ಎಲ್ಲ ನೌಕರರಿಗೂ ಐಷಾರಾಮಿ ಪ್ರವಾಸ; ಕಂಪನಿಲಿ ಕೆಲಸ ಖಾಲಿ ಇದೆಯಾ ಅಂತ ಕೇಳಿದ ನೆಟಿಜನ್ಸ್!‌ - Vistara News

ವೈರಲ್ ನ್ಯೂಸ್

ಎಲ್ಲ ನೌಕರರಿಗೂ ಐಷಾರಾಮಿ ಪ್ರವಾಸ; ಕಂಪನಿಲಿ ಕೆಲಸ ಖಾಲಿ ಇದೆಯಾ ಅಂತ ಕೇಳಿದ ನೆಟಿಜನ್ಸ್!‌

ʻನನಗಾದರೂ ಇಂಥದ್ದೊಂದು ಸಂಸ್ಥೆಯಲ್ಲಿ ಕೆಲಸ ಸಿಕ್ಕಿದ್ದಿದ್ದರೆʼ ಎಂದು ಅನೇಕರು ಕಾಮೆಂಟಿಸಿದ್ದಾರೆ. ಇನ್ನೂ ಕೆಲವರು, ʻಕೆಲಸ ಖಾಲಿ ಇದ್ಯಾ?ʼ ಎಂದು ಕೇಳಿದ್ದಾರೆ. ಅಂಥದ್ದೇನು ಮಾಡಿತು ಈ ಕಂಪನಿ?

VISTARANEWS.COM


on

ಎಲ್ಲ ನೌಕರರಿಗೂ ೨ ವಾರಗಳ ಬಾಲಿ ಪ್ರವಾಸ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರವಾಸ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೂ ಮನಸೋ ಇಚ್ಛೆ ಪ್ರವಾಸ ಮಾಡಲು ಬಹುತೇಕರಿಗೆ ಸಾಧ್ಯವಾಗುವುದಿಲ್ಲ. ʻಹಲ್ಲಿದ್ದವನಿಗೆ ಕಡಲೆ ಸಿಗುವುದಿಲ್ಲ, ಕಡಲೆ ಸಿಕ್ಕಿದವನಿಗೆ ಹಲ್ಲಿರುವುದಿಲ್ಲʼ ಎಂಬ ಗಾದೆಯಂತೆ, ಮನೆಯಲ್ಲಿ ಖಾಲಿ ಕೂತಿದ್ದರೂ ದುಡ್ಡಿಲ್ಲ, ದುಡ್ಡಿದ್ದರೂ ಕೆಲಸದ ಒತ್ತಡ ಎಂದು ಪ್ರವಾಸ ಮಾಡಲಾಗದೇ ಒದ್ದಾಡುವವರೇ ಹೆಚ್ಚು. ಇಂಥದ್ದರಲ್ಲಿ ಇತ್ತೀಚೆಗೆ ಕೊರೋನಾ ಯುಗದಲ್ಲಿ ಬಹಳಷ್ಟು ಮಂದಿ ವರ್ಕ್‌ ಫ್ರಂ ಹೋಂ ನೆಪದಲ್ಲಿ, ತಮಗೆ ಬೇಕಾದ ಪ್ರವಾಸೀ ಸ್ಥಳದಲ್ಲಿ ತಿಂಗಳುಗಟ್ಟಲೆ ಕುಳಿತು ಕೆಲಸ ಮಾಡುವ ಪ್ರವೃತ್ತಿ ಬೆಳೆಸಿಕೊಂಡು ಮನಸ್ಸಿದ್ದಲ್ಲಿ ಮಾರ್ಗ ಎಂದು ಕಂಡುಕೊಂಡಿದ್ದಾರೆ.

೨ ವಾರಗಳ ಬಾಲಿ ಪ್ರವಾಸ

ಆದರೂ ಎಲ್ಲರಿಗೂ ಸಾಧ್ಯವಾಗುವ ವಿಚಾರ ಇದಲ್ಲ. ಅನೇಕರಿಗೆ ಮನಸ್ಸಿದ್ದರೂ ಮಾಡಲು ಸಾಧ್ಯವಾಗುವುದಿಲ್ಲ. ಅಂಥದ್ದರಲ್ಲಿ ಕೆಲಸ ಮಾಡುವ ಸಂಸ್ಥೆಯೇ ನಿಮ್ಮ ಎದುರೊಂದು ಐಷಾರಾಮಿ ಹಾಲಿಡೇ ಪ್ಯಾಕೇಜೊಂದನ್ನು ಇಟ್ಟು, ಎಲ್ಲರೂ ಜೊತೆಯಾಗಿ ಕೆಲಸ ಮಾಡುತ್ತಾ ಹಾಲಿಡೇ ಮಾಡೋಣ ಎಂದರೆ!? ಯಾರಿಗುಂಟು ಯಾರಿಗಿಲ್ಲ ಈ ಜಾಕ್‌ಪಾಟ್‌ ಅಂತ ಒಂದೇ ಬಾರಿಗೆ ಕುಣಿದು ಕುಪ್ಪಳಿಸಿ ಈ ಅವಕಾಶವನ್ನು ಮಾತ್ರ ಹೆಂಗಾದರೂ ಸರಿ ಬಳಸಿಕೊಳ್ಳಲೇಬೇಕು ಎಂದು ಸರದಿಯಲ್ಲಿ ನಾ ಮುಂದು ತಾ ಮುಂದು ಎಂದು ನಿಲ್ಲುವುದಿಲ್ಲವೇ! ಆದರೂ ಇಂಥದ್ದೆಲ್ಲ ನಡೆಯುವುದುಂಟಾ ಎಂದು ನೀವು ವಾಸ್ತವ ಲೋಕಕ್ಕೆ ಬಂದರೆ, ನಿಜಕ್ಕೂ ಇಲ್ಲೊಂದು ವಿಶಿಷ್ಟ ಆದರೂ ಸತ್ಯ ಎಂಬಂಥ ಇಂಥದ್ದೇ ಘಟನೆ ನಡೆದಿದೆ.

೨ ವಾರಗಳ ಬಾಲಿ ಪ್ರವಾಸ

ಸೂಪ್‌ ಏಜೆನ್ಸಿ ಎಂಬ ಸಿಡ್ನಿಯಲ್ಲಿರುವ ಆಸ್ಟ್ರೇಲಿಯನ್‌ ಮೂಲದ ಡಿಜಿಟಲ್‌ ಮಾರ್ಕೆಟಿಂಗ್ ಕಂಪನಿಯೊಂದು ತನ್ನೆಲ್ಲ ನೌಕರರನ್ನು ಎರಡು ವಾರಗಳ ಬಾಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವುದು ಸದ್ಯಕ್ಕೀಗ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೇವಲ ಒಬ್ಬರೋ ಇಬ್ಬರೋ, ಅಥವಾ ಆಯ್ಕೆ ಮಾಡಿದ ಒಂದು ಟೀಮ್‌ ಅನ್ನು ಕರೆದೊಯ್ಯುವುದು ಹಲವೆಡೆ ಚಾಲ್ತಿಯಲ್ಲಿದ್ದರೂ, ತನ್ನ ಎಲ್ಲ ನೌಕರರ ಎಲ್ಲ ಖರ್ಚುವೆಚ್ಚಗಳನ್ನು ಭರಿಸಿ ಐಷಾರಾಮಿ ಪ್ರವಾಸಕ್ಕೆ ಬಾಲಿ ಐಲ್ಯಾಂಡ್‌ಗೆ ಕರೆದೊಯ್ದಿರುವುದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಕಂಪನಿಯೀಗ ಎಲ್ಲರ ಫೇವರಿಟ್‌ ಕಂಪನಿಯಾಗಿದ್ದು ಇದರ ಬಾಸ್‌ಗೆ ʻಜಗತ್ತಿನ ಅತ್ಯುತ್ತಮ ಬಾಸ್‌ʼ ಎಂದು ಹೆಸರಿಟ್ಟು ಜನರು ಜಾಲತಾಣಗಳಲ್ಲಿ ಹೊಗಳುತ್ತಿದ್ದಾರೆ.

ಎಲ್ಲ ನೌಕರರಿಗೂ ೨ ವಾರಗಳ ಬಾಲಿ ಪ್ರವಾಸ

ಈ ಕಂಪನಿ ತನ್ನ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಹಂಚಿಕೊಂಡ ವಿಡಿಯೋ ಇದೀಗ ವೈರಲ್‌ ಆಗಿದ್ದು, ಈ ಸಂಸ್ಥೆಯ ನೌಕರರೆಲ್ಲರೂ, ಚಾರಣ, ಪ್ರತಿದಿನ ಮಾಡುತ್ತಿದ್ದ ಯೋಗ, ಈಜುಕೊಳದಲ್ಲಿ ಮೋಜು ಮಸ್ತಿ, ತಿನ್ನುವುದು ಹಾಗೂ ಕುಡಿಯುವುದನ್ನು ಜೊತೆಯಾಗಿ ಮಾಡಿದ್ದು, ಇವೆಲ್ಲವುಗಳ ಜತೆ ಎಲ್ಲರೂ ಸೇರಿ ಕೆಲಸವನ್ನೂ ಮಾಡಿದ್ದಾರೆ. ಕಚೇರಿಯಲ್ಲಿ ಕೆಲಸ ಮಾಡುವಂತೆಯೇ ಬಾಲಿಯಲ್ಲೂ ಒಂದು ನಿರ್ದಿಷ್ಟ ಸಮಯದಲ್ಲಿ ಕೆಲಸ ನಿರ್ವಹಿಸಿದ್ದು, ಉಳಿದ ಸಮಯದಲ್ಲಿ ಮನಸ್ಸಿಗೆ ಉಲ್ಲಾಸ ನೀಡುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ʻನಮ್ಮ ಸಂಸ್ಥೆಯ ಮೊದಲ ವರ್ಕಿಂಗ್‌ ಹಾಲಿಡೇʼ ಎಂದು ಸಂಸ್ಥೆ ತನ್ನ ವಿಡಿಯೋಗೆ ಟೈಟಲ್‌ ನೀಡಿದ್ದು, ಮಿಲಿಯಗಟ್ಟಲೆ ಜನರು ನೋಡಿ ಖುಷಿಪಟ್ಟಿದ್ದಾರೆ.

ಎಲ್ಲ ನೌಕರರಿಗೂ ೨ ವಾರಗಳ ಬಾಲಿ ಪ್ರವಾಸ

ಹಲವಾರು ಮಂದಿ ಇದಕ್ಕೆ ಪ್ರತಿಕ್ರಿಯಿಸುತ್ತಿದ್ದು, ʻನನಗಾದರೂ ಇಂಥದ್ದೊಂದು ಸಂಸ್ಥೆಯಲ್ಲಿ ಕೆಲಸ ಸಿಕ್ಕಿದ್ದಿದ್ದರೆʼ ಎಂದು ಅನೇಕರು ಕಾಮೆಂಟಿಸಿದ್ದಾರೆ. ಇನ್ನೂ ಕೆಲವರು, ʻಕೆಲಸ ಖಾಲಿ ಇದ್ಯಾ?ʼ ಎಂದೂ ತಮಾಷೆ ಮಾಡಿದ್ದಾರೆ.

ಲಾಸ್‌ ವೇಗಾಸ್‌ನ ಕ್ಯಾಸಿನೊ ಒಂದು ತನ್ನ ೫೪೦೦ ಮಂದಿ ನೌಕರರಲ್ಲಿ ಪ್ರತಿಯೊಬ್ಬರಿಗೂ ತಲಾ ೫೦೦೦ಡಾಲರ್‌ (೩.೮೬ ಲಕ್ಷ ರೂ) ಬೋನಸ್‌ ನೀಡಿ ಸರ್ಪ್ರೈಸ್‌ ನೀಡಿತ್ತು. ಇದೂ ಅಂಥದ್ದೇ ಒಂದು ವಿಶಿಷ್ಟ ಪ್ರಕರಣವಾಗಿದ್ದು ಎಲ್ಲರೂ ಕಂಪನಿಯ ಬಾಸನ್ನು ಕೊಂಡಾಡುತ್ತಿದ್ದಾರೆ.‌ ನೌಕರರನ್ನು ಖುಷಿಯಾಗಿಟ್ಟುಕೊಳ್ಳುವುದು ಹೀಗೂ ಸಾಧ್ಯ ಎಂದು ತೋರಿಸಿಕೊಟ್ಟಿದೆ.

ಇದನ್ನೂ ಓದಿ: Solo Travel: ಸೋಲೋ ಪ್ರವಾಸ ಗೆಲ್ಲೋಕೆ 15 ಸೂತ್ರಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವಿದೇಶ

Nawaz Sharif: “ಕಾರ್ಗಿಲ್‌ ಯುದ್ಧ ನಮ್ಮಿಂದಲೇ ಆಗಿರುವ ಅತಿದೊಡ್ಡ ಪ್ರಮಾದ”- 23 ವರ್ಷಗಳ ಬಳಿಕ ತಪ್ಪೊಪ್ಪಿಕೊಂಡ ಪಾಕ್‌

Nawaz Sharif: ತಮ್ಮ ಪಾಕಿಸ್ತಾನ ಮುಸ್ಲಿಂ ಲೀಗ್‌(N) ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಮೇ 28, 1998,ರಂದು ಪಾಕಿಸ್ತಾನ ಐದು ಅಣು ಬಾಂಬ್‌ ಪರೀಕ್ಷೆ ನಡೆಸಿತ್ತು. ಇದಾದ ಬಳಿಕ ಅಂದಿನ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇಲ್ಲಿಗೆ ಬಂದು ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಾವು ಮಾತ್ರ ಆ ಒಪ್ಪಂದವನ್ನು ಮುರಿದೆವು.ಅದು ನಮ್ಮ ಅತಿ ದೊಡ್ಡ ತಪ್ಪು ಎಂದರು.

VISTARANEWS.COM


on

Nawaz Sharif
Koo

ಇಸ್ಲಮಾಬಾದ್‌: ಭಾರತದ ಜೊತೆ ಮಾಡಿಕೊಂಡಿದ್ದ 1999 ಲಾಹೋರ್‌ ಒಪ್ಪಂದ(1999 Lahore Declaration)ವನ್ನು ಪಾಕಿಸ್ತಾನವೇ ಮುರಿದಿತ್ತು. ಅದು ನಮ್ಮ ಅತಿ ದೊಡ್ಡ ತಪ್ಪಾಗಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌(Nawaz Sharif) ಬಹಿರಂಗ ಹೇಳಿಕೆ ನೀಡಿದ್ದಾರೆ. ಆ ಮೂಲಕ ಕಾರ್ಗಿಲ್‌ ಯುದ್ಧ(Kargil War) ಜನರಲ್‌ ಫರ್ವೇಜ್‌ ಮುಷಾರಫ್‌(Pervez Musharraf) ಕುಕೃತ್ಯ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ(Viral Video)ದಲ್ಲಿ ಬಹಳ ಸದ್ದು ಮಾಡುತ್ತಿದೆ.

ತಮ್ಮ ಪಾಕಿಸ್ತಾನ ಮುಸ್ಲಿಂ ಲೀಗ್‌(N) ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಮೇ 28, 1998,ರಂದು ಪಾಕಿಸ್ತಾನ ಐದು ಅಣು ಬಾಂಬ್‌ ಪರೀಕ್ಷೆ ನಡೆಸಿತ್ತು. ಇದಾದ ಬಳಿಕ ಅಂದಿನ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇಲ್ಲಿಗೆ ಬಂದು ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಾವು ಮಾತ್ರ ಆ ಒಪ್ಪಂದವನ್ನು ಮುರಿದೆವು.ಅದು ನಮ್ಮ ಅತಿ ದೊಡ್ಡ ತಪ್ಪು ಎಂದರು.

ಫೆಬ್ರವರಿ 21, 1999 ರಂದು ಎರಡು ಬದ್ಧ ವೈರಿ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಭಾರತ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ನೆರೆಹೊರ ರಾಷ್ಟ್ರಗಳ ನಡುವಿನ ಶಾಂತಿ ಒಪ್ಪಂದವು ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಜನ ಸಂಪರ್ಕವನ್ನು ಉತ್ತೇಜಿಸಲು ಕರೆ ನೀಡಿತು. ಆದಾಗ್ಯೂ, ಕೆಲವು ತಿಂಗಳ ನಂತರ, ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಪಾಕಿಸ್ತಾನದ ಆಕ್ರಮಣವು ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು.

ಮಾರ್ಚ್ 1999 ರಿಂದ, ಪಾಕಿಸ್ತಾನ ಸೇನೆಯ ಜನರಲ್ ಆಗಿದ್ದ ಮುಷರಫ್, ಲಡಾಖ್‌ನ ಕಾರ್ಗಿಲ್ ಜಿಲ್ಲೆಯೊಳಗೆ ಪಾಕ್‌ ಸೇನೆಯ ರಹಸ್ಯ ಒಳನುಸುಳುವಿಕೆಗೆ ಆದೇಶಿಸಿದರು. ನವದೆಹಲಿ ಒಳನುಸುಳುವಿಕೆಯನ್ನು ಕಂಡುಹಿಡಿದ ನಂತರ ಪೂರ್ಣ ಪ್ರಮಾಣದ ಯುದ್ಧವು ಸ್ಫೋಟಗೊಂಡಿತು. ಈ ಯುದ್ಧವನ್ನು ಭಾರತ ಗೆದ್ದಿತ್ತು. ಈ ಸಂರ್ಭದಲ್ಲಿ ಷರೀಫ್‌ ಪಾಕಿಸ್ತಾನದ ಪ್ರಧಾನಿ ಆಗಿದ್ದರು.

ಇದನ್ನೂ ಓದಿ:Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

ಇದೀಗ ಇದೇ ವಿಚಾರ ಬಗ್ಗೆ ಪ್ರಸ್ತಾಪಿಸಿರುವ ಷರೀಫ್‌ ಅಂದು ತಮ್ಮ ಸರ್ಕಾರ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಟೆಲಿವಿಷನ್ ಕಾರ್ಪೊರೇಷನ್ (ಪಿಟಿವಿ) ಪ್ರಸಾರ ಮಾಡಿದ ನವಾಜ್ ಷರೀಫ್ ಅವರ ಭಾಷಣದ ಒಂದು ಭಾಗವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Continue Reading

ವಿದೇಶ

Fraud Case: ಒಂದು ವರ್ಷ ಪ್ರೀತಿಸಿ ಮದುವೆಯಾದ; 12 ದಿನಗಳ ಬಳಿಕ ಬಯಲಾಯ್ತು ಆಕೆಯ ದೇಹ ರಹಸ್ಯ!

ಆಸ್ತಿ ಲಪಟಾಯಿಸಲು ಹೆಣ್ಣಿನಂತೆ ವೇಷಭೂಷಣ ತೊಟ್ಟು ಇಂಡೋನೇಷ್ಯಾದ ವ್ಯಕ್ತಿಯೊಬ್ಬನನ್ನು ಮದುವೆಯಾದ 12 ದಿನಗಳ ಬಳಿಕ ಆತನ ವಂಚನೆಯ (Fraud Case) ಜಾಲ ಬಯಲಾಗಿದೆ. ಈ ಕುರಿತ ಕುತೂಹಲಕಾರಿ ಕತೆ ಇಲ್ಲಿದೆ.

VISTARANEWS.COM


on

By

Fraud Case
Koo

ಒಂದು ವರ್ಷ ಪ್ರೀತಿಸಿ, ಬಳಿಕ ಮದುವೆಯಾಗಿ 12 ದಿನಗಳ ಬಳಿಕ ಇಂಡೋನೇಷ್ಯಾದ (Indonesia) 26 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಮಹಿಳೆಯಲ್ಲ (Fraud Case) ಎಂಬುದನ್ನು ತಿಳಿದು ಆಘಾತಗೊಂಡಿದ್ದಾನೆ. 2023ರಲ್ಲಿ ಅವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ (social media) ಭೇಟಿಯಾಗಿದ್ದು, ಒಂದು ವರ್ಷದ ಬಳಿಕ ಇಬ್ಬರೂ ಮದುವೆಗೆ (wedding) ಸಮ್ಮತಿ ಸೂಚಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾಗಿದ್ದ ಇಬ್ಬರೂ ಒಂದು ವರ್ಷದ ಬಳಿಕ ವೈಯಕ್ತಿಕವಾಗಿ ಭೇಟಿಯಾಗಲು ನಿರ್ಧರಿಸಿದ್ದರು. ಅದಿಂಡಾ ಹೆಸರಿನಲ್ಲಿ ಪರಿಚಯವಾದ ಹುಡುಗಿ ಸಂಪೂರ್ಣ ಮುಖವನ್ನು ಮುಚ್ಚುವ ಸಾಂಪ್ರದಾಯಿಕ ಮುಸ್ಲಿಂ ಉಡುಗೆಯನ್ನು ಯಾವಾಗಲೂ ಧರಿಸುತ್ತಿದ್ದ.ಳು. ಅದು ಯಾಕೆ ಎಂದು ಯುವಕ ಪ್ರಶ್ನೆ ಮಾಡಲಿಲ್ಲ. ಅದು ಆಕೆಯ ಇಸ್ಲಾಂ ಧರ್ಮದ ಮೇಲಿನ ಭಕ್ತಿಯ ಸಂಕೇತವೆಂದು ಎಕೆ ಭಾವಿಸಿದ್ದ.

ಕೊನೆಗೆ ಇಬ್ಬರೂ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದರು. ಮದುವೆಗೆ ಹಾಜರಾಗಲು ತನಗೆ ಯಾವುದೇ ಕುಟುಂಬವಿಲ್ಲ ಎಂದು ಅದಿಂಡಾ ಎಕೆಗೆ ತಿಳಿಸಿದ್ದಳು. ಆದ್ದರಿಂದ ಇವರಿಬ್ಬರು ಏಪ್ರಿಲ್ 12ರಂದು ಎಕೆ ಮನೆಯಲ್ಲಿ ಸಾಧಾರಣ ಸಮಾರಂಭದ ಮೂಲಕ ಪತಿಪತ್ನಿಯರಾದರು.

ಮದುವೆಯ ಅನಂತರವೂ ಅದಿಂಡಾ ತನ್ನ ಪತಿಯಿಂದ ತನ್ನ ಮುಖವನ್ನು ನಿರಂತರವಾಗಿ ಮರೆಮಾಡಿದಳು ಮತ್ತು ಅವನ ಹಳ್ಳಿಯಲ್ಲಿ ಅವನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಬೆರೆಯಲು ನಿರಾಕರಿಸಿದಳು. ಇದಲ್ಲದೆ, ಅವಳು ಮದುವೆಯ ಅನಂತರದ ಶಾಸ್ತ್ರಗಳನ್ನು ಮಾಡಲು ನಿರಾಕರಿಸಿದಳು. ಋತುಚಕ್ರ, ಆರೋಗ್ಯ ಸಮಸ್ಯೆ ಎಂದು ಹೇಳಿ ಗಂಡನೊಂದಿಗೆ ಸೇರಲು ನಿರಾಕರಿಸಿದಳು.

12 ದಿನಗಳ ಬಳಿಕ ಮಾಹಿತಿ ಬಹಿರಂಗ

ಹನ್ನೆರಡು ದಿನಗಳ ಅನುಮಾನಾಸ್ಪದ ವರ್ತನೆಯ ಅನಂತರ ಎಕೆ ತನ್ನ ಹೆಂಡತಿಯನ್ನು ತನಿಖೆ ಮಾಡಲು ನಿರ್ಧರಿಸಿದ. ಅದಿಂಡಾ ಅವರ ಪೋಷಕರು ಇನ್ನೂ ಜೀವಂತವಾಗಿದ್ದಾರೆ ಎಂಬುದನ್ನು ಆತ ಕಂಡುಕೊಂಡ. ಮಗನ ಈ ಹೊಸ ಸಂಬಂಧದ ಬಗ್ಗೆ ಅವರಿಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. ಆಘಾತಕಾರಿ ವಿಷಯವೆಂದರೆ ಅದಿಂಡಾ ವಾಸ್ತವವಾಗಿ 2020ರಲ್ಲಿ ಕ್ರಾಸ್ ಡ್ರೆಸ್ಸಿಂಗ್ ಮಾಡುತ್ತಿರುವ ಇಎಸ್ ಹೆಚ್ ಎಂದು ಗುರುತಿಸಲ್ಪಟ್ಟಿದ್ದಾನೆ.

ಯಾಕಾಗಿ ವಂಚನೆ?

ಪೊಲೀಸ್ ತನಿಖೆಯ ಸಮಯದಲ್ಲಿ ಆಸ್ತಿ ಕದಿಯಲು ಎಕೆಯನ್ನು ಇಎಸ್ ಹೆಚ್ ವಿವಾಹವಾದ ಎಂದು ತಿಳಿದು ಬಂದಿದೆ. ಆತನನ್ನು ಬಂಧಿಸಿರುವ ಪೊಲೀಸರು ಆತನ ಧ್ವನಿ ಮಹಿಳೆಯಂತೆ ಇದೆ. ಆತ ನಿಜವಾಗಿಯೂ ತನ್ನ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾನೆ ಎಂದು ತಿಳಿಸಿದ್ದಾರೆ!

ಎಕೆ ಮತ್ತು ಇಎಸ್ ಹೆಚ್ ಮದುವೆಯ ಫೋಟೋಗಳನ್ನು ನೋಡಿದರೆ ಅದಿಂಡ ನಿಜವಾದ ಮಹಿಳೆಯಂತೆ ಕಾಣುತ್ತಾನೆ. ಸೌಮ್ಯವಾದ ಧ್ವನಿ ಮತ್ತು ಸ್ವರವೂ ಅವನಿಗಿದೆ. ಆದ್ದರಿಂದ ಅವನು ಮಹಿಳೆ ಎಂಬುದರ ಬಗ್ಗೆ ಯಾವುದೇ ಅನುಮಾನವಿರಲಿಲ್ಲ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ: Viral Video: ವಿಮಾನದ ರೆಕ್ಕೆ ಮೇಲೆ ನಡೆದುಕೊಂಡು ಹೊರ ಬಂದ ಪ್ರಯಾಣಿಕರು; ವೈರಲಾಯ್ತು ವಿಡಿಯೋ

ಏನು ಶಿಕ್ಷೆ ?

ಸ್ಥಳೀಯ ಕಾನೂನುಗಳ ಅಡಿಯಲ್ಲಿ ವಂಚನೆ ಆರೋಪಗಳನ್ನು ಎದುರಿಸುತ್ತಿರುವ ಆತನಿಗೆ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುವುದು.

ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರನ್ನು ಬೆಚ್ಚಿ ಬೀಳಿಸಿದೆ. ಒಬ್ಬ ವ್ಯಕ್ತಿ ಪಾಪ ಎಕೆ, ಒಂದು ವರ್ಷಕ್ಕೂ ಹೆಚ್ಚು ಕಾಲ ಅಡ್ಡ ಡ್ರೆಸ್ಸರ್‌ನೊಂದಿಗಿನ ಸಂಬಂಧದಲ್ಲಿದ್ದು ಮೋಸ ಹೋಗಿರುವುದು ಸಂಕಟ ಉಂಟು ಮಾಡುತ್ತದೆ. ಮದುವೆ ಮತ್ತು ಹಣ ಎರಡನ್ನೂ ಕಳೆದುಕೊಂಡಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ದಿಗಂಬರ ಜೈನ ಮುನಿಗಳಿಗೆ ಈ ಪಾಪಿ ಮಾಡಿದ್ದೇನು ಗೊತ್ತಾ? ಶಾಕಿಂಗ್‌ ವಿಡಿಯೋ ವೈರಲ್‌

Viral Video: ಯೂಟ್ಯೂಬರ್‌ವೊಬ್ಬ ರಸ್ತೆ ಬದಿಯಲ್ಲಿ ದಿಗಂಬರ ಸನ್ಯಾಸಿಗಳಿಗೆ ಕಿರುಕುಳ ಕೊಡುತ್ತಿರುವುದನ್ನು ವಿಎಡಿಯೋದಲ್ಲಿ ಕಾಣಬಹುದಾಗಿದೆ. ರಸ್ತೆ ಬದಿಯಲ್ಲಿ ಕುಳಿತಿದ್ದ ಮನಿಗಳ ಎದುರು ನಿಂತು ಯೂಟ್ಯೂಬರ್‌ ಸೂರಜ್‌ ಸಿಂಗ್‌, ನಿರ್ವಸ್ತ್ರರಾಗಿ ರಸ್ತೆಯಲ್ಲಿ ಏಕೆ ಓಡಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಅವರು ಉತ್ತರಿಸಿದಾಗ ಅದನ್ನು ಒಪ್ಪದ ಆತ ಅವರ ಜೊತೆ ವಿತಂಡ ವಾದಕ್ಕೆ ಮುಂದಾಗುತ್ತಾನೆ. ಆಗ ಅವರು ಸುಮ್ಮನಾಗುತ್ತಾರೆ. ಹೀಗೆ ಅವರನ್ನು ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ಕಿರುಕುಳ ಕೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Viral Video
Koo

ಡೆಹ್ರಾಡೂನ್‌: ಇಬ್ಬರು ದಿಗಂಬರ ಜೈನ ಮುನಿಗಳ ಮೇಲೆ ವ್ಯಕ್ತಿಯೊಬ್ಬ ಕಿರುಕುಳ ನೀಡಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಘಟನೆ ವಿಡಿಯೋ ಸಾಮಾಜಿಕ ಜಾತಾಣದಲ್ಲಿ ವೈರಲ್‌(Viral Video) ಆಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಇನ್ನು ಆರೋಪಿಯನ್ನು ಯೂಟ್ಯೂಬರ್‌(Youtuber) ಸೂರಜ್‌ ಸಿಂಗ್‌ ಎಂದು ಗುರುತಿಸಲಾಗಿದೆ.

ಘಟನೆ ವಿವರ:

ತೆಹ್ರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಯೂಟ್ಯೂಬರ್‌ವೊಬ್ಬ ರಸ್ತೆ ಬದಿಯಲ್ಲಿ ದಿಗಂಬರ ಸನ್ಯಾಸಿಗಳಿಗೆ ಕಿರುಕುಳ ಕೊಡುತ್ತಿರುವುದನ್ನು ವಿಎಡಿಯೋದಲ್ಲಿ ಕಾಣಬಹುದಾಗಿದೆ. ರಸ್ತೆ ಬದಿಯಲ್ಲಿ ಕುಳಿತಿದ್ದ ಮನಿಗಳ ಎದುರು ನಿಂತು ಯೂಟ್ಯೂಬರ್‌ ಸೂರಜ್‌ ಸಿಂಗ್‌, ನಿರ್ವಸ್ತ್ರರಾಗಿ ರಸ್ತೆಯಲ್ಲಿ ಏಕೆ ಓಡಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಅವರು ಉತ್ತರಿಸಿದಾಗ ಅದನ್ನು ಒಪ್ಪದ ಆತ ಅವರ ಜೊತೆ ವಿತಂಡ ವಾದಕ್ಕೆ ಮುಂದಾಗುತ್ತಾನೆ. ಆಗ ಅವರು ಸುಮ್ಮನಾಗುತ್ತಾರೆ. ಹೀಗೆ ಅವರನ್ನು ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ಕಿರುಕುಳ ಕೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಎಚ್ಚತ್ತುಕೊಂಡ ಪೊಲೀಸರು ಸೂರಜ್‌ ಸಿಂಗ್‌ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯಿಂದ ಜೈನ ಮುನಿಗಳ ಆಸ್ಥೆಗೆ, ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ. ಉತ್ತರಾಖಂಡ ಎಲ್ಲಾ ಧರ್ಮವನ್ನು ಸಮಾನವಾಗಿ ಗೌರವಿಸುತ್ತದೆ. ಯಾವುದೇ ಧರ್ಮದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವುದನ್ನು ಉತ್ತರಾಖಂಡ ಎಂದಿಗೂ ಸಹಿಸುವುದಿಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಸೂಕ್ತ ಕ್ರಮ ಜರುಗಿಸುವುದಾಗಿ ಅವರು ಹೇಳಿದ್ದಾರೆ.

ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಅನೇಕರು ಯುವಕನ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Rashmika Mandanna: ವಿಜಯ್‌ ದೇವರಕೊಂಡ ಹೆಸರು ಕೇಳುತ್ತಲೇ ನಾಚಿ ನೀರಾದ ರಶ್ಮಿಕಾ; ಸದ್ಯದಲ್ಲೇ ಗುಡ್‌ನ್ಯೂಸ್‌?

Continue Reading

ವೈರಲ್ ನ್ಯೂಸ್

Viral Video: ವಿಮಾನದ ರೆಕ್ಕೆ ಮೇಲೆ ನಡೆದುಕೊಂಡು ಹೊರ ಬಂದ ಪ್ರಯಾಣಿಕರು; ವೈರಲಾಯ್ತು ವಿಡಿಯೋ

Viral Video: ಬಾಂಬ್‌ ಬೆದರಿಕೆ ಬರುತ್ತಿದ್ದಂತೆ ಎಲ್ಲಾ ಪ್ರಯಾಣಿಕರನ್ನು ತುರ್ತು ನಿರ್ಗಮನ ದ್ವಾರದ ಮೂಲಕ ಹೊರ ತರಲಾಯಿತು. ಈ ವೇಳೆ ಇಂಡಿಗೋ ಸಿಬ್ಬಂದಿ ಮಹಿಳೆಯನ್ನು ಕೈಯಲ್ಲಿ ಹಿಡಿದುಕೊಂಡು ವಿಮಾನದ ರೆಕ್ಕೆ ಮೇಲೆ ನಿಧಾನವಾಗಿ ನಡೆದುಕೊಂಡು ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಮತ್ತೊಂದೆಡೆ ಎಮರ್ಜೆನ್ಸಿ ಬಾಗಿನಿಂದ ಹೊರ ಬಂದ ಪೈಲಟ್‌ ಜಾರಿಕೊಂಡು ಬರುತ್ತಿರುವುದನ್ನು ವಿಡಯೊದಲ್ಲಿ ಕಾಣಬಹುದಾಗಿ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗುತ್ತಿದೆ

VISTARANEWS.COM


on

Viral Video
Koo

ನವದೆಹಲಿ: ಬೆಳ್ಳಂ ಬೆಳಗ್ಗೆ ದಿಲ್ಲಿಯಿಂದ ವಾರಣಾಸಿಗೆ ಪ್ರಯಾಣಿಸಬೇಕಾಗಿದ್ದ ಇಂಡಿಯೋ ವಿಮಾನ(Indigo Flight)ಕ್ಕೆ ಬಾಂಬ್‌ ಬೆದರಿಕೆ ಕರೆ(Bomb Threat) ಬಂದಿದ್ದು, ಕೆಲ ಹೊತ್ತು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ವರದಿಯಾಗಿದೆ. ಬೆದರಿಕೆ ಬರುತ್ತಿದ್ದಂತೆ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಹೊರಗೆ ಕರೆದೊಯ್ಯುವ ಕಾರ್ಯವೂ ನಡೆದಿತ್ತು. ಈ ವೇಳೆ ಮಹಿಳಾ ಪ್ರಯಾಣಿಕರೊಬ್ಬರು ಗಗನಸಖಿ ಜೊತೆಗೆ ವಿಮಾನ ರೆಕ್ಕೆಯ ಮೇಲೆ ನಡೆದುಕೊಂಡು ಬರುತ್ತಿರುವುದು ಮತ್ತು ಪೈಲಟ್‌ ತುರ್ತು ದ್ವಾರದ ಮೂಲಕ ಜಾರಿಗೊಂಡು ಹೊರ ಬರುತ್ತಿರುವ ದೃಶ್ಯ ಇದೀಗ ಎಲ್ಲೆ ವೈರಲ್‌(Viral Video) ಆಗುತ್ತಿದೆ.

ವೈರಲ್‌ ವಿಡಿಯೋದಲ್ಲೇನಿದೆ?

ಬಾಂಬ್‌ ಬೆದರಿಕೆ ಬರುತ್ತಿದ್ದಂತೆ ಎಲ್ಲಾ ಪ್ರಯಾಣಿಕರನ್ನು ತುರ್ತು ನಿರ್ಗಮನ ದ್ವಾರದ ಮೂಲಕ ಹೊರ ತರಲಾಯಿತು. ಈ ವೇಳೆ ಇಂಡಿಗೋ ಸಿಬ್ಬಂದಿ ಮಹಿಳೆಯನ್ನು ಕೈಯಲ್ಲಿ ಹಿಡಿದುಕೊಂಡು ವಿಮಾನದ ರೆಕ್ಕೆ ಮೇಲೆ ನಿಧಾನವಾಗಿ ನಡೆದುಕೊಂಡು ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಮತ್ತೊಂದೆಡೆ ಎಮರ್ಜೆನ್ಸಿ ಬಾಗಿನಿಂದ ಹೊರ ಬಂದ ಪೈಲಟ್‌ ಜಾರಿಕೊಂಡು ಬರುತ್ತಿರುವುದನ್ನು ವಿಡಯೊದಲ್ಲಿ ಕಾಣಬಹುದಾಗಿ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗುತ್ತಿದೆ.

ಘಟನೆ ವಿವರ:

ದಿಲ್ಲಿಯಿಂದ ವಾರಣಾಸಿಗೆ ಪ್ರಯಾಣಿಸಬೇಕಾಗಿದ್ದ ಇಂಡಿಗೋ ಏರ್‌ಲೈನ್ಸ್‌ನ 6E2211 ವಿಮಾನಕ್ಕೆ ಮಂಗಳವಾರ ಬೆಳಗ್ಗೆಬಾಂಬ್‌ ಬೆದರಿಕೆ ಕರೆ ಬಂದಿತ್ತು. ಇನ್ನೇನು ಟೇಕ್‌ ಆಫ್‌ ಆಗಬೇಕಾಗಿದ್ದ ವಿಮಾನವನ್ನು ಪ್ರತ್ಯೇಕ ರನ್‌ ವೇ ಒಯ್ದು ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಎಲ್ಲ ಪ್ರಯಾಣಿಕರನ್ನು ಎಮರ್ಜೆನ್ಸಿ ಎಕ್ಸಿಟ್‌ ಬಾಗಿಲಿನಿಂದ ಸುರಕ್ಷಿತವಾಗಿ ಹೊರಗೆ ಕರೆದೊಯ್ಯಲಾಗಿದೆ. ಇನ್ನು ಬೆಳಗ್ಗೆ 5:35ಕ್ಕೆ ಹೊರಡಬೇಕಾಗಿದ್ದ ವಿಮಾನ ಇದಾಗಿತ್ತು. ವಿಮಾನ ಹೊರಡಬೇಕೆನ್ನುವ ಹೊತ್ತಿನಲ್ಲಿ ವಿಮಾನದ ಶೌಚಾಲಯದೊಳಗೆ ಬಾಂಬ್‌ @5.30 ಎಂಬ ಸಂದೇಶ ಬರೆದಿದ್ದ ಪತ್ರವೊಂದು ಸಿಕ್ಕಿತ್ತು.

ಇದನ್ನೂ ಓದಿ: Human trafficking Case: ದೇಶಾದ್ಯಂತ NIA ರೇಡ್‌; ಮಾನವ ಕಳ್ಳಸಾಗಣೆ ಜಾಲ ಬಯಲು

ಸದ್ಯ ಏರ್ಪೋರ್ಟ್‌ ಭದ್ರತಾ ಸಿಬ್ಬಂದಿ ದೆಹಲಿ ಪೊಲೀಸರು ಮತ್ತು ಬಾಂಬ್‌ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದೆ. ಇನ್ನು ವಿಮಾನದಲ್ಲಿ 176 ಪ್ರಯಾಣಿಕರಿದ್ದರು ಎನ್ನಲಾಗಿದೆ. ಇನ್ನು ನಿನ್ನೆಯಷ್ಟೇ ಮುಂಬೈನ ಮುಂಬೈನಲ್ಲಿರುವ ತಾಜ್‌ ಹೋಟೆಲ್‌ ಹಾಗೂ ಛತ್ರಪತಿ ಶಿವಾಜಿ ಮಹಾರಾಜ ಇಂಟರ್‌ನ್ಯಾಷನಲ್‌ ವಿಮಾನ ನಿಲ್ದಾಣವನ್ನು ಸ್ಫೋಟಿಸುವ ಕುರಿತು ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದಿತ್ತು. ಹಾಗಾಗಿ, ಮುಂಬೈ ತಾಜ್‌ ಹೋಟೆಲ್‌ ಹಾಗೂ ವಿಮಾನ ನಿಲ್ದಾಣದ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.

Continue Reading
Advertisement
Uttarakaanda Movie Shivarajkumar Visits Savadatti Yallamma Temple After Uttarakaanda Movie
ಸ್ಯಾಂಡಲ್ ವುಡ್7 mins ago

Uttarakaanda Movie:  ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ಶಿವರಾಜ್​ ಕುಮಾರ್​

school reopen
ಪ್ರಮುಖ ಸುದ್ದಿ18 mins ago

School Reopen: ಬನ್ನಿ ಮಕ್ಕಳೇ ಶಾಲೆಗೆ! ರಜೆ ಮುಗೀತು, ಇಂದಿನಿಂದ ಕ್ಲಾಸ್‌ ಶುರು

Nawaz Sharif
ವಿದೇಶ36 mins ago

Nawaz Sharif: “ಕಾರ್ಗಿಲ್‌ ಯುದ್ಧ ನಮ್ಮಿಂದಲೇ ಆಗಿರುವ ಅತಿದೊಡ್ಡ ಪ್ರಮಾದ”- 23 ವರ್ಷಗಳ ಬಳಿಕ ತಪ್ಪೊಪ್ಪಿಕೊಂಡ ಪಾಕ್‌

prajwal revanna case mattress
ಪ್ರಮುಖ ಸುದ್ದಿ49 mins ago

Prajwal Revanna Case: ಪ್ರಜ್ವಲ್‌ ಮನೆಯಿಂದ ಹಾಸಿಗೆ, ಹೊದಿಕೆ ಕೊಂಡೊಯ್ದ ಎಸ್‌ಐಟಿ; ಏನ್‌ ಸಿಗ್ತು?

AC Side Effects
ಆರೋಗ್ಯ2 hours ago

AC Side Effects: ಅತಿಯಾದ ಎಸಿ ಬಳಕೆಯಿಂದ ಏನಾಗುತ್ತದೆ ಎಂಬ ಅರಿವಿರಲಿ

karnataka weather forecast
ಮಳೆ2 hours ago

Karnataka weather : ಗುಡುಗು ಸಹಿತ ಮಳೆಯೊಂದಿಗೆ 40 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

Rishab Pant
ಪ್ರಮುಖ ಸುದ್ದಿ3 hours ago

Rishabh Pant : ವಿಶ್ವಕಪ್​​ಗೆ ಮುನ್ನ ಟೀಮ್ ಇಂಡಿಯಾ ಜೆರ್ಸಿ ಧರಿಸಿದ ರಿಷಭ್ ಪಂತ್ ವಿಡಿಯೋ ಹಂಚಿಕೊಂಡ ಬಿಸಿಸಿಐ

Wildlife Sanctuaries
ಪರಿಸರ3 hours ago

Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

T20 World Cup
ಕ್ರೀಡೆ3 hours ago

T20 World Cup : ಭಾರತ- ಪಾಕ್ ಪಂದ್ಯ ಐಸಿಸ್​ ಉಗ್ರರಿಂದ ಬಾಂಬ್ ಬೆದರಿಕೆ

namaz on road
ಪ್ರಮುಖ ಸುದ್ದಿ4 hours ago

ವಿಸ್ತಾರ ಸಂಪಾದಕೀಯ: ನಡುರಸ್ತೆಯಲ್ಲೇಕೆ ನಮಾಜ್‌ ಮಾಡಬೇಕು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ13 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು22 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌