ಆಸ್ತಿ ಬರೆದುಕೊಡುವಂತೆ ದಂಪತಿಗೆ ಬೆದರಿಕೆ ಹಾಕಿದ್ರಾ ಶಾಸಕ ಚರಂತಿಮಠ? - Vistara News

ಕ್ರೈಂ

ಆಸ್ತಿ ಬರೆದುಕೊಡುವಂತೆ ದಂಪತಿಗೆ ಬೆದರಿಕೆ ಹಾಕಿದ್ರಾ ಶಾಸಕ ಚರಂತಿಮಠ?

ಆಸ್ತಿ ವಿಚಾರವಾಗಿ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ದಂಪತಿ ಮೇಲೆ ದರ್ಪ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದಂಪತಿ ದೂರಿದ್ದಾರೆ.

VISTARANEWS.COM


on

ದಂಪತಿಗೆ ಬೆದರಿಕೆ
ತಾಲೂಕಿನ ಅಡವಿ ಸೋಮಾಪುರ ನಿವಾಸಿ ಮಲ್ಲಯ್ಯ ಹಿರೇಮಠ ಮತ್ತು ಲಕ್ಷ್ಮೀ ಹಿರೇಮಠ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗದಗ : ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ದಂಪತಿ ಮೇಲೆ ಆಸ್ತಿ ವಿಚಾರವಾಗಿ ದರ್ಪ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಆಸ್ತಿ ಬರೆದುಕೊಡುವಂತೆ ದಂಪತಿಗೆ ಹಿಗ್ಗಾಮುಗ್ಗ ಥಳಿಸಿ ಶಾಸಕರು ಜೀವ ಬೆದರಿಕೆ ಒಡ್ಡಿರುವುದಾಗಿ ದಂಪತಿ ಆರೋಪಿಸಿದ್ದಾರೆ. ಆದರೆ ಇದಕ್ಕೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಚರಂತಿಮಠ, ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ದಂಪತಿ ಯಾರೆಂದು ತಾವು ನೋಡಿಯೂ ಇಲ್ಲ ಎಂದಿದ್ದಾರೆ.

ತಾಲೂಕಿನ ಅಡವಿ ಸೋಮಾಪುರ ನಿವಾಸಿ ಮಲ್ಲಯ್ಯ ಹಿರೇಮಠ ಮತ್ತು ಲಕ್ಷ್ಮೀ ಹಿರೇಮಠ ಎಂಬುವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಕುಮಾರೇಶ್ವರ ಗೆಸ್ಟ್‌ ಹೌಸ್‌ಗೆ ಕರೆಸಿ ಶಾಸಕ ವೀರಣ್ಣ ಚರಂತಿಮಠ ಬೆಲ್ಟ್ ನಿಂದ ಹಿಗ್ಗಾಮುಗ್ಗಾ ಥಳಿಸಿರುವುದಾಗಿ ದಂಪತಿ ಆರೋಪಿಸಿದ್ದಾರೆ.

ನೂರಾರು ಬೆಂಬಲಿಗರ ಸಮ್ಮುಖದಲ್ಲೇ ಮಹಿಳೆ ಮೇಲೆ ಖುರ್ಚಿ ಎತ್ತಿ ಹಾಕಿ ಹಲ್ಲೆ ಮಾಡಿದ್ದಾರೆ. ಕಿವಿ, ಕೈ, ತೊಡೆಗೆ ಬಾಸುಂಡೆ ಬರುವಂತೆ ಮನಸ್ಸೋ ಇಚ್ಛೆ ಥಳಿಸಿ ನಿಂದನೆ ಮಾಡಿ, ಮಹಿಳೆ ಎಂದೂ ನೋಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಆಸ್ತಿ ಬರೆದುಕೊಡದಿದ್ದರೆ ಉಳಿಸುವುದಿಲ್ಲ ಎಂದು ಶಾಸಕ ಬೆದರಿಕೆ ಹಾಕಿದ್ದಾರೆ. ನವನಗರದಲ್ಲಿರುವ 20 ಗುಂಟೆ ಜಾಗ ಬರೆದುಕೊಡುವಂತೆ ಧಮ್ಕಿ ಹಾಕಿದ್ದಾರೆ ಎಂದು ದಂಪತಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | ಸಾಲದ ವಿವಾದ: 75ರ ವೃದ್ಧನಿಂದ 35ರ ಮಹಿಳೆಯ ಅತ್ಯಾಚಾರ, ಗ್ಯಾಂಗ್‌ಸ್ಟರ್‌ಗಳಿಂದ ಬೆದರಿಕೆ

ಬಾಗಲಕೋಟೆಯ ಗುರುಬಸವ ಪತ್ತಿನ ಸಹಕಾರಿ ಬ್ಯಾಂಕ್‌ನಲ್ಲಿ ಹಿರೇಮಠ ದಂಪತಿ 60 ಲಕ್ಷ ರೂ. ಸಾಲ ಮಾಡಿದ್ದರು. ಆದರೆ ಸಾಲ ಮರುಪಾವತಿ ಮಾಡುವುದು ತಡವಾಗಿತ್ತು. ಸಾಲ ತುಂಬಲು ಹೋಗಿದ್ದ ದಂಪತಿಗೆ ಶಾಸಕ ಕರೆಯಿಸಿ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂಬುವುದು ಚಿರಂತಿಮಠ ಮೇಲಿರುವ ಆರೋಪ.

ಪ್ರಕರಣ ಕುರಿತಂತೆ ಬಾಗಲಕೋಟೆ ಎಸ್ಪಿ ಮಾತನಾಡಿ, ಆರೋಪ ಮಾಡಿರುವ ಈ ದಂಪತಿಗಳು ನಮ್ಮನ್ನು ಭೇಟಿ ಮಾಡಿಲ್ಲ. ದಂಪತಿ ಅಡ್ಮಿಟ್ ಆಗಿರುವ ಆಸ್ಪತ್ರೆಗೆ ಹೋಗಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಕುಟುಂಬಸ್ಥರಿಂದ ದೂರು ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ದೂರು ಕೊಡಲು ಬಂದಾಗ ಯಾರೇ ಆದರೂ ದೂರು ಪಡೆಯಲೇಬೇಕು. ಠಾಣೆಗೆ ಬಂದಿದ್ದರೆ ರೆಕಾರ್ಡ್‌ ಇರುತ್ತಿತ್ತು. ಈಗಲೂ ಒಂದು ಅರ್ಜಿ ಅಥವಾ ಕಂಪ್ಲೆಂಟ್‌ ಕೊಟ್ಟರೂ ಸಹ ಪರಿಶೀಲನೆ ಮಾಡುತ್ತೇವೆ. ಸದ್ಯಕ್ಕೆ ಪರಿಶೀಲನೆ ಮಾಡಲಾಗಿದ್ದು, ಅವರು ಠಾಣೆಗೆ ಬಂದಿದ್ದು ನಮಗೆ ಕಂಡು ಬಂದಿಲ್ಲ. ಎಂದು ಬಾಗಲಕೋಟೆಯಲ್ಲಿ ಎಸ್ಪಿ ಲೋಕೇಶ್ ಜಗಲಾಸರ್ ಹೇಳಿದ್ದಾರೆ.

ಇದನ್ನೂ ಓದಿ | ಅಂಗಿಬಿಚ್ಚಿ, ಕೈಯಲ್ಲಿ ಖಡ್ಗ ಹಿಡಿದು ನೂಪುರ್‌ ಶರ್ಮಾಗೆ ಬೆದರಿಕೆ ಹಾಕಿದ್ದ ಯೂಟ್ಯೂಬರ್‌ ಬಳಿಕ ಕೈಮುಗಿದ !

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಹುಬ್ಬಳ್ಳಿ

Assault case: ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಗ್ಯಾಂಗ್ ವಾರ್! ನಡುರಸ್ತೆಯಲ್ಲೆ ಹೊಡಿಬಡಿ

Assault case : ಹುಬ್ಬಳ್ಳಿಯಲ್ಲಿ ಪ್ರತ್ಯೇಕ ಕಡೆಗಳಲ್ಲಿ ಹೊಡೆದಾಟ ಬಡಿದಾಟ ನಡೆದಿದೆ. ಪುಡಿ ರೌಡಿಗಳ ಗ್ಯಾಂಗ್‌ ವಾರ್‌ ನಡೆದಿದ್ದು, ದೂರು-ಪ್ರತಿದೂರು ದಾಖಲಾಗಿದೆ. ಇತ್ತ ತುಮಕೂರಿನಲ್ಲಿ ಗ್ರಾಪಂ ಸದಸ್ಯನ ಮೇಲೆ ಉಪಾಧ್ಯಕ್ಷ ಚಪ್ಪಲಿ ಎಸೆದು ಹಲ್ಲೆ ನಡೆಸಿದ್ದಾನೆ.

VISTARANEWS.COM


on

By

Assault Case in Hubballi
Koo

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ನಡುವೆ ಗ್ಯಾಂಗ್ ವಾರ್ (Gang War) ನಡೆದಿದ್ದು, ಎರಡು ಗ್ಯಾಂಗ್‌ಗಳಿಂದ ದೂರು ಪ್ರತಿದೂರು ದಾಖಲಾಗಿದೆ. ಗನ್ ತೋರಿಸಿ‌ ಕೊಲೆ ಮಾಡಲು ಯತ್ನಿಸಿರುವ ಆರೋಪದಡಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (Assault case) ದಾಖಲಾಗಿದೆ.

ಸುಂದರ್, ಪಿಲೋಮಿನ್, ಚಂದ್ರ ಪೌಲ್ ಎಂಬುವವರ ವಿರುದ್ಧ ಹುಬ್ಬಳ್ಳಿಯ ಸೆಟ್ಲಮೆಂಟ್ ನಿವಾಸಿ ಅಭಿಷೇಕ್ ಜಾಧವ್ ದೂರು ನೀಡಿದ್ದಾರೆ. ಕಾಂಗ್ರೆಸ್ ಮುಖಂಡ ಶಾಮ್ ಜಾಧವ ಹಾಗೂ ಪಾಲಿಕೆ ಸದಸ್ಯೆ ಮಂಜುಳಾ ಜಾಧವ ಅವರ ಪುತ್ರ ಅಭಿಷೇಕ್ ಜಾಧವ್‌ಗೆ ಈ ಆರೋಪಿಗಳು ಹುಬ್ಬಳ್ಳಿಗೆ ನಾವೇ ಡಾನ್‌ಗಳು ಎಂದು‌ ಧಮ್ಕಿ ಹಾಕಿದ್ದರಂತೆ.

ಇತ್ತ ಸುಂದರ ಪೌಲ್ ಆ್ಯಂಡ್ ಟೀಮ್ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ಅಭಿಷೇಕ್‌ ಜಾಧವ್ ಗ್ಯಾಂಗ್‌ನವರು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ಹಲವು ಕ್ರಿಮಿನಲ್ ಆರೋಪ ಹೊತ್ತಿರುವ ಈ ಎರಡು ಗ್ಯಾಂಗ್‌ಗಳ ನಡುವೆ ಕಲಹ ಶುರುವಾಗಿದೆ. ಈ ಮಧ್ಯೆ ಪರಸ್ಪರ ಅವಾಜ್ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Murder Case : ರೌಡಿಯಾಗಲು ಹೊರಟವನನ್ನು ಕೊಂದು ಹಾಕಿದ್ರು ಪುಂಡರು

ಕ್ಷುಲ್ಲಕ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಮಾರಾಮಾರಿ

ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಮಾರಣಾಂತಿಕ ಹಲ್ಲೆ ಮಾಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ಸೆಟ್ಲ್‌ಮೆಂಟ್‌‌ ಏರಿಯಾದಲ್ಲಿ ಪ್ರಜ್ವಲ ಬೆಳ್ಳಿಗಟ್ಟಿ, ವಿಕಾಸ ಭಜಂತ್ರಿ ಎಂಬುವವರ ಸ್ವಯಂ ಜಾಧವ, ಪ್ರಜ್ವಲ ಜಾಧವ ಎಂಬುವವರು ಗುಂಪು ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ.

assault Case in hubballi

ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ಹೊಂದಾಣಿಕೆಗೆ ಅವಕಾಶ ಕೊಟ್ಟು ಪೊಲೀಸರು ಸುಮ್ಮನಾಗಿದ್ದಾರೆ ಎಂದು ಹಲ್ಲೆಗೊಳಗಾದ ಗುಂಪು ಆರೋಪಿಸಿವೆ. ಇನ್ನೂ ಹಲ್ಲೆಗೊಳಗಾದವರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪೊಲೀಸರು ಗಾಯಾಳುಗಳ MLC ಮಾಡಿ ಸುಮ್ಮನಾಗಿದ್ದಾರೆ. ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತುಮಕೂರಿನಲ್ಲಿ ಗ್ರಾಪಂ ಸದಸ್ಯನ ಮೇಲೆ ಚಪ್ಪಲಿ ಎಸೆತ

ಮದುವೆ ಸಮಾರಂಭಕ್ಕೆ ಹೋಗಿದ್ದಾಗ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಲಾಗಿದೆ. ಹಲ್ಲೆ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ಘಟನೆ ನಡೆದಿದೆ.

ತುರುವೇಕೆರೆ ತಾಲೂಕಿನ ತಂಡಗ ಗ್ರಾಮ ಪಂಚಾಯತಿಯ ಸದಸ್ಯ ಮೋಹನ್ ಮೇಲೆ ಉಪಧ್ಯಾಕ್ಷ ಚನ್ನಬಸವೇಗೌಡನಿಂದ ಹಲ್ಲೆ ನಡೆದಿದೆ. ತಂಡಗ ಗ್ರಾಮ ಪಂಚಾಯತಿ ಅಧ್ಯಕ್ಷನ ಅವಿಶ್ವಾಸ ಮಂಡನೆಗೆ ಸಹಿ ಹಾಕಲು ಮೋಹನ್ ನಿರಾಕರಿಸಿದ್ದರು ಎನ್ನಲಾಗಿದೆ.

ಹೀಗಾಗಿ ಸಹಿ ಹಾಕುವಂತೆ ಮೋಹನ್‌ಗೆ ಚನ್ನಬಸವೇಗೌಡ ಒತ್ತಾಯಿಸಿದ್ದರು. ಸಹಿ ಹಾಕಲು ಒಪ್ಪದಿದ್ದಾಗ ಚನ್ನಬಸವೇಗೌಡ ಸಿಟ್ಟಿನಲ್ಲಿ ಮುಖಕ್ಕೆ ಹೊಡೆದು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಮದುವೆ ಸಮಾರಂಭಕ್ಕೆ ಹೋಗಿದ್ದ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಸದ್ಯ ಘಟನೆ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Actor Darshan: ದರ್ಶನ್ ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ ಮೀನಾ; ಕುಟುಂಬಸ್ಥರನ್ನು ಕಂಡು ನಟ ಭಾವುಕ

Actor Darshan: ದರ್ಶನ್‌ ಅವರ ತಾಯಿ ಮೀನಾ, ತಮ್ಮ ದಿನಕರ್, ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್‌ ಪರಪ್ಪನ ಅಗ್ರಹಾರ ಜೈಲಿಗೆ ಸೋಮವಾರ ಭೇಟಿ ನೀಡಿದ್ದರು. ಕುಟುಂಬಸ್ಥರನ್ನು ಕಂಡು ದರ್ಶನ್‌ ಕೂಡ ಭಾವುಕರಾಗಿದ್ದಾರೆ.

VISTARANEWS.COM


on

Actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ಕುಟುಂಬಸ್ಥರು ಸೋಮವಾರ ಭೇಟಿ ಮಾಡಿದರು. ಕುಟುಂಬಸ್ಥರನ್ನು ನೋಡುತ್ತಿದ್ದಂತೆ ದರ್ಶನ್ ಭಾವುಕರಾಗಿದ್ದು, ಈ ವೇಳೆ ಮಗನನ್ನು ಅಪ್ಪಿಕೊಂಡು ತಾಯಿ ಮೀನಾ ಕೂಡ ಕಣ್ಣೀರು ಹಾಕಿದ್ದಾರೆ. ತನ್ನ ಸ್ಥಿತಿ ಕಂಡು ಗೋಳಾಡುತ್ತಿದ್ದ ತಾಯಿಗೆ ದರ್ಶನ್ (Actor Darshan) ಸಮಾಧಾನ ಹೇಳಿದ್ದಾರೆ.

ಭೇಟಿ ವೇಳೆ ಮಗ ವಿನೀಶ್‌ನನ್ನು ತೊಡೆಯ ಮೇಲೆ ಕೂರಿಸಿಕೊಂಡು ದರ್ಶನ್ ಮುದ್ದಾಡಿದ್ದಾರೆ. ಸ್ನೇಹಿತರಂತಿದ್ದ ತಂದೆ-ಮಗನ ಸ್ಥಿತಿ ಕಂಡು ದರ್ಶನ್ ಪತ್ನಿ ವಿಜಯಲಕ್ಷ್ಮಿ ಭಾವುಕರಾಗಿದ್ದಾರೆ. ಇನ್ನು ದರ್ಶನ್‌ಗೆ ಸಹೋದರ ದಿನಕರ್ ತೂಗುದೀಪ್ ಧೈರ್ಯ ತುಂಬಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಕಳೆದ ಹತ್ತು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಹೀಗಾಗಿ ಹಲವು ನಟ, ನಟಿಯರು ಹಾಗೂ ಕುಟುಂಬಸ್ಥರು ನಟ ದರ್ಶನ್‌ರನ್ನು ಭೇಟಿ ಮಾಡುತ್ತಿದ್ದಾರೆ.

ಇದನ್ನೂ ಓದಿ | Actor Darshan: ಕೆಟ್ಟ ಕಮೆಂಟ್‌ ಮಾಡೋರನ್ನ ಬ್ಲಾಕ್‌ ಮಾಡಿ, ದರ್ಶನ್‌ ನಿರಪರಾಧಿ ಆಗಿ ಹೊರ ಬರಲಿ ಎಂದ ಅದ್ವಿತಿ ಶೆಟ್ಟಿ

ಇನ್ನು ಬಂದಿಖಾನೆ ಇಲಾಖೆ ಕಾನೂನನ್ನು ಗಾಳಿಗೆ ತೂರಿ ದರ್ಶನ್‌ಗೆ ರಾಜಾತಿಥ್ಯ ನೀಡಿದೆ. ಸಾಮಾನ್ಯರು ಜೈಲಿಗೆ ಎಂಟ್ರಿ‌ ಕೊಡಬೇಕಾದರೆ ಹತ್ತಾರು ರೂಲ್ಸ್‌ ಹೇಳುತ್ತಾರೆ. ಅದೇ ನಟ ದರ್ಶನ್ ಕುಟುಂಬಕ್ಕೆ ಮಾತ್ರ ಕಂಡಿಷನ್ ಇಲ್ಲವೆಂಬಂತಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ರಾಜಾರೋಷವಾಗಿ ನಟ ದರ್ಶನ್ ಕುಟುಂಬದವರಿಗೆ ಜೈಲು ಎಂಟ್ರಿ ನೀಡಲಾಗಿದೆ. ಮಾಧ್ಯಮಗಳ ಕಣ್ತಪ್ಪಿಸಿ ನಟ ದರ್ಶನ್ ಅವರನ್ನು ಕುಟುಂಬ ಭೇಟಿ ಮಾಡಿದೆ. ಪರಪ್ಪನ ಅಗ್ರಹಾರ ಜೈಲಿಗೆ ನಟ ದರ್ಶನ್ ತಾಯಿ, ತಮ್ಮ ಪತ್ನಿ ಮಗ ಎಂಟ್ರಿ ಕೊಟ್ಟರು. ಹತ್ತು ಗಂಟೆ ಸುಮಾರಿಗೆ ಕುಟುಂಬ ಜೈಲಿಗೆ ಬಂದಿತ್ತು. ಪರಪ್ಪನ ಅಗ್ರಹಾರ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಉದಯ್ ದರ್ಶನ್ ಭೇಟಿಗೆ ಕರೆದೊಯ್ದರು. ಉದಯ್‌ ಅವರು ಕಳೆದ ಸೋಮವಾರ ಸಹ ಮಾಧ್ಯಮಗಳ ಕಣ್ತಪ್ಪಿಸಿ ಪತ್ನಿ ಮಗನನ್ನು ಕರೆದೊಯ್ದಿದ್ದರು. ಇಂದು ಕೂಡ ಖಾಸಗಿ ಕಾರಿನಲ್ಲಿ ಉದಯ್‌ ಕುಟುಂಬವನ್ನು ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ.

Actor Darshan: ದರ್ಶನ್ ನನ್ನ ಮಗು, ಆತ ಕೊಟ್ಟ ಕೊಡುಗೆ ಕಡೆ ನೋಡೋಣ ಎಂದ ಹಂಸಲೇಖ!

Actor Darshan is like my son says hamsalekha

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್‌ (Actor Darshan) ಸೆರೆವಾಸ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನವೂ ದರ್ಶನ್‌ ಅವರ ಅಮ್ಮ ಹಾಗೂ ತಮ್ಮ ಮಗನ ಭೇಟಿಗೆ ಸೆರೆಮನೆಯತ್ತ ಕಾಲಿಟ್ಟಿರಲಿಲ್ಲ. ಇಂದಾದರೂ ಅವರು ಆಗಮಿಸಲಿದ್ದಾರಾ ಎಂಬ ಕುತೂಹಲ ಮೂಡಿದೆ. ರಚಿತಾ ರಾಮ್, ರಕ್ಷಿತಾ, ಪ್ರೇಮ್ ಸೇರಿದಂತೆ ಸಾಕಷ್ಟು ಮಂದಿ ದರ್ಶನ್ ಪರ ನಿಂತಿದ್ದಾರೆ. ಈಗ ನಾದ ಬ್ರಹ್ಮ ಹಂಸಲೇಖ ಕೂಡ ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಂಸಲೇಖ ಮಾತನಾಡಿ ʻʻನಾವು ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು. ದ್ವೇಷ ಇದೆಯಲ್ಲ ಅದನ್ನು ಕ್ಯಾರೆಕ್ಟರ್ ಮಾಡಬೇಕು. ಸಿಟ್ಟು ಅಂದರೆ ಅದೊಂದು ಸ್ಕ್ರಿಪ್ಟ್‌ . ದ್ವೇಷ ಅಂದರೆ ಅದು ಕ್ಯಾರೆಕ್ಟರ್ ಅಯ್ಯ. ಆತರ ಸಿನಿಮಾದಲ್ಲಿ ತೋರಿಸಬೇಕಷ್ಟೆ ನಾವು. ನಿಜ ಜೀವನದಲ್ಲಿ ಸ್ಕ್ರಿಪ್ಟ್ ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್ ಅನ್ನು ತರಬಾರದು. ಇದು ಕಲಾವಿದರ ಕರ್ತವ್ಯ.” ಎಂದು ಹಂಸಲೇಖ ಹೇಳಿದ್ದಾರೆ.

“ದರ್ಶನ್ ನನ್ನ ಮಗು ಅಂತ ತಿಳಿದುಕೊಳ್ಳಿ. ನನ್ನ ಮಗು ತಪ್ಪು ಮಾಡಿದ್ದರೆ, ತಂದೆ ಎಷ್ಟು ನೋವು ತಿಂತಾನೋ ಅಷ್ಟೇ ನಾನು ನೋವು ತಿನ್ನುತ್ತೀನಿ. ಆ ಮಗು ಕೂಡ ಅಷ್ಟೇ ನೋವು ತಿನ್ನುತ್ತಿರುತ್ತೆ. ನಾವು ಆತ ಕೊಟ್ಟಿರುವ ಕೊಡುಗೆ ಕಡೆ ನೋಡೋಣ.” ಎಂದು ದರ್ಶನ್ ಜೈಲು ಸೇರಿರುವ ಬಗ್ಗೆ ಹಂಸಲೇಖ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ನಷ್ಟದ ಹಾದಿ ಹಿಡಿದಿರುವ ಬಗ್ಗೆನೂ ಹಂಸಲೇಖ ಪ್ರತಿಕ್ರಿಯೆ ನೀಡಿದ್ದಾರೆ. “ಚಂದನವನ ಎಷ್ಟು ಕೀರ್ತಿಯನ್ನು ಗಳಿಸಿತು. ಎಷ್ಟು ಪ್ರಶಸ್ತಿಗಳು. ಎಷ್ಟು ರಾಷ್ಟ್ರ ಪ್ರಶಸ್ತಿಗಳು. ಎಷ್ಟು ಗೌರವ. ಎಂತಹ ಪ್ರತಿಭಾವಂತರು ಹುಟ್ಟಿ ಬೆಳೆದಿದ್ದಾರೆ. ಅಂದರೆ, ಆ ಎತ್ತರಕ್ಕೆ ಏರಿದ್ದಾರೆ. ಆ ಎತ್ತರಕ್ಕೆ ಹೋದ ಮೇಲೆ ಅಲ್ಲಿಂದ ಕೆಳಗೆ ಬೀಳಬೇಕಾಗುತ್ತೆ. ಹಾಗಾಗುವುದು ಬೇಡ. ಅಲ್ಲಿಂದ ಬಿದ್ದ ಕೂಡಲೇ ಅಲ್ಲಿಂದ ಮತ್ತೆ ಏಳುವ ಚಾನ್ಸ್ ಇದೆ.” ಎಂದು ಹಂಸಲೇಖ ಚಿತ್ರರಂಗದ ಬಗ್ಗೆ ಹೇಳಿದ್ದಾರೆ.

Actor Darshan:  ದರ್ಶನ್‌‌‌‌‌‌ ವಿರುದ್ಧ ಪರೋಕ್ಷವಾಗಿ ಕೌಂಟರ್‌ ಕೊಟ್ಟ ನಟ ಜಗ್ಗೇಶ್!

ಜೈಲೂಟ ಒಗ್ಗದೆ ಇದ್ದರೂ ವಿಧಿಯಿಲ್ಲದೆ ಜೈಲೂಟ ಸವಿಯುತ್ತಿರುವ ದರ್ಶನ್ ಇಂದು ಜೈಲಿನ ಮೆನುವಿನಂತೆ ಉಪ್ಪಿಟ್ಟು ಸೇವಿಸಿದ್ದಾನೆ. ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿರುವ ನಟ ದರ್ಶನ್ ತಾಯಿ ಮತ್ತು ಸಹೋದರ ಇಂದು ಭೇಟಿ ನೀಡಲಿದ್ದು, ದರ್ಶನ್‌ಗೆ ತಾಯಿ ಮತ್ತು ಸಹೋದರ ಧೈರ್ಯ ಹೇಳಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ದರ್ಶನ್ ಮಡದಿ ಮಗ ಆಗಮಿಸಿದ್ದರು. ಅವರು ಬಂದು ಹೋದ ದಿನ ಖುಷಿಯಾಗಿದ್ದ ದರ್ಶನ್‌, ಬಳಿಕ ಮತ್ತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಸಹ ಬಂಧಿಗಳ ಜೊತೆ ಬೆರೆಯದೆ ಒಬ್ಬಂಟಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾನೆ.

Continue Reading

ಕ್ರೈಂ

Reels Obsession: ಎಕೆ 47, ಬಾಡಿಗಾರ್ಡ್ಸ್‌, ಸುಂದರಿಯರ ನಡುವೆ ರೀಲ್ಸ್‌ ಶೋಕಿ ಮಾಡಿದವನು ಜೈಲುಪಾಲು!

Reels Obsession: ಬೆಂಗಳೂರಿನಲ್ಲಿ ಹೀಗೆ ಶೋ ಕೊಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್ ಹೆಸರು ಅರುಣ್ ಕಟಾರೆ. ಕೊತ್ತನೂರು ಪೊಲೀಸರು ಈತನನ್ನು ಬಂಧಿಸಿದ್ದಾರೆ. ರೌಡಿ ಚಟುವಟಿಕೆ ಮತ್ತು ಹಳೆಯ ಎಂಓಬಿಗಳ ಮೇಲೆ ನಿಗಾ ವಹಿಸಿದ್ದ ಕೊತ್ತನೂರು ಸಿಬ್ಬಂದಿ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅರುಣ್ ಕಟಾರೆಯನ್ನು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

reels obsession
Koo

ಬೆಂಗಳೂರು: ರಿಲ್ಸ್ ಶೋಗಾಗಿ ಶೋಕಿ (Reels Obsession) ಮಾಡಿದವನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಮುದ್ದೆ ಮುರಿಯಲು ಕಳಿಸಿದ್ದಾರೆ. ಈತ ಎಕೆ 47 (AK 47 Rifle) ರೈಫಲ್‌ ಹಿಡಿದ ಗನ್ ಮ್ಯಾನ್‌ಗಳನ್ನು ಬಾಡಿಗಾರ್ಡ್ಸ್‌ (Bodyguards) ಆಗಿಟ್ಟುಕೊಂಡು, ಪಾಶ್ ಕಾರುಗಳನ್ನು ಚಲಾಯಿಸಿಕೊಂಡು, ಮೈಮೇಲೆ ಕಿಲೋಗಟ್ಟಲೆ ಚಿನ್ನ ಧರಿಸಿಕೊಂಡು ಶೋಕಿ ಮಾಡುತ್ತಿದ್ದ. ಬೀದಿಬೀದಿಯಲ್ಲಿ ಈತನ ಗನ್‌ ಝಳಪಿಸುವಿಕೆ ಕಂಡು ಜನ ಆತಂಕಕ್ಕೊಳಗಾಗಿದ್ದರು.

ಬೆಂಗಳೂರಿನಲ್ಲಿ ಹೀಗೆ ಶೋ ಕೊಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್ ಹೆಸರು ಅರುಣ್ ಕಟಾರೆ. ಕೊತ್ತನೂರು ಪೊಲೀಸರು ಈತನನ್ನು ಬಂಧಿಸಿದ್ದಾರೆ. ರೌಡಿ ಚಟುವಟಿಕೆ ಮತ್ತು ಹಳೆಯ ಎಂಓಬಿಗಳ ಮೇಲೆ ನಿಗಾ ವಹಿಸಿದ್ದ ಕೊತ್ತನೂರು ಸಿಬ್ಬಂದಿ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅರುಣ್ ಕಟಾರೆಯನ್ನು ವಶಕ್ಕೆ ಪಡೆದಿದ್ದಾರೆ.

ಈತ ಬಾಡಿಗಾರ್ಡ್ಸ್‌ ಥರ ಮನುಷ್ಯರನ್ನಿಟ್ಟುಕೊಂಡು, ಅವರ ಕೈಲಿ ಎಕೆ 47 ಮಾದರಿಯ ನಕಲಿ ಗನ್ ಹಿಡಿಸಿ ರಸ್ತೆಯಲ್ಲಿ ಶೋಆಫ್‌ ಮಾಡುತ್ತಿದ್ದ. ಮೈಮೇಲೆ ನಕಲಿ ಚಿನ್ನ ಹೇರಿಕೊಳ್ಳುತ್ತಿದ್ದ. ಅರುಣ್ ಕಟಾರೆ ಶೋನಿಂದ ಬೆದರಿದ ಸಾರ್ವಜನಿಕರು ಆತಂಕದಿಂದ ಈ ಬಗ್ಗೆ ಮಾಹಿತಿ ನೀಡಿದ್ದರು.

ಆರ್ಮ್ಸ್ ಕಾಯಿದೆ ಸೆ. 290 ಅಡಿಯಲ್ಲಿ ಪ್ರಕರಣ ದಾಖಲಿಸಿ ಈತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ, ನಕಲಿ ಗನ್ ಹಿಡಿದು ಏರಿಯಾದಲ್ಲಿ ಹವಾ ಸೃಷ್ಟಿಸಲು ಹೋದವನ ಗುಟ್ಟು ಬಯಲಾಗಿದೆ. ರೀಲ್ಸ್ ಶೋಕಿಗೆ ಬಿದ್ದ ಯುವಕನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದಾರೆ.

ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ (Dead Body Found) ಪತ್ತೆಯಾಗಿದೆ. ಮೃತನ ಕೈ ಮೇಲೆ ಲಕ್ಷ್ಮಿ ಎಂಬ ಹಚ್ಚೆ ಗುರುತು ಪತ್ತೆಯಾಗಿದೆ.

ಪ್ರೀತಿ-ಪ್ರೇಮ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಮರಕ್ಕೆ ನೇತು ಹಾಕಿ ಹೋಗಿರುವ ಅನುಮಾನವಿದೆ. ಮರದಲ್ಲಿ ನೇತಾಡುತ್ತಿದ್ದ ಮೃತದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗೌರಿಬಿದನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರದಲ್ಲಿದ್ದ ಮೃತದೇಹವನ್ನು ಕೆಳಗಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತನ ಗುರುತು ಪತ್ತೆಯಾಗಿಲ್ಲ. ಸದ್ಯ ಪೊಲೀಸರು ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Murder Case : ರೌಡಿಯಾಗಲು ಹೊರಟವನನ್ನು ಕೊಂದು ಹಾಕಿದ್ರು ಪುಂಡರು

Continue Reading

ಸ್ಯಾಂಡಲ್ ವುಡ್

Actor Darshan: ದರ್ಶನ್‌ ತಪ್ಪು ಮಾಡಿದ್ದಾನೆ ಆದರೆ ಶಿಕ್ಷೆ ಕೊಡಬೇಡಿ ಎಂದು ದೂರದ ಊರಿಂದ ಓಡೋಡಿ ಬಂದ ಅಜ್ಜಿ!

Actor Darshan: ಹುಬ್ಬಳ್ಳಿಯಿಂದ ಅಜ್ಜಿ ರಾಜೇಶ್ವರಿ ದರ್ಶನ್‌ ನೋಡಲು ಬಂದಿದ್ದಾರೆ. ತುಂಬಾ ದೂರದಿಂದ ಬಂದಿದ್ದೇನೆ ನನ್ನನ್ನು ಭೇಟಿಯಾಗಲು ಬಿಡಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾರೆ. ʻಭಾನುವಾರ ರಜೆ ಹಿನ್ನೆಲೆಯಲ್ಲಿ ಯಾರಿಗೂ ಭೇಟಿಯಾಗುವ ಅವಕಾಶ ಇರುವುದಿಲ್ಲ. ಹೀಗಿದ್ದರೂ ಕೆಲ ಅಭಿಮಾನಿಗಳು ಬಂದಿದ್ದರು. ಇದೀಗ ಪರಪ್ಪನ ಅಗ್ರಹಾರ ಜೈಲು ಬಳಿ ದರ್ಶನ್‌ ಭೇಟಿಗೆ ವಯೋವೃದ್ಧೆ ಬಂದಿದ್ದಾರೆ.

VISTARANEWS.COM


on

Actor Darshan grandmother came running distant town to see and not punish him
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ (Actor Darshan ) ತೂಗುದೀಪ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತಿದ್ದಾರೆ. ಹಲವು ಅಭಿಮಾನಿಗಳು ದರ್ಶನ್​ರನ್ನು ಭೇಟಿಯಾಗಲು ಪ್ರತಿನಿತ್ಯ ಜೈಲಿನ ಬಳಿ ಬರುತ್ತಿದ್ದಾರೆ. ಆದರೆ ಪೊಲೀಸರು ಯಾರಿಗೂ ಅವಕಾಶ ನೀಡುತ್ತಿಲ್ಲ. ಕೇವಲ ಕುಟುಂಬ ಸದಸ್ಯರಿಗೆ ಹಾಗೂ ವಕೀಲರಿಗಷ್ಟೆ ಅವಕಾಶ ನೀಡಲಾಗಿದೆ. ಭಾನುವಾರ ರಜೆ ಹಿನ್ನೆಲೆಯಲ್ಲಿ ಯಾರಿಗೂ ಭೇಟಿಯಾಗುವ ಅವಕಾಶ ಇರುವುದಿಲ್ಲ. ಹೀಗಿದ್ದರೂ ಕೆಲ ಅಭಿಮಾನಿಗಳು ಬಂದಿದ್ದರು. ಇದೀಗ ಪರಪ್ಪನ ಅಗ್ರಹಾರ ಜೈಲು ಬಳಿ ದರ್ಶನ್‌ ಭೇಟಿಗೆ ವಯೋವೃದ್ಧೆ ಬಂದಿದ್ದಾರೆ.

ಹುಬ್ಬಳ್ಳಿಯಿಂದ ಅಜ್ಜಿ ರಾಜೇಶ್ವರಿ ಅವರು ದರ್ಶನ್‌ ನೋಡಲು ಬಂದಿದ್ದಾರೆ. ತುಂಬಾ ದೂರದಿಂದ ಬಂದಿದ್ದೇನೆ ನನ್ನನ್ನು ಭೇಟಿಯಾಗಲು ಬಿಡಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾರೆ. ʻಎರಡು ಬಾರಿ ದರ್ಶನ್ ಅವರನ್ನು ನಾನು ಭೇಟಿ ಆಗಿದ್ದೇನೆ. ಅವನು ತಪ್ಪು ಮಾಡಿದ್ದಾನೆ ಆದರೆ ಶಿಕ್ಷೆ ಕೊಡಬೇಡಿ. ಎಲ್ಲರೂ ತಪ್ಪು ಮಾಡುತ್ತಾರೆ ಅವನು ಸಹ ಮಾಡಿದ್ದಾನೆ. ನಾನು ದೂರದಿಂದ ಬಸ್ಸಿನಲ್ಲಿ ಬಂದಿದ್ದೇನೆ ಎಂದು ಗೋಗೆರೆದಿದ್ದಾರೆ.

ನಿನ್ನೆ ಕೂಡ ಭಾನುವಾರ ಆದ ಕಾರಣ ದರ್ಶನ್‌ ಭೇಟಿಗೆ ಯಾರಿಗೂ ಅವಕಾಶ ಇರಲಿಲ್ಲ. ಆದರೂ ನಟ ದರ್ಶನ್ ಭೇಟಿಗೆ ವಿಶೇಷ ಚೇತನ ಆಗಮಿಸಿದ್ದರು, ದಾಸಪ್ಪ ವೃತ್ತಿ ಮಾಡುವ ವಿಶೇಷ ಚೇತನ ಅಭಿಮಾನಿ, ಕಿವಿ ಕೇಳಿಸದಿದ್ದರು ಶಂಖ ಊದುತ್ತಾ, ಜಾಗಟೆ ಬಾರಿಸುತ್ತ ಜೈಲಿನ ಬಳಿ ಬಂದಿದ್ದರು. ತುರುವೆಕೆರೆಯ ಜಡಿಯೊ ಗ್ರಾಮದ ವಿಶೇಷ ಚೇತನ ಅಭಿಮಾನಿಯಾಗಿದ್ದರು ʻʻನಟ ದರ್ಶನ್ ಒಳ್ಳೆಯ ವ್ಯಕ್ತಿ. ಅಂತಹವರನ್ನು ಜೈಲಿನಲ್ಲಿಟ್ಟರೆ ಸಿನಿ ಕಾರ್ಮಿಕರು, ನಿರ್ಮಾಪಕರಿಗೆ ತೊಂದರೆ. ಅವ್ರು ತಪ್ಪು ಮಾಡಿರಬಹುದು. ಆದರೆ ನಟ ದರ್ಶನ್ ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ ಮಾನವೀಯತೆ ದೃಷ್ಟಿಯಿಂದ ಬಿಡುಗಡೆ ಮಾಡಬೇಕು. ದರ್ಶನ್ ಬಿಡುಗಡೆಗಾಗಿ ಗೃಹ ಮಂತ್ರಿ ಜಿ ಪರಮೇಶ್ವರ ಭೇಟಿಗೆ ಹೋಗಿದ್ದೆ. ಆದರೆ ಅವರು ಸಿಗಲಿಲ್ಲʼʼ ಎಂದು ವಿಶೇಷ ಚೇತನ ಅಭಿಮಾನಿ ಗೋವಿಂದ ರಾಜು ಹೇಳಿಕೆ ನೀಡಿದ್ದರು.

ಇದನ್ನೂ ಓದಿ; Actor Darshan: ದರ್ಶನ್ ಕುಟುಂಬ ಜೈಲಿಗೆ ಎಂಟ್ರಿ; ಖಾಸಗಿ ಕಾರಿನಲ್ಲಿ ಕರೆದೊಯ್ದ ಪೊಲೀಸ್ ಸಿಬ್ಬಂದಿ

ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್‌ (Actor Darshan) ಸೆರೆವಾಸ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನವೂ ದರ್ಶನ್‌ ಅವರ ಅಮ್ಮ ಹಾಗೂ ತಮ್ಮ ಮಗನ ಭೇಟಿಗೆ ಸೆರೆಮನೆಯತ್ತ ಕಾಲಿಟ್ಟಿರಲಿಲ್ಲ. ಇದೀಗ ದರ್ಶನ್‌ ತಾಯಿ, ತಮ್ಮ, ಪತ್ನಿ , ಮಗ ಭೇಟಿ ಮಾಡಿದ್ದಾರೆ. ಆದರೀಗ ಖಾಸಗಿ ವಾಹನದಲ್ಲಿಯೇ ನಟ ದರ್ಶನ್ ಕುಟುಂಬ ಜೈಲಿಗೆ ಎಂಟ್ರಿ ಕೊಟ್ಟಿರುವುದು ತಿಳಿದು ಬಂದಿದೆ. ಹೀಗಾಗಿ ಸಾಮಾನ್ಯರಿಗೊಂದು ಕಾನೂನು ನಟ ದರ್ಶನ್ ಕುಟುಂಬಕ್ಕೆ ಒಂದು ಕಾನೂನು ಎನ್ನುವಂತಾಗಿದೆ

Continue Reading
Advertisement
Assault Case in Hubballi
ಹುಬ್ಬಳ್ಳಿ9 mins ago

Assault case: ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಗ್ಯಾಂಗ್ ವಾರ್! ನಡುರಸ್ತೆಯಲ್ಲೆ ಹೊಡಿಬಡಿ

DK ShivaKumar
ಪ್ರಮುಖ ಸುದ್ದಿ14 mins ago

DK Shivakumar: ಸಿಎಂ- ಡಿಸಿಎಂ ದಂಗಲ್‌ ವಿಷಯ ಎತ್ತುವ ಶಾಸಕರಿಗೆ ನೊಟೀಸ್: ಡಿಕೆ ಶಿವಕುಮಾರ್

M.R.Jayaram
ಪ್ರಮುಖ ಸುದ್ದಿ17 mins ago

M.R.Jayaram: ಶಿಕ್ಷಣ ತಜ್ಞ ಡಾ ಎಂ ಆರ್ ಜಯರಾಮ್‌ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

Actor Darshan
ಕರ್ನಾಟಕ21 mins ago

Actor Darshan: ದರ್ಶನ್ ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ ಮೀನಾ; ಕುಟುಂಬಸ್ಥರನ್ನು ಕಂಡು ನಟ ಭಾವುಕ

DCM Post
ಕರ್ನಾಟಕ1 hour ago

DCM Post: ಒನ್ ಮ್ಯಾನ್ ಒನ್ ಪೋಸ್ಟ್ ಕೂಗಿಗೆ ಡಿಕೆಶಿ ಡೋಂಟ್ ಕೇರ್‌; ಕೇಡರ್ ಬೇಸ್ ಪಾರ್ಟಿ ಕಟ್ಟಲು ಪಣ!

Sheikh Abdul Rashid
ದೇಶ1 hour ago

Sheikh Abdul Rashid: ಸೆರೆಮನೆಯಿಂದ ನೇರ ಸಂಸತ್‌ಗೆ! ಜೈಲಿನಿಂದಲೇ ಸ್ಪರ್ಧಿಸಿ ಗೆದ್ದ ʼಉಗ್ರರ ಬೆಂಬಲಿಗʼನ ಪ್ರಮಾಣವಚನಕ್ಕೆ NIA ಅಸ್ತು

karnataka Weather Forecast
ಮಳೆ1 hour ago

Karnataka Rain :‌ ಮುಂದುವರಿದ ಮಳೆ ಅಬ್ಬರ; ಸಿಡಿಲು ಬಡಿದು ಹೊತ್ತಿ ಉರಿದ ಮನೆ, ಸೇತುವೆ ಮುಳುಗಡೆ

reels obsession
ಕ್ರೈಂ1 hour ago

Reels Obsession: ಎಕೆ 47, ಬಾಡಿಗಾರ್ಡ್ಸ್‌, ಸುಂದರಿಯರ ನಡುವೆ ರೀಲ್ಸ್‌ ಶೋಕಿ ಮಾಡಿದವನು ಜೈಲುಪಾಲು!

Parliament Sessions
ದೇಶ1 hour ago

Parliament Sessions: ಲೋಕಸಭೆಯಲ್ಲಿ ನೀಟ್‌ ವಿವಾದ ಚರ್ಚೆಗೆ ಆಗ್ರಹಿಸಿ ಸಭಾತ್ಯಾಗ ಮಾಡಿದ ಪ್ರತಿಪಕ್ಷ

Darshan support by Adviti Shetty Block the bad commenter
ಸ್ಯಾಂಡಲ್ ವುಡ್1 hour ago

Actor Darshan: ಕೆಟ್ಟ ಕಮೆಂಟ್‌ ಮಾಡೋರನ್ನ ಬ್ಲಾಕ್‌ ಮಾಡಿ, ದರ್ಶನ್‌ ನಿರಪರಾಧಿ ಆಗಿ ಹೊರ ಬರಲಿ ಎಂದ ಅದ್ವಿತಿ ಶೆಟ್ಟಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ21 hours ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು1 day ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ4 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌