಾದವ್ (25) ಮತ್ತು ನವೀನ್ ಡೆಲ್ವಿನ್ (28) ಎಂದು ಗುರುತಿಸಲಾಗಿದೆ. ಇದೀಗ ದುರಂತದಿಂದ ಕೂದಲೆಳೆ ಅಂತರದಿಂದ ಪಾರಾದವರ ವಿಡಿಯೊ ವೈರಲ್‌ (Viral Video) ಆಗಿದೆ.

ಘಟನೆಯನ್ನು ಖಂಡಿಸಿ ಈಗಾಗಲೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ದುರಂತಕ್ಕೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವೇ ಕಾರಣ ಎಂಬ ಕೂಗು ಎಲ್ಲೆಡೆ ಕೇಳಿ ಬಂದಿದೆ. ಈ ಮಧ್ಯೆ ದುರಂತದಿಂದ ಪಾರಾದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಹೃದೇಶ್ ಚೌಹಾಣ್ ಘಟನೆ ಯಾವಾಗ ನಡೆಯಿತು ಎಂಬುದರ ಆಘಾತಕಾರಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ನೆಲಮಹಡಿಗೆ ನೆರೆ ನುಗ್ಗಿದ ನಂತರ ಅಲ್ಲಿನ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಈ ವೈರಲ್ ವಿಡಿಯೊ ತೋರಿಸುತ್ತದೆ. ಹಲವು ವಿದ್ಯಾರ್ಥಿಗಳು ದುರಂತದಿಂದ ಪಾರಾಗುವುದನ್ನು ಕಾಣಬಹುದು. ಜತೆಗೆ ನೆರೆಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರಿಗೆ ವಿದ್ಯಾರ್ಥಿಗಳ ಗುಂಪು ಸಹಾಯಹಸ್ತ ಚಾಚಿ ನೆರವಾಗುತ್ತಿರುವುದೂ ಕಂಡು ಬಂದಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊ ಹಂಚಿಕೊಂಡಿರುವ ಹೃದೇಶ್‌ ಚೌಹಾಣ್‌, ನೆಲಮಹಡಿಯು ಹತ್ತು ನಿಮಿಷಗಳಲ್ಲಿ ಪ್ರವಾಹದಿಂದ ತುಂಬಿಕೊಂಡಿತ್ತು ಎಂದು ಬರೆದುಕೊಂಡಿದ್ದಾರೆ. ಸಂಜೆ 6.40ಕ್ಕೆ ಈ ಘಟನೆ ನಡೆದಿದ್ದು, ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (National Disaster Management Authority)ಕ್ಕೆ ತಕ್ಷಣ ಮಾಹಿತಿ ನೀಡಲಾಯಿತು. ಆದರೆ ಅವರು ರಾತ್ರಿ 9ರ ನಂತರವೇ ತಲುಪಿದರು. ಇದು ಮೂವರು ಐಎಎಎಸ್‌ ಆಕಾಂಕ್ಷಿಗಳ ಸಾವಿಗೆ ಕಾರಣವಾಯಿತು ಎಂದಿದ್ದಾರೆ.

ನೆಟ್ಟಿಗರಿಂದ ಆಕ್ರೋಶ

ಸದ್ಯ ಈ ವಿಡಿಯೊವನ್ನು 10 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವು ಮಂದಿ ಆಡಳಿತ ಯಂತ್ರದ ವೈಫಲ್ಯವನ್ನು ಖಂಡಿಸಿದ್ದಾರೆ. ʼʼಇದು ನಿಜವಾಗಿಯೂ ಭಯಾನಕʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಈ ದುರಂತಕ್ಕೆ, ಮೂವರ ಸಾವಿಗೆ ನಾವು ನ್ಯಾಯಾಂಗ ವ್ಯವಸ್ಥೆಯನ್ನು ಹೊಣೆಗಾರರನ್ನಾಗಿ ಮಾಡಬಹುದೇ?ʼʼ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

“ದೆಹಲಿ ಪೊಲೀಸ್‌ ನೀವು ಸಮಯಕ್ಕೆ ಸರಿಯಾಗಿ ಏಕೆ ತಲುಪಲಿಲ್ಲ? ಮತ್ತು ಈಗ ನೀವು ಕೋಚಿಂಗ್ ಸೆಂಟರ್ ಮೇಲೆ ಎಫ್ಐಆರ್ ದಾಖಲಿಸುತ್ತೀರಿ. ಎಂತಹ ವಿಪರ್ಯಾಸ” ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. “ಈ ದುರಂತದ ಹಿಂದಿರುವ ಕಾರಣಕರ್ತರ ವಿರುದ್ಧ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಿರಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡದೇ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ಪ್ರವೃತ್ತರಾಗಬೇಕು” ಎಂದು ಮಗದೊಬ್ಬರು ಸೂಚಿಸಿದ್ದಾರೆ.

ಇದನ್ನೂ ಓದಿ: Delhi Floods: ದೆಹಲಿಯಲ್ಲಿ ಕೋಚಿಂಗ್‌ ಸೆಂಟರ್‌ಗೆ ನುಗ್ಗಿದ ನೀರು; ಮೃತರ ಸಂಖ್ಯೆ 3ಕ್ಕೆ ಏರಿಕೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

Continue Reading

ಪ್ರಮುಖ ಸುದ್ದಿ

Viral Video : 25 ವರ್ಷದ ಕನ್ಯೆಯನ್ನು ಮದುವೆಯಾದ 70 ವರ್ಷದ ಮುದುಕ ಕಲೀಮುಲ್ಲಾ!

Viral Video : ಮದುವೆಯಾದ ಜೋಡಿಯ ಹೆಸರು ಮೊಹಮ್ಮದ್ ಕಲೀಮುಲ್ಲಾ ನೂರಾನಿ ಮತ್ತು ರೇಷ್ಮಾ ಪರ್ವೀನ್. ರೇಷ್ಮಾ ಪರ್ವೀನ್ ಅಮಾಸ್ ಬ್ಲಾಕ್ನ ಹಮ್ಜಾಪುರ ವಾರ್ಡ್ ಸಂಖ್ಯೆ 11 ರ ಇಸ್ಲಾಂನಗರದ ನಿವಾಸಿ. 70 ವರ್ಷದ ಕಲೀಮುಲ್ಲಾ ನೂರಾನಿ ಬೈಡಾ ಗ್ರಾಮದ ನಿವಾಸಿ. ಇಬ್ಬರೂ ತಮ್ಮ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದಾರೆ. ಆದಾಗ್ಯೂ, ಕಲೀಮುಲ್ಲಾ ತನಗಿನ್ನೂ ವಯಸ್ಸ 50 ಎಂದು ಹೇಳುತ್ತಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

VISTARANEWS.COM


on

Viral Video
Koo

ಗಯಾ: ಮುದುಕನ ಮದುವೆ ಹೊಸತಲ್ಲ. ಆದರೆ, ಪ್ರತಿ ಬಾರಿಯೂ ಮುದುಕರು ಮದುವೆಯಾಗಿರುವುದು ಸುದ್ದಿಯಾಗುವುದು ಅವರು ವರಿಸಿದ ಕನ್ಯೆಯ ವಯಸ್ಸಿನ ಆಧಾರದ ಮೇಲೆ ಅಂತೆಯೇ ಬಿಹಾರದಲ್ಲೂ ಒಂದು ಘಟನೆ ನಡೆದಿದೆ. ಕಲೀಮುಲ್ಲಾ ಎಂಬ ಹೆಸರಿನ 70 ವರ್ಷದ ವ್ಯಕ್ತಿ 25 ವರ್ಷದ ಯುವತಿಯನ್ನು ಮದುವೆಯಾಗಿ ಸುದ್ದಿಯಾಗಿದ್ದಾನೆ. ಬಿಹಾರದ ಗಯಾದಲ್ಲಿ ಈ ಘಟನೆ ನಡೆದಿದ್ದು,ಕುಟುಂಬ ಮತ್ತು ಗ್ರಾಮಸ್ಥರೆಲ್ಲರೂ ಆತನ ಮದುಗೆ ಬಂದು ತಿಂದುಂಡು ಹೋಗಿದ್ದಾರೆ. ಅಚ್ಚರಿಯೆಂದರೆ ಮದುವೆಯನ್ನು ಸಂಪೂರ್ಣ ಧಾರ್ಮಿಕ ಸಂಪ್ರದಾಯಗಳ ಪ್ರಕಾರವೇ ನಡೆಸಲಾಗಿದೆ.

ಮದುವೆಯಾದ ಜೋಡಿಯ ಹೆಸರು ಮೊಹಮ್ಮದ್ ಕಲೀಮುಲ್ಲಾ ನೂರಾನಿ ಮತ್ತು ರೇಷ್ಮಾ ಪರ್ವೀನ್. ರೇಷ್ಮಾ ಪರ್ವೀನ್ ಅಮಾಸ್ ಬ್ಲಾಕ್ನ ಹಮ್ಜಾಪುರ ವಾರ್ಡ್ ಸಂಖ್ಯೆ 11 ರ ಇಸ್ಲಾಂನಗರದ ನಿವಾಸಿ. 70 ವರ್ಷದ ಕಲೀಮುಲ್ಲಾ ನೂರಾನಿ ಬೈಡಾ ಗ್ರಾಮದ ನಿವಾಸಿ. ಇಬ್ಬರೂ ತಮ್ಮ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದಾರೆ. ಆದಾಗ್ಯೂ, ಕಲೀಮುಲ್ಲಾ ತನಗಿನ್ನೂ ವಯಸ್ಸ 50 ಎಂದು ಹೇಳುತ್ತಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

ಮದುಗೆ ಆದ ವಿಚಾರದ ಬಗ್ಗೆ ಕಲೀಮುಲ್ಲಾನನ್ನು ಮಾತನಾಡಿಸಿದಾಗ, ನನ್ನದೇನೂ ತಪ್ಪಿಲ್ಲ. ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾನೆ. ಮದುವೆಗೆ ವಯಸ್ಸು ಲೆಕ್ಕವೇ ಅಲ್ಲ. ಹುಡುಗಿ ಕೂಡ ಈ ಮದುವೆಗೆ ಸಂತೋಷದಿಂದ ಒಪ್ಪಿಕೊಂಡಿದ್ದಾಳೆ. ಇದನ್ನು ಅವರು ಮಾಧ್ಯಮಗಳ ಮುಂದೆಯೂ ಹೇಳಿದ್ದಾಳೆ ಎಂದು ಸಮರ್ಥಿಸಿಕೊಂಡಿದ್ದಾನೆ. ಕಲೀಮುಲ್ಲಾ ವೃದ್ಧಾಪ್ಯದಲ್ಲಿ ಏಕೆ ವಿವಾಹವಾಗಿದ್ದೇನೆ ಎಂಬುದಕ್ಕೆ ಕಾರಣ ಕೊಟ್ಟಿದ್ದಾರೆ. ಮದುವೆಗೆ ಯಾವುದೇ ವಯಸ್ಸು ಇಲ್ಲ. ನನ್ನನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ನಾನು ಮದುವೆಯ ಬಗ್ಗೆ ಯೋಚಿಸಿದೆ. ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: School Teacher : ಶಾಲಾ ಕೊಠಡಿಯಲ್ಲೇ ಚಾಪೆ ಹಾಸಿ, ಮಕ್ಕಳಿಗೆ ಗಾಳಿ ಹಾಕಲು ಹೇಳಿ ಗಡದ್ದಾಗಿ ನಿದ್ದೆ ಹೊಡೆದ ಟೀಚರ್​!

ಕಲೀಮುಲ್ಲಾ ಖಾನ್ ಪತ್ನಿ ನಿಧನ

ಮೊಹಮ್ಮದ್ ಕಲೀಮುಲ್ಲಾ ನೂರಾನಿ ಮತ್ತು ರೇಷ್ಮಾ ಪರ್ವೀನ್ ಯಾವುದೇ ಒತ್ತಡವಿಲ್ಲದೆ ಮದುವೆಯಾಗಿದ್ದಾರೆ. ಆದಾಗ್ಯೂ ಮದುವೆ ಚರ್ಚೆಯು ಇಡೀ ಪ್ರದೇಶದಲ್ಲಿ ಹರಡಿದಿದೆ. 70 ವರ್ಷದ ವ್ಯಕ್ತಿ 25 ವರ್ಷದ ಮಹಿಳೆಯನ್ನು ಏಕೆ ಮದುವೆಯಾಗಿದ್ದಾನೆ ಎಂದು ಚರ್ಚಿಸುತ್ತಿದ್ದಾನೆ. ಅಂದ ಹಾಗೆ ಕಲೀಮುಲ್ಲಾನ ಪತ್ನಿ ನಿಧನ ಹೊಂದಿದ್ದಾರೆ. ಅಲ್ಲಿಂದ ಆತನಿಗೆ ಏಕಾಂಗಿತನ ಕಾಡಿತ್ತು. ಅದಕ್ಕೆ ಎಲ್ಲ ಕೆಲಸ ಮಾಡಬಲ್ಲವಳನ್ನೇ ಮದುವೆಯಾಗಿದ್ದಾರೆ.

Continue Reading

ಪ್ರಮುಖ ಸುದ್ದಿ

School Teacher : ಶಾಲಾ ಕೊಠಡಿಯಲ್ಲೇ ಚಾಪೆ ಹಾಸಿ, ಮಕ್ಕಳಿಗೆ ಗಾಳಿ ಹಾಕಲು ಹೇಳಿ ಗಡದ್ದಾಗಿ ನಿದ್ದೆ ಹೊಡೆದ ಟೀಚರ್​!

School Teacher :

VISTARANEWS.COM


on

School Teacher
Koo

ಅಲಿಗಢ: ಶಾಲೆಗಳಲ್ಲಿ ಮಕ್ಕಳ ಯೋಗಕ್ಷೇಮವನ್ನು ಶಿಕ್ಷಕರು (School Teacher) ನೋಡಿಕೊಳ್ಳಬೇಕು. ಆದರೆ, ಟೀಚರ್ ಮಕ್ಕಳನ್ನು ಹಾಗೆಯೇ ಬಿಟ್ಟು ಕೊಠಡಿಯಲ್ಲೇ ಗಡದ್ದಾಗಿ ನಿದ್ದೆ ಹೊಡೆದ ಘಟನೆಯೊಂದು ವೈರಲ್ ಆಗಿದೆ. ಅಷ್ಟಕ್ಕೂ ಮುಗಿಯದೇ ಅವರು ಪುಟಾಣಿ ಮಕ್ಕಳಿಗೆ ಗಾಳಿ ಬೀಸುವಂತೆ ಹೇಳಿದ್ದಾರೆ. ಉತ್ತರ ಪ್ರದೇಶದ ಅಲಿಗಢದ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಶಿಕ್ಷಕಿ ನೆಲದ ಮೇಲೆ ಚಾಪೆ ಹಾಸಿ ಮೇಲೆ ಆರಾಮವಾಗಿ ಮಲಗಿರುವುದನ್ನು ನೋಡಬಹುದು. ಮೂವರು ಹೆಣ್ಣು ಮಕ್ಕಳು ಅವರಿಗೆ ಬಟ್ಟೆಯಿಂದ ಗಾಳಿ ಬೀಸುತ್ತಿದ್ದಾರೆ.

ಉತ್ತರ ಪ್ರದೇಶದ ಅಲಿಗಢದ ಧನಿಪುರ ಪ್ರದೇಶದ ಗೋಕುಲ್ಪುರದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. 2 ನಿಮಿಷಗಳ ವೀಡಿಯೊದಲ್ಲಿ ಶಿಕ್ಷಕಿ ತರಗತಿಯ ನೆಲದ ಮೇಲೆ ಮಲಗಿರುವುದನ್ನು ಮತ್ತು ಹುಡುಗಿಯೊಬ್ಬಳು ಹ್ಯಾಂಡ್ ಹೆಲ್ಡ್ ಫ್ಯಾನ್ ಅನ್ನು ಅವಳತ್ತ ಬೀಸುತ್ತಿರುವುದನ್ನು ನೋಡಬಹುದು. ಇನ್ನೊಬ್ಬಳು ಹುಡುಗಿ ಅವಳಿಂದ ಫ್ಯಾನ್ ಅನ್ನು ತೆಗೆದುಕೊಂಡು ಅದೇ ರೀತಿ ಮಾಡುತ್ತಾಳೆ. ಇತರರು ಮಕ್ಕಳು ಶಿಕ್ಷಕರ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ.

ವರದಿಯ ಪ್ರಕಾರ, ಘಟನೆ ವೈರಲ್ ಆದ ಬಳಿಕ ಶಾಲಾ ಶಿಕ್ಷಕಿ ಡಿಂಪಲ್ ಬನ್ಸಾಲ್ ಅವರನ್ನು ಅಮಾನತುಗೊಳಿಸಲಾಗಿದೆ. ಈ ವೀಡಿಯೊ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ, ಪ್ರಾಥಮಿಕ ಶಿಕ್ಷಣ ಅಧಿಕಾರಿ ರಾಕೇಶ್ ಕುಮಾರ್ ಸಿಂಗ್ ಈ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ಕುಡಿದ ಅಮಲಿನಲ್ಲಿ ಕೆಲಸಕ್ಕೆ ಬರುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತ್ತು. ಬಿಯೋಹರಿ ಬ್ಲಾಕ್​​ನ ಶಂಕರ್​ಗರ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನೊಬ್ಬ ಕುಡಿದು ಹೋಗುತ್ತಿರುವುದನ್ನು ಗ್ರಾಮಸ್ಥರು ಶನಿವಾರ ಚಿತ್ರೀಕರಿಸಿದ್ದರು.

ಸೋಮವಾರ ತನಿಖಾ ವರದಿ ಬಂದ ನಂತರ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಿಕ್ಷಾ ಸಪ್ತಾಯ

ಕೇಂದ್ರ ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶಿಕ್ಷಣ ನೀತಿ 2020 ರ 4 ನೇ ವಾರ್ಷಿಕೋತ್ಸವವನ್ನು “ಶಿಕ್ಷಾ ಸಪ್ತಾಹ” ಎಂಬ ಒಂದು ವಾರದ ಅಭಿಯಾನದೊಂದಿಗೆ ಆಚರಿಸುತ್ತಿದೆ ಎಂದು ಭಾನುವಾರ ತಿಳಿಸಿದೆ. ಶಿಕ್ಷಣ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ದೇಶಾದ್ಯಂತ ಏಳು ಶಾಲೆಗಳು ವಿದ್ಯಾಂಜಲಿ ಮತ್ತು ಭೋಜನ ಉಪಕ್ರಮಗಳ ಮೂಲಕ ಶಿಕ್ಷಣದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗುತ್ತದೆ.

ಇದನ್ನೂ ಓದಿ: Paris Olympics 2024 : ಪುರಷರ 10 ಮೀಟರ್​ ಏರ್​ರೈಫಲ್​​ ಸ್ಪರ್ಧೆಯಲ್ಲಿ ಫೈನಲ್​ಗೇರಿದ ಅರ್ಜುನ್ ಬಬುಟಾ

ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸುತ್ತಿರುವ ಶಾಲಾ ಸ್ವಯಂಸೇವಕ ನಿರ್ವಹಣಾ ಕಾರ್ಯಕ್ರಮವಾದ ವಿದ್ಯಾಂಜಲಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 7, 2021 ರಂದು ಪ್ರಾರಂಭಿಸಿದ್ದರು. ದೇಶಾದ್ಯಂತ ಸಮುದಾಯ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಮತ್ತು ಖಾಸಗಿ ವಲಯದ ಪಾಲ್ಗೊಳ್ಳುವಿಕೆಯ ಮೂಲಕ ಶಾಲೆಗಳನ್ನು ಬಲಪಡಿಸುವ ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.

Continue Reading

ಪ್ರಮುಖ ಸುದ್ದಿ

Viral Video: ಚಲಿಸುತ್ತಿದ್ದ ರೈಲಿನ ಹೊರಗೆ ಜೋಷ್‌‌ನಿಂದ ನೇತಾಡಿದ ಯುವಕ; ಏನಾಯಿತು ನೋಡಿ

Viral Video: ಯುವಕನೊಬ್ಬ ರೈಲಿನ ಬಾಗಿಲು ಮುಚ್ಚಿದ್ದರೂ ಕೂಡ ಬಾಗಿಲಿನ ಹೊರಗೆ ನೇತಾಡುತ್ತಿದ್ದ. ಹಾಗೇ ತನ್ನ ಕೈಯನ್ನು ಸ್ವಲ್ಪ ಹೊರಗೆ ಚಾಚಿದ್ದಾನೆ. ಆ ವೇಳೆ ಆತ ಇದ್ದಕ್ಕಿದ್ದಂತೆ ಅಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಅವನು ಚಲಿಸುವ ರೈಲಿನಿಂದ ಕೆಳಗೆ ಬಿದ್ದಿದ್ದಾನೆ. ಇದನ್ನು ನೋಡಿದ ಇತರರು ಭಯಭೀತರಾದರು. ಈ ಭಯಾನಕ ಅಪಘಾತವನ್ನು ಮತ್ತೊಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ

VISTARANEWS.COM


on

Viral Video
Koo


ಮುಂಬೈ: ಯುವಕರಿಗೆ ಚಲಿಸುತ್ತಿದ್ದ ವಾಹನಗಳ ಹಿಂದೆ ಓಡಿ ಅದನ್ನು ಹತ್ತುವ ಶೋಕಿ. ನಾವು ಹೆಚ್ಚಾಗಿ ಈ ದೃಶ್ಯವನ್ನು ಬಸ್ಸು, ರೈಲುಗಳನ್ನು ಹತ್ತುವಾಗ ಯುವಕರ ಈ ಸರ್ಕಸ್ ಅನ್ನು ಕಾಣುತ್ತೇವೆ. ಹಾಗೇ ಬಸ್ಸು ಅಥವಾ ರೈಲಿನ ಬಾಗಿಲಿನಲ್ಲಿ ನಿಂತು ನೇತಾಡುತ್ತಾ ಸಾಗುತ್ತಾರೆ. ಆದರೆ ಇದರಿಂದ ಅನೇಕರು ಅಪಾಯಕ್ಕೆ ಒಳಗಾಗಿದ್ದಾರೆ. ಇದನ್ನು ತಿಳಿದರೂ ಕೂಡ ಇನ್ನೂ ನಮ್ಮ ಯುವಕರು ಇಂತಹ ಸರ್ಕಸ್ ಮಾಡುವುದನ್ನು ನಿಲ್ಲಿಸಿಲ್ಲ. ಇದೀಗ ಚಲಿಸುತ್ತಿದ್ದ ರೈಲಿನಿಂದ ಹೊರಗೆ ನೇತಾಡಿದ ಯುವಕನೊಬ್ಬ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಭಯಾನಕ ಘಟನೆ ಮುಂಬೈನಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಯುವಕನೊಬ್ಬ ರೈಲಿನ ಬಾಗಿಲು ಮುಚ್ಚಿದ್ದರೂ ಕೂಡ ಬಾಗಿಲಿನ ಹೊರಗೆ ನೇತಾಡುತ್ತಿದ್ದ. ಹಾಗೇ ತನ್ನ ಕೈಯನ್ನು ಸ್ವಲ್ಪ ಹೊರಗೆ ಚಾಚಿದ್ದಾನೆ. ಆ ವೇಳೆ ಆತ ಇದ್ದಕ್ಕಿದ್ದಂತೆ ಅಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಅವನು ಚಲಿಸುವ ರೈಲಿನಿಂದ ಕೆಳಗೆ ಬಿದ್ದಿದ್ದಾನೆ. ಇದನ್ನು ನೋಡಿದ ಇತರರು ಭಯಭೀತರಾದರು. ಈ ಭಯಾನಕ ಅಪಘಾತವನ್ನು ಮತ್ತೊಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆ ವ್ಯಕ್ತಿಯ ಸ್ಥಿತಿ ಹೇಗಿದೆ ಎಂಬುದು ತಿಳಿದುಬಂದಿಲ್ಲ. ಹಾಗೇ ಘಟನೆಯ ಸಮಯ ಮತ್ತು ಸ್ಥಳ ತಿಳಿದುಬಂದಿಲ್ಲ.

ಆದರೆ ಈ ಘಟನೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಷಯವನ್ನು ಕಳುಹಿಸಲಾಗಿದೆ. ವಿಲಕ್ಷಣ ಅಪಘಾತದಿಂದ ಆ ಯುವಕ ಬದುಕುಳಿದಿದ್ದಾನೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಹಿಂದೆ ಕೂಡ ಮುಂಬೈನ ಉಪನಗರ ಸ್ಥಳೀಯ ರೈಲು ಚಲಿಸುವಾಗ ಅಪಾಯಕಾರಿ ಸ್ಟಂಟ್ ಮಾಡಿದ ಆರೋಪದ ಮೇಲೆ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್‌) ಪತ್ತೆ ಹಚ್ಚಿದ್ದರು. ಆತ ಫರ್ಹತ್ ಅಜಮ್ ಶೇಖ್ ಎಂಬುದಾಗಿ ತಿಳಿದುಬಂದಿದ್ದು, ಈ ಯುವಕ ಇಂತಹ ಸ್ಟಂಟ್‌ಗಳನ್ನು ಮಾಡಿ ಅಪಾಯಕ್ಕೆ ಒಳಗಾಗಿದ್ದಕ್ಕೆ ಗಂಭೀರ ಉದಾಹರಣೆಯಾಗಿದ್ದಾನೆ.

ಇದನ್ನೂ ಓದಿ: ಊಟದ ಪಾರ್ಸೆಲ್‌‌ನಲ್ಲಿ ಉಪ್ಪಿನಕಾಯಿ ಹಾಕಲು ಮರೆತ ಹೋಟೆಲ್‌‌; 35,000 ರೂ. ದಂಡ ಹಾಕಿದ ಕೋರ್ಟ್‌!

ಈತ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿ ಒಂದು ಕೈ ಮತ್ತು ಕಾಲನ್ನು ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂತಹ ಕಾನೂನುಬಾಹಿರ ಕೃತ್ಯಗಳನ್ನು ಮಾಡಿದ ಶೇಖ್ ಈಗ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಆಗದೆ ತೀವ್ರ ತೊಂದರೆಯನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಕೇಂದ್ರ ರೈಲ್ವೆ ಇಂತಹ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡದಂತೆ ಕಠಿಣ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.

Continue Reading
Advertisement
Rajendra Nagar Tragedy
ವೈರಲ್ ನ್ಯೂಸ್3 mins ago

Rajendra Nagar Tragedy: ದೆಹಲಿ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಅವಾಂತರ; ದುರಂತದಿಂದ ಪಾರಾದವರ Video ಇಲ್ಲಿದೆ

Health Tips
ಆರೋಗ್ಯ4 mins ago

Health Tips: ಗ್ಯಾಸ್ಟ್ರಿಕ್‌, ಅಜೀರ್ಣ ಸಮಸ್ಯೆಗೆ ನಿಮ್ಮ ಮನೆಯಲ್ಲೇ ಇದೆ ಪರಿಣಾಮಕಾರಿ ಮದ್ದು!

Road Accident jigani anekal
ಬೆಂಗಳೂರು ಗ್ರಾಮಾಂತರ16 mins ago

Road Accident: ಕುಡಿದ ಮತ್ತಿನಲ್ಲಿ ಕಾರು ಹರಿಸಿದ ಚಾಲಕ, ಒಬ್ಬನ ಸಾವು, ಇಬ್ಬರಿಗೆ ಗಾಯ

India Pakistan War
ದೇಶ27 mins ago

India Pakistan War: ಭಾರತಕ್ಕೆ ನುಗ್ಗಿದ ಪಾಕ್‌ನ 600 ಕಮಾಂಡೋಗಳು; ನಡೆಯುತ್ತಾ ಮತ್ತೊಂದು ಯುದ್ಧ?

ITR Filing
ಮನಿ-ಗೈಡ್34 mins ago

ITR Filing: ಐಟಿಆರ್ ಸಲ್ಲಿಕೆ; ಜುಲೈ 31ರ ಗಡುವು ತಪ್ಪಿಸಿಕೊಂಡರೆ ಎಷ್ಟು ದಂಡ?

peenya flyover
ಪ್ರಮುಖ ಸುದ್ದಿ38 mins ago

Peenya flyover: ಇಂದಿನಿಂದ ಪೀಣ್ಯ ಮೇಲ್ಸೇತುವೆ ಎಲ್ಲ ವಾಹನಗಳಿಗೆ ಮುಕ್ತ

bbmp lorry road accident
ಬೆಂಗಳೂರು60 mins ago

Road Accident: ಬೆಂಗಳೂರಿನಲ್ಲಿ ಕಸದ ಲಾರಿಯ ಆರ್ಭಟಕ್ಕೆ ಇಬ್ಬರು ಟೆಕ್ಕಿಗಳು ಬಲಿ

Lakshadweep Tour
Latest1 hour ago

Lakshadweep Tour: ಲಕ್ಷದ್ವೀಪದಲ್ಲಿ ಪ್ರವಾಸಿಗರನ್ನು ಸೆಳೆಯುವ ಪಂಚರತ್ನಗಳಿವು

Monsoon Healthy Cooking Tips
ಆರೋಗ್ಯ1 hour ago

Monsoon Healthy Cooking Tips: ಮಳೆಗಾಲದಲ್ಲಿ ಸೊಪ್ಪಿನ ಅಡುಗೆ ಮಾಡುವ ಮುನ್ನ ಈ ಎಚ್ಚರಿಕೆಗಳನ್ನು ವಹಿಸಿ

Vastu Tips
ಧಾರ್ಮಿಕ2 hours ago

Vastu Tips: ಈ ವಾಸ್ತು ನಿಯಮ ಪಾಲಿಸಿ; ಹಣಕಾಸಿನ ಸಮಸ್ಯೆಯಿಂದ ಪಾರಾಗಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ14 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ16 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ18 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ19 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ3 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ3 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌