ಗುರು ರಾಯರ ಮಠದ ಹೆಸರಿನಲ್ಲಿಯೂ ಆನ್‌ಲೈನ್‌ನಲ್ಲಿ ವಂಚನೆ; ಇಬ್ಬರ ಬಂಧನ - Vistara News

ಕ್ರೈಂ

ಗುರು ರಾಯರ ಮಠದ ಹೆಸರಿನಲ್ಲಿಯೂ ಆನ್‌ಲೈನ್‌ನಲ್ಲಿ ವಂಚನೆ; ಇಬ್ಬರ ಬಂಧನ

ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ಸೃಷ್ಟಿಸಿಕೊಂಡು ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

VISTARANEWS.COM


on

mantralayam plastics
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂತ್ರಾಲಯ: ಗಾಣಗಾಪುರದಲ್ಲಿರುವ ಪ್ರಸಿದ್ಧ ಶ್ರೀ ಗುರು ದತ್ತಾತ್ರೇಯ ದೇಗುಲದ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ರೂಪಿಸಿ ಕೋಟ್ಯಂತರ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿಯೂ ಇದೇ ರೀತಿಯ ವಂಚನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಇಬ್ಬರನ್ನು ಇಲ್ಲಿಯ ಪೊಲೀಸರು ಬಂಧಿಸಿದ್ದಾರೆ.

ಶ್ರೀ ರಾಘವೇಂದ್ರ ಸ್ವಾಮಿ ಮಠದ ಹೆಸರಿನಲ್ಲಿ ವೆಬ್‌ಸೈಟ್‌ ರೂಪಿಸಿಕೊಂಡು ವಿವಿಧ ಸೇವೆಯ ಹೆಸರಿನಲ್ಲಿ ಭಕ್ತರಿಂದ ಹಣ ಸಂಗ್ರಹಿಸಲಾಗಿದೆ. ಅಲ್ಲದೆ, ಕೊರೊನಾ ಕಾಲದಲ್ಲಿ ಜಾರಿಗೆ ತರಲಾಗಿದ್ದ ಲಾಕ್‌ಡೌನ್‌ನಿಂದಾಗಿ ಮಠ ಆರ್ಥಿಕ ಸಂಕಷ್ಟದಲ್ಲಿದ್ದು, ಸಿಬ್ಬಂದಿಗೆ ವೇತನ ನೀಡಲೂ ಹಣವಿಲ್ಲ. ಹೀಗಾಗಿ ದಯವಿಟ್ಟು ಧನ ಸಹಾಯ ಮಾಡಿ ಎಂದು ಆನ್‌ಲೈನ್‌ನಲ್ಲಿ ಮನವಿ ಮಾಡಿಕೊಂಡು, ಸಾರ್ವಜನಿಕರಿಂದ ಹಣ ಸಂಗ್ರಹಿಸಿರುವುದೂ ಬೆಳಕಿಗೆ ಬಂದಿದೆ.

ಮಠದಲ್ಲಿ ೨೫ ರೂ.ಗೆ ಮಾರಾಟ ಮಾಡಲಾಗುವ ಪರಿಮಳ ಪ್ರಸಾದವನ್ನು ಆನ್‌ಲೈನ್‌ನಲ್ಲಿ ೪೦೦-೫೦೦ ರೂ.ಗೆ ಮಾರಾಟ ಮಾಡಿ ಹಣ ಸಂಗ್ರಹಿಸಲಾಗಿದೆ. ಆರೋಪಿಗಳು ತಮ್ಮ ದೂರವಾಣಿ ಸಂಖ್ಯೆ ಮತ್ತು ಅಕೌಂಟ್‌ ನಂಬರ್‌ ಅನ್ನು ನೀಡಿ ಈ ವಂಚನೆ ನಡೆಸಿದ್ದಾರೆ.

ಈ ಸಂಬಂಧ ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಈಗ ಇಬ್ಬರನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳು ಒಟ್ಟು ಎಷ್ಟು ಹಣ ಸಂಗ್ರಹಿಸಿದ್ದಾರೆ ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ.

ಈ ಹಿಂದೆ ಕೂಡ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಲ್ಲಿ, ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಮಠಕ್ಕೆ ದೇಣಿಗೆ ನೀಡುವಂತೆ ಮನವಿ ಮಾಡಿಕೊಂಡು, ಕೆಲ ಆರೋಪಿಗಳು ಹಣ ಸಂಗ್ರಹಿಸಿರುವುದು ಬೆಳಕಿಗೆ ಬಂದಿತ್ತು.

ಭಕ್ತರು ಆನ್‌ಲೈನ್‌ನಲ್ಲಿ ಸೇವೆಗೆ ಹಣ ಪಾವತಿಸುವುದು, ಮತ್ತಿತರ ವ್ಯವಹಾರ ನಡೆಸುವಾಗ ಎಚ್ಚರಿಕೆಯಿಂದಿರಬೇಕು. ಮಠದ ಅಧಿಕೃತ ವೆಬ್‌ಸೈಟ್‌ ಮೂಲಕ ಮಾತ್ರ ವ್ಯವಹಾರ ನಡೆಸಬೇಕು. ಪರಿಮಳ ಪ್ರಸಾದವನ್ನು ಆನ್‌ಲೈನಲ್ಲಿ ವಿತರಿಸಲು ವ್ಯವಸ್ಥೆ ಮಾಡಲಾಗಿಲ್ಲ ಎಂದು ಮಠದ ವ್ಯವಸ್ಥಾಪಕರಾದ ಎಸ್‌ ಕೆ ಶ್ರೀನಿವಾಸ್‌ ತಿಳಿಸಿದ್ದಾರೆ. ಮಠದ ಅಧಿಕೃತ ವೆಬ್‌ಸೈಟ್‌ ವಿಳಾಸ ಇಂತಿದೆ: https://srsmatha.org

ಇದನ್ನೂ ಓದಿ | ಗಾಣಗಾಪುರ ದತ್ತ ದೇವರ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌; ಅರ್ಚಕರಿಂದ ವಂಚನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಬಾರೆ ಸಖಿ ಎಂದು 20 ವರ್ಷದ ಯುವತಿಯನ್ನು ಕರೆದುಕೊಂಡು ಹೋದ, ಕೊಂದು ಪೊದೆಯಲ್ಲಿ ಬಿಸಾಡಿದ; ಕೃತ್ಯಕ್ಕೆ ಕಾರಣವೇನು?

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯಶಶ್ರೀ ಶಿಂಧೆ ಎಂಬ 20 ವರ್ಷದ ಯುವತಿಯ ಶವವು ನವಿ ಮುಂಬೈ ರೈಲು ನಿಲ್ದಾಣದ ಬಳಿಯ ಪೊದೆಯಲ್ಲಿ ಪತ್ತೆಯಾಗಿದೆ. ಆಕೆಯ ಬಾಯ್‌ಫ್ರೆಂಡ್‌ನೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಬಳಿಕ ಯುವಕನು ನಾಪತ್ತೆಯಾಗಿದ್ದು, ಆತನನ್ನು ಬಂಧಿಸಲು ಐದು ತಂಡಗಳನ್ನು ರಚಿಸಲಾಗಿದೆ.

VISTARANEWS.COM


on

Mumbai Girl
Koo

ಮುಂಬೈ: ಬದಲಾದ ಕಾಲಘಟ್ಟದಲ್ಲಿ ನಿಜವಾದ ಪ್ರೀತಿ-ಪ್ರೇಮ ಎಂಬುದರ ಅರ್ಥವೇ ಕ್ಷೀಣಿಸುತ್ತಿದೆ. ಕಾಲೇಜು ಓದುವಾಗಲೇ ಪ್ರೀತಿಸುವುದು, ಜಗಳ ಆಡಿ ಒಂದೆರಡು ವರ್ಷದಲ್ಲಿ ದೂರ ಆಗುವುದು, ಬ್ರೇಕಪ್‌ (Love Breakup) ಬಳಿಕ ಮತ್ತೊಂದು ಲವ್‌ ಹಿಂದೆ ಓಡುವುದು ಸಾಮಾನ್ಯ ಎಂಬಂತಾಗಿದೆ. ಇನ್ನೂ, ಒಂದು ಹೆಜ್ಜೆ ಮುಂದೆ ಹೋಗಿರುವ ಪ್ರೇಮಿಗಳು, ತಾವು ಇಷ್ಟಪಟ್ಟವರು ಬ್ರೇಕಪ್‌ ಎಂದರೆ ಅಥವಾ ಇನ್ನೊಂದು ಅಫೇರ್‌ನ ಅನುಮಾನ ಮೂಡಿ ಕೊಲೆಯಂತಹ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಮುಂಬೈನಲ್ಲಿ (Mumbai) ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ 20 ವರ್ಷದ ಯುವತಿಯನ್ನು ಭೀಕರವಾಗಿ ಕೊಲೆ ಮಾಡಿ, ಶವವನ್ನು ಪೊದೆಯಲ್ಲಿ ಎಸೆದಿರುವ ಪ್ರಕರಣ ಬಯಲಾಗಿದೆ.

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯಶಶ್ರೀ ಶಿಂಧೆ ಎಂಬ 20 ವರ್ಷದ ಯುವತಿಯ ಶವವು ನವಿ ಮುಂಬೈ ರೈಲು ನಿಲ್ದಾಣದ ಬಳಿಯ ಪೊದೆಯಲ್ಲಿ ಪತ್ತೆಯಾಗಿದೆ. ಆಕೆಯ ಬಾಯ್‌ಫ್ರೆಂಡ್‌ನೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. “ತಡರಾತ್ರಿ 2 ಗಂಟೆ ಸುಮಾರಿಗೆ ಉರಾನ್‌ ರೈಲು ನಿಲ್ದಾಣದ ಬಳಿಯ ಪೊದೆಯಲ್ಲಿ ಯುವತಿಯ ಶವ ಬಿದ್ದಿದೆ ಎಂಬುದಾಗಿ ಕರೆ ಬಂದಿತು. ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಯುವತಿ ಮೈಮೇಲೆ ಭೀಕರ ಗಾಯಗಳಾಗಿವೆ. ಆಕೆಯನ್ನು ಇರಿದು ಕೊಲೆ ಮಾಡಲಾಗಿದೆ” ಎಂದು ನವಿ ಮುಂಬೈ ಡಿಸಿಪಿ ವಿವೇಕ್‌ ಪನ್ಸಾರೆ ತಿಳಿಸಿದ್ದಾರೆ.

“ಪ್ರಾಥಮಿಕ ತನಿಖೆಯ ಪ್ರಕಾರ, ಯುವಕ ಹಾಗೂ ಯುವತಿಯು ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ಮಧ್ಯೆ ಮನಸ್ತಾಪ ಮೂಡಿತ್ತು. ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯ ಶವ ಪತ್ತೆಯಾದ ಬಳಿಕ ಯುವಕನ ಮೇಲೆ ಶಂಕೆ ವ್ಯಕ್ತವಾಗಿದೆ. ಯುವಕನು ಈಗ ಪ್ರಾಥಮಿಕ ಆರೋಪಿಯಾಗಿದ್ದಾನೆ. ಕೊಲೆ ಬಳಿಕ ಯುವಕನು ಕೂಡ ನಾಪತ್ತೆಯಾಗಿದ್ದಾನೆ. ಆತನನ್ನು ಪತ್ತೆಹಚ್ಚಲು ಐದು ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುತ್ತದೆ” ಎಂಬುದಾಗಿ ಡಿಸಿಪಿ ತಿಳಿಸಿದ್ದಾರೆ.

ಯುವತಿಯು ಉರಾನ್‌ ಪ್ರದೇಶದ ನಿವಾಸಿಯಾಗಿದ್ದು, ಅಲ್ಲಿಂದ ಸುಮಾರು 25 ಕಿಲೋಮೀಟರ್‌ ದೂರದಲ್ಲಿರುವ ಬೇಲಾಪುರದಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಇದೇ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಆದರೆ, ಇತ್ತೀಚೆಗೆ ಇಬ್ಬರ ಮಧ್ಯೆ ಮನಸ್ತಾಪಗಳು, ಜಗಳಗಳು ಜಾಸ್ತಿಯಾಗಿದ್ದವು ಎಂದು ತಿಳಿದುಬಂದಿದೆ. ಆದಾಗ್ಯೂ, ಯುವತಿಯನ್ನು ಕೊಲೆ ಮಾಡಲು ನಿಖರ ಕಾರಣ ಏನು ಎಂಬುದು ಇದುವರೆಗೆ ಗೊತ್ತಾಗಿಲ್ಲ.

ಇದನ್ನೂ ಓದಿ: Murder in PG: ಪಿಜಿಯಲ್ಲಿ ಯುವತಿ ಕೊಲೆ ಮಾಡಿದ ಪಾತಕಿ ಮಧ್ಯಪ್ರದೇಶದಲ್ಲಿ ಸೆರೆ

Continue Reading

ಬಳ್ಳಾರಿ

Drowned in water : ಮೀನು ಹಿಡಿಯುವಾಗ ಫಿಟ್ಸ್‌ ಬಂದು ನದಿಗೆ ಬಿದ್ದ ಮೀನುಗಾರ

Drowned In water :ಬಳ್ಳಾರಿಯಲ್ಲಿ ಮೀನು ಹಿಡಿಯುವಾಗ ಫಿಟ್ಸ್‌ ಬಂದು ಮೀನುಗಾರ ನದಿಗೆ ಬಿದ್ದಿದ್ದಾರೆ. ಇತ್ತ ಬಾಗಲಕೋಟೆಯಲ್ಲಿ ಮೇವು ತರಲು ಹೊಲಕ್ಕೆ ಹೋದ ರೈತ ನೀರುಪಾಲಾಗಿದ್ದಾರೆ.

VISTARANEWS.COM


on

By

Drowned in water
Koo

ಬಳ್ಳಾರಿ: ಬಳ್ಳಾರಿಯ ಕಂಪ್ಲಿಯಲ್ಲಿ ಮೀನು ಹಿಡಿಯುವಾಗ ಫಿಟ್ಸ್‌ ಬಂದು ಮೀನುಗಾರ ನದಿಗೆ ಬಿದ್ದ (Drowned In water) ಘಟನೆ ನಡೆದಿದೆ. ಕಂಪ್ಲಿ ಕೋಟೆಯ ಬಳಿ ತುಂಗಭದ್ರಾ ನದಿ ತಟದಲ್ಲಿ ಮೀನುಗಾರ ಕರ್ಪಣ್ಣ ಮೀನು ಹಿಡಿಯುವಾಗ ಫಿಟ್ಸ್ ಬಂದಿದೆ. ಈ ವೇಳೆ ಏಕಾಏಕಿ ನದಿಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ನದಿಯಲ್ಲಿ ಮುಳುಗಿದ್ದ ಕರ್ಪಣರನ್ನು ಕಂಡು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಂಪ್ಲಿ‌ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಕರೆದುಕೊಂಡು ಹೋಗಿದ್ದಾರೆ.

ಮೇವು ತರಲು ಹೊಲಕ್ಕೆ ಹೋದ ರೈತ ನೀರುಪಾಲು

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಆಲಗೂರು ಗ್ರಾಮದಲ್ಲಿ ಮೇವು ತರಲು ಹೊದ ರೈತ ಹೊಲದಲ್ಲಿ ನೀರುಪಾಲಾಗಿದ್ದಾರೆ. ಕೃಷ್ಣಾ ನದಿ ಪ್ರವಾಹಕ್ಕೆ ರೈತ ಸಿದ್ದಪ್ಪ ಅಡಹಳ್ಳಿ(60) ಕೊಚ್ಚಿ ಹೋಗಿದ್ದಾರೆ. ಸದ್ಯ ಕೊಚ್ಚಿಹೋದ ಸಿದ್ದಪ್ಪನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಸೈಕಲ್‌ ನಿಲ್ಲಿಸಿ ಮೇವು ತರಲು ಹೊಲಕ್ಕೆ ಹೋಗಿದ್ದಾಗ ನದಿ ನೀರು ಹೆಚ್ಚಾಗಿದೆ. ಹರಿಯುವ ನೀರಿನಲ್ಲಿ ನಡೆದುಕೊಂಡು ಬರುವಾಗ ಕೊಚ್ಚಿ ಹೋಗಿದ್ದಾರೆ.

ಇದನ್ನೂ ಓದಿ: Karnataka Rain : ಮಳೆಗೆ ಮನೆ ಮುಳುಗಡೆಯಾದ ಸುದ್ದಿ ಕೇಳಿ ಮನೆ ಯಜಮಾನ ಹೃದಯಾಘಾತದಿಂದ ಸಾವು

ಓರಿಯಂಟಲ್ ಕಾರ್ಖಾನೆ ಕಾರ್ಮಿಕನ ಶವ ಪತ್ತೆ

ಓರಿಯಂಟಲ್ ಕಾರ್ಖಾನೆ ಕಾರ್ಮಿಕನ ಅನುಮಾನಾಸ್ಪದಾಗಿ ಶವ ಪತ್ತೆಯಾಗಿದೆ. ಕಲಬುರಗಿಯ ಚಿತ್ತಾಪೂರ ಪಟ್ಟಣದ ಪ್ರಗತಿ ಕಾಲೋನಿ ಬಳಿ ಶವ ಪತ್ತೆಯಾಗಿದೆ. ಶರೀಫ್ ನಿಜಾಮುದ್ದಿನ್ (22) ಎಂಬಾತನ ಮೃತದೇಹ ಸಿಕ್ಕಿದೆ. ಚಿತ್ತಾಪೂರ ಪಟ್ಟಣದ ನಾಸರಗಂಜ್ ಕಾಲೋನಿಯ ನಿವಾಸಿಯಾದ ಶರೀಫ್‌, ಚಿತ್ತಾಪೂರನ ಓರಿಯಂಟಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ಶುಕ್ರವಾರ ಮಧ್ಯಾಹ್ನ ಹೋದ ಶರೀಫ್‌ ಶನಿವಾರ ಶವವಾಗಿ ಪತ್ತೆಯಾಗಿದೆ. ಸ್ಥಳಕ್ಕೆ ಚಿತ್ತಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈಲ್ವೆ ಟ್ರ್ಯಾಕ್‌ ಪಕ್ಕ ಮಹಿಳೆ ಮೃತದೇಹ ಪತ್ತೆ

ರೈಲ್ವೆ ಟ್ರ್ಯಾಕ್‌ ಪಕ್ಕದಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ನಗರದ ಸವಳಂಗ ರಸ್ತೆ ರೈಲ್ವೆ ಗೇಟ್ ಬಳಿ ಮೃತದೇಹ ಪತ್ತೆಯಾಗಿದೆ. ತಾಳಗುಪ್ಪ ಬೆಂಗಳೂರಿಗೆ ತೆರಳುತ್ತಿದ್ದ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತಳ ಗುರುತು ಪತ್ತೆಯಾಗಿಲ್ಲ. ಸುಮಾರು 50 ವರ್ಷದ ಆಸುಪಾಸಿನ ಮಹಿಳೆಯ ಶವ ಪತ್ತೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಮನಗರ

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

Govt School : ಶಾಲೆಗೆ ಬರುವ ಬಾಲಕಿಯರು ಎರಡು ಜಡೆ ಹಾಕಿಲ್ಲ ಎಂದು ಅತಿಥಿ ಶಿಕ್ಷಕರು ಮೂವರ ತಲೆಕೂದಲನ್ನೇ (Ramanagar News) ಕತ್ತರಿಸಿದ್ದಾರೆ. ಶಿಕ್ಷಕರ ಕಾರ್ಯಕ್ಕೆ ಪೋಷಕರು ಕಿಡಿಕಾರಿದ್ದಾರೆ. ಇಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

VISTARANEWS.COM


on

By

ramanagara news
Koo

ರಾಮನಗರ: ಸರ್ಕಾರಿ ಶಾಲೆಯಲ್ಲಿ (Ramanagar News) ಎರಡು ಜಡೆ ಹಾಕಿಲ್ಲವೆಂದು ಶಿಕ್ಷಕರಿಬ್ಬರು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ್ದಾರೆ. ಶಿಕ್ಷಕರ ನಡೆಗೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ.

ಶಾಲೆಗೆ ಬರುವಾಗ ಎರಡು ಜಡೆ ಹಾಕಿಲ್ಲವೆಂದು ಸಿಟ್ಟಾದ ಇಬ್ಬರು ಶಿಕ್ಷಕರು ಮೂವರು ವಿದ್ಯಾರ್ಥಿನಿಯರಿಗೆ ಕೂದಲು ಕತ್ತರಿಸಿದ್ದಾರೆ. ಹೆಣ್ಮಕ್ಕಳ ತಲೆಗೂದಲು ಕಟ್ ಮಾಡುವುದು ಯಾವ ಸಂಸ್ಕೃತಿ ಸ್ವಾಮಿ ಎಂದು ಪೋಷಕರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಪವಿತ್ರ ಹಾಗೂ ಶಿವಕುಮಾರ್ ಎಂಬ ಶಿಕ್ಷಕರು ವಿದ್ಯಾರ್ಥಿನಿಯರ ಮೇಲೆ ದರ್ಪ ತೋರಿದ್ದಾರೆ. ವಿದ್ಯಾರ್ಥಿನಿಯರು ಪ್ರತಿನಿತ್ಯ ಒಂದು ಜಡೆ ಹಾಕಿಕೊಂಡು ಬರುತ್ತಿದ್ದರು. ಹಾಗಾಗಿ ಕೂದಲು ಕಟ್ ಮಾಡಿದ್ದವಿ ಎಂದು ಸಮಜಾಯಿಷಿಯನ್ನು ನೀಡಿದ್ದಾರೆ. ಪೋಷಕರ ಎದುರು ಘಟನೆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Electric shock : ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದವನಿಗೆ ಕರೆಂಟ್‌ ಶಾಕ್‌; ಕ್ಷಣಾರ್ಧದಲ್ಲಿ ಹಾರಿಹೋಯ್ತು ಪ್ರಾಣ

ಅತಿಥಿ ಶಿಕ್ಷಕರ ತಲೆದಂಡ

ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ್ದ ಅತಿಥಿ ಶಿಕ್ಷಕರಿಗೆ ತಲೆದಂಡವಾಗಿದೆ. ಇಬ್ಬರು ಶಿಕ್ಷಕರು ಅಮಾನತು ಮಾಡುವಂತೆ ಶಿಫಾರಸು ಮಾಡಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಮರಿಗೌಡ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಘಟನೆ ಬಗ್ಗೆ ಮೇಲಾಧಿಕಾರಿಗೆ ಪತ್ರ ಬರೆದು, ಅತಿಥಿ ಶಿಕ್ಷಕರಾದ ಶಿವಕುಮಾರ್ ಹಾಗೂ ಪವಿತ್ರ ಅವರಿಗೆ ಅಮಾನತು ಆದೇಶಕ್ಕೆ ರಾಮನಗರ ಜಿಲ್ಲಾ ಡಿಡಿಪಿಐ ಬಸವರಾಜೇಗೌಡಗೆ ವರದಿ ಸಲ್ಲಿಸಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ವಿವರಣೆ ಮೂಲಕ ವರದಿ ಸಲ್ಲಿಸಿದ್ದು, ಕೂಡಲೇ ಇಬ್ಬರು ಅತಿಥಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮೈಸೂರು

Electric shock : ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದವನಿಗೆ ಕರೆಂಟ್‌ ಶಾಕ್‌; ಕ್ಷಣಾರ್ಧದಲ್ಲಿ ಹಾರಿಹೋಯ್ತು ಪ್ರಾಣ

Electric shock : ಜಮೀನು ಕೆಲಸಕ್ಕೆ ಹೊರಟಿದ್ದ ಯುವಕನೊಬ್ಬ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ವಿದ್ಯುತ್‌ ನಿಗಮದ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

VISTARANEWS.COM


on

By

Electric shock
Koo

ಮೈಸೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ (Electric shock) ತುಳಿದು ಯುವಕನೊರ್ವ ದಾರುಣವಾಗಿ ಮೃತಪಟ್ಟಿದ್ದಾನೆ. ಮೈಸೂರಿನ ಹುಣಸೂರು ತಾಲೂಕಿನ ಹೊಸರಾಮನಹಳ್ಳಿಯಲ್ಲಿ ಘಟನೆ ನಡೆದಿದೆ. ಮಂಚೂನಾಯಕ (18) ಮೃತ ದುರ್ದೈವಿ.

ಮಂಚೂನಾಯಕ ತಮ್ಮ ಜಮೀನಿನಲ್ಲಿ ಬಾಳೆ ಗೊನೆ ಕೊಯ್ಯಲು ತೆರಳಿದಾಗ ಈ ದುರ್ಘಟನೆ ನಡೆದಿದೆ. ವಿದ್ಯುತ್ ತಂತಿ ತುಂಡಾಗಿ ಬಿದ್ದು ಎರಡು ದಿನ ಕಳೆದರೂ ಇಲಾಖಾ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಎರಡು ದಿನಗಳಿಂದ ಹಲವು ಬಾರಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯ ಸಂಪರ್ಕ ಕಡಿತಗೊಳಿಸುವಂತೆ ಮನವಿ ಮಾಡಿದ್ದರೂ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದೆ. ಲೈನ್ ಮ್ಯಾನ್‌ ವಸಂತ್ ಎಂಬಾತನ ನಿರ್ಲಕ್ಷ್ಯದಿಂದ ಯುವಕ ಮೃತಪಟ್ಟಿದ್ದಾಗಿ ಆರೋಪಿಸಿದ್ದಾರೆ.

ಸ್ಥಳಕ್ಕೆ ವಿದ್ಯುತ್ ಇಲಾಖೆಯ ಎಇ ಜಯರತ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲಾಖೆಯಿಂದ ಪರಿಹಾರ ತಲುಪಿಸುವ ಭರವಸೆ ನೀಡಿದ್ದಾರೆ. ಕುಟುಂಬದ ಒಬ್ಬ ವ್ಯಕ್ತಿಗೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಜತೆಗೆ ನಿರ್ಲಕ್ಷ್ಯತೆಗೆ ಕಾರಣರಾದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಗ್ರಾಮಸ್ಥರು ಕುಟುಂಬದ ಒಬ್ಬರಿಗೆ ಶಾಶ್ವತ ಕೆಲಸ ಕೊಡಿಸುವಂತೆ ಒತ್ತಾಯಿಸಿದರು.

ಇದನ್ನೂ ಓದಿ: Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಧಾರವಾಡದಲ್ಲಿ ವಿದ್ಯುತ್ ತಂತಿ ತಗುಲಿ ಜಾನುವಾರು ಸಾವು

ವಿದ್ಯುತ್ ತಂತಿ ತಗುಲಿ ಜಾನುವಾರು ಮೃತಪಟ್ಟಿದೆ. ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಮನಗುಂಡಿ ರೈತ ಮಡಿವಾಳಪ್ಪ ಎಂಬುವವರಿಗೆ ಸೇರಿದ ಒಂದು ಎಮ್ಮೆ ಹಾಗೂ ಎಮ್ಮೆ ಕರು ಮೃತಪಟ್ಟಿದೆ. ಜಾನುವಾರುಗಳನ್ನು ಮೇಯಿಸಲು ಹೋದಾಗ ಬೋರವೆಲ್ ಮೋಟರ್ ಆರಂಭಿಸುವ ವಿದ್ಯುತ್ ತಗುಲಿ ಮೃತಪಟ್ಟಿವೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
karnataka rain news yadgir
ಪ್ರಮುಖ ಸುದ್ದಿ52 seconds ago

Karnataka Rain News: ತುಂಬಿ ಬರಿಯುತ್ತಿರುವ ಕೃಷ್ಣಾ, ಘಟಪ್ರಭಾ; ಸೇತುವೆ ಮುಳುಗಡೆ, ನಡುಗಡ್ಡೆಯಿಂದ ಗರ್ಭಿಣಿಯರ ಸ್ಥಳಾಂತರ

vali sugreeva ಧವಳ ಧಾರಿಣಿ
ಅಂಕಣ42 mins ago

ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡ ಭಾಗ 2: ದೀಪದ ಬುಡದಲ್ಲಿ ಕತ್ತಲೆ

beml factory kgf
ಕೋಲಾರ48 mins ago

BEML Factory: ಬೆಮೆಲ್‌ ಕಾರ್ಖಾನೆ ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯ ವಿರೋಧಿಸಿ ಸಾವಿರಾರು ಕಾರ್ಮಿಕರಿಂದ ಮುಷ್ಕರ

ರಾಜಮಾರ್ಗ ಅಂಕಣ n narasimhaiah
ಅಂಕಣ52 mins ago

ರಾಜಮಾರ್ಗ ಅಂಕಣ: ನಾಲ್ಕನೇ ತರಗತಿ ಮಾತ್ರ ಓದಿದ ಎನ್ ನರಸಿಂಹಯ್ಯ 550 ಪತ್ತೇದಾರಿ ಕಾದಂಬರಿ ಬರೆದರು!

Uttara Kannada landslide
ಪ್ರಮುಖ ಸುದ್ದಿ1 hour ago

Uttara Kannada landslide: ಈಶ್ವರ ಮಲ್ಪೆ ತಂಡಕ್ಕೂ ಸಿಗಲಿಲ್ಲ ಲಾರಿ ಸುಳಿವು; ಅರ್ಜುನನೂ ಕಣ್ಮರೆ

Weight lose
ಆರೋಗ್ಯ1 hour ago

Weight Lose: ಏನೇ ಸರ್ಕಸ್‌ ಮಾಡಿದರೂ ತೂಕ ಇಳಿಯದೇ? ಹಾಗಿದ್ದರೆ ಕಾರಣ ಇದಾಗಿರಬಹುದು!

World Hepatitis Day
ಆರೋಗ್ಯ2 hours ago

World Hepatitis Day: ಏನಿದು ಹೆಪಟೈಟಿಸ್‌? ಇದು ಏಕೆ ಅಪಾಯಕಾರಿ?

karnataka weather Forecast
ಮಳೆ2 hours ago

Karnataka Weather : ಬೆಂಗಳೂರಿನಲ್ಲಿ ಹೆಚ್ಚಲಿದೆ ಗಾಳಿ ವೇಗ; ಕರಾವಳಿ, ಮಲೆನಾಡಿನಲ್ಲಿ ಭಯಂಕರ ಮಳೆ

Dina bhavishya
ಭವಿಷ್ಯ3 hours ago

Dina Bhavishya : ಕುಟುಂಬದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪವಾಗದಂತೆ ಎಚ್ಚರ ವಹಿಸಿ

Delhi Floods
ಪ್ರಮುಖ ಸುದ್ದಿ8 hours ago

Delhi Floods: ದೆಹಲಿಯಲ್ಲಿ ಭಾರಿ ಮಳೆ; ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಇಬ್ಬರು ವಿದ್ಯಾರ್ಥಿನಿಯರ ಸಾವು!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ13 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ18 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ19 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ3 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ3 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌