ಕಿಚ್ಚ ಸುದೀಪ್‌ಗೆ ಈ ನಟಿ ಜೊತೆ ನಟಿಸಬೇಕೆಂಬುದು ಬಹುದಿನಗಳ ಕನಸಂತೆ, ಯಾರ ಆ ನಟಿ? - ವಿಸ್ತಾರ ನ್ಯೂಸ್

ಬಾಲಿವುಡ್

ಕಿಚ್ಚನಿಗೆ ಈ ನಟಿ ಜೊತೆ ನಟಿಸಲು ಆಸೆಯಂತೆ, ಆದರೆ, ಆಕೆಯ ಗಂಡ ಅವಕಾಶ ಕೊಡ್ತಾರಾ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಈಗ ದೇಶದ ಜನಪ್ರಿಯ ನಟರಲ್ಲಿ ಒಬ್ಬರು. ಅವರಿಗೆ ಬಾಲಿವುಡ್‌ ಅದೊಬ್ಬ ಪ್ರತಿಭಾವಂತ ನಟಿಯ ಜತೆ ನಟಿಸಲು ಆಸೆಯಂತೆ. ಆದರೆ, ಅವರ ಗಂಡ ಅವಕಾಶ ಕೊಡ್ತಾರಾ ಇಲ್ವಾ ಅನ್ನೋದೇ ಪ್ರಶ್ನೆ.

VISTARANEWS.COM


on

sudeep
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಖ್ಯಾತ ನಟ ಅಜಯ್‌ ದೇವಗನ್‌ ಮತ್ತು ಕಿಚ್ಚ ಸುದೀಪ್‌ ಮಧ್ಯೆ ಕೆಲವು ವಾರದ ಹಿಂದೆ ಭಾಷಾ ವಿಚಾರವಾಗಿ ಸ್ಟಾರ್‌ ವಾರ್‌ ನಡೆದಿತ್ತು. ಕಿಚ್ಚ ಸುದೀಪ್‌ ಅವರು ಹಿಂದಿಯೊಂದೇ ರಾಷ್ಟ್ರ ಭಾಷೆ ಅಲ್ಲ ಅಂತ ಹೇಳಿದಾಗ ಅಜಯ್‌ ದೇವಗನ್‌ ತಿರುಗೇಟು ನೀಡಿದ್ದರು. ಹಿಂದಿ ರಾಷ್ಟ್ರ ಭಾಷೆಯಲ್ಲದೆ ಹೋದರೆ ಸುದೀಪ್‌ ಅವರೇಕೆ ಸಿನಿಮಾಗಳನ್ನು ಹಿಂದಿ ಭಾಷೆಯಲ್ಲೂ ಮಾಡ್ತಾರೆ ಅಂತ ಕೇಳಿದ್ದರು.

ಈ ವಿಚಾರ ಈಗ ತಣ್ಣದಾಗಿದೆ. ಈ ನಡುವೆ ಕಿಚ್ಚ ಸುದೀಪ್‌ ಸಂದರ್ಶನವೊಂದರಲ್ಲಿ ಹೊಸ ಆಸೆಯನ್ನು ತೋಡಿಕೊಂಡಿದ್ದಾರೆ. ಅದೇನೆಂದರೆ ತಮ್ಮ ಕನಸಿನ ಆ ನಟಿಯ ಜತೆ ಒಂದು ಚಿತ್ರದಲ್ಲಿ ನಡಿಸಬೇಕು ಎನ್ನುವುದು. ಅವರ ಜತೆ ನಟಿಸಬೇಕು ಎನ್ನುವುದು ನನ್ನ ಬಹುಕಾಲದ ಕನಸು. ಅದಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ಹಾಗಿದ್ದರೆ ಕಿಚ್ಚ ನಟಿಸಬೇಕು ಎಂದು ಆಸೆಪಟ್ಟಿರುವ ಆ ನಟಿ ಯಾರು ಅಂತೀರಾ ಮುಂದೆ ಓದಿ..

ಇದನ್ನು ಓದಿ| ಇನ್ನೊಮ್ಮೆ ಕಿಚ್ಚ ಸುದೀಪ್‌ V/S ಅಜಯ್‌ ದೇವಗನ್‌: ಜುಲೈನಲ್ಲಿ ʼವಿಕ್ರಾಂತ್‌ ರೋಣಾʼ, ʼಥ್ಯಾಂಕ್‌ ಗಾಡ್‌ʼ ಸ್ಟಾರ್‌ ವಾರ್..!

ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಕಿಚ್ಚ ಸುದೀಪ್‌ ತಮ್ಮ ನೆಚ್ಚಿನ ಬಾಲಿವುಡ್‌ನ ಸ್ಟಾರ್‌ ನಟಿ ಕಾಜೋಲ್‌ ಜೊತೆ ಅಭಿನಯಿಸುವ ಕನಸಿತ್ತು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಜಯ್‌ ದೇವಗನ್‌ ಪತ್ನಿಯಾದ ಕಾಜೋಲ್‌ ಜೊತೆ ನಟಿಸಬೇಕು ಎಂಬ ಕನಸು ತುಂಬಾ ವರ್ಷಗಳಿಂದ ಇತ್ತು. ಆದರೆ, ಈಗ ಈ ವಿವಾದದಿಂದಾಗಿ ಆ ಕನಸು ನನಸಾಗುತ್ತಾ ಎಂಬ ಅನುಮಾನ ಮೂಡಿದೆ ಎಂದು ಹೇಳಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಭಾಷಾ ವಿಚಾರ ಈ ಮಟ್ಟಿಗೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತದೆ ಎಂಬ ಸಣ್ಣ ಸುಳಿವೂ ನನಗಿರಲಿಲ್ಲ. ಆದರೆ, ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತಾಯಿತು. ಇದರಿಂದಾಗಿ ಕಾಜೋಲ್‌ ಜೊತೆ ಅಭಿನಯಿಸುವ ಅವಕಾಶ ಸಿಗುತ್ತದೋ‌, ಇಲ್ಲವೋ ಆದರೆ ನಾನು ಮಾತ್ರ ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ. ಅವರ ಜೊತೆ ಕೆಲಸ ಮಾಡುವ ಅವಕಾಶಕ್ಕಾಗಿ ಕಾಯುತ್ತೇನೆ. ಈಗಲೂ ಅವರ ಜೊತೆ ನಟಿಸಲು ಸಿದ್ದನಿದ್ದೇನೆ ಎಂದು ತಮ್ಮ ಮನದಾಳದ ಆಸೆಯನ್ನು ಹೇಳಿಕೊಂಡಿದ್ದಾರೆ.

ಇದನ್ನು ಓದಿ| ಭಾಷೆಗಳ ಕುರಿತು ಪ್ರಧಾನಿ ಮೋದಿ ಮಾತು ಮೆಚ್ಚು ಎಂದ ಕಿಚ್ಚ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Suniel Shetty: ಅಪ್ಪ ವೇಟರ್‌ ಆಗಿ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ಗೆ ಈಗ ಸುನೀಲ್‌ ಶೆಟ್ಟಿ ಒಡೆಯ; ಇದಪ್ಪ Success ಅಂದ್ರು ಜನ!

Suniel Shetty: ಸುನೀಲ್‌ ಶೆಟ್ಟಿ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ. ಅವರ ತಂದೆ ವೀರಪ್ಪ ಶೆಟ್ಟಿ ಅವರು ಮುಂಬೈಗೆ ಬಂದು, ಕಷ್ಟಪಟ್ಟು ದುಡಿದಿದ್ದನ್ನು ಅವರು ಸ್ಮರಿಸಿದ್ದಾರೆ. ಹಾಗೆಯೇ, ತಮ್ಮ ತಂದೆ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ಅನ್ನೂ ಖರೀದಿಸಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

VISTARANEWS.COM


on

Suniel Shetty
Koo

ಮುಂಬೈ: ಕಠಿಣ ಪರಿಶ್ರಮ, ಛಲ, ಜತೆಗೊಂದಿಷ್ಟು ಚಾಣಾಕ್ಷತನ ಇದ್ದರೆ ಎಂತಹವರು ಬೇಕಾದರೂ ಯಶಸ್ಸನ್ನು ಸಾಧಿಸುತ್ತಾರೆ. ಇದೇ ಕಾರಣಕ್ಕೆ, ಗುಡಿಸಲಿನಲ್ಲಿ ಹುಟ್ಟಿದವರು ಅರಮನೆಯಲ್ಲಿ ವಾಸಿಸುತ್ತಾರೆ, ಯಾವ ಹೋಟೆಲ್‌ನಲ್ಲಿ ವಾಸಿಸುತ್ತಿದ್ದರೋ ಅದೇ ಹೋಟೆಲ್‌ನ ಮಾಲೀಕರಾಗಿದ್ದಾರೆ, ಬಡತನದಲ್ಲಿ ಹುಟ್ಟಿ ಐಎಎಸ್‌ ಅಧಿಕಾರಿಯಾದವರು ನಮ್ಮ ಕಣ್ಣೆದುರು ಇದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಬಾಲಿವುಡ್‌ ನಟ, ಕರ್ನಾಟಕ ಮೂಲದ ಸುನೀಲ್‌ ಶೆಟ್ಟಿ (Suniel Shetty) ಅವರು ಮುಂಬೈನಲ್ಲಿ ತಮ್ಮ ತಂದೆ ವೀರಪ್ಪ ಶೆಟ್ಟಿ (Veerappa Shetty) ಅವರು ವೇಟರ್‌ ಆಗಿ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ಗೆ ಮಾಲೀಕರಾಗಿದ್ದಾರೆ. ಇದಕ್ಕೆ ಜನ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿನ ಬಡತನ, ಹೆಚ್ಚಿದ ಜವಾಬ್ದಾರಿಗಳಿಂದಾಗಿ ವೀರಪ್ಪ ಶೆಟ್ಟಿ ಅವರು ಮುಂಬೈಗೆ ತೆರಳಿದ್ದರು. ಮುಂಬೈನ ಖಂಡಾಲದಲ್ಲಿರುವ ರೆಸ್ಟೋರೆಂಟ್‌ ಒಂದರಲ್ಲಿ ಅವರು ವೇಟರ್‌ ಆಗಿ ಸೇರಿಕೊಂಡು, ಬಳಿಕ ಅದರಲ್ಲಿಯೇ ಮ್ಯಾನೇಜರ್‌ ಆಗಿದ್ದರು. ಈಗ ರೆಸ್ಟೋರೆಂಟ್‌ನ ಸೇರಿ ಮೂರು ಕಟ್ಟಡಗಳು ಇರುವ ಜಾಗವು ಫಾರ್ಮ್‌ಹೌಸ್‌ ಆಗಿ ಬದಲಾಗಿದ್ದು, ಮೂರೂ ಕಟ್ಟಡಗಳಿಗೆ ಸುನೀಲ್‌ ಶೆಟ್ಟಿ ಅವರೇ ಮಾಲೀಕರಾಗಿದ್ದಾರೆ. ಸುಮಾರು 83 ಕೋಟಿ ರೂ. ಕೊಟ್ಟು ಫಾರ್ಮ್‌ಹೌಸ್‌ಅನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.

ಮೂರು ಕಟ್ಟಡಗಳ ಖರೀದಿ ಕುರಿತು ಸುನೀಲ್‌ ಶೆಟ್ಟಿ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. “ನನ್ನ ತಂದೆ ಬಡವರಾಗಿದ್ದರು. ಬಾಲ್ಯದಲ್ಲಿಯೇ ಅವರು ತಂದೆಯನ್ನು ಕಳೆದುಕೊಂಡಿದ್ದರು. 9 ವರ್ಷದವರಿದ್ದಾಗಲೇ ಅವರು ಮಂಗಳೂರಿನಿಂದ ಮುಂಬೈಗೆ ಬಂದರು. ಇಲ್ಲಿ ದಕ್ಷಿಣ ಭಾರತದ ರೆಸ್ಟೋರೆಂಟ್‌ನಲ್ಲಿ ಟೇಬಲ್‌ ಕ್ಲೀನ್‌ ಮಾಡುವುದು, ಊಟ-ತಿಂಡಿ ಸರಬರಾಜು ಮಾಡುವುದು ಅವರ ಕೆಲಸವಾಗಿತ್ತು. ಬಳಿಕ ಅವರು ಮ್ಯಾನೇಜರ್‌ ಕೂಡ ಆದರು. ಈಗ ರೆಸ್ಟೋರೆಂಟ್‌ ಸೇರಿ ಮೂರು ಕಟ್ಟಡಗಳನ್ನು ನಾನು ಖರೀದಿಸಿದ್ದೇನೆ” ಎಂಬುದಾಗಿ ಬಾಲಿವುಡ್‌ ನಟ ಹೇಳಿದ್ದಾರೆ. ಸುನೀಲ್‌ ಶೆಟ್ಟಿ ಅವರ ತಂದೆ 2017ರಲ್ಲಿ ನಿಧನರಾದರು.

“ನನ್ನ ತಂದೆಯು ತುಂಬ ಸಂಭಾವಿತರಾಗಿದ್ದರು. ಅವರು ಮಕ್ಕಳಿಗೂ ಏನೂ ಎನ್ನುತ್ತಿರಲಿಲ್ಲ. ಅವರು ಮ್ಯಾನೇಜರ್‌ ಆದಾಗಲೂ ಸಿಬ್ಬಂದಿಗೆ ಒಂದು ಮಾತೂ ಅನ್ನುತ್ತಿರಲಿಲ್ಲ. ಆದರೆ, ನಮ್ಮ ಬಗ್ಗೆ, ಅವರ ಸಿಬ್ಬಂದಿ ಬಗ್ಗೆ ಯಾರಾದರೂ ಒಂದು ಮಾತು ಆಡಿದರೂ ಅವರು ಸಹಿಸಿಕೊಳ್ಳುತ್ತಿರಲಿಲ್ಲ. ಎಲ್ಲವನ್ನೂ ಬಿಟ್ಟು ಊರಿಗೆ ಹೋಗುತ್ತೇನೆ, ಆದರೆ ಅನ್ಯಾಯವನ್ನು ಸಹಿಸಿಕೊಳ್ಳುವುದಿಲ್ಲ ಎಂಬುದಾಗಿ ಅವರು ಹೇಳುತ್ತಿದ್ದರು” ಎಂದು ಸುನೀಲ್‌ ಶೆಟ್ಟಿ ಸ್ಮರಿಸಿದ್ದಾರೆ. ಸುನೀಲ್‌ ಶೆಟ್ಟಿ ಅವರು 1992ರಲ್ಲಿ ಬಾಲಿವುಡ್‌ ಪ್ರವೇಶಿಸಿದರು. ಧಡಕನ್‌, ಮೊಹ್ರಾ, ಬಾರ್ಡರ್‌, ಹೇರಾ ಫೇರಿ, ದಿಲ್ವಾಲೆ ಸೇರಿ ಹಲವು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಅವರು ಸುದೀಪ್‌ ಅಭಿನಯದ ಪೈಲ್ವಾನ್‌ ಎಂಬ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ.

ಇದನ್ನೂ ಓದಿ: Athiya Shetty: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆ.ಎಲ್​. ರಾಹುಲ್ ದಂಪತಿ; ಸುಳಿವು ಕೊಟ್ಟ ಸುನೀಲ್‌ ಶೆಟ್ಟಿ!

Continue Reading

ಸಿನಿಮಾ

Hamare Baarah: ವಿವಾದಾತ್ಮಕ ಚಿತ್ರ ‘ಹಮಾರೆ ಬಾರಾ’ ಬಿಡುಗಡೆಗೆ ಅನುಮತಿ ನೀಡಿದ ಬಾಂಬೆ ಹೈಕೋರ್ಟ್

Hamare Baarah: ಅನ್ನು ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಹಮಾರೆ ಬಾರಾ’ ಈ ಚಿತ್ರದ ಮೊದಲ ಟ್ರೇಲರ್ ಬಿಡುಗಡೆಯಾದಾಗ ವಿವಾದವನ್ನು ಹುಟ್ಟುಹಾಕಿತ್ತು. ಈ ಬಗ್ಗೆ ಅಜರ್ ಎಂಬುವವರು ಬಾಂಬೆ ಹೈಕೋರ್ಟ್ ನಲ್ಲಿ ಚಿತ್ರದ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಆಕ್ಷೇಪಾರ್ಹ ದೃಶ್ಯಗಳೊಂದಿಗೆ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಕ್ಕಾಗಿ ಚಿತ್ರ ನಿರ್ಮಾಪಕರಿಗೆ 5 ಲಕ್ಷ ದಂಡ ವಿಧಿಸಿ ಅರ್ಜಿದಾರರು ತಿಳಿಸಿದ ಚಾರಿಟಿಗೆ ಮೊತ್ತವನ್ನು ದೇಣಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ಆದರೆ ಇದೀಗ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲು ಚಿತ್ರ ನಿರ್ಮಾಪಕರು ಒಪ್ಪಿಕೊಂಡ ಹಿನ್ನಲೆಯಲ್ಲಿ ಬಾಂಬೆ ಹೈಕೋರ್ಟ್ ವಿವಾದಾತ್ಮಕ ಚಿತ್ರ ‘ಹಮಾರೆ ಬಾರಾ’ ಬಿಡುಗಡೆಗೆ ಅನುಮತಿ ನೀಡಿದೆ.

VISTARANEWS.COM


on

Hamare Baarah
Koo

ಮುಂಬೈ : ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲು ಚಿತ್ರ ನಿರ್ಮಾಪಕರು ಒಪ್ಪಿಕೊಂಡ ಹಿನ್ನಲೆಯಲ್ಲಿ ಬಾಂಬೆ ಹೈಕೋರ್ಟ್ ಬುಧವಾರ ವಿವಾದಾತ್ಮಕ ಚಿತ್ರ ‘ಹಮಾರೆ ಬಾರಾ’ (Hamare Baarah) ಬಿಡುಗಡೆಗೆ ಅನುಮತಿ ನೀಡಿದೆ. ಕಮಲ್ ಚಂದ್ರಾ ನಿರ್ದೇಶನದ ‘ಹಮಾರೆ ಬಾರಾ’ ಚಿತ್ರ ಮುಸ್ಲಿಂ ಮಹಿಳೆಯರ ಕುರಿತಾಗಿದೆ. ಇದರಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯದ ಕಥೆಯನ್ನು ಬಿಂಬಿಸಲಾಗಿದೆ. ಹಾಗಾಗಿ ಈ ಚಿತ್ರವನ್ನು ಬಿಡುಗಡೆ ಮಾಡದಂತೆ ಬಾಂಬೆ ಹೈಕೋರ್ಟ್ ತಡೆ ಹೇರಿತ್ತು.

ಆದರೆ ಚಿತ್ರದಲ್ಲಿರುವ ಆಕ್ಷೇಪಾರ್ಹ ಭಾಗಗಳನ್ನು ಅಳಿಸುವುದರ ಮೂಲಕ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ಮತ್ತು ಕುರಾನ್ ನ ಬೋಧನೆಗಳನ್ನು ತಿರುಚುವುದಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಮೂರ್ತಿ ಬಿಪಿ ಕೊಲಬಾ ವಾಲಾ ಮತ್ತು ನ್ಯಾಯಮೂರ್ತಿ ಫಿರ್ದೋಶ್ ಪೂನಿವಾಲಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಒಂದು ದಿನದ ನಂತರ ಚಲನಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ.

ಅಣ್ಣು ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ಮೊದಲ ಟ್ರೇಲರ್ ಬಿಡುಗಡೆಯಾದಾಗ ವಿವಾದವನ್ನು ಹುಟ್ಟುಹಾಕಿತ್ತು. ಈ ಬಗ್ಗೆ ಅಜರ್ ಎಂಬುವವರು ಬಾಂಬೆ ಹೈಕೋರ್ಟ್ ನಲ್ಲಿ ಚಿತ್ರದ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಆಕ್ಷೇಪಾರ್ಹ ದೃಶ್ಯಗಳೊಂದಿಗೆ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಕ್ಕಾಗಿ ಚಿತ್ರ ನಿರ್ಮಾಪಕರಿಗೆ 5 ಲಕ್ಷ ದಂಡ ವಿಧಿಸಿ ಅರ್ಜಿದಾರರು ತಿಳಿಸಿದ ಚಾರಿಟಿಗೆ ಮೊತ್ತವನ್ನು ದೇಣಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ಆದರೆ ಇದೀಗ ಅಂತಹ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕಿದೆ ಎಂಬುದಾಗಿ ಪೀಠ ತಿಳಿಸಿದೆ.

Hamare Baarah

ಹಮಾರೆ ಬಾರಾ ಚಿತ್ರವನ್ನು ಜೂನ್ 7ರಂದು ಮತ್ತು ನಂತರ ಜೂನ್ 14ರಂದು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿತ್ತು. ಆದರೆ ಕೋರ್ಟ್ ನಿಂದ ತಡೆ ಬಂದ ಹಿನ್ನಲೆಯಲ್ಲಿ ಚಿತ್ರ ಬಿಡುಗಡೆಯಾಗಲಿಲ್ಲ. ಇದೀಗ ಕೋರ್ಟ್ ಚಿತ್ರ ಬಿಡುಗಡೆಗೆ ಅನುಮತಿ ನೀಡಿದ್ದ ಕಾರಣ ಇನ್ನೂ ಚಿತ್ರ ಬಿಡುಗಡೆಯ ದಿನಾಂಕವನ್ನು ಸೂಚಿಸಬೇಕಿದೆ. ಸಿಬಿಎಫ್ ಸಿ ಈಗಾಗಲೇ ಈ ಚಿತ್ರದ ಕೆಲವು ಸಂಭಾಷಣೆಗಳನ್ನು ಕಟ್ ಮಾಡಿಸಿ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ.

ಈ ಚಿತ್ರದಲ್ಲಿ ಬಿರೇಂದರ್ ಭಗತ್, ರವಿ ಎಸ್ ಗುಪ್ತಾ, ಸಂಜಯ್ ನಾಗ್ಪಾಲ್ ಮತ್ತು ಶೀಯೋ ಬಾಲಕ್ ಸಿಂಗ್ ಜಂಟಿಯಾಗಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅನ್ನು ಕಪೂರ್, ಮನೋಜ್ ಜೋಶಿ ಮತ್ತು ಪರಿತೋಷ್ ತ್ರಿಪಾಠಿ ನಟಿಸಿದ್ದಾರೆ.

ಇದನ್ನೂ ಓದಿ: Electric Shock: ಒಣ ಹಾಕಿದ್ದ ಟವೆಲ್‌ನಲ್ಲಿ ವಿದ್ಯುತ್; ತಂದೆ, ತಾಯಿ, ಮಗ ಸಾವು

ಈ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಕರ್ನಾಟಕ ಸರ್ಕಾರ ಈಗಾಗಲೇ ನಿಷೇಧ ಹೇರಿತ್ತು. ಈ ಸಿನಿಮಾದ ಪ್ರದರ್ಶನದಿಂದ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಆಗುತ್ತದೆ ಎಂದು ಸರ್ಕಾರ ಈ ಸಿನಿಮಾವನ್ನು ಬ್ಯಾನ್ ಮಾಡಿದೆ ಎನ್ನಲಾಗಿದೆ.

Continue Reading

ಬಾಲಿವುಡ್

Sarfira Trailer: `ಸರ್ಫಿರಾ’ ಟ್ರೈಲರ್‌ ಔಟ್‌; ಕನ್ನಡಿಗ ಕ್ಯಾಪ್ಟನ್​ ಗೋಪಿನಾಥ್‌ಗೆ ಅಕ್ಷಯ್‌ ಕುಮಾರ್‌ ಧನ್ಯವಾದ!

Sarfira Trailer: ಆಸ್ಕರ್ ರೇಸ್‌ಗೂ ಇಳಿದಿದ್ದ ಈ ಚಿತ್ರ ಹಲವು ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಬಾಚಿಕೊಂಡಿತ್ತು. ಸೂರ್ಯ ಅತ್ಯುತ್ತಮ ನಟ, ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಅಲ್ಲದೆ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕೆ ಜಿ.ವಿ.ಪ್ರಕಾಶ್‌ ಕುಮಾರ್‌ಗೆ ನ್ಯಾಶನಲ್‌ ಅವಾರ್ಡ್‌ ಬಂದಿತ್ತು. ಅತ್ಯುತ್ತಮ ಚಿತ್ರವಾಗಿಯೂ ಆಯ್ಕೆಯಾಗಿತ್ತು. ಇದೀಗ ಅಕ್ಷಯ್‌ ಕುಮಾರ್‌ ಅಭಿನಯದ ‘ಸರ್ಫಿರಾ’ ಸಿನಿಮಾ (Sarfira Movie) ಜುಲೈ 12ರಂದು ಬಿಡುಗಡೆ ಆಗಲಿದೆ.

VISTARANEWS.COM


on

Sarfira Trailer Akshay Kumar Sudha Kongara
Koo

ಬೆಂಗಳೂರು: ಅಕ್ಷಯ್ ಕುಮಾರ್ (Akshay Kumar) ಅಭಿನಯದ `ಸರ್ಫಿರಾ’ ಚಿತ್ರದ ಟ್ರೈಲರ್ ಮಂಗಳವಾರ ಮಧ್ಯಾಹ್ನ ಬಿಡುಗಡೆಯಾಗಿದೆ. ಕನ್ನಡಿಗ ಕ್ಯಾಪ್ಟನ್​ ಜಿ.ಆರ್​. ಗೋಪಿನಾಥ್​ ಅವರ ಜೀವನ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಆ ವಿವರಗಳನ್ನು ಇಟ್ಟುಕೊಂಡು ತಮಿಳಿನಲ್ಲಿ ‘ಸೂರರೈ ಪೋಟ್ರು’ ಸಿನಿಮಾ (Sarfira Trailer) ಮಾಡಲಾಗಿತ್ತು. ಒಟಿಟಿಯಲ್ಲಿ ತೆರೆಕಂಡ ಆ ಸಿನಿಮಾದಲ್ಲಿ ಸೂರ್ಯ ಮುಖ್ಯ ಪಾತ್ರ ಮಾಡಿದ್ದರು. ಆ ಸಿನಿಮಾ ‘ಸರ್ಫಿರಾ’ ಶೀರ್ಷಿಕೆಯಲ್ಲಿ ಈಗ ಹಿಂದಿಗೆ ರಿಮೇಕ್​ ಆಗಿದೆ. ಇದರಲ್ಲಿ ಕ್ಯಾಪ್ಟನ್​ ಜಿ.ಆರ್​. ಗೋಪಿನಾಥ್​ ಅವರ ಪಾತ್ರಕ್ಕೆ ಅಕ್ಷಯ್​ ಕುಮಾರ್​ ಬಣ್ಣ ಹಚ್ಚಿದ್ದಾರೆ.

ಸುಧಾ ಕೊಂಗರ ತಮಿಳಿನಲ್ಲಿ ನಿರ್ದೇಶನ ಮಾಡಿದ್ದರು. ಈ ಸಿನಿಮಾಗೆ ಸುಧಾ ಕೊಂಗರ ಅವರೇ ನಿರ್ದೇಶನ ಮಾಡಿದ್ದಾರೆ. ಸೂರರೈ ಪೋಟ್ರುʼ ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರಿಂದಲೂ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಆಸ್ಕರ್ ರೇಸ್‌ಗೂ ಇಳಿದಿದ್ದ ಈ ಚಿತ್ರ ಹಲವು ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಬಾಚಿಕೊಂಡಿತ್ತು. ಸೂರ್ಯ ಅತ್ಯುತ್ತಮ ನಟ, ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಅಲ್ಲದೆ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕೆ ಜಿ.ವಿ.ಪ್ರಕಾಶ್‌ ಕುಮಾರ್‌ಗೆ ನ್ಯಾಶನಲ್‌ ಅವಾರ್ಡ್‌ ಬಂದಿತ್ತು. ಅತ್ಯುತ್ತಮ ಚಿತ್ರವಾಗಿಯೂ ಆಯ್ಕೆಯಾಗಿತ್ತು. ಇದೀಗ ಅಕ್ಷಯ್‌ ಕುಮಾರ್‌ ಅಭಿನಯದ ‘ಸರ್ಫಿರಾ’ ಸಿನಿಮಾ (Sarfira Movie) ಜುಲೈ 12ರಂದು ಬಿಡುಗಡೆ ಆಗಲಿದೆ.

ಇದನ್ನೂ ಓದಿ: Pushpa 2: ಪುಷ್ಪ 2 ಸಿನಿಮಾ ಬಿಡುಗಡೆ 5 ತಿಂಗಳು ಮುಂದೂಡಿಕೆ; ಇಲ್ಲಿದೆ ಹೊಸ ಡೇಟ್

ಟ್ರೈಲರ್‌ ಬಿಡುಗಡೆಯಾದ ನಂತರ ಕ್ಯಾಪ್ಟನ್​ ಗೋಪಿನಾಥ್ʻʻ 1 ರೂಪಾಯಿಗೆ ವಿಮಾನದ ಟಿಕೆಟ್​ ನೀಡಿ ನಾವು ಏರ್​ ಡೆಕ್ಕನ್​ ಲಾಂಚ್​ ಮಾಡಿದಾಗ ವೆಬ್​ಸೈಟ್​ ಕ್ರ್ಯಾಶ್​ ಆಗಿತ್ತು. ಈಗ ಟ್ರೇಲರ್​ಗೆ ಸಿಕ್ಕ ಜನಸ್ಪಂದನೆ ನೋಡಿ ನನಗೆ ಅದೆಲ್ಲ ನೆನಪಾಯಿತು. ನಾನು ಹುಚ್ಚ ಎಂದು ಜನರು ಭಾವಿಸಿದ್ದರು. ಹೌದು, ನಾನು ಹುಚ್ಚನಾಗಿದ್ದೆ’ ಎಂದು ಎಕ್ಸ್​’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಅಕ್ಷಯ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ʻʻಖಂಡಿತ ಸರ್ ಕೆಲವೊಮ್ಮೆ ಅಸಾಧಾರಣವಾದದ್ದು ಮಾಡಬೇಕಾದರೆ ಸ್ವಲ್ಪ ಹುಚ್ಚತನ ಅತ್ಯವಶ್ಯಕ. ಇಂತಹ ಸ್ಪೂರ್ತಿದಾಯಕ ಕಥೆಯನ್ನು ನಮಗೆ ನೀಡಿದ್ದಕ್ಕಾಗಿ ಧನ್ಯವಾದಗಳುʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಕ್ಷಯ್ ಕುಮಾರ್ ಜತೆಗೆ, ಸರ್ಫಿರಾ ಪರೇಶ್ ರಾವಲ್, ರಾಧಿಕಾ ಮದನ್ ಮತ್ತು ಸೀಮಾ ಬಿಸ್ವಾಸ್ ಕೂಡ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಅರುಣಾ ಭಾಟಿಯಾ (ಕೇಪ್ ಆಫ್ ಗುಡ್ ಫಿಲ್ಮ್ಸ್), ಸೂರ್ಯ ಮತ್ತು ಜ್ಯೋತಿಕಾ (2ಡಿ ಎಂಟರ್‌ಟೈನ್‌ಮೆಂಟ್) ವಿಕ್ರಮ್ ಮಲ್ಹೋತ್ರಾ (ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್) ಸಹ-ನಿರ್ಮಾಣ ಮಾಡಿದ್ದಾರೆ. ಸಂಗೀತ ಜಿ.ವಿ.ಪ್ರಕಾಶ್ ಕುಮಾರ್ ಇದೆ. ಚಿತ್ರವನ್ನು ಸುಧಾ ಕೊಂಗರ ನಿರ್ದೇಶಿಸಿದ್ದಾರೆ.

Continue Reading

Latest

Priyanka Chopra: ‘ದಿ ಬ್ಲಫ್’ ಚಿತ್ರೀಕರಣದ ವೇಳೆ ನಟಿ ಪ್ರಿಯಾಂಕ ಚೋಪ್ರಾ ಕೊರಳಿಗೆ ಗಾಯ

Priyanka Chopra: ಹಾಲಿವುಡ್ ನ ‘ದಿ ಬ್ಲಫ್’ ಚಿತ್ರದ ಚಿತ್ರೀಕರಣದ ವೇಳೆ ನಟಿ ಪ್ರಿಯಾಂಕ ಚೋಪ್ರಾ ಅವರ ಕುತ್ತಿಗೆಗೆ ಗಾಯವಾಗಿದ್ದು, ಅದು ತುಂಬಾ ನೋವಿನಿಂದ ಕೂಡಿದೆ ಎಂದು ನಟಿ ತಿಳಿಸಿದ್ದಾರೆ. ಈ ಬಗ್ಗೆ ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ತಮ್ಮ ಗಾಯದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ನಟಿ ಪ್ರಿಯಾಂಕ ಚೋಪ್ರಾ ಅವರು ‘ದಿ ಬ್ಲಫ್’ ಎಂಬ ಹಾಲಿವುಡ್ ಚಿತ್ರದಲ್ಲಿ ನಟಿಸಿದ್ದು, ಇದರ ಚಿತ್ರೀಕರಣಕ್ಕಾಗಿ ಅವರು ಕೆಲವು ದಿನಗಳಿಂದ ಆಸ್ಟ್ರೇಲಿಯಾದಲ್ಲಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕ ಜೊತೆ ಕಾರ್ಲ್ ಅರ್ಬನ್ ಅವರು ನಟಿಸುತ್ತಿದ್ದಾರೆ. ಈ ಚಿತ್ರವು ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮಿಂಗ್ ಆಗಲಿದೆ.

VISTARANEWS.COM


on

Priyanka Chopra
Koo

ಮುಂಬೈ: ಹಾಲಿವುಡ್‌ನ ‘ದಿ ಬ್ಲಫ್’ ಚಿತ್ರದ ಚಿತ್ರೀಕರಣದ ವೇಳೆ ನಟಿ ಪ್ರಿಯಾಂಕ್ ಚೋಪ್ರಾ (Priyanka Chopra) ಅವರು ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ
ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ತಮ್ಮ ಗಾಯದ ಚಿತ್ರವನ್ನು ಪೋಸ್ಟ್ ಮಾಡಿ ಅದಕ್ಕೆ ‘Oh the professional hazards on my jobs” ಎಂದು ಶೀರ್ಷಿಕೆ ನೀಡುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ಅವರ ಕುತ್ತಿಗೆಗೆ ಗಾಯವಾಗಿದ್ದು, ಆ ಗಾಯ ಆಳವಾಗಿ ಕಾಣುತ್ತಿಲ್ಲವಾದರೂ ಅದು ತುಂಬಾ ನೋವಿನಿಂದ ಕೂಡಿದೆ ಎಂದು ನಟಿ ತಿಳಿಸಿದ್ದಾರೆ.

Priyanka Chopra

ನಟಿ ಪ್ರಿಯಾಂಕ ಚೋಪ್ರಾ ಅವರು ‘ದಿ ಬ್ಲಫ್’ ಎಂಬ ಹಾಲಿವುಡ್ ಚಿತ್ರದಲ್ಲಿ ನಟಿಸಿದ್ದು, ಇದರ ಚಿತ್ರೀಕರಣಕ್ಕಾಗಿ ಅವರು ಕೆಲವು ದಿನಗಳಿಂದ ಆಸ್ಟ್ರೇಲಿಯಾದಲ್ಲಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕ ಜೊತೆ ಕಾರ್ಲ್ ಅರ್ಬನ್ ಅವರು ನಟಿಸುತ್ತಿದ್ದಾರೆ. ಈ ಚಿತ್ರವು ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮಿಂಗ್ ಆಗಲಿದೆ. ದಿ ಬ್ಲಫ್ ಅನ್ನು ಫ್ರಾಂಕ್ ಇ.ಫ್ಲವರ್ಸ್ ನಿರ್ದೇಶಿಸುತ್ತಿದ್ದಾರೆ.

‘ದಿ ಬ್ಲಫ್’ ಮಾಜಿ ಮಹಿಳಾ ದರೋಡೆಕೋರರ ಕಥೆಯ ಹಿನ್ನೆಲೆ ಇರುವ ಸಿನಿಮಾವಾಗಿದೆ. ದರೋಡೆಕೋರನ ಪಾತ್ರದಲ್ಲಿ ನಟಿ ಪ್ರಿಯಾಂಕ ನಟಿಸಿದ್ದಾರೆ. ಈ ಚಿತ್ರದಲ್ಲಿ ದರೋಡೆಕೋರ ಮಹಿಳೆಗೆ ತಾನು ಹಿಂದೆ ಮಾಡಿದಂತಹ ಪಾಪಗಳು ಬಂದು ಕಾಡಲು ಶುರುಮಾಡಿದಾಗ ಅದರಿಂದ ತನ್ನ ಕುಟುಂಬವನ್ನು ರಕ್ಷಿಸಲು ಪ್ರಯಾಣವನ್ನು ಪ್ರಾರಂಭಿಸುತ್ತಾಳೆ. ಈ ಚಿತ್ರವನ್ನು ಎಜಿಬಿಒ ನ ಆಂಥೋನಿ ರುಸ್ಸೋ, ಜೋ ರುಸ್ಸೋ, ಏಂಜೆಲಾ ರುಸ್ಸೋ-ಓಟ್ ಸ್ಟಾಟ್ ಮತ್ತು ಮೈಕಲ್ ಡಿಸ್ಕೋ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ, ಕಾರ್ಲ್ ಅರ್ಬನ್, ಇಸ್ಮಾಯಿಲ್ ಕ್ರೂಜ್ ಕಾರ್ಡೋವಾ, ಸಫಿಯಾ ಓಕ್ಲೆ-ಗ್ರೀನ್ ಮತ್ತು ವೇದಾಂತನ್ ನೈಡೂ ನಟಿಸಿದ್ದಾರೆ.

ಇದನ್ನೂ ಓದಿ: Blood Pressure: ಬ್ಲಡ್‌ ಪ್ರೆಷರ್‌ ನಿಯಂತ್ರಣದಲ್ಲಿಡಲು ಸಾಧ್ಯ; ಈ ಸಲಹೆ ಫಾಲೋ ಮಾಡಿ

ನಟಿ ಪ್ರಿಯಾಂಕ ಚೋಪ್ರಾ ಅವರಿಗೆ ಚಿತ್ರೀಕರಣದ ವೇಳೆ ಗಾಯಗಳಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ನಟಿಸಿದ ‘ಸಿಟಾಡೆಲ್ ‘ ವೆಬ್ ಸರಣಿಯ ಚಿತ್ರೀಕರಣದ ವೇಳೆ ನಟಿಗೆ ಎಡಹುಬ್ಬಿನ ಮೇಲೆ ಕತ್ತರಿಸಿದ ಗಾಯವಾಗಿದೆ. ಈ ಬಗ್ಗೆ ಕೂಡ ನಟಿ ಇನ್ ಸ್ಟಾಗ್ರಾಂನಲ್ಲಿ ಪೋಟೊ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು.

Continue Reading
Advertisement
Hooch Tragedy
ದೇಶ58 mins ago

Hooch Tragedy: ಕಳ್ಳಬಟ್ಟಿ ಸೇವಿಸಿ 16 ಮಂದಿ ಸಾವು, 70ಕ್ಕೂ ಅಧಿಕ ಜನ ಅಸ್ವಸ್ಥ

Blacklist contractors who do not complete work within time says Minister Mankala Vaidya
ಉತ್ತರ ಕನ್ನಡ1 hour ago

Uttara Kannada News: ಅವಧಿಯೊಳಗೆ ಕಾಮಗಾರಿ ಮುಕ್ತಾಯಗೊಳಿಸದ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಿ: ಸಚಿವ ಮಂಕಾಳ ವೈದ್ಯ

Appu Cup Season 2 to be held in July A team building event was held in Bengaluru
ಬೆಂಗಳೂರು1 hour ago

Appu Cup Badminton: ʼಅಪ್ಪು ಕಪ್ ಸೀಸನ್ 2ʼ; ಟೀಮ್ ಬಿಲ್ಡಿಂಗ್‌ಗೆ ಶುಭ ಕೋರಿದ ಅಶ್ವಿನಿ ಪುನೀತ್ ರಾಜಕುಮಾರ್

RSA vs USA
ಕ್ರೀಡೆ1 hour ago

SA vs USA: ಮಿಂಚಿದ ಡಿಕಾಕ್; ಯುಎಸ್‌ಎ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 18 ರನ್‌ಗಳ ಜಯ

NET 2024
ದೇಶ2 hours ago

NET 2024: ಪರೀಕ್ಷೆ ನಡೆದ ಒಂದೇ ದಿನದಲ್ಲಿ ನೆಟ್ ರದ್ದುಗೊಳಿಸಿದ ಕೇಂದ್ರ ಸರ್ಕಾರ; ಏನಿದು ಕೇಸ್?‌

Hajj Pilgrims
ದೇಶ3 hours ago

Hajj Pilgrims: ಬಿಸಿಗಾಳಿ, ಬಿಸಿಲಿನ ಹೊಡೆತ; ಹಜ್‌ ಯಾತ್ರೆ ಕೈಗೊಂಡ 68 ಭಾರತೀಯರ ಸಾವು

Bescom complaint against false information video about electricity compensation for farmers
ಕರ್ನಾಟಕ3 hours ago

Fact Check: ಹೊಲದಲ್ಲಿ ಟ್ರಾನ್ಸ್‌ಫಾರ್ಮರ್‌ ಇದ್ದರೆ ರೈತರಿಗೆ ಪರಿಹಾರ? ಬೆಸ್ಕಾಂ ಹೇಳಿದ್ದೇನು?

Murder Case
ಕರ್ನಾಟಕ4 hours ago

Murder Case: 3 ವರ್ಷದ ಬಾಲಕನ ಕತ್ತು ಸೀಳಿ ಕೊಂದ ಚಿಕ್ಕಪ್ಪ; ನದಿಯಲ್ಲಿ ಈಜಲು ಹೋಗಿ ಇಬ್ಬರು ನಾಪತ್ತೆ

Suniel Shetty
ಬಾಲಿವುಡ್4 hours ago

Suniel Shetty: ಅಪ್ಪ ವೇಟರ್‌ ಆಗಿ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ಗೆ ಈಗ ಸುನೀಲ್‌ ಶೆಟ್ಟಿ ಒಡೆಯ; ಇದಪ್ಪ Success ಅಂದ್ರು ಜನ!

DCM DK Shivakumar visit Kengal Anjaneya temple
ಕರ್ನಾಟಕ4 hours ago

DK Shivakumar: ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಿಂದ ನನ್ನ ಹೊಸ ರಾಜಕೀಯ ಅಧ್ಯಾಯ ಪ್ರಾರಂಭ: ಡಿ.ಕೆ.ಶಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು2 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ3 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ3 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ4 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ5 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ5 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌