B.S. Yediyurappa Birthday: ಅವತ್ತು ಯಡಿಯೂರಪ್ಪನವರ ಮಾತು ಕೇಳಿ ಕಣ್ಣಲ್ಲಿ ನೀರು ತುಂಬಿ ಬಂದಿತ್ತು: ನಟ ದ್ವಾರಕೀಶ್‌ ಲೇಖನ - Vistara News

ಕರ್ನಾಟಕ

B.S. Yediyurappa Birthday: ಅವತ್ತು ಯಡಿಯೂರಪ್ಪನವರ ಮಾತು ಕೇಳಿ ಕಣ್ಣಲ್ಲಿ ನೀರು ತುಂಬಿ ಬಂದಿತ್ತು: ನಟ ದ್ವಾರಕೀಶ್‌ ಲೇಖನ

ಕನ್ನಡ ಚಿತ್ರರಂಗದಲ್ಲಿ ಕುಳ್ಳ ಎಂದೇ ಖ್ಯಾತರಾದ ದ್ವಾರಕೀಶ್ 5 ದಶಕಗಳಿಗೂ ಹೆಚ್ಚು ಕಾಲ ನಿರ್ಮಾಪಕ, ನಿರ್ದೇಶನ, ಹಾಸ್ಯನಟನಾಗಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಅನೇಕ ಉತ್ತಮ ಚಲನಚಿತ್ರಗಳನ್ನು ಕನ್ನಡ ಚಿತ್ರರಸಿಕರಿಗೆ ನೀಡಿದ ಹೆಗ್ಗಳಿಕೆ ದ್ವಾರಕೀಶ್‌ ಅವರದ್ದು.

VISTARANEWS.COM


on

Actor Dwarakish article on the occation of B S Yediyurappa Birthday
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದ್ವಾರಕೀಶ್
ನಿಜ! ಜೀವನದಲ್ಲಿ ಪ್ರತಿಯೊಬ್ಬರಿಗೂ ಹಠವಿರಬೇಕು, ಆದರೆ ಆ ಹಠ ಒಳ್ಳೆಯ ಧೈಯ ಹೊಂದಿರಬೇಕು. ಅಂತಹ ಜೀವನದಲ್ಲಿ ಸತ್ಯದ ಸೇವೆಯ, ಜನಸೇವೆಯ ಪ್ರೀತಿ ಅಭಿಮಾನದ, ದೇಶಾಭಿಮಾನದ, ಭಾಷಾಭಿಮಾನದ, ಸದುದ್ಧೇಯದ ಹಠವನ್ನು ಹೊತ್ತು ಒಂದು ಚಿಕ್ಕ ಹಳ್ಳಿಯಲ್ಲಿ ಬಡ ರೈತನ ಮಗನಾಗಿ ಹುಟ್ಟಿ ಇಂದು ತಾನು ಹುಟ್ಟಿದ ನಾಡಿನ ನಾಯಕರಾಗಿದ್ದಾರೆ ನಮ್ಮ ಯಡಿಯೂರಪ್ಪನವರು. ಅವರ ಹೃದಯದ ಕೆಚ್ಚು ಹಠದ ಬಗ್ಗೆ ನಮಗೆ ಬಹಳ ಅಭಿಮಾನವೆನಿಸುತ್ತದೆ.

ಇಷ್ಟೆಲ್ಲ ನಾನು ಅವರ ಬಗ್ಗೆ ಹೇಳಲಿಕ್ಕೆ ಕಾರಣ, ಅವರಿಗಿದ್ದ ಹಠದ ಜೊತೆಯಲ್ಲಿ ಅವರು ನಡೆದು ಬಂದ ದಾರಿ. ಮನುಷ್ಯನಾಗಿ ಧೈಯ ಹೇಗೆ ಮುಖ್ಯವೋ, ಅಷ್ಟೇ ಮುಖ್ಯ ಅವರು ನಡೆದು ಬರುವ ದಾರಿ. ಮೊದಲಿನಿಂದಲೂ ಒಂದೇ ಪಕ್ಷವನ್ನು ದೃಢವಾಗಿ ನಂಬಿ, ಆ ಪಕ್ಷಕ್ಕಾಗಿ ದುಡಿದು-ದುಡಿದು ಇಂದು ಆ ಪಕ್ಷವನ್ನು, ಅಂದರೆ, ಭಾರತೀಯ ಜನತಾ ಪಕ್ಷವನ್ನು ಕರ್ನಾಟಕದಲ್ಲಿ ಹಿಡಿದೆಬ್ಬಿಸಿ ನಿಲ್ಲಿಸಿದ್ದಾರೆ. ಇದು ಅವರ ಬಗ್ಗೆ ನಮಗೆ ಬಹಳ ಹೆಮ್ಮೆಯನ್ನು ತಂದಿದೆ, ಮನಸ್ಸಿಗೆ ಸಂತಸ ತಂದಿದೆ. ನನ್ನ ಹಾಗೂ ಯಡಿಯೂರಪ್ಪನವರ ಪರಿಚಯ ಸ್ನೇಹದ ಬಗ್ಗೆ ಹೇಳುವುದಾದರೆ ಕೆಲವು ತಿಂಗಳುಗಳ ಕಾಲ ಅವರ ಜತೆಯಲ್ಲಿ ಒಡನಾಟ ಆ ಅನುಭವ! ಸಾಮಾನ್ಯವಾಗಿ ಅನ್ನ ಆಗಿದೆಯೋ ಎಂದು ಹೇಗೆ ಒಂದು ಅಗಳು ಅನ್ನ ನೋಡಿ ತಿಳಿದುಕೊಳ್ಳಬಹುದೋ ಹಾಗೆ, ಕೆಲವು ದಿನ ಅವರೊಡನೆ ಕಳೆದ ದಿನಗಳು ಅವರ ಬಗ್ಗೆ ಬರೆಯಲು ನನಗೆ ಧೈರ್ಯ-ಹುಮ್ಮಸ್ಸು ಕೊಡುತ್ತದೆ. 1998ನೇ ಇಸವಿಯಲ್ಲಿ ಅವರ ಜೊತೆಯಲ್ಲಿ ಪಕ್ಷಕ್ಕಾಗಿ ಓಡಾಡುವ ಅವಕಾಶ ನನಗೆ ದೊರಕಿತು. ಶಿವಮೊಗ್ಗ, ಗುಲ್ಬರ್ಗಾ, ಬೆಳಗಾಂ ಮತ್ತು ಕೋಲಾರ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ಅವರ ಜೊತೆಯಲ್ಲಿ ಓಡಾಡಿದ್ದೇನೆ.

ಒಬ್ಬ ಸಾಮಾನ್ಯ ಕಲಾವಿದನಾದ ನನಗೆ ಅವರು ತೋರಿಸಿದ ಅತೀ ಹೆಚ್ಚಿನ ಪ್ರೀತಿ ವಿಶ್ವಾಸ, ಆದರ, ಅಭಿಮಾನದಿಂದ ನಾವು ಅವರ ಒಳ್ಳೆಯತನವನ್ನು ನೋಡಿದೆವು. ಅದನ್ನು ಕೇವಲ ನಾಲ್ಕಾರು ಪದಗಳಿಂದ ಹೇಳಲು ಸಾಧ್ಯವಿಲ್ಲ. ಆಗತಾನೇ ನನಗೆ ಹೃದಯ ಚಿಕಿತ್ಸೆಯಾಗಿ ಕೆಲವೇ ದಿನಗಳಾಗಿತ್ತು. ನಾವು ಹೋದ ಪ್ರತಿಯೊಂದು ವೇದಿಕೆಯಲ್ಲೂ ಅವರ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯದಲ್ಲಿಯೂ ನನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ತೆಗೆದುಕೊಳ್ಳುತ್ತಿದ್ದರು. ಆದ್ದರಿಂದ ನನಗೆ ಆಗುತ್ತಿದ್ದ ಆ ತೃಪ್ತಿ, ಸಮಾಧಾನ, ಸಂತೋಷ ಓಹ್! ಅನುಭವಿಸಿದವರಿಗೇ ಗೊತ್ತಾಗುವುದು. ಇಂದಲ್ಲ ನಾಳೆ ಭಾರತೀಯ ಜನತಾ ಪಾರ್ಟಿ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸ, ನಂಬಿಕೆ ಅವರಲ್ಲಿದ್ದುದನ್ನು ನಾನು ಕಂಡಿದ್ದೆ. ಸೋಲುಗಳೇ ಯಶಸ್ಸಿನ ಮೆಟ್ಟಿಲು ಎಂದು ಹೇಳುತ್ತಾರೆ. ಯಾವ ಸೋಲುಗಳನ್ನೂ ಲೆಕ್ಕಿಸದೇ ಗೆಲುವನ್ನೇ ಗುರಿಯಾಗಿಟ್ಟುಕೊಂಡು ಗೆದ್ದವರು ನಮ್ಮ ಯಡಿಯೂರಪ್ಪನವರು.

ಸಾಮಾನ್ಯವಾಗಿ ಯಡಿಯೂರಪ್ಪನವರ ಬಗ್ಗೆ ಕೇಳಿ ಬರುವ ಮಾತು ಅವರಿಗೆ ಕೋಪ ಜಾಸ್ತಿ ಅಂತ. ಅವರ ಜೊತೆಯಲ್ಲಿ ಸ್ವಲ್ಪ ಕಾಲ ಕಳೆದ ನಾನೇನೋ ಎಂದೂ ಹಾಗೆ ಕಂಡಿಲ್ಲ. ಕೋಪದ ಮಾತು ಎಂದು ಹೇಳುವುದಕ್ಕಿಂತ ಸತ್ಯದ ಮಾತು ಎಂದರೆ ಸಮಂಜಸವಾಗುತ್ತದೆ. ಕಾರಣ, ಸತ್ಯ ಎಂದೂ ನಿಷ್ಠುರ, ಸತ್ಯ ಎಂದಿದ್ದರೂ ಕಠಿಣ. ಎಷ್ಟೋ ಬಾರಿ ವೇದಿಕೆ ಮೇಲೆ ಅವರ ಜೊತೆಯಲ್ಲಿ ಕುಳಿತು ಅವರ ಭಾಷಣಗಳನ್ನು ಕೇಳಿದ್ದೇನೆ. ಎಂದೂ ಯಡಿಯೂರಪ್ಪನವರು ಭಾಷಣದಲ್ಲಿ ತೊದಲಿದವರಲ್ಲ ಅಥವಾ ಅತಿಯಾದ ಯೋಚನೆ ಮಾಡಿ ಮಾತನಾಡುವವರಲ್ಲ. ಬ್ರೇಕಿಲ್ಲದೇ ಬಿರುಗಾಳಿಯಂತೆ ಮಾತನಾಡುವವರು ಯಡಿಯೂರಪ್ಪನವರು. ಯಾಕಪ್ಪ ಈ ಬಿರಿಸು ಅವರ ಮಾತಿನಲ್ಲಿ ಎಂದರೆ, ಎಲ್ಲವೂ ಸತ್ಯಕ್ಕೆ ಹತ್ತಿರದ ಮಾತುಗಳೇ ಅವು ! ಯಡಿಯೂರಪ್ಪನವರ ಸತ್ಯದ ಮಾತುಗಳೇ ಕರ್ನಾಟಕ ಜನತೆಯಲ್ಲಿ ಬೇರೂರಿ ಇಂದು ಭಾರತೀಯ ಜನತಾ ಪಕ್ಷದ ಬಾವುಟ ಹಾರಾಡಿದೆ.

ಜ್ಞಾಪಕಶಕ್ತಿಯಲ್ಲಿ ಯಡಿಯೂರಪ್ಪನವರು ಯಾರಿಗೂ ಕಡಿಮೆಯಿಲ್ಲ. ಸರ್ಕಾರದಿಂದ ನನಗೆ ಜೀವಮಾನ ಸಾಧನೆಗೆ ಪ್ರಶಸ್ತಿ ಬಂದಾಗ ನನ್ನ ಬಗ್ಗೆ ಅವರು ಆಡಿದ ಮುತ್ತಿನಂತಹ ಮಾತುಗಳು ನನ್ನ ಮನಸ್ಸಿನಾಳದಲ್ಲಿ ಇನ್ನೂ ಧ್ವನಿಸುತ್ತಿದೆ. ಹತ್ತು ವರ್ಷಗಳ ಹಿಂದೆ ಅವರ ಜೊತೆಯಲ್ಲಿ ಕಾಲ ಕಳೆದಾಗ ನಾನೊಬ್ಬ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತ, ಆರಾಧಕ ಎಂದು ಅವರಿಗೆ ತಿಳಿದಿತ್ತು. ಅದನ್ನು ಮರೆತಿರದ ಅವರು, ಆ ದಿನ ಪ್ರಶಸ್ತಿ ಪ್ರಧಾನ ಮಾಡುವಾಗ ಇಂದು ಶ್ರೀ ರಾಘವೇಂದ್ರ ಸ್ವಾಮಿಗಳವರ ಆರಾಧನಾ ದಿನ ಈ ದಿವಸ ಅವರ ಭಕ್ತ ಆರಾಧಕ ಶ್ರೀ ದ್ವಾರಕೀಶರವರಿಗೆ ಪ್ರಶಸ್ತಿ ಬಂದಿದೆ, ಅದಕ್ಕಿಂತ ಹೆಚ್ಚಿನ ಸಂತೋಷ ನನಗಿಲ್ಲ ಎಂದು ಹೇಳಿದ್ದರವರು. ಆ ದಿನ ನನಗೆ ಹೃದಯ ತುಂಬಿ ಬಂದು ಕಣ್ಣಲ್ಲಿ ನೀರು ತಂದಿತ್ತು. ಈಗ ಕೂಡ ಅದನ್ನು ನೆನೆಸಿಕೊಳ್ಳುವಾಗ ಒಂದು ತರಹ ಅಪೂರ್ವವಾದ ಆನಂದ, ತೃಪ್ತಿ ಮನಸ್ಸಿಗೆ ಆಗುತ್ತದೆ. ಇದರಿಂದ ಅವರಿಗೆ ನನ್ನ ಮೇಲೆ ಇರುವ ಪ್ರೀತಿ ವಿಶ್ವಾಸವನ್ನು ನಾನು ಹೇಗೆ ತಾನೇ ಮರೆಯಲು ಸಾಧ್ಯ !

ನಾನು ಸಿನಿಮಾ ಜೀವನದಲ್ಲಿದ್ದವನೇ ಹೊರತು ರಾಜಕೀಯದ ಬಗ್ಗೆ ಕನಸಿನಲ್ಲೂ ಯೋಚಿಸಿದವನಲ್ಲ. ಆದರೆ ಎಲ್ಲೋ ಶ್ರೀ ವಾಜಪೇಯಿಯವರ ಮೇಲೆ ಎಲ್ಲೂ ಇಲ್ಲದ ಅಭಿಮಾನ -ಪ್ರೀತಿ-ವಿಶ್ವಾಸ. ಒಬ್ಬ ಭಾರತೀಯ ಪ್ರಜೆಯಾಗಿ, ಅವರ ಮೇಲೆ ನನಗೆ ಮಾತ್ರವಲ್ಲ, ನನ್ನ ಹಿರಿಯ ಮಗ ಸಂತೋಷ್, ಈಗ ಅಮೇರಿಕಾದಲ್ಲಿ ವಿಪ್ರೋ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ, ಅವನಿಗೂ ಸಹ ಶ್ರೀ ವಾಜಪೇಯಿಯವರೆಂದರೆ ಬಹಳ ಅಚ್ಚು ಮೆಚ್ಚು. ಅವರಷ್ಟೇ ಅಲ್ಲ, ಎಲ್ಲಾ ಬಿ.ಜೆ.ಪಿ ಮುಖಂಡರ ಮೇಲೂ ಅತಿಯಾದ ಪ್ರೀತಿ ಅಭಿಮಾನ ಮತ್ತು ವಿಶ್ವಾಸ. ಅಂದ ಹಾಗೆ ಮರೆತಿದ್ದೆ, ನಾನು ಹುಡುಗನಾಗಿದ್ದಾಗ ಅಂದರೆ 1955-56ನೇ ಇಸವಿಯಲ್ಲಿ (ನಮಸ್ತೆ ಸದಾ ವತ್ಸಲೇ ಮಾತೃಭೂಮೆ…ಎಂದು ಹೇಳುತ್ತಿದ್ದರು). ನನ್ನ ಮನ ಭಾರತೀಯ ಜನತಾ ಪಕ್ಷದ ಕಡೆಗೆ ಸೆಳೆಯಿತು, ಅದರ ಪ್ರತಿಫಲವೇ 1998 ರಲ್ಲಿ ಬೆಂಗಳೂರು ವುಡ್‌ಲ್ಯಾಂಡ್ಸ್‌ ಹೋಟೆಲ್ನಲ್ಲಿ ಪಕ್ಷದ ಅಧಿವೇಶನ ನಡೆದಾಗ ಶ್ರೀ ಆಡ್ವಾನಿಯವರ ನೇತೃತ್ವದಲ್ಲಿ ಮುಖ್ಯ ಮಂತ್ರಿ ಚಂದ್ರು ಜೊತೆ ಪಕ್ಷದ ಧ್ವಜವನ್ನು ಹಿಡಿಯುವಂತಾಯಿತು. ಆದರೆ ನನ್ನ ಸಂಸಾರ ಮದ್ರಾಸಿನಲ್ಲಿದ್ದುದರಿಂದ, ಗಮನವೆಲ್ಲ ಚಿತ್ರರಂಗದಲ್ಲಿಯೇ ಉಳಿಯಬೇಕಾಯಿತು. ನಾನೇನಾದರೂ ಚುನಾವಣಾ ಪ್ರಚಾರಕ್ಕೆ ಹೋಗಿದ್ದೆ ಆದರೆ, ಅದಕ್ಕೆ ಕಾರಣ ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು. ಚುನಾವಣಾ ಪ್ರಚಾರ ಎಂದರೆ ಒಂದು ವಿಚಾರ ನೆನಪಿಗೆ ಬರುತ್ತದೆ. ಅದನ್ನು ಇಲ್ಲಿ ಹೇಳುವುದು ಬಹು ಸಮಂಜಸವಾಗಿದೆ ಎಂದರೆ ತಪ್ಪಾಗುವುದಿಲ್ಲ.

ನಾವು ಚುನಾವಣಾ ಪ್ರಚಾರಕ್ಕೆ ಮೂರು ದಿನ ಬೆಳಗಾವಿಗೆ ಹೊರಡುವುದು ನಿಶ್ಚಿತವಾಗಿತ್ತು. ನನಗೆ ಮನಸ್ಸಿನಲ್ಲಿ ಏನೋ ಒಂದು ರೀತಿಯ ಕಳವಳ, ಭಯ, ಕಾರಣ ನನಗೆ ಸಿನಿಮಾದಲ್ಲಿ ಮಾತನಾಡಿ ಅಭ್ಯಾಸವಿತ್ತೇ ವಿನಃ ಚುನಾವಣಾ ಭಾಷಣದ ವೈಖರಿ ಗೊತ್ತಿರಲಿಲ್ಲ. ಅದಕ್ಕೆ ತಕ್ಕ ಹಾಗೆ ಹಿಂದಿನ ದಿನ ರಾತ್ರಿ ನನಗೊಂದು ಫೋನ್ ಕಾಲ್ ಬಂತು ಅದು ಬೆಳಗಾವಿಯಿಂದ. ಒಬ್ಬ ವ್ಯಕ್ತಿ ಪೋನ್‌ನಲ್ಲಿ ಯಾರೀ ಮಾತನಾಡುತ್ತಿರುವುದು, ದ್ವಾರಕೀಶ್ ಅವರಾ, ರೀ ನೀವು ದಯವಿಟ್ಟು ಬೆಳಗಾವಿಗೆ ಬರಬೇಡಿ. ಬಂದರೆ ನಿಮ್ಮ ಗ್ರಹಚಾರ ಕಡಿಮೆಯಾಗುತ್ತೆ ಅಷ್ಟೇ ತಿಳಿದುಕೊಳ್ಳಿ” ಎಂದು ಸ್ವಲ್ಪ ಉದ್ವೇಗ, ಜೋರಿನಿಂದಲೇ ಹೇಳಿದರು, ಆಗ ನಿಜವಾಗಿಯೂ ನನಗೆ ತುಂಬಾ ಭಯವೇ ಆಯಿತು. ಏನಪ್ಪಾ ಮಾಡುವುದು ಎಂದು ಯೋಚನೆ ಮಾಡಿ ಕೊನೆಗೆ ಬೇರೆ ದಾರಿ ಇಲ್ಲ ಯಡಿಯೂರಪ್ಪ ಅವರನ್ನೇ ಕೇಳಿ ಬಿಡೋಣ ಎಂದುಕೊಂಡು, ಅವರಿಗೆ ಪೋನ್ ಮಾಡಿ ಈ ವಿಚಾರ ತಿಳಿಸಿದೆ, ಆಗ ಅವರು ತಕ್ಷಣ ನಕ್ಕುಬಿಟ್ಟರು.

(ಮೂಲ: ʼದಣಿವರಿಯದ ಧೀಮಂತʼ ಕೃತಿ(2020). ಲೇಖನ: ʼಯಡಿಯೂರಪ್ಪ ಹಠವಾದಿʼ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

KCET 2024 : ನೀಟ್‌ ಮೊದಲ ಸುತ್ತಿನ ಕೌನ್ಸೆಲಿಂಗ್ ನಂತರವೇ ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಶುರು

KCET 2024 :ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ತನ್ನ ಮೊದಲ ಸುತ್ತಿನ ನೀಟ್‌ (NEET) ಕೌನ್ಸೆಲಿಂಗ್ ಪ್ರಾರಂಭಿಸಿದ ನಂತರವೇ ಕೆ-ಸಿಇಟಿ ಸೀಟು ಹಂಚಿಕೆ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೆಇಎ (KEA) ಸ್ಪಷ್ಟಪಡಿಸಿದೆ.

VISTARANEWS.COM


on

By

KCET 2024
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಎಲ್ಲ ಕೋರ್ಸ್‌ಗಳ ಪ್ರವೇಶಕ್ಕೆ ಈ ಬಾರಿ ಏಕಕಾಲದಲ್ಲೇ ಸೀಟು ಹಂಚಿಕೆ ಪ್ರಕ್ರಿಯೆ (KCET 2024) ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ನೀಟ್ ಪರೀಕ್ಷೆಯ ಫಲಿತಾಂಶದ ಪಟ್ಟಿಯನ್ನು ಕೆಇಎಗೆ ಹಸ್ತಾಂತರಿಸಿದ ನಂತರ ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ ಇತರ ವೈದ್ಯಕೀಯ ಕೋರ್ಸುಗಳ ಆದ್ಯತೆಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು ಕೆಇಎ ತಿಳಿಸಿದೆ.

ಇತ್ತೀಚೆಗೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ಆದ್ಯತೆಗಳನ್ನು ದಾಖಲಿಸಲು ಎಂಜಿನಿಯರಿಂಗ್, ಪಶುವೈದ್ಯಕೀಯ ಇತ್ಯಾದಿ ಕೋರ್ಸ್ ಗಳಿಗೆ ಅವಕಾಶ ನೀಡಲಾಗಿತ್ತು. ಎನ್‌ಎಂಸಿ ತನ್ನ ಮೊದಲ ಸುತ್ತಿನ ನೀಟ್‌ ಕೌನ್ಸೆಲಿಂಗ್ ಪ್ರಾರಂಭಿಸಿದ ನಂತರ ಕೆಸಿಇಟಿ ಸೀಟು ಹಂಚಿಕೆ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೆಇಎ ತಿಳಿಸಿದೆ.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಇಎ ಮಂಡಳಿ ಸಭೆಯಲ್ಲಿ ಆಗಸ್ಟ್ ಎರಡನೇ ವಾರದಲ್ಲಿ ಸಿಇಟಿ ಕೌನ್ಸೆಲಿಂಗ್ ನಡೆಸಲು ನಿರ್ಧರಿಸಲಾಗಿದೆ.

ಇನ್ನು ಎನ್‌ಎಂಸಿ ವೈದ್ಯಕೀಯ ಕೋರ್ಸ್‌ಗಳಿಗೆ ಆಗಸ್ಟ್‌ 14ರಿಂದ ಕೌನ್ಸೆಲಿಂಗ್‌ ಪ್ರಾರಂಭಿಸುವುದಾಗಿ ಹೇಳಿದೆ. ಹೀಗಾಗಿ ಎನ್‌ಎಂಸಿ ತನ್ನ ಮೊದಲ ಸುತ್ತಿನ ನೀಟ್‌ ಕೌನ್ಸೆಲಿಂಗ್ ಪ್ರಾರಂಭಿಸಿದ ಮೂರು ದಿನಗಳ ನಂತರ ಎಲ್ಲಾ ಕೋರ್ಸ್‌ಗಳಿಗೆ ಕೌನ್ಸೆಲಿಂಗ್ ಪುನರಾರಂಭಿಸುತ್ತೇವೆ ಎಂದು ಕೆಇಎ ಕಾರ್ಯನಿರ್ವಾಹಕ ಪ್ರಸನ್ನ ತಿಳಿಸಿದ್ದಾರೆ. ವೈದ್ಯಕೀಯೇತರ ಕೋರ್ಸ್‌ಗಳಿಗೆ ಆಯ್ಕೆ ಪ್ರವೇಶವನ್ನು ಪ್ರಾರಂಭಿಸಿದ್ದೇವೆ ಮತ್ತು ಹಂಚಿಕೆ ಮಾತ್ರ ಬಾಕಿ ಉಳಿದಿದೆ.

ದ್ವಿತೀಯ ಪಿಯುಸಿ ಮೂರನೇ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಈ ಹಂತದಲ್ಲಿ ಸೀಟು ಹಂಚಿಕೆಗೆ ಪರಿಗಣಿಸುವುದು ಕಷ್ಟಸಾಧ್ಯ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರ ನೀಡುವ ಸೂಚನೆ ಪ್ರಕಾರ ಅವರಿಗೂ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Wild Animals : ರಸ್ತೆಗೆ ಅಡ್ಡಲಾಗಿ ಮಲಗಿಕೊಂಡ ಚಿರತೆ; ಕಾಡಿನಿಂದ ಹಸು ಜತೆಗೆ ಓಡೋಡಿ ಬಂದ ಜಿಂಕೆ

ಯುಜಿಸಿಇಟಿ ಆಪ್ಷನ್ ಎಂಟ್ರಿಗೆ ಆ.4 ಕೊನೆ ದಿನ

ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ತಮ್ಮ ಆಸಕ್ತಿಯನುಸಾರ ಆಪ್ಷನ್ (ಇಚ್ಛೆ) ದಾಖಲು ಮಾಡುವುದು ಆಗಸ್ಟ್ 4ರಂದು ಕೊನೆಯಾಗಲಿದೆ. ಕಾಲೇಜು ಮತ್ತು ಕೋರ್ಸ್ ಆಯ್ಕೆಗೆ ಇನ್ನೂ ಒಂದು ದಿನ ಸಮಯ ಇದ್ದು, ಎಚ್ಚರಿಕೆಯಿಂದ ಇಚ್ಛೆ ದಾಖಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಎಂಜಿನಿಯರಿಂಗ್, ಯೋಗ- ನ್ಯಾಚುರೋಪಥಿ, ಪಶು ವೈದ್ಯ, ಕೃಷಿ ವಿಜ್ಞಾನ, ನರ್ಸಿಂಗ್, ಬಿ-ಫಾರ್ಮಾ ಫಾರ್ಮಾ-ಡಿ ಕೋರ್ಸ್ ಗಳ ಪ್ರವೇಶಕ್ಕೆ ಇಚ್ಛೆ ದಾಖಲಿಸಲು ಕೆಇಎ ಅವಕಾಶ ನೀಡಿತ್ತು. ಮುಂದಿನ ಹಂತದಲ್ಲಿ ಅಣಕು ಸೀಟು ಹಂಚಿಕೆ ಮಾಡಲಾಗುತ್ತದೆ.

ಆ.3ರಿಂದ ಪಿಜಿ ದಂತ ವೈದ್ಯಕೀಯ 2ನೇ ಸುತ್ತಿನ ಸೀಟು ಹಂಚಿಕೆ

ಬೆಂಗಳೂರು: ಸ್ನಾತಕೋತ್ತರ ದಂತ ವೈದ್ಯಕೀಯ (ಪಿಜಿಇಟಿ- ಎಂಡಿಎಸ್-24) ಕೋರ್ಸ್‌ ನ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆಗಸ್ಟ್ 3ರಿಂದ ಆರಂಭವಾಗಿದೆ. ಮೊದಲನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಛಾಯ್ಸ್-2 ಆಯ್ಕೆ ಮಾಡಿ, ಶುಲ್ಕ ಪಾವತಿಸಿರುವವರು; ಛಾಯ್ಸ್-3 ಅನ್ನು ಆಯ್ಕೆ ಮಾಡಿರುವವರು ಹಾಗೂ ಯಾವುದೇ ಸೀಟು ಹಂಚಿಕೆಯಾಗದೇ ಇರುವವರು ಆ.3ರಿಂದ ಕೆಇಎ ಕಚೇರಿಯಲ್ಲಿ ತಮ್ಮ ಎಲ್ಲ ಮೂಲ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ದಾಖಲೆ ಸಲ್ಲಿಸದಿದ್ದರೆ ಅಂತಹವರಿಗೆ ಸೀಟು ಹಂಚಿಕೆ ಮಾಡಲಾಗುವುದಿಲ್ಲ.

ಎರಡನೇ ಸುತ್ತಿನ ಸೀಟು ಹಂಚಿಕೆಗೆ ಆ.3ರಂದು ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಲಾಗುತ್ತದೆ. ಆ.4ರಿಂದ 6ರವರೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಸಮಯ ನೀಡಲಾಗುತ್ತದೆ. ಆ.7ರಂದು ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಹಾಗೂ ಆ.8ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ನಂತರ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಲು ಹಾಗೂ ಕಾಲೇಜಿಗೆ ವರದಿ ಮಾಡಿಕೊಳ್ಳಲು ಆ.13 ಕೊನೆ ದಿನ ಎಂದು ಅವರು ವಿವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Shiradi ghat landslide: ಶಿರಾಡಿ ಘಾಟ್ ಗುಡ್ಡ ಕುಸಿತದ ಭೀಕರತೆಗೆ ಸಿಎಂ‌ ಶಾಕ್; 90 ಡಿಗ್ರಿ ನೇರವಾಗಿ ಗುಡ್ಡ ಸೀಳಿದ್ದಕ್ಕೆ ಅಧಿಕಾರಿಗೆ ತರಾಟೆ

Shiradi ghat landslide: ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು 90 ಡಿಗ್ರಿಯಲ್ಲಿ ನೇರವಾಗಿ ಸೀಳಿರುವುದಕ್ಕೆ ಅಸಮಾಧಾನಗೊಂಡು, ಗುಡ್ಡ ಕುಸಿತಕ್ಕೆ ಇದೂ ಕೂಡ ಪ್ರಮುಖ ಕಾರಣ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯನ್ನು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

VISTARANEWS.COM


on

Shiradi ghat landslide
Koo

ಹಾಸನ: ಶಿರಾಡಿ ಘಾಟ್ ಗುಡ್ಡ ಕುಸಿತದ (Shiradi ghat landslide) ಭೀಕರತೆಗೆ ಶಾಕ್ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಪ್ರಾದೇಶಿಕ ಅಧಿಕಾರಿ ವಿಲಾಸ್ ಅವರಿಗೆ ಸಾಲು ಸಾಲು ಪ್ರಶ್ನೆಗಳ ಸುರಿಮಳೆಗೈದರು. ಗುಡ್ಡ ಕುಸಿತದ ಸ್ಥಳ ಪರಿಶೀಲನೆಗೆ ಅಧಿಕಾರಿಗಳ ತಂಡದೊಂದಿಗೆ ರಸ್ತೆ ಮಾರ್ಗವಾಗಿ ಘಟನಾ ಸ್ಥಳಕ್ಕೆ ತೆರಳಿದ್ದ ಮುಖ್ಯಮಂತ್ರಿಗಳು, ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು 90 ಡಿಗ್ರಿಯಲ್ಲಿ ನೇರವಾಗಿ ಸೀಳಿರುವುದಕ್ಕೆ ಅಸಮಾಧಾನಗೊಂಡು, ಗುಡ್ಡ ಕುಸಿತಕ್ಕೆ ಇದೂ ಕೂಡ ಪ್ರಮುಖ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ಕಾಮಗಾರಿ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಿಎಂಗೆ ವಿವರಿಸುತ್ತಾ, “ಒಟ್ಟು 45 ಕಿ.ಮೀನಲ್ಲಿ 35 ಕಿ.ಮೀ ಹೈವೇ ಕಾಮಗಾರಿ ಮುಗಿದಿದೆ. 10 ಕಿ.ಮೀ ಬಾಕಿ ಇದೆ. ಆದರೆ ಇಲ್ಲಿಯವರೆಗೂ ಎಲ್ಲೂ ತಡೆಗೋಡೆಗಳನ್ಜು ನಿರ್ಮಿಸಿಲ್ಲ, ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿ ಅದರ ಆಧಾರದಲ್ಲಿ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಂತೆ ಇಲ್ಲ” ಎಂದು ವಿವರಿಸಿದರು.

ಮೊಣಕಾಲುದ್ದುದ ಕೆಸರಲ್ಲೇ ಗುಡ್ಡ ಕುಸಿತದ ಜಾಗದುದ್ದಕ್ಕೂ ನಡೆದು ಪರಿಶೀಲಿಸಿದ ಮುಖ್ಯಮಂತ್ರಿಗಳು, ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಸ್‌ಡಿಆರ್‌ಎಫ್‌ ತಂಡದೊಂದಿಗೆ ಕೆಲ ಹೊತ್ತು ಚರ್ಚಿಸಿದರು. ಬಳಿಕ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ‌ ಅಧಿಕಾರಿ ವಿಲಾಸ್ ಅವರ ಮುಂದೆ ಸಿಎಂ ಸಾಲು ಸಾಲು ಪ್ರಶ್ನೆಗಳನ್ನು ಇಟ್ಟರು.

ಇದನ್ನೂ ಓದಿ | Wayanad Landslide: ವಯನಾಡು ಭೂಕುಸಿತಕ್ಕೆ ಗೋಹತ್ಯೆಯೇ ಕಾರಣ ಎಂದ ಬಿಜೆಪಿ ನಾಯಕ; ಅವರ ವಿವರಣೆ ಹೀಗಿದೆ!

*ಹಣ ಉಳಿಸುವ ಉದ್ದೇಶದಿಂದ ಕಡಿಮೆ ಭೂಮಿ ಸ್ವಾಧೀನಗೊಳಿಸಿಕೊಳ್ಳುವುದು, ಬಳಿಕ ಖರ್ಚು ಉಳಿಸಲು 90 ಡಿಗ್ರಿಯಲ್ಲಿ ಗುಡ್ಡಗಳನ್ನು ಕತ್ತರಿಸಿದ್ದೀರಿ. ಇದು ಅವೈಜ್ಞಾನಿಕ ಕಾಮಗಾರಿ ಅಲ್ಲವೇ?, *ಗುಡ್ಡಗಳನ್ನು 30 ರಿಂದ 45 ಡಿಗ್ರಿಯಲ್ಲಿ ಕತ್ತರಿಸಿ ತಡೆಗೋಡೆ ನಿರ್ಮಿಸಿದ್ದರೆ ಮಣ್ಣು ಕುಸಿತವನ್ನು ತಡೆಯಬಹುದಿತ್ತಲ್ಲವೇ? *ಕಾಮಗಾರಿ ಆರಂಭಿಸುವ ಮೊದಲು ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿದ್ದೀರಾ? ಅದಕ್ಕೆ ತಕ್ಕಂತೆ ಮುಂಜಾಗ್ರತಾ ಕ್ರಮ ಏಕೆ ವಹಿಸಿಲ್ಲ ಎಂದು ಪ್ರಶ್ನಿಸಿದರು.

ವಿಲಾಸ್ ಅವರಿಂದ ಸೂಕ್ತ ಉತ್ತರ ಬರದಿದ್ದಾಗ ಒಟ್ಟಾರೆ ಸ್ಥಿತಿ ಗತಿ ಕುರಿತು ಕೇಂದ್ರ ಸಚಿವರಾದ ಗಡ್ಕರಿ ಅವರಿಗೆ ಪತ್ರ ಬರೆಯುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದರು.

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ, ಶಾಸಕ ಶಿವಲಿಂಗೇಗೌಡರು, ಸಂಸದ ಶ್ರೇಯಸ್ ಪಟೇಲ್ , ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ್ ಸೇರಿ ಹಿರಿಯ ಅಧಿಕಾರಿಗಳ ತಂಡವೇ ಸ್ಥಳದಲ್ಲಿತ್ತು.

ಮೈಸೂರಿನಿಂದ ಶಿರಾಡಿ ಘಾಟ್ ಗುಡ್ಡ ಕುಸಿತ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ತೆರಳಿದ ಸಿಎಂ

ಮೈಸೂರು: ಮೈಸೂರಿನಿಂದ ಶಿರಾಡಿ ಘಾಟ್ ಗುಡ್ಡ ಕುಸಿತ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ತೆರಳಿದ ಮುಖ್ಯಮಂತ್ರಿಗಳು ಮಾರ್ಗದುದ್ದಕ್ಕೂ ನಾನಾ ರಸ್ತೆ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.

ಮುಖ್ಯಮಂತ್ರಿಗಳ ಕಾರು ಬಿಳಿಕೆರೆ ಕ್ರಾಸ್ ಸಮೀಪಿಸುತ್ತಿದ್ದಂತೆ ಬಿಳಿಕೆರೆ ಕ್ರಾಸ್ ನಿಂದ ಯಡಗೊಂಡನಹಳ್ಳಿ ವರೆಗಿನ 41ಕಿಮೀ ಉದ್ದದ ನಾಲ್ಕು ಪಥ ರಾಷ್ಟ್ರೀಯ ಹೆದ್ದಾರಿ ಉದ್ದೇಶಿತ ಯೋಜನೆ ಬಗ್ಗೆ ಮಾಹಿತಿ ಪಡೆದರು. 600 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಟೆಂಡರ್ ಕರೆಯಲಾಗಿದೆ ಎನ್ನುವ ಮಾಹಿತಿ ಅಧಿಕಾರಿಗಳಿಂದ ಬಂತು.

ಮಾರ್ಗದಲ್ಲಿ ಅಲ್ಲಲ್ಲಿ ಕಾಣಿಸಿದ ರಸ್ತೆ ಗುಂಡಿಗಳಿಗೆ ಗರಂ ಆದ ಮುಖ್ಯಮಂತ್ರಿಗಳು, ಇದರಿಂದ ಅಪಘಾತಗಳ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಮಳೆ ಇಲ್ಲದ ಸಮಯ ನೋಡಿಕೊಂಡು ಗುಂಡಿಗಳನ್ನು ಮುಚ್ಚಿಸುವಂತೆ ಸೂಚನೆ ನೀಡಿದರು.

ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಲು ಸೂಚನೆ

ಹೊಳೆ ನರಸೀಪುರ ತಾಲೂಕಿನ ದೊಡ್ಡಕಾಡನೂರು ಮಾರ್ಗವಾಗಿ ಸಾಗುತ್ತಿದ್ದಂತೆ ಅಪಾಯದ ಸೂಚನೆ ನೀಡುತ್ತಿದ್ದ ವಿದ್ಯುತ್ ಕಂಬಗಳನ್ನು ಬದಲಾಯಿಸಿ, ವೈರ್‌ಗಳನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ದೂರವಾಣಿ ಮೂಲಕವೇ ಸೂಚಿಸಿದರು. ಹಳ್ಳಿ ಮೈಸೂರು ಹಾದು ಹೋಗುವಾಗ ಹಾಳಾಗಿದ್ದ ರಸ್ತೆ ವಿಭಜಕಗಳನ್ನು ಗುರುತಿಸಿ ಸರಿ ಪಡಿಸಲು ಸೂಚನೆ ನೀಡಿದರು.

Cloudburst: ಮೇಘಸ್ಫೋಟದಿಂದ ಉತ್ತರ ಭಾರತದಲ್ಲಿ ಅಲ್ಲೋಲ ಕಲ್ಲೋಲ; ಏನಿದು ವಿದ್ಯಮಾನ? ಹೇಗೆ ಸಂಭವಿಸುತ್ತದೆ? ಇಲ್ಲಿದೆ ವಿವರ

ನಾನು ಹುಟ್ಟು ಹಬ್ಬ ಮಾಡಲ್ಲ: ಇವೆಲ್ಲಾ ಯಾಕೆ ತಂದ್ರಿ?

ಮಾರ್ಗದುದ್ದಕ್ಕೂ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರಲು ಹಾರ ತುರಾಯಿ, ಶಾಲುಗಳ ಸಮೇತ ಅಲ್ಲಲ್ಲಿ ಕಾದಿದ್ದರು. ಯಾವುದನ್ನೂ ಸ್ವೀಕರಿಸದ ಸಿಎಂ, ನಾನು ಹುಟ್ಟು ಹಬ್ಬ ಆಚರಿಸಲ್ಲ ಎಂದು ಕೈ ಬೀಸಿ, ಕೈ ಮುಗಿದು ಮುಂದೆ ಸಾಗಿದರು.

Continue Reading

ಕರ್ನಾಟಕ

Pralhad Joshi: ವಯನಾಡ್ ದುರಂತದ ವಿಚಾರದಲ್ಲಿ ಕಾಂಗ್ರೆಸ್‌‌ನಿಂದ ರಾಜಕೀಯ; ಪ್ರಲ್ಹಾದ್‌ ಜೋಶಿ

Pralhad Joshi: ಕೇರಳ ಸರ್ಕಾರಕ್ಕೆ ಜುಲೈ 23 ರಂದೇ ಮುನ್ನೆಚ್ಚರಿಕೆ, ಅಗತ್ಯ ಮಾಹಿತಿಯನ್ನು ಕೇಂದ್ರ ಸರ್ಕಾರ ನೀಡಿದೆ. ಹಾಗಿದ್ದರೂ ಸ್ಥಳೀಯ ಸರ್ಕಾರ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದೆ. ಕೇರಳ ಸರ್ಕಾರದ ಆಡಳಿತ ವ್ಯವಸ್ಥೆ ಸರಿಯಿಲ್ಲ. ಅದನ್ನು ಕೇಂದ್ರದ ಮೇಲೆ ಹೊರಿಸುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

VISTARANEWS.COM


on

Union Minister Pralhad Joshi latest statement in Bengaluru
Koo

ಬೆಂಗಳೂರು: ವಯನಾಡ್ ದುರಂತದ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದು ತರವಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಖಂಡಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಎನ್‌ಡಿಎ ಮೈತ್ರಿಕೂಟ ನಡೆಸುತ್ತಿರುವ ಪಾದಯಾತ್ರೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಮತ್ತು ಜಾನ್ ಬ್ರಿಟಾಸ್ ಅವರು ಕೇರಳದ ವಯನಾಡ್ ದುರಂತದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಜೋಶಿ ಆಕ್ಷೇಪಿಸಿದರು.

ಇದನ್ನೂ ಓದಿ: Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಕೇರಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಅವಘಡಕ್ಕೂ ಮೊದಲೇ ಮುನ್ನೆಚ್ಚರಿಕೆ ನೀಡಿದೆ ಎಂದು ಸ್ಪಷ್ಟಪಡಿಸಿದರು. ನಾವು ನಿಜಕ್ಕೂ ಮೊದಲೇ ಎಚ್ಚರಿಕೆ ನೀಡಿದ್ದೇವೆ ಎಂದು ಕೇಂದ್ರ ಗೃಹ ಸಚಿವರು ಸ್ಪಷ್ಟಪಡಿಸಿದ ನಂತರವೂ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದು, ಇದು ರಾಜಕೀಯ ಕಾರಣಕ್ಕಲ್ಲದೆ ಮತ್ತೇನು ಅಲ್ಲ ಎಂದು ಸಚಿವ ಪ್ರಲ್ಹಾದ್‌ ಜೋಶಿ ಹರಿಹಾಯ್ದರು.

ಜುಲೈ 23 ರಂದೇ ಕೇರಳ ಸರ್ಕಾರಕ್ಕೆ ಮುನ್ನೆಚ್ಚರಿಕೆ, ಅಗತ್ಯ ಮಾಹಿತಿಯನ್ನು ಕೇಂದ್ರ ಸರ್ಕಾರ ನೀಡಿದೆ. ಹಾಗಿದ್ದರೂ ಸ್ಥಳೀಯ ಸರ್ಕಾರ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದೆ. ಕೇರಳ ಸರ್ಕಾರದ ಆಡಳಿತ ವ್ಯವಸ್ಥೆ ಸರಿಯಿಲ್ಲ. ಅದನ್ನು ಕೇಂದ್ರದ ಮೇಲೆ ಹೊರಿಸುವುದು ಸರಿಯಲ್ಲ ಎಂದು ಜೋಶಿ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: Book Release: ಬೆಂಗಳೂರಿನಲ್ಲಿ ಆ.4ರಂದು ʼರಣಧುರಂಧರʼ ಗ್ರಂಥ ಲೋಕಾರ್ಪಣೆ

ವಯನಾಡ್ ದುರಂತದ ಕುರಿತು ಕಾಂಗ್ರೆಸ್ ಆರೋಪ ಮಾಡಿದರೆ ಅದು ರಾಜಕೀಯವಲ್ಲ, ನಾವು ಸ್ಪಷ್ಟನೆ ನೀಡಿದರೆ ರಾಜಕೀಯ ಮಾಡಿದ ಹಾಗೆ ಆಗುತ್ತದೆಯೇ? ಎಂದು ಸಚಿವರು ಪ್ರಶ್ನಿಸಿದರು.

Continue Reading

ಕರ್ನಾಟಕ

KAS Recruitment 2024: ಆ.25ರಂದೇ ನಡೆಯಲಿದೆ ಕೆಎಎಸ್‌ ಪೂರ್ವ ಭಾವಿ ಪರೀಕ್ಷೆ: ಕೆಪಿಎಸ್‌ಸಿ ಸ್ಪಷ್ಟನೆ

KAS Recruitment 2024: ಆ.25ರಂದು ನಿಗದಿಯಾಗಿರುವ ಕೆಎಎಸ್‌ ಪೂರ್ವಭಾವಿ ಪರೀಕ್ಷೆಗೆ ಈಗಾಗಲೇ ಎಲ್ಲಾ ರೀತಿಯ ಪೂರ್ವ ಸಿದ್ಧತೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪರೀಕ್ಷಾ ದಿನಾಂಕದಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲವೆಂದು ಎಂದು ಕೆಪಿಎಸ್‌ಸಿ ತಿಳಿಸಿದೆ.

VISTARANEWS.COM


on

KAS Recruitment 2024
Koo

ಬೆಂಗಳೂರು: ಲೋಕಸಭಾ ಚುನಾವಣೆ ಸೇರಿ ವಿವಿಧ ಕಾರಣಗಳಿಂದ ಹಲವು ಬಾರಿ ಮುಂದೂಡಿಕೆಯಾಗಿದ್ದ ಕೆಎಎಸ್‌ ಪೂರ್ವ ಭಾವಿ ಪರೀಕ್ಷೆ(KAS Recruitment 2024), ಆ.25ರಂದೇ ನಡೆಯಲಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕೆಪಿಎಸ್‌ಸಿ, ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳಿಗೆ ಫೆ.26ಎಂದು ಅಧಿಸೂಚನೆ ಹೊರಡಿಸಿತ್ತು. ಈ ಸಂಬಂಧ ಜುಲೈ 30ರಂದು ನಡೆದ ಆಯೋಗದ ಸಭೆಯಲ್ಲಿ ಚರ್ಚಿಸಿ, ಆ.25ರಂದು ನಿಗದಿಪಡಿಸಿರುವ ಪೂರ್ವಭಾವಿ ಪರೀಕ್ಷೆಗೆ (KAS prelims exam) ಈಗಾಗಲೇ ಎಲ್ಲಾ ರೀತಿಯ ಪೂರ್ವ ಸಿದ್ಧತೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪರೀಕ್ಷಾ ದಿನಾಂಕದಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲವೆಂದು ತೀರ್ಮಾನಿಸಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ | Job News: 961 ಹುದ್ದೆಗಳ ಭರ್ತಿಗೆ ಕೃಷಿ ಇಲಾಖೆಯಿಂದ ಕೆಪಿಎಸ್‌ಸಿಗೆ ಪ್ರಸ್ತಾವನೆ; ಎಲ್ಲಿ ಎಷ್ಟು ಹುದ್ದೆ?

ಪರೀಕ್ಷಾ ದಿನಾಂಕ ಬದಲಾವಣೆಗೆ ಮನವಿ

ಕೆಎಎಸ್‌ ಪೂರ್ವ ಭಾವಿ ಪರೀಕ್ಷೆ ನಿಗದಿಯಾಗಿರುವ ಆ.25ರಂದೇ ಬ್ಯಾಂಕಿಂಗ್‌ ಹುದ್ದೆಗಳಿಗೆ ಐಬಿಪಿಎಸ್‌ ಪರೀಕ್ಷೆ ನಡೆಸುತ್ತಿದೆ. ಇದರಿಂದ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಕೆಎಎಸ್‌ ಪ್ರಿಲಿಮ್ಸ್ ಪರೀಕ್ಷಾ ದಿನಾಂಕ ಮುಂದೂಡಬೇಕು ಎಂದು ಅಭ್ಯರ್ಥಿಗಳು ಮನವಿ ಮಾಡುತ್ತಿದ್ದಾರೆ. ಆದರೆ, ಈಗಾಗಲೇ ಪೂರ್ವ ಸಿದ್ಧತೆ ನಡೆದಿರುವುದರಿಂದ ದಿನಾಂಕ ಬದಲಿಸಲು ಸಾಧ್ಯವಿಲ್ಲ ಎಂದು ಕೆಪಿಎಸ್‌ಸಿ ತಿಳಿಸಿದೆ.

Job Alert: ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಐಟಿಐ ಪಾಸಾದವರು ಅಪ್ಲೈ ಮಾಡಿ

ಬೆಂಗಳೂರು: ಐಟಿಐ, ಬಿಟೆಕ್‌ ಅಥವಾ ಬಿಇ ಓದಿ ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (Electronics Corporation of India Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (ECIL Recruitment 2024). ಪ್ರಾಜೆಕ್ಟ್‌ ಎಂಜಿನಿಯರ್‌, ಟೆಕ್ನಿಕಲ್‌ ಆಫೀಸರ್‌ ಸೇರಿ ಸುಮಾರು 115 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ತಿಳಿಸಿದೆ. ಉದ್ಯೋಗದ ಸ್ಥಳ: ಭಾರತಾದ್ಯಂತ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಆಗಸ್ಟ್‌ 8 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಪ್ರಾಜೆಕ್ಟ್ ಎಂಜಿನಿಯರ್ 20 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿಟೆಕ್
ಟೆಕ್ನಿಕಲ್ ಆಫೀಸರ್ 53 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿಟೆಕ್
ಜೂನಿಯರ್ ಟೆಕ್ನಿಷಿಯನ್ 42 ಹುದ್ದೆ, ವಿದ್ಯಾರ್ಹತೆ: ಐಟಿಐ

ವಯೋಮಿತಿ

ಪ್ರಾಜೆಕ್ಟ್ ಎಂಜಿನಿಯರ್: ಗರಿಷ್ಠ ವಯಸ್ಸು 33 ವರ್ಷ
ಟೆಕ್ನಿಕಲ್ ಆಫೀಸರ್: ಗರಿಷ್ಠ ವಯಸ್ಸು 33 ವರ್ಷ
ಜೂನಿಯರ್ ಟೆಕ್ನಿಷಿಯನ್: ಗರಿಷ್ಠ ವಯಸ್ಸು 30 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ವಿದ್ಯಾರ್ಹತೆ, ಉದ್ಯೋಗದ ಅನುಭವ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಮಾಸಿಕ ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಾಜೆಕ್ಟ್ ಎಂಜಿನಿಯರ್: 40,000 ರೂ. – 55,000 ರೂ., ಟೆಕ್ನಿಕಲ್ ಆಫೀಸರ್: 25,000 ರೂ. – 31,000 ರೂ. ಮತ್ತು ಜೂನಿಯರ್ ಟೆಕ್ನಿಷಿಯನ್: 22,412 ರೂ. – 27,258 ರೂ. ಮಾಸಿಕ ವೇತನ ದೊರೆಯಲಿದೆ. ಆಯ್ಕೆಯಾದವರಿಗೆ ಜಾಮ್ನಗರ, ಬಾರಕ್‌ಪುರ, ಕೈಗಾ, ಹೈದರಾಬಾದ್‌, ವಿಶಾಖಪಟ್ಟಣ, ಗೌರಿಬಿದನೂರು, ಮಂಗಳೂರು, ಮುಂಬೈ, ಚೆನ್ನೈ, ಥಾಣೆ, ನವದೆಹಲಿ, ಅಲಹದಾಬಾದ್‌, ಗುವಹಾಟಿ, ನಾಗ್ಪುರ, ರಾವತ್‌ಭಾಟ, ಗುಜರಾತ್‌, ತಾರಾಪುರ, ಖರಕ್‌ಪುರ, ಕುಂಡಕುಳಂ ಮುಂತಾಡೆ ಪೋಸ್ಟಿಂಗ್‌ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ECIL Recruitment 2024 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಕೆ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://www.ecil.co.in/job_details_17_2024.php)
  • ಅಗತ್ಯ ವಿವರಗಳನ್ನು ತುಂಬಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆ, ಫೋಟೊ ಅಪ್‌ಲೋಡ್‌ ಮಾಡಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಂಡು ಪ್ರಿಂಟ್‌ಔಟ್‌ ತೆಗೆಯಿರಿ.

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ ecil.co.inಗೆ ಭೇಟಿ ನೀಡಿ.

ಇದನ್ನೂ ಓದಿ: SSC Recruitment 2024: 2,0

Continue Reading
Advertisement
MS Dhoni
ಪ್ರಮುಖ ಸುದ್ದಿ9 mins ago

MS Dhoni : ವಿರಾಟ್ ಕೊಹ್ಲಿ ಜತೆಗಿನದ ಸಂಬಂಧವನ್ನು ವಿವರಿಸಿದ ಕೂಲ್ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ

KCET 2024
ಬೆಂಗಳೂರು27 mins ago

KCET 2024 : ನೀಟ್‌ ಮೊದಲ ಸುತ್ತಿನ ಕೌನ್ಸೆಲಿಂಗ್ ನಂತರವೇ ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಶುರು

Shiradi ghat landslide
ಕರ್ನಾಟಕ27 mins ago

Shiradi ghat landslide: ಶಿರಾಡಿ ಘಾಟ್ ಗುಡ್ಡ ಕುಸಿತದ ಭೀಕರತೆಗೆ ಸಿಎಂ‌ ಶಾಕ್; 90 ಡಿಗ್ರಿ ನೇರವಾಗಿ ಗುಡ್ಡ ಸೀಳಿದ್ದಕ್ಕೆ ಅಧಿಕಾರಿಗೆ ತರಾಟೆ

Paris Olympics 2024
ಪ್ರಮುಖ ಸುದ್ದಿ31 mins ago

Paris Olympics 2024 : ಪುರುಷ ಸ್ಪರ್ಧಿಯಿಂದ ಏಟು ತಿಂದ ಇಟಲಿಯ ಮಹಿಳಾ ಬಾಕ್ಸರ್​ಗೆ 41 ಲಕ್ಷ ಬಹುಮಾನ ಘೋಷಿಸಿದ ಬಾಕ್ಸಿಂಗ್​ ಸಂಸ್ಥೆ

ದೇಶ38 mins ago

Accident: ಬಾಲಕ ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಡಿಕ್ಕಿ; ಮಹಿಳೆ ಬಲಿ; ಭೀಕರ ದೃಶ್ಯ ವೈರಲ್‌

Wayanad Landslide
ದೇಶ41 mins ago

Wayanad Landslide: ವಯನಾಡು ಭೂಕುಸಿತ; ಎಲ್‌ಐಸಿ ಸೇರಿ ವಿಮಾ ಕಂಪನಿಗಳಿಗೆ ಕೇಂದ್ರ ಪ್ರಮುಖ ಸೂಚನೆ!

Manu Bhaker
ಕ್ರೀಡೆ41 mins ago

Manu Bhaker: 20 ಲಕ್ಷದಿಂದ 1.5 ಕೋಟಿಗೆ ಏರಿಕೆ ಕಂಡ ಮನು ಭಾಕರ್ ಜಾಹೀರಾತು ಮೌಲ್ಯ; 40ಕ್ಕೂ ಹೆಚ್ಚು ಕಂಪನಿಗಳಿಂದ ಆಫರ್​

Raayan Movie crosses Rs 100 crore
ಕಾಲಿವುಡ್44 mins ago

Raayan Movie: ಎಂಟೇ ದಿನಕ್ಕೆ ‘100 ಕೋಟಿ ಕ್ಲಬ್‌’ ಸೇರಿದ ಧನುಷ್ ನಟನೆಯ’ರಾಯನ್‌’ ಸಿನಿಮಾ!

Paris Olympics 2024
ಪ್ರಮುಖ ಸುದ್ದಿ54 mins ago

Paris Olympics 2024 : ಚಿನ್ನ ಪದಕ ಗೆದ್ದ ಖುಷಿಗೆ ಸಹ ಆಟಗಾರ್ತಿಗೆ ಮದುವೆ ಪ್ರಪೋಸ್ ಮಾಡಿದ ಚೀನಾದ ಷಟ್ಲರ್​!

Cloudburst
ದೇಶ1 hour ago

Cloudburst: ಮೇಘಸ್ಫೋಟದಿಂದ ಉತ್ತರ ಭಾರತದಲ್ಲಿ ಅಲ್ಲೋಲ ಕಲ್ಲೋಲ; ಏನಿದು ವಿದ್ಯಮಾನ? ಹೇಗೆ ಸಂಭವಿಸುತ್ತದೆ? ಇಲ್ಲಿದೆ ವಿವರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ5 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌